ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 3, 2012

4

ಪ್ರಪಾತ……ವಿಮಾನಯಾನ ಬಲುಪ್ರಾಚಿನ….!!!

‍ನಿಲುಮೆ ಮೂಲಕ

 – ಫಿಲ್ಮಿ ಪವನ್

ವಿಮಾನ ಎಂದರೆ ಏನೋ ಅಚ್ಚರಿ, ರಾಮಾಯಣದಲ್ಲಿ ಪುಷ್ಪಕ ವಿಮಾನ ಇತ್ತಂತೆ. ಕಾಡಿಂದ ಸೀತೆಯನ್ನು ಅದರಲ್ಲೇ ರಾವಣ ಎತ್ಕೊಂದೋಗಿದ್ದಂತೆ. ಇವೆಲ್ಲ ಕೇಳ್ದಾಗ ನಮ್ಮೋರು ವಿದೆಶಿಯರಿಗಿಂತ ಮುಂಚೆಯೇ ವಿಮಾನ ಕಂಡುಹಿಡಿದಿದ್ರ ಅಂತ ಡೌಟ್ ಬರೋದು ಸಾಮಾನ್ಯ. ಇಂತಹ ಡೌಟ್ clear ಮಾಡೋ ಸಿನಿಮ ನೋಡೋ ಅವಕಾಶ ಈ ನಡುವೆ ಒದಗಿ ಬಂದಿತ್ತು.

ಹೋದವಾರ ಗಣರಾಜ್ಯೋತ್ಸವದ ಪ್ರಯುಕ್ತ ನಮ್ ಕಂಪನಿ ರಜೆ ಇತ್ತು. ಏನು ಮಾಡೋದು ಅಂತ ಯೋಚಿಸುತ್ತಿರುವಾಗಲೇ ನಮ್ಮ ನೆಂಟರೋಬ್ರು ಫೋನ್ ಮಾಡಿ, ಅವರು ಅಬಿನಯಿಸಿರೋ ಚಿತ್ರದ ಉಚಿತ ಪ್ರದರ್ಶನ ಇದೆ ಬಾ ಅಂತ ಕರೆದರು. ಬಿಟ್ಟಿಯಾಗಿ ಆಗೋಹಾಗಿದ್ರೆ 100 ರು ಕೆಲಸಕ್ಕೆ ಇನ್ನೂರು ರು ಖರ್ಚು ಮಾಡಕ್ಕು ತಯಾರು ಅಲ್ವೇ ನಾವು, ಸರಿ ಸರ್ ಬರ್ತೀನಿ ಅಡ್ರೆಸ್ ಕೊಡಿ ಅಂದೆ. ಸೀತ ಸರ್ಕಲ್ ಹತ್ರ ಯೋಗಶ್ರಿ ಆಶ್ರಮ ಸಿನಿಮ ಹೆಸರು ಪ್ರಪಾತ ಅಂದ್ರು. ನನಗೆ ಆ ಸಿನಿಮ ಬಗ್ಗೆ ಮೊದಲೇ ಸ್ವಲ್ಪ ಗೊತ್ತಿತ್ತು. ಥಿಯೇಟರ್ ಅಲ್ಲಿ ರಿಲೀಸ್ ಆಗಲಿ ಅಂತ ಕಾಯ್ತಿದ್ದೆ, ಆದ್ರೆ ಅಲ್ಲಿ ಹೋಗಿ ನೋಡಿದಾಗಲೇ ತಿಳಿದಿದ್ದು ಇದು ಪ್ರಪಾತದ ನೂರ ಎರಡನೇ ಶೋ ಅಂತ. ಅಷ್ಟು ಕಡೆ ಅದು ಸ್ಕ್ರೀನಿಂಗ್ ಆಗಿದೆ ಆದರೆ ಥಿಯೇಟರ್ ಅಲ್ಲಿ ರಿಲೀಸ್ ಆಗೋ ಯೋಗ ಮಾತ್ರ ಬಂದಿಲ್ಲ ಯಾಕೆ ಅಂತ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರೇ ಹೇಳ್ಬೇಕು. ಚಿತ್ರದ ನಿರ್ದೇಶಕ ಕನ್ನಡದ ಕಿರುತೆರೆ ಹಿರಿತೆರೆ ಮತ್ತು ಆಕಾಶವಾಣಿಗೆ ಬಹಳಷ್ಟು ಕೊಡುಗೆ ನಿದಿರುವಂತಹ ವಜ್ರ ಖಂಟದ ಶ್ರೀ ಸುಚೇಂದ್ರ ಪ್ರಸಾದರು. ಆ ದಿನ ಅಲ್ಲಿ ಪ್ರದರ್ಶನ ಹಮ್ಮಿಕೊಂದಿದ್ದವರು ಪ್ರೇರಣ ಟ್ರಸ್ಟ್ ಎಂಬ NGO ಅವರು ಬಡವರಿಗೆ ಉಚಿತ ಡಯಾಲಿಸಿಸ್ ಮಾಡಿಸುವ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಪ್ರಪಾತದ ಉಚಿತ ಪ್ರದರ್ಶನ ಅಂತ ಬೋರ್ಡ್ ಹಾಕಿತ್ತು. ಅದ್ರು ಏನೋ ಒಂಥರಾ ಭಯ, ಯಾರದ್ರು ಬೈದು ಬಿಟ್ರೆ ಅಂತ. ಅದ್ರು ಯಾವುದುಕ್ಕು safety ಗೆ ಅಂತ ಅಲ್ಲಿ ಗೆಟ್ ಮುಂದೆ ನಿಂತಿದ್ದವರನ್ನ ಕೇಳ್ದೆ ಸರ್ ಟಿಕೆಟ್ ಎಲ್ಲಿ ಕೊಡ್ತಾರೆ ಅಂತ. ಅವರು ಹೇ ಅದೆಲ್ಲ ಏನಿಲ್ಲ ಫ್ರೀ ಶೋ ಹೋಗಿ ಮೇಲೆ ಕುತ್ಕೊಲಿ ಅಂದ್ರು. ಸ್ವಲ್ಪ ಡಬಲ್ meaning ಅನ್ಸಿದ್ರುನು ಏನು ಗೊತ್ತಿಲ್ಲದಂತೆ ಮೇಲೆ ಹೋಗಿ ಕೂತೆ. ನೋಡ ನೋಡುತಿದ್ದಂತೆ ಸುಮಾರು ಹಿರಿಯರು ಬಂದ್ರು. ನೆಚ್ಚಿನ ಸಾಹಿತಿಗಳಾದ ದೊಡ್ಡ ರಂಗೇಗೌಡ್ರು , ಶ್ರೀಯುತ H .S . ವೆಂಕಟೇಶಮೂರ್ತಿ ಅವ್ರು, ಶ್ರೀ ರಾಮಚಂದ್ರರಾಯರು, ಇನ್ನೊಂದು surprice ಅಂದ್ರೆ ಕಲಾ ಸಾಮ್ರಾಟ್ ಶ್ರೀ ಎಸ್.ನಾರಾಯಣ್ ಅವ್ರು. ನಂಗೆ ಅವರನ್ನೆಲ್ಲ ಒಟ್ಟಿಗೆ ನೋಡಿ ಸಿಕ್ಕಾ ಪಟ್ಟೆ ಖುಷಿ ಆಯಿತು. ನಿರ್ದೇಶಕರು ತಮ್ಮ ನೂರಒಂದು ಶೋ ಹೇಗೆ ನಡೆಯಿತು ಎಂಬ ಒಂದು ಕಿರು ನೋಟವನ್ನು ತೋರಿಸಿ ಚಿತ್ರವನ್ನು ಶುರು ಮಾಡಿದರು.

ಚಿತ್ರ ತೆರೆದುಕೊಳ್ಳುವುದೇ ವಿಶೇಷವಾಗಿ,ತೆವಳುತ್ತಾ ಕಾಡಿನಲ್ಲಿ ಸಾಗುವ ಒಬ್ಬ ವ್ಯಕ್ತಿ ನೀರಿನಲ್ಲಿ ಬಿಳುತ್ತಾನೆ. ಅಷ್ಟರಲ್ಲೇ ಚಿತ್ರ ಯಾವುದೊ ನಗರ ಪ್ರದೇಶಕ್ಕೆ ವಾಲುತ್ತದೆ. ಅಭಯ್ ಸಿಂಹ ಎಂಬ ಮರಿ ವಿಜ್ಞಾನಿ, ನಮ್ಮ ಭಾರತೀಯರ ಅನ್ವೇಶನೆಗಳೆಲ್ಲ  ವಿದೇಶಿಯರ ಪಾಲಾಗುತ್ತದೆ ಎಂದು ಹುಡುಕುತ್ತ ಹೋಗುತ್ತಾನೆ. ಅವನ ಹುಡುಕಾಟದಲ್ಲಿ ಆನೇಕಲ್ ಸುಬ್ಬರಾಯ ಶಾಸ್ತ್ರಿ ಎಂಬ ವಿಜ್ಞಾನಿ, ಬಹಳ ಹಿಂದೆಯೇ ವಿಮಾನವನ್ನು ಜುಹೂ ಬೀಚಿನಲ್ಲಿ ಹಾರಿಸಿದ್ದರು ಎಂದು ತಿಳಿದು ಬಂದು, ಅದರ ಬಗ್ಗೆ ರಿಸರ್ಚ್ ಮಾಡುವ ಕಥೆಯೇ ಪ್ರಪಾತ. ವೇದಗಳು ಪುರಾಣಗಲ್ಲಿನ ಎಷ್ಟೋ ಅಂಶಗಳನ್ನು ನಮ್ಮವರು ಬಳಸಿಕೊಂಡಿಲ್ಲ ಪುರುಷ ಸುಕ್ತದಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಒಬ್ಬ ವಿಜ್ಞಾನಿಯ ಪಾತ್ರ ವಿವರಿಸಿದಾಗ ಹೌದೇನೋ ಎಂದು ಅಚ್ಚರಿ ಮುಡುವುದಂತು ನಿಜ. ಅಭಯ್ ಜೊತೆಗೆ ಅಪ್ಪನಿಗೆ ಕಾಲೇಜಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ತಿರುಗಾಡುವ ಮತ್ತೊಬ್ಬ ಸಂಶೋಧನಸಕ್ತ ನರಹರಿ. ಇಬ್ಬರದು ಪ್ರತಿ ದಿನ ಒಂದೇ routine, ವಿಜ್ಞಾನಿಗಳ appointment ತೆಗೆದುಕೊಳ್ಳೋದು ಅವರ ಬಳಿ ಸುಬ್ಬರಾಯ ಶಾಸ್ತ್ರಿಗಳ ವೈಮಾನಿಕ ಶಾಸ್ತ್ರದ ಬಗ್ಗೆ ಚರ್ಚಿಸೋದು. ಸಿನಿಮದ ಮತ್ತೊಂದು ಮಗ್ಗುಲಲ್ಲಿ ಸುಬ್ಬರಾಯ ಶಾಸ್ತ್ರಿಗಳ ಜೀವನ ಸಹ ಅನಾವರಣ ಆಗುತ್ತ ಹೋಗುತ್ತದೆ. ಅವರು ಹೇಳುವ ಕೆಲವು ಶ್ಲೋಕಗಳು ವಿಮಾನ ಶಾಸ್ತ್ರದ ರೇಖಾ ಚಿತ್ರಗಳು ಇವೆಲ್ಲ ಮೊದಲಿಗೆ ನಮ್ಮ ಭಾರತೀಯರೆ ವಿಮಾನ ಹಾರಿಸಿದ್ದು ಎಂದನಿಸುವಷ್ಟು ನಿಜವಾಗಿದೆ. ಇವರ routine ನಡುವೆ ಆಗಾಗ ಅವರ ಭೇಟಿ ಒಬ್ಬ ಪಾರ್ಶ್ವ ವಾಯು ಪೀಡಿತ ಸಂಸ್ಕೃತ ಪಂಡಿತರೊಂದಿಗೆ ಆಗುತ್ತಿರುತ್ತದೆ. ಅವರು ವೈಮಾನಿಕ ಶಾಸ್ತ್ರದ ಶ್ಲೋಕಗಳಿಗೆ ಅರ್ಥಗಳನ್ನು ಹೇಳುತ್ತಾ ವಿವರಿಸುವ ಪರಿ ಅಚ್ಚರಿ.

ಅಭಯ್ ಮತ್ತು ನರಹರಿ ಭೇಟಿ ಮಾಡುವ ಪ್ರತಿಯೊಬ್ಬ ವಿಜ್ಞಾನಿಯು ವಿಶೇಷವಾಗಿ ಪ್ರತಿಕ್ರಯಿಸುತ್ತಾರೆ. ಒಬ್ಬರಿಗೆ ವೇದಗಳ ಬಗ್ಗೆ ಅಸಡ್ಡೆ, ಒಬ್ಬರಿಗೆ ತನ್ನ ಸಂಶೋಧನೆ ಇವರು ಕದ್ದುಬಿಡಬಹುದೆಂಬ ಭಯ. ಒಬ್ಬರಿಗೆ ನಮ್ಮ ದೇಶದಲ್ಲಿ ಇಂತಹ ಸಂಶೋಧನೆಗಳಿಗೆ ಬೆಲೆ ಇಲ್ಲ ಎಂಬ ನಂಬಿಕೆ, ಹೀಗೆ.ಇದು ನಮ್ಮ ದೇಶದ ಪ್ರತಿಭೆಗಳಿಗೆ ನಮ್ಮಲ್ಲಿ ಬೆಲೆ ಕಡಿಮೆ ಎಂಬುದನ್ನು ತೋರಿಸುವಂತಿದೆ.ಆದರೆ ಅಭಯ್ ಅವರ ಅವರ ರಿಸರ್ಚ್ ಗಾಗಿ ಆಂಗ್ಲರು ಯಾವಾಗಲು ಹಿಂದೆ ಬಿದ್ದಿರುತ್ತಾರೆ. ಆದರೆ ಅವರೊಂದಿಗೆ ರಿಸರ್ಚ್ ಮಾಡಲು ಅಭಯ್ ಗೆ ಇಷ್ಟ ಇರುವುದಿಲ್ಲ. ನಮ್ಮ ದೇಶದ IIT ಗಳಲ್ಲಿ ಓದಿ ಹಣಕ್ಕಾಗಿ ಬೇರೆ ದೇಶಗಳಲ್ಲಿ ಕೆಲಸ ಮಾಡುವರೆಲ್ಲ ನಮ್ಮಲ್ಲಿಯೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತಿತ್ತು ಅಲ್ವೇ??. ಚಿತ್ರದಲ್ಲಿನ ಒಂದು ಸಾಲು ” ನಮ್ಮ ಸಂಶೋಧನೆ ನ ನಮ್ಮದು ಅಂತ ಹೇಳಿಕೊಳ್ಳೋಕೆ ಯಾಕೆ ಹಿಂಜರಿಕೆ ” ಹೌದಲ್ವಾ ನಾವು ಯಾವಾಗಲು ಇದರಲ್ಲಿ ಮುಂದು ಅನ್ಸುತ್ತೆ. ಬೇರೆಯವರಿಗೆ ಕ್ರೆಡಿಟ್ ಕೊಟ್ಟು ತ್ಯಾಗಮೂರ್ತಿಗಳಾಗಬೇಕು ಅಂತ ಆಸೆ ನಮಗೆ, ಚಿತ್ರದಲ್ಲಿ ಇನ್ನೊಂದು ಕಡೆ “ನಮ್ಮ ಗಾಂಧೀಜಿಯ ಕನ್ನಡಕ, ಚರಕ, ಬೇರೆ ದೇಶದಲ್ಲಿ ಹರಾಜಾಗುತ್ತೆ,ಕೋಹಿನೂರು ವಜ್ರ ಇಂಗ್ಲೆಂಡ್ ರಾಣಿಯ ಮುಕುಟದಲ್ಲಿರುತ್ತೆ”. ಎಂದಾಗ ಛೆ ಹೌದಲ್ಲ ಅನ್ನಿಸುತ್ತೆ. ಎಲ್ಲವನ್ನು ಬಿಟ್ಟು ಕೊಡಲು ಸದಾ ಸಿದ್ದ ನಾವು. ಸಿನಿಮಾದಲ್ಲಿ ನಮ್ಮ ದೇಶದ ಈ ಉದಾರಿತನದ ಬಗ್ಗೆ ಸುಚೇಂದ್ರ ಪ್ರಸಾದರು ಬಹಳ ಚೆನ್ನಾಗಿ ಬೆಳಕು ಚೆಲ್ಲಿದ್ದಾರೆ.

ಈ ನಿರಂತರ ಹುಡುಕಾಟದಲ್ಲಿ ಎದುರಿಸುವ ಸವಾಲುಗಳಲ್ಲಿ ಸೋತು ಕಡೆಗೆ ಮಾಡಿದ ಸಂಶೋಧನೆಗಳನ್ನೆಲ್ಲ ತಿಪ್ಪೆಗೆಸೆಯುತ್ತಾನೆ ಅಭಯ್, ಆದರೆ ಅಲ್ಲಿ ಮತ್ತೊಬ್ಬ ಸಂಶೋದಕ ಹುಟ್ಟುತ್ತಾನೆ ಎಂಬುದರಲ್ಲಿ ಚಿತ್ರ ಮುಕ್ತಾಯಗೊಳ್ಳುತ್ತದೆ. ಹತ್ತಾರು ಹುಲ್ಲಿನ ವಾಮೆಯಲ್ಲಿ ಅಭಯ್ ಚಿತ್ರ ಶುರುವಾದಾಗಿನಿಂದ ಏನನ್ನೋ ಹುಡುಕುತ್ತಿರುತ್ತಾನೆ, ಕೊನೆಯಲ್ಲಿ ತಿಳಿಯುತ್ತದೆ ಅವನು ಹುಡುಕುತ್ತಿರುವುದು ಸೂಜಿಯನ್ನು ಎಂದು. ಅದನ್ನು ಸಂಶೋಧನೆಯ ಅರ್ಥದಲ್ಲಿ ಹುಲ್ಲಾಮೆಯಲ್ಲಿ ಸೂಜಿ ಹುದುಕಿದಂತೆಯೇ ಸಂಶೋಧನೆ ಎಂದು ತಿಳಿಸಿ ಸುಚೇಂದ್ರ ಪ್ರಸಾದರು ಜಾಣ್ಮೆ ಪ್ರದರ್ಶಿಸಿದ್ದಾರೆ.

ಚಿತ್ರದ ನಟರೆಲ್ಲರೂ ಅಭಿನಯ ಚತುರತೆ ಮೆರೆದಿದ್ದಾರೆ. ಹೊಸ ಮುಖ ಅನಿಸಿದರು ಅಚ್ಚರಿ ಮೂಡಿಸುವುದು ಅಮಾನುಲ್ಲ(ಅವರು ಹಳಬರಾಗಿರಬಹುದು ನಾ ಎಲ್ಲು ಗಮನಿಸಿಲ್ಲ ಅವರ ಚಿತ್ರಗಳನ್ನು). ಸಂತೋಷ್ ನರಹರಿಯಾಗಿ ಲೀಲಾ ಜಾಲವಾಗಿ ನಟಿಸಿದ್ದಾರೆ, ಬಾಲ ನಟನಾಗಿ ಅವರ ನಟನೆಯನ್ನು ನಾವೀಗಾಗಲೇ ಬಹಳ ಚಿತ್ರಗಳಲ್ಲಿ ನೋಡಿದ್ದೇವೆ. ಮಿಗಿಲಾಗಿ ದತ್ತಣ್ಣ, ಶಿವರಾಮಣ್ಣ, ಶ್ರೀನಿವಾಸ ಪ್ರಭು ಕೆ ಎಸ್ ಎಲ್ ಸ್ವಾಮಿ ಇವರೆಲ್ಲರ ನಟನೆಯ ಬಗ್ಗೆ ದೂಸರ ಮಾತಾಡಿದರೆ ಜನ ನಂಗೆ ಓದಿತಾರೆ 🙂 ಆನೇಕಲ್ ಸುಬ್ಬರಾಯ ಶಾಸ್ತ್ರಿಗಳಾಗಿ ಕಲಾಕೇಸರಿ ಉದಯಕುಮಾರ್ ಅವರ ಪುತ್ರ ವಿಕ್ರಂ ಉದಯ್ ಕುಮಾರ್ ನಟನೆ ನಿಜಕ್ಕೂ ಶ್ಲಾಘನೀಯ. ಆ getup ಗೆ ಸರಿಯಾಗಿ ಕೂತಿದ್ದಾರೆ. ಸುಚೆಂದ್ರರ ಶೋಧನೆಗೆ ಒಂದು ಸಲಾಂ. ಒಟ್ಟಲ್ಲಿ ಪ್ರಪಾತ ಒಂದು ಅದ್ಭುತ ವಿಷಯವಿರುವ ಚಿತ್ರ. ಸುಚೇಂದ್ರ ಪ್ರಸಾದ್ ಮೊದಲ ಬಾರಿ ನಿರ್ದೇಶಕರ ಟೋಪಿ ಹಾಕಿ ಕೊಂಡಿದ್ದಾರೆ ಎಂದು ಅನಿಸುವುದೇ ಇಲ್ಲ. ಅಷ್ಟು ಚೆನ್ನಾಗಿ ಚಿತ್ರ ಮೂಡಿ ಬಂದಿದೆ.

ಇದು commercial ಚಿತ್ರ ಅಲ್ಲವೇ ಅಲ್ಲ. ಹಾಡುಗಳು ಒಂದೂ ಇಲ್ಲ, ಹೊಡೆದಾಟ ಇಲ್ಲ, ರೋಷದ dialog ಗಳಿಲ್ಲ. ಆದರೆ ಹತಾಷೆಯಿದೆ. ಸಿನಿಮ ಮುಗಿದ ಮೇಲೆ ನಮ್ಮಿಂದ ನಿಜಕ್ಕೂ ಆಂಗ್ಲರು ಎಲ್ಲವನ್ನು ಕಿತ್ತುಕೊಂಡಿದ್ದಾರಾ ಎಂದೆನಿಸುತ್ತದೆ. ಸದಭಿರುಚಿಯ ಹಾಸ್ಯವಿದೆ. ಒಂದು ದೃಶ್ಯದಲ್ಲಂತೂ ನರಹರಿಯನ್ನು ಸಮ್ಮೋಹಿನಿ ತಜ್ಞರು ಬಂದು ಹಿಂದಿನ ಜನ್ಮಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಿದಾಗ ನಗುವ ಬುಗ್ಗೆ ತಾನಾಗೆ ಹರಿಯುತ್ತದೆ. ಮುಖ್ಯವಾಗಿ ಸಂಶೋಧನಾ ನಿರತರಿಗೆ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಚಿತ್ರ. ಒಂದೊಮ್ಮೆ ಬೋರ್ ಅನಿಸುತ್ತದೆ ಆದರು ತಡೆದು ಕೊಳ್ಳಬಹುದು. ನಿಮ್ಮ ಹತ್ತಿರದ ಚಿತ್ರ ಮಂದಿರದಲ್ಲಿ ಚಿತ್ರ ಬಿಡುಗಡೆಯ ಭಾಗ್ಯ ಕಂಡರೆ ಕುಟುಂಬ ಸಮೇತರಾಗಿ ಮುಖ್ಯವಾಗಿ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಿ ತೋರಿಸಿ. ನಿಮಗೆ ಹತ್ತಿರವಾಗಿ ಉಚಿತ ಪ್ರದರ್ಶನ ಇದ್ದರೆ ಮಿಸ್ ಮಡ್ಕೊಳ್ಳೆ ಬೇಡಿ. ಅಂತು ಗಣರಾಜ್ಯೋತ್ಸವದ ದಿನ ಬಿಟ್ಟಿ ಸಿನಿಮ ನೋಡಿದಂತಾಯಿತು ನನಗೆ ಆಹ್ವಾನ ನೀಡಿದ ನಮ್ಮ ನೆಂಟರಿಗೆ ಒಂದು ಜೈ 🙂

ಕಡೆಗೂ ನಿರ್ದೇಶಕರು ಮತ್ತೊಂದು ಪ್ರಶ್ನೆ ಹುಟ್ಟು ಹಾಕಿದರೋ ಹೊರತು ಉತ್ತರವನ್ನಂತು ಅಲ್ಲ. ನಿಜಕ್ಕೂ ವಿಮಾನ ಅನ್ವೇಷಣೆ ನಮ್ಮದಾ ಅಥವಾ ವಿದೇಶಿಯರದಾ………??????

ಇನ್ನೂ ಹೆಚ್ಚು ವೈಮಾನಿಕ ಶಸ್ತ್ರ ಮತ್ತು ಸುಬ್ಬರಾಯ ಶಾಸ್ತ್ರಿಗಳ ಬಗ್ಗೆ ತಿಳಿದುಕೊಳ್ಳೋ ಆಸೆ ಇದ್ದರೆ http://en.wikipedia.org/wiki/Vaimanika_ಶಸ್ತ್ರ ಈ ಲಿಂಕ್ ನೋಡಿ

ಚಿತ್ರಕೃಪೆ :-  voicingsilence.com

****************************************************************************************************************

4 ಟಿಪ್ಪಣಿಗಳು Post a comment
 1. M Maravanthe
  ಫೆಬ್ರ 3 2012

  ಮುನಿ ಬಾರಾದ್ವಾಜರು ವಿಮಾನ ತಯಾರಿಕೆ, ಚಾಲನೆ ಹಾಗೂ ಯುದ್ದ ವಿದಾನದ ಬಗ್ಗೆ ಬರೆದಿದ್ದರಂತೆ ಅಂತೆ ಅಂತೆ ಅಂತೆ,…..

  ಉತ್ತರ
  • ಫೆಬ್ರ 3 2012

   ಹೌದು ಚಿತ್ರದಲ್ಲಿ ಅವರ ಬಗ್ಗೆಯೂ ಪ್ರಸ್ತಾಪವಿದೆ. ಮುನಿ ಭಾರದ್ವಾಜರೆ ವೈಮಾನಿಕ ಶಾಸ್ತ್ರದ ಕರ್ತೃ ಎಂದು ಹೇಳಲಾಗಿದೆ

   ಉತ್ತರ
 2. ಶ್ರೀಕಾಂತ ಮಿಶ್ರೀಕೋಟಿ
  ಫೆಬ್ರ 4 2012

  ಈ ಸಿನೆಮವನ್ನು ಪೂರ್ವಾಗ್ರಹಗಳೊಂದಿಗೆ ನೋಡುವವರೇ ಬಹಳ; ಹಾಗಾಗಿ ಅದರಲ್ಲಿನ ತಮಗೆ ಬೇಡದ್ದನ್ನು ಕಾಣರು. ತಮ್ಮ ಮನಸ್ಸಿಗೆ ಒಪ್ಪುವುದನ್ನೇ ಅಲ್ಲಿ ಕಾಣುವರು. ನಂತರದ ಸಂವಾದದಲ್ಲಿ ನಿರ್ದೇಶಕರು ಈ ಬಗ್ಗೆ ಅಸಹಾಯಕರಾದಂತೆ ಕಾಣಿಸಿತು!

  ಉತ್ತರ
 3. ಮಾರ್ಚ್ 25 2012

  Я не понимаю ваш язык! как на нем вообще можно разговаривать?!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments