-ಮುರಳಿಧರ ದೇವ್

ಬೆಂಗಳೂರನ್ನು ವಿಶ್ವದಾದ್ಯಂತ ತಾಂತ್ರಿಕತೆಯಲ್ಲಿ ಮುಂದಿರುವ ನಗರವೆಂದು ಗುರುತಿಸಲಾಗುತ್ತೆ, ಅಲ್ಲದೆ ಜಗತ್ತಿನ ಬಹುತೇಕ ಕಂಪನಿಗಳು ನಮ್ಮ ಬೆಂಗಳೂರಿನಲ್ಲಿ ಅವರ ಒಂದು ವಿಭಾಗ ಅಥವಾ ಬ್ರ್ಯಾಂಚ್ ಇರಬೇಕೆಂದು ಬಯಸುತ್ತವೆ. ಬಹುತೇಕ ಸಾಫ್ಟವೇರ್ ಅನ್ನು ಅಭಿವೃದ್ದಿ ಪಡಿಸೋದರಲ್ಲೂ ಬೆಂಗಳೂರಿಗರು ಮುಂದಿದ್ದಾರೆ. ಆದರೆ ನಮ್ಮದೇ ರಾಜ್ಯದಲ್ಲಿ ಈ ತಾಂತ್ರಿಕತೆಯನ್ನು ಉಪಯೋಗ ಪಡೆಯೋದರಲ್ಲಿ ತುಂಬಾ ಹಿಂದೆ ಉಳಿದಿದಿವಿ ಅಂತ ಅನ್ಸುತ್ತೆ. ಬೆಂಗಳೂರಿನ ಬಹುತೇಕ ಬಿ.ಎಂ.ಟಿ.ಸಿ. ಬಸ್ಸುಗಳಲ್ಲಿ ಕೆಲ ದಿನಗಳಿಂದ ಬಸ್ ನಂಬರ್, ಮಾರ್ಗ ಇತ್ಯಾದಿಗಳನ್ನು ತೋರಿಸಲು ಎಲ್.ಇ.ಡಿ. ಗಳನ್ನೂ ಬಳಸ್ತಾ ಇದಾರೆ. ಇದರಿಂದ ಕೇವಲ ಕೆಲ ನಿಮಿಷದಲ್ಲೇ ರೂಟನ್ನು ಚಾಲಕರು ಬದಲಾಯಿಸಬಹುದು. ಆದರೆ ಮಾರ್ಗ ಇತ್ಯಾದಿ ತೋರಿಸುವಾಗ ಹೆಚ್ಚಾಗಿ ಇಂಗ್ಲಿಷ್ ಕಾಣ್ತಾ ಇದೆ, ಹಾಗಂತ ಕನ್ನಡ ಇಲ್ಲ ಅಂತೇನು ಅಲ್ಲ, ಮಾಹಿತಿ ಇಂಗ್ಲಿಷ್ನಲ್ಲಿ ೫ ಸೆಕೆಂಡ್ಸ್ ಬಂದ್ರೆ ಕನ್ನಡದಲ್ಲಿ ಕೇವಲ ೨ಡೇ ಸೆಕಂಡ್ ಬರುತ್ತೆ. ಇದನ್ನು ಪ್ರಶ್ನಿಸೋಕೆ ಹೋದರೆ ತಾಂತ್ರಿಕತೆ ಇರೋದೇ ಹೀಗೆ ಅಂತ ಸಿದ್ದ ಉತ್ತರ ಸಿಗುತ್ತೆ. ಅಲ್ಲದೆ ಟಿಕೆಟನ್ನು ಮುದ್ರಿಸೋ ಯಂತ್ರದಿಂದ ಟಿಕೆಟ್ ಪಡೆದರೆ ಅದರಲ್ಲಿ ಬಿ.ಎಂ.ಟಿ.ಸಿ. ಅಂತ ಬಿಟ್ರೆ ಬೇರೆಲ್ಲೂ ಕನ್ನಡ ಅನ್ನೋ ಪದಾನೆ ಇಲ್ಲ. ಎಲ್ಲಿಂದ, ಎಲ್ಲಿಗೆ, ಮಾರ್ಗ ಯಾವುದು ಎಲ್ಲ ಇಂಗ್ಲಿಷ್ನಲ್ಲೇ ಇರುತ್ತದೆ. ಇದಕ್ಕೂ ಅದೇ ಸಿದ್ದ ತಾಂತ್ರಿಕತೆಯ ಕಾರಣ ಕೊಡ್ತಾರೆ ಅಧಿಕಾರಿಗಳು. ಅಥವಾ ಕನ್ನಡದಲ್ಲಿ ಟಿಕೆಟ್ ಮುದ್ರಿಸೋಕೆ ಟಿಕೆಟ್ನಲ್ಲಿ ಸ್ಥಳದ ಅಭಾವ ಅಂತ ಹೇಳ್ತಾರೆ. ನಿಜಕ್ಕೂ ತಾಂತ್ರಿಕತೆಯಲ್ಲಿ ಇದು ಸಾಧ್ಯವಿಲ್ಲ ಅಂತ ನಂಬೋಣ ಅಂದ್ರೆ ಬೇರೆ ರಾಜ್ಯಗಳಲ್ಲಿ ಈ ಪರಿಸ್ಥೀತಿಯಿಲ್ಲ.
ಇತ್ತೀಚಿಗೆ ಕೆಲಸದ ನಿಮಿತ್ತ ಮುಂಬೈ ನಗರಕ್ಕೆ ಹೋಗಬೇಕಾಗಿ ಬಂತು, ಮುಂಬೈನಲ್ಲಿ ತಮ್ಮ ಜನರ ಅನುಕೂಲಕ್ಕೆ ತಕ್ಕಂತೆ ಬಸ್ಸುಗಳಲ್ಲಿ ಅಲ್ಲಿನ ಭಾಷೆಯನ್ನು ಅಧಿಕಾರಿಗಳು ಅಳವಡಿಸಿಕೊಂಡಿದ್ದಾರೆ. ಅಲ್ಲೂ ನಮ್ಮಲ್ಲಿಯ ಹಾಗೆ ಎಲ್.ಇ.ಡಿ. ಗಳನ್ನೂ ಬಳಸ್ತಾ ಇದಾರೆ. ಆದರೆ ಹೆಚ್ಚಾಗಿ ಮರಾಠಿಗೆ ಆದ್ಯತೆ ಕೊಡ್ತಾರೆ, ನಂತರದ ಸ್ಥಾನ ಇಂಗ್ಲಿಷ್ ಗೆ. ನಮ್ಮಲ್ಲಿಯ ಹಾಗೆ ಮೊದಲು ಇಂಗ್ಲಿಷ್ ಆಮೇಲೆ ಸ್ಥಳೀಯ ಭಾಷೆ ಅಂತ ಆಯ್ಕೆ ಮಾಡಿಕೊಂಡಿಲ್ಲ. ಇಷ್ಟೇ ಅಲ್ಲ ಅಲ್ಲಿಯ ಟಿಕೆಟ್ ಮೇಲೆ ಮಾರ್ಗ, ಹೊರಡುವ ಸ್ಥಳ ಇತ್ಯಾದಿ ಮಾಹಿತಿಯನ್ನು ಅಲ್ಲಿಯ ಸ್ಥಳೀಯ ಭಾಷೆಯಾದ ಮರಾಠಿಯಲ್ಲೇ ಕಾಣಬಹುದು. ಹಾಗಂತ ಅಲ್ಲಿಯ ಟಿಕೆಟ್ ಅಳತೆ ನಮ್ಮಲ್ಲಿಯ ಟಿಕೆಟ್ ಗಿಂತ ದೊಡ್ಡದು ಅಂತ ಅನ್ಕೊಂಡ್ರೆ, ಅದು ಇಲ್ಲ, ಅಲ್ಲಿಯ ಟಿಕೆಟ್ ಅಳತೆ ಹಾಗು ನಮ್ಮಲ್ಲಿಯ ಟಿಕೆಟ್ ಅಳತೆ ಎರಡು ಅಷ್ಟೇ ಇದೆ. ಆದರು ಅವರು ಅದೇ ಅಳತೆಯಲ್ಲೇ ತಮ್ಮ ಸ್ಥಳೀಯ ಭಾಷೆಗೆ ಆದ್ಯತೆ ಕೊಟ್ಟು ಮಾಹಿತಿಯನ್ನು ಮರಾಠಿಯಲ್ಲೇ ಮುದ್ರಿಸುತ್ತಾರೆ. ಇದರಿಂದ ಅಲ್ಲಿಯ ಸ್ಥಳೀಯ ಜನರಿಗೆ ಹೆಚ್ಚು ಅನುಕೂಲ. ಅಲ್ಲದೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಅವಲಂಬಿಸಿರೋದು ಸ್ಥಳೀಯ ಜನರೇ. ಆದ್ದರಿಂದ ಅವರು ತಮ್ಮ ರಾಜ್ಯ ಹಾಗು ಸ್ಥಳೀಯ ಭಾಷೆಯಾದ ಮರತಿಗೆ ಹೆಚ್ಚು ಆದ್ಯತೆ ಕೊಡ್ತಾರೆ.
ಆದರೆ ನಮ್ಮ ಬೆಂಗಳೂರು ತಾಂತ್ರಿಕತೆಯಲ್ಲಿ ಮುಂದೆ ಇದ್ದೇವೆ ಅಂತ ಬಿಗೋ ನಾವು ಸಾರ್ವಜನಿಕ ಸಾರಿಗೆಯಲ್ಲಿ ಕನ್ನಡವನ್ನು ಮರೆತು ಇಂಗ್ಲಿಷ್ ಗೆ ಆದ್ಯತೆ ಕೊಟ್ಟು ಕನ್ನಡವನ್ನು ಕಾಣದಂತೆ ಮಾಡಿದ್ದೇವೆ. ಮುಂಬೈ ನಗರ ಸಾರಿಗೆ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡ ತಾಂತ್ರಿಕತೆ ನಮ್ಮ ರಾಜ್ಯ ಸಾರಿಗೆಯಲ್ಲಿ ಅಳವಡಿಸಿಕೊಲ್ಲೋಕೆ ಆಗಲ್ವಾ? ಅಲ್ಲಿ ಸಾಧ್ಯವಾದದ್ದು ನಮ್ಮಲ್ಲಿ ಯಾಕೆ ಸಾಧ್ಯವಾಗಲ್ಲ? ನಮ್ಮಲ್ಲೂ ಕನ್ನಡಕ್ಕೆ ಆದ್ಯತೆ ಕೊಟ್ಟು ಸ್ಥಳೀಯ ಜನಕ್ಕೆ ಅನುಕೂಲ ಆಗೋ ಹಾಗೆ ತಾಂತ್ರಿಕತೆಯನ್ನು ಅಳವಡಿಸಿಕೊಲ್ಲೋಕೆ ಸಾರಿಗೆ ಸಂಸ್ಥೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ಸ್ಥಳೀಯ ಜನಕ್ಕೆ ಇನ್ನು ಹೆಚ್ಚು ಅನುಕೂಲ ಆಗೋ ಹಾಗೆ ಮಾಡಲಿ.
***************
ಚಿತ್ರಕೃಪೆ : picasaweb.google.com
Like this:
Like ಲೋಡ್ ಆಗುತ್ತಿದೆ...
Related
ನಮ್ಮ ಭಾಷೆಯ ಕುರಿತು ನಮಗೇ ಅಭಿಮಾನವಿಲ್ಲದೇ ಇರುವುದರ ಪರಿಣಾಮ ಇದು. ತಾಂತ್ರಿಕತೆಯದ್ದೇನು ತಪ್ಪು?
ತಾಂತ್ರಿಕತೆಯ ತಪ್ಪಲ್ಲ ಅದನ್ನು ಅಳವಡಿಸಿ ಉಪಯೋಗಿಸೋದರಲ್ಲಿ ಹಿಂದುಳಿದಿದ್ದೇವೆ.