ಮೀಸಲಾತಿ ಕೇವಲ ಉಳ್ಳವರಿಗೆ ಮಾತ್ರನಾ?
– ಮುರುಳಿಧರ್ ದೇವ್
ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಒಬ್ಬ ದಲಿತ ಹೆಂಗಸು ತನ್ನ ಮಗ ಕರ್ನಾಟಕ ಸರಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ೧೨೦೦೦ ರ್ಯಾಂಕ್ ಬಂದಿರೋದನ್ನ ತುಂಬಾ ಖುಷಿಯಿಂದ ಹೇಳ್ಕೋತ ಇದ್ಲು. ಇದೇನು ೧೨೦೦೦ ರ್ಯಾಂಕ್ ಬಂದಿರೋದು ಅಂತ ದೊಡ್ಡ ವಿಷಯ ಅಂತ ಅನ್ಕೋಬೇಡಿ. ಅವಳು ಮನೆ ಮನೆಗಳಲ್ಲಿ ಪಾತ್ರೆ ತೊಳೆದು ತನ್ನ ಮಗನನ್ನು ಓದುಸ್ತ ಇರೋದು. ಅವರ ಕುಟುಂಬದಲ್ಲಿರೋದು ನಾಲ್ಕು ಜನ, ಗಂಡ ದಿನ ಕುಡಿದು ಬಂದು ಇವಳನ್ನು ಹೊಡೆಯೋದು, ಮಗಳು ಈಗ ೯ನೆ ತರಗತಿ ಓದ್ತಾ ಇರೋದು. ಸಂಪೂರ್ಣ ಮನೆಯ ಜವಾಬ್ದಾರಿ ಇವಳ ಹೆಗಲಿಗೆ. ಆದರೆ ಆ ಹುಡುಗನ ಮುಖದಲ್ಲಿ ಸಂತಸಕ್ಕಿಂತ ಮುಂದೇನು ಅನ್ನೋ ಚಿಂತೆಯೇ ಬಹುವಾಗಿ ಕಾಡ್ತಾ ಇತ್ತು. ಮಾತಿನ ಮಧ್ಯೆ ಯಾಕಿಷ್ಟು ಚಿಂತೆ ಪಡ್ತಿಯ, ಹೇಗಿದ್ರು ಸರಕಾರದವರು ದಲಿತರಿಗಾಗಿ ಶೈಕ್ಷಣಿಕ ಸೌಲಭ್ಯ ಕೊಡುತ್ತೆ, ನಿನ್ನ ಫೀಸ್ ಬಗ್ಗೆನು ಯೋಚಿಸಬೇಡ ಅಂತ ಹೇಳ್ತಾ ಇದ್ದೆ. ಆದ್ರೆ ಇದ್ಯಾವುದರಿನ್ದಾನು ಆತನ ಮುಖದಲ್ಲಿನ ಚಿಂತೆ ಕಡಮೆ ಆಗ್ಲಿಲ್ಲ.
ಕೊನೆಗೆ ಆತನೇ, ಸರಕಾರದವರೆನೋ ಶುಲ್ಕ ತುಂಬುತ್ತಾರೆ, ಆದರೆ ಮಿಸಲಾತಿ ಇದ್ದರು ಒಳ್ಳೆಯ ಕಾಲೇಜ್ ನಲ್ಲಿ ಸೀಟು ದೊರಕೋದು ಕಷ್ಟ ಅಂದ. ನಾನೋ ಅದ್ಯಾಕೆ ಮಿಸಲಾತಿ ಇರೋದು ಹಿಂದುಳಿದ ಜನಾಂಗ ಮುಂದೆ ಬರಲಿ ಅಂತ ಹೇಳಿದ್ರೆ ಎಲ್ಲಿತ್ತೋ ಕೋಪ ಎಲ್ಲ ಸೇರ್ಸಿ ಹೇಳ್ದ, ನಂಗೆ ಮನೇಲಿ ಕಷ್ಟ ಇದೆ ಅದ್ಕೆ ೧೨೦೦೦ ರ್ಯಾಂಕ್ ಬಂದಿದೆ ಸ್ವಲ್ಪ ಮಟ್ಟಿಗೆ ತೀರ ಒಳ್ಳೇದು ಅಲ್ಲದೆ ಇದ್ರುನು ಉತ್ತಮ ಕಾಲೇಜ್ ನಲ್ಲಿ ಸೀಟು ಸಿಗಬಹುದು, ಆದರೆ ನಮ್ಮ ಅಮ್ಮ ಕೆಲಸಕ್ಕೆ ಹೋಗೋ ಮನೆಯ ಯಜಮಾನ ಸರಕಾರದಲ್ಲಿ ಉನ್ನತ ಹುದ್ದೆಲಿ ಇದ್ದಾರೆ, ಅವರ ಮಗನಿಗೆ ಖಾಸಗಿಯಾಗಿ ಕೋಚಿಂಗ್ ಕೊಡ್ಸಿದಾರೆ, ಇಷ್ಟಾಗಿಯೂ ಅವನಿಗೂ ನನಗು ಇರೋ ರ್ಯಾಂಕ್ ವ್ಯತ್ಯಾಸ ಕೇವಲ ೫೦೦.
ಎಲ್ಲ ಇಲ್ಲಗಳ ಮಧ್ಯೆಯೂ ಈ ಹುಡುಗ ೧೨೦೦೦ ರ್ಯಾಂಕ್ ಬಂದಿದ್ರೆ, ಎಲ್ಲ ಉಳ್ಳ, ಉನ್ನತ ಅಧಿಕಾರಿಯ ಮಗನಿಗೆ ಬಂದಿರೋದು ೧೧೫೦೦ ರ್ಯಾಂಕ್ ಅಂತೆ. ರ್ಯಾಂಕ್ ಅನುಸಾರ ಈತ ಹೇಳಿದ ಹುಡುಗನಿಗೆ ಬೇಕಾದ ಕಾಲೇಜ್ ಹಾಗು ಕೋರ್ಸ್ ಆಯ್ದುಕೊಳ್ಳುವ ಅವಕಾಶ. ಆದರೆ ನಿಜವಾದ ಅಗತ್ಯ ಇರೋದು ಈ ಹುಡುಗನಿಗೆ. ಆದರೂ ಸರಕಾರದ ನೀತಿಯಿಂದ ಏನು ಇಲ್ಲದ ಈ ಹುಡುಗ ಎಲ್ಲ ಇರುವ ಹುಡುಗನೊಂದಿಗೆ ಸೆಣಸಬೇಕು. ನಿಜಕ್ಕೂ ಮಿಸಲಾತಿ ಉಳ್ಳವರ ಪಾಲಗ್ತಾ ಇದೇನಾ ಅಂತ ಅನುಸ್ತು. ಸರಕಾರ ಎಚ್ಚೆತ್ತು ಮಿಸಲಾತಿ ಅವಶ್ಯ ಇರೋ ಜನರಿಗೆ ಸಿಗೋ ರೀತಿ ಮಾಡಬೇಕು. ಇಲ್ಲ ಅಂದ್ರೆ ಮೀಸಲಾತಿಯನ್ನು ಕೇವಲ ಉಳ್ಳವರು ಬಳಸಿಕೊಳ್ತಾರೆ ಹಾಗು ನಿಜಕ್ಕೂ ಇದರ ಅವಶ್ಯಕತೆ ಉಳ್ಳೋರು ಮೀಸಲಾತಿಯ ಸೌಲಭ್ಯ ಸಿಗದೇ ಕಷ್ಟ ಅನುಭವಿಸ್ತ ಕೂರಬೇಕಾಗತ್ತೆ.
ಸಂದರ್ಭೋಚಿತ ಲೇಖನ. ನಾವೆಲ್ಲ ಜಾತಿ ಆಧಾರಿತ ಮೀಸಲಿನಿಂದ ಹೊರ ಬಂದು, ಎಲ್ಲರಿಗೂ ಪ್ರಾಥಮಿಕ ಹಂತದಲ್ಲಿ ಒಳ್ಳೇ ಶಿಕ್ಷಣ ನೀಡಿ, ಉನ್ನತ ವಿದ್ಯಾಭ್ಯಾಸದಲ್ಲಿ ಹಾಗು ಕೆಲಸದಲ್ಲಿ ಪ್ರತಿಭೆ ಆಧಾರದಲ್ಲಿ ಅವಕಾಶ ನೀಡಬೇಕು
ಮುರಳಿಧರ್ ಅವರೆ ನಿಮ್ಮ ಅಭಿಪ್ರಾಯ ನನ್ನದೂ ಆಗಿದೆ.