ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 16, 2013

ಮನದಾಳದ ಮೌನ ಮಾತಾದಾಗ : ಬಾಲ್ಯದ ಮುಗ್ಧ ಭಾವಗಳು -೧

‍ನಿಲುಮೆ ಮೂಲಕ

– ರಂಜಿತಾ

mugdteಮುಗ್ಧ ಮನಸ್ಸುಗಳ ಆ ನಮ್ಮ ಮುಗ್ಧತೆಯ ದಿನಗಳನ್ನು ನೆನಪಿಸಿಕೊಂಡರೆ ಎದೆಯಾಳದ ಕಡಲಲ್ಲಿ ಅವಿತಿರುವ ಆ ಸುಂದರ ಮುಗುಳ್ನಗೆಯು ನಮಗೆ ಅರಿವಿಲ್ಲದೆ ತುಟಿಯಂಚಿನಲ್ಲಿ , ಅಮಾವಾಸೆಯ ಕತ್ತಲಲ್ಲೂ ಚಂದ್ರನನ್ನು ಕಂಡಂತೆ ಮೂಡಿಬರುವುದು.ಆಗಿದ್ದ ಆ ನಿಷ್ಕಲ್ಮಶ ಹೃದಯಕ್ಕೆ ಈಗಿನ ಕೋಟ್ಯಂತರ ಬೆಲೆಬಾಳುವ ಸಾವಿರಾರು ಕೋಹಿನುರು ವಜ್ರಗಳ ಬೆಲೆಯೂ ಸಹ ಸರಿಸಾಟಿ ಆಗದು….
ನಕ್ಷತ್ರಗಳಂತೆ ಮಿಂಚುವ ಆ ಕಣ್ಣುಗಳ ಕಾಂತಿಯು ಪ್ರತಿಯೊಂದು ವಸ್ತುವಿನಲ್ಲು ವಿಶೇಷತೆ ಕಂಡು ಅದರ ಸೌಂಧರ್ಯವ ಆಸ್ವಾದಿಸುತಿತ್ತು.. ಅದರ ವಿಷಶತೆಯನ್ನು ಅರಿಯಲು ಮನಸ್ಸು ಚಡಪಡಿಸುತಿತ್ತು… ಆದರೆ ಇಂದಿನ ಈ ದಿನಗಳಲ್ಲಿ ವಿಶೇಷತೆಯ  ವಸ್ತುವನ್ನು ಕಂಡರೂ ಕೇವಲ ಅಥವಾ ಸಹಜ ವೆಂಬ ಪ್ರತಿಕ್ರಿಯೆ ನೀಡುತ್ತೇವೆ..

ಅಂದು ಮಾತಡುತಿದ್ದ ಆ ಮಾತುಗಳಲ್ಲಿ ಸ್ಪಷ್ಟತೆ ಕಾಣದಿದ್ದರೂ , ತೊದಲು ನುಡಿಯ ಮಾತಲ್ಲೇ ಎಲ್ಲರ ಮನ ಗೆಲ್ಲುತಿದ್ದೆವು..ಎಲ್ಲರ ಮುಗುಳ್ನಗೆಗೂ ಕಾರಣವಾಗಿರುತ್ತಿದ್ದೆವು …ತತ್ ಕ್ಷಣಕ್ಕೆ ಅವರ ಎಲ್ಲ ನೋವುಗಳನ್ನು ಮರೆತು ನಮ್ಮ ತುಂಟಾಟಗಳ ಜೊತೆ ಬೆರೆತು ನಗುವಿನ ರಥದಲ್ಲಿ ಸಂಚರಿಸುತ್ತಿದ್ದರು.. ಆದರೆ ಇಂದಿನ ನಮ್ಮ ಈ ಸ್ಪಷ್ಟವಾದ ಮಾತುಗಳು ಒಬ್ಬರಿಗೆ ಹಿತವೆನಿಸಿದರೆ ಮತ್ತೊಬ್ಬರಿಗೆ ಕಹಿ ಬೇವಿನ ರುಚಿಯನ್ನು ಪರಿಚಯಿಸುತ್ತದೆ .. ಒಬ್ಬರಿಗೆ ಸರಿ ಎನ್ಸಿದರೆ ಮತ್ತೊಬ್ಬರಿಗೆ ಆ ಸ್ಪಷ್ಟವಾದ ಮಾತಲ್ಲೂ ತಪ್ಪನ್ನು ಹುಡುಕುವ ತವಕ..

ಅಂದು ನಮ್ಮದು , ನನ್ನವರು ಎಂಬ ನಮ್ಮೊಳಗಿನ ” ಅಹಂ ವೆಂಬ ಪುಟ್ಟ ಮಾನವ ” ತನಗೆ ಹಾಗು ತನ್ನನ್ನು ಇರಿಸಿಕೊಂದವರಿಗೆ ಎಷ್ಟು ಬೇಕೋ ಅಷ್ಟಕ್ಕೇ ಮಾತ್ರ ಸೀಮಿತವಾಗಿದ್ದ ಅವನು ” ಆರೋಗ್ಯಕರ ಅಹಂ ” ಎಂಬ ಬಿರುದಿಗೆ ಮಾತ್ರ ಪಾತ್ರನಾಗಿದ್ದ , ತನ್ನ ಬೇಲಿಯೊಳಗೆ ಮಾತ್ರ ಸಂಚಾರಿಸುತಿದ್ದ.. ಆದರೆ ಇಂದು ಅದೇ ಅಹಂ ಎಂಬ ಮಾನವ ಬೆಳೆದು ದೊಡ್ಡವನಾಗಿ ನಾನು , ನನ್ನದು , ನನಗೆ ಮಾತ್ರ , ನನ್ನ ಸಂತೋಷ , ನನ್ನ ಇಷ್ಟ ಎಂಬ ಇತ್ಯಾದಿ ಗುಣಗಳನ್ನು ಬೆಳೆಸಿಕೊಂಡು ” ಆರೋಗ್ಯ ಹಾನಿಕಾರ ಅಹಂ ” ಎಂಬ ಛೀಮಾರಿ ಹಾಕಿಸಿಕೊಂಡು , ತನ್ನ ತಪ್ಪನ್ನು ತಿಳಿದಿದ್ದರೂ ತಿದ್ದಿಕೊಳ್ಳದೆ , ತನ್ನನ್ನು ಇರಿಸಿಕೊಂದವರಿಗೆ ಹಾಗು ಸುತ್ತಮುತ್ತಲಿನವರಿಗೂ ಸದಾಕಾಲ ಕೇಡು ಬಯುಸುವವನಾಗಿದ್ದಾನೆ.. ತನ್ನ ಬೇಲಿಯನ್ನು ದಾಟಿ , ಇತರರ ಬೇಲಿಯೋಲಗು  ಪ್ರವೇಶಿಸಿ ತನ್ನ ಅಟ್ಟಹಾಸವ  ಮೆರೆದು , ಕೊಪಾಗ್ನಿಯಲ್ಲಿ ಮಿಂದು ಇತರರ ಸಂತಸಕ್ಕೆ ಯಮನಾಗಿದ್ದಾನೆ….

ಅಂದು ಜಾತಿ-ಭೇದದ ಅರಿವಿಲ್ಲದ ಆ ಸ್ವಚ್ಛಂಧ ಮನಸ್ಸು , ಬಡವ – ಬಲ್ಲಿದ ಎಂಬ ತಿಳುವಳಿಕೆ ವಿಲ್ಲದ ಆ ಕನಸ್ಸು , ಒಗ್ಗಟ್ಟಿನಲ್ಲಿ ಸೊಗಸಿದೆ ಎಂಬ ಆ ಪರಿ ಜ್ಞ್ಯಾನವು , ಸಹಜತೆಯಲ್ಲಿ ಸುಂದರತೆ ಅಡಗಿದೆ ಎಂದು ಅರಿತಿದ್ದ ಆ ನದವಲಿಕೆಯು , ಕಂಗಳ ಕಾಂತಿಯಲ್ಲಿ ಕಾಣಬಯಸುವ ಆ ವಿಶೇಷತೆಗಳು , ಕುರುಪದಲ್ಲೂ ವಿಸ್ಮಯ ಕಾಣುವ ಆ ತವಕಗಳು , ತೊದಲು ನುಡಿಯಿಂದ ಚಿಮ್ಮಿಸುವ ಆ ಮುಗುಲ್ನಗೆಗಳು , ಏನಿಲ್ಲದಿದ್ದರೂ ಎಲ್ಲ ದೊರೆತಿದೆ ಎಂದು ತೃಪ್ತಿ ಪಡುವ ಆ ಮನೋಭಾವವು , ಎಲ್ಲರಲ್ಲೂ ಒಂದಾಗುವ ಆ ಸ್ನೇಹಭಾವವು , ನಿಷ್ಕಲ್ಮಶ ಪ್ರೀತಿ ತೋರುವ  ಆ ದಯಗುಣವು , ಕೇಳದೆ ಕೊಡುವ ಆ ತ್ಯಾಗಮಾಯಾ ಮಮಕಾರವು , ಹಿರಿಯರನ್ನು ಅನುಕರನಿಸುವ ಆ ಧನ್ಯತಾ ಭಾವವು .. ಇವೆಲ್ಲವೂ ಅಂದು ನಮ್ಮಲ್ಲಿ ಹಣತೆಯ ದೀಪದ ಬೆಳಕಿನಂತೆ ಪ್ರಜ್ವಲಿಸುತಿತ್ತು …

ಆ ಎಲ್ಲ ಗುಣಗಲಿದ್ದ  ನಾವುಗಳು ಇಂದು ಬೆಳೆದು ದೊಡ್ದವರಾಗಿದ್ದಿವಿ …ಆದರೆ ಅಂದು ಇದ್ದ ಸುಂದರ ಗುಣಗಳಿಗೆ , ವಿರೋಧವಾಗಿರುವ ಶತ್ರು ಗುಣಗಳನ್ನು ನಮ್ಮಲ್ಲಿ ಹುಟ್ಟಿ ಹಾಕಿಕೊಂಡು , ನಾವಲ್ಲದ , ನಮದಲ್ಲದ ಜೀವನದಲ್ಲಿ , ಭಾವನೆಗಳಿಗೆ ಬೆಲೆಕೊಡದ ಹಣ , ಮೋಹ , ದಾಹ , ಅಹಂ , ಜಿಗುಪ್ಸೆ ಕೇಡು ಇವುಗಳಿಗೆ ಶರಣಾಗಿ , ಜೀವ ವಿಲ್ಲದ , ಸತ್ವ ಕಳೆದುಕೊಂಡಿರುವ , ಯಂತ್ರ ( ಶವ ) ಗಳಂತೆ , ಈ ಸುಮಧುರ ಗಂಧ ಸೂಸುವ ಹೂಗಳನ್ನು ಬೆಳೆಸಿ ಇನ್ನೊಬ್ಬರಿಗೆ ಉಪಯೋಗವಾಗುವಂತೆ ಇರಬೇಕಿದ್ದ ತೋಟದಲ್ಲಿ , ಕೆಟ್ಟ ಗುಣಗಳು ಎಂಬ ನಾಮಾಂಕಿತ ಕ್ರೀಮಿ ಕೀಟಗಳನ್ನು  ಸ್ವಾಗತಿಸಿ , ಕುಸುಮಗಳು ಬಾಡುವಂತೆ ಮಾಡಿ , ಒಳ್ಳೆ ಗುಣಗಳನ್ನು ಘೋರಿಯಲ್ಲಿ ಸಮಾಧಿ ಮಾಡಿ ಕೆಟ್ಟ ಗುಣಗಳ ಅರಮನೆಯಾಗಿರುವ ಈ ಸ್ಮಶಾನಕ್ಕೆ ಕಾವಲು ಗಾರರಾಗಿದ್ದೇವೆ..

ದುಃಖದಲ್ಲಿ ಇರುವವರಿಗೆ ಸಾಂತ್ವನದ ನುಡಿಗಳನ್ನು ಹೇಳದೆ , ನೊಂದ ಹೃದಯಗಳಿಗೆ ಆಸರೆಯಾಗದೆ , ಎಲ್ಲರನ್ನು ಪ್ರೀತಿಸುವ ಮನವಿಲ್ಲದೆ , ಸಂಕಷ್ಟದಲ್ಲಿ ಇರುವವರಿಗೆ ಒಂಚಿತ್ತು ಕಾಳಜಿತೊರದೆ , ಆತ್ಮಿಯರ ವಿಶ್ವಾಸಕ್ಕೆ ಅರ್ಹ ನಾಗದೇ , ಸ್ನೇಹ ಭಾಂಧವ್ಯದ ಮೇಲೆ ನಂಬಿಕೆ ಇಡದೆ , ತಪ್ಪು ಮಾಡಿದವರಿಗೆ ಕ್ಷಮಭಾವ ತೋರದೆ , ಕಂಬನಿಗಳ ತುಡಿತಗಳ ಅರ್ಥ ತಿಳಿಯದೆ , ಮಿಡಿವ ಹೃದಯಗಳ ಮೌನ ಅರಿಯದೆ , ಪ್ರತಿಭೆಗಳ ಆಗರಕ್ಕೆ ಪ್ರೋತ್ಸಾಹ  ತುಂಬದೆ , ನಗಿಸಿ ನಲಿಯುವ ಗುಣವ ಕಲಿಯದೇ , ಯಾರಿಗೂ ಹಿತ ಬಯಸದೆ , ಕೇಡನ್ನೇ ಬಯಸುವ ರಾಕ್ಷಸರಂತೆ , ಹೊಟ್ಟೆ ಕಿಚ್ಚಿನ ಪ್ರವೃತ್ತಿ ಬೆಳೆಸಿಕೊಂಡು , ಹಿತೈಷಿಗಳನ್ನು ಸಹ ದ್ವೆಷಿಗಳಂತೆ ಭಾವಿಸುವ ನಾವುಗಳು , ಉಸಿರಿಲ್ಲದ ನಿರ್ಜೀವಿಗಳಂತೆ , ಪ್ರೀತಿ ಭಾವನೆಗಳ ಗಂಧ ಅರಿಯದೆ , ಮನುಕುಲದ ಹೇಡಿಗಳಂತೆ ಬದುಕಿರುವ ಶವಗಳು….

ಬೇಡದೆ ಇರೋ ವಸ್ತುಗಳನ್ನು ಪ್ರೀತಿಸಿ , ಜೀವನದ ರಥಯಾತ್ರೆಯಲ್ಲಿ ಸಂಗಡಿಗರಾಗುವ ಪ್ರೀತಿಸುವ ಮನುಕುಲವನ್ನು ವಸ್ತುಗಳಂತೆ ಉಪಯೋಗಿಸಿ , ನಡೆಸುವ ನಮ್ಮ ಈ ಅಮೂಲ್ಯವಾದ ಜೀವನ , ಸಾರ್ಥಕತೆಯ ಕಾಣುವುದೇ…????
ಜೀವನದದುದ್ದಕ್ಕುಯಾವುದರಲ್ಲೂ  ತೃಪ್ತಿ ಕಾಣದ ಈ ನಮ್ಮ ಆತ್ಮ , ಸತ್ತ ನಂತರ ಮಣ್ಣು ಪಾಲಾದಾಗ ಮುಕ್ತಿಯ ಕಾಣುವುದೇ…???
ನಾವು ನಮ್ಮ ಜೀವಿತಾವಧಿಯಲ್ಲಿ ವಂಚನೆಯಿಂದ ಸಂಪಾದಿಸಿರುವ ಹಣ , ಆಸ್ತಿ , ಅಂತಸ್ತು , ಹೊಗಳಿಕೆಯ ಮಾತುಗಳು ನಾವು ಸತ್ತ ನಂತರವೂ ನಮ್ಮನ್ನು ನಮ್ಮ ಆತ್ಮೀಯರಿಗೆ ನೆನಪಿಸುತ್ತದೆಯೇ..???
ಒಬ್ಬರಿಗೂ ಹಿತಬಯಸದ ನಮ್ಮ ಈ ಅಂತರಾತ್ಮವು , ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲು ಸಹ ಕರಿಸುವುದೇ…???
ಒಬ್ಬರ ಮನಸ್ಸಿನಲ್ಲೂ ಪ್ರೀತಿ ವಿಶ್ವಾಸದಿಂದ ಗೆಲ್ಲಲಾಗದ ಸ್ಥಳವನ್ನು , ನಾವು ಸತ್ತ ನಂತರ ನಮ್ಮನ್ನು ಹುಳುವ ಸ್ಥಳವ ಈ ಭೂದೆವಿಯು ನೀಡಲು ಸಿದ್ದಲಾಗುವಳೇ…???

ಇಂಥ ನಮದಲ್ಲದ , ನಮಗೆ ಅಹಿತಕರವಾಗಿರುವ ಜೀವನದಲ್ಲಿ  ಬದುಕುವುದು ಎಷ್ಟರ ಮಟ್ಟಿಗೆ ಸರಿ..??
ನಮಗೆ ಮುಳುವಾಗಿರುವ ಈ ಸ್ಮಶಾನ ವೆಂಬ ಜೀವನದಲ್ಲಿ ಹೇಡಿಗಳಂತೆ ಕಾವಲುಗಾರರಾಗಿ  ಬದುಕುವುದಕ್ಕಿಂತ , ಆ ಸುಂದರ ಹೂ ದೋಟದ ಜೀವನವೆಂಬ ವರದಲ್ಲಿ ಅರಸರಾಗಿ , ಭಾವನೆಗಳಿಗೆ ಬೆಲೆ ಕೊಡುವ ಹೃದಯವಂತರಾಗಿ  , ಶಾಂತಿ ಸೌಹಾರ್ದತೆ ಯಿಂದ ಬದುಕುವುದೇ ಲೇಸಲ್ಲವೇ…???

ಮನದಾಳದ ಮೌನ ಮಾತಾದಾಗ ಮೂಡಿ ಬಂದ ಸಾಲುಗಳು..

** !! ನೆನಪಿನ ನಲ್ಲೆಯ ಪಿಸುಮಾತು !! **

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments