ಒನ್ ಟು ತ್ರೀ ವಿಷ್ಣುವರ್ಧನ
– ಫಿಲ್ಮಿ ಪವನ್
ಏನ್ರಿ ಗ್ರಹಚಾರ, ಏನೇ ಹೇಳಿ ಮೊದಲ ಸರಿ ಬರದಾಗ ಬಾರೋ ಮಜಾ ಎರಡನೇ ಸರಿ ಬರಲ್ಲ. ಇ ಬರಹಾನ ಮೊದಲೇ ಬರೆದಿದ್ದೆ, ನನ್ನ ಗ್ರಹಚಾರ ಸರಿ ಇಲ್ದೆ ಬರೆದಿದ್ದ ಬರಹವೆಲ್ಲ ಹೇಗೋ ಮಿಸ್ ಆಗೋಗಿತ್ತು.ಎರಡು ದಿನ ಅಷ್ಟು ಕಷ್ಟ ಪಟ್ಟು ಬರೆದು ವೇಸ್ಟ್ ಆಯ್ತಲ್ಲ ಅಂತ ಫೀಲಿಂಗ್ ಅಲ್ಲಿದ್ದೆ. ಈಗ ಮತ್ತೆ ಬರಿತ ಇದ್ದೀನಿ. ಹೇಗಿದ್ಯೋ ನೀವೇ ಹೇಳ್ಬೇಕು. ಮೊದಲ ಬರಹದಲ್ಲಿದ್ದೆ ಬಹಳಷ್ಟು ಪಾಯಿಂಟ್ ಗಳು ಇಲ್ಲಿ ಖಂಡಿತ ಮಿಸ್ ಆಗಿರುತ್ತೆ.
ನಮ್ಮೂರಿನ ಡಬ್ಬ ಥಿಯೇಟರಲ್ಲಿ ಒಂದಾದ ವೆಂಕಟೇಶ್ವರದಲ್ಲಿ, ವಿಷ್ಣುವರ್ಧನ ಫಿಲಂ ಬಂದೈತೆ ಅಂತ ಸರ್ಕಲ್ ನಲ್ಲಿ ಹಾಕಿರೋ ದೊಡ್ಡ ಪೋಸ್ಟರ್ಗಳು ನೋಡಿದಾಗ ತಿಳೀತು, ಹಾಗೇ ಗೆಳೆಯ ಯಾದವ್ ಗೆ ಫೋನ್ ಮಡಿ ಮಗ bioscope ಅಂದೇ. ಲೇ ಅಪ್ಪಿ ನ ಈಗ ನ ಶಿವಾಜಿನಗರದಲ್ಲಿದ್ದಿನಿ, ಬರಕ್ಕೆ ಇನ್ನ ಬಹಳ ಹೊತ್ತಾಗುತ್ತೆ ಇವಿನಿಂಗ್ ಶೋ ಹೋಗಣ ಅಂದ. ನಾನು ಮಗ ಸಿನಿಮ ಚೆನ್ನಾಗಿದ್ರೆ ಇನ್ನೊಂದು ಸಲಿ ನೋಡನ, ಕಾಯಕ್ಕಂತು ಸಾಧ್ಯ ಇಲ್ಲ ಅಂತ ಹೇಳಿ ನಮ್ ಮುರುಗನ್ ಚಿಪ್ಸ್ ಅಂಗಡಿಲಿ 100gm ಸೈಕಲ್ ಚಿಪ್ಸ್ ತಗೊಂಡು ಟಾಕಿಸ್ ಅಲ್ಲಿ 50 ರು ಟಿಕೆಟ್ ತೊಗೊಂಡು ಸಿನಿಮ ಹಾಲ್ ಅಲ್ಲಿ ಕೂತೆ.
7up ಆಡ್ ಅಲ್ಲಿ ಕೂದಲು ಮೇಲಕ್ಕೆ ಮಾಡಿಕೊಂಡಿರೋ ಬೊಂಬೆ ತಾರಾ ಇದ್ದ ಒಂದು ಕಾರ್ಟೂನ್ ಬಂದು, ನಾನೆ ದಿರೆಕ್ಟೊರ್ ಕಣ್ರೀ ಅಂತು. ನ ನಂಬಲಿಲ್ಲ ಅದ್ರು ಸಿನಿಮದ ಯಾವ ಪ್ರಚಾರ ಕಾರ್ಯಕ್ರಮದಲ್ಲೂ ನಿರ್ದೇಶಕರನ್ನು ನೋಡೇ ಇಲ್ಲ ಎಲ್ಲಿ ನೋಡಿದರು ಖಿಲಾಡಿ ಕುಳ್ಳ ಮತ್ತು ನಾಯಕ ನಾಯಕಿಯರು. ಹಾಗಾಗಿ ಇ 7up ಬೊಂಬೆನೆ director ಅಂದ್ಕೊಂಡು ಕೂತೆ. ಬಂದ ನಿರ್ದೇಶಕ ಜೇಬಲ್ಲಿ ಮೊಬೈಲ್ ಇದ್ದೀಯ ನೋಡ್ಕೊಲ್ರಿ ಅಂದಾಗ ಸಿನಿಮಾ ಹಾಲ್ ಅಲ್ಲಿ ಇದ್ದ 50 ಭಾಗದಷ್ಟು ಜನ ಒಮ್ಮೆ ಮೊಬೈಲ್ ಮುಟ್ಟಿ ನೋಡ್ಕೊಂಡಿದ್ದು ನಿಜ. ನಾ ಕೂಡ ನೋಡಿ, ಮೊಬೈಲ್ ನ ಸೈಲೆಂಟ್ ಮೋಡ್ ಗೆ ಹಾಕಿದೆ. ಒಪೆನಿಂಗ್ ರೀಲ್ ಅಲ್ಲೇ ಇದು ಸಾಹಸ ಸಿಂಹನಿಗೆ ಅವನ ಆಪ್ತಮಿತ್ರನ ಅರ್ಪಣೆ ಎಂಬ ಮಾತು ದ್ವಾರಕೀಶ್ ಅವರ ಧ್ವನಿಯಲ್ಲಿ ಕೇಳಿ ಬಂತು. ಸುದೀಪ್ introduction ಡಿಟ್ಟೋ ಆಪ್ತಮಿತ್ರ ಮೊದಲನೇ ಸಾಹಸ ದೃಶ್ಯದಂತೆ ಮಾಡಿದ್ದರು. ಡೈಲಾಗು ಫೈಟು ಎಲ್ಲ same t same. ಎಲ್ಲೋ ಒಂದು ಮುಲೆಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮೊಡನೆ ಇಲ್ಲ ಎಂಬ ನೋವನ್ನು ಸಾಹಸ ದೃಶ್ಯದ ಮೂಲಕ ನಿರ್ದೇಶಕರು ಬಹಳ ಜಾಣ್ಮೆಯಿಂದ ತೆರೆಯ ಮೇಲೆ ಮುಡಿಸಿದ್ದರು.
ನಾಯಕ ಒಬ್ಬ ಮಹತ್ವಾಕಾಂಕ್ಷಿ. ಅವರಪ್ಪನ iron ಅಂಗಡಿಯಲ್ಲಿ ಕೆಲಸ ಮಾಡುವ ಇಚ್ಛೆಯಿಲ್ಲ, ಆದರೆ ಕೊಟ್ಯದಿಪತಿ ಆಗಬೇಕೆಂಬ ಅಸೆ. ಅವನ ಜ್ಯೋತಿಷಿ ಗೆಳೆಯ ಹೇಳಿದ್ದೆ ಜಾತಕ. ಅ ಜಾತಕದ ಪ್ರಕಾರ ಇವನದ್ದು ರಾಜರಲ್ಲಿ ವಿಷ್ಣುವರ್ಧನನ ಜಾತಕ, ದೇವತೆಯರಲ್ಲಿ ಇಂದ್ರನ ಜಾತಕ, ಅ ಜಾತಕಕ್ಕೆ ತಕ್ಕ ಹಾಗೇ ಸುಳ್ಳು ಹೇಳಿ ನಾಯಕಿಯನ್ನು ಪಟಾಯಿಸಲು ಪ್ರಯತ್ನಿಸುತ್ತಾನೆ. ಇಂತಹ ಪರಿಸ್ತಿತಿಯಲ್ಲಿ ಅಕಸ್ಮಾತ್ ಆಗಿ ಖಳನಾಯಕ ಆದಿಶೇಷನ ಮೊಬೈಲ್ ಫೋನ್ ನಾಯಕನ ಕೈ ಸೇರುತ್ತದೆ. ಅಲ್ಲಿಂದ ನಡೆಯುತ್ತೆ TOM ಅಂಡ್ jerry ಆಟ. ನಾಯಕ ಖಳನನ್ನು ಬಹಳಷ್ಟು ಕಾಡುತ್ತಾನೆ. ಅವನು ಮಾಡಿದ deal ಗೆ ಬರಬೇಕಾದ ಹಣವನ್ನೆಲ್ಲ ತನು ಲಪಟಾಯಿಸುತ್ತಾನೆ. ಇದರ ಮಧ್ಯಯೇ ಭಾರತಿಯೊಂದಿಗೆ ಒಂದು duet ಕೂಡ ಆಡುತ್ತಾನೆ. ಅಷ್ಟರಲ್ಲಿ ಕೆರಳಿದ ಆದಿಶೇಷ ಇನ್ನೇನು ವಿಷ್ಣುವರ್ಧನನನ್ನು ಹಿಡಿಯಬೇಕು, ಕಥೆಗೆ ಒಂದು ಮಹತ್ತರ ತಿರುವು ಕೊಟ್ಟು ಮಧ್ಯಂತರ declare ಮಾಡಿದ್ದಾರೆ ನಿರ್ದೇಶಕರು .
ಮೊದಲಾರ್ಧ ಸೇರಾದರೆ ದ್ವಿತಿಯಾರ್ಧ ಸವ್ವ ಸೇರು. ವಿಷ್ಣುವರ್ಧನ ಮತ್ತು ಆದಿಶೇಷನ ಆಟ ಸಕ್ಕತ್ತಾಗಿ ಸಾಗುತ್ತೆ. ಆದಿಶೇಷನ ಎಲ್ಲ ಪಟ್ಟುಗಳಿಗೂ,ವಿಷ್ಣುವರ್ಧನ ಉತ್ತರ ಇರುತ್ತೆ. ಆದಿಶೇಷ ಚಾಪೆ ಕೆಳಗೆ ತುರಿದರೆ ವಿಷ್ಣು ರಂಗೋಲಿ ಕೆಳಗೆ ತುರುತ್ತಾನೆ. 3idiots ಸಿನಿಮಾದಲ್ಲಿ ಅಮಿರಖಾನ್ ಹೆರಿಗೆ ಮಾಡಿಸಿದರೆ ಇಲ್ಲಿ ವಿಷ್ಣುವರ್ಧನನ ಕೈಲಿ ನಿರ್ದೇಶಕರು prematured ಮಗುವನ್ನು ಮತ್ತೆ ಹೊಟ್ಟೆ ಒಳಗೆ ಕಳಿಸುತ್ತಾರೆ. ಇದರ ಮಧ್ಯೆ ಆದಿಶೇಷನ ಚೇಲ ACP ಯನ್ನು ಸಹ ವಿಷ್ಣುವರ್ಧನ ಕಾಮಿಡಿ ಪೀಸ್ ಮಾಡುತ್ತಾನೆ. ಮುಂದೆ ಏನೇನು ಆಟ ಅಡಿ ಹೇಗೆ ಆದಿಶೇಷ ಮತ್ತು ACP ಯನ್ನು ಸೇದೆಬದಿಯುತ್ತಾನೆ, ಎಂಬುದೇ ಚಿತ್ರದ ಸಾರಾಂಶ. ಅವೆಲ್ಲ ನಾನು ಇಲ್ಲಿ ಬರೆದ್ರೆ ದ್ವಾರಕೀಶ್ ನನ್ನ deal ಮಾಡಿಬಿಡ್ತಾರೆ ಅಷ್ಟೇ.
ಸುದೀಪ್ ಎಂದಿನಂತೆ ಮಿಂಚಿದ್ದಾರೆ. ಅತ್ತ ಕ್ಲಾಸ್ ಇತ್ತ ಮಾಸ್ ಎರಡಕ್ಕೂ ಸೈ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ನಾಯಕಿಯರಿಬ್ಬರು ಸುಂದರಿಯರು, ಚಿತ್ರದಲ್ಲಿ ಮತ್ತಷ್ಟು ಸುಂದರವಾಗಿ ಕಾಣುತ್ತಾರೆ, ಅದಕ್ಕೆ ಕ್ಯಾಮರಾಮೆನ್ ಗೆ ದೊಡ್ಡ ಥ್ಯಾಂಕ್ಸ್ ಹೇಳಬೇಕು ಭಾವನ ಮತ್ತು ಪ್ರಿಯಮಣಿ. ಸುದೀಪ್ ಸ್ನೇಹಿತ ಶಾಸ್ತ್ರೀ ಪತ್ರದಲ್ಲಿ ಅರುಣ್ ಸಾಗರ್ ಅಭಿನಯಿಸಿದ್ದಾರೆ ಅವರಿಂದ ಕಾಮಿಡಿಗೆ ಏನು ಬರವಿಲ್ಲ. ನೀನಾಸಂ ನ ಪ್ರತಿಭೆಗೆ ಅಷ್ಟು ಅಭಿನಯಿಸುವ ಅವಕಾಶ ಕೊಟ್ಟಿಲ್ಲ. ಮುನಿ ಕಾಮಿಡಿ ಪೀಸ್ ಆದರು ಸ್ವಲ್ಪ ಅರಚುವುದು ಹೆಚ್ಚು. ದ್ವಾರಕೀಶ್ ಅಭಿನಯ ಎಂದಿನಂತೆ ಲೀಲಜಾಲ. ಇನ್ನು ಆದಿಶೇಷನ ಪತ್ರದಲ್ಲಿ ಅಭಿನಯಿಸಿರುವ ಸೋನು ಸೂದ್ ತೆಲುಗಿನ ಅರುಂದತಿ ನೋಡಿದವರಿಗೆ ಮರೆಯಲು ಸಾಧ್ಯವೇ ಇಲ್ಲ. ಇಲ್ಲಿ ಅವರ ಪತ್ರ ಬಹಳಷ್ಟು ಗಟ್ಟಿಯಾಗಿದೆ, ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ hatsoff ಸೋನು. ಆದರೆ ಒಂದು ಕಡೆ ತಾನು ಸಾಕಿದ ACP ಏ ತನ್ನನ್ನು ಕೊಲ್ಲುತ್ತಾನೆ ಎಂದು ತಿಳಿದಾಗ ಹೆದರುವುದು, ಅವರ ಪಾತ್ರಕ್ಕೆ ಕೊಟ್ಟ buildup ಗೆ ಸರಿ ಹೊಂದುವುದಿಲ್ಲ.
ದ್ವಾರಕೀಶ್ ಚಿತ್ರ ಎಂದ ಮೇಲೆ ಸದಭಿರುಚಿಯ, ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರಗಳು ಎಂದು ಕನ್ನಡದ ಪ್ರತಿಯೊಬ್ಬ ಚಿತ್ರಪ್ರೇಮಿಗು ಗೊತ್ತು ಅನಿಸುತ್ತೆ. ಇಲ್ಲಿಯೂ ಸಹ ಅದನ್ನೇ ಸಾಧಿಸಿಕೊಂಡು ಬಂದಿದ್ದಾರೆ ದ್ವಾರಕೀಶ್. ಒಂದೆರಡು ಕಡೆ ಸಾಹಸ ಸಿಂಹರ ಫೋಟಾನ ಬಹಳ ಚೆನ್ನಾಗಿ ಜಾಣ್ಮೆಯಿಂದ ನಿರ್ದೇಶಕರು ಬಳಸಿಕೊಂಡಿದ್ದಾರೆ. ಚಿತ್ರದ ಮೂಲ ಕಥೆ korea ದು ಆಗಿದ್ದರು ಕನ್ನಡದ ನೇಟಿವಿಟಿ ಗೆ ತಕ್ಕಂತೆ ಸಿನಿಮಾ ಮಾಡಿದ್ದರೆ. ಮುರುಗದಾಸ್ momento ನ ನೆರವಾಗಿ ಭಟ್ಟಿ ಇಳಿಸಿ ಘಜಿನಿ ಮಾಡಿಲ್ಲವೇ. ಒಟ್ಟಾರೆ ಸಿನಿಮಾ ನಿಜಕ್ಕೂ ಒಂದು ಉತ್ತಮ ಅನುಭವ. ಸಿನಿಮ ಮುಗಿದು ಹೊರಗೆ ಬಂದೆ ಯಾದವ್ ಫೋನ್ ಮಾಡಿದ magA ನಡೀ ಮತ್ತೆ ಹೋಗಣ ಅಂತ. ತಕ್ಷಣ ಮತ್ತೆ ಹೋದ್ರೆ ಮಜಾ ಇರಲ್ಲ ಸೆಕೆಂಡ್ ಶೋ ಹೋಗಣ ಯಾದವ್ ಅಂತ ಹೇಳಿ ಹಸುಗೆ ಜೋಳದ ಕಡ್ಡಿ ಕುಯ್ಯಕ್ಕೆ ಅಂತ ತೋಟದ ಕಡೆ ಡಿಂಗ್ ಡಿಂಗ್ ಡಿಗಾನ ಡಂಗ್ ಡಂಗ್ ಡಗಾನ ಅಂತ ಹಾಡು ಹೇಳ್ತಾ ಹೋದೆ. 🙂 😉
* * * * * * * *
ಚಿತ್ರಕೃಪೆ : kirankicking.blogspot.com