ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 24, 2011

ಫೇಸ್ ಬುಕ್ಕಿನ ಫಂಡಾಸ್

‍ನಿಲುಮೆ ಮೂಲಕ

-ಮಾಲತಿ ಎಸ್

ಜುಲೈ 2010, ಶ್ರೀಕಾಂತ ಗೆ ಡೆಂಗೆ ಹಾಗೂ ನಿಹಾರಿಕಂಗೆ air borne ವೈರಲ್ ಜ್ವರದಿಂದಾಗಿ 5-6 ದಿನಗಳ ಆಸ್ಪತ್ರೆವಾಸ. ಮನೆಗೆ ಬಂದ ಎರಡು ದಿನ, ನನಗೂ ರೆಸ್ಟ್ ಬೇಕಾಯಿತು..ಆಸ್ಪತ್ರೆ- ಮನೆ ಅಂತ ಓಡಾಡಿ ಬೆನ್ನುಹುರಿಯಲ್ಲಿ ನೋವು. ಮತ್ತೆ ಮನೆಯ ಉಳಿದ ಕ್ಲೀನಿಂಗ್-ಅದೂ-ಇದೂ etc.gಮೈಲ್ ತೆರೆದರೆ ಅದರಲ್ಲಿ ರಾಶಿ ರಾಶಿ ಮೈಲ್ ಗಳು. ಅದರಲ್ಲಿ ಮೊದಲಿಗೆ ಇದ್ದದ್ದು ಸಹನಾ ಜೋಶಿಯವರ facebook ಆಮಂತ್ರಣ. ಸಾಕಷ್ಟು ಫೇಸ್ ಬುಕ್ ಆಮಂತ್ರಣಗಳಿದ್ದರೂ ನಾನದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶ್ರೀಕಾಂತ ನನ್ನ ಹಿಂದೆ ನಿಂತು ನನ್ನ ಮೈಲ್ ಗಳನ್ನು ನೋಡುತ್ತ ಇದ್ದರು. ’ನೀನು face book ನಲ್ಲಿ ಇಲ್ಲವಾ’ ಅಂತ ಕೇಳಿದ್ರು. ನಾನು ’ಇಲ್ಲ’ ಅಂದೆ. ಹೇ ಜಾಯಿನ್ ಆಗಿ ನೋಡು ಅದರಲ್ಲೇನಿದೆ ಅಂತ. ಇತ್ತೀಚಿಗೆ ಆಫಿಸ್ ನಲ್ಲಿ ಹೊರ ದೇಶದವರು ಬಂದಾಗಲೆಲ್ಲ r u on facebook ಅಂತ ವಿಚಾರಿಸುತ್ತಾರೆ. ಬುಸಿನೆಸ್ interactions ಗೆ ಅದು ಸೂಕ್ತ ತಾಣ ಅಂತೆಲ್ಲ ಹೇಳುತ್ತಾರೆ ಅಂದ್ರು. ಅದಕ್ಕೆ ನಾನು , ಹುಷಾರಾದ ಕೂಡಲೇ ನೀವೆ ಸೇರಿಕೊಂಡು ಬಿಡಿ, ನನಗೆ ಅದರಲ್ಲಿ ಆಸಕ್ತಿ ಇಲ್ಲ ಅಂದೆ. ಅಷ್ಟರಲ್ಲಿ ಶ್ರೀಕಾಂತ ಆರೋಗ್ಯ ವಿಚಾರಿಸಲು ತಮ್ಮ ಫೋನ್ ಮಾಡಿದಾಗ, ಅವನು ’ಯೇ ನೀನು facebook ಜಾಯಿನ್ ಆಗು, ನಾನು ಆಗ್ತಾ ಇದ್ದೇನೆ ಅಂದ. ಹೂಂ ಅಂತ ಸಹನಾ ಜೋಶಿಯವರ invite ಆಗಲೇ accept ಮಾಡಿ, ಸುಮ್ಮನಿದ್ದು ಬಿಟ್ಟೆ. ಆಮೇಲೆ ಶುರು ಆಯ್ತು invite ಗಳ ಸರಮಾಲೆ. ಗೊತ್ತಿದ್ದವರು, ಇಲ್ಲದವರು ಅಂತ ಒಂದು ರಾಶಿ.ಸ್ವಲ್ಪ ದಿನ ನಾನು ಆ ಕಡೆ ಹೋಗಲೇ ಇಲ್ಲ.

ಸುಮಾರು ಎರಡು ತಿಂಗಳ ನಂತರ ಹೋಗಿ ನನ್ನ ಪ್ರೊಫೈಲ್, ಮುಂತಾದವುಗಳನ್ನು ಸೇರಿಸಿದೆ. ನನ್ನ ಸ್ಕೂಲ್, ಕಾಲೇಜ್ ಫ್ರೆಂಡ್ಸ್ ಗಳನ್ನು ಹುಡುಕುವ ಅಂದ್ರೆ, ನಾನು ಓದಿದದ್ದು ಹೆಣ್ಣುಮಕ್ಕಳ ಶಾಲೆ ಯಲ್ಲಿ. ಎಲ್ಲರ ಮದುವೆಯಾಗಿ ಅಡ್ಡ ಹೆಸರು ಬದಲಾಗಿದ್ದರಿಂದ ಯಾರೂ ಸಿಗಲಿಲ್ಲ. ಒಬ್ಬ ಕಾಲೇಜ್ ಸ್ನೇಹಿತೆ ಮಾತ್ರ ಸಿಕ್ಕಳು, ಅದು ಅವಳು ಮದುವೆಯಾಗಿಲ್ಲದ್ದರಿಂದ. ನನಗೆಷ್ಟು ಖುಶಿಯಾಯ್ತು ಅವಳು ಸಿಕ್ಕಿದ್ದು.ಅವಳು ಅಮೇರಿಕದಲ್ಲಿದ್ದಾಳೆ. ಅವಳಿಗೂ ಬೇರೆ ಯಾರೂ ಕಾಲೇಜ್ ಮೇಟ್ಸ್ ಸಿಕ್ಕಿಲ್ಲ ಅಂತೆ. ಆದರೆ ಅವಳ ಆಫಿಸ್ ನವರೆಲ್ಲ ಫೇಸ್ ಬುಕ್ ನಲ್ಲಿರೋದರಿಂದ, ನಾವು ಇ ಮೈಲ್ ವಿನಿಮಯ ಮಾಡ್ಕೊಿಡು ಸಂಪರ್ಕದಲ್ಲಿದ್ದೇವೆ.
ಇನ್ನು ಸುಮ್ಮನೆ ಕೆಲವು ನನ್ನ random ಅನುಭವಗಳನ್ನು ಹಂಚಿಕೊಳ್ಳುತ್ತೇನೆ.
ಒಬ್ಬರ ಮೆಸೇಜ್ ಹೀಗಿತ್ತು: ನಿಮ್ಮ ಫ್ರೋಫೈಲ್ ಚಿತ್ರ ತುಂಬ ಸುಂದರವಾಗಿದೆ. ನಿಮ್ಮ ಮಕ್ಕಳಿಗಿಂತ ನಿಮ್ಮ ಗಲ್ಲ ಹೆಚ್ಚು ಕೆಂಪಗಿದೆ..
ಇನ್ನೊಂದು: ನೀವು ಫಿಗರ್ ಹೇಗೆ maintain ಮಾಡ್ತೀರಿ ಮ್ಯಾಡಂ??
ಇನ್ನೊಬ್ಬರಂತು : ನನ್ನ ಹೆಸರು ಮಾಲತಿಗಿಂತ ಹರಿಣಾಕ್ಷಿ ಅಂತ ಇರಬೇಕಿತ್ತಂತೆ…ಮತ್ತೆ ಹರಿಣಾಕ್ಷಿ ಬಗ್ಗೆ ಸ್ವಲ್ಪ explanation ಬೇರೆ!!ಇದೆಲ್ಲ ಗಂಡಸರಿಂದ ಬಂದಿದ್ದು ಅಂತ ಬೇರೆ ಹೇಳಬೇಕಿಲ್ಲವಲ್ಲ??
ಇನ್ನೊಂದು ಮೆಸೇಜ್ ಹೀಗಿತ್ತು, ನೀವು ಫೇಸ್ ಬುಕ್ ನಲ್ಲಿ ಬರದಿದ್ದರೆ ಬೇಡ, atleast ನಿಮ್ಮ ಮೈಲ್ ಐಡಿ ಆದರೂ ಕೊಡಿ ಅಂತ.
ಇನ್ನೊಮ್ಮೆ ನನ್ನ ಅತ್ಯಂತ ಪ್ರಿಯ ಸ್ನೇಹಿತೆ ಬಾಸ್ ನ ಮೆಸೇಜ್, ನನ್ನನ್ನು ಕಂಡಾಪಟ್ಟೆ ಹೊಗಳಿ, ನನ್ನ ಅಭ್ಯಂತರ ಏನಿಲ್ಲದಿದ್ದರೆ ಅವರ ಫ್ರೆಂಡ್ ಶಿಫ್ request accept ಮಾಡಲು ಬರೆದಿದ್ದರು. ಹೇಗೂ ಎಲ್ಲ notification ಜಿ ಮೈಲ್ ನಲ್ಲಿ ಬರೋದರಿಂದ, ಆ ಮೈಲ್ ನನ್ನ ಗೆಳತಿಗೆ forward ಮಾಡಿದೆ. ಗೆಳತಿಗೆ ಶಾಕ್ ಮಾತ್ರ ಅಲ್ಲ, ಬಿಸಿ ತುಪ್ಪ, ಯಾಕೆಂದರೆ ಅವರು ಬಾಸ್ ಬೇರೆ!ಗೆಳತಿಗೆ ತೊಂದರೆ ಆಗುವುದು ನನಗೆ ಇಷ್ಟವಿರಲಿಲ್ಲ, ಅದಕ್ಕೆ ಸುಮ್ಮನಾದೆ!ಇತ್ತೀಚಿಗೆ ರಿಟಯರ್ ಆದರು ಅವರು. ಮೊನ್ನೆ ಪುನಃ ಅವರ request ಇತ್ತು. ಈಗ ಅವರನ್ನು ಬ್ಲಾಕ್ ಮಾಡಿದ್ದೇನೆ.
ಮತ್ತೊಬರ ವರಸೆ ಹೀಗೆ ಸಾಗುತ್ತದೆ: ನಾನು ಕಳುಹಿಸಿದ್ದ invite ನೀವು accept ಮಾಡಿಲ್ಲ, atleast ನಿಮ್ಮ ಮುಖ ಕಾಣಿಸುತ್ತಿರುವ ಫ್ರೋಫೈಲ್ ಪಿಕ್ಚರ್ ನಾದ್ರೂ ಹಾಕಿ. ದಿನ ಬೆಳಿಗ್ಗೆ ಒಂದು ಸಲ ನಿಮ್ಮ ಮುಖ ನೋಡಿದ ಹಾಗೆ ಆಗುತ್ತೆ ಅಂದಾಗ ನಾನೇನಾದ್ರು ದೇವತೆ ಗೀವತೆ ಆಗಿಬಿಟ್ಟಣಾ ಅನ್ನಿಸಿಬಿಟ್ಟಿತು. ಆಗ ನಾನು ಫ್ರೋಫೈಲ್ ಚಿತ್ರದಲ್ಲಿ ಲಾಲಬಾಗ್ ನ scenery ಚಿತ್ರ ಹಾಕಿದ್ದೆ.
ನಾನು ಮಕ್ಕಳ ಜತೆ ಇಂತಹ ಮೆಸೇಜ್ ಗಳನ್ನು ಶೇರ್ ಮಾಡಿ ಎಂಜಾಯ್ ಮಾಡ್ತೇನೆ. ಅಂತಹ ವ್ಯಕ್ತಿಗಳನ್ನು block ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ.

ನನ್ನ mouse has a mind of its own. ಯಾವುದೇ ವಿಷಯದ ಮೇಲೆ ಕರ್ಸರ್  ಜಾಸ್ತಿ ಹೋವರ್ ಆದ್ರೆ, ತನ್ನಷ್ಟಕ್ಕೆ ಆ ಲಿಂಕ್ ಮೇಲೆ ಕ್ಲಿಕ್ ಮಾಡುತ್ತೆ.  ಅದರ ಮೂಲಕ ನನಗೆ ಆಶಾ ಎನ್ನುವವರು ಪರಿಚಯ ಆಗಿದೆ. ಅವರ ವಾಲ್ ಪೋಸ್ಟ್ ಯಾವತ್ತೂ humorous ಆಗಿರತ್ತೆ. ಇನ್ನೊಬ್ಬರು ಭಾರತಿ ಘನಶ್ಯಾಮ್. ಇವರಿಬ್ಬರೂ ನನಗಿಷ್ಟ. ಮತ್ತೆ ನನ್ನ ಫ್ರೆಂಡ್ಸ್ ಲಿಸ್ಟ್ ನಲ್ಲಿರೋರೆಲ್ಲ ಅವರೆ invite ಮಾಡಿದ್ದು ವಿನ: ನಾನಾಗಿ freindship ಆಮಂತ್ರಣ ಕಳುಹಿಸಿದ್ದು ಶ್ರೀಕಾಂತ ಬೇಡತೂರ ಮತ್ತು ಅನು ಪಾವಂಜೆಯವರಿಗೆ ಮಾತ್ರ. ಒಬ್ಬ ನನ್ನ ಫೇಸ್ ಬುಕ ಫ್ರೆಂಡ್ ಅಂತೂ ನಾನು ಕಮೆಂಟ್ ಹಾಕಿದ ಕಡೆ ಎಲ್ಲ ಲೈಕ್ ಹಾಕಿ ಬರುತ್ತಾರೆ. ನನ್ನ faithful ಅನುಯಾಯಿ ಅಂತ ಅವರಿಗೆ ನಾನು, ಮಕ್ಕಳು ಹೆಸರಿಟ್ಟಿದ್ದೇವೆ. ಅವರು ನನ್ನ ಬ್ಲಾಗ್ ಓದುಗರು ಕೂಡ. ಈ ಪೋಸ್ಟ್ ಓದಿ ನನ್ನನ್ನು unfriend ಮಾಡಲೂ ಬಹುದು ಆದರೆ ನಿಜ ಹೇಳಿ ಬಿಡ್ತೇನೆ, ಐ ಹೇವ್ ಕಮ್ ಟು ಲೈಕ್ ಹಿಂ ಎ ಲಾಟ್. 🙂

ಫೇಸ್ ಬುಕ್ ಸೇರಿಕೊಂಡ ಮೊದಲಿಗೆ ನಾನು ‘ಅವರು ಇವರಇವರು ಅವರ  ಫ್ರೆಂಡ್ ಅಂತೆಲ್ಲ accept ಮಾಡ್ಕೊಂಡು ಬಿಡ್ತಿದ್ದೆ.  ಮತ್ತೆ ನನ್ನ ಪರಿಚಯದಿಂದ ಅವರು ನಿಹಾಗೆ friends invtie  ಕಳುಹಿಸಿದ್ದಾಗ, ’ಅಮ್ಮ ಇವರ್ಯಾರು? ನೀನು common friend ಅಂತೆ ಅಂತ ಕೇಳಿದ್ಲು. ನನಗೊತ್ತಿಲ್ಲ ಅಂದೆ. ಮತ್ತೆ ಗೊತ್ತಿಲ್ಲದವರನ್ನೆಲ್ಲ ಫ್ರೆಂಡ್ಸ್ ಮಾಡ್ಕೊಂಡಿದ್ದೀಯಾ?? ಫೇಸ್ ಬುಕ್ ಓಪನ್ ಮಾಡು ನೋಡುವಾ ಅಂತ ಹೇಳಿ, ಇವರು ಯಾರು ಅಂತ ಕೇಳಿದ್ಲು. ನನಗೆ ಗೊತ್ತಿಲ್ಲ ರಘು ಮಾಮನ ಫ್ರೆಂಡ್ ಅಂತ accept ಮಾಡ್ದೆ ಅಂತ ಹೇಳಿದೆ. No, this is not done ಅಂತ ನನಗೆ direct ಪರಿಚಯ ಇಲ್ಲದವರ ಹೆಸರನ್ನೆಲ್ಲ unfriend ಮಾಡಿ ನನ್ನ ಫ್ರೆಂಡ್ಸ್ ಲಿಸ್ಟ್ 300 ರಿಂದ 75 ಕ್ಕೆ ಇಳೀತು, 🙂 ಮತ್ತೆ ಕೆಲವರನ್ನೆಲ್ಲ  ಫೇಸ್ ಬುಕ್ ತನ್ನಿಂತಾನೆ ಡಿಲೀಟ್ ಮಾಡಿದೆ ಅದರಲ್ಲಿ ನನ್ನ ಕಸಿನ್ ಜಯಮಾಲ ಕೂಡ. ಅದೂ ಅವಳು ಹೇಳಿಯೇ ನನಗೆ ಗೊತ್ತಾಗಿದ್ದು. ಅವಳು ಅಷ್ಟೊಂದು active ಇಲ್ಲ ಮತ್ತು ನಮ್ಮ ಪರಸನಲ್ ಮೈಲ್ ಐಡಿ ಇರೋದ್ರಿಂದ ನಾವು ಪುನ: ಫೇಸ್ ಬುಕ್ frienship ಮಾಡ್ಕೊಂಡಿಲ್ಲ.
ನನ್ನ ಫೇಸ್ ಬುಕ್ ಅಕೌಂಟ್ ನಲ್ಲಿರುವ ಹೆಚ್ಚಿನವರು ನನ್ನ ಬ್ಲಾಗ್ ಓದುಗರು, ಅವರು ಬಿಟ್ಟರೆ ನನ್ನ family members ಮತ್ತು ಕೆಲವು ಕೊಂಕಣಿ/ತೀರ್ಥಹಳ್ಳಿಯವರು.ಹೆಂಗಸರ ಪ್ರೆಂಡಶಿಪ್ ಆಮಂತ್ರಣ ನಾನು accept ಮಾಡುತ್ತೇನೆ!!:-)
ಕೆಲವರು ಸಿಂಪಲ್ ಮೆಸೆಜ್ ಗಳಾದ good morning/good evening/how are you ಮುಂತಾದವುಗಳನ್ನು, ಅಥವಾ ನಾನು ವಾಲ್ ನಲ್ಲಿ ಬರೆದುದನ್ನು ಓದಿ ಅದರ ಕಮೆಂಟನ್ನು ಮೆಸೇಜ್/ಇನ್ ಬಾಕ್ಸ್ ನಲ್ಲಿ ಕಳಿಸುತ್ತಾರೆ. ಮತ್ತು ಬದರಿನಾಥ ಪಲವಳ್ಳಿ ಯವರು ನನ್ನ ಬ್ಲಾಗ್ ಪೋಸ್ಟ್ ಕೆಲವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರಿಂದ ನನ್ನ ಬ್ಲಾಗ್ ಗೆ ತುಂಬ visitors ಬಂದು ಹೋಗ್ತಿದ್ದಾರೆ!!
ಒಂದು ಬಾರಿ ನನ್ನ ಮೌಸ್ ಚ್ಯಾಟ್ ಮೇಲೆ ಹೋವರ್ ಆಗಿ ಅದು ಓಪನ್ ಆಗಿ ಒಂದೆ ಸಲಕ್ಕೆ ನಾಲ್ಕು ಜನ ಚ್ಯಾಟ್ ಗೆ ಬಂದು ನಾನು ಹೌಹಾರಿದೆ. ಅದನ್ನು ಹೇಗೆ ಕ್ಲೋಸ್ ಮಾಡೋದು ನನಗೆ ಗೊತ್ತಾಗದೇ, ಓದುತ್ತ ಕೂತ ನೀಹಾ ಗೆ ಹೆಲ್ಪ್ ಮಾಡಲು ಕೂಗ ಬೆಕಾಯಿತು 😦 ನನಗೆ ಇನ್ನೂ 452 ಫ್ರೆಂಡ್ ಶಿಪ್ request ಗಳು ಪೆಂಡಿಂಗ್ ನಲ್ಲಿವೆ. ನನ್ನ ಆಫಿಸ್ ನ ಸಾವಿತ್ರಿಯನ್ನು ಬಿಟ್ಟು, ಯಾರನ್ನು ಫ್ರೆಂಡ್ಸ್ ಮಾಡ್ಕೊಂಡಿಲ್ಲ 🙂 ಮತ್ತೀಗ ಗ್ರೂಪ್ ಮಾಡ್ಕೊಂಡು ನಮ್ಮನ್ನು ಕೇಳದೆಯೆ ಅದರಲ್ಲಿ ಸೇರಿಸ್ತಾರೆ, ಅದರಿಂದ ತುಂಬ ಕಿರಿಕಿರಿ ಯಾಗುತ್ತೆ, ಮೈಲ್ ನಲ್ಲಿ ಅದರದ್ದೆ notification ನಿಂದ ಕೆಲವು ಮುಖ್ಯವಾದ ಮೈಲ್ ಕಳೆದುಹೋಗಿ ಬಿಡುತ್ತೆ. ಆದರೂ ಅಂತಃಪುರ ಎಂಬ secret ಗ್ರೂಪ್ ಗೆ ನನ್ನನ್ನು ಸೇರಿಸಿದ್ದಾರೆ, ladies only…ಅದು ನನಗೆ ತುಂಬ cosy, ಇಷ್ಟ ಆಗಿದೆ!! ಇದೆಲ್ಲರ ನಡುವೆ ಶ್ರೀಕಾಂತ ರಾಯ್ರರು ಫೇಸ್ ಬುಕ್ ಸೇರಿ password ಮರೆತೂ ಆಯಿತು. ನಾನು ಮಕ್ಕಳು ಸುಮಾರು ಪ್ರಯತ್ನ ಮಾಡ್ವಿದ್ದೇವೆ account /paasword recovery ಸರಿ ಪಡಿಸಲು, ಆದರೆ ಅಗಿಲ್ಲ. ನಿಮಗೇನಾದರೂ ಉಪಾಯ ಗೊತ್ತಾ??
ನನಗೆ ಫೇಸ್ ಬುಕ್ ಜಾಯಿನ್ ಆಗಲು ಹೇಳಿದ ತಮ್ಮ, ಅವನು ಫೇಸ್ ಬುಕ್ ಜಾಯಿನ್ ಆಗಲಿಲ್ಲ ಮಾತ್ರವಲ್ಲ, ಅವನ ಆಫಿಸ್ ನಿಂದ ಫೇಸ್ ಬುಕ್ access ಬಂದ್ ಮಾಡುವುದರಲ್ಲಿದ್ದಾನೆ. ನಮ್ಮ ಬೆಂಗಳೂರಿನ ಆಫಿಸ್ ನಲ್ಲೂ ಕೂಡ after office hours ಫೇಸ್ ಬುಕ್ ಮುಂತಾದವುಗಳನ್ನು ನೋಡಬೇಕಂತೆ 🙂 ಕೆಲವೊಮ್ಮೆ ವಾಲ್ ಪೋಸ್ಟ್ ಗಳಿಗೆ ಯಾವುದೇ ಕಾಮೆಂಟ್ , like ಮುಂತಾದವುಗಳು ಇರಲ್ಲ. ಫ್ರೆಂಡ್ ಜತೆ ಚಾಟ್ ಮಾಡುವಾಗ ಅವನಿಗೆ ಹೇಳಿದ್ರೆ…ನಮ್ಮ wall post ಗೆ ನಾವೆ ‘like’ ಹಾಕ್ಕೊಂಡ್ರೆ ಬೇರೆ ಜನರಿಗೆ ಅದು visible ಆಗುತ್ತೆ ಅಂತೇನೋ ಹೇಳ್ದ. yeow , no body can be that desperate ಅಂತ ಸುಮ್ಮನಾದ್ರೂ, ಕೆಲವರು ತಮ್ಮ ತಮ್ಮ ಲಿಂಕ್ ಗೆ ತಾವೇ like ಹಾಕೋದು ನೋಡಿದ್ದೇನೆ!!
ಕೆಲವೊಮ್ಮೆ ನಾನು ಯಾರೂ ಓದಲ್ಲ ಅಂತ ಸುಮ್ಮನೆ ವಾಲ್ ನಲ್ಲಿ ಬರೆದದ್ದಕ್ಕೆ ತುಂಬ ಜನ ಪ್ರತಿಕ್ರಿಯಿಸಿದ್ದಾರೆ!!ಇನ್ನೊಬ್ಬ ಗೆಳತಿ ಬ್ಲಾಗ್ ಮೂಲಕ ಪರಿಚಯವಾದವಳು, graphic artist..ಅವಳಿಗೆ ಅವಳ art ಗಳನ್ನೆಲ್ಲ ಫೇಸ್ ಬುಕ್ ನಲ್ಲಿ ಹಾಕುವ suggestion ನಿಂದಾಗಿ ಈಗ ಅವಳು freelance ಅರ್ಟಿಸ್ಟ್ ಆಗಿ ತುಂಬ demand ನಲ್ಲಿದ್ದಾಳೆ. ಅವಳಿಂದ ಪದೇ ಪದೇ ಥ್ಯಾಂಕ್ಸ್ ಮಲತಿ ಯಕ್ಕ ಇರುತ್ತವೆ.

ನಿನ್ನೆ ಅಪಾರ ರಘು ಅವರ ಕವರ್ ಪೇಜ್ ನೋಡಿ ಅವರಿಗೆ ಫೋನಾಯಿಸಿ, ಚಂದದ ಪುಟಕ್ಕೆ ಅಭಿನಂದಿಸಿ, ‘ನಾನು ಫೇಸ್ ಬುಕ್’ ವಿಷಯ ನನ್ನ ಬ್ಲಾಗ್ ನಲ್ಲಿ ಹಾಕಬೇಕೆಂದಿದ್ದೆ, ಆದರೆ ಜೋಗಿ ನನ್ನನ್ನು ಬೀಟ್ ಮಾಡಿದ್ರು ಅಂದಾಗ ಅವರು, ‘ಮಾಲತಿ, ಅವರು ಬರೆದಿರೋದು fiction, ನೀವು ನಿಮ್ಮ ಅನುಭವಗಳ ಆಧಾರದ ಮೇಲೆ ಬರೆಯುವುದಲ್ಲವಾ? ಬರೀರಿ,  ಅಂದಿದಕ್ಕೆ ಇದನ್ನು ಬರೆದು 25 ಕ್ಕೆ ಜೋಗಿಯವರ ಪುಸ್ತಕ  ಬಿಡುಗಡೆಯಾಗುವ ಮುಂಚೆ ನನ್ನ ಪೋಸ್ಟ್. ಏನಿದ್ದರು psychological study ಗೆ ಒಳ್ಳೆಯ ವಿಷಯ ಅನ್ನುತ್ತಾಳೆ ನನ್ನ ನಿಹಾರಿಕ…ಫೇಸ್ ಬುಕ್ ನಲ್ಲಿ ಪರಿಚಯರಾದವರಿಬ್ಬರು ನನಗೆ ತುಂಬ ಆತ್ಮೀಯ ರಾಗಿದ್ದಾರೆ!! ನಿಮಗೆಲ್ಲರಿಗೂ ಮೆರ್ರಿ ಕ್ರಿಸ್ ಮಸ್ ಮತ್ತು 2012 ಹೊಸ ವರ್ಷದ ಶುಭಾಶಯಗಳು, ನಮ್ಮ ಮುಂದಿನ ಭೇಟಿ ಮುಂದಿನ ವರ್ಷ ನಾನೇ ಡಿಸೈನ್ ಮಾಡುತ್ತಿರುವ ನನ್ನ website ನಲ್ಲಿ  ಬರಲಾ….. 🙂

* * * * * * * *

ಚಿತ್ರ ಕೃಪೆ : ಮಾಲತಿ ಎಸ್

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments