ಇಂತಹ ಘಟನೆ ಇನ್ಯಾವ ನಾಡಿನಲ್ಲಿ ನಡೆದೀತು.
– ಸಂತೋಷ್ ಪೂಜಾರಿ
ಸಾರ್ವಜನಿಕ ಕಾರ್ಯಕ್ರಮಲ್ಲಿ ಭಾಗವಹಿಸುವ ಆಸಕ್ತಿ ಅಷ್ಟಕಷ್ಟೆ.ತನಗೆ ಯಾರಾದರೂ ಸನ್ಮಾನ ಮಾಡಿದರೇ ಆ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿದ್ದ ಭಾರತದ ಪ್ರಪ್ರಥಮ ಮಹಾ ದಂಡನಾಯಕನಾದ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಪ್ರತಿಮೆಗೆ ದಿನಾಂಕ ೧೪/೧೧/೨೦೧೧ ರಂದು ಒದಗಿದ ಸ್ಥಿತಿಯಿಂದಾಗಿ ಭಾರತದ ಸೇನಾ ಜಿಲ್ಲೆಯ ವೀರ ಪರಂಪರೆಯ ಜನರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ.
ಕೊಡಂದೇರ ಮಾದಪ್ಪ ಕಾರ್ಯಪ್ಪ ೨೮ ಜನರು ೧೮೯೯ ರಂದು ಕೊಡಗಿನ ಶನಿವಾರ ಸಂತೆಯಲ್ಲಿ ಜನ್ಮತಾಳಿದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಡ ವಿಧ್ಯಾಭ್ಯಾಸವು ಮಡಿಕೇರಿಯಲ್ಲಿ ಮುಗಿಸಿ ಕಾಲೇಜು ವಿಧ್ಯಾಭ್ಯಾಸವನ್ನು ಚೆನೈನಲ್ಲಿ ಮುಗಿಸಿತ್ತಾರೆ. ತಮ್ಮ ಕಾಲೇಜು ದಿನಗಳಲ್ಲಿ ಉತ್ತಮ ಕ್ರಿಢಾಪಟುವಾಗಿದ್ದ ಇವರು ಉತ್ತಮ ಹಾಕಿ ಮತ್ತು ಟೆನ್ನಿಸ್ ಆಟಗಾರರಾಗಿದ್ದರು. ನಂತರದಲ್ಲಿ ಸೈನಿಕ ಸೇರಿದ ಈ ವೀರ ಸೇನಾನಿ ನಂತರ ತಮ್ಮ ಪ್ರಾಮಾಣಿಕತೆ ಶಿಸ್ತು ಹಾಗೂ ತನ್ನ ಕೆಲಸದಿಂದ ಭಾರತ ಮೊದಲ ಮಹಾ ದಂಡನಾಯಕರಾಗಿ ಕಾರ್ಯ ನಿರ್ವಯಿಸಿದ್ದಾರೆ.
ಎರಡನೆ ಪ್ರಪಂಚ ಯುದ್ದದಲ್ಲಿ ಪಾಲ್ಗೊಂಡಿದ್ದ ಎವರು ನಂತರ ೧೯೪೭ ರ ಭಾರತ ಮತ್ತು ಪಾಕಿಸ್ತಾನದ ಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಮುಂದುವರೆಸಿದರು ಭಾರತದ ಸ್ವತಂತ್ರ ಬಂದ ನಂತರ ಅದರ ಬೆನ್ನ ಹಿಂದೆ ಇಡಿ ಭಾರತಕ್ಕೆ ಆಪತ್ತು ತಂದುಕೊಡುವ ನಮ್ಮ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ದ ಯುದ್ದ ಮಾಡಬೇಕಾಯಿತು.ಸ್ವತಂತ್ರ ಭಾರತದ ಮಹಾ ಸೇನಾನಿಯಾದ ಕಾರ್ಯಪ್ಪನವರಿಗೆ ಸ್ವತಂತ್ರ ಬಂದ ತಕ್ಷಣ ಅದರ ಬೆನ್ನಲ್ಲೇ ಮತ್ತೊಂದು ಯುದ್ದವನ್ನು ಎದುರಿಸುವುದು ಮಹಾನ್ ಕಠಿಣ ಸವಾಲಾಗಿತ್ತು ಭಾರತದ ಸ್ವತಂತ್ರ ಆಗ ತಾನೆ ಸಿಕ್ಕ ಕಾರಣ ಸೈನಿಕರಲ್ಲಿ ಶಿಸ್ತು, ಯುದ್ದ ಸಲಕರಣೆಗಳ ಅಲಭ್ಯತೆ ಸೈನಿಕರ ದಕ್ಷತೆ ಇವೆಲ್ಲದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಯಿತು. ಆದರೆ ಈಗಾಗಲೆ ಎರಡನೇ ಪ್ರಪಂಚ ಯುದ್ದದಲ್ಲಿ ಪಾಲ್ಗೊಂಡ ಅನುಭವವಿದ್ದ ಕಾರ್ಯಪ್ಪನವರಿಗೆ ಸೈನ್ಯವನ್ನು ಮುನ್ನೆಡೆಸುವುದು ಕಠಿಣವಾಗಲಿಲ್ಲ ಅವರು ಅದನ್ನು ಯಶಸ್ವಿಯಾಗಿ ನಿರ್ವಯಿಸಿದರು ಕೊಡ ಯಾವ ದೇಶ ನಮ್ಮ ಜೊತೆಗೆ ಯುದ್ದವನ್ನು ಮಾಡಿ ನಮ್ಮ ಸರ್ವನಾಶ ಮಾಡುವುದರ ಪಣ ತೊಟ್ಟಿತೊ, ಅದೇ ದೇಶ ಮತ್ತೆ ತನ್ನ ಪ್ರಾಣ ಭಿಕ್ಷೆಯನ್ನು ಬೇಡುವ ತರ ಕಾರ್ಯಪ್ಪನವರು ನಮ್ಮ ಹೋರಾಟಾವನ್ನು ಸಂಘಟಿಸಿದರು ಅದು ಅತ್ಯಂತ ಸಣ್ಣದಿನದ ಅಂತರದಲ್ಲಿ ಸುಲಭ ಜಯ ಸಾಧಿಸಿದರು ಭಾರತೀಯರಿಗೆ ಆ ವಿಜಯ ತಂದು ಕೊಟ್ಟಾ ಆತ್ಮ ವಿಶ್ವಾಸ ಇದೆಯಲ್ಲ ಅದು ವರ್ಣಿಸಲು ಸಾದ್ಯವಿಲ್ಲ ಆಲ್ಲಿಂದ ಮುಂದೆ ಭಾರತೀಯರು ಯಾವುದೇ ಯುದ್ದಕ್ಕೆ ಎದರಲಿಲ್ಲ. ಅದೇ ಭಾರಿ ಬೇರೆ ಬೇರೆ ದೇಶಗಳು ನಮ್ಮ ಮೇಲೆ ಯುದಕ್ಕೆ ಬಂದರೂ ಮೊದಲ ಜಯದ ನೆನಪಿನೊಂದಿಗೆ ಇಂದು ನಮ್ಮ ಸೈನಿಕರು ಯುದ್ದಕ್ಕೆ ತೆರಳುತ್ತಾರೆ.ಅದಕ್ಕೆ ಕಾರಣಿಭೊತರಾಗಿದ್ದ ನಮ್ಮ ಕೊಡಗಿನ ಹೆಮ್ಮೆಯ ಕುಲಪುತ್ರ ಫೀಲ್ಡ್ ಮಾರ್ಶಲ್ ಕಾರ್ಯಪ್ಪ ಅವರು ಭಾರತೀಯ ಸೇನೆಗೆ ಮಾಡಿದ ಸೇವೆಯನ್ನು ಮನ್ಗಂಡು ೧೯೯೬ ರಲ್ಲಿ ಮಡಿಕೇರಿಯಲ್ಲಿ ಸುದರ್ಶನ ವೃತ್ತದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.
ಆದರೆ ಇಂದು ನಮ್ಮ ಸ್ವತಂತ್ರ ಭಾರತದ ಮೊದಲ ವೀರ ಸೇನಾನಿ ಪ್ರತಿಮೆಗೆ ಬಂದ ಸ್ಥಿತಿಯನ್ನು ನೋಡಿದರೆ ಶಿಸ್ತು ಮತ್ತು ಸುಸಂಸ್ಕೃತಿಯನ್ನು ಹೊಂದಿರುವ ನಾಡದ ಕೊಡಗಿನ ವೀರ ಜನತೆಯ ನಾಡಿನಲ್ಲಿ ಈ ರೀತಿ ಘಟನೆ ನಡೆದಿರುವುದು ನಿಜಕ್ಕು ಅವಮಾನಕರ. ಇದರ ಹಿಂದೆ ಯಾವ ಕೈವಾಡವಿರಬಹುದು ಎಂಬುದು ಈಗಿರುವ ಯಕ್ಷ ಪ್ರಶ್ನೆ.ಮದ್ಯಪಾನರಾಗಿ ಮಾಡಿದ ಕೃತ್ಯ, ಮಾನಸಿಕ ರೋಗಿಗಳ ಕೆಲಸವಿರಬಹುದು, ಅಥಾವ ಸಮಾಜ ಘಾತುಕ ಶಕ್ತಿಗಳ ಕಾಣದ ಕೈಗಳ ಕೈವಾಡ ಇದರಲ್ಲಿ ಇರಬಹುದು ಎಂಬ ಗುಮಾನಿಯಿಂದ ಜಿಲ್ಲಾ ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ಸಮಾಜ ಘಾತುಕ ಶಕ್ತಿಗಳ ಕಾಣದ ಕೈಗಳ ಕೈವಾಡ ಈ ಅಮಾನವೀಯ ಕೃತ್ಯದ ಹಿಂದೆ ಇದ್ದರೆ ಅಂತವರನ್ನು ಬಯಲು ಮಾಡಿ ಅವರಿಗೆ ಸರಿಯಾದ ಶಿಕ್ಷೆಯನ್ನು ಕೊಡಬೇಕು, ಸರಕಾರ ಹಿರಿಯ ಚೇತನಗಳ ಪ್ರತಿಮೆಗಳನ್ನು ಮಾಡುವ ಮೊದಲು ಅದರ ಸಂರಕ್ಷಣೆಯ ಬಗ್ಗೆ ಯೋಚಿಸಬೇಕು ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಮಗ ಕೆ ಸಿ ಕಾರ್ಯಪ್ಪ (ನಿವೃತ್ತ ಎರ್ ಮಾರ್ಶಲ್) ಹೇಳುವಂತೆ ಪ್ರತಿಮೆಯ ರಕ್ಷಣೆಗಾಗಿ ಕೆಲಸಗಾರನ್ನು ನೇಮಿಸಬೇಕು. ಎಕೆಂದರೆ ಒಂದು ದೇಶದ ಉನ್ನತಿಯನ್ನು ಹೇಳುವುದು ಆ ದೇಶದ ಮಹಾನ್ ಚೇತನಗಳನ್ನು ಇಟ್ಟುಕೊಂಡು. ಅಂತಹ ಮಹಾನ್ ಚೇತನಗಳನ್ನು ನಾವು ದಿನ ನೆನಪಿಸಿಕೊಳ್ಳುವುದು ಅವರ ಪ್ರತಿಮೆಯಿಂದ, ಅಂತಹ ಪ್ರತಿಮೆಯ ರಕ್ಷಣೆ ಮಾಡುವುದು ಪ್ರತಿಯೊಬ್ಬ ಜವಬ್ದಾರಿಯುತ ನಾಗರೀಕನ ಕರ್ತವ್ಯ. ಇಂದು ಕೊಡಗಿನ ಜನತೆ ಎಲ್ಲರು ಒಂದಾಗಬೇಕಿದೆ. ಈ ಅವಮಾನಕಾರಿಯಾದ ಘಟನೆ ಮತ್ತೆ ಆಗದ ಹಾಗೆ ನಮ್ಮ ಜಿಲ್ಲೆಯ ವೀರಪರಂಪರೆಯ ಮೇಲೆ ಕಪ್ಪು ಚುಕ್ಕೆಬಾರದ ಹಾಗೆ ಕಾಪಾಡಬೇಕಾಗಿದೆ. ಇಗ ಕಣ್ಣೀರು ಒರೆಸುವಂತೆ ಜಿಲ್ಲೆಯ ಪೊಲೀಸರು ಕೆಲವರನ್ನು ಬಂಧಿಸಿದ್ದೆನೊ ನಿಜ ಅದರೆ ಅವರು ನಿಜವಾದ ಅಪರಾಧಿಗಳೆ ಎಂಬುದನ್ನು ಕಂಡುಹಿಡಿಯಬೇಕಿದೆ.