ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 26, 2012

ಅಪರೂಪದ ಪರಿಸರವಾದಿ ಕಲಾವಿದೆ ಕೆನಡಾ ದೇಶದ ಪ್ರಾಂಕೆ ಜೇಮ್ಸ್

by ನಿಲುಮೆ
– ಗೋವಿಂದಭಟ್,ನೆಲ್ಯಾರು
ಇತ್ತೀಚಿನ  ದಿನಗಳಲ್ಲಿ ನನ್ನ ಮೇಲೆ ಬಹಳ  ಪ್ರಬಾವ  ಬಿದ್ದಿರುವ   ವ್ಯಕ್ತಿಯೊಬ್ಬರು    ಎಂದರೆ   ಕಲಾವಿದೆ ಹಾಗೂ  ಪರಿಸರ ಹೋರಾಟಗಾರ್ತಿ  ಕೆನಡಾ ದೇಶದ ಫ್ರಾಂಕೆ  ಜೇಮ್ಸ್.    ಅವರ ಚಿತ್ರ  ಪ್ರಬಂದಗಳು  ಪರಿಸರಾಂದೋಲನಗಳು  ಅಧ್ಬುತ ಎನ್ನಬೇಕು.     ಸುಮಾರು  ಎರಡು ವರ್ಷಗಳಿಂದ  ಇವರ  ಚಟುವಟಿಕೆ  ಮೇಲೆ  ಗಮನವಿಟ್ಟಿರುವ  ನಾನು ಈಗ  ಅನಿಸಿಕೆ  ಹಂಚಿಕೊಳ್ಳುತ್ತಿದ್ದೇನೆ.

ಕಾರು ಹೊಂದಿದ  ಕುಟುಂಬದಿಂದ  ಬದಲಾವಣೆಯಾಗುವಾಗ   ಏನೆಲ್ಲ  ಎದುರಿಸಬೇಕು  ಅನ್ನುವುದನ್ನು ಅವರ ಮಾತುಗಳಲ್ಲಿಯೇ  ಕೇಳಬೇಕು, ಅಲ್ಲ ಚಿತ್ರಕಥೆ  ಓದಬೇಕು. ದೊಡ್ಡ  ಹಡಗಿನಂತಹ  ಕಾರು  ಅವರಲ್ಲಿತ್ತು. ಡೆವಿಡ್  ಸುಜುಕಿ  ಎಂಬ  ಪರಿಸರವಾದಿಯ  ಬಾಷಣ  ಕೇಳಿ ಮಾರಿಯೇ ಬಿಟ್ಟರು. ಹತ್ತಿರದಲ್ಲಿ  ದಿನಸಿ ಅಂಗಡಿ ಇತ್ತು. ನಡೆಯುವ  ಆಸಕ್ತಿ ಇತ್ತು.  ಒಬ್ಬೊಬ್ಬ  ಸಂಬಂದಿಕರ  ಪ್ರತಿಕ್ರಿಯೆಯೂ  ಬಿನ್ನವಾಗಿತ್ತು.  ಕಾರು ಇಲ್ಲವಾದ  ನಂತರ  ಮನೆ ಎದುರು ಕಾರು – ದಾರಿ  ಬೇಕಾ ?  ಬೇಡ.    ಆದರೆ  ಪಟ್ಟಣದ  ಕಾನೂನು ಪ್ರಕಾರ ಒಂದು ನಿವೇಶನದಲ್ಲಿ    ಒಂದು ಮರ ನೆಡಲು  ಮಾತ್ರ ಅವಕಾಶ.     ಹಲವು ಸಮಸ್ಯೆಗಳ  ಎದುರಿಸಿ   ಕೊನೆಗೂ   ಅಲ್ಲಿ ಹೂಗಿಡಗಳನ್ನು    ನೆಟ್ಟರು. ಕಾಂಕ್ರೀಟು  ಅಗೆದು ಹಾಕಿ  ನೀರು ಇಂಗುವಂತೆ  ಮಾಡಿದರು.   ಅವರ, ಅಂದರೆ   ಆ ದೇಶದವರ   ಕಾರು ಸಹಿತ ಜೀವನ  ನಮಗೆ  ಆಕರ್ಷಕವಾಗಿ ಕಂಡರೆ   ಕಾರು ರಹಿತ  ಜೀವನವೂ  ಮಾರ್ಗದರ್ಶಕ ಏಕಾಗಬಾರದು ?
ಯಾವ  ವಿಚಾರವನ್ನೇ  ಆಗಲಿ  ತಮ್ಮ  ಕಲೆಯ  ಮೂಲಕ   ಪ್ರಚಾರಾಂದೋಲನ  ನಡೆಸುವ ಫ್ರಾಂಕೆ  ಕೆನಡಾ ದೇಶಕ್ಕೆ  ಅಪಾರ  ತಲೆನೋವು ತರಿಸುವ  ವ್ಯಕ್ತಿಯಾಗಿ  ಹೊರಹೊಮ್ಮಿದ್ದಾರೆ. ಹೌದಾ  ಪ್ರದಾನ ಮಂತ್ರಿಗಳೇ, ಮಲೀನತೆ  ತೇರಿಗೆ ನಿಜಕ್ಕೂ  ದೇಶಕ್ಕೆ  ಹಾನಿಮಾಡುವುದೇ   ಎಂದು ಮುಗ್ದವಾಗಿ  ಪ್ರಶ್ನಿಸುತ್ತಾರೆ.  ನೀವು ಮಾತಾಡುತ್ತಿರುವ  ವಿಚಾರ  ಪರಿಣಾಮ ನಿಮಗೆ ಚೆನ್ನಾಗಿ  ಗೊತ್ತಾ? ಮುಂದೆ  ಹಿಮ ಕರಡಿ ಕಾಣೋದು  ಎರಡು ಡಾಲರ್ ನಾಣ್ಯದಲ್ಲಿ  ಮಾತ್ರವಾದರೆ   ನಮ್ಮ  ನಿಮ್ಮ  ಮಕ್ಕಳು  ಮೊಮ್ಮಕ್ಕಳು  ಏನು ಹೇಳಬಹುದು.  ಎಂದೂ  ಕೇಳುತ್ತಾರೆ. ಈ  ಹಾರ್ಪರ್ ಮಹರಾಯ ಬೆಂಗಳೂರಿಗೆ ಬಂದಾಗ  ಇದನ್ನು  ಹಂಚಿಕೊಳ್ಳುವ  ಆಲೋಚನೆ ಬಂದರೂ  ತಕ್ಷಣ ಇವೆಲ್ಲ ಬರೆಯಲು  ಸಾದ್ಯವಾಗಲಿಲ್ಲ.
ಅವರಿಗೆ  ಒಮ್ಮೆ  ಒಂದು ಒಬ್ಬ  ಅಪರಿಚಿತ  ವ್ಯಕ್ತಿಯಿಂದ ಒಂದು  ಇ ಪತ್ರ  ಬಂತು. “ ನಮಗಿಬ್ಬರಿಗೆ  ಒಂದು ಸಸ್ಯಹಾರಿ    ಊಟ ಕೊಡುವುದಾದರೆ  ನಾನು ನೀವುಸೂಚಿಸಿದ   ಸೇವಾ ಸಂಸ್ಥೆಗೆ  ಇನ್ನೂರು ಡಾಲರ್ ದಾನ  ಮಾಡುತ್ತೇನೆ “.   ಇನ್ನೂರು  ಡಾಲರಿನ  ಮೌಲ್ಯವೇಷ್ಟು ?  ಹುಡುಕಿದರು…..   ಇನ್ನೂರು  ಡಾಲರ್  ಎಂದರೆ  ಊರ  ಸೇವಾ   ಸಂಸ್ಥೆಯೊಂದು    ಎಪ್ಪತ್ತೇಳು  ಜನರಿಗೆ  ಕ್ರಿಸ್ಟ್ ಮಸ್ ಊಟ  ಕೊಡುವುದು  ಎಂದು  ಅರಿವಾದ  ನಂತರ  ಆ  ಅಪರಿಚಿತನಿಗೆ   ಒಪ್ಪಿಗೆ  ಹೋಯಿತು……..
ಯುರೋಪಿನಲ್ಲಿ   ಅವರ    ಚಿತ್ರ ಪ್ರದರ್ಶನ   ಏರ್ಪಾಡಾಗಿತ್ತು.   ಸರಕಾರ  ಅದಕ್ಕೆ  ಅಡ್ಡಗಾಲು ಹಾಕಿತು. ಫ್ರಾಂಕೆ ಸುಮ್ಮನಿರಲಿಲ್ಲ.   ಮಾಹಿತಿ ಹಕ್ಕಿನಲ್ಲಿ  ಕಾರಣಕರ್ತರನ್ನು  ಗುರುತಿಸಿದರು.  ಆಗ  ಅವರಿಗೆ ಅರಿವಾಯಿತು – ಅವರು  ಕೆನಡಾ  ಸರಕಾರದ   ಕಪ್ಪು ಪಟ್ಟಿಯಲ್ಲಿದ್ದಾರೆ.    ಅದನ್ನು  ಅವರು ಎದುರಿಸಿದ   ಹಾಗೂ   ಊರ ಮದ್ಯದಲ್ಲಿ ಪ್ರದರ್ಶನ  ಏರ್ಪಡಿಸಿ    ಕೇಂದ್ರ ಸರಕಾರಕ್ಕೆ ಮುಜುಗರ ಉಂಟುಮಾಡಿದ ಪ್ರಸಂಗ  ಅವರ  ಚಿತ್ರ ಕಥೆಯಲ್ಲೇ  ಓದಿದರೆ ಚೆನ್ನ.    ತುಂಬಾ  ಚೆನ್ನಾಗಿದೆ.
ಭೂಮಿ ಬಿಸಿಏರುವಿಕೆಯ  ವಿಚಾರವೂ  ಒಂದು ನೋಡಲೇ  ಬೇಕಾದ  ಚಿತ್ರ ಪ್ರಬಂದ.ಎಲ್ಲರೂ  ಹಾಲೆರೆಯುವಾಗ  ನಾನೊಬ್ಬ  ನೀರೆದರೆ……..  ಅನ್ನುವ  ಬುದ್ದಿವಂತರ  ನಾಡು  ನಮ್ಮದು.  ಕೆಲವು  ಜನ  ಪ್ರಾಮಾಣಿಕ  ಆಸಕ್ತಿ   ಉಳಿಸಿಕೊಂಡವರೂ  ಇದ್ದಾರೆ.ಆದರೂ ಅಯ್ಯೋ. ನಾನು ಒಬ್ಬ ಏನು ಮಾಡಲು ಸಾದ್ಯ  ಎಂದು  ಸಾಮಾನ್ಯವಾಗಿ   ಸುಮ್ಮನಾಗುತ್ತೇವೆ. ಅದರ ವಿಚಾರದ  ಪ್ರಬಂದವೂ ಬಹಳ  ಚೆನ್ನಾಗಿದೆ.ಎರಡೂ  ವಾಕ್ಯಗಳಲ್ಲಿ  ಸಂಬಂದಪಟ್ಟ ಕೊಂಡಿ ಅಳವಡಿಸಿದ್ದೇನೆ.ಹಲವು ವಿಡಿಯೊ ಪ್ರಬಂದಗಳು ನೋಡಲು  ಚೆನ್ನಾಗಿವೆ.ಉದಾಹರಣೆ,ಕಾಡಿನ  ಬಗೆಗೆ ಯಾರು  ಕಾಳಜಿ ವಹಿಸುತ್ತಾರೆ ?ಪ್ರದಾನಿ  ಹಾರ್ಪರ್ ಏನನ್ನು ಅಂಜುತ್ತಾನೆ    ಇತ್ಯಾದಿ.
ನನ್ನ  ಬ್ಲೊಗ್  ತೆರೆದಾಗೆಲ್ಲ    ಅವರನ್ನು  ನೆನಪಿಸಿಕೊಳ್ಳುತ್ತೇನೆ.  ಯಾಕೆಂದರೆ  ಪಕ್ಕಲ್ಲಿರುವ  co2 widget   ಪ್ರಾಂಕೆ   ಅವರ  ವಿನ್ಯಾಸ.   ಬಾರತದ ಬ್ಲೋಗುಗಳ  / ಜಾಲತಾಣಗಳ  ಹುಡುಕಿದರೆ   ಇದನ್ನು ಈ  ಹಳ್ಳಿಯಿಂದ ದಲ್ಲಿ ಮಾತ್ರ ಕಾಣಬಹುದಾಗಿದೆಯಂತೆ.   ನಾನು ಒಂದೂವರೆ  ವರ್ಷ  ಹಿಂದೆ ಕುದಿಯುತ್ತಿರುವ  ಪಾತ್ರೆಯಲ್ಲಿ  ಕಪ್ಪೆಗಳು  ನಾವು  ಎಂಬ  ತಲೆಬರಹದಡಿಯಲ್ಲಿ   ಈ  widget  ಹಾಕಿದ್ದೆ.   ಇಡೀ  ಬಾರತ ದೇಶದಲ್ಲಿ ಬಳಸುವವ  ಮಾತ್ರ  ನಾನೊಬ್ಬನೇ  ಅನ್ನುವಾಗ  ಹೆಮ್ಮೆಯಲ್ಲ  ಬಹಳ   ಬೇಸರವಾಗುತ್ತದೆ.   ಪಟ್ಟಿ  ಹುಡುಕಿದರೆ   ಇನ್ನೊಂದು ಬಳಕೆದಾರ  ಕಾಣಬಹುದಾದರೂ  ಅ    ಕೊಂಡಿ  ಕೆಲಸ ಮಾಡುವುದಿಲ್ಲ.ಇದನ್ನು ಹೆಚ್ಚು ಜನ ಅವರ ಬ್ಲೋಗುಗಳಲ್ಲಿ, ಜಾಲತಾಣದಲ್ಲಿ ಬಳಸಲಿ ಮತ್ತು  ಈ  ವಿಚಾರಕ್ಕೆ   ಹೆಚ್ಚು   ಪ್ರಚಾರ   ಸಿಗಲೆಂದು   ಹಾರೈಸುತ್ತೇನೆ.   ನಮ್ಮವರು  ಮೂಕಪುಟದಲ್ಲೂ  ಇಮೈಲಿನಲ್ಲೂ   ಸಿಕ್ಕಸಿಕ್ಕ  ಅಸಂಬದ್ದ  ಜೋಕುಗಳ   ಮಾಹಿತಿಗಳ  ಶೇರ್  ಮಾಡ್ತಾರೆ, ಆದರೆ  ಇಂತಹ  ಸಕಾರಾತ್ಮಕ   ದಾರಿಯಲ್ಲಿ ಹೆಜ್ಜೆ ಹಾಕುವುದು  ಭಾರಿ   ನಿಧಾನ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments