ಕಳೆದೂ ಕೊಂಡ ಪ್ರೇಮಿಯುತಾನೆ ಹೃದಯದ ಬೆಲೆಯ ತಿಳಿದಿರುತಾನೆ…
– ಮನೋರಂಜನ್
ಮಾತಾಗಿ ಬಂದದ್ದು ಮನಸಲ್ಲೇ ಉಳಿದಿತ್ತು
ನಂಬಿಕೆಯ ಕನ್ನಡಿಯಲಿ; ಸುಳ್ಳಿನ
ಪ್ರತಿಬಿಂಬ ಕಾಡಿತ್ತು.
ಸತ್ಯದಾ ಹಾದಿಯಲಿ ತುಂಬಿತ್ತು ಕತ್ತಲು
ಕರಿ ಮೋಡ ಕವಿದಿತ್ತು ಹೃದಯದಾ ಸುತ್ತಲು
ಮೋಹದ ಮಿಂಚು
ಮೋಸದ ಸಿಡಿಲು
ಏನಿದರ ಮಾಯೆ
ಮಳೆಯಿಲ್ಲದ ಬಾನಲ್ಲಿ ಸೂತಕದ ಛಾಯೆ.
ಮನಸಿನಾ ಮನೆಯಲ್ಲಿ ಬೆಳಕಿನಾ ಹಬ್ಬ
ಪ್ರೀತಿಯ ಎಣ್ಣೆಯಲಿ
ನೆನಪಿನಾ ಹಣತೆ.
ಪ್ರಪಂಚದ ಯಾವುದೋ ಹೃದಯದಲಿ ಅಂತ್ಯಗೊಂಡ ದುರಂತ ಪ್ರೇಮದ ಸಾರ..
* * * * * * * *
thumba chenagede sir