ನನ್ನ ಊಟದ ಮೆನು ನಿರ್ಧರಿಸಲು ನೀವ್ಯಾರು?
– ರಾಕೇಶ್ ಶೆಟ್ಟಿ
ಕುಡಿಯುವ ನೀರು ಕೇಳಿದಾಗ “ನೀರು ಕೊಟ್ಟರೆ ನನ್ನ ಜಾತಿ ಕೆಡುತ್ತದೆ” ಅಂದ ಮಂಗಲ್ ಪಾಂಡೆಗೆ, “ಸ್ವಲ್ಪ ಇರು,ದನದ ಕೊಬ್ಬು ಹಚ್ಚಿರುವ ಕಾಡತೂಸು ಕಚ್ಚಲು ಹೇಳುತ್ತಾರೆ,ಆಮೇಲೆ ನಿನ್ನ ಜಾತಿ ಅದೇನಾಗುತ್ತೋ ನಾನು ನೋಡುತ್ತೇನೆ” ಅಂದಿದ್ದ ಆ ಕೆಳ ಜಾತಿಯ ಹುಡುಗ.ಮೊದಲೆ ಈ ಕಾಡತೂಸಿನ ಗುಸು-ಗುಸಿಗೆ ಗಾಯಗೊಂಡಿದ್ದವನಿಗೆ ಉಪ್ಪು ಸವರಿದಂತಾಗಿತ್ತು ಹುಡುಗನ ಮಾತು,ಕಡೆಗದು ’ಬ್ಯಾರಕ್ ಪುರ’ದಲ್ಲಿ ಕ್ರಾಂತಿಯ ಕಿಡಿಯಾಗಿ ಭಾರತವನ್ನ ವ್ಯಾಪಿಸಿಕೊಂಡಿತ್ತು.ಇತಿಹಾಸ ಅದಕ್ಕೆ ಕೊಟ್ಟ ಹೆಸರು “೧೮೫೭ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’.
೧೭೫೭ರಲ್ಲಿ ಪ್ಲಾಸಿ ಕದನದ ನಂತರ ಭಾರತವನ್ನ ಇಡಿಯಾಗಿ ಆಪೋಶನ ತೆಗೆದುಕೊಂಡ ಬ್ರಿಟಿಶರಿಂದ ತೆಪ್ಪಗೆ ಆಳಿಸಿಕೊಳ್ಳುತಿದ್ದ ಭಾರತದ ಸತ್-ಪ್ರಜೆಗಳ ಎದೆಯೊಳಗಿನ ನೋವಿನ ಜ್ವಾಲಾಮುಖಿ ಸ್ಫೋಟವಾಗಲು ಕಾರಣವೊಂದು ಬೇಕಿತ್ತು,ಕಾರಣವಾಗಿ ಬಂದದ್ದು ದನದ ಮತ್ತು ಹಂದಿಯ ಕೊಬ್ಬು ಸವರಿದ ಎನ್-ಫಿಲ್ಡ್ ಬಂದೂಕು..!
ಹೌದು.ಭಾರತದ ಸತ್-ಪ್ರಜೆಗಳೇ ಹಾಗೆ ಹೊಟ್ಟೆಗೆ ಅನ್ನ,ತಲೆಗೊಂದು ಸೂರು ಕೊಡದ ಸರ್ಕಾರವಾದರೂ ಸರಿ,ಕೋಟಿಗಟ್ಟಲೆ ಹಣ ಲೂಟಿ ಮಾಡಿದರೂ ಸರಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಧರ್ಮದ ವಿಚಾರಕ್ಕಿಳಿದಿರೋ ಅಲ್ಲಿಗೆ ಮುಗಿಯಿತು..! ಇದು ಕೇವಲ ಇತಿಹಾಸದ ಕತೆಯಲ್ಲ,ತೀರಾ ಕಳೆದ ವರ್ಷ ತಸ್ಲೀಮಾ ನಸ್ರೀನ್ ಅವರು ಬರೆದ ಲೇಖನ (ಎಂದು ಹೇಳಲಾದ )ಪ್ರಕಟವಾದಾಗ ಶಿವಮೊಗ್ಗ-ಹಾಸನದಲ್ಲಿ ಏನಾಗಿತ್ತು ಅನ್ನುವುದು ನೆನಪಿದೆಯಲ್ವಾ?
ಕಳೆದ ಒಂದು ವರ್ಷಗಳಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದು ’ಗೋ-ಹತ್ಯೆ ನಿಷೇಧ’ ಮಸೂದೆ.ಸಾಕಷ್ಟು ಚರ್ಚೆಗಳು,ವಾದಗಳು ನಡೆದಿವೆ.ಬಹುಷಃ ಅದು ಎಂದಿಗೂ ಮುಗಿಯಲಾರದು.
ಆದರೇ ತೀರ ಇತ್ತೀಚಿಗಿನ ಬೆಳವಣಿಗೆ ನೋಡಿದರೆ ಕೆಲವೊಂದು ತಿದ್ದುಪಡಿಗಳ ಜೊತೆಗೆ ಈ ಮಸೂದೆ ಬಹುತೇಕ ಅಂಗೀಕಾರವಾಗುವ ಹಂತದಲ್ಲಿದೆ ಅಂತ ರಾಜ್ಯಸರ್ಕಾರ ಹೇಳುತ್ತಿದೆ. ಗೋ-ಹತ್ಯೆ ನಿಷೇಧ ಕಾನೂನು ಬಂದ ಮೇಲೆ, ವಯಸ್ಸಾದ ಹಸುಗಳನ್ನ ಸರ್ಕಾರ ನೋಡಿಕೊಳ್ಳುತ್ತದಾ?
ಇಷ್ಟೆಲ್ಲಾ ಸದ್ದು-ಗದ್ದಲದ ನಡುವೆ “ರಾಜ್ಯದಲ್ಲಿ ವರ್ಷದಲ್ಲಿ ಒಂಬತ್ತು ದಿನಗಳು ಮಾಂಸ ಮಾರಾಟ ನಿಷೇಧ ಮಾಡಬೇಕು” ಅನ್ನುವಂತ ಸುತ್ತೋಲೆಯನ್ನು ಬಿಬಿಎಂಪಿಯ ಪಶುಸಂಗೋಪನೆ ಇಲಾಖೆ ಹೊರಡಿಸಿದೆ.ಅಲ್ಲಾ ಸ್ವಾಮಿ ರಾಜ್ಯದಲ್ಲಿ ಜನ ಬರ ಬಂದು ಅನ್ನ-ನೀರಿಗಾಗಿ ಪರದಾಡುತಿದ್ದಾರೆ.ಇತ್ತ ಈ ಸರ್ಕಾರಕ್ಕೆ ಸಿಕ್ಕ ಸುತ್ತೋಲೆ ಇದೇಯೇನು? ವರ್ಷಕ್ಕೆ ಒಂಭತ್ತು ದಿನ ರಜೆ ಹಾಕಿ ಕುಳಿತರೆ ಮಾಂಸದ ವ್ಯಾಪರಿಗಳಿಗೆ ಆಗುವ ನಷ್ಟವನ್ನ ಸರ್ಕಾರ ಭರಿಸುತ್ತದಾ?
ಅಷ್ಟಕ್ಕೂ ನನ್ನ ಊಟದ ಮೆನು ನಿರ್ಧರಿಸಲು ಈ ಸರ್ಕಾರಕ್ಕೇನು ಹಕ್ಕಿದೆ? ಇವರಿಗೆ ಅಧಿಕಾರ ಕೊಟ್ಟಿರುವುದು ಜನರ ಕಷ್ಟಗಳಿಗೆ ಸ್ಪಂದಿಸುವ ಅಧಿಕಾರ ನೀಡಿ ಅಂತಲೇ ಹೊರತು ಜನರ ತಟ್ಟೆಯೊಳಗೆ ಏನಿರಬೇಕು,ಏನು ಬೇಡ ಅನ್ನುವುದನ್ನ ನಿರ್ಧರಿಸಲು ಅಲ್ಲ.ಗೋ-ಹತ್ಯೆ ವಿಷಯ ಶುರುವಾಗಿನಿಂದಲೂ ನನಗೆ ಮತ್ತೆ ಮತ್ತೆ ಅನ್ನಿಸುವುದು ಇದೇ “ನನ್ನ ಆಹಾರ ಪದ್ಧತಿಯನ್ನು ಬದಲಾಯಿಸಲು ನೀವ್ಯಾರು?”
ಗೋ-ಹತ್ಯೆ ನಿಷೇಧ ಪರ ಗುಂಫು ಹಿಂದೂಗಳ ಧಾರ್ಮಿಕ ನಂಬಿಕೆಯ ಬಗ್ಗೆ ಮಾತನಾಡಿದರೆ,ಇನ್ನೊಂದು ಗುಂಪು ರೈತರ ಸ್ಥಿತಿ-ಗತಿಯ ಬಗ್ಗೆ ಮಾತನಾಡುತ್ತಿದೆ.ಬಹುಷಃ ನಾನೇನಾದರೂ ಸಸ್ಯಹಾರಿಯಾಗಿದ್ದರೆ ನಾನು ಗೋ-ಹತ್ಯೆ ನಿಷೇಧವಾಗಲಿ ಅನ್ನುತಿದ್ದೆನೋ ಏನೋ,ಆದರೆ ಖುದ್ದು ನಾನೇ ಕೋಳಿ-ಮೀನು ತಿನ್ನೋ ಮನುಷ್ಯನಾಗಿ,ಇನ್ನೊಬ್ಬರಿಗೆ ಬಿಟ್ಟಿ ಸಲಹೆ ನೀಡುವುದು ಆತ್ಮವಂಚನೆಯಾದೀತು.ಒಂದು ವೇಳೆ ಹಿಂದೂಗಳ ನಂಬಿಕೆಯಂತೆ ಇನ್ಯಾವುದೋ ಧರ್ಮಿಷ್ಟರಿಗೆ ಕೋಳಿ,ಮೀನು ದೇವ್ರು ಅದನ್ನೂ ನಿಷೇಧಿಸಿ ಅನ್ನೋ ಕೂಗೆದ್ದರೆ ಇಂದು ಗೋ-ಹತ್ಯೆ ನಿಷೇಧವನ್ನ ಬೆಂಬಲಿಸುವ ’ ಕುರಿ,ಕೋಳಿ,ಮೀನು ತಿನ್ನುವ ಮಾಂಸಹಾರಿ’ಗಳು ಏನು ಹೇಳುತ್ತಾರೆ?
ಗೋವಿನದೂ ಜೀವವೇ,ಕೋಳಿಯದು ಜೀವವೇ,ಮೀನಿನದು ಕೂಡ..ಹಾಗೆಯೇ ಸಸ್ಯಗಳಿಗೂ ಜೀವ ಇದೆಯಲ್ವಾ? ಅವರವರ ಆಹಾರ ಪದ್ಧತಿ ಅವರವರಿಗೆ ಶ್ರೇಷ್ಠ,ಅದನ್ನ ಗೌರವಿಸಬೇಕೆ ಹೊರತು ’ಮಾಂಸಹಾರ’ ತಿಂದರೆ ತಾಮಸ ಗುಣ ಬರುತ್ತದೆ ಅನ್ನುವ ಬಿಟ್ಟಿ ಸಲಹೆಗಳ್ಯಾಕೆ? ಸ್ವಾಮಿ ವಿವೇಕಾನಂದರೂ ಸಹ ಮಾಂಸಹಾರಿಗಳಾಗಿದ್ದರು ಅಲ್ಲವೇ? ಈ ಚರ್ಚೆ ಬಹುಷಃ ಎಂದಿಗೂ ಮುಗಿಯಲಾರದು.
ಒಂದು ಸಮಾಜದಲ್ಲಿ ಇನ್ನೊಬ್ಬರ ಆಚಾರ-ವಿಚಾರ,ನಂಬಿಕೆ,ಪದ್ಧತಿಗಳನ್ನ ಪರಸ್ಪರ ಗೌರವಿಸುತ್ತ ಬದುಕಬೇಕೆ ಹೊರತು ತಾನೇ,ತನ್ನದೇ ಶ್ರೇಷ್ಠ ಅನ್ನೋ ಅಹಂ ವಿನಾಶಕ್ಕೆ ಕಾರಣವಾದೀತು.
ಪ್ರಾಣಿ ಮೂಲದಿಂದ ಬಂದಿದ್ದು ಮಾಂಸಾಹಾರ, ಸಸ್ಯ ಮೂಲದ್ದು ಸಸ್ಯಾಹಾರ ಎಂಬುದಾದರೆ ದನದ ಹಾಲು ಕುಡಿಯುವ ಎಲ್ಲರೂ ಮಾಂಸಾಹಾರಿಗಳೇ. ಕರುವಿನ ಹಾಲನ್ನು ಕಸಿದ ಅಪರಾಧ ಮಾಡಿದವರೇ. ನಾನೊಬ್ಬ ಸಸ್ಯಾಹಾರಿ ಅಂದಿದ್ದಕ್ಕೆ ಥಾಯಿ ಸಹೋದರಿಯಿಂದ ಸೋಯಾ ಹಾಲಿನ ಕಾಫಿ ಕುಡಿಸಿಕೊಂಡ ವಿಶಿಷ್ಟ ಅನುಭವವಿದೆ. ಮನುಷ್ಯ ಪ್ರಾಣಿಗಳನ್ನು ಸಾಕಿದ್ದೇ ತನ್ನ ಉಪಯೋಗಕ್ಕಾಗಿ. ಮನುಷ್ಯ ಲಾಭವಿಲ್ಲದೆ ಯಾರನ್ನೂ ಪ್ರೀತಿಸಿದ್ದು ಬಹಳ ಕಡಿಮೆ. 🙂
Rakesh,
Really good one from you.
“ಕುಡಿಯುವ ನೀರು ……. ಆ ಕೆಳ ಜಾತಿಯ ಹುಡುಗ.”
ಮಂಗಲ್ ಪಾಂಡೆ ಒಬ್ಬ Bhumihar Brahmin.
ಹಿಂದೂ ಧರ್ಮದ ಗ್ರಂಥಗಳು ‘ಗೋ ಭಕ್ಷಣೆ’ಯನ್ನು ನಿಷೇಧಿಸಿದೆ. ಇನ್ನೂ ಹಿಂದೂ ಧರ್ಮ-ಸಂಕಟಗಳ ಪರಿಹಾರ ಕೊಡುವ ಅಧಿಕಾರ ಕೇವಲ ಬ್ರಾಹ್ಮಣರಿಗೆ ಇರುವುದು. ಒಮ್ಮೆ ಮನುಸ್ಮೃತಿ ಓದಿ (ನೀವು ಹಿಂದೂ ಆಗಿದ್ದರೆ).
ಹಿಂದುತ್ವ ಎಂದ ಮೇಲೆ ಅದರಲ್ಲಿ “ಗೋ ಸಂರಕ್ಷಣೆ” ದೊಡ್ಡ ಅಂಗ. ಗೋವನ್ನು ರಕ್ಷಿಸದವನು ಹಿಂದೂ ವೆ ಅಲ್ಲ.
ಬಹುಶಃ ತಾವು ಸ್ವಲ್ಪ ಹಿಂದೂ ಧರ್ಮ ಗ್ರಂಥಗಳ ವಿರುದ್ಧವಾಗಿ ಈ ಬರಹದಲ್ಲಿ ಹಲ-ಅಂಶಗಳನ್ನು ಬರೆದಿದ್ದೀರಿ.
ಈತ ಎಲ್ಲಾ ಕಡೆಯಲ್ಲೂ ಸುಮ್ಮನೇ ಬೆಂಕಿ ಹತ್ತಿಸಲು ಈ ರೀತಿಯ ಕಮೆಂಟುಗಳನ್ನು ಹಾಕುತ್ತಾರೆ. ಇದರ ಬಗ್ಗೆ ತಲೆ ಕೆಡಿಸಿಕೊಂಡು ಯಾರೂ ಚರ್ಚೆಗೆ ಇಳಿಯಬೇಡಿ. ಇಳಿದರೆ ನಿಮ್ಮ ಹಣೆಬರಹ! ಈತನ ಮಾತನ್ನು ಹಿಡಿದು ಹಿಂದೂಗಳಿಗೆ, ಬ್ರಾಹ್ಮಣರಿಗೆ ಬೈಯುವ ಕೆಲಸ ಮಾಡಬಾರದು. ಈತ ಯಾರ ಪ್ರತಿನಿಧಿಯಲ್ಲ.
@Royal Jagga ಪರವಾಗಿಲ್ಲ ಬಿಡ್ರಿ. ಯಾವುದೋ ಪೊಳ್ಳು ಕಮೆಂಟು.!
ಪ್ರತಾಪಿಶಾಲಿ ರಾಕೇಶ ಶೆಟ್ರು ಕೆಲವು ಸಲ ಕಟ್ಟಾ ಹಿಂದುತ್ವವಾದಿ. ಆದರೆ ಪಾಪ ಏನ್ ಮಾಡೋದು ಮೀನಿನ ರುಚಿಯ ಚಟ.
ಬೇಕಾದರೆ ಯಾರೇ ಹಿಂದೂ ಧರ್ಮದ ಪವಿತ್ರ ಗ್ರಂಥಗಳ ಬಗ್ಗೆ ಆಳವಾಗಿ ತಿಳಿದುಕೊಂಡವರಲ್ಲಿ ಹೋಗಿ ಯಾರೇ ಕೇಳಲಿ .. ಅವರು ಹೇಳೋದು “ಗೋ ರಕ್ಷಣೆ” ಹಿಂದೂ ಧರ್ಮೀಯ ಕರ್ತವ್ಯ.
ಈಗ ಈತ ತಾನು ಮೀನು ಕೋಳಿ ತಿನ್ನೊದರಿಂದ ಬೇರೆಯೋದು ಗೋವು ತಿನ್ನಬಹುದು ಅನ್ನೋದು ಅದು ಯಾವ ತರ್ಕವೋ? ಈ ಇವರ ಧರ್ಮ ನಿಷ್ಠೆ ಎಲ್ಲಿ ಹೋಯ್ತು?
ಈ ಬಗೆಯ ಬರಹಗಾರರೆ ಹಿಂದೂ ಧರ್ಮವನ್ನೂ ದಾಳವನ್ನಾಗಿಸಿ, ಮಾತಿಗೊಮ್ಮೆ ವಿವೇಕಾನಂದ, ಭಗತ್-ಸಿಂಗ್ ಎಂದು ಇತಿಹಾಸ ಪ್ರಸಿದ್ಧ ಹೆಸರು ಹೇಳು ಇವರು ಹೆಸರು ಮಾಡಿ, ಕೊನೆಗೆ ಲಾಬಿ ಮಾಡಿ ಪ್ರಶಸ್ತಿ-ಸೈಟ್ ಮಾಡೋದು.
ಇವರ ಮೆನು ನಿರ್ಧಾರ ಮಾಡೋ ಹಕ್ಕು ಇವರು ಇಷ್ಟು ದಿವಸ ತಮಟೆ ಹೊಡೆದ ಧರ್ಮಕ್ಕೆ ಇಲ್ವಂತೆ ಇವೊತ್ತು?!
ಸಮಾಧಾನ ಮಾಯ್ಸ.ಇದನ್ನ ಬರೆಯೋ ಮೊದಲೂ ಸಹ ನಾನು ಹಿಂದೂವೇ ಮತ್ತೆ ಈಗಲೂ ಸಹ ಹಿಂದೂವೇ… ಮನುಷ್ಯರು ಮಾಡೋ ಅತಿರೇಕಗಳಿಗೆಲ್ಲ ಧರ್ಮವನ್ನ ದೂರುವುದನ್ನ ಮೊದಲು ನಿಲ್ಲಿಸಿ.ನನ್ನ ಧರ್ಮದ ಪರ ತಮಟೆ ಬಾರಿಸಬೇಕಾದ ನಿಮ್ಮ ಅಪ್ಪಣೆ ಕೇಳಬೇಕಿಲ್ಲ
ಧರ್ಮವನ್ನ ದಾಳವಾಗಿಸಿಕೊಳ್ಳುವ ಕರ್ಮ ನನಗೆ ಬರುವುದಿಲ್ಲ ಆರಾಮ್ ಆಗಿರಿ.ನನಗನ್ನಿಸಿದ್ದನ್ನು ನೇರವಾಗಿ ಹೇಳಿದ್ದೇನೆ ಅಷ್ಟೆ.ವಿವೇಕಾನಂದರು,ಭಗತ್ ಅವರೆಡಿಗಿನ ನನ್ನ ಪ್ರೀತಿಯ ಬಗ್ಗೆ ನಿಮ್ಮ ಹೊಟ್ಟೆ ಉರಿ ಯಾಕೆ ಸ್ವಾಮಿ,ಆರೋಗ್ಯಕ್ಕೆ ಒಳ್ಳೆಯದಲ್ಲ 🙂
ತಾವು ಹಿಂದುವೋ. ಹಾಗಾದರೆ ಹಿಂದೂ ಧರ್ಮ ಗ್ರಂಥದಲ್ಲಿ “ಗೋ ರಕ್ಷಣೆ” ಪ್ರತಿಯೊಬ್ಬ ಹಿಂದುವಿಂದ ಧರ್ಮ ಏನು ಇರುವಾಗ, ತಾವು ಹೇಗೆ ಗೋ ಭಕ್ಷನೆಯನ್ನು ಸಮರ್ಥಿಸುವಿರಿ? ಹಾಗು ಸಮರ್ಥಿಸಿ ಕೂಡ ತಾನು ಹಿಂದೂ ಎನ್ನುವಿರಿ?
ಇದು ಅಸಹ್ಯ ಬೂಟಾಟಿಕೆ? ಇಲ್ಲ ಅಜ್ಞಾನಿಯ ಮಾತು?
ಅಂದ ಹಾಗೆ ನಾನು ನಿಮಗೆ ಯಾವ ಅಪ್ಪಣೆಯೂ ಕೊಡಲಿಲ್ಲ. ನಾನು ಇದುವರೆಗೂ ‘ಸಮಾಜ ಹೀಗಿರಬೇಕು’ ಎಂದು ದೊಡ್ಡ ತತ್ವ ಜ್ಞಾನಿಯಾ ಹಾಗೆ ಬರಹದ ಮೇಲೆ ಬರಹವನ್ನೂ ಎಲ್ಲಾ ವಿಷಯದ ಬಗ್ಗೆ ಬರೆದಿಲ್ಲ.
ನಾನು ಬರೀ ಪ್ರಶ್ನಿಸುತ್ತೇನೆ. ನನ್ನ ಪ್ರಶ್ನೆ “ಒಬ್ಬ ಗೋ ಹತ್ಯೆಯನ್ನೂ ಸಮರ್ಥಿಸಿ ಕೂಡ ಹಿಂದೂವಾಗಿ ಇರಲು ಉಂಟೆ? ”
ಒಬ್ಬರಿಗೆ ಈ ಧರ್ಮ ಪ್ರಜ್ಞೆ ಇಲ್ಲವೇ ಜ್ಞಾನವಿಲ್ಲದಿದ್ದರೆ, ಹಿಂದೂ, ವಿವೇಕಾನಂದ, ಭಗತ್-ಸಿಂಗ ಎಂದು ಮಂದಿ ಮನಲ್ಲಿ ಉದ್ವೇಗ ಹಾಗು ದ್ವೇಷದ ವಿಷಬೀಜ ಬಿತ್ತುವ ಕೆಲಸಕ್ಕೆ ಕೊಡುಗೆಯಾಗಬಾರದು. ಅತಂಹ ಅವಿವೇಕಿಗಳನ್ನೂ ಹಾಗು ಅವರ ರಂಪಾಟವನ್ನೂ ಸಹಿಸಿಕೊಂಡೆ ನಮ್ಮ ದೇಶದಲ್ಲಿ ಈ ಅತಿರೇಕ ಮೌಡ್ಯ ತುಂಬಿಕೊಂಡಿರುವುದು.
ತಾವು ‘ಮಂಗಲ್ ಪಾಂಡೆ’ ಕೆಲ ಜಾತಿಯ ಹುಡುಗ ಎಂದುದು ತಪ್ಪು. ಆತ ಒಬ್ಬ ಬಿಹಾರದ ಬ್ರಾಹ್ಮಣ.! ಸ್ವಲ್ಪ ಅಧ್ಯಯನ ಮಾಡಿ.!
ಮಂಗಲ್ ಪಾಂಡೆ ಕೆಳ ಜಾತಿಯವನು ಅಂತ ನಾನು ಹೇಳಿಲ್ಲ ಮಾಯ್ಸ.
ಸಾವರ್ಕರ್ ಅಂತ ಹಿಂದುತ್ವವಾದಿಗಳೇ ಗೋ-ಮಾಂಸ ಭಕ್ಷಣೆಯ ಬಗ್ಗೆ ಯಾವ ನಿಲುವು ತಳೆದಿದ್ದರು ಅನ್ನುವುದು ತಮಗು ಗೊತ್ತಿರಬೇಕು.
ಎಲ್ಲರೂ ಒಪ್ಪುವುದಾದರೆ ನಿಷೇಧವಾಗಲಿ ಬಿಡಿ.ಗೊಡ್ಡು ರಾಜಕೀಯ ಮಾಡಿಕೊಂಡು ಬೀಫ಼್ ಫ಼ೆಸ್ಟಿವಲ್ ಮಾಡಿಸುವ ಸೋಗಲಾಡಿ ಎಡ ಪಂಥಿಯ ಸಂಘಟನೆಯಂತೆ ಇಬ್ಬಗೆ ನೀತಿ ನನ್ನಲಿಲ್ಲ.ನೀವು ಅದನ್ನ ಸಾಬೀತು ಮಾಡಲು ಪ್ರಯತ್ನಿಸುವುದಾದರೆ ಒಳ್ಳೆಯದು ಮಾಡುತ್ತಿರಿ.
ಹೌದು ನಿಷೇಧವಾದರೆ ನಿಮಗೆ ಲಾಸು.. ನನಗೇನಿಲ್ಲ ಯೋಚಿಸಿ ನೋಡಿ.ಆದರೆ ಯಾವ ಕಾನೂನು ಬಂದರೂ ನನ್ನ ತಟ್ಟೆಯ ಕೋಳಿ-ಮೀನಿಗೆ ಕೈ ಹಾಕುವಂತಿಲ್ಲ ಅಷ್ಟೆ 🙂
“ಸಾವರ್ಕರ್ ಅಂತ ಹಿಂದುತ್ವವಾದಿಗಳೇ ಗೋ-ಮಾಂಸ ಭಕ್ಷಣೆಯ ”
ಆಹಾ! ವೇದ, ಮನುಸ್ಮ್ರಿತಿ, ಭಗವದ್ಗೀತೆಗಳಿಗಿಂತ ನಾವು ಈಗ ಹಿಂದೂ ಧರ್ಮವನ್ನು ಅರಿಯಲು ಸಾವರ್ಕರ್ ಎಂಬ ನಾಸ್ತಿಕರ ಮಾತು ನಂಬ ಬೇಕು. ತಮ್ಮ ಬೇಳೆ ಬೇಯಿಸಿಕೊಳ್ಳಲು ‘ನಾಸ್ತಿಕ ಹಿಂದೂ’ ಎಂಬ ಹೊಸ ಪಂತವನ್ನು ಸೃಷ್ಟಿಸಿಕೊಂಡವರು ಅವರು.
“ನನ್ನ ತಟ್ಟೆಯ ಕೋಳಿ-ಮೀನಿಗೆ ಕೈ ಹಾಕುವಂತಿಲ್ಲ ಅಷ್ಟೆ ”
ಇಷ್ಟೇ ತಮ್ಮ ಧರ್ಮನಿಷ್ಠೆ! ಕೋಳಿ-ಮೀನು ನಿಮ್ಮ ಧರ್ಮಕ್ಕಿಂತ ಗಂಭೀರ. ಮಾಂಸಾಹಾರ ವರ್ಜ್ಯ. ಉತ್ತಮ ಹಿಂದೂ ಯಾವಾಗಲು ಸಸ್ಯಾಹಾರಿಯೇ. ನಿಮಗೆ ಬೇಕಾದ ಹಾಗೆ ಧರ್ಮವನ್ನೂ ಚೆನ್ನಾಗೆ ತಿರುಚಿಕೊಳ್ಳುವಿರಿ. ತುಸು ಅರಚಿಕೊಳ್ಳುವ ಧರ್ಮದ ಗ್ರಂಥಗಳನ್ನು ಓದಿ ನೋಡಿ.!
ಮೊದಲು ಸಸ್ಯಹಾರವನ್ನು ಪಾಲಿಸಿ ಆಮೇಲೆ ‘ಧರ್ಮ’ತರ್ಕಕ್ಕೆ ಇಳಿಯಬಹುದು. ಏಕೆಂದರೆ ಸಸ್ಯಾಹಾರ ಹಿಂದೂ ಧರ್ಮದಲ್ಲಿ ಕಡ್ದಾಯವಲ್ಲದಿದ್ದರೂ, ಅದು ಸಾಧನೀಯ ಉತ್ತಮ ಸ್ತಿತಿ.
ನೀವೆ ಚಿಕನ್ ತಿಂದು ನಮ್ಗೆ ಸಸ್ಯಾಹಾರದ ಪಾಠ ಮಾಡುವುದರ ಹಿಂದಿನ ಉದ್ದೇಶ? 🙂
ನಾನು ನಿಮಗೆ ಚಿಕನ್ ತಿನ್ನಿ/ತಿನ್ನ ಬೇಡಿ ಅನ್ನುತ್ತಿಲ್ಲ. ಹಲ ಹಿಂದೂಗಳು ಚಿಕನ್ ತಿಂತಾರೆ ..
ಆದರೆ ‘ದನ ತಿನ್ನೋದನ್ನು’ ಯಾವ ಹಿಂದುವೂ ಸಮರ್ಥಿಸಬಾರದು, ಸಮರ್ಥಿಸಲ್ಲ. ಅದಕ್ಕೆ ಹಿಂದೂಗಳು ದನ ತಿನ್ನೋದನ್ನು ಹಾಗು ‘ಗೋ ಮಾಂಸ ಭಕ್ಷಣೆಯ ಸಮರ್ಥನೆಯನ್ನು’ ಧರ್ಮಭ್ರಷ್ಟತೆ ಎಂದು ಹೇಳಿದ್ದು.
ನಾನು ಕೋಳಿ, ಕುರಿ, ಹಂದಿ, ಯಾವ ಹಿಂದೂ ಧರ್ಮದಲ್ಲಿ ಹೇಳಿರುವ ಪ್ರಾಣಿ ತಿನ್ನೋದು ತಪ್ಪು ಅಂದಿಲ್ಲ. ಆದರೆ ‘ದನ ತಿನ್ನೋದನ್ನು’ ಯಾವ ಹಿಂದುವೂ ಸಮರ್ಥಿಸಬಾರದು.
ಇನ್ನು ನಾನು ಯಾವ ‘ಕಟ್ಟೆ’ ಕಟ್ಟಿ ನಿಮ್ಮ ಹಾಗೆ ಬುರುಡೆ ಮೇಲ್ ಬುರುಡೆ. ಮಾತು ಮಾತಿಗೂ ‘ಹಿಂದೂ’, ‘ವಿವೇಕಾನಂದ’, ‘ಭಗತ್-ಸಿಂಘ’ ಅಂತ ಬೂಟಾಟಿಕೆ ಮಾಡ್ತಿಲ್ಲ.
ತಾವ್ ತಮ್ಮ ಬುದ್ದಿಮಟ್ಟ ಅರಿತು ತೆಪ್ಪಗೆ ಇದ್ದಿದ್ರೆ ನಾವ್ ಯಾಕೆ ಬಂದು ನಿಮ್ಮನ್ನು ಖಂಡಿಸುತಿದ್ವಿ ? ಹೀಗೆ ಬುರುಡೆ ಬರೆದುಕೊಂಡೆ ‘ಹಲವರು’ ದೊಡ್ಡ ಸಾಹಿತಿ, ವಿಮರ್ಶಕ ಅಂತ ಹೆಸರು ಮಾಡಿ ನಮ್ಮ ಸಮಾಜವನ್ನು ಹಾಲು ಮಾಡ್ತಾ ಇರೋದು.
“ಮೊದಲು ಸಸ್ಯಹಾರವನ್ನು ಪಾಲಿಸಿ ಆಮೇಲೆ ‘ಧರ್ಮ’ತರ್ಕಕ್ಕೆ ಇಳಿಯಬಹುದು. ಏಕೆಂದರೆ ಸಸ್ಯಾಹಾರ ಹಿಂದೂ ಧರ್ಮದಲ್ಲಿ ಕಡ್ದಾಯವಲ್ಲದಿದ್ದರೂ, ಅದು ಸಾಧನೀಯ ಉತ್ತಮ ಸ್ತಿತಿ.”
ಸರಿಯಾಗಿ ಓದಿ. ಒಂದು ಪಕ್ಷ ನಾನು ಮಾಂಸಾಹರಿಯಾಗಿದ್ದರೂ, ಸಸ್ಯಾಹಾರ ಜೀವನ ಉತ್ತಮವಾದುದು ಏನು ಹಿಂದೂ ಧರ್ಮ ಹೇಳಿದೆ ಎಂದು ನಂಬುವೆನು.
ನಾನು ನಿಮಗೆ ಚಿಕನ್ ತಿನ್ನಿ/ತಿನ್ನ ಬೇಡಿ ಅನ್ನುತ್ತಿಲ್ಲ. ಹಲ ಹಿಂದೂಗಳು ಚಿಕನ್ ತಿಂತಾರೆ ..
ಆದರೆ ‘ದನ ತಿನ್ನೋದನ್ನು’ ಯಾವ ಹಿಂದುವೂ ಸಮರ್ಥಿಸಬಾರದು, ಸಮರ್ಥಿಸಲ್ಲ. ಅದಕ್ಕೆ ಹಿಂದೂಗಳು ದನ ತಿನ್ನೋದನ್ನು ಹಾಗು ‘ಗೋ ಮಾಂಸ ಭಕ್ಷಣೆಯ ಸಮರ್ಥನೆಯನ್ನು’ ಧರ್ಮಭ್ರಷ್ಟತೆ ಎಂದು ಹೇಳಿದ್ದು.
ನಾನು ಕೋಳಿ, ಕುರಿ, ಹಂದಿ, ಯಾವ ಹಿಂದೂ ಧರ್ಮದಲ್ಲಿ ಹೇಳಿರುವ ಪ್ರಾಣಿ ತಿನ್ನೋದು ತಪ್ಪು ಅಂದಿಲ್ಲ. ಆದರೆ ‘ದನ ತಿನ್ನೋದನ್ನು’ ಯಾವ ಹಿಂದುವೂ ಸಮರ್ಥಿಸಬಾರದು.
ಇನ್ನು ನಾನು ಯಾವ ‘ಕಟ್ಟೆ’ ಕಟ್ಟಿ ನಿಮ್ಮ ಹಾಗೆ ಬುರುಡೆ ಮೇಲ್ ಬುರುಡೆ. ಮಾತು ಮಾತಿಗೂ ‘ಹಿಂದೂ’, ‘ವಿವೇಕಾನಂದ’, ‘ಭಗತ್-ಸಿಂಘ’ ಅಂತ ಬೂಟಾಟಿಕೆ ಮಾಡ್ತಿಲ್ಲ.
ತಾವ್ ತಮ್ಮ ಬುದ್ದಿಮಟ್ಟ ಅರಿತು ತೆಪ್ಪಗೆ ಇದ್ದಿದ್ರೆ ನಾವ್ ಯಾಕೆ ಬಂದು ನಿಮ್ಮನ್ನು ಖಂಡಿಸುತಿದ್ವಿ ? ಹೀಗೆ ಬುರುಡೆ ಬರೆದುಕೊಂಡೆ ‘ಹಲವರು’ ದೊಡ್ಡ ಸಾಹಿತಿ, ವಿಮರ್ಶಕ ಅಂತ ಹೆಸರು ಮಾಡಿ ನಮ್ಮ ಸಮಾಜವನ್ನು ಹಾಲು ಮಾಡ್ತಾ ಇರೋದು.
“ಮೊದಲು ಸಸ್ಯಹಾರವನ್ನು ಪಾಲಿಸಿ ಆಮೇಲೆ ‘ಧರ್ಮ’ತರ್ಕಕ್ಕೆ ಇಳಿಯಬಹುದು. ಏಕೆಂದರೆ ಸಸ್ಯಾಹಾರ ಹಿಂದೂ ಧರ್ಮದಲ್ಲಿ ಕಡ್ದಾಯವಲ್ಲದಿದ್ದರೂ, ಅದು ಸಾಧನೀಯ ಉತ್ತಮ ಸ್ತಿತಿ.”
ಸರಿಯಾಗಿ ಓದಿ. ಒಂದು ಪಕ್ಷ ನಾನು ಮಾಂಸಾಹರಿಯಾಗಿದ್ದರೂ, ಸಸ್ಯಾಹಾರ ಜೀವನ ಉತ್ತಮವಾದುದು ಏನು ಹಿಂದೂ ಧರ್ಮ ಹೇಳಿದೆ ಎಂದು ನಂಬುವೆನು.
ಮನುಸ್ಮೃತಿಯನ್ನ ಓದಲೇಬೇಕು ಅನ್ನುವುದು ನನ್ನ ಧರ್ಮಕ್ಕೆ ಕಡ್ಡಾಯವೇನೂ ಅಲ್ಲ ಮತ್ತು ಅದರಲ್ಲಿ ಹೇಳಿರುವುದನ್ನ ಪಾಲಿಸಲೇಬೇಕು ಅಂತೇನೂ ಇಲ್ಲ.ಸುಮ್ಮನೆ ಅದನ್ನ ಮುಂದಿಟ್ಟುಕೊಂಡು ಧರ್ಮವನ್ನ ದೂಷಿಸುವುದು ಈಗ ಹಳೆ ಫ಼್ಯಾಷನ್ ಆಗಿದೆ.ಹೊಸತನ್ನ ಪ್ರಯತ್ನಿಸಿ ಮಾಯ್ಸ 🙂
ಈ ಗ್ರಂಥಗಳನ್ನೆಲ್ಲ ನಾನು ಓದಿಕೊಂಡವನಲ್ಲ (ಓದಿದರೆ ತಲೆಗೆ ಹತ್ತಬೇಕಲ್ಲ 😉 )
“ಈ ಗ್ರಂಥಗಳನ್ನೆಲ್ಲ ನಾನು ಓದಿಕೊಂಡವನಲ್ಲ (ಓದಿದರೆ ತಲೆಗೆ ಹತ್ತಬೇಕಲ್ಲ )”
ಅದೇ ಧರ್ಮ, ಅದರಲ್ಲಿ ಕೂಡ ವೈದಿಕ ಧರ್ಮ ನಿಮ್ಮನ ಅಜ್ಞಾನಿಗಳ ಕೈಯ್ಯಲ್ಲಿ ಸಿಕ್ಕಿ ರಾಜಕೀಯ ದಾಳವಾಗಿದೆ.
ಹಾಗಾದರೆ ತಾವು ಯಾವ ಹಿಂದೂ ಧರ್ಮಗ್ರಂಥದಲ್ಲಿ ಪರಿಣಿತರು? ವೇದದಲ್ಲೂ ಗೋ ರಕ್ಷಣೆಯ ಮಾತಿದೆ. ಭಗವದ್ಗೀತೆಯಲ್ಲೂ ಇದೆ.
ಯಾವ ಧರ್ಮ ಗ್ರಂಥವನ್ನೂ ಓದದೆ, ಹಿಂದೂ ಧರ್ಮ ಹಿಂಗೆ, ಅದು ಹಿಂಗೆ ಅಂತ ಅಜ್ಞಾನಿಯ ತರ ಹಿಂದೂ ಧರ್ಮದ ಬಗ್ಗೆ ಇಲ್ಲ ಸಲ್ಲದು ಸಾರುವುದು ಯಾಕೆ?!
ರಾಜಕೀಯ ದಾಳ ಮಾಡಿಕೊಂಡವರೆ ಮೊನ್ನೆ ಬೀಫ಼್ ಫ಼ೆಸ್ಟಿವಲ್ ಮಾಡಿಸಿದ್ದು.ಅವರನ್ನ ಹೋಗಿ ಕೇಳಿ ಬೂಟಾಟಿಕೆಯ ಬಗ್ಗೆ
“ಬೀಫ಼್ ಫ಼ೆಸ್ಟಿವಲ್ ಮಾಡಿಸಿದ್ದು.ಅವರನ್ನ ಹೋಗಿ ಕೇಳಿ ”
ಅವರೇನು ಹಿಂದೂಗಳು ನಾವು ಏನು ಬೀಫ್ಹ್ ಹಬ್ಬ ಮಾಡಿಲ್ಲ. ಆದರೆ ತಾವು ಹಿಂದೂ ಹಿಂದೂ ಹಿಂದೂ ಇನ್ನು ಹರ್ಕೊಂಡು ಅದನ್ನು ಸಮರ್ಥನೆ ಮಾಡ್ತಿದ್ದೀರೀ.
ಅವರೊಮ್ಮೆ ‘ಹಿಂದೂ ಬೀಫ್ಹ್ ಹಬ್ಬ’ ಎಂದು ಮಾಡಿದ್ದರೆ ನಾನು ಅವರನ್ನೂ ಪ್ರಶ್ನಿಸುತ್ತಿದೆ. ಕಾಂಚ ಇಲ್ಲಯ್ಯ ಮುಂದಾದ ಓಸ್ಮಾನಿಯಾದ ಆಧ್ಯಾಪಕರು ಹಿಂದೂ ಧರ್ಮದಲ್ಲಿಲ್ಲ.!
ಪೋರ್ಕ್ ಫ಼ೆಸ್ಟಿವಲ್ ಮಾಡೋಕೆ ಅಲ್ಲಿ ಅವಕಾಶ ಕೊಡಿಸಬಲ್ಲರಾ ಈ ಜಾತ್ಯಾತಿವಾದಿಗಳು?
ನಾನು ಜಾತ್ಯಾತಿವಾದಿ ಅಲ್ಲ.
ತಾವು ಇಲ್ಲಿ ಈ ಬರಹದಲ್ಲಿ “ಜಾತ್ಯಾತಿವಾದಿ ” ಸೋಗು ಹಾಕಿದ್ದೀರ ತಾನೇ? 🙂
ಈ ಲೇಖನ ಬರೆದವರು “ರಾಕೇಶ್ ಶೆಟ್ಟರೆ ” ಹೌದೋ? ಛೆ ! ನಾನಿದನ್ನ ಆಶಿಸಿರಲಿಲ್ಲ! ಊಹಿಸಿರಲೂ ಇಲ್ಲಾ! ಇರಲಿ ಬಿಡಿ! ಅವರವದ್ದು ಅವರವರಿಗೆ!
>> ’ಮಾಂಸಹಾರ’ ತಿಂದರೆ ತಾಮಸ ಗುಣ ಬರುತ್ತದೆ
ಅದು ಬಂದೇ ಬರುತ್ತದೆ ಅಂತ ಅಲ್ಲ , ಅದು ತಾಮಸ ಗುಣ ಹೆಚ್ಚಾಗಲು ಪ್ರಚೋದಿಸುತ್ತದೆ ಅಂತ ಅಷ್ಟೇ !
ಅಸಿಡಿಟಿ ಇರೋರು ಖಾರ ಎಣ್ಣೆ ತಿನ್ನಬಾರದು ಅಂತಾರೆ ಡಾಕ್ಟ್ರು , ಅದರರ್ಥ ಖಾರ ,ಎಣ್ಣೆ ತಿಂದರೆ ಅಸಿಡಿಟಿ ಬಂದೇ ಬರುತ್ತೆ ಅಂತ ಅಲ್ಲ ಶೆಟ್ರೆ! ಹಾಗೆಯೇ ಮದ್ಯ ಸೇವಿಸಿದರೆ ಲಿವರ್ ಹಾಳಾಗುತ್ತೆ ಅಂತಾರೆ? ಆದರೆ ಎಷ್ಟೋ ಜನರಿಗೆ ಎನೋಒ ಆಗಿಲ್ಲಾ? ಆರಾಮಾಗೆ ಇದ್ದಾರೆ? ಕುಡಿದು ತೂರಾಡಿ ಮೊರಿಲಿ ಬಿದ್ದು ಎದ್ದು ಕೊಂಡು! ಅಲ್ಲವೇ?
ಬೇಸರವಾಯ್ತು ಶೆಟ್ರೆ!
ಮೋರೀಲಿ ಬಿದ್ದಿದ್ದವರ ತಂಟೆಗೆ ನೀವ್ಯಾಕೆ ಹೋಗುತ್ತೀರಿ? ನೀವು ಏನೇನು ತಿನ್ನುತ್ತೀರಿ ಹೇಳಿ, ಅದರಲ್ಲಿ ನಾನು ತಾಮಸ ಹುಡುಕುತ್ತೇನೆ.
ರವಿ ಸರ್,
ನಾನೇ ಖುದ್ದು ಮಾಂಸಹಾರಿಯಾಗಿ ಇನ್ನೊಬ್ಬನಿಗೆ ಮಾಂಸ ತಿನ್ನಬೇಡ ಅಂತ ಹೇಳುವುದಾದರೂ ಹೇಗೆ? ನಾನೇ ನೆಟ್ಟಗಿಲ್ಲದ ಮೇಲೆ ಇನ್ನೊಬ್ಬನ ಸರಿಯಾಗು ಅನ್ನುವುದು ಆತ್ಮವಂಚನೆಯಾಗುತ್ತದೆ ಅನ್ನುವುದು ನನ್ನ ಅನಿಸಿಕೆ.
ಇನ್ನು ಮಾಂಸಹಾರದ ತಾಮಸ ಗುಣದ ಬಗ್ಗೆ ನಾನೇಕೆ ಹೇಳಿದೆ ಅನ್ನುವುದನ್ನ ನೀವು ’ಮಲ್ಯ’ರ ಬಗ್ಗೆ ಬಂದ ಲೇಖನ ಓದಿ ನೋಡಿದರೆ ಗೊತ್ತಾಗಬಹುದು
“ನಾನೇ ಖುದ್ದು ಮಾಂಸಹಾರಿಯಾಗಿ ಇನ್ನೊಬ್ಬನಿಗೆ ಮಾಂಸ ತಿನ್ನಬೇಡ ಅಂತ ಹೇಳುವುದಾದರೂ ಹೇಗೆ? ನಾನೇ ನೆಟ್ಟಗಿಲ್ಲದ ಮೇಲೆ ಇನ್ನೊಬ್ಬನ ಸರಿಯಾಗು ಅನ್ನುವುದು ಆತ್ಮವಂಚನೆಯಾಗುತ್ತದೆ ಅನ್ನುವುದು ನನ್ನ ಅನಿಸಿಕೆ”
ಹಾಗಿದ್ದ ಮೇಲೆ ನೀವು ದೊಡ್ಡದಾಗಿ ‘ಹಿಂದೂ’ ‘ಹಿಂದೂ’ ಎಂದು ಮಾತು ಮಾತುವಿಗೂ ಹೇಳುವುದು ಎಂತು? ಮಾಂಸಾಹಾರ ಅಧಮ ಇದು ಹಿಂದೂ ಧರ್ಮದಲ್ಲಿದೆ.!
ಈ ಬರಹದಲ್ಲಿ ತಾವು ಗೋ ಮಾಂಸ ಭಕ್ಷಣೆಗೆ ಸಮರ್ಥನೆಯನ್ನೂ ಮಾಡಿ ಧರ್ಮ ಭ್ರಷ್ಟತೆ ತೋರಿಸಿದ್ದೀರಿ. ಇದುವೆ ಬೂಟಾಟಿಕೆ. ನಿಮಗ ನಿಮ್ಮ ಧರ್ಮವೇ ತಿಳಿದಿಲ್ಲ. ಸುಮ್ಮನೆ ಯಾವುದೋ ಲಾಭಕ್ಕೆ ‘ಹಿಂದೂ’,’ವಿವೇಕಾನಂದ’, ‘ಭಗತ್-ಸಿಂಗ್’ ಮುಂತಾದ ಪದಗಳನ್ನೂ ಬಳಸುವಿರಿ.
ಹೇಯ!
🙂
ನನ್ನನ್ನ ಧರ್ಮ ಭ್ರಷ್ಟನನ್ನಾಗಿ ಮಾಡಲು ಬಹಳ ಉತ್ಸುಕತೆಯಲ್ಲಿರುವಂತಿದೆ ತಾವು.ಮಾಡಿಕೊಳ್ಳಿ. ಶುಭರಾತ್ರಿ 🙂
ನೀವು ಧರ್ಮಭ್ರಷ್ಟ. ನಾನು ಸಾಬೀತು ಮಾಡಬೇಕಾಗಿಲ್ಲ. ತಾವು ಏನು ಕೆಲಸ ಮಾಡಿದಾರೂ ತಾವೇ ‘ಹಿಂದೂ’ ಏನು ಹೇಳಿ, ‘ಹಿಂದೂ’ಗಳಲ್ಲ ನಿಮ್ಮ ಹಾಗೆ ಎಂದು ಅದಕ್ಕೆ ಕುಖ್ಯಾತಿ ತಂದಿದ್ದೀರಿ.
ನೀವು ಧರ್ಮಭ್ರಷ್ಟ. ನಾನು ಸಾಬೀತು ಮಾಡಬೇಕಾಗಿಲ್ಲ. ತಾವು ಏನು ಕೆಲಸ ಮಾಡಿದಾರೂ ತಾವೇ ‘ಹಿಂದೂ’ ಎಂದು ಹೇಳಿ, ‘ಹಿಂದೂ’ಗಳಲ್ಲ ನಿಮ್ಮ ಹಾಗೆ ಎಂದು ಅದಕ್ಕೆ ಕುಖ್ಯಾತಿ ತಂದಿದ್ದೀರಿ.
“ದನದ ಹಾಲು ಕುಡಿಯುವ ಎಲ್ಲರೂ ಮಾಂಸಾಹಾರಿಗಳೇ”
ಈ ವಿಷಯವಾಗಿ ಹೇಳುವುದಾದರೆ, ‘ಹಾಲು ಒಂದು ಪ್ರಾಣಿಯನ್ನು ಕೊಂದು ಪಡೆಯುವನ್ತದ್ದಲ್ಲ’ ಅದಕ್ಕೆ ಅದು ಧರ್ಮ ಸಮ್ಮತ.
^ಗೋ ಭಕ್ಷಣೆ^ ಹಿಂದೂ ಧರ್ಮದಲ್ಲಿ ನಿಶಿದ್ದ, ಅದರಲ್ಲಿ ಎರಡು ಮಾತಿಲ್ಲ. ಹಾಗು ಮಾಂಸಾಹಾರ ‘ತಾಮಸ’ !
ಆದರೆ ಇವೊತ್ತಿನ ಚರ್ಚೆ ಇರಬೇಕಾಗಿರುವುದು, ಹಿಂದೂ ಧರ್ಮದಲ್ಲಿ ನಿಶಿದ್ಧವಾದುದು ಕೂಡ ಸಾರ್ವಜನಿಕ ಸ್ಥಾನಗಳಲ್ಲಿ ಮಾನ್ಯವೇ ಎಂದು? ಹಿಂದೂ ಧರ್ಮದಂತೆ ಎಲ್ಲರೂ ಭಾರತದಲ್ಲಿ ಆಚಾರ ವಿಚಾರವನ್ತರಾಗಿರಬೇಕಾ? ಎಂಬುದು.
“…ಹಾಲು ಒಂದು ಪ್ರಾಣಿಯನ್ನು ಕೊಂದು ಪಡೆಯುವನ್ತದ್ದಲ್ಲ’ ಅದಕ್ಕೆ ಅದು ಧರ್ಮ ಸಮ್ಮತ…”
ಹಾಗಾದರೆ ಪವಿತ್ರ ಪಂಚಾಮೃತದಲ್ಲಿಯೇ ಬಳಕೆಯಾಗುವ ‘ಜೇನುತುಪ್ಪ’? ಕೃಷ್ಣಾಜಿನ? ರೇಶ್ಮೆವಸ್ತ್ರ? ಸಕ್ಕರೆಯ ತಯಾರಿಕೆಯಲ್ಲಿ ಬಳಕೆಯಾಗುವ ಜಿಲೆಟಿನ್ ಅನ್ನು ಪ್ರಾಣಿಗಳ (ಮುಖ್ಯವಾಗಿ ಹಸು/ದನಗಳ) ಎಲುಬಿನಿಂದ ಮಾಡುತ್ತಾರೆ. ಬಂಗಾಳಿ ಬ್ರಾಹ್ಮಣರಿಗೆ ಮೀನೂ, ಪಶುಪತಿನಾಥ ದೇವಾಲಯದ ಅರ್ಚಕರಿಗೆ ಗೋವೂ ಆಹಾರ. ಆದಕಾರಣ ‘ಮಾಯ್ಸ’ ಅವರ ಪ್ರಕಾರ ಎಲ್ಲರೂ ಧರ್ಮಭ್ರಷ್ಠ್ರರು, -ಅವರನ್ನೂ ಸೇರಿಸಿಕೊಂಡು!
ಸ್ವಾಮೀ.
ಬೆಂಗಾಲಿ ಬ್ರಾಹ್ಮಣರು ದನ ತಿಂತಾರ? ಯಾವ ಬ್ರಾಹ್ಮಣರು ದನ ತಿಂತಾರೆ ನಮ್ ದೇಶದಲ್ಲಿ? ಒಂದು ವೇಳೆ ಅವರು ತಿಂದರು ಅಂದ್ರೆ ಎಲ್ರೂ ತಿನ್ನಬಹುದ? ತಾವು ಬ್ರಾಹ್ಮಣರು ಏನ್ ಮಾಡ್ತಾರೋ ಅದನ್ನೆಲ್ಲಾ ಸರಿ ಅಂತೀರಾ?
“ಪಶುಪತಿನಾಥ ದೇವಾಲಯದ ಅರ್ಚಕರಿಗೆ ಗೋವೂ ಆಹಾರ”
ಇದಕ್ಕೆ ಏನು ಆಧಾರ? ಇದರ ಅರ್ಥವೇನು?
“ಗೋ ಸಂರಕ್ಷಣೆ” ಹಿಂದೂ ಧರ್ಮದ ಒಂದು ಮಹತ್ವದ ಅಂಶ. ಬೇರೆ ಪ್ರಾಣಿಗಳ ಬಗ್ಗೆ ಬೇರೆ ಚರ್ಚೆ.!
ಹಿಂದುವಾಗಿ ಗೋ ಭಕ್ಷಣೆಗೆ ಸಮರ್ಥನೆ-ಕೊಡುವವರೆಲ್ಲ ಧರ್ಮಭ್ರಷ್ಟರೆ. ನಾನು/ಯಾರೂ ಹಿಂದುವಾಗಿ ಆ ಕೆಲಸ ಮಾಡಿದರೂ ನಾನೂ/ಅವರೂ ಧರ್ಮಭ್ರಷ್ಟ. ಇಲ್ಲಿ ನೀವು? ಹಾಗು ರಾಕೇಶ ಶೆಟ್ರು ಇಬ್ರೂ ಗೋ ಭಕ್ಷಣೆಗೆ ಸಮರ್ಥನೆ ಕೊಟ್ಟು, ನೀವು ಹಿಂದೂ ಎಂದು ಕರೆದುಕೊಂಡರೆ, ಅದು ಧರ್ಮಭ್ರಷ್ಟತೆ.
ನನ್ನ ಮಾತು ಬಿಟ್ಟಾಕಿ. ಹೋಗಿ ಧರ್ಮಗ್ರಂಥಗಳನ್ನು ಸರಿಯಾಗಿ ತಿಳಿದವರನ್ನೇ ಕೇಳಿ.
ಕಾಮದೇನು, ಕಲ್ಪವೃಕ್ಷ ಎರಡೂ ಪವಿತ್ರವೇ. ಯಾಕೆಂದರೆ ಅವನ್ನು ನಾನಾ ವಿಧವಾಗಿ ಬಳಸುತ್ತಿರುವುದರಿಂದ! ಮಾನವ ತಾನು ಬಳಕೆ ಮಾಡದಿರುವ ಯಾವುದಕ್ಕೂ ಪಾವಿತ್ರ್ಯವನ್ನು ಆರೋಪಿಸಿಲ್ಲ. ಗೋವಾಗಿರಬಹುದು, ಹಂದಿಯಾಗಿರಬಹುದು, ಒಂದು ಹುಲ್ಲೆಸಳು ಕೂಡ ಆಗಿರಬಹುದು ನಿಸರ್ಗ, ಅವುಗಳಲ್ಲಿ ಮೇಲು ಕೀಳು ಎಂದು ವಿಂಗಡಿಸಿಲ್ಲ. ಈ ತಾರತಮ್ಯವೆಲ್ಲಾ ನಮ್ಮ ಸ್ವಯಂ ಸೃಷ್ಟಿ. ಇದನ್ನಿಟ್ಟುಕೊಂಡು ವಾದ ಮಾಡುವುದು ಮೂರ್ಖತನ. ಸಸ್ಯಾಹಾರಿಯಾದ(ಹಾಗಂತ ನಂಬಿಕೆ) ಪೇಜಾವರ ಸ್ವಾಮೀಜಿಗಿಂತಲೂ ಮಾಂಸಾಹಾರಿಗಳೂ ಆದ ಕುವೆಂಪು, ರಾಜಕುಮಾರ್ ನೂರಾರುಪಟ್ಟು ಮಾನವೀಯ ಜನ ಎಂಬುದು ನಾವು ನೆನಪಿಡಬೇಕು.
ಒಂದು ಉತ್ತಮವಾದ ಹೇಳಿಕೆ ಕೊಟ್ಟಿದಕ್ಕೆ ಧನ್ಯವಾದಗಳು …….
ರಾಕೇಶ್ ಶೆಟ್ಟಿಯವರೇ,
ನಿಲುಮೆಯ ಮುಖಂಡರಲ್ಲಿ ತಾವೊಬ್ಬರೆಂದು ತಿಳಿದು ಈ ಪತ್ರ. ನಿಲುಮೆಯಲ್ಲಿ ಇತ್ತೀಚಿಗೆ ವೇದ/ ಶಾಸ್ತ್ರ/ ವೈದೀಕ ಆಚರಣೆಗಳೇ ಶ್ರೇಷ್ಠವೆನ್ನುವ ನಿಲುವಿನ ಬರಹಗಳು ದಂಡಿಯಾಗಿ ಬರುತ್ತಿವೆ. ವೇದಗಳಲ್ಲಿರುವುದೇ ಶ್ರೇಷ್ಠವೆನ್ನುವವರು ಅದೇಕೆ ಅದು ಇದುವರೆಗೂ ಕೆಲವೇ ಮಂದಿಯ ಸೊತ್ತಾಗಿತ್ತು ಎನ್ನುವುದನ್ನು ಯೋಚಿಸಿದರೆ ಒಳಿತು. ಯಾಕೆ ಈ ದೇಶದ ಹೆಚ್ಚಿನ ಜನಕ್ಕೆ ಇವರು ಹೀಗಳೆಯುವ ಇಂಗ್ಲೀಷರು ರೂಪಿಸಿದ ಶಿಕ್ಷಣವೇ ಸಿಕ್ಕಿತು? ಇವರು ಶ್ರೇಷ್ಠವೆನ್ನುವ ವೇದ ಪಾಠ ಇವರಿಗೆ ಯಾಕೆ ಇದುವರೆಗೂ ಸಿಕ್ಕಿರಲಿಲ್ಲ…ಯೋಚಿಸುವುದು ಒಳಿತು. ಸಸ್ಯಾಹಾರವೇ ಶ್ರೇಷ್ಠ ಎನ್ನುವ ಮಾತೇಕೆ? ಇವರು ಬೇಕಾದರೆ ಮಾಂಸಾಹಾರದಿಂದ ಆಗುವ ತೊಂದರೆಗಳ ಬಗ್ಗೆ, ಸಸ್ಯಾಹಾರದ ಒಳಿತಿನ ಬಗ್ಗೆ ಹೇಳುವುದು ಒಪ್ಪಬಹುದೇನೋ… ಆದರೆ ಮಾಂಸಾಹಾರ ಕೀಳು ಎನ್ನುವ ಮನಸ್ಥಿತಿ ಪಕ್ಕಾ ಪುರೋಹಿತಶಾಹಿ ಮನಸ್ಥಿತಿಯೇ ಆಗಿದೆ. ತಾವು ನಂಬುವ ವೈದಿಕ ಧರ್ಮವು ಇಡೀ ಭಾರತದಲ್ಲಿ ಎಲ್ಲರದ್ದೂ ಆಗಿತ್ತು ಎನ್ನುವ ಸುಳ್ಳನ್ನೇ ಹೇಳಿಕೊಳ್ಳುತ್ತಾ… ಇದೇ ಸರ್ವಶ್ರೇಷ್ಠ… ಇದನ್ನು ಒಪ್ಪದವರು ಕೀಳು ಎನ್ನುವ ತೆರನಾದ ಬರಹಗಳನ್ನೇ ನಿಲುಮೆ ಪುಂಖಾನುಪುಂಖವಾಗಿ ಪ್ರಕಟಿಸುತ್ತಾ ಬಂದಿದ್ದು ಅಭಿಗಾರ ಅಂತಹ ಇನ್ನೊಂದು ಸರಣಿಯಾಗಿದೆ. ಇಂಥವನ್ನೇ ನಿಲುಮೆ ತುಂಬಿಕೊಳ್ಳುತ್ತಾ ಇರುವುದು ಸರಿಯಾದ ನಡೆಯೇ? ವೈಜ್ಞಾನಿಕವಾದ ನಿಲುಮೆಯೇ? ಜನರಲ್ಲಿ ಮೇಲುಕೀಳು ಎಣಿಸದ ಸಮಾನತೆಯ ನಿಲುಮೆಯೇ? ಒಮ್ಮೆ ಯೋಚಿಸಿ ನೋಡಿ. ಇಷ್ಟನ್ನು ಬರೆಯಲು ನಾನು ಧೈರ್ಯ ಮಾಡಿದ್ದು ಕೂಡಾ ತಮ್ಮ ಲೇಖನ ನೋಡಿದ ಮೇಲೇ…ತಪಿದ್ದರೆ ಮನ್ನಿಸಿ.. ನಿಮ್ಮಿಷ್ಟದಂತೆ ಮುಂದುವರೆಯಿರಿ.
ಗೋ ಮಾಂಸ ವಿರೋಧಿಗಳು ಅದನ್ನು ದೇವರುಗಳ ತವರು ಎನ್ನುವ ಕಾರಣ ಕೊಡುತ್ತಾರೆ. ಅದೇ ಲಾಜಿಕ್ಕಿನಲ್ಲಿ ಮೀನು = ಮತ್ಸ್ಯಾವತಾರ, ನಾಯಿ = ದತ್ತವಾಹನ, ಹಂದಿ = ವರಹಾವತಾರ ಎಂದು ಯಾರಾದರೂ ನಿಷೇಧಿಸಿ ಎಂದರೆ? ಎಂದು ಯೋಚಿಸಿ..
ಅನಿಲ್,
ಈ ಬಗ್ಗೆ ಹಲವರ ಬಳಿ ಹೇಳಿದ್ದ ಮಾತನ್ನೇ ಹೇಳಬಯಸುತ್ತೇನೆ.
ನಿಲುಮೆಯ ನಿಲುವಿನಲ್ಲೇ ಹೇಳಿದಂತೆ ನಾವು ಎಲ್ಲ ರೀತಿಯ ಅನಿಸಿಕೆ-ಅಭಿಪ್ರಾಯಗಳಿಗೆ ವೇದಿಕೆಯಾಗಿದ್ದೇವೆ.ವೈಜ್ಞಾನಿಕವಾದ ಮತ್ತು ಎಲ್ಲ ರೀತಿಯ ನಿಲುವುಗಳಿಗೆ ನಾವು ದನಿಯಾಗುತ್ತೇವೆ.ಆದರೆ ಬರೆಯುವವರೇ ಇಲ್ಲದಿದ್ದರೇ ನಾವಾದರೂ ಏನು ಮಾಡಲು ಸಾಧ್ಯ?
ನಿಲುಮೆ ಬಲಪಂಥೀಯ ಅಂತ ಬಹಳಷ್ಟು ಜನರಿಗೆ ಅನ್ನಿಸಿದರೆ ಅದಕ್ಕೆ ಕಾರಣ ಎಡಪಂಥೀಯ ಲೇಖನಗಳು ನಮಗೆ ಬಂದಿಲ್ಲ ಅಂತಷ್ಟೇ.ಬಂದರೆ ನಮ್ಮ ಪ್ರಕಟಣಾ ತಂಡ ಪರಿಶೀಲಿಸಿ ಖಂಡಿತ ಪ್ರಕಟಿಸುತ್ತದೆ.
ಮನ್ನಿಸಿ ಅನ್ನುವ ಮಾತೆಲ್ಲ ಎಂತಕ್ಕೆ ಬಿಡಿ.ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು
ಈ ಬರಹದಲ್ಲಿ ತಾವು ಬಲವೋ ಎಡವೋ? ಇಲ್ಲ ಎಡಬಿಡಂಗಿಯೋ?
ಅದೇನು ಇದ್ದಕ್ಕಿದ್ದ ಹಾಗೆ ತಾವೂ ‘ಲಿಬರಲ್’ ಆಗಿದ್ದು?! ಮೀನು ರುಚಿ, ಧರ್ಮಕ್ಕಿಂತ ಮೋಹಕವೇ?
ಎಡಕ್ಕಾದರೂ ಹಾಕು,ಬಲಕ್ಕಾದರೂ ಹಾಕು ಮಾಯ್ಸ ಅಡ್ಡಿಯಿಲ್ಲ.ಒಟ್ನಲ್ಲಿ ನೀನ್ ಸ್ವಲ್ಪ ಸಮಾಧಾನ ಮಾಡಿಕೊಪ್ಪ. ನಾನು ಮೊದಲಿದ್ದ ಹಾಗೇ ಇದ್ದೀನಿ.ನೀ ಮಾತ್ರ ಏನೋ ಪ್ರೂವ್ ಮಾಡಹೊರಟಿದ್ದೀಯಾ. ಆಲ್ ದಿ ಬೆಸ್ಟ್. (ಈ ಕೊಂಡಿಯಲ್ಲಿ ನಮ್ಮ ಚರ್ಚೆ ಬೇಡ.ಅನಿಲ್ ಅವರಿಗೆ ಉತ್ತರಿಸಿದ್ದೀನಿ,ಅದೂ ಎಲ್ಲೇಲ್ಲೋ ಹೋಗೋದು ಬೇಡ.ಬೇರೆ ಕಡೆ ಬಾ : ) )
“ಎಡಕ್ಕಾದರೂ ಹಾಕು,ಬಲಕ್ಕಾದರೂ ಹಾಕು ಮಾಯ್ಸ ಅಡ್ಡಿಯಿಲ್ಲ.”
ನಾನು ತಮ್ಮನ್ನು ಕಸದ ಬುಟ್ಟಿಗೆ ಹಾಕುತ್ತೇನೆ. ಎಡವಾಗಲಿ, ಬಲವಾಗಲಿ ತಮ್ಮ ತತ್ವದ ಬಗ್ಗೆ ನೀಯತ್ತು ಹಾಗು ಅಧ್ಯಯನವಿರಬೇಕು. ಅದು ತಮ್ಮಲ್ಲಿಲ್ಲ.!
ಆಯ್ತು ಒಳ್ಳೆದಾಗ್ಲಿ. ನಮ್ಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿದೆ.ರಕ್ತ ಬಿಸಿ ಮಾಡಿಕೊಳ್ಳಬಾರದು 🙂
ನಕಲಿ ಕಾಳಜಿ!
ಬೊಗಾದಿ ಗೆ ಜೈ…
ಎನೊ ಬೊಗಾದಿ ಯಾಕೊ ಹಿಂಗಾದೆ
ಅನಿಲ್ ರವರೆ ಒಂದು ಉತ್ತಮವಾದ ಹೇಳಿಕೆ ಕೊಟ್ಟಿದಕ್ಕೆ ಧನ್ಯವಾದಗಳು ……. ಮಾಯ್ಸರವರು…. ಯಾಕೊ ಹುಚ್ಚರಂತೆ ವರ್ತೀಸುತ್ತಿದ್ದಾರೆ ಅದಕ್ಕೆ ಕಾರಣ ನಮಗಂತೂ ತಿಳಿದಿಲ್ಲ ಪಾಪ ಏಲ್ಲೋ ದಾರಿಯಲ್ಲಿ ಬಿದ್ದು ತಲೆಗೆ ಗಾಯ ಅಗಿರ್ಬೇಕು ಅದಕ್ಕೆ ಈ ರೀತಿ ವರ್ತೀಸುತ್ತಿದ್ದಾರೆ…… ನಾವೆಲ್ಲರು ಸೇರಿ ಅವರನ್ನ ಆಸ್ಪತ್ರೆಗೆ ಸೇರಿಸೋಣ, ನಮ್ಮಿಂದ ಅದಷ್ಟು ಸಹಾಯ ಮಾಡೊಣ….. ಅವರ ಹುಚ್ಚು ಅದಷ್ಟು ಬೇಗ ವಾಸಿಯಾಗಲಿ ಅಂತ ಅ ಕಾಣದ ಭಗವಂತನಲ್ಲಿ ಪ್ರಾರ್ಥಿಸೊಣ………
“ದೇವರು” ನಿಮ್ಮಮ್ತವರ ಬೆಂಬಲ ಅಗತ್ಯ ಸನ್ಮಾನ್ಯ ಲೇಖಕರಿಗೆ .
ಪಾಪ, ಮಾತಿಗೊಂದು ಸಲ, ಉಗುಲಿಗೊಂದು ಸಲ “ವಿವೇಕಾನಂದ”, “ಭಗತ್ ಸಿಂಗ್” ಅನ್ನೋ ಅಪ್ಪಟ ಹಿಂದೂ ರಾಕೇಶ ಶೆಟ್ಟರು ದನ-ತಿನ್ನಿ ಪರವಾಗಿಲ್ಲ ಅನ್ನೋದು ಒಳ್ಳೆ ಮಾತು ಬಿಡಿ.
ಅದು ತಪ್ಪು ಅನ್ದೊರಿಗೆ ಹುಚ್ಚೆ ನಿಮ್ ಪ್ರಕಾರ.!
ಅಂದಹಾಗೆ ನೀವು ಯಾವ ಹುಚ್ಚು ಆಸ್ಪತ್ರೆಯ ಈಗಾಗಲೇ ಸಂಪರ್ಕದಲ್ಲಿದ್ದೀರಿ? 🙂
ಮಾಯ್ಸ್ ರವರೇ ತಪ್ಪದೆ ಈ ಲೇಖನ ಓದಿ………
ಇಂದು ವಿನಾಯಕ ದಾಮೋದರ ಸಾವರ್ಕರ್ ಅವರ ಹುಟ್ಟು ದಿನ. ಒಂದು ಹಂತದ ವರೆಗೆ ಬ್ರಿಟಿಷರ ವಿರುದ್ಧ ದಿಟ್ಟವಾಗಿ ಧ್ವನಿ ಎತ್ತಿದವರು ಸಾವರ್ಕರ್. ಬಳಿಕ ಬಲಪಂಥೀಯ ಹಿಂದೂ ಸಂಘಟನೆಯಲ್ಲಿ ಅವರು ತೊಡಗಿಕೊಂಡರು. ಗಾಂಧೀ ಹತ್ಯೆಯಲ್ಲಿ ಸಾವರ್ಕರ್ ೬ನೆ ಆರೋಪಿಯಾಗಿ ಅವರು ಗುರುತಿಸಿಕೊಂಡರು. ಆದರೆ ಆರೋಪ ಸಾಬೀತಾಗಲಿಲ್ಲ. ಹಿಂದೂರಾಷ್ಟ್ರ ಪ್ರತಿಪಾದಕರಾಗಿದ್ದ ವಿನಾಯಕ ದಾಮೋದರ ಸಾವರ್ಕರ್ಸಾವರ್ಕರ್ ಗೋವಿನ ಕುರಿತಂತೆ ಯಾವ ನಿಲುವು ಹೊಂದಿದ್ದರು ಎನ್ನೂದನ್ನು ಇಲ್ಲಿ ಕೊಡಲಾಗಿದೆ. (‘ಆಕಳು ಒಂದು ಉಪಯುಕ್ತ ಪ್ರಾಣಿ, ಮಾತೆಯಲ್ಲ, ದೇವತೆಯಂತೂ ಅಲ್ಲವೇ ಅಲ್ಲ’- ಮಹಾರಾಷ್ಟ್ರ ಶಾರದಾ, ಎಪ್ರಿಲ್ 1935) ದಿಂದ ಇದನ್ನು ಆರಿಸಲಾಗಿದೆ. *ಡಾ ಪಂಡಿತಾರಾಧ್ಯ ಕನ್ನಡ ಪ್ರಾಧ್ಯಾಪಕ,ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ಮೈಸೂರು ಇವರು ಸಾವರ್ಕರ್ ಮಾತುಗಳನ್ನು ಸಂಗ್ರಹಿಸಿ ಇಲ್ಲಿ ನೀಡಿದ್ದಾರೆ.
_____________
‘‘ಹಸು, ಎತ್ತುಗಳನ್ನು ಪೂಜಿಸುವುದು ಹಿಂದೂ ಧರ್ಮಕ್ಕೆ ವಿಶಿಷ್ಟವಾದ ಸಂಗತಿ ಯಲ್ಲ. ಪ್ರಪಂಚದ ವಿವಿಧ ಕಡೆ ಜೀವಸಷ್ಟಿಗೆ ಕಾರಣವಾದ ಪುರುಷ ಮತ್ತು ಸ್ತ್ರೀ ಅವಯವಗಳ ಪ್ರತೀಕಗಳಾಗಿ ವಷಭ ಮತ್ತು ಗೋವಿನ ಪೂಜೆ ನಡೆಯುತ್ತಿತ್ತು.’’‘‘ನಾನು ಕಂಡ ಹಲವು ಪ್ರಾಮಾಣಿಕ, ಶ್ರೇಷ್ಠ, ಸಭ್ಯ ಗೋಭಕ್ತರು ಗೋಮಾತೆಯ ಗಂಜಲ ಮತ್ತು ಸಗಣಿಗಳಿಗೆ ಬ್ರಹ್ಮವಾದದ ಆಧಾರ ನೀಡಿ ಪಂಚಗವ್ಯ ಸೇವಿಸುತ್ತಾರೆ. ಗಂಜಲವನ್ನು ದೇವಾಲಯದಲ್ಲಿ ಸಿಂಪಡಿಸುತ್ತಾರೆ. ಆದರೆ ಅವರಿಗಿಂತಲೂ ಪ್ರಜ್ಞಾವಂತರಾದ ಡಾ ಅಂಬೇಡ್ಕರ್‌ರಂಥ ಶುದ್ಧ ಮತ್ತು ಪೂರ್ವಾಸ್ಪಶರ ಕೈಯಿಂದ ನಿರ್ಮಲ ಗಂಗೋದಕ ಕುಡಿಯುವುದಿಲ್ಲ! ಅದು ಮೈಗೆ ಸಿಂಪಡಿಸಿದರೂ ಮೈಲಿಗೆಯಾಯಿತೆಂದು ಸ್ನಾನ ಮಾಡುತ್ತಾರೆ.’’
‘‘ಹಸು ದೇವತೆ ಎಂದೂ ಹಾಗೆಯೇ ವರಾಹಾವತಾರಿಯಾದ ದೇವರು ಹಂದಿ ಎಂದು ಪುರಾಣ ಹೇಳುತ್ತದೆ. ಹೀಗಿರುವಾಗ ಗೋರಕ್ಷಣೆಯೇ ಏಕೆ ಬೇಕು? ಹಂದಿ ರಕ್ಷಣೆ ಸಂಘವನ್ನು ಸ್ಥಾಪಿಸಿ ಹಂದಿಪೂಜೆಯನ್ನೇಕೆ ಬಳಕೆಗೆ ತರಬಾರದು? ಮನುಷ್ಯನು ಎಲ್ಲ ರೀತಿಯಿಂದ ತನಗಿಂತ ಹೀನಗುಣವಿರುವ ಪಶುವನ್ನು ದೇವರೆಂದು ಒಪ್ಪುವುದರಿಂದ ಮನುಷ್ಯನನ್ನೇ ಪಶುವಿಗಿಂತಲೂ ಕೀಳೆಂದು ಒಪ್ಪಿ ಮಾನವೀಯತೆಯನ್ನು ಗೌಣಗೊಳಿಸಿದಂತಾಗುತ್ತದೆ.’’
‘‘ಮನುಷ್ಯ ಎಲ್ಲ ದಷ್ಟಿಯಿಂದ ತನಗಿಂತಲೂ ಸರ್ವಶ್ರೇಷ್ಠವಾದ ಪ್ರತೀಕವನ್ನು ಮಾತ್ರ ದೇವರೆಂದು ಸ್ವೀಕರಿಸಬೇಕು. ಕತ್ತೆ ಬೇಕಾದರೆ ಗೋವನ್ನು ತನಗಿಂತ ಶ್ರೇಷ್ಠ ಎಂದು ಸ್ವೀಕರಿಸಲಿ. ಆದರೆ ಮನುಷ್ಯ ಹಾಗೆ ಮಾಡುವುದು ಮೂರ್ಖತನ.’’‘‘ಇಂದಿನ ಪರಿಸ್ಥಿತಿಯಲ್ಲಿ ಅರ್ವಾಚೀನ ಮತ್ತು ಪ್ರಯೋಗಸಿದ್ಧ ವಿಜ್ಞಾನವೇ ನಮ್ಮ ರಾಷ್ಟ್ರದ ವೇದವಾಗಬೇಕು.
ಈ ಪ್ರವತ್ತಿಗೆ ಗೋಪೂಜೆ ಹೊಂದಿಕೆಯಾಗದಿದ್ದರೆ ಅದನ್ನು ಬಿಡಬೇಕು. ಇಂಥ ಮೂರ್ಖತನಕ್ಕೆ ಧರ್ಮ ಎಂದು ಪುರಾಣಗಳು ಹೇಳಿರುವುದಕ್ಕೆ ತಲೆದೂಗಿದರೆ ರಾಷ್ಟ್ರದ ಸರ್ವನಾಶ ಖಂಡಿತ. ಗೋಪೂಜೆಯಿಂದ ಆಗುವ ಲಾಭಕ್ಕಿಂತ ಹಾನಿ ಅತ್ಯಂತ ಘಾತುಕ. ಒಂದು ವೇಳೆ ಗೋಹತ್ಯೆ ನಡೆದರೂ ಅಡ್ಡಿಯಿಲ್ಲ. ರಾಷ್ಟ್ರದ ಬುದ್ಧಿಹತ್ಯೆ ಮಾತ್ರ ಆಗಬಾರದು.
ಹಸು ಮತ್ತು ಎತ್ತು ನಮ್ಮ ಕಷಿಪ್ರಧಾನ ರಾಷ್ಟ್ರಕ್ಕೆ ಉಪಯುಕ್ತ ಪ್ರಾಣಿಗಳು ಎಂದು ಆ ಪ್ರಾಣಿಗಳನ್ನು ಎಷ್ಟು ಬೇಕೊ ಅಷ್ಟು ಬಳಸಿದರೆ ಸಾಕು. ಅದರ ಬದಲು ಅದು ದೇವತೆ, ಪುರಾಣದಲ್ಲಿ ಅದನ್ನು ಪೂಜಿಸುವುದನ್ನು ಧರ್ಮ ಎಂದು ಹೇಳಿದೆ ಎಂದು ಬೊಗಳೆ ಬಿಟ್ಟರೆ ರಾಷ್ಟ್ರಕ್ಕೆ ನೂರುಪಟ್ಟು ಹಾನಿಯಾಗುತ್ತದೆ. ಅಲ್ಪ ಲಾಭಕ್ಕಾಗಿ ಹೆಚ್ಚಿನದನ್ನು ಕಳೆದುಕೊಳ್ಳುತ್ತೇವೆ.’’
‘‘ಪಶುವನ್ನು ದೇವರೆಂದು ಹೇಳಿದರೂ ದೇವರನ್ನೇ ಪಶುಗಿಂತಲೂ ಹೀನವಾಗಿ ಕಾಣಲಾಗಿದೆ. ಹಸುವಿನ ಶರೀರದಲ್ಲಿ 33 ಕೋಟಿ ದೇವತೆಗಳಿದ್ದಾರೆಂದು ಬಣ್ಣಿಸಿ, ಅದರ ಗಂಜಲ, ಸಗಣಿ ವಿಸರ್ಜನೆಯಾಗುವ ಸ್ಥಳಗಳಲ್ಲಿಯೂ ದೇವರನ್ನು ಸ್ಥಾಪಿಸಲಾಗಿದೆ! ಕಟುಕನು ದನವನ್ನು ಒಂದೇ ಹೊಡೆತಕ್ಕೆ ಕೊಲ್ಲುವಾಗ ಆ ದೇವತೆಗಳಲ್ಲಿ ಒಬ್ಬನಾದರೂ ಕಟುಕನನ್ನು ಏಕೆ ತಡೆಯುವುದಿಲ್ಲ? ಆ ದೇವರೂ ಭಕ್ತರಂತೆ ಹೇಡಿಯೇ? ಕಟುಕನೇ 33 ಕೋಟಿ ದೇವತೆಗಳಿಗಿಂತ ಪರಾಕ್ರಮಿಯೆ?’’‘‘ ಹಸು ಮಹಾಮಾತೆಯಾಗಿರುವವನೇ ಹಿಂದೂ ಎನ್ನುವುದು ಹಿಂದುತ್ವಕ್ಕೆ ಮಾಡುವ ಅಪಮಾನ. ಹಸು ಕರುವಿಗೆ ಮಾತ್ರ ತಾಯಿ, ಹಿಂದೂಗಳಿಗಲ್ಲ.
‘ಗೋರಕ್ಷಣೆಯೇ ಧರ್ಮ’, ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂದಾಗ ವಿವೇಕ, ಬುದ್ಧಿ ಸಂಪೂರ್ಣ ಕುರುಡಾಗಿ ಪ್ರಜ್ಞೆ ತಪ್ಪಿದ ಅನುಭವವಾಗುತ್ತದೆ.’’‘‘ಇಂಥ ಅನಾಗರಿಕ ಮತ್ತು ಮೂರ್ಖ ಸಂಸ್ಕಾರಕ್ಕೆ ತಿಲಾಂಜಲಿ ನೀಡುವುದೇ ನಮ್ಮ ಧರ್ಮ ಮತ್ತು ಸಂಸ್ಕತಿಗೆ ಶೋಭಿಸುವ ಮಾರ್ಗ. ಇಂದಿನ ವೈಜ್ಞಾನಿಕ ಯುಗದಲ್ಲಿ ಗೋರಕ್ಷಣೆಯ ದಷ್ಟಿಯಿಂದ ಹಸುವನ್ನು ದೇವತೆ ಎಂದು ಒಪ್ಪುವುದು ಮೂರ್ಖತನ. ಗೋರಕ್ಷಣೆಗೆ ಧಾರ್ಮಿಕ ಸ್ವರೂಪ ಬಿಟ್ಟು ಆರ್ಥಿಕ, ವೈಜ್ಞಾನಿಕ ಸ್ವರೂಪ ನೀಡುವುದು ಉಚಿತ. ಹಸು ಎತ್ತುಗಳನ್ನು ದೇವರೆಂದು ತೋರಿಸುತ್ತ ತಿರುಗುವ ಗೋಭಕ್ತನನ್ನು ತಡೆದು ಎತ್ತನ್ನು ನೊಗಕ್ಕೆ ಹೂಡಬೇಕು; ಅವನನ್ನು ದೇಶಸೇವೆಗೆ ದುಡಿಸಬೇಕು’’ (ಸಾವರ್ಕರ್: ಒಂದು ಅಭಿನವ ದರ್ಶನ, ಅನುವಾದ: ಚಂದ್ರಕಾಂತ ಪೋಕಳೆ ಬೆಳಗಾವಿ 2009 ಪು.27-37).
ಸಾವರಕರ್, ಗೋರಕ್ಷಣೆಯ ಹುಚ್ಚುತನದಂತೆ ಧಾರ್ಮಿಕ ನಂಬಿಕೆಯ ಗೋಭಕ್ಷಣೆಯ ಕ್ರೌರ್ಯವನ್ನೂ ಖಂಡಿಸಿದ್ದಾರೆ. ಆದುದರಿಂದ ಸರಕಾರ ಗೋರಕ್ಷಣೆಯ ಮಸೂದೆಯನ್ನು ಹಿಂದಕ್ಕೆ ಪಡೆದು ಅದರ ಬಗ್ಗೆ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದ ಗೌರವಕ್ಕೆ ಸಲ್ಲುವಂತೆ ವ್ಯಾಪಕವಾದ ವೈಚಾರಿಕ, ವೈಜ್ಞಾನಿಕ ಸಾರ್ವಜನಿಕ ಚರ್ಚೆ ನಡೆಸುವುದು ಅಗತ್ಯ.
“. ಇಂದಿನ ವೈಜ್ಞಾನಿಕ ಯುಗದಲ್ಲಿ ಗೋರಕ್ಷಣೆಯ ದಷ್ಟಿಯಿಂದ ಹಸುವನ್ನು ದೇವತೆ ಎಂದು ಒಪ್ಪುವುದು ಮೂರ್ಖತನ. ಗೋರಕ್ಷಣೆಗೆ ಧಾರ್ಮಿಕ ಸ್ವರೂಪ ಬಿಟ್ಟು ಆರ್ಥಿಕ, ವೈಜ್ಞಾನಿಕ ಸ್ವರೂಪ ನೀಡುವುದು ಉಚಿತ. ”
.. ಸರಿ ಬಿಡಿ. ! ನಿಮ್ಮಂತವರೇ ಮಾದರಿ ಅಪ್ಪಟ ಹಿಂದೂಗಳು .! “ದೇವರೇ”
ನಮ್ಮನ್ನು ಅನುಸರಿಸಿ …… ನೀವು ಮುಂದೆ ಬನ್ನಿ…….
ಎಲ್ಲಾರು ಸೇರಿ ಬೀಪ್ ಫೆಸ್ಟಿವಲ್ ಮಾಡೊಣ
ರಾಕೇಶ್ ಶೆಟ್ರು,
ಹಾಗಾದರೆ ನಿಮ್ಮ ಮನೆಯಲ್ಲಿ ಯಾವಾಗ ದನದ ಮಾಂಸ ಮಾಡ್ತೀರ?
Good article Sir 🙂 Beef soup kudidavanige adara ruchi gothu. Pulchat nann maklige adu arthavagalla.!!
ಶೆಟ್ರು ಗೆ ನನ್ನ ನಮಸ್ಕರಗಳು…. ತಮ್ಮ ಬರಹ ತುಂಬ ಚೆನ್ನಾಗಿ ಮೂಡಿ ಬಂದಿದೆ….ಧರ್ಮ ಶಾಸ್ತ್ರ ಅಂತ ಸುಳ್ಳುಗಳ ಸರಮಾಲೆನೆ ತುಂಬಿರುವ ಮೂರ್ಖರ ಮಾತುಗಳಿಗೆ ತಾವು ತಲೆ ಕೆಡಿಸಿಕೊಳ್ಳ ಬೇಡಿ….
ಕತ್ತೆಗೆನೂ ಗೊತ್ತು ಕಸ್ತೂರಿ ವಾಸನೆ …..
ಅಚ್ಚರಿಯಾಯ್ತು , ಇದು ರಾಕೇಶ್ ಬರೆದಿರೋದಾ ಅಂತ ಮತ್ತೊಮ್ಮೆ ಹೆಸರು ನೋಡಿ ಕನಫರ್ಮ್ ಮಾಡಿಕೊಂಡೆ
ನಿಜ ಒಬ್ಬರ ಊಟದ ಮೆನುವನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ. ಹಾಗೆ ಒಂದು ಧರ್ಮದ ನಂಬಿಕೆಯನ್ನು ಮುರಿವ ಹಕ್ಕು ಯಾರಿಗೂ ಇರಬಾರದು
ಇದು ನನ್ನ ನಂಬಿಕೆ
ಊಟದ ಮೆನುವಿಗೆ ಬೇಕಾದ್ದು ನಾನು ಪಡೆಯುತ್ತೇನೆ ಅಂತ ನೀವು ಹೇಳುವುದಾದರೆ , ಬೇಟೆ ಆಡಿ ಮೋಜು ಮಾಡುವುದ್ ನಮ್ಮ ಹಕ್ಕು ಅಂತ ನವಿಲು ,ಜಿಂಕೆ , ಹುಲಿ , ಸಿಂಹ
ಇವುಗಳನ್ನು ಬೇಟೆ ಆಡುವವರು ಕಾನೂನಿನ ಪರಿಧಿಯಲ್ಲಿ ಅಪರಾಧಿಗಳು ಹೇಗೆ ಆಗುತ್ತಾರೆ? ಇಂದು ಸೇವ್ ಟೈಗರ್ ಅನ್ನುವ ಸ್ಲೋಗನ್ ಹಾಗೆ ನಾಳೇ ಸೇವ್ ಕೌ ಅಂತ ಬೊಬ್ಬೆಯೂ ಶುರುವಾಗಬಹುದು. ಅಲ್ವಾ ರಾಕೇಶ್
ಹುಲಿ ಹೇಗೆ ಅತ್ಯಮೂಲ್ಯವೂ ಹಾಗೆಯೇ ಹಸುವೂ ಸಹಾ .
ಮಾಂಸಾಹಾರಕ್ಕೆ ಇದಕ್ಕಿಂತ ಉದಾಹರಣೆ ಬೇಕೆ 🙂
ತುಂಡು ತಿಂದು ಬೆಳೆದ ವ್ಯಕ್ತಿ ತುಂಡಿಲ್ಲದೇ ಬಹುಕಾಲ ಹಾಗೇ ಕಳೆಯುವುದು ಕಷ್ಟಸಾಧ್ಯ. ಲೌಕಿಕದೆಡೆಗೆ ಅಧಿಕವಾಗಿ ಸೆಳೆಯುವ ಈ ಆಹಾರಕ್ರಮದಿಂದ, ಕಣ್ಣಿಗೆ ಕಾಣುವ ಜಗದಲ್ಲಿ ನಾವು ಮತ್ತಷ್ಟು ಹೆಚ್ಚಿನ ಮಟ್ಟದ ವ್ಯಾಮೋಹವನ್ನೂ ಬಾಂಧವ್ಯವನ್ನೂ ಹೊಂದಿ ಇದಕ್ಕೂ ಮೀರಿದ ಚಿಂತನೆಗೆ ನಾವು ತೊಡಗಿಕೊಳ್ಳಲು ಸಾಧ್ಯವಾಗುವುದೇ ಇಲ್ಲ! ಅದಕ್ಕಾಗಿ ಮಾಂಸಾಹಾರ ಮಾನವನಿಗೆ ಒಳಿತಲ್ಲ ಎಂಬ ವಾದವಿದೆ. “ನಮ್ಮ ತಿನ್ನುವ ಆಹಾರಕ್ಕೆ ಕಲ್ಲುಹಾಕುವವರು ನೀವು ಯಾರು? ನಾವು ನಮಗೆ ಬೇಕಾದ್ದನ್ನು ತಿನ್ನುತ್ತೇವೆ, ಮಾಂಸಾಹಾರ ನಮ್ಮ ಜನ್ಮಸಿದ್ಧಹಕ್ಕು” ಎಂದು ವಾದಿಸುವ ಜನ ತುಂಬಾ ಇದ್ದಾರೆ. ಒಳಿತನ್ನು ತಿಳಿಸಬಹುದೇ ಹೊರತು ಹೇರಲು ಸಾಧ್ಯವಾಗುವುದಿಲ್ಲ.
ಮಾನ್ಯ ರಾಕೇಶ್ ಶೆಟ್ಟಿಯವರು ಗೋಮಾಂಸ ಭಕ್ಷಣೆಯನ್ನು ಸಮರ್ಥಿಸಿ ಇಂತಹ ಲೇಖನ ಬರೆದಿದ್ದಾರೆ ಅನ್ನುವುದನ್ನು ನಂಬಲು ಅಸಾಧ್ಯವಾಗುತ್ತಿದೆ, ಸಸ್ಯಾಹಾರವೆಂಬುದು ಹಿಂದೂ ಧರ್ಮದ ಮೂಲಭೂತ ತತ್ವ,, ಮೀನು, ಕೋಳಿ, ಕುರಿ,,, ಯನ್ನಾದರೂ ಸ್ವಲ್ಪ ಸಹಿಸಿಕೊಳ್ಳಬಹ್ದಾದರೂ… ಗೋಮಾಂಸ ಭಕ್ಷಣೆಯನ್ನು ಸಮರ್ಥಿಸಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ… ಇದರಿಂದ ನಿಲುಮೆಯ ಮೇಲಿರುವ ಗೌರವ ಕಡಿಮೆಯಾದದ್ದಂತೂ ನಿಜ,,,
ಯಾವುದೇ ವ್ಯಕ್ತಿಯ ವಯ್ಯುಕ್ತಿಕ ಅಸೆ ಆಸಕ್ತಿಗಳು ಸಾಮಾಜಿಕ ಬದ್ದತೆಗಳನ್ನ ಮೀರುವಂತಿರಬಾರದು. ನರಮಾಂಸ ಭಕ್ಷಣೆ ನನ್ನ ಆಸಕ್ತಿ ಅಂದ ಮಾತ್ರಕ್ಕೆ , ಅಥವಾ ಒಂದು ಬುಡಕಟ್ಟು ಜನಾಂಗದ ಆಹಾರಪದ್ದತಿ ಅಂದ ಮಾತ್ರಕ್ಕೆ ಗೌರವಿಸಲು ಬಾರದು.ನೀವು ಹೇಳಿದ ತರ್ಕಗಳನ್ನೇ ಆಗಲೂ ಮಂಡಿಸಬಹುದು, “ನನ್ನ ಊಟದ ಮೆನು” , “ಸಸ್ಯದ್ದು ಜೀವವೇ, ಮನುಷ್ಯಂದು ಜೀವವೇ ” ಅಂತೆಲ್ಲ.
ಹಾಗೆಯೆ ಗೋಮಾಂಸ , ಒಂಬತ್ತು ದಿನ ತಿನ್ನದೇ ಹೋದರೆ ಒಂದು ಬಹುಸಂಖ್ಯಾತ ಮನಸ್ಥಿತಿ ತ್ರಪ್ತಿಗೊಳ್ಳುತ್ತಾದರೆ ಯಾಕೆ ಅಡ್ಡಗಾಲು ಹಾಕುತ್ತೀರಿ ??
ಸ್ವಾಮಿ ಗೋವುನಮ್ಮ ತಾಯಿ ನಾವು ನಿತ್ಯ ಅದನ್ನು ಪೂಜೆ ಮಾಡ್ತಿವಿ ಹಾಗಾಗಿ ನಮ್ಮ ಪ್ರಾಣ ಹೋದರು ನಾವು ಅದನ್ನು ಕಾಪಾಡ್ತಿವಿ.ಇನ್ನು ತಮ್ಮ ಪ್ರಶ್ನೆ ಕುರಿ ಕೋಳಿ ತಿನ್ನೋದು ಯಾರದು ನಮ್ಮ ಭಾರತದಲ್ಲಿ ಕುರಿ ಕೋಳಿನ ತಾಯಿಯ ಹಾಗೆ ಸ್ವೀಕರಿಸಿ ಅದನ್ನು ಹತ್ಯೆ ಮಾಡಬಾರದು ಅಂತ ಹೇಳಿದ್ದದರು ಎಲ್ಲಿಯಾದರೂ ಉಂಟೆ ಹಾಗೆ ಹೇಳಲಿ ಆಗ ನಾವು ಹಿಂದೂಗಳು ಕುರಿ ಕೋಳಿನ ತಿನ್ನೋದು ಬಿಡ್ತಿವಿ .ಹಿಂದುಗಳಿಗೆ ಗೋವು ಪವಿತ್ರ .ಹಾಗಾಗಿ ನಮ್ಮಈ ಪ್ರತಿಬಟನೆ ತಾವು ಅದನ್ನು ಅರ್ಥ ಮಾಡ್ಕೊಂಡು ಬಹು ಸಂಕ್ಯಾತ ಹಿಂದೂಗಳ ಬಾವನೆಗೆ ಬೆಲೆ ಕೊಡಿ ಇಲ್ಲ ಅಂದ್ರೆ ದೇಶ ಬಿಟ್ಟು ಪಾಕಿಸ್ತಾನಕ್ಕೆ ತೊಲಗಿ .ಜೈ ಹಿಂದ್ .
ಗೋಹತ್ಯೆ ನಿಷೇಧ ಸರಿಯಲ್ಲ, ಗೋಮಾಂಸವೂ ಆಹಾರದ ರೀತಿಯೇ ಅನ್ನುವುದಾದರೆ ಆಹಾರಕ್ಕಾಗಿ ಕಾಡುಪ್ರಾಣಿಗಳ ಬೇಟೆ ನಿಷೇಧ ಎಷ್ಟು ಸರಿ?
Muslims and British ruled India for many centuries. But they didn’t imposed beef eating on Hindus. Now Hindu party is in power. In just one year they are enforcing Hindu Vegetarian diet on non-Brahmin Hindus, Muslims, and Christians.