ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 9, 2012

26

ಅಟಲ್ ಜಿ ನಮಗೆಷ್ಟು ಗೊತ್ತು?

‍ನಿಲುಮೆ ಮೂಲಕ

-ನಾಗರಾಜ್ ಎಂ ಎಂ

ಸ್ನೇಹಿತರೇ ಹೇಗಿದ್ದೀರಿ? ಇವತ್ತು ಮತ್ತೆ ಸ್ವಲ್ಪ ಟೈಮ್ ಮಾಡ್ಕೊಳಿ, ಏನಾದ್ರೂ ಹಾಗೆ ಮಾತಾಡೋಣ ಅಲ್ವಾ? ನೀವೇ ನೋಡಿದ್ದೀರಲ್ಲ ಇತ್ತೀಚೆಗೆ ಟಿವಿ ಚಾನಲ್ ಗಳನ್ನ ನೋಡೋಕೆ ಆಗದೆ ಇರೋವಷ್ಟರಮಟ್ಟಿಗೆ ನಮ್ಮ ಮಾನ್ಯ ಮಂತ್ರಿಗಳು, ರಾಜಕಾರಣಿಗಳು ಹೊಲಸು ಮಾಡೋದನ್ನ, ಇನ್ನೂ ಕೆಲವರು ಅದರ ಪರ ವಿರೋಧ ಮಾತಾಡಿ ಮಜಾ ಕೊಡೋದನ್ನ!! ಅಲ್ವೇ? ಆದರೆ ನಿಷ್ಟಾವಂತರಾಗಿ ದೇಶಕ್ಕಾಗಿ ದೇಶದ ಪ್ರಗತಿಗಾಗಿ ಹೋರಾಡಿದ ಎಷ್ಟೋ ಜನರಿದ್ದಾರೆ ಅವರಲ್ಲಿ ಒಬ್ಬರು ಹಾಗೂ ಮುಖ್ಯವಾದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು…….. ಅವರ ಬಗ್ಗೆ ನಮಗೆ ಎಷ್ಟು ಗೊತ್ತು? ತಿಳಿಯುವ ಸಣ್ಣ ಪ್ರಯತ್ನ ಮಾಡೋಣ ಬನ್ನಿ.

ಅಟಲ್ ಅವರು ಹುಟ್ಟಿದ್ದು ಕ್ರಿಸ್ ಮಸ್ ದಿನದಂದು ಅದು 1924 ರಲ್ಲಿ ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ,  ಮಧ್ಯ ಪ್ರದೇಶದ ಗ್ವಾಲಿಯರ್  ಹತ್ತಿರದ  ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ, ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಮೇಷ್ಟ್ರು……. ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್  ವಾಜಪೇಯಿಯವರು. ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್  ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ  (ಆರ್. ಎಸ್. ಎಸ್ )ವನ್ನು ಸೇರಿದರು. ವೀರ ಅರ್ಜುನ ಹಾಗೂ ಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು….. ನಿಮಗೆ ಗೊತ್ತ? ಭಾರತದ  ಅವಿವಾಹಿತ ಪ್ರದಾನ ಮಂತ್ರಿ ಕೇವಲ ಅಟಲ್ ಜಿ ಮಾತ್ರ…..!!

ಅಟಲ್ ಅವರ ಮೊದಲ ರಾಜಕೀಯ ಜೀವನ ಶುರುವಾಗಿದ್ದು 1942 ರಲ್ಲಿ ಕ್ವಿಟ್ ಇಂಡಿಯ (ಬ್ರಿಟಿಷರೇ ಬಾರತ ಬಿಟ್ಟು ತೊಲಗಿ) ಚಳುವಳಿಯಲ್ಲೀ ಭಾಗವಹಿಸುವ ಮೂಲಕ, ನಂತರ 23 ದಿನಗಳ ಕಾಲ ಜೈಲು ವಾಸ ಅನುಭವಿಸ ಬೇಕಾಯಿತು, 1953 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯ ಭಾರತೀಯ ಜನ ಸಂಘದ ಮೂಲಕ ಆಯಿತು. 1957 ರಲ್ಲಿ ಮೊದಲ ಬಾರಿಗೆ ಲೋಕ ಸಭೆಯ ಸದಸ್ಯರಾಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನ ಕಂಡ ನೆಹರು ಜಿ ಹೇಳಿದ್ರಂತೆ, ಈ ವ್ಯಕ್ತಿ ಮುಂದೆ ಪ್ರದಾನಿ ಆಗ್ತಾರೆ ಅಂತ. ಅವರ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಎಷ್ಟರ ಮಟ್ಟಿಗೆ ಬೆಳೆದರು ಎಂದರೆ ಜನ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರೇ ಕೇಳದ ಪಕ್ಷವನ್ನ ಬುಡದಿಂದ ಕಟ್ಟಿ ಬೆಳಸಿದರು ಅದಕ್ಕೆ ಸಾಥ್ ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶಮುಖ್ ಹಾಗೂ ಬಾಲರಾಜ್ ಮಧೋಕ್ ಅವರು.

ವಿಶೇಷ ಇನ್ನೊಂದಿದೆ ಅವರು 3ನೇ, 10, ಹಾಗೂ 11ನೇ ಲೋಕ ಸಭೆಯನ್ನು ಬಿಟ್ಟು ಉಳಿದೆಲ್ಲ ಸಮಯದಲ್ಲಿ ಲೋಕ ಸಭೆಯ ಸದಸ್ಯರಾಗಿ ಇದ್ದರು. 1977 ರಲ್ಲಿ  ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ  ಅವರು ಅಮೆರಿಕ ದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು ಆ ಸಂಧರ್ಬದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯ ಅಟಲ್ ಅವರು…… ಅವರಿಗೆ ಇಂಗ್ಲಿಷ್ ಬರೋದಿಲ್ಲ ಅಂತ ಯೋಚನೆ ಮಾಡ್ಬೇಡಿ ಅವರು ಇಂಗ್ಲೀಷ್ ನಲ್ಲೂ ಕೂಡ ಪ್ರಖಾಂಡ ಪಂಡಿತರು.

1979 ರಲ್ಲಿ ಮುರಾರ್ಜಿ ದೇಸಾಯಿ ಅವರ ಸರ್ಕಾರ ಪತನಗೊಂಡ ಸಂಧರ್ಬದಲ್ಲಿ ಜನತಾ ಪಾರ್ಟಿಯನ್ನ ವಿಸರ್ಜಿಸಲಾಯಿತು ಆ ಸಂಧರ್ಬದಲ್ಲೂ ದೃತಿಗೆದದ ಅಟಲ್ ಜಿ ಭಾರತೀಯ ಜನ ಸಂಘ ಹಾಗೂ ಆರ್ ಎಸ್ ಎಸ್ ನ ಕೆಲ ಮುಖಂಡರೊಂದಿಗೆ ಸೇರಿ , ಜೊತೆಗೆ ಲಾಲ್ ಕೃಷ್ಣ ಅಡ್ವಾಣಿಯವರ ಜೊತೆಗೂಡಿ 1980 ರಲ್ಲಿ ಭಾರತೀಯ ಜನತಾ ಪಾರ್ಟಿ ಯನ್ನ ಕಟ್ಟಿದರು. 1984 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಅನ್ನ ಅತ್ಯಂತ ಖಟುವಾಗಿ ವಿರೋದಿಸಿದವರು ಅಟಲ್ ಜಿ….. ಅಷ್ಟಕ್ಕೂ ಈ ಬ್ಲೂ ಸ್ಟಾರ್ ಆಪರೇಷನ್ ಅಂದರೆ ಏನು ಗೊತ್ತ? ಪಂಜಾಬ್ ನ ಸಿಕ್ಕ್ ದೇವಾಲಯ ಒಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನಿದೆ ಅನ್ನೋ ನೆಪ ಮಾಡಿಕೊಂಡು ಅಲ್ಲಿಗೆ ಸೈನ್ಯವನ್ನ ಕಳುಹಿಸಿ ಜಲಿಯನ್ ವಾಲಭಾಗ್ ಹತ್ಯಾಕಾಂಡಕಿಂತಲೂ ಭಯಾನಕವಾಗಿ ನರ ಮೇಧ ನೆಡೆಸಿದ್ದು!! ಅದರ ರೂವಾರಿ ಯಾರು ಗೊತ್ತ? ಮೇಡಂ ಇಂದಿರ ಗಾಂಧಿ!! ಅಷ್ಟಕ್ಕೂ ಒಡೆದು ಆಳುವ ನೀತಿಯನ್ನ ಮುಂದುವರಿಸಿಕೊಂಡು ಬಂದಿದ್ದ ಆಗಿನ ಸರ್ಕಾರದ, ಹಾಗೂ ಬ್ಲೂ ಸ್ಟಾರ್ ಆಪರೇಷನ್ ವಿರುದ್ದ ಹೋರಾಟ ಮಾಡಲು ಲೋಕ ಸಭೆಯಲ್ಲಿ ಇದ್ದ ಬಿ ಜೆ ಪಿ ಯ ಸದಸ್ಯರ ಒಟ್ಟು ಸಂಖ್ಯಾ ಬಲ ಕೇವಲ 2 ಮಾತ್ರ!! ಹಾಗಿದ್ದರೂ ದೃತಿ ಗೆಡಲಿಲ್ಲ ಅಟಲ್…..

ರಾಮ ಜನ್ಮಭೂಮಿಯ ವಿಚಾರದಲ್ಲಿ ಹೋರಾಟ, ನಂತರ 1995 ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಮೊದಲ ಬಾರಿಗೆ ಅಧಿಕಾರವನ್ನ ವಹಿಸುವ ಅವಕಾಶ ಬಿ ಜೆ ಪಿ ಗೆ ಒಲಿದು ಬಂತು ನಂತರ ಮಹಾರಾಷ್ಟ್ರದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಮಾನ್ಯ ಅಟಲ್ ಜಿ ಅವರ ಹೆಸರನ್ನ ಗೋಷಿಸಿದರು ಅದರಿಂದಾಗಿ 1996 ರಲ್ಲಿ ಕೇಂದ್ರದಲ್ಲಿ ಮೊದಲ ಬಿ ಜೆ ಪಿ ಯ ಸರ್ಕಾರ ರಚನೆಯಾಯಿತು. ಆದರೆ ದುರಾದೃಷ್ಟ ವಶಾತ್ ಅಟಲ್ ಬಹುಮತ ಸಾಭೀತು ಪಡಿಸುವ ಸಂದರ್ಭದಲ್ಲಿ ಸೋಲೋಪ್ಪಬೇಕಾಯಿತು ಹಾಗಾಗಿ ಮೊದಲಬಾರಿಗೆ ಅಟಲ್ ಕೇವಲ 12 ದಿನಗಳಿಗಾಗಿ ಪ್ರದಾನಿಯಾಗಿದ್ದರು ಅಷ್ಟೇ…

1998- 99 ರಲ್ಲಿ ಎನ್ ಡಿ ಎ ಅನ್ನುವ ಸಂಘಟನೆಯಡಿ ಪಕ್ಷಗಳನ್ನ ಒಂದು ಗೂಡಿಸಿ ಮತ್ತೆ ಬಿ ಜೆ ಪಿ ಅಧಿಕಾರಕ್ಕೆ ಬಂತು ಅಟಲ್ ಪ್ರಧಾನಿಯಾದರು. ಮತ್ತೆ ಜಯಲಲಿತ ತಾವು ನೀಡಿದ್ದ ಬೆಂಬಲವನ್ನ ಹಿಂಪಡೆದರು ಅದರಿಂದಾಗಿ  ಬಹುಮತ ಸಾಬೀತು ಮಾಡುವ ಪರೀಕ್ಷೆ ಎದುರಾಯಿತು ಆಗ ಕೇವಲ 1 ವೋಟಿನಿಂದ ಅಟಲ್ ಸರ್ಕಾರ ಮತ್ತೆ ಬಿದ್ದು ಹೋಯಿತು……

ಮೇ 1998ರಲ್ಲಿ ಮೊದಲ ಬಾರಿಗೆ ಅಟಲ್ ಸರ್ಕಾರ ಒಂದು ನಿರ್ಧಾರಕ್ಕೆ ಬಂದು, ಅಣ್ವಸ್ತ್ರ ಪರೀಕ್ಷೆಯನ್ನ ಪೊಖ್ರಾನ್ (ರಾಜಸ್ತಾನ ದಲ್ಲಿದೆ) ಎಂಬಲ್ಲಿ ನೆಡೆಸಿತು, ಯಶಸ್ವಿ ಆಯಿತು ಕೂಡ, ಇಡೀ ವಿಶ್ವ ಭಾರತವನ್ನ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು, ಅಮೆರಿಕವೆಂಬ ಹೊಟ್ಟೆಕಿಚ್ಚಿನ ದೇಶ ನಮ್ಮ ಮೇಲೆ ಅಣ್ವಸ್ತ್ರ ಪರೀಕ್ಷೆ ಮಾಡಿದ ಕಾರಣವೊಡ್ಡಿ ನಿರ್ಭಂದ ಹೇರಿತು. ಇದಾಗಿ ಎರಡೇ ವಾರದಲ್ಲಿ ನಮ್ಮ ಪರಮಾಪ್ತ!! (?) ರಾಷ್ಟ್ರ ಪಾಕಿಸ್ತಾನ ಅಣು ಶಶ್ತ್ರಾಸ್ತ್ರಗಳನ್ನ ಪರೀಕ್ಷೆ ಮಾಡಿತು ಗೊತ್ತೇ? ನಂತರ ಅಮೆರಿಕ “ಸಿ ಟಿ ಬಿ ಟಿ ಒಪ್ಪಂದಕ್ಕೆ ಸಹಿ ಮಾಡುವಂತೆ ಎಷ್ಟು ಒತ್ತಾಯ ಮಾಡಿತೆಂದರೆ ಅದೆಲ್ಲವನ್ನೂ ಅಟಲ್ ಛಲದಿಂದಲೇ ಎದುರಿಸಿದರು. ಅಷ್ಟಕ್ಕೂ ಈ ಸಿ ಟಿ ಬಿ ಟಿ ಅಂದರೆ ಏನು ಗೊತ್ತೇ? ಕಂಪ್ರಹೆನ್ಸಿವ್ ಟೆಸ್ಟ್ ಬ್ಯಾನ್ ಟ್ರೀಟಿ ಅಂತ, ಅಂದರೆ ನಾವು ಯಾರಮೇಲೂ ಅಣ್ವಸ್ತ್ರ ಪ್ರಯೋಗ ಮಾಡುವಂತಿಲ್ಲ…….ಸರಿ ಹಾಗೆಲ್ಲಾದರೂ ಸಹಿ ಹಾಕಿದರೆ ನಮ್ಮ ನೆಂಟ ರಾಷ್ಟ್ರ ಪಾಕಿಸ್ತಾನ ಸುಮ್ಮನಿರುತ್ತದೆಯೇ? ಸಹಿ ಹಾಕಿದ ಮರುಕ್ಷಣವೇ ಅವರಲ್ಲಿರುವ ಅಕ್ರಮ ಅಣು ಬಾಂಬಗಳನ್ನ ಸಾಲು ಸಾಲಾಗಿ ತಂದು ನಮ್ಮ ಮೇಲೆ ಎಸೆದು ದ್ವಂಸ ಮಾಡಿಬಿಡುವುದಿಲ್ಲವೇ? ಹಾಗೆ ಆಗಲೆಂದೇ ಅಮೆರಿಕ ಸಿ ಟಿ ಬಿ ಟಿ ಅನ್ನೋ ಕುಣಿಕೆಯನ್ನ ನಮಗೆ ಸುತ್ತಲು ಬಂದಿದ್ದು… ಆದರೆ ಅದನ್ನ ಅರಿತಿದ್ದರು ಅಟಲ್.

1998 ಹಾಗೂ 1999 ರಲ್ಲಿ ಭಾರತ ಪಾಕಿಸ್ತಾನಗಳನಡುವೆ ಲಾಹೋರ್ ಒಪ್ಪಂದಕ್ಕೂ ಮುಂದಾಗಿದ್ದು ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರು… ಆದರೆ ಮುಂದಿನಿಂದ ಒಪ್ಪಂದ ಮಾಡಿಕೊಂಡು ಹಿಂದಿನಿಂದ ಬಂದು ಬಾಂಬ್ ಹಾಕುವ ಬುದ್ಧಿಯನ್ನ ಪಾಕ್ ಬಿಡಲೇ ಇಲ್ಲ ….ಜೂನ್ 1999 ರಲ್ಲಿ ಕಾರ್ಗಿಲ್ ಯುದ್ದ ಶುರುವಾಗಿ ಹೋಯಿತು,ಆಪರೇಷನ್ ವಿಜಯ್ ಗೆ ಕರೆ ಕೊಟ್ಟರು ಅಟಲ್, 3 ತಿಂಗಳು ನೆಡೆದ ಯುದ್ದದಲ್ಲಿ ಪಾಕ್  ಮಾಡಿದ 70% ಅತಿಕ್ರಮ ಪ್ರವೇಶ ವನ್ನ ಹಿಮ್ಮೆಟ್ಟಿಸಲಾಯಿತು, 600 ರಿಂದ ಸುಮಾರು 3000 ಸಾವಿರ ಪಾಕ್ ಉಗ್ರರನ್ನ ಮುಗಿಸಲಾಯಿತು, ನಂತರ ಪಾಕಿಸ್ತಾನ ಅಮೆರಿಕಾದ ಕಾಲು ಹಿಡಿದು ಜೀವ ಉಳಿಸಿಕೊಂಡು ಕಧನ ವಿರಾಮ ಘೋಷಣೆ ಮಾಡಿತು….ಆಗ ಅಟಲ್ ತೆಗೆದುಕೊಂಡ ನಿರ್ಧಾರಗಳು, ಅವರ ಧೈರ್ಯ ನಮ್ಮ ಸೈಲೆಂಟ್ ಮೊಡ್ ಪ್ರದಾನಿಗಳಿಗೆ ಮಾದರಿಯಾಗಬೇಕಿತ್ತು ಆದರೆ ಹಾಗಾಗಲಿಲ್ಲ ಅದೇ ನೋಡಿ ದುರಂತ.

ಮೂರನೇ ಭಾರಿಗೆ ಪ್ರದಾನಿಯಾಗಿದ್ದು 1999 ರಿಂದ 2004 ರ ವರೆಗೆ, ಆ ಸಂದರ್ಭದಲ್ಲಿ ನೆಡೆದ ಭಾರತೀಯ ವಿಮಾನ ಅಪಹರಣ (ಖಂದಹಾರ್ ನಲ್ಲಿ. – ಹಿಂದೊಮ್ಮೆ ಘಾಂದಾರ ಅಗಿತ್ತಂತೆ ಅದು ) ಕೂಡ ಸುಖಾಂತ್ಯ ಕಾಣುವಲ್ಲಿ ಅಟಲ್ ಹಾಗೂ ಜಸವಂತ್ ಸಿಂಗರ ಕೊಡುಗೆ ಅಪಾರವಾಗಿದೆ. ಮತ್ತೆ ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಅಟಲ್ ಮಾಡಿದ ಮಹತ್ತರ ಸಾಧನೆಗಳಲ್ಲಿ ಪ್ರದಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ, ಎಷ್ಟರ ಮಟ್ಟಿಗೆ ಇದು ಫಲಪ್ರದವಾಯಿತೆಂದರೆ ಲಕ್ಷಾಂತರ ಹಳ್ಳಿಗಳು ಡಂಬಾರಿನ ರಸ್ತೆಗಳನ್ನ ಕಂಡವು, ಸಂಪರ್ಕ ಹಾಗೂ ರಸ್ತೆ ನಿರ್ಮಾಣದಲ್ಲಿ ಆದ ಕ್ರಾಂತಿ ಅಂದರೆ ಅದೇನು ತಪ್ಪಾಗಲಾರದು.

ನಂತರದಲ್ಲಿ 2001 ರ ಪಾರ್ಲಿಮೆಂಟ್ ಮೇಲಿನ ಉಗ್ರರ ದಾಳಿ ನಿಮಗೆಲ್ಲ ಗೊತ್ತೇ ಇದೆ, 2004 ರಲ್ಲಿ ಮತ್ತೆ ರಾಮ ಜನ್ಮಭೂಮಿಯ ಹೆಸರನ್ನ ತೆಗೆದು, ಮುಸ್ಲಿಂ ರಲ್ಲಿ ಬಿ ಜೆ ಪಿ ಯನ್ನ  ಹಿಂದೂ ಪಕ್ಷವೆಂಬಂತೆ ಬಿಂಬಿಸಿ ಮತ್ತೆ ಆದಿಕಾರಕ್ಕೆ ಬಂದಿದ್ದೆ ಈ ಯು ಪಿ ಎ  ಯ ಮೇಡಂ ಸರ್ಕಾರ ಹಾಗೂ ಸದಾ ಸೈಲೆಂಟ್ ಮೊಡ್ ನ ಮೊಬೈಲ್ ನಂತಿರುವ ನಮ್ಮ ರಬ್ಬರ್ ಸ್ಟ್ಯಾಂಪ್ ಪ್ರದಾನಿಗಳ ಪಾರ್ಟಿ.

2005 ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡವರು ಅಟಲ್, ರಾಜಕೀಯವನ್ನ ಬಿಟ್ಟರೆ ಅಟಲ್ ಒಬ್ಬ ಒಳ್ಳೆಯ ಕವಿ ಹಾಗೂ ಸಾಹಿತಿಯೂ ಹೌದು. ಅವರು ಬರೆದ ಪುಸ್ತಕಗಳು ಅನೇಕ. ಹಾಗೆ ಅವರಿಗೆ ಅರಸಿ ಬಂದ ಪ್ರಶಸ್ತಿಗಳೂ ಅಷ್ಟೇ, 1992 ರಲ್ಲಿ ಪಧ್ಮ ವಿಭೂಷಣ, 1994 ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ, 1994 ರಲ್ಲಿ ಉತ್ತಮ ರಾಜಕೀಯ ಪಟು ಗೌರವ, ಹಾಗೂ 1994 ರ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿಗಳು ಮುಖ್ಯವಾದವು.ಅವರು ಬರೆದ ಕೆಲವು ಪುಸ್ತಕಗಳು:

  • Atal Bihari Vajpayee, meri samsadiya yatra (Hindi Edition). (1999). – ಇದು ಅವರ ಜೀವನ ಚರಿತ್ರೆ.
  • Four decades in parliament. (1996).
  • Atala Bihari Vajpayee, samsada mem tina dasaka. (1992).
  • Pradhanamantri Atala Bihari Vajapeyi, chune hue bhashana. (2000).
  • Values, vision & verses of Vajpayee: India’s man of destiny. (2001).
  • India’s foreign policy: New dimensions. (1977).
  • Assam problem: Repression no solution. (1981).
  • Suvasita pushpa: Atala Bihari Vajapeyi ke sreshtatama bhashana. (1997).

ಕವಿತೆಗಳು

  • Twenty-One Poems. (2003).
  • Kya khoya kya paya: Atala Vihari Vajapeyi, vyaktitva aura kavitaem (Hindi Edition). (1999).
  • Meri ikyavana kavitaem. (1995).
  • Meri ikyavana kavitaem (Hindi Edition). (1995).
  • Sreshtha kabita. (1997).
  • Nayi Disha – an album with Jagjit Singh (1999)
  • Samvedna – an album with Jagjit Singh (2002)

ಎನ್ ಡಿ  ಎ ಆಗಿರಲಿ, ಭಾರತೀಯ ಜನ ಸಂಘ ಆಗಿರಲಿ, ಭಾರತೀಯ ಜನತಾ ಪಾರ್ಟಿ ಆಗಿರಲಿ ಅವೆಲ್ಲವೂ ಹುಟ್ಟಿ ಬೆಳೆದಿದ್ದು ಅಟಲ್ ರ ಮಾರ್ಗದರ್ಶನದಲ್ಲೇ…. ಆದರೆ ಈಗ ಹಾಗಿಲ್ಲ ಬಿಡಿ, ಗಣಿ ದೂಳು, ಸೆಕ್ಸ್ ಹಗರಣಗಳು ಭೂ ಹಗರಣಗಳು ಇವೆಲ್ಲವುಗಳಿಂದಾಗಿ ಇನ್ನೊಮ್ಮೆ ಭಾರತೀಯ ಜನತಾ ಪಾರ್ಟಿ ವಿಸರ್ಜನೆ ಆದರೆ ಏನೂ ಆಶ್ಚರ್ಯ ಪಡಬೇಕಿಲ್ಲ, ತನಗಾಗಿ ಒಂದು ಸಂಸಾರವನ್ನೂ ಕಟ್ಟಿಕೊಳ್ಳದೆ ದೇಶಕ್ಕಾಗಿ ದೇಶದ ಹಿತಕ್ಕಾಗಿ ಹೋರಾಟ ಮಾಡಿದ ಆಧುನಿಕ ರಾಜಕಾರಣದ ಭೀಷ್ಮ ವಾಜಪೇಯಿಯವರೆಲ್ಲಿ? ಈ ಭ್ರಷ್ಟಾತಿಭ್ರಷ್ಟ ಪುಡಾರಿಗಳೆಲ್ಲಿ?

ಮುಂದೆ ಬರುವ ಚುನಾವಣೆಗಳಲ್ಲಿ ವಾಜಪೇಯಿ ಯವರ ಫೋಟೋವನ್ನ ತಮ್ಮ ಪಾಂಪ್ಲೇಟ್ ಗಳಲ್ಲಿ ದೊಡ್ಡದಾಗಿ ತೋರಿಸಿಕೊಂಡು  ಮತ ಕೇಳಲು ಬರುವ ಪುಡಾರಿಗಳಿಗೆ ಸರಿಯಾದ ಬುದ್ದಿ ಕಲಿಸಬೇಕಿದೆ….ವಾಜಪೇಯಿಯವರ ಯಾವ ತತ್ವ ಸಿದ್ದಾಂತಗಳನ್ನ ಅನುಸರಿಸುತ್ತೀದ್ದೀರಿ? ಅನ್ನುವ ಪ್ರಶ್ನೆಯನ್ನ ಅಭ್ಯರ್ಥಿಗಳ ಮುಖದ ಮೇಲೆ ಕೇಳಬೇಕಿದೆ, ನಿಷ್ಕಳಂಕ, ಸಜ್ಜನ , ರಾಜಕಾರಣಿಯಾಗಿ ಕವಿಯಾಗಿ ಒಬ್ಬ ಶ್ರೇಷ್ಠ ಮಾನವತಾ ವಾದಿಯಾದ ವಾಜಪೇಯಿಯವರಂತ ರಾಜಕಾರಣಿಗಳು ಜನ್ಮ ತಾಳಿದಲ್ಲಿ ದೇಶ ಉನ್ನತಿ ಸಾಧಿಸಲು ಸಾಧ್ಯ ಇಲ್ಲವಾದಲ್ಲಿ ಇದೆ ನರಕ ಕೂಪದಲ್ಲಿ ಬಿದ್ದು ಒದ್ದಾಡುವುದು ತಪ್ಪಿದ್ದಲ್ಲ ಏನಂತೀರಿ ಸ್ನೇಹಿತರೇ?

* * * * * * * *

ಚಿತ್ರಕೃಪೆ : topnews.in

26 ಟಿಪ್ಪಣಿಗಳು Post a comment
  1. ಪ್ರಸನ್ನಕನ್ನಡಿಗ
    ಮಾರ್ಚ್ 9 2012

    ಅರ್ಹ ವ್ಯಕ್ತಿಗಳು ರಾಜಕೀಯಕ್ಕೆ ಬರದಿದ್ದುದು ಈ ದೇಶಕ್ಕೆ ಶಾಪ, ಬಂದ ಅರ್ಹರಿಗೆ ಅಧಿಕಾರ ಸಿಗದೇ ಹೋಗಿದ್ದು ಈ ದೇಶದ ದೊಡ್ಡ ದುರಂತ. ಅನರ್ಹರಿಗೆ ಸಿಕ್ಕಿದು ವಿನಾಶದ ಸೂಚನೆ.

    ಉತ್ತರ
  2. U L UDAYAKUMAR
    ಮಾರ್ಚ್ 9 2012

    ಅಟಲ್ ಬಿಹಾರಿ ವಾಜಪೇಯಿಯವರನ್ನು ಕಾಣಬೇಕೆಂಬ ನಮ್ಮ ನಿಮ್ಮೆಲ್ಲರ ಮನೋಭಿಲಾಷೆ ನನ್ನದು. ದೇಶ ಕಂಡ, ಕಾರ್ಗಿಲ್ ಯುದ್ದದ ಗೆಲುವಿನ ರೂವಾರಿ, ದೇಶವನ್ನು ಅಣ್ವಶ್ತ್ರ ದೇಶವನ್ನಾಗಿಸಿ ಶಕ್ತಿಶಾಲಿಯನ್ನಾಗಿಸಿದ ಆ ಮಹಾನ್ ನಾಯಕನನ್ನು ಕಾಣಬೇಕೆಂಬ ನನ್ನ ಆಶೆ ಈಡೇರಬಲ್ಲದೆ ?

    ಉತ್ತರ
  3. ಮಾರ್ಚ್ 9 2012

    ಅಟಲ್ ಜೀ ಅವರನ್ನ ಹೊಗಳುವುದು ಓಕೆ,ಆ ಭರದಲ್ಲಿ ತೀರ ಈ ಮಟ್ಟಿಗಿನ ಭೋ-ಪರಾಕ್ ಬೇಕಾ? ಅದು ಆಪರೇಶನ್ ಬ್ಲೂ-ಸ್ಟಾರ್ ಆಗಿದ್ದು ಕ್ಷುಲ್ಲಕ ಕಾರಣಕ್ಕಾಗಿ ಅನ್ನುತ್ತೀರಲ್ಲ ಇತಿಹಾಸ ಓದಿ ನೋಡಿ, ಇನ್ನ ಕಂದಹಾರದಲ್ಲಿ ತಲೆ ತಗ್ಗಿಸಿದ್ದು ಭಾರತವೇ ತಿಳಿದಿರಲಿ…

    ಅವರು ಹಿಂದಿ ಮಾತನಾಡಿದ್ದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೇರಿಕಾದಲ್ಲಲ್ಲ

    ಉತ್ತರ
    • valavi
      ಮಾರ್ಚ್ 1 2014

      ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಗ್ಯಾಸ್ ಸಿಲಿಂಡರಗಳನ್ನು ಮನೆಮನೆಗೆ ಬೇಕಾ? ಎಂದು ಕೇಳುತ್ತಿದ್ದರು. ಇವತ್ತು ಸಿಲಿಂಡರ್ ಪರಿಸ್ಥಿತಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ವಾಜಪೇಯಿ ಸಮಯದಲ್ಲಿ ಬ್ಯಾಂಕ್ ಬಡ್ಡಿದರವು ಶೇ 6/7 ಇರುತ್ತಿತ್ತು. ಗೃಹ ನಿರ್ಮಾಣವು ಬಹಳ ಸುಲಭವಾಗಿತ್ತು. ಅದಕ್ಕೂ ಮೊದಲು ಬಡ್ಡಿ ದರವು14/15 % ಇತ್ತು. ಬಾಡಿಗೆ ಮನೆಗಳು, ಬಟ್ಟೆಗಳು ಸೋವಿ ರೇಟಿನಲ್ಲಿ ದೊರೆಯುತ್ತಿದ್ದವು . ವಸ್ತುಗಳ ಬೆಲೆ ಗಣನೀಯವಾಗಿ ಇಳಿದಿತ್ತು. ನಂತರದ 10 ವರ್ಷಗಳಲ್ಲಿ ಬೆಲೆಗಳು ಎಲ್ಲಿ ನಿಂತಿವೆ ಎಲ್ಲರಿಗೂ ಗೊತ್ತಿದೆ. ಎಲ್ಲ ಸರ್ಕಾರಗಳು ಮಾಡುವಂತೆ ಅವರ ಸಮಯದಲ್ಲೂ ಕೆಲವು ಲೋಪಗಳಾಗಿರಬಹುದು. ಆದರೆ ಆರ್ಥಿಕ ಪರಿಸ್ತಥಿತಿ ತುಂಬಾ ಸುಧಾರಣೆಯಲ್ಲಿದ್ದುದನ್ನು ಮಧ್ಯಮ ಮತ್ತು ಬಡ ವರ್ಗದವರ ಜೀವನ ಆರಾಮದಾಯಕವಾಗಿದ್ದನ್ನು ಮರೆಯುವಂತಿಲ್ಲ.

      ಉತ್ತರ
      • ಮಾರ್ಚ್ 8 2014

        100% correct

        ಉತ್ತರ
      • Nagshetty Shetkar
        ಮಾರ್ಚ್ 8 2014

        Bhrame!

        ಉತ್ತರ
        • ಮಾರ್ಚ್ 11 2014

          ಭ್ರಮೆಯೇ!? ಗೊತ್ತಿದ್ದೂ ಏಕೆ ಇಟ್ಟುಕೊಂಡಿದ್ದೀರಿ ಶೇಟ್ಕರ್ ಅವರೇ?
          ಭ್ರಮೆ ಬಿಡಿ, ಎಲ್ಲವೂ ಸರಿಯಾಗಿ ಅರ್ಥವಾಗುತ್ತದೆ.
          ಅಂತೂ ಕಡೆಗೂ ನಿಮ್ಮದು ಭ್ರಮೆ ಎನ್ನುವುದು ನಿಮಗೆ ಅರಿವಾಯಿತಲ್ಲ! 😉

          ಉತ್ತರ
          • Nagshetty Shetkar
            ಮಾರ್ಚ್ 11 2014

            SSNK is a troll. Moderator should take action against him/her/it.

            ಉತ್ತರ
            • ಮಾರ್ಚ್ 11 2014

              ಶರಣರ ಬಾಯಲ್ಲಿ ಎಂತಹ ಒಳ್ಳೆಯ ಅಮೃತವಚನ ಉದುರುತ್ತಿದೆ!
              ಶೇಟ್ಕರ್ ಅವರೇ, ಏತಕ್ಕಾಗಿ ಇಷ್ಟೊಂದು ಅಸಹನೆ? ಅಸಹನೆ, ಕೋಪ, ಅಸೂಯೆ ಇತ್ಯಾದಿ ಸ್ವಭಾವದವರು ಶರಣರಾಗಲು ಸಾಧ್ಯವೇ? ಇತರರ ನಿಂದನೆ, ಸುಳ್ಳು ನುಡಿಯುವುದು, ಮತ್ತೊಬ್ಬರ ಕುರಿತಾಗಿ ಅಸಹ್ಯ ಪಡುವುದು, ಇತ್ಯಾದಿ ಅಭ್ಯಾಸಗಳು ಶರಣರಿಗೆ ತರವೇ!?
              ಅದರಲ್ಲೂ ಲಿಂಗಾಯತ ಮತದ ಕುರಿತಾಗಿ ಸಂಶೋಧನೆ ನಡೆಸಿ, ಸಂಶೋಧನಾ ಪ್ರಬಂಧ ಮಂಡಿಸಿರುವ ನಿಮ್ಮ ಬಾಯಲ್ಲಿ ಇಂತಹ ಅಪದ್ಧ!!!!

              ಉತ್ತರ
              • Nagshetty Shetkar
                ಮಾರ್ಚ್ 11 2014

                ಪ್ರತಿ ದಿನ ನನ್ನನ್ನು ಹೀಯಾಳಿಸದಿದ್ದರೆ ನಿಮಗೆ ತಿಂದದ್ದು ಅರಗುವುದಿಲ್ಲ ಅಲ್ಲವೇ?

                ಉತ್ತರ
                • ಮಾರ್ಚ್ 11 2014

                  “troll” ಎನ್ನುವ ಪದವನ್ನು ಬಳಸಿ ಅಸಹನೆ ತೋರಿಸಿದವರು, ಹೀಯಾಳಿಸಿದವರು ಯಾರು?
                  ಮಾಡಿದ್ದನ್ನೆಲ್ಲಾ ಮಾಡಿ, ನಾನೇ ನಿಮ್ಮನ್ನು ಹೀಯಾಳಿಸಿದೆ ಎನ್ನುತ್ತಿರುವುದು ಸರಿಯೇ!?

                  ಉತ್ತರ
                  • Nagshetty Shetkar
                    ಮಾರ್ಚ್ 11 2014

                    troll ಅಲ್ಲದೆ ಮತ್ತೇನು ನೀವು?!! ಇರಲಿ, ವಸ್ತುನಿಷ್ಠವಾಗಿ ಭಾರತದ ತವಕ ತಲ್ಲಣಗಳ ಚರ್ಚೆ ಮಾಡುವ ಉದ್ದೇಶವಿದ್ದರೆ ಮಾತ್ರ ನಿಮ್ಮೊಡನೆ ಮಾತು, ಟೈಮ್ ಪಾಸ್ ಮಾಡಲು ವಿತ್ತಂಡ ವಾದ ಮಾಡಬೇಡಿ. ನನಗೆ ಬೇಕಾದಷ್ಟು ಕೆಲಸವಿದೆ, ಮೂರು ಕಾಸು ಪ್ರಯೋಜನಕ್ಕೆ ಬಾರದ ನಿಮ್ಮೊಡನೆ ಜಗಳವಾಡುವಷ್ಟು ಪುರುಸೊತ್ತು ಇಲ್ಲ.

                    ಉತ್ತರ
                    • ಮಾರ್ಚ್ 12 2014

                      ನೀವು ನಿಲುಮೆಯಲ್ಲಿ ಒಮ್ಮೆಯಾದರೂ ಸತರ್ಕವಾಗಿ ಬರೆದಿದ್ದರೆ ತೋರಿಸಿ.
                      ಚರ್ಚೆಗಳ ದಿಕ್ಕು ತಪ್ಪಿಸುವುದು, ಇಲ್ಲಸಲ್ಲದ ಆರೋಪಗಳನ್ನು ಮಾಡುವುದು, ಚರ್ಚೆಗೆ ಯಾವ ರೀತಿಯಲ್ಲೂ ಸಂಬಂಧ ಪಡದ ಮತ್ತು ಇಲ್ಲಿ ಯಾರಿಗೂ ಪರಿಚಯವಿರದ ‘ದರ್ಗಾ ಸರ್’ ಎನ್ನುವವರ ಹೆಸರನ್ನು ಆಗಾಗ ಜಪಿಸುವುದು, ನಿಮ್ಮನ್ನು ನೀವೇ ಶರಣರೆಂದು ಹೇಳಿಕೊಳ್ಳುವುದು, ‘ಬ್ರಾಹ್ಮಣ್ಯ’ ಇತ್ಯಾದಿ ಪದಗಳನ್ನು ಬಳಸಿ ಜಾತಿನಿಂದನೆ ಮಾಡುವುದು, ಕೇಳಿದ ಒಂದು ಪ್ರಶ್ನೆಗೂ ಉತ್ತರಿಸದಿರುವುದು, ನಿಮ್ಮ ಮಾತನ್ನು ಒಪ್ಪದವರನ್ನು ನಿಂದಿಸುವುದು ಮತ್ತು ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಬಂದಾಗ ‘Fake id’ ಎಂದೆಲ್ಲಾ ಕೂಗಾಡಿ ನಿಲುಮೆಯನ್ನೂ ಹಾಗೂ ಇಲ್ಲಿ ಚರ್ಚಿಸುತ್ತಿರುವವರನ್ನೂ ಹೀನಾಮಾನವಾಗಿ ಬೈಯ್ಯುವುದು – ಇದನ್ನು ಬಿಟ್ಟು ನೀವು ಬರೆದಿರುವುದು ನನ್ನ ಗಮನಕ್ಕಂತೂ ಬಂದಿಲ್ಲ.
                      ಪ್ರಸ್ತುತ ಲೇಖನದಲ್ಲೂ ನೀವು ಲೇಖನಕ್ಕೆ ಸಂಬಂಧಿಸಿದಂತೆ (ಅದು ಪರವಿರಲಿ, ವಿರೋಧವಿರಲಿ) ಸರಿಯಾದ ಒಂದು ಪ್ರತಿಕ್ರಿಯೆಯನ್ನೂ ಬರೆದಿಲ್ಲವಲ್ಲ. ಇದ್ದಕ್ಕಿದ್ದಂತೆ “Bhrame!” ಎಂದು ಬರೆದಿರುವಿರಿ, ಆ ಸಣ್ಣ ಪದವನ್ನೂ ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿಲ್ಲ!
                      ಯಾವುದು ಭ್ರಮೆ, ಏತಕ್ಕಾಗಿ ಭ್ರಮೆ ಎನ್ನುವುದನ್ನು ವಿವರಿಸುವ ಪ್ರಯತ್ನವನ್ನೂ ನೀವು ಮಾಡಿಲ್ಲ.
                      ನೀವು ಇನ್ನೊಬ್ಬರ ಪ್ರತಿಕ್ರಿಯೆಗೆ ಭ್ರಮೆ ಎಂದಾಗ ಎಲ್ಲರೂ ಸುಮ್ಮನಿರಬೇಕು. ಅದೇ, ನಿಮಗೇ ಭ್ರಮೆ ಎಂದಾಗ, ನೀವು ಅವರನ್ನು “troll” ಎಂದು ಕರೆಯುವಿರಿ. ಇದಲ್ಲವೇ ಅಸಹನೆ?
                      ಇನ್ನೊಬ್ಬರನ್ನು “troll” ಎಂದು ಕರೆದು ಮಾಡರೇಟರ್^ಗೆ ಪತ್ರಿಸಿ ಲೇಖನಗಳನ್ನು ಮುಚ್ಚಿಹಾಕಿಸುವುದು, ಪ್ರತಿಕ್ರಿಯೆಗಳನ್ನು ಅಳಸುವುದು, ವ್ಯಕ್ತಿಗಳು ಬರೆಯದಂತೆ ನಿಷೇಧಿಸುವುದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹತ್ತಿಕ್ಕುವುದು, ಇದೆಲ್ಲಾ ಕಮ್ಯುನಿಸ್ಟ್ ತಂತ್ರಗಳು ಚೀನಾ, ರಷ್ಯಾ, ಉತ್ತರ ಕೊರಿಯಾ, ಇತ್ಯಾದಿ ಕಮ್ಯುನಿಸ್ಟ್ ದೇಶಗಳಲ್ಲಿ ನಡೆಯಬಹುದು. ಪ್ರಜಾಪ್ರಭುತ್ವವಿರುವ ಭಾರತದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ.
                      ನಿಮ್ಮ ಮಾತಿಗೆ ಗೌರವ ಸಿಗಬೇಕಿದ್ದರೆ, ನಿಮ್ಮನ್ನು ಜನ ಗಂಭೀರವಾಗಿ ತೆಗೆದುಕೊಳ್ಳಬೇಕಿದ್ದರೆ, ಸರಿಯಾಗಿ ಬರೆಯುವುದನ್ನು ರೂಢಿಸಿಕೊಳ್ಳಿ.

                    • ವಿಜಯ್ ಪೈ
                      ಮಾರ್ಚ್ 12 2014

                      ಹಾಸ್ಯ ಚಕ್ರವರ್ತಿ!! 🙂

                    • Nagshetty Shetkar
                      ಮಾರ್ಚ್ 12 2014

                      SSNK, ನನಗೆ ಬೇಕಾದಷ್ಟು ಕೆಲಸವಿದೆ, ಮೂರು ಕಾಸು ಪ್ರಯೋಜನಕ್ಕೆ ಬಾರದ ನಿಮ್ಮೊಡನೆ ಜಗಳವಾಡುವಷ್ಟು ಪುರುಸೊತ್ತು ಇಲ್ಲ.

                    • ಮಾರ್ಚ್ 12 2014

                      ನಿಮಗೆ ಅರ್ಥಪೂರ್ಣ ಚರ್ಚೆ ನಡೆಸುವುದು ತಿಳಿದಿಲ್ಲ ಎನ್ನುವುದು ಇಲ್ಲಿರುವ ಎಲ್ಲರಿಗೂ ಎಂದೋ ತಿಳಿದು ಹೋಗಿದೆ.
                      ವೈಚಾರಿಕ ಚರ್ಚೆಗೆ ಕರೆದ ಕೂಡಲೇ, ನೀವು ಅದರಿಂದ ತಪ್ಪಿಸಿಕೊಂಡು ಓಡುವಿರಿ – “Fake Id” ಎಂದು ಕೂಗಾಡುವಿರಿ, ಅಥವಾ ಪುರುಸೊತ್ತು ಇಲ್ಲ ಎನ್ನುವಿರಿ!
                      ನಿಮ್ಮಲ್ಲಿ ವಿಚಾರವಿಲ್ಲ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇರೇನು ಬೇಕು!?
                      ಎಲ್ಲಾ ಚರ್ಚೆಗಳಲ್ಲಿ ಮೂಗು ತೂರಿಸುವವರು ನೀವು; ಕೆಲಸಕ್ಕೆ ಬಾರದ ಕಾಮೆಂಟುಗಳನ್ನು ಮಾಡುವಿರಿ; ಚರ್ಚೆಯನ್ನು ಹಳ್ಳ ಹಿಡಿಸುವಿರಿ; ನಂತರ ಪುರುಸೊತ್ತು ಇಲ್ಲವೆಂದು ಓಡುವಿರಿ. ಬಹಳ ಚೆನ್ನಾಗಿದೆ ನಿಮ್ಮ ರೀತಿ!

              • ಮಾರ್ಕ್ಸ್ ಮಂಜು
                ಮಾರ್ಚ್ 11 2014

                ಸನಾತನ ಭಾವನೆಗಳ ಬುರುಡೆ ಪುರಾಣದ ಭ್ರಮೆ
                ನಮೋಸುರನ ಪದತಟದಿ ದಡ ಸೇರುವ ಭ್ರಮೆ

                ಉತ್ತರ
  4. Chethan Mng
    ಮಾರ್ಚ್ 10 2012

    @ U L Udaykumar, nimmalondu korike Rakesh Shetty yavaranna impress madodakke ondsari Madam Indira, Sonia bagge bareyri…

    ಉತ್ತರ
    • ಮಾರ್ಚ್ 10 2012

      ಬರ್ದೋರು ನರೇಂದ್ರ ಅವ್ರು,ಉದಯ್ ಅಲ್ಲ ಚೇತನ್… ಆಪರೇಶನ್ ಬ್ಲೂ-ಸ್ಟಾರ್ ಆಗಿಲ್ಲ ಅಂದಿದ್ದರೆ ಇವತ್ತಿಗೆ ಪಾಕಿಸ್ತಾನದ ಪಕ್ಕ ಖಾಲಿಸ್ತಾನವೊಂದು ಇರುತಿತ್ತು ಅನ್ನುವುದು ಗೊತ್ತಿರಬೇಕಿತ್ತು ವಿರೋಧಿಸುತಿದ್ದವರಿಗೆ

      ಉತ್ತರ
      • ಮಾರ್ಚ್ 12 2012

        ರಾಕೇಶ್.. ನೀವು ಸೋನಿಯಾ ಪರವೇ?
        ಸೋನಿಯಾ ಬಗ್ಗೆ ಬರೆದರೆ, ನಿಮಗೆ ಸಂತೋಷ ಆಗುತ್ತದೆ ಅಂಥ ಈಗಲೇ ಗೊತ್ತಾಗಿದ್ದು..!

        ಉತ್ತರ
      • Kumar
        ಮಾರ್ಚ್ 12 2012

        ರಾಕೇಶ್,
        ನೀವು ಯಾವ “ನರೇಂದ್ರ”ರ ಕುರಿತಾಗಿ ಹೇಳುತ್ತಿದ್ದೀರಿ ತಿಳಿಯಲಿಲ್ಲ.
        ಈ ಲೇಖನದಲ್ಲಿ ಮೇಲಿರುವ ಪ್ರತಿಕ್ರಿಯೆಗಳಲ್ಲೆಲ್ಲೂ “ನರೇಂದ್ರ” ಇಲ್ಲ!
        ದಯವಿಟ್ಟು ಸ್ಪಷ್ಟೀಕರಿಸಿ.

        ಉತ್ತರ
  5. ಬಸವಯ್ಯ
    ಮಾರ್ಚ್ 12 2012

    ವಾಜಪೇಯಿ ತೀರ ಸುಭಗರೇನಲ್ಲ, ತೀರ ಪ್ರಾಮಾಣಿಕರೂ ಅಲ್ಲ!. ನೆಹರು ಕುಟುಂಬದ ಬಗೆಗಿನ ಅವರ ಪ್ರೀತಿಗೆ ಉದಾಹರಣೆಗಳಿವೆ. ಆ ಕುಟುಂಬದ ಸದಸ್ಯರುಗಳು ತಪ್ಪಿನಿಂದ ಪಾರಾಗಲು ದಾರಿ ಕಲ್ಪಿಸಿದ ಅಪಾದನೆಯಿದೆ ವಾಜಪೇಯಿ ಮೇಲೆ.

    ಕಾರ್ಗಿಲ್ ನ ಜಯ ನಮ್ಮ ಸೈನ್ಯದ ಪರಾಕ್ರಮದ ಜಯ. ಸರ್ಕಾರದ ಬೇಹುಗಾರಿಕೆ ಪಾಕಿಗಳು ಕಾರ್ಗಿಲ್ ಬೆಟ್ಟದ ತುದಿಗೆ ಏರುವವರೆಗೂ ಉದ್ದು ಹುರಿಯುತ್ತ ಕೂತಿತ್ತು!.

    —-ಆ ಸಂದರ್ಭದಲ್ಲಿ ನೆಡೆದ ಭಾರತೀಯ ವಿಮಾನ ಅಪಹರಣ (ಖಂದಹಾರ್ ನಲ್ಲಿ. – ಹಿಂದೊಮ್ಮೆ ಘಾಂದಾರ ಅಗಿತ್ತಂತೆ ಅದು ) ಕೂಡ ಸುಖಾಂತ್ಯ ಕಾಣುವಲ್ಲಿ ಅಟಲ್ ಹಾಗೂ ಜಸವಂತ್ ಸಿಂಗರ ಕೊಡುಗೆ ಅಪಾರವಾಗಿದೆ.——
    ಇದು ಶತಮಾನದ ಜೋಕ್!. ಅಜರ್ ಮಸೂದನಂತಹ ಉಗ್ರಗಾಮಿಯನ್ನು ಬಿಟ್ಟುಕೊಟ್ಟು ನಮ್ಮ ದೇವೆಗೌಡರು ಕೂಡ ಇಂತಹ ಶಾಂತಿಯುತ ಪರಿಹಾರವನ್ನು ಕಂಡುಹಿಡಿಯಬಲ್ಲರು!

    ಅಟಲ್ ಜಿ ಎಲ್ಲರ ನೆನಪಿಗೆ ಬರುವುದು ಸುವರ್ಣ ಪಥ ಹೆದ್ದಾರಿಯಿಂದ, ಗ್ರಾಮ ಸಡಕ್ ಯೋಜನೆಯಿಂದ. ವೈಯುಕ್ತಿಕವಾಗಿ ಭೃಷ್ಟರಲ್ಲದ್ದರಿಂದ ಮತ್ತು ರಾಜಕೀಯವನ್ನೇ 24 ಗಂಟೆಯ ಹವ್ಯಾಸವಾಗಿ ಮಾಡಿಕೊಳ್ಳದ್ದರಿಂದ. ಮತ್ತೇನಿಲ್ಲ..

    ಉತ್ತರ
  6. ಮಾರ್ಚ್ 14 2012

    ultimate…………..

    ಉತ್ತರ
  7. ಫೆಬ್ರ 28 2014

    LEGENDARY POET……………
    you owe my gratitude
    i can’t say any thing about you …….coz
    i can’t measure your highness………………
    u r the politician against whom no one stand………….

    YOUR POEMS FILL OUR HEART WITH PATRIOTIC EMOTIONS

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments