ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 15, 2012

3

ಒಂದು ಸುಂದರ ನಗುವಿಗೆ…ಇಷ್ಟು ಸಾಕಲ್ಲವೇ.. ???

by ನಿಲುಮೆ
ಸೀಮಾ ಬುರುಡೆ
ಮನವೇಕೊ ಹಿಂದಿನ ನೆನಪುಗಳ 
ಮೆಲುಕುಹಾಕುತ್ತಿರಲು
ಪ್ರೀತಿಯ ಮಾತುಗಳು ಸೃಷ್ಟಿಸಿದ
ಶಾಂತತೆ ನಗುವ ತರಲು.. ಭಾವಗಳ ಬಾಚಿ ತಬ್ಬಲು
ಇಷ್ಟು ಸಾಕಲ್ಲವೇ??
 
ಮನವೇಕೊ ಸೋತು ಹೈರಾಣವಾಗಿ
ಕಣ್ಣೀರ ಹೊರಹಾಕುತ್ತಿರಲು
ಮೆಲ್ಲನೆ ಕೈ ಹಿಡಿದು ಸಾಂತ್ವನ ಹೇಳಿದ
ನುಡಿಗಳು ಸಮಾಧಾನ ತರಲು …. ಛಲದ ಪಣ ತೊಡಲು
ಇಷ್ಟು ಸಾಕಲ್ಲವೇ ??
 
ಮನವೇಕೊ ಬಗೆ ಬಗೆಯಾಗಿ
ಪರಿಹಾರದ ದಾರಿಯ ಹುಡುಕುತ್ತಿರಲು
ಸುಲಭದ ದಾರಿಯು ಮನದಲಿ ಮೂಡಲು
ಸಣ್ಣನೆಯ  ನಗುವು  ವದನದಲಿ ತೋರಲು…. ಸಾಧನೆಯ ಕಹಳೆ ಮೊಳಗಲು
ಇಷ್ಟು ಸಾಕಲ್ಲವೇ ??
ಮನವೇಕೊ ಪದಗಳ ಜೋಡಿಸಿ
ಕವನವ ಹೊಸೆಯುತ್ತಿರಲು
ಸುಂದರ ಭಾವವು ಮನದಲ್ಲಿ ಪುಟಿದೇಳಲು
ಸಂತೃಪ್ತಿ ಭಾವ ಮೂಡಲು… ಸುಂದರ ಕವನ ರಚನೆಯಾಗಲು
ಇಷ್ಟು ಸಾಕಲ್ಲವೇ ??
ಮುದ್ದು ಕಂದಮ್ಮನ ಎತ್ತಿ
ಮುದ್ದಾಡುತ್ತಿರಲು
ಕೆಳಗೆ ಇಳಿಯ ಬಿಡಲು ಅದು ನಿಮ್ಮ
ಕೊರಳಲಿ ಬರ ಸೆಳೆಯಲು… ಪ್ರೀತಿಯ  ಸೆಲೆ ಪಸರಲು
ಇಷ್ಟು ಸಾಕಲ್ಲವೇ ??
 
ಬಚ್ಚಿಟ್ಟ ಬೇಸರದ ಭಾವನೆಗಳು
ತನ್ನಿಂತಾನೆ ತೆರೆದು ಕೊಳ್ಳುತ್ತಿರಲು
ನವಿರಾದ ಭಾವನೆಗಳ ನರ್ತನದೊಂದಿಗೆ
ಒಂದು ಸಣ್ಣ ಹನಿಯು ಕಣ್ಣ ತೇವ ಮಾಡಲು.. ಪ್ರಪುಲ್ಲ ಮನವು ನಿಟ್ಟುಸಿರು ಬಿಡಲು
 
ಪ್ರೀತಿಯ ಬಯಸಿದ ಮನಕ್ಕೆ
ಇಷ್ಟು ಸಾಕಲ್ಲವೇ ??
******************************************************************
ಚಿತ್ರಕೃಪೆ : ಅಂತರ್ಜಾಲ
Advertisements
Read more from ಕವನಗಳು
3 ಟಿಪ್ಪಣಿಗಳು Post a comment
  1. vishu
    ಮಾರ್ಚ್ 20 2012

    ಚೆನ್ನಾಗಿದೆ….

    ಉತ್ತರ
  2. Ranjitha
    ಸೆಪ್ಟೆಂ 22 2012

    ಬಚ್ಚಿಟ್ಟ ಬೇಸರದ ಭಾವನೆಗಳು
    ತನ್ನಿಂತಾನೆ ತೆರೆದು ಕೊಳ್ಳುತ್ತಿರಲು
    ನವಿರಾದ ಭಾವನೆಗಳ ನರ್ತನದೊಂದಿಗೆ
    ಒಂದು ಸಣ್ಣ ಹನಿಯು ಕಣ್ಣ ತೇವ ಮಾಡಲು.. ಪ್ರಪುಲ್ಲ ಮನವು ನಿಟ್ಟುಸಿರು ಬಿಡಲು

    ಈ ಸಾಲುಗಳು ಅದ್ಭುತವಾಗಿದೆ… ನಿಮ್ಮ ಈ ಕವಿತೆ ತುಂಬಾ ಹಿಡಿಸಿತು.

    ಉತ್ತರ
  3. kicchana geleya sumukha
    ಜನ 19 2013

    super.pa

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments