ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 5, 2012

ಉತ್ತರ ಪ್ರದೇಶದಲ್ಲಿ ಆನೆಗೆ ಬಲ ಬರಲಿದೆಯೇ ಅಥವಾ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆಯೇ ?

‍ನಿಲುಮೆ ಮೂಲಕ

-ನಾಗಣ್ಣ ಜಿಕೆ

ಮಾಚ್೯ ನ 6ರಂದು 5 ರಾಜ್ಯಗಳ ಚುನಾವಣಿ ಫಲಿತಾಂಶ ಘೋಷಣೆಯಾಗಲ್ಲಿದ್ದು ಇಡಿ ದೇಶ ಐದು ರಾಜ್ಯಗಳ ಕಡೆ ಗಮನ ಹರಿಸಿದೆ. ಮುಖ್ಯವಾಗಿ ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಜನತೆಯಲ್ಲಿ ಕುತೂಹಲ ಕೆರಳಿಸಿದೆ ಕಾರಣ ಉತ್ತರಪ್ರದೇಶದ ರಾಜಕಾರಣ ರಾಷ್ಟ್ರರಾಜಕರಣಕ್ಕೆ ದಿಕ್ಸೂಚಿ ಮತ್ತು ನಿಣ೯ಯಕ ಶಕ್ತಿ.
ಉತ್ತರಪ್ರದೇಶದಲ್ಲಿ ಚುನಾವಣಿಗೆ ಸ್ಪಧ೯ಸಿದ್ದ ಪ್ರಮುಖ ರಾಜಕೀಯ ಪಕ್ಷಗಳೆಲ್ಲವೂ ತಮ್ಮ ಪ್ರತಿಷ್ಟೆಯನ್ನು ಪಣಕಿಟ್ಟು ಚುನಾವಣಿ ಆಕಾಡಕ್ಕೆ ದುಮುಕಿದ್ದವು ಇಲ್ಲಿ ಪಕ್ಷಕದ ಸೋಲು ಗೆಲವುಗಿಂತ ವ್ಯಕ್ತಿಗತ ಸೋಲು ಗೆಲವು ಬಹಳ ಮುಖ್ಯವಾದ್ದದ್ದು ಭವಿಷ್ಯದ ಪ್ರಧಾನಿಯೆಂದು ಬಿಂಬಿಸಿಕೊಳ್ಳುತ್ತಿರುವ ರಾಹುಲ್ಗಾಂಧಿ ಮತ್ತೊಂದು ಕಡೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಯಾವತಿ ಮತ್ತು ಉತ್ತರಪ್ರದೇಶದಲ್ಲಿ ಅಸ್ತಿತ್ವ ಸ್ಥಾಪಿಸಲು ಹೊರಟಿರುವ ಆಖಿಲೇಶ್ ಯಾದವ್ ಇವರ ಸೋಲು ಗೆಲುವೆ ಮುಖ್ಯವಾಗಿದೆ. 2008ರ ವಿಧಾನಸಭಾ ಚುನಾವಣಿಯಲ್ಲಿ ಬಿ.ಎಸ್.ಪಿಗಿದ್ದ ವಚ್ಚ್ರಸ್ಸು ಈ ಚುನಾವಣಿಯಲ್ಲಿ ಇದ್ದಂತೆ ಕಾಣುತ್ತಿಲ್ಲ ಇದಕ್ಕೆ ಹಲವಾರು ಕಾರಣಗಳಿವೆ, ಬಿ.ಎಸ್.ಬಿ ನಾಯಕಿಯಾದ ಮಾಯಾವತಿ ಕಳೆದ ಚುನಾವಣಿಯಲ್ಲಿ ಬ್ರಾಹ್ಮಣರು ಸೇರಿದ್ದಂತೆ ಮೇಲ್ವಗ್ರದವರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಅದರೆ ಚುನಾವಣಿಯ ನಂತರ ಅವರು ಬ್ರಾಹ್ಮಣರಿಗೆ ಕೊಟ್ಟ ಭರವಸೆಯನ್ನ ಹಿಡೇರಿಸಿಲ್ಲ ಸಹಜವಾಗಿ ಈ ವಗ್ರದ ಜನ ಬೇರೆ ಪಕ್ಷಕ್ಕೆ ಒಲವು ತೋರಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಸುಮಾರು ವಷ೯ಗಳಿಂದ ಸನ್ಯಾಸತ್ವ ಸ್ವೀಕರಿದ್ದ ಕಾಂಗ್ರೇಸ್ ಈ ಚುನಾವಣಿಯಲ್ಲಿ ಮೈಕೊಡವಿ ಎದ್ದಿದ್ದು ಶತಾಯಾ ಗತಾಯಾ ಆಧಿಕಾರ ಹಿಡಿಯಲೇ ಬೇಕೆನ್ನುವ ಛಲ ಹೊಂದಿದ್ದು ಇದೆಕ್ಕೆ ಹಲವಾರು ಕಸರತ್ತನ್ನು ಮಾಡಿದೆ ಮೇಲ್ನೋಟಕ್ಕೆ ಸಮಾಜವಾದಿ ಪಕ್ಷವನ್ನ ವಿರೋಧಿಸುತ್ತಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಂಡಿದರು ಸಹ ಚುನಾವಣಿ ನಂತರ ಅಧಿಕಾರಕ್ಕಾ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ.

ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಲೋಕದಳದ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡು ಈ ಪಕ್ಷದ ನಾಯಕನಾದ ಅಜಿತ್ಸಿಂಗ್ರವರಿಗೆ ಕೇಂದ್ರ ಸಕ್ರಾರದಲ್ಲಿ ಮಂತ್ರಿ ಸ್ಧಾನವನ್ನು ಕೊಡಲಾಗಿದೆ ಹಾಗೂ ಅಲ್ಪ ಸಂಖ್ಯಾತರಾದ ಮುಸ್ಲೀಮ್ ಮತಗಳನ್ನು ಸೆಳೆಯಲು ಮೀಸಲಾತಿ ಬೀಜವನ್ನು ಬಿತ್ತಿದೆ. ಈ ಎಲ್ಲಾ ತಂತ್ರಗಳು ಫಲಿಸಿ ಅಧಿಕಾರ ಗದ್ದುಗೆ ಹಿಡಿಯಬಹುದೆಂಬ ಹಗಲು ಕನಸಿನಲ್ಲಿ ಕಾಂಗ್ರೇಸ್ ಇದೆ.

ವಿಶೇಷವೆಂದರೆ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿ.ಜೆ.ಪಿ.ಸ್ವತಂತ್ರವಾಗಿ ಸಕ್ರಾರ ರಚಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ತಮ್ಮ ಕುಟುಂಬದ ಪ್ರತಿಷ್ಠೆಯನ್ನು ಪಣಕಿಟ್ಟು ಚುನಾವಣೆಯಲ್ಲಿ ಪಾಲ್ಗೊಂಡಿದ್ದರೂ ಕೂಡ ಹೆಚ್ಚೆಂದರೆ ನೂರು ಸ್ಧಾನಕಷ್ಟೆ ತೃಪ್ತಿ ಪಟ್ಟುಕೊಳ್ಳಬೇಕಷ್ಟೇ. ಆಗ ಅನಿವಾಯ್ರವಾಗಿ ಸಮಾಜವಾದಿ ಪಕ್ಷದ ಬಾಗಿಲು ಬಡಿಯಬೇಕು ಇಲ್ಲವೆ ಆ ಪಕ್ಷಕ್ಕೆ ಬೆಂಬಲ ಘೋಷಿಸಿ ಪರೋಕ್ಷವಾಗಿ ಅಧಿಕಾರಕ್ಕೆ ಬರಬೇಕು. ಇನ್ನು ಬಿ.ಜಿ.ಪಿ. ಸ್ಥಿತಿ ಇದಕ್ಕಿಂತಲೂ ನಿಕೃಷ್ಟ. ಅದು ತನ್ನ ಸಾಂಪ್ರದಾಯಕ ವಿರೋಧಿಯಾದ ಕಾಂಗ್ರೇಸ್ ಪಕ್ಷವನ್ನ ಅಧಿಕಾರದಿಂದ ದೂರವಿಡಲು ಉತ್ತರ ಪ್ರದೇಶದ ಬಹು ದೊಡ್ಡ ಪಕ್ಷವಾದ ಬಹು ಜನ ಸಮಾಜವಾದಿ ಪಕ್ಷಕ್ಕೆ ಬೆಂಬಲ ಘೋಶಿಸಿ ಆ ಮೂಲಕ ಅಧಿಕಾರದ ರುಚಿಯನ್ನ ಅನುಭವಿಸುವ ಅವಕಾಶವಿದೆ.

ಇಲ್ಲಿ ಏನೇ ತಂತ್ರ ನಡೆದರೂ ಕೂಡ ಬಹು ಜನ ಸಮಾಜವಾದಿ ಪಕ್ಷಕ್ಕೆ ಅನುಕೂಲ. ಅದು ಸರಕಾರ ರಚಿಸುವಷ್ಟು ಸಂಖ್ಯಾ ಬಲ ಲಭಿಸದೇ ಇದ್ದರೇ ಅದು ಎನ್.ಡಿ.ಎ.ಸಖ್ಯ ಬಳಸಬಹುದು. ಅದರಿಂದ ಮಾಯಾವತಿಯವರ ಬಹು ದೊಡ ್ಡ ಕನಸಾದ ಪ್ರಧಾನಿಯಾಗುವ ಕನಸು ಜೀವಂತವಾದಂತ ಕನಸಾಗುತ್ತದೆ ಮತ್ತು ಎನ್.ಡಿ.ಎ. ಮೈತ್ರಿ ಕೂಟಕ್ಕೂ ಕೂಡ ಮಾಯಾವತಿಯವರ ಸಖ್ಯದಿಂದ ರಾಷ್ಟ್ರ ಮಟ್ಟದಲ್ಲಿ ಆನೆಬಲ ಬಂದಂತಾಗುತ್ತದೆ ಮತ್ತು 2014ರ ಲೋಕ ಸಭೆಯ ಸಾವ್ರತ್ರಿಕ ಚುನಾವಣೆಗೆ ಮತ್ತಷ್ಟು ಶಕ್ತಿ ಬಂದಂತ್ತಾಗುತ್ತದೆ. ಇವತ್ತಿನ ರಾಜಕೀಯ ಪರೀಸ್ಥಿ ಕೂಡ ಭವಿಷ್ಯದಲ್ಲಿ ಎನ್.ಡಿ.ಎ. ಮೈತ್ರಿ ಕೂಟಕ್ಕೆ ಅನುಕೂಲವಾಗುವ ರೀತಿಯಲ್ಲಿಯೇಯಿದೆ. ಯು.ಪಿ.ಎ. ಸಕ್ರಾರಕ್ಕೆ ಬೆಂಬಲ ನೀಡಿ ಸಕ್ರಾರದಲ್ಲಿ ಅಧಿಕಾರ ಹಂಚಿಕೊಂಡಿರುವ ಟಿ.ಎಮ್.ಸಿ ಪಕ್ಷದ ನಾಯಕಿಯಾದ ಮಮತ ಬ್ಯಾನಜ್ರಿಯವರು ಯು.ಪಿ.ಎ. ಸಕ್ರಾರದ ವಿರುದ್ಧ ಬಾಹ್ಯ ಬೆಂಬಲನ್ನೇ ಸಾರಿದ್ದಾರೆ.ಇವರು ಭವಿಷ್ಯದಲ್ಲಿ ಯು.ಪಿ.ಎ. ಸಕ್ರಾರದಿಂದ ಹೊರಬರಬಹುದು. ಆಗ ಎನ್.ಡಿ.ಎ. ಅವರಿಗೆ ಗಾಳ ಹಾಕಿ ಸೆಳೆದುಕೊಳ್ಳಬಹುದು. ನಂತರ ಇದು ಮುಂದೆ ಎನ್.ಡಿ.ಎ.ಗೆ ಮತ್ತಷ್ಟು ಬಲ ಬಂದಂತ್ತಾಗುತ್ತದೆ ಹಾಗೂ 2004 ಯು.ಪಿ.ಎ. ಸಕ್ರಾರದಲ್ಲಿ ಭಾಗಿಯಾಗಿದ್ದ ಜೆ.ಎಮ್.ಎಮ್.ನಾಯಕ ಶಿಬು ಸುರೇನ್, ಎನ್.ಡಿ.ಎ. ಪ್ರಮುಖ ಪಕ್ಷವಾದ ಬಿ.ಜೆ.ಪಿ. ಜೊತೆ ಅಧಿಕಾರ ಹಂಚಿಕೊಂಡು ಇದರ ಸಖ್ಯದಲ್ಲಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಕುಮಾರಿ ಜಯಲಲಿತರವರು ತನ್ನ ಸಂಪ್ರದಾಯಿಕ ವಿರೋಧಿಯಾದ ಕರುಣಾ ನಿಧಿಯನ್ನು ವಿರೋಧಿಸಿ ಸಹಜವಾಗಿ ಎನ್.ಡಿ.ಎ.ವನ್ನು ಬೆಂಬಲಿಸುತ್ತಾರೆ. ಇನ್ನು ಪ್ರಾದೇಶಿಕ ನಾಯಕರಾದ ಚಂದ್ರ ಬಾಬು ನಾಯ್ಡು ಅಂತಹವರನ್ನಾ ಎನ್.ಡಿ.ಎ. ತನ್ನ ಕಡೆ ಸೆಳೆದುಕೊಂಡರೆ 2014ರ ಸಾವ್ರತ್ರಿಕ ಚುನಾಚಣೆಗೆ ಪೂರಕವಾಗಲಿದೆ. ಆಗ ಮಾಯಾವತಿಯವರು ಸಹಜವಾಗಿ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗುತ್ತಾರೆ. ಇದಕ್ಕೆ ಪ್ರಾದೇಶಿಕ ನಾಯಕರ ಸಹಮತ ದೊರೆತರೆ ದೇಶದ ಪ್ರಧಾನಿಯಾಗುವ ಸಾಧ್ಯತೆಯೂ ಇದೆ. ಇದರಿಂದ ಈ ಮೂಲಕ ಎನ್.ಡಿ.ಎ ಅಧಿಕಾರಕ್ಕೂ ಬರಬಹುದು. ಅದರಿಂದ ಎಲ್ಲಾ ವಾತವರಣವು ಮಾಯಾವತಿಯವರಿಗೆ ಅನುಕೂಲಕರವೇ ಆಗಿದೆ. ಏನೆ ಆದರೂ ಉತ್ತರ ಪ್ರದೇಶದಲ್ಲಿ ಆನೆಗೆ ಬಲ ಬರಲಿದೆಯೋ ಅಥವಾ ಸಮ್ಮಿಶ್ರ ಸಕ್ರಾರ ರಚನೆ ಆಗಲಿದೆಯೋ ಎಂಬುದನ್ನಾ ತಿಳಿಯಬೇಕಾದರೆ ದಿನಾಂಕ ಮಾಚ್೯ 06/03/2012ರವರೆಗೂ ಕಾಯಲೇ ಬೇಕಾಗಿದೆ.

* * * * * * * *

ಚಿತ್ರಕೃಪೆ : aajkikhabar.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments