ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬಾರದು – ಅಲ್ಲವೇ?
– ಸಿದ್ದಾಂತ್
ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ.ಹೀಗಿರುವಾಗ ಇಂದಿನ ತಾಯಂದಿರು ತಮ್ಮ ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ರೂಪಿಸುವಲ್ಲಿ ಯಾವ ಪಾತ್ರ ವಹಿಸಿದ್ದಾರೆ? ಮಗುವಿನ ಸರ್ವಾಂಗೀಣ ಬೆಳವಣಿಗೆ ಎಂದರೆ ಅವನ/ಅವಳ ಶಾರೀರಿಕ, ಮಾನಸಿಕ, ಬ್ಹುದ್ದಿಕ, ಆಧ್ಯಾತ್ಮಿಕ,ಆತ್ಮಿಕ, ಹಾಗು ಆತ್ಮಸ್ತೈರ್ಯದ ವಿಕಾಸವೇ ಆಗಿದೆ. ಆದರೆ ಇಂದಿನ ತಂದೆ ತಾಯಂದಿರು ತಮ್ಮ ಮಕ್ಕಳ ಶಾರೀರಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಬೆಳವಣಿಗೆಯನ್ನು ಮಾತ್ರವೇ(ಸ್ಪರ್ದೆಗಳಲ್ಲಿ ಗೆಲ್ಲುವುದು) ಸರ್ವಾಂಗೀಣ ಬೆಳವಣಿಗೆ ಎಂದು ಅರ್ಥೈಸಿಕೊಂಡಿರುವಂತಿದೆ…?
ಇದಕ್ಕೆ ಸಂಬಂಧಿಸಿಧ ಮತ್ತೊಂದು ವಿಷಾದನೀಯ ಸಂಗತಿ ಎಂದರೆ ಇಂಥಹುದನ್ನು ಪ್ರಹಿಸುವಂತೆ ಟಿವಿಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಮಕ್ಕಳಿಗೆ ದುಭಾರಿಯಾದಂತಹ ಆಹಾರ(ಹೆಲ್ತ್ ಡ್ರಿಂಕ್ಸ್) , ಪಾನೀಯಗಳನ್ನು ಪೋಷಕರು ಕೊಡಿಸುವ ಭ್ರಮೆಯಲ್ಲಿರುತ್ತಾರೆ. ಇದನ್ನು ಕುಡಿದರೆ ಮಾತ್ರ ತಮ್ಮ ಮಕ್ಕಳು ವಿಶೇಷವಾದದನ್ನು ಸಾಧಿಸಬಲ್ಲರು ಎಂಬ ಭ್ರಮೆಯನ್ನು ಜಾಹೀರಾತುಗಳಲ್ಲಿ ಬರುವ ಸೆಲೆಬ್ರಿಟಿಗಳು ಮತ್ತು ಪೋಷಕರು ಮಕ್ಕಳ ಮನಸ್ಸಿನಲ್ಲಿ ಉಂಟುಮಾಡುವುದು ಎಷ್ಟರಮಟ್ಟಿಗೆ ಸರಿ? ಹೀಗೆ ನೋಡಿದರೆ ಹಿಂದಿನ ಕಾಲದಲ್ಲಿ ಮಕ್ಕಳು(ಆಧುನಿಕ ಹೆಲ್ತ್ ಪಾನಿಯಗಳಿಲ್ಲದ ಕಾಲದಲ್ಲಿ ) ಏನ್ನನ್ನೂ ಸಾಧಿಸಿರಲಿಲ್ಲವೆ?
ಅದು ಹಾಗಲ್ಲ. ಇಂದಿನ ತಾಯಂದಿರು/ಪೋಷಕರು ತಮ್ಮ ಮಕ್ಕಳ ಸೋಲು/ಗೆಲುವಿನ ವಿಷಯವನ್ನು ವೈಯುಕ್ತಿಕವಾಗಿ ಪರಿಗಣಿಸುತ್ತಾರೆ.ಇದರಿಂದ ಮಕ್ಕಳ ಮೇಲೆ ಒತ್ತದ ಬಿಳುವುದಲ್ಲದೆ ಅವರ ಮನಸಿನಲ್ಲಿ ಗೆಲುವಿನ ಹೊರತು ಬೇರೆಯದನ್ನು(ಸೋಲನ್ನು ಸ್ವೀಕರಿಸುವ ) ಎದೆಗಾರಿಕೆ, ಕ್ರೀಡಾಮನೋಭಾವ ಇಲ್ಲದೆ ಹೋಗುತ್ತೆ. ಇದು ಸರ್ವತೋಮುಖ ಅಭಿವೃದ್ದಿಯ ಲಕ್ಷಣವಲ್ಲ. ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ನಡುವೆ ಆರೋಗ್ಯಕರ ಸ್ಪರ್ದೆ ಇರಬೇಕೆ ಹೊರತು ದ್ವೇಷ-ಅಸೂಯೆಗಳಿಂದ ಕೂಡಿದ ಹೋರಾಟವಲ್ಲ. ಈ ವಿಷಯವನ್ನು ಪೋಷಕರು ಆರ್ಥಮಾಡಿಕೊಳ್ಳಬೇಕು. ಕೇವಲ ಗೆಲುವಿನ ಆಧಾರದಮೇಲೆ ತಮ್ಮ ಮಕ್ಕಳ ಯೋಗ್ಯತೆ/ಪ್ರತಿಭೆಯನ್ನು ಅಳತೆ ಮಾಡಬಾರದು. ಅವರ ಬಾಲ್ಯದ ಕನಸುಗಳನ್ನು ದೊಡ್ಡವರು ತಮ್ಮ ಅಪೂರ್ಣ ಆಸೆ/ಮಹತ್ವಕಾಂಕ್ಷೆಯನ್ನು ನನಸಾಗಿಸುವ ಪ್ರಯತ್ನ ನಿಜಕ್ಕೂ ಅಮಾನವೀಯ. ಇದು ಒಂದು ರೀತಿಯ ಬಾಲಕಾರ್ಮಿಕವಲ್ಲವೇ..? ಇದಾಕ್ಕೆ ಪೂರಕವೆಂಬಂತೆ ಇಂದಿನ ರಿಯಾಲಿಟಿ ಷೋಗಳಲ್ಲಿ ಟಿಆರ್ಪಿ ಹೆಚ್ಚಿಸಲು ಮಕ್ಕಳನ್ನು ತೀರ್ಪುಗಾರರು ಹೀನಾಮಾನವಾಗಿ ಬೈಯುವುದು, ಇಲ್ಲವೇ ಅವರುಗಳ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡುವುದು ಇದೆಲ್ಲ ಸರ್ವೇಸಾಮಾನ್ಯವಾಗಿದೆ.
ಇಂತಹ ಅಮಾನವೀಯ,ಅನೈಜ ಚಟುವಟಿಕೆಗಳಿಂದ ಮಕ್ಕಳ ಮನಸ್ಸಿನ ಮೇಲೆ ಆಗುವ ಆಘಾತಕ್ಕೆ ನಾವೆಲ್ಲರೂ ಉತ್ತರಿಸಬೇಕಾಗಿದೆಯಲ್ಲವೆ? ಮಕ್ಕಳ ಬಾಲ್ಯವನ್ನು, ಅವರ ಅಭಿರುಚಿ, ಯೋಚನಾ ಲಹರಿಯ ಅಭಿವ್ಯಕ್ತಿಯಲ್ಲಿ ಕಲಬೆರಕೆ ಮಾಡುವುದು ಸರಿಯಲ್ಲ. ಅವರನ್ನು ಕೃತಕ ಅನುಕರಣೆಯತ್ತ ತಳ್ಳದೆ ನೈಜತೆಯ ಸ್ವಚ್ಚಂದ ಬಾನಿನಲ್ಲಿ ಹರಡಲು ಬಿಡುವುದು ಪೋಷಕರಾದ/ ಹಿರಿಯರಾದ ನಮ್ಮೆಲ್ಲರ ಕರ್ತವ್ಯವಲ್ಲವೇ ??