ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 28, 2012

4

ಡಬ್ಬಿಂಗ್ ಎಂಬ ರುಚಿಗೆಟ್ಟ ದಿಢೀರ್ ಅಡುಗೆ ಏಕೆ?

‍ನಿಲುಮೆ ಮೂಲಕ

– ರೂಪ ರಾವ್

ಇತ್ತೀಚಿಗೆ ಡಬ್ಬಿಂಗ್ ಬೇಕು ಬೇಡ ಅನ್ನುವ ಹುಯಿಲು ಮತ್ತೆ ಕಾಣ್ತಿದೆ. ರಾಕೇಶ್ ಶೆಟ್ಟಿಯವರ ಲೇಖನ ಓದಿದ ಮೇಲೆ ಇದರ ಬಗ್ಗೆ ನನ್ನದೊಂದಿಷ್ಟು ಅನಿಸಿಕೆ.

ಸ್ವಾಮಿ ಡಬ್ಬಿಂಗ್ ಬೇಡ ಅನ್ನೋದು ಹಳೆಯ ರಾಗವಿರಬಹುದು. ಆದರೆ ಕಾರಣ ಮಾತ್ರ ನಿಚ್ಚಳ… ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ  ಮೇಲೆ ಅವಲಂಬಿತರಾಗಿರುತ್ತಾರೆ.. ಅಷ್ಟೂ ಜನರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರವಿದು.

ರಿಮೇಕ್ ಚಿತ್ರಗಳ ಆರ್ಭಟಕ್ಕೆ ನಿರ್ದೇಶಕರ ಸೃಜನಾತ್ಮಕತೆ ಈಗಾಗಲೇ ಕಡಿಮೆಯಾಗಿದೆ.ಒಂದು ವೇಳೆ ಡಬ್ಬಿಂಗ್ ನಿಷೇಧ ತೆರವು ಗೊಳಿಸಿದರೆ,ಕನ್ನಡದಲ್ಲಿ ನಿರ್ದೇಶಕ, ಕತೆಗಾರ, ಸತ್ತಂತೆ…..! ಉಪೇಂದ್ರ, ಸೂರಿ, ಶಶಾಂಕ್, ಚಂದ್ರು,ಯೋಗರಾಜ್ ಭಟ್ ರವರಂತೆ ಆಗಬೇಕೆನ್ನುವ ಯುವ ನಿರ್ದೇಶಕರ ಗತಿ ?

ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ.ಪಾತ್ರದ ತುಟಿಯ ಚಲನೆ ಒಂದಾದರೆ. ಹಿನ್ನಲೆ ದ್ವನಿಯ  ಮಾತು ಒಂದಾಗಿರುತ್ತದೆ. ಅದಕ್ಕೂ ಇದಕ್ಕೂ  ಜೋಡಿಸಿ ನೋಡುವ ದರ್ದು ನಮಗೆ ಬೇಕಾ?
ಒಬ್ಬ ಸಾಮಾನ್ಯ ಕನ್ನಡಿಗನಿಗೆ ಹಿಂದಿ ತಮಿಳಿನಲ್ಲಿ ನಿರ್ಮಾಣವಾಗುವ ಹೈ-ಟೆಕ್ ಚಿತ್ರಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕಿಲ್ಲ. ಏಕೆಂದರೆ ಅವನು ಆ ಚಿತ್ರದಲ್ಲಿ ನೋಡುವ  ಸ್ಥಳಗಳು ಪೋಷಾಕು, ವಾತಾವರಣ ಅಷ್ಟೇಕೆ ನಟ ನಟಿಯರು ಯಾವವೂ ಇಲ್ಲಿನವಾಗಿರುವುದಿಲ್ಲ.

ಡಬ್ಬಿಂಗ್ ನಿಂದ ಚಿತ್ರರಂಗ ಮುಳುಗಿ ಹೋಗುವುದಿಲ್ಲ ಎಂದು ಹೇಗೆ ಹೇಳ್ತೀರಾ? ಸುಲಭವಾಗಿ ಸಿಗುವ ಸರಕಿಗೆ ಬೇಡಿಕೆ ಹೆಚ್ಚು, ಕನ್ನಡದಲ್ಲಿ ಸ್ವಮೇಕ್ ಚಿತ್ರಗಳಿರಲಿ ರಿಮೇಕ್ ಸಹಾ ಮಾಯವಾಗುತ್ತದೆ ಬಾಲಿವುಡ್ ಚಿತ್ರಗಳಿಗೆ ಸಾಟಿಯಾಗಿ ಚಿತ್ರಗಳನ್ನು ನಿರ್ಮಿಸುವ, ತಾಂತ್ರಿಕತೆಗೆ ಅಧ್ಹೂರಿತನಕ್ಕೆ ದುಡ್ದು ಚೆಲ್ಲುವ ನಿರ್ಮಾಪಕರು ನಮ್ಮಲ್ಲೂ ಇದ್ದಾರೆ….
ಇನ್ನು ಅನಿಮೇಶನ್ ಚಿತ್ರಗಳನ್ನು ಕನ್ನಡದಲ್ಲಿ ತರುವ ವಿಚಾರಕ್ಕೆ ಬಂದರೆ ಆ ಮಟ್ಟದ ತಂತ್ರಜ್ನರು ನಮ್ಮ ಸುತ್ತಮುತ್ತಲೇ ಇದ್ದಾರೆ, ಕನ್ನಡದಲ್ಲೇ ಮಾಡಿದಲ್ಲಿ ಕನ್ನಡದ ಸೊಗಡು ಎದ್ದು ಕಾಣುತ್ತದೆ.

ಇನ್ನು ಡಬ್ಬಿಂಗ್ ಬೇಕು ಬೇಡ ಎಂದು ನಿರ್ಧರಿಸಬೇಕಾದವರು ಪ್ರೇಕ್ಷಕರೇ ಆದರೂ ಎಷ್ಟು ಜನ ಡಬ್ಬಿಂಗ್ ಬೇಕು ಎನ್ನುವರು ಎಂಬುದೂ ಮುಖ್ಯ.ಡಬ್ಬಿಂಗ್ ಯಾವತ್ತಿದ್ದರೂ  ರೆಡಿಮೇಡ್ ಫುಡ್ ಇದ್ದಹಾಗೆ ತಂದು ಬಿಸಿ ಮಾಡಿದರೆ ಆಯ್ತು. ತಿನ್ನಬಹುದು. ಆದರೆ ರುಚಿ?

ನಮ್ಮಲ್ಲಿ ಸೃಜನಾತ್ಮಕತೆ ಪ್ರತಿಭೆ, ಹಣ, ಮಾರುಕಟ್ಟೆಗೆ ಬರ ಬಂದಾಗಲಷ್ಟೆ ಡಬ್ಬಿಂಗ್ ಬೆಂಬಲಿಸಬಹುದು. ಆದರೆ ಯಾವುದಕ್ಕೂ ಕನ್ನಡದಲ್ಲಿ ಬರ ಬಂದ ಹಾಗೆ ಕಾಣುತ್ತಿಲ್ಲ, ಬರ ಬಂದಿರುವುದು ಕಲಾವಿದರ,ನಿರ್ಮಾಪಕ,ನಿರ್ದೇಶಕರ ನಡುವಿನ ಸ್ನೇಹ, ಸೌಹಾರ್ಧತೆಗೆ, ಒಗ್ಗಟ್ಟಿಗೆ, ಪ್ರತಿಭೆಗಳನ್ನು ಶೋಧಿಸಿ ಅವಕಾಶ ನೀಡುವ ಪರಿಗೆ.ಅದು ಅಂತಹ ಸರಿಪಡಿಸಲಾಗದ ನ್ಯೂನತೆ ಏನಲ್ಲ.

ನಮಗೆ ಡಬ್ಬಿಂಗ್ ಬೇಡ ರಿಮೇಕೂ ಬೇಡ, ಹಳಸಿದ ಅನ್ನ , ರೆಡಿಮೇಡ್ ಫುಡ್  ಯಾವುದೂ ಬೇಡ ಅಚ್ಚುಕಟ್ಟಾಗಿ ಹದ ಮಾಡಿದ ರುಚಿ ಬೆರೆಸಿದ ಸ್ವಮೇಕ್ ಚಿತ್ರಗಳು ಸಾಕು

4 ಟಿಪ್ಪಣಿಗಳು Post a comment
 1. Balachandra
  ಏಪ್ರಿಲ್ 28 2012

  {ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ ಮೇಲೆ ಅವಲಂಬಿತರಾಗಿರುತ್ತಾರೆ..}
  ಆದರೆ ತಮಿಳು, ತೆಲಗು ಚಿತ್ರರಂಗಗಳಲ್ಲಿ ಕಲಾವಿದರುಗಳು ಇನ್ನೂ ಚೆನ್ನಾಗೆ ಇದಾರಲ್ಲ?
  {ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ}
  ನೋಡಬೇಕೆನಿಸಿದವರು ನೋಡುತ್ತಾರೆ. ಅವರ ಹಕ್ಕನ್ನು ಕಿತ್ತುಕೊಳ್ಳುವ ಯಾವ ಸಂವಿಧಾನಿಕ ಹಕ್ಕು ಯಾವ ನಿರ್ದೇಶಕರಿಗೂ ಇಲ್ಲ. ಯಾರನ್ನೂ ಬಲವಂತವಾಗಿ ನೋಡಲು ಕುಳಿಸಿಕೊಳ್ಳುವದಿಲ್ಲವಲ್ಲ?
  {ಒಬ್ಬ ಸಾಮಾನ್ಯ ಕನ್ನಡಿಗನಿಗೆ ಹಿಂದಿ ತಮಿಳಿನಲ್ಲಿ ನಿರ್ಮಾಣವಾಗುವ ಹೈ-ಟೆಕ್ ಚಿತ್ರಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕಿಲ್ಲ.}
  ಅದು ನಿಮ್ಮ ಸ್ವಂತ ಅಭಿಪ್ರಾಯ. ನಿಮ್ಮ ಅಭಿಪ್ರಾಯವನ್ನು ಸಾರ್ವತ್ರಿಕ ಎಂದು ತಿಳಿದಿದ್ದೀರಿ. 🙂 ನನಗೆ, ಹಿಂದಿ ಇಂಗ್ಲಿಷು ಬರುವದಿಲ್ಲ. ಅದರಲ್ಲಿನ ಪ್ರತಿಯೊಂದು ಶಬ್ದದ ಅರ್ಥವೂ ತಿಳಿದುಕೊಳ್ಳಬೇಕು ಎಂದೆನಿಸುತ್ತದೆ.
  {ಡಬ್ಬಿಂಗ್ ನಿಂದ ಚಿತ್ರರಂಗ ಮುಳುಗಿ ಹೋಗುವುದಿಲ್ಲ ಎಂದು ಹೇಗೆ ಹೇಳ್ತೀರಾ?}
  ಅರೆರೆ ನೀವು ಅದ್ಹೇಗೆ ಹೇಳ್ತೀರಾ ಮುಳುಗಿ ಹೊಗೊತ್ತೆ ಅಂತ?ನಮಗೆ ಉದಾಹರಿಸಲು ತೆಲಗು, ತಮಿಳ್ ಚಿತ್ರೋದ್ಯಮ ಇದೆ. ನೀವು ಯಾವುದನ್ನು ಉದಾಹರಿಸುತ್ತೀರಿ?
  {ಇನ್ನು ಅನಿಮೇಶನ್ ಚಿತ್ರಗಳನ್ನು ಕನ್ನಡದಲ್ಲಿ ತರುವ ವಿಚಾರಕ್ಕೆ ಬಂದರೆ ಆ ಮಟ್ಟದ ತಂತ್ರಜ್ನರು ನಮ್ಮ ಸುತ್ತಮುತ್ತಲೇ ಇದ್ದಾರೆ, ಕನ್ನಡದಲ್ಲೇ ಮಾಡಿದಲ್ಲಿ ಕನ್ನಡದ ಸೊಗಡು ಎದ್ದು ಕಾಣುತ್ತದೆ.}
  ನೀವು ಇಷ್ಟೊಂದು optimistic ಆಗಿರುವದನ್ನು ನೋಡಿದರೆ ಖುಷಿಯಾಗುತ್ತದೆ. ಆದ್ರೆ ಅದಕ್ಕೆ ಬಹುಷಃ ಕೆಲವು ಶತಮಾನಗಳೇ ಬೇಕಾಗಬಹುದು. ಅದೂ ಅಲ್ಲದೆ ಕನ್ನಡದವರೂ ಜೊತೆಗೆ ಮಾಡಲಿ ಬಿಡಿ.ನಾವೇನು ಬೇಡ ಅನ್ನುತ್ತೆವ್ಯೇ?
  {ನಮ್ಮಲ್ಲಿ ಸೃಜನಾತ್ಮಕತೆ ಪ್ರತಿಭೆ, ಹಣ, ಮಾರುಕಟ್ಟೆಗೆ ಬರ ಬಂದಾಗಲಷ್ಟೆ ಡಬ್ಬಿಂಗ್ ಬೆಂಬಲಿಸಬಹುದು.}
  ಈಗ ಬರ ಬಂದಿಲ್ಲ ಎನ್ನುತ್ತೀರಾ? ಪ್ರತಿಭೆ ಇದ್ದಿದ್ದರೆ ನಾಯಕಿಯರು, ಗಾಯಕ-ಗಾಯಕಿಯರನ್ನು ಹೊರರಾಜ್ಯದಿಂದ ಯಾಕೆ ಆಮದು ಮಾಡಿಕೊಳ್ಳುತ್ತಿದ್ದರು?ಇನ್ನು ಸೃಜನಾತ್ಮಕ ಕತೆಯ ಬಗ್ಗೆ ಮಾತನಾಡಲೇ ಬೇಡಿ. ವರ್ಷದಲ್ಲಿ ಒಂದೆರಡು ಚಿತ್ರಗಳನ್ನು ಬಿಟ್ಟರೆ ಸೃಜನಾತ್ಮಕ ಚಿತ್ರಗಳನ್ನು ನಾವು ನೋಡಿದ್ದೇ ಇಲ್ಲ. ಮಚ್ಚು, ಲಾಂಗು, ಸ್ವಿಮ್ಮಿಂಗ್ ಪೂಲ್ ಸೀನು. ಇಷ್ಟೇ ಆಯ್ತು ಸೃಜನಾತ್ಮಕತೆ..
  {ಆದರೆ ಯಾವುದಕ್ಕೂ ಕನ್ನಡದಲ್ಲಿ ಬರ ಬಂದ ಹಾಗೆ ಕಾಣುತ್ತಿಲ್ಲ, }
  ಅಯ್ಯೋ ದೆವೆರೆ. ನೀವು ಬಹುಷಃ ಕನ್ನಡ ಸಿನಿಮಾಗಳನ್ನು ನೋಡುತ್ತಿಲ್ಲ ಅನಿಸುತ್ತದೆ. ಅಷ್ಟಕ್ಕೂ ನಾವು ಕನ್ನಡ ಸಿನಿಮಾ ಬೇಡ ಎಂದು ಹೇಳುತ್ತಿಲ್ಲ. ಡಬ್ಬಿಂಗ್ ಬೇಕು ಅಂದ ತಕ್ಷಣ ಕನ್ನಡ ಚಿತ್ರಗಳನ್ನು ಬೇಡ ಎಂದ ಹಾಗೆ ಅಲ್ಲ.
  ನೋಡಿ ಮೊಟ್ಟ ಮೊದಲು ಭಾರತಕ್ಕೆ ಆಫೀಸ್ ಗಳಲ್ಲಿ computer ಅಳವಡಿಕೆಯ ಬಗ್ಗೆ ರಾಜೀವ್ ಗಾಂಧೀ ಪ್ರಸ್ತಾಪಿಸಿದಾಗ, ಅದ್ವಾನಿ ಸೇರಿದಂತೆ ಬಹುತೇಕ ಜನ ಸಿಡಿದೆದ್ದರು. ಕಾರಣ ಗಣಕಯಂತ್ರದಿಂದ ಎಷ್ಟೋ ಜನರ ಉದ್ಯೋಗ ಸರ್ವನಾಶ ಎಂದು. ನೀವು ಹೇಳಿದ್ದು ಅದೇ ಧಾಟಿಯಲ್ಲಿದೆ.
  ಅಯ್ಯೋ ದೆವೆರೆ. ನೀವು ಬಹುಷಃ ಕನ್ನಡ ಸಿನಿಮಾಗಳನ್ನು ನೋಡುತ್ತಿಲ್ಲ ಅನಿಸುತ್ತದೆ. ಅಷ್ಟಕ್ಕೂ ನಾವು ಕನ್ನಡ ಸಿನಿಮಾ ಬೇಡ ಎಂದು ಹೇಳುತ್ತಿಲ್ಲ. ಡಬ್ಬಿಂಗ್ ಬೇಕು ಅಂದ ತಕ್ಷಣ ಕನ್ನಡ ಚಿತ್ರಗಳನ್ನು ಬೇಡ ಎಂದ ಹಾಗೆ ಅಲ್ಲ.
  ನೋಡಿ ಮೊಟ್ಟ ಮೊದಲು ಭಾರತಕ್ಕೆ ಆಫೀಸ್ ಗಳಲ್ಲಿ computer ಅಳವಡಿಕೆಯ ಬಗ್ಗೆ ರಾಜೀವ್ ಗಾಂಧೀ ಪ್ರಸ್ತಾಪಿಸಿದಾಗ, ಅದ್ವಾನಿ ಸೇರಿದಂತೆ ಬಹುತೇಕ ಜನ ಸಿಡಿದೆದ್ದರು. ಕಾರಣ ಗಣಕಯಂತ್ರದಿಂದ ಎಷ್ಟೋ ಜನರ ಉದ್ಯೋಗ ಸರ್ವನಾಶ ಎಂದು. ನೀವು ಹೇಳಿದ್ದು ಅದೇ ಧಾಟಿಯಲ್ಲಿದೆ.

  ಉತ್ತರ
 2. ಏಪ್ರಿಲ್ 28 2012

  ರೂಪ ಅವರೇ, ಡಬ್ಬಿಂಗ್ ಅಂದ್ರೆ ಬರಿ ಚಿತ್ರರಂಗದವರು ವಿರೋಧ ಮಾಡ್ತಿದ್ದಾರೆ. ದಿಸ್ನೇಯ್, ಮೆಟ್ರೋ ಗೋಡ್ಲ್ವ್ಯನ್ ಮಯೇರ್, ಹಿಸ್ತೋರಿ ಚಾನೆಲ್, ದಿಸ್ಕಾವೆರಿ ಚಾನೆಲ್ ಮುಂತಾದ ಮನೋರಂಜನೆ ಮತ್ತು ಜ್ಞಾನ ವನ್ನು ಹೆಚ್ಚಿಸುವ ವಾಹಿನಿಗಳು ನಮ್ಮದೇ ಭಾಷೆಯಲ್ಲಿ ನೋಡಬಹುದು ಕೇಳಬಹುದು.

  ಹಾಗೆ ಕನ್ನಡದ ಚಿತ್ರಗಳು ಬೇರೆ ಭಾಷೆಗೆ ಡಬ್ ಆದ್ರೆ ನೀವು ಯಾಕೆ ವಿರೋಧ ಮಾಡೋಲ್ಲ???

  ನನ್ನ ಮಗಳಿಗೆ ಉತ್ತಮ ಜ್ನಾನವನ್ನ ನನ್ನದೇ ಭಾಷೆಯಲ್ಲಿ ಕೊಡುವ ಆಸೆ.ಇದಕ್ಕೆ ಚಿತ್ರರಂಗದವರು ಯಾಕೆ ವಿರೋಧ ಮಾಡಬೇಕು?

  ಉತ್ತರ
 3. ಏಪ್ರಿಲ್ 30 2012

  ಡಬ್ಬಿ೦ಗ್ ಬೇಕು. ಮಕ್ಕಳಿಗೆ ಡಿಸ್ಕವರಿ ಚಾನೆಲ್ ನ೦ತಹ ಒಳ್ಳೆಯ, ಕನ್ನಡದಲ್ಲಿ ಮಾಡಲಾಗದ೦ತಹ(ಕಾರಣ ಹತ್ತಾರು) ಪ್ರೋಗ್ರಾಮ್ ನೋಡಲು.
  ಹಿಟ್ ಆದ ತಮಿಳು ತೆಲುಗು ಚಿತ್ರ ನೋಡಲು ಡಬ್ಬಿ೦ಗ್ ಅಲ್ಲ.
  ಪ್ರೇಕ್ಷಕರು ನಿರ್ಧರಿಸಬೇಕು ಅ೦ದರೆ ಪ್ರೇಕ್ಷಕರಿಗೆ ಒ೦ದು ಚಾನ್ಸ್ ಕೊಡಿ. ಡಬ್ಬಿ೦ಗ್ ಮಾಡಲಿ. ಜನ ಅದನ್ನು ನೋಡಿ ಬೇಡ ಅ೦ದರೆ ಅದನ್ನು ಮತ್ತೆ ನಿಷೇಧ ಮಾಡಬಹುದಲ್ಲವೇ?
  ಹಲಸಲು ರಿಮೇಕ್ ಗಿ೦ತ ಬೆಟ್ಟರ್. ಸ್ವಲ್ಪ ಸ್ವ೦ತಿಕೆ ಬಳಸಲು ಉತ್ತೇಜಿಸಿದ೦ತಾಗುತ್ತದೆ. ನಿರ್ದೇಷಕರಿಗೂ ಸ್ವಲ್ಪ ಜಾಸ್ತಿ ಹೋಮ್ ವರ್ಕ್, ಕನ್ನಡತನವನ್ನು ಬಳಸಲು ಬಲವ೦ತ ಮಾಡುತ್ತದೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments