ರಷ್ಯಾದಲ್ಲಿ ಭಗವದ್ಗೀತೆ ನಿಷೇಧಕ್ಕೆ ಯಾಕೀ ಕೂಗಾಟ ?
-ಅರವಿಂದ್
ಮಾಧ್ಯಮಗಳಲ್ಲಿ ಹಾಗೂ ಲೋಕಸಭೆಯಲ್ಲಿ ನೆನ್ನೆಯಿಂದಲೂ ಒಕ್ಕೊರಲಿಗಿನ ವಾದ-ವಿವಾದ. ಬಿಜೆಪಿ ಇನ್ನಿತರ ವಿರೋಧಪಕ್ಷಗಳು, ಹಿಂದೂ ಹೋರಾಟಗಾರರು, ಇಸ್ಕಾನು ಎಲ್ಲರದೂ ಒಂದೇ, ಮಾತು. ರಷ್ಯಾದಲ್ಲಿ ಭಗವದ್ಗೀತೆ ನಿಷೇಧ ಬೇಡವೆಂಬ ಕೂಗು. ಇದ್ಯಾಕೋ ಗೊತ್ತಾಗಲಿಲ್ಲ. ರಷ್ಯಾದಲ್ಲಿ ಭಗವದ್ಗೀತೆ ನಿಷೇಧಿಸಿದರೆ ಭಾರತಕ್ಕಾಗುವ ನಷ್ಟವೇನು ? ಹೇಳಿ ಕೇಳಿ ರಷ್ಯಾ ಕಮ್ಯೂನಿಷ್ಟ್ ದೇಶ. ಆ ದೇಶ ಭಾರತದಂತೆ ಯಾವುದೇ ಧರ್ಮ ತಳಹದಿಯ ಮೇಲೆ ನಿರ್ಮಾಣವಾದ ದೇಶವಲ್ಲ. ಅದು ಧರ್ಮವನ್ನು ಅಫೀಮು ಎಂದುಕೊಂಡ ದೇಶ. ಇಂಥ ದೇಶಕ್ಕೆ ಧರ್ಮಗಳಿಂದ ನಾಗರೀಕರನ್ನು ಉದ್ಧಾರ ಮಾಡುವ ರಾಜಕೀಯವೂ ಇಲ್ಲ. ಇಂಥ ದೇಶದಲ್ಲಿ ಭಗವದ್ಗೀತೆಯಾದರೇನು, ಖುರಾನಾದರೇನು ಇನ್ಯಾವುದೇ…. ಇದ್ದರೇನು ಧರ್ಮಗ್ರಂಥಗಳಿಗೆ ವಿಶೇಷ ಮಾನ್ಯತೆಯೂ ಇಲ್ಲ.
ರಷ್ಯಾಕ್ಕೆ ತನ್ನದೇ ಆದ ಇತಿಹಾಸವಿದೆ, ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ ಅಲ್ಲಿನ ಧರ್ಮಗ್ರಂಥವಿದ್ದಂತೆ. ಇಂಥ ದೇಶದಲ್ಲಿ ಭಗವದ್ಗೀತೆ ನಿಷೇಧಿಸಬಾರದೆಂಬ ಕೂಗು, ಅದಕ್ಕೆ ಬೇಕಾದ ರಾಜತಾಂತ್ರಿಕತೆಯ ರಾಯಭಾರ ಭಾರತಕ್ಯಾಕೆ ಅಂತ ತಿಳಿಯುತ್ತಿಲ್ಲ. ಹೋರಾಟ ಇವೆಲ್ಲ ಅವಶ್ಯಕತೆ ಇದ್ಯಾ ? ಭಾರತದಲ್ಲಿ ಮುಸಲ್ಮಾನ, ಕ್ರ್ಯೆಸ್ತ ಅನುಯಾಯಿಗಳು ಆ ಧರ್ಮದ ಪ್ರಚಾರ ಕ್ಯೆಗೊಂಡರೆ ಅದು ಮತಾಂತರವಾದರೆ, ರಷ್ಯಾಗೂ ಅದು ಅನ್ವಯಿಸುವುದಿಲ್ಲವೇ ? ನಾನಿಲ್ಲಿ ಯಾವುದೇ ಧರ್ಮ ದೊಡ್ಡದು ವಿಶಾಲವಾದದ್ದೂ ಅನ್ನೋ ತುಲನೆಗೆ ಹೇಳುತ್ತಿಲ್ಲ. ಪ್ರತಿ ದೇಶಕ್ಕೂ ಅದರದ್ದೇ ಆದ ಸಂವಿಧಾನ ಕರಡು ಇರುತ್ತದೆ. ರಷ್ಯಾಕ್ಕೆ ಭಗವದ್ಗೀತೆಯ ಅವಶ್ಯಕತೆಯಿಲ್ಲ ಮತ್ತು ಅಲ್ಲಿ ಭಗವದ್ಗೀತೆಯ ಯಾವುದೋ ಅಧ್ಯಾಯದ ಯಾವುದೋ ಸಾಲು ಅಹಿಂಸೆಯನ್ನು ಸೃಷ್ಠಿಮಾಡುತ್ತದೆ ಎಂಬ ಆಲೋಚನೆಯಿದ್ದರೆ ಇರಲಿ ಬಿಡಿ, ಅದರಿಂದ ನಮಗ್ಯಾವ ನಷ್ಟವೂ ಇಲ್ಲ. ಭಗವದ್ಗೀತೆ ಭಾರತದ ಸಂಸ್ಕೃತಿಗೆ ತಳಹದಿಯಾದರೆ, ಅದು ಭಾರತಕ್ಕಾದೀತು. ರಷ್ಯಾವೂ ಭಾರತದಂತೆ ಪಾಲಿಸಬೇಕು ಅನ್ನುವ ಹಠ ಯಾಕೆ ? ಅದೇನೋ ಆಗಬಾರದ್ದು ಮಾಡಬಾರದ್ದು ಮಾಡುತ್ತಿರುವಂತೆ ಕೂಗಾಡುವ ಅವಶ್ಯಕತೆಯೇನಿದೆ.
ಡಿಸೆಂಬರ್ ೨೮ ರಂದು ಈ ವಿಚಾರದ ತೀರ್ಪು ಎಂಬ ಮಾಹಿತಿಯಿದೆ. ನಾವು ನಮ್ಮ ದೇಶದ ನ್ಯಾಯಾಲಯಕ್ಕೆ ಎಷ್ಟು ಗೌರವ ಕೊಡ್ತಿವೋ, ಅಷ್ಟೆ ಗೌರವವೂ ಆ ದೇಶದಲ್ಲೂ ಕೊಡುವ ಆಚರಣೆಯಿದೆ. ಇದೇ ರಷ್ಯಾ ಖುರಾನನ್ನೋ, ಬ್ಯೆಬಲನ್ನೋ ನಿಷೇಧಿಸಿದ್ದರೆ ಆಗ ಬರುತ್ತಿದ್ದ ಪ್ರತಿಕ್ರಿಯೆಗಳೇ ಬೇರೆ. ಪಾಕಿಸ್ತಾನ ಜಿಹಾದನ್ನು ಧರ್ಮಯುದ್ಧವೆಂದು ಹೇಳುವುದು. ಅದೇ ಧರ್ಮಯುದ್ಧ ಅಹಿಂಸೆಗೆ ತಿರುಗಿದಾಗಲಷ್ಟೆ ಭಾರತದಲ್ಲಾಗಲಿ ಇನ್ಯಾವುದೇ ದೇಶದಲ್ಲಾಗಲಿ, ಅಹಿಂಸೆಯನ್ನು ಹತ್ತಿಕ್ಕಲು ಆ ದೇಶದ್ದೇ ಆದ ಕಾನೂನು ರೀತ್ಯಾ ಕ್ರಮಗಳನ್ನು ಜರುಗಿಸುತ್ತಾರೆ. ತನ್ನ ಮಗುವಿಗೆ ಯಾವ ರೀತಿಯ ಆಹಾರ ಕೊಟ್ಟರೆ ಅಪಥ್ಯವೆಂಬುದು ತಾಯಿಗೆ ಗೊತ್ತಿರುವಂತೆ, ಆ ದೇಶಕ್ಕೆ ಯಾವುದೋ ಅಪಥ್ಯವೋ ಅದನ್ನು ನಿಷೇಧಿಸುವ ಆಲೋಚನೆ ಇದೆ.
ವಿಪರ್ಯಾಸವೆಂದರೆ ಈ ದಾವೆಯನ್ನು ಹೂಡಿರುವುದು ರಷ್ಯಾದ ಸಂಪ್ರದಾಯವಾದಿ ಚರ್ಚ್ ಒಂದು. ಹಿಂದೆ ತಿರುಪತಿಯಲ್ಲಿ ಕ್ರ್ಯೆಸ್ತ ಮತಾಂತರ ನಡೆಯುತ್ತಿದೆ ಎಂದಾಗ ಹಿಂದೂಗಳೆಲ್ಲ ಹೋರಾಡಿ ಅಲ್ಲಿನ ಚರ್ಚು, ಪ್ರಾದಿಗಳನ್ನು ಹೊಡೆದೋಡಿಸಿದ ವಿಷಯ ಇನ್ನು ಹಸಿಯಾಗಿಯೇ ಇದೆ. ಅವರೇನು ಅಲ್ಲಿ ಹಿಂಸೆಗೆ ಆಹ್ವಾನ ನೀಡುತ್ತಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ, ತೀರ್ಪುಗಾರರಿಗೂ ಅಲ್ಲಿನ ದೇಶಕ್ಕೆ ಯಾವುದು ಬೇಕೋ ಬೇಡವೋ ಎಂಬ ಅರಿವಿರುತ್ತದೆ.
ಕಾದು ನೋಡೋಣ ಡಿಸೆಂಬರ್ ೨೮ರ ಸ್ಯೆಬೀರಿಯಾದ ನ್ಯಾಯಾಲಯ ಅದೇನು ತೀರ್ಪು ನೀಡುವುದೋ ?
***************
brihadmrdanga.com
ಹೇಳಿ ಕೇಳಿ ರಷ್ಯಾ ಕಮ್ಯೂನಿಷ್ಟ್ ದೇಶ. ಆ ದೇಶ ಭಾರತದಂತೆ ಯಾವುದೇ ಧರ್ಮ ತಳಹದಿಯ ಮೇಲೆ ನಿರ್ಮಾಣವಾದ ದೇಶವಲ್ಲ. ಅದು ಧರ್ಮವನ್ನು ಅಫೀಮು ಎಂದುಕೊಂಡ ದೇಶ. ಇಂಥ ದೇಶಕ್ಕೆ ಧರ್ಮಗಳಿಂದ ನಾಗರೀಕರನ್ನು ಉದ್ಧಾರ ಮಾಡುವ ರಾಜಕೀಯವೂ ಇಲ್ಲ. ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ ಅಲ್ಲಿನ ಧರ್ಮಗ್ರಂಥವಿದ್ದಂತೆ….
—————————————
Hats-off to your general knowledge. Russia has been get rid of communism very long back. Now it’s multi-party representative democratic country, not communist country. I request you to check your general knowledge well before writing off something. How churches are there if Russia is anti-religious?
ಪ್ರತಿ ದೇಶಕ್ಕೂ ಅದರದ್ದೇ ಆದ ಸಂವಿಧಾನ ಕರಡು ಇರುತ್ತದೆ. ರಷ್ಯಾಕ್ಕೆ ಭಗವದ್ಗೀತೆಯ ಅವಶ್ಯಕತೆಯಿಲ್ಲ ಮತ್ತು ಅಲ್ಲಿ ಭಗವದ್ಗೀತೆಯ ಯಾವುದೋ ಅಧ್ಯಾಯದ ಯಾವುದೋ ಸಾಲು ಅಹಿಂಸೆಯನ್ನು ಸೃಷ್ಠಿಮಾಡುತ್ತದೆ ಎಂಬ ಆಲೋಚನೆಯಿದ್ದರೆ ಇರಲಿ ಬಿಡಿ, ಅದರಿಂದ ನಮಗ್ಯಾವ ನಷ್ಟವೂ ಇಲ್ಲ. ಭಗವದ್ಗೀತೆ ಭಾರತದ ಸಂಸ್ಕೃತಿಗೆ ತಳಹದಿಯಾದರೆ, ಅದು ಭಾರತಕ್ಕಾದೀತು. ರಷ್ಯಾವೂ ಭಾರತದಂತೆ ಪಾಲಿಸಬೇಕು ಅನ್ನುವ ಹಠ ಯಾಕೆ ? ಅದೇನೋ ಆಗಬಾರದ್ದು ಮಾಡಬಾರದ್ದು ಮಾಡುತ್ತಿರುವಂತೆ ಕೂಗಾಡುವ ಅವಶ್ಯಕತೆಯೇನಿದೆ.
—————————————
What’s Russia?it’s a democratic country. 15000 Hindus are living there. Now India is fighting to protect religious rights of Hindus there. India is not forcing Russians to accept bhagavadgeeta. You might not aware of the fact that how a democracy should work. Get your facts straight on what’s democracy first.Then you would understand what’s the tragedy now.
ರಷ್ಯಾದಲ್ಲಿ ಭಗವದ್ಗೀತೆ ನಿಷೇಧಿಸಿದರೆ ಭಾರತಕ್ಕಾಗುವ ನಷ್ಟವೇನು ?
——————
Nothing, but it’s India’s responsibility to protect its citizens’ rights in other countries as per their constitution itself. I hope you will come back with gaining general knowledge and understand the basic facts.
ಆ ದೇಶ ಭಾರತದಂತೆ ಯಾವುದೇ ಧರ್ಮ ತಳಹದಿಯ ಮೇಲೆ ನಿರ್ಮಾಣವಾದ ದೇಶವಲ್ಲ.>>
ಭಾರತ ಯಾವ ಧರ್ಮದ ತಳಹದಿಯ ಮೇಲೆ ನಿರ್ಮಾಣವಾಗಿದೆ??
ಧರ್ಮ ಎಂದರೇನು ಭಗವದ್ಗೀತೆ? ಯಾವ ಧರ್ಮವನ್ನು ಭೋಧಿಸುತ್ತದೆ?
ವಿರೋಧಿಸಿದ್ದು ಬಿ ಜೆ ಡಿಯ ಯವರು ಪೆಕರರಂತೆ ದನಿಗೂಡಿಸಿದ್ದು ಬಿ ಜೆ ಪಿ ಯವರು.
ಅಲ್ಲಿ ಸದ್ದಾ೦ ಹುಸೇನ್ ಹತ್ಯೆ ಮಾಡಿದರೆ ಇಲ್ಲಿ ನಮ್ಮ ಬಿ.ಎ೦.ಟಿ.ಸಿ ಗೆ ಕಲ್ಲು, ನಮ್ಮ ದೇಶದಲ್ಲೆ ಇದ್ದು ವ೦ದೇ ಮಾತರ೦ ನಿಷೇಧ ಹೇಗಿದೆ ನೋಡಿ ನಮ್ಮ ಪರಿಸ್ತಿಥಿ, ಅದೇ ರಷ್ಯ್ವದಲ್ಲಿ ಎನಾದರು ಆದರೆ ಎಲ್ಲ ವಿರೋದ ಪಕ್ಷಗಳಲ್ಲೆವು ಒ೦ದಾಗಿ ಹೋರಾಟ. ಆದರೂ ನಮ್ಮ ಸ೦ವಿಧಾನದ ಪ್ರಕಾರ ನಮ್ಮ ದೇಶದವರು ಒತ್ತಡ ಹಾಕಬಹುದು ಆದರೆ ನಿಷೇದಿಸಲೆ ಬಾರದು ಅನ್ನುವುದು ಅಸಾದ್ಯ, ಅವರ ಕಾನೂನು ಅದನ್ನು ನಿಷೇದಿಸಿದರೆ ಅದು ಅವರ ಕರ್ಮವಷ್ಟೆ ಅದರಿ೦ದ ಬಾರತಕ್ಕೆನು ನಷ್ತವಿಲ್ಲ ಬಿ.ಜೆ.ಪಿ ಮತ್ತು ಇಸ್ಕಾನ್ ಹೊರತುಪಡಿಸಿ
ರಷ್ಯಾ ಕೂಡ ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗಿ ಪ್ರಜೆಗಳ ಹಕ್ಕಿಗೆ ಪ್ರಾಧಾನ್ಯತೆ ಕೊಡಬೇಕು. ಅದು communist ರಾಷ್ಟ್ರ ಎಂದು ಲೇಖಕರು ಅಪಾರ್ಥ ಮಾಡಿಕೊಂಡಿದ್ದಾರೆ. ಭಾರತ ಸರ್ಕಾರದವರು ಇಸ್ಲಾಂ ದೇಶಗಳಿಗೆ ಹೋಗಿ ಈ ಬೇಡಿಕೆ ಇಟ್ಟಿಲ್ಲ. ಯಾಕೆಂದರೆ ಅವರ ದೇಶದಲ್ಲಿ ಅದು ಅಪರಾಧ, ಆದರೆ ರಷ್ಯ ಕಾನೂನಿನ ಪ್ರಕಾರ ಅಲ್ಲ. ಇನ್ನು ಭಗವದ್ಗೀತೆಯನ್ನು ರಷ್ಯನ್ನರು ಅನುಸರಿಸಬೇಕು ಎಂದು ಒತ್ತಾಯಿಸುತ್ತಿಲ್ಲ. ಅಲ್ಲಿನ ಹಿಂದೂಗಳು ಭಗವದ್ಗೀತೆಯಿಂದ ವನ್ಚಿತರಾಗಬಾರದೆಂದು ಅಷ್ಟೇ. ಕೆಲವೊಂದು ಸಲ ಅಜ್ಞಾನ ಇಂತಹ ಹಾಸ್ಯಾಸ್ಪದದ ಲೇಖನಕ್ಕೆ ಎದೆ ಮಾಡಿಕೊಡುತ್ತದೆಂಬುದಕ್ಕೆ ಈ ಲೇಖನ ಉದಾರಣೆ.
ಇಂತಹ ಬಾಲಿಶ ಲೇಖನ ಬರೆಯುವುದೂ, ಅದನ್ನು ಪ್ರಕಟಿಸಿ ಬೀಗುವುದೂ ನೋಡಿದರೆ ತಮಾಷೆಯಾಗಿದೆ, ಜೊತೆಗೆ ಬೇಸರವೂ ಆಗುತ್ತಿದೆ.
ಗುರು,
ನೀವು ನಿಮ್ಮ ಉತ್ತಮ ಮಟ್ಟದ ಲೇಖನವನ್ನು ಬರೆದು ನಿಲುಮೆಗೆ ಕಳುಹಿಸಬಹುದು.
ನಿಲುಮೆ ಬಳಗ
ನಿಲುಮೆ ಬಳಗ !!
ಇಂತಹ ಲೇಖನ ಪ್ರಕಟಿಸಿ, ನಿಲುಮೆಯ ಬಗ್ಗೆ ನಂಬಿಕೆ ಕಡಿಮೆ ಮಾಡಿ, ಈಗ ಅದನ್ನ ಸಮರ್ಥಿಸುತ್ತಿರುವುದು ಸರಿಯೇ? ನಿಮ್ಮ ಆತ್ಮ ಸಾಕ್ಷಿಯನ್ನ ಒಮ್ಮೆ ಕೇಳಿ ನೋಡಿ! ಲೇಖನ ನೀವು ಪ್ರಕಟಿಸಿದ್ದೀರಿ ಅಂದ ಮಾತ್ರಕ್ಕೆ ಅದು ಒಳ್ಳೆಯ ಅಭಿರುಚಿಯದ್ದು ,ಅದು ಸರಿ ಎಂದು ಆಗೋದಿಲ್ಲ . ದಯವಿಟ್ಟು ಮುಂದೆ ಇಂತಹ ದರಿದ್ರ ಲೇಖನ ಪ್ರಕಟಿಸಬೇಡಿ, ಮತ್ತೆ ನಿಮ್ಮಿಷ್ಟ ,ನಾವೇನೂ ಮಾಡೋಕಾಗಲ್ಲ ,
ನಿಲುಮೆ ನೋಡೋದನ್ನು ನಿಲ್ಲಿಸಬಹುದು ಅಷ್ಟೇ ! ನಮ್ಮಿಂದ ಮತ್ತಿನ್ನೇನು ಮಾಡಲು ಸಾಧ್ಯ? ಅಲ್ಲವೇ?
ನಾವು ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ.ನಾವು ಈಗಾಗಲೇ ನಿಲುಮೆಯ ನಿಲುವನ್ನ ತಿಳಿಸಿದ್ದೇವೆ.ಲೋಕೋ ಭಿನ್ನರುಚಿ ಅನ್ನುವಂತೆ ಎಲ್ಲರದೂ ಒಂದೇ ಅಭಿಪ್ರಾಯವಿರಲಿಕ್ಕಿಲ್ಲ ಅಲ್ಲವೇ,ಹಾಗೇ ವಿವಿಧ ಅಭಿಪ್ರಾಯಗಳನ್ನು ಗೌರವಿಸುವುದು ಮತ್ತದಕ್ಕೆ ವೇದಿಕೆಯಾಗುವುದು ನಮ್ಮ ನಿಲುವು.
ಓದುಗರು ಸಹ ನಮಗೇ ಅತಿ ಮುಖ್ಯ. ನಿಮ್ಮ ಸಲಹೆ-ಪ್ರೀತಿಗೆ ಧನ್ಯವಾದ ನಿಲುಮೆಯೊಂದಿಗೆ ನಿಮ್ಮ ಒಡನಾಟ ಹೀಗೆ ಮುಂದುವರೆಯಲಿ
ಅಭಿಮಾನಿ,
ಪ್ರತಿಯೊಬ್ಬರಿಗೂ ಅವರವರ ಅನಿಸಿಕೆ ಅಭಿಪ್ರಾಯವನ್ನು ಪ್ರಕಟಿಸುವ ಸ್ವತಂತ್ರ್ಯ ಇದೆ. ನಿಮಗೆ ಇಷ್ಟವಿರುವುದನ್ನು ಮಾತ್ರ ಬರೆಯಬೇಕೆಂಬ ಯಾವ ಒಡಂಬಡಿಕೆಯೂ ಇಲ್ಲ. ನಿಮಗೆ ಭಗವದ್ಗೀತೆ ಶ್ರೇಷ್ಠವಾದರೆ, ಅದು ಎಲ್ಲರಿಗೂ ಶ್ರೇಷ್ಠವಾಗೇ ಇರಬೇಕೆಂಬ ನಿಯಮವಿಲ್ಲ. ನಾವು ನಿಲುಮೆಯನ್ನು ನೋಡುವುದಿಲ್ಲ, ಮಾಡುವುದಿಲ್ಲ ಎಂಬೋ ಬೆದರಿಕೆ, ಪೊಳ್ಳುಗಳು ನಿಮ್ಮ ಕನಿಷ್ಠತನವನ್ನು ತೋರುತ್ತದೆ. ವಿಷಯವನ್ನು ಅರಗಿಸಿಕೊಳ್ಳುವ ಇರಾದೆ ನಿಮಗಿಲ್ಲದಿದ್ದದ್ದು ವಿಷಾದನೀಯ….
ಪವನ್,
ನಿಮಗೆ ಬೆದರಿಕೆ ಹಾಕಲು ಸಾದ್ಯವೇ? ಅದೂ ನಮ್ಮಂತಹ ಕನಿಷ್ಟರು? ಮೇಲಾಗಿ ಲೇಖನದಲ್ಲಿ ಭಗವದ್ಗೀತೆಯ ಬಗ್ಗೆ ಚರ್ಚಿಸಿದ್ದಾರೆಯೇ? ಯಾರಿಗೆ ನಷ್ಟ ? ಯಾರಿಗೆ ಲಾಭ ? ಎಂದು ಕುತರ್ಕ ಮಾಡಿದ್ದಾರೆಯೇ ಹೊರತು ಬೇರೇನಿಲ್ಲ! ಇನ್ನು ಭಾರತೀಯರ ಭಗವದ್ಗೀತೆಗೆ ಒಂದು ರಾಷ್ಟ್ರ ನಿಷೇದ ಹಾಕಿದರೆ ಭಾರತೀಯರಿಗೆ ಏನೂ ಅನ್ನಿಸಬಾರದೆ? ಭಾರತ ಪ್ರಜಬ್ರಭುತ್ವ ದೇಶವೇ ಆಗಿದ್ದರೂ ಕೂಡ ಅಲ್ಲಿಯ ಹೆಚ್ಚಿನ ಪ್ರಜೆಗಳ ನಂಬಿಕೆ(ಬೇರೆಯವರಿಗೆ ಏನೂ ತೊಂದರೆ ಇಲ್ಲದಿದ್ದರೆ) ವಿರುದ್ದ ಬೇರೆಯವರು ನಿಷೇಧ ಹಾಕಿದಾಗ ಸುಮ್ಮನಿರಲಾದೀತೆ? ನಿಮ್ಮ ವಯಕ್ತಿಕ ಆಚರಣೆಗೆ(ನಿಮ್ಮಲ್ಲಿ ನೀವು ಮಾಡುವ-ಹೊರಗಲ್ಲ ನೆನಪಿಡಿ ) ನೀವು ಹೋದಲ್ಲಿ ನಿಷೇಧ ಹಾಕಿದರೆ ನೀವು ಸುಮ್ಮನಿರುತ್ತೀರೋ? ಯಾರಿಗೆ ನಷ್ಟ ಎಂದು? ಅದಕ್ಕೆ ಇದು ದರಿದ್ರ ಲೇಖನ ಅಂದಿದ್ದು!
ಇನ್ನು ನಿಲುಮೆ ಬಳಗ ,
ಅದು ಅವರ ಅಭಿಪ್ರಾಯವೇ ಆಗಿರಬಹುದು ಆದರೆ ಅದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗೋದಿಲ್ಲವೇ? ಅದಕ್ಕೆ ಪ್ರಕಟಿಸಿದ “ನಿಲುಮೆ ” ಹೊಣೆ ಆಗೋದಿಲ್ಲವೇ? ಅದು ಯಾಕೆ ಅದನ್ನು ಅಷ್ಟು ಹಗುರಾಗಿ ತೆಗೆದು ಕೊಳ್ಳುತ್ತೀರಿ? ನೀವು ಹಗುರಾಗಿ ತೆಗೆದು ಕೊಂಡದ್ದರಿಂದ ಸಮಾಜಕ್ಕೆ ಹೋದ ಕೆಟ್ಟ ಸಂದೇಶಕ್ಕೆ ಹೊಣೆ ಯಾರು? ಮತ್ತೆ ಇದನ್ನು ಬೆದರಿಕೆ ಅಂತ ಭಾವಿಸಿದರೆ ನಾವೇನು ಮಾಡಲಾದೀತು?
I don’t understand the hue and cry being raised over an non-issue as nobody(either the government or the court) has banned bagavadgita. an religious group has moved the local court for banning the book where as the russian government itself is solidly behind those who are opposing the ban.
gamestop, pandora, limewire
descargar ares, pandora, limewire
ಭಗವದ್ಗೀತೆ ಯಾವ ಧರ್ಮಕ್ಕೂ ಸೇರಿಲ್ಲ.ಅದು ಸನಾತನಧರ್ಮ.ಮಾನವನ ಉಧ್ಧಾರಕ್ಕಾಗಿಯೇ ಇರುವುದು.ಅದು ಎಲ್ಲರಿಗೂ ಅಗತ್ಯವಾಗಿದೆ!
ಭಾರತ ಈಗ ಪ್ರಜಾಪ್ರಭುತ್ವ ರಾಷ್ಟ್ರ ಆಗಿರಬಹುದು. ಆದರೆ ವಿದೇಶೀಯರೂ ಭಾರತವನ್ನು ಗೌರವಿಸಲಿಕ್ಕೆ ಕಾರಣವಾದ ಭಾರತೀಯ ಸಂಸ್ಕೃತಿಯನ್ನು ಈಗ ಅನುಸರಿಸುತ್ತಿರುವವರು ಹಿಂದೂಗಳು ಮಾತ್ರ. ಉಳಿದವರು ಅನುಸರಿಸಬಾರದು ಎಂಬ ನಿಷೇಧ ಪ್ರಜಾಪ್ರಭುತ್ವದಲ್ಲಿಲ್ಲ. ಮುಸ್ಲೀಮರಿಗೂ, ಕ್ರಿಶ್ಚಿಯನ್ನರಿಗೂ ಭಗವದ್ಗೀತೆಯನ್ನು ಪಠಿಸಲು, ಅನುಸರಿಸಲು ನಮ್ಮ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಆದರೆ ಅವರು ಯಾಕೆ ಮಾಡುತ್ತಿಲ್ಲ? ಭಗವದ್ಗೀತೆ ನಮ್ಮ ಸಂಸ್ಕೃತಿಯ ನೆಲೆಗಟ್ಟು. ಅದಕ್ಕೆ ಜಗತ್ತಿನ ಯಾವ ಮೂಲೆಯಲ್ಲಿ ಅಪಮಾನವಾದರೂ ನಮಗೆ ನೋವಾಗಬೇಕು. ಇಂತಹ ಒಂದು ಗ್ರಂಥಕ್ಕೆ ಎಲ್ಲಾದರೂ ನಿಷೇಧ ಹೇರಿದರೆ ಅದು ಜಗತ್ತಿನಾದ್ಯಂತ ತಪ್ಪು ಸಂದೇಶವನ್ನು ಹರಡುತ್ತದೆ. ಬುದ್ಧಿಜೀವಿಗಳ ಪಾಲಿಗೆ ಸೇರಬೇಕು ಎನ್ನುವ ಹಪಹಪಿಯವರು ಇದೇ ಸಂದರ್ಭವೆಂದು ಟೀಕೆಗಳ ಸುರಿಮಳೆ ಗೈಯಬಹುದು. ಗೊತ್ತಿಲ್ಲದ ಅಮಾಯಕರು ಅದನ್ನೇ ಸತ್ಯವೆಂದು ತಿಳಿದುಕೊಳ್ಳಬಹುದು. ಅದರಿಂದ ನಮಗೆ ನಷ್ಟ ತಾನೆ? ಭಾರತದ ಹೆಮ್ಮೆಯ ಸೊತ್ತಿಗೆ ಅಪಮಾನವಾದರೂ ಭಾರತಕ್ಕೇನು ನಷ್ಟ ಎಂದು ಪ್ರಶ್ನಿಸುವವರ ದೇಶಭಕ್ತಿ ಎಂಥದ್ದೊ?!
Balisha Lekhana..
ಲೇಖನ ಓದಿದ ಮೇಲೆ ಅನ್ನಿಸಿದ್ದು,ಕಮ್ಯುನಿಸ್ಟರಿಗೇನು ಗೊತ್ತು ಭಗವದ್ಗೀತೆಯ ಬೆಲೆ!?
“ಕ್ರೈಸ್ತನಾದವನು ಹಿಂದುವೋ ಬೌದ್ಧನೋ ಆಗಿ ಮತಾಂತರಗೊಳ್ಳಬೇಕಿಲ್ಲ;ಅಂತೆಯೇ ಹಿಂದುವೋ ಬೌದ್ಧನೋ ಕ್ರೈಸ್ತನಾಗಬೇಕಿಲ್ಲ.ಆದರೆ,ಪ್ರತಿಯೊಬ್ಬನೂ ಉಳಿದವರ ಉನ್ನತ ಭಾವನೆಗಳನ್ನು ಮೈಗೂಡಿಸಿಕೊಂಡು,ತನ್ನವೈಯುಕ್ತಿಕತೆಯನ್ನು ಕಳೆದುಕೊಳ್ಳದೆ,ತನ್ನದೇ ಆದ ಬೆಳವಣಿಗೆಯ ನಿಯಮಾನುಸಾರವಾಗಿ ಬೆಳೆಯಬೇಕು…” tumba olle maatu idu
@ರಾಕೇಶ್ ಶೆಟ್ಟಿ.. Nijavada maathu.