ವಿಷಯದ ವಿವರಗಳಿಗೆ ದಾಟಿರಿ

ಜೂನ್ 21, 2012

ಕನ್ನಡ ಕಲಿಕೆಯ ಶಾಲೆ ಸಂಸ್ಥೆ

‍ನಿಲುಮೆ ಮೂಲಕ

ನಿಲುಮೆ

ಸ್ನೇಹಿತರೆ ನಮಸ್ಕಾರ, ಈ ಪತ್ರದ ಮೂಲಕ ನಾವು ಇದೆ ಮೊದಲನೇ ಸಲ ಭೇಟಿಯಾಗುತ್ತಿದ್ದೇವೆ, ಎಲ್ಲರಿಗೂ ಶುಭವಾಗಲಿ . (ಒಂದು ಸೂಚನೆ: “ಈ ಪತ್ರ ಓದಲು ನಿಮಗೆ ಮೂರು ನಿಮಿಷ ಗಳಾದರೂ ಬೇಕಾಗುವುದರಿಂದ ದಯವಿಟ್ಟು ಸಮಯವಿದ್ದರಷ್ಟೇ ಮುಂದುವರಿಸಿ, ಇಲ್ಲದಿದ್ದರೆ ನಿಮ್ಮ ಬಿಡುವಿನ ವೇಳೆಯಲ್ಲಿ ಓದಿಕೊಳ್ಳಿ” – ಇದು ನಮ್ಮ ವಿನಂತಿ).

ಒಂದು ಕಾಲದಲ್ಲಿ “ಉದ್ಯಾನ ನಗರಿ” ಎಂದೇ ಪ್ರಸಿದ್ದಿ ಪಡೆದಿದ್ದ “ಬೆಂದಕಾಳೂರು”, ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ದೇಶ-ವಿದೇಶದ ನಾನಾ ಭಾಗ/ಪ್ರಾಂತ್ಯದ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ಹೇಗೆ ನಮ್ಮ ಮನೆಗೆ ಅತಿಥಿಗಳು ಬಂದಾಗ, ನಮ್ಮ ಬಗ್ಗೆ ಹಾಗೂ ನಮ್ಮ ಮನೆಯ ವಾತಾವರಣದ ಬಗ್ಗೆ ಪರಿಚಯ ಮಾಡಿಕೊಡುತ್ತೆವೋ ಹಾಗೆಯೇ ಇಲ್ಲಿಗೆ ಬರುವ ಸಹಸ್ರಾರು ಜನರಿಗೆ ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಕೊಡುವ “ಜವಾಬ್ದಾರಿ” ಹಾಗೂ “ನಿರಂತರ ಪ್ರಯತ್ನ” ನಮ್ಮೆಲ್ಲರ ಮೇಲಿದೆ.

ಈ ನಿಟ್ಟಿನಲ್ಲಿ ನಾವು ” Kannada Learning School (ಕನ್ನಡ ಕಲಿಕೆಯ ಶಾಲೆ) “ಎಂಬ ಸಂಸ್ಥೆ ಯನ್ನು ಪ್ರಾರಂಭಿಸಿದ್ದೇವೆ. ಕಳೆದ ಎರಡು ವರ್ಷದಿಂದ “ಕನ್ನಡ ಕಲಿ” ಎಂಬ ಕಾರ್ಯಕ್ರಮವನ್ನು ಕೇವಲ ಸೀಮಿತ ಪ್ರದೇಶದಲ್ಲಿ ನಡೆಸಿ ಕೊಡುತ್ತಿದ್ದ ನಾವು, ಇಲ್ಲಿಯವರೆಗೆ ಐದು ನೂರಕ್ಕೂ ಹೆಚ್ಚು ಜನರಿಗೆ ಕನ್ನಡ ಭಾಷೆಯನ್ನು ಪರಿಚಯಿಸಿದ್ದೇವೆ. ಈ ಅನುಭವ ಹಾಗೂ ಯಶಸ್ಸೇ ನಮಗೆ ” ಕನ್ನಡ ಕಲಿಕೆಯ ಶಾಲೆ” ಯ ಸ್ಥಾಪನೆಗೆ ಪೂರಕವಾಯಿತು. ನಮ್ಮ ಶಾಲೆಯ ಮುಖ್ಯ ಉದ್ದೇಶ: ಮೊದಲನೇ ಹಂತದಲ್ಲಿ : “ಬೆಂಗಳೂರಿನ ಎಲ್ಲ ಭಾಗಗಳಲ್ಲಿ ನೆಲೆಸಿರುವ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವ ಕನ್ನಡೇತರರಿಗೆ, ಕನ್ನಡ ಭಾಷೆಯನ್ನು ಪರಿಚಯಿಸುವುದು (ಕಲಿಸುವುದು)” ಹಾಗೂ ಎರಡನೇ ಹಂತದಲ್ಲಿ :”ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಳುಗಿಹೋಗಿರುವ ನಮ್ಮ ಮುಂದಿನ ಪೀಳಿಗೆಯ ಕನ್ನಡಿಗರಿಗೆ, ಕನ್ನಡ ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಅರಿವನ್ನು ಮತ್ತು ತಿಳುವಳಿಕೆಯನ್ನು ಮೂಡಿಸುವುದು”.

ಉಚಿತವಾಗಿ ಸಿಕ್ಕ ಅಥವಾ ಪಡೆದುಕೊಂಡ ವಸ್ತು / ವಿಷಯ ಕಾಲಕ್ರಮೇಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ” ಅನ್ನುವ ಅಂಶ ನಮ್ಮೆಲ್ಲರಿಗೂ ಗೊತ್ತೇ ಇದೆ. ಹಾಗಾಗಿ ನಾವು ತರಗತಿಗಳನ್ನ ಉಚಿತವಾಗಿ ನಡೆಸದೆ, ಇಂತಿಷ್ಟು ಶುಲ್ಕವನ್ನು ನಿಗದಿಪಡೆಸಿದ್ದೇವೆ. ಅದರ ಪ್ರಕಾರವಾಗಿ ತರಗತಿ ಗಳನ್ನು ನಡೆಸಿಕೊಡುತ್ತೇವೆ. ಕನ್ನಡ ವನ್ನು ಕಲಿಸುವ ಹುಮ್ಮಸ್ಸು ನಮಗಿದೆ, ಕಲಿಯಲೂ ಸಹ ಬಹಳಷ್ಟು ಆಸಕ್ತ ಮನಸ್ಸುಗಳಿವೆ. ಮತ್ಯಾಕೆ ತಡ? ಇನ್ನು ಮುಂದೆ ” Even I need to learn kannada/ I am also interested/I am looking forward/I am trying.. , but I don’t know where to approach”, ಅನ್ನುವ ಪದಗಳು ನಿಮ್ಮ ಕಿವಿಗೆ ಬಿದ್ದ ತಕ್ಷಣ ನಿಮ್ಮ ಬಾಯಿಂದ ಹೊರಡುವ ಮೊದಲ ಮಾತು : ” Kannada Learning School” ಆಗಲಿ ಅನ್ನುವುದುವುಷ್ಟೇ ನಿಮಗೆ ನಮ್ಮ ವಿನಮ್ರ ಕೋರಿಕೆ. ನಮ್ಮ ವಿವರ ( ಈ ಕೆಳಗೆ ಇರುವ ಕೊಂಡಿ ನಲ್ಲೂ ಸಹ ನಮ್ಮ ವಿವರಗಳನ್ನು ಕಾಣಬಹುದು):

ವೆಬ್ ತಾಣ: http://www.kannadalearningschool.com/

ಮಿಂಚೆ : school.kannada@gmail.com

ದೂರವಾಣಿ ಸಂಖ್ಯೆ: 9900577225

ವಿನಂತಿ:

 ೦೧. ನಿಮ್ಮ ಸಲಹೆ – ಸೂಚನೆ ಗಳು, ಅನಿಸಿಕೆಗಳನ್ನ ( feed back) ನಮ್ಮ ಜೊತೆ ಹಂಚಿಕೊಂಡರೆ ಈ ಕಾರ್ಯಕ್ರಮವನ್ನ ಇನ್ನೂ ಚೆನ್ನಾಗಿ ನಡೆಸಿಕೊಂಡು ಹೋಗಲು ನಮಗೆ ಸಹಾಯ ವಾಗುತ್ತದೆ.

೦೨. ಈ ಕೆಳಗಿನ ಪೋಸ್ಟರ್ ನ್ನು ನಿಮ್ಮ ಗೆಳೆಯರಿಗೆ ಮಿಂಚೆಯ ಮೂಲಕ ಕಳುಹಿಸಿ ಕೊಟ್ಟರೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಜಾಹಿರಾತು ಮಾಡಿದರೆ ನೀವು ನಮ್ಮನ್ನ ಪ್ರೋತ್ಸಾಹಿಸಿದಂತಾಗುತ್ತದೆ (A3 ಗಾತ್ರದ ಪೋಸ್ಟರ್ ಗಳಿಗಾಗಿ ನೀವು ನಮ್ಮನ್ನ ಸಂಪರ್ಕಿಸಬಹುದು).

  ತಮ್ಮ,

 ಕನ್ನಡ ಕಲಿಕೆಯ ಶಾಲೆ ಸಂಸ್ಥೆ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments