ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 1, 2012

4

ಷೇರು ಮಾರುಕಟ್ಟೆ

‍ನಿಲುಮೆ ಮೂಲಕ

-ಸಂದೀಪ್ ಬೆಂಗಳೂರು

ಸ್ಟಾಕುಗಳ ಖರೀದಿ ಮತ್ತು ಮಾರಾಟ ಮಾಡುವ ಸ್ಥಳವನ್ನು “ಷೇರು ಮಾರುಕಟ್ಟೆ” ಎಂದು ಕರೆಯುತೇವೆ .  ಒಂದು  ದೇಶದ ಆರ್ಥಿಕ ಆರೋಗ್ಯ ನಿಕಟವಾಗಿ ಷೇರುಪೇಟೆಗಳ ಮೇಲೆ ಅವಲಂಬಿತವಾಗಿರುತ್ತದೆ. Stock  ಒಂದು  ಕಂಪನಿಯ ಭಾಗಶಃ ಮಾಲೀಕತ್ವವನ್ನು ಪ್ರತಿನಿಧಿಸುವ ಒಂದು ಸಣ್ಣ ಪಾಲು. ಒಂದು ಕಂಪನಿಯು ತನ್ನ ಅಭಿವೃಧಿಗಾಗಿ ಮತ್ತು ಹೆಚ್ಹು ಬಂಡವಾಳದ ಅವಶ್ಯಕತೆಗಾಗಿ ಹಣವನ್ನು ಹೂಡಿಕೆದಾರರಿಂದ ಸಂಗ್ರಹಿಸಿ ಅದನ್ನು ಷೇರುಗಳ ರೂಪದಲ್ಲಿ  ಪರಿವರ್ತಿಸುತ್ತಾರೆ. ಇದರಿಂದ ಬಂದ ಆದಾಯದಲ್ಲಿ  ವಾರ್ಷಿಕ/ಅರ್ಧ ವಾರ್ಷಿಕಕ್ಕೆ ಒಮ್ಮೆ ಲಾಭಾಂಶವನ್ನು ಹೂಡಿಕೆದಾರರಿಗೆ ನೀಡುತ್ತಾರೆ.ಹೂಡಿಕೆ ಮಾಡುವ ಮೊದಲು ಕಂಪನಿಯ ಮೌಲ್ಯ,ಗುಣಮಟ್ಟ , ಅದರ ಹಿಂದಿನ ಆದಾಯದ ಬಗ್ಗೆ ಪರೀಕ್ಷಿಸಿ ಕೊಂಡರೆ ಉತ್ತಮ. ಷೇರುಗಳನ್ನು ಕೊಳ್ಳಲು ಅಥವಾ ಮಾರಲು ಆಯಾ ದೇಶಗಳಲ್ಲಿ ಒಂದು ನಿರ್ದಿಷ್ಟ ಮಾರುಕಟ್ಟೆಗಳಿರುತ್ತವೆ. ಉದಾ: ಬಾರತದಲ್ಲಿ  “ಬಿ.ಎಸ್.ಇ”(ಬಾಂಬೆ ಸ್ಟಾಕ್ ಎಕ್ಸ್ಚೇಂಜ್), “ಎನ್.ಎಸ್.ಇ” (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಗಳು ಇವೆ. ಹೂಡಿಕೆದಾರರು ಅವನ ವ್ಯವಹಾರಗಳಿಗೆ  ಮಧ್ಯವರ್ತಿಯನ್ನು ನೇಮಿಸಿಕೊಳಬೇಕು. ಮದ್ಯವರ್ಥಿಯು ಆಯಾ ದೇಶದ ಮಾರುಕಟ್ಟೆಗಳಲ್ಲಿ ನೊಂದಾಯಿತನಾಗಿರುತ್ತಾನೆ.

ಸ್ಟಾಕ್ ಗಳ ಬೆಲೆ ನಿಗದಿ

ಅನೇಕ ಜನರಿಗೆ ಸ್ಟಾಕ್ ಗಳ ಬೆಲೆ ಹೇಗೆ ನಿಗದಿ ಮಾಡುತ್ತಾರೆ ಎಂಬ ಗೊಂದಲವಿದೆ. ಒಂದು ಉದ್ಹಿಮೆಯ  ಬಂಡವಾಳ ಹಣದ ಒಟ್ಟು ಮೊತ್ತವನ್ನು,ಷೇರುಗಳನ್ನಾಗಿ ವಿಂಗಡಿಸಿ ಅಧಕ್ಕೆ ಒಂದು ನಿರ್ದಿಷ್ಟ ಮುಖ ಬೆಲೆಯನ್ನು ನಿಗಧಿ ಮಾಡಿ  ಅದನ್ನು ಮಾರುಕಟ್ಟೆಗೆ ಪರಿಚಿಸಲಾಗುತದೆ.ಆ ಷೇರುಗಳ ಮಾಲೀಕತ್ವವು  ಪ್ರಮಾಣಪತ್ರ ನೀಡಿಕೆಯ ಮೂಲಕ  ದಾಖಲಿಸಲಾಗುತ್ತದೆ. ಒಂದು ಸ್ಟಾಕು ಪ್ರಮಾಣಪತ್ರವು ಷೇರುದಾರನ ಸ್ವಾಮ್ಯದಲ್ಲಿರುವ ಷೇರುಗಳ ಮೊತ್ತವನ್ನು ನಿರ್ದಿಷ್ಟವಾಗಿ ಒಂದು ಕಾನೂನುಬದ್ಧವಾಗಿ ನೊಂದಾಯಿತವಾಗಿರುತ್ತದೆ.

ಹೂಡಿಕೆಯ ಲಾಭಾಂಶ

ಷೇರು ಹೂಡಿಕೆಯ ಪ್ರಾಥಮಿಕ ಲಾಭವೆಂದರೆ ಹೆಚ್ಚಿನ ಆದಾಯ ಸಾಧ್ಯತೆ.   ಕಂಪನಿಗಳು ಬೆಳೆದಂತೆ, ಸಗಟು  ಮೌಲ್ಯ  ಹೆಚ್ಚುತ್ತದೆ. ಹೂಡಿಕೆದಾರರಿಂದ ಷೇರುಗಳ ಖರೀದಿ ಹಕ್ಕನ್ನು ಕಂಪನಿಗಳು ಸ್ವೀಕರಿಸುತ್ತದೆ.ಲಾಭದ ಸಂಭವನೀಯತೆಯನ್ನು ಕಂಡು ಹೂಡಿಕೆದಾರರು ಸಕ್ರಿಯವಾಗಿ  ಕೊಡು,ಕೊಳ್ಳುವಿಕೆ ಯನ್ನು ಮಾಡಿದರೆ  ಹುಡಿಕೆದಾರರು  ಅಲ್ಪಾವಧಿಯಲ್ಲೇ  ಲಾಭಮಾಡಬಹುದು.ಸ್ಟಾಕ್ ಗಳ  ಹೂಡಿಕೆಯಿಂದ ಬಂಡವಾಳದ  ಲಾಬಾಂಶ/ನಷ್ಟವನ್ನು  ಲೆಕ್ಕ ಮಾಡಿ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬಹುದು.

* * * * * * * * * *

ಚಿತ್ರಕೃಪೆ : ladything.com

4 ಟಿಪ್ಪಣಿಗಳು Post a comment
 1. rajuvinay
  ಫೆಬ್ರ 9 2012

  ಷೇರು ಮಾರುಕಟ್ಟೆ ಅಂತರಂಗಕ್ಕಿಂತಲೂ ಮಧ್ಯವರ್ತಿ (brokers) ಗಳ ಅಂತರಂಗವನ್ನು ತಿಳಿಯುವುದೇ ಕಷ್ಟ ತಮ್ಮ ಹಣ ವೃದ್ಧಿಗೊಳಿಸಿಕೊಳ್ಳಲು ಎಂತೆಂಥ ಮೋಸಗಳನ್ನು ಮಾಡುತ್ತಾರೆ. ಮೋಡಿ ಮಾಡುತ್ತಾರೆ. ಹಣ ಮಾಡುತ್ತಾರೆ ಎಂಬುದಕ್ಕೆ ನಾನೇ ತಾಜಾ ಉದಾಹರಣೆ. ವಿವರಗಳು ಬೇಕಿದ್ದರೆ ಕೊಡುತ್ತೇನೆ.
  ರಾಜು ವಿನಯ್ ದಾವಣಗೆರೆ

  ಉತ್ತರ
  • sourav daada
   ಫೆಬ್ರ 9 2012

   Raju avre Aa mosa hunnaragala ondu article baredu nilumeyalli prakatisalu kodi namagu tiliyuttade, mosahoguva modalu echchettu kollOna 🙂 🙂

   ಉತ್ತರ
 2. ಫೆಬ್ರ 10 2012

  ಮಾನ್ಯ ರಾಜು ವಿನಯ್ ರವರೇ, ಷೇರುಗಳನ್ನು ಕೊಳ್ಳುವ ಬಗ್ಗೆ ನಿಮಗಾದ ಮೋಸದ ಬಗ್ಗೆ ಸವಿವರವಾದ ಲೇಖನವನ್ನು ಬರೆಯಲು ಕೋರುತ್ತೇನೆ. ಸಾಮಾನ್ಯವಾಗಿ ಷೇರು ಕೊಳ್ಳುವುದು ಒಂದು ಜೂಜಿದ್ದಂತೆ ಎಂದು ಕೇಳಿದ್ದೇವೆ. ಅದರಿಂದಲೇ ನಾವು ಶ್ರೀಮಂತರಾಗಿದ್ದೇವೆ ಎನ್ನುತ್ತಾರೆ. ಅದರಿಂದಲೇ ಹಾಳಾಗಿದ್ದು ಎನ್ನುತ್ತಾರೆ ಕೆಲವರು. ಈ ಬಗ್ಗೆ ತಿಳಿದವರು ಏಕೆ ಮಾಹಿತಿ ನೀಡಬಾರದು. ವಂದನೆಗಳೊಡನೆ.

  ಉತ್ತರ
 3. Mahesh
  ಡಿಸೆ 20 2012

  ಷೇರು ಮಾರುಕಟ್ಟೆ ಅಂತರಂಗಕ್ಕಿಂತಲೂ ಮಧ್ಯವರ್ತಿ (brokers) ಗಳ ಅಂತರಂಗವನ್ನು ತಿಳಿಯುವುದೇ ಕಷ್ಟ ತಮ್ಮ ಹಣ ವೃದ್ಧಿಗೊಳಿಸಿಕೊಳ್ಳಲು ಎಂತೆಂಥ ಮೋಸಗಳನ್ನು ಮಾಡುತ್ತಾರೆ. ಮೋಡಿ ಮಾಡುತ್ತಾರೆ. ಹಣ ಮಾಡುತ್ತಾರೆ ಎಂಬುದಕ್ಕೆ ನಾನೇ ತಾಜಾ ಉದಾಹರಣೆ. ವಿವರಗಳು ಬೇಕಿದ್ದರೆ ಕೊಡುತ್ತೇನೆ.
  ರಾಜು ವಿನಯ್ ದಾವಣಗೆರೆ

  please give full details.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments