ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 15, 2012

3

ಅಖಂಡ ಭಾರತ ಸಂಕಲ್ಪ ದಿನದ ಔಚಿತ್ಯವೇನು…?

‍ನಿಲುಮೆ ಮೂಲಕ

– ಅಶ್ವಿನ್ ಅಮೀನ್

ಆಗಸ್ಟ್ 14,ಸಂಘಪರಿವಾರಾದಿಯಾಗಿ ಕೆಲ ಸಂಘಟನೆಗಳು ‘ಅಖಂಡ ಭಾರತ ಸಂಕಲ್ಪ ದಿನ’ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗು ಇತರ) ಗಳನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ… ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.

ಭಾರತ-ಪಾಕ್ ಹಾಗು ಭಾರತ-ಬಾಂಗ್ಲಾ ವಿಭಜನೆಯಾದಂದಿನಿಂದ ಇಂದಿನವರೆಗೂ ಇವೆರಡೂ ದೇಶಗಳಲ್ಲಿ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ಅತ್ಯಾಚಾರ, ಬಲವಂತದ ಮತಾಂತರಗಳು ನಿಂತಿಲ್ಲ.. ಅಲ್ಲಿರುವ ಬೆರಳೆಣಿಕೆಯ ಹಿಂದುಗಳಿಗೆ ರಕ್ಷಣೆಯಿಲ್ಲದಾಗಿದೆ.  ಅಲ್ಲಿ ಹಿಂದೂಗಳ ಮೇಲೆ ನಡೆಯುವ ಎಲ್ಲಾ ಅತ್ಯಾಚಾರ, ಹತ್ಯಾಕಾಂಡಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ.. ಕೆಲವೇ ಕೆಲವು ಘಟನೆಗಳು ಮಾತ್ರ ಮಾಧ್ಯಮದ ಮೂಲಕ ತಿಳಿಯುತ್ತದೆ. ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಗೈದು ಮುಸ್ಲಿಂ ಆಗಿ ಮತಾಂತರಿಸಲಾಗುತ್ತಿದೆ. ಹಿಂದೂ ಜನರನ್ನು ಅಟ್ಟಾಡಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಬಲವಂತದ ಸುನ್ನತ್-ಮತಾಂತರಗಳು ಎಗ್ಗಿಲ್ಲದೆ ನಡೆಯುತ್ತಿದೆ… ಅಲ್ಲಿನ ಹಿಂದೂ ದೇಗುಲಗಳು ಧರೆಗುರುಳುತ್ತಿವೆ, ಕೆಲ ಕಡೆ ಹಿಂದುಗಳನ್ನು ಅವರ ಮನೆಯಿಂದಲೇ ಹೊರಗಟ್ಟಲಾಗುತ್ತಿದೆ. ಈ ಎಲ್ಲಾ ಆಕ್ರಮಣಗಳಿಗೆ ಹೆದರಿ ಈಗಾಗಲೇ ಪಾಕಿಸ್ತಾನದಿಂದ ಭಾರತದತ್ತ ವಲಸೆ ಬರುತ್ತಿರುವ ಹಿಂದೂ ಕುಟುಂಬಗಳ ಬಗ್ಗೆ ಕೇಳಿರುತ್ತೀರಿ. ಪಾಪ ಅವರ ಸ್ಥಿತಿ ಅತ್ತ ಪಾಕಿಸ್ತಾನವೂ ಇಲ್ಲ ಇತ್ತ ಭಾರತವೂ ಇಲ್ಲವೆಂಬಂತಾಗಿದೆ.

ಅದೇ ರೀತಿ ಬಾಂಗ್ಲಾದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.. ಅಲ್ಲಿನ ಮುಸ್ಲಿಂ ನುಸುಳುಕೋರರು ಈಗಾಗಲೇ ಭಾರತಕ್ಕೆ ಅಕ್ರಮ ವಲಸೆ ಬಂದು ಭಾರತದ ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ಮಾಡುತ್ತಿರುವ ಆಕ್ರಮಣಗಳು, ಅವರ ಧಾಳಿಯಿಂದ ತತ್ತರಿಸಿ ನೆಲೆ ಕಳೆದುಕೊಂಡಿರುವ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇವೆಲ್ಲ ಎಂತಹ ಕಟು ಹೃದಯಿಯ ಕಣ್ಣಲ್ಲೂ ನೀರು ತರಿಸುತ್ತವೆ. ಪ್ರಸ್ತುತ ಅಸ್ಸಾಂ ನಲ್ಲಿ ನಡೆಯುತ್ತಿರುವ ಹಿಂದೂಗಳ ಮಾರಣಹೋಮವೇ ಇದಕ್ಕೆ ಜ್ವಲಂತ ಸಾಕ್ಷಿ. ಅಲ್ಲಿನ ಹೆಚ್ಚಿನ ಹಿಂದೂ ಬೋಡೊ ಬುಡಕಟ್ಟು ಜನಾಂಗದವರು ಬಾಂಗ್ಲಾದ ಅಕ್ರಮ ವಲಸಿಗ ಮುಸ್ಲಿಮರಿಗಾಗಿ ತಮ್ಮ ಮನೆ ಮಠವನ್ನೆಲ್ಲ ಕಳೆದುಕೊಂಡಿದ್ದಾರೆ. ಅಲ್ಲಿನ ಹಿಂದೂ ಹೆಣ್ಣುಮಕ್ಕಳ ದಯನೀಯ ಸ್ಥಿತಿಯನ್ನಂತೂ ಯಾವ ಪದಗಳಿಂದ ಹೇಳುವುದು ಎಂದೇ ತೋಚುತ್ತಿಲ್ಲ.

ಹೀಗಿರುವಾಗ ಅವೆರಡೂ ದೇಶಗಳು ಮತ್ತೆ ಭಾರತದೊಂದಿಗೆ ವಿಲೀನಗೊಂಡು ‘ಅಖಂಡ ಭಾರತ’ ನಿರ್ಮಾಣವಾದರೆ ಅವೆರಡೂ ದೇಶಗಳ ಮುಸ್ಲಿಂಮರು ನಮ್ಮ ಹಿಂದೂಗಳ ಮೇಲೆ ಯಾವ ರೀತಿಯಲ್ಲಿ ಆಕ್ರಮಣಗೈಯಬಹುದು ಎಂಬುದನ್ನು ಒಂದು ಕ್ಷಣ ಊಹಿಸಿ. ಭಾರತದಲ್ಲಿ ಈಗಾಗಲೇ ಸರಿ ಸುಮಾರು 18 ಶೇಕಡಾದಷ್ಟಿರುವ ಮುಸ್ಲಿಮರು ಇಲ್ಲಿನ ಹಿಂದೂಗಳ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಎಲ್ಲಾ ಕಡೆಗಳಲ್ಲಿ ತಡೆಯಲಾಗುತ್ತಿಲ್ಲ. ಹಾಗಿರುವಾಗ ಇಲ್ಲಿನ 18  ಶೇಕಡಾ, ಪಾಕ್-ಬಾಂಗ್ಲಾದ ಮುಸ್ಲಿಮರೆಲ್ಲ ಸೇರಿ ಸುಮಾರು 40-45 ಶೇಕಡಾವಾಗುವಾಗ ಇಲ್ಲಿನ ಹಿಂದೂಗಳ ಮೇಲೆ ಆಕ್ರಮಣವಾಗದಿರುತ್ತದೆಯೇ. ಮುಸ್ಲಿಮರ ಜನಸಂಖ್ಯೆ 40 ರಿಂದ 45 ಶೇಕಡಾದಷ್ಟಾಗುವಾಗ ಚುನಾವಣೆಗಳಲೆಲ್ಲ ಮುಸ್ಲಿಂ ಲೀಗ್, ಜಮಾತೆ ಇಸ್ಲಾಂ ನಂತಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲವೇ? ಕ್ರಮೇಣ 45 ಶೇಕಡಾದಿಂದ 50 , ನಂತರ 55 , ಮುಂದೆ 60 ಹೀಗೆ ಮುಸ್ಲಿಮರ ಜನಸಂಖ್ಯೆ ಭಾರತದಲ್ಲಿ ಹೆಚ್ಚಳವಾಗುತ್ತ ಹೋಗುವಾಗ ಹಿಂದೂಗಳ ಸ್ವಂತ ನಾಡಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಾರಲ್ಲ!!! ಆಗಲೂ ನಾವು ಅಖಂಡ ಭಾರತವನ್ನು ಹೊಂದಬೇಕು ಎಂಬ ಆಸೆ ಇರುವುದೇ…?!

ಇಂದು ‘ಅಖಂಡ ಭಾರತ ಸಂಕಲ್ಪ ದಿನ’ವೆಂದು ಆಚರಿಸುವವರಿಗೆ ಅದರ ಉದ್ಧೇಶ ಹಾಗು ಅದರಿಂದಾಗುವ ಪರಿಣಾಮಗಳ ಅರಿವಿರಲಿಕ್ಕಿಲ್ಲ. ಯಾವುದೇ ಆಚರಣೆಗಳನ್ನು ಆಚರಣೆ ಮಾಡಬೇಕೆಂದು ಆಚರಿಸುವುದಕಿಂತ ಅದರ ಪರಿಣಾಮಗಳನ್ನು ಅವಲೋಕಿಸಿ ಆಚರಿಸಿದರೆ ಉತ್ತಮ ಅಲ್ಲವೇ…

ಜೈ ಭವಾನಿ…

3 ಟಿಪ್ಪಣಿಗಳು Post a comment
 1. anand prasad
  ಆಗಸ್ಟ್ 15 2012

  ಅಖಂಡ ಭಾರತ ಸಂಕಲ್ಪ ದಿನಾಚರಣೆ ಎಂಬುದು ಅರ್ಥಹೀನ. ಕಳೆದು ಹೋದ ವಿಷಯಗಳನ್ನು ನೆನೆಯುತ್ತ ಹಳಹಳಿಸುವುದರಿಂದ ಉಪಯೋಗವಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ಒಳಗೊಂಡ ಅಖಂಡ ಭಾರತ ಎಂದೂ ಸಾಧ್ಯವಾಗಲಾರದು. ಬ್ರಿಟಿಷರು ಭಾರತದಿಂದ ದೋಚಿಕೊಂಡ ಹೋದ ಸಂಪತ್ತನ್ನು ಮರಳಿ ಕೊಡಬೇಕು ಎಂದು ನಾವು ಈಗ ಕೇಳಿದರೆ ಅದಕ್ಕೆ ಅರ್ಥ ಇದೆಯೇ ಅಥವಾ ಅದಕ್ಕೆ ಮಾನ್ಯತೆ ದೊರಕುತ್ತದೆಯೇ? ಅದೇ ರೀತಿ ಈ ಅಖಂಡ ಭಾರತ ನಿರ್ಮಾಣದ ಸಂಕಲ್ಪವೂ ಕೂಡ. ಅದಕ್ಕೆ ಇಂದಿನ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ಅರ್ಥವೇ ಇಲ್ಲ.

  ಉತ್ತರ
 2. ಆಗಸ್ಟ್ 19 2012

  ನೀವು ಹೇಳುತಿರುವದು ನಿಜ ಅಶ್ವಿನ್ !!! ಮುಸ್ಲಿಮರ ಬಗ್ಗೆ ಒಂದು ಮಾತಿದೆ ಅವರು ಕೇವಲ ಇಬ್ಬರು ಮೂರು ಜನ ಇದ್ದಾಗ ನಾವೆಲ್ಲ ಒಂದೇ.. ಜಾತಿ -ಧರ್ಮ ಇಲ್ಲ ಅನ್ನೋ ತರ ಆಡ್ತಾರೆ .. ಅದೇ ಅವರ ಸಂಖೆ ಸ್ವಲ್ಪ ಜಾಸ್ತಿ ಅದಾಗ ನಾವ್ ಏನು ನಿಮಗೆ ಕಮ್ಮಿ ಇಲ್ಲ ನಾವು ನಿಮ್ಮ ಸರಿ ಸಮ ಅನ್ನೋ ತರ ಇರ್ತಾರೆ .. ಅದೇ ಅವರೇ ನಮಗಿಂತ ಜಾಸ್ತಿ ಆದರೆ “ಒಂದೇ ನೀವ್ ಇರಬೇಕು ಇಲ್ಲ ನಾವಿರಬೇಕು.. ಅಂತ ಕಾಲು ಕಿತ್ಥ್ ಕೊಂದು ಜಗಳಕ್ಕೆ ಬರ್ತಾರೆ .. ಅದು ಕಾಶ್ಮೀರ & ಕೇರಳ ನೋಡಿದರೆ ಗೊತ್ತಗೊತ್ತೆ ಬೇರೆ ಉದಾಹರಣೆ ಬೇಡ .
  ಈ ಅಖಂಡ ಭಾರತ ಸಂಕಲ್ಪ ದಿನ ಅಂತ ಆಗಸ್ಟ್ ೧೪ ರಂದು ಆಚರಿಸುವ ನನ್ನ ಮಿತ್ರರಿಗೆ ನಿಮ್ಮ ಹಾಗೇ ನಾನು ಕೇಳಿದ್ದೆ ” ನಿಮಗೆಲ್ಲ ಮರ್ಲ ? (ಹುಚ್ಚು ) ಇದ್ದ ಭಾರತವನ್ನೇ ನೋಡಲು ಆಗುತ್ತಿಲ್ಲ, ಇನ್ನು ನಿಮ್ಮ ಜೋಬ್ಬ (ತಿಥಿ ) ಅಖಂಡ ಭಾರತ ವಂತೆ ಮಾಡಲು ಬೇರೆ ಕೆಲಸ ವಿಲ್ವಾ ಅಂತ .” ಇವಾಗ ನನಗೆ ಅನ್ನಿಸುತ್ತ ಇರುವದು ಅಂಥದೊಂದು ಕಲ್ಪನೆ ತಪಲ್ಲ ಅಂತ. ಏಕೆಂದರೆ ನಾವು ಶತ್ರುವಿಗೆ ಹೊಡಿಬೇಕು ಅಂತ ಇಲ್ಲ ” ನಮ್ಮಲ್ಲಿ ಹೊಡೆಯುವ ಶಕ್ತಿ ಇದೆ ” ಅಂತ ಅವನಿಗೆ ಒಂದು ಭಯದ ವಾತಾವರಣದಲ್ಲಿ ಬದುಕುವ ಹಾಗೇ ಮಾಡಬೇಕು. ನೋಡಿ “ಅಖಂಡ ಭಾರತ ” ಮಾಡಲು ನನಗೆ ತಿಳಿದ ಮಟ್ಟಿಗೆ ಕಷ್ಟ ಸಾದ್ಯ . ಇದು ಆ “ಅಖಂಡ ಭಾರತ ಸಂಕಲ್ಪ ದಿನ” ಆಚರಿಸುವವರಿಗೂ ತಿಳಿದಿರ ಬಹುದು . ಅವರಲ್ಲಿ ಕೆಲವೇ ಕೆಲವರು ಹೇಳುವದು “ಅಖಂಡ ಭಾರತ ” ಅಂದ್ರೆ ಪಾಕ್ ಬಾಂಗ್ಲಾ ವನ್ನು ಯುದ್ದ ಮೂಲಕ ಗೆದ್ದು ಅವರನ್ನು ಸಂಹರಿಸಿ ಹಿಂದೂ ರಾಷ್ಟ್ರ ಸ್ಥಾಪನೆ ಅಂತ ಅದು ಕೂಡ ಜಾತ್ಯತೀತಾ ಅಂತ ಕರೆಯಲು ಹೆಮ್ಮೆ ಪಡುವವರು ಇರೋತನಕ ನೂರಕ್ಕೆ ನೂರು ಸಾದ್ಯವಿಲ್ಲ. ನಿಮಗೆ ತಿಳಿದಿರ ಬಹುದು ಬಾಂಗ್ಲಾ-ಪಾಕ್ ಸೇರಿ “ಮುಘಲಿಸ್ತಾನ ” ಅಂತ ಒಂದು ಯೋಜನೆಯನ್ನು ಹಾಕಿಕೊಂಡಿವೆ . ಅದು ಭಾರತವನ್ನು ತುಂಡರಿ ಹೊಸ ಮುಸ್ಲಿಮ ರಾಷ್ಟ್ರ ಸ್ಥಾಪಿಸುವದು . ಅಸ್ಸಾಂ, ಪಶ್ಚಿಮ ಬಂಗಾಳ,, ನೇಪಾಳ, ಭೂತಾನ್, ಮಾಲ್ಡೀವ್ಸ್ಗಳನ್ನು ಬಾಂಗ್ಲಾ ಜತೆ ಸೇರ್ಪಡೆ ಮಾಡಿ ರಚನೆ ಮಾಡಲು ಹೊರಟಿರುವುದೇ ‘ಮುಘಲಿಸ್ತಾನ್್’! ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾರ್ಹ ಅಂಶವೆಂದರೆ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಮಿಜೋರಾಮ್ ಹಾಗೂ ಅರುಣಾಚಲ ಪ್ರದೇಶಗಳನ್ನೊಳಗೊಂಡ ಈಶಾನ್ಯ ಭಾಗ ಹಾಗೂ ಭಾರತದ ಮುಖ್ಯ ಭಾಗದ ನಡುವೆ ಇರುವ ಏಕೈಕ ಕೊಂಡಿಯೆಂದರೆ ಪಶ್ಚಿಮ ಬಂಗಾಳದ ಸಿಲಿಗುರಿ ಮೂಲಕ ಹಾದು ಹೋಗುವ 22 ಕಿ.ಮೀ. ಜಾಗ. ಇದು ಅತ್ಯಂತ ಆಯಕಟ್ಟಿನ ಸ್ಥಳ. ಇದನ್ನೇ ತುಂಡರಿಸುವ ಉದ್ದೇಶ ‘ಮುಘಲಿಸ್ತಾನ್ ಪ್ರತಿಪಾದಕರಿಗಿದೆ.

  ನಮ್ಮ ಶತ್ರುಗಳು ನಮ್ಮನ್ನು ತುಂಡರಿಸುವ ಉದ್ದೇಶ ಹೊಂದಿರುವಾಗ ನಾವು ಯಾಕೆ ಅವರನ್ನು ಸಂಹರಿಸಿ ಅವರ ಜಾಗವನ್ನು ವಶಪಡಿಸಿ ಕೊಳ್ಳೋ ಉದ್ದೇಶ ಹೋದ ಬಾರದು? ಆಗೋತ್ತೋ ಬಿಡೊತ್ತೆ ಆದರೆ ಅಂಥದೊಂದು ಕಲ್ಪನೆ ಮಾತ್ರ ತಪ್ಪಲ್ಲ . ಈ ಕೊಂಡಿ ನೋಡಿ…
  http://www.indiandefence.com/forums/strategic-geopolitical-issues/18927-pakistan-bangladesh-plan-mughalistan-split-india.html

  ಉತ್ತರ
 3. anand prasad
  ಆಗಸ್ಟ್ 20 2012

  ಅಖಂಡ ಭಾರತ ಪಾಕ್ ಮತ್ತು ಬಾಂಗ್ಲಾದೇಶಗಳನ್ನು ಯುದ್ಧದಲ್ಲಿ ಸೋಲಿಸಿ ನಿರ್ಮಾಣ ಮಾಡುವುದು ಎಂದೂ ಸಾಧ್ಯವಾಗದ ವಿಚಾರ. ಭಾರತವೇನಾದರೂ ಆಕ್ರಮಣ ಮಾಡಿ ಯುದ್ಧದಲ್ಲಿ ಆ ದೇಶವು ಸೋಲುವ ಸಂದರ್ಭ ಬಂದು ಪಾಕಿಸ್ತಾನದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಸಂದರ್ಭ ಬಂದಲ್ಲಿ ಆ ದೇಶವು ತನ್ನಲ್ಲಿರುವ ಪರಮಾಣು ಅಸ್ತ್ರಗಳನ್ನು ಬಳಸಿ ಭೀಕರ ವಿನಾಶ ಮಾಡಲೂ ಹಿಂಜರಿಯಲಾರದು. ಹೀಗಾದರೆ ಗೆದ್ದವರು ಕೂಡಾ ಸೋತಂತೆಯೇ. ಮೂಲಭೂತವಾದ ಸರ್ವನಾಶಕ್ಕೂ ಕಾರಣವಾಗಬಲ್ಲದು. ಮೂಲಭೂತವಾದದಿಂದ ಭಾರತ, ಪಾಕಿಸ್ತಾನ, ಬಾಂಗ್ಲಾ ದೇಶಗಳು ಹೊರಬರದೆ ಹೋದರೆ ಅಪಾಯ ತಪ್ಪಿದ್ದ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments