– ಜಯಪ್ರಕಾಶ್ ಪಿ., ಕರುನಾಡ ದನಿ

ಕಾವೇರಿ ನದಿಯು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ತಪ್ಪಲಿನ ’ತಲಕಾವೇರಿ’ ಯಲ್ಲಿ ಹುಟ್ಟಿ ಕರ್ನಾಟಕದ ಬಹುತೇಕ ಭಾಗದಲ್ಲಿ ಹರಿದು ತಮಿಳುನಾಡು ಮತ್ತು ಕೇರಳದ ಕೆಲ ಭಾಗಗಳಲ್ಲಿ ಹರಿದು ಹೋಗುತ್ತದೆ. 1883 ರಲ್ಲಿ ಅಂದಿನ ಮೈಸೂರು ಪ್ರಾಂತ್ಯದ ದಿವಾನರು ಕಾವೇರಿ ನದಿನೀರನ್ನು ನೀರಾವರಿ ಯೋಜನೆಗೆ ಬಳಸಿಕೊಳ್ಳಲು ಮುಂದಾದಾಗ, ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಮದರಾಸು ಪ್ರಾಂತ್ಯ ಅದನ್ನು ಸಹಿಸದೆ, ಮದರಾಸಿಗೆ ಅನುಕೂಲವಾಗುವಂತ ಅನೇಕ ಕಟ್ಟಳೆಗಳನ್ನು ಮಾಡುವ ಮೂಲಕ ತಾರತಮ್ಯ ನೀತಿ ಆರಂಭಿಸಿತು. ಅಂದು ಆರಂಭವಾದ ಕಾವೇರಿ ನದಿನೀರಿನ ಸಮಸ್ಯೆ ಸುಮಾರು 120ವರ್ಷಗಳೇ ಕಳೆದಿದ್ದರೂ,ಸರಿಯಾದ ಒಂದು ನಿಷ್ಪಕ್ಷಪಾತ ಜಲನೀತಿ ಇಲ್ಲದ ಪರಿಣಾಮವಾಗಿ ಇಂದು ಬಗೆಹರಿಯದ ಕಗ್ಗಂಟಾಗಿ ಬೆಳೆದು ನಿಂತಿದೆ.
ನದಿನೀರು ಹಂಚಿಕೆಯಲ್ಲಿ ನಾಡಿಗಾದ ಅನ್ಯಾಯದ ಪ್ರಮುಖ ಅಂಶಗಳು
1892 ರ ಒಪ್ಪಂದ
ಅಂದಿನ ಮೈಸೂರು ರಾಜ್ಯ ದಿವಾನರು ಕಾವೇರಿ ನದಿನೀರು ಬಳಸಿಕೊಂಡು ನೀರಾವರಿ ಯೋಜನೆ ಮಾಡಲು ಮುಂದಾದಾಗ ಅದಕ್ಕೆ ಅಡ್ಡಿಪಡಿಸಿ, ಆ ನಡೆಯಿಂದ ಮದರಾಸು ಪ್ರಾಂತ್ಯದ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರನ ಕೊಟ್ಟು,ಮದರಾಸು ಕ್ಯಾತೆ ತೆಗೆದಾಗ, ಇಬ್ಬರ ನಡುವೆ ರಾಜಿ ಮಾಡಿಸಲು 1890 ರಲ್ಲಿ ಒಂದು ಸಭೆ ನಡೆಸಲಾಯಿತು. ಆ ಸಭೆಯು 1892 ರಲ್ಲಿ ಕರ್ನಾಟಕ (ಅಂದಿನ ಮೈಸೂರು) ರಾಜ್ಯ ಮತ್ತು ಮದರಾಸು ಪ್ರಾಂತ್ಯದ ನಡುವೆ ಒಂದು ಒಪ್ಪಂದವಾಗಿ ಕೊನೆಗೊಂಡಿತು. ಆ ಒಪ್ಪಂದ ಪ್ರಮುಖ ಅಂಶಗಳು ಇಂತಿವೆ:
- ಕರ್ನಾಟಕ ತನ್ನ ನದಿ,ಉಪನದಿ ಅಥವಾ ಕೆರೆಕಟ್ಟೆಗಳೊಡನೆ ಯಾವುದೇ ನೀರಾವರಿ ಕಾಮಗಾರಿ ಆರಂಭಿಸಲು ಮದರಾಸು ಪ್ರಾಂತ್ಯದ ಒಪ್ಪಿಗೆ ಪಡೆಯಬೇಕು.
- ಯಾವುದೇ ಹೊಸ ನೀರಾವರಿ ಯೋಜನೆಯ ವಿವರಗಳನ್ನು ಮದರಾಸು ಪ್ರಾಂತ್ಯದೊಡನೆ ಹಂಚಿಕೊಳ್ಳಬೇಕು
ಈ ಮೇಲಿನ ಒಪ್ಪಂದದಿಂದ ಕರ್ನಾಟಕ ತನ್ನ ರಾಜ್ಯದಲ್ಲಿ ಯಾವುದೇ ನೀರಾವರಿ ಯೋಜನೆಗಳನ್ನು ತನ್ನ ಅನುಕೂಲ ತಕ್ಕಂತೆ ಮಾಡಲು ಪೂರ್ಣ ಸ್ವಾತಂತ್ರ್ಯ ಕಳೆದುಕೊಂಡಿತು ಮತ್ತು ಮದರಾಸು ಈ ಒಪ್ಪಂದ ಪ್ರಯೋಜನ ಪಡೆದು, ಹಲವು ಬಾರಿ ಕರ್ನಾಟಕದ ಯೋಜನೆಗಳಿಗೆ ಅಡ್ಡಿ ಪಡಿಸುವುದು, ತಮಿಳುನಾಡಿಗೆ ಹೆಚ್ಚಿನ ಅನುಕೂಲ ಆಗುವ ರೀತಿಯಲ್ಲಿ ಯೋಜನೆಗಳನ್ನು ಮಾರ್ಪಡಿಸುವುದು, ಇತ್ಯಾದಿ ತಾರತಮ್ಯದ ಕೆಲಸಗಳನ್ನು ಮಾಡಲು ಆರಂಭಿಸಿತು.
1924 ರ ಒಪ್ಪಂದ
ಕಾವೇರಿ ನದಿನೀರು ಹಂಚಿಕೆ ವಿವಾದ 1910 ರಲ್ಲಿ ಮತ್ತೊಮ್ಮೆ ಚಿಗುರೊಡೆಯಿತು. ಅಂದಿನ ಮೈಸೂರು ರಾಜ್ಯದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು,ಮುಖ್ಯ ಇಂಜಿನಿಯರ್ ಆಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರ ಜೊತೆಗೂಡಿ ಸುಮಾರು41.5 ಟಿ.ಎಂ.ಸಿ. ಅಷ್ಟು ನೀರನ್ನು ಶೇಖರಿಸಲು ಅನುಕೂಲವಾಗುವ ಕನ್ನಂಬಾಡಿ ಅಣೆಕಟ್ಟನ್ನು ಎರಡು ಹಂತಗಳಲ್ಲಿ ಕಟ್ಟಲು ಮುಂದಾಯಿತು.ಮೊದಲನೆ ಹಂತದಲ್ಲಿ 11 ಟಿ.ಎಂ.ಸಿ. ಅಷ್ಟು ನೀರು ಸಂಗ್ರಹಿಸುವಂತೆ ಮಾಡಿ, ಉಳಿದದ್ದನ್ನು ಎರಡನೇ ಹಂತದಲ್ಲಿ ಮುಂದುವರೆಸುವ ಯೋಜನೆ ಮಾಡಲಾಗಿತ್ತು.
ಆದರೆ, ತಮಿಳುನಾಡು (ಅಂದಿನ ಮದರಾಸು ಪ್ರಾಂತ್ಯ) ಮೆಟ್ಟೂರು ಬಳಿ ಸುಮಾರು 80 ಟಿ.ಎಂ.ಸಿ. ಯಷ್ಟು ನೀರು ಸಂಗ್ರಹಿಸಲು ಯೋಗ್ಯವಾದ, ತನ್ನದೇ ಆದ ಅಣೆಕಟ್ಟು ಕಟ್ಟುವ ಯೋಜನೆ ಹೊಂದಿದ್ದ ಕಾರಣ, ಕರ್ನಾಟಕದ ಈ ನಡೆಯನ್ನು ವಿರೋಧಿಸಿ, ಅಣೆಕಟ್ಟು ಕಾಮಗಾರಿ ನಡೆಸಲು ಒಪ್ಪಿಗೆ ನೀಡಲಿಲ್ಲ. ನಂತರ ಕರ್ನಾಟಕ ಬ್ರಿಟಿಷ್ ಸರ್ಕಾರದ ಮೊರೆ ಹೋದಾಗ ಕೇವಲ 11 ಟಿ.ಎಂ.ಸಿ. ಸಂಗ್ರಹಣೆಗೆ ಯೋಗ್ಯವಾದ ಅಣೆಕಟ್ಟನ್ನು ಕಟ್ಟಲು ಅನುಮತಿ ದೊರಕಿಸಿಕೊಂಡಿತು. ನಂತರ ನಿರ್ಮಾಣ ಹಂತದಲ್ಲಿ ಆರಂಭದ ಯೋಜನೆಯಂತೆ41.5 ಟಿ.ಎಂ.ಸಿ. ನೀರು ಸಂಗ್ರಹಣೆಗೆ ಹೊಂದುವಂತ ಅಡಿಪಾಯ ಕಟ್ಟಿಕೊಂಡಿತು. ಇದರ ವಿರುದ್ಧ ಮತ್ತೊಮ್ಮೆ ಕ್ಯಾತೆ ತೆಗೆದ ತಮಿಳುನಾಡು ಕರ್ನಾಟಕ 1892 ರ ಒಪ್ಪಂದ ಮುರಿದಿದೆ ಎಂದು ಮೊದಲ ಬಾರಿಗೆ ದಾವೆ ಹೂಡಿತು.
1913 ಮತ್ತು 1914 ರಲ್ಲಿ ದಾವೆಯ ವಿಚಾರಣೆ ನಡೆದು, ಕೊನೆಗೆ1924 ರಲ್ಲಿ ಮತ್ತೊಮ್ಮೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹೊಸ ಒಪ್ಪಂದವನ್ನು ಮಾಡಲಾಯಿತು. ಆ ಒಪ್ಪಂದದ ಮುಖ್ಯ ಅಂಶಗಳು:
- ಕರ್ನಾಟಕ ಕಾವೇರಿ ನದಿನೀರನ್ನು ಕೇವಲ 1,50,00 ಎಕರೆ ನೀರಾವರಿಗೆ ಬಳಸಿಕೊಳ್ಳಬೇಕು.
- ತಮಿಳುನಾಡು ಮಾತ್ರ ಕಾವೇರಿ ನದಿನೀರನ್ನು 10,00,000 ಎಕರೆ ನೀರಾವರಿಗೆ ಬಳಸಿಕೊಳ್ಳಬಹುದು.
- ಈ ಒಪ್ಪಂದವು ಮುಂದಿನ 50 ವರ್ಷಗಳ ಕಾಲ, ಅಂದರೆ 1974 ರ ವರೆಗೆ ಚಾಲ್ತಿಯಲ್ಲಿರುತ್ತದೆ.
ಇಂತಹ ಒಂದು ತಾರತಮ್ಯದ ನೀತಿಯನ್ನೊಳಗೊಂಡ ಒಪ್ಪಂದದಿಂದ ಕರ್ನಾಟಕ ರಾಜ್ಯ ಸುಮಾರು 50 ವರ್ಷಗಳವರೆಗೆ ತನ್ನ ಅಗತ್ಯಕ್ಕೆ ತಕ್ಕಂತ ನೀರಾವರಿ ಯೋಜನೆಗಳನ್ನು ಯೋಜಿಸುವಲ್ಲಿ, ತನ್ನ ನಾಡಿನ ಅಗತ್ಯಗಳಿಗೆ ಸ್ಪಂದಿಸುವಲ್ಲಿ ತೊಂದರೆ ಅನುಭವಿಸಿತು.
1990 ರ ಕಾವೇರಿ ನ್ಯಾಯಾಧಿಕರಣ ಮತ್ತು 1991 ರ ಮಧ್ಯಂತರ ತೀರ್ಪು
1947 ರಲ್ಲಿ ಭಾರತದ ಸ್ವಾತಂತ್ರ್ಯ ಮತ್ತು 1956 ರ ಭಾಷಾಧಾರಿತ ರಾಜ್ಯಗಳ ವಿಂಗಡನೆಯಿಂದ, ಕಾವೇರಿ ಕಣಿವೆಯ ಮಲಬಾರ್ ಪ್ರದೇಶ ಕೇರಳ ರಾಜ್ಯಕ್ಕೆ ಮತ್ತು ಕರೈಕಳ್ ಪ್ರದೇಶ ಪಾಂಡಿಚೇರಿಗೆ ಸೇರಿಕೊಂಡವು. ಈ ಬದಲಾವಣೆಗಳಿಂದ ಕಾವೇರಿ ನೀರುಹಂಚಿಕೆ ವಿವಾದ ಮತ್ತಷ್ಟು ಜಟಿಲಗೊಂಡು, 1973 ರಲ್ಲಿ ಕಾವೇರಿ ಅಂಕಿ-ಅಂಶ ಪರಿಶೀಲನಾ ಕಮಿಟಿಯ ರಚನೆಯಾಗಿ, ವಿವಾದಕ್ಕೆ ಸಂಬಂಧಿಸಿದಂತೆ ಹಲವಾರು ಕಿತ್ತಾಟಗಳು ಕರ್ನಾಟಕ,ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ನಡುವೆ ನಡೆದವು. ನಂತರ ವಿವಾದವನ್ನು ಬಗೆಹರಿಸಲು ತಮಿಳುನಾಡಿನ ಒತ್ತಾಯದಿಂದ, ಜೂನ್ 2, 1990 ರಲ್ಲಿ ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದ ಸರ್ಕಾರದಲ್ಲಿ, ಚಿತ್ತತೋಷ್ ಮುಖರ್ಜಿಯವರ ನೇತೃತ್ವದಲ್ಲಿ ದೆಹಲ್ಲಿಯಲ್ಲಿ ತ್ರಿಸದಸ್ಯರನ್ನೊಳಗೊಂಡ“ಕಾವೇರಿ ನ್ಯಾಯಾಧಿಕರಣ” ವನ್ನು ರಚಿಸಲಾಯಿತು.
ನ್ಯಾಯಾಧಿಕರಣ ಬಳಸಿಕೊಂಡು ಕರ್ನಾಟಕದಿಂದ ಕೂಡಲೆ ನೀರು ಬಿಡಿಸಿಕೊಳ್ಳಲು ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋದಾಗ, ಜೂನ್ 25, 1990 ರಂದು ಕಾವೇರಿ ನ್ಯಾಯಾಧಿಕರಣ ತನ್ನ ಮಧ್ಯಂತರ ತೀರ್ಪು ಪ್ರಕಟಿಸಿ, ಡಿಸೆಂಬರ್ 11,1990 ರಲ್ಲಿ ಅದನ್ನು ಗೆಜೆಟ್ ಗೆ ಸೇರಿಸಲಾಯಿತು. ಈ ತೀರ್ಪಿನ ಮುಖಾಂಶಗಳು ಇಂತಿವೆ:
- ಕರ್ನಾಟಕಕ್ಕೆ ಪ್ರತಿವರ್ಷ ತಮಿಳುನಾಡಿಗೆ 205 ಟಿ.ಎಂ.ಸಿ. ನೀರು ಬಿಡಲು ಆದೇಶ. (ಇದರ ಅಳೆಯುವಿಕೆಯನ್ನು ಮೆಟ್ಟೂರಿನಲ್ಲಿ ಮಾಡತಕ್ಕದ್ದು)
- ಬೇಸಿಗೆಯಲ್ಲೇ ಕರ್ನಾಟಕದಿಂದ 136 ಟಿ.ಎಂ.ಸಿ. ನೀರು ಬಿಡಲು ಆದೇಶ.
- ಕರ್ನಾಟಕ ಕಾವೇರಿ ನದಿನೀರನ್ನು ಕೇವಲ 11.2 ಲಕ್ಷ ಎಕರೆ ನೀರಾವರಿಗೆ ಬಳಸಿಕೊಳ್ಳಬಹುದು, ಆದರೆ ತಮಿಳುನಾಡಿಗೆ ಅಂತ ನಿಬಂಧನೆಗಳಾವುವು ಇಲ್ಲ.
- ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ತಡೆಹಿಡಿಯಬೇಕು. ಆದರೆ ತಮಿಳುನಾಡಿಗೆ ಅಂತ ನಿಬಂಧನೆಗಳಾವುವು ಅನ್ವಯವಾಗುವುದಿಲ್ಲ.
2007 ರ ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು
ಫೆಬ್ರವರಿ 5, 2007 ರಂದು ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಪ್ರಕಟನೆಯಾಯಿತು. ಆ ತೀರ್ಪಿನ ಮುಖಾಂಶಗಳು ಇಂತಿವೆ:
- ಕರ್ನಾಟಕ ಅಗತ್ಯವಿದ್ದ ನೀರು ಸುಮಾರು 465 ಟಿ.ಎಂ.ಸಿ., ಆದರೆ ದೊರೆತದ್ದು 270 ಟಿ.ಎಂ.ಸಿ ನೀರು.
- ತಮಿಳುನಾಡಿಗೆ ದೊರೆತದ್ದು 419 ಟಿ.ಎಂ.ಸಿ ನೀರು.
- ಕರ್ನಾಟಕಕ್ಕೆ ಪ್ರತಿವರ್ಷ ತಮಿಳುನಾಡಿಗೆ 192 ಟಿ.ಎಂ.ಸಿ. ಯಷ್ಟು ನೀರು ಬಿಡಲು ಆದೇಶ.
- ಬೇಸಿಗೆಯಲ್ಲೇ ಕರ್ನಾಟಕದಿಂದ 134 ಟಿ.ಎಂ.ಸಿ. ನೀರು ಬಿಡಲು ಆದೇಶ.
ಇಂತಹ ಅತ್ಯಂತ ತಾರತಮ್ಯದ ತೀರ್ಪಿನಿಂದಾಗಿ ಇಡೀ ಕರ್ನಾಟಕದಲ್ಲಿ ಕಾವೇರಿ ವಿವಾದ ಬುಗಿಲೆದ್ದಿತು. ನಂತರ ಜನಸಮಾನ್ಯರು ಮತ್ತು ಕನ್ನಡಪರ ಸಂಘಟನೆಗಳು ತೀರ್ಪಿನ ವಿರುದ್ಧ ದನಿಯೆತ್ತಿದ್ದರೂ, ಕರ್ನಾಟಕದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಯಾವ ಸರ್ಕಾರವೂ ಗಟ್ಟಿ ನಿಲುವಿನಿಂದ ಈ ಅನ್ಯಾಯವನ್ನು ವಿರೋಧಿಸಿ ಕೇಂದ್ರಸರ್ಕಾರವನ್ನು ಪ್ರಶ್ನಿಸಲಿಲ್ಲ.
ಕರ್ನಾಟಕದ ರಾಜಕೀಯ ಪಕ್ಷಗಳಿಗಾಗಲಿ ಅಥವಾ ಅವುಗಳ ನಾಯಕರಿಗಾಗಲಿ ಇರುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದಿಗೂ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕನ್ನಡಿಗರಿಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ.
* * * * * * * *
ಮಾಹಿತಿ ಮೂಲ:
ಚಿತ್ರಕೃಪೆ : ಪ್ರಜಾವಾಣಿ.ನೆಟ್
Like this:
Like ಲೋಡ್ ಆಗುತ್ತಿದೆ...
Related
ಮದ್ರಾಸ್ ಪ್ರಾಂತ ಸ್ವಾತಂತ್ರ್ಯಪೂರ್ವದ ಬ್ರಿಟಿಷರ ಆಳ್ವಿಕೆ ಅಡಿಯಲ್ಲಿದ್ದಾಗ ಮಾಡಿಕೊಂಡ ಒಪ್ಪಂದಗಳು ಬ್ರಿಟಿಷರು ದೇಶ ಬಿಟ್ಟು ಹೋದ ಕೂಡಲೇ ಅನೂರ್ಜಿತವಾಗಬೇಕಿತ್ತು. ಸ್ವಾತಂತ್ರ್ಯಪೂರ್ವದ ಮಾನದಂಡ ಇಟ್ಟುಕೊಂಡು ತಮಿಳುನಾಡು ಕರ್ನಾಟಕದ ಯಜಮಾನನಂತೆ ವರ್ತಿಸುತ್ತಾ ಬರುತ್ತಿರುವುದೇ ಸಮಸ್ಯೆಯ ಮೂಲ. ಆಯಾ ರಾಜ್ಯಗಳಲ್ಲಿ ಬೀಳುವ ಮಳೆಯ ಸಂಪೂರ್ಣ ಹಕ್ಕು ಆಯಾ ರಾಜ್ಯದ್ದಗಬೇಕಾಗಿರುವುದು ನ್ಯಾಯೋಚಿತ. ಇದರಲ್ಲಿ ಇನ್ನೊಂದು ರಾಜ್ಯದವರು ಪಾಲು ಕೇಳುವುದು ನ್ಯಾಯೋಚಿತವಲ್ಲ. ಹೀಗೇ ತಮಿಳುನಾಡು ಕಿರುಕುಳ ಕೊಡುತ್ತಾ ಹೋದರೆ ಕರ್ನಾಟಕವನ್ನು ಭಾರತೀಯ ಒಕ್ಕೂಟದಿಂದ ಪ್ರತ್ಯೇಕ ದೇಶವಾಗಿ ಮಾಡಬೇಕಾದ ಅಗತ್ಯ ಬರಬಹುದು.
ಮಾನ್ಯ ಆನಂದ್ ಪ್ರಸಾದ್ ರವರೆ, ತಮಿಳು ನಾಡಿನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕರ್ನಾಟಕ ಸಹ ನ್ಯಾಯಾಲಯದ ಮೊರೆ ಹೋಗಬೇಕು.ಇರುವ ನೀರಿನ ಲಭ್ಯತೆ ಬಗ್ಗೆ ನ್ಯಾಯಾಲಯದ ಮುಂದೆ ಮಂಡಿಸಿ.ಕರ್ನಾಟಕಕ್ಕೆ ಅನುಕೂಲ ಮಾಡಿಕೊಳ್ಳಬೇಕು.ಅದನ್ನು ಬಿಟ್ಟು ” ಕರ್ನಾಟಕವನ್ನು ಭಾರತೀಯ ಒಕ್ಕೂಟದಿಂದ ಪ್ರತ್ಯೇಕ ದೇಶವಾಗಿ ಮಾಡಬೇಕಾದ ಅಗತ್ಯ ಬರಬಹುದು.” ಎನ್ನುತ್ತೀರಿ ಪ್ರಸ್ತುತ ಇದು ಸಾಧ್ಯವೇ?
ನಮ್ಮ ನಾಡಿನ ಕಾವೇರಿನದಿ ನಮಗಲ್ಲದೇ ತಮಿಳರಿಗೆ ಹಕ್ಕು ಹೇಗೆ ? ? ?.
ನಮ್ಮಲ್ಲಿ ಕರ್ನಾಟಕದ ಬಹಳ ಜನರು ಕೇಳುವ ಪ್ರೆಶ್ನೇವೊಂದಿದೆ.
ಕಾವೇರಿ ನದಿ ನೀರಿನ ತೀರ್ಮಾನವೀಗ ನಿಮ್ಮ ಕೈಯಲ್ಲಿ
ಕಾವೇರಿ ನದಿಯ ಬಗ್ಗೆ ತಮಿಳು ನಾಡಿನ ವಾದಗಳೇನು ?
೧. ಅಗಸ್ಯನು ( ಕಾವೇರಿಯ ಗಂಡ )ತಮಿಳರಿಗೆ ಅವರಿಗೆ ಸಾಧಕವಾಗಿದ್ದ.
೨. ತಮಿಳರಿಗೆ ಕರಿಗಾಲ ಚೊಳನೂ ಅವರಿಗೇ ಅಣೆಯನ್ನು ಕಟ್ಟಿಕೊಟ್ಟಿದ್ದ.
೩. ವಿಜಯನಗರ ಅರಸರು ಅವರಿಗೆ ನೆರವಾಗಿ ಅವರಿಗೆ ಸಾಧಕವಾಗಿದ್ದರು.
೪. ಮರಾಠರಾಜರು ಬೇರೆ ಅರಸರಾದರು ಅವರಿಗೆ ಸಾಧಕವಾಗಿದ್ದರು.
೫. ಬ್ರಿಟೀಷರು ತಮಿಳುನಾಡಿಗೆ ಅವರಿಗೆ ಸಾಧಕವಾಗಿದ್ದರು.
೬. ಮೈಸೂರು ಅರಸರು ಒಡೆಯರ್ ಗಳು ಬ್ರಿಟೀಷರ ಶರತ್ತುಗಳಿಗೆ ಒಪ್ಪಿದ್ದರು.
೭. ಮಧ್ಯಾಂತರ ತೀರ್ಪೂ ಅವರಿಗೆ ಸಾಧಕವಾಗಿದ್ದಿತ್ತು.
೮. ಅಂತಿಮ ತೀರ್ಪೂ ಅವರಿಗೆ ಸಾಧಕವಾಗಿರಲು ಕಾರಣ ಅರಿಯದಾಗಿದೆ ಎನ್ನುತ್ತಾರೆ.
ಅದರ ಕಾರಣಗಳು ಹೀಗಿದೆ.
ಮೂರು ಸಾವಿರ ವರ್ಷಗಳಿಂದೆ ಅಂದು ದಕ್ಷಿಣಭಾರತದಲ್ಲಿ ( ಈಗಿನ ಕೊಡಗಿನ ಜಿಲ್ಲೆಯಲ್ಲಿ ) ಆ ಸರಹದ್ದಿನಲ್ಲಿಯೇ, ಹತ್ತಿರದಲ್ಲಿಯೇ ಅಗಸ್ಯನೂ ಅಲ್ಲಿಯೇ ತಪಸ್ಸು ಮಾಡತಲಿದ್ದ. ಈತ ತಮಿಳಿಗೆ ಮೂಲ ಪುರುಷನೂ ಹೌದು. ತಮಿಳುನೂ ಹೌದು. ದಕ್ಷಿಣದಲ್ಲಿ ತಮಿಳು ಬಾಷೆಯನ್ನು ಬಿಟ್ಟರೇ ಆಗ ಬೇರೆಯಾವ ಬಾಷೆಯು ಇಲ್ಲದ ಕಾಲ. ಉದಾಹರಣೆಗೆ, ಸರ್ವೇಶ್ವರನಾದ ಮಹಾದೇವನ ಮದುವೆ ನೋಡಲು ಬಂದಿದ್ದ ದೇವತೆಗಳಿಂದ ಉತ್ತರಭಾರತದಲ್ಲಿನ ಕೈಲಾಸದಲ್ಲಿ ಭೂಭಾರದಿಂದ ಹಿಮಾಲಯವೇ ತಗ್ಗಿತು. ದಕ್ಷಿಣವು ಮೇಲೇರಿತು ಅದಕಂಡ ಈಶ್ವರನೂ ಅದನ್ನು ಸರಿಪಡಿಸುವ ಶಕ್ತಿಯು ಯಾರಲ್ಲು ಇಲ್ಲದ ಕಾರಣ, ಅಗಸ್ಯರನ್ನು ಕರೆದು ನೀನು ದಕ್ಷಿಣಕ್ಕೆ ಹೋಗು ಇದು ಸಮನೆಲೆಗೊಳ್ಳುತ್ತದೆ. ಎನ್ನುತ್ತಾನೆ. ಆದರೆ ಅಗಸ್ಯನು ಒಲ್ಲೆ ನಾನು ನಿನ್ನ ಮದುವೆಯನ್ನು ನೋಡಲು ಬಂದಿದ್ದೇನೆ ಎನ್ನಲು, ಜಗದೀಶನೂ ನೀನು ಅಲ್ಲಿಂದಲೇ ನೋಡುವ ಅವಕಾಶವನ್ನು ಕೊಡುತ್ತೇನೆಂದು ಹೇಳಿ ದಕ್ಷಿಣಕ್ಕೆ ಕಳುಹಿರುತ್ತಾನೆ. ಮದುವೆಯನ್ನು ಇಲ್ಲಿಂದಲೇ ನೋಡುತ್ತಾನೆ. ಇನ್ನೊಂದು ಕಥೆಯಿದೆ ಸೂರ್ಯನಿಗೆ ವಿಂಧ್ಯ ಪರ್ವತ ಆಡ್ಡವಾಗಿ ಬೆಳೆದು ನಿಂತಕಥೆ ಅಗಸ್ಯನು ಅದನ್ನು ತಡೆದ ಕಥೆ ಈಗ ಅದುಬೇಡ. ಇದು ಪುರಾಣ.
ಮಹಾತ್ಮನಾದ ರಾವಣನು ಏಲ್ಲಾ ವಿದ್ಯೆ ಪಾರಂಗತನೂ, ಸಂಗೀತದಲ್ಲಿ ಪ್ರವೀಣನಾಗಿದ್ದ. ಅವನ ಮೀರಿಸುವವರು ಯಾರೂ ಇರಲಿಲ್ಲ ಉದಾಹಣೆಗೆ ಶಿವನನ್ನು ಒಲಿಸಲು ತನ್ನ ಕರುಳನ್ನೇ ತೆಗೆದು ವೀಣೆಯ ತಂತಿಯಂತೆ ಮಾಡಿ ಬಾರಿಸಿದಾತ ಶಿವನು ಮೆಚ್ಚಿ ಅವನಿಗೇ ಕೇಳಿದ ವರವನ್ನು ಕೊಟ್ಟಿದ್ದ. ಆತನನ್ನು ಅಗಸ್ಯನೂ ಸಂಗೀತದಲ್ಲಿ ಸೊಲಿಸಿ ದಕ್ಷಿಣದಿಂದ ಲಂಕೆಗೆ ಕಳಿಹಿಸಿದನು.
ದಕ್ಷಿಣಲ್ಲಿಯೇ ಕವೇರ ನೆಂಬ ಒಬ್ಬ ಋಷಿ ಇದ್ದ. ಈತನಿಗೆ ಮಕ್ಕಳಿಲ್ಲದ ಕಾರಣ ಬ್ರಹ್ಮನನ್ನು ಕುರಿತು ತಪವಗೈದು, ಫಲವಾಗಿ ಈತನಿಗೆ ಒಂದು ಹೆಣ್ಣುಕೂಸು ಬ್ರಹ್ಮನು ಕೊಟ್ಟ. ತನ್ನ ತಪಸ್ಸಿನಿಂದ ಪಡೆದ ಮಗಳೇ “ಲೋಪಮುದ್ರೆ” ಆಕೆಯ ಮತ್ತೊಂದು ಹೆಸರೇ “ಕಾವೇರಿ” ಕವೇರನ ಆತನ ಮಗಳೇ “ಕಾವೇರಿ”.
ಆ ಅಗಸ್ಯ ( ಕೊಡಗಿನ ) ಹುಡಿಗಿಯನ್ನು ಕಾವೇರಿಯನ್ನು ನೋಡಿದ ಅವಳ ಮೇಲೆ ಮೋಹಗೊಂಡ. ಅದನ್ನು ಋಷಿ ಕವೇರನೂ ಅರಿತು ಒಪ್ಪಿಗೆಕೊಟ್ಟ. ಆದರೇ, ಕಾವೇರಿಗೆ ಒಪ್ಪಿಗೆಯಿಲ್ಲ ಋಷಿಗಳು ಕೋಪಗೊಂಡರೇ ಎಂದು ತಾನು ಅಂಜಿ ಒಪ್ಪಿಕೊಂಡಳು ಕಾವೇರಿ. ಆದರೆ, ಕಾವೇರಿ ಒಂದು ಶರತ್ತು ಹಾಕಿದಳು. ನನ್ನನ್ನು ಮುದುವೆಯಾಗಿ ನೀವು ನನ್ನನ್ನು ಒಂಟಿಯಾಗಿ ಬಿಟ್ಟು ಏಲ್ಲಿಯು ಹೋಗಬಾರದು. ಹಾಗೆ ಹೋದರೆ ನಾನು ಅಲ್ಲಿಂದ ನಿಮ್ಮನಗಲೀ ನದಿಯಾಗಿ ಹರಿದು ಹೋಗುತ್ತೇನೆ ಎಂದಳು. ಅದಕ್ಕೆ ಆ ಅಗಸ್ಯ ಮಹರ್ಷಿಯು ಒಪ್ಪಿಕೊಂಡ.
ತನ್ನ ಜೋತೆಗೆ ಕಾವೇರಿಯನ್ನು ಅಕೆಯನ್ನು ಒಂದು ಕಮಂಡಲದಲ್ಲಿನ ನೀರಿನಂತೆ ಇರಿಸಿಕೊಂಡು ಹೋಗುತ್ತಿದ್ದನು. ಒಮ್ಮೆ ಕನ್ನಿಕಾ ನದಿಯಲ್ಲಿ ( ಕಾವೇರಿಗೆ ಮುಂಚಿನ ನದಿ )ಬೆಳಗಿನ ಸ್ನಾನಕ್ಕೆ ಹೋದಾಗ ಶಿಷ್ಯನಿಗೆ ಹೇಳಿ ಜೋಪಾನವಾಗಿ ನೋಡಿಕೊ ಎಂದು ಸ್ನಾನಕ್ಕೆ ಹೋದನು. ಆ ವೇಳೆಗೆ ಒಂದು ಕಾಗೆಯು ನೀರು ಕುಡಿಯಲು ಕಾತರಿಸುತ್ತಿತ್ತು. ಶಿಷ್ಯನ ಗಮನ ಏಲ್ಲೋ ಹರಿಯಿತು. ಕಾಗೆ ನೀರು ಕುಡಿಯುವ ಅತುರದಲ್ಲಿ ಆ ಕಮಂಡಲವನ್ನು ಉರಳಿಸಿತು ಅದನ್ನೇ ಕಾಯುತ್ತಿದ್ದ ಕಾವೇರಿಯೆನ್ನುವ ಆ ಲೋಪಮುದ್ರೆ ಹರಿಯಲು ಆರಂಭಿಸಿದಳು. ಧರೆಯಲ್ಲಿನ ನೀರು ಹಿಡಿಯಲು ಸಾಧ್ಯವೇ, ಅಗಸ್ಯನು ಬಂದು ತಡೆದರು ಕೇಳದೇ ಹರಿಯತೊಡಗಿದಳು. ಆದರೇ, ಅಗಸ್ಯನೂ ಕಾಡಿಬೇಡಿದರೂ ನಿಲ್ಲದೇ ಮುಂದೆ ಆಕೆ ಕನ್ನಿಕಾ ನದಿಯನ್ನು ಸೇರಿಕೊಂಡಳು. ಅಗಸ್ಯರ ಮಾತಿನಂತೆ ಮುಂದೆ ದಕ್ಷಿಣದ ತಮಿಳುನಾಡಿನ ಕಡೆಗೆ ಹರಿಯ ತೊಡಗಿದಳು.
ಶಿಲಪ್ಪಾದಿಗಾರಂನಲ್ಲಿ ಕಾವೇರಿಯೆಂಬ ಪದ ಬರುವಷ್ಟು ಬೇರೆ ಯಾವ ಕಾವ್ಯಗಳಲ್ಲಿಯು ಕಾಣಸಿಗದು. ಕಾವೇರಿಯು ತಮಿಳರ ದೊಡ್ಡತಾಯಿ ಅಲ್ಲಿ ಬಹಳ ಜನರ ಹೆಸರು “ಕಾವೇರಿ” ಅಥವಾ “ಪೊನ್ನಿ”. ತಮಿಳ್ ನಲ್ಲಿ ಪೊನ್ನಿಯು ಕಾವೇರಿಯೇ.
ಕಿ.ಶಕ ೯೦೪-೯೦೫ ಕಾಲದಲ್ಲಿ ಕರಿಗಾಲಚೋಳನಿಂದ ಕಟ್ಟಲ್ಪಟ್ಟ ಅಣೆಕಟ್ಟು ಪ್ರಪಂಚದ ಮೊದಲನೇ ಅಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. ಕಲ್ಲಣೈ ಅಥವಾ ಕಲ್ಲಿನ ಅಣೆಕಟ್ಟಿನ ನಿರ್ಮಾಣವು ಎಲ್ಲರನ್ನೂ ಬೆರೆಗುಗೊಳಿಸುವಂತದ್ದು. ಹೆಚ್ಚು ಕಡಿಮೆ ಎರಡು ಸಾವಿರ ವರ್ಷಗಳ ಹಿಂದೆ ತಾಂತ್ರಿಕ ಸೌಲಭ್ಯಗಳು, ನವೀನ ಸಾಧನಗಳು ಇಲ್ಲದಿದ್ದ ಆ ಕಾಲದಲ್ಲಿ ಇಂತಹ ಇಂಜಿನಿಯರಿಂಗ್ ಕೌಶಲ್ಯಕ್ಕೆ ಎಲ್ಲರು ಬೆರಗಾಗಲೇಬೇಕು. ಕರಿಗಾಲ್ ಚೋಳನ ಮೇಲ್ವಿಚಾರಣೆಯಲ್ಲಿಯೇ ಗಾರೆ ಮತ್ತು ಸುಣ್ಣದ ಚುರುಕಿಗಾರೆ ಕಟ್ಟಿದ ಕಟ್ಟಡವೆಂದು ಇತಿಹಾಸವೇ ಹೇಳುತ್ತದೆ. ಇದಕ್ಕೆ ಹಿಂದೆ ಇದಂತಹ ರಾಜರು ಪ್ರಯತ್ನಿಸಿ ವಿಫಲರಾಗಿದ್ದರು.
ತಮಿಳು ರಾಜನಾದ ರಾಜರಾಜ ಚೋಳನು ಕನ್ನಡದ ವೀರನರಶಿಂಹ ಬಲ್ಲಾಳನ ಮಗಳನ್ನು ಮದುವೆಯಾಗಿದ್ದನು. ಎರಡನೇ ಬಲ್ಲಾಲನು ತಮಿಳರ ಹೆಣ್ನನ್ನು ಮದುವೆಯಾಗಿದ್ದನು. ಈ ಕಾರಣದಿಂದಾಗಿ ಕೊಡುವ ತೆಗೆದು ಕೊಳ್ಳುವದರಲ್ಲಿ ಕಾವೇರಿ ನೀರು ದಾರಾಕಾರಗಾಗಿ ಹರಿದಿತ್ತು. ಇವರುಗಳ ಬಾಂಧವ್ಯ ಬಹಳ ಚೆನ್ನಾಗಿತ್ತು. ಇದನ್ನು ಹೇಳಬೇಕೆಂದರೆ ಬಹಳ ವಿಷಯ ಹೇಳಬೇಕಾಗುತ್ತದೆ.
ಚೋಳರ ಒಂದು ಪ್ರಸಿದ್ಧ ಚರಿತ್ರೆಯಲ್ಲಿ ” ಪಿರ್ ಕಾಲ ಚೋಳರ್ ವರಲಾರ್” ಇದರ ಬಗ್ಗೆನಮಗೇ ಬಹಳಷ್ಟು ಮಾಹಿತಿ ಸಿಗುತ್ತದೆ. ಕಾವೇರಿ ಪಶ್ಚಿಮಗಟ್ಟದ ಪ್ರದೇಶದಲ್ಲಿ ಹಗೆಯ ಅರಸನಿಂದ ತಡೆಗೊಡೆಯನ್ನು ಕಟ್ಟಿರಲು ತಡೆಯಿಂದದಿದ್ದ ಕಾವೇರಿಯನ್ನು, ಚೋಳನು ಶತ್ರು ರಾಜನನ್ನು ಯುದ್ಧದಲ್ಲಿ ಸೋಲಿಸಿ ನೀರು ಸರಾಗವಾಗಿ ಹರಿಯಲು ದಾರಿ ಮಾಡಿಕೊಟ್ಟಿರುತ್ತಾನೆ. ” ಕಾವಿರಿಕ್ಕು ಚೋನಾಡು ವಳಿಯಿಟ್ಟ ವಾಳ್ ” ಕಾವೇರಿಗೆ ಚೋಳನಾಡ ಕಡ್ಗದಿ ದಾರಿಬಿಟ್ಟಿತು.
ಕಿ.ಶಕ ೧೭ ನೇ ಶತಮಾನದಲ್ಲಿ ಆಗ ಮೈಸೂರಿನ ಅರಸ ಚಿಕ್ಕದೇವರಾಜ ಒಂದು ಹೊಸ ಅಣೆಕಟ್ಟು ಕಟ್ಟಿ ತಮಿಳ್ನಾಡಿಗೆ ನೀರು ಹೋಗದಂತೆ ತಡೆಹಾಕಿದ. ಆಗ ಮಧುರೆಯನ್ನು ಆಳುತ್ತಿದ್ದ ರಾಣಿ ಮಂಗಮ್ಮಳ್ಳು, ತಂಜಾವೂರಿನ ಮರಾಠಾ ಅರಸ ಸಾಂಭೋಜಿಯು ಅಥವಾ ಸರಭೋಜಿಯು ಶುದ್ಧ ವೈರಿಗಳಾದರೂ ತಮಿಳ್ನಾಡಿನ ಕಲ್ಯಾಣಕ್ಕಾಗಿ ಈ ಎರಡು ರಾಜ್ಯಗಳು ಸೇರಿ ಮೈಸೂರಿಗೆ ಸೈನ್ಯವನ್ನು ಕಳುಹಿಸಿ ಅಭದ್ರವಾಗಿದ್ದ ಅಣೆಯು ಸೇನೆಯಿಲ್ಲಿಗೆ ಬರುವ ಮೊದಲೇ ಕಾವೇರಿ ಕೊಚ್ಚಿಹೋಯಿತು. ನೀರು ಎಲ್ಲರಿಗೂ ಬಹು ಮುಖ್ಯವಾದದ್ದು ಎಂಬುದನ್ನು ಯಾರು ಮರೆಯಬಾರದು.
ಕರ್ನಾಟಕದಲ್ಲಿ ಮಾತ್ರ ನೀರಿಗಾಗಿ ಏನೂ ಅಂಥಹ ದೊಡ್ಡ ಕಾರ್ಯಗಳು ನಡೆಯಲಿಲ್ಲವೆಂದೇ ಹೇಳಬೇಕಾಗುತ್ತದೆ. ಹೆಚ್ಚಾಗಿ ಏತ ನೀರಾವರಿಯನ್ನೇ ಬಹಳ ಕಡಿಮೆ ಬಳಸಿಕೊಂಡು ಹೋಗಿರುತ್ತಾರೆ. ಜೊತೆಗೆ ಕಡಿಮೆ ಭೂ ಪ್ರದೇಶದಲ್ಲಿ ವ್ಯೆವಸಾಯವನ್ನು ಮಾಡಿಕೊಂಡು ಹೋಗಿರುತ್ತಾರೆ. ತಮಿಳು ದೊರೆಗಳಂತೆ ಕನ್ನಡ ರಾಜರು ಕಾವೇರಿಗೆ ಹೆಚ್ಚಿನ ಅಕ್ಕರೆಯನ್ನು ಕೊಟ್ಟಿರುತ್ತಾರೆಯೇ ಎಂದು ಸಂದೇಹ ಬಾರದಿರದು. ನಮ್ಮ ಕನ್ನಡನಾಡ ದೊರೆಗಳೇ ತಮಿಳು ನಾಡಿಗೆ ಮಾಡಿರುವಷ್ಟು ಕಾಲುವೆ ಕಿರುಗಾಲುವೆ ಕೆರೆ ಬಾವಿ ಕನ್ನಡ ನಾಡಿಗೆ ಏನೂ ಮಾಡಿಲ್ಲವೆಂದೇ ಹೇಳಬೇಕಾಗುತ್ತದೆ. ವಿಜಯನಗರ ಅರಸರು ತಮಿಳುನಾಡಿನ ಕೆರೆಕಟ್ಟೆ ಕಟ್ಟಿಸಿರುವುದು ನಾಲೆಗಳನ್ನು ಮಾಡಿಕೊಟ್ಟಿರುವುದ ಕಾಣಬಹುದಾಗಿದೆ. ಸುವರ್ಣವೈಗೆ ಅಥವಾ ಹೊನ್ನ ಹೊಳೆಗೆ ಚಿಕ್ಕಚಿಕ್ಕ ಆಣೆಕಟ್ಟುಗಳಕಟ್ಟಿ ಹತ್ತು ಸಾವಿರ ಎಕರೆಗೆ ನೀರುಣಿಸಿದ್ದಾರೆ. ನೆರಂಜಿಪಟ್ಟಿಯಬಳಿ ಭವನಿಗೇ ಪಾಲಾರ್ ನದಿಗೆ ಚೆಂಗಲ್ ಪಟ್ಟಿನಲ್ಲಿ ವೈಗೈಗೆ ಪೆರಿಯಣೈ ಮತ್ತು ಸಿಟ್ಟ್ರಣೈ ಕೊಡಾಯ ಮೆಲಗಿಯಂ, ನದಿಯಣ್ಣೈ, ತಮಿಳ್ ನಾಡಿನ ತುದಿಯಲ್ಲಿ ತಿರುನೈವೇಲಿ ಜಿಲ್ಲೆಯಲ್ಲಿ ಹರಿವ ತಾಮ್ರಭರಣಿಗೆ ಕನ್ನಡ ಅರಸ “ಕನ್ನಡಿಗನ್” ಎಂಬಾಣೆಯು ಇದೆ, ಅರಿಯನಾಯಗಪುರಂ, ಪಾಲಾವೂರ್, ಸುತ್ತುಮಲ್ಲಿ, ಮರುದೂರ್ ಶ್ರೀ ವೈಕುಂಠಂ.
ಕನ್ನಡನಾಡ ನಮ್ಮ ರಾಜರುಗಳಿಂದ ಅಲ್ಲಿನ ಜನರಿಗೆ ನೀರಿನ ಉಪಯೋಗ ಪಡೆದುರುವ ತಮಿಳುನಾಡು ಹೇಗೆ ಸುಮ್ಮನಿದ್ದೀತು. ಮುಂದೆ ಬಂದ ಬ್ರಿಟೀಷರು ಕೂಡ ತಮಿಳುನಾಡಿಗೆ ಸಹಾಯ ಹಸ್ತವನ್ನು ಚಾಚಿರುತ್ತಾರೆ. ಏಕೆಂದರೇ, ತಮ್ಮ ಆಡಳಿತದ ಕೇಂದ್ರವಾಗಿದ್ದ ಮದ್ರಾಸ್( ತಮಿಳ್ನಾಡು ) ತಮ್ಮ ಬಾಷೆಯ ಅರಿವು ತಮಿಳರಿಗೆ ಇದ್ದಕಾರಣವೋ ಅವರು ಸಾವಿರಾರು ವರ್ಷದಿಂದ ಉಪಯೋಗಿಸಿಕೊಂಡು ಬಂದಿರುವ ನೀರಿನ ಹಿನ್ನೆಲೆಯಲ್ಲಿ ರೈತರಿಗೆ ವ್ಯೆವಸಾಯವೇ ಉದ್ಯೋಗವೆಂದು ಮೊದಲಿನಿಂದಲೂ ಅಂದರೇ, ಎರಡು ಸಾವಿರ ( ೨೦೦೦ )ವರ್ಷದಿಂದ ಬೆಳೆಸಿಕೊಂಡಿರುವ ದೊಡ್ದ ಜೀವನ ಶೈಲಿ, ಉದ್ದಿಮೆಯೆಂದು ಅಕ್ಕರೆ ತೋರಿಸಿರುತ್ತಾರೆ. ಹೊಸದಾಗಿ ಮೈಸೂರಿನಲ್ಲಿ ಅಣೆಕಟ್ಟು ಕಟ್ಟಿದರೇ, ತಮಿಳರ ಕೋಟ್ಯಾಂತರ ಜನರ ಬದುಕು, ಹಳೆಯ ಜೀವನಪದ್ಧತಿಗೆ ದಕ್ಕೆ, ಜೀವನಕ್ಕೆ ದಕ್ಕೆ, ಉದ್ಯೋಗಕ್ಕೆ ದಕ್ಕೆ, ಹೀಗೆ ಹಲವು ಬಗ್ಗೆ ಯೋಚಿಸಿ, ಹೊಸದಾಗಿ ಕಟ್ಟಲಿರುವ ಕನ್ನಂಬಾಡಿ ಅಣೆಗೆ ತಡೆಯಲು ಪ್ರಯತ್ನಿಸಿರುತ್ತಾರೆ. ಕಾರಣ ಮುಂದೆ ತಮಿಳು ರೈತರಿಗೆ ಅನ್ಯಾಯವಾಗಬಾರದೆಂದು. ಅಂದಿನ ಕಾಲದ ಶರತ್ತುಗಳನ್ನು ಹಾಕಿ ಒಪ್ಪಿಗೆ ಕೊಟ್ಟಿರುತ್ತಾರೆ. ೧೮೯೨ರಿಂದ ೧೯೨೪ ವರಿವಿಗೆ ಮತ್ತೊಮ್ಮೆ ೧೯೨೪ ರಿಂದ ೧೯೭೪ ಆ ಶರತ್ತು ಬಳಿಕೆಯಲ್ಲಿರುತ್ತದೆ. ಮುಂದೆ ಮತ್ತೊಂದು ಶರತ್ತುಗಳು ಮಾತುಕತೆಯ ಮೂಲಕ ಬಗೆಹರಿಸಿ ಕೊಳ್ಳತಕ್ಕದ್ದು
ಮುಂದೆ ಕರ್ನಾಟಕ ಮುಖ್ಯಮಂತ್ರೀ ವಿರೇಂದ್ರಪಾಟೀಲರು ಕಾವೇರಿ ವಿಷಯದಲ್ಲಿ ಸ್ವಲ್ಪ ಆತುರಪಟ್ಟು ನೀರಿ ಬಿಡೆನೆಂದು ಪಟ್ಟುಹಿಡಿದರು. ಅದರ ಫಲವೇ, ಸಲುವಾಗಿ ತಮಿಳುನಾಡು ಮುಖ್ಯಮಂತ್ರೀ ಕರುಣಾನಿಧಿಯು ನನಗೆ ಕೋರ್ಟಿಗೆ ಹೋಗಲು ತಾವು ಅವಕಾಶ ಕೊಡಬೇಕೆಂದು ಕೇಳಿಕೊಂಡರು. ಧರ್ಮ ಸಂಕಟದಲ್ಲಿ ಸಿಕ್ಕಿಕೊಂಡ ಪ್ರಧಾನಿ ವಿ. ಪಿ. ಸಿಂಗ್ರವರು ಒಪ್ಪಿಗೆಕೊಟ್ಟರು. ಅದರ ಫಲವೇ ಅಂದು ೨೦೫ ಟಿ ಎಂ ಸಿ ( ತೌಸಂಡ್ ಮೆಟ್ರಿಕ್ ಕುಬಿಕ ಫ಼ೂಟ್ )ನೀರು ಬಿಡುವಂತೆ ಮಧ್ಯಾಂತರ ತೀರ್ಪಿನ ಆದೇಶವು ಬಂತು. ವಿರೇಂದ್ರ ಪಾಟೀಲರು ನುರಿತವರೇ ಆದರೂ ಆ ಸಂಧರ್ಭದಲ್ಲಿ ತಡಮಾಡಿಯಾದರೂ ಅಲ್ಪಸ್ವಲ್ಪ ಬಿಟ್ಟು ಅದರಿಂದ ತಪ್ಪಿಸಿಕೊಳ್ಳಬಹುದಿತ್ತು. ಆದರೆ, ತಮಿಳುನಾಡಿನ ಆಧಾರ ಅಂಕಿ ಅಂಶಗಳ ಮೇಲೆ ಮುಂದೆ ಅದೇ ತೀರ್ಪೂ ಅವರಿಗೆ ಸಾಧಕವೇ ಆಯಿತು.
ಪ್ರಪಂಚದಲ್ಲಿಯೇ ಬಹು ದೊಡ್ಡ ನದಿ ನೈಲ್ ನದಿ ಅದರ ಉದ್ದಾ ೬೬೯೦ ಆರು ಸಾವಿರದ ಆರು ನೂರತ್ತೊಂಬತ್ತು ಕಿಲೋ ಮೀಟರ್ ಗಳು. ಅದು ಬಹು ರಾಷ್ಟ್ರಗಳನ್ನು ದಾಟಿ ಮತ್ತೊಂದು ರಾಷ್ಟ್ರಗಳಲ್ಲಿಹರಿದು ನೆಮ್ಮದಿಯಿಂದಿದೆ ಆದರೇ, ಅದರಲ್ಲಿ ಇಷ್ಟೊಂದು ಸಮಸ್ಯೆಗಳಿಲ್ಲ. ಕಾವೇರಿ ಬಹು ಸಣ್ಣನದಿ ೮೦೨ ಎಂತು ನೂರ ಎರಡು ಕಿಲೋ ಮೀಟರ್ ಗಳು, ಕಾವೇರಿನದಿಯಲ್ಲಿ ಹಿಂದಿನಿಂದಲೂ ಎಷ್ಟು ಹೋರಾಟ, ಜಗಳ ಜಲವಿವಾದಗಳು ಹೆಚ್ಚುತ್ತಲಿದ್ದು, ಜಲ ವಿವಾದದಿಂದ ದಿನೇ ದಿನೇ ಸಮಸ್ಯೆಯು ಉಲ್ಬಣಗೊಳ್ಳುತ್ತಲೇ ಇದೆ. ಅಂದಿನ ನಾಯಕರು ಮುಂದಾಲೋಚನೆ ಮಾಡಿ ದೇಶವನ್ನು ನಾಲ್ಕು ಭಾಗವಾಗಿ ಮಾಡಿದ್ದರೆ, ನಾವು ಭಾರತೀಯರು ಬಾಷಾವಾರು ಪ್ರಾಂತ್ಯಗಳನ್ನು ಮಾಡದಿದ್ದರೇ, ಹೇಗಿರುತ್ತಿತ್ತು. ಬಾಷಾ ಗೊಂದಲಗಳಿಲ್ಲದೇ ಅಂದು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮವೆಂದು ರಾಜ್ಯಗಳಾಗಿದ್ದರೇ, ಅಂದು ಈ ಮಟ್ಟಕ್ಕೆ ಕಾವೇರಿ ಕಾವೇ……ರಿ ಇಂತಹ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಇದ್ದು ಈ ಸನ್ನಿವೇಶಗಳನ್ನು ಸಂದಿಸುತ್ತಿರಲಿಲ್ಲ. ಭಾರತದಲ್ಲಿ ಇದೇ ಸಮಸ್ಯೆ ಆಗ ಮಾತ್ರವೇ ಹೇಗೆ ತೊಂದರೇಯಿಲ್ಲದೆಲೇ ಸಾಧ್ಯವಾಗುತ್ತಿತ್ತು. ಅಂದರೇ ನಮ್ಮಲ್ಲಿ ಭೌದ್ಧಿಕ ಙ್ಞಾನದ ಕೊರತೆಯಿದೆ ಅದರಿಂದಾಗಿ.
ಇವು ಮುಂದೆ ನಡೆಯುತ್ತದೆ ಎನ್ನಬಹುದೇ ?
. ಮುಂದೆ ಪ್ರಪಂಚದಲ್ಲಿ ಮಹಾಯುದ್ಧಗಳು ನೀರಿಗಾಗಿ ದೊಡ್ಡ ಹೋರಾಟಗಳು ನಡೆಯುವುದೆಂದು ವಿಙ್ಞಾನಿಗಳು ಉಹಿಸಿರುವುದು ಸರಿಯಷ್ಟೇ.
. ಈ ಮೊದಲೇ ಬ್ರಿಟೀಷರು ಪ್ರಯತ್ನಿಸಿ ಕೈಬಿಟ್ಟ ನದಿ ಜೋಡನೆಯನ್ನು ಕೈಗೆತ್ತಿಕೊಂಡು ಮೊದಲು ಅವರವರ ದೇಶದ ನದಿಗಳನ್ನು ತಾವೇ ಜೋಡಿಸಿಕೊಳ್ಳಲು ಅವಕಾಶವನ್ನು ಕೊಟ್ಟು ಮುಂದೆ ರಾಷ್ಟ್ರದ ದೇಶದ ಎಲ್ಲಾ ನದಿಗಳನ್ನು ಜೋಡಿಸುವುದು
. ನದಿಗಳ ಜೋಡನೆಗೆ ಏಷ್ಟೇ……….ಟೇ ಖರ್ಚಾದರೂ ದೇಶವನ್ನು ಅಡವಿಟ್ಟಾದರೂ ಶೀಘ್ರದಲ್ಲಿ ಮಾಡಿ ಮುಗಿಸಬೇಕು. ಉತ್ತರಭಾರತದಲ್ಲಿನ ನದಿ ಪ್ರವಾಹದ ಹಾವಳಿಯಿಂದ ತಪ್ಪಿಸಿಕೊಳ್ಳಲು ವಿದ್ಯುತ್ತ್ ಉತ್ಪತ್ತಿಗಾಗಿಯು ಜನರಿಗೆ ಉದ್ಯೋಗಳಿಗಾಗಿಯು ಮೀನುಗಾರಿಕೆ ಸರಕು ಸರಬರಾಜು ಹೀಗೆ ಹಲವು. ವಿಂಧ್ಯಪರ್ವತ ಶ್ರೇಣಿಗಳಲ್ಲಿ ತಡೆಗಳು ಬರುತ್ತವೆ ಎಂದೂ ಕೆಲವರ ವಾದ. ಅಲ್ಲಿ ಕೊಳವೆಗಳ ಮೂಲಕ ಪಂಪ್ ಮಾಡುವ “ಹೈಪೋಸ” ತಂತ್ರಙ್ಞಾನವನ್ನು ಬಳಸಿ ನಿರ್ಮಿಸಿ ಅದಕ್ಕೆ ಆದ ಖರ್ಚಾದ ವಿದ್ಯುತ್ತನ್ನು ನೀರು ಇಳಿಯುವಾಗ ಆದಕ್ಕಿಂತ ಹೆಚ್ಚಿಗೆ ವಿದ್ಯುತ್ತನ್ನು ಸಂಪಾದಿಸಿಕೊಳ್ಳಬಹುದು.
. ಇಲ್ಲಿ ದೇಶದ ಅಥವಾ ನೀರಿನ ಪ್ರೆಶ್ನೆಯೆನ್ನದೇ ಕೋಟ್ಯಾಂತರ ಜೀವನದ ಬದುಕೇ ಬಹು ಮುಖ್ಯವಾಗಿರುತ್ತದೆ ಎಂಬುದ ಗಮನಿಸಿ ಆಧ್ಯತೆ ಕೊಡುವುದು ಮುಖ್ಯವಾಗಿರುತ್ತದೆ.
. ದೇಶದ ಅರ್ಥಿಕ ನೆಲೆಯನ್ನು ಮನದಲ್ಲಿಟ್ಟು ಒಬ್ಬ ಬೆಳೆಯುವ ಬೆಳೆಗೂ ಮತ್ತೊಬ್ಬ ಬೆಳೆಯುವ ಬೆಳೆಗೂ ನೀರಿನ ಲೆಕ್ಕದಲ್ಲಿ ಯಾರು ಹೆಚ್ಚು ಬೆಳೆಯುತ್ತಾನೆ, ಅವನಿಗೇ ಮೊದಲ ಆಧ್ಯತೆ ಮತ್ತು ಅವಕಾಶಕೊಡುವುದು ಉತ್ತಮ.
. ಒಬ್ಬರೈತ ಒಂದು ಬೆಳೆಯನ್ನು ಬೆಳೆಯುವ ಮೊದಲು ಬೆಳೆಯದಿರುವಂತೆ ತಡೆಯಬೇಕು ಬೆಳೆದಮೇಲೆ ನೀರು ಬಿಡದೇ ತಡೆಯುವುದು ಏಷ್ಟು ಸರಿ ?.
. ಇಂತಹ ಕಾಲಗಳಲ್ಲಿ ಹೆಚ್ಚಿಗೆ ನೀರು ಕುಡಿಯದ ಬೆಳೆಗಳನ್ನು ಎಲ್ಲರು ಅವಲಂಬಿಸಬೇಕು. ಹಣವೇ ಬರುವಂತಾ ಕಬ್ಬು ಬತ್ತು ಅದ ಬೆಳೆಗಳನ್ನು ಹಾಕಬಾರದು
. ಸರ್ಕಾರಿ ಅಧಿಕಾರಿಗಳು, ಕೃಷಿ ವಿಙ್ಞಾನಿಗಳ ಸಲಹೆಪಡೆದು ಬೆಳೆಗಳನ್ನು ಹಾಕುವುದು ಬೇರೆ ಜಪಾನ್ ದೇಶಗಳಲ್ಲಿರುವಂತೆ ಕಡಿಮೆನೀರು ಉಪಯೋಗಿಸಿ ಬತ್ತ ಬೆಳೆಯು ಮಾರ್ಗದರ್ಶನಗಳನ್ನು ಪಡೆಯಲೇ ಬೇಕಾಗಿರುತ್ತದೆ.
. ನೀರನ್ನು ಹೆಚ್ಚಿಗೆ ಅನುಚಿತವಾಗಿ ಪೋಲಗದಂತೆ ನೋಡಿಕೊಳ್ಳುವುದು ಆಯಾಯ ರಾಜ್ಯಗಳು ತಡೆಹಿಡಿಯುವುದು ಎಲ್ಲರ ಕರ್ತವ್ಯವಾಗಿರಬೇಕು.
. ಒಬ್ಬ ಒಂದು ಅನುಕೂಲವನ್ನು ಅನುಭವಿಸಲು ಬಿಟ್ಟು ಮತ್ತೇ ಅದನ್ನು ಕಿತ್ತುಕೊಳ್ಳುವುದು ಸಾಧುವು ಅಲ್ಲ. ಎಂಬುದೇ ತಮಿಳರ ವಾದ.