ಬೊಜ್ಜೋ…( ಕೊಂಕಣಿ ಕವನ )
ಪರೇಶ್ ಸರಾಫ್
ಹಾತ್ತಿ ಹಾತ್ತಿ ಫುಲ್ಲಾಚೆ ಹಾರು
ತೊಂಡಾoತು ತುಳ್ಸಿ ಉದಾ
ಪೆಟೆಲೇ ತಾಕ್ಕ ಮೆರವಣಿಗೇರಿ
ಪೂತ್ ಆನಿ ಸೂನ್ ರಡ್ತಾ ಅಸಾಚಿ
ಕಷ್ಟ ಪಾವ್ನ್ ದೋಳೆ ಉದಾ ಹಾಡೋನ್
ಬಾಯ್ಲ್ ರಡ್ತಾ ಅಸ್ಸ ಪಾಪ-
ಬಾಮ್ಮುಣ್ ನಾ ಆಶಿಲ್ ಘರಾಂತ್
ಹಾವ ಆಸುನ್ ಭೀ ನಾ ಅಷಿಲ್ ತಷಿ ಮೋಣು
ವರಸ್ ಜಾಲ್ಲೆ, ಬೊಜ್ಜೋ ಆಯ್ಲಾ ಆತ್ತ
ಅನ್ನಾಲೆ ಹೋಡ ಫೋಟೋ
ತಕ್ಕ ನಮುನ್ ನಮುನ್ ಫುಲ್ಲಾ ಹಾರು
ಧೂಪ್ ಆನಿ ದಿವ್ವೋ
ವಡೆ, ಪಾಯ್ಸಾಚೆ ಘಮ ಘಮ
ಚೆರ್ಡುವ ರಾಬ್ಲೆಚಿ ಭಕ್ತಿನ್ ಪಾಂಯ್ ಪೋಣು
ದಾನ್ ಧರ್ಮ ಕರ್ತಾ ಭಟ್ಟಾoಕ
ಅಮ್ಮಾ ಮುಲ್ಲೇ ತಾಕುನು ಬೋಬ್ ಮಾರ್ತಾ
-”ಆಶಿಲ್ಲೇ ತೆನ್ನ ಲಾತ್ ಮಾರ್ಲೇ
ಆತ್ತ ಯೇವ್ನು ಖಾತ್ವೆ ತುಮ್ಗೆಲೇ ಆನು?
ಮುಲ್ಲೇಚೆ ಕೋಯ್ರು ಕೆಲ್ಲೇ ತಾಕ್ಕ
ಆತ್ತ ದಾನ ಕೆಲ್ಲೇರಿ ಧೂವ್ನ್ ವತ್ವೇ ಪಾಪ?
ಆಶಿಲೆ ತೆನ್ನಾ ಸಾಂಗ್ಲೆ ಕಾಮಾ ಯೆನಾಶಿಲೋ ಆಜ್ಜೋ
ಆತ್ತ ಕೊಣಾಲೆ ಖುಶೀಕ ಹೇ ವೈಭವಾಚೆ ಬೊಜ್ಜೋ?
ಇದರ ಒಂದು ಕನ್ನಡ ಅವ್ತರಿಕೆಯನ್ನೂ ಸಹ ಹಾಕಿದರೆ ಅರ್ಥವಾಗುತ್ತದೆ.
ಈ ಕವಿತೆಯ ಕನ್ನಡ ರೂಪ :
ಬೊಜ್ಜ
=====
ಮಾರುಗಟ್ಟಲೆ ಹೂ ಹಾರ ಹಾಕಿ
ಬಾಯಲ್ಲಿ ತುಳಸಿ ನೀರ ಬಿಟ್ಟು
ಚಟ್ಟದ ಮೇಲೆ ಮಲಗಿಸಿ
ಕಳಿಸಿದರವನ,
ಮಕ್ಕಳ, ಸೊಸೆಯರ
ಕಣ್ಣಲ್ಲೆರಡು ಮೊಸಳೆ ಕಣ್ಣೀರು.
ಮಡದಿಯ ಗೋಗರೆತ
ಗಂಡನಿಲ್ಲದ ಮನೆಯಲಿ ತಾನಿದ್ದೂ
ಇಲ್ಲದಂತೆಂಬ ಕರಾಳ ಭಾವ
ಸಂವತ್ಸರ ಕಳೆದು ಬಂದಿದೆ ಬೊಜ್ಜ
ಅಪ್ಪನ ದೊಡ್ಡ ಫೋಟೋ
ಅದರ ಮೇಲಿಷ್ಟು ಹೂ
ಎದುರು ಧೂಪ,ದೀಪ
ವಡೆ ಪಾಯಸದ ಘಮ ಘಮ
ಬ್ರಾಹ್ಮಣರಿಗೆ ದಾನ ಧರ್ಮ
ಕೈ ಮುಗಿದರು ಭಕ್ತಿಯಿಂದ
ಮೂಲೆಯಲಿ ಅಮ್ಮ ಗೊಣಗುತ್ತಿದ್ದಾಳೆ
“ಇದ್ದಾಗ ಒದ್ದಿರಿ, ಈಗೇನು
ಬಂದು ತಿನ್ನುವನೇ ಅಪ್ಪ?
ಅವನ ಮನೆ ಮೂಲೆಯ ಕಸ ಮಾಡಿ
ಈಗ ಮಾಡಲು ದಾನ,
ತೊಳೆದು ಹೋಗ್ವುದೇ ಪಾಪ ?
ಇದ್ದಾಗ ಅಂದಿರಿ ಕೆಲಸಕೆ ಬಾರದ ಮುದಿ ಅಜ್ಜ
ಈಗ್ಯಾರ ಖುಷಿಗೀ ಅದ್ದೂರಿ ಬೊಜ್ಜ ?”
— ಪರೇಶ್ ಸರಾಫ್
Adhbutavagide paresh