ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 9, 2012

10

ಕರ್ನಾಟಕ ಬಿ.ಜೆ.ಪಿ ನಾಯಕರೇ ಏನ್ರೀ ನಿಮ್ ಅವಸ್ಥೆ…?

‍ನಿಲುಮೆ ಮೂಲಕ
-ನಿತಿನ್ ರೈ ಕುಕ್ಕುವಳ್ಳಿ
ಅತೀ  ಪ್ರಸಿದ್ದಿ ಪಡೆದ ಗಾದೆ ಮಾತೊಂದಿದೆ “ನಾಯಿ ಬಾಲ ಯಾವತ್ತಿದ್ರೂ ಡೊಂಕೆ ” ಈ ಮಾತು ಕರ್ನಾಟಕದ ಬಿ.ಜೆ.ಪಿ ನಾಯಕರಿಗೆ ಅತ್ಯಂತ ಹತ್ತಿರದ ಗಾದೆ ಮಾತು ..  ಒಂದೇ ಒಂದು ವ್ಯತ್ಯಾಸ ಅಂದ್ರೆ ಇಲ್ಲಿ ನಾಯಿಯ ಬಾಲ ಮಾತ್ರ ಡೊಂಕು ಅಲ್ಲರೀ.. ನಾಯಿಯೇ  ಡೊಂಕಾಗಿಬಿಟ್ಟಿದೆ. ಇವರ ಸ್ಟೋರಿನೇ ವಿಚಿತ್ರ ಮಾದ್ಯಮಗಳಿಗೆ ಏನ್ ನ್ಯೂಸ್ ಸಿಕ್ಕಿಲ್ಲ ಅಂದ್ರೆ, ಯಾಕ್ರಿ ಸುಮ್ನೆ ಕುತ್ಕೊತಿರಾ  ನಿಮಗೆ ನ್ಯೂಸ್ ತಾನೇ …? ನಾವ್ ಕೊಡ್ತಿವ್ರಿ ಅಂತ ಬರೋ ವಿಶಾಲ ಮನಸ್ಸಿನ ನಾಚಿಕೆ ಇಲ್ಲದ ನಾಯಕರು.

ಪಾಪ ನಮ್ ಜನ ಬಿ.ಜೆ.ಪಿ ಯವರನ್ನ ವಿರೋದ ಪಕ್ಷದಲ್ಲಿ ನೋಡಿ ನೋಡಿ ಬೇಸತ್ತು ಇವರು ಒಂದು 5 ವರ್ಷ ಆಡಳಿತ ಮಾಡ್ಲಿ ಬಿಡಿ… ಅಂಥ ಇವರನ್ನ ಆಡಳಿತಕ್ಕೆ ತಂದ್ರು, ಆದರೆ ಈ ನಾಯಕರು ಕೊಟ್ಟ ಆಡಳಿತ 100 ವರುಷ ಕಳೆದರೂ ಮರೆಯಲು ಸಾದ್ಯವಾಗದ ಆಡಳಿತ. (ದಯವಿಟ್ಟು ಕ್ಷಮಿಸಿ ಓದುಗರೇ “ಅವರು-ಇವರು” ಪದವನ್ನ ಇಲ್ಲಿ ಬಳಸಿದರೆ ಆ ಪದಕ್ಕೆ ಇರುವ ಗೌರವ ಸ್ವಲ್ಪ ಕಡಿಮೆ ಆಗಬಹುದು ಅದ್ದರಿಂದ ಈ ಪದವನ್ನ ಇಲ್ಲಿ ನಿಷೇದಿಸಲಾಗಿದೆ) ಇವರಲ್ಲಿ ಒಬ್ಬ ಬರೋಬ್ಬರಿ ರಾಜ್ಯದ ಸಂಪತ್ತನ್ನ ದೋಚುತ್ತಾನೆ. ಇನ್ನೊಬ್ಬ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ಮಾಡುತ್ತಾನೆ, ಇನ್ನೊಬ್ಬ ನರ್ಸ್ ಜೊತೆ ಮೊಬೈಲ್ ನಲ್ಲಿ ಹರಿದಾಡುತ್ತಾನೆ.

ಇವರೆಲ್ಲಾ  ನಮ್ ನಾಯಕ್ರು. ಕುಟುಂಬ ಕಲ್ಯಾಣ ಯೋಜನೆಯನ್ನ ಪಾಲಿಸುವವನು ರಾಜ್ಯದ ಸಂಪತ್ತನ್ನ ತನ್ನ ಪ್ರೀತಿಯ ಕುಟುಂಬದವರ ಹೆಸರಲ್ಲಿ ಮಾಡಿ ಕೊಟ್ಟಂತಹ ಪುಣ್ಯಾತ್ಮ, ಇದೆಲ್ಲವನ್ನು ದಾಟಿ ನಿನ್ನೆ ನಮ್ಮ ತ್ರಿಮೂರ್ತಿ ಮಂತ್ರಿಗಳು ಸದನದ ಕಲಾಪ ನಡಯುತ್ತಿದ್ದ ಸಂದರ್ಭದಲ್ಲೇ “ಬ್ಲೂ ಫಿಲಂ” ನೋಡಿ ಸಿಕ್ಕಿಬಿದ್ದ ನಾಮಧೇಯ ನಾಯಕ್ರು.. ಯಾಕ್ರಿ ಹಿಂಗ್ ಮಾಡ್ತಿದ್ದೀರ..? ಯಾವಾಗ ಸಾರ್ ನೀವೆಲ್ಲಾ ಸರಿ ಆಗ್ತೀರಾ ? ಗೌರವಾನ್ವಿತ ಶ್ರೀ ಅಟಲ್ ಬಿಹಾರಿ ವಾಜಪಾಯಿ ಕಟ್ಟಿ ಬೆಳೆಸಿದ ಬಿ.ಜೆ.ಪಿ ಪಕ್ಷವನ್ನ ಯಾವ ಮಟ್ಟಕ್ಕೆ ತಂದು ಬಿಟ್ರಿ ನೀವು..  ನಿಮ್ಮನ್ನ ಒಂದು  ವಿಷಯದಲ್ಲಂತೂ ಅಭಿನಂಧಿಸಬೇಕ್ರಿ.,!! 50 ವರುಷದಲ್ಲಿ ಮಾಡಬೇಕಾದ ಸಾಧನೆಯನ್ನ ಕೇವಲ 3 ವರುಷದಲ್ಲೇ ಸಾಧಿಸಿದ್ದೀರ, ಅಭಿನಂದನೆಗಳು ಬಿ.ಜೆ.ಪಿ ನಾಯಕರೇ  ಅಭಿನಂದನೆಗಳು..!!

ಇವರು ನಮ್ಮ ನಾಯಕರು ಕಣ್ರೀ  ? ಇವರನ್ನ ಗೆಲ್ಲಿಸಿ ಹೋಗ್ರಪ್ಪ ವಿಧಾನಸೌದದಲ್ಲಿ ನಮ್ ಸಮಸ್ಯೆ ಬಗ್ಗೆ ಮಾತಾಡ್ರಿ ಅಂತ ನಾವ್ ಕಳಿಸಿಬಿಟ್ರೆ.. ಇವರು ಅಲ್ಲಿ “ಬ್ಲೂ ಫಿಲಂ”   ನೋಡ್ಕೊಂಡು ಮಜಾ ಮಾಡ್ಕೊಂಡು ತಮ್ಮ ತಮ್ಮ ಸಮಸ್ಯೆ ಪರಿಹಾರ ಮಾಡ್ಕೊತಿದ್ದಾರೆ. ಇವರಿಗೆ ಇನ್ನು 5 ವರುಷ ಆಡಳಿತ ಮಾಡ್ಲಿಕ್ಕೆ ಬಿಟ್ರೆ ವಿಧಾನ ಸೌಧವನ್ನ ಮಿನಿ ಬಾರ್ ಅಂಡ್ ರೆಸ್ಟೋರೆಂಟ್ ಮಾಡುದರಲ್ಲಿ ಯಾವ ಸಂಶಯಾನೂ ಇಲ್ಲ. ರಾಜ್ಯದ ಜನರನ್ನ ಮೂರ್ಖರನ್ನಾಗಿ ಮಾಡಿದ ಇವರನ್ನ ಏನ್ ಮಾಡಬೇಕು ಅನ್ನೋದು ರಾಜ್ಯದ ಜನರೇ ಚಿಂತಿಸಬೇಕಾದ  ಸಮಯ ಬಂದಿದೆ. ಇಲ್ಲಿ ಪಕ್ಷ ಬೇದ ಮರೆತು ಪ್ರತಿಭಟಿಸೋದು ನಮ್  ಕರ್ತವ್ಯ. ಇಲ್ಲದಿದ್ದರೆ ಅತೀ  ಶೀಘ್ರದಲ್ಲಿ  ಮಾದ್ಯಮಗಳಲ್ಲಿ  ಮತ್ತೊಂದು ಬ್ರೆಕಿಂಗ್ ನ್ಯೂಸ್ ಬರೋದ್ರಲ್ಲಿ ಏನ್ರೀ ಅನುಮಾನ…?

 

*************

chitrakrupe: facebook

10 ಟಿಪ್ಪಣಿಗಳು Post a comment
  1. Abdul Satthar Kodagu
    ಫೆಬ್ರ 9 2012

    ಸೀಯಮ್ಮು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡುತ್ತಾ “ದೇಶದ ಇತಿಹಾಸದಲ್ಲಿ, ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ನಿರ್ಧಾರ ತೆಗೆದುಕೊಂಡಿದ್ದೇವೆ. ಮೂವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದಿದ್ದೇವೆ. ಇಷ್ಟೊಂದು ವೇಗವಾಗಿ ಯಾವುದೇ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ” ಅಂತ ಉಚಿತ ಕೊಲ್ಗೆಟ್ ಸ್ಮೈಲ್ ಕೊಟ್ಟು ಎದೆತಟ್ಟಿ ಹೇಳಿಕೊಂಡರು.

    ಅಲ್ರೀ ಸ್ವಾಮಿ, ಅಷ್ಟೊಂದು ಖುಷಿ ಪಟ್ರಲ್ಲ, ದೇಶದ ಇತಿಹಾಸದಲ್ಲಿ ಈ ರೀತಿ ಶೃಂಗಾರ ನೋಡಿ ರಾಜೀನಾಮೆ ಕೊಟ್ಟವರ್ಯಾರಾದರೂ ಇದ್ದಾರ ಪಕ್ಷದ ಬಗ್ಗೆ ಅಷ್ಟೊಂದು ಹೆಮ್ಮೆ ಪಡಲು? ಅಷ್ಟಕ್ಕೂ ಪಕ್ಕದಲ್ಲೇ ‘ನರ್ಸ್ ರೇಣುಕಾಚಾರ್ಯ’ ಇದ್ದನಲ್ಲ, ಆವಯ್ಯನನ್ನ ಮರೆತುಬಿಟ್ಟಿರಾ?

    ಭವಿಷ್ಯದಲ್ಲಿ ಖಂಡಿತಾ ಈ ಪೋಲಿಗಳಿಗೇ ಟಿಕೆಟ್ ಕೊಡುತ್ತೀರೆಂದು ಗೊತ್ತು. ಎಷ್ಟಾದರೂ ನಾಯಿ ಬಾಲ ಡೊಂಕಲ್ಲವೇ?

    ಉತ್ತರ
    • ವಿಜಯ್ ಪೈ
      ಫೆಬ್ರ 10 2012

      ಅಬ್ದುಲ್.. ನಂಗೆ ಇದರಲ್ಲಿ ಏನೂ ತಪ್ಪಿಲ್ಲ ಅನಿಸುತ್ತೆ. ಕಳ್ಳರನ್ನು ಹಿಡಿದ ಪೋಲಿಸರಿಗೂ ಕೂಡ ಪತ್ರಿಕಾಗೋಷ್ಟಿ ಏರ್ಪಡಿಸಿ ನಗದು ಬಹುಮಾನ ಘೋಷಣೆ ಮಾಡುತ್ತಾರೆ. ಅಂತಹುದರಲ್ಲಿ ‘ನೈತಿಕ’ ಹೊಣೆ ಹೊತ್ತು ಶೀಘ್ರದಲ್ಲಿ ರಾಜಿನಾಮೆ ನೀಡಿದವರಿಗೆ ಮತ್ತು ಅವರ ಪಕ್ಷಕ್ಕೆ ಶ್ಲಾಘನೆ ಮಾಡುವುದು ಬೇಡವೆ? 😉

      ಇನ್ನು ರೇಣುಕಾ ಸಾಹೇಬರು ವಿರೋಧ ಪಕ್ಷದವರಿಗೆ ಆತ್ಮಶೋಧನೆ ಮಾಡಿಕೊಳ್ಳುವಂತೆ ಉಪದೇಶ ಮಾಡಿದ್ದಾರೆ..ಈ ಮಾತನ್ನು ಕೇಳಿ ನಮ್ಮ ಶ್ರೀ ಶ್ರೀ ಶ್ರೀ ನಿತ್ಯಾನಂದ ಸ್ವಾಮಿಗಳು ಕೂಡ ಬೆಚ್ಚಿ ಬಿದ್ದರಂತೆ!

      ಉತ್ತರ
  2. ಫೆಬ್ರ 9 2012

    ಸದನದಲ್ಲಿ “ಬ್ಲೂ ಫಿಲ್ಮ್” ನೋಡಿ ಸಿಕ್ಕಿಬಿದ್ದು ಈ ಮಂತ್ರಿತ್ರಯರು ರಾಜೀನಾಮೆ ನೀಡಿದರು.
    ಆದರೆ, ಆ “ಫಿಲ್ಮ್” ನೋಡಿದ್ದು ಇವರು ಮೂವರು ಮಾತ್ರವೇನು?
    ಮೂರು ದಿನಗಳ ಕಾಲ ವಿಧಾನಸೌಧದಲ್ಲೆಲ್ಲಾ ಹರಿದಾಡಿದ್ದ ಈ “ಫಿಲ್ಮ್” ನೋಡದವರು ಅಲ್ಲಿ ಯಾರಿದ್ದಾರೋ ಗೊತ್ತಿಲ್ಲ!
    ಅವರಿಗೆಲ್ಲಾ ಯಾರು ಶಿಕ್ಷೆ ನೀಡುತ್ತಾರೆ? ಅವರಿಗೂ ಶಿಕ್ಷೆ ನೀಡಬೇಕೆಂದು ನೀವು ಒತ್ತಾಯಿಸದಿರುವುದು, ಅದನ್ನು ಉಲ್ಲೇಖಿಸದಿರುವುದೂ ಕಂಡು ಖೇಧವೆನಿಸುತ್ತದೆ.
    ಪಕ್ಕದ ರಾಜ್ಯದ ಮಂತ್ರಿ ಮಹೋದಯರೊಬ್ಬರು, ಮತ್ತೊಂದು ರಾಜ್ಯದ ಉಪಮುಖ್ಯಮಂತ್ರಿಗಳು, ಹೀಗೆ ಅನೇಕರು ಈ ಹಿಂದೆ ಅತ್ಯಾಚಾರದಂತಹ ನೀಚಕೆಲಸದಲ್ಲಿ
    ಸಿಕ್ಕಿಕೊಂಡು ಜೈಲು ಸೇರಿದ್ದಾರೆ.
    ಅವರ ಕುರಿತಾಗಿ ನೀವು ಒಂದಿನಿತೂ ಮಾತನಾಡದೆ, ಈಗ ಮಾತ್ರ ಇದ್ದಕ್ಕಿದ್ದಂತೆ ಕೂಗಾಡುತ್ತಿರುವುದು ಕಂಡರೆ,
    ನಿಮ್ಮ ಕಾಳಜಿ ರಾಜಕೀಯ ಪ್ರೇರಿತವೇನೋ ಎನಿಸುತ್ತಿದೆ!

    ಉತ್ತರ
  3. ಫೆಬ್ರ 10 2012

    ‘PARTY WITH A DIFFERENCE” ಅನ್ನುವುದು ಸಾಬೀತಾಯತಲ್ಲವೇ?

    ಉತ್ತರ
  4. ಫೆಬ್ರ 17 2012

    ಇಂಥಹ ಲಂಪಟ ತಾಯಿಗಂಡರು ದೇಶಕ್ಕೇನು ಕೊಡುಗೆ ನೀಡುವವರಲ್ಲ, ಇವತ್ತಿನ ನಿಯತ ಕಾಲಿಕೆಗಳಲ್ಲಿ, ನಾವು ಹೊರದೇಶದ ಶೋಷಣೆಗಳನ್ನು ನೋಡುತ್ತಿದ್ದೆವು ಅಂತ ಹೇಳಿಕೆ ಕೊಟ್ಟಿದ್ದಾರೆ, ಇವರ ಜನ್ಮಕ್ಕಿಷ್ಟು ಬೆಂಕಿ ಬೀಳ, ಇವರ ಯೋಗ್ಯತೆ ಕರ್ನಾಟಕ ಸಮಸ್ಯೆ, ಅಷ್ಟು ದೂರ ಯಾಕೆ ? ಇವರ ಕ್ಷೇತ್ರದ ಒಂದೆರಡು ಸಮಸ್ಯೆಯ ಬಗ್ಗೆ ಕಣ್ಣಾಡಿಸುವಷ್ಟು ಸಮಯವಿಲ್ಲ. ಯಾವುದೋ ಹೊರದೇಶದ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಕೂತು ನೋಡೋ ಅವಶ್ಯಕತೆ ಏನಿದೆ.

    ಚಪ್ಪಲಿ ತಗೊಂಡು ಅವರ ಕ್ಷೇತ್ರದ ಜನತೆ ಹೊಡೆಯದೆ ಬಿಟ್ಟಿದ್ದಾರಲ್ಲ, ಅಷ್ಟಕ್ಕೆ ಜೀವ ಉಳಿದಿದೆ ಅಂತ ಬದುಕಬೇಕು. ಅದೆಂಥ ಬಿಜೆಪಿ ಸರ್ಕಾರವೋ, ಅದೆಂಥ ಶಾಸಕರುಗಳು ನಮ್ಮ ರಾಜ್ಯವನ್ನು ಆಳೋಕೆ ನಾವು ಆಯ್ಕೆಮಾಡಿಕೊಂಡೆವೋ.

    ಉತ್ತರ
    • Kumar
      ಫೆಬ್ರ 17 2012

      ಬಿಜೆಪಿ ಸರಕಾರವನ್ನು ಧೂಷಿಸಬೇಕೆಂಬ ನಿಮ್ಮ ಆಸೆ ಫಲಿಸಿದೆ.
      ಆದರೆ, ನಮ್ಮ ವಿಧಾನಸಭೆಯಲ್ಲಿರುವ ಯಾವ ಶಾಸಕರು ಈ ವಿಡಿಯೋ ನೋಡಿಲ್ಲ?
      ಹಿಂದೆ ಇದ್ದ ಯಾವ ಪಕ್ಷದವರು ತಾನೇ ಕರ್ನಾಟಕವನ್ನು ಉದ್ದಾರ ಮಾಡಿರುವರು?

      ಬಿಜೆಪಿ ಉಳಿದ ಪಕ್ಷಗಳಿಗಿಂತ ಭಿನ್ನವೇನಿಲ್ಲ ಎನ್ನುವುದು, ಕಳೆದ ೩ ವರ್ಷದ ಘಟನೆಗಳಿಂದ ಸಾಭೀತಾಗಿದೆ – ಈಗ ನಡೆದ ಪ್ರಕರಣ ಅದನ್ನು ಖಾತ್ರಿಗೊಳಿಸುತ್ತಿದೆ ಅಷ್ಟೇ.

      ಆದರೆ, ಹಾಗೆಂದ ಮಾತ್ರಕ್ಕೆ ಉಳಿದ ಪಕ್ಷದವರೆಲ್ಲಾ ಸಾಚಾಗಳು, ಪ್ರಾಮಾಣಿಕರು, ಶುದ್ಧ ಆಡಳಿತ ನೀಡುವವರು, ಕರ್ತವ್ಯನಿಷ್ಠರು ಎಂದೇನಿಲ್ಲ. ಅಲ್ಲಿರುವವರೇ ಅನೇಕರು ಬಿಜೆಪಿಯಲ್ಲೂ ಇದ್ದಾರೆ, ಮುಂದೆ ಆಡಳಿತ ಮಾಡುವ ಪಕ್ಷದಲ್ಲೂ ಇರುತ್ತಾರೆ.
      ಹಾಗಾಗಿ ಬಿಜೆಪಿಯನ್ನು ಬೈಯ್ಯುವುದರಿಂದ ನಿಮ್ಮ ಬಾಯಿ ಚಪಲ ತೀರಬಹುದೇ ಹೊರತು ಮತ್ತೇನೂ ಸಾಧಿಸಿದಂತಾಗುವುದಿಲ್ಲ!

      ಮತ್ತು ನಿಮ್ಮ ಭಾಷೆಯನ್ನು, ಆಯ್ದುಕೊಂಡಿರುವ ಪದಗಳನ್ನು ನೋಡಿದಾಗ, ನಿಮ್ಮ “ಮಟ್ಟ”ವೂ ತಿಳಿಯುತ್ತಿದೆ!!

      ಉತ್ತರ
      • ಫೆಬ್ರ 17 2012

        ಹೆತ್ತವರಗೆ ಹೆಗ್ಗಣ ಮುದ್ದಂತೆ ಕುಮಾರ್, ನೀವು ಅದಕ್ಕೆ ಹೊರತಲ್ಲ. ಪ್ರತಿಯೊಂದು ಲಂಪಟತನಕ್ಕೂ ಇನ್ನೊಂದು ಪಕ್ಷದವರ ಅಥವ ಮತ್ತೊಬ್ಬ ವ್ಯಕ್ತಿಯ ಕಡೆ ಬೆರಳು ಮಾಡೋ ಚಾಳಿ ಬಿಜೆಪಿಗೇನು ಹೊಸತೇನಲ್ಲ. ಸಂಪಂಗಿ.. ಹಾಲಪ್ಪ… ರೇಣುಕಾರಿಂದ ಇಂದಿನವರೆಗೂ, ತಮ್ಮ ತಟ್ಟೆಯಲ್ಲಿ ಬಿದ್ದಿರುವ ಆನೆ ಕಾಣುತ್ತಿಲ್ಲ. ಪಕ್ಕದ ತಟ್ಟೆಯ ಇರುವೆಯೇ ದೊಡ್ಡದು. ನಾವ್ಯಾರು ಇಲ್ಲಿ ಬಿಜೆಪಿಯನ್ನು ವಿರೋಧಿಸುತ್ತಾ, ಇನ್ಯಾವ ಪಕ್ಶವನ್ನೋ ಪೋಷಿಸುವತ್ತ.. ನಿಮ್ಮ ಹಾಗೆ ಅಂಟಿಕೊಂಡು ಕೂತಿಲ್ಲ.

        ಬಿಜೆಪಿ ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ ಇವೆಲ್ಲಾ ನಿಮಗೆ ಮಾಮೂಲಾಗಿ ಕಾಣಬಹುದು. ನಾವು ಕರ್ನಾಟಕದ ಜನತೆ ನಿಮ್ಮ ದುಂಡಾವರ್ತನೆಗಳನ್ನು ಸುಮ್ಮನೆ ಕುಳಿತು ನೋಡುತ್ತಿಲ್ಲ. ಅನ್ನೋದು ನೆನಪಿರಲಿ.

        ”ಮತ್ತು ನಿಮ್ಮ ಭಾಷೆಯನ್ನು, ಆಯ್ದುಕೊಂಡಿರುವ ಪದಗಳನ್ನು ನೋಡಿದಾಗ, ನಿಮ್ಮ “ಮಟ್ಟ”ವೂ ತಿಳಿಯುತ್ತಿದೆ!!”

        ಆಯ್ತು ಬಿಡಿ ಸ್ವಾಮಿ ನಾವು ಆ ಮಟ್ಟದವರೇ, ನಿಮ್ಮ ಬಿಜೆಪಿಯವರಷ್ಟು ಕನಿಷ್ಠ ಮಟ್ಟದವರಂತೂ ಅಲ್ಲ. ಅಷ್ಟಕ್ಕೆ ಖುಷಿಪಡಿ

        ಉತ್ತರ
        • Kumar
          ಫೆಬ್ರ 17 2012

          ಒಂದು ಪಕ್ಷವನ್ನು ಆರಿಸಿಕೊಂಡು ತೆಗಳುತ್ತಿರುವವರು ನೀವು. ಇದು ನಿಮ್ಮ ಪಕ್ಷಪಾತವನ್ನು ತೋರಿಸುತ್ತದೆ.
          ಅದೇ ಬಿಜೆಪಿ ಪಕ್ಷದಲ್ಲಿ ಡಾ||ವಿ.ಎಸ್.ಆಚಾರ್ಯ, ಸುರೇಶ್ ಕುಮಾರ್ ಅವರಂತಹ ಪ್ರಾಮಾಣಿಕರೂ ಇದ್ದಾರೆ. ಅದೇ ಬಿಜೆಪಿ ಪಕ್ಷದಲ್ಲಿ ವಾಜಪೇಯಿ, ಅದ್ವಾಣಿ, ನರೇಂದ್ರ ಮೋದಿಯವರೂ ಇದ್ದಾರೆ.
          ಒಂದು ಪಕ್ಷವನ್ನು ಸಾರಾಸಗಟಾಗಿ ತೆಗಳಿದರೆ, ಅಲ್ಲಿರುವ ಪ್ರಾಮಾಣಿಕರಿಗೆ ಅಪಚಾರ ಮಾಡಿದಂತೆ.

          ನಾನೇನೂ ಬಿಜೆಪಿಗೆ ಸೇರಿದವನಲ್ಲ ಮತ್ತು ಬಿಜೆಪಿಯ ತಪ್ಪುಗಳನ್ನು ಸಮರ್ಥಿಸುತ್ತಲೂ ಇಲ್ಲ.
          ಆದರೆ, ವ್ಯಕ್ತಿಗಳು ಮಾಡುವ ತಪ್ಪನ್ನೇ ಕಾರಣ ಮಾಡಿಕೊಂಡು ಪಕ್ಷವನ್ನು ಟೀಕಿಸುವುದು ರಾಜಕಾರಣಿಗಳ ಕೆಲಸ.
          ನೀವೂ ಇದನ್ನೇ ಮಾಡಿದಾಗ, ನಿಮ್ಮ ಮಾತುಗಳಲ್ಲಿ ರಾಜಕಾರಣದ ವಾಸನೆಯೇ ಕಾಣುತ್ತದೆ.

          ಎಲ್ಲ ಪಕ್ಷಗಳಲ್ಲೂ ಕೆಟ್ಟವರೂ ಇದ್ದಾರೆ, ಒಳ್ಳೆಯವರೂ ಇದ್ದಾರೆ.
          ಹೀಗಾಗಿ ಯಾವ ಪಕ್ಷವನ್ನೂ “ಕೆಟ್ಟ ಪಕ್ಷ”ವೆಂದೋ ಇಲ್ಲವೇ “ಒಳ್ಳೆಯ ಪಕ್ಷ”ವೆಂದೋ ಹೇಳಲು ಸಾಧ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ.
          ಹೀಗಿರುವಾಗ ನೀವು ಒಂದು ಪಕ್ಷವನ್ನು ಮಾತ್ರ ತೆಗಳುತ್ತಿದ್ದರೆ, ನೀವು ಆ ಪಕ್ಷದ ವಿರೋಧಿಗಳು (ಅರ್ಥಾತ್ ಅದರ ವಿರೋಧ ಪಕ್ಷದ ಕಡೆಯವರು) ಎನ್ನದೆ ಮತ್ತೇನು ಹೇಳಬೇಕು ನೀವೇ ಹೇಳಿ?

          ಉತ್ತರ
  5. ಫೆಬ್ರ 17 2012

    ಕುಮಾರ್,

    ನೀವೇ ಇನ್ನು ದ್ವಂದ್ವ ನಿಲುವಿನಲ್ಲಿದಿರಬೇಕು. ಹೋದವರೆಲ್ಲಾ ಒಳ್ಳೆಯವರೇ…,, ನಾನು ನನ್ನ ಪ್ರತಿಕ್ರಿಯೆಯಲ್ಲೇಲ್ಲೂ ಆಚಾರ್ಯ ಮತ್ತು ಸುರೇಶರ ಹೆಸರು ಉಲ್ಲೇಖಿಸಿಲ್ಲ. ನೀವು ಈಗ ತಪ್ಪಿಸಿಕೊಳ್ಳಲು ಇವರಿಬ್ಬರ ಹೆಸರನ್ನು ಬಳಸಿಕೊಂಡು ನಿಮ್ಮ ನಿಲುವಿನ ಧೋರಣೆ ತೋರಿಸ್ತಿದ್ದೀರಿ ಅಷ್ಟೆ. ದಂಡುಪಾಳ್ಯದ ಕಳ್ಳರು ಅಂತೀವೇ ಹೊರತು ದಂಡುಪಾಳ್ಯದಲ್ಲಿರುವವರೆಲ್ಲಾ ಕಳ್ಳರೆಲ್ಲ… ಇದು ನಿಮ್ಮ ಪೂರ್ವಾಗ್ರಹವಷ್ಟೆ. ಇಂಥ ಪೂರ್ವಾಗ್ರಹ ಪೀಡಿತರಿಗೆ ಚರ್ಚೆಯ ಮತ್ತೊಂದು ಮಗ್ಗುಲನ್ನು ಮುಟ್ಟಿ ಇನ್ನೇನೋ ಮಾಡುವ ತವಕ ಅಲ್ವೇ ? ಇರಲಿ ಬಿಡಿ ನಿಮ್ಮ ಬಿಜೆಪಿಯವರು ಶ್ರೀರಾಮನ ವಂಶಸ್ಥರೇ …. 🙂 ಆದ್ರೆ ರಾವಣನ ಗುಣವುಳ್ಳ ಕೆಲವರೇ ನಿಮ್ಮಂತಹವರಿಗೆ ಆದರ್ಶ ಪುರುಷರಾಗಿರಲಿ.

    ಉತ್ತರ
    • ಫೆಬ್ರ 17 2012

      > ನೀವು ಈಗ ತಪ್ಪಿಸಿಕೊಳ್ಳಲು …..
      ಚರ್ಚೆಯಲ್ಲಿ ತಪ್ಪಿಸಿಕೊಳ್ಳುವ ಮಾತೆಲ್ಲಿ ಬಂತು? ನಾನೆಲ್ಲಿ ಸಿಕ್ಕಿಹಾಕಿಕೊಂಡಿರುವೆ ಮತ್ತು ನಾನೇಕೆ ತಪ್ಪಿಸಿಕೊಳ್ಳಬೇಕು?

      > ಅದೆಂಥ ಬಿಜೆಪಿ ಸರ್ಕಾರವೋ, ಅದೆಂಥ ಶಾಸಕರುಗಳು ನಮ್ಮ ರಾಜ್ಯವನ್ನು ಆಳೋಕೆ ನಾವು ಆಯ್ಕೆಮಾಡಿಕೊಂಡೆವೋ
      ನೀವು ಪ್ರಾರಂಭದಲ್ಲಿ ಹೇಳಿರುವುದು – ಹೋದವರ ಬಗ್ಗೆ ಮಾತ್ರವಲ್ಲ, ಇಡಿಯ ಪಕ್ಷದ ಬಗ್ಗೆ, ಎಲ್ಲ ಶಾಸಕರ ಬಗ್ಗೆ ನೀವು ಹೇಳಿರುವ ಮಾತಿದು.

      ಈಗ ನೀವು ಹೇಳುತ್ತಿರುವುದು:
      > ನನ್ನ ಪ್ರತಿಕ್ರಿಯೆಯಲ್ಲೇಲ್ಲೂ ಆಚಾರ್ಯ ಮತ್ತು ಸುರೇಶರ ಹೆಸರು ಉಲ್ಲೇಖಿಸಿಲ್ಲ.
      ಬಿಜೆಪಿ ಸರಕಾರ, ಶಾಸಕರು ಎಂದು ನೀವು ಮೇಲೆ ಹೇಳಿರುವುದು, ಇವರನ್ನು ಬಿಟ್ಟು ಎನ್ನುವುದು ನನಗೆ ತಿಳಿಯಲಿಲ್ಲ!

      ಹೌದು. ದಂಡುಪಾಳ್ಯದ ಕಳ್ಳರು ಎನ್ನುತ್ತೇವೆಯೇ ಹೊರತು, ದಂಡುಪಾಳ್ಯದವರು ಎನ್ನುವುದಿಲ್ಲ.
      ನೀವಿಂದು ಬಿಜೆಪಿಯವರು ಎಂದು ಹೇಳುತ್ತೀರಿ.
      ನಾಳೆ ಪಕ್ಕದ ರಾಜ್ಯದವರು “ಕರ್ನಾಟಕದವರು” ಎಂದು ನಮ್ಮೆಲ್ಲರನ್ನೂ ಸೇರಿಸಿ ಹೇಳುತ್ತಾರೆ.

      > ಇದು ನಿಮ್ಮ ಪೂರ್ವಾಗ್ರಹವಷ್ಟೆ
      ಎಲ್ಲ ಪಕ್ಷಗಳಲ್ಲೂ ಒಳ್ಳೆಯ ಮತ್ತು ಕೆಟ್ಟ ಸ್ವಭಾವದ ವ್ಯಕ್ತಿಗಳಿದ್ದಾರೆ ಎನ್ನುವುದು ಪೂರ್ವಾಗ್ರಹವೋ, ಅಥವಾ ನೀವು ಹೇಳಿದಂತೆ “ಅದೆಂಥ ಬಿಜೆಪಿ ಸರ್ಕಾರವೋ, ಅದೆಂಥ ಶಾಸಕರುಗಳು….” ಎನ್ನುವ ಮಾತಿನಲ್ಲಿ ಪೂರ್ವಾಗ್ರಹದ ವಾಸನೆ ಬರುತ್ತಿದೆಯೋ ನೀವೇ ಅರ್ಥ ಮಾಡಿಕೊಳ್ಳಿ.

      > ನಿಮ್ಮ ಬಿಜೆಪಿಯವರು ಶ್ರೀರಾಮನ ವಂಶಸ್ಥರೇ …. 🙂
      > ಆದ್ರೆ ರಾವಣನ ಗುಣವುಳ್ಳ ಕೆಲವರೇ ನಿಮ್ಮಂತಹವರಿಗೆ ಆದರ್ಶ ಪುರುಷರಾಗಿರಲಿ.
      ನಾನು ಈ ಹಿಂದೆಯೇ ತಿಳಿಸಿದಂತೆ “ನಾನೇನೂ ಬಿಜೆಪಿಗೆ ಸೇರಿದವನಲ್ಲ ಮತ್ತು ಬಿಜೆಪಿಯ ತಪ್ಪುಗಳನ್ನು ಸಮರ್ಥಿಸುತ್ತಲೂ ಇಲ್ಲ.”. ಹೀಗಿದ್ದಾಗ್ಯೂ ನಿಮಗೆ ನಾನು ಬಿಜೆಪಿಯವನಂತೆ ಕಾಣುತ್ತಿದ್ದೇನೆ. ನೀವು ಕೆಲವರು ಮಾಡಿದ ತಪ್ಪಿಗೆ ಇಡೀ ಬಿಜೆಪಿ ಪಕ್ಷವನ್ನೇ ತೆಗಳಿದ್ದು ಸರಿಯಲ್ಲ ಎಂದ ಕೂಡಲೇ ನಾನು ಬಿಜೆಪಿ ಅಲ್ಲವೇ? ನೀವು ಹೇಳಿದ್ದನ್ನು ಪ್ರಶ್ನಿಸದೆ ಒಪ್ಪಿಕೊಂಡು ಬಿಟ್ಟಿದ್ದರೆ…..!?
      ನೀವು ಬಿಜೆಪಿ ಎಂದು ಹೇಳಿದ ಜಾಗದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಅಥವಾ ಇನ್ಯಾವುದೇ ಪಕ್ಷದ ಕುರಿತಾಗಿ ಇದೇ ರೀತಿಯ ಮಾತುಗಳನ್ನಾಡಿದ್ದರೂ ನನ್ನ ಪ್ರತಿಕ್ರಿಯೆ ಇದೇ ರೀತಿ ಇರುತ್ತಿತ್ತು.
      ಇಲ್ಲಿ ನಾನು ಯಾವ ಪಕ್ಷವನ್ನೂ ಬೆಂಬಲಿಸುತ್ತಿಲ್ಲ, ಯಾವ ಪಕ್ಷದ ಪರವಾಗಿಯೂ ಮಾತನಾಡುತ್ತಿಲ್ಲ.
      ವಿಷಯವನ್ನು Generalize ಮಾಡಿ ಒಂದು ಪಕ್ಷದವರೆಲ್ಲಾ ಕೆಟ್ಟವರೆಂದೋ, ಒಂದು ದೇಶದವರೆಲ್ಲಾ ಕೆಟ್ಟವರೆಂದೋ, ಒಂದು ಕೋಮು/ಜಾತಿಯವರೆಲ್ಲಾ ಕೆಟ್ಟವರೆಂದೋ ಹೇಳುವುದು ಸರಿಯಲ್ಲ ಎಂದಷ್ಟೇ ನಾನು ಹೇಳುತ್ತಿರುವುದು.
      ಇಷ್ಟು ಹೇಳಿದ ನಂತರವೂ ನಾನು ಬಿಜೆಪಿಯವನಾಗಿ ಅಥವಾ ಪೂರ್ವಾಗ್ಬ್ರಹಪೀಡಿತನಾಗಿ ಕಂಡರೆ, ನಿಮ್ಮ ಅಂತಃಚಕ್ಷುಗಳಿಗೆ ಹಾಕಿರುವ ಬಣ್ಣದ ಕನ್ನಡಕವನ್ನು ಬದಲಾಯಿಸುವುದು ಒಳ್ಳೆಯದು ಎಂದಷ್ಟೇ ನಾನು ಸಲಹೆ ನೀಡಬಹುದು. 😉

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments