ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 8, 2012

14

ಟಿ.ಆರ್.ಪಿಗಾಗಿ ನೀಲಿ ಚಿತ್ರದ ಬೆಂಬತ್ತಿದ ಮಾಧ್ಯಮ

‍ನಿಲುಮೆ ಮೂಲಕ

ವಿಜಯ್ ಹೆರಗು

ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯ
ಸಂಪಾದಕ : ಹೇಳಿ ವಿಜಯ್
ನಾನು : ಸರ್ ನಾನು ನಿಮ್ಮ ಟಿವಿ ಚಾನೆಲ್ ನೋಡ್ತಾ ಇದ್ದೀನಿ. ನಂದೊಂದು request ನೀವು ತೋರಿಸ್ತಾ ಇರೋ  ವೀಡಿಯೊ ತುಂಬಾ ಕೆಟ್ಟದಾಗಿದೆ. blur ಆಗಿ (ಮಸುಕಾಗಿ) ತೋರಿಸಿ.
ಸಂ : ನೀವೇನೋ blur ಆಗಿ ತೋರಿಸಿ ಅಂತೀರ, ನಾವೂ ಮೊದ್ಲು ಹಾಗೇ ತೋರಿಸ್ತಾ ಇದ್ವಿ ಆದ್ರೆ ಸಾಕಷ್ಟು ಜನ phone ಮಾಡಿ ಉಗೀತಾ ಇದಾರೆ … blur ಮಾಡ್ಬೇಡಿ ಹಾಗೇ ತೋರಿಸಿ ಅಂತ.
ನಾನು : ಹಾಗಲ್ಲ ಸರ್, ಮನೆಯಲ್ಲಿ ಮಕ್ಕಳು-ಮರಿ ನೋಡ್ತಾ ಇರ್ತಾರೆ ಇಷ್ಟು ಕೀಳು ಅಭಿರುಚಿ ವೀಡಿಯೊ ತೋರಿಸಿದ್ರೆ ಹೇಗೆ?
ಸಂ : ಈಗ ಸ್ವಲ್ಪ ಮುಂಚೆ ನನಗೊಬ್ಬ ಹಿರಿಯರು call ಮಾಡಿ thanks ಹೇಳಿದ್ರು, ನಂಗೆ ಬ್ಲೂ ಫಿಲಂ ಅಂದ್ರೆ ಗೊತ್ತಿರ್ಲಿಲ್ಲ ಈಗ ನಿಮ್ ಚಾನೆಲ್ ನೋಡಿ ಗೊತ್ತಾಯ್ತು ಅಂದ್ರು. ಮೊದ್ಲು blur ಆಗಿ ತೋರಿಸಿದ್ವಿ ಈಗ detail ಆಗಿ ತೋರಿಸ್ತೀವಿ.
ನಾನು : ನೋಡೀ ಸರ್, ಒಂದು ಜವಾಬ್ದಾರಿಯುತ ಮಾಧ್ಯಮದಲ್ಲಿರುವ ನೀವು ಹೀಗೆ ಮಾತಾಡೋದು ಸರಿಯಲ್ಲ, ಸದನದಲ್ಲಿ ಅಶ್ಲೀಲ ವೀಡಿಯೊ ನೋಡಿ ಆ ಮಿನಿಸ್ಟರುಗಳು ತಪ್ಪು ಮಾಡಿದ್ದಾರೆ ನಿಜ…….. ಆದ್ರೆ ನೀವು ಅದೇ ವೀಡಿಯೊಗಳನ್ನು ಇಡೀ ಕರ್ನಾಟಕಕ್ಕೇ ತೋರಿಸ್ತಾ ಇದ್ದೀರ, ಮನೆಯಲ್ಲಿ ದೊಡ್ಡವರ – ಚಿಕ್ಕವರ ಜೊತೆ ಕುಳಿತು ನ್ಯೂಸ್ ನೋಡೋಕೆ ಮುಜುಗರ ಹಾಗೋ ಹಾಗೆ ಕ್ಲಿಪ್ಪಿಂಗ್ಸ್ ತೋರಿಸ್ತಿದ್ದೀರಲ್ಲ….. ಆ ಮಿನಿಸ್ಟರುಗಳಿಗೂ ನಿಮಗೂ ಏನು ವ್ಯತ್ಯಾಸ.
ಸಂ :  ಇಲ್ಲ ನಾವು ಹಾಗೆ ತೋರಿಸದಿದ್ರೆ ಜನ ನಮಗೆ ಉಗೀತಾರೆ ಅಷ್ಟೇ
ನಾನು : ನೋಡಿ ಸರ್ ನಿಮಗೂ ಒಬ್ಬ ಮಗ ಇದ್ದಾನೆ, ಅವನ ಜೊತೆ ಕೂತ್ಕೊಂಡು ನೋಡಬಹುದಾದ quality ನಿಮ್ಮ ವೀಡಿಯೊ ಕ್ಲಿಪ್ಪಿಂಗುಗಳಿಗೆ ಇದೆ ಅಂತ ನಿಮಗೆ ಅನ್ನಿಸಿದ್ರೆ ಧಾರಾಳವಾಗಿ ಪ್ರಸಾರ ಮಾಡಿ …….
ಇಷ್ಟು ಹೇಳಿ ನಾನು ಫೋನ್ disconnect ಮಾಡಿದೆ. ಇದಿಷ್ಟೂ ನಡೆದಿದ್ದು ನಿನ್ನೆ ರಾತ್ರಿ 11 ಗಂಟೆಯ ಸಮಯದಲ್ಲಿ. ಲಕ್ಷ್ಮಣ ಸವದಿ ಹಾಗೂ ಸಿ ಸಿ ಪಾಟೀಲರ ಕೀಳು ಅಭಿರುಚಿ ಇಷ್ಟಕ್ಕೆಲ್ಲ ಕಾರಣ. ವಿಧಾನಸಭೆಯ ಕಲಾಪದ ಸಮಯದಲ್ಲಿ ಕಾಮಕೇಳಿಯ ವೀಡಿಯೊ ನೋಡುತ್ತಿದ್ದ ಈ ಪುಡಾರಿಗಳ ನಿಜ ಬಣ್ಣ ಬಯಲು ಮಾಡಿದ ಮಾಧ್ಯಮಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.
24  X 7 ನ್ಯೂಸ್ ಚಾನಲ್ಲುಗಳ ಸಂಖ್ಯೆ ಹೆಚ್ಚಿದಂತೆ TRP (Target rating point ) ಸಮರ ಹೆಚ್ಚುತ್ತಿದೆ. ದಿನವಿಡೀ ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಅನಿವಾರ್ಯತೆ ಎದುರಿಸುತ್ತಿರುವ ನ್ಯೂಸ್ ಚಾನಲ್ಲುಗಳು ಇಂತಹ ಗಿಮಿಕ್ಕುಗಳಿಗೆ ಇಳಿಯುತ್ತವೆ.  ಸುದ್ದಿ ಬಿತ್ತರಿಸುವ ಭರದಲ್ಲಿ ಮಾಧ್ಯಮಗಳಿಗೆ ಇರಬೇಕಾದ ಸಾಮಾಜಿಕ ಕಾಳಜಿ, ಪತ್ರಿಕಾ ಧರ್ಮ, ನೀತಿ ನಿಯಮಗಳನ್ನು ಮರೆಯುತ್ತವೆ.
ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ನಿಜಕ್ಕೂ ಅಸಹ್ಯಕರ. ಆದರೆ ಇಂತಹ ಅಸಹ್ಯಗಳು ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ಹಲವು ಬಾರಿ ನಡೆದಿವೆ. ಹಣದ ಆಸೆಗೆ ಬಿದ್ದು ತಮ್ಮನ್ನೇ ಮಾರಿಕೊಂಡ ಸಂಸದರು, ಲೋಕಸಭೆಯಲ್ಲಿ ಲೋಕಪಾಲ್ ಮಸೂದೆಯ ಪ್ರತಿಯನ್ನು ಹರಿದೆಸೆದ ಸಂಸದರು, ವಿಧಾನಸಭೆಯಲ್ಲಿ ಕುರ್ಚಿಗಳನ್ನು,ಚಪ್ಪಲಿಗಳನ್ನೂ ಎಸೆದಾಡಿದ ಶಾಸಕರು ….ಒಂದೆರಡಲ್ಲ ಹತ್ತಾರು ಉದಾಹರಣೆಗಳನ್ನು ನಮ್ಮ ದೇಶದ ರಾಜಕಾರಣಿಗಳು ನಮಗಾಗಿ ಇತಿಹಾಸದಲ್ಲಿ ಉಳಿಸಿದ್ದಾರೆ.
ಬೇರೆಯವರು ಮಾಡಿದ ತಪ್ಪನ್ನು ತೋರಿಸುವ ಭರದಲ್ಲಿ ನಾವೂ ತಪ್ಪು ಹಾದಿ ತುಳಿಯದಂತೆ ಎಚ್ಚರವಹಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಯಾರೋ ಮಾಡಿದ ಅವಿವೇಕಕ್ಕೆ ಅತಿರೇಕದ ಸುದ್ದಿ ಬಿತ್ತರಿಸುವುದು ಸರಿಯಲ್ಲ.  ಇನ್ನಾದರೂ ನಮ್ಮ 24 X  7 ಸುದ್ದಿವಾಹಿನಿಗಳು ಎಚ್ಚೆತ್ತುಕೊಂಡು ಕೇವಲ ಮಾರುಕಟ್ಟೆ ದೃಷ್ಟಿಯಿಂದ ಹೊರಬಂದು ಮಾಧ್ಯಮಗಳ ಘನತೆಯನ್ನು ಎತ್ತಿಹಿಡಿಯಬೇಕಿದೆ.
* * * * * * * *
ಚಿತ್ರಕೃಪೆ : ಅಂತರ್ಜಾಲ
14 ಟಿಪ್ಪಣಿಗಳು Post a comment
 1. Srinidhi Chadaga P
  ಫೆಬ್ರ 8 2012

  dirty media, dirty politicians

  ಉತ್ತರ
 2. Darty politics..
  dirty indian politicians..
  3 dirty idiots…
  dirty picture..

  ಉತ್ತರ
 3. ವಿಜಯ್ ಹೆರಗು
  ಫೆಬ್ರ 8 2012

  ಬರೀ ಸುದ್ದಿವಾಹಿನಿಗಳು, ರಾಜಕಾರಣಿಗಳಷ್ಟೆ dirty ಅಲ್ಲ, ನಾವೂ ಅಂದ್ರೆ ಜನರು ಕೂಡಾ. ನಮ್ಮ ಆಯ್ಕೆಗಳು ಸರಿಯಾಗಿಲ್ಲ.

  ಉತ್ತರ
  • ರವಿ
   ಫೆಬ್ರ 8 2012
  • SURAJ B HEGDE
   ಫೆಬ್ರ 9 2012

   PORN GATE:::
   N D Tiwari Used RajBhavan for his Porn Act
   Madreana had live Porn Act with Bhawari Devi
   what Rahul & Co. did with Sukanya in Amethi was real porn.
   In 1998, JB Patnaik, Congress CM of Odisha, was accused of being in sex scandals by government affidavits!
   In 1997, Muslim League’s Minister in Kerala, Kunhalikutty, accused of running a whore house
   In 1994 Jalgaon rape & sex-racket case in Maharashtra, Congress guy Pandit Sakpale spent 4 years in jail.
   In 1982, Bihar CON ministers under Jagannath Mishra implicated after a secretariat girl Bobby was murdered.
   The original Porngate in India was on Sep 2, 1978. Maneka Gandhi published Jagjivan Ram’s son Suresh’s porn pictures. …..
   Ajmer Sex Scandal – 200 victims – Indian youth Congress leader involved
   ******************************************************
   ಇಷ್ಟೆಲ್ಲಾ ಆದಾಗ ಸುಮ್ಮನಿದ್ದ ಮಾಧ್ಯಮ ಈಗೇಕೆ ಹೀಗೆ ?
   ಕಾಂಗ್ರಸ್ಸಿನ ವಿರುದ್ಧ ದನಿಯೆತ್ತಲು ಛಲವಿಲ್ಲವೆ ?
   ಪ್ರತಿಯೊಂದು ಸುದ್ಧಿಯು filter ಆಗೇ ಬರುತ್ತವೆಯೆ ???
   ಈ ತೆರನಾದ ಅನುಚಿತ ವರ್ತನೆಗೆ ಮಾಧ್ಯಮಕ್ಕೆ ಯಾವುದೆ ಕಡಿವಾಣವಿಲ್ಲವೆ?

   ಉತ್ತರ
 4. NARASIMHAN K S
  ಫೆಬ್ರ 8 2012

  Hello,

  All the news channels are business houses today. They are selling a hot product called as news. They will sell things that are popular among people, products which people want to see.

  Yesterday’s is the kind of news that we want to see. If it was not for the ‘disturbance’ from our family members we would have wanted to see it continuously without wanting any kind of blurring and also with ‘full screen’.

  The point that i am trying to make is, there is no point in blaming electronic media. We have all ourself to blame. Today news has become an entertainment for us. We dont want to see serious news that are still telecasted doordarshan and in loksabha tv. As you said all they want is trp ratings. How will they get it? Answer is by people like us. If we decide that we will stop watching these kind of channels and rely on print media and doordarshan for our daily dose of news then not only does our general knowledge improves but also these news channels will be more responsible.

  And for our entertainment, we will ask Mr Krishna Palemar to forward that mms to us also

  – NARASIMHAN K S

  ಉತ್ತರ
 5. rajuvinay
  ಫೆಬ್ರ 8 2012

  ಯಾರಿಗಿದೆ ಸ್ವಾಮಿ ನೈತಿಕತೆ? ರಾಜಕಾರಣಿಗಳಿಗಿಂತ ದುರಾಸೆಯ ಜನ ಮಾಧ್ಯಮಗಳಲ್ಲಿ ಹೆಚ್ಚಾಗುತ್ತಿದ್ದಾರೆ. ರಾಜಕಾರಣಿಗಳಿಗೆ, ಜನರಿಗೆ ಮಾಧ್ಯಮಗಳ ಭಯ ಇದೆ. ಈ ಮಾಧ್ಯಮಗಳಿಗೆ ಯಾರ ಭಯ ಇದೆ. ತಾವೇಳಿದ್ದೆ ವೇದವಾಕ್ಯ ಅನ್ನೋ ಧೋರಣೆಯಿಂದ ಈಜಾಡುತ್ತಿದ್ದಾರೆ. ತಮ್ಮ ತಪ್ಪುಗಳನ್ನು ತಾವೇ ತೋರಿಸಿಕೊಳ್ಳಲು ಆಗುತ್ತದೆಯೇ?

  ಉತ್ತರ
 6. suresh
  ಫೆಬ್ರ 8 2012

  ಮೂವರು ಮೂರ್ಖರು ಮಾಡಿದ್ದನ್ನ ಇಡೀ ಪ್ರಪಂಚ್ಚಕ್ಕೆ ತೋರಿಸಿ ಕರ್ನಾಟಕದ ಮರ್ಯಾದೆಯನ್ನು ಹರಾಜು ಮಾಡಿದ್ದಾರೆ ಈ ಚಾನೆಲ್ ಗಳು! ಕೇವಲ ಟಿ.ಆರ್. ಪಿ.ಗಾಗಿ ಏನೇಲ್ಲ ಮಾಡಲು ತಯ್ಯಾರಿದ್ದಾರೆ! ಅವರ ಸ್ಪರ್ಧೆ ಅಸಹ್ಯ ಹುಟ್ಟಿಸುತ್ತದೆ.

  ಉತ್ತರ
 7. ಫೆಬ್ರ 9 2012

  ಮಾಧ್ಯಮದವರೆ ಆ ರೀತಿಯ ಸಂದೇಶವನ್ನು ಕಳಿಸಿರಬಹುದು. ಏನೋ ವೀಡಿಯೋ ಮೆಸೇಜ್ ಬಂತು ಅಂತ ಈ ಮಂಗಗಳು ಹಿಂದೆ ಮುಂದೆ ಯೋಚಿಸದೆ ನೋಡಿರಬಹುದು. ಒಟ್ಟಿನಲ್ಲಿ ಇಂಗು ತಿಂದ ಮಂಗ ಆಗಿದ್ದಂತೂ ನಿಜ.

  ಮಾಧ್ಯಮದವರು ಸೆನ್ಸಾರ್ ಮಾಡದೇ ಪ್ರಸಾರ ಮಾಡುವುದು, ಮಾಧ್ಯಮದ ಬೇಜವಾಬ್ದಾರಿತನವನ್ನು ತೋರಿಸುವುದಂತೂ ಖಂಡಿತ.

  ಕರ್ನಾಟಕದ ಮರ್ಯಾದೆ ಹೋಯಿತು, ಇನ್ನು ಮುಂದೆ ಕರ್ನಾಟಕದ, ಅಷ್ಟೇ ಏಕೆ, ಭಾರತದ ಎಲ್ಲಾ ಮಂತ್ರಿಗಳೂ ಎಚ್ಚರವಾಗಿರುತ್ತಾರೆ.

  ಇವರುಗಳು, ಮನೆ ಮಂದಿಯ ಮುಂದೆ ಹೇಗೆ ಮುಖ ಬೆಳಗಿಕೊಳ್ಳುತ್ತಾರೋ ದೇವರಿಗೇ ಗೊತ್ತ್ತು.

  ಉತ್ತರ
 8. ವಿಜಯ್ ಹೆರಗು
  ಫೆಬ್ರ 9 2012

  http://m.thehindu.com/news/states/karnataka/article2874447.ece/?page=all

  ನಮ್ಮ ಕನ್ನಡ ಸುದ್ದಿವಾಹಿನಿಗಳ ಮುಖಕ್ಕೆ ಮಂಗಳಾರತಿ ಎತ್ತಿದ THE HINDU ಪತ್ರಿಕೆಯ ಲೇಖನ.

  ಉತ್ತರ
 9. ಫೆಬ್ರ 9 2012

  Children are reading newspapers in the prayer assembly at schools every morning. Almost all newspapers carried this with banner headlines & photo. “The Hindu” was no exception. Free press does not mean irresponsible reporting. When will our journalists & editors will learn this ? Is TRP & money is so much important to them than dignity ? God save India.

  ಉತ್ತರ
 10. ಫೆಬ್ರ 10 2012

  ಮೀಡಿಯಾ ದವರಿಗೆ ಜನರ ಕಾಳಜಿಗಿಂತ ಸ್ವಾರ್ಥ ಸಾಧನೆಯೇ ಮುಖ್ಯವಾಗಿದೆ ಅಂತ ಮೊನ್ನೆಯ ಪ್ರಕರಣದಲ್ಲಿ ಜಗಜ್ಜಾಹೀರಾಯ್ತು. ಇವ್ರು ಏನು ಸಾಧಿಸೋಕೆ ಹೊರಟಿದ್ದಾರೆ ಅಂತಲೇ ಗೊತ್ತಾಗದೆ ಹೋಯ್ತು…ಆಜ್ ತಕ್, NDTV ಯಂತಹ ರಾಷ್ಟ್ರೀಯ ಸುದ್ಧಿ ಮಾಧ್ಯಮದವರು ಚಿತ್ರಗಳನ್ನು ಸರಿಯಾಗಿ ಬ್ಲರ್ ಮಾಡಿ ತೋರಿಸ್ತಿದ್ರು …ಆದ್ರೆ ನಮ್ಮವರ ಚಾನೆಲ್ ಹಾಕೋಕೆ ನಾಚ್ಕೆ ಆಗ್ತಿತ್ತು…ಕೊನೆಗೆ ಅವರೇ ಸಮರ್ಥಿಸಿ ಕೊಳ್ಳೋಕೆ ಶುರು ಮಾಡಿದ್ರು…ನಾವು ಹಾಗೆ ತೋರಿಸದೆ ಇದ್ರೆ ಜನರಿಗೆ ಸತ್ಯಾಂಶ ಗೊತ್ತಾಗೋದಿಲ್ಲ, ಅದ್ಕೆ ಹೀಗೆ ತೋರಿಸ್ತಾ ಇದ್ದೇವೆ ಅಂತ ಹೇಳಲಿಕ್ಕೆ ಸುರು ಮಾಡಿದ್ರು…ರಾಜಕೀಯದ ಜೊತೆ ಜೊತೆಗೆ ಟೀವಿ ಮಾಧ್ಯಮವೂ ಕುಲಗೆಟ್ಟು ಹೋಗಿದೆ ಅಂತ ಮೊನ್ನೆ ಸಾಭೀತಾಯ್ತು…

  ಉತ್ತರ
 11. ಬಸವಯ್ಯ
  ಫೆಬ್ರ 12 2012

  ಹಾಲಿ ನಮ್ಮ ನಾಡಿನಲ್ಲಿ ಇಬ್ಬರು ಮಹಾನ ಪತ್ರಕರ್ತರಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಬದಲಾವಣೆ ತಂದವರು ಅವರೆ, ಈಗ ರಾಡಿ ಎಬ್ಬಿಸುತ್ತಿರುವವರು ಕೂಡ ಅವರೆ!. ಇಬ್ಬರಿಗೂ ತಾವು ಅನುಭವದ ಖನಿಗಳು, ಉಳಿದವರಿಗೆ ಬುದ್ಧಿ ಹೇಳುವುದಕ್ಕೆಂದೆ ಹುಟ್ಟಿದವರು ಎಂಬ ಭ್ರಮೆ. ತಮ್ಮ ಅಹಂ ಮುಂದೆ ಬೇರೆ ಯಾವುದು ಇವರಿಗೆ ಕಾಣುವುದಿಲ್ಲ. ಇಬ್ಬರೂ ಕೂಡ ವಿಕೃತರು. ಆದರೆ ಅದನ್ನು ತೋರಿಸಿಕೊಳ್ಳುವಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಅಷ್ಟೇ . ಮೇಲೆರಲು ಯಾವ ಅಸಹ್ಯ ಮಟ್ಟಕ್ಕಾದರೂ ಈ ಇಬ್ಬರು ಇಳಿಯಬಲ್ಲರು.
  ಒಬ್ಬ ತನಗೆ ಕಲಿಸಿದ ಗುರುಗಳ ವಿರುದ್ಧವೇ ಜರೆದು ಬರೆದೆ ಒಂದು ಇಡಿ ಕಾಲಂ ಹಾಳು ಮಾಡಿದ್ದನ್ನು ನೀವು ಗಮನಿಸಿರಬಹುದು. ಅವರೆಲ್ಲೊ ಯಾವುದೋ ಸಮಾರಂಭದಲ್ಲಿ ಈ ಮನುಷ್ಯನ ಪ್ರಾಮಾಣಿಕತೆ ಪ್ರಶ್ನಿಸಿದರೆಂದು ಈತನ ಶಿಷ್ಯ ಫೋನ ಮಾಡಿ ತಿಳಿಸಿದಂತೆ. ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ತಾನು ನಡೆಸಿದ ತನಿಖೆಗೆ ಇಡಿ ಕಾಲಂ ಮೀಸಲಿಟ್ಟಿದ್ದ ಈ ಮಹಾನುಭಾವ. ತಾನೇಷ್ಟು ದೊಡ್ಡವನು ಎಂದು ತನಗೆ ತಾನೆ ಬೆನ್ನು ತಟ್ಟಿಕೊಂಡಿದ್ದ.
  ಇನ್ನೊಬ್ಬ ಮನುಷ್ಯ ಮಾತಿನಲ್ಲೆ ಜನರಿಗೆ ಮರಳು ಮಾಡಬಲ್ಲ. ಕರಡಿ ಅಪ್ಪುಗೆ, ಗುಬ್ಬಚ್ಚಿ ಗೂಡು, ವಳ ವಳಿಕೆ, ಹಳ ಹಳಿಕೆ ಎಂಬುದೆಲ್ಲ ಬರೆದು ಪ್ರೀತಿ ಎಂಬುದು ಎಂತಹ ದಿವ್ಯ ಅನುಭವ, ತಾನೆಂಥ ಮಹಾನ ಪ್ರೇಮಿಯಾಗಿದ್ದೆ ಎಂಬುವದನ್ನೆಲ್ಲ ಜನ ನಂಬುವ ಹಾಗೆ ಬರೆಯಬಲ್ಲ. ಆದರೆ ಆತನ ಪತ್ರಿಕೆ ಮನೆಯ ಟಿಪಾಯ್ ಮೇಲೆ ಇಡುವ ಹಾಗಿರುವುದಿಲ್ಲ. ಈತನ ಪತ್ತಿಕೆಯ ಮುಖಪುಟದಲ್ಲಿ ಒಂದಿಂಚು ಎತ್ತರದ ಬೆತ್ತಲೆ- ಕತ್ತಲೆ ಎಂಬ ಹೆಡ್ಡಿಂಗ ಗಳೇ ಇರುತ್ತವೆ.
  ಈ ಇಬ್ಬರು ಪೂರ್ತಿಯಾಗಿ ಸ್ಕ್ರ್ಯಾಪ್ ಆದ ಮೇಲೆಯೇ ನಮ್ಮ ಮಾಧ್ಯಮಗಳು ಸುಧಾರಿಸಬಹುದು.

  ಉತ್ತರ

Trackbacks & Pingbacks

 1. ಟಿ.ಆರ್.ಪಿಗಾಗಿ ನೀಲಿ ಚಿತ್ರದ ಬೆಂಬತ್ತಿದ ಮಾಧ್ಯಮ « ಕಾಲಂ9 * column9 * Kannada media

ನಿಮ್ಮದೊಂದು ಉತ್ತರ Amaravanthe ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments