“ಯೂನಿವರ್ಸಲ್ ಬ್ರದರ್ಹುಡ್” ಬರೀ ಬೂಟಾಟಿಕೆಯೇ ?
-ಸಾಗರ್ ಮೈಸೂರು
ಸ್ವಾಮೀ,
ಯಾಕೆ ಮುಗ್ಧ ಜನರ ತಲೆಯಲ್ಲಿ ವಿಷದ ಬೀಜ ಬಿತ್ತುತ್ತಿದ್ದೀರಿ? ನೀಮಗೂ ಭಯೋತ್ಪಾದಕರನ್ನು ಹುಟ್ಟು ಹಾಕುವ ಮುಲ್ಲಾ ಗಳಿಗೂ ಅಥವಾ ಭಾಷಾ ದುರಭಿಮಾನಿಗಳಿಗೂ ಏನು ವ್ಯತ್ಯಾಸ? ಸಾಮರಸ್ಯದಿಂದ ಬದುಕುವ ಬಗೆ ಹೇಗೆಂದು ತಿಳಿದಿದ್ದರೆ ಬರೆಯಿರಿ. ಇಲ್ಲಾಂದ್ರೆ ಸುಮ್ಮನಿರಿ. ನಿಮ್ಮನ್ತವರನ್ತು ಬರೆದು , ಬೆಂಕಿ ಹಚ್ಚಿ ತಣ್ಣಗೆ ಕುಳಿತು ಚಂದ ನೋಡುತ್ತಿರಿ. ಅಮಾಯಕರು ನಿಮ್ಮಿಂದ ಪ್ರೇರಿತರಾಗಿ ಯಾರದೋ ಮೈಮೇಲೆ ಬಿದ್ದು ಸಮಾಜದ ಶಾಂತಿ ಕದದುತ್ತಾರೆ ಅಥವಾ ಜೀವ ಬಿಡುತ್ತಾರೆ. ದುರಭಿಮಾನ, ಭಯೋತ್ಪಾದನೆ ಹುಟ್ಟುವುದು ಮೊದಲು ಮನಸ್ಸಿನಲ್ಲಿ. ಪ್ರೇರಿತರದವರು ಕೆಲವರು ಚಾಕು ಬಳಸುತ್ತಾರೆ, ಕೆಲವರು ಬಾಂಬು ಹಾಕುತ್ತಾರೆ, ಅವರವರ ಯೋಗ್ಯತೆಗೆ ತಕ್ಕಂತೆ. ನಿಮ್ಮಂಥವರು ಚಂದ ನೋಡುತ್ತೀರಿ.
“ಬೆಂಗಳೂರಿನ ಜುಟ್ಟು ಈಗಾಗಲೇ ರೆಡ್ಡಿಗಳ ಕೈಯ್ಯಿಗೆ ಕೊಟ್ಟಾಗಿದೆ” ಎಂದು ಮಹಾನ್ ಮೇಧಾವಿಯೊಬ್ಬರು (ಹಾಗೆಂದು ತಿಳಿದ) ಹೇಳಿದಾಗ ಅದ್ಯಾವನೋ ‘ವಿಷ್ಣು’ ಎಂಬುವವ ನೀಡಿದ್ದ ‘ಪ್ರತಿಕ್ರಿಯೆ’ ಅದು! ಹೌದಾ?! ಅದು ನಿಜಾನಾ? ನಮ್ಮ ಬೆಂಗಳೂರನ್ನ ನಿಜವಾಗಿಯೂ ‘ಅನ್ಯರು’, ‘ಕನ್ನಡೇತರರು’ ಆಳುತ್ತಿದ್ದಾರಾ ಎಂಬ ಪ್ರಶ್ನೆಯನ್ನ ನಮಗೆ ನಾವೇ ಹಾಕಿಕೊಂಡು serious ಆಗಿ ‘ಪರೀಕ್ಷಿಸಲು’ ಹೊರಟರೆ ಆ ‘ವಿಷ್ಣು’ ಎಂಬುವವನ ‘ಅಡ್ರಸ್ಸ್ ಹುಡುಕು’ವ ಮನಸ್ಸಾಗುತ್ತದೆ! ಅವನಿಗೊಂದು ವಿಶೇಷವಾದ ‘ದೊಣ್ಣೆ’ ರೆಡಿಮಾಡಿಸುವ ಕನಸು ಮೂಡುತ್ತದೆ!! ಆ ಮೇಧಾವಿ ಎಂಬ ಪತ್ರಕರ್ತ ಯಾವಾಗ ನೋಡಿದರೂ ‘ಭಾರತ’, ‘ಭಾರತೀಯತೆ’ ಎಂದು ಕಿರುಚಾಡುವವ. ಅಂಥವನೇ “ಪರಭಾಷಿಕರನ್ನ ಮಟ್ಟ ಹಾಕದಿದ್ದರೆ ಅಪಾಯ ತಪ್ಪಿದ್ದಲ್ಲ” ಎಂಬ ಸತ್ಯವನ್ನ ಕಂಡುಕೊಂಡಿದ್ದಾನೆ ಎಂದರೆ, ಅದರ ಮಹತ್ವವನ್ನ ನೀವೇ ಅರ್ಥಮಾಡಿಕೊಳ್ಳಿ.
“ಬೆಂಗಳೂರಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವವರು ವಲಸಿಗರು. ಬೆಂಗಳೂರಿನಲ್ಲಿ ಯಾವುದೇ ಐಶಾರಾಮಿ ವಾಹನಗಳು, ಭಾರೀ ಬಂಗಲೆಗಳು, ‘exotics’ ಗಳನ್ನ ನೋಡಿದಾಗ ಅದು ನಮ್ಮವರದ್ದಲ್ಲ ಎಂದು ಥಟ್ ಅಂತ ಹೇಳಿಬಿಡಬಹುದು” ಎಂದು ಹಿಂದೊಮ್ಮೆ ನಾವು ಹೇಳಿದ್ದೆವು. ಹಾಗೆ ಹೇಳಿದ್ದಾಗಲೂ ‘ವಿಷ್ಣು’ ವಿನವನಂತಹ ಪ್ರತಿಕ್ರಿಯೆಗಳು ಬಂದಿದ್ದವು. ಇದೊಂತರ ‘ಸಿನಿಕತೆ’, ‘ವಿಷ ಬೀಜ’ ಎಂಬಂತಹ ಪ್ರತಿಕ್ರಿಯೆಗಳು ಬಂದಿದ್ದವು.
ಮೊನ್ನೆ ಮೂರು ಕೋಟಿ ರೂಪಾಯಿಯ ಕಾರೊಂದನ್ನ ನೋಡಿದಾಗಲೂ ಥಟ್ ಅಂತ ಮನಸ್ಸಿನಲ್ಲಿ ಬಂದಿದ್ದೇನೆಂದರೆ “ಅದು 100% sure ನಮ್ಮವರದ್ದಲ್ಲ, ಅದು ಯಾವನೋ ವಲಸಿಗನ ಕಾರು” ಎಂದು! ಮನಸ್ಸಿಗೆ ಹಾಗೆ ಬಂದಕೂಡಲೇ ‘ವಿಷ್ಣು’ ವಿನ ‘ವಿಷ’, ಇತರರ ‘ಸಿನಿಕತೆ’, ‘ವಿಷ ಬೀಜ’ ಪ್ರತಿಕ್ರಿಯೆಗಳು ನೆನಪಿಗೆ ಬಂದವು. ಸುಮ್ಮನೆ ಯಾಕೆ ನಮಗೂ ಅವರಿಗೂ ಜಗಳ? Verify ಮಾಡಿಯೇ ಬಿಡೋಣ ಅಂತ RTO ನಲ್ಲಿ ಚೆಕ್ ಮಾಡಿದರೆ, ಆ ಮೂರು ಕೋಟಿ ರೂಪಾಯಿಯ ವಾಹನ “ಪ್ರಸಾದ್ ರೆಡ್ಡಿ” ಎಂಬ ಆಂಧ್ರವಾಡು ಒಬ್ಬನಿಗೆ ಸೇರಿದ್ದು ಎಂಬ ‘ಸತ್ಯ’ ಗೊತ್ತಾಯಿತು!! ಏನಂತೀರಿ? ಅದರ ಮಾರನೇ ದಿನ ಹಾಗೇ ವಾಯುವಿಹಾರಕ್ಕೆ ಹೊರಟಾಗ ಅರಮನೆಯಂತಹ ಭವ್ಯ ಬಂಗಲೆ ಯೊಂದು ನಮ್ಮ ಕಣ್ಣಿಗೆ ಬಿತ್ತು. ಆ ಅರಮನೆಯ ಮುಂದೆ ಸುಮಾರು ಎಂಬತ್ತು ಲಕ್ಷ ರೂಪಾಯಿಯ ‘ರಥ’ವೊಂದು ನಿಂತಿತ್ತು. ಅದರ ನೊಂದಣೆ ಸಂಖ್ಯೆಯನ್ನ ನೋಡಿದಾಗ KA 17 ಎಂದಿತ್ತು! ಒಂದು ಕ್ಷಣ ‘ಆನಂದ’ ವಾಯಿತು! ಅಂತು ಯಾರೋ ದಾವಣಗೆರೆಯವರೊಬ್ಬರು ಇಲ್ಲಿ ಅರಮನೆಯನ್ನ ಕಟ್ಟಿಸಿದ್ದಾರಲ್ಲಪ್ಪಾ ಎಂದು ಖುಷಿಯಾಯಿತು!! ಆದರೆ ಹತ್ತಿರ ಹೋಗುತ್ತಿದ್ದಂತೆ ಅದೇನೋ ‘ಇಕ್ಕಡ ಪಕ್ಕಡ ಚೂಸು ಪೋಸು’ ಎಂಬ ಪದಗಳು ಕಿವಿಗೆ ಬಿದ್ದವು! ಅರೆ! ಇದೇನಿದು ನಮ್ಮ ದಾವಣಗೆರೆಯವರು ‘ಮುಕ್ಕಡ ಪಕ್ಕಡ ತಿಕ್ಕಡ ತೊಕ್ಕಡ’ ಎಂದು ಏನೇನೋ ಅರ್ಥವಾಗದ ಪದ ಮಾತನಾಡುತ್ತಿದ್ದಾರಲ್ಲ?! ಎಂದರೆ ದಂಗಾಗಿ ಹೋಗುವ ಸರದಿ ನಮ್ಮದಾಗಿತ್ತು!! ಆ ‘ಅರಮನೆ’ “ರಾಜ ಗೋಪಾಲ ರೆಡ್ಡಿ” ಎಂಬ ಮತ್ತೊಬ್ಬ ಆಂಧ್ರವಾಡು ನವನದ್ದು!! ಅದನ್ನ ನೋಡಿದಮೇಲೆ “ರಾಜ ಗೋಪಾಲ ರೆಡ್ಡಿ?!”, “ದಾವಣಗೆರೆ?!” ಎಂಬ ಪ್ರಶ್ನೆಗಳು!! ನಂಬಿದರೆ ನಂಬಿ ಬಿಟ್ಟರೆ ಬಿಡಿ! ಅಲ್ಲೇ ಮತ್ತಷ್ಟು ಮುಂದೆ ಸಾಗಿದ ನಮಗೆ ಮತ್ತೊಬ್ಬ ಸುಮಾರು ಒಂದು ಕೋಟಿ ಬೆಲೆಯ ವಾಹನವನ್ನ ವೈನ್ ಸ್ಟೋರ್ ಮುಂದೆ ನಿಲ್ಲಿಸಿಕೊಂಡಿದ್ದ. ಅವನ ಪಕ್ಕದಲ್ಲೇ ಹಾದು ಹೋದಾಗ “ದಾವಣಗೆರೆಯವನ ಮನೆ” ಮುಂದೆ ಕೇಳಿಸಿದಂತಹ ಪದಗಳೇ ಕೇಳಿಸಿದವು ಎಂದರೆ ಬಹುಷಃ ನೀವು ನಂಬಲಿಕ್ಕಿಲ್ಲವೇನೋ!! ಇದನ್ನೆಲ್ಲಾ ನೋಡಿದ ಮೇಲೆ, “ಬೆಂಗಳೂರಿನ ಜುಟ್ಟು ಈಗಾಗಲೇ ರೆಡ್ಡಿಗಳ ಕೈಯ್ಯಿಗೆ ಕೊಟ್ಟಾಗಿದೆ” ಎಂಬ ಹೇಳಿಕೆಯನ್ನ “ಕರ್ನಾಟಕದ ಜುಟ್ಟು ಎಂದೋ ರೆಡ್ಡಿಗಳ ಕೈಯ್ಯಿಗೆ, ‘ಅನ್ಯರ’ ಕೈಯ್ಯಿಗೆ ಕೊಟ್ಟಾಗಿದೆ” ಎಂದು ಬದಲಿಸಲು ‘confidence’ ಮೂಡಿತು!!
‘ಭಾರತ’, ‘ಭಾರತೀಯತೆ’ ಎಂದು ಯಾವಾಗಲೂ ಕೂಗಾಡುವ ಪತ್ರಕರ್ತರೊಬ್ಬರು 2008 ರಲ್ಲಿ ಬರೆದಿದ್ದ ಅಂಕಣದಲ್ಲಿ ಬಹಳ ಇಷ್ಟವಾಗುವುದೇನೆಂದರೆ ಕಡೆಯಲ್ಲಿ -“ಯೂನಿವರ್ಸಲ್ ಬ್ರದರ್ಹುಡ್” ಬಗ್ಗೆ ಎಷ್ಟೇ ಮಾತನಾಡಿದರೂ ಕೊನೆಗೆ ಅಪ್ಪನ ಆಸ್ತಿಗಾಗಿ ಅಣ್ಣತಮ್ಮಂದಿರೇ ಹೊಡೆದಾಡುವಂತೆ “ಸ್ಥಳೀಯರ ಕೂಗು” ಎನ್ನುವುದೂ ಇರುತ್ತದೆ. ಈ ಬೆಂಗಳೂರು ನಮ್ಮದು, ನಮ್ಮ ಕೆಂಪೇಗೌಡ ಕಟ್ಟಿದ್ದು, ನಮ್ಮ ವಿಶ್ವೇಶ್ವರಯ್ಯ ಬೆಳೆಸಿದ್ದು, ನಮ್ಮ ಕನ್ನಡನಾಡು ಎಂದು ಹಕ್ಕು ಪ್ರತಿಪಾದನೆ ಮಾಡುವುದರಲ್ಲಿ, ಪರ ಭಾಷಿಕರ ಸೊಕ್ಕು ಮುರಿಯಬೇಕೆನ್ನುವುದರಲ್ಲಿ ಯಾವ ತಪ್ಪೂ ಇಲ್ಲ! ಅಂದಹಾಗೆ, ನಾವಂತೂ ‘verification’ ಮಾಡಿ ಮುಗಿಸಿ ‘conclusion’ ಗೆ ಬಂದಿದ್ದೇವೆ. ಆದಷ್ಟು ಬೇಗ ನೀವೂ ಬಂದುಬಿಡಿ! ಹ್ಹ ಹ್ಹ ಹ್ಹ ಹ್ಹ….!
*************
ಚಿತ್ರಕೃಪೆ : tc.pbs.org