ಭೈರಪ್ಪನವರ ಆತ್ಮಕತೆ ಭಿತ್ತಿ ಓದುತ್ತ…
-ಸುಪ್ರೀತ್.ಕೆ.ಎಸ್
ಭೈರಪ್ಪನವರ ಆತ್ಮಕತೆ “ಭಿತ್ತಿ”ಯನ್ನು ಓದುತ್ತಿರುವೆ. ದಿನವಿಡೀ ಕಂಪ್ಯೂಟರ್ ಪರದೆಯನ್ನು ದಿಟ್ಟಿಸಿ ಕಣ್ಣು ದಣಿದಿದ್ದರೂ ಕೈಗಳನ್ನು ತುಂಬುವಂತೆ ಕೂರುವ ಪುಸ್ತಕವನ್ನು ಹಿಡಿದು ಪುಟಗಳೊಡನೆ ಸರಸವಾಡ್ತಾ, ಒಂದು ಬೆರಳಿನಲ್ಲಿ, ಮೂರ್ನಾಲ್ಕು ಬೆರಳುಗಳನ್ನು ಒತ್ತಿ ಪುಟಗಳನ್ನು ಸರಿಸುತ್ತಾ, ನೀಟಾಗಿ ಕೂರದ ಪುಟಗಳನ್ನು ಅಂಗೈಯಲ್ಲಿ ಇಸ್ತ್ರಿ ಮಾಡುತ್ತಾ ಓದುತ್ತಿದ್ದರೆ ಕಣ್ಣುಗಳ ದಣಿವು ಇಳಿದಂತೆ ಭಾಸವಾಗುತ್ತದೆ.
ಆತ್ಮಕತೆ ಎನ್ನುವುದು ವಿಶಿಷ್ಟವಾದ ಸಾಹಿತ್ಯ ಪ್ರಕಾರ. ಅಷ್ಟೇ ವಿಲಕ್ಷಣವಾದದ್ದೂ ಕೂಡ. ಜೀವನದಷ್ಟು ನೀರಸವಾದ, ತರ್ಕರಹಿತವಾದ, ತಾತ್ವಿಕ ಅಂತ್ಯಗಳು ಕಾಣದ ಅಸಂಖ್ಯ ದಿಕ್ಕೆಟ್ಟ ವಿದ್ಯಮಾನಗಳನ್ನು ಸಾಹಿತ್ಯದ ರಸೋತ್ಪತ್ತಿಯ ಶೈಲಿಗೆ ಒಗ್ಗಿಸುವುದು, ಅದಕ್ಕೊಂದು ಸ್ವರೂಪ ಕೊಡುವುದು – ಈ ಪ್ರಕ್ರಿಯೆಗಳಲ್ಲಿ ನುಸುಳುವ ಸುಳ್ಳುಗಳು, ಸುಳ್ಳು ಎಂದು ಹೇಳಲಾಗದಿದ್ದರೂ ಬರೆಯುವ ಮುನ್ನ ಇದ್ದ ನೆನಪಿನ ಅರ್ಥೈಸುವಿಕೆಯನ್ನೇ ಬದಲಿಸುವಂತಹ ಉತ್ಪ್ರೇಕ್ಷೆಗಳು, ಕಲ್ಪನೆ, ಆಶಯ, ಆದರ್ಶಗಳು ಸೇರಿದ ಕೃತಿಗಳು ನಿಜಕ್ಕೂ ಆಸಕ್ತಿಕರ.
ಅಮೇರಿಕಾದ ಪ್ರಸಿದ್ಧ ಕಮಿಡಿಯನ್ ಜೆರ್ರಿ ಸೈನ್ ಫೆಲ್ಡ್ ಹಾಗೂ ಲ್ಯಾರಿ ಡೇವಿಡ್ ಸೇರಿ ನಿರ್ಮಿಸಿದ ‘ಸೈನ್ ಫೆಲ್ಡ್’ ಹೆಸರಿನ ಸಿಟ್ ಕಾಮ್ ನ ಒಂದು ಎಪಿಸೋಡ್ ನಲ್ಲಿ ಒಂದು ಸನ್ನಿವೇಶವಿದೆ. ಪಾತ್ರಗಳೇನು ಮುಖ್ಯವಲ್ಲ. ಒಂದು ಪಾತ್ರ ಬಂದು “ಜೆರ್ರಿ ನಿನಗೆ ಗೊತ್ತಾ, ನಿನ್ನ ಅಂಕಲ್ ಆತ್ಮಕತೆ ಬರೆಯುತ್ತಿದ್ದಾರೆ” ಎಂದು ಹೇಳುತ್ತಾಳೆ. ಗಂಡ, “ಅದು ಪೂರ್ತಿ ನನ್ನ ಜೀವನದ ಘಟನೆಗಳನ್ನು ಆಧರಿಸಿರುವಂಥದ್ದು” ಎನ್ನುತ್ತಾನೆ.
ಆತ್ಮಕತೆಗಳನ್ನು ಓದುವಾಗೆಲ್ಲ ನನಗೆ ಸೋಜಿಗವೆಂದು ತೋರುವ ಸಂಗತಿಯೊಂದಿದೆ. ತಮ್ಮ ಐವತ್ತು, ಅರವತ್ತನೆಯ ವಯಸ್ಸಿನಲ್ಲಿ ಆತ್ಮಕತೆಯನ್ನು ಬರೆಯಲು ತೊಡಗುವವರು ಬಾಲ್ಯದ ಘಟನೆಗಳನ್ನು ನೆನಪಿಸಿಕೊಳ್ಳುವುದು, ನೆನಪುಗಳಿಗೆ ರೂಪ ಕೊಡುವಾಗ ಅಕ್ಷರಗಳಲ್ಲಿ ಅವನ್ನು ಕರಾರುವಾಕ್ಕು ಎನ್ನುವಂತೆ ಪುನರ್ ಸೃಷ್ಟಿ ಮಾಡುವುದು ಹೇಗೆ ಸಾಧ್ಯ ? ಭೈರಪ್ಪ ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವಾಗ ಕಲ್ಲೇಗೌಡರು ಊರಿನಲ್ಲಿ ಚಂದಾ ಎತ್ತಿಸಿ ಇಪ್ಪತ್ತೆರಡು ರುಪಾಯಿ ಕೊಡಿಸಿದರು. ಮನೆಯ ಬಾಡಿಗೆ ಮೂರು ರುಪಾಯಿ ಇತ್ತು… ಮೊಡವೆಯನ್ನು ಹಿಸುಕಿಕೊಂಡು ಅದು ಕೀವು ತುಂಬಿದ ಗುಳ್ಳೆಯಾಗಿ ಜ್ವರ ಹಿಡಿದು ಮಲಗಿದ್ದಾಗ ನೆರೆಮನೆಯ ಚೆಲುವಮ್ಮ ಏನು ಅಡುಗೆ ಮಾಡಿ ಹಾಕಿದ್ದರು- ಎಂದೆಲ್ಲ ಬರೆಯುವುದಕ್ಕೆ ಹೇಗೆ ಸಾಧ್ಯವಾಗುತ್ತದೆ? ಒಂದು ತಿಂಗಳ ಹಿಂದಿನ ಘಟನೆಗಳನ್ನು ನೆನೆಯುವಾಗಲೇ ನನಗೆ ಎಲ್ಲವೂ ಕಲಸು ಮೇಲೋಗರವಾಗಿ ಸ್ಪಷ್ಟತೆ ಸಿಕ್ಕದೆ ಹೋಗುತ್ತದೆ.
ವಿವರಗಳಿಗಿಂತ ಹೆಚ್ಚಿನ ಸೋಜಿಗ ಇರುವುದು, ಈ ಆತ್ಮಕತೆಗಳಲ್ಲಿನ ಪಾತ್ರಗಳ ಸಂಭಾಷಣೆಯಲ್ಲಿ. ಭೈರಪ್ಪ ಮೈಸೂರಿನಲ್ಲಿ ಹೈಸ್ಕೂಲು ಓದುವಾಗ ಗೆಳೆಯ ಚಂದ್ರುವಿನ ಜೊತೆ ಗರಡಿಗೆ ಹೋಗಿ ಕಾಚ ಕಟ್ಟಿ ದಂಡ ಬಸಿಗೆ ತೆಗೆಯುತ್ತಿದ್ದುದನ್ನು ಗರಡಿಯ ಉಸ್ತಾದರು ಒಮ್ಮೆ ನೋಡುತ್ತಾರೆ. ಭೈರಪ್ಪನವರ ಬಗ್ಗೆ ವಿಚಾರಿಸಿದಾಗ ಚಿಕ್ಕಣ್ಣ ಈತ ಶಾಲೆಯಲ್ಲಿ ಒಳ್ಳೆ ಡಿಬೇಟರ್ ಎಂದು ಹೊಗಳುತ್ತಾನೆ ಅದಕ್ಕೆ ಪೈಲ್ವಾನರು ಮುಖ ಹುಳ್ಳಗೆ ಮಾಡಿಕೊಂಡು “ಖುರಾಕ್ ಏನು ಮದಲು ಹೇಳು” ಎಂದು ಕೇಳುತ್ತಾರೆ.
“ವಾರಾನ್ನ. ಎಲ್ಡು ದಿನ ಅನಾಥಾಲಯ, ನಾಕುದಿನ ಕರ್ನಾಟಕ ಹಾಸ್ಟಲು, ಬೆಳಗ್ಗೆ ಸಂಜೆ. ಬಡ ಉಡುಗ” ಎಂದು ಚಂದ್ರು ಹೇಳುತ್ತಾನೆ.
“ಪುಳಚಾರು.”
“ಹೌದು, ಬ್ರಾಹ್ಮಣರು”
“ನಿನ್ನ ದೋಸ್ತೀನ ಸಾಯಿಸಬೇಕು ಅಂತ ಮಾಡಿದೀಯ? ಸರಿಯಾಗಿ ಖುರಾಕ್ ಇಲ್ದೆ ಸಾಮು ಮಾಡಿದರೆ ಕ್ಷಯಾ ತಗಲಿಕತ್ತದೆ, ಟಿಬಿ, ಸಾನಿಟೋರಿಯಂ ಖಾಯಲಾ. ದಿನಾ ಎಲ್ಡು ಸೇರು ಆಲಿ, ಅರ್ದ ಸೇರು ತುಪ್ಪ, ಒಂದೊಂದು ಬೊಗಸೆ ಬಾದಾಮಿ, ದ್ರಾಕ್ಷಿ ಪಿಸ್ತಾ, ಕಲ್ಲು ಸಕ್ಕರೆ ಗೋಧಿ ರೊಟ್ಟಿ, ತಿಳೀತಾ, ತಿನ್ನೂ ಜಾತಿಯಾದರೆ ಕೋಳಿ, ತಿಳೀತಾ?” ಎನ್ನುತ್ತಾರೆ.
ಹೀಗೆ ನಡೆದ ಸಂಭಾಷಣೆಯನ್ನು ನೆನಪಿನಿಂದ ನಿಖರವಾಗಿ ಬರೆಯುವುದಕ್ಕೆ ಸಾಧ್ಯವೇ ಇಲ್ಲ. ಹಾಗಾದರೆ ಇವನ್ನು ಹೇಗೆ ಬರೆಯುತ್ತಾರೆ? ನೆನಪಿನಲ್ಲಿರುವ ಸನ್ನಿವೇಶವನ್ನು ಅಸ್ಥಿಯಾಗಿರಿಸಿಕೊಂಡು ಕಲ್ಪನೆಯಲ್ಲಿ ಮಾಂಸ ಮಜ್ಜೆ ತುಂಬುತ್ತಾ ಹೋಗುತ್ತಾರೆಯೇ? ಡೈರಿಗಳಲ್ಲಿ ವಿಸ್ತೃತವಾಗಿ ದಾಖಲಾಗದೆ ಇರುವ ವಿದ್ಯಮಾನಗಳನ್ನು ನಿರೂಪಿಸುವಾಗ ಅವುಗಳಲ್ಲಿ ವಾಸ್ತವದ ಅಸ್ಥಿ ಎಷ್ಟು , ಕಲ್ಪನೆಯ ಮಾಂಸ ಮಜ್ಜೆ ಎಷ್ಟು ಎಂದು ಹೇಗೆ ತಿಳಿಯಲು ಬರುತ್ತೆ?
ಭೈರಪ್ಪನವರ ಸ್ಕೂಲು ದಿನಗಳ ನೆನಪಿನಲ್ಲೇ ನಿಂತಿದೆ ನನ್ನ ಓದು. ಶಾಲೆಯಲ್ಲಿ ಅತ್ಯುತ್ತಮ ಡಿಬೇಟರ್ ಎಂದು ಅವರು ಕೀರ್ತಿ ಗಳಿಸಿದ್ದು, ನಗರ ಹಾಗೂ ಜಿಲ್ಲಾ ಮಟ್ಟದಲ್ಲಿ ಚರ್ಚಾ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಿದ್ದುದನ್ನು ಓದುವಾಗ ಅಪ್ರಯತ್ನಪೂರ್ವಕವಾಗಿ “ಭೈರಪ್ಪ ಒಬ್ಬ ಒಳ್ಳೆಯ ಡಿಬೇಟರ್” ಎಂದು ಹೇಳಿದ್ದ ಅನಂತಮೂರ್ತಿಯರ ಮಾತು ನೆನಪಾಗಿ ನಗೆಯುಕ್ಕಿತು.
* * * * * * * *
ಚಿತ್ರಕೃಪೆ : shopmania.in
ಭೈರಪ್ಪನವರ ವಿರೋಧಿ ಗುಂಪಿಗೆ ಹೊಸ(?) ಸೇರ್ಪಡೆ 🙂
ಭೈರಪ್ಪನವರು ತಮ್ಮ ನೆನಪಿನಂಗಳದಿಂದ ಹೆಕ್ಕಿ ತೆಗೆದು ಬರೆದರೆ ಯಾಕೋ ವಿಚಾರವಾದಿಗಳಿಗೆ ಅನುಮಾನವೆ? ನಿಮಗೆ ತಿಂಗಳ ಹಿಂದೆ ನಡೆದ ಘಟನೆ ಕಲಸುಮೇಲೋಗರವಾಗಿ ಕಂಡರೆ ಅದು ನಿಮ್ಮ ಹಣೆಬರಹ. ನಿಮ್ಮ ನೆನಪಿನ ಶಕ್ತಿ ಯಾವ ಮಟ್ಟದು ಎಂದು ತೋರಿಸುತ್ತದೆ;) ಅದಕ್ಕೂ ಭೈರಪ್ಪನವರ ನೆನಪಿನ ಶಕ್ತಿಗೂ ಯಾಕೆ ಹೆಣೆದು ತರುತ್ತೀರ? ಅನಂತಮೂರ್ತಿ ಅನ್ನುವ ಒಬ್ಬ ಬಹುರೂಪಿ(ಕವಿ?, ರಾಜಕಾರಣಿ, ವಿಚಾರವಾದಿ, ಇತ್ಯಾದಿ..) ಡಿಬೇಟರ್ ಅಂದ ಮಾತ್ರಕ್ಕೆ ಜನ ನಂಬಲ್ಲ ಬಿಡೀ, ಅದಕ್ಕೆ ಬ್ಭೈರಪ್ಪನವರಿಗಿರುವ ಅಪಾರ ಅಭಿಮಾನಿಗಳೆ ಸಾಕ್ಷಿ. ಯಾವ ಲಾಭಿ ನಡೆಸದೆ ಸಿಕ್ಕ ಪ್ರಶಸ್ತಿಗಳೆ ಸಾಕು!!
yes, suprith u r right. its not possible to recall the exact words spoken sometime back..and to recollect them and reproduce them is impossible. i do respect bhyrappa. but here his imagination has worked.
ನನ್ನ ಅಮ್ಮನಿಗಿರುವಶ್ಟು ಜ್ನಾಪಕ ಶಕ್ತಿ ನನಗಿಲ್ಲವಲ್ಲಾ ಎಂದು ಕೊಳ್ಳುತ್ತಿದ್ದೆ, ಆದರೆ ಸುಪ್ರೀತ್ ಅವರಿಗಿಂತ ವಾಸಿ ಎಂದು ಈಗ ತಿಳಿದು, ಸಂತೋಷವಾಗುತ್ತಿದೆ.
ನನಗೆ ಬಾಲ್ಯ್ದದ ಎಷ್ಟೋ ಸನ್ನಿವೇಶಗಳು ಸಂಭಾಶಣೆಗಳು ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ, ಇನ್ನು ಭೈರಪ್ಪನವರಂತ ಮಹಾನ್ ಲೇಖಕರಿಗೆ ಇಲ್ಲದೇ ಇರುತ್ತದೆಯೋ?
ನನ್ನ ಅಮ್ಮನಿಗೆ ಈಗ ೬೨ ವರ್ಷ ವಯಸ್ಸು, ಅವರು ತಮ್ಮ ಬಾಲ್ಯದ ಸನ್ನಿವೇಶಗಳನ್ನೂ ಸಂಭಾಷಣೆಯನ್ನೂ ಎಷ್ತು ಚೆನ್ನಾಗಿ ವಿವರಿಸುತ್ತಾರೆ ಗೊತ್ತೇ? ಅಷ್ಟೇ ಅಲ್ಲ ಅವರಿಗೆ ಒಂದನೇ ತರಗತಿಯಲ್ಲಿ ಕಲಿತ ಪದ್ಯಗಳು ಈಗಲೂ ಸುಲಲಿತವಾಗಿ ಹಾಡಲು ಬರುತ್ತವೆ.
ಮಹಾತ್ಮ ಗಾಂಧೀಜಿ ಕೂಡ ಆತ್ಮಕಥೆ ಬರೆದಿದ್ದಾರೆ, ಹಾಗಾದರೇ ಅವರೂ ಎಲ್ಲಾ ಸುಳ್ಳು ಸುಳ್ಳೇ ಬರೆದಿದ್ದಾರೆ ಎಂದು ನಿಮ್ಮ ಅನಿಸಿಕೆಯೇ?
ಬೀ.ಚಿ. ಅವರ ಭಯಾಗ್ರಫಿ?
ಆತ್ಮಕಥೆಗಳನ್ನು ಬರೆಯುವ ತಾಕತ್ತು ಎಲ್ಲರಿಗೂ ಇರುವುದಿಲ್ಲ, ಏನೋ ನಮ್ಮ ಕನ್ನಡದಲ್ಲೂ ಮತ್ತೊಂದು ಆತ್ಮ ಕಥೆ ಬಂದಿರುವುದು ನಮ್ಮ ಪುಣ್ಯ. ಕೊಂಡು ತಂದು ಓದೋಣ.
ಭಿತ್ತಿ ಯ ಬಗ್ಗೆ ಬರೆದು ತಿಳಿಸಿದಕ್ಕೆ ಧನ್ಯವಾದಗಳು ಸುಪ್ರೀತ್ ಅವರಿಗೆ.
ಆತ್ಮಕಥೆಗಳ ಕುರಿತು ಅಟಲ್ ಬಿಹಾರಿ ವಾಜಪೇಯಿ ಹೇಳಿದ ಮಾತು- ನನಗೆ ಸತ್ಯ ಹೇಳಲು ಮನಸ್ಸಿಲ್ಲ. ಸುಳ್ಳನ್ನು ಬರೆಯುವುದಿಲ್ಲ !
ಭೈರಪ್ಪ ಮಾತ್ರವಲ್ಲ ಎಲ್ಲರ ಆತ್ಮಕಥೆಗಳನ್ನು ಈ ನೆಲೆಯಲ್ಲಿ ಗ್ರಹಿಸಿ. ಗಾಂಧೀಜಿ ಒಬ್ಬರು ಅಪವಾದ ಆಗಬಲ್ಲರೇನೋ. ನೀವು ಮೂರ್ತಿ ಮಾತನ್ನು ನೆನಪಿಸಿಕೊಂಡಿದ್ದೀರಿ. ಅವರ ಹೇಳಿದ್ದು ಶೇ. 100ರಷ್ಟು ಸತ್ಯ, ಅದೇ ಮಾತು ಅವರ ಪಾಲಿಗೆ ಶೇ. 200 ಸತ್ಯ. ಹಾಗಾಗಿ ಅಪ್ರಾಮಾಣಿಕತೆ, ಸುಳ್ಳು ಬರೆದು, ಅದನ್ನು ನಂಬಿಸುವುದರಲ್ಲಿ ಮುರ್ತಿ ಎಲ್ಲರಿಗಿಂತ ಒಂದು ಕೈ ಮೇಲೆ !
ಮೂರ್ತಿಗಿಂತ ಭೈರಪ್ಪ ಡಿಬೇಟ್ ಎಷ್ಟೋ ವಾಸಿ !
ಪಾರ್ವತಿ ಚೀರನಹಳ್ಳಿ
-ಒಂದು ತಿಂಗಳ ಹಿಂದಿನ ಘಟನೆಗಳನ್ನು ನೆನೆಯುವಾಗಲೇ ನನಗೆ ಎಲ್ಲವೂ ಕಲಸು ಮೇಲೋಗರವಾಗಿ ಸ್ಪಷ್ಟತೆ ಸಿಕ್ಕದೆ ಹೋಗುತ್ತದೆ.-
ಏನ್ ಮಾತು, ಆಹಾ!
‘ನನಗೆ ಕಾಲು ತಟ್ಟೆ ಉಂಡರೆ ಗ್ಯಾಸ್ಟ್ರಿಕ್ ಆಗುತ್ತೆ, ಆ ವಯ್ಯ ತಟ್ಟೆ ತುಂಬಾ ತಿಂತಾನೆ ಅಂತಿರಲ್ಲ, ಸಾಧ್ಯಾನೆ ಇಲ್ಲ!’
ಅಂದಗಾಯ್ತು!!
ಇನ್ಮುಂದೆ, ಆತ್ಮ ಕಥೆಗಳಲ್ಲಿ ಒಂದು ಪಾತ್ರದ ಮಾತು ಮುಗಿದ ನಂತರ ಹೀಗೆಯೇ ಏನೇನೊ ಹೇಳಿದ್ರು ಎಂದು ಬರೆಯುವುದು ಒಳಿತು. ಲೇಖಕರು ಇಂತಹ ಕರಾರುವಾಕ್, ಬುದ್ಧಿವಂತಿಕೆ ತುಂಬಿ ತುಳುಕುವ ಪ್ರಶ್ನೆಗಳಿಂದ ಒಚಾವ್ ಆದ್ರೂ ಆಗ್ತಾರೆ.
ಒಂದು ತಿಂಗಳು ಹಿಂದೆ ನಡೆದಿದ್ದೆ ನೆನಪು ಸರಿ ಇಲ್ಲ ಅಂದ ಮೇಲೆ, ಮಹನೀಯರ್ಉ, ಪರಿಕ್ಷೆಯಲ್ಲ್ಲಿ ಹೇಗೆ ಪಾಸು ಮಾಡಿದರೋ , 🙂
ಇನ್ನು ಮುಂದೆ ಆತ್ಮಕಥೆ ಬರೆದವರಲ್ಲ ಮಾನ್ಯ ಸುಪ್ರೀತರ ಮುಂದೆ ದಾಖಲೆ ಒಪ್ಪಿಸಿ ಇದು ಹೀಗೆಯೆ ಎಮ್ಡು ಅನುಮತಿ ಪಡೆದು ಆನಂತರ ಅದನ್ನು ಬಿಡುಗಡೆ ಮಾಡಬೇಕೇನೊ!!!
ನಮಗೆ ಆಗದೇ ಇದ್ದದ್ದು ಯಾರಿಗೂ ಆಗುವುದೇ ಇಲ್ಲ ಎಂದು ತಿಳಿಯಬೇಕಾಗಿಲ್ಲ. 🙂
ನಮ್ಮಂತಹ ಸಾಮಾನ್ಯರಿಗೇ ಬಾಲ್ಯದ ಘಟನೆಗಳು ಮಾತುಗಳ ಸಮೇತ ನೆನಪಿರುತ್ತವೆ. ಸುಖದ ಜೀವನಕ್ಕಿಂತ ಕಷ್ಟದ ದಿನಗಳು ಇನ್ನೂ ಚೆನ್ನಾಗಿ ನೆನಪಿರುತ್ತವೆ. ಅಂದಮೇಲೆ ಭೈರಪ್ಪನವರಿಗೆ ನೆನಪಿರುವುದರಲ್ಲಿ ಅಥವಾ ಅದನ್ನು ಅವರು ಬರೆದಿರುವುದರಲ್ಲಿ ಯಾವುದೇ ಅನುಮಾನ ಅಥವಾ ಉತ್ಪ್ರೇಕ್ಷೆಗೆ ಅರ್ಥವಿಲ್ಲ.
ಮದುವೆ ಆಗಿ ಒಂದು ತಿಂಗಳ ನಂತರ ಮದುವೆಯ ಘಟನೆಗಳು, ಅಲ್ಲಿನ ಜನ, ಅತ್ತೆ ಮಾವ, ಇವೂ ಕೂಡ ಕಲಸು ಮೇಲೋಗರವಾಗಿ ಕಂಡರೆ ಕಷ್ಟ ಕಷ್ಟ!!! 🙂
SLB never wrote to please a group of people… never sought any returns for his work… never lobbied for awards and vice chancellor post… Never wrote without studying and experiencing it… Never commented to barking ones… he returned the AWARD money and asked them to consider as deposit money to help the needy people…
Please dont compare SLB with these selfish and corrupt people… (so called Buddijeevigalu)
ನಿಮ್ಮ ವಿಚಾರವನ್ನು ಮುಂದಿಡಲು ತರ್ಕದ ಮೊರೆ ಹೋಗಿದ್ದೀರಿ ಎನಿಸುತ್ತದೆ.
ನನಗೆ ಆಗದಿದ್ದರೆ ಯಾರಿಗೂ ಆಗುವುದಿಲ್ಲ ಎನ್ನುವುದು ನಿಮ್ಮ ತರ್ಕದ ತಳಹದಿ ಆಗಿದೆ.
ಮತ್ತು ದೊಡ್ಡ ಹೆಸರು ಮಾಡಿರುವ ಮತ್ಯಾರದೋ ಹೆಸರು ಹೇಳಿ, ಅವರ ಹೇಳಿಕೆಯನ್ನು ನಿಮ್ಮ ತರ್ಕಕ್ಕೆ ಸಮರ್ಥನೆಯಾಗಿ ಬಳಸಿಕೊಂಡು, ನಿಮ್ಮ ಮಾತು ಸರಿ ಎಂದು ಸಾಧಿಸಲು ಪ್ರಯತ್ನಿಸಿದ್ದೀರಿ.
ನಿಮ್ಮ ಮಟ್ಟಿಗೆ ಇದು ಸರಿಯಿರಬಹುದು. ಆದರೆ, ಅನೇಕ ವಿಷಯಗಳು ತರ್ಕಕ್ಕೆ ನಿಲುಕದ್ದು.
ನಮ್ಮ ನೆನಪಿನ ಶಕ್ತಿ ಎಂಬುದು ತರ್ಕಕ್ಕೆ ನಿಲುಕದ್ದು. ತರ್ಕಕ್ಕಿರಲಿ, ವಿಜ್ಞಾನಕ್ಕೇ ಅದನ್ನಿನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಿಲ್ಲ.
ನನಗೆ ನನ್ನ ಬಾಲ್ಯದ ಎಲ್ಲ ಘಟನೆಗಳೂ ನೆನಪಿಲ್ಲದಿರಬಹುದು; ಕೆಲವು ಘಟನೆಗಳು ಮಸಕುಮಸಕಾಗಿ ನೆನಪಿರಬಹುದು.
ಆದರೆ, ನನಗೆ ಬಹಳ ಚಿಕ್ಕವನಿದ್ದಾಗ (ಪ್ರಾಯಶಃ ೨ ಅಥವಾ ೩ ವರ್ಷದವನಿದ್ದಾಗ) ಬಿದ್ದ ಎರಡು ಕನಸುಗಳು ಇಂದಿಗೂ ಸ್ಪಷ್ಟವಾಗಿ ನೆನಪಿದೆ.
ನಾನೊಮ್ಮೆ ಶಾಲೆಯ ಮೈದಾನದಲ್ಲಿ ಕುಸ್ತಿಯಾಡುತ್ತಿದ್ದಾಗ, ನಮ್ಮ ಶಿಕ್ಷಕಿಯೊಬ್ಬರು ತಿಳಿಸಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿದೆ.
ನಾನು ೩ನೆಯ ತರಗತಿಯಲ್ಲಿದ್ದಾಗ ನನ್ನ ತಾಯಿ ನನ್ನನ್ನು ಶಾಲೆಯಿಂದ ಕರೆದುಕೊಂಡು ಹೋಗಲು ಬಂದದ್ದು ತಡವಾದಾಗ, ನನ್ನ ತರಗತಿಯ ಶಿಕ್ಷಕಿ ಹೇಳಿದ ಮಾತುಗಳಿನ್ನೂ ಸ್ಪಷ್ಟವಾಗಿ ಕೇಳಿಸುತ್ತಿದೆ.
ಆದರೆ, ಅದೇ ಶಿಕ್ಷಕಿ ಶಾಲೆಯಲ್ಲಿ ಯಾವ ರೀತಿ ಪಾಠ ಮಾಡುತ್ತಿದ್ದರೆಂಬುದು ಸ್ವಲ್ಪವೂ ನೆನಪಿಲ್ಲ!!
ನನ್ನ ಅಜ್ಜಿಯವರಿಗೆ ೯೮ ವರ್ಷ ವಯಸ್ಸು. ಅವರು ಇಂದಿಗೂ ಅನೇಕ ಹಳೆಯ ನೆನಪುಗಳನ್ನು ಕೆದಕುತ್ತಾ ಇರುತ್ತಾರೆ.
ಅವರಿಗೆ ಕನ್ನಡದ ಗೀತ ರಾಮಾಯಣ ಕಂಠಪಾಠ (ಅದೇ ರೀತಿ ಮಹಾಭಾರತ, ಭಾಗವತ, ದೇವೀ ಭಾಗವತ, ಇತ್ಯಾದಿಗಳನ್ನು ಇಂದಿಗೂ ಹಾಡುತ್ತಾರೆ).
ಒಂದು ವಾರದ ಹಿಂದೆ, ನೀವು ಇದನ್ನು ಎಲ್ಲಿ ಕಲಿತಿರಿ ಎಂದು ಕೇಳಿದಾಗ, ಅವರು ಅದರ ಪೂರ್ಣ ವಿವರಗಳನ್ನು (ಊರಿನ ಹೆಸರುಗಳು, ಯಾರ ಮನೆಯಲ್ಲಿ ಪುಸ್ತಕ ಸಿಕ್ಕಿತು, ಅದನ್ನು ರಾತ್ರೋ ರಾತ್ರಿ ಕುಳಿತು ಬರೆದುಕೊಂಡದ್ದು, ಅಡಿಗೆಯ ಕೆಲಸದಲ್ಲಿದ್ದಾಗ ಬರೆದುಕೊಂಡದ್ದನ್ನು ಪಕ್ಕದಲ್ಲಿಟ್ಟುಕೊಂಡು ಹೇಳಿಕೊಳ್ಳುತ್ತಿದ್ದುದು, ಇತ್ಯಾದಿ) ತಿಳಿಸಿದರು.
ನನ್ನ ಅಜ್ಜಿಯವರು ಶಾಲೆಗೆ ಹೋಗಿಲ್ಲ ಮತ್ತು ಅವರು ಗೀತ ರಾಮಾಯಣವನ್ನು ಕಲಿತದ್ದು ಸುಮಾರು ೭೫ ವರ್ಷಗಳ ಹಿಂದೆ!!
ನಮ್ಮ ಮೆದುಳು ಅತ್ಯಂತ ವಿಚಿತ್ರವಾದ ವಸ್ತು – ಕೆಲವು ಸಂಗತಿಗಳು ಬಹಳ ಸ್ಪಷ್ಟವಾಗಿ ನಮೂದಾಗುತ್ತದೆ. ಕೆಲವು ಸಂಗತಿಗಳು ಬಹು ಬೇಗನೇ ಮರೆತು ಹೋಗುತ್ತದೆ. ಕೆಲವು ಸಂಗತಿಗಳು ಎಷ್ಟೋ ವರ್ಷಗಳ ಹಿಂದೆ ಆದದ್ದು ಪಕ್ಕನೆ ನೆನಪಿಗೆ ಬರುತ್ತದೆ; ಯಾವುದೋ ಸಂಗತಿ ನೆನ್ನೆ ಆಗಿದ್ದೂ ಎಷ್ಟು ಪ್ರಯತ್ನಪಟ್ಟರೂ ನೆನಪಿಗೆ ಬರುವುದಿಲ್ಲ. ನನ್ನ ಕಾಲೇಜಿನ ಎಷ್ಟೊ ಸಹಪಾಠಿಗಳ ಹೆಸರು ಮರೆತು ಹೋಗಿದೆ; ಪ್ರಾಥಮಿಕ ಶಾಲೆಯ ಸಹಪಾಠಿಗಳ ಪ್ರತಿಯೊಬ್ಬರ ಹೆಸರೂ ನೆನಪಿದೆ!!
ಹೀಗಿರುವಾಗ, ಭೈರಪ್ಪನವರು ಬರೆದದ್ದನ್ನು ಅಷ್ಟು ಸುಲಭವಾಗಿ ತೆಗೆದು ಹಾಕಿದ್ದು ಸರಿಯಾಗಲಿಲ್ಲ.
ಮತ್ತು ನಿಮ್ಮ ಮಾತಿಗೆ ಯು.ಆರ್.ಎ ಅವರ ಮಾತನ್ನು ಸೇರಿಸಿಬಿಟ್ಟಿರಿ – ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಆದಂತಾಯಿತು.
ಯು.ಅರ್.ಎ ಅವರು ಭೈರಪ್ಪನವರ ಕುರಿತಾಗಿ ಏನಾದರೂ, ಎಂದಾದರೂ ಒಳ್ಳೆಯ ಮಾತುಗಳನ್ನಾಡಿದ್ದರೆ ತಿಳಿಸಿ!
ಓಹ್..! ಯಥಾ ಪ್ರಕಾರ ಭೈರಪ್ಪನವರ ಅಭಿಮಾನಿ ಪಡೆ ಮುರಕೊಂಡು ಬಿದ್ದಿದೆ.ಸುಪ್ರೀತ್ ಹೇಳಿದ್ದರಲ್ಲಿ ತಪ್ಪೇನಿಲ್ಲ.ಭೈರಪ್ಪನವರ ಬದಲು ಅಮೂ ಬಗ್ಗೆ ಬರೆದಿದ್ರೆ ಇವ್ರಿಗೆ ಖುಷಿ ಆಗಿರೋದು
ಮುರಕೊಂಡು ಬೀಳುವಂತ ತರ್ಕವನ್ನು ಸುಪ್ರೀತ್ ಮುಂದಿಟ್ಟಿಲ್ಲ..ಅವರ ತರ್ಕ ಎಷ್ಟು ಹುರುಳಿಲ್ಲದ್ದು, ಮೂರ್ಖತನದ್ದು ಎಂದು ಯಾರಿಗಾದರೂ ಅರ್ಥ ಆಗತ್ತೆ…ಇವರಿಗೆ short-term memory loss ಆದ್ರೆ ಅದು ಎಲ್ಲರಿಗೂ ಅನ್ವಯಿಸಬೇಕ? ಅದಕ್ಕೂ ಮಿಗಿಲಾಗಿ ಅವರ ಆತ್ಮಕತೆಯಲ್ಲಿನ ನಿದರ್ಶನಗಳು ಸುಳ್ಳು ಎಂದು ತರ್ಕಿಸುವ ಒಂದೇ ಒಂದು ಸಾಲೂ ಬರೆದಿಲ್ಲ..ನನ್ನಜ್ಜಿ(೭೫ ವರ್ಷ) ಈಗಲೂ ಅವರ ಬಾಲ್ಯದ ದಿನಗಳನ್ನು, ಸಂಭಾಷಣೆಗಳನ್ನು, ಆಗಿನ ಕಾಲದಲ್ಲಿ ನಡೆಯುತ್ತಿದ್ದ ಮಾಡುವೆ ಇತ್ಯಾದಿ ಪದ್ದತಿಗಳನ್ನು ಯಥಾವತ್ತಾಗಿ ಚಿತ್ರಿಸುತ್ತಾರೆ. ಇದು ಭೈರಪ್ಪನವರ ಬಗೆಗಲ್ಲ, ಯಾರ ಬಗ್ಗೆ ಬರೆದರೂ ಇಂತಹ ಹಳಸಲು ತರ್ಕಗಳು ಮೂರ್ಖತನದಿಂದ ಕೂಡಿದೆ ಎಂದು ಹೇಳಬಹುದು. ಸುಪ್ರೀತ್ ಆತ್ಮಕತೆಯನ್ನು ನಂಬದಿದ್ದರೆ ನಂಬದೆ ಇದ್ದರಾಯಿತು ಅಷ್ಟೇ. ಆದರೆ ಅದು ಸುಳ್ಳು ಎಂದು prove ಮಾಡಲು ಈ ಹಳಸಲು ತರ್ಕಗಳು ಬೇಕಿತ್ತಾ?
ಅನಂತ ಮೂರ್ತಿ ಅತ್ಮಕಥೆ ಬಗ್ಗೆ ಈ ರೀತಿ ಹೇಳಿದ್ದರೆ ಅವಾಗಲೂ ಇ ತರಹದ ಕಾಮೆಂಟುಗಳೆ ಬರುತ್ತಿದ್ದವು. ಇವರಿಗೆ ೨೨ ಕ್ಕೆ ಏನೋ ಅಗಿಲ್ಲ ಅಂದರೆ ಯಾರಿಗೋ ೪೦ಕ್ಕೆ ಆಗಬಾರದು ಅಂದೇನು ಇಲ್ಲವಲ್ಲ…
ಕುಮಾರ್ ರವರು ಹೇಳಿದ ಹಾಗೆ, ಬಾಲ್ಯದಲ್ಲಿ 24/7 ಕೇಳಿದ, ಮಾಡಿದ ಎಲ್ಲಾ ವಿಷಯಗಳು, ವಸ್ತುಗಳು ನೆನಪಿನಲ್ಲಿರುವುದಿಲ್ಲ ಆದರೆ ಕೆಲವು ಸನ್ನಿವೇಶಗಳು ತುಂಬಾ ಪರಿಣಾಮ ಬೀರಿರುತ್ತವೆ. ಇವನ್ನು ಮರಿಲಿಕ್ಕೆ ಸಾಧ್ಯವಿಲ್ಲ. ನಿಮಗೆ ಬಾಲ್ಯದಲ್ಲಿ ನಡೆದ ಯಾವ ಘಟನೆಯು ನೆನಪಿಲ್ಲ ಎಂದು ಹೇಳಿದರೆ ಯಾರೂ ನಂಬುವುದಿಲ್ಲ. ಮೊದಲು ಕ್ಲಾಸ್/ಕಾಲೇಜ್ ಗೆ ಬಂಕ್ ಹಾಕಿ ನೋಡಿದ ಸಿನಿಮ ಅದಕ್ಕೆ ಹೋಗಿದ್ದ ಸ್ನೇಹಿತರು, ಟೀಚರ್ ಗೆ ರೇಗಿಸಿದ್ದು, ಅವರಿಗೆ ಇಟ್ಟ ಅಡ್ಡ ಹೆಸರುಗಳು, ಇದನ್ನು ಗುಂಪಿನೊಡನೆ ಹೇಳಿ ಆನಂದಿಸಿದ್ದು, ಕ್ಲಾಸಿನಲ್ಲಿ ವದೆ ತಿಂದದ್ದು, ಹೋಂವರ್ಕ್ ಮಾಡದೇ ಬೈಸಿಕೊಂಡದ್ದು…… ಇದು ಯಾವುವೂ ನೆನಪಿಲ್ಲವೇ. ಇದನ್ನೆಲ್ಲಾ ನಾನು ಈಗಲು ಬರೆಯಬಹುದು. ನೆನಪಿರಲಿ ಭೈರಪ್ಪ ನವರು ೧೮-೧೯ ವಯಸ್ಸಿಗೇ ೨-೩ ಕಾದಂಬರಿಗಳನ್ನು ಬರೆದ ವ್ಯಕ್ತಿ. ಅದೂ ಅನುಭವದಿಂದ ಸುತ್ತಮುತ್ತ ಪರಿಸರದಲ್ಲಿ ನೋಡಿದ ಘಟನೆಗಳನ್ನಾಧರಿಸಿದ ಚಿತ್ರಣ.
ಯು.ಅರ್.ಏ. ಬಗ್ಗೆ ಮಾತನಾಡದಿರುವುದೇ ಸೂಕ್ತ.
ಅನಂತ ಮೂರ್ತಿಯನ್ನು ಹೃದಯದಲ್ಲಿಟ್ಟುಕೊಂಡು, ಭೈರಪ್ಪನವರನ್ನು ತಲೆಯಿಂದ ವಿಶ್ಲೇಷಿಸಲು ಹೊರಟರೆ ಹೀಗೆ ಆಗುವುದು. ಆದರೂ ಪೂರ್ವಗ್ರಹಗಳಿಂದ ಹೊರ ಬರದೆ ನರಳಾಡುತ್ತಿರುವುದರ ಧ್ಯೋತಕ. ಅದೇನು ತೆವಲು ಭೈರಪ್ಪನವರನ್ನು ಬಯ್ದ್ರೆ ಬೇಗ ಜನಪ್ರಿಯತೆ ಗಳಿಸಬಹುದೆನ್ನುವ ತವಕ.
ಅನಂತ ಮೂತ್ರಿ ಏನ್ ಹೇಳಿದ್ರೂ ಸರಿ, ಭೈರಪ್ಪ ಏನ್ ಹೇಳಿದ್ರೂ ತಪ್ಪು ಎನ್ನುವ ಸಿದ್ದಾಂತಕ್ಕೆ ಜೋತು ಬಿದ್ದವರನ್ನು ನೋಡಿ ನಗೆಯುಕ್ಕಿ ಬರುತಿದೆ.
smt.supreetha avare Bhyrappanavarige ee vayassinalli sullugalannu baredu yaarannu mechchisabeekaagide? Nanu bhyrappanavara pustakagalannu yaava poorvagrahagalliladante odutteno adee reethi U.R.Anantamurthy avara pustakagalannoo saha oduttene. Anathamurthy avaru saha tamma hindina dinagalannu avara sumaaru lekhanagalli karaaruvakkagi jnaapakadallittukondiruvavare. Thaavu U.R.A. avarannu mattomme oduvudu olitu. Nimmaprakaara atmakathe barediruvavarella sullugaararendare aa pattige koneye illavalla! Shivaramakaranta Maasthi D V G Kuvempu Siddalingaih Kumvee Lankesh
U R A………………………
ಪ್ರತಿ ವ್ಯಕ್ತಿಯ ನೆನಪಿನ ಶಕ್ತಿ ಬೇರೆ ಬೇರೆ ಪ್ರಕಾರ ಇರುತ್ತದೆ. ಬಾಲ್ಯದಲ್ಲಿನ ಘಟನೆಗಳು ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದಂತೆ ಉಳಿದಿರುತ್ತವೆ. ಎಲ್ಲರ ನೆನಪಿನ ಶಕ್ತಿಯೂ ಒಂದೇ ರೀತಿ ಇರುವುದಿಲ್ಲ.