ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 19, 2011

2

ಸಂಸ್ಕೃತಿ ಸಂಕಥನ -14 -ಏನಿದು ಸೆಕ್ಯುಲರಿಸಂ

‍ನಿಲುಮೆ ಮೂಲಕ

ರಮಾನಂದ ಐನಕೈ

ರಿಲಿಜನ್ ಅನ್ನುವುದು ಮನುಷ್ಯ ಚಿಂತನೆಯಿಂದ ಹುಟ್ಟಿದ್ದಲ್ಲ. ಅದು ಗಾಡ್ನ  ಕೊಡುಗೆ. ಹಾಗಾಗಿ ರಿಲಿಜನ್ನಿನ ನಂಬಿಕೆ ಹಾಗೂ ಆಚರಣೆ ಎಂಬುದು ಮನುಷ್ಯನಿಗೆ ಗಾಡ್ ಹಾಕಿಕೊಟ್ಟ ಪಾಠ. ರಿಲಿಜನ್ ಅನುಭವಿಸುವುದು ಪ್ರತಿಯೊಬ್ಬ ಕ್ರಿಶ್ಚಿಯನ್ನನ ಹಕ್ಕು. ರಿಲಿಜನ್ ಅನ್ನುವುದು ಮನುಷ್ಯ  ನಿರ್ಮಿತ ಪ್ರಭುತ್ವವನ್ನೂ ಮೀರಿದ ಒಂದು ದೈವಿವ್ಯವಸ್ಥೆ ಎಂಬ ಗಾಢವಾದ ನಂಬಿಕೆಯಿದ್ದ  ಸಂದರ್ಭದಲ್ಲಿ ಕೆಥೋಲಿಕ್ ಹಾಗೂ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿ ಪಂಥ ರಿಲಿಜನ್ನಿನ ನಂಬಿಕೆಯ ಕುರಿತು ಒಳಜಗಳವನ್ನು ಪಂಚಾಯತಿಗೆ ತಂದಾಗ ಪ್ರಭುತ್ವ ಏನು ಮಾಡಬೇಕು? ಯಾರಿಗೆ ನ್ಯಾಯ ಕೊಟ್ಟರೂ ರಿಲಿಜನ್ನಿಗೆ ಅನ್ಯಾಯವಾಗುತ್ತದೆ. ಇದು ಪ್ರಭುತ್ವದ ಸಂದಿಗ್ಧ ಅಲ್ಲೇ ಹುಟ್ಟಿತು ಈ ಸೆಕ್ಯುಲರಿಸಂ ಎಂಬ ಹೊಸ ವಾಸ್ತವ……………

ದಿನನಿತ್ಯ ಒಂದಲ್ಲಾ ಒಂದು ಕಾರಣಕ್ಕಾಗಿ ನಾವು ‘ಸೆಕ್ಯುಲರಿಸಂ’ ಅನ್ನುವ ಪದವನ್ನು ಉಪ ಯೋಗಿಸುತ್ತೇವೆ. ಸೆಕ್ಯುಲರಿಸಂ ಆಧುನಿಕ ಚಿಂತನೆಯ ಪ್ರಮುಖ ಅಂಗವೇ ಆಗಿದೆ. ಹಾಗಾ ದರೆ ಸೆಕ್ಯುಲರಿಸಂ ಅನ್ನುವುದರ ಅರ್ಥ ಏನು? ನಮ್ಮ ಪರಿಸ್ಥಿತಿ ಏನಾಗಿದೆ ಎಂದರೆ ಸೆಕ್ಯುಲರಿಸಂ ಅಂದರೆ ಮನಸ್ಸಿನಲ್ಲಿ ಅರ್ಥವಾದಂತಾಗುತ್ತದೆ. ಆದರೆ ಅದನ್ನು ಬಾಯಲ್ಲಿ ಹೇಳಲಿಕ್ಕೆ ಬರುವುದಿಲ್ಲ. ಅದಕ್ಕೆ ಕಾರಣ ನಮ್ಮಲ್ಲಿ ಸೆಕ್ಯುಲರಿಸಂನ ಅನುಷ್ಠಾನ ಅಷ್ಟು ಗೋಜಲಾಗಿದೆ. ಹೀಗೆ ಹೇಳಲಿಕ್ಕೆ ಬಾರದ ಸೆಕ್ಯುಲರಿಸಮ್ಮೆ ದೇಶದ ಅನೇಕ ತೊಂದರೆಗಳಿಗೆ ಕಾರಣವಾಗಿದೆಯೋ ಎಂಬುದನ್ನು ಅರಿತುಕೊಳ್ಳ ಬೇಕಾಗಿದೆ. ಸಮಾಜಶಾಸ್ತ್ರದ ಹಕೀಮರಾದ ಬಾಲಗಂಗಾಧರರು ಕರ್ನಾಟಕದ ತುಂಬ ಸಂಚರಿ ಸುತ್ತ ಹೀಗೆ ಹೇಳಲುಬಾರದ ಅನೇಕಾನೇಕ ಸಂಗತಿಗಳನ್ನು ಸುಸಂಬದ್ಧವಾಗಿ ಹೇಳುವ ತಿಳುವಳಿಕೆ ನೀಡುತ್ತಿದ್ದಾರೆ.

ನಮ್ಮಲ್ಲಿ ಸೆಕ್ಯುಲರಿಸಂ ಅಂದರೆ ಜಾತ್ಯಾತೀತ, ಧರ್ಮನಿರಪೇಕ್ಷ, ಸರ್ವ ಧರ್ಮಸಮಭಾವ ಎಂಬಿ ತ್ಯಾದಿ ಕಷ್ಟಪಟ್ಟು ವ್ಯಾಖ್ಯಾನಿಸುತ್ತಾರೆ. ಇವೆಲ್ಲ ಸಾಂಸ್ಕೃತಿಕ ಬಹುತ್ವ ಹೊಂದಿದ ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ರಚಿಸಲ್ಪಟ್ಟ ಪದಗಳು. ಸೆಕ್ಯುಲರಿಸಂಗೆ ಈ ರೀತಿಯ ಅರ್ಥಗಳು ತುಸು ಹೆಚ್ಚೇ ಆಗಬಹುದು. ಸೆಕ್ಯುಲರಿಸಂನ್ನು ಅದರ ನಿಜ ಅರ್ಥ ದಲ್ಲೇ ಅರಿಯಬೇಕಾದರೆ ನಾವು ಅದಕ್ಕೆ ಸೆಕ್ಯುಲರಿಸಂ ಅಂತಲೇ ಕರೆಯಬೇಕಾಗು ತ್ತದೆ. ಭಾರತದಲ್ಲಿನ ಸೆಕ್ಯು ಲರಿಸಂ ಕುರಿತು ಚರ್ಚಿಸುವುದಕ್ಕಿಂತ ಪೂರ್ವದಲ್ಲಿ ಪಾಶ್ಚಾತ್ಯ ಪ್ರಭುತ್ವಗಳಲ್ಲಿ ಈ ಸೆಕ್ಯುಲರಿಸಂ ಹೇಗೆ ಚಿಗುರೊಡೆಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಅದನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಮ್ಮದು ಅರ್ಥವಾಗಲು ಸಾಧ್ಯ ಎಂಬುದು ನಮಗೆ ಹಕೀಮರು ಹಾಕಿಕೊಟ್ಟ ಪಾಠ.

ರೋಮಿನ ಪೇಗನ್ನರ ರಿಲಿಜನ್ನಿನ ಪರ್ಯಾಯವಾಗಿ ಕೆಥೋಲಿಕ್ ಕ್ರಿಶ್ಚಿಯಾನಿಟಿ ಸ್ಥಾಪಿತಗೊಂಡು ಶತಮಾನಗಳ ಕಾಲ ಯುರೋಪಿನ ರಾಷ್ಟ್ರಗಳನ್ನು ಪ್ರಭಾವಿಸಿತು. ಯುರೋಪಿನ ಪ್ರಭುತ್ವಗಳು ರೋಮಿನ ಪೋಪನ ಅಣತಿಯಂತೆ ರಿಲಿಜನ್ನಿಗೆ ಬದ್ಧವಾಗಿದ್ದವು. ಕೆಥೋಲಿಕ್ ಪಂಥ ತಮ್ಮ ದೊಂದೇ ನಿಜವಾದ ರಿಲಿಜನ್ ಎಂದು ಪ್ರತಿಪಾದಿ ಸುತ್ತ ಬಂದಿತ್ತು. 16 ಮತ್ತು  17ನೇ ಶತಮಾನದ ಸುಧಾರಣಾ ಯುಗದಲ್ಲಿ ಪ್ರೊಟೆಸ್ಟಾಂಟ್ ಪಂಥ ಜನ್ಮತಾಳಿ ಕೆಥೋಲಿಕರನ್ನು ಹಾಗೂ ಆ ಹಿನ್ನೆಲೆ ಯಲ್ಲಿ ರಚಿತವಾದ ಪ್ರಭುತ್ವವನ್ನು ಪ್ರಶ್ನಿಸತೊಡ ಗಿತು. ಪ್ರಭುತ್ವ ಅನ್ನುವುದು ಮನುಷ್ಯ ನಿರ್ಮಿತ ವ್ಯವಸ್ಥೆಯಾದ್ದರಿಂದ ಅದು ಲೌಕಿಕವಾಗಿರಬೇಕು. ಅದು ರಿಲಿಜನ್ನಿನ ನಿಯಂತ್ರಣದಲ್ಲಿರಬಾರದು. ರಾಜ್ಯಗಳು ಲೌಕಿಕವಾಗಿರಬೇಕೆಂದರೆ ಪ್ರಭುತ್ವ ರಿಲಿಜನ್ನಿಂದ ತಟಸ್ಥವಾಗಿರಬೇಕು ಎಂದರು. ಈ ವಾದ ಪರಿಷ್ಕೃತಗೊಂಡು ಸೆಕ್ಯುಲರ್ ಪರಿಕಲ್ಪನೆ ಯಾಗಿ ಬೆಳೆದುಬಂತು.

ಕೆಥೋಲಿಕರಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡ ಪ್ರೊಟೆಸ್ಟಾಂಟ್ ಪಂಥ ರಿಲಿಜನ್ನ ಪುನರ್ಪರಿಶೀಲನೆಗೆ ಮುಂದಾಯಿತು. ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬನಿಗೂ ರಿಲಿಜನ್ ಹೊಂದುವ ಹಕ್ಕು ಇದೆ. ಈ ರಿಲಿಜನ್ ಮೂಲಕ ಗಾಡ್ನನ್ನು ಸಂಧಿಸ ಬಹುದು. ಆದರೆ ಕೆಥೋಲಿಕ್ ಪ್ರೀಸ್ಟ್ಗಳು ಮನು ಷ್ಯರ ಈ ಹಕ್ಕನ್ನು ಕಸಿದುಕೊಳ್ಳು ತ್ತಿದ್ದಾರೆ. ಗಾಡ್ ಮತ್ತು ಮನುಷ್ಯನ ಮಧ್ಯೆ ಮಧ್ಯವರ್ತಿಗಳಾಗಿ ಗಾಡ್ ಜನರಿಗೆ ನೇರವಾಗಿ ಸಿಗದ ಹಾಗೆ ಮಾಡುತ್ತಿದ್ದಾರೆ. ಜನರು ಸೈತಾನರ ಪೂಜೆ ಮಾಡುವಂತೆ ಪ್ರೇರೇಪಿಸಿ ನರಕದ ದಾರಿ ತೋರಿಸಿ ಪ್ರೀಸ್ಟ್ಗಳು ಮಾತ್ರ ನಿಜ ವಾದ ರಿಲಿಜನ್ ಅನು ಭವಿಸಿ ಸದ್ಗತಿ ಪಡೆಯುತ್ತಿ ದ್ದಾರೆ. ಹೀಗೆ ಪ್ರೊಟೆ ಸ್ಟಾಂಟರು ಕೆಥೋಲಿಕ್ ಪಂಥದವರ ರಿಲಿಜನ್ನಿನ ಕುರಿತ ನಂಬಿಕೆಯ ಸಂಬಂಧವಾಗಿ ಯುದ್ಧ ಸಾರಿದರು. ಈ ಮೂಲಕ ಪ್ರೊಟೆಸ್ಟಾಂಟರು ರಿಲಿಜನ್ ಅಂದರೆ ಸತ್ಯ ಮತ್ತು ಸುಳ್ಳು ಗಳ ಸಂಬಂಧವೆಂಬಂತೆ ಬಿಂಬಿಸಿದರು.

ಹೀಗೆ ಯುರೋಪಿನಲ್ಲಿ ಕೆಥೋಲಿಕ್ ಪಂಥ ಹಾಗೂ ಪ್ರೊಟೆಸ್ಟಾಂಟ್ ಪಂಥ ರಿಲಿಜನ್ನಿನ ಸತ್ಯ ಮತ್ತು ಸುಳ್ಳಿನ ಕುರಿತಾಗಿ ದೀರ್ಘವಾದ ವಾಗ್ವಾದಕ್ಕೆ ಇಳಿಯಿತು. ಇದಕ್ಕೆ ಹೊರತಾಗಿಯೂ ಕ್ರಿಶ್ಚಿಯಾನಿಟಿಯಲ್ಲಿ ಇನ್ನೂ ಕೆಲವು ಪಂಥಗಳಿದ್ದವು. ರಿಲಿಜನ್ನಿನ ನಂಬಿಕೆಯ ಕುರಿತಾಗಿ ದಿನನಿತ್ಯ ಸಂದಿಗ್ಧಗಳು, ಜಗಳಗಳು ನಡೆಯತೊಡಗಿದವು. ಈ ಸಮಸ್ಯೆ ಯನ್ನು ಎದುರಿಸುವುದು ಪ್ರಭುತ್ವಕ್ಕೆ ದೊಡ್ಡ ಸವಾಲಾಯಿತು. ರಿಲಿಜನ್ನಿನ ವಿಷಯವಾದ್ದರಿಂದ ಯಾರೊಬ್ಬರ ಪರವಾಗಿಯೂ ನಿರ್ಣಯ ಕೊಡುವ ಹಾಗಿಲ್ಲ. ಪ್ರಭುತ್ವ ಹಸ್ತಕ್ಷೇಪ ಮಾಡಬಹುದೆಂಬ ಹೆದರಿಕೆಯಿಂದ ಸುಧಾರಣಾವಾದಿಗಳು ರಾಜ್ಯಗಳು ರಿಲಿಜನ್ನಿನಿಂದ ಮುಕ್ತವಾಗಿ ನಿರ್ಲಿಪ್ತವಾಗಿ ಲೌಕಿಕ ವಾಗಿರಬೇಕೆಂಬ ಅಭಿಪ್ರಾಯಪಟ್ಟರು. ರಿಲಿಜನ್ ಅನ್ನುವುದು ಮನುಷ್ಯನ ಆಲೋಚನಾ ಕ್ರಮದಿಂದ ಹುಟ್ಟಿದ್ದಲ್ಲ ಎಂಬ ನಂಬಿಕೆ ಬಲವಾಗಿದ್ದರಿಂದ ಮನುಷ್ಯ ನಿರ್ಮಿತ ಪ್ರಭುತ್ವ ಹೊಸ ಮಾರ್ಗ ಕಂಡು ಕೊಳ್ಳಬೇಕಾಗಿತ್ತು.

ಇಲ್ಲಿ ಗಮನಿಸಬೇಕಾದಂತಹ ಇನ್ನೊಂದು ಅಂಶವೇನೆಂದರೆ ಪ್ರಭುತ್ವಕ್ಕೆ ರಿಲಿಜನ್ನಿನ ವಿಷಯದಲ್ಲಿ ಮಾತ್ರ ಈ ತೊಂದರೆಯಾಯಿತು. ಏಕೆಂದರೆ ಆಗ ಯುರೋಪಿನ ಜನರಿಗೆ ರಿಲಿಜನಿನ್ನ ಕುರಿತಾಗಿ ಅಂತಹ ನಂಬಿಕೆ ಇತ್ತು. ಗಾಡ್ ಎಂಬುವವನು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತ. ಇಲ್ಲಿ ಪ್ರತಿಯೊಂದು ಸಂಗತಿಯನ್ನೂ ಗಾಡ್ನೇ ನಿರ್ಣಯಿಸುತ್ತಾನೆ. ಈ ಸೃಷ್ಟಿ ಅನ್ನುವುದು ಮನುಷ್ಯನ ಆಲೋಚನಾಕ್ರಮ ದಿಂದ ಹುಟ್ಟಿದ್ದಲ್ಲ. ಹಾಗಾಗಿ ಈ ಸೃಷ್ಟಿಯ ಜೊತೆಗೆ ಗಾಡ್ ಪ್ರತಿಯೊಬ್ಬನಿಗೂ ರಿಲಿಜನ್ ಕೊಟ್ಟಿದ್ದಾನೆ. ರಿಲಿಜನ್ ಅನುಭವಿಸುವುದು ಪ್ರತಿ ಮನುಷ್ಯನ ಹಕ್ಕು. ಸರಿಯಾದ ನಂಬಿಕೆಯಲ್ಲಿ ರಿಲಿಜನ್ ಅನು ಭವಿಸಿದರೆ ಅವರು ನೇರವಾಗಿ ಗಾಡ್ನನ್ನು ಸಂಧಿಸಲು ಸಾಧ್ಯ ಎಂಬಿತ್ಯಾದಿಯಾಗಿ ರಿಲಿಜನ್ನಿನ ಕುರಿತು ವಿವರಣೆಗಳಿದ್ದವು. ಈ ಎಲ್ಲ ಸಂಗತಿಗಳು ದೈವವಾಣಿ ಯಾದ ಬೈಬಲ್ನಲ್ಲಿ ದಾಖಲಾಗಿತ್ತು. ಹಾಗಾಗಿ ಕ್ರಿಶ್ಚಿಯನ್ನರ ನಂಬಿಕೆ ಹಾಗೂ ಆಚರಣೆಗೆ ಅವರ ಪವಿತ್ರ ಗ್ರಂಥದ ಆಧಾರ ಇತ್ತು.

ಹೀಗೆ ರಿಲಿಜನ್ ಅನ್ನುವುದು ಪ್ರಭುತ್ವಕ್ಕೂ ಮೀರಿದ ಸಂಗತಿಯಾದ್ದರಿಂದ ಪ್ರಭುತ್ವಕ್ಕೆ ಆ ಕುರಿತು ನಿರ್ಣಯಿಸುವುದು ಶಕ್ಯವಿಲ್ಲ. ರಿಲಿಜನ್ ಅನ್ನು ವುದು ವೈಯಕ್ತಿಕ ನಂಬಿಕೆ ಹಾಗೂ ಸ್ವಾಭಾವಿಕ ಹಕ್ಕು. ಇಂಥ ಸ್ವಾಭಾವಿಕ ಹಕ್ಕಿನ ಕುರಿತು ಪ್ರಭುತ್ವ ಹಸ್ತಕ್ಷೇಪ ಮಾಡುವುದು ಅಪರಾಧ. ಕೆಥೋಲಿಕರ ವಿರುದ್ಧವೇ ಪ್ರೀಸ್ಟ್ಹುಡ್ ಮೂಲಕ ಜನರ ರಿಲಿಜನ್ನಿನ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆಂದು ಯುದ್ಧ ಸಾರಿದ ಪ್ರಾಟೆಸ್ಟಾಂಟರು ಈ ವಿಷಯದಲ್ಲಿ ಪ್ರಭುತ್ವ ಕೈಯಾಡಿಸಿದರೆ ಸುಮ್ಮನಿರುತ್ತಾರೆಯೇ? ಹಾಗಾಗಿ ರಿಲಿಜನ್ನಿನ ನಂಬಿಕೆ ಹಾಗೂ ಆಚರಣೆಯ ವಿಷಯ ದಲ್ಲಿ ಪ್ರಭುತ್ವ ತಟಸ್ಥವಾಗಿರಬೇಕು ಎಂಬುದು ಸೆಕ್ಯುಲರಿಸಂಗೆ ಮೂಲವಾಯಿತು.

ಮುಖ್ಯವಾಗಿ ಇಂಗ್ಲೆಂಡ್ ಹಾಗೂ ಫ್ರಾನ್ಸ್ಗಳಲ್ಲಿ ರಿಲಿಜನ್ನಿನ ಈ ಒಳಜಗಳ ಪ್ರಭುತ್ವಕ್ಕೆ ಸಮಸ್ಯೆಯಾಗ ತೊಡಗಿತು. ಇಂಗ್ಲಂಡಿನಲ್ಲಿ ಪ್ರೊಟೆಸ್ಟಾಂಟರ ಪ್ರಭಾವ ಹೆಚ್ಚಾಗಿದ್ದು ಕೆಥೋಲಿಕರು ಮೈನಾರಿಟಿಯವರಾಗಿ ದ್ದರು. ಫ್ರಾನ್ಸ್ನಲ್ಲಿ ಕೆಥೋಲಿಕ್ರ ಪ್ರಾಬಲ್ಯ ಹೆಚ್ಚಿದ್ದು ಪ್ರೊಟೆಸ್ಟಾಂಟ್ರು ಮೈನಾರಿಟಿ ರಿಲಿಜನ್ನಿನವರಾಗಿ ದ್ದರು. ರಿಲಿಜನ್ ಕುರಿತಾದ ನಂಬಿಕೆಗಳ ತಿಕ್ಕಾಟ ಸಾರ್ವಜನಿಕವಾಗಿ ಪ್ರಕಟವಾಗುವ ಸಂದರ್ಭ ನಿರ್ಮಾಣವಾಯಿತು. ಜನರ ವೈಯಕ್ತಿಕ ನಂಬಿಕೆ ಗಳು ಸಾರ್ವಜನಿಕ ಚರ್ಚಾವಸ್ತುಗಳಾದವು. ಇಂಥ ನಂಬಿಕೆಯ ಕುರಿತಾದ ಸಂಘರ್ಷಗಳಿಗೆ ಪ್ರಭುತ್ವ ನ್ಯಾಯ ನೀಡುವ ಸ್ಥಿತಿಯಲ್ಲಿರಲಿಲ್ಲ. ಆಗ ಪ್ರಭುತ್ವ ಜನರ ವೈಯಕ್ತಿಕ ನಂಬಿಕೆಗಳನ್ನು ಪ್ರಶ್ನೆ ಮಾಡಲಿಲ್ಲ. ಬದಲಾಗಿ ಇಂತಹ ನಂಬಿಕೆಗಳನ್ನು ಪ್ರಭುತ್ವದ ಸ್ಥಳಗಳಲ್ಲಿ ತರದೇ ಇರುವಂತಹ ನಿಯಮಾವಳಿ ಮಾಡಿತು.

ಈ ನಿಯಮಾಳಿಗೆ ಎರಡೂ ಪಂಥದವರು ಸಮ್ಮತಿ ನೀಡಿದರು. ಹಾಗಂತ ಈ ಪಂಥಗಳು ತಮ್ಮ ನಂಬಿಕೆಗಳನ್ನು ಸಡಿಲ ಮಾಡಲಿಲ್ಲ. ಪರಸ್ಪರ ಒಬ್ಬರನ್ನೊಬ್ಬರು ಒಪ್ಪುವ ನಿರ್ಧಾರಕ್ಕೆ ಬರಲಿಲ್ಲ. ತಮ್ಮ ತಮ್ಮ ನಂಬಿಕೆಗಳನ್ನು ಜೀವಂತವಾಗಿಟ್ಟು ಕೊಂಡೇ ಪರಸ್ಪರ ಸಹಿಸಿಕೊಂಡು ಶಾಂತಿ ಕಾಪಾ ಡುವ ನಿರ್ಧಾರಕ್ಕೆ ಬಂದರು. ಅಂದರೆ ಪ್ರಭುತ್ವಕ್ಕೆ ಒಳಪಡುವ ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಆಚರಣೆ ಹಾಗೂ ನಂಬಿಕೆಯನ್ನು ತರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರು. ಹೀಗೆ ಪ್ರಭುತ್ವ ಹಾಗೂ ರಿಲಿಜನ್ನಿನ ನಂಬಿಕೆ ನಡುವೆ ಒಂದು ಆರೋಗ್ಯಕರ ಅಂತರ ಕಾಪಾಡಲು ಪ್ರಯತ್ನಿಸಿ ಪ್ರಭುತ್ವನ್ನು ಸಂಕಷ್ಟದಿಂದ ಕಾಪಾಡಿದರು.

ಸೆಕ್ಯುಲರಿಸಂ ಅಂದರೆ ‘ಪ್ರಭುತ್ವ ರಿಲಿಜನ್ನುಗಳ ವಿಷಯದಲ್ಲಿ ನಿರ್ಲಿಪ್ತವಾಗಿರುವುದು’ ಎಂದೂ ವ್ಯಾಖ್ಯಾನಿಸುತ್ತಾರೆ. ಏಕೆಂದರೆ ರಿಲಿಜನ್ನಿನ ಸತ್ಯ ಮತ್ತು ಸುಳ್ಳಿನ ತಕರಾರು ಪ್ರಭುತ್ವದ ಎದುರು ಬಂದಾಗ ನಿರ್ಣಯ ಕೊಡಲಿಕ್ಕೆ ಇದು ಲೌಕಿಕ ವ್ಯವಹಾರ ಅಲ್ಲ. ಇದು ಗಾಡ್ಗೆ ಸಂಬಂಧಪಟ್ಟ ವಿಷಯ. ಈ ವಿಷಯದಲ್ಲಿ ನಿರ್ಣಯ ಕೊಡಲು ಪ್ರಭುತ್ವಕ್ಕೆ ಸಾಧ್ಯವಿಲ್ಲ. ಹಾಗಾಗಿ ಪ್ರಭುತ್ವ ರಿಲಿಜನ್ನಿನ ನಂಬಿಕೆಯ ವಿಷಯವಾಗಿ ನಿರ್ಲಿಪ್ತವಾಗಿರುವ ನಿರ್ಧಾರಕ್ಕೆ ಬಂತು. ತೀರ ಸಂಕ್ಷಿಪ್ತವಾಗಿ ಹೇಳ ಬಹುದಾದರೆ ಇದೇ ಸೆಕ್ಯುಲ ರಿಸಂನ ತಿರುಳು.

ಈ ಸೆಕ್ಯುಲರ್ ತತ್ವ ಇಷ್ಟಕ್ಕೇ ನಿಲ್ಲಲಿಲ್ಲ. ಪ್ರಾಟೆಸ್ಟಾಂಟಿಸಂನ ಮುಂದುವರಿದ ಭಾಗವಾಗಿ ಯುರೋಪಿನ ಸೆಕ್ಯುಲರ್ ಚಿಂತಕರ ವಲಯ ಬೆಳೆಯುತ್ತ ಸೆಕ್ಯು ಲರಿಸಂನ ಸ್ವರೂಪವೂ ಗಟ್ಟಿಯಾಗುತ್ತ ಬಂತು. ಆದರೆ ಈ ಚಿಂತಕರು ಕ್ರಿಶ್ಚಿಯಾನಿಟಿಯ ‘ಗಾಡ್’ನ ಕಲ್ಪನೆಯೊಂದನ್ನು ಬಿಟ್ಟು ಉಳಿದೆಲ್ಲವನ್ನೂ ಕ್ರಿಶ್ಚಿಯಾ ನಿಟಿ ಹೇಳುವುದನ್ನೇ ಬೇರೆ ರೀತಿಯಲ್ಲಿ ಸೆಕ್ಯುಲ ರಿಸಂನ ಪರಿಭಾಷೆಯಲ್ಲಿ ಹೇಳುತ್ತ ಬಂದರು. ಒಂದರ್ಥದಲ್ಲಿ ಈ ಸೆಕ್ಯುಲರಿಸಂ ಮೂಲಕವೇ ಕ್ರಿಶ್ಚಿ ಯಾನಿಟಿ ಇಡೀ ಜಗತ್ತಿನ ತುಂಬ ಪಸರಿಸಿತು. ಹಾಗಾಗಿ ರಿಲಿಜನ್ ಇಲ್ಲದ ಸಂಸ್ಕೃತಿಗಳ ಪ್ರಭುತ್ವಕ್ಕೆ ಈ ಸೆಕ್ಯುಲರಿಸಂ ಅನೇಕ ಸವಾಲುಗಳನ್ನು ಒಡ್ಡುತ್ತದೆ.

ರೋಮಿನ ಪ್ರಾಚೀನ ಪೇಗನ್ ಆಚರಣೆ ಯಿಂದ ಸುಧಾರಣೆಯಾಗಿ ಕೆಥೋಲಿಕ್ ಪಂಥ ಬೆಳೆಯಿತು. ಕೆಥೋಲಿಕ್ರ ವಿರುದ್ಧ ಸುಧಾರಣೆ ಗಾಗಿ ಪ್ರಾಟೆಸ್ಟಾಂಟ್ರು ಬಂದರು. ಇದರ ಜೊತೆಗೆ ಸೆಕ್ಯುಲರಿಸಂ ಜನ್ಮತಾಳಿ ಸೆಕ್ಯುಲರ್ ಚಿಂತಕರು ಪ್ರಯಾಣ ಬೆಳೆಸಿದರು. ಹೀಗೆ ಈ ಸುಧಾರಣಾ ಸರ ಪಳಿಯುದ್ದಕ್ಕೂ ಕ್ರಿಶ್ಚಿಯನ್ ಥಿಯಾಲಜಿಯನ್ನೇ ಬೇರೆ ಬೇರೆ ರೀತಿಯಲ್ಲಿ ಬೆಳೆಸಿಕೊಂಡು ಬಂದ ದ್ದನ್ನು ಗಮನಿಸಬಹುದು.

ಇಂಥ ಸೆಕ್ಯುಲರಿಸಂ ಬಹು ಸಂಸ್ಕೃತಿಗಳ ದೇಶ ದಲ್ಲಿ ಹೇಗೆ ಪ್ರತಿಕ್ರಿಯೆ ಪಡೆಯಬಹುದೆಂಬು ದನ್ನು ಮುಂದಿನ ವಾರ ನೋಡುವಾ.

* * * * * * * * *

ಚಿತ್ರಕೃಪೆ : ಅಂತರ್ಜಾಲ

2 ಟಿಪ್ಪಣಿಗಳು Post a comment
  1. ಡಿಸೆ 19 2011

    correct ide idu

    ಉತ್ತರ
  2. ಡಿಸೆ 22 2011

    nimma necchina balagangadhara avra seminar ide nodi :

    Seminar
    22nd, December, 2011, 2:30 pm
    UG Lecture Hall, IISc

    Title: SOCIAL SCIENCES FOR THE TWENTY-FIRST CENTURY (For scientists, Laymen and
    Everyone else)

    Prof. S. N. Balagangadhara Rao
    Centre for Comparative Science of Cultures
    Ghent University, Belgium
    About the Speaker: See http://en.wikipedia.org/wiki/S._N._Balagangadhara

    Abstract:
    For more than a century now, the emphasis on the distinction between the social
    and the natural sciences has become an orthodoxy. In their attempts to become a
    ‘science’, some paths are often tread by some social sciences: mathematization,
    measurement, formalization and the use of experiments etc. These have not
    solved the problems or addressed their concerns adequately. I introduce my talk
    by giving my take on this issue and illustrate it further by means of some
    examples.

    In a simple but provocative form, my thesis can be formulated thus: the reason
    why we have not had the sciences of the social so far has to do with the fact
    that the core ideas in many of these domains are religious in nature, in the
    sense that these ideas are the basic themes of The Bible. Elaboration of these
    ideas can give us embroidered theology but not science.

    I illustrate this idea by talking about 5 domains (depending upon the time
    available): Religion, Ethics, the caste system, Psychology and Law in India. I
    show that the way these domains are conceptualized and the research that is
    being done here are based on facts that were ”discovered” by the European
    merchants, Christian missionaries and colonial bureaucrats. These ‘facts’ are
    all facts of the Christian theology and an ‘explanation’ of these cannot be
    anything but theology in disguise. Not just that. These ‘facts’ are reports of
    European experiences of India and not a true (or false) report of the Indian
    culture and society.
    In this way, I hope to outline the real challenge that the Indian social
    scientists (and social sciences in general) confront during the current
    century. Meeting this challenge, I suggest, requires us to begin doing science
    at last, a ‘comparative science of cultures’.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments