ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 2, 2012

73

ಏನ್ ಗುರು ರಾಜಕೀಯನಾ?

‍ನಿಲುಮೆ ಮೂಲಕ

-ಅಶ್ವಿನ್ ಎಸ್ ಅಮೀನ್

ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ  ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ.

ಲೇಖನ ಆರಂಭದಲ್ಲಿ ಅರೆಸ್ಸಿಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!

ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.!
ಗೋಳವಾಲ್ಕರ್ ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯನ್ನಾಗಿ ತರಲು ಇಚ್ಚಿಸಿದ್ದರು ನಿಜ. ಅದಕ್ಕೆ ಒಂದು ಗಟ್ಟಿಯಾದ ಕಾರಣವೂ ಇತ್ತು. ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ. ಈ ಕಾರಣಗಳಿಂದ ಹಿಂದಿಯು ಭಾರತದಂತಹ ದೇಶದಲ್ಲಿ ವ್ಯಾಪಕ ಸಂವಹನ ಮಾಧ್ಯಮವಾಗಬಲ್ಲುದು ಎಂಬ ದೂರದೃಷ್ಟಿ ಗುರೂಜಿಯವರದಾಗಿತ್ತು. ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ. ಕೇವಲ ಗುರೂಜಿಯವರಷ್ಟೇ ಅಲ್ಲದೆ, ಈ ದೇಶದ ‘ರಾಷ್ಟ್ರಪಿತ’ ಎಂದು ಕರೆಸಿಕೊಳ್ಳುವ ಗಾಂಧೀಜಿಯವರು ಕೂಡ ದೇಶದ ಮೂಲೆ ಮೂಲೆಗಳಲ್ಲಿ ಹಿಂದಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಂಡಿರುತ್ತೀರಿ. ಆ ಕಾರಣಕ್ಕೆ ಗಾಂಧಿಯವರನ್ನು ಕೂಡ ವಿರೋಧಿಸುವಿರೇನು?!.

ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ. ಪ್ರಾಚೀನ, ಮಧ್ಯಕಾಲ ಭಾಷೆಗಳೊಳಗೆ ಸಂಸ್ಕೃತದ ಬೇರುಗಳು ಹಾಸುಹೊಕ್ಕಾಗಿ ಕಂಡು ಬರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಕಲ್ಪನೆಗಳು, ಪರಿಭಾಷೆಗಳ ಕುರಿತು ಹೇಳುವ ಕಾಲಕ್ಕೆ ಇಂದಿಗೂ ನಾವು ಸಂಸ್ಕೃತದ ಕಡೆಗೆ ನೋಡುತ್ತೇವೆ. ಇದು ಸಂಸ್ಕೃತ ಭಾಷೆಗಿರುವ ಗಟ್ಟಿತನವನ್ನು ಸೂಚಿಸುತ್ತದೆ. ಇದೇ ಕಾರಣಗಳಿಗಾಗಿ ಗುರೂಜಿಯವರು ಸಂಸ್ಕೃತದ ಬಳಕೆಯನ್ನು ಉತ್ತೆಜಿಸಿದರು ಮತ್ತು ಸಂಸ್ಕೃತ ಬಳಕೆಗೆ ಬರುವವರೆಗೆ ಅನುಕೂಲದ ದೃಷ್ಟಿಯಿಂದ ನಮ್ಮದೇ ದೇಶದ ಹಿಂದಿಗೆ ಆದ್ಯತೆ ನೀಡಿದರು. ಕನ್ನಡ ಹಾಗು ಸಂಸ್ಕೃತದ ಸಂಬಂಧದ ಬಗ್ಗೆ ಹೇಳುವುದಾದರೆ, ಕನ್ನಡದ ಎಲ್ಲಾ ಪ್ರಾಚೀನ ಸಾಹಿತ್ಯಗಳು ಸಂಸ್ಕೃತ ಪಠ್ಯಗಳ ಪ್ರಭಾವದಿಂದಲೇ ರಚಿಸಲ್ಪಟ್ಟವುಗಳಾಗಿವೆ. ಇದೇ ಕಾರಣಕ್ಕೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡುತ್ತಿತ್ತು. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ಹೊರತು ಪಡಿಸಿ ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳು ಸಂಸ್ಕೃತ ಪ್ರಭಾವದಿಂದ ಹುಟ್ಟಿದವು. ಅದುದರಿಂದ ಸ್ವೋಪಜ್ಞತೆಯ ದೃಷ್ಟಿಯಿಂದ ಕನ್ನಡದ ಸಾಹಿತ್ಯ ಪ್ರಕಾರಗಳು ಕಡಿಮೆ ಎಂದು ಕಾಂಗ್ರೆಸ್ ಸರ್ಕಾರ ವಾದಿಸಿತ್ತು. ಅದೃಷ್ಟವಶಾತ್ ಕನ್ನಡದ ಚಿಂತಕ ಮನಸ್ಸುಗಳ ಒತ್ತಾಯದಿಂದ ಶಾಸ್ತ್ರೀಯ ಸ್ಥಾನಮಾನ ಲಭ್ಯವಾಯಿತು. ವಿಶೇಷವೆಂದರೆ ಕೋರ್ಟಿನಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗದ ಹಾಗೆ ಪಿರ್ಯಾದೆ ಮಾಡಿದ್ದು ನಮ್ಮದೇ ದ್ರಾವಿಡ ಗಾಂಧಿ ಎಂಬ ವ್ಯಕ್ತಿ. ಇನ್ನು  ಗುರೂಜಿಯವರ ನಿರ್ಧಾರಗಳು, ಯೋಜನೆಗಳು ಯಾವುದೂ ಬಾಲಿಶವಾಗಿರಲಿಲ್ಲ ಅಥವಾ ಪ್ರಾಂತೀಯ ವಿರೋಧಿಯಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಒಂದು ಗಟ್ಟಿ ನಿರ್ಧಾರ ಕೈಗೊಳ್ಳಲು ಅವರು ಸಮರ್ಥರಾಗಿದ್ದರು.

ರಾಜ್ಯಗಳ ಸ್ವಯಂಮಾಧಿಕಾರದ ಬಗ್ಗೆ ಪ್ರಸ್ತಾಪಿಸಿರುವ ಬನವಾಸಿ ಬಳಗದ ಲೇಖಕರು ಗುರೂಜಿಯವರ ಅಖಂಡ ಭಾರತದ ನಿಲುವನ್ನು ವಿರೋಧಿಸುತ್ತಿದ್ದಾರೆ. ಬಹುಶಃ ಲೇಖಕರ ಮನಸ್ಸು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಸಂಕುಚಿತಗೊಂಡಂತೆ ಕಾಣುತ್ತದೆ. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲ. ಆದರೆ ಗುರೂಜಿ ಗೋಳವಾಲ್ಕರ್ ಅವರು ದೇಶದ ಹಾಗು ದೇಶದ ಜನರ ಏಕತ್ವದ ಬಗ್ಗೆ ಚಿಂತಿತರಾಗಿದ್ದರು. ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕೃತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಾಮಾಧಿಕಾರ ಕೊಡುವುದನ್ನು ಗುರೂಜಿ ವಿರೋಧಿಸಿದರು. ಬಹುಶಃ ಈಗ ನೀರು, ನೆಲ, ಭಾಷೆಗಾಗಿ, ರಾಜ್ಯ-ರಾಜ್ಯಗಳು ಕಚ್ಚದುವುದನ್ನು ಗುರೂಜಿಯವರು ಮುಂಚೆಯೇ ಮನಗಂಡಿರಬೇಕು. ಇಂತಹ ಒಬ್ಬ ದೂರದೃಷ್ಟಿಯ ನೇತಾರನನ್ನು ಹೊಂದಿದ್ದ ಆರೆಸ್ಸೆಸ್ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಕರ್ನಾಟಕದ ಒಳಗೂ ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು, ಮುಂಬೈ ಕರ್ನಾಟಕ ಎಂಬ ಹಲವು ಕರ್ನಾಟಕಗಳಿವೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗುತ್ತದೆ. ಇದು ನಾಳೆ ಪ್ರಾಂತೀಯತೆಯನ್ನು ಮತ್ತೆ ಕೆಣಕುವುದಿಲ್ಲ ಎಂಬುದಕ್ಕೆ ಏನೂ ಗ್ಯಾರಂಟಿ?

ಸಂಘದ ಧರ್ಮ ದೃಷ್ಟಿಯ ಬಗ್ಗೆ ಹೇಳುತ್ತಾ ಗುರೂಜಿಯವರನ್ನು ತಪ್ಪಾಗಿ ಅರ್ಥೈಸಿರುವುದು ಕಂಡು ಬರುತ್ತದೆ. ಭಾಷೆಯ ರಕ್ಷಣೆಗಾಗಿ ಇರುವ ಬನವಾಸಿ ಬಳಗ ಇಲ್ಲಿ ಧರ್ಮ, ರಾಜಕೀಯದ ವಿಷಯಗಳನ್ನು ಯಾಕೆ ಎತ್ತಿದೆ ಎಂಬುದೇ ತಿಳಿಯುವುದಿಲ್ಲ. ಇದು ಕೇವಲ ಆರೆಸ್ಸೆಸ್ ಅನ್ನು ನಿಂದಿಸಲೇಬೇಕೆಂಬ ಮನೋಭಾವದಿಂದ ಬರೆದಿರುವಂತಿದೆ. ಕ್ರಿಶ್ಚಿಯನ್ನರ ಮತಾಂತರ, ಇಸ್ಲಾಮಿಗರ ಭಯೋತ್ಪಾದನೆ, ಕಮ್ಯುನಿಷ್ಟರ ಅಭಿವೃದ್ದಿ ಕಾಣದ ಆಡಳಿತ, ಇವರೆಲ್ಲರುಗಳಿಂದ ಭಾರತೀಯ ಸಂಸ್ಕೃತಿ, ಪರಂಪರೆ ಮೇಲಾಗುತ್ತಿರುವ ಆಕ್ರಮಣಗಳನ್ನು ಕಣ್ಣಾರೆ ನೋಡಿಯೇ ಗುರೂಜಿಯವರು ಇವುಗಳನ್ನು ರಾಷ್ಟ್ರದ ಆಪತ್ತುಗಳೆಂದು ಉಲ್ಲೇಖಿಸಿದ್ದರು. ಇಲ್ಲಿ ಭಾರತದ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಮೇಲಿನ ಗುರೂಜಿಯವರ ಕಾಳಜಿ ಎದ್ದು ಕಾಣುತ್ತದೆಯೇ ಹೊರತು ಧರ್ಮ ನಿಂದನೆಯಲ್ಲ.

ಆರೆಸ್ಸೆಸ್ ಗೆ ‘ಬಿಜೆಪಿ’ ಎನ್ನುವ ಇನ್ನೊಂದು ಮುಖವಿದೆ ಎಂದಿದ್ದೀರಿ. ಬಿಜೆಪಿ ಆರೆಸ್ಸೆಸ್ಸಿನ ಮುಖವಲ್ಲ. ಅದು ಆರೆಸ್ಸೆಸ್ ಮೂಲದಿಂದ ಬಂದ ಒಂದು ರಾಜಕೀಯ ಪಕ್ಷವಷ್ಟೇ. ಆರೆಸ್ಸೆಸ್ಸಿಗೆ ತನ್ನದೇ ಆದ ಶಿಸ್ತು-ಸಿದ್ದಾಂತಗಳಿವೆ, ಜೊತೆಗೆ ಆರೆಸ್ಸೆಸ್ಸಿನ ಉಸ್ತುವಾರಿ ನೋಡಿಕೊಳ್ಳಲು ಬೇರೆಯವರದ್ದೇ ಆದ ಒಂದು ಪಡೆಯಿದೆ. ಅದೇ ರೀತಿ ಬಿಜೆಪಿಗೆ ಬೇರೆಯೇ ಆದ ಪದಾಧಿಕಾರಿಗಳು, ಸಮಿತಿಗಳಿವೆ. ಕೆಲ ಕ್ಲಿಷ್ಟ ಸಂದರ್ಭಗಳಲ್ಲಿ ಬಿಜೆಪಿ, ಆರೆಸ್ಸೆಸ್ಸಿನ ಕೆಲ ಹಿರಿಯರ ಸಲಹೆ ಕೆಲಿರೆಬಹುದು. ಬಿಜೆಪಿಯ ಹೆಚ್ಚಿನವರು ಆರೆಸ್ಸೆಸ್ಸ್ ಮೂಲದವರಾದ್ದರಿಂದ ಸಲಹೆಗಳನ್ನು ಕೇಳುವುದು ಸಾಮಾನ್ಯ. ಅದರಲ್ಲೇನೂ ವಿಶೇಷ ಕಂಡು ಬರುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ ಪಡೆಯಲು ಮುಸ್ಲಿಮರ ಓಲೈಕೆ ಮಾಡುತ್ತದೆ ಎನ್ನುವ ನೀವು ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ಅಸ್ತ್ರಗಳಾದ ‘ಕೋಮು ಸೌಹಾರ್ದ ಕಾಯಿದೆ’, ಹಿಂದುಳಿದ ವರ್ಗಗಳಲ್ಲಿ ಕೋಟಾದಲ್ಲಿ ಮುಸ್ಲಿಮರಿಗೆ ಒಳ ಮೀಸಲಾತಿಗಳಂತಹ ದೊಡ್ಡ ದೊಡ್ಡ ವಿಷಯಗಳನ್ನೇ ಮುಚ್ಚಿಟ್ಟಿರುವುದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತಿದೆ.! ನೀವು ಬರೆದ ಲೇಖನದ ಕೊನೆಯ ಪ್ಯಾರಕ್ಕೂ ಉಳಿದ ಭಾಗಕ್ಕೂ ಯಾವುದೇ ಸಂಬಂಧ ಕಂಡು ಬರುವುದಿಲ್ಲ. ಅದು ಕೇವಲ ಬಿಜೆಪಿ, ಆರೆಸ್ಸೆಸ್ಸ್ ಅನ್ನು ಜರಿಯಲೆಂದೇ ಸೃಷ್ಟಿಸಿದಂತಿದೆ.

ಇಷ್ಟೆಲ್ಲ ಹೇಳಿದ ಮೇಲೆ ತಮ್ಮ ಲೇಖನಕ್ಕೆ ಕಾರಣವಾದ ಹುಬ್ಬಳಿ ಆರೆಸೆಸ್ಸ್ ಸಮಾವೇಶದ ವಿಷಯಕ್ಕೆ ಬರೋಣ. ಇಲ್ಲಿ ಮೋಹನ್ ಭಾಗವತರ ಮಾತುಗಳನ್ನು ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ಕನ್ನಡಕ್ಕೆ ಅಗ್ರಸ್ಥಾನ ನೀಡಲಾಗಿದೆ. ಆಯಾ ಪ್ರಾಂತ್ಯಭಾಷೆಗಳು ಎಷ್ಟು ಮುಖ್ಯ ಎಂಬುದು ತಿಳಿಯದೇ ರಾಷ್ಟ್ರವನ್ನು ಸಂಘಟಿಸಲು ಸಾಧ್ಯವಿಲ್ಲ ಎಂಬ ಸಂಗತಿ ಆರೆಸೆಸ್ಸ್ ನಾಯಕರುಗಳಿಗೆ ತಿಳಿಯದೇ ಇರುತ್ತದೆಯೇ?

ರಾಜಕೀಯ ಮಾಡಬೇಕೆಂದಾದಲ್ಲಿ ನೇರವಾಗಿ ಮಾಡಬಹುದು. ಧರ್ಮದ ಹೆಸರಿನಲ್ಲಿ ಆರೆಸ್ಸೆಸ್ ರಾಜಕೀಯ ಮಾಡುತ್ತಿದೆ ಎಂದು ಹೇಳುವ ಲೇಖನವು ಭಾಷೆಯೆಂಬ ಸಂಗತಿಯನ್ನು ಇಟ್ಟುಕೊಂಡು ತಾನು ಮಾಡುತ್ತಿರುವ ರಾಜಕೀಯವನ್ನು ಮರೆಮಾಚುತ್ತದೆ.

*****************

ಚಿತ್ರಕೃಪೆ: article.wn.com

73 ಟಿಪ್ಪಣಿಗಳು Post a comment
 1. ಫೆಬ್ರ 2 2012

  kurudaru aane yennu varnisida haage ide ee lekhana..

  ಉತ್ತರ
  • ಫೆಬ್ರ 2 2012

   ಯಾವ ಲೇಖನ ಶ್ರೀ ಗಣೇಶ್ ಯು ಮಧುಕರ್? ತಾವು ಹೇಳಿದ್ದು. ಮೇಲಿನ ನಿಲಮೆಯಲ್ಲಿ ಪ್ರಕಟವಾಗಿರೋ ಲೇಖನವೇ? ಅಥವಾ “ಎನ್‌ ಗುರು”ನಲ್ಲಿ ಪ್ರಕಟವಾದ ಲೇಖನವೇ?

   ಉತ್ತರ
 2. mahesh
  ಫೆಬ್ರ 2 2012

  ಜರಿಯಲೇಬೇಕೆ೦ದು ಬರೆಯುವಾಗ ಸತ್ಯವನ್ನು ಸ೦ಪೂರ್ಣ ಮರೆಮಾಚ ಬೇಕಾಗುತ್ತದೆ. ತಮ್ಮ ಸುಳ್ಳನ್ನು ಸಮರ್ಥಿಸಿಕೋಳ್ಳಲು ಯಾವುದೇ ಅದಾರವಿಲ್ಲದಿದ್ದರು ಅದಕ್ಕೆ ಹೆಚ್ಚು ಪ್ರಾಮುಖ್ಯ ಕೋಡುತ್ತಾರೆ. RSS ಅನ್ನು ಹೆಚ್ಚೇಚ್ಚು ನಿ೦ದಿಸಿದಷ್ಟು ಕಾ೦ಗ್ರೆಸಿಗೆ ಇನ್ನಷ್ಟು ಹತ್ತಿರ ಆಗಬಹುದು ಅನ್ನೋ ಆಸೇಯಿ೦ದ ಇ ರೀತಿ ಹವ್ಯಾಸವನ್ನು ಬೆಳೆಸಿಕೋ೦ಡಿದ್ದಾರೆ. ಇದು ಕಾ೦ಗ್ರೇಸ್ ಕ್ರಪಾಪೋಷಿತ ನಾಟಕ ಅಷ್ಟೆ.

  ಉತ್ತರ
 3. Kiran Shetty
  ಫೆಬ್ರ 2 2012

  @ Ganesh U Madhukar, “kurudaru aane yennu varnisida haage ide ee lekhana..”ಎಂದು ಬರೆದಿದ್ದೀರಿ… ಆದರೆ ಅದು ಯಾವ ಲೇಖನದ ಬಗ್ಗೆ ಎಂದು ತಿಳಿಯಲಿಲ್ಲ. ಅಶ್ವಿನ್ ಅವರು ಬರೆದ ಲೇಖನದ ಬಗ್ಗೆನಾ ಅಥವಾ ‘ಏನ್ ಗುರು’ ಬ್ಲಾಗ್ ನಲ್ಲಿ ಬರೆದ ಲೇಖನದ ಬಗ್ಗೆನಾ..? ನನ್ನ ಊಹೆಯಂತೆ ಅದು ಆರೆಸ್ಸೆಸ್ ವಿರೋಧಿ ಲೇಖನದ ಬಗ್ಗೆ ಅಂದುಕೊಳ್ಳುತ್ತೇನೆ.

  ಉತ್ತರ
 4. Ganesha Belthangady
  ಫೆಬ್ರ 2 2012

  @Ashwin.. Thumba utthamavada prathikriye.

  ಉತ್ತರ
 5. Ashwin S Amin
  ಫೆಬ್ರ 2 2012

  Dhanyavaadagalu Ganesh avare…

  ಉತ್ತರ
 6. ಫೆಬ್ರ 2 2012

  ನಾಯಿಗಳು ಬೊಗಳಿದರೇ ದೇವಲೋಕ ಹಾಳಾಗುವುದೇ
  http://www.facebook.com/groups/kannadavesatya/

  ಉತ್ತರ
 7. satish D.R.
  ಫೆಬ್ರ 2 2012

  ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಎಂಬ ತಮ್ಮ ಆತ್ಮಕಥನದಲ್ಲಿ ಬರೆದರೆಂದಿರುವ ಸಾಲುಗಳ ಬಗ್ಗೆ ಲೇಖಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಯಾವುದೇ ವಿಷಯಗಳನ್ನು ತುಂಬಾ ಸಂಕುಚಿತವಾಗಿ ನೋಡಿದಾಗ ನಮ್ಮ ಮನದಲ್ಲಿ ಮೂಡುವ ಭಾವನೆಗಳೇ ಬೇರೆ. ವಿಶಾಲವಾಗಿ ಆಲೋಚಿಸಿದಾಗ ತಿಳಿದುಬರುವ ಸಂಗತಿಯೇ ಬೇರೆಯಾಗಿರುತ್ತದೆ. ಕೆಲವೊಂದು ಸಾರಿ ನಾವು ಬರೆಯ ಹೊರಟ ವಿಷಯದ ಬಗ್ಗೆ ಮೊದಲೇ ಪೂರ್ವಾಗ್ರಹ ಪೀಡಿತರಾಗಿದ್ದಾರೆ, ಅಥವಾ ಆ ವಿಷವನ್ನು ಸಂಕುಚಿತ ಅರ್ಥದ ವ್ಯಾಪ್ತಿಯಲ್ಲಿ ವಿಷಯವನ್ನು ಪ್ರಸ್ತುತ ಪಡಿಸಬೇಕೆನ್ನುವ ಮನೋಭಾವ ಅಥವಾ ಮತ್ತಾವುದೋ ವಯಕ್ತಿಕ ಕಾರಣಗಳಿದ್ದಾಗ ಮೂಲ ವಿಷಯ ವಿಷಯಾಂತರವಾಗಿ ಏಕಮುಖ ವಿಚಾರಧಾರೆಯನ್ನು ಹೊಗೆಯಲಾಗುತ್ತದೆ. ನಾನು R S S ಅಂದರೆ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಬಗ್ಗೆ ಹೆಚ್ಚು ತಿಳುವಳಿಕೆಯಿಲ್ಲ ಅಂದರೆ ಅದರ ಸದಸ್ಯನಲ್ಲ. ಮಿಕ್ಕಂತೆ ಅದರ ಕಾರ್ಯ ಕ್ಷೇತ್ರ ವಿಚಾರಧಾರೆಗಳು, ರಾಷ್ಟ್ರೀಯ ಸಮಗ್ರತೆಗೆ, ನೆರೆ ಬರ ಪರಿಸ್ಥಿತಿಗಳಲ್ಲಿ ಒಗ್ಗಟ್ಟಾಗಿ ಹೆಗಲು ಕೊಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ರೀತಿಯನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ.

  ಈಗಾಗಲೇ ಚಿಂತನ ಗಂಗಾ ವಿಷಯದ ಬಗ್ಗೆ -ಅಶ್ವಿನ್ ಎಸ್ ಅಮೀನ್ ರವರು ಬಹಳ ಚನ್ನಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹಾಗಂತ ಈ ರೀತಿಯ ಸಂಘ ಸಂಸ್ಥೆಗಳಲ್ಲಿ ಎಲ್ಲವು ಸರಿಯಾಗಿರುತ್ತದೆ ಎಂಬುದು ಕೂಡ ತಪ್ಪು. ಹಾಗೆಂದು ಅದರ ಮಿಕ್ಕೆಲ್ಲ ಒಳ್ಳೆಯ ಅಂಶಗಳು ಮರೆಯಾಗಿ ಹೋಗುತ್ತೇವೆ ಅನ್ನುವುದಕ್ಕೆ ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಎಂದು ಲೇಖಕರು ಹೇಳಿರುವುದು ತಮಾಷೆಯಾಗಿದೆ. ಹಾಗಾದರೆ ತಮಿಳುನಾಡಿನಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸಿರುವುದರ ಹಿಂದೆ ಯಾರ ಕೈವಾಡ ಇದೆಯೆಂದು ಮಾನ್ಯರು ಪತ್ತೆದಾರಿಕೆ ಮಾಡಿಲ್ಲ. ದೇಶವಾಸಿಗಳಲ್ಲೇ ಈ ರೀತಿಯ ವಿಷಯಗಳನ್ನು ಸದಾ ಚಾಲ್ತಿಯಲ್ಲಿಟ್ಟು ರಾಜಕೀಯ ಮಾಡುವ ಹುನ್ನಾರ ಇವರಂತವರಿಂದ. ಪ್ರಾಂತೀಯ ವಿರೋದದ ಬಗ್ಗೆ ಮಾತನಾಡುವ ಇವರು ಮಾಡುತ್ತಿರುವುದಾದರೂ ಏನು ಎಂಬ ಪ್ರಶ್ನೆ ಕಾಡುತ್ತದೆ. ಈ ರೀತಿಯ ಜನರಿಗೆ ಒಂದು ಮನೋರೋಗವಿರುತ್ತದೆ. ಸತ್ತು ಗೋರಿ ಸೇರಿರುವ ವಿಷಯಗಳನ್ನು ಮತ್ತೆ ಮತ್ತೆ ಜನರ ಮುಂದೆ ಎಳೆದು ತಂದು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಾ ಇರಬೇಕು, ರಾಮ ಜನ್ಮ ಭೂಮಿ ವಿವಾದ, ಡಿಸೆಂಬರ್ ೬ ರ ಘಟನೆ. ಈ ವಿಷಯವನ್ನು ಮುಸಲ್ಮಾನರು ಮರೆತುಬಿಟ್ಟಿದ್ದರು ಪಾಪ ಇವರು ನೆನಪು ಮಾಡಿ ಅವರ ಮನಗಳಿಗೆ ಬೆಂಕಿ ತಾಕಿಸುತ್ತಾರೆ. ಅದೇ ಸಮಯಕ್ಕೆ ಮಾಜಿ ಪ್ರಧಾನಿ ದಿ/ ಇಂದಿರಾ ಗಾಂದಿಯವರು ಸತ್ತಾಗ ದೆಹಲಿಯ ಸುತ್ತಾ ಮುತ್ತಾ ಇದ್ದ ಸಿಕ್ಖರನ್ನು ಸಿಕ್ಕ ಸಿಕ್ಕಲ್ಲಿ ಪ್ರಾಣಿಗಳನ್ನು ಕೊಂದಂತೆ ೩೦೦೦ ಸಾವಿರಕ್ಕೂ ಅಧಿಕ ಜನರನ್ನು ಹತ್ಯೆಗೈದರು. ಅದನ್ನು ಸಮರ್ಥಿಸಿಕೊಳ್ಳುವ ದರಿದ್ರ ಮನಸ್ತಿತಿಯ ನಾಯಕರು ನಮ್ಮಲ್ಲಿದ್ದಾರೆ. ಇವರ ಬಗ್ಗೆ ಮೌನವಾಗುತ್ತಾರೆ. ಅದೇ ರೀತಿ ಗೋದ್ರಾ ರೈಲಿನಲ್ಲಿ ಜೀವಂತವಾಗಿ ಸುಟ್ಟುಹೋದ ಕರಸೇವಕರು ಇವರಿಗೆ ನೆನಪಿಗೆ ಬರುವುದಿಲ್ಲ. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಯೋಧರನ್ನು ಸ್ಮರಿಸುವ ಕಾರ್ಯಕ್ರಮ ಹಾಕಿಕೊಂಡರೆ ಅದನ್ನು ಹಳದಿ ಕಣ್ಣಿನಿಂದ ನೋಡುವ ಜನರಿದ್ದಾರೆ. KFD- ಇದೇ ಹುಣಸೂರಿನಲ್ಲಿ ಏನು ಮಾಡಿತು, ಇಬ್ಬರೂ ಮುಗ್ಧ ವಿದ್ಯಾರ್ಥಿಗಳನ್ನು ಹಣದಾಸೆಗೆ ಅಪಹರಿಸಿ ಕೋಲೆ ಮಾಡಿದರು. ಆದರೆ ಈ ಸಂಘಟನೆಯ ಬಗ್ಗೆ ಇಂಥವರುಗಳು ಸೊಲ್ಲೇ ಎತ್ತೋಲ್ಲ. R S S ನ ಸಾದ್ವಿ ರಿತಂಬರ ಹಾಗೂ ಪುರೋಹಿತ್ ಎಂಬುವರು ಮಲಗಾವ್ ಬಾಂಬ್ ಸ್ಪೋಠ ರುವಾರಿಗಳೆಂದು ಬಂದಿಸಿ ಜೈಲಿಗೆ ತಳ್ಳಲಾಗಿದೆ. ಈ ರೀತಿಯ ಕೃತ್ಯವನ್ನು ಯಾರು ಮಾಡಿದರು ಅದು ಭಯೋತ್ಪಾದಕತೆಗೆ ಸಮಾನ. ನಾನು ಹೇಳ ಹೊರಟಿದ್ದು ಎಲ್ಲವನ್ನು ಎಲ್ಲರನ್ನು ಒಂದೇ ದೃಷ್ಟಿಕೋನದಿಂದ ನೋಡಿ ಆನಂತರ ತಮ್ಮ ಅಭಿಪ್ರಾಯ ತಿಳಿಸಿ, ಆಯಾ ಆಯಾ ಸಂಘದ ಹುಳುಕುಗಳನ್ನು ಎಲ್ಲರ ಮುಂದೆ ಬಹಿರಂಗ ಪಡಿಸಲಿ, ಅದು ಹಿಂದೂ ಸಂಘಟನೆಯಾಗಲಿ, ಮುಸ್ಲಿಂ ಸಂಘಟನೆಯಾಗಲಿ ಬೇರೆ ಯಾವುದೇ ಸಂಘಟನೆಯ ಬಗ್ಗೆ ಯಾಗಲಿ ಅಭಿಪ್ರಾಯ ಭೇದ ಇರಬಾರದು. ನಾನು ಹೇಳ ಹೊರಟಿದ್ದು ಸಂಕುಚಿತತೆಯನ್ನು ನಾವು ಮೊದಲು ಬಿಡಬೇಕು ಸಮಗ್ರವಾಗಿ ನೋಡಬೇಕು. ಎಂಬ ವಿಚಾರಕ್ಕೋಸ್ಕರ ಮೇಲಿನ ವಿಷಯಗಳನ್ನು ಎಳೆದು ತರಬೇಕಾಯಿತು. ವಂದನೆಗಳು.

  ಉತ್ತರ
 8. bhimasen purohit
  ಫೆಬ್ರ 2 2012

  ಅಶ್ವಿನ್ ಅಣ್ಣ, ಅತ್ಯಂತ ತರ್ಕಬದ್ದವಾದ ಮಂಡನೆಯಿದೆ ಈ ಲೇಖನದಲ್ಲಿ..
  ನಾವೂ ಕನ್ನಡದ ಭಕ್ತರೆ. ಆದರೆ ಹಾಗಂತ ಹಿಂದಿಯನ್ನು ಒದ್ದುಬಿಡಬೇಕೆಂಬ ಸಂಕುಚಿತ ಮನೋಭಾವ ನಮ್ಮಲ್ಲಿ ಇಲ್ಲ…
  ಗುರುಜಿಯಾಗಲೀ, ಅಥ್ವಾ ಇನ್ನಾರೆ ನಾಯಕರಾಗಲೀ, ಇತರ ಧರ್ಮದ ದ್ವೇಷಿಗಳು ಎಂಬಂತೆ ಬಿಂಬಿಸುತ್ತಿರುವುದು ವಿಷಾದ.. ನಮ್ಮ ಧರ್ಮದ ಮೇಲೆ ಆಕ್ರಮಣ ಮಾಡಲು ಬರುವವರನ್ನು ವಿರೋಧಿಸೋದು ತಪ್ಪೇ..!!!
  “ಮತಾಂತರ ಅಂದರೆ ರಾಷ್ಟ್ರಾಂತರ” ಅನ್ನೋ ಸಾವರ್ಕರರ ಮಾತು ಬಹಳ ಜನಕ್ಕೆ ಅರ್ಥವೇ ಆಗಿಲ್ಲ..
  ಅಂಥವರು, ಇಂಡೋನೇಶಿಯಾ, ಧರ್ಮದ ಆಧಾರದ ಮೇಲೆಯೇ ಇತ್ತೇಚೆಗೆ ವಿಭಜನೆಯಾಗಿರುವುದನ್ನು ವಿಮರ್ಶೆ ಮಾಡಬೇಕಿದೆ..

  ಉತ್ತರ
 9. Rajesh Vitla
  ಫೆಬ್ರ 2 2012

  Sariyaada uttaravanne neediddeeri ashwin.

  ಉತ್ತರ
 10. ಫೆಬ್ರ 2 2012

  ಸರಿಯಾಗಿ ಬರೆದಿದ್ದೀರಿ. ಏನ್ ಗುರು ಅವರ ಕನ್ನಡ ಕಾಳಜಿ ಮೆಚ್ಚಬೇಕಾದ್ದೆ. ಆದರೆ ಅನೇಕ ಬಾರಿ ಅವರು ರಾಷ್ಟ್ರೀಯತೆಯನ್ನು ಪೂರ್ತಿ ಬಿಟ್ಟು ಕರ್ನಾಟಕ ಮಾತ್ರ ನಮ್ಮದು ಎಂಬಂತೆ ವರ್ತಿಸುತ್ತಾರೆ. ಇದು ಅಪಾಯಕಾರಿ. ವೈವಿಧ್ಯತೆ ಒಳ್ಳೆಯದೇ, ಆದರೆ ವೈವಿಧ್ಯತೆಯಲ್ಲಿ ಏಕತೆಯೂ ಬೇಕಾಗಿದೆ. ಭಾರತೀಯ ಮತ್ತು ಕನ್ನಡಿಗ ಎರಡೂ ಆಗಿರೋಣ, ಎರಡನ್ನೂ ಬೆಳೆಸೋಣ

  ಉತ್ತರ
  • ಅಭಿಮನ್ಯು
   ಫೆಬ್ರ 4 2012

   ಹಿಂದಿಯನ್ನ ವಿರೋಧಿಸುವುದೇ ಕನ್ನಡ ಪ್ರೇಮ ಅಂದುಕೊಂಡಂತಿದೆ ಪಾಪ ಅವ್ರು 🙂

   ಉತ್ತರ
 11. Sourav dada
  ಫೆಬ್ರ 2 2012

  ಶಿವಸೇನೆ ಮತ್ತು ರಾಜ್ ಠಾಕ್ರೆ ಗೆ ಆದ ಮುಖಭಂಗ ಗೊತ್ತಿಲ್ವಾ?? ದೇಶದ ಬಗ್ಗೆ ಇಷ್ಟು ಕ್ರೂರತೆ ಇರಬಾರದು, ತುಂಬಾ ಪ್ರೀತಿ ಇತ್ತು ಏನ್ ಗುರು ಮೇಲೆ. ಅವರಿಂದ ಬಹಳ ಕಲಿತಿದ್ದೇನೆ ನಮ್ಮ ಕನ್ನಡದ ಬಗ್ಗೆ. ಹಿಂದಿ ರಾಷ್ಟ್ರಭಾಷೆ ಎಂದುಕೊಂಡಿದ್ದ ನನಗೆ ಅಲ್ಲ ಎಂದು ಅರಿವಾಗಲಿಕ್ಕೆ ಏನ್ ಗುರು ಬ್ಲಾಗ್ ಕಾರಣ. ದಯವಿಟ್ಟು ಅವರು ರಾಜಕೀಯ ಮಾಡದಿದ್ದರೆ ಸಾಕು. ನಮ್ಮ ಭಾಷೆಯನ್ನು ಪ್ರೀತಿಸೋಣ, ಹಾಗಂತ ಬೇರೆ ಭಾಷೆಯನ್ನು ದ್ವೇಶಿಸೋದು ಬೇಡ. ಹೇರಿಕೆಯನ್ನು ವಿರೋಧಿಸೋಣ ಆದರೆ ಸಂಪರ್ಕ ಮಾಧ್ಯಮಕ್ಕೆ ವಿರೋಧ ಯಾಕೆ?? ಹಿಂದಿ ಮೇಲೆ ದ್ವೇಷ ಇದ್ರೆ ರಾಷ್ಟ್ರಗೀತೆ ಹಾಡೋದು ಬೇಡ ಅಲ್ವೇ ?? ದೇಶಭಕ್ತ ಮುಸ್ಲಿಮರು ಬಹಳನೇ ಇದ್ದಾರೆ ಆದರೆ ಬಹುಸಂಖ್ಯಾತರ ಬಗ್ಗೆ ಒಲವೆ ಇಲ್ಲದ ದೇಶವಾಗ ಹೊರಟಿದೆ ನಮ್ ದೇಶ. ಸೌರವ್ ಭಾಯಿ ಸಾಕು ನಡೀ ಬರಿತಾನೆ ಇರ್ತ್ಯ ಬಿಟ್ರೆ 🙂 ಲೇಖನ ಚನ್ನಾಗಿದೆ. ಖಾರವಗಿಲ್ಲ ಮಾತಿನ ಪೆಟ್ಟು ಇದು. ದೊಣ್ಣೆ ಪೆಟ್ಟು ನಿಲುಮೆಯಲ್ಲಿ ಬಂದು ಅದರ ಅಂದ ಕೆಡದಿರಲಿ ಎಂಬ ವಿನಂತಿ ದಾದ ಕಡೆಯಿಂದ 🙂

  ಉತ್ತರ
  • Ajay
   ಫೆಬ್ರ 3 2012

   ಜನಗಣಮನ ಇರೋದು ಬಂಗಾಳಿ ಭಾಷೆಯಲ್ಲಿ 🙂

   ಉತ್ತರ
   • ಫೆಬ್ರ 3 2012

    ಇನ್ ಯಾರದ್ರು ಬೈದು ಬಿಟ್ಟಾರು ಅಂತ ಹಿಂದಿ ಅಂದೇ 🙂 ಆಗಾಗ ದಾದ ಟೆಸ್ಟ್ ಮಾಡ್ತಾ ಇರ್ತಾರೆ 🙂 ನೀನು ಇಂಟೆಲ್ ಗೆಳೆಯ 🙂

    ಉತ್ತರ
 12. ಫೆಬ್ರ 2 2012

  ಹೇಗೆ ಅತಿ ಧಾರ್ಮಿಕತೆ ಅಪಾಯಕಾರಿಯೋ, ಅದೇ ರೀತಿ ಅತಿ ಭಾಷಾಭಿಮಾನವೂ ಅಪಾಯಕಾರಿ. ಇದು ಏನ್ ಗುರು ತಂಡದವರಿಗೆ ತಿಳಿಯದ್ದೇನಲ್ಲ. ಏನ್ ಗುರುದವರು ಕಾಮೆಂಟ್ ಗಳನ್ನು ತುಂಬಾ ಕೇರ್ ಫುಲ್ ಆಗಿ ಮಾಡರೇಟ್ ಮಾಡಿ ತಮಗನುಕೂಲವಾದ ಪರ, ವಿರೋಧ ಕಾಮೆಂಟ್ ಗಳನ್ನು ಮಾತ್ರ ಪ್ರಕಟಿಸುತ್ತಿದ್ದಾರೆಯೇ ಎಂಬ ಸಂದೇಹ ನನಗೂ ಬಾರದೇ ಇರಲಿಲ್ಲ.

  ಉತ್ತರ
 13. Manjunath
  ಫೆಬ್ರ 3 2012

  ಅಶ್ವಿನ್ ಅಮೀನ್ ಅವರೇ,,
  ಆರ್.ಎಸ್.ಎಸ್ ವಿಕೋಪಗಳ ಸಂದರ್ಭದಲ್ಲಿ ದೇಶದ ಎಲ್ಲ ಬಾಗಗಳಿಗೆ ನೆರವಿಗೆ ಧಾವಿಸಿದ್ದನ್ನು ಎನ್ಗುರು ಲೇಖನದಲ್ಲೂ ಉಲ್ಲೇಖಿಸಲಾಗಿದೆ. ಆರ್.ಎಸ್.ಎಸ್ ಅದಕ್ಕೆ ಮಾತ್ರ ಸೀಮಿತವಾಗಿದೆಯೇ.? ಆರ್.ಎಸ್.ಎಸ್ ದೇಶ ಕಟ್ಟುವ ಕನಸು ಹೊತ್ತ ಒಂದು ಶಿಸ್ತು ಬದ್ದ ಸಂಘಟನೆ ಅಂತೆಲ್ಲ ಹೇಳಲಾಗುತ್ತದೆ. ಎನ್ಗುರುವಿನಲ್ಲಿ ಪ್ರಕಟವಾದ ಲೇಖನ ಚಿಂತನಗಂಗಾದಲ್ಲಿನ ಅಂಶಗಳನ್ನು ಉಲ್ಲೇಖಿಸಿ ಬರೆಯಲಾಗಿದೆ. ಚಿಂತನಗಂಗಾ, ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಪುಸ್ತಕವಾಗಿರುವುದರಿಂದ ಅದನ್ನು ಆರ್.ಎಸ್.ಎಸ್ ಸಂಘಟನೆಯ ತತ್ವ ಸಿದ್ದಾಂತವನ್ನು ಬಿಂಬಿಸುವ ಅದೀಕೃತ ಹೊತ್ತಿಗೆ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
  ಈಗ ನೀವು ಹೇಳಿ,
  ಚಿಂತನಗಂಗಾದಲ್ಲಿನ ಅಂಶಗಳಿಗೂ ಆರ್.ಎಸ್.ಎಸ್ ಗೂ ಸಂಬಂದವಿಲ್ಲವೇ.? ಇಲ್ಲ ಎಂದರೆ ಚಿಂತನಗಂಗಾ,, ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಎಂದು ಪುಸ್ತಕದ ಮೊದಲಲ್ಲೇ ಏಕೆ ಬರೆಯಲಾಗಿದೆ.? ಆರ್.ಎಸ್.ಎಸ್ ನ ಈಗಿನ ತತ್ವ ಸಿದ್ದಾಂತಗಳು ಬದಲಾಗಿವೆಯೇ.?

  ಚಿಂತನಗಂಗಾವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಿರಿ. ಚಿಂತನಗಂಗಾದಲ್ಲಿನ ಆಯ್ದ ಬಾಗವನ್ನು ಕೆಳಗೆ ಕೊಡಲಾಗಿದೆ. ಸರಿಯಾಗಿ ಅರ್ಥೈಸಿ ಹೇಳಿ.
  But the question before us now is, what is the attitude of those people who have been converted to Islam or Christianity? They are
  born in this land, no doubt. But are they true to their salt? Are they grateful to this land which has brought them up? Do they feel that they are the children of this land and its tradition, and that to serve it is their great good fortune? Do they feel it a duty to serve her? No! Together with the change in their faith, gone is the spirit of love and devotion for the nation.

  ಹೀಗೆ ಬರೆಯುವಾಗ ಮುಂದೊಂದು ದಿನ, ದೇಶಾಬಿಮಾನಿಗಳು ಎಂದು ಹೇಳಿಕೊಳ್ಳುವವರಿಂದಲೇ ಪಾಕಿಸ್ತಾನದ ದ್ವಜ ಹಾರುತ್ತದೆ ಎಂದು ಬಹುಶ: ಗುರೂಜಿ ಅವರೂ ಊಹಿಸಿರಲಿಲ್ಲ ಅನ್ಸುತ್ತೆ. ಸಮಾಜದಲ್ಲಿ ಒಡಕಿನ ವಿಷ ತುಂಬುವ ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ ಎನ್ನುವ ಮೂಲಕ ವಿಭಿನ್ನ ಧರ್ಮಗಳ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ನಿಜವಲ್ಲವೇ.?

  ಇನ್ನು ನಿಮ್ಮ ಮಾತಿಗೆ ಕೆಲವು ಪ್ರತಿಕ್ರಿಯೆ:
  >> ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ.
  > ಯಾವ ಆದಾರದ ಮೇಲೆ ಇದನ್ನು ಹೇಳಿದಿರೋ ನಾ ಕಾಣೆ. ಇಲ್ಲಿದೆ ನೋಡಿ ಇದಕ್ಕುತ್ತರ. ಹಿಂದಿಗೆ ಕೊಂಚ ಹತ್ತಿರವಾಗಿರುವ ಗುಜರಾತಿಗಳಿಗೆನೇ ಹಿಂದಿ ಒಂದು ವಿದೇಶದ ಬಾಷೆ. ಹೀಗಿರುವಾಗ ಹಿಂದಿಗೆ ಸಂಬಂದವೇ ಇರದ ದ್ರಾವಿಡ ಬಾಷೆಗಳಿಗೆ ಹಿಂದಿ ಹೇಗೆ ಗೊತ್ತು ಸ್ವಾಮೀ. ಹಾಗೇನಾದರೂ ಅಲ್ಪ ಸ್ವಲ್ಪ ಜನಕ್ಕೆ ಗೊತ್ತಿದ್ದರೆ ಅದು ೬೦ ವರುಶಗಳಿಂದ ನಡೆದು ಬಂದಿರುವ ಹಿಂದಿ ಹೇರಿಕೆಯಿಂದನೇ ಅಲ್ಲವೇ.? http://articles.timesofindia.indiatimes.com/2012-01-01/ahmedabad/30578461_1_gujarati-foreign-language-hindi

  >> ಅವರು ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ.
  > ನಿಮ್ಮ ಈ ಮಾತಿಗೂ ಮೇಲಿನ ಕೊಂಡಿಯೇ ಉತ್ತರ. ಏಕೆಂದರೆ ಹಿಂದಿಯನ್ನು ಕೇವಲ ಆಡಳಿತ ಭಾಷೆಯನ್ನಾಗಿ ಬಳಸಿದ ಪರಿಣಾಮವಾಗಿಯೇ ಗುಜರಾತಿನಲ್ಲೇ ಗುಜರಾತಿ ಭಾಷೆ ಸ್ಥಾನ ಕಳೆದುಕೊಂಡಿತು. ಹೀಗಿರುವಾಗ ಹಿಂದಿಯನ್ನು ರಾಷ್ಟ್ರಬಾಷೆಯನ್ನಾಗಿ ಮಾಡಿದರೆ ಪರಿಣಾಮ ಹೇಗಿರಬೇಡ. ಇದಕ್ಕೆ ಕರ್ನಾಟಕವೇನು ಕಮ್ಮಿನೇ.? ಬ್ಯಾಂಕಿಗೆ ಹೋಗಿ ನೋಡಿ ಸ್ವಾಮೀ. ಬ್ಯಾಂಕಿನ ಎಲ್ಲ ವ್ಯವಹಾರದಲ್ಲಿ ಹಿಂದಿ ಸ್ಥಾನ ಪಡೆದಿದೆ, ಕನ್ನಡ ಕೆಲವೆಡೆ ಕಾಣಿಸಿ, ಹಲವು ಕಡೆ ಮಾಯವಾಗಿದೆ. ಅದ್ ಹಾಗೇನೇ? ಕರ್ನಾಟಕದಲ್ಲಿ ಹಿಂದಿ ಇರಲಿ ಅನ್ನೋದು ಕರ್ನಾಟಕದಲ್ಲಿ ಕನ್ನಡ ಬೇಡ ಎಂಬುದರ ಇನ್ನೊಂದು ಅರ್ಥ. ಒಬ್ಬರು ಹೇಳಿದರು,, ನಾವೂ ಕನ್ನಡಾಬಿಮಾನಿಗಳೇ, ಆದರೆ ಅದಕ್ಕೆ ಹಿಂದಿಯನ್ನು ಒದ್ದೋಡಿಸುವ ಸಂಕೋಚಿತ ಬಾವನೆ ನಮಗಿಲ್ಲ ಎಂದು. ಅವರು ಸ್ವಲ್ಪ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ನೋಡಲಿ. ಯಾವ ಬಾಷೆಯನ್ನು ಯಾವ ಭಾಷೆ ಒದ್ದೊಡಿಸುತ್ತಿದೆ. ಮೂಲವಾಗಿ ಹಿಂದಿ ಕರ್ನಾಟಕಕ್ಕೆ ಸಂಬಂದಿಸಿದ ಭಾಷೆಯೇ ಅಲ್ಲ, ಇನ್ನು ಒದ್ದೋಡಿಸುವ ಮಾತೆಲ್ಲಿ. ಆದರೆ ಕರ್ನಾಟಕದಲ್ಲಿ ಕನ್ನಡ ೨೦೦೦ ವರುಶಗಳಿಂದ ಇದೆ. ಮೊನ್ನೆ ಮೊನ್ನೆ ಬಂದ ಹಿಂದಿ ನಿಮ್ಮ ಅಬಿಮಾನಪೂರ್ವಕವಾದ ಕನ್ನಡವನ್ನು ಎಲ್ಲ ಕಡೆಯಿಂದ ಒದ್ದೋಡಿಸುತ್ತಿರುವುದು ಕಣ್ಣಿಗೆ ರಾಚುತ್ತಿಲ್ಲವೇ.? ಹಿಂದಿಯನ್ನು ರಾಷ್ಟ್ರಬಾಷೆಯನ್ನಾಗಿಸುವ ಪ್ರಯತ್ನ ಯಾರೇ ಮಾಡಿದ್ದರೂ ಆ ನಿಲುವಿಗೆ ವಿರೋದ ಇದೆ.

  ಸುಮಾರು ೩ ವರುಶಗಳ ಹಿಂದೆ ಮೋದಿ ಅವರು ಗುಜರಾತ್ ಅಸ್ಮಿತಾ ಎಂಬ ಕೂಗನ್ನು ಹೊರಹಾಕಿ ಸ್ವಾಬಿಮಾನಿ ಗುಜರಾತ ಎಂಬ ದ್ಯೇಯ ವಾಕ್ಯವನ್ನು ರಾಜ್ಯದ ಎಲ್ಲೆಡೆ ಮೊಳಗಿಸಿದ್ದರು. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲವೇ ಹಾಗಾದರೆ.? ಗುಜರಾತ್ ಎನ್ನುವುದು ಸಂಕುಚಿತವೇ.? ಬಾರತಕ್ಕೆ ಪ್ರತಿಯೊಂದು ರಾಜ್ಯಗಳು ಆದಾರಸ್ಥಂಬಗಳು. ಒಂದೊಂದು ಆದಾರಸ್ಥಂಬ ಗಟ್ಟಿಯಾದಂತೆ ಬಾರತ ಗಟ್ಟಿಯಾಗುವುದಿಲ್ಲವೇ.? ಕರ್ನಾಟಕದಲ್ಲಿ ಕನ್ನಡವೆಂದರೆ ಸಂಕುಚಿತ ಎನ್ನುವ ಸಂಘದ ಬೋದನೆಯನ್ನು ಒಪ್ಪಲು ಸಾದ್ಯವೇ.? ವೈವಿದ್ಯತೆಯನ್ನು ಗೌರವಿಸುತ್ತಿದ್ದರೆ ಸ್ಥಳೀಯ ಭಾಷೆಗಳೇ ಸಾರ್ವಬೌಮವಾಗಬೇಕು ಎಂಬ ನಿಲುವಿರಬೇಕು. ದೇಶಕ್ಕೊಂದು ರಾಷ್ಟ್ರಭಾಷೆ ಬೇಕು ಎನ್ನುವುದು ಇತರ ಭಾಷೆಗಳನ್ನು ಮೂಲೆಗಟ್ಟುವ ಒಂದು ತಂತ್ರವೇ ಹೊರತು ಮತ್ತೇನೂ ಅಲ್ಲ. ಸ್ಥಳಿಯ ಭಾಷೆಗಳು ಹೋದರೆ ಎಲ್ಲಿದೆ ವೈವಿದ್ಯತೆ. ವೈವಿದ್ಯತೆ ಇಲ್ಲದಿದ್ದರೆ ಎಲ್ಲಿದೆ ಏಕತೆ. ನೂರಾರು ಭಾಷೆಗಳಿರುವ ಸಾವಿರಾರು ಸಂಸ್ಕೃತಿಗಳಿರುವ ವೈವಿದ್ಯತೆಯನ್ನೇ ಮೈಗೂಡಿಸಿಕೊಂಡಿರುವ ಬಾರತದಲ್ಲಿ ಒಂದು ದರ್ಮ, ಒಂದು ಭಾಷೆಯಿಂದ ಏಕತೆಯನ್ನು ಸಾದಿಸಬಹುದೇ.?

  ಉತ್ತರ
  • sushanth gowda
   ಫೆಬ್ರ 5 2012

   nice reply ashwin….

   ಉತ್ತರ
 14. Kashyap
  ಫೆಬ್ರ 3 2012

  ತುಂಬಾ ಒಳ್ಳೆಯ ಲೇಖನ ಬರೆದಿದ್ದೀರೀ ಅಶ್ವಿನ್….
  ಒಳ್ಳೆಯ ಲೇಖನ ಬರೆಯೊದಂತು Enguru ಅವರು ಬಿಟ್ಟುಬಿಟ್ಟಿದ್ದಾರೇ.

  “ENGURUನಲ್ಲಿ” RSS ಬಗ್ಗೆ ಮೊದಲ ಲೇಖನಕ್ಕೆ RSS-ನವರಿಂದ ಪ್ರತಿಕ್ರಿಯೆ ಸಿಗದಿದ್ದರೂ Blogಗೆ ಒಳ್ಳೆಯ ಪ್ರತಿಕ್ರಿಯೆ (hits) ಸಿಕ್ಕಿದ ಕಾರಣಕ್ಕಾಗಿ ಈಗ RSSನ ಬಗ್ಗೆ ಇನ್ನೊಂದು ಲೇಖನ ಬರೆದಿದ್ದಾರೇ.

  Enguruನಲ್ಲಿ RSS ಬಗ್ಗೆ ಲೇಖನ ಬರೆದವರಿಗಿನ್ನೂ ಗೊತ್ತಿಲ್ಲಾ “SIGNALನಲ್ಲಿ enguru-ನವರು ಮಂಗಳಮುಖಿಯರಿಗೆ ಹೇಗೆ ಪ್ರತಿಕ್ರಯಿಸುವುದಿಲ್ಲವೋ” ಹಾಗೇ RSS enguru-ನಂತವರಿಗೆಲ್ಲಾ ಪ್ರತಿಕ್ರಯಿಸುವುದಿಲ್ಲಾ ಅಂತ….

  Enguru-ನವರು ರಾಜಕೀಯ ಮಾಡಿ ಅವರ ತುಂಬ ಓದುಗರನ್ನು ಕಳೆದುಕೊಂಡಿರುವುದಂತೂ ಸತ್ಯ….

  ಧನ್ಯವಾದಗಳು…
  ಅಶ್ವಿನ್ & ನಿಲುಮೆ

  ಉತ್ತರ
 15. panduranga
  ಫೆಬ್ರ 3 2012

  Enguru blogina aa post alli ettiruva naalku mukhya prashnegala bagge RSS niluvenu annuvudE artha aagilla. chintanaganga RSS na tilidukollalu iruva pustaka anta ide. haagiddare adaralli ettiro prashne bagge RSS pratikriye enu?

  ಉತ್ತರ
 16. Priyank
  ಫೆಬ್ರ 3 2012

  ಇಲ್ಲಿ ಹೇಳಲಾಗಿರುವ ಕೆಲ ವಿಷಯಗಳ ಬಗ್ಗೆ ನನ್ನ ಅನಿಸಿಕೆಗಳು.
  – ಗೋಲ್ವಾಲ್ಕರ್ ಅವರ ಚಿಂತನಗಂಗಾ ಹೊತ್ತಗೆಯೇ ಆರ್.ಎಸ್.ಎಸ್ಸಿನ ನಿಲುವುಗಳಲ್ಲ ಅಂತಲೂ ಕೆಲವರು ಹೇಳಿದ್ದರು. ನೀವು ಬರೆದಿರೋದು ನೋಡಿ, ಆರ್.ಎಸ್.ಎಸ್ಸಿನ ನಿಲುವುಗಳೆಲ್ಲವೂ ಗೋಲ್ವಾಲ್ಕರ್ ಅವರ ಮಾತುಗಳನ್ನು ಒಪ್ಪುತ್ತದೆ ಎನ್ನುವಂತಿದೆ.
  – ಹಿಂದಿಯನ್ನು ರಾಷ್ಟ್ರಬಾಷೆ ಮಾಡಬೇಕಾಗಿ ಗಾಂಧಿ ಅವರೂ ಸೇರಿದಂತೆ, ಗೋಳ್ವಾಲ್ಕರ್ ಅವರೂ ಹೇಳಿದ್ದರು. ಅದಕ್ಕೆ ಕಾರಣಗಳೂ ಇದ್ದವು ಎಂದಿದೀರಿ. ಗಾಂಧಿ ಅವರು ಹೇಳಿದ್ದೂ ನಿಜವೇ. ಅದೆಲ್ಲವನ್ನೂ ಪ್ರಶ್ನಿಸಬೇಕಾಗಿದೆ. ಗೋಳ್ವಾಲ್ಕರ್ ಅವರ ಚಿಂತನೆಗಳೇ ಸಂಘದ ನಿಲುವಾಗಿದ್ದರೆ, ಇವತ್ತಿಗೂ ಸಂಘವು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದರ್ಥವಲ್ಲವೇ? ಎಲ್ಲಾರ ಮೇಲೆ ಹಿಂದಿ ಹೇರಿಕೆ ಮಾಡುವುದರ ಪರವಾಗಿ ಸಂಘವಿದೆ ಎಂಬರ್ಥವಲ್ಲವೇ? ಹಾಗೆ ಮಾಡುತ್ತಿದಾರೋ, ಇಲ್ಲವೋ ಎಂಬುದು ಪ್ರಶ್ನೆಯಾಗಿದೆ.
  ಇನ್ನು, ಕೇಂದ್ರ ಸರಕಾರ ತನ್ನ ಹಣ ತೊಡಗಿಸಿ ಹಿಂದಿಯೇತರರ ಮೇಲೆ ಹಿಂದಿ ಹೇರುವುದನ್ನು ಏನ್ ಗುರುವಿನಲ್ಲಿ ವಿರೋದಿಸುತ್ತಾ ಪ್ರಶ್ನಿಸುತ್ತಾ ಬರಲಾಗಿದೆ. ನಿಮಗೆ ಟೈಮ್ ಆದಾಗ, “ಹಿಂದಿ ಹೇರಿಕೆ” ಎಂಬ ಟ್ಯಾಗಿನಡಿ ಬರುವ ಎಲ್ಲಾ ಅಂಕಣಗಳನ್ನೂ ಓದಿಕೊಳ್ಳಿ.
  – ಸಂಸ್ಕ್ರುತದ ಬಗೆಗೆ ನೀವು ಮಾತನಾಡುತ್ತಾ, ಕನ್ನಡದ ಸಾಹಿತ್ಯಕ್ಕೆ ಮೂಲ ಪ್ರೇರಣೆಯೇ ಸಂಸ್ಕ್ರುತ ಎಂದಿದೀರಿ. ಕನ್ನಡದಲ್ಲಿ ಸಾಹಿತ್ಯ ರಚನೆ ಸಾದ್ಯವಿದೆ ಎಂದು ಕೆಲವರು ತೋರಿಸಿದ್ದರೂ, ಆ ಚರ್ಚೆಯನ್ನು ಪಕ್ಕಕ್ಕಿಡೋಣ.
  ಗೋಲ್ವಾಲ್ಕರ್ ಅವರು ಸಂಸ್ಕ್ರುತವನ್ನು ಮುಂದೊಂದು ದಿನ ರಾಷ್ಟ್ರಬಾಷೆಯನ್ನಾಗಿ ಮಾಡಬೇಕು, ಸಂಸ್ಕ್ರುತವನ್ನೇ ಸಂವಹನ ಮಾಧ್ಯಮವಾಗಿ ಬಳಸಬೇಕು ಎಂದಿದಾರೆ. ರಾಷ್ಟ್ರಬಾಷೆ ಹೆಸರಿನಲ್ಲಿ ಯಾವ ಬಾಷೆಯ ಹೇರಿಕೆ ಮಾಡಿದರೂ ಅದು ಹೇರಿಕೆಯೇ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಂಸ್ಕ್ರುತ ಪ್ರೇರಣೆಯಾಗಿದೆ ಎನ್ನುವುದು, ಎಲ್ಲಾ ಕನ್ನಡಿಗರ ಮೇಲೆ ಸಂಸ್ಕ್ರುತ ಹೇರಲು ಹೇಗೆ ಸಮರ್ಥನೆಯಾಗುತ್ತದೆ? ಯಾವುದೇ ಭಾಷಿಗರ ಮೇಲೆ, ಇನ್ನೊಂದು ಭಾಷೆ ಹೇರುವ ಹಕ್ಕು ಯಾರಿಗಾದರೂ ಎಲ್ಲಿದೆ?
  – ಭಾರತವು ಒಕ್ಕೂಟವಾಗಿದೆ ಎಂಬುದನ್ನೇ ಅಲ್ಲಗಳೆಯುವಂತಿದೆ ತಮ್ಮ ಮಾತುಗಳು. ಸಂವಿದಾನದಲ್ಲಿ “ಭಾರತವು ರಾಜ್ಯಗಳ ಒಕ್ಕೂಟ” ಎಂಬುದನ್ನು ಹೇಳಲಾಗಿದೆ. ರಾಜ್ಯಗಳ ನಡುವಣ ತಿಕ್ಕಾಟಕ್ಕೆ ತಾವು ರಾಜ್ಯಗಳ ಇರುವಿಕೆಯೇ ಕಾರಣ ಎಂದು ಬಗೆದಂತಿದೆ. ಆದರೆ, ರಾಜ್ಯಗಳಿಗೆ ಅರ್ದಂಬರ್ದ ಆಡಳಿತ ಹಕ್ಕುಗಳನ್ನು ನೀಡಿ ಹೆಚ್ಚಿನ ಆಡಳಿತದ ಹಕ್ಕುಗಳನ್ನು ಕೇಂದ್ರವೇ ಇರಿಸಿಕೊಂಡಿರುವುದು ಈ ರೀತಿಯ ತಿಕ್ಕಾಟಕ್ಕೆ ಕಾರಣವಾಗಿದೆ. ನಾವು ನಿಜವಾದ ಫೆಡೆರಲ್ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇ ಆದರೆ, ಈ ತಿಕ್ಕಾಟಗಳಿಗೆ ರಾಜ್ಯಗಳೇ ಪರಿಹಾರ ಕಂಡುಕೊಳ್ಳುತ್ತವೆ. ಸರಿಯಾದ ಒಕ್ಕೂಟವನ್ನು ಬೆಳೆಸಿದ್ದೇ ಆದರೆ, ಏಕತೆಯೂ ಬರುತ್ತದೆ. ಏಕತೆಯ ಹೆಸರಿನಲ್ಲಿ, ಒಂದು ಬಾಷೆಯನ್ನು ಇನ್ನೊಂದು ಬಾಷೆಯ ಮೇಲೆ ಹೇರಲು ಹೊರಟರೆ ಏಕತೆ ಸಾದಿಸುವುದು ಕಷ್ಟ. ಬಾಷೆಯ ಹೇರಿಕೆ ಸಹಿಸಲಾರದೇ ಬೇರಾದ ನಾಡುಗಳ ಉದಾಹರಣೆ ನಮ್ಮ ಮುಂದೆಯೇ ಇದೆ.
  ಗೋಲ್ವಾಲ್ಕರ್ ಅವರು ಫೆಡೆರಲ್ ವ್ಯವಸ್ತೆಯ ವಿರುದ್ದವಾಗಿದ್ದರು ಅನ್ನೋದು, ಅವರ ಹೊತ್ತಗೆಯಲ್ಲಿ ಕಂಡಿದೆ. ಇವತ್ತಿಗೂ ಆರ್.ಎಸ್.ಎಸ್ ಅದೇ ನಿಲುವನ್ನು ಹೊಂದಿದೆಯಾ ಎಂಬುದು ಪ್ರಶ್ನೆ.

  ಉತ್ತರ
  • ಅಭಿಮನ್ಯು
   ಫೆಬ್ರ 4 2012

   ಬಳಗದವರ ಎರಡನೇ ಲೇಖನದ ಪದ ಬಳಕೆ ನೋಡಿ ನಗು ಬಂತು, ಆಂತರಿಕ ಪ್ರಜಾಪ್ರಭುತ್ವವಂತೆ,ವಾಕ್ ಸ್ವಾತಂತ್ರ್ಯವಂತೆ… ವೇದಾಂತ ಹೇಳಿ ಬದನೆಕಾಯಿ ತಿನ್ನೋದು ಅಂತ ಇದಕ್ಕೆ ತಾನೇ ಹೇಳೋದು… ಇವರ ಆತಂರಿಕ ಪ್ರಜಾಪ್ರಭುತ್ವದ ಬಗ್ಗೆ ನಾವು ತಿಳಿದಿದ್ದೇವೆ,ಓದಿಕೊಂಡಿದ್ದೇವೆ… ತಮ್ಮ ತಟ್ಟೆಯ ಹೆಗ್ಗಣ ಬಿಟ್ಟು ಪಕ್ಕದ ತಟ್ಟೆಯ ನೊಣದ ಬಗ್ಗೆ ಪಾಪ ಚಿಂತಾಕ್ರಾಂತರಾಗಿದ್ದಾರೆ…

   ಉತ್ತರ
 17. Chetan
  ಫೆಬ್ರ 3 2012

  ಮಾನ್ಯ ಅಶ್ವಿನ್ ಎಸ್ ಅಮೀನ್ ಅವರೇ,
  ->”ಗೋಳವಾಲ್ಕರ್ ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯನ್ನಾಗಿ ತರಲು ಇಚ್ಚಿಸಿದ್ದರು ನಿಜ. ಅದಕ್ಕೆ ಒಂದು ಗಟ್ಟಿಯಾದ ಕಾರಣವೂ ಇತ್ತು. ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ. ಈ ಕಾರಣಗಳಿಂದ ಹಿಂದಿಯು ಭಾರತದಂತಹ ದೇಶದಲ್ಲಿ ವ್ಯಾಪಕ ಸಂವಹನ ಮಾಧ್ಯಮವಾಗಬಲ್ಲುದು ಎಂಬ ದೂರದೃಷ್ಟಿ ಗುರೂಜಿಯವರದಾಗಿತ್ತು. ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ. ಕೇವಲ ಗುರೂಜಿಯವರಷ್ಟೇ ಅಲ್ಲದೆ, ಈ ದೇಶದ ‘ರಾಷ್ಟ್ರಪಿತ’ ಎಂದು ಕರೆಸಿಕೊಳ್ಳುವ ಗಾಂಧೀಜಿಯವರು ಕೂಡ ದೇಶದ ಮೂಲೆ ಮೂಲೆಗಳಲ್ಲಿ ಹಿಂದಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಂಡಿರುತ್ತೀರಿ. ಆ ಕಾರಣಕ್ಕೆ ಗಾಂಧಿಯವರನ್ನು ಕೂಡ ವಿರೋಧಿಸುವಿರೇನು?!.”
  ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕೆನ್ನುವ ಗಟ್ಟಿಯಾದ ಕಾರಣ ಇವತ್ತಿಗೂ ಪ್ರಸ್ತುತವೇ? ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದೀರಿ ತಾವು ದಯವಿಟ್ಟು ನಮ್ಮ ಕರ್ನಾಟಕವನ್ನು ಒಮ್ಮೆ ಸುತ್ತಿ ನೋಡಬೇಕು, ಅಲ್ಲಿ ಜನರಿಗೆ ಕನ್ನಡವಲ್ಲದೇ ಬೇರೆ ಭಾಷೆಗಳು ಬರುವುದು ತೀರಾ ಕಡೆಮೆ, ಹಿಂದಿ ಭಾಶೆ ಗೊತ್ತೇ ಇರುವುದಿಲ್ಲ. ಗಡಿ ಭಾಗದಲ್ಲಿರುವ ಜನರು ತಮ್ಮ ಪಕ್ಕದ ರಾಜ್ಯದ ನುಡಿ ಕಲಿತಿರುವ ಸಾಧ್ಯತೆ ಇದೆ, ಒಳನಾಡಿಗೆ ಬಂದಂತೆ ಅಲ್ಲಿ ಕನ್ನಡವೊಂದೇ ಕಾಣಿಸುತ್ತದೆ. ಇದೇ ಪರಿಸ್ಥಿತಿಯನ್ನು ಹೆಚ್ಚು ಕಡಿಮೆ ಹಿಂದಿಯೇತರ ರಾಜ್ಯಗಳಲ್ಲಿ ನಾವು ಕಾಣಬಹುದು ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಹೀಗೆ… ಇನ್ನು ಹಿಂದಿಯನ್ನು ರಾಷ್ಟ್ರ ಭಾಷೆಯಂದು ಹೇಳಿ ಎಲ್ಲರೂ ಕಲಿತರೆ ಆಗುವ ಪ್ರಯೋಜನ ಹೊರ ರಾಜ್ಯದಿಂದ ಬರುವ ಹಿಂದಿ ಜನರಿಗೆ ಮಾತ್ರ. ಗಣತಿಯ ಪ್ರಕಾರ ಕರ್ನಾಟಾಕದಿಂದ ಉದ್ಯೋಗ ಅರಸಿ ಹೊರ ಹೋಗುವ ಜನರು ತೀರಾ ಕಡಿಮೆ. ಆದರೆ ನಿಮಗೂ ತಿಳಿದಿರುವಂತೆ ಉತ್ತರ ಭಾರತದ ಜನರು ಕರ್ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ. ಹಿಂದಿ ಮಾತನಾಡುವ ಕನ್ನಡಿಗನಿಂದ ಆಗಬಹುದಾದ ಉಪಯೋಗವೆಂದರೆ ಅವರಿಗೆ ಕನ್ನಡ ಕಲಿಸದೇ ನಮ್ಮ ರಾಜ್ಯದ ಎಲ್ಲಾ ಸವಲತ್ತುಗಳನ್ನು ಅವನ ಭಾಷೆಯಲ್ಲೇ ನೀಡುವುದು. ಈ ಒಂದು ಭಾಷೆ ಮೇಲುಗೈಯನ್ನು ಸಂಘವು ಒಪ್ಪುತ್ತದೆಯೇ? ಗಾಂಧಿಯವರ ಹಿಂದಿ ಭಾಷೆ ಪ್ರಾಚಾರವನ್ನು ಖಂಡಿತವಾಗಿಯೂ ನಾವು ಪ್ರಶ್ನಿಸೋಣ.

  ->”ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ. ಪ್ರಾಚೀನ, ಮಧ್ಯಕಾಲ ಭಾಷೆಗಳೊಳಗೆ ಸಂಸ್ಕೃತದ ಬೇರುಗಳು ಹಾಸುಹೊಕ್ಕಾಗಿ ಕಂಡು ಬರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಕಲ್ಪನೆಗಳು, ಪರಿಭಾಷೆಗಳ ಕುರಿತು ಹೇಳುವ ಕಾಲಕ್ಕೆ ಇಂದಿಗೂ ನಾವು ಸಂಸ್ಕೃತದ ಕಡೆಗೆ ನೋಡುತ್ತೇವೆ. ಇದು ಸಂಸ್ಕೃತ ಭಾಷೆಗಿರುವ ಗಟ್ಟಿತನವನ್ನು ಸೂಚಿಸುತ್ತದೆ. ಇದೇ ಕಾರಣಗಳಿಗಾಗಿ ಗುರೂಜಿಯವರು ಸಂಸ್ಕೃತದ ಬಳಕೆಯನ್ನು ಉತ್ತೆಜಿಸಿದರು ಮತ್ತು ಸಂಸ್ಕೃತ ಬಳಕೆಗೆ ಬರುವವರೆಗೆ ಅನುಕೂಲದ ದೃಷ್ಟಿಯಿಂದ ನಮ್ಮದೇ ದೇಶದ ಹಿಂದಿಗೆ ಆದ್ಯತೆ ನೀಡಿದರು.”
  ಎಲ್ಲಾ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ ಎಂದು ಹೇಗೆ ಹೇಳುತ್ತೀರಿ? ಕನ್ನಡದ ವಿಷಯಕ್ಕೆ ಬಂದರೆ ಬರಿ ವಚನ ಸಾಹಿತ್ಯ ಒಂದೇ ಅಲ್ಲಾ, ದಾಸ ಸಾಹಿತ್ಯ, ಸೂಫಿ ಸಾಹಿತ್ಯ, ಬರವಣಿಗೆಯಲ್ಲಿ ಇರದ ಜನಪದ ಸಾಹಿತ್ಯ ಇವುಗಳಲ್ಲಿ ಯಾವುದರಲ್ಲೂ ಸಂಸ್ಕ್ಟೃತ ಬಳಸಿರುವ ಅಥವಾ ಅದನ್ನು ಮೂಲವಾಗಿಟ್ಟುಕೊಂಡು ಕಟ್ಟಿರುವ ಸಾಹಿತ್ಯ ಎಂದು ಹೇಗೆ ಹೇಳುತ್ತೀರಿ? ಇಂದಿಗೂ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕು ಎನ್ನುವುದು ಸಂಘದ ನಿಲುವಾಗಿದೆಯೇ? ಇನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಗೂ ಪಾರಿಭಾಷಿಕ ಪದಗಳಿಗೆ ತಿರುಗಿ ನೋಡುವುದು ನಮ್ಮಗಳ ಮಿತಿಯೇ ಹೊರತು ಭಾಷೆಯ ಮಿತಿಯಲ್ಲ. ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಜನರನ್ನು ಮುಟ್ಟಬೇಕೆಂದರೆ ಜನರಾಡುವ ಹಾಗೂ ಅವರಿಗೆ ಅರ್ಥವಾಗು ಭಾಷೆಯಲ್ಲಿ ಕೊಡಬೇಕೆ ಹೊರತು ನಾಲಿಗೆ ಹೊರಳುವುದಕ್ಕೂ ಕಷ್ಟವಿರುವ ಪದಗಳಿಂದಲ್ಲ.

  ->”ರಾಜ್ಯಗಳ ಸ್ವಯಂಮಾಧಿಕಾರದ ಬಗ್ಗೆ ಪ್ರಸ್ತಾಪಿಸಿರುವ ಬನವಾಸಿ ಬಳಗದ ಲೇಖಕರು ಗುರೂಜಿಯವರ ಅಖಂಡ ಭಾರತದ ನಿಲುವನ್ನು ವಿರೋಧಿಸುತ್ತಿದ್ದಾರೆ. ಬಹುಶಃ ಲೇಖಕರ ಮನಸ್ಸು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಸಂಕುಚಿತಗೊಂಡಂತೆ ಕಾಣುತ್ತದೆ. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲ. ಆದರೆ ಗುರೂಜಿ ಗೋಳವಾಲ್ಕರ್ ಅವರು ದೇಶದ ಹಾಗು ದೇಶದ ಜನರ ಏಕತ್ವದ ಬಗ್ಗೆ ಚಿಂತಿತರಾಗಿದ್ದರು. ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕೃತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಾಮಾಧಿಕಾರ ಕೊಡುವುದನ್ನು ಗುರೂಜಿ ವಿರೋಧಿಸಿದರು. ಬಹುಶಃ ಈಗ ನೀರು, ನೆಲ, ಭಾಷೆಗಾಗಿ, ರಾಜ್ಯ-ರಾಜ್ಯಗಳು ಕಚ್ಚದುವುದನ್ನು ಗುರೂಜಿಯವರು ಮುಂಚೆಯೇ ಮನಗಂಡಿರಬೇಕು. ಇಂತಹ ಒಬ್ಬ ದೂರದೃಷ್ಟಿಯ ನೇತಾರನನ್ನು ಹೊಂದಿದ್ದ ಆರೆಸ್ಸೆಸ್ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಕರ್ನಾಟಕದ ಒಳಗೂ ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು, ಮುಂಬೈ ಕರ್ನಾಟಕ ಎಂಬ ಹಲವು ಕರ್ನಾಟಕಗಳಿವೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗುತ್ತದೆ. ಇದು ನಾಳೆ ಪ್ರಾಂತೀಯತೆಯನ್ನು ಮತ್ತೆ ಕೆಣಕುವುದಿಲ್ಲ ಎಂಬುದಕ್ಕೆ ಏನೂ ಗ್ಯಾರಂಟಿ?”
  ರಾಜ್ಯದ ಬಗ್ಗೆ ಮಾತನಾಡಿದವರು ಸಂಕುಚಿತ ಮನಸ್ಸುಳ್ಳವರು ಹಾಗೂ ದೇಶದ ಬಗ್ಗೆ ಮಾತನಾಡಿದರೆ ದೇಶ ಪ್ರೇಮಿ ಅನ್ನೋ ಹಣೆಪಟ್ಟಿ ಹಾಸ್ಯಾಸ್ಪದವಾಗಿದೆ. ಸಂವಿಧಾನದಲ್ಲಿ ಭಾರತವನ್ನು Union of States ಅಂತ ಕರೆಯಲಾಗಿದೆ. ವಿವಿಧ ರಾಜ್ಯಗಳ ಬುಡವನ್ನೇ ಗಟ್ಟಿ ಮಾಡದೇ ಒಂದೇ ಬಾರಿಗೆ ಅಖಂಡ ಹಾಗೂ ಸಮೃದ್ಧ ಭಾರತವನ್ನ ಕಟ್ಟುತ್ತೇವೆ ಅನ್ನೋ ವಾದದಲ್ಲಿ ಎಷ್ಟು ಟೊಳ್ಳು ಎಷ್ಟು ಗಟ್ಟಿ ಅನ್ನುವುದನ್ನು ನಿರ್ಧಾರ ಮಾಡಬೇಕಾಗುತ್ತದೆ. ಜನರ ಮಧ್ಯ ಏಕತೆಯನ್ನು ಹೇಗೆ ತರುತ್ತೀರಿ? ಒಂದು ಕಡೆ ಒಂದು ಭಾಷೆಯನ್ನು ಎಲ್ಲದಕ್ಕಿಂತ ದೊಡ್ಡದು ಎಂದು ಹೇಳಿ ಆ ಭಾಷೆ ಬರದ ಜನರಲ್ಲಿ ಕೀಳರಿಮೆ ತುಂಬುವ ಹಾಗೆ ಮಾಡಿ, ನೀನು ಆ ಭಾಷೆ ಕಲಿಯದಿದ್ದರೆ ಭಾರತೀಯನೇ ಅಲ್ಲ ಎನ್ನುವ ವಾದದ ಮೂಲಕವೋ? ಅಥವಾ ಭಾರತದಂತಹ ವೈವಿಧ್ಯ ದೇಶದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನವಾದ ಅವಕಾಶ ಹಾಗೂ ಗೌರವವನ್ನು ಕೊಡುವುದರ ಮೂಲಕವೋ? ಗುರೂಜಿಯವರು ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕ್ಟುತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಂಅಧಿಕಾರ ಕೊಡುವುದನ್ನು ವಿರೋಧಿಸಿದ್ದರು ಅಂತ ಬರಿದಿದ್ದೀರಿ ಹಾಗಾದರೆ ಗೂರೂಜಿಗೆ ಭಾರತದ ವೈವಿಧ್ಯತೆಯ ಮೇಲೆ ಅಭಿಮಾನ ಇರಲಿಲ್ಲವೇ? ಇವತ್ತು ಭಾರತವನ್ನು ಜನರು ಗುರುತಿಸುವುದು ಅದರ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತಿರುವುದಕ್ಕೋ ಅಥವಾ ಭಾರತದಲ್ಲಿ ಎಲ್ಲರೂ ಒಂದೇ ತರಹ ಅನ್ನುವುದಕ್ಕೋ? ವಿವಿಧತೆಯ ಬಗ್ಗೆ ಸಂಘವು ಇನ್ನೂ ಇದನ್ನು ಒಪ್ಪುತ್ತದೆಯೇ? ಇಲ್ಲಿ ಕರ್ನಾಟಕದ ಕುಲಪುರೋಹಿತ ಶ್ರೀ ಆಲೂರು ವೆಂಕಟ ರಾಯರು ಹೇಳಿರುವ ಮಾತನ್ನ ಉಲ್ಲೇಖಿಸುತ್ತೇನೆ “ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು.” “ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. ”

  ->”ಆರೆಸ್ಸೆಸ್ ಗೆ ‘ಬಿಜೆಪಿ’ ಎನ್ನುವ ಇನ್ನೊಂದು ಮುಖವಿದೆ ಎಂದಿದ್ದೀರಿ. ಬಿಜೆಪಿ ಆರೆಸ್ಸೆಸ್ಸಿನ ಮುಖವಲ್ಲ. ಅದು ಆರೆಸ್ಸೆಸ್ ಮೂಲದಿಂದ ಬಂದ ಒಂದು ರಾಜಕೀಯ ಪಕ್ಷವಷ್ಟೇ. ಆರೆಸ್ಸೆಸ್ಸಿಗೆ ತನ್ನದೇ ಆದ ಶಿಸ್ತು-ಸಿದ್ದಾಂತಗಳಿವೆ, ಜೊತೆಗೆ ಆರೆಸ್ಸೆಸ್ಸಿನ ಉಸ್ತುವಾರಿ ನೋಡಿಕೊಳ್ಳಲು ಬೇರೆಯವರದ್ದೇ ಆದ ಒಂದು ಪಡೆಯಿದೆ”
  ಹಾಗಿದ್ದರೆ ಬಿಜೆಪಿಗೂ ಹಾಗೂ ಸಂಘಕ್ಕು ಯಾವುದೇ ನಂಟಿಲ್ಲವೆಂದು ಹೇಳುತ್ತಿದ್ದೀರಾ? ಹಾಗಿದ್ರೆ ಬಿಜೆಪಿ ಪಕ್ಷದ ಹಿತ ಚಿಂತರಾಗಿರುವ ಸಂಘವು ಬಿಜೆಪಿ ಪಕ್ಷದ ಈ ಕೆಲಸಗಳಿಗೆ ಏನು ಹೇಳುತ್ತದೆ?
  ೧. ಕಡಿಮೆ ಮಕ್ಕಳು ಇದ್ದಾರೆ ಅನ್ನೋ ನೆಪದಲ್ಲಿ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರ. ಅವೇ ಜಾಗಗಳಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಅವಕಾಶ ನೀಡುತ್ತಿದೆ.
  ೨. ವಿವಿಧ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕ್ಟುತ ವಿಭಾಗದಲ್ಲಿ ಓದಲು ವಿಧ್ಯಾರ್ಥಿಗಳಿಲ್ಲದಾಗ, ವಿರೋಧದ ನಡುವೆ ಸಂಸ್ಕ್ಟುತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವುದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿಸುತ್ತದೆ
  ೩. ಶಾಲೆಗಳಲ್ಲಿ ಕೇವಲ ಭಗವದ್ ಗೀತೆಯನ್ನು ಕಲಿಸಲು ಹೊರಟಿರುವುದು ಯಾಕೆ. ಮೊದಲನೆಯದಾಗಿ ಧರ್ಮಗಳನ್ನು ಆಚರಣೆಗೆ ತರಬೇಕಾಗಿರುವುದು ನಮ್ಮ ಮನೆಗಳಲ್ಲಿ ಹಾಗು ಅದನ್ನು ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸಬೇಕು. ಅದನ್ನ ಬಿಟ್ಟು ಏನು ಅರಿಯದ ಮಕ್ಕಳಲ್ಲಿ ಒಡಕು ಉಂಟು ಮಾಡುವುದು ಪಾಪವೇ ಸರಿ. ಮಕ್ಕಳಿಗೆ ಕೊಡಬೇಕಾಗಿರುವುದು ಬದುಕಲು ಬೇಕಾಗಿರುವ ಕೌಶಲ್ಯ ಹಾಗೂ ಶಿಕ್ಷಣವೇ ಹೊರತು ಧರ್ಮಾಧಾರಿತ ಶಿಕ್ಷಣವಲ್ಲ.
  ೪. ಅಧಿಕಾರಕ್ಕೆ ಬರುವಾಗ ರೆಡ್ಡಿ ಹಾಗೂ ಇತರರನ್ನು ಉಪಯೋಗಿಸಿಕೊಂಡ ಸಂಘವು ನಂತರ ಹಗರಣ ಬಯಲಾದಾಗ ಯಡಿಯೂರಪ್ಪ ಹಾಗೂ ರೆಡ್ಡಿಗಳ ಮೇಲೆ ಹಾಕಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ಮಾತನ್ನ ಜಗತ್ತಿಗೆ ಹೇಳೂತ್ತೆ. ಹೊಣೆಗಾರಿಕೆ ಇಲ್ಲದೇ ಅಧಿಕಾರ ಚಲಾಯಿಸುತ್ತಿದೆ. ಆಪತ್ತು ಬಂದಾಗ ಸುಲಭವಾಗಿ ನುಣುಚಿಕೊಳ್ಳುತ್ತದೆ.
  ೫. ಕನ್ನಡಿಗರಿಗೆ ಬೇಡವಾಗಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಎಲ್ಲರ ವಿರೋಧದ ನಡುವೆಯೂ ಸ್ಥಾಪಿಸಲಾಯಿತು.
  ೬. ಇನ್ನು ಮುಖ್ಯವಾಗಿ ಇತ್ತೀಚಿಗೆ ಶಾಲೆಯಲ್ಲಿ ತರಲಾಗುತ್ತಿರುವ ಪಠ್ಯವನ್ನು ಕೇಸರಿಕರಣಗೊಳಿಸಲಾಗುತ್ತಿದೆ. ಬಾಲ್ಯದಿಂದಲೇ ಮಕ್ಕಳ ಮನಸಲ್ಲಿ ದ್ವೇಷದ ಬೀಜವನ್ನು ಬಿತ್ತಿ, ಸಮಾಜದ ಸಾಮರಸ್ಯವನ್ನು ಕೆಡಿಸುವುದಕ್ಕೆ ಹೊರಟಿದೆ. ಇದಕ್ಕೆ ಉದಾಹರಣೆಯಾಗಿ ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಈ ಲೇಖನವನ್ನ ನೋಡಿ. http://www.prajavani.net/web/include/story.php?news=3374&section=30&menuid=14

  ->”ಇಲ್ಲಿ ಮೋಹನ್ ಭಾಗವತರ ಮಾತುಗಳನ್ನು ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ಕನ್ನಡಕ್ಕೆ ಅಗ್ರಸ್ಥಾನ ನೀಡಲಾಗಿದೆ.”
  ಸಂಘದ ಮುಖ್ಯಸ್ಥರ ಮಾತುಗಳನ್ನು ನಾವು ಒಪ್ಪುತ್ತೇವೆಯೋ ಇಲ್ಲವೋ ಅನ್ನುವುದು ನಿರ್ಧಾರವಾಗಬೇಕೆ ಹೊರತು ಅದನ್ನು ಹೊರತುಪಡಿಸಿ ನೋಡುವುದು ಬೇಡ.

  ಉತ್ತರ
 18. Ajay
  ಫೆಬ್ರ 3 2012

  ಸುಮ್ಕೆ ವಾದ ಮಾಡಿ ಟೈಂ ವೇಸ್ಟ್ ಮಾಡ್ಬ್ಯಾಡಿ . ಎಲ್ರೂ ಹೋಗಿ ಕನ್ನಡದ ಕೆಲ್ಸ ಎಲ್ಲೆಲ್ಲಾಯ್ತದೋ ಅಲ್ಲಿ ಮಾಡಿ. ಇಂಟರ್ನೆಟ್ಟಲ್ಲೇ ಆದ್ರೆ ಅಲ್ಲೇ ಮಾಡಿ. ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ ಅಂದ್ರೆ ಹೇಳಿ. ನಾನು ತೋರಿಸ್ತೇನೆ. ಕನ್ನಡದ ಕೆಲಸಗಳು ರಾಶಿ ರಾಶಿ ಬಿದ್ದಿವೆ. ನಿಮ್ಮ ಟೈಂ ಅದಕ್ಕೆ ಬಳಸಿ. ಕಿತ್ತಾಡ್ಕಂಡು ಮನಸು ದೂರ ಮಾಡ್ಕಳದು ಬೇಡ.

  ಉತ್ತರ
  • first stand
   ಫೆಬ್ರ 3 2012

   True Ajay. The irony is few people here do not know how to differentiate between religion and nationalism. They think one has to be hindu, one has to speak sanskrita cladded hindi, one has to hate muslims and chirstians, one has to oppose social justice mechanisms like reservation to become Indians. I feel pity about their emotional intellectual which is confined to few same religion, same caste friends and peers.

   ಉತ್ತರ
  • ಫೆಬ್ರ 3 2012

   ಚಿನ್ನದಂತ ಮಾತು, ಅವರನ್ನ ಇವ್ರು ಇವರನ್ನ ಅವ್ರು, ಒಟ್ನಲ್ಲಿ ಲಾಸು ನಮ್ಮ ಕನ್ನಡಕ್ಕೆ, ಒಟ್ಗೆ ಕನ್ನಡ ಸೇವೆ ನಡೀಲಿ. 🙂 ದಾದಾ ಹೇಳ್ತಾರೆ ಅರ್ಥ ಮಡ್ಕೊಲ್ರಪ್ಪ 🙂 🙂

   ಉತ್ತರ
 19. ಫೆಬ್ರ 3 2012

  ಉತ್ತಮ ವಾದ ಲೇಖನ … ಅಶ್ವಿನ್ …
  ಸೇವಾ ಭಾರತೀಯ ಕಾರ್ಯವನ್ನು ಎಂಥ ವಿರೋದಿಗಳು ಮೆಚ್ಚುತಾರೆ .. ಅಂಥದರಲ್ಲಿ … ಎಣ್ಣೆ ಹೊಡ್ಕೊಂಡು ಕಾಫಿ ಆಯ್ತಾ ? ಅಂತ ಕೇಳುವವರು ಕೂಡ ಮೆಚ್ಚಲೇ ಬೇಕು .. ಮುಖ್ಯವಾಗಿ ಅವರುಗಳ ಕಣ್ಣು ಕುಕ್ಕಿದ್ದು .. ಹುಬ್ಬಳ್ಳಿ ಸಮಾವೇಶ … ಅಷ್ಟು ಜನ ಸೇರಿದರು ಎಲ್ಲ ಸಾಂಗ ವಾಗಿ ನಡೆದಿತ್ತು .. ಆ ಶಿಸ್ತು ನೋಡಿ ಮತ್ತು ಅದರ ಯಶಸು ಇವರುಗಳಿಗೆ ಸಹಿಸಲು ಆಗುತ್ತಿಲ್ಲ …. ಅದಕ್ಕೆ ಇಲ್ಲಾ ಸಲ್ಲದ ಆಪಾದನೆ ಮಾಡುತಿದ್ದಾರೆ .. “ಕಳ್ಳನಿಗೆ ಸುಳ್ಳು ಸಾಕ್ಷಿ ” ಅನ್ನೋವಂತೆ ಅವರನ್ನು ಬೆಂಬಲಿಸಿಕೊಂಡು ಬರೆವ ಮಾತೊಂದು “faceless” ಬ್ಲಾಗ್ …. ಇವರದ್ದು ಷರ ಬೇರೆ!!!…
  “ಕೈಯಲ್ಲಿ ಆಗದವನು ಮೈ ಪರಚಿಕೊಂಡ” ಅನ್ನೋವಂತೆ ಇವರುಗಳು ಸಂಘವನ್ನು ಕನ್ನಡ ವಿರೋದಿ ಅನ್ನುವಂತೆ ಬಿಂಬಿಸುತಿರುವದು… ಇದು ತುಂಭಾ ಬೇಸರದ ಸಂಗತಿ… ಇಂತಹ ಹೀನ ಮನಸಿನ ವ್ಯಕ್ತಿಗಳ … ಚಿಲ್ಲರೆ ಆಲೋಚನೆ ದೇಶದ ಏಕತೆಗೆ ದಕ್ಕೆ ತರುತದೆ…..
  ಧನ್ಯವಾದ ಗಳು ಅಶ್ವಿನ್ ಮತ್ತು ನಿಲುವೆ ತಂಡಕ್ಕೆ …

  ಉತ್ತರ
 20. ಫೆಬ್ರ 3 2012

  ಸಂಫದವರು ದ್ವೇಷ ಭಾವನೆ ಹುಟ್ಚಿಸಬಾರದು .. ಇದು ಒಪ್ಪತಕ್ಕಂಥ ಮಾತು, ಆದರೆ ಸಂಫದ ತನ್ನ ನಿಲುವುಗಳನ್ನು ಸ್ಪಷ್ಟಪಡಿಸಬೇಕು ಎಂಬ ಆಗ್ರಹದಲ್ಲಿ ಸಂಫಕ್ಕಿಂತ ಹೆಚ್ಚಿನ ದ್ವೇಷ ಭಾವನೆಗಳೆಡೆಗೆ ಹೋಗುವದು ಎಷ್ಟರ ಮಟ್ಟಿಗೆ ಸರಿ?

  ಉತ್ತರ
 21. Ashwi S.Amin
  ಫೆಬ್ರ 3 2012

  ಬನವಾಸಿ ಬಳಗದ ಕೆಲವರು ‘ನಿಲುಮೆಗೆ’ ಬಂದು ಇಲ್ಲಿ ಅಭಿಪ್ರಾಯಗಳನ್ನು ತಿಳಿಸಿರುವುದು ಸ್ವಾಗತಾರ್ಹ..:) ನನ್ನ ಮೇಲಿನ ಲೇಖನವನ್ನು ಮತ್ತೊಮ್ಮೆ ಸರಿಯಾಗಿ ಓದಿದರೆ ಬಹುಶಃ ನಿಮ್ಮ ಈ ಮೇಲಿನ ಪ್ರಶ್ನೆಗಳಿಗೆಲ್ಲ ಉತ್ತರ ಸಿಗಬಹುದು ಅಂದುಕೊಳ್ಳುತ್ತೇನೆ.. ನಾವು ಯಾರೂ ಕನ್ನಡದ ದ್ವೇಷಿಗಳಲ್ಲ. ನಾನೂ ಕನ್ನಡಿಗನೆನಿಸಿಕೊಳ್ಳಲು ಇಷ್ಟ ಪಡುತ್ತೇನೆ ಜೊತೆಗೆ ನಾನು ಒಬ್ಬ ಭಾರತೀಯ ಎಂಬುದನ್ನೂ ಮರೆಯುವುದಿಲ್ಲ. ಭಾರತ ಅಸಂಖ್ಯ ಭಾಷೆಗಳನ್ನು ತನ್ನಲ್ಲಿ ತುಂಬಿಕೊಂಡಿರುವ ರಾಷ್ಟ್ರ. ಹಾಗೆಂದ ಮಾತ್ರಕ್ಕೆ ಎಲ್ಲ ಭಾಷೆಗಳನ್ನು ‘ರಾಷ್ಟ್ರ ಭಾಷೆ’ಯನ್ನಾಗಿ ಮಾಡಲಾಗದು. ಬಹುಶಃ ಹಿಂದಿಯ ಬದಲು ಕನ್ನಡವನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಿದ್ದರೆ ನೀವು ತುಟಿಕ್ ಪಿಟಿಕ್ ಎನ್ನುತ್ತಿರಲಿಲ್ಲವೇನೋ? ಆದರೆ ಕನ್ನಡ ರಾಷ್ಟ್ರ ಭಾಷೆಯಾಗಿ ಭಾರತದೆಲ್ಲೆಡೆ ಪರಿಚಿತವಾಗಬೇಕಾದರೆ ಇನ್ನು 1 ಶತಮಾನ ಹಾಗು ಅದಕ್ಕಿಂತಲೂ ಹೆಚ್ಚಿನ ಸಮಯ ಬೇಕು! ಯಾಕೆಂದರೆ ಕನ್ನಡ ಕರ್ನಾಟಕ ಹೊರತು ಪಡಿಸಿ ಮತ್ತೆಲ್ಲೂ ಪರಿಚಿತವಾಗಿಲ್ಲದಿರುವುದು. ಒಂದು ರೀತಿಯಲ್ಲಿ ನೋಡುವುದಾದರೆ ನಮ್ಮದೇ ಕರ್ನಾಟಕದಲ್ಲಿ ಕನ್ನಡ ಎಲ್ಲಿದೆ ಸ್ವಾಮೀ..?! ಹೈದ್ರಾಬಾದ್ ಕರ್ನಾಟಕದಲ್ಲಿ ತೆಲುಗು, ಮುಂಬೈ ಕರ್ನಾಟಕದಲ್ಲಿ ಮರಾಟಿ, ಇನ್ನು ಕರ್ನಾಟಕದ ಹೆಮ್ಮೆಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಹುಡುಕುವುದು ತುಂಬಾ ಕಷ್ಟವೇ..! ಇದು ನಿಮಗೆ ಗೊತ್ತಿರುವ ವಿಷಯವೇ. ಬೆಂಗಳೂರಿನ 70 ಪ್ರತಿಷತದಷ್ಟು ಜನ ಕನ್ನಡ ಬಿಟ್ಟು ಅನ್ಯ ಭಾಷೆಗಳಾದ ತಮಿಳು-ತೆಲುಗು-ಮಲಯಾಳಂ ಮಾತನಾಡುತ್ತಾರೆ. ನಿಮಗೆ ಹಿಂದಿ ಮೇಲಿರುವ ಸಿಟ್ಟು ಈ ಅನ್ಯ ರಾಜ್ಯದ ಭಾಷೆಗಳ ಮೇಲೆ ಯಾಕಿಲ್ಲ. ಹಿಂದಿ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಸ್ವಲ್ಪ ಮಟ್ಟಿಗಾದರೂ (ಹೆಚ್ಚೇ ಇದೆ ಬಿಡಿ) ಪರಿಚಿತವಾಗಿರುವ ಭಾಷೆ. ಹಾಗಿರುವಾಗ ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಸ್ವೀಕರಿಸುವುದರಲ್ಲಿ ತಪ್ಪೇನು? ಹಿಂದಿಯನ್ನು ನಮ್ಮ ‘ರಾಜ್ಯ’ ಭಾಷೆಯನ್ನಾಗಿ ಏನೂ ಹೇರಿಲ್ಲವಲ್ಲ.! ರಾಜ್ಯ ಭಾಷೆ ಎಂದೆಂದಿಗೂ ಕನ್ನಡವೇ ತಾನೇ..! ಮೊದಲು ‘ರಾಜ್ಯ ಭಾಷೆ’, ‘ರಾಷ್ಟ್ರ ಭಾಷೆ’ ಈ ಎರಡನ್ನೂ ಬಿಟ್ಟು ಇತರ ಭಾಷೆಗಳಾದ ತಮಿಳು,ತೆಲುಗು, ಮಲಯಾಳಂ ಗಳು ಕರ್ನಾಟಕದಲ್ಲಿ ಪಾರುಪತ್ಯ ಸ್ಥಾಪಿಸುವುದನ್ನು ನಿಲ್ಲಿಸಲು ಪ್ರಯತ್ನಿಸಿ ಸೋದರರೇ.
  ತಿರುವಳ್ಳುವರ್ ಪ್ರತಿಮೆ ಬೆಂಗಳೂರಿನಲ್ಲಿ ಸ್ಥಾಪಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುವ ನೀವುಗಳು ತಮಿಳುನಾಡಿನಲ್ಲಿ ‘ಸರ್ವಜ್ಞನ’ ಪ್ರತಿಮೆ ಅನಾವರಣಗೊಳಿಸಿದ್ದನ್ನು ಯಾಕೆ ಹೊಗಳುವುದಿಲ್ಲ ಇಲ್ಲವೇ ಆ ಬಗ್ಗೆ ಯಾವುದೇ ಮಾತನಾಡುವುದಿಲ್ಲ?!. ಸಾಮರಸ್ಯತೆ ನಿಮಗೆ ಇಷ್ಟವಿಲ್ಲವೇ..?!! ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಒಪ್ಪದ ನೀವು ಮುಂದೊಂದು ದಿನ ನಮ್ಮ ರಾಷ್ಟ್ರ ಗೀತೆಯಾದ ‘ಜನಗಣಮನ’ ವು ಬಂಗಾಳಿ ಭಾಷೆಯಲ್ಲಿದೆ ಎಂಬ ಕಾರಣಕ್ಕೆ ವಿರೋಧಿಸುವುದಿಲ್ಲ ಎಂದು ಏನು ಗ್ಯಾರಂಟಿ.? ಅದು ಆಗ ರಾಷ್ಟ್ರ ದ್ರೋಹವಾಗದೆ??!
  ಕನ್ನಡವನ್ನು ಪ್ರೀತಿಸೋಣ ಜೊತೆಗೆ ಅನ್ಯ ಭಾಷೆಗಳನ್ನೂ ಗೌರವಿಸೋಣ.. ಜೈ ಕನ್ನಡಾಂಬೆ.. ಜೈ ಭಾರತ ಮಾತೆ..

  ಉತ್ತರ
  • Priyank
   ಫೆಬ್ರ 3 2012

   ಅಶ್ವಿನ್ ಅವರೇ,
   ಹಿಂದಿಯನ್ನು ರಾಷ್ಟ್ರಬಾಷೆಯನ್ನಾಗಿ ಈಗಾಗಲೇ ಮಾಡಲಾಗಿದೆ ಎಂದು ತಾವು ತಿಳಿದುಕೊಂಡಂತಿದೆ.
   ಭಾರತ ದೇಶಕ್ಕೆ ಯಾವುದೇ ರಾಷ್ಟ್ರಭಾಷೆಯಿಲ್ಲ ಎಂಬುದು ತಮ್ಮ ಗಮನಕ್ಕೆ ತರಲು, ಈ ಕೊಂಡಿಯನ್ನು ಇಲ್ಲಿ ಹಾಕಿದೇನೆ.
   (http://articles.timesofindia.indiatimes.com/2010-01-25/india/28148512_1_national-language-official-language-hindi)

   ಇನ್ನು, ಹಿಂದಿಯನ್ನು ಅಥವಾ ಇನ್ನಾವುದೇ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಘೋಷಿಸಿ ಅದನ್ನು ಇತರ ಭಾಷಿಕರ ಮೇಲೆ ಹೇರಲು ತೊಡಗುವುದು ಹೇಗೆ ಕೆಡುಕು ಎಂಬ ಬಗ್ಗೆ ನಾನು ಕೆಲದಿನಗಳ ಹಿಂದೆ ಬರೆದಿದ್ದ ಬ್ಲಾಗೊಂದರ ಲಿಂಕು ಇಲ್ಲಿ ಕೊಟ್ಟಿದೀನಿ. ತಮಗೆ, ಟೈಮ್ ಆದಾಗ ಓದಿಕೊಳ್ಳಿ: http://kspriyank.blogspot.in/2011/09/blog-post.html

   ಸಿಗಣ,
   ಪ್ರಿಯಾಂಕ್

   ಉತ್ತರ
  • Chetan
   ಫೆಬ್ರ 3 2012

   ಅಶ್ವಿನ್ ಅಮೀನ್,
   ನಿಮ್ಮ ಲೇಖನ ಓದಿದ ಮೇಲೆಯೇ ನನಗೆ ಹಲವು ಸಂದೇಹಗಳು ಹುಟ್ಟಿದ್ದು, ಅದಕ್ಕಾಗಿಯೇ ನಾನು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ.
   ಮೊದಲನೆಯದಾಗಿ ಇಲ್ಲಿ ಯಾರಿಗೂ ಯಾವ ಭಾಷೆಯ ಮೇಲೂ ದ್ಸೇಷವಿಲ್ಲ. ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯ ಹೇರಿಕೆ ಮಾಡುವುದು ತಪ್ಪು. ಹಾಗಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಭಾಷೆಗಳು ಸಮಾನ.Let all the languages have their space in this country, Which is Union of States. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಸ್ಕೃತಿ, ಸೌಂದರ್ಯ ಇರುವಾಗ ಎಲ್ಲದಕ್ಕೂ ಸಮಾನ ಅವಕಾಶ ಇರಲಿ. ಹಾಗಾಗಿಯೇ ಈ ದೇಶಕ್ಕೆ ರಾಷ್ಟ್ರಭಾಷೆ ಬೇಕಾಗಿಲ್ಲ. ಈ ವಿಷಯದ ಬಗ್ಗೆ ಸಂಘದ ನಿಲುವೇನು ?

   ನಾನು ಉತ್ತರ ಕರ್ನಾಟಕದ ಭಾಗದಲ್ಲೇ ಹುಟ್ಟಿ ಬೆಳೆದಿದ್ದು. ಸುಮಾರು ೨೨ ವರ್ಷಗಳನ್ನು ಅದೇ ಭಾಗದಲ್ಲಿ ಕಳೆದಿದ್ದೇನೆ. ನೀವು ಹೇಳಿದಂತೆ ಗಡಿ ಭಾಗದಲ್ಲಿ ಎರಡು ಭಾಷೆಗಳನ್ನು ಮಾತನಾಡುವ ಜನರು ಸಿಗುತ್ತರೆಯೇ ಹೊರತು ನೀವು ಹೇಳುವಂತೆ ಹೈದ್ರಬಾದ್ ಕರ್ನಾಟಕದಲ್ಲಿ ತೆಲುಗು, ಮುಂಬೈ ಕರ್ನಾಟಕದಲ್ಲಿ ಮರಾಠಿ ಮಯ ಆಗಿ ಹೋಗಿಲ್ಲ. ಬದಲಾಗಿ ಹೆಚ್ಚು ಕನ್ನಡಮಯವಾಗುತ್ತಿವೆ. ದಯವಿಟ್ಟು ಒಂದು ಬಾರಿ ನೀವು ಈ ಭಾಗಗಳನ್ನು ಸಂದರ್ಶಿಸಿ ಬರಬೇಕು.

   ಬೆಂಗಳೂರಿನಲ್ಲಿ ೭೦% ಜನರು ಕನ್ನಡಿಗರಲ್ಲ ಎಂದು ಹೇಗೆ Judgmental ಆಗಿ ಹೇಳುತ್ತೀರಿ? ಹಾಗಿದ್ರೆ ಯಾಕೆ ೧೦ರಲ್ಲಿ ೮ ಎಫ್. ಎಂ ವಾಹಿನಿಗಳು ಕನ್ನಡದ ಹಾಡುಗಳನ್ನ ಹಾಕಿ ಲಾಭ ಮಾಡಿಕೊಳ್ಳುತ್ತಿದ್ದರು, ಅವರಿಗೇನು ನಿಮ್ಮ ಹಾಗಿ ಕನ್ನಡದ ಬಗ್ಗೆ ಅಭಿಮಾನ ಇಲ್ಲ ಅಲ್ಲವೇ? ಇನ್ನು ಬೆಂಗಳೂರಿನಲ್ಲಿ ಅತಿ ಹೆಚ್ಚಾಗಿ ಒದಲಾಗುವ ಪತ್ರಿಕೆಯಲ್ಲಿ ಮೊದಲೆರಡು ಸ್ಥಾನಗಳು ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿ ಪತ್ರಿಕೆಗಳಾಗಿವೆ. ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ಮೊದಲ ಹತ್ತು ಪತ್ರಿಕೆಗಳಲ್ಲಿ ಮೊದಲಿಗೆ ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಸಂಜೆವಾಣಿ ಪತ್ರಿಕೆಗಳಿವೆ. ಇವರೆಲ್ಲ ಏನು ಸುಮ್ಮನ ಅಚ್ಚಿಸಿ ಹಂಚುವುದಿಲ್ಲ ಎಂದು ತಿಳಿದಿದ್ದೇನೆ.
   http://www.bestmediainfo.com/2011/10/irs-q2-2011-top-10-dailies-in-bangalore/

   ತಿರುವಳ್ಳುವರ್ ಪ್ರತಿಮೆ ಅನಾವರಣ ಬಿಬಿಎಂಪಿ ಚುನಾವಣೆಯಲ್ಲಿ ತಮಿಳು ಓಟ್ ಬ್ಯಾಂಕ್ ಗಾಗಿ ಮಾಡಲಾದ ಗಿಮಿಕ್. ನಡುಮಾರನ್ ಅವರಂತಹ ಜನ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ತರಬೇಕು ಎಂದು ಹೇಳುತ್ತಿದ್ದರು. ಇದನ್ನ ವಿರೋಧಿಸಿದ್ದ ಕನ್ನಡ ಪರ ಸಂಘಟನೆಗಳು ಇದನ್ನು ತಡೆದಿದ್ದವು. ಆದರೆ ಬಿಜೆಪಿ ಸರ್ಕಾರ ತನ್ನ ಬೇಳೆ ಕಾಳನ್ನ ಬೇಯಿಸಿಕೊಳ್ಳಲಿಕ್ಕೆ ಇದನ್ನೆಲ್ಲ ಮಾಡಿಸಿದವು. ಇನ್ನು ಸರ್ವಜ್ಞನ ಮೂರ್ತಿಗಳ ಪ್ರತಿಮೆಯನ್ನು ಯಾವುದೋ ಒಂದು ಪಾರ್ಕ್ ನಲ್ಲಿ ಇಡಲಾಗಿದೆ ಅನ್ನೋದು ತಮಗೆ ತಿಳಿಯದೆ?

   ಸಾಮರಸ್ತ್ಯತೆ ಸಮಾಜದಲ್ಲಿ ಬರುವುದು ಒಂದು ಮೇಲು ಇನ್ನೊಂದು ಕೀಳು ಎಂಬ ಭಾವನೆಯಿಂದಲ್ಲ. ಪರಸ್ವರ ಗೌರವ, ಸ್ನೇಹ, ನಂಬುಗೆ ಯಿಂದ ಮಾತ್ರ. ಅಂತಹ ಒಂದು ವ್ಯವಸ್ಥೆಯನ್ನ ಕಟ್ಟೋದಕ್ಕೆ ಸಂಘದ ನಿಲುವುಗಳು ಅವಕಾಶ ಕೊಡುತ್ತವೆಯೇ?

   ಉತ್ತರ
  • Mahesh
   ಫೆಬ್ರ 3 2012

   ಅಶ್ವಿನ್ ಅಮೀನ್,,
   ನಿಮ್ಮ ಈ ಮೇಲಿನ ಕಾಮೆಂಟಿನಲ್ಲಿ ಎಷ್ಟೊಂದು ಹುಳುಕು ನಂಬಿಕೆಗಳಿವೆ ಎಂಬುದು ಅದನ್ನು ಓದಿದ ನನಗೆ ಅನ್ನಿಸಿತು. ನಿಮ್ಮ ಲೇಖನವನ್ನು ಪ್ರಶ್ನಿಸಿದ್ದಕ್ಕೆ,, ನಮ್ಮ ಪ್ರತಿಕ್ರಿಯೆಗೆ ತಿರುಗೇಟು ನೀಡುವ ಮೊದಲು ನೀವು ಬರೆದಿರುವುದರಲ್ಲಿ ಎಷ್ಟು ಸತ್ಯವಿದೆ ಎಂದು ಅರಿತುಕೊಳ್ಳೀ.

   ನೀವೇ ಹೇಳಿರುವ ಹಾಗೆ ಭಾರತ ಅಸಂಖ್ಯ ಭಾಷೆಗಳನ್ನು ತನ್ನಲ್ಲಿ ತುಂಬಿಕೊಂಡಿರುವ ರಾಷ್ಟ್ರ. ಹೀಗಿರುವಾಗ ಕೇವಲ ಒಂದು ಭಾಷೆಗೆ ಹೆಚ್ಚಿನ ಸ್ಥಾನಮಾನ ನೀಡಿ, ಅದು ಮೇಲು ಮಿಕ್ಕವೆಲ್ಲ ಕೀಳು ಎಂಬ ಭಾವನೆ ಸರಿಯೇ.? ರಾಜ್ಯಗಳ ಒಕ್ಕೂಟವೆಂದು ಕರೆಯಿಸಿಕೊಳ್ಳುವ ಭಾರತಕ್ಕೆ ಆಯಾ ರಾಜ್ಯದ ಭಾಷೆಯೇ ಸಾರ್ವಬೌಮ ಭಾಷೆಯಾಗಿರಬೇಕು. ಭಾಷಾವಾರು ಪ್ರಾಂತ್ಯದ ಹಿಂದಿನ ಉದ್ದೇಶ ಇದೇ ಅಲ್ಲವೇ.? ದೇಶಕ್ಕೊಂದು ರಾಷ್ಟ್ರಭಾಷೆ ಬೇಕು ಎಂಬ ನಿಲುವೇ ಭಾರತದ ಏಕತೆಗೆ ಮಾರಕ. ಒಂದು ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ ಕಾಲಕ್ರಮೇಣ ದೇಶದ ಉಳಿದ ಭಾಷೆಗಳು ರಾಷ್ಟ್ರಭಾಷೆಯಡಿಯಲ್ಲಿ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ.
   ಇದನ್ನು ಅರ್ಥೈಸಿಕೊಳ್ಳಲು ಹೆಚ್ಚು ಜಾಣ್ಮೆ ಬೇಕಿಲ್ಲ. ಆಡಳಿತ ಭಾಷೆಯ ಮೂಲಕ ರಾಜ್ಯದಲ್ಲಿ ಎಲ್ಲೆಲ್ಲ ಹಿಂದಿ ಹೇರಲಾಗುತ್ತಿದೆ, ಆ ಮೂಲಕ ಕನ್ನಡವನ್ನು ಮೂಲೆಗಟ್ಟಲಾಗುತ್ತಿದೆ ಎಂಬುದನ್ನು ಗಮನಿಸಿದರೆ ಸಾಕು ಅರ್ಥವಾಗುತ್ತದೆ.

   ಇನ್ನು ಬೆಂಗಳೂರಿನಲ್ಲಿರುವ ಕನ್ನಡಿಗರ ಬಗ್ಗೆ ನಿಮಗೆ ಅನುಕೂಲವಾಗುವ ಹಾಗೆ ಮಾತನಾಡಿದ್ದೀರಿ. ಅದನ್ನು ಪರಿಶೀಲಿಸುವ ಗೋಜಿಗೂ ಹೋಗಿಲ್ಲ.
   ಬೆಂಗಳೂರಿನಲ್ಲಿ ಕನ್ನಡ ಹುಡುಕುವುದು ತುಂಬಾ ಕಷ್ಟವೇ.? ಹೌದು ಹಿಂದಿ ಪ್ರಚಾರ ಸಭೆಯಲ್ಲಿ ನಿಂತು ಈ ಮಾತನ್ನು ಹೇಳಿದ್ದರೆ ಆಗ ಒಪ್ಪಬಹುದಿತ್ತು.
   ಇನ್ನು ಬೆಂಗಳೂರಿನ 70 ಪ್ರತಿಷತದಷ್ಟು ಜನ ಕನ್ನಡ ಬಿಟ್ಟು ಅನ್ಯ ಭಾಷೆಗಳಾದ ತಮಿಳು-ತೆಲುಗು-ಮಲಯಾಳಂ ಮಾತನಾಡುತ್ತಾರೆ. ಅಂತ ಹೇಳಿದ್ದಿರಿ. ನನ್ನ ಒಂದು ಪ್ರಶ್ನೆ ಎಂದರೆ ಸಲೀಸಾಗಿ ಮತ್ತು ಅಷ್ಟು ಖಡಕ್ಕಾಗಿ ಅಂಕಿ ಅಂಶವನ್ನು ಹೇಗೆ ಕೊಡುತ್ತೀರಿ. ನೀವೇನು ಹಗಲು ರಾತ್ರಿ ಕುಳಿತು ಸಂಶೋದನೆ ಮಾಡಿದ್ದಿರೇನು.? ಆಮೇಲೆ, ನಿಮ್ಮ ಮೇಲಿನ ಅನ್ಯ ಭಾಷೆಗಳಲ್ಲಿ ಹಿಂದಿ ಇಲ್ಲ. ಅಂದರೆ ಅದು ಅನ್ಯ ಭಾಷೆ ಅಲ್ಲ. ಅಂದರೆ ಬೆಂಗಳೂರಿನಲ್ಲಿ ಹಿಂದಿ ಮಾತನಾಡುವವರು ಕನ್ನಡ ಕಲಿಯದಿದ್ದರೂ ಪರ್ವಾಗಿಲ್ಲ ಅವರೆಲ್ಲ ನಮ್ಮವರು, ಇವರು ಮಾತ್ರ ಹೊರಗಿನವರು ಎಂಬ ಬಾವನೆಯೇ.? ನಿಮ್ಮ ಈ ಕಾಮೇಂಟಿನಲ್ಲೇ ಮೇಲು ಕೀಳು ಬಾವನೆ ಎದ್ದು ಕಾಣುತ್ತ ಇದೆ.

   ಉತ್ತರ
 22. first stand
  ಫೆಬ್ರ 3 2012

  Kannada shouldn’t be made ‘the’ national language. It should not be imposed on any other languages too. All 22 scheduled languages should become national languages.

  Tiruvalluvar statue was a question of tamil hegemony over Kannadigas in Bengaluru. From 1991 no government tried to appease Tamils, but the great kannadapremi BJP govt put the statue bang in the middle of halasuru lake and bowed it’s head to tamil’s parochialism. Sarvajna statue was installed in a god-for-saken place in chennai. Respect has to be equal and mutual and not one sided.

  If Kannada is most important language of Karnataka, why the central govt offices do not have Kannada in them? Why hindi is being imposed in all central govt offices even in smallest villages? What will our great patriot Ashwin will say about that?

  Please read ‘nationalism – by Ravindranath Tagore” before imposing your thought of nationalism on everyone. Janaganamana is just a song and reciting it doesn’t kill a minority language like Kannada, but hindi imposition does kill a language although slowly.

  ಉತ್ತರ
  • suresh ckm
   ಫೆಬ್ರ 3 2012

   ಕನ್ನಡ, ಹೇರಿಕೆ ಅಂಥ ಮಾತಾಡ್ತಾ ಇಂಗ್ಲಿಷ್ ನಲ್ಲಿ ಕಾಮೆಂಟ್ ಹಾಕಿದ್ದಿರಲ್ರೀ. ಕನ್ನಡದ ಬಳಸಿ ಮೊದಲು. ಅಮೇಲೆ ಮಿಕ್ಕಿದವರಿಗೆ ಹೇಳುರಂತೆ.

   ಉತ್ತರ
   • first stand
    ಫೆಬ್ರ 3 2012

    If you have any stuff, talk about the questions I have raised. Diverting the topic when one doesn’t know the answer is pretty much an expected part of any debate. It’s ok suresh.

    ಉತ್ತರ
    • suresh ckm
     ಫೆಬ್ರ 3 2012

     ಇಂಗ್ಲೀಷ್ ಅರ್ಥ ಅದ್ರೆ ಅಲ್ವಾರಾ ಹೇಳೋದು ಕೇಳೋದು ಎಲ್ಲ. ನಿಮಗೆ ಕನ್ನಡದ ಬಗ್ಗೆ ಪ್ರಿತಿ ಇದ್ದಿದ್ರೇ ಕನ್ನಡದವರಿಗೆ ಅರ್ಥವಾಗೋ ಭಾಷೆಲೇ ಮಾತಾಡ್ತಾ ಇದ್ರಿ. ನಾನು ಮೇಲಿನ ಎಲ್ಲ ಕಾಮೆಂಟನ್ನು ನೋಡ್ತಾ ಬಂದಿದ್ದೀನಿ. ನಿಮ್ಮ ಕಾಮೆಂಟ್ ಆರ್ಥ ಆಗಲಿಲ್ಲ. ಹಾಗಾಗಿ ಕನ್ನಡದಲ್ಲಿ ಹೇಳಿ ಅಂಥ ಕೇಳೋದು ತಪ್ಪಾ? ಇದು ನಿಮ್ಮನ್ನು ದಾರಿ ತಪ್ಪಿಸುವ ಕಾಮೆಂಟಾ?
     ಸುರೇಶ್

     ಉತ್ತರ
     • first stand
      ಫೆಬ್ರ 3 2012

      My questions were to Ashwin and I know he knows English. Let him answer please.

      ಉತ್ತರ
 23. first stand
  ಫೆಬ್ರ 3 2012

  Ashwin knows hindi a bit, so it should be made national language. Wow !

  Every state has dogs, so why not dog as our national animal?

  ಉತ್ತರ
 24. first stand
  ಫೆಬ್ರ 3 2012

  Ashwin,

  I am curious to know your stand on 4 perspectives of golwalkar expressed in “bunch of thoughts”

  1> Do you think Muslims and Chirstians can never be Indians?
  2> Do you think there existed no class discrimination against shoodra communities like dalits, badiga, kumbara, kammara, chammara, bhajantri, bunts, okkaligas ever in the history ?
  3> Hindi imposition has killed several minority language fiilm industries already and also it has killed so many smaller languages like brijbhasha, avadhi, kanouji, marawadi. Do you think hindi should be imposed on india?
  4> Even BJP govts in MP, Gujarat have asked for true federalism in India, while RSS thinks federalism should be abolished in favour of a unitary govt. Do you endorse such a view?

  If you are serious about discussion, give logical, rational answers instead of writing emotional rhetoric.

  ಉತ್ತರ
  • ಬಸವಯ್ಯ
   ಫೆಬ್ರ 3 2012

   ಈ ಕನ್ನಡ ಪ್ರೇಮಿಗಳಿಗೆ ಇಂಗ್ಲೀಷ ಮೋಹ ಜಾಸ್ತಿ ಇರುವ ಹಾಗೆ ಕಾಣುತ್ತಿದೆ. ಅಥವಾ ಇದು ನಾನು ಬಹಳ ಬುದ್ಧಿವಂತ, ಇಂಗ್ಲೀಷ್ ಓದಿದವನಾಗಿಯೂ ಕನ್ನಡ/ಕರ್ನಾಟಕ ಪರವಾಗಿ ಹೋರಾಡುತ್ತೇನೆ ಎಂದು ತೋರಿಸಿಕೊಳ್ಳುವ ತವಕವೊ?.
   ಸ್ವಾಮಿ, ಇನ್ನೊಬ್ಬರ ಹಿಂದಿ ಪ್ರೇಮ ಪ್ರಶ್ನಿಸಿ ಬುದ್ಧಿವಂತಿಕೆ , ತರ್ಕ ಮೆರೆಯುವ ನೀವು, ನಿಮ್ಮ ಕನ್ನಡ ಪ್ರೇಮ ತೋರಿಸಲು ಇಂಗ್ಗಿಷಿನಲ್ಲಿ ಬರೆಯಬೇಕೆ?

   ಉತ್ತರ
   • first stand
    ಫೆಬ್ರ 3 2012

    If you have any stuff, talk about the questions I have raised. Diverting the topic when one doesn’t know the answer is pretty much an expected part of any debate. It’s ok kole basavayya..

    ಉತ್ತರ
    • ಬಸವಯ್ಯ
     ಫೆಬ್ರ 3 2012

     ಹೆಸರಿಲ್ಲದೆ ಇರೊ ಮಹಾಸ್ವಾಮಿ.. ನಿಮ್ಮಂಥ ಅರೆ ಬೆಂದ ತಿಕ್ಕಲುವಾದಿ ತವಡು ಕುಟ್ಟುವ, ಹೇಳುವುದೊಂದು ಮಾಡುವುದೊಂದು ಬುದ್ಧಿಯ ಜನರಿಗಿಂತ ಕೊಲೆ ಬಸವಯ್ಯನೇ ಮೇಲು!

     ನಿಮ್ಮ ವಿಚಾರ ಬಾರ್ ನಲ್ಲಿ ಎಣ್ಣೆ ಹೊಡೆಯುತ್ತ ‘ಗಾಂಧಿಯ ವಿಚಾರಧಾರೆ’ ಗಳ ಮೇಲೆ ಕುಯ್ಯುವವರಂತೆ, ಬಿಸ್ಲೇರಿ ಕುಡಿಯುತ್ತ ಗ್ರಾಮ ಸ್ವರಾಜ್ಯದ ಬಗ್ಗೆ ಭಾಷಣ ಕುಟ್ಟುವವರ ಹಾಗೆ ಇದೆ.

     ಈ ತಾಣ ಇರೋದು ಕನ್ನಡ ಲೇಖನಗಳಿಗಾಗಿ..ಕನ್ನಡದಲ್ಲಿ ಚರ್ಚೆಗಾಗಿ. ನೀವಿಲ್ಲಿ ಎತ್ತಿರೊ ವಿಷಯ ಕೂಡ ಕನ್ನಡದ ಬಗ್ಗೆ ಎಂಬ ಪರಿಜ್ಷಾನ ನಿಮಗಿದ್ದಿದ್ದರೆ ಸಾಕಿತ್ತು!. ನಿಮ್ಮ ಇಂಗ್ಲಿಷ್ ಪಾಂಡಿತ್ಯವನ್ನು ನಮಗೆ ತೋರಿಸಬೇಕಾಗಿರಲಿಲ್ಲ.

     ಎತ್ತಿದ ವಿಷಯಗಳಲಿ ನಿಮಗೆ ಉತ್ತರ ಬೇಕಿದ್ದಲ್ಲಿ ಕನ್ನಡದಲ್ಲಿ ಬರೀರಿ..ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಕೊಡ್ತೆನೆ.

     ಉತ್ತರ
     • first stand
      ಫೆಬ್ರ 3 2012

      ಸರಿನಪ್ಪ,, ನೀವು ಮುಟ್ಟಿ ನೋಡಿಕೊಳ್ತಾ ಇರಿ.. ನಮಗೆ ಬೇರೆ ಕೆಲಸ ಇದೆ.

      ಉತ್ತರ
      • ಬಸವಯ್ಯ
       ಫೆಬ್ರ 3 2012

       ಕನ್ನಡ ಬರುತ್ತೆ ಅಂದಾಯ್ತು ಶ್ರೀಯುತರಿಗೆ! ಆದರೂ ಇಂಗ್ಲಿಷಿನಲ್ಲಿ ಚರ್ಚೆ ಮಾಡುವ, ತಮ್ಮ ಪ್ರತಿಭೆ ತೋರಿಸುವ ಹುಮ್ಮಸ್ಸು :). ಪರವಾಗಿಲ್ಲ.

       ‘ಸರಿನಪ್ಪ,, ನೀವು ಮುಟ್ಟಿ ನೋಡಿಕೊಳ್ತಾ ಇರಿ..’
       ನೀವು ಅಷ್ಟೆ..ಖಾಯಮ್ಮಾಗಿ ಬೇರೆಯವರದ್ದನ್ನು ಮುಟ್ಟುವ ಚಟವನ್ನು ಬಿಡಿ. ಏನೇನೊ ತಿಳ್ಕೊಬೇಡಿ, ಕನ್ನಡ ನಿಮ್ಮದು ಅದನ್ನು ಜಾಸ್ತಿ ಮುಟ್ಟಿ ಅಂದೆ ಅಷ್ಟೆ!

       ‘ನಮಗೆ ಬೇರೆ ಕೆಲಸ ಇದೆ.’
       ಒಹೊ, ಯಾವುದಾದರೂ ಮಠದ ಸ್ವಾಮಿಗಳಾ ನೀವು? ಬಹುವಚನದಲ್ಲಿ ಕರೆದುಕೊಳ್ಳೊಕೆ? ಅಥವಾ ಹತ್ತು ಜನ ಸೇರಿ ಒಂದು ಕಮೆಂಟ್ ಬರೀತಾ ಇದೀರಾ?

       ಉತ್ತರ
    • ಅಭಿಮನ್ಯು
     ಫೆಬ್ರ 4 2012

     ಕನ್ನಡ ಕನ್ನಡ ಅಂತ ಹಾರಾಡಿ-ಚೀರಾಡಿ ಇಂಗ್ಲೀಷಿನಲ್ಲಿ ಬರ್ಕೊಂಡು ಓಡಾಡೋ ಈ ಖನ್ನಡ ಪ್ರೇಮಿಗಳಿಗೆ ಆ ಭುವನೇಶ್ವರಿ ತಾಯಿ ಒಳ್ಳೆ ಬುದ್ದಿ ಕೊಡಲಿ…

     ಉತ್ತರ
 25. Sumanth M.M
  ಫೆಬ್ರ 3 2012

  thumba chennagide….dhanyavadhagalu

  ಉತ್ತರ
 26. ಫೆಬ್ರ 3 2012

  ಇವತ್ತು ಇಂಗ್ಲಿಷ್ ಅನ್ನ ಕೊಡುವ ಭಾಷೆಯಾಗಿ ನಿಂತದ್ದು ಹೇಗೆ? ಇಂಗ್ಲಿಷರು, ಅಮೆರಿಕನ್ನರ ಹೇರಿಕೆಯಿಂದಲೋ ಅಥವಾ ಜನರೇ ತಮಗೆ ಅನ್ನ ಕೊಡುವ ಭಾಷೆಯಾಗಿ ಇಂಗ್ಲಿಷ್ ಇರಲಿ ಎಂದು ಭಾವಿಸಿಕೊಂಡಿದ್ದರಿಂದಲೋ? ಕನ್ನಡ ಬ್ಲಾಗುಗಳಲ್ಲಿ ಇಂಗ್ಲಿಷ್ ಕಾಮೆಂಟ್ ಗಳು ಯಾಕೆ? ಕನ್ನಡಿಗರಿಗೆ ಇಂಗ್ಲಿಷ್ ಕಾಮೆಂಟ್ ಗಳು ಅರ್ಥವಾಗುತ್ತದೆ ಎಂಬ ನಂಬಿಕೆಯೋ ಅಥವಾ ಅದು ಇಂದಿನ ವಾಸ್ತವಿಕತೆಯಾ? ಕನ್ನಡಿಗರು ಇಂಗ್ಲಿಷ್ ನಲ್ಲಿ ಬರೆದರೂ ಅರ್ಥ ಮಾಡಿಕೊಳ್ಳಬೇಕು ಎಂಬ ಒತ್ತಾಯವೋ? ಖಂಡಿತ ನಾವು ಹಿಂದಿ ಹೇರಿಕೆಗೆ ಅವಕಾಶ ನೀಡುವದಿಲ್ಲ! ಕನ್ನಡ ಬ್ಲಾಗುಗಳಲ್ಲಿ ಇಂಗ್ಲಿಷ್ ಬರೆದರೆ ಖಂಡಿತವಾಗಿಯೂ ಅದು ಕನ್ನಡಿಗರ ಮೇಲೆ ಇಂಗ್ಲಿಷ್ ಹೇರಿಕೆಯಲ್ಲ.

  ಉತ್ತರ
 27. Sethu Pandian
  ಫೆಬ್ರ 3 2012

  A friend of mine reads this Nilume Blog regularly. I get regular updates from him about this blog as I cannot read Kannada( I can talk and understand but cannot read or write at this point of time)
  After reading this blog, I was curious to read the parent blog which is referred to in this write up. It seems there is a series of articles on the so called yen guru Blog.
  This word “Yen guru” is used by Auto Drivers and Bus conductors in Bangalore and its a catchy one.ha ha ha.
  My friend explained me the entire gist of the yen guru write up. Though I didn’t know much about yen guru friends, I somehow acknowledge and empathize their article. It definitely makes sense to treat all languages, religions, customs, castes and practices equal and that is what is written in the constitution.
  Regionalism is a pride for people and I have seen a lot of protests in my home town. My dad has told me a lot about the anti-Hindi agitations which happened in the 60’s.
  Vouching an opinion for regionalism must not be branded as chauvinism.
  If all Indian states are happy, then India would certainly be a major force in the global map.

  I am personally unhappy about all organizations and associations which are spoiling and misguiding the society on communal lines.

  ಉತ್ತರ
 28. CHIKKANNA
  ಫೆಬ್ರ 3 2012

  TO ALL,

  SEE ASHWIN’S FACEBOOK PROFILE. HE IS AN ADMIRER OF NATHURAM GODSE – THE KILLER. WHAT ELSE YOU CAN EXPECT FROM A BRAIN WASHED PERSON LIKE ASHWIN. A COMMUNAL MENTALITY, DIVISIVE ATTITUDE…

  ಉತ್ತರ
  • ಅಭಿಮನ್ಯು
   ಫೆಬ್ರ 4 2012

   ಹಳೇ ಟ್ರಿಕ್ಕು…! ಲೇಖನ ಬಿಟ್ಟು ಲೇಖಕರ ವೈಯುಕ್ತಿಕ ವಿಷ್ಯಕ್ಕಿಳಿಯೋದು… ನಿಮಗೆ ಗಾಂಧೀ ಹೇಗೋ ಅವ್ರಿಗೆ ಗೋಡ್ಸೆ ಹಾಗೇ ಇರ್ಬೇಕು ಬಿಡಿ…

   ಉತ್ತರ
   • CHIKKANNA
    ಫೆಬ್ರ 4 2012

    abhimanyu,

    sumke EnO ELbuTree daNi… nimma ashvin baravaNigege gODse buddhi ide aNtaa tOrsakke kaNappaa adna hELiddu! aa yappangirO bEre interest bagge ellappaa maataDde. gODse like maaDOdu vaiyuktikaanaa?

    ಉತ್ತರ
  • ಬಸವಯ್ಯ
   ಫೆಬ್ರ 4 2012

   “WHAT ELSE YOU CAN EXPECT FROM A BRAIN WASHED PERSON LIKE ASHWIN. A COMMUNAL MENTALITY, DIVISIVE ATTITUDE…”
   ಹಮ್..ಲೇಖಕರ brain wash ಮಾಡಲಾಗಿದೆ ಅಂದ್ರೆ ಬ್ರೇನ್ ಇದೆ ಅಂದಾಯ್ತು! ನಮ್ಮ ಚಿಕ್ಕಣ್ಣಂಗೆ ಇದೆಯಾ? ಇದ್ದರೆ ಸ್ವಲ್ಪ ವಾಶ್ ಆದ್ರೂ ಮಾಡಬೊದಿತ್ತು.:) ಆದರೆ ನಂಗ್ಯಾಕೊ ಡೌಟು.

   ಉತ್ತರ
   • CHIKKANNA
    ಫೆಬ್ರ 4 2012

    yappa!
    nimmaMthaa manehaaLa dEsha oDeyo brain ildidroo oLLEdappaa!

    ಉತ್ತರ
 29. CHIKKANNA
  ಫೆಬ್ರ 3 2012

  MUSLIMS ARE BECOMING TERRORISTS BECAUSE OF THIS DIVISIVE ATTITUDE OF RSS. I PRAY GOD, DESRTOY THIS COMMUNAL MENTALITY & SAVE HINDUISM & INDIA.

  ಉತ್ತರ
 30. ಬಸವಯ್ಯ
  ಫೆಬ್ರ 3 2012

  ಶತಮಾನದ ಸಂಶೋಧನೆ!. ತಂಬಿಗೆ ಹಾಲು ಕುಡಿದಷ್ಟು ಸಂತೋಷವಾಯ್ತು. ಸಿ.ಎಸ್.ದ್ವಾರಕನಾಥರಿಗೆ ಈ ವಿಷಯ ತಿಳಿಸ್ಬೇಕು. ‘ಜಾಲ ತಾಣಗಳಲ್ಲಿ ಕೇಸರಿಕರಣದ ಕೆಲವು ಸ್ಯಾಂಪಲ್ ಗಳು’ ಎಂಬ ಲೇಖನ ಬರೆಯಬಹುದು.

  ಉತ್ತರ
  • CHIKKANNA
   ಫೆಬ್ರ 4 2012

   huu kOle basava,

   nimmanthOru muslimarannu anumaanisi anumaanisiyE terorist maaDtideeraa? ondartha maadko kOle,,, dEshada ippatu kOTi muslimaru terrorist aagiddidre nee hinge bareyOkaagtittaa? nimage muslim obba deshapreMi aagakke abdul kalam, nisar ahmad aagbEku.. aadre huTTiniMdalE hiNdu aagi underworld don aagirO hindugaLu maatraa dEshapremigalE alvaa?

   ಉತ್ತರ
 31. manju
  ಫೆಬ್ರ 3 2012

  vishya matadirappa andre yarado tejovadhe madoke horuduttare namma jana. illi iroru ellaru kannadigare alva? yake hige jagala kayta time waste madtira. ellaru kannadakke dusiyiri.

  manju

  ಉತ್ತರ
 32. ಫೆಬ್ರ 4 2012

  ಚಿಕ್ಕಣ್ಣನವರೇ
  ಹೇಗೆ ಸಂಘದ ಸಿದ್ದಾಂತದಿಂದ ಕೆಲವು ಹಿಂದೂಗಳು ಕೊಮುವಾದಿಗಳಗಬುಹುದೋ ಹಾಗೆ ಕೆಲವು ಮುಸ್ಲಿಮರು ಭಯೋತ್ಪಾದಕರಾಗಲು ಇಸ್ಲಾಂ ಸಿದ್ಧಾಂತವೇ ಕಾರಣವಿರಬಹುದಲ್ಲವೇ?

  ಉತ್ತರ
 33. CHIKKANNA
  ಫೆಬ್ರ 4 2012

  Yes, you are right.

  Here sangha siddhaaNta is ruling this state.. It is a strong political power in India in th eform of BJP. That is the concern i have.

  Islamic terrorism is also a concern. At this moment as they are not controlling our state government, it has not gained that priority.

  Regards

  Chikkanna

  ಉತ್ತರ
  • ಬಸವಯ್ಯ
   ಫೆಬ್ರ 4 2012

   @ ಚಿಕ್ಕಣ್ಣ

   ಲೇಖಕರ ಫೇಸ್ ಬುಕ್ ಪುಟದಲ್ಲಿ ನಾಥೂರಾಂ ಗೊಡ್ಸೆ ಫೋಟೊ ಇದೆ, ಆದ್ದರಿಂದ ಅವರು ಇಂತವರೆ ಎಂಬ ನಿಮ್ಮ ಸಂಶೋಧನೆ ಅದ್ಭುತವಾದದ್ದು!. ಜನರ ಇಂತಹ ಕುರಿ ಮೆಂಟಾಲಿಟಯ ಲಾಭವನ್ನು ನಮ್ಮ ರಾಜಕಾರಣಿಗಳು ಕೂಡ ಬಹಳ ಹಿಂದೆಯೇ ಯೋಚಿಸಿದ್ದಾರೆ, ಅದಕ್ಕೆ ಗಾಂಧೀಜಿಯ ಫೋಟೊ, ಗಾಂಧೀಜಿಯ ಜಪ ಮಾತ್ತದಿಂದಲೇ ಪ್ರಾಮಾಣಿಕ ವ್ಯಕ್ತಿಗಳೆನಿಸಬಹುದು ಅಂತ ತಿಳಿದು ಕೊಂಡಿದ್ದಾರೆ.

   ಮತ್ತೊಂದು ಸಂಶಯ ನಂಗೆ, ಈ ದೇಶದಲ್ಲಿ ಆಗೊ ನೆರೆಹಾವಳಿ, ಚಂಡಮಾರುತ, ಬರಗಾಲ, ಭೂಕಂಪ ಮುಂತಾದವಕ್ಕಲ್ಲ ಆರ್.ಎಸ್.ಎಸ್, ಹಿಂದೂವಾದಿಗಳು ಕಾರಣ ಅನ್ನೊದು ನಿಮಗ್ಯಾವಗ್ಲಾದ್ರೂ ಹೊಳೆದಿಲ್ವಾ? ಯೋಚಿಸಿ ನೋಡಿ, ಮತ್ತೊಂದು ಕರ್ನಾಟಕ ರತ್ನಕ್ಕೆ ಅರ್ಹವಾದ ಸಂಶೋಧನೆಯಾಗಬಹುದು 🙂

   “Here sangha siddhaaNta is ruling this state.. It is a strong political power in India in th eform of BJP. That is the concern i have.”
   ಛೆ..ಛೆ..ರಾತ್ರೆ ನಿದ್ದೆ ಮಾಡ್ತಿರೊ ಇಲ್ವೊ ಪಾಪ.

   ” Islamic terrorism is also a concern. At this moment as they are not controlling our state government, it has not gained that priority.”
   ಒಹೊ..ಮನೆಗೆ ಬೆಂಕಿ ಹತ್ತೊ ತನಕ ಬಾವಿ ತೊಡೊ ವಿಚಾರ ಇಲ್ಲ ನಿಮ್ಮದು! ಪರವಾಗಿಲ್ಲ.

   ಉತ್ತರ
 34. panduranga
  ಫೆಬ್ರ 4 2012

  elli hodru ashvin avaru,, saakashtu jana prashne haakiddare,, uttarisiddare chennaagittu,,

  ಉತ್ತರ
 35. CHIKKANNA
  ಫೆಬ್ರ 4 2012

  lo basavayyaa,

  ninyaarappaa karudru maatige? modalu naa bareda comment na haakde delee maaDida nilume ivattu maana idre prakata maadi andidke haakidaare. eega neevyaakappaa illada poLLumaataaDteeraa? naathuram gODseyaMtaha hiMsaavaadiya phoTo haakkoLLO manasthiti oMde allappaa ashvin ra arthamaadkoLLOke saakirOdu. avara face book post gaLannu, avara liking gaLannu nODidare gottaagutte! aShTu baDkoLLO taavu yaake Enguru prashnege nammadu ide siddhaaMta innoo oppO aShTu meter tOrustillaa!?

  ಉತ್ತರ
  • ಫೆಬ್ರ 4 2012

   ಚಿಕ್ಕಣ್ಣ,

   ಪ್ರತಿಕ್ರಿಯಿಸುವಾಗ ಸಮಾಧಾನವಾಗಿ,ಜವಬ್ದಾರಿಯುತಾವಾಗಿ ಮಾಡಲಿಲ್ಲವೆಂದರೆ ಪ್ರತಿಕ್ರಿಯೆಗಳು ಕೆಲ ಕಾಲ ಅಥವಾ ಪರ್ಮನೆಂಟ್ ಆಗಿ ಕೂಡ ಕಾಣುವುದಿಲ್ಲ.
   ವಾಕ್ ಸ್ವಾತಂತ್ರ್ಯವೂ ಸ್ವೇಚ್ಚಚಾರವಾಗದಿರುವಂತೆ ನೋಡಿಕೊಳ್ಳಬೇಕಾದದ್ದು ನಿಮ್ಮ ಕರ್ತವ್ಯವೂ ಹೌದು. ಚರ್ಚೆ ಲೇಖನದ ಮೇಲಷ್ಟೆ ಕೇಂದ್ರಿಕೃತವಾಗಲಿ

   ಉತ್ತರ
   • CHIKKANNA
    ಫೆಬ್ರ 4 2012

    nilume
    houdaa? ninneya nanna comments’gaLalli Enu bEJavaabdaariyittu osi tiLisi!

    ಉತ್ತರ
  • ಬಸವಯ್ಯ
   ಫೆಬ್ರ 4 2012

   ಮಾನ್ಯ ಶ್ರೀ ಚಿಕ್ಕಣ್ಣನವರೆ.
   ತಮ್ಮನ್ನು ನನ್ನ ಸಮಾನ ಮನುಷ್ಯ ಎಂದು ತಪ್ಪು ಭಾವಿಸಿದ್ದೆ. ತಮ್ಮ ‘ಲೆ ಬಸವಯ್ಯ’ ಮುಂತಾದ ಏಕವಚನದ ಸಂಭೋಧನೆಗಳನ್ನು ನೋಡಿ ತಾವು ಬಹಳ ಎತ್ತರದ ವ್ಯಕ್ತಿತ್ವದವರಿರಬೇಕು, ಮಹಾನ ಹೋರಾಟಗಾರ, ಸಿದ್ಧಾಂತವಾದಿಗಳು ಇರಬೇಕು ಮತ್ತು ತಮ್ಮ ಪ್ರಖರತೆಯ ಮುಂದೆ ಉಳಿದವರು ತಮಗೆ ಇರುವೆ ತರಹ ಕಾಣುತ್ತಿರಬೇಕೆನೊ ಎಂಬ ಅರಿವು ನನಗೀಗಾಗುತ್ತಿದೆ. ಆದರೂ ಕೆಲವೊಂದು ಕ್ಷುಲ್ಲಕ ಪ್ರಶ್ಬೆಗಳು ತಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲದೊಂದಿಗೆ.

   ಮೊದಲನೆಯದಾಗಿ ಮನುಷ್ಯ ಬದುಕುವುದಕ್ಕೆ ಸಿದ್ದಾಂತವೂ ಕೂಡ ಅತ್ಯವಶ್ಯ ಎಂದು ಗೊತ್ತಿರಲಿಲ. ತಾವು ಹೇಳಿದ್ದು ಕೇಳಿ ನನ್ನ ಕಣ್ಣು ತೆರೆದಿವೆ. ಅನ್ನ,ನೀರು, ಗಾಳಿ ಯಂತೆ ಯಾವುದಾದರೂ ಸಿದ್ಧಾಂತ ಸೇವನೆ ಕೂಡ ಮಾಡಲೇಬೇಕೆಂದು. ಅಂದಹಾಗೆ ತಮ್ಮದು ಯಾವ ಸಿದ್ದಾಂತ ಮಹಾಸ್ವಾಮಿ? ಅನುಸರಿಸ್ತಾ ಇದ್ದೀರ ಅದನ್ನು? ಗಾಂಧಿ, ಗಾಂಧಿ ಅಂತೀರ ಮಾತು ಮಾತಿಗೆ, ಆದರೆ ಕೈಯಲ್ಲಿ ಸೆಗಣಿ ಬಕೆಟ್ ಹಿಡಿದುಕೊಂಡೆ ತಿರುಗಾಡ್ತಿದ್ದಿರಿ!. ಕರ್ನಾಟಕ, ಕರ್ನಾಟಕ ಕುಣಿಧಾಡ್ತಿರ, ಆದರೆ ಇಂಗ್ಲೀಷಿನಲ್ಲಿ ಬರೀತಿರ! ಅದೂ ಮೊದಲು ಇಂಗ್ಲಿಷಿನಲ್ಲಿ ಇಂಗ್ಲಿಷ, ಈಗ ಇಂಗ್ಲಿಷಿನಲ್ಲಿ ಕನ್ನಡ. ನೋಡಿದವರಿಗೆ ಫುಲ್ ಕಂಫ್ಯೂಸ್ ಆಗ್ತಾ ಇದೆ ಸ್ವಾಮಿ.

   ಎರಡನೆಯದಾಗಿ, ಫೋಟೊ ಇಟ್ಕೊಳದರಿಂದ, ಪುಸ್ತಕ ಓದೋದರಿಂದ ಮನುಷ್ಯ ಬದಲಾಗುತ್ತಾನೆ ಎಂಬ ನಿಮ್ಮ ಸಿದ್ಧಾಂತದ ಪ್ರಕಾರ ಹೋದ್ರೆ ನಿಮ್ಮಲ್ಲಿ ಇಷ್ಟೊತ್ತಿಗೆ ಗಾಂಧೀಜಿಯ 0.01 ಅಂಶಗಳಾದರೂ ಬಂದಿರಬೇಕಿತ್ತು. ತಮ್ಮ ಪ್ರತಿಕ್ರಿಯೆಗಳನ್ನು ನೋಡಿದರೆ ಸ್ಫಷ್ಟವಾಗ್ತಾ ಇದೆ, ನಿಮ್ಮ ಮೇಲೆ ಗಾಂಧಿ ಪ್ರಭಾವ ಯಾವ ಮಟ್ಟಿಗಿದೆ ಅಂತ.

   ಕೊನೆಯದಾಗಿ, ಗೋಡ್ಸೆ ಯಾಕೆ ಕೆಟ್ಟವನು ಅಂತ ಗೊತ್ತಾಗಲಿಲ್ಲ, ಗಾಂಧೀಜಿಯನ್ನು ಕೊಂದ ಅಂತಲಾ? ಪುಣ್ಯಕ್ಕೆ ಮುಕ್ತಿ ಆದರೂ ಸಿಕ್ತು ಅವರಿಗೆ ಇಲ್ಲಾಂದ್ರೆ ಗಾಂಧಿ ವಿಚಾರದ ಅನುಯಾಯಿಗಳು ಎನ್ನುವ ಬೋರ್ಡ ತಗಲಿ ಹಾಕಿಕೊಂಡು ತಿರುಗಾಡ್ತಿರೊ ನಿಮ್ಮಂಥ ಮಿನಿ ಮಹಾತ್ಮರ ಲೀಲೆಗಳನ್ನು ನೋಡಿ ತಾವಾಗೆ ನೇಣು ಹಾಕೋತ್ತಿದ್ರು!

   ಉತ್ತರ
 36. CHIKKANNA
  ಫೆಬ್ರ 4 2012

  aNgai huNNIge kannaDi bEkE kOle basava?

  ಉತ್ತರ
 37. ಕೇಶವ
  ಫೆಬ್ರ 4 2012

  ನಮ್ಮ ಚಿಂತನೆ ಕೃತಿರೂಪಕ್ಕಿಳಿಯದಿದ್ದರೆ ಏನು ಉಪಯೋಗವಿಲ್ಲ … ಪ್ರಸ್ತುತ ಕನ್ನಡ ಗೊತ್ತಿಲ್ಲದವರಿಗೆ ಕಡೇಪಕ್ಶ ದೈನಂದಿನ ಬಳಕೆಗೆ ಅನುವಾಗುವಷ್ತು ಕನ್ನಡ ಭಾಷಾಜ್ಞಾನವನ್ನಿ ತಿಳಿಸಿಕೊಡುವ ಒಂದು ಪ್ರಯತ್ನ ನಡೆಯುತ್ತಿದೆ …. ತಮ್ಮ ಕೈಲಾದಷ್ತು ಸಹಾಯಮಾಡಿ …. ಇದು ಯಾರುಮಾಡುತ್ತಿದ್ದಾರೆ ಅವರ ಹಿನ್ನಲೆ ಏನು ಎಂಬ ವಿಚಾರ ಬೇಡ .. ಸದ್ಯ ಈಪ್ರಯತ್ನಕ್ಕೆ ಕೈ ಜೋಡಿಸೋಣ … ಹೆಚ್ಹಿನ ವಿವರಗಳಿಗೆ http://kpv2012.blogspot.com/

  ಉತ್ತರ
 38. ಫೆಬ್ರ 4 2012

  ಧಾರ್ಮಿಕವಾದಿಗಳು ಅಥವಾ ಸಂಸ್ಕೃತಿ ವಾದಿಗಳು ಧರ್ಮ ಮೂಲವನ್ನು ವಾದಿಸಿದರೆ ಭಾಷವಾದಿಗಳು ಭಾಷಾ ಮೂಲವನ್ನು ವಾದಿಸುತ್ತಾರೆ ಆದರೆ ಇವರಿಬ್ಬರೂ ಮೂಲಭೂತವಾದಿಗಳೇ ಆದರೆ ಇವರಿಬ್ಬರೂ ಮೂಲಭೂತವಾದಿ ಅನಿಸಿಕೊಳ್ಳಲು ಹಿಂಜರಿಯುತ್ತಾರೆ ಅದೇ ಇವರಿಬ್ಬರ ಮೂಲ ಸಮಸ್ಯೆ ಇಬ್ಬರಿಗೂ ಒಳ್ಳೆ ಹೆಸರು ಬೇಕು ಆದ್ರೆ ಅದರಿಂದ ಬರುವ ಕಷ್ಟ ಕೆಟ್ಟ ಹೆಸರು ಬೇಡ ಎಂಬುದು ನಿಜ ಹೇಳಬೇಕೆಂದರೆ ಕಷ್ಟ ಇಲ್ಲದೆ ಯಾವುದೂ ಸಾಧ್ಯವಿಲ್ಲ ಹಾಗೆ ಕೆಟ್ಟ ಹೆಸರಿಗೆ ಹೆದರಿದರೆ ಒಳ್ಳೆ ಕೆಲಸ ಸಾಧ್ಯವಿಲ್ಲ. ನಾವು ಯಾವ ಭಾಷೆಯನ್ನೂ ಯಾವ ಮತವನ್ನೂ ಯಾವ ನಂಬಿಕೆಯನ್ನೂ ವಿರೋಧಿಸುವ ಅಗತ್ಯವಿಲ್ಲ ಅದರಲ್ಲೂ ಸಂಕೃತಿ ವಾದಿಗಳನ್ನು ಭಾಷಾವಾದಿಗಳು ಮತ್ತು ಭಾಷಾವಾದಿಗಳನ್ನು ಸಂಸ್ಕೃತಿ ವಾದಿಗಳು ವಿರೋಧಿಸುತ್ತಾರೆ ಎಂದರೆ ಅದು ಪರಮ ಮೂರ್ಖತನ. ಏಕೆಂದರೆ ನಮ್ಮ ದೇಶದ ಯಾವುದೇ ಭಾಷಿಕನನ್ನು ನೆನೆಸಿಕೊಂಡಾಗ ನಮ್ಮ ಮುಂದೆ ಬರುವುದು ನಮ್ಮ ದೇಶೀ ಸಂಸ್ಕೃತಿಯ ಭಾರತೀಯನೇ ಹೊರತು ಯಾವುದೇ ದಾಳಿಕೊರನದಲ್ಲ ದಾಳಿಕೊರರೆನಿದ್ದರೂ ತಮ್ಮ ವ್ಯವಹಾರಗಳಿಗೆ ಮಾತ್ರವೇ ಭಾಷೆಯನ್ನು ಕಲಿಯುತ್ತರೆಯೇ ಹೊರತು ಅದರ ಅಭಿವೃದ್ದಿಗೆ ಎಂದೂ ಕಾಯಾ ವಾಚಾ ಮಾನಸ ಕೆಲಸ ಮಾಡುವುದಿಲ್ಲ. ಅಲ್ಲೋ ಇಲ್ಲೋ ಕೆಲವರು ತಮ್ಮ ಪೂರ್ವಿಕರ ಸಂಸ್ಕಾರದಿಂದ ಮಾತ್ರ ಅದನ್ನು ಮುಂದು ವರೆಸುತ್ತಾರೆ ಅಲ್ಲದೆ ಅವರು ಮೂಲ ದಾಳಿಕೋರರೂ ಆಗಿರುವುದಿಲ್ಲ ಅವರು ಅನಿವಾರ್ಯತೆ, ಆಮಿಷ, ಆಕ್ರಮಣಗಳಿಗೆ ಸಿಲುಕಿ ವೇಷ ಧರಿಸಿ ನಂತರ ಅದೂ ಅಲ್ಲ ಇದೂ ಅಲ್ಲ ಎನ್ಬತಾಗಿರುವ ಎಡಬಿಡಂಗಿಗಳು ಮಾತ್ರ. ಹಾಗಾಗಿ ನಾವು ಅವರನ್ನೂ ವಿರೋಧಿಸದೆ ಇದ್ದಾರೆ ಸತ್ಯದ ಅರಿವಾಗಿ ಒಂದು ದಿನ ಅವರೇ ಪರಿವರ್ತನೆ ಆಗುತ್ತಾರೆ. ಅದಲ್ಲದೆ ಈ ಮೇಲೆ ತಿಳಿಸಿದ ಇಬ್ಬರಿಗೂ ಭೇದ ಕಲ್ಪಿಸುವುದು ದಾಳಿಕೋರರ ಪದ, ಪದವಿ, ಭೋಗ, ಭಾಗ್ಯಗಳ ಅಮೇದ್ಯ ತಿಂದ ಅಯೋಗ್ಯರು ಮಾತ್ರ.

  ಉತ್ತರ
 39. poornima.r
  ಫೆಬ್ರ 4 2012

  ivarigella pragatipararu anno hanepatti padeyo bayake., adakke hindu dharmavanna adannu aaradisuvavaranna yaavaglu tuliyo prayatna madtare,, never mind RSSnantaha sarthaka sangatane matondilla.. jai sri ram.. jai bharat mata..

  ಉತ್ತರ
 40. ಅನಿಲ್
  ಫೆಬ್ರ 5 2012

  ಪ್ರೀತಿಯ ನಿಲುಮೆ,

  ಶ್ರೀ ಚಿಕ್ಕಣ್ನ ಬರೆದಿರೋ ಎಲ್ಲಾ ಕಮೆಂಟ್ಸು ತೆಗೆದು ಹಾಕಿ. ಹಾಗೇ ಶ್ರೀ ಬಸವಯ್ಯನವರ …”ಅರೆ ಬೆಂದ ತಿಕ್ಕಲುವಾದಿ ತವಡು ಕುಟ್ಟುವ, ಹೇಳುವುದೊಂದು ಮಾಡುವುದೊಂದು ಬುದ್ಧಿಯ ಜನರಿಗಿಂತ ಕೊಲೆ ಬಸವಯ್ಯನೇ ಮೇಲು! ನಿಮ್ಮ ವಿಚಾರ ಬಾರ್ ನಲ್ಲಿ ಎಣ್ಣೆ ಹೊಡೆಯುತ್ತ ‘ಗಾಂಧಿಯ ವಿಚಾರಧಾರೆ’ ಗಳ ಮೇಲೆ ಕುಯ್ಯುವವರಂತೆ, ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಕೊಡ್ತೆನೆ. ಖಾಯಮ್ಮಾಗಿ ಬೇರೆಯವರದ್ದನ್ನು ಮುಟ್ಟುವ ಚಟವನ್ನು ಬಿಡಿ. ಏನೇನೊ ತಿಳ್ಕೊಬೇಡಿ, ಕನ್ನಡ ನಿಮ್ಮದು ಅದನ್ನು ಜಾಸ್ತಿ ಮುಟ್ಟಿ ಅಂದೆ ಅಷ್ಟೆ!ಹಮ್..ಲೇಖಕರ brain wash ಮಾಡಲಾಗಿದೆ ಅಂದ್ರೆ ಬ್ರೇನ್ ಇದೆ ಅಂದಾಯ್ತು! ನಮ್ಮ ಚಿಕ್ಕಣ್ಣಂಗೆ ಇದೆಯಾ? ಇದ್ದರೆ ಸ್ವಲ್ಪ ವಾಶ್ ಆದ್ರೂ ಮಾಡಬೊದಿತ್ತು.:) ಆದರೆ ನಂಗ್ಯಾಕೊ ಡೌಟು” ಮುಂತಾದ ಕೀಳುಮಟ್ತದ ಮಾತುಗಳನ್ನು ತೆಗೆದು ಹಾಕಿರಿ.
  ಇಬ್ಬರೂ ಕೂಡಾ ಕೆಟ್ಟಸಂಸ್ಕೃತಿಯ ಪ್ರತೀಕಗಳೇ!

  ಉತ್ತರ
  • ಬಸವಯ್ಯ
   ಫೆಬ್ರ 7 2012

   ಪ್ರಿಯ ಅನಿಲ, ಒಪ್ಪಿಕೊಳ್ಳುತ್ಥೇನೆ, ನನ್ನ ಕೆಲವೊಂದು ವಾಕ್ಯಗಳು ಒರಟಾಗಿದ್ದವು ಅಂತ. ಕ್ಷಮಿಸಿ. ಆದರೆ ಮೊದಲು ಕಾಲು ಕೆದರಿ ಅಸಭ್ಯತೆಗೆ ಇಳಿದವರು ಯಾರು ಎಂಬುದನ್ನು ಕೂಡ ನೀವು ಗಮನಿಸಿರಬಹುದು. ಅದಕ್ಕಿಂತ ಆಶ್ಚರ್ಯ ಅನಿಸಿದ್ದು ದೊಡ್ಡ ಮಾತನಾಡುವ ಈ ಜನ ತಾವು ಹೇಳುವದಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವುದು. ನನ್ನದು ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆಯ ಪೆಟ್ಟು ಎಂಬಂತ ನೀತಿ :).

   ಉತ್ತರ
 41. ಜುಲೈ 30 2014

  ಕನ್ನಡಿಗರು ಇಂಗ್ಲೀಶ್ ರಿಗೆ ಗುಲಾಮರಾಗಿ ಬದುಕಿದ್ದೆ ಸಾಕು ಮತ್ತೆ ಹಿಂದಿಯವರ ಗುಲಾಮರಗುವುದು ಬೇಡ..ಇಲ್ಲಿ ಎಲ್ಲರೂ ಮರೆತಿರುವ ಒಂದು ವಿಚಾರವೆಂದರೆ ಅದು ಉತ್ತರ ಭಾರತೀಯರುದಕ್ಷಿಣದ ಭಾಷೆಗಳತ್ತ ಹೊಂದಿರುವ ದೃಷ್ಟಿಕೋನ ಅದೇ ಇಂದು ನಮ್ಮ ದೇಶದ ಒಡಕಿಗೆ ಕಾರಣ..

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments