ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 9, 2011

12

ಈ ದೌರ್ಜನ್ಯಗಳಿಗೆ ಕೊನೆ ಎಂದು?

‍ನಿಲುಮೆ ಮೂಲಕ

-ವಿಜಯೇಂದ್ರ

ದನಗಳನ್ನು ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದಲೆನ್ನಲಾದ ಕೃಷ್ಣಪ್ಪ ಎಂಬ ದಲಿತನನ್ನು ಪ್ರಾಣಿ ದಯಾ ಸಂಘಕ್ಕೆ  ಸೇರಿದವರು ಎನ್ನಲಾದ ಹಲವರು ತಡೆದು ಹೊಡೆದು ಸಾವಿಗೀಡು ಮಾಡಿದರು ಎಂದು ಸುದ್ದಿ ಇತ್ತೀಚೆಗಷ್ಟೇ ಗ್ರಾಮೀಣ ಬೆಂಗಳೂರು ವಿಭಾಗದಿಂದ ವರದಿಯಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಸ್ವ್ವಾತಂತ್ರ್ಯ ಬಂದ ಆರು ದಶಕಗಳ ಅನಂತರವೂ ಭಾರತದಲ್ಲಿ ಒಂದು ವರ್ಗದ ಜನತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಮೇಲೆ ಅತ್ಯಾಚಾರ, ಹಲ್ಲೆ, ಮಾನಭಂಗಗಳಂತಹ ಗಂಭೀರ ಅಫರಾದಗಳನ್ನು ಎಸಗಲಾಗುತ್ತಿದೆ.

೫೦೦೦ ವರ್ಷಗಳ ಕಾಲ ವರ್ಣಾಶ್ರಮ ಪದ್ದತಿಯನ್ನು ಭಾರತ ಅನುಸರಿಸಿಕೊಂಡು ಬಂದ ಫಲವಾಗಿ ಹುಟ್ಟಿಕೊಂಡ ಅಸ್ಪೃಶ್ಯ ಜಾತಿ ಮತ್ತು ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಿನ್ನೀಸ್ ಧಾಖಲೆಯನ್ನು ಮೀರಿಸುತ್ತದೆ ಎಂದರೆ ತಪ್ಪ್ಪಾಗಲಾರದು.

ಯಾವುದೇ ಧರ್ಮ ಜಾತಿ ಆಧರಿತ ತಾರತಮ್ಯ ಕಾನೂನು ಬಾಹಿರ ಎಂದು ಸಂವಿಧಾನದ ಕಲಂಗಳಲ್ಲಿ ಸಾರಿ ಹೇಳಿದರೂ ಸಮಾಜದ ಒಂದು ಪ್ರಮುಖ ಭಾಗದ ಜನರನ್ನು ನಾವು ನಿರ್ಲಕ್ಷಿಸಿದ್ದೇವೆ. ಅನುಚ್ಚೇದ ೧೭ ರಲ್ಲಿ ಅಸ್ಪೃಶ್ಯ ಆಚರಣೆ ನಿಷೇದವೆಂದು ಸ್ಪಷ್ಟಪಡಿಸಿದ್ದರೂ, ರಾಷ್ಟ್ರದ ಎಲ್ಲಾ ಕಡೆ ದಲಿತರ ಮೇಲೆ ಕೊಲೆ, ಅತ್ಯಾಚಾರ. ದೌರ್ಜನ್ಯ, ಬಹಿಷ್ಕಾರಗಳಂತಹ ಅನಿಷ್ಟ ಕ್ರೂರ ಪದ್ದತಿಗಳು ಮುಂದುವರಿದೇ ಇದೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯ ಅಂಕಿ ಅಂಶಗಳಂತೆ ಪ್ರತಿ ೧೮ ನಿಮಿಷಕ್ಕೆ ದಲಿತನೊಬ್ಬನ ಮೇಲೆ ಹಲ್ಲೆ ನಡೆಯುತ್ತಿದೆ. ಪ್ರತಿ ದಿನಕ್ಕೆ ಮೂರು ದಲಿತ ಮಹಿಳೆಯರ ಮಾನ ಹರಾಜಾಗುತ್ತದೆ, ಇಬ್ಬರು ದಲಿತರ ಕೊಲೆಯಾಗುತ್ತಿದೆ, ೧೧ ದಲಿತರು ಗಾಯಗೊಳ್ಳುತ್ತಾರೆ.

ಪ್ರತಿ ವಾರ ೧೩ ದಲಿತರನ್ನು ಸಾಯಿಸಲಾಗುತ್ತಿದೆ, ಐವರು ದಲಿತರ ಆಸ್ತಿ ಪಾಸ್ತಿ ಹಾಳುಗೆಡವಲಾಗುತ್ತಿದೆ, ಆರು ದಲಿತರು ಅಪಹರಣಕ್ಕೆ ಒಳಗಾಗುತ್ತಾರೆ.  ಭಾರತದ ಪ್ರತಿಶತ ೩೭ ದಲಿತರು ಬಡತನದ ರೇಖೆಯಡಿ ಬಳಲುತ್ತಿದ್ದಾರೆ. ಅರ್ದದಷ್ಟಕ್ಕೂ ಹೆಚ್ಚು ದಲಿತ  ಮಕ್ಕಳು ಅರೆಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ೧೦೦೦ ಜನ ಸಂಖ್ಯೆಯ ಪೈಕಿ ಪ್ರಥಮ ಹುಟ್ಟು ಹಬ್ಬದ ಮುನ್ನವೇ ಕಣ್ಣು ಮುಚ್ಚುವ ದಲಿತ ಮಕ್ಕಳ ಸಂಖ್ಯೆ ೮೩ ಆಗಿರುತ್ತದೆ. ಪ್ರತಿಶತ ೪೩ ದಲಿತರು ಓದು ಬರಹ ಬಲ್ಲವರಲ್ಲ, ಮೂರನೇ ಒಂದು ಭಾಗ ದಲಿತರು ಮೂಲಭೂತ ಸೌಲಭ್ಯಗಳಿಲ್ಲದೆ ಬಯಲುಗಳಲ್ಲಿ ಮಲಗುತ್ತಾರೆ.  ವಿಸರ್ಜಿಸುತ್ತಾರೆ. ಶೇ ೩೭.೮ ರಷ್ಟು ಸರ್ಕಾರಿ ಶಾಲೆಗಳಲ್ಲಿ ಈಗಲೂ ದಲಿತ ಮಕ್ಕಳಿಗೆ ಪ್ರತ್ಯೇಕವಾಗಿ ಬಿಸಿ ಊಟ ಉಣಿಸಲಾಗುತ್ತದೆ.

೨೦೧೧ ಅಕ್ಟೋಬರ್ ೯ ರಂದು ಮಂಡ್ಯ ಜಿಲ್ಲೆಯ ಕಿರುಗಾವಲು ಚಿಕ್ಕಮಂಚಯ್ಯ ಎಂಬ ದಲಿತ ಕ್ಷೌರಕ್ಕೆ ಹೋದಾಗ ಕ್ಷೌರಿಕ ಅವನ ಮೂಗನ್ನೇ ಕೂಯ್ದು ಹಾಕಿದ, ನಾಗಮಂಗಲದ ಶಾಸಕರ ಸ್ವಗ್ರಾಮವಾದ ಕಸುವನಹಳ್ಳಿಯಲ್ಲಿ ದಲಿತರ ಮೇಲೆ ಸಾಮಾಜಿಕ ಬಹಿಸ್ಕಾರ. ತಮಟೆ ಬಡಿಯುವುದಿಲ್ಲವೆಂಬ ದಲಿತರ ಮೇಲೆ ಹಾಸನದ ಕೆರೆಕೋಡು ಗ್ರಾಮದಲ್ಲಿ ಬಹಿಸ್ಕಾರ. ಮೊಸವತ್ತೂರಿನಲ್ಲಿ ಹೆಣ ಹೂಳಲು ಗುಂಡಿ ತೆಗೆಯಲು ಮುಂದೆಬಾರದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ. ಸಾರ್ವಜನಿಕ ಸ್ಥಳದಲ್ಲಿ ಅಂಬೇಡ್ಕರ್ ನಾಮಫಲಕ ಹಾಕಿದರು ಎಂಬ ಕಾರಣಕ್ಕೆ ಬೆಳವಾಡಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ.

ಕುಳುವಾಡಿಕೆ ಹೆಸರಿನಲ್ಲಿ ದಲಿತರಿಂದ ಬಿಟ್ಟಿ ದುಡಿಮೆ ಮಾಡಿಸಿಕೊಳ್ಳುವ ಅನಾಗರೀಕ ಪದ್ದತಿ ಹಳ್ಳಿಗಾಡಿನಲ್ಲಿ ಇನ್ನೂ ಜೀವಂತ. ಯಾವುದೇ ಊರ ಹಬ್ಬ ಹರಿದಿನಗಳಿಗೆ ದಲಿತರೇ ಚಪ್ಪರ ಹಾಕಬೇಕು, ಯಾರಾದರೂ ಸತ್ತರೆ ತಮಟೆ ಬಡಿಸಬೇಕು ಸತ್ತ ನಾಯಿ, ನರಿ ಹಂದಿ, ದನ ಇತ್ಯಾದಿ ಪ್ರಾಣಿಗಳ ಸಂಸ್ಕಾರ ನಡೆಸಬೇಕು. ಒಟ್ಟಾರೆ ಸಮಗ್ರ ಹಳ್ಳಿಯ ಜೀತವನ್ನು ದಲಿತರು ಯಾವುದೇ ವೇತನ ಇಲ್ಲದೆ ಪ್ರತಿ ಪಲಾಪೇಕ್ಷೆಯಿಲ್ಲದೆ ವಂಶ ಪಾರಂಪರ್‍ಯವಾಗಿ ಮಾಡಬೇಕು.

ಇಂತಹ ಅಮಾನವೀಯ ಪದ್ದತಿ ರಾಜ್ಯದ ಇನ್ನು ಹಲವು ಜಿಲ್ಲೆಗಳಲ್ಲಿ ಇನ್ನೂ ಜೀವಂತವಿದೆ ಎಂದರೆ ಎಂತಹ ಪ್ರಜ್ಷಾವಂತ ನಾಗರೀಕರೂ ನಾಚಿ ತಲೆ ತಗ್ಗಿಸಬೇಕಾದ ವಿಷಯ. ಕುಳುವಾಡಿಕೆ ಮಾಡಲು ದಲಿತರು ನಿರಾಕರಿಸಿದಕ್ಕೆ ಹಾಸನ ಜಿಲ್ಲೆಯ ಸಿದ್ದಾಪುರ ಗ್ರಾಮದಲ್ಲಿ ಸಾಮಾಜಿಕ ಬಹಿಸ್ಕಾರ. ದುರಂತವೆಂದರೆ ಆಗ್ರಾಮದ ಗ್ರಾಮಪಂಚಾಯಿತಿ ಅದ್ಯಕ್ಷರು ದಲಿತರಾಗಿದ್ದು ಅವರಿಗೆ ಬಹಿಸ್ಕಾರದ ಬಿಸಿ ತಟ್ಟಿರುವುದು.

ದಲಿತರ ಮೇಲಿನ ದೌರ್ಜನ್ಯ ಒಂದು ಕತೆಯಾದರೇ ಈ ದೌರ್ಜನ್ಯ ಪ್ರಕರಣಗಳ ವಿರುದ್ದ ದಾಖಲಾಗಿರುವ ದೂರುಗಳ ಗತಿ ಇನ್ನೊಂದು ಕತೆ. ಸಂವಿದಾನ ದಲಿತರ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾಯ್ದೆಯನ್ನೇ ರೂಪಿಸಿದೆ ದಲಿತರ ಮೇಲಿನ ಅತ್ಯಾಚಾರಗಳ ದೂರುಗಳನ್ನು ತನಿಖೆ ನಡೆಸಲು ವಿಶೇಷ ಪೊಲೀಸ್ ವ್ಯವಸ್ಥೆ ಹಾಗೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ದಲಿತರ ಮೇಲಿನ ಹಲ್ಲೆ ಪ್ರತಿಬಂದಕ ಸಮಿತಿಯ ರಾಜ್ಯ ಮಟ್ಟದ ಅದ್ಯಕ್ಷರು ಮುಖ್ಯಮಂತ್ರಿಗಳೇ ಆದರೆ ಕೇಂದ್ರ ಮಟ್ಟದಲ್ಲಿ ಸಾಕ್ಷಾತ್ ಗೃಹ ಸಚಿವರೇ ಈ ಸಮಿತಿಯ ಉಸ್ತುವಾರಿ ವಹಿಸಿರುತ್ತಾರೆ.

ಇಷ್ಟಾದರೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುವುದಿರಲಿ ವರ್ಷೇ ವರ್ಷ ಹೆಚ್ಚುತ್ತಲೇ ಇವೆ. ಎಷ್ಟೋ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುವುದೇ ಇಲ್ಲ. ಡಿವೈಎಸ್ಪಿ ಹಂತದ  ಅಧಿಕಾರಿ ಮಾತ್ರವೇ ದಲಿತರ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಬೇಕೆಂದು ಕಾಯ್ದೆಯಲ್ಲಿ ದತ್ತವಾದ ಅಂಶವನ್ನೇ ತಿರುಚಿ ಅನೇಕ ಪೊಲೀಸ್ ಠಾಣೆಗಳಲ್ಲಿ ದೂರನ್ನೇ ದಾಖಲಿಸಿಕೊಳ್ಳುವುದಿಲ್ಲ. ದೂರುದಾರರ ಪ್ರತಿಭಟನೆಗಳಿಗೆ ದಲಿತ ಸಂಘಟನೆಗಳ ಒತ್ತಾಯಕ್ಕೆ ಈಡಾಗಿ ಹಲವೊಂದು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾದರೂ ಡಿವ್ಯೆಸ್ಪಿಯೇ ಈ ಪ್ರಕರಣಗಳ ವಿಚಾರಣೆ ನಡಸಬೇಕು ಎಂಬ ಕಾರಣಕ್ಕೆ ಎಫ್‌ಐಆರ್ ಮಟ್ಟಕ್ಕಿಂತ ಮೇಲೇರುವುದಿಲ್ಲ. ಇಷ್ಟಕ್ಕೂ ಪ್ರಕರಣ ನ್ಯಾಯಲಯದ ಮೆಟ್ಟಿಲೇರಿದರೆ ಸಾಕ್ಷಾದಾರಗಳ ಕೊರತೆಯಿಂದಾಗಿ ದಲಿತರ ಪರವಾಗಿ ಇತ್ಯರ್ಥವಾಗುವ ಪ್ರಕರಣಗಳೆ ಕಡಿಮೆ. ಸರ್ಕಾರವೇ ನೀಡಿರುವ ಅಂಕಿಅಂಶಗಳಂತೆ ದಲಿತರ ಪರವಾಗಿ ಇತ್ಯರ್ಥಗೊಂಡ ಪ್ರಕರಣಗಳು ಸgಸರಿ ಶೇ ೫ರಷ್ಟು ಮಾತ್ರ ಇನ್ನುಳಿದ ಪ್ರತಿಶತ ಶೇ ೯೫ ಪ್ರಕರಣಗಳಲ್ಲಿ ಆರೋಪಿಗಳು ದೂರುದಾರರ ಕಾನೂನಿನ ಅಜ್ಞಾನದ ಲಾಭವನ್ನು ಪಡೆದು ಶಿಕ್ಷೆಯಾಗದೆ ಕಾನೂನಿನ ಕೈಯಿಂದ ನುಣುಚಿಕೊಂಡು ಹೋಗುತ್ತಾರೆ. ಅವರಿಗೆ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಕೂಡು ಕಣ್ಣು ಮುಚ್ಚಿ ಸಹಕಾರ ನೀಡುತ್ತದೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದೇ ಹೋದಲ್ಲಿ ದಲಿತರ ಸಂಘಟನೆಗಳ ಪಾತ್ರವೂ ಇಲ್ಲವೆಂದಿಲ್ಲ. ದಲಿತರ ಸಂಘಟನೆಗಳೆಂದರೆ ಅವರಲ್ಲಿ ಜಾಗೃತಿ ಮೂಡಿಸುವ ಅವರ ಹಕ್ಕು ಬಾದ್ಯತೆಗಳಗೆ ಹೋರಾಡುವ ವೇದಿಕೆಗಳಾಗದೆ ದಲಿತರ ಹೆಸರಿನಲ್ಲಿ ಹಣ ಸಂಗ್ರಹಿಸುವ, ಹಫ್ತಾ ವಸೂಲಿ ಮಾಡುವ ಮಾಫಿಯ ಸಂಸ್ಥೆಗಳಾಗುತ್ತಿವೆ. ನಾನು ಕಂಡ ಬಹುತೇಕ ದಲಿತ ಸಂಘಟನೆಗಳು ರಿಯಲ್ ಎಸ್ಟೇಟ್ ಏಜೆಂಟರಾಗಿ, ಭೂ ಹಗರಣಗಳಲ್ಲಿ ಭಾಗಿಯಾಗಿ ಕಾಸು ಕೀಳುವ ದಂದೆ ನಡೆಸುತ್ತಾರೆ. ತಮಗೆ ಮಣಿಯದವರ ವಿರುದ್ದ ದೌರ್ಜನ್ಯ ಕಾಯ್ದೆಯಡಿ ಸುಳ್ಳು ದೂರು ದಾಖಲಿಸುವ ಎಷ್ಟೋ ಪ್ರಕರಣಗಳನ್ನು ನಾನು ಖುದ್ದು ಕಂಡಿದ್ದೇನೆ.

ದಲಿತರಷ್ಟು ರಾಜಕೀಯವಾಗಿ ದುರುಪಯೋಗಕ್ಕೆ ಒಳಪಟ್ಟ ಜನಾಂಗ ಭಾರತದಲ್ಲಿ ಬೇರೊಂದು ಜನಾಂಗ ಇಲ್ಲ ಎನ್ನಬಹುದು. ಪ್ರತಿ ಚುನಾವಣೆಗಳ ಪಲಿತಾಂಶಗಳನ್ನು ಆಯಾ ಕ್ಷೇತ್ರಗಳಲ್ಲಿರುವ ದಲಿತರ ಸಂಖ್ಯೆಗಳನ್ನು ಆದರಿಸಿಯೇ ಲೆಕ್ಕ ಹಾಕಲಾಗುತ್ತದೆ. ಇತ್ತೀಚಿನ ವಿಧಾನ ಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ದಲಿತರ ಪ್ರತಿನಿಧಿಸುವ ಕ್ಷೇತ್ರಗಳ ಸಂಖ್ಯೆ ಕೆಲ ಮಟ್ಟಿಗೆ ಹೆಚ್ಚಾಗಿದ್ದರು, ಹಲವು ಬಲಿಷ್ಟ ಸವರ್ಣೀಯ ರಾಜಕಾರಣಿಗಳನ್ನು ಮಟ್ಟ ಹಾಕಲೆಂದೇ ಹಲವು ಸಾಮಾನ್ಯ ಕ್ಷೇತ್ರಗಳನ್ನು ಮೀಸಲೀಕರಣಗೊಳಿಸಲಾಗಿದೆ. ಇಂತಹ ಕ್ಷೇತ್ರಗಳಲ್ಲಿ ಸ್ಪರ್ದಿಸಿ ಆಯ್ಕೆಯಾಗಬಹುದಾದ ದಲಿತರು ಮೇಲ್ವರ್ಗದವರ ಅಡಿಯಾಳಾಗಿ ಕಾರ್ಯನಿರ್ವಹಿಸುತ್ತ್ತಾರೆಯೇ ಹೊರತು ತಮ್ಮ ಸ್ವಂತಿಕೆಯನ್ನು ತೋರಲು ಸಾದ್ಯವಾಗದಿರುವುದು ಒಂದು ದುರಂತ.

ಸ್ವಾತಂತ್ರ್ಯ ಈ ನಿರ್ಲಕ್ಷಿತ ವರ್ಗಗಳಿಗೆ ಇಷ್ಟೂ ವರ್ಷಗಳ ಕಾಲ ಏನೂ ಮಾಡಿಲ್ಲವೆಂದರೆ ಉತ್ಪೃಕ್ಷೆಯಾದೀತು. ಅದೆಷ್ಟೋ ಮಂದಿ ದಲಿತರು ವಿದ್ಯಾವಂತರಾಗಿ, ಸಂವಿಧಾನಬದ್ದ ಮೀಸಲಾತಿ ಪಡೆದು ಉದ್ಯೋಗಸ್ಥರಾಗಿ ಹಲವು ತಲೆಮಾರುಗಳೆ ಉರುಳಿವೆ. ಹೀಗೆ ಪ್ರವರ್ಧಮಾನಕ್ಕೆಬಂದ ದಲಿತರನೇಕರು ತಾವು ಬಂದ ಹಿನ್ನಲೆಯನ್ನು ಮರೆತು ನವ ಬ್ರಾಹ್ಮಣರಾಗುವ ಮಾರ್ಗದಲ್ಲಿ ದಾಪುಗಾಲಿಕ್ಕಿ ಮುನ್ನಡೆಯುತ್ತಿದ್ದಾರೆ. ಬ್ರಾಹ್ಮಣ ದರ್ಮದ ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಮಕ್ಕಳು ಮೊಮ್ಮಕ್ಕಳಿಗೆ ಶಿಷ್ಟ ಹೆಸರುಗನ್ನಿಡುತ್ತ ತಮ್ಮ ಮೂಲ ನೆಲೆಯನ್ನೆ ಮರೆಯುತ್ತಿದ್ದಾರೆ. ಮೀಸಲಾತಿಯ ಲಾಬದಿಂದ ಎಷ್ಟೋ ದಲಿತರು ಅಧಿಕಾರಿಗಳಾಗಿ, ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯಮಂತ್ರಿಸ್ಥಾನದ ಹತ್ತಿರ ಬಂದರೂ ಜನಾಂಗದ ಅಭಿವೃದ್ದಿಗಿಂತ ವೈಯಕ್ತಿಕ ಲಾಲಸೆಗಳಿಗೆ ಹೆಚ್ಚು ಗಮನ ನೀಡಿ ಅಪಾರ ಆಸ್ತಿ ರೂಡಿಸಿಕೊಂಡು ಶ್ರೇಯೋವಂತರಾಗಿ ಮೆರೆದು ಅಳಿದು ಹೋದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.
ಇದು ಈ ದೇಶದ ದಲಿತರ ದುರಂತ. ಈನಾಡಿನ ದುರಂತವೂ ಹೌದು.

**********
ಚಿತ್ರಕೃಪೆ : greatesttrends.com

12 ಟಿಪ್ಪಣಿಗಳು Post a comment
  1. Kumar
    ಡಿಸೆ 9 2011

    ದಲಿತರ ಮೇಲಿನ ದೌರ್ಜನ್ಯ ಇನ್ನೂ ಕೆಲವೆಡೆ ನಡೆದಿದೆ ಎನ್ನುವುದು ಸತ್ಯ.
    ಈ ರೀತಿಯ ದೌರ್ಜನ್ಯ ಕೊನೆಗೊಳ್ಳಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ ಎನ್ನುವುದು ನಿಮಗೆ ಈಗಾಗಲೇ ಮನವರಿಕೆಯಾಗಿರಬಹುದು.
    ದೌರ್ಜನ್ಯ ಮಾಡುವ ಮತ್ತು ದೌರ್ಜನ್ಯಕ್ಕೀಡಾಗುವ – ಸಮಾಜದ ಈ ಎರಡೂ ವರ್ಗಗಳಲ್ಲಿ ಸುಧಾರಣೆಗಳಾದಾಗ ಮಾತ್ರ ದೌರ್ಜನ್ಯಗಳು ಕೊನೆಗೊಳ್ಳುವುದು.
    ಇನ್ನು ನೀವು ಇಲ್ಲಿ ತೆಗೆದುಕೊಂಡಿರುವ ಕೃಷ್ಣಪ್ಪ ದನಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೂ ದಲಿತರ ಮೇಲಿನ ದೌರ್ಜನ್ಯಕ್ಕೂ ನನಗಾವ ಸಂಬಂಧವೂ ಕಾಣುತ್ತಿಲ್ಲ.
    ಕೃಷ್ಣಪ್ಪ ದನಗಳನ್ನು ಏತಕ್ಕೆ ಸಾಗಿಸುತ್ತಿದ್ದ ಮತ್ತು ಎಲ್ಲಿಗೆ ಸಾಗಿಸುತ್ತಿದ್ದ ಎನ್ನುವುದನ್ನು ನೀವು ಎಲ್ಲೂ ತಿಳಿಸಿಲ್ಲ.
    ಮತ್ತು ಜಗಳ ಹುಟ್ಟಿಕೊಳ್ಳಲು ಕಾರಣವೇನು?
    ಈ ಪ್ರಕರಣದಲ್ಲಿ ಆತನ ಜಾತಿ ಕೇವಲ ಕಾಕತಾಳೀಯ ಎಂದು ನನ್ನ ಭಾವನೆ.
    ಆತನ “ದಲಿತ” ಜಾತಿಯೇ ಕಾರಣವಾಗಿದ್ದಿದ್ದರೆ, ದನ ಸಾಗಿಸುವಾಗಲೇ ಹತ್ಯೆ ಆಗಬೇಕಾಗಿರಲಿಲ್ಲ ಮತ್ತು ಆತನೊಬ್ಬನೇ ಅದಕ್ಕೆ ಗುರಿಯೂ ಆಗಿರುತ್ತಿರಲಿಲ್ಲ.
    ಹೀಗಾಗಿ, ಈ ರೀತಿಯ ಪ್ರಕರಣಗಳು ಆದಾಗಲೆಲ್ಲಾ, ಅದನ್ನು “ದಲಿತನ ಹತ್ಯೆ” ಎಂದು ಕೂಗಾಡುವುದು ತಪ್ಪಾಗುತ್ತದೆ.

    ಇನ್ನು ನೀವು ಈ ರೀತಿ ಹೇಳಿರುವಿರಿ:
    > “೫೦೦೦ ವರ್ಷಗಳ ಕಾಲ ವರ್ಣಾಶ್ರಮ ಪದ್ದತಿಯನ್ನು ಭಾರತ ಅನುಸರಿಸಿಕೊಂಡು ಬಂದ ಫಲವಾಗಿ ಹುಟ್ಟಿಕೊಂಡ
    > ಅಸ್ಪೃಶ್ಯ ಜಾತಿ ಮತ್ತು ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಿನ್ನೀಸ್ ಧಾಖಲೆಯನ್ನು ಮೀರಿಸುತ್ತದೆ ಎಂದರೆ ತಪ್ಪ್ಪಾಗಲಾರದು”
    ೫೦೦೦ ವರ್ಷಕ್ಕೆ ಮೊದಲು ವರ್ಣಾಶ್ರಮ ಪದ್ಧತಿ ಇರಲಿಲ್ಲವೆಂದು ಯಾರು ಹೇಳಿದರು?
    ವರ್ಣಾಶ್ರಮ ಧರ್ಮಕ್ಕೂ ಜಾತಿಪದ್ಧತಿಗೂ ಯಾವುದೇ ಸಂಬಂಧವಿಲ್ಲ – ಇವೆರಡೂ ಬೇರೆಬೇರೆ ಕಾಲಖಂಡಗಳಲ್ಲಿ, ಸಂದರ್ಭಗಳಲ್ಲಿ ಹುಟ್ಟಿಕೊಂಡದ್ದು.
    ವರ್ಣಾಶ್ರಮಗಳ ವರ್ಣಕ್ಕೂ, ಜಾತಿಪದ್ಧತಿಯಲ್ಲಿರುವ ಕೆಲವು ಜಾತಿಗಳಿಗೂ ಇರುವ ಹೆಸರಿನ ಸಾಮ್ಯತೆ ಬಿಟ್ಟಲ್ಲಿ, ಇವೆರಡು ಪದ್ಧತಿಗಳಿಗೂ ಸಂಬಂಧವಿಲ್ಲ.
    ಮತ್ತು ಇದರಿಂದಲೇ ದೌರ್ಜನ್ಯಗಳು ಆಗುತ್ತಿವೆ ಎನ್ನುವುದೂ ಒಪ್ಪತಕ್ಕ ಮಾತಲ್ಲ.

    ವರ್ಣಾಶ್ರಮ ಮತ್ತು ಜಾತಿಯ ಚರ್ಚೆ ಬಂದಾಗಲೆಲ್ಲಾ, ಯಾವುದೋ ಒಂದು ವರ್ಗ ಈ ಪದ್ಧತಿಗಳನ್ನು ಹುಟ್ಟುಹಾಕಿತು ಎಂದೇ ಊಹಿಸಲಾಗುತ್ತದೆ.
    ಇಡೀ ಸಮಾಜಕ್ಕೆ ಅನ್ವಯವಾಗುವ ಮತ್ತು ಇಡೀ ಸಮಾಜವೇ ಒಪ್ಪಿಕೊಂಡಿರುವ ಈ ರೀತಿಯ ವ್ಯವಸ್ಥೆಯನ್ನು ಯಾವುದೋ ಒಂದು ಗುಂಪು ಸೃಷ್ಟಿಸಲು ಸಾಧ್ಯವಿಲ್ಲ.
    ಅದೂ ಸಹಸ್ರಾರು ವರ್ಷಗಳಿಂದ ಈ ಪದ್ಧತಿಗಳು ಅಸ್ತಿತ್ವದಲ್ಲಿದೆ ಎಂದರೆ, ಸಮಾಜದ ಎಲ್ಲ ವರ್ಗಗಳೂ ಅದನ್ನು ಒಪ್ಪಿಕೊಂಡು ಆಚರಿಸುತ್ತಿವೆ ಎಂದೇ ಅರ್ಥ.

    ನೀವು ಹೇಳುತ್ತಿರುವಂತಹ ದೌರ್ಜನ್ಯಗಳು ವರ್ಣಾಶ್ರಮ ಪದ್ಧತಿ ಮತ್ತು ಜಾತಿ ಪದ್ಧತಿ ಇಲ್ಲದ ಸಮಾಜಗಳಲ್ಲೂ ನಡೆದಿದೆ (ಉದಾ: ನೀಗ್ರೋಗಳ ಮೇಲಿನ ದೌರ್ಜನ್ಯ)
    ಹೀಗಾಗಿ ನಮ್ಮಲ್ಲಿರುವ ಪದ್ಧತಿಗಳೇ ಈ ರೀತಿಯ ದೌರ್ಜನ್ಯಗಳಿಗೆ ಕಾರಣ ಎನ್ನುವುದು ಕಪೋಲಕಲ್ಪಿತ ಅಥವಾ ದುರುದ್ದೇಶಪೂರಿತ ಎಂದೇ ಹೇಳಬೇಕಾಗುವುದು.
    ಮನುಷ್ಯನ ಮನಸ್ಸಿನಲ್ಲಿರುವ “ಮೇಲರಿಮೆ”, “ಕೀಳರಿಮೆ”ಗಳೇ ಈ ರೀತಿಯ ಭೇಧಭಾವಗಳು ಹುಟ್ಟಿಕೊಳ್ಳುವುದಕ್ಕೆ ಕಾರಣ.
    ನಮ್ಮಲ್ಲಿರುವ ಜಾತೀಯತೆಯೂ ಈ ರೀತಿಯ ಭಾವನೆಗಳಿಂದಲೇ ಹುಟ್ಟಿಕೊಂಡಿರುವುದು.
    ಜಾತೀಯತೆ ಅಳಿಯಲೇಬೇಕು. ಆದರೆ, ಜಾತಿಯ ಅಳಿವಿನಿಂದ ಜಾತೀಯತೆ ಅಳಿಯುತ್ತದೆ ಎಂದು ತಿಳಿಯುವುದು ತಪ್ಪು.
    ಜಾತಿ ಎನ್ನುವುದು ಸಮಾಜದಲ್ಲಿರುವ ವ್ಯವಸ್ಥೆ. ಆದರೆ, ಜಾತೀಯತೆ ಎನ್ನುವುದು ಮನಸ್ಸಿನ ಆಳಕ್ಕಿಳಿದಿರುವ “ಮೇಲರಿಮೆ”, “ಕೀಳರಿಮೆ” ಎನ್ನುವ ಭಾವನೆಗಳು.
    ಇವೆರಡರಲ್ಲೂ “ಜಾತಿ” ಎನ್ನುವ ಸಮಾನ ಪದವಿದ್ದರೂ, ಎರಡೂ ಭಿನ್ನವಾದವುಗಳು.

    ಇನ್ನು ಇವನ್ನೆಲ್ಲಾ ಹೊಡೆದೋಡಿಸಲು “ಸಾಮರಸ್ಯ”ದ ಪ್ರಯತ್ನಗಳು ಹೆಚ್ಚಾಗಿ ನಡೆಯಬೇಕು. ನಾವೆಲ್ಲಾ ಒಂದೇ ಸಮಾಜಕ್ಕೆ ಸೇರಿದವರು ಎನ್ನುವ ಭಾವನೆಯನ್ನು ಹೆಚ್ಚೆಚ್ಚು ಆಳಕ್ಕಿಳಿಸುತ್ತಾ ಹೋಗಬೇಕು. “ವರ್ಗ ಸಂಘರ್ಷ” ಹುಟ್ಟುಹಾಕುವುದರಿಂದ ಸಮಾಜದಲ್ಲಿನ ವಿವಿಧ ಗುಂಪುಗಳ ನಡುವೆ ಇರುವ ಕಂದಕಗಳು ದೊಡ್ಡದಾಗುತ್ತಾ ಹೋಗುತ್ತದೆ. ಇದರಿಂದ ದೌರ್ಜನ್ಯಗಳು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ದೌರ್ಜನ್ಯಕ್ಕೆ ಜಾತಿಯಿಲ್ಲ. ಎಲ್ಲ ಜಾತಿಯ ಜನರೂ ದೌರ್ಜನ್ಯಕ್ಕೆ ಒಳಗಾಗಿಯೇ ಇದ್ದಾರೆ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ಬಿಹಾರಿಗಳು (ಎಲ್ಲ ಜಾತಿಯವರೂ) ದೌರ್ಜನ್ಯಕ್ಕೊಳಗಾದರು. ಕಾಶ್ಮೀರದಲ್ಲಿ ಬ್ರಾಹ್ಮಣ ಪಂಡಿತ ಜಾತಿಯವರು ದೌರ್ಜನ್ಯಕ್ಕೊಳಗಾದರು. ಕೇರಳದಲ್ಲಿ ಕಮ್ಯುನಿಸ್ಟರು ದಶಕಗಳಿಂದಲೂ ದೌರ್ಜನ್ಯ ನಡೆಸುತ್ತಲೇ ಇದ್ದಾರೆ. ಹೀಗಾಗಿ, ದೌರ್ಜನ್ಯವನ್ನು ಜಾತಿಗೆ ತಳಕು ಹಾಕಿ, “ಜಾತಿ ಸಂಘರ್ಷ”ವನ್ನು ಹುಟ್ಟು ಹಾಕುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಎಲ್ಲ ಜಾತಿಗಳೂ ಸಮಾನವಾದವುಗಳು, ಯಾವುದೇ ಜಾತಿ ಮೇಲಲ್ಲ, ಯಾವುದೇ ಜಾತಿ ಕೀಳಲ್ಲ, ಎನ್ನುವ “ಸಾಮರಸ್ಯ”ವನ್ನು ಸಮಾಜದಲ್ಲಿ ಪ್ರಚುರಪಡಿಸುವುದೇ ಇದಕ್ಕೆ ಪರಿಹಾರ.

    ಉತ್ತರ
    • charles bricklayer
      ಡಿಸೆ 9 2011

      krishnappa yaakadaru danagallannu saagisuttirali adu hallege kaaraNA yaake aagabeku?.adu hallege kaarana allavaadare praani dayaa sanghadavaru yaake halle maadabeku?, aatana dalita jaati kaaranavalla endu ittukondare. naale naanu nanage annavu taayi samaanavendu adaralli nanna bagavantanu iruttanendu adannu bereyavaru andare nanna nambikeyannu oppadavaru tindare nanna manasige novaaguvudarinda bere yaaru adannu tinnabaaradu yendare neevella anna tinnuvudu bittu biduteera?.

      ಉತ್ತರ
  2. ಡಿಸೆ 9 2011

    ಕುಮಾರ ಹೇಳಿದ್ದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಕೇವಲ ಪೂರ್ವಾಗ್ರಹ ಪೀಡಿತರಾಗದೇ ಜಗತ್ತನ್ನು ಕಣ್ಣು ತೆರೆದು ನೋಡಿ ಬರೆಯಬೇಕು ಅಲ್ಲವೇ ?

    ಉತ್ತರ
  3. Kumar
    ಡಿಸೆ 11 2011

    charles bricklayer> krishnappa yaakadaru danagallannu saagisuttirali adu hallege kaaraNA yaake aagabeku?
    charles bricklayer> adu hallege kaarana allavaadare
    ಮಾತನಾಡಲು ಬಾರದ ಮೂಕ ಪ್ರಾಣಿಗಳ ಮೇಲೆ ಯಾರು ಬೇಕಾದರೂ ಹಲ್ಲೆ ಮಾಡಬಹುದು, ಕೊಲ್ಲಬಹುದು. ಅದನ್ನು ಪ್ರಶ್ನಿಸಬಾರದು.
    ಪ್ರಶ್ನಿಸಿದರೆ ಜಾತಿ-ಮತ-ಕುಲ-ಗೋತ್ರಗಳನ್ನೆತ್ತಿ ಅವರನ್ನು ಮೂಕರನ್ನಾಗಿಸಲು ಪ್ರಯತ್ನಿಸುವಿರಿ.

    charles bricklayer> naale naanu nanage annavu taayi
    charles bricklayer> nanna nambikeyannu oppadavaru tindare nanna manasige novaaguvudarinda
    charles bricklayer> bere yaaru adannu tinnabaaradu yendare neevella anna tinnuvudu bittu biduteera?
    ಇಲ್ಲಿ ನಂಬಿಕೆಯ ಪ್ರಶ್ನೆ ಎಲ್ಲಿ ಬಂದಿದೆ? ಪ್ರಾಣಿದಯಾಸಂಘದವರು ಯಾವ ನಂಬಿಕೆಯನ್ನು ಪ್ರತಿನಿಧಿಸುತ್ತಿದ್ದಾರೆ?
    ಮತ್ತು ನೀವು ಮಾಡುತ್ತಿರುವುದು ವಿತ್ತಂಡವಾದ. ಈ ರೀತಿಯ ವಿತ್ತಂಡವಾದಗಳನ್ನು ನಾನೂ ಮುಂದಿಡಬಲ್ಲೆ.
    ಆ ರೀತಿ ವಾದ ಮಾಡುತ್ತಾ, ಮಾನವ ಮಾಂಸಭಕ್ಷಣೆಯನ್ನೂ ಸಮರ್ಥನೆ ಮಾಡಿಬಿಡಬಹುದು.

    ನಿಮಗೆ ಮಾಂಸಾಹಾರವೇ ಬೇಕಿದ್ದರೆ, ನಮ್ಮ ದೇಶದಲ್ಲಿ ಹಲ್ಲಿ, ಜಿರಳೆ, ಇಲಿ, ಹೆಗ್ಗಣಗಳು ಹೇರಳವಾಗಿವೆ.
    ಹಾಗೆ ನೋಡಿದರೆ, ಅವುಗಳಿಂದ ಜೀವನ ಸಾಗಿಸುವುದು ಕಷ್ಟವೇ ಆಗಿದೆ.
    ನೀವು ನಿಮ್ಮ ಆಹಾರದ ಪಟ್ಟಿಯಲ್ಲಿ ಅವನ್ನೂ ಸೇರಿಸಿಕೊಂಡರೆ, ಮಾನವಸೇವೆ ಮಾಡಿದಂತೆಯೇ ಆಗುತ್ತದೆ. ಏನೆನ್ನುವಿರಿ?

    ಉತ್ತರ
    • charles bricklayer
      ಡಿಸೆ 16 2011

      obba vyaktiyannu prashnisuvudakkoo avana hatyeyaguva reetiyalli halle maaduvudakkoo eruva vatyaasa nannanta vitandavaadige gottilladiddaroo tammantha prakhaandarige tiLidide endu bhaavisuttene.haageye praanidayeya hesarinalli saamvidanikavaagi eruva ella kaanoonugaLa choukattannoo meeri kaanoonanne tamma kaigettekondu tammanteye eruva mattobbana hatye maaduvudu daye anukampakke bareda hosa vyaakyaana.

      naanu enannu tinnabeku embudakke taavu kottiruva salahege danyavaadagaLu.naanu avugaLannu tinnuvudarinda jagattige olleyadaaguvudaadare naanu sidda kooda, aadare tammantha appata sasyaahaarigaLu(haage baavisuttEne, taavu nanna hesarina maatradindale naanu maamsaahaari endu baavisida haage) e naadanella aakramisi hullu beLeyaloo jaagavilladanthe maadiruva parthenium,lantaana etyadigaLannu sEvisi hullu beLeyalu avakaasha maadikottu maanava seveyalladiddaroo pavitra gomaateya sEveyannaadaroo maaduttiraa?.

      anda haage dalitaru alpa sankyaataru maatrave tinnuva danagaLu maatrave praanidayege arhavendu ella maamsaaharigaLu sevisuva etare praanigaLu dayege arhavallavendu taavu nanage gnaanodaya maadisidakke danyavaadagaLu. avugaLu kooda dayege arhavaagidalli aarthikavaagi saamaajikavagi raajakeeyavaagi prabalaraagiruva etarara (saarvajanikavaagi eruva chicken mutton pork angadigaLa kadege omme kannu haayisiddiraa?) mEle praani daya sanghadavaru halle maaduttaara?.
      prakrutiyalli srushtiyaagiruva ella jeevigaloo (taavu nikrustavaagi kandiruvugaloo seri)praakrutika samatolanada drustiyinda avashyakavendoo pratiyondu naashavaadagaloo adu konge manushyana uLivigemaaraka endu nanna vitandavaadada tiLuvaLike.tappidalli tammantavaru enlight maadidari nammantha krimigaLu tiddikoLLabahudu.

      anda haage saamarasyada maataaduva taavu nimmanateye eruva aadare dalitha mattu alpasankyata vyaktigalannu tammannu samarthisuvavaru krimi endu jaridaagaloo ondu sanna khandaneyannoo maadadiruvudu(idu dinagalaadaroo) enannu soochisuttade? mounam sammati soochakam allave. khsamisi, nannadu vitandavaada.

      yaavudu sari? vitandavaadavo athava vittandavaadavo.

      wallpaper, pandora, limewire

      ಉತ್ತರ
      • ಡಿಸೆ 22 2011

        ಚಾರ್ಲಸ್,

        ನಿಮ್ಮ ಪ್ರತಿಕ್ರಿಯೆಗಳನ್ನು ಕನ್ನಡದಲ್ಲೇ ಬರೆಯಿರಿ, ನಿಮ್ಮ ಕನ್ನಡ ಬರಹದ ಅನುಕೂಲಕ್ಕೆ ಈ ಕೆಳಗಿನ ಕೊಂಡಿಗಳನ್ನು ಉಪಯೋಗಿಸಿ.
        http://kannadaslate.com/
        http://www.google.com/transliterate

        ಧನ್ಯವಾದಗಳು….

        ಅರವಿಂದ್

        ಉತ್ತರ
        • charles bricklayer
          ಡಿಸೆ 28 2011

          ನೀವು ಕೊಟ್ಟ ಈ ಉಪಯುಕ್ತ ಮಾಹಿತಿಗಾಗಿ ತಮಗೂ ಧನ್ಯವಾದಗಳು

          daemon tools, pandora, limewire

          ಉತ್ತರ
  4. ರವಿ ಜಿ ಬಿ
    ಡಿಸೆ 12 2011

    1) ದೌರ್ಜನ್ಯವನ್ನು ಜಾತಿಗೆ ತಳಕು ಹಾಕಿ, “ಜಾತಿ ಸಂಘರ್ಷ”ವನ್ನು ಹುಟ್ಟು ಹಾಕುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಎಲ್ಲ ಜಾತಿಗಳೂ ಸಮಾನವಾದವುಗಳು, ಯಾವುದೇ ಜಾತಿ ಮೇಲಲ್ಲ, ಯಾವುದೇ ಜಾತಿ ಕೀಳಲ್ಲ, ಎನ್ನುವ “ಸಾಮರಸ್ಯ”ವನ್ನು ಸಮಾಜದಲ್ಲಿ ಪ್ರಚುರಪಡಿಸುವುದೇ ಇದಕ್ಕೆ ಪರಿಹಾರ.
    2) ನಿಮಗೆ ಮಾಂಸಾಹಾರವೇ ಬೇಕಿದ್ದರೆ, ನಮ್ಮ ದೇಶದಲ್ಲಿ ಹಲ್ಲಿ, ಜಿರಳೆ, ಇಲಿ, ಹೆಗ್ಗಣಗಳು ಹೇರಳವಾಗಿವೆ.
    ಹಾಗೆ ನೋಡಿದರೆ, ಅವುಗಳಿಂದ ಜೀವನ ಸಾಗಿಸುವುದು ಕಷ್ಟವೇ ಆಗಿದೆ.
    ನೀವು ನಿಮ್ಮ ಆಹಾರದ ಪಟ್ಟಿಯಲ್ಲಿ ಅವನ್ನೂ ಸೇರಿಸಿಕೊಂಡರೆ, ಮಾನವಸೇವೆ ಮಾಡಿದಂತೆಯೇ ಆಗುತ್ತದೆ.

    ಸರಿಯಾಗಿ ಹೇಳಿದಿರಿ ಕುಮಾರ್,

    ವಿಜಯೇಂದ್ರ ಮತ್ತು charles bricklayer ರಂತಹವರು ಇರುವವರೆಗೆ ಸಮಾಜದಲ್ಲಿ ಸಾಮರಸ್ಯ ಕನಸಿನ ಮಾತು ಮತ್ತು ದಲಿತರು ಏಳಿಗೆ ,ಮುಂದೆ ಬರೋದು ಮತ್ತು ವಿದ್ಯವಂತರಾಗೋದು ಅಸಾದ್ಯವೇನೋ? ಇಂತಹ ಕ್ರಿಮಿಗಳನ್ನ ತಿನ್ನೋ/ ಆಹಾರಪದ್ದತಿಯನ್ನಾಗಿಸೋ ಯಾರಾದರೂ ಹುಟ್ಟಿದರೆ (ಆದಷ್ಟು ಬೇಗ ) ಈ ಜಗತ್ತಿಗೆ ಕ್ಷೇಮ ! ಇಲ್ಲವಾದರೆ ಇಂತಹ ರಕ್ತ ಬೀಜಾಸುರರಿಂದ ಜಗತ್ತಿನ ನಾಶ ಸುನಿಶ್ಚಿತ !!!

    ಉತ್ತರ
  5. Kumar
    ಡಿಸೆ 18 2011

    ತಾವು ಕನ್ನಡದ ಲಿಪಿಯನ್ನೇ ಬಳಸಿ ಬರೆದರೆ ಓದಲು ಸಾಧ್ಯವಾಗುತ್ತದೆ.
    ಇಂಗ್ಲಿಷ್ ಲಿಪಿಯಲ್ಲಿ ಕನ್ನಡವನ್ನು ಬರೆಯುವುದು ಸುಲಭ, ಆದರೆ ಓದುವುದು ಬಹಳ ಹಿಂಸೆ!

    > prakrutiyalli srushtiyaagiruva ella jeevigaloo (taavu nikrustavaagi kandiruvugaloo seri)praakrutika samatolanada
    > drustiyinda avashyakavendoo pratiyondu naashavaadagaloo adu konge manushyana
    > uLivigemaaraka endu nanna vitandavaadada tiLuvaLike
    ಮನುಷ್ಯನ ಉಳಿವಿಗೆ ಯಾವ ಪ್ರಾಣಿ, ಪಕ್ಷಿ, ಕೀಟ, ಕ್ರಿಮಿಗಳು ಬೇಕು ಮತ್ತು ಅದಕ್ಕಾಗಿ ಮಾತ್ರ ಅವುಗಳು ಬದುಕಬೇಕೆಂಬುದು ಕೇವಲ ಸ್ವಾರ್ಥದ ಚಿಂತನೆ.
    ಹುಟ್ಟಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಕೊಲ್ಲುವ ಹಕ್ಕು ಮನುಷ್ಯರಿಗಿಲ್ಲ.

    > taavu nanna hesarina maatradindale naanu maamsaahaari endu baavisida haage
    ನೀವು ಮಾಂಸಾಹಾರವನ್ನು ಸಮರ್ಥಿಸಿದ್ದರಿಂದ ನಾನು ನಿಮಗೆ ಜಿರಳೆ ಇತ್ಯಾದಿಗಳ ಇರುವಿಕೆಯ ಕುರಿತಾಗಿ ವಿಡಂಬನೆಯಿಂದ ಬರೆದೆನಷ್ಟೆ.
    ಮನುಷ್ಯನಿಗೆ ಇತರ ಜೀವಿಯನ್ನು ಕೊಂದೇ ಬದುಕಬೇಕೆಂದಿಲ್ಲ, ಆತನ ಬದುಕಿಗೆ ಇತರ ಆಹಾರಗಳೂ ಇವೆ.

    > obba vyaktiyannu prashnisuvudakkoo avana hatyeyaguva reetiyalli halle maaduvudakkoo eruva vatyaasa
    ನಾನಿಲ್ಲಿ ಯಾರ ಹತ್ಯೆಯ ಸಲಹೆಯನ್ನೂ ನೀಡುತ್ತಿಲ್ಲ.
    ಮನುಷ್ಯನ ಜೀವಕ್ಕಿರುವ ಬೆಲೆಯೇ ಇತರ ಪ್ರಾಣಿಗಳ ಜೀವಕ್ಕೂ ಇದೆ ಎಂದು ಹೇಳುತ್ತಿರುವೆನಷ್ಟೇ.
    ಇತರ ಪ್ರಾಣಿಗಳು ತಿನ್ನಲರ್ಹವಾದರೆ ಮನುಷ್ಯನೂ ತಿನ್ನಲರ್ಹ.

    > haageye praanidayeya hesarinalli saamvidanikavaagi eruva ella kaanoonugaLa choukattannoo
    ಕಾನೂನು ಏನು ಹೇಳುತ್ತದೆ ಎಂಬುದನ್ನು ಒಮ್ಮೆ ಅಧ್ಯಯನ ಮಾಡಿ ನೋಡಿ – ಆಗ ತಿಳಿಯುತ್ತದೆ ಯಾರು ಕಾನೂನಿನ ಚೌಕಟ್ಟಿನಡಿ ಕೆಲಸ ಮಾಡುತ್ತಿದ್ದಾರೆ, ಇಲ್ಲ ಎಂಬುದು.
    ಪ್ರಾಣಿಗಳನ್ನು ಯಾವ ರೀತಿ ಸಾಗಿಸಬೇಕು, ಎಷ್ಟು ಪ್ರಾಣಿಗಳನ್ನು ಒಂದು ವಾಹನದಲ್ಲಿ ಸಾಗಿಸಲು ಅನುಮತಿ ಇದೆ, ಇತ್ಯಾದಿಗಳನ್ನೊಮ್ಮೆ ನೋಡಿ.
    ವಾಹನಗಳಲ್ಲಿ ಎಷ್ಟು ಪ್ರಾಣಿಗಳನ್ನು ತುಂಬಿಸಿರುತ್ತಾರೆಂದರೆ, ಅವುಗಳಿಗೆ ಉಸಿರಾಡಲೂ ಆಗುವುದಿಲ್ಲ. ಅವುಗಳು ಓಡಿಹೋಗದಂತೆ ಮಾಡಲು, ಅವುಗಳ ಕಾಲುಗಳಿಗೆ ಬಡಿಯುತ್ತಾರೆ – ಅನೇಕ ಪ್ರಾಣಿಗಳ ಕಾಲುಗಳ ಮೂಳೆಯೇ ಮುರಿದು ಹೋಗಿರುತ್ತದೆ.
    ಇನ್ನು ದ್ವಿಚಕ್ರವಾಹನಗಳಲ್ಲಿ ಕೋಳಿಗಳನ್ನು ಹೇಗೆ ಸಾಗಿಸುತ್ತಾರೆ ಎನ್ನುವುದನ್ನು ನಾನು ವಿವರಿಸಿ ಹೇಳಬೇಕಾಗಿಲ್ಲ.

    ರಸ್ತೆಗಳಲ್ಲೇ ಯಾವ ರೀತಿ ಅಮಾನುಷವಾಗಿ ಹಸುಗಳನ್ನು ಕೊಲ್ಲಲಾಗುತ್ತದೆ ಎನ್ನುವುದಕ್ಕೆ ಈ ವಿಡಿಯೋಗಳೇ ಸಾಕ್ಷಿ:

    ಮೇಲೆ ಕಂಡದ್ದು ಯಾವುದೂ ನೀವು ಹೇಳುವ ಕಾನೂನಿನ ಚೌಕಟ್ಟಿನಡಿ ಬರುವುದಿಲ್ಲ ಅಲ್ಲವೇ?

    > anda haage dalitaru alpa sankyaataru maatrave tinnuva danagaLu maatrave
    ನೀವು ಅಲ್ಪಸಂಖ್ಯಾತ ಎಂಬ ಪದ ಬಳಸಿದಾಗ, ಅದರ ಜೊತೆ ಬಳಸಬಹುದಾದ ಮತ್ತೊಂದು ಪದ ’ಬಹುಸಂಖ್ಯಾತ’ ಮಾತ್ರ.
    ನೀವು ಹೇಳುತ್ತಿರುವ ’ದಲಿತ’ ಎನ್ನುವ ಗುಂಪು ’ಬಹುಸಂಖ್ಯಾತ’ ಸಮುದಾಯಕ್ಕೆ ಸೇರುತ್ತದೆ – ಅದನ್ನು ಅದರಿಂದ ಪ್ರತ್ಯೇಕಿಸಿ ಹೇಳುವ ಅಗತ್ಯವಿಲ್ಲ.

    > prabalaraagiruva etarara mEle praani daya sanghadavaru halle maaduttaara?
    ನಾನಿಲ್ಲಿ ಯಾವ ಹಲ್ಲೆಯನ್ನೂ ಸಮರ್ಥಿಸುತ್ತಿಲ್ಲ.
    ಹಲ್ಲೆಯಾಗಿದ್ದು ಎಷ್ಟು ಅಕ್ಷಮ್ಯವೋ, ಹಲ್ಲೆಗೆ ಕುಮ್ಮಕ್ಕು ಕೊಟ್ಟದ್ದೂ ಅಷ್ಟೇ ಅಕ್ಷಮ್ಯ.
    ಅಮಾನುಷವಾದ ರೀತಿಯಲ್ಲಿ ಪ್ರಾಣಿಗಳ ಸಾಗಾಟ, ಹಿಂಸೆ, ಹತ್ಯೆಗಳು ನಿಲ್ಲಲಿ ಎಂದೇಕೆ ನೀವು ಒತ್ತಾಯಿಸುತ್ತಿಲ್ಲ – ಇದು ಕೂಡಾ ಹಲ್ಲೆಯೇ ಮತ್ತು ಇದನ್ನು ಮೊದಲು ಖಂಡಿಸಬೇಕು.

    > taavu nikrustavaagi kandiruvugaloo seri
    ವಿಜ್ಞಾನದ ಜೀವಶಾಸ್ತ್ರ ವಿಭಾಗದಲ್ಲೇ ಈ ರೀತಿ ವಿಂಗಡನೆ ಮಾಡಿದ್ದಾರೆ. ಕೀಟಗಳು ಪ್ರಾಣಿ ಜಾತಿಯ ಕೆಳಹಂತದಲ್ಲಿ ಬರುತ್ತದೆ.

    > nimmanateye eruva aadare dalitha mattu alpasankyata vyaktigalannu
    ನಾನು ದಲಿತನಲ್ಲ ಎಂದು ಹೇಳಿದ್ದು ಯಾರು? ಮತ್ತು ನಾನು ಮೊದಲೇ ಹೇಳಿದಂತೆ, ದಲಿತರು ’ಬಹುಸಂಖ್ಯಾತ’ರು – ಅವರನ್ನು ಅವರಿಂದ ಪ್ರತ್ಯೇಕಿಸಬೇಕಾಗಿಲ್ಲ.
    > dalitaru alpa sankyaataru maatrave tinnuva danagaLu
    ದಲಿತರೆಲ್ಲರೂ ಗೋಮಾಂಸ ಸೇವಿಸುತ್ತಾರೆ ಎಂದು ನೀವು ಭಾವಿಸಿದಂತಿದೆ – ಹೆಚ್ಚಿನ ದಲಿತರು ಗೋಮಾಂಸ ಸೇವಿಸುವುದಿಲ್ಲ.

    ಉತ್ತರ
  6. Kumar
    ಡಿಸೆ 18 2011

    ದಯೆಯೇ ಧರ್ಮದ ಮೂಲವಯ್ಯ ಎಂದು ಜಗತ್ತಿಗೆ ಸಾರಿದ ನಾಡಿದು.
    ಅಹಿಂಸೆಯೇ ಪರಮ ಧರ್ಮ ಎಂದು ನಮ್ಮ ಸನಾತನ ಧರ್ಮ ತಿಳಿಸಿಕೊಟ್ಟಿದೆ.
    ಹೀಗಿದ್ದಾಗ್ಯೂ ಹಿಂಸೆಯನ್ನು ಸಮರ್ಥಿಸುವವರು ಇದ್ದಾರೆಂದರೆ ಏನು ಹೇಳುವುದು.
    ನನಗೆ ಗಾಯವಾದಾಗ ಎಷ್ಟು ನೋವಾಗುತ್ತದೋ ಅಷ್ಟೇ ನೋವು ಬೇರೆ ಪ್ರಾಣಿಗಳಿಗೂ ಆಗುತ್ತದೆ.
    ಅದನ್ನು ತಿಳಿಸಿದವರ ಮೇಲೆ ಕೂಗಾಡಲಾಗುತ್ತದೆ – ಪ್ರಾಣಿಹಿಂಸೆ ಮಾಡಬೇಡಿ ಎಂದು ಹೇಳುವುದೇ ತಪ್ಪು ಎನ್ನುವಂತೆ ಆಗಿಬಿಟ್ಟಿದೆ.

    ಪ್ರಾಣಿಗಳನ್ನು ಎಷ್ಟು ಕ್ರೂರವಾಗಿ ನೋಡಿಕೊಳ್ಳಲಾಗುತ್ತದೆ, ಎನ್ನುವುದನ್ನು ತಿಳಿಯಲು ಈ ಕೆಳಗಿನ ಕೊಂಡಿಗಳನ್ನೊಮ್ಮೆ ಓದಿ ನೋಡಿ:
    http://www.animalsuffering.com/animal-cruelty.php
    http://www.veganoutreach.org/whyvegan/slaughterhouses.html

    ಈ ಪ್ರಾಣಿಗಳಿಗೆ ಬದುಕುವ ಹಕ್ಕಿಲ್ಲವೇ? ಅವುಗಳಿಗೆ ನೋವಾದಾಗ ಅವು ಸಹ ಕಣ್ಣೀರಿಡುವುದಿಲ್ಲವೇ, ರೋಧಿಸುವುದಿಲ್ಲವೇ?
    ಅವುಗಳ ಗೋಳಾಟವೂ ಕಟುಕರ ಮನಸ್ಸನ್ನು ಕರುಗಿಸುವುದಿಲ್ಲವೇ!?

    ಇಂದು ಪ್ರಾಣಿಗಳನ್ನು ಕೊಲ್ಲುವವನು ನಾಳೆ ಮನುಷ್ಯನನ್ನೂ ಕೊಲ್ಲುತ್ತಾನೆ – ಕೊಲೆ-ರಕ್ತಪಾತ-ಹಲ್ಲೆ-ದೌರ್ಜನ್ಯಗಳು ನಿಲ್ಲಬೇಕಾದರೆ ಪ್ರಾಣಿಹಿಂಸೆ ನಿಲ್ಲಲೇಬೇಕು.

    ಉತ್ತರ
    • charles bricklayer
      ಡಿಸೆ 22 2011

      taavu vichaaragaLannu tiLisuvaaga swalpa research maadidare oLLeyadu. sanaatana dharma ahimseyanne tiLisikottiddare sanaatana dharmaavalambiyaagidda ashoka kaLinga yuddada nantara tamma sanaathana dharmavannu tyajisi boudda mataavalambiyaaguttidda?
      sanaatana dharmadavarE ada paandavaru hadinentu akshohiNi sainya balikottu raajya padeyabekittu? aidu jana yelliyaadaroo hEgaadaroo kouravarannu kshamisi(geeteyE hELuvante avara karmada phalavannu daivEchche endu kouravare anubavisalu bittu)nemmadiyaagi badukalu aaguttiralillava? ahimseyE PARAMA DHARMA ENDU SAARIDAVUGAlu sanaatana dharmadoLagina himseyinda nonda adakke pratiyaagi horata jaina boudda ityaadi dharmagaLE.
      dayeye dharmada moolavayya endu saaridavaroo kooda sanaatana dharmadalli aacharaNeyalli idda praaNigaLa(YAGNAGALALLI BALIKODALU tandidda praaNigaLannu roopakavaagi uLLa saakashtu vachanagaLive) mElina haagoo dharmada mudreyondigE nadeyuttida manushyara shoshaNege viruddavaagi horata veerashaiva dharmadindale.tamma vachana gnaanavannu parishkarisikoLLi.

      mahaanubhaavare naanelli pranihimseyannu samarthisiddEne? naanu kevala praaNidayaasanghadavara haagu tammantavara double standerdgaLannu prashnisuttiddEne.taavu ondondE vaakyavannu aarisi avugaLa contextninda horage tegedu uttarisuvudannu bittu idee pyaarada artha grahisi uttarisi.tamma uttaraGaLannoo naanu yettariuva prashnegaLanoo ee mElina barahagaLannannu naalku baari odidare tamagEtiLiyuttade.

      anda haage ee prakaraNadalli haagu ee tarahada prakaraNagalli manushyarannu kondiruvavaru praaNigaLannu kolluvavaralla. badalige praaNigaLa mEle apaara daye karuNegaLannu uLLa praaNi dayaa sanghadavare.

      ಉತ್ತರ

ನಿಮ್ಮದೊಂದು ಉತ್ತರ Kumar ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments