ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ – ಪ್ರಗತಿಪರರು
– ಡಾ.ಭಾಸ್ಕರ್ ಮಯ್ಯ
ಆಧುನಿಕ ತತ್ವಶಾಸ್ತ್ರದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ. ವೇದಾಂತ ದರ್ಶನಕ್ಕೆ ನೂರಾರು ವ್ಯಾಖ್ಯಾನಗಳಿವೆ. ಆದರೆ ಅವುಗಳಲ್ಲಿ ಪ್ರಮುಖ ಸ್ಥಾನವಿರುವುದು `ಶಾಂಕರ ವೇದಾಂತ’ಕ್ಕೆ. ಆದರೆ, ಶಂಕರರು ವೇದಾಂತ ದರ್ಶನಕ್ಕೆ ವ್ಯಾಖ್ಯಾನ ಬರೆದಿರುವುದು ಭಾವವಾದೀ ದೃಷ್ಟಿಯಿಂದ ಶಂಕರರು ಭಾವವಾದದ ಮೇರು ಶಿಖರ ಎಂಬಲ್ಲಿ ಎರಡು ಮಾತಿಲ್ಲ. ಅವರಿಗೆ ಸರಿಗಟ್ಟುವ ಭಾವವಾಣಿ ದಾರ್ಶನಿಕರುಪಾಶ್ಚಾತ್ಯ ದರ್ಶನ ಶಾಸ್ತ್ರದಲ್ಲಿ ದೊರಕುವುದಿಲ್ಲ. ಆದರೆ, ವಿವೇಕಾನಂದರು ವೇದಾಂತಕ್ಕೆ ವ್ಯವಹಾರಿಕ ರೂಪವನ್ನು ಕೊಟ್ಟರು. ಈ ಬಗೆಯ ವ್ಯಾಖ್ಯಾನ ಕೂಡಾ ತತ್ವಶಾಸ್ತ್ರಕ್ಕೆ ನವನವೀನ.
ಅಗಾಧ ಪ್ರತಿಭೆ
1863ನೆಯ ಇಸವಿ ಜನವರಿ 12 ರಂದು ಕಲ್ಕತ್ತಾದ ಒಂದು ಕ್ಷತ್ರಿಯ ಕುಟುಂಬದಲ್ಲಿ ಜನಿಸಿದ ವಿವೇಕಾನಂದರು ಅಗಾಧ ಪ್ರತಿಭೆಯ ವ್ಯಕ್ತಿ. ಆ ಕಾಲದಲ್ಲಿಯೇ ಬಿ.ಎ. ಶಿಕ್ಷಣ ಮುಗಿಸಿದ ವಿವೇಕಾನಂದರು ( ಮೂಲ ಹೆಸರು ನರೇಂದ್ರನಾಥ) ವಿದ್ಯಾರ್ಥಿ ಜೀವನದಲ್ಲಿ ನಾಸ್ತಿಕರಾಗಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ಅವರ ಚಿಂತನಾ ಕ್ರಮವೇ ಬದಲಾಯಿತು.ರಾಮಕೃಷ್ಣರು ಮಹಾನ್ ಸಂತರಾಗಿದ್ದರೂ ಅನಕ್ಷರಸ್ತರು. ವಿವೇಕಾನಂದರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಪ್ರಖಾಂಡ ಪಂಡಿತರು. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಒಂದೇ ಜೀವನದ ಎರಡು ಮುಖಗಳು ಅಥವಾ ಒಂದೇ ಸತ್ಯದ ಎರಡು ರೂಪಗಳು. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ರಾಮಕೃಷ್ಣರು ಅನುಭೂತಿ ಆದರೆ ವಿವೇಕಾನಂದರು ಅವರ ವ್ಯಾಖ್ಯಾನ ಅಭಿವ್ಯಕ್ತಿ.
ವಿವೇಕಾನಂದರು ಹಾರ್ಬರ್ತ್ ಸ್ಪೆನ್ಸರ್ ಹಾಗೂ ಜಾನ್ ಸ್ಟುವರ್ಟ್ರಮಿಲ್ ಅವರ ಪ್ರೇಮಿಯಾಗಿದ್ದರು. ಶೆಲಿ, ವರ್ಡ್ಸ್ವರ್ತ್ರ ದಾರ್ಶನಿಕತೆ, ಹೆಗಲ್ನ ವಸ್ತುನಿಷ್ಠ ಆದರ್ಶವಾದ ಹಾಗೂ ಫ್ರಾನ್ಸಿನ ರಾಜ್ಯಕ್ರಾಂತಿ ವಿವೇಕಾನಂದರನ್ನು ತೀವ್ರವಾಗಿ ಪ್ರಭಾವಿಸಿತ್ತು.
ವಿವೇಕಾನಂದರು ಕೇವಲ 39 ವರ್ಷಗಳ ಕಾಲ ಜೀವಿಸಿದ್ದರೂ ಅವರ ಸಂದೇಶ ಇವತ್ತಿನ ಕೋಮುವಾದಿ ರಾಜಕೀಯಕ್ಕೆ ಅತ್ಯಂತ ಪ್ರಬಲವಾದ ಶಸ್ತ್ರ. ರಾಮಮೋಹನ್ ರಾಯ್, ಕೇಶವ ಚಂದ್ರ ಸೇನ್, ದಯಾನಂದ ಸರಸ್ವತಿ, ರಾನಡೆ, ಅನಿಬೆಸೆಂಟ್ ಮತ್ತು ರಾಮಕೃಷ್ಣರು ಹದಮಾಡಿದ ನೆಲದಲ್ಲಿ ವಿವೇಕಾನಂದರು ಅಶ್ವತ್ಥದಂತೆ ಬೆಳೆದು ನಿಂತರು. ಇಂದು ಕೋಮುವಾದಿಗಳು ಆ ಅಶ್ವತ್ಥದ ರೆಂಬೆಕೊಂಬೆಗಳನ್ನು ಕಡಿದು ಯೂಪಸ್ಥಂಭ (ಬಲಿಸ್ಥಂಭ)ವನ್ನಾಗಿ ರೂಪಿಸುತ್ತಿದ್ದಾರೆ.
ವಿವೇಕಾನಂದರ ಬಗ್ಗೆ ರವೀಂದ್ರನಾಥ್ ಠಾಗೋರ್ ಹೇಳಿದ ಮಾತು ಅತ್ಯಂತ ಗಮನಾರ್ಹ.ಅವರು ಹೀಗೆಂದಿದ್ದರು “ಯಾರಾದರೂ ಭಾರತವನ್ನು ತಿಳಿದುಕೊಳ್ಳಲು ಇಷ್ಟಪಡುತ್ತಿದ್ದರೆ ಅವರು ಖಂಡಿತವಾಗಿಯೂ ವಿವೇಕಾನಂದರನ್ನು ಓದಲೇಬೇಕು” ಠಾಗೋರರಂತೆ ಡಾ.ರಾಮಧಾರೀಸಿಂಗ್ ದಿನಕರ್ ಅವರ ಪ್ರಕಾರ ಭಾರತೀಯರಲ್ಲಿ ನಿಜವಾದ ಧರ್ಮ ಎಲ್ಲಿಯವರೆಗೆ ಜೀವಂತವಿರುತ್ತದೋ ಅಲ್ಲಿಯತನಕ ವ್ಯಾಸ ವಾಲ್ಮೀಕಿಯರಂತೆ ವಿವೇಕಾನಂದರು ಅತ್ಯಗತ್ಯವಾಗುತ್ತಾರೆ.”
ರೂಢಿ, ಆಡಂಬರ ಮತ್ತು ಬಾಹ್ಯಾಚಾರಗಳಿಂದ ಮೇಲೆದ್ದು ವಿವೇಕಾನಂದರು ಧರ್ಮದ ವಿಶಿಷ್ಟ ವ್ಯಾಖ್ಯೆಯನ್ನು ಮಂಡಿಸಿದರು. ಅದನ್ನೇ ಅವರು ಶಿಕಾಗೋ ಭಾಷಣದಲ್ಲಿ ಸ್ಪಷ್ಟಪಡಿಸಿದ್ದು. ಯುರೋಪ್, ಅಮೇರಿಕಾದಲ್ಲಿ ವಿವೇಕಾನಂದರಿಂದ ಪ್ರಭಾವಿತರಾಗಿ ಅನೇಕರು ಅವರ ಶಿಷ್ಯರಾದರು. ಅವರು ವಿದೇಶಿಯರಿಗೆ ಸಂಯಮ ಮತ್ತು ತ್ಯಾಗದ ಮಹತ್ವವನ್ನು ಸ್ಪಷ್ಟಪಡಿಸಿದರು. ಅಂತೆಯೇ ಅವರ ಧರ್ಮ ಮೀಮಾಂಸೆ ಸ್ಥೂಲವಾಗಿ ಹೀಗಿದೆ.
1. ಧರ್ಮವು ಮನುಷ್ಯನಲ್ಲಿ ಅಡಗಿರುವ `ದೇವತ್ವ’ದ ವಿಕಾಸ. (ಕೋಮುವಾದಿಗಳ ಪ್ರಕಾರ `ರಾಕ್ಷಸತ್ವ’ದ ವಿಕಾಸ)
2. ಧರ್ಮವು ಯಾವುದೇ ಅಂಧವಿಶ್ವಾಸ, ಮೂಢನಂಬಿಕೆಗಳಲ್ಲಿ ಇಲ್ಲ. ಅದು ಯಾವುದೇ ಪುಸ್ತಕಗಳಲ್ಲಿ (ಧರ್ಮಗ್ರಂಥಗಳಲ್ಲಿ) ಇಲ್ಲ. ಅದು ಕೇವಲ ಅನುಭೂತಿಯಲ್ಲಿದೆ. ಧರ್ಮ ಯಾವದೇ ಅಲೌಕಿಕತೆಯಲ್ಲಿ ಇಲ್ಲ. ಅದು ಜೀವನದ ಅತ್ಯಂತ ಸ್ವಾಭಾವಿಕ ತತ್ವ. (ಆದರೆ ಕೋಮುವಾದಿಗಳ ಪ್ರಕಾರ ಅಂಧವಿಶ್ವಾಸದಲ್ಲೇ ಅದು ಅಡಗಿದೆ.ಒಂದೋ ಬಾಬ್ರಿಮಸೀದಿ, ಬಾಬಾಬುಡನ್ಗಿರಿ ದರ್ಗಾದ ಕೆಳಗೆ ಅಡಗಿದೆ.ಇಲ್ಲವೇ ನೂರಾರು, ಸಾವಿರಾರು ಮಸೀದಿಯ ಕೆಳಗೆ ಅಡಗಿಕೊಂಡಿದೆ. ತ್ರಿಶೂಲ, ನಾಮ, ಕೇಸರಿ ಬಾವುಟ ಮತ್ತು ಅಸಹಿಷ್ಣುತೆಯೇ ಇವರ ಧರ್ಮದ ದಿವ್ಯ ಮಂತ್ರ)
3. ಜೀವನ ಮಟ್ಟವು ಎಲ್ಲಿ ಹೀನ ಮಟ್ಟದ್ದಾಗಿರುತ್ತದೋ ಅಲ್ಲಿ ಇಂದ್ರಿಯಗಳ ಆನಂದ ಪ್ರಮುಖವಾಗಿರುತ್ತದೆ. ಊಟದ ಸಮಯದಲ್ಲಿ ತೋಳಗಳು ಮತ್ತು ನಾಯಿಗಳು ಯಾವ ಉತ್ಸಾಹವನ್ನು ತೋರುತ್ತವೆಯೋ ಅಂತಹ ಉತ್ಸಾಹವನ್ನು ಮನುಷ್ಯನು ತೋರುವುದಿಲ್ಲ. (ಆದರೆ, ಕೋಮು ವಾದಿಗಳು ಊಟ ಮಾಡುವುದರಲ್ಲಿ, ಹಲ್ಲೆ ಮಾಡುವುದರಲ್ಲಿ, ಗ್ಯಾಂಗ್ ರೇಪ್ ಮಾಡುವುದರಲ್ಲಿ ಅತ್ಯಂತ ಉತ್ಸಾಹ ತೋರುತ್ತಾರೆ. ನಾಯಿಗಳೂ ಮತ್ತು ತೋಳಗಳು ಮಾತ್ರ ಎಂದಿಗೂ ಇಂತಹ ಇಂದ್ರಿಯ ವಿಕಾರಗಳಿಗೆ ಒಳಗಾಗುವುದಿಲ್ಲ!)
4. ಮನುಷ್ಯನ ಆನಂದಕ್ಕೆ ಆಧಾರ ವಿಚಾರ, ಕಲೆ, ದರ್ಶನ ಮತ್ತು ವಿಜ್ನಾನ (ಕೋಮುವಾದಿಗಳಿಗೆ ವಿಚಾರ ಬೇಡವೇ ಬೇಡ. ಅವರ ವೈಚಾರಿಕತೆಯ ಆ ಜನ್ಮ ವೈರಿಗಳು, ಪಿ.ಎನ್.ಜಾ ರವರ ಪುಸ್ತಕವನ್ನು ಪ್ರತಿಬಂಧಿಸಲಾಯಿತು.ಪುಸ್ತಕವನ್ನು ದೇಶದೊಳಗೆ ಬರಲಿಕ್ಕೇ ಬಿಡಲಿಲ್ಲ. `ವಾಟರ್’ ಸಿನೆಮಾದ ಮೇಲೆ ಗಲಭೆ ಎಬ್ಬಿಸಲಾಯಿತು. ಹುಸೈನ್ (ಎಮ್.ಎಫ್) ಚಿತ್ರಗಳನ್ನು ಸುಡಲಾಯಿತು. ಭಾರತಕ್ಕೆ ಬರದಂತೆ ಅವರನ್ನು ಓಡಿಸಲಾಯಿತು. ಕೋಮುವಾದಿಗಳಿಗೆ ವೇದ, ಉಪನಿಷತ್, ಷಡ್ದರ್ಶನ ಯಾವುದೂ ಬೇಡ. ಗೋಳ್ವಾಲ್ಕರ್ ದರ್ಶನ ಒಂದಿದ್ದರೆ ಸಾಕು. ಕೋಮುವಾದಿಗಳು ವೈಜ್ನಾನಿಕ ಮನೋಧರ್ಮದ ಪರಮಶತ್ರುಗಳು. ಆದರೆ ಅವರಿಗೆ ವಿಜ್ನಾನದ ಲಾಭಗಳೆಲ್ಲವೂ ಬೇಕು!)
5. ವಿವೇಕಾನಂದರು ಭೋಗವಾದಿ ಅಮೇರಿಕನ್ನರಿಗೆ `ನಿವೃತ್ತಿ ಮಾರ್ಗ’ವನ್ನು ಉಪದೇಶಿಸಿದ್ದರೆ, ಭಾರತೀಯರಿಗೆ `ಪ್ರವೃತ್ತಿ ಮಾರ್ಗ’ವನ್ನು ಬೋಧಿಸಿದರು. (ಕೋಮುವಾದಿ ಸ್ವಾಮಿಗಳು ಸ್ವತ: ಭೋಗವಾದಿಗಳಾಗಿರುತ್ತಾ ಠಕ್ಕು ನಿವೃತ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಬೋಧಿಸುತ್ತಿದ್ದಾರೆ) ಭಾರತದಲ್ಲಿ ದಾರಿದ್ರ್ಯದ್ದೇ ಸಾಮ್ರಾಜ್ಯ. ಇಲ್ಲಿಯ ಜನ ಹಸಿವಿನಿಂದ ಸಾಯುತ್ತಿದ್ದಾರೆ. ಇವರಿಗೆ ನಿವೃತ್ತಿ ಮಾರ್ಗವನ್ನು ಉಪದೇಶಿಸುವುದೆಂದರೆ ವಿಷಪ್ರಾಶನ ಮಾಡಿಸಿದಂತೆ ಎಂದು ವಿವೇಕಾನಂದರು ಎಚ್ಚರಿಸಿದರು. (ಆದರೆ ನಮ್ಮ ಕೋಮುವಾದಿಗಳಿಗೆ ಯಾವ ಮಾರ್ಗವೂ ಇಲ್ಲ! ಅವರಿಗೆ ಇರುವುದು ಒಂದೇ ಮಾರ್ಗ. ಅದು ಬರ್ಬರ ವಿಕೃತ ಮನೋವೃತ್ತಿಯ ಗೂಂಡಾ ಮಾರ್ಗ!)
6. ವಿವೇಕಾನಂದರೆಂದರು ಪಕ್ಕದ ಮನೆಯವರು ಉಪವಾಸವಿರುವಾಗ ದೇವಸ್ಥಾನದಲ್ಲಿ ದೇವರಿಗೆ ಭೋಗ ಕೊಡುವುದು ಪುಣ್ಯವಲ್ಲ, ಪಾಪ (ಕೋಮುವಾದಿಗಳ ಪ್ರಕಾರ ಪಕ್ಕದ ಮನೆಯವರು ಮಾತ್ರವಲ್ಲ; ಇಡೀ ದೇಶದ ಬಡಜನತೆ ನಿರ್ನಾಮವಾಗಲಿ; ಏನೇನೂ ತೊಂದರೆಯಲ್ಲ. ಆದರೆ ದೇವರ ಹೆಸರಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ದೊಂಬಿ ಎಬ್ಬಿಸಬೇಕು. ಹೊಟ್ಟೆಯಲ್ಲಿ ಕೂಳಿಲ್ಲದಿದ್ದರೂ ಚಿಂತಿಲ್ಲ, ಮೂಗಿನಿಂದ ತಲೆಯವರೆಗೆ ನಾಮ ಎಳೆದುಕೊಂಡು ತ್ರಿಶೂಲದಿಂದ ಇರಿಯಬೇಕು. ಬಡಮುಸ್ಲೀಮರಿಗೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಚಿಂತಿಲ್ಲ; ಆದರೆ, ಆತ `ಅಲ್ಲಾ ಹೋ ಅಕ್ಬರ್’ ಎನ್ನುತ್ತಾ `ಅಪಾಯ’ದಲ್ಲಿರುವ ಇಸ್ಲಾಮನ್ನು ರಕ್ಷಿಸಬೇಕು.)
7. ಮನುಷ್ಯರು ದುರ್ಬಲರೂ, ಕ್ಷೀಣರೂ ಆಗಿರುವಾಗ ಹೋಮಹವನಗಳಲ್ಲಿ ತುಪ್ಪವನ್ನು ಸುಡುವುದು ಅಮಾನುಷ ಕರ್ಮವೆಂದು ವಿವೇಕಾನಂದರು ಹೇಳಿದರು. (ಕೋಮುವಾದಿಗಳು ಕಪೋಲಕಲ್ಪಿತ (ಏಕೆಂದರೆ ಯಾವ ಶಾಸ್ತ್ರಗಳಲ್ಲೂ ಈ ಯಜ್ನವಿಲ್ಲ) ರಾಮಯಜ್ನವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ನಡೆಸುತ್ತಾ ಇರುತ್ತಾರೆ. ಹಿಂದೂ-ಮುಸ್ಲಿಂ ಶ್ರದ್ಧಾಕೇಂದ್ರ ಬಾಬಾಬುಡನ್ಗಿರಿಯಲ್ಲಿ ಸಮಾಧಿಗಳಿರುವ ಜಾಗದಲ್ಲಿಯೂ ಇವರು ಯಜ್ನ, ಯಾಗ, ಹೋಮಹವನ ನಡೆಸುತ್ತಾರೆ!)
8. `ಭಾರತದ ಒಂದೇ ಆಶಾಕಿರಣ ವೆಂದರೆ ಇಲ್ಲಿಯ ಧರ್ಮನಿಷ್ಠ ಬಡಜನತೆ. ಶ್ರೀಮಂತ ಜನರು ದೈಹಿಕವಾಗಿಯೂ ನೈತಿಕವಾಗಿಯೂ ಸತ್ತು ಹೋಗಿದ್ದಾರೆ. (ಆದರೆ, ಕೋಮುವಾದಿಗಳಿಗೆ ಶ್ರೀಮಂತರೇ ಆಧಾರ. ಎನ್ಆರ್ಐಗಳ ದುಡ್ಡೆಂದರೆ ಇವರಿಗೆ ಪ್ರಾಣ. ಇವರ ಕಿರಾತಕರ್ಮಗಳಿಗೆ ವಿದೇಶಗಳಿಂದ ಹಣದ ಹೊಳೆ ಹರಿದುಬರುತ್ತದೆ)
9. ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಧರ್ಮ ಪ್ರಚಾರ ಮಾಡುವ ಕ್ರೈಸ್ತ ಮಿಶನರಿಗಳ ಬಗೆಗೆ ವಿವೇಕಾನಂದರು ಹೀಗೆಂದಿದ್ದರು.
ನೀವು ಮೂರ್ತಿಪೂಜಕರ ಆತ್ಮವನ್ನು ರಕ್ಷಿಸಲು ಭಾರತಕ್ಕೆ ಧರ್ಮ ಪ್ರಚಾರಕರನ್ನು ಕಳುಹಿಸುತ್ತೀರಿ. ಚರ್ಚುಗಳ ಮೇಲೆ ಚರ್ಚುಗಳನ್ನು ಕಟ್ಟಿಸುತ್ತೀರಿ. ಆದರೆ ಈ ಮೂರ್ತಿಪೂಜಕರ ಹಸಿವಿನ ಜ್ವಾಲೆಯನ್ನು ತಣಿಸಲು ನೀವೇನು ಮಾಡಿದ್ದೀರಿ? ಭಯಾನಕ ಕ್ಷಾಮದಲ್ಲಿ ಭಾರತದ ನಿವಾಸಿಗಳು ಕೂಳಿಲ್ಲದೆ ಸತ್ತರು. ನಿಮ್ಮಿಂದ ಏನೂ ಮಾಡಲಾಗಲಿಲ್ಲ. ಪೂರ್ವದ ಸಂಕಟಗ್ರಸ್ತ ಜನರಿಗೆ ಬೇಕಾಗಿರುವುದು ಧರ್ಮವಲ್ಲ; ರೊಟ್ಟಿ. ಏಶಿಯಾದವರ ಹತ್ತಿರ ಧರ್ಮ ಸಾಕಷ್ಟಿದೆ. ಯಾವ ಜನ ಸಮುದಾಯವು ಹಸಿವಿನಿಂದ ಒದ್ದಾಡುತ್ತಿದೆಯೋ ಅದರ ಎದುರಿಗೆ ಧರ್ಮವನ್ನು ಉಣಬಡಿಸುವುದು ಅವರಿಗೆ ಮಾಡುವ ಅಪಮಾನ. ಯಾರು ರೊಟ್ಟಿ ಚೂರಿಗಾಗಿ ಪರಿತಪಿಸುತ್ತಿದ್ದಾರೋ ಅವರ ಕೈಗೆ ಧರ್ಮದರ್ಶನದ ಗ್ರಂಥಗಳನ್ನು ಕೊಡುವುದು ಅವರನ್ನು ಕ್ರೂಡ ವ್ಯಂಗ್ಯಕ್ಕೆ ಗುರಿಪಡಿಸಿದಂತೆ. (ಆದರೆ, ಕೋಮುವಾದಿಗಳು ದೇಶ ಬಡತನದಿಂದ ಸಾಯುತ್ತಿರುವಾಗ `ರಾಮರಸಾಯನ’ ವೆಂಬ ಅಮಲು ಪದಾರ್ಥವನ್ನು ಜನಸಾಮಾನ್ಯರಿಗೆ ನಿರಂತರ ಕುಡಿಸುತ್ತಾ ಬಂದರು. ಬಾಬರಿ ಮಸೀದಿ ಧ್ವಂಸವಾಯಿತು. ಆದರೆ, ಹೊಟ್ಟೆಯ ಪ್ರಶ್ನೆ, ಕುಡಿಯುವ ನೀರಿನ ಪ್ರಶ್ನೆ, ಸೂರಿನ ಪ್ರಶ್ನೆ ಯಾರೂ ಎತ್ತಲಿಲ್ಲ. ಆದಿವಾಸಿಗಳ ಕೈಗೆ ತ್ರಿಶೂಲ ಕೊಟ್ಟರು, ಬದುಕುವ ದಾರಿ ಕೊಡಲಿಲ್ಲ.)
ಸರಕಾರಿ ಸ್ವಾಮ್ಯದ ಕಂಪನಿಗಳನ್ನು ದಿನನಿತ್ಯ ಮಾರಿದರು. ಗಣಿಕೊರೆದು ಕೋಟ್ಯಾಧಿಪತಿಗಳಾದರು. ಅದೇ ದುಡ್ಡಿಂದ ಮತ್ತೆ ಜನರಿಗೆ ಕುಡಿಸಿದರು. ಅವರ ಜೈಕಾರದಲ್ಲೇ ಅಧಿಕಾರದ ಗದ್ದುಗೆಯೇರಿದರು! ಸಬ್ಸಿಡಿಯನ್ನು ರದ್ದುಮಾಡಿದರು. ಪಡಿತರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಕೋಮುವಾದಿ ಶೌರಿ ಶಿಫಾರಸ್ಸು ಮಾಡಿದ. ಜನ ನೀರಿಗೇ ತತ್ವಾರ ಅನುಭವಿಸುತ್ತಿದ್ದಾಗ ನಮ್ಮ ಕೋಮುವಾದಿಗಳು ನದಿಗಳನ್ನೇ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಿದರು. ಚಳಿಯಿಂದ, ಬಿಸಿಲ ಬೇಗೆಯಿಂದ, ಹೊಟ್ಟೆ ಹಸಿವಿನಿಂದ ಜನ ಹುಳ ಹುಪ್ಪಡಿಗಳಂತೆ ಸಾಯುತ್ತಿದ್ದರೆ ಅಂತಹ ಪೀಡಿತ, ನೊಂದ ಜನರಿಗೆ ಕೋಮುವಾದಿಗಳು ಬೋಧಿಸುವುದು ಒಂದೇ ಮಂತ್ರ “ಜೈ ಶ್ರೀರಾಮ್” “ಅಲ್ಲಾಹ್ ಹೋ ಅಕ್ಬರ್”)
ವಿವೇಕಾನಂದರ ಕೆಲವೊಂದು ಮಾರ್ಮಿಕ ವಿಚಾರಗಳು
ಒಮ್ಮೆ ನಡೆದ ಘಟನೆ. ಯುವಕನೊಬ್ಬ ವಿವೇಕಾನಂದರ ಬಳಿ ಬಂದು ಹೀಗೆ ಹೇಳಿದೆ: `ಸ್ವಾಮೀಜಿ, ನನಗೆ ಭಗವದ್ಗೀತೆಯನ್ನು ಕಲಿಸಿಕೊಡಿರಿ’ ಅದಕ್ಕೆ ವಿವೇಕಾನಂದರೆಂದರು “ಗೀತೆಯನ್ನು ತಿಳಿದುಕೊಳ್ಳಬೇಕಾದ ನಿಜವಾದ ಸ್ಥಳ ಫ಼ುಟ್ಬಾಲ್ ಮೈದಾನ. ಹೋಗು, ಒಂದು ಗಂಟೆ ಚೆನ್ನಾಗಿ ಆಡು. ಗೀತೆ ನಿನಗೆ ತನ್ನಿಂದ ತಾನಾಗಿಯೇ ಅರ್ಥವಾಗುತ್ತದೆ.”
ಪರಂಪರೆಗಳು ಭಾರತೀಯರನ್ನು ಗುಲಾಮರನ್ನಾಗಿ ಮಾಡುವುದನ್ನು ವಿವೇಕಾನಂದರು ಸಹಿಸುತ್ತಿರಲಿಲ್ಲ. ರೀತಿ, ರಿವಾಜು, ಸಂಕೇತಗಳು ಮತ್ತು ಮೂರ್ತಿಗಳೊಂದಿಗಿನ ಸಂಬಂಧವನ್ನು ತ್ಯಜಿಸುವುದರಿಂದಲೇ ನಮಗೆ ಶ್ರೇಷ್ಠ ಭಕ್ತಿ ಮತ್ತು ನಿಜವಾದ ಪ್ರೇಮ ದೊರಕುತ್ತದೆ. ಈ ಮಟ್ಟವನ್ನು ತಲುಪಿದವನಿಗೆ ಧರ್ಮಗ್ರಂಥಗಳಲ್ಲಾಗಲಿ, ಸಂಪ್ರದಾಯ ಗಳಲ್ಲಾಗಲಿ ಯಾವುದೇ ಮೌಲ್ಯ ಕಾಣಿಸುವುದಿಲ್ಲ. ಎಲ್ಲಾ ಸಂಪ್ರದಾಯಗಳು ಮತ್ತು ಆಚರಣೆಗಳೂ ಆತನಲ್ಲಿಯೇ ಇರುತ್ತವೆ. ಹಾಗಿರುವಾಗ ಆತ ಯಾವುದೇ ಸಂಪ್ರದಾಯ ಅಥವಾ ಆಚರಣೆಯನ್ನಾದರೂ ಏತಕ್ಕೆ ಮಾಡಬೇಕು? ಅಂಥ ಮನುಷ್ಯ ಯಾವುದೇ ದೇವಸ್ಥಾನ ಅಥವಾ ಚಚ್ರಿಗೆ ಹೋಗುವುದಿಲ್ಲ. ಏಕೆಂದರೆ ಎಲ್ಲಾ ಮಂದಿರಗಳೂ ಚರ್ಚುಗಳೂ ಆತನಲ್ಲಿಯೇ ಇವೆ.
“ದೇವಸ್ಥಾನ ಮತ್ತು ಮಸೀದಿ ಕಟ್ಟುವುದರಲ್ಲಿ ಧರ್ಮವಿಲ್ಲ. ಒಟ್ಟಿಗೆ ಸೇರಿ ಸಾರ್ವಜನಿಕವಾಗಿ ಉಪಾಸನೆ ಮಾಡುವುದಕ್ಕೆ ಧರ್ಮವೆನ್ನುವುದಿಲ್ಲ. ಸಭೆಗಳಲ್ಲಾಗಲೀ, ವ್ಯಾಖ್ಯಾನಗಳಲ್ಲಾಗಲೀ, ಪುಸ್ತಕಗಳಲ್ಲಾಗಲೀ, ಶಬ್ದಗಳಲ್ಲಾಗಲೀ, ಧರ್ಮ ಇಲ್ಲವೇ ಇಲ್ಲ. ಧರ್ಮದ ಅನುಭವದ ವೊದಲ ಆದರ್ಶವೇ ತ್ಯಾಗ”. ವಿವೇಕಾನಂದರ ಈ ಮಾತುಗಳನ್ನು ಭಾರತೀಯರು ಅರ್ಥ ಮಾಡಿಕೊಂಡಿದ್ದರೆ ಕೋಮುವಾದಿಗಳ ಬಲೆಗೆ ಬೀಳುತ್ತಿರಲಿಲ್ಲ. ರಾಮ ಹುಟ್ಟಿದ್ದೇ `ಈ ಜಾಗದಲ್ಲಿ’ ಎಂಬ ಉನ್ಮಾದದ ಅಲೆ ಏಳುತ್ತಿರಲಿಲ್ಲ’ ಭಾರತ ಕೋಮುವಾದದಿಂದ ಫ್ಯಾಸಿಸಮ್ನೆಡೆಗೆ ಬೆಳೆದು ಬರುತ್ತಿರಲಿಲ್ಲ.
ವಿವೇಕಾನಂದರೆಂದರು. “ಇನ್ನೊಂದು ಮಾತು ಅತ್ಯಂತ ಮಹತ್ವದ್ದು. ಅದನ್ನು ನಾನು ಗುರುವಿನಿಂದ ಕಲಿತೆ. ಅದು ಎಷ್ಟೊಂದು ಸುಂದರವಾದ ಸತ್ಯವೆಂದರೆ ಜಗತ್ತಿನ ಧರ್ಮಗಳಲ್ಲಿ ಯಾವುದೂ ಒಂದು ಇನ್ನೊಂದಕ್ಕೆ ವಿರುದ್ಧವಾಗಿಲ್ಲ. ಎಲ್ಲಾ ಧರ್ಮಗಳು ಅಮರ ಸನಾತನ ಧರ್ಮದ ವಿವಿಧ ಕವಲುಗಳು. ಒಂದೇ ಸನಾತನ ಧರ್ಮವು ಅನಂತ ಕಾಲದಿಂದಲೂ ಇದೆ. ಮುಂದೆಯೂ ಇರುವುದು. ಆದ್ದರಿಂದಲೇ ನಾವು ಎಲ್ಲಾ ಧರ್ಮಗಳನ್ನು ಸಮಾನ ಗೌರವದಿಂದ ಕಾಣಬೇಕು. ಧರ್ಮದೊಳಗೆ ವ್ಯಾಪಾರ ಮತ್ತು ವ್ಯಾಪಾರದ ಸಿದ್ಧಾಂತವು ಸೇರಿದರೆ ಧರ್ಮವು ನಾಶವಾಗುತ್ತದೆ.
“ಧರ್ಮ ಪ್ರವರ್ತಕರ ವ್ಯಕ್ತಿಗತ ಶಕ್ತಿ ಸಾಮರ್ಥ್ಯಗಳಿಗನುಸಾರವಾಗಿ ಪ್ರತ್ಯೇಕ ಧರ್ಮದ ರೂಪವು ನಿಶ್ಚಿತವಾಗಿರುತ್ತದೆ. ಒಬ್ಬ ಮನುಷ್ಯದ ಧರ್ಮವು ಆತನ ನಿರಂತರ ಕ್ರಿಯಾಶೀಲತೆ ಮತ್ತು ಕರ್ಮದಿಂದ ಪ್ರಕಟವಾಗುತ್ತದೆ. ಒಂದು ಧರ್ಮದಲ್ಲಿ ಅನನ್ಯ ಭಕ್ತಿ ಇದ್ದರೆ, ಇನ್ನೊಂದರಲ್ಲಿ ರಹಸ್ಯವಾದೀ ಆದ್ಯಾತ್ಮಿಕತೆ, ಮಗದೊಂದರಲ್ಲಿ ದಾರ್ಶನೀಕತೆ ಈ ರೀತಿ ಧರ್ಮದ ಬಾಹ್ಯ ರೂಪಗಳು ಬೇರೆ ಬೇರೆ. “ನಿನ್ನ ಮಾರ್ಗ ತಪ್ಪು” ಎಂದು ನಾವು ಇನ್ನೊಂದು ಧರ್ಮದವರಿಗೆ ಹೇಳುವುದು ಸಂಪೂರ್ಣವಾಗಿ ತಪ್ಪು. ಏಕೆಂದರೆ ಸತ್ಯಕ್ಕೆ ನಾನಾ ರೂಪಗಳಿವೆ. ಬೇರೆ ಬೇರೆ ದಿಕ್ಕಿನಿಂದ ನೋಡುವಾಗ ಸತ್ಯವು ಬೇರೆ ಬೇರೆಯಾಗಿ ಕಾಣಿಸುತ್ತದೆ”.
ವಿವೇಕಾನಂದರು ಭಾರತೀಯರಿಗೆ ಕೊಟ್ಟ ಸಂದೇಶ ಹೀಗಿದೆ : “ಮುಂದಿನ ಐವತ್ತು ವರ್ಷಗಳ ತನಕ ಭಾರತ ಮಾತೆಯನ್ನು ಬಿಟ್ಟು ಬೇರೇನನ್ನು ಧ್ಯಾನಿಸಕೂಡದು. ಭಾರತ ಮಾತೆಯನ್ನು ಬಿಟ್ಟು ಉಳಿದೆಲ್ಲಾ ದೇವರುಗಳು ಸುಳ್ಳು. ಅವುಗಳನ್ನೆಲ್ಲಾ ನಿಮ್ಮ ಮನಸ್ಸಿನಿಂದ ಹೊರಗೆಸೆಯಿರಿ. ಇದೇ ದೇವಿ. ಈ ನಾಡಿನ ಜನರೇ ನಮ್ಮ ವಾಸ್ತವಿಕ ದೇವಿ. ಎಲ್ಲಾ ಕಡೆಯೂ ಅವಳ ಕೈಗಳೇ ಕಾಣಿಸುತ್ತಿವೆ. ಎಲ್ಲಾ ಕಡೆಯೂ ಆಕೆಯ ಕಾಲುಗಳೇ ಕಾಣಿಸುತ್ತವೆ. ಎಲ್ಲಾ ಕಡೆಯೂ ಅವಳದ್ದೇ ಕಿವಿಗಳು. ಎಲ್ಲದರ ಮೇಲೂ ಆಕೆಯ ಪ್ರತಿಬಿಂಬವೇ ಆವರಿಸಿದೆ. ಬೇರೆ ಎಷ್ಟು ದೇವರುಗಳಿದ್ದಾರೋ ಅವರೆಲ್ಲಾ ನಿದ್ರೆಯಲ್ಲಿದ್ದಾರೆ. ಈ ವಿರಾಟ್ ದೇವತೆ ನಮ್ಮೆದುರು ಪ್ರತ್ಯಕ್ಷ. ಈ ದೇವತೆಯನ್ನು ಬಿಟ್ಟು ನಾವು ಇನ್ನಾವ ದೇವತೆಯನ್ನು ಪೂಜಿಸಬೇಕು?” ಆ ಕಾಲದಲ್ಲಿ ಸ್ವಾತಂತ್ರ್ಯ ಚಳುವಳಿಯ ಕುರುಹೂ ಇಲ್ಲ. ಅಂತಹ ಕಾಲದಲ್ಲಿ ವಿವೇಕಾನಂದರ ದೇಶಪ್ರೇಮದ ಮೇಲಿನ ಮಾತುಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ.
ವಿವೇಕಾನಂದರು ಈಗಿನ ಮುಖವಾಡದ ಪ್ರಗತಿಪರರು ಮತ್ತು ಕೋಮುವಾದಿಗಳು ಇಬ್ಬರ ಕೈಗೆ-ತಲೆಗೆ ನಿಲುಕದವರು ಸರ್. ಬಿಸಿ ಸರಿಯಾಗೆ ಮುಟ್ಟಿಸಿದ್ದೀರಿ. ಸೂಪರ್ ಲೇಖನ.ಥ್ಯಾಂಕ್ಯೂ 🙂
vivekanandara vicharagalalli kelavannu tiruchi mandisi sukhisiddirashte…! mottamodalaneyadagi illi yaru komuvadigalu..yaru pragatipararu…annodanne spahta padisodilla lakhakharu…! innu tammannu pragati pararendu tavagiye karedukondu…tamige saribaradavarannu komuvadigalendu jariyuvudu …hagu adakke takkante vicharagalannu tiruchuvudu kelavara jayamana… prastuta lekhnavu ade jadinaddu..!
> ಆ ಕಾಲದಲ್ಲಿ ಸ್ವಾತಂತ್ರ್ಯ ಚಳುವಳಿಯ ಕುರುಹೂ ಇಲ್ಲ
೧೮೫೭ರಲ್ಲಿ ನಡೆದದ್ದು ಸ್ವಾತಂತ್ರ್ಯ ಸಂಗ್ರಾಮವಲ್ಲ.
ವಾಸುದೇವ ಬಲವಂತ ಫಡಕೆ ನಡೆಸಿದ್ದು ಸ್ವಾತಂತ್ರ್ಯ ಹೋರಾಟವಲ್ಲ.
ಸ್ವಾತಂತ್ರ್ಯ ಯೋಧ ಶ್ರೀ ಅರವಿಂದರು ಸ್ವಾತಂತ್ರ್ಯದ ಕನಸು ಕಂಡು “ಭವಾನಿ ಮಂದಿರ” ಕಟ್ಟಲಿಲ್ಲ.
ಏಕೆಂದರೆ, ಈ ಎಲ್ಲಾ ಘಟನೆಗಳೂ ವಿವೇಕಾನಂದರ ಸಮಯಕ್ಕೂ ಮೊದಲು ಅಥವಾ ಅವರಿದ್ದಾಗ ನಡೆದದ್ದು.
” ಆ ಕಾಲದಲ್ಲಿ ಸ್ವಾತಂತ್ರ್ಯ ಚಳುವಳಿಯ ಕುರುಹೂ ಇಲ್ಲ” ಎಂದ ಮೇಲೆ, ಇವೆಲ್ಲ ಸ್ವಾತಂತ್ರ್ಯ ಹೋರಾಟ ಹೇಗಾದೀತು?
ಪ್ರಾಯಶಃ ಇವರೆಲ್ಲರೂ “ಕೋಮುವಾದಿ”ಗಳೇ ಇರಬೇಕು.
ಅರವಿಂದರಂತೂ “ರಾಷ್ತ್ರೀಯತೆ”ಯ ಕುರಿತಾಗಿಯೇ ಮಾತನಾಡುತ್ತಿದ್ದವರು – ಅವರೂ “ಗೋಳ್ವಾಲ್ಕರ್ ದರ್ಶನ”ವನ್ನೇ ಓದಿಕೊಂಡಿದ್ದಿರಬೇಕು!
ವಿವೇಕಾನಂದರೂ “ಹಿಂದು” ವಿಚಾರದ ಕುರಿತಾಗಿಯೇ ಮಾತನಾಡುತ್ತಿದ್ದರು; ಚಿಕಾಗೋದಲ್ಲಿ ಅವರ ಭಾಷಣದ ತರುವಾಯ ಪತ್ರಿಕೆಗಳು “Hindoo Monk of India” ಎಂದೇ ಅವರನ್ನು
ಉಲ್ಲೇಖಿಸಿದವು. ವಿವೇಕಾನಂದರೂ “ಕೋಮುವಾದಿ”ಗಳೇ ಆಗಿದ್ದಿರಬೇಕು!
ಭಗತಸಿಂಗ್, ಮುಂತಾದ ಅನೇಕ ಕ್ರಾಂತಿಕಾರಿಗಳು “ಭಗವದ್ಗೀತೆ” ಕೈಯ್ಯಲ್ಲಿ ಹಿಡಿದೇ ನೇಣುಗಂಬವನ್ನೇರಿದರು – ಅವರೂ “ಕೋಮುವಾದ”ದಿಂದ ದಾರಿತಪ್ಪಿದ್ದವರೇ ಎನ್ನಿಸುತ್ತದೆ.
ಮಹಾತ್ಮಾ ಗಾಂಧಿಯವರಂತೂ ಸದಾ “ರಾಮ ಧುನ್” ಜಪಿಸುತ್ತಿದ್ದರು ಮತ್ತು ತಮ್ಮನ್ನು “ಸನಾತನಿ ಹಿಂದು” ಎಂದೇ ಕರೆದುಕೊಳ್ಳುತ್ತಿದ್ದರು; ಅವರು “ರಾಮ ರಾಜ್ಯ”ದ ಕನಸೂ ಕಂಡಿದ್ದರಿಂದ ಅವರೂ ಸಹ “ಕೋಮುವಾದಿ” ಎನ್ನುವುದರಲ್ಲಿ ಅನುಮಾನವಿಲ್ಲ.
ಇನ್ನು ದೇವಸ್ಥಾನವನ್ನು ಒಡೆದವರು ಅನೇಕರಿದ್ದಾರೆ – ಅವರೆಲ್ಲರೂ ನೈಜ “ಜಾತ್ಯಾತೀತರು” ಮತ್ತು ಪೂಜನೀಯರು!
ಈ ದೇವಸ್ಥಾನಗಳನ್ನು ಒಡೆಯುವಾಗ ಕೆಲವರು ವಿರೋಧಿಸಿಬಿಟ್ಟಿದ್ದರು – ಅವರೆಲ್ಲರೂ “ಕಟ್ಟರ್ ಕೋಮುವಾದಿ”ಗಳು!
ದೇವಸ್ಥಾನವಾದರೂ ಬೀಳಲಿ, ಗೋವನ್ನಾದರೂ ವಧಿಸಲಿ. ಅಷ್ಟೇ ಏಕೆ, ಸ್ವತಃ ಸ್ವಂತ ತಾಯಿಗೆ ಬೇಕಾದರೂ ಏನಾದರಾಗಲಿ.
ಹೊಟ್ಟೆ ಹಸಿದಿರುವಾಗ, ಇಂತಹ ಕ್ಷುಲ್ಲಕ ವಿಷಯಕ್ಕೆಲ್ಲಾ ತಲೆ ಕೆಡೆಸಿಕೊಳ್ಳಬಾರದು. ಕೇವಲ ಹೊಟ್ಟೆ ತುಂಬಿಕೊಳ್ಳುವುದರ ಕಡೆ ಗಮನ ಕೊಡಿ.
ಏಕೆಂದರೆ, ನಾಯಿಗಳು ಮತ್ತು ತೋಳಗಳು ಈ ರೀತಿಯ ಸಂಯಮವನ್ನು ತೋರುತ್ತವೆ ಮತ್ತು ಇಂದ್ರಿಯ ವಿಕಾರಕ್ಕೆ ಒಳಗಾಗುವುದಿಲ್ಲ – ಅವನ್ನು ನೋಡಿ “ಜಾತ್ಯಾತೀತವಾದ”ವನ್ನು ಕಲಿಯಿರಿ.
ಅದನ್ನು ಬಿಟ್ಟು, ತಾಯಿಗಾದ ತೊಂದರೆಯನ್ನೋ, ದೇವಸ್ಥಾನವು ಉರುಳುವುದನ್ನೋ ತಡೆಯುವುದಕ್ಕೆ ಹೋದರೆ, ನೀವು “ಕೋಮುವಾದಿ”ಗಳಾಗಿ ಬಿಡುವಿರಿ.
ಏಕೆಂದರೆ, ನಾಯಿಗಳಿಗೆ ಹಾಗೂ ತೋಳಗಳಿಗೆ ತನ್ನ ಜಾತಿಯ ಮತ್ತೊಂದು ಹೆಣ್ಣು ಪ್ರಾಣಿ ಮತ್ತು ತನ್ನ ಸ್ವಂತ ತಾಯಿಯ ಮಧ್ಯೆ ತಾರತಮ್ಯ ಬುದ್ಧಿ ಇರುವುದಿಲ್ಲ.
ಹೆಂಡತಿಯನ್ನೂ, ತಾಯಿಯನ್ನೂ, ಬೇರೆಲ್ಲಾ ಹೆಣ್ಣುಗಳನ್ನೂ ಸಮಾನವಾಗಿ ನೋಡುವುದನ್ನು ಆ ಪ್ರಾಣಿಗಳಿಂದ ಕಲಿಯಿರಿ.
“ನನ್ನ ತಾಯಿ” ಎಂಬ ಸ್ವಾರ್ಥವನ್ನು ತೋರಿಸಿದರೆ ನೀವು “ಕೋಮುವಾದಿ”ಗಳ ಗುಂಪಿಗೆ ಸೇರಿಬಿಡುವಿರಿ, ಜೋಕೆ!
ಇಂತಹ ಬಹುದೊಡ್ಡ ವೇದಾಂತವನ್ನು ಕೇವಲ ಒಂದು ಪುಟದಲ್ಲಿ ನಮಗೆಲ್ಲಾ ತಿಳಿಸಿಕೊಟ್ಟು ಲೇಖಕರು ಮಹದುಪಕಾರ ಮಾಡಿರುವರು; ಎಲ್ಲರಿಗೂ ಕಣ್ತೆರೆಸಿರುವರು.
ಒಂದೇ ಕೊರತೆಯೆಂದರೆ, ಸ್ವಾಮಿ ವಿವೇಕಾನಂದರು ಇಂದು ನಮ್ಮೊಡನಿಲ್ಲ. ಅವರು ಈ ಎಲ್ಲಾ “ಸತ್ಯ”ಗಳಿಂದ ವಂಚಿತರಾಗಿಬಿಟ್ಟರಲ್ಲ ಎಂದು ಬಹಳ ದುಃಖವಾಗುತ್ತಿದೆ!
ಕುಮಾರ್, ವಿಡಂಬನೆ ತುಂಬಾ ಚೆನ್ನಾಗಿದೆ.
ಕ್ರಿಸ್ತ ಸತ್ತು ೩೦೦ ವರ್ಷಗಳ ನಂತರ ಕ್ರೈಸ್ತ ಮತದ ಉದಯವಾಯಿತು. ಬುದ್ದ ಸತ್ತು ೪೦೦ ವರ್ಷಗಳ ನಂತರ ಬೌದ್ದ ಮತದ ಉದಯವಾಯಿತು. ಈಗ ವಿವೇಕಾನಂದರು ಸತ್ತು ನೂರು ವರ್ಷಗಳ ನಂತರ ಮತ್ತೊಂದು ವಿವೇಕ ಮತ ಉದಯವಾಗುತ್ತಿದೆ. ಬಹುಶಃ ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯಲು ಪ್ರಾರಂಭಿಸಿದ ವ್ಯಕ್ತಿಯ ಆರಾಧನೆಯೆ ಈ ಎಲ್ಲ ಉಪದ್ವಾಪಗಳ ಮೂಲ. ಅಂತರ್ಜಾಲದಲ್ಲಂತೂ ಏನು ಹರಟಿದರೂ ಗೀಚಿದರೂ ಮನ್ನಣೆಯಂತೂ ಇದ್ದೇ ಇರುತ್ತದೆ. ಎಷ್ಟೆ ಆದರೂ ಸ್ವಾತಂತ್ರ್ಯ ಯಾರಪ್ಪನ ಸ್ವತ್ತೂ ಅಲ್ಲ. 🙂
{ಭಗತಸಿಂಗ್, ಮುಂತಾದ ಅನೇಕ ಕ್ರಾಂತಿಕಾರಿಗಳು “ಭಗವದ್ಗೀತೆ” ಕೈಯ್ಯಲ್ಲಿ ಹಿಡಿದೇ ನೇಣುಗಂಬವನ್ನೇರಿದರು}
ಭಗತ್ ಸಿಂಗ್ ಸಾಯುವ ಮುನ್ನ ‘ನಾಸ್ತಿಕ’ ನಾಗಿದ್ದ. ಧರ್ಮ ದೇವರುಗಳನ್ನು ಟೀಕಿಸಿದ್ದ. ಇನ್ನು ಭಗವದ್ಗೀತೆಯನ್ನು ಕೈಯಲ್ಲಿ ಹೇಗೆ ಹಿಡಿದಿರಬಹುದು?
ಸೋಗಲಾಡಿ ಜಾತ್ಯಾತೀತವಾದಿಯ , ಉತ್ತರನ ಪೌರುಷ ! ನಿರ್ದಾಕ್ಷಿಣ್ಯವಾಗಿ ನಿರ್ಲಕ್ಷಿಸಿ ಈ ಸೋಗಲಾಡಿಯನ್ನ! ರಾಡಿಯನ್ನ ಕಲಕಿದರೆ ವಾಸನೆ ಹೆಚ್ಚುತ್ತದೆ ! ಹಾಗೆ ಬಿಟ್ಟರೆ ಸ್ವಲ್ಪ ದಿನ ಗಬ್ಬು ನಾಥ ಹರಡಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ ಚಿಂತೆ ಬೇಡ !
ಸರ್/ಮೇಡಂ (ಯಾವುದು ಅಪ್ಪ್ಲೈ ಆಗುತ್ತೋ ಅದು : )
ಎಲ್ಲರ ಅಭಿಪ್ರಾಯಗಳು ಒಂದೇ ಇರಬೇಕಿಲ್ಲ.ಆದರೆ ಅದನ್ನ ವ್ಯಕ್ತಪಡಿಸುವ ರೀತಿ ಸಮಾಧಾನಕರವಾಗಿದ್ದರೆ ಒಳ್ಳೆಯದು
ರಾಕೇಶ್ ಸರ್ ,
ಸಮಾಧಾನಕರವಾಗಿ ಹೇಳಿದರೆ ಅರ್ಥವಾಗೋ ಮನಸ್ತಿಸ್ತಿಯಲ್ಲಿ ಅವರು ಇದ್ದಂತೆ ನಿಮಗೆ ಅನ್ನಿಸುತ್ತಿದೆಯೇ? ಆದರೂ ನಾನು ಹೇಳಿದ್ದು ನಮ್ಮ ನಿಮ್ಮಂತಹವರ ಮಟ್ಟಿಗೆ ಸ್ವಲ್ಪ ಅಸಮಾನಕರ ಆಗಿ ಕಂಡರೂ ,ಅವರ ಮಟ್ಟಿಗೆ ಅದು ಏನೇನೂ ಸಾಲದು. ಆದರೆ ಏನು ಮಾಡಲಿ? ನಮ್ಮಂತಹವರಿಗೆ ಇದಕ್ಕಿಂತ ಕಟೋರವಾಗಿ ಹೇಳಿ ಅಬ್ಯಾಸವಿಲ್ಲ (ಹೇಳಲಾರೆವು),ಅಲ್ಲವೇ?
ವಿವೇಕಾನಂದರ ಹೆಸರನ್ನು ದುರ್ಬಳಕೆ ಮಾಡಿದವರೇ ಹೆಚ್ಚು. ಅವರ ಹೇಳಿಕೆಗಳನ್ನು ತಮಗೆ ಬೇಕಾದಂತೆ ಬಳಸಿದವರೇ ಹೆಚ್ಚು. ಆದರೆ ನೀವು ಅವರ ಅದ್ಭುತ ಸಂದೇಶವನ್ನು ಬರೆದಿದ್ದೀರಿ. ಭಾರತ ಮಾತೆಗೆ ಮಿಗಿಲಾದ ದೇವತೆ ಬೇಕೆ? ಅವಳ ಪೂಜೆ ಎಂದರೆ ನಮ್ಮ ಜನರನ್ನು ಪ್ರೀತಿಸುವುದು. ಅವಳ ನೈವೇದ್ಯ ವೆಂದರೆ ಊಟವಿಲ್ಲದವರಿಗೆ ತುತ್ತು ಅನ್ನ ದೊರೆಯುವಂತೆ ಮಾಡುವುದು. ಅವಳಿಗೆ ಆರತಿ ಎಂದರೆ ಜನರಲ್ಲಿ ಅವಳಬಗ್ಗೆ ಅರಿವುಂಟುಮಾಡುವುದು. ಈ ಕೆಲಸ ಹೆಚ್ಚು ರಭಸದಿಂದ ನಡೆಯಬೇಕು. ಆಗ ಮಾತ್ರ ತಾಯಿ ಭಾರತಿಯ ಕಣ್ ಗಳಲ್ಲಿ ಆನಂದಬಾಷ್ಪವನ್ನು ನೋದಬಹುದು. ಈಗ ನಿಜವಾಗಿ ನಮ್ಮ ದೇಶದ ಸ್ಥಿತಿ ನೋಡಿ ತಾಯಿ ಭಾರತಿ ಕಣ್ಣೀರಿಡುತ್ತಿದ್ದಾಳ್ರೆ.
I FEEL IT IS NOT WORTH TO REACT TO THE ABOVE WRITTEN COMMENTS.CONSTITUTION IS NOT TOTALLY DEAD TILL DATE.YOU PEOPLE HAVE EXERCISED YOUR CONSTITUTIONAL RIGHTS.THANK YOU-Dr.G.Bhaskara Maiya
ಈ ಪತ್ರಕರ್ತರಿಗಳಿಗೊಂದು ತೆವಲು, ಬರೆಯುವುದು ಕನ್ನಡದಲ್ಲಿ ಪ್ರತಿಕ್ರಿಯೆ ಆಂಗ್ಲದಲ್ಲಿ. ಪ್ರತಾಪ ಸಿಂಹ, ವಿ.ಭಟ್ ಎಲ್ಲರೂ ಹೀಗೆ ಯಾಕೆ?
It Is Not worth to discribe the world before the man who lost his eys. How can he understand the reality. He will allways plays with the same stick he believs. In the same way the paralysed mind could not think by itsef, how can it think on others? The pain and Feelings has no meaning in it’s dictonary. So Only thing We could say is The Religion without mercy how it can be? It may be like a spiritual lecture berore a hungry. No comments to the DonneBrand. Because the reaction will be the Same ritham, the same song From Nagapur to narayanpur !!!???.