“ಸ್ಥಾನ” ಕೇಳಿಕೊಂಡು ಹೋಗಿ “ಮಾನ” ಕಳೆದುಕೊಂಡ ಯಡಿಯೂರಪ್ಪ

ಬಿಜೆಪಿ ರಾಷ್ಟೀಯ ಅದ್ಯಕ್ಷರಾದ ನಿತಿನ್ ಗಡ್ಕರಿ ಅವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಅವರನ್ನ ಬೇಟಿಯಾದ ಯಡ್ಡಿಯವರು “ಗಡ್ಕರಿ ಸಾಹೇಬ್ರೆ ಮುಖ್ಯಮಂತ್ರಿ ಸ್ಥಾನ ಕೊಡದಿದ್ರು ನಡಿತ್ರಿ ಆದ್ರೆ ರಾಜ್ಯಾದ್ಯಕ್ಷ ಸ್ಥಾನ ಕೊಡಿ ಸರ್ ” ಎಂದು ಗೋಗರೆದರು, ಆದರೆ ನಮ್ಮ ರಾಷ್ಟ್ರದ್ಯಕ್ಷರು ಸರ್ ನಿಮ್ಮ ಸಾಧನೆ ಅಪಾರ ನಿಮ್ಮ ನೇತೃತ್ವದಲ್ಲಿ ನಮ್ಮ ಮಂತ್ರಿಗಳ ಸಾಧನೆ ದೇಶ ವಿದೇಶದ ಪೇಪರ್ ಗಳ ಮುಖ್ಯಪುಟದಲ್ಲಿ ಬಂದಿದೆ ಹಾಗೆ ಒಬ್ಬ ಜೈಲ್ ನಿಂದ ಹೊರಬಂದರೆ ಮತ್ತೊಬ್ಬ ಜೈಲ್ ಕಡೆ ಹೋಗುತ್ತಿದ್ದ ಆದ್ದರಿಂದ ಸರ್ ನೀವ್ ಆರಾಮವಾಗಿ ವಿಶ್ರಾಂತಿ ಪಡೆದು ಮೊಮ್ಮಕ್ಕಳ ಜೊತೆ ಆಟಡ್ತಿರಿ ರಾಜಕೀಯ ಸಾಕು. ನಮ್ಮ ಸದಾನಂದ ಗೌಡರು ಬಿ ಜೆ ಪಿ ಯನ್ನ ಅಧಿಕಾರದಲ್ಲಿ ಮುಂದುವರಿಸಲಿ ಎಂದು ಹೇಳಿದ್ದೆ ತಡ ಯಡ್ಡಿ ಸಾಹೇಬರು ಬಲ ಪ್ರದರ್ಶನಕ್ಕೆ ತನ್ನ ಹುಟ್ಟು ಹಬ್ಬದ ದಿನ 70 ಕೆಜಿ ಕೇಕ್ ರೆಡಿ ಮಾಡಿಬಿಟ್ರು .. ಅದನ್ನ ತನ್ನ ಬೆಂಬಲಿಗರ ಹಾಗು ಅಭಿಮಾನಿ ದೇವರುಗಳ ಮುಂದೆ ಚೂರಿಯಿಂದ ಕಟ್ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮ ಬಹಳ ಜೋರಾಗೆ ನಡಿತು ಸ್ವಾಮೀಜಿಗಳು ಕೆಲವೊಂದು ಶಾಸಕರು ಆಪ್ತರು ಸೇರಿಕೊಂಡು ಹ್ಯಾಪಿ ಬರ್ತ್ ಡೇ ಹಾಡಿದ್ದೆ ಹಾಡಿದ್ದು ಯಡ್ಡಿ ಫುಲ್ ಕುಶಿ.
ಆದರೆ ಬರ್ತ್ ಡೇ ಪಾರ್ಟಿಗೆ ಬಂದವರೆಷ್ಟು ಜನ ? ಯಡಿಯೂರಪ್ಪ ಅವರಿಂದ ಎಲ್ಲ ರೀತಿಯ ಸಹಾಯ ಪಡೆದ ಅವರ ಆಪ್ತ ನೆಂಟರು ಯಡ್ಡಿ ಅವರನ್ನ ನಡು ಬೀದಿಯಲ್ಲಿ ಬಿಟ್ಟು ಹೋದರೆ ? ಅನ್ನೋ ಪ್ರಶ್ನೆಗಳು ಕಾಡತೊಡಗಿದೆ..ರಾಜಕೀಯ ಅನ್ನೋದು ಅಧಿಕಾರ ಇರುವ ತನಕ ಅಷ್ಟೇ ಅನ್ನೋದಕ್ಕೆ ಯಡ್ಡಿ ಅವರ ಜೀವನವೇ ಸಾಕ್ಷಿ ..ರಾಜಕೀಯದಲ್ಲಿ ಸ್ವಲ್ಪ ಯಾಮಾರಿದರು ತನ್ನ ಹಿಡಿತ ಸಡಿಲಗೊಳ್ಳುವುದು ಅನ್ನೋದಕ್ಕೆ ಯಡ್ಡಿ ಸಾಹೇಬರ ಜೀವನ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣಿಸುತ್ತೆ .ಯಡಿಯೂರಪ್ಪ ಎಷ್ಟಾದರೂ ಸುಮ್ಮನೆ ಕೂರುವ ಮನುಷ್ಯನಲ್ಲ ರಾಜಕೀಯ ಆಟ ಯಡ್ಡಿ ಅವರಿಗೆ ಹುಟ್ಟಿನಿಂದಲೇ ಬಂದ ಕಲೆಯಾಗಿದೆ ಸದಾನಂದ ಗೌಡ ರ ಕುರ್ಚಿಯನ್ನ ಅಲುಗಾಡಿಸಲು ಏನೆಲ್ಲಾ ಮಾಡಬೇಕು ಅದನ್ನೆಲ್ಲ ಮಾಡುದರಲ್ಲಿ ನೋ ಡೌಟ್. ಆದರು ಯಡ್ಡಿ ಒಂದು ಯೋಚನೆ ಮಾಡಬೇಕಿತ್ತು ತಾನೊಬ್ಬ ಹಿರಿಯ ನಾಯಕ ಪಕ್ಷಕ್ಕೆ ಮಾರ್ಗದರ್ಶಕನಾಗಿ ,ಸಲಹೆ ಸೂಚನೆ ಕೊಡುವಂತ ವ್ಯಕ್ತಿಯಾಗಿ ಮುಂದುವರಿಯುವುದು ತನ್ನ ಗೌರವವನ್ನ ಹೆಚ್ಚಿಸುತ್ತೆ ಎಂದು. ಆದ್ದರೆ ಯಡ್ಡಿ ಅವರು ಚಿಕ್ಕ ಮಕ್ಕಳ ತರ ಕುರ್ಚಿಗೋಸ್ಕರ ಮುಖ ಗಂಟು ಹಾಕಿ ಕುಳಿತುಕೊಂಡರು..ಅದು ಬಿಟ್ಟು ರಾಷ್ಟೀಯ ನಾಯಕರ ಹತ್ತಿರ ಸರ್ ಕುರ್ಚಿ ಕೊಡಿ ಕುರ್ಚಿ ಕೊಡಿಸಿ ಎಂದು ಕೇಳಿಬಿಟ್ಟರು .ಅಲ್ಲಿಂದ ಬರ್ಜರಿ ಮಂಗಳಾರತಿ ಕೂಡ ಸಿಕ್ಕಿಬಿಡ್ತು . … ಸ್ಥಾನಮಾನ ಕೇಳಿಕೊಂಡು ಹೋಗಿ ಮಾನ ಕಳೆದುಕೊಂಡ ಹಾಗಾಯಿತು ಯಡಿಯೂರಪ್ಪನವರ ಕತೆ.
* * * * * * * *
ಚಿತ್ರಕೃಪೆ : ಅಂತರ್ಜಾಲ
ಹ ಹ ಹ ನಗುವುದೋ ಅಳುವುದೋ ತಿಳಿಯದಾಗಿದೆ ….. ಯಡ್ಡಿ ಸಾಹೇಬ್ರೆ ಸಾಕುಮಾಡಿ ನಿಮ್ಮ ಪುಂಡಾಟಿಕೆ ….. ನಮ್ಮೂರಿನ ಸದಾನಂದ ಗೌಡರ ನಿದ್ದೆ ಕೆಡಿಸಬೇಡಿ ಬಿ ಜೆ ಪಿ ಯ ಮಾನ್ ಮರ್ವಾದೆ ಬೀದಿ ಗೆ ತಂದ್ರಲ್ಲ ದೇವ್ರು .