ವಿಷಯದ ವಿವರಗಳಿಗೆ ದಾಟಿರಿ

ಜೂನ್ 7, 2012

ಅಣ್ಣಾಬಾಂಡ್ ‘ನಲ್ಲಿ `ಪ್ರೇಮ್ ‘ಗಿಮಿಕ್ಸ್

‍ನಿಲುಮೆ ಮೂಲಕ

ಶ್ರೀಧರ್ ಜಿ ಸಿ ಬನವಾಸಿ

ಇತ್ತೀಚೆಗೆ ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ಅಭಿನಯದ `ಅಣ್ಣಾ ಬಾಂಡ್’’ ಸಿನಿಮಾವನ್ನು ಎಲ್ಲರೂ ನೋಡಿರಬಹುದು. ಇಡೀ ಸಿನಿಮಾದಲ್ಲಿ ಪುನೀತ್ , ರಂಗಾಯಣ ರಘು, ಜೊತೆಗೆ ಒಬ್ಬ ಸಿನಿಮಾ ನಿರ್ದೇಶಕನ ಒಂದು ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ. ಆ ಪಾತ್ರವನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದಾಗ ಕನ್ನಡದಲ್ಲಿ ಗಿಮಿಕ್ಸ್ ಮಾಡಿ ಸದಾ ಪಬ್ಲಿಸಿಟಿ ಮಾಡೋ ನಿರ್ದೇಶಕ ಪ್ರೇಮ್ ನೆನಪಾಗುತ್ತಾನೆ.

ಚಿತ್ರದ ಒಪನಿಂಗ್ ನಲ್ಲಿ ಇಡೀ ನಗರದಾದ್ಯಂತ ಅಣ್ಣಾಬಾಂಡ್ ನ ಹವಾ ಏರುತ್ತಿದ್ದಾಗ, ಜನರೆಲ್ಲಾ ಅಣ್ಣಾ ಬಾಂಡ್ ಈ ಸಮಾಜಕ್ಕೆ ಬೇಕು ಅಂತೆಲ್ಲಾ ಕೂಗುತ್ತಿರುತ್ತಾರೆ. ಆಗ ಟೀವಿ ಚಾನೆಲ್ನವರು ಒಂದು ಸಂವಾದ ಮಾಡುತ್ತಾರೆ. ಆ ಸಂವಾದಕ್ಕೆ ಒಬ್ಬ ನಿರ್ದೇಶಕನನ್ನು ಕರೆಯುತ್ತಾರೆ. ತುಂಬಾ ಆತುರ ಸ್ವಭಾವದ, ಪಕ್ಕಾ ಮಂಡ್ಯಾ ಭಾಷೆಯಲ್ಲಿ, ಮಾತ್ ಮಾತಿಗೆ ಅಣ್ಣಾಬಾಂಡ್ ಮೇಲೆ ಸಿನಿಮಾ ಮಾಡ್ತೀನಿ, 3ಡಿ, 4ಡಿ, 6ಡಿ ಸಿನಿಮಾ ಮಾಡ್ತೀನಿ, ಇಡೀ ಕರ್ನಾಟಕದವ್ರೆಲ್ಲಾ ಈ ಸಿನಿಮಾ ನೋಡೋ ಹಾಗೆ ಪಬ್ಲಿಸಿಟಿ ಮಾಡ್ತೀನಿ ಅಂತ ಟೀವಿ ಸ್ಟುಡಿಯೋದಲ್ಲಿ ಪುಂಕಾನುಫುಂಕವಾಗಿ ಕೊರೆಯುತ್ತಿರುತ್ತಾನೆ. ಇದಾದ ನಂತರ ಈ ನಿರ್ದೇಶಕನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋದಾಗ ನಾಯಕನಿಗೆ ಮಾತ್ ಮಾತಿಗೆ `ಬಾಸು..ಬಾಸು..’ ಅಂತ ಸಂಬೋಧಿಸುತ್ತಿರುತ್ತಾನೆ.

ಈ ತರಹ ಸ್ವಭಾವ ಕನ್ನಡದ ಪ್ರೇಮ್ ಗೆ ಮಾತ್ರ ಇರೋದು ಅನ್ನುವುದನ್ನು ಪ್ರೇಮ್ ಜೊತೆ ಕೆಲಸ ಮಾಡಿದವರಿಗೆ, ಇಲ್ಲವೇ ಆತನನ್ನು ಹತ್ತಿರದಿಂದ ನೋಡಿದವರಿಗೆ ಖಂಡಿತ ಅರಿವಾಗುತ್ತದೆ. `ಅಣ್ಣಾಬಾಂಡ್’ ನಿರ್ದೇಶಕ ಸೂರಿ, ಪ್ರೇಮ್ ನನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಪಾತ್ರವನ್ನು ಸೃಷ್ಟಿಸಿದ್ದಾರೆ ಅಂತ ಸಿನಿಮಾ ನೋಡಿದ ಕೂಡಲೇ ಹೇಳಬಹುದು. ಅಕಸ್ಮಾತ್ ಅವರ ಪ್ರಕಾರ, ಆ ಪಾತ್ರ ಕಾಕತಾಳೀಯವಾದರೂ ಆಶ್ಚರ್ಯವೇನಿಲ್ಲ. ಅಣ್ಣಾಬಾಂಡ್ ಸಿನಿಮಾದಲ್ಲಿ ಗಾಂಧಿನಗರದ ಆ ನಿರ್ದೇಶಕನ ಪಾತ್ರವನ್ನು `ನಿನಾಸಂ ಸತೀಶ್’ ತುಂಬಾ ಅದ್ಭುತವಾಗಿ ಅಭಿನಯಿಸಿದ್ದಾನೆ.

ಇನ್ನೊಂದು ಗಾಂಧಿನಗರದ ಸತ್ಯವೆಂದರೆ ಪ್ರೇಮ್ ಮತ್ತು ಸೂರಿ ಇಬ್ಬರೂ ಅಷ್ಟಕಷ್ಟೇ. ಪ್ರೇಮ್ ಕಡೆಯರಿಗೆ ಸೂರಿ ಕಡೆಯವರು ಸದಾ ದುಷ್ಮನ್ ..! ಹಾಗಾಗಿ ಸೂರಿ, ಪ್ರೇಮ್ ಮೇಲಿನ ಸಿಟ್ಟನ್ನು ಅಣ್ಣಾಬಾಂಡ್ ಸಿನಿಮಾದ ಮೂಲಕ ತೀರಿಸಿಕೊಂಡಿದ್ದಾನೆ. ಬಾಸು…ಬಾಸು .. ಅಂತ ಕರೆಯುತ್ತಾ, ಪಕ್ಕಾ ಮಂಡ್ಯಾ ಭಾಷೆಯಲ್ಲಿ ಮಾತನಾಡುವ ಪ್ರೇಮ್, ಆತನ ಹತ್ತಿರದವರಿಗೆ ಖಂಡಿತಾ ಈ ಸಿನಿಮಾದ ಮೂಲಕ ಕಾಣುತ್ತಾನೆ. ಇದನ್ನು ಅಲ್ಲಗಳಿಯುವಂತಿಲ್ಲ.

ಚಿತ್ರಕೃಪೆ : ಗೂಗಲ್ ಇಮೇಜಸ್

************************************************************************

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments