–ರವಿ ಸಾವ್ಕರ್

ಒಬ್ಬ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ಮೋಸವಾಗದಂತೆ ರಕ್ಷಣೆ ಕೊಡಲು “Consumer Protection Act” ಮಸೂದೆಯನ್ನು 1986 ನಲ್ಲಿ ಅಂಗೀಕರಿಸಲಾಯಿತು. ಒಬ್ಬ ಕನ್ನಡಿಗನಿಗೆ ಗ್ರಾಹಕ ಸೇವೆಗಳನ್ನು ಕನ್ನಡದಲ್ಲೇ ಪಡೆಯಲು ಈ ಮಸೂದೆ ಹೇಗೆ ಸಹಕಾರಿಯಾಗಿದೆ ಎಂದು ನೋಡೋಣ.
“Consumer Protection Act” ನಲ್ಲಿ ಗ್ರಾಹಕನ ಕೆಲ ಮೂಲಭೂತ ಹಕ್ಕನ್ನು ಹಾಗೂ ಅವುಗಳನ್ನು ಬಳಸಿಕೊಳ್ಳಬಹುದಾದ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡೋಣ.
(a) the right to be protected against the marketing of goods and services which are hazardous to life and property;
ಒಬ್ಬ ಗ್ರಾಹಕನಿಗೆ ತನ್ನ ಜೀವಕ್ಕೆ ಅಥವಾ ತನ್ನ ಆಸ್ತಿಗೆ ಹಾನಿ ತರಬಹುದಾದ ಸಾಮಗ್ರಿಗಳ ಮಾರಾಟದಿಂದ ರಕ್ಷಣೆ ಪಡೆಯುವ ಹಕ್ಕು ಇದೆ. ಆದರೆ ನಾವು ದಿನ ನಿತ್ಯ ಬಳಸುವ ಅಡುಗೆ cylinder ಗಳಲ್ಲಿ, ದೀಪಾವಳಿಯಲ್ಲಿ ಸುಡುವ ಪಟಾಕಿಗಳ ಸೂಚನೆಗಳ ಮೇಲೆ , ಔಷಧಿಗಳಲ್ಲಿ ಕನ್ನಡದ ಸೂಚನೆಗಳು ಇಲ್ಲದಾಗಿದೆ. ಸರಿಯಾಗಿ ಬಳಸಲು ಸೂಚನೆಗಳು ಗ್ರಾಹಕರಿಗೆ ಕೊಡದೆ ಇದ್ದುದರಿಂದ ,ಈ ವಸ್ತುಗಳ ಬಳಕೆಗಳಿಂದ ಜನರ ಆಸ್ತಿಗೆ ಅಥವಾ ಜೀವಕ್ಕೆ ಹಾನಿ ಉಂಟಾಗಬಹುದು. ಹಾಗಾಗಿ ಈ ಎಲ್ಲ ವಸ್ತುಗಳ ಮೇಲೂ ಸಹ ಕನ್ನಡದ ಸೂಚನೆ ಇರಲೆಬೇಕಾಗಿದೆ. ವಿಮಾನಗಳಲ್ಲಿ , ರೈಲುಗಳಲ್ಲಿ ,ಸುರಕ್ಷತಾ ಸೂಚನೆಗಳು ಹಾಗೂ ಘೋಷಣೆಗಳು ಇದಕ್ಕೆ ಹೊರತಲ್ಲ
(b )the right to be informed about the quality, quantity, potency, purity, standard and price of goods or services, as the case may be so as to protect the consumer against unfair trade practices;
ಗ್ರಾಹಕನಿಗೆ ತಾನು ಕೊಳ್ಳುತ್ತಿರುವ ಸಾಮಗ್ರಿಯ ಬಗೆಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ಇದೆ. ಅದು ಒಂದು ಶಾಂಪೂ ಆಗಿರಬಹುದು, ಟೀವಿ, ವಾಶಿಂಗ್ ಮಚಿನ್ ಆಗಿರಬುದು, ready to eat ಪ್ಯಾಕೆಟ್ ಗಳು ಆಗಿರಬಹುದು, ಅಕ್ಕಿ,ಬೆಲೆ ಕಾಲುಗಳು ಆಗಿರಬಹುದು. ಎಲ್ಲ ಸಾಮಗ್ರಿಗಳ ಮೇಲೆ ಕನ್ನಡದಲ್ಲಿ ಮಾಹಿತಿಗಳು ಇರಬೇಕು.
(c ) the right to be assured, wherever possible, access to a variety of goods and services at competitive prices;
ಮಾರುಕಟ್ಟೆಯ ಸರಕನ್ನು ಗ್ರಾಹಕರಿಗೆ ಪಡೆಯುವ ಹಕ್ಕು ಇದೆ ಎಂದು ತಿಳಿಸುತ್ತದೆ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬ್ಯಾಂಕ್ ಗಳಲ್ಲಿ ಸೇವೆಗಳನ್ನು ಕೊಡುವುದರಿಂದ ಕನ್ನಡ ಮಾತ್ರ ಬಲ್ಲ ಜನರಿಗೆ ಬ್ಯಾಂಕಿಂಗ್ ಮೊದಲಾದ ಮೂಲಭೂತ ಸೌಕರ್ಯಗಳು ಸಿಕ್ಕದಂತಾಗಿದೆ. ಈ ನಿಯಮವನ್ನು ಬಳಸಿಕೊಂಡೂ ಸಹ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೊಡಿ ಎಂದು ಕೇಳಬಹುದು. ಡಬ್ಬಿಂಗ್ ಮಾಡಲು ಬಿಡದೆ ಕನ್ನಡದ ಮನೋರಂಜನೆಯಿಂದ ಕನ್ನಡಿಗರು ವಂಚಿತರಾಗಿದ್ದಾರೆ. ಡಬ್ಬಿಂಗ್ ವಿಷಯವಾಗಿಯೂ ಈ ನಿಯಮ ಅನ್ವಯಿಸುತ್ತದೆ.
ಈ ನಿಯಮಗಳ ಉಲ್ಲಂಘನೆಯಾದರೆ ಸಮಾನ ಮನಸ್ಕರಾದ ಗ್ರಾಹಕರು ಜಿಲ್ಲಾ forum ಗಳಲ್ಲಿ ದೂರು ಕೊಡಬಹುದು ಎಂದು ಹೇಳಲಾಗಿದೆ .
one or more consumers, where there are numerous consumers having the same interest, with the permission of the District Forum, on behalf of, or for the benefit of, all consumers so interested;
ಎಲ್ಲ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ನೀತಿ ನಿಯಮಗಳು ಇವೆ. ಗ್ರಾಹಕರಾದ ನಾವುಗಳು ನಮ್ಮ ಹಕ್ಕುಗಳನ್ನು ಅರಿತು ಮಾರುಕಟ್ಟೆಯಲ್ಲಿ ಕನ್ನಡದ ಬಳಕೆ ಹೆಚ್ಚು ಹೆಚ್ಚು ಆಗುವಂತೆ ಮಾಡಬೇಕು.
* * * * * *
ಚಿತ್ರಕೃಪೆ :lawisgreek.com
Like this:
Like ಲೋಡ್ ಆಗುತ್ತಿದೆ...
Related
ರವಿಯವರೇ,
ಖಂಡಿತ, ನಿಮ್ಮ ಮಾತುಗಳು ಸತ್ಯ.ನಮ್ಮ ಹಕ್ಕುಗಳನ್ನು ಆಗ್ರಹದ ವಿಷಯವಾಗಿ ನಮ್ಮಲ್ಲೇ ಮನಪರಿವರ್ತನೆ ಮಾಡಿಕೊಂಡಾಗಲೇ, ಕನ್ನಡ ಭಾಷ ಆಡಳಿತ ಭಾಷೆಯಾಗಿ ಮಾರ್ಮಿಕವಾಗಿ ಘೋಷಿಸಿದಷ್ಟೆ ಬಂತು, ದಿನನಿತ್ಯದಲ್ಲಿ ನಾವ್ಯಾರೂ ಈ ವಿಚಾರವಾಗಿ ಆಗ್ರಹಿಸುತ್ತಲೇ ಇಲ್ಲ.
All Suppliers of Services and Products need to be aware of the implications of the CPA. Non-compliance with the Act may lead to fines which equal 10% of annual turn-over or R1 000 000, whichever is greater. Companies can also not afford the embarrassment of being caught transgressing consumer protection legislation.
Your staff and your contracts are currently your biggest source of risk if you are not prepared. We train your staff and get your contracts compliant with the act.
Our CPA Training Services
We train CPA Compliance Officers
Tailored industry specific seminars and training for your staff and management, at your office.
We will review your contracts to ensure that you comply.
Assessment and risk management in relation to products and services
We can train a member of staff to be your “CPA Compliance Officer” in your organisation
In-house training is available nationally, to small, medium and large business; including training for corporates; and all spheres of Government.