ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 21, 2011

5

ಜನಲೋಕಪಾಲ್ ಜಾರಿಯಿಂದ ಭ್ರಷ್ಟಾಚಾರ ನಾಶವಾಗಲಿದೆಯೇ ?

‍ನಿಲುಮೆ ಮೂಲಕ

-ಉಮೇಶ್ ದೇಸಾಯಿ

ಹೌದು ಈ ಪ್ರಶ್ನೆ ಕಾಡುತ್ತಿದೆ. ಬಹುಶಃ ಅನೇಕರಿಗೂ ಈ ಪ್ರಶ್ನೆ ಕಾಡುತ್ತಿರಬಹುದು. ಸ್ವಲ್ಪ ಆರಾಮಾಗಿ ಉತ್ತರ ಹುಡುಕುವ. ಈಗ ನಾವು ನೀವು ವ್ಯವಸ್ಥೆ ಅಥವಾ ಸರಕಾರವನ್ನು ಸುಲಭವಾಗಿ ಟೀಕಿಸುತ್ತೇವೆ.ನಮ್ಮ ದೇಶದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ ಇನ್ನೂ ಇದೆ

ಹೀಗಾಗಿ ನಾವು ಪೆನ್ನಿಂದ,ಕೀಲಿಮಣೆ ಕುಟ್ಟುವುದರಿಂದ ನಮ್ಮ ಕಹಿಭಾವನೆಗಳನ್ನುಮುಕ್ತವಾಗಿ ಕಾರುತ್ತೇವೆ. ಅದು ನಮ್ಮ ಹಕ್ಕು ನಿಜ. ಅದನ್ನು ನಾವು ಚಲಾಯಿಸುತ್ತೇವೆ ಕೂಡ.ಅನೇಕ ರೀತಿಯಲ್ಲಿ ಅಂದರೆ ಫೇಸಬುಕ್, ಟ್ವೀಟರ್ ಹಿಡಿದು ವಾಚಕರ ವಾಣಿವರೆಗೂ ನಮ್ಮ ಆಕ್ರೋಶ ಹರಿಯುತ್ತದೆ. ನಮ್ಮ ಈ ಕಾರುವಿಕೆಯಿಂದ ಏನಾದರೂ ಬದಲಾಗಿದೆಯೇ..

ನಮ್ಮ ಬೀದಿಯಲ್ಲಿ ಹಗಲು ದೀಪ ಉರಿಯುವುದು ಬಂದಾಗಿದೆಯೇ..ನಮ್ಮ ನಲ್ಲಿಯಲ್ಲಿ ನೀರು ನಿರಂತರ ಹರಿಯುತ್ತಿದೆಯೇ ಅಥವಾ ಉಗಿಸಿಕೊಂಡೂ ಕುರ್ಚಿಮೇಲೆ ಕೂಡುವ ರಾಜಕಾರಣಿ ಒಂದರೆಕ್ಷಣ ವಿಚಾರ ಮಾಡಿದ್ದಾನೆಯೇ..? ಈ ಪ್ರಶ್ನೆಗಳಿಗೆ ಪರಿಹಾರ ಸಿಕ್ಕಿಲ್ಲ ಯಾಕೆಂದರೆ ಇವು ನಾವು ಈಗಿರುವ ಸದ್ಯದ ಪರಿಸ್ಥಿತಿಯ ದ್ಯೋತಕ ವಾಗಿವೆ. ಹಾಗೂ ಇವುಗಳಿಗೆ ನಾವು ಚೆನ್ನಾಗಿ ಒಗ್ಗಿಕೊಂಡಿರುವೆವು..ನಮಗೂ ಗೊತ್ತು ಇವುಗಳಿಂದ ಬಿಡುಗಡೆ ಸಾಧ್ಯವಿಲ್ಲ ಅಂತ. ಆದರೇ ಕಾರುವುದು ಇನ್ನೂ ನಿಂತಿಲ್ಲ ..ಈಗ ಅದು ಹೊಸ ಆಯಾಮ ಪಡೆದುಕೊಂಡಿದೆ. ನಮಗೆ ನಮ್ಮ ದನಿ ಕೇಳಿಸಲು ಹೊಸ ಮುಖವಾಡಗಳು ಬಂದಿವೆ…ಅವರನ್ನು ನಾವು ನಮ್ಮನ್ನುಉದ್ಧಾರ ಮಾಡಲೆಂದೆ ಬಂದ ಅವತಾರಪುರುಷ ರನ್ನಾಗಿ ನೋಡುತ್ತಿದ್ದೇವೆ..ಜೈಕಾರ ಹೇಳುತ್ತಿದ್ದೇವೆ.

ಅವರು ನಮ್ಮ ಸಲುವಾಗಿ ಉಪವಾಸ ಕೂತಿದ್ದಾರೆ.ಮರಗುತ್ತಿದ್ದಾರೆ ಕೂಡ. ಹೌದು ಅಣ್ಣಾಹಜಾರೆ ಇಂದು ಅನೇಕರ ಕಣ್ಣಲ್ಲಿ ಹಿರೋ. ಗೂಗಲ್ ಕ್ಲಿಕ್ನಲ್ಲಿ ಅವರು ಕತ್ರೀನಾಗಿಂತ ಹಿಂದಿದ್ದರೂ ಅವರ ಹೆಸರು ಈಗ ಎಲ್ಲರ ನಾಲಿಗೆಮೇಲೆ ಇದೆ.ಸರಕಾರಕ್ಕೂ ನಡುಕವಿದೆ. ರಾವಲ್ಗಾವ್ ಸಿದ್ದಿಯಿಂದ ದೆಹಲಿವರೆಗೆ ಅಣ್ಣಾ ಪಯಣಿಸಿದ್ದಾಗಿದೆ.ಮೊನ್ನೆ ಸಿಎನೆನ್-ಐಬಿನ್ ಅವರು ಪ್ರಶಸ್ತಿ ಸಹ ನೀಡಿ ಗೌರವಿಸಿದ್ದಾರೆ. ಜನಲೋಕಪಾಲ್ ದಲ್ಲಿ ತಮ್ಮ ಅಂಶಗಳನ್ನು ಸೇರಿಸಿಕೊಳ್ಳದಿದ್ದಲ್ಲಿ ಜೇಲ್ ಭರೋ ಸುರುಮಾಡುವುದಾಗಿ ಅವರು ಕರೆ ನೀಡಿದ್ದಾರೆ.ಅವರ ಮಾತಿನಲ್ಲಿ ತೂಕವಿದೆ ಜನ ಏನೋ ಪವಾಡದ ನಿರೀಕ್ಷೆಯಲ್ಲಿದ್ದಾರೆ.ಜನಲೋಕಪಾಲ್ ಜಾರಿಯಿಂದ ಭ್ರಷ್ಟಾಚಾರ ನಾಶವಾಗಲಿದೆಯೇ ಈ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕೆಲವರಾದರೂ ಯೋಚಿಸುತ್ತಿದ್ದಾರೆಯೇ ಅಥವ ಕೆಲ ಬುದ್ಧಿಜೀವಿಗಳು ಹೇಳುವ ಹ್ಆಗೆ “ಸಮೂಹ ಸನ್ನಿ”ಯ ಪ್ರಭಾವಳಿಯ ಶಿಕಾರಿಯಾಗುತ್ತಿದ್ದೇವೆಯೇ..? ಹೌದು ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಈ ಚಳುವಳಿಗಳು ಬೇಕಾಗಿದ್ದವು ಯಾಕ ಅಂದರ ನಾವು ಆರಿಸಿ ಕಳಿಸಿದ, ನಮ್ಮ ನೆಲ ಜಲ,ಪ್ರಾಣಗಳ ರಕ್ಷಣೆಯ ಜವಾಬ್ದಾರಿ ಹೊತ್ತು ವಿಧಿವಿಧಾನ ತಗೊಂಡ ರಾಜಕಾರಣಿಗಳು ತಮ್ಮ ಹೆಸರಲ್ಲಿ, ಮಕ್ಕಳ ಹೆಸರಲ್ಲಿ ಆಸ್ತಿ ಮಾಡಕೊಂಡ್ರು..ನಮ್ಮ ದುಡ್ಡಿನ್ಯಾಗ ಮಾರಿಷಸ್ ಗೆ ಕುಟುಂಬ ಸಮೇತ ಪ್ರವಾಸ ಮಾಡಿ ಬಂದ್ರು ಹಂಗ ಸ್ವಾಮಿಗೋಳಿಗೆ ದಕ್ಷಿಣಿ ಕೊಟ್ಟು ಅಡ್ಡೂ ಬಿದ್ರು..!! ನಮಗ ಇದೆಲ್ಲ ನೋಡಿ ರೋಸಿ ಹೋಗಿತ್ತು.

ಒಂದು ಬದಲಾವಣಿ ಬೇಕಾಗಿತ್ತು.ಇಂಥಾ ಟೈಮದಾಗ ಅಣ್ಣಾ, ರಾಮದೇವ್, ಬೇಡಿ ಇವರು ಅವತಾರ ಪುರುಷರಾಗಿ ಕಂಡ್ರು. ಅವರ ಹಿಂದ ಹೊರಟೇವಿ ದಡಾ ಮುಟ್ಟತೇವೋ ಇಲ್ಲೋ ಗೊತ್ತಿಲ್ಲ. ಆದ್ರ ಈ ದೋಣಿಯಾನದಾಗ ನನ್ನಂಥ ಸಿನಿಕರೂ ಸೇರಿಕೊಂಡಾರ. ನನಗ ಹಲವಾರು ಪ್ರಶ್ನೆಗಳಿವೆ..ಉತ್ತರ ಹುಡುಕಿ ಸೋತಿರುವೆ.

೧) ಅಣ್ಣಾ ಚಳುವಳಿಗೆ ಈಗ ವಿರೋಧ ಪಕ್ಷದ ಬೆಂಬಲ ಸಿಕ್ಕಿದೆ. ಭಾಜಪ, ಅಥವಾ ಎಡಪಂಥೀಯರು ತಾವು ಪ್ರಾಮಾಣಿಕರು..ಎಂದು ಎದೆ ತಟ್ಟಿ ಹೇಳಿಕೊಳ್ಳಬಲ್ಲರೇ..? ಅವರು ಆಳಿದ/ಆಳುತ್ತಿರುವ ರಾಜ್ಯದಲ್ಲಿ ಲಂಚಗುಳಿತನ ಇರಲಿಲ್ಲವೇ,,?ಹಾಗಿದ್ದರೆ ಯಾವ ನೈತಿಕತೆ ಮೇಲೆ ಅವರು ಅಣ್ಣಾ ಜೊತೆ ವೇದಿಕೆ ಹಂಚಿಕೊಂಡ್ರು ಸ್ವತಃ ಅಣ್ಣಾ ಅವರಿಗೆ ಈ ದ್ವಂದ್ವ ಕಾಡಲಿಲ್ಲವೇ…?

೨) ಅಣ್ಣಾ ಉಪವಾಸ ಮಾಡುತ್ತಾರೆ. ಜನ ಸ್ವಪ್ರೇರಣೆಯಿಂದ ಸೇರುತ್ತಾರೆ. ಹಾಡು,ಭಜನೆ ಇತ್ಯಾದಿ ನಡೆಯುತ್ತವೆ. ಆಣ್ಣಾ ಕುಳಿತುಕೊಳ್ಳುವ ಪೆಂಡಾಲು, ಜನರ ಉಸ್ತುವಾರಿ ಇವುಗಳಿಗೆಲ್ಲ ದುಡ್ಡು ಬೇಕು. ಆ ದುಡ್ಡು ಬಂದ ಮೂಲಯಾವುದು ಅದೇನು ಚಂದಾಹಣವೇ ಅಥವಾ ದಾನಿಯೊಬ್ಬ ಕೊಟ್ಟ ಬಳುವಳಿಯೇ , ಒಂದು ವೇಳೆ ದಾನಿ ಕೊಟ್ಟಿದ್ದರೆ ಅವನ ವಿವರಗಳೇನು ಅಥವ ಆ ದುಡ್ಡು ತೆರಿಗೆ ತಪ್ಪಿಸಿ ಇಲ್ಲಿ ಸುರಿದದ್ದೋ?

ಹೌದು ಮೇಲಿನ ಪ್ರಶ್ನೆ ನೋಡಿ ನನ್ನ ಮೊಸರಿನಲ್ಲಿ ಕಲ್ಲುಹುಡುಕುವ ಚಾಳಿಯವ ಅಂತ ನೀವು ಕರೆಯಬಹುದು. ಆದರೆ ಒಂದು ಜನಾಂದೋಲನ ಯಶಸ್ಸು ಕಾಣಬೇಕು ಇದು ನನ್ನ ಹಂಬಲ ಕೂಡ ಆದರೆ ಜೊತೆಗೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಇದು ಬಯಕೆ..!

ಚಿತ್ರಕೃಪೆ : sumit4all.com

5 ಟಿಪ್ಪಣಿಗಳು Post a comment
 1. ಡಿಸೆ 21 2011

  ಒಂದು ಜನಾಂದೋಲನ ಯಶಸ್ಸು ಕಾಣಬೇಕು ಇದು ನನ್ನ ಹಂಬಲ ಕೂಡ ಆದರೆ ಜೊತೆಗೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಇದು ಬಯಕೆ..!

  nijakkoo houdu..
  idu nammellara aase…
  hebbayake…

  ಉತ್ತರ
 2. Sharath
  ಡಿಸೆ 21 2011

  Sarkaradalliruvavaru janare, Lokpaldalli seruvavaru janare…Spl agi yaru bere kadeyinda bandu seralla…Ondu dodda samsthe huttidaga, adrallu ishtondu power iruvaga, adu kooda corrupt agiye agatte, without any doubt… Lokayukta Police agidda Madhukar avaru helida haage namma rajyada ondu sanna Lokayukta Samstheyalle bahalashtu corruption ide (Nanagu idara experience ondu sala agide)…Innu dodda mattada samsthe idarinda viruddavagiratta..???

  ಉತ್ತರ
 3. ಡಿಸೆ 21 2011

  ಶಾಮಿಯಾನ, ಕುರ್ಚಿ, ಮೇಜುಗಳಿಗೆ ಹಣ ಎಲ್ಲಿ೦ದ ಬ೦ತು ಮೊದಲು ಅದರ ಬಗ್ಗೆ ಯಾರು ಯೋಚನೆ ಮಾಡುತ್ತಿರಲಿಲ್ಲ ಆ ಪ್ರಶ್ನೆ ಎಲ್ಲಿ೦ದ ಬ೦ತು. ಅದು ಕೂಡ ಆಡಳಿತ ಪಕ್ಷದವರು ಕೇಳಿದ ಮೇಲೆ ಉದ್ಬವವಾದ ಪ್ರಶ್ನೆ ಆದರೆ ಸ್ವಲ್ಪ ಯೋಚನೆ ಮಾಡಿ ಅಣ್ಣಾ ಹಜಾರೆಯವರ ಖರ್ಚು ವೆಚ್ಚ ಮುಖ್ಯವೊ ಅಥವಾ ಅವರ ಹೋರಾಟ ಮುಖ್ಯವೊ? ನನಗ೦ತು ಅದು ಮುಖ್ಯವೆನಿಸುವುದಿಲ್ಲ. ನಮಗೆ ಕಾಯಿಲೆ ಬ೦ದಾಗ ವೈದ್ಯರ ಬಳಿ ಯಾಕೆ ಹೋಗುತ್ತೆವೆ? ಅವರ ಕೊಡುವ ಔಷಧಿಯಿ೦ದ ಕಾಯಿಲೆ ತಕ್ಷಣ ವಾಸಿಯಾಗುತ್ತೆ ಅ೦ತನಾ? ನಿಜ ಎಲ್ಲ ಒ೦ದು ನ೦ಬಿಕೆಯ ಮೇಲೆ ಇದು ಅಷ್ತೆ
  ನೀವೆ ಯೋಚನೆ ಮಾಡಿ

  ಉತ್ತರ
 4. Ananda Prasad
  ಡಿಸೆ 23 2011

  ಜನಲೋಕಪಾಲ್ ಮಸೂದೆಯಿಂದ ಭ್ರಷ್ಟಾಚಾರ ಸ್ವಲ್ಪ ಕಮ್ಮಿಯಾಗಬಹುದು ಆದರೆ ನಮ್ಮ ಜನರಲ್ಲಿ ಭ್ರಷ್ಟಾಚಾರ ಬೇರು ಬಿಟ್ಟಿರುವಾಗ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಅಸಾಧ್ಯ. ಉದಾಹರಣೆಗೆ ಬಳ್ಳಾರಿ ಉಪಚುನಾವಣೆಯಲ್ಲಿ ನಮ್ಮ ಜನ ಭಾರಿ ಬಹುಮತದಿಂದ ಆರಿಸಿದ್ದು ನಮ್ಮ ರಾಜ್ಯದ ಖನಿಜ ಸಂಪತ್ತನ್ನು ಅಕ್ರಮವಾಗಿ ಪರದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿ ಹಾಕಿದ ಸರ್ವಾಧಿಕಾರಿ ಮನೋಭಾವದ ದೇಶದ್ರೋಹಿಗಳ ಕಡೆಯ ಅಭ್ಯರ್ಥಿಯನ್ನು. ಈ ಚುನಾವಣೆಯಲ್ಲಿ ಅಣ್ಣಾ ಅವರ ಭ್ರಷ್ಟಾಚಾರ ವಿರೋಧಿ ಹೋರಾಟ ಸ್ವಲ್ಪವೂ ಜನರ ಮೇಲೆ ಪ್ರಭಾವ ಬೀರಲಿಲ್ಲ. ಜನರಿಗೆ ದೇಶದ್ರೋಹಿಗಳನ್ನು, ಭ್ರಷ್ಟರನ್ನು ಸೋಲಿಸಲು ಎಲ್ಲ ಅವಕಾಶ ಚುನಾವಣೆಗಳಲ್ಲಿ ಇದ್ದರೂ ನಮ್ಮ ಜನ ಹೀಗೆ ವರ್ತಿಸಿದರೆ ಭ್ರಷ್ಟಾಚಾರ ಹೇಗೆ ನಿರ್ಮೂಲನೆ ಆಗುತ್ತದೆ? ಚುನಾವಣೆಗಳಲ್ಲಿ ಆರಿಸಲು ಯೋಗ್ಯ ವ್ಯಕ್ತಿಯೇ ಇಲ್ಲ ಎಂದು ಕೆಲವರು ಹೇಳಬಹುದು. ಕಣದಲ್ಲಿ ಯೋಗ್ಯ ಅಭ್ಯರ್ಥಿ ಇಲ್ಲದಿದ್ದರೆ ಯೋಗ್ಯ ವ್ಯಕ್ತಿಯೊಬ್ಬನನ್ನು ಕಣಕ್ಕೆ ಇಳಿಸಲು ಜನರೇ ಮುಂದಾಗಬಹುದಿತ್ತು ಹಾಗೂ ಜನರೇ ಪರಸ್ಪರ ಮಾತಾಡಿ ಆತನನ್ನು ಗೆಲ್ಲಿಸಲು ಸಾಧ್ಯವಿತ್ತು. ಇನ್ನೊಂದು ಉದಾಹರಣೆ ಹೇಳುವುದಾದರೆ ಅಪರೇಷನ್ ಕಮಲ ಎಂಬ ಅನೈತಿಕ ರಾಜಕೀಯದಿಂದ ಮರುಚುನಾವಣೆ ಬಂದಾಗ ಅನೈತಿಕ ರಾಜಕೀಯ ಮಾಡಿದ ಅಭ್ಯರ್ಥಿಯನ್ನು ನಮ್ಮ ಜನ ಗೆಲ್ಲಿಸಿದ್ದಾರೆ. ಇಲ್ಲಿಯೂ ಕೂಡ ಭ್ರಷ್ಟ, ಅನೈತಿಕ ರಾಜಕೀಯ ಮಾಡಿದ ವ್ಯಕ್ತಿಗಳನ್ನು ಸೋಲಿಸುವ ಎಲ್ಲ ಅವಕಾಶ ಮತದಾರರ ಮುಂದೆ ಇದ್ದರೂ ಅವರು ಬೆಂಬಲಿಸಿದ್ದು ಭ್ರಷ್ಟತೆ ಹಾಗೂ ಅನೈತಿಕತೆಯನ್ನೇ ಅಲ್ಲವೇ? ಭ್ರಷ್ಟಾಚಾರದ ಆಪಾದನೆಯ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಮಾಜಿ ಮುಖ್ಯ ಮಂತ್ರಿ ಆಪಾದನೆ ಮುಕ್ತನಾಗದಿದ್ದರೂ ಜನ ಅವರಿಗೆ ಭಾರಿ ಸ್ವಾಗತ ಕೋರುತ್ತಾರೆ. ಇಂಥ ಜನ ಇರುವಾಗ ಲೋಕಪಾಲ್ ಮಸೂದೆ ಬಂದ ಕೂಡಲೇ ಭ್ರಷ್ಟಾಚಾರ ನಿಲ್ಲುತ್ತದೆಯೇ? ನಮ್ಮ ಜನರ ಮನೋಭಾವವೇ ಹೀಗಿರುವಾಗ ಇದನ್ನು ಬದಲಾಯಿಸಲು ಪ್ರಯತ್ನಿಸದೆ ಬರೀ ಮಸೂದೆಗಳಿಂದ ಭ್ರಷ್ಟಾಚಾರ ಕಡಿಮೆಯಾಗಲು ಸಾಧ್ಯವಿಲ್ಲ.

  ಉತ್ತರ
 5. Balachandra
  ಡಿಸೆ 23 2011

  ಪೋಲಿಸ್ ಸ್ಟೇಶನ್, ಪೋಲಿಸ್ರು ಇದ್ದಿದ್ರಿಂದ ಕಳ್ಳತನ ನಿರ್ಮೂಲನೆ ಆಗಿದೆಯೇ? ಹಾಗಾದರೆ ಪೊಲೀಸರು ಯಾಕೆ?ಅಂತ ಕೇಳಿದ ಹಾಗಾಯ್ತು. 😀 ಸ್ವಾಮೀ ನಮ್ಮ ಪ್ರಯತ್ನ ನಾವು ಮಾಡ್ಬೇಕು. ಸಂಪೂರ್ಣ ಇರ್ಮೂಲನೆ ಆಗೋತ್ತೋ ಇಲ್ವೋ ಅಂತ hypothesis ಮಾಡೋದ್ರಲ್ಲಿ ಅರ್ಥ ಇಲ್ಲ. ಸಂಪೂರ್ಣ ಇರ್ಮೂಲನೆ ಆಗೋತ್ತೋ ಇಲ್ವೋ ಆದ್ರೆ ಸ್ವಲ್ಪ ಕಂಟ್ರೋಲ್ ಗೆ ಬರಬಹುದು ಅಲ್ವ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments