ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ ಅನಾನಿಮಸ್ ಹ್ಯಾಕರ್ ಗಳು ಭಾರತದಲ್ಲಿ ವಿಫಲರಾಗಿದ್ದೇಕೆ?
– ಆದೇಶ್ ಕುಮಾರ್
ಹೌದು ನನಗೆ ಇನ್ನೂ ನೆನೆಪಿದೆ. ಅದು ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತಿದ್ದ ಕಾಲ. ಆಗ ತಾನೆ ಕೆಲವೊಂದು ದೇಶಗಳಲ್ಲಿ ಹ್ಯಾಕರ್ ಗಳು ಅನಾನಿಮಸ್ (ಅಜ್ಞಾತ) ಎಂಬ ಗುಂಪೊಂದನ್ನು ಕಟ್ಟಿಕೊಂಡು ಹಲವು ದೇಶಗಳ ಸರ್ಕಾರಿ ವೆಬ್ಸೈಟ್ ಗಳಿಗೆ ಲಗ್ಗೆ ಹಾಕಿ ಭ್ರಷ್ಟಾಚಾರವನ್ನು ಕೊನೆಗಾಣಿಸಿ ಎಂಬ ಪೋಸ್ಟ್ ಗಳನ್ನು ಹಾಕುತ್ತಿದ್ದರು.
ಇತ್ತ ನಮ್ಮ ದೇಶದಲ್ಲೂ ಕೂಡ ಭ್ರಷ್ಟಾಚಾರದ ಹೋರಾಟ ತಾರಕಕ್ಕೇರುತ್ತಿದುದ್ದನ್ನು ಕಂಡು ಅದಕ್ಕೆ ಜೊತೆ ನೀಡಲು ಆ ಗುಂಪು ಭಾರತದಲ್ಲೂ ಉದಯಿಸಿತು. ಮೊದಲಿಗೆ ಅದು ತನ್ನ ಕಾರ್ಯಚರಣೆಯನ್ನು ನಮ್ಮ ದೇಶದ ಒಂದು ಸರ್ಕಾರಿ ವೆಬ್ಸೈಟ್ ಅನ್ನು ಹ್ಯಾಕ್ ಮಾಡುವುದರೊಂದಿಗೆ ಪ್ರಾರಂಬಿಸಿತು. ಅದು ಸಾಮಾನ್ಯ ಸರ್ಕಾರಿ ವೆಬ್ಸೈಟ್ ಗಳನ್ನು ಮಾತ್ರ ಹ್ಯಾಕ್ ಮಾಡಿದ್ದರೆ ಅದು ಇನ್ನೂ ಇಲ್ಲೇ ಇರುತಿತ್ತೇನೊ. ಆದರೆ ಅದು ಭಾರತದ ಯಾವೊಬ್ಬ ಪ್ರಜೆಯು ಇಷ್ಟಪಡದ ಕೆಲಸಕ್ಕೆ ಕೈಹಾಕಿತು. ಅಂದರೆ ನಮ್ಮೆಲ್ಲರ ಹೆಮ್ಮೆಯ ಭಾರತ ಸೇನೆಯ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿತು.(ಅದು ಹ್ಯಾಕ್ ಮಾಡಿತೊ ಅಥವಾ ವೆಬ್ಸೈಟ್ ಅನ್ನು ಡೌನ್ ಮಾಡಿತೊ ಇದುವರೆಗೂ ತಿಳಿದಿಲ್ಲ).
ಇದನ್ನು ಯಾವೊಬ್ಬ ಭಾರತೀಯನು ಸಹಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅನಾನಿಮಸ್ ಗುಂಪು ನಡೆಸುತಿದ್ದ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಅದರ ವಿರುದ್ಡ ಟೀಕೆಗಳ ಸುರಿಮಳೆಯಾಯಿತು. ಕೆಲವೊಂದು ಕಾಮೆಂಟುಗಳು ಮತ್ತು ಟ್ವೇಟುಗಳು ಹೀಗಿದ್ದವು:
(ಇವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರಿಸಿದ್ದೇವೆ)
“”ಇದೊಂದು ಖಂಡನೀಯವಾದ ಕಾರ್ಯ. ಸೇನೆಯ ವೆಬ್ಸೈಟ್ ಅನ್ನು ಹ್ಯಾಕ್ ಮಾಡುವುದಕ್ಕೆ ಭಾರತವೇನು ಪಾಕಿಸ್ತಾನವಲ್ಲ.””
“”ತುಂಬಾ ಬೇಜಾರಾಗುತ್ತಿದೆ. ಸೇನೆಗೂ, ಸರ್ಕಾರದ ಭ್ರಷ್ಟಾಚಾರಕ್ಕೂ ಯಾವ ಸಂಬಂಧವಿದೆ??””
“”ಬರುವಾಗ ನಿಮಗೆ ಭವ್ಯ ಸ್ವಾಗತ ನೀಡಿದ್ದೇವೆ. ಈಗ ನಿಮಗೆ ಹೊರ ಹೋಗಲು ಯಾವ ರೀತಿಯ ಸ್ವಾಗತ ನೀಡಬೇಕು?””
ಹೀಗೆ ಅನೇಕರು ತಮ್ಮ ದುಗುಡವನ್ನು ಕೋಪವನ್ನು ಪ್ರದರ್ಶಿಸಿದರು. ಕೊನೆಗೆ ಅನಾನಿಮಸ್ ಗುಂಪು ಸ್ಪಷ್ಟನೆ ನೀಡಬೇಕಾಯಿತು.
ಅದು ತನ್ನ ಸ್ಪಷ್ಟನೆಯಲ್ಲಿ “ನಾವೂ ಕೂಡ ಭಾರತೀಯರೆ. ನಮಗೂ ಭಾರತೀಯ ಸೇನೆಯ ಮೇಲೆ ಅಷ್ಟೇ ಗೌರವವಿದೆ. ಇನ್ನು ಮುಂದೆ ಯಾವುದೇ ವೆಬ್ಸೈಟ್ ಅನ್ನು ಹ್ಯಾಕ್ ಮಾಡಬೇಕೆಂದರೂ ಇಲ್ಲಿ ಕೇಳಿಯೇ ಮಾಡುತ್ತೇವೆ” ಎಂದು ಹೇಳಿಕೊಂಡಿತ್ತು.
ಜನರನ್ನು ಸಮಾಧಾನ ಮಾಡಲು ಆಗದಿದ್ದಾಗ ಮತ್ತೊಮ್ಮೆ “ನಾವು ಸೇನೆಯ ವೆಬ್ಸೈಟಿಂದ ಯಾವುದೇ ಮಾಹಿತಿಗಳನ್ನು ಕದ್ದಿಲ್ಲ. ಕೇವಲ ಒಂದು ಗಂಟೆಯ ಕಾಲ ಡೌನ್ ಮಾಡಲಾಗಿತ್ತು ಅಷ್ಟೆ” ಎಂದು ಹೇಳಿಕೊಂಡಿತು.
ಹೀಗೆ ಮೇಲಿಂದ ಮೇಲೆ ಸ್ಪಷ್ಟನೆ ನೀಡುತ್ತಾ ಹೋಯಿತು. ಆದರೆ ಅದು ಏನು ಮಾಡಿದರೂ ಮೊದಲಿದ್ದ ವಿಶ್ವಾಸವನ್ನು ಪಡೆದುಕೊಳ್ಳಲಾಗಲಿಲ್ಲ. ಮಾರನೆ ದಿನವೆ ಅದರ ಫೇಸ್ ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ಗಳು ಮಾಯವಾಗಿದ್ದವು.
ಮತ್ತೊಮ್ಮೆ ಹೊಸದಾಗಿ ನಾವು ನಿಜವಾದ ಅನಾನಿಮಸ್ ಎಂದು ಹೇಳಿಕೊಂಡು ಫೇಸ್ ಬುಕ್ ಅಕೌಂಟ್ ತೆರೆದ ಗುಂಪೊಂದು ಮಿಲಿಟರಿ ವೆಬ್ಸೈಟ್ ಹ್ಯಾಕಿಗೂ ತನಗೂ ಸಂಬಂಧವಿಲ್ಲವೆಂದು ಹೇಳಿಕೊಂಡಿತು.
ಆದರೆ ಅಂದು ನಾನು ಆಶ್ಚರ್ಯದಿಂದ ಗಮನಿಸಿದ ಸಂಗತಿಯೆಂದರೆ ಭಾರತೀಯರು ಭಾರತ ಸೇನೆಯನ್ನು ಅದೆಷ್ಟು ನಂಬಿದ್ದಾರೆ ಎಂಬುದು ಮತ್ತು ಅದಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾದರೂ ಅದೆಷ್ಟು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದು. ಆ ಪ್ರತಿಕ್ರಿಯೆ ಜಾತಿ, ಮತ, ಪಕ್ಷಗಳನ್ನು ಮೀರಿದುದಾಗಿತ್ತು. ಕೇವಲ ಭಾರತೀಯತೆ ಮಾತ್ರ ಅಲ್ಲಿ ರಾರಾಜಿಸುತಿತ್ತು.
* * * * * * * *
ಚಿತ್ರ ಕೃಪೆ: ಗೂಗಲ್ ಇಮೇಜಸ್
ಕಂಡಿತ ಹೌದು 🙂
ಉತ್ತಮ ಲೇಖನ, ಧನ್ಯವಾದಗಳು…
superb .. wow .. nijakku uttama lekhana. thanku adesh kumar
jeevu
Ellarig Dhanyavadagalu 🙂
:*
ಮಾಡೋದಾದ್ರೆ ಕಾಂಗ್ರೆಸ್ಸಿನದೊ,ಬಿಜೆಪಿಯದೋ ಸೈಟ್ಗೆ ಮಣ್ಣು ಹಾಕ್ಬೇತ್ತು
ಅದನ್ಯಾರು ನೋಡ್ತಾರೆ?! ಸುಮ್ನೆ ಎಲೆಕ್ಷನ್ ಟೈಮ್ಗೇ ಸರಿ ಅವೆಲ್ಲ :p
[[ಭಾರತೀಯರು ಭಾರತ ಸೇನೆಯನ್ನು ಅದೆಷ್ಟು ನಂಬಿದ್ದಾರೆ ಎಂಬುದು ಮತ್ತು ಅದಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾದರೂ ಅದೆಷ್ಟು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದು]] ಭಾರತೀಯ ಸೇನೆ ನಮ್ಮ ವಿಶ್ವಾಸ ಕಾಯ್ದುಕೊಂಡಿದೆ. ಮತ್ತು ಅದು ಮುಂದೂ ಕೂಡ ಕಾಯ್ದುಕೊಳ್ಳುತ್ತದೆ. ಎಂದು ಹಾರೈಸೋಣ.