ಮೊಬೈಲ್ನಲ್ಲಿ ಕನ್ನಡ ವಿಕಿಪೀಡಿಯ
-ಓಂಶಿವಪ್ರಕಾಶ್
ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್ಸಂಗ್ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ ಭಾಷೆಗಳ ಜೊತೆಗೆ ಕನ್ನಡವೂ ಮೊಬೈಲ್ ಪರದೆಯ ಮೇಲೆ ಮೂಡುವಂತೆ ಮಾಡಿರುವುದರಿಂದ ಕನ್ನಡದ ವೆಬ್ಸೈಟ್ ಇತ್ಯಾದಿಗಳು ಈಗ ಅಂಗೈ ಅಗಲದ ಮೊಬೈಲ್ ಪರದೆಯಲ್ಲಿ ರಾರಾಜಿಸುತ್ತಿವೆ.
ಇದಾದ ನಂತರವೂ ವಿಕಿಪೀಡಿಯ ಕನ್ನಡ (http://kn.wikipedia.org) ಪುಟವನ್ನು ತೆರೆದಾಗ ವಿಕಿಪೀಡಿಯ ಮೊಬೈಲ್ ಪುಟವನ್ನು ಮರೆ ಮಾಡಿ, ಎಂದಿನ ಆವೃತ್ತಿಯಲ್ಲಿ ಈ ಪುಟ ನೋಡಿ ಎಂಬ ಮಾಹಿತಿ ಮಾತ್ರ ನಮಗೆ ದೊರಕುತ್ತಿತ್ತು. ಈಗ ಅದಕ್ಕೆ ಕೊನೆ. ಕನ್ನಡ ವಿಕಿಪೀಡಿಯದ ಮೊಬೈಲ್ ಪುಟ ಈಗ ಲಭ್ಯವಿದೆ. ಖುದ್ದಾಗಿ ಇದನ್ನು ಸರಿ ಪಡಿಸಬೇಕು ಎಂದು ಕೊಂಡಿದ್ದು ವಿಕಿಪೀಡಿಯದ ಇನ್ನೊಬ್ಬ ಗೆಳೆಯ ಹರೀಶ್ ಎಂ.ಜಿ ಗೆ ಹೇಗೆ ಕೇಳಿಸಿತೋ ತಿಳಿಯದು.
ಮತ್ತೊಂದು ವಿಷಯ ಕನ್ನಡದ ವಿಕಿಪೀಡಿಯಕ್ಕೆ ಮೊಬೈಲ್ ಮೂಲಕ (ಸಧ್ಯಕ್ಕೆ ಸ್ಯಾಮ್ಸಂಗ್ ನ ಆಂಡ್ರಾಯ್ಡ್ ಫೋನುಗಳಲ್ಲಿ ಮಾತ್ರ ಇದು ಸಾಧ್ಯ) ಕೂಡ ನೀವು ಲೇಖನಗಳನ್ನು ಸಂಪಾದಿಸಬಹುದು. ಕನ್ನಡ ಟೈಪಿಸಲು ಅನಿಸಾಫ್ಟ್ ಕನ್ನಡ ಕೀಬೋರ್ಡ್ ಅನ್ನು ಆಂಡ್ರಾಯ್ಡ್ ಮಾರ್ಕೆಟ್ ನಿಂದ ಡೌನ್ಲೋಡ್ ಮಾಡಿಕೊಂಡ್ರಾಯ್ತು.
* * * * * * * * *
ಚಿತ್ರಕೃಪೆ : ಓಂಶಿವಪ್ರಕಾಶ್
ಓಂಶಿವಪ್ರಕಾಶ್.. ಉತ್ತಮ ಮಾಹಿತಿ.
ನಾನು ಇತ್ತೀಚೆಗೆ, Samsung Galaxy PopPlus (GT-S55701) ಮೊಬೈಲ್ನ ಖರೀದಿಸಿದೆ. ಅದರಲ್ಲಿ ಕನ್ನಡ ಓದಲು ಬರುತ್ತಿದೆ. ಆದರೆ, ಟೈಪಿಸೋದಕ್ಕಾಗಿ, ” anysoft kannada keyboard” ಇನಸ್ಟಾಲ್ ಮಾಡಿಕೊಂಡರೂ, ಕನ್ನಡ ಕೀ-ಬೋರ್ಡ್ ಬರುತ್ತಿಲ್ಲ. ಅದಕ್ಕಾಗಿ ರೂಟ್ ಆಕ್ಸೆಸ್ ಬೇಕು ಅಂತ ಕೇಳ್ಪಟ್ಟಿದ್ದೆ. ಅದು ಹೇಗೆ ಅನ್ನೋದು ತಿಳಿತಿಲ್ಲ.. ಸಹಾಯ ಮಾಡುವಿರಾ? ಇನ್ನೊಂದು ಬರಹವೇ ಬಂದರೂ ಸಂತಸವೇ.
nanage edu thumba esta agide addarinda hosa phone kharidi madutthene.
ಸರ್
ನಿಲುಮೆ ಲೇಖನಗಳು ಇಷ್ಟವಾದವು
.ವಂದನೆಗಳು !