’ಟಿಪ್ಪು’ ಹೆಸರಿನಲ್ಲಿ ’ಕೈ’ ರಾಜಕೀಯ?
– ಅಶ್ವಿನ್ ಎಸ್. ಅಮೀನ್
ಬಹುಶಃ ಭಾರತದಲ್ಲಿ ಹಿಂದೂ ಧರ್ಮ ಬಿಟ್ಟು ಇತರ ಧರ್ಮೀಯರಿಗೆ ಕೊಡುವ ಸವಲತ್ತುಗಳು,ಸೌಕರ್ಯಗಳು ಇತರ ಯಾವ ದೇಶದಲ್ಲೂ ಇರಲಿಕ್ಕಿಲ್ಲ.. ನಮ್ಮ ರಾಜಕೀಯ ವ್ಯವಸ್ಥೆಯೇ ಅಂತಹುದು. ನಮ್ಮ ರಾಷ್ಟ್ರಪಿತರು ಬುನಾದಿ ಹಾಕಿದ ಈ ಸಂಸ್ಕೃತಿ ಇಂದಿನವರೆಗೂ ನಿಂತಿಲ್ಲ.. ಈಗ ಇಂತಹದೇ ಒಂದು ಕಾರಣಕ್ಕಾಗಿ ಸುದ್ದಿ ಮಾಡುತ್ತಿರುವುದು ಪ್ರತ್ಯೇಕ ಮುಸ್ಲಿಂ ವಿಶ್ವ ವಿದ್ಯಾಲಯ.
ಭಾರತದಲ್ಲಿರುವ ಒಂದು ಪ್ರತ್ಯೇಕ ಮುಸ್ಲಿಂ ವಿದ್ಯಾಲಯ ಅಲಿಘಡ. ಈಗ ಕೇಂದ್ರ ಸರ್ಕಾರ ಇನ್ನೊಂದು ಪ್ರತ್ಯೇಕ ಮುಸ್ಲಿಂ ವಿವಿ ಯನ್ನು ಕರ್ನಾಟಕದ ಶ್ರೀರಂಗಪಟ್ಟಣ ದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ.ಈಗಾಗಲೇ ಒಂದು ಪ್ರತ್ಯೇಕ ವಿವಿ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಮತ್ತೊಂದು ವಿವಿ ಯಾಕೆ? ಅದರಲ್ಲೂ ಧರ್ಮದ ಆಧಾರದ ಮೇಲೆ ವಿವಿ ವಿಂಗಡಣೆ ಸರಿಯೇ? ವಿಶ್ವವಿದ್ಯಾಲಯಗಳಿಗೆ ಧರ್ಮದ ಲೇಪ ಯಾಕೆ ಬೇಕು? ಭಾರತದಲ್ಲಿರುವ ಅಷ್ಟೂ ವಿವಿಗಳಲ್ಲಿ ಮುಸ್ಲಿಮರು ಓದಲಾರರೇ? ವಿವಿಗಳಲ್ಲಿ ಮುಸ್ಲಿಮರಿಗೆ ಅಂತಹ ತೊಂದರೆಗಳಿವೆಯೇ? ಹಾಗೆ ಹೀಗೆ ಎಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಮಗೆ ಸಿಗುವ ಉತ್ತರ “ಹಾಗೇನೂ ಇಲ್ಲ, ಎಲ್ಲವೂ ಸರಿಯಾಗಿದೆ..” ಹಾಗಿದ್ದಲ್ಲಿ ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪನೆಯ ಉದ್ಧೇಶ ರಾಜಕೀಯ ತಂತ್ರ ಅನ್ನುವುದು ಸ್ಪಷ್ಟವಾಗುತ್ತದೆ.
ಇನ್ನು ಮುಸ್ಲಿಮರಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಕೊಟ್ಟರೆ ಏನಾಗುತ್ತದೆ ಅನ್ನುವುದು ಅಲಿಘಡ ವಿವಿಯಲ್ಲೇ ಗೊತ್ತಾಗಿದೆ. ಅಲ್ಲಿ ಹುಟ್ಟಿಕೊಂಡ ‘ಸಿಮಿ’ ಸಂಘಟನೆ ದೇಶವ್ಯಾಪಿ ಬೆಳೆದು ದೇಶ ವಿರೋಧಿ ಭಯೋತ್ಪಾದನಾ ಸಂಘಟನೆಯಾಗಿ ಮಾರ್ಪಟ್ಟು ದೇಶದಾದ್ಯಂತ ವಿದ್ವಂಸಕ ಹಾಗು ದೇಶ ದ್ರೋಹಿ ಕೃತ್ಯಗಳನ್ನು ನಡೆಸಿ ಇಂದು ಆ ಸಂಘಟನೆಯನ್ನು ನಿಷೇಧಿಸಿದ್ದಾರೆ ಅಂದರೆ ಅದರ ಭಯಂಕರತೆಯನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಆದರೆ ಕೇಂದ್ರ ಸರಕಾರ ಇದರ ಬಗ್ಗೆ ಜಾಣ ಕುರುಡು ಪ್ರದರ್ಶಿಸಿ ಮತ್ತೊಂದು ವಿವಿಗೆ ಕೈ ಹಾಕಿರುವುದು ನಮ್ಮ ದೇಶದ ದುರದೃಷ್ಟವೆನ್ನಬೇಕು.
ಈ ವಿವಾದ ಇನ್ನೂ ಬಗೆಹರಿಯದೆ ಹೊಗೆಯಾಡುತ್ತಿರುವಾಗಲೇ ಯೋಜಿತ ವಿವಿಗೆ ಇಡುವ ಹೆಸರಿನ ಬಗ್ಗೆ ಮತ್ತೊಂದು ವಿವಾದ ಎದ್ದಿದೆ. ಆ ಪ್ರಸ್ತಾಪಿತ ಹೆಸರು ಹಿಂದೂ ವಿರೋಧಿ, ಮುಸ್ಲಿಂ ಮತಾಂಧ, ಹತ್ಯಾಕಾಂಡಗಳ ರೂವಾರಿ ಟಿಪ್ಪು ಸುಲ್ತಾನ್ ನದ್ದು.!!! ಟಿಪ್ಪು ಹೆಸರಿಗೆ ಬೆಂಬಲ ಸೂಚಿಸಿ ಅದೇ ಹೆಸರನ್ನು ಇಡುವಂತೆ ಕೆಲ ಬುದ್ಧಿ ಜೀವಿಗಳ ಪಡೆ ಬೇರೆ ಎದ್ದು ನಿಂತಿದೆ. ಬಹುಶಃ ಅವರಿಗೆಲ್ಲ ಟಿಪ್ಪುವಿನ ನಿಜ ಸ್ವರೂಪ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಹೆಚ್ಚಿನವರು ಟಿಪ್ಪು ಒಬ್ಬ ಸರ್ವ ಧರ್ಮ ಸಹಿಷ್ಣು, ರಾಷ್ಟ್ರ ಪ್ರೇಮಿ, ಕನ್ನಡ ಭಾಷಾ ಪ್ರೇಮಿ ಎಂದೆಲ್ಲ ತಿಳಿದುಕೊಂಡಿದ್ದಾರೆ. ಆದರೆ ಅವೆಲ್ಲ ಅಪ್ಪಟ ಸುಳ್ಳುಗಳು..!! ಟಿಪ್ಪುವಿನ ನಿಜ ಬಣ್ಣ ತಿಳಿಯಬೇಕಾದರೆ ನಾವು ಮತ್ತೊಮ್ಮೆ ಇತಿಹಾಸವನ್ನು ಕೆದಕಬೇಕು. ಕೆದಕುತ್ತಾ ಹೋದಂತೆಲ್ಲ ಸಾಕ್ಷ್ಯಗಳು ನಮ್ಮ ಕಾಲನ್ನು ಎಡತಾಕುತ್ತವೆ. ಟಿಪ್ಪುವಿನ ನಿಜವಾದ ಮುಖದ ಅನಾವರಣವಾಗುತ್ತದೆ.ಅವುಗಳಲ್ಲಿ ಕೆಲವನ್ನು ನೋಡೋಣ…
1) ಟಿಪ್ಪು ತನ್ನ ಶ್ರೀರಂಗಪಟ್ಟಣ ಕೋಟೆಯ ಪ್ರವೇಶದ್ವಾರದ ಆಂಜನೇಯ ದೇವಾಲಯವನ್ನು ಕೆಡವಿ ನಿರ್ಮಿಸಿದ ಮಸೀದಿಯ ಶಾಸನ ಹಾಗು ಶ್ರೀರಂಗಪಟ್ಟಣದ ಹಲವು ಪರ್ಷಿಯನ್ ಶಾಸನಗಳಲ್ಲಿ ಹಲವೆಡೆ “ಮುಸ್ಲಿಮೇತರರನ್ನು (ಕಾಫಿರ್) ಕೊಲ್ಲಬೇಕು” ಎಂಬರ್ಥದ ಬರಹಗಳಿವೆ. ಅಂತಹ ಬರಹಗಳಲ್ಲಿ ಒಂದು ಬರಹ ಹೀಗಿದೆ “ಪ್ರವಾದಿಗಳು ಹೇಗೆ ಯುದ್ಧವನ್ನು ಮಾಡಿ ಕಾಫಿರರನ್ನು ಕೊಂದರೋ ಹಾಗೆಯೇ ನೀವುಗಳು ಕೂಡ ಕಾಫಿರರನ್ನು ಕೊಲ್ಲಲು ಯುದ್ಧ ಸಲಕರಣೆಗಳನ್ನು ಹೊಂದಿರಿ.” ಅವನು ಕಿತ್ತುಹಾಕಿಸಿದ ಆಂಜನೇಯನ ವಿಗ್ರಹವನ್ನು ಊರ ಒಳಗೆ ಹೊಸ ದೇವಾಲಯ ಕಟ್ಟಿಸಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಟಿಪ್ಪು ಕಟ್ಟಿಸಿದ ಮಸೀದಿಯ ಕೆಳಭಾಗದಲ್ಲಿ ಇಂದಿಗೂ ಹಿಂದೂ ದೇವಾಲಯದ ಕುರುಹುಗಳು ಸ್ಪಷ್ಟವಾಗಿವೆ.
2) ಇತ್ತೀಚೆಗೆ ವಿಜಯ್ ಮಲ್ಯ ಭಾರತಕ್ಕೆ ವಾಪಾಸು ತಂದ ಟಿಪ್ಪುವಿನ ಖಡ್ಗದ ಮೇಲಿನ ಪರ್ಷಿಯನ್ ಭಾಷೆಯ ಶಾಸನವು ಈ ರೀತಿ ಇದೆ, “ನನ್ನ ವಿಜಯ ಖಡ್ಗ ಎಲ್ಲಾ ಕಾಫಿರರನ್ನು ಕೊಂದು ಪ್ರಕಾಶಿಸುತ್ತದೆ.”
3) 14.12.1788 ರಂದು ಟಿಪ್ಪು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಪತ್ರ, “ನೀನು ಮೀರ್ ಹುಸೇನ್ ಆಲಿ ಜತೆಗೂಡಿ ಅಲ್ಲಾಹುವಿನಲ್ಲಿ ನಂಬಿಕೆ ಇಲ್ಲದ ಎಲ್ಲ ಕಾಫಿರರನ್ನು ಕೊಲ್ಲಬೇಕು.”
4) ಟಿಪ್ಪು 18.01.1790 ರಂದು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಮತ್ತೊಂದು ಪತ್ರದ ಸಾರಾಂಶ, ” ಪ್ರವಾದಿ ಮಹಮ್ಮದರ ಕೃಪೆಯಿಂದ ಮತ್ತು ಅಲ್ಲಾಹುವಿನ ದಯೆಯಿಂದ ನಾವು ಕಲ್ಲಿಕೋಟೆಯ (ಈಗಿನ ಕ್ಯಾಲಿಕಟ್) 75 ಶೇಕಡಾ ಕಾಫಿರರನ್ನು ಮತಾಂತರಿಸಿದ್ದೇವೆ.”
5) 22.3.1789 ರಲ್ಲಿ ಕೊಡೆಂಗೇರಿ ಅಬ್ದುಲ್ ಖಾದಿಗೆ ಬರೆದ ಪತ್ರದ ಒಕ್ಕಣೆ, ” ನಾನು 1200 ಕಾಫಿರರನ್ನು ಮತಾಂತರಿಸಿದ್ದೇನೆ. ನೀನು ಎಲ್ಲಾ ನಂಬೂದಿರಿ (ಕೇರಳದ ಬ್ರಾಹ್ಮಣರು) ಮತ್ತು ಇತರರನ್ನು ಮತಾಂತರಿಸು.”
6) ಪ್ರಾರಂಭದಲ್ಲಿ ಟಿಪ್ಪು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿದರೂ ನಂತರದಲ್ಲಿ ಪರ್ಷಿಯನ್ ಭಾಷೆಯನ್ನೂ ಆಡಳಿತ ಭಾಷೆಯನ್ನಾಗಿ ತರಲು ಭಾರೀ ಶ್ರಮ ಪಟ್ಟಿದ್ದ. ಆದರೆ ಅದು ಯಶಸ್ವಿಯಾಗದೆ ಹೋದದ್ದು ಕನ್ನಡಿಗರ ಅದೃಷ್ಟ. ಅಂತೆಯೇ ಟಿಪ್ಪುವಿನ ಎಲ್ಲಾ ಶಾಸನಗಳು ಪರ್ಷಿಯನ್ ಭಾಷೆಯಲ್ಲಿಯೇ ಇವೆ.ಯಶಸ್ವಿಯಾಗಿದ್ದರೆ ಇವತ್ತಿಗೆ ಮೈಸೂರು -ನಜರಾಬಾದ್ ಆಗಿರುತಿತ್ತು…! ಐ.ಮಾ ಮುತ್ತಣ್ಣ ಅವರ Tipu Sultan X-rayed ಪುಸ್ತಕದಲ್ಲಿ ಇನ್ನು ೪೦ ಪರ್ಶಿಯನ್ ಹೆಸರುಗಳಿವೆ.
7) ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿಯನ್ನು ಚಿಕ್ಕ ಮನೆಯೊಂದರಲ್ಲಿ ಕೂಡಿಹಾಕಿ ಸರಿಯಾಗಿ ಊಟ ನೀಡದೆ ಸೆರೆಯಿರಿಸಿದ್ದನ್ನು ಶ್ರೀನಿವಾಸ್ ಆಚಾರ್, ನಾರಾಯಣ ಅಯ್ಯಂಗಾರ್ ಅವರುಗಳು ತಮ್ಮ ‘ಮೈಸೂರು ಪ್ರಧಾನ’ ಪುಸ್ತಕದಲ್ಲಿ ವಿವರಿಸಿದ್ದಾರೆ. ರಾಣಿಯು ತನ್ನ ಮದ್ರಾಸಿನ ಪ್ರತಿನಿಧಿ ತಿರುಮಲರಾವ್ ಗೆ ಬರೆದ ಟಿಪ್ಪಣಿಯನ್ನೂ ಈ ಕೃತಿಯಲ್ಲಿ ನೀಡಲಾಗಿದೆ. ಆ ಟಿಪ್ಪಣಿ ಹೀಗಿದೆ “… ಟಿಪ್ಪು ಯಾವ ಕ್ಷಣದಲ್ಲಿ ಬೇಕಾದರೂ ನನ್ನನ್ನು ಕೊಲ್ಲಬಹುದು, ಈಗಾಗಲೇ ಶ್ರೀರಂಗಪಟ್ಟಣದ 700 ಹಿಂದೂ ಕುಟುಂಬಗಳನ್ನು ಹತ್ಯೆ ಮಾಡಿದ್ದಾನೆ…”
ಟಿಪ್ಪು ನಡೆಸಿದ ಮತಾಂತರ, ಹತ್ಯಾಕಾಂಡಗಳು, ದೇಗುಲಗಳ ಧ್ವಂಸ ಶ್ರೀರಂಗಪಟ್ಟಣ, ಮೈಸೂರು ಪ್ರದೇಶಕ್ಕಿಂತ ಕೊಡಗು, ಮಲಬಾರ್ ನಲ್ಲೇ ಹೆಚ್ಚು. ಮೆನನ್ ಎಂಬ ಲೇಖಕರು ಬರೆದ ಕೇರಳದ ಚರಿತ್ರೆ ಪ್ರಕಾರ ಟಿಪ್ಪು ಪ್ರಜೆಗಳ ಮುಂದೆ ಇದ್ದ ಆಯ್ಕೆ ಎರಡು- ಕುರಾನ್ ಮತ್ತು ಖಡ್ಗ.!!! ಮತಾಂಧನಾಗಿದ್ದ ಟಿಪ್ಪು ನಾಶ ಮಾಡಿದ ದೇಗುಲಗಳಿಗೆ ಲೆಕ್ಕವಿಲ್ಲ. ಹಾಗೆಯೇ ಆತ ಮಾಡಿದ ನರಮೆಧಗಳಿಗೂ! ಈ ಬಗ್ಗೆ ವಿಸ್ತೃತ ವಿವರಗಳು ಹಾಗು ಸಾಕ್ಷ್ಯಗಳ ಬಗೆಗೆ ಎಚ್.ಡಿ.ಶರ್ಮ ಅವರು ಬರೆದ ‘ದ ರಿಯಲ್ ಟಿಪ್ಪು’ ಕೃತಿಯಲ್ಲಿ ಓದಬಹುದು.
ಟಿಪ್ಪು ಪರ-ವಿರೋಧವಾಗಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ಟಿಪ್ಪು ಒಬ್ಬ ಕಟುಕ,ಮತಾಂಧ, ಹಿಂದೂ ಕ್ರಿಶ್ಚಿಯನ್ ವಿರೋಧಿ, ಕನ್ನಡ ಭಾಷಾ ವಿರೋಧಿ ಎಂಬುದು ಸಾಬೀತಾಗುತ್ತದೆ. ಅವನ ಉದ್ಧೇಶ ತನ್ನ ಆಳ್ವಿಕೆಯ ಪ್ರದೇಶವನ್ನು ಇಸ್ಲಾಮೀಕರಣಗೊಳಿಸುವುದಾಗಿತ್ತು. ಕೆಲವು ಸಾಹಿತಿಗಳು, ಬುದ್ಧಿ ಜೀವಿಗಳು ನಿಜವಾದ ಇತಿಹಾಸ ಅರಿಯದೆ ಟಿಪ್ಪುವನ್ನು ಸ್ವಾತಂತ್ರ ಹೋರಾಟಗಾರ, ಸರ್ವಧರ್ಮ ಸಹಿಷ್ಣು ಎಂದು ವರ್ಣಿಸುತ್ತಾರೆ. ಅದಕ್ಕೆ ಅವರುಗಳು ಟಿಪ್ಪು ಶೃಂಗೇರಿ ಹಾಗು ಮೇಲುಕೋಟೆ ಮಠ ದೇಗುಲಗಳಿಗೆ ದತ್ತಿ ನೀಡಿದ್ದನ್ನು ಉದಾಹರಣೆಯಾಗಿ ಕೊಡುತ್ತಾರೆ. ಆದರೆ ಇಲ್ಲಿ ಸತ್ಯ ಬೇರೆಯದೇ ಇದೆ. ಸ್ವತಃ ಟಿಪ್ಪುವಿನ ಮಗ ಹೇಳುವಂತೆ ಜಾತಕದಲ್ಲಿ ನಂಬಿಕೆಯಿದ್ದ ಟಿಪ್ಪು ತಾನು ಮಾಡಿದ ನರಮೇಧ, ಬಲವಂತದ ಮತಾಂತರ, ದೇಗುಲ ದ್ವಂಸ ಗಳಂತಹ ಪಾಪಗಳ ಕಂಟಕ ನಿವಾರಣೆಗಾಗಿ ಹಣ, ದತ್ತಿ ನೀಡಿ ಬ್ರಾಹ್ಮಣರಿಂದ ಯಜ್ಞ ಯಾಗ ಮಾಡಿಸುತ್ತಿದ್ದ. ಇಂತಹ ಸ್ವಾರ್ಥ ಉದ್ಧೇಶಕ್ಕೆ ಟಿಪ್ಪು ಶೃಂಗೇರಿ ಹಾಗು ಮೇಲುಕೋಟೆ ದೇಗುಲಗಳಿಗೆ ನೀಡಿದ ದತ್ತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ.ಅನ್ಯ ಧರ್ಮದ ದೇಗುಲಗಳಿಗೆ ದತ್ತಿ ನೀಡಿ ಇನ್ನೊಂದು ಕಡೆ ಅದೇ ಧರ್ಮದ ದೇಗುಲಗಳನ್ನು ಕೆಡುವುದು ಸಹಿಷ್ಣುತಯೇ?
ಇಂತಹ ಒಬ್ಬ ಮತಾಂಧನ ಹೆಸರಿನ ವಿವಿಯನ್ನು ನಾವು ಬೆಂಬಲಿಸಬೇಕೆ? ಆತನ ಪಾಪಗಳ ಬಗ್ಗೆ ಅರಿವಿದ್ದವರು ಹಾಗು ಅದಕ್ಕೆ ಬಲಿಯಾದವರು ನಿಜಕ್ಕೂ ಇದನ್ನು ಕ್ಷಮಿಸಲಾರರು. ಒಂದು ವೇಳೆ ಮತ್ತೊಂದು ಪ್ರತ್ಯೆಕ ಮುಸ್ಲಿಂ ವಿವಿ ಅಸ್ತಿತ್ವಕ್ಕೆ ಬಂದು ಅದಕ್ಕೆ ಟಿಪ್ಪುವಿನ ಹೆಸರು ಇಡುವುದೇ ಆದರೆ ಅದು ಭಾರತದ ೮೫ ಶೇಕಾದ ಹಿಂದೂ ಕ್ರಿಶ್ಚಿಯನ್ನರಿಗೆ ಹಾಗು ಪ್ರಜ್ಞಾವಂತ ಮುಸ್ಲಿಮರಿಗೆ ಮಾಡುವ ಘೋರ ಅವಮಾನವಾಗುತ್ತದೆ. ಅಷ್ಟಕ್ಕೂ ವಿವಿಗೆ ಟಿಪ್ಪುವಿನ ಹೆಸರೇ ಯಾಕೆ ಬೇಕು? ಸಂತ ಶಿಶುನಾಳ ಶರೀಫ, ಅಬ್ದುಲ್ ಕಲಾಮ್ ಅವರಂತಹ ಮಹಾನ್ ಗಳಿದ್ದಾರೆ. ಅದರಲ್ಲೂ ಸಂತ ಶಿಶುನಾಳ ಶರೀಫರ ಹೆಸರು ಹೆಚ್ಚು ಸೂಕ್ತವಾಗುತ್ತದೆ. ಈ ಬಗ್ಗೆ ಚಿಂತಿಸಿದರೆ ಅದೊಂದು ಉತ್ತಮ ಬೆಳವಣಿಗೆಯಾದೀತು.
ಆದರೆ ಇಲ್ಲಿ ಮತ್ತೊಮ್ಮೆ ನಾವು ಧರ್ಮಾಧಾರಿತ ಪ್ರತ್ಯೇಕ ಮುಸ್ಲಿಂ ವಿವಿಯ ಅಗತ್ಯತೆಯ ಬಗ್ಗೆ ಪ್ರಶ್ನಿಸಬೇಕಾಗುತ್ತದೆ.ಇದಕ್ಕೆ ಅವಕಾಶ ಕೊಟ್ಟರೆ ಮುಂದೊಂದು ದಿನ ಒಂದೊಂದು ಧರ್ಮಕ್ಕೆ ಪ್ರತ್ಯೇಕ ವಿವಿಗಳು ಬೇಕು ಅನ್ನುವ ಕೂಗು ಖಂಡಿತ ಕೇಳಿ ಬರಬಹುದು. ಆಗ ಸಾಮಾಜಿಕ ಸಾಮರಸ್ಯ ಮತ್ತಷ್ಟು ವಿಷಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.!!
ನಿಮ್ಮ ದೂರು ವಿಶ್ವ ವಿದ್ಯಾಲಯದ ವಿರುದ್ಧವೋ, ಅಥವಾ ದೇಶ ಕಂಡ ಅಪ್ರತಿಮ ವೀರ ಟಿಪ್ಪೂ ಸುಲ್ತಾನರ ವಿರುದ್ಧ ವಿಷಕಾರುವ “ಪದ ಭೇಧಿ” ಯೋ ಸ್ಪಷ್ಟಪಡಿಸಿ. ಈ ದೇಶದ ಮೇಲೆ ಟಿಪ್ಪೂವಿಗಿದ್ದ ಅಭಿಮಾನ ಪ್ರೀತಿ ಧ್ವೇಷ ತುಂಬಿಸಿಕೊಂಡ ಕಾಮಾಲೆ ಕಣ್ಣುಗಳಿಗೆ ಕಾಣಲು ಸಾಧ್ಯವಲ್ಲ. ಟಿಪ್ಪೂ ರವರ ಸೈನ್ಯದಲ್ಲಿ, ಆಡಳಿತದಲ್ಲಿ ಹಿಂದೂ ವರ್ಗದವರದೇ ಮೇಲುಗೈ. ಅಷ್ಟೇಕೆ ಶೃಂಗೇರಿ ಶಾರದಾ ಮಾತೆಯ ದೇವಾಲಯದ ಮೇಲೆ ಮರಾಠಿಗರು ಧಾಳಿ ಮಾಡಿ ವಿಗ್ರಹಗಳನ್ನು ಬೀದಿಗೆ ಎಸೆದಾಗ ದೇವಾಲಯದ ಆಚಾರ್ಯರು ಸಹಾಯ ಕೇಳಿದ್ದು ಟಿಪ್ಪೂ ಸುಲ್ತಾನರಲ್ಲಿ. ಟಿಪ್ಪೂ ಹಿಂದೂ ಧ್ವೇಷಿ ಯಾಗಿದ್ದರೆ ಅವರು ಸಹಾಯ ಯಾಚಿಸುತ್ತಿರಲಿಲ್ಲ.
ಟಿಪ್ಪೂ ಒಬ್ಬ ಮಹಾನ್ ಚೇತನ, ಸರಿಸಾಟಿಯಿಲ್ಲದ ಅಪ್ರತಿಮ ಶೂರ, ವೀರ, ಬ್ರಿತುಷರ ಎದೆಯಲ್ಲಿ ನಡುಕ ಹುಟ್ಟಿಸಿದ ಭಾರತ ಮಾತೆಯ ಏಕೈಕ ಕೆಚ್ಚೆದೆಯ ಕಲಿ. ಟಿಪ್ಪೂ ರವರ ವಿರುದ್ಧ ಬರೆಯೋದು ಈ ದೇಶಕ್ಕೆ ಬಗೆಯೋ ದ್ರೋಹ.
ಟಿಪ್ಪು ಪರ ಇರುವವರನ್ನು ತಮ್ಮ ವ್ಯಂಗ ಮಾತುಗಳಿಂದ ಚೆನ್ನಾಗಿ ತಿವಿದಿದ್ದಿರಿ ಭದ್ರಾವತಿಯವರೆ. ತಮ್ಮ ಒಂದೊಂದು ವಾಕ್ಯವೂ ವ್ಯಂಗವಾಗಿ ಸಕತ್ತಾಗಿದೆ, ಟಿಪ್ಪುವನ್ನು ಹೊತ್ತುಕೊಂಡು ಕುಣಿಯುವವರಿಗೆ ಉರಿ ಬಿಳುವಂತಿವೆ. ಟಿಪ್ಪುವನ್ನು ಬಹುವಚನದಿಂದ ‘ಟಿಪ್ಪೂ ರವರ, ಟಿಪ್ಪೂ ಸುಲ್ತಾನರ’ ಎಂದು ಕರೆದದ್ದು , ಅಪ್ರತಿಮ ವೀರ ಅಂದದ್ದು ಬಹಳ ಮಜ ಕೊಟ್ಟಿತು. ಮಂದೆಯೂ ಹೀಗೇ ತಮ್ಮ ಮೊನಚಾದ ವ್ಯಂಗದಿಂಧ ಈ ಹುಸಿ ಜಾತ್ಯತೀತವಾದಿಗಳ ಛಳಿ ಬಿಡಿಸುತ್ತಾ ಇರಿ. ಮತ್ತೊಮ್ಮೆ ಧನ್ಯವಾದಗಳು.
lo badravathi itihasa chennagi oodo guggu
ಭದ್ರಾವತಿಯವರೇ, ಆಡಳಿತದಲ್ಲಿ, ಸೈನ್ಯದಲ್ಲಿ ಹಿಂದೂಗಳ ಮೇಲ್ಗೈ ಇದ್ದರೆ, ಶೃಂಗೇರಿ ಆಚಾರ್ಯರು ಟಿಪ್ಪುವಿನಲ್ಲಿ ಸಹಾಯ ಕೇಳಿಬಿಟ್ಟರೆ ಮಲಬಾರಿನಲ್ಲಿ ನಡೆದ ಕೃತ್ಯಗಳು ಮಾಫಿಯಾಗಿಬಿಡುತ್ತವೆಯೇ? ಧರ್ಮದ ಆಧಾರದಲ್ಲಿ ಹತ್ಯಾಕಾಂಡ ಮಾಡಲು ಕೊಟ್ಟ ಪ್ರೇರೇಪಣೆಗಳೆಲ್ಲ ಸರಿಯಾಗಿಬಿಡುತ್ತವೆಯೇ?
ಸ್ವಾಮಿ bhadravathiಯವರೇ,
” ಟಿಪ್ಪೂ ರವರ ಸೈನ್ಯದಲ್ಲಿ, ಆಡಳಿತದಲ್ಲಿ ಹಿಂದೂ ವರ್ಗದವರದೇ ಮೇಲುಗೈ”
ಆಂಗ್ಲರ ಸೈನ್ಯದಲ್ಲಿ ಇದ್ದಿದ್ದೂ ಭಾರತೀಯರೇ ಅಲ್ಲವೇ? ಅಂದಮಾತ್ರಕ್ಕೆ ಆಂಗ್ಲರಿಗೆ ಭಾರತಪ್ರೇಮ ಇತ್ತು ಅಂತ ಹೇಳಲು ಸಾಧ್ಯವೇ? ಹಳಿ ಇಲ್ಲದೆ ರೈಲು ಬಂಡಿ ಓಡಿಸುವ ವ್ಯರ್ಥ ಪ್ರಯತ್ನ ಮಾಡದಿರಿ. ಅಮೀನ್ ಅವರು ತಮ್ಮ ಲೇಖನದಲ್ಲಿ ಪುರಾವೆಗಳನ್ನು ನೀಡಿದ್ದಾರೆ. ಗ್ರಂಥಗಳನ್ನು ಉಲ್ಲೇಖಿಸಿದ್ದಾರೆ. ಅವಲೋಕಿಸಬಹುದಲ್ಲವೇ?
ಹೊಟ್ಟೆ ಪಾಡಿಗೆ ದುಡಿಯುವ ಜನರನ್ನು ತಮಗೆ ಬೇಕಾದಂತೆ ಬಳಸಿಕೊಂಡ ಧೂರ್ತ ಉದಾಹರಣೆಗಳನ್ನು ದೇಶಪ್ರೇಮ ಧರ್ಮ ಸಹಿಷ್ಣು ಎಂದೆಲ್ಲ ಕರೆಯುವ ಮತಿಹೀನರಿಗೆ ಏನೆನ್ನಬೇಕೋ ಅರ್ಥವಾಗ್ತಾ ಇಲ್ಲ?
tipu hesarinalli vishwavidyala indige aprastuta.Ata yenu anta yellarigU avaravaru tiLidante gottu.Tipu 1790 ralli 3nE mysore yuddha sotaga buddhi bandide. kodabEkidda terige tumbalu Atanige idda mArga HindugaLE horatu bErinnAru.terige yAramEle HAkabEku badapayi janara mElallavE. AdkkAgi anivAryavAgi Aga Atana sarvadharma sahishNute horabandide. Dharmada hesarinalli AtenE alla Atanante Bahala muslim dange koraru sAmOhika mAnava HatyegaLannu mADiddAre.tipu hesarinalli VishvaviDyalayada badalu Ega AgabEkAda kelasa yAvudendare, bEre DharmagaLannu, bEre samskrutigaLannu, bEreyavara vichAragaLannu tamma dharmadanteyE gowravisuvudannu modalu makkalige kalisuva Shishu vihara bEkAgide avarige.