ವಿಷಯದ ವಿವರಗಳಿಗೆ ದಾಟಿರಿ

ಜೂನ್ 28, 2012

ಶೇರು ಮಾರುಕಟ್ಟೆ : ಭಾಗ -೧

‍ನಿಲುಮೆ ಮೂಲಕ

– ವೆಂಕಟೇಶ್ ಗುರುರಾಜ್

ಹಣ ಯಾರಿಗೆ ಬೇಡ? ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಮತ್ತು ಅವನು ಸತ್ತಮೇಲೆ ಅವನ ಅಂತ್ಯಕ್ರಿಯಯನ್ನು ಮಾಡುವ ಅವನ ಮನೆಯವರಿಗೂ ಹಣ ಬೇಕೇಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಮಕರಣದಿಂದ ತಿಥಿಯವರೆಗೆ. ನಾವು ನೀವೆಲ್ಲರೂ ನಮ್ಮ ಜೀವಿತ ಅವಧಿಯಲ್ಲಿ ಹಣವನ್ನು ನಮ್ಮ ಇತಿಮಿತಿಯಲ್ಲಿ ಸಂಪಾದಿಸುತ್ತೇವೆ. ಕೆಲವರು ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಮಾಡಿ, ಮತ್ತೆ ಕೆಲವರು ಹಣದಿಂದ ಹಣವನ್ನು ಸಂಪಾದಿಸುತ್ತಾರೆ. ಮೊದಲ ಮೂರು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೊನೆಯದಾದ ಹಣದಿಂದ ಹಣವನ್ನು ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ಇದನ್ನು ಬಂಡವಾಳ ಹೂಡಿಕೆ ಎಂದೂ ಸಹ ಕರೆಯುತ್ತಾರೆ.  ಬಂಡವಾಳ ಎಂದರೆ ಏನು ಎಂಬುದರ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣವೇ?

ಬಂಡವಾಳ ಹೂಡುವುದೆಂದರೆ ಜನಸಾಮಾನ್ಯರಲ್ಲಿ ಅದು ಲಕ್ಷ/ಕೋಟಿಗಳ ರೂಪದಲ್ಲಿ ಇರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸುಳ್ಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜನ ಸಾಮಾನ್ಯರೂ ಸಹ ಸ್ವಲ್ಪ ಮಟ್ಟಿನ ಬಂಡವಾಳ ಹೂಡಿಕೆದಾರರೇ. ಕೆಲವರು ತಮ್ಮ ಹೆಚ್ಚುವರಿ ಸಂಪಾದನೆಯನ್ನು ಅಥವಾ ತಮ್ಮ ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಬ್ಯಾಂಕ್/ಅಂಚೆ ಕಚೇರಿಯಲ್ಲಿ ಇಟ್ಟು ಅದರಲ್ಲಿ ಬರುವ ಬಡ್ದಿಯನ್ನು ಪಡೆಯುತ್ತಾರೆ. ಇದೂ ಸಹ ನಿಮ್ಮ ಹಣ ವೃದ್ದಿಸುತ್ತದೆ.  ಭೂಮಿಯ ಮೇಲೆ ಹಾಕಿದ ಹಣ ನಿಮ್ಮ ಮೂಲ ಹಣವನ್ನು ಅನೇಕ ಬಾರಿ ವೃದ್ದಿಸುತ್ತದೆ. ಚಿನ್ನ, ಬೆಳ್ಳಿಯ ಮೇಲೆ ಹಾಕಿದ ಹಣ ನಿಮಗೆ ದುಪ್ಪಟ್ಟು, ತಿಪ್ಪಟ್ಟಾಗುತ್ತದೆ. ಶೇರು/ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ ಹಣ ನಿಮಗೆ ಲಾಭವನ್ನು ತಂದುಕೊಡುತ್ತದೆ.

ಬ್ಯಾಂಕಿ/ಅಂಚೆ ಕಛೇರಿಯಲ್ಲಿ ಹಣ ಇಟ್ಟು ಬಡ್ಡಿ ತೆಗೆದುಕೊಳ್ಳುವುದು, ಭೂಮಿಯ ಮೇಲೆ ಹಣವನ್ನು ವಿನಿಯೋಗಿಸುವುದು, ಚಿನ್ನ ಬೆಳ್ಳಿಯ ಮೇಲೆ ಹಣವನ್ನು ಹೂಡಿಕೆ ಮಾಡುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈ ಶೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಬಗ್ಗೆ ನಮ್ಮ ಕನ್ನಡಿಗರಿಗೆ ಹಿಚ್ಚಿನ ಮಾಹಿತಿ ಇಲ್ಲ.  ಕೇವಲ ಕನ್ನಡಿಗರಷ್ಟೇ ಅಲ್ಲ ನಮ್ಮ ಭಾರತ ದೇಶದಲ್ಲೂ ಸಹ ಈ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿರುವವರು ಕೇವಲ ೨%. ನಮ್ಮ ಭಾರತ ದೇಶದ ಜನಸಂಖ್ಯೆಗೆ ಇಂದು ಸುಮಾರು ೧೨೦ ಕೋಟಿ, ಅದರಲ್ಲಿ ಶೇಕಡ ೨% ಎಂದರೆ ಅದು ಯಾವ ಮೂಲೆಗೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments