ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 26, 2013

31

ರಾಮಸೇತು: ಭಕ್ತಿ ಭಾವನೆಯ ಜೊತೆಗೆ ಜೀವನೋಪಾಯದ ಪ್ರಶ್ನೆಯೂ ಹೌದು

‍ನಿಲುಮೆ ಮೂಲಕ

– ಅಜಿತ್ ಶೆಟ್ಟಿ,ಉಡುಪಿ

Raama Setuveರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಹಿಂದೂಗಳಿಗೆ ಧಾರ್ಮಿಕ ಪವಿತ್ರ ಗ್ರಂಥಗಳಾಗಿದ್ದು, ಈ ಎರಡೂ ಕೃತಿಗಳು ಇತಿಹಾಸದ ಕಥೆಗಳಾಗಿವೆ .ಅನಾದಿಕಾಲದಿಂದ ಮಹಾಪಂಡಿತರು, ತಿಳಿದವರು ಇವನ್ನು ಪಂಚಮವೇದವೆಂದು ಕೈ ಮುಗಿಯುತ್ತಾರೆ. ಸಾವಿರಾರು ವರ್ಷಗಳಿಂದ ಭಾರತೀಯರ ಜನಜೀವನದಲ್ಲಿ ಮಿಳಿತವಾಗಿರುವ ಈ ಪವಿತ್ರ ಗ್ರಂಥಗಳ ಯಥಾರ್ಥವೇನು ಎಂದು ಕೇಳಿದರೆ ಏನೂಂತ ಹೇಳಬೇಕು? ಆರ್ಯ-ದ್ರಾವಿಡರು ವೈರಿಗಳೆಂದು ಕಥೆ ಕಲ್ಪಿಸಿ, ರಾಮ ಯಾವ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದನೆಂದು ಸರ್ಟಿಫಿಕೇಟ್ ಕೊಡಿ,ಸಾಕ್ಷಧಾರ ಕೊಡಿ ಎನ್ನುವ ಮೂರ್ಖ ಕರುಣಾನಿಧಿಯಂಥವರಿಗೆ ಏನೆಂದು ಉತ್ತರಿಸಬೇಕು ?

ಮೊದಲು ಹಿಂದೂ ರಾಷ್ಟ್ರ ಅಖಂಡ ಭಾರತದ ಮೇಲೆ ಮಹಮದೀಯರ ಆಕ್ರಮಣವಾಯಿತು . ನಂತರ ವ್ಯವಹಾರಕ್ಕೆ ಬಂದ ಕ್ರೈಸ್ತ ಯುರೋಪಿಯನ್ನರ ಆಕ್ರಮಣ . ಮಹಮದೀಯರು ಹೆದರಿಸಿ ಬೆದರಿಸಿ,ಕೊಲೆ ಸುಲಿಗೆ ಮಾಡುತ್ತ ನಮ್ಮ ಸಂಪತ್ತು ಲೂಟಿ ಹೊಡೆದರು.ಮೋಸದಿಂದ, ವಿಶ್ವಾಸಘಾತುಕ ಕೆಲಸದಿಂದ,ಕುಟಿಲ ತಂತ್ರದಿಂದ ಹಿಂದೂ ದೊರೆಗಳನ್ನು ಸೋಲಿಸಿ,ಪ್ರಜೆಗಳನ್ನು ಹೆದರಿಸಿ,ಒಪ್ಪದವರ ಕೊಲೆ ಮಾಡಿ ಅವರ ಮತ ಪ್ರಚಾರ ಮಾಡಿ ಮತಾಂತರಿಸಿದರು.ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ್,ತುಘಲಕ್ ಅವರಿಂದ ಟಿಪ್ಪುವಿನವರೆಗೆ ಎಲ್ಲರೂ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣದ ಆಡಳಿತ ನಡೆಸಿದವರೇ. ಅದಕ್ಕೆ ಇರಬೇಕು ವಿಲ್ ದುರಂಟ್ STORY OF CIVILIZATION ಕೃತಿಯಲ್ಲಿ ಭಾರತದ ಮೇಲೆ ನಡೆದ ಇಸ್ಲಾಮಿನ ಆಕ್ರಮಣ ವಿಶ್ವದ ಇತಿಹಾಸದ ಅತ್ಯಂತ ರಕ್ತಸಿಕ್ತ ಅದ್ಯಾಯವೆಂದಿದ್ದು.ಯುರೋಪಿಯನ್ನರು ಭಾರತೀಯರ ಶಕ್ತಿ ಅಡಗಿರುವುದು ಭಾರತೀಯ ಸಂಸ್ಕೃತಿಯಲ್ಲಿ ಎಂದು ಮನಗಂಡು ಹಿಂಸಾ ಮಾರ್ಗವನ್ನು ಬದಿಗಿಟ್ಟು, ಹಿಂದೂ ನಂಬಿಕೆ , ಅಚಾರ ವಿಚಾರ ದೇವರನ್ನು ಪ್ರಶ್ನಿಸುತ್ತಾ,ಲೇವಡಿ ಮಾಡುತ್ತ,ಹಣದ ಆಮಿಷವೊಡ್ಡಿ ಮಿಷನರಿಗಳ ಮೂಲಕ ಉಪಾಯದಿಂದ ಮತಾಂತರದ ಕ್ರೈಸ್ತಿಕರಣಕ್ಕೆ ಮುಂದಾದರು.ಹಿಂದೂ ಧರ್ಮ ಪ್ರಸಾರಕ್ಕೆ ಇಲ್ಲಿತನಕ ಎಲ್ಲಿಯೂ ಹಿಂದೂಗಳು ಯುದ್ದ ಮಾಡಿಲ್ಲ,ಇನ್ನೊಂದು ಧರ್ಮವನ್ನು ನಿಂದಿಸಿಲ್ಲ ತೀರ ವಿಪರೀತವಾಗುತ್ತಿದೆ,ಸ್ವಾಭಿಮಾನಕ್ಕೆ ದಕ್ಕೆಯಾಗುತ್ತಿದೆ ಎಂದೆನಿಸಿದಾಗ ಅದಕ್ಕೆ ಉತ್ತರಿಸಿದ್ದಾರೆ.

ಹೀಗೆ ನೂರಾರು ವರ್ಷಗಳ ಕಾಲ ಕ್ರೈಸ್ತ ಮಹಮದೀಯರ ಆಕ್ರಮಣದಲ್ಲಿ ಬೆಂದು ಬೆಂಡಾಗಿರುವ ಭಾರತ ಸ್ವಾತಂತ್ರ್ಯ ನಂತರ ಈ ಸ್ವಯಂ ಘೋಷಿತ ಪ್ರಗತಿಪರರು,ಬುದ್ದಿಜೀವಿಗಳು ಹಾಗು ಜಾತ್ಯಾತೀತ ಎಂದು ಕರೆಸಿಕೊಳ್ಳುವ ವೋಟು ಬ್ಯಾಂಕ್ ರಾಜಕಾರಣಿಗಳ ದುರಾಡಳಿತ ಎದುರಿಸಬೇಕಾಗಿದೆ. ಈ ಡೋಂಗಿ ಜಾತ್ಯಾತೀತರೇ ಕ್ರೈಸ್ತ ಮಹಮದೀಯರ ಮುಂದುವರಿದ ಭಾಗ !!!

ಹಿಂದೂಗಳ ಧಾರ್ಮಿಕ ವಿಷಯದಲ್ಲಿ ಈ ಜಾತ್ಯಾತೀತರು, ಅವರ ಸರಕಾರ ನೇರ ಹಸ್ತಕ್ಷೇಪ ಮಾಡುತ್ತಿವೆ.ರಾಜ್ಯದ ೩೪೦೦೦ ರಕ್ಕೂ ಅಧಿಕ ಹಿಂದೂ ದೇವಸ್ಥಾನಗಳು ಸರಕಾರೀಕರಣಗೊಂಡಿವೆ.ಈ ಹಿಂದೂ ದೇವಸ್ಥಾನದಿಂದ ಬರುವ ಆದಾಯ ವನ್ನು ಇವರ ಭ್ರಷ್ಟಾಚಾರಕ್ಕೆ ಉಪಯೋಗಿಸಿಕೊಂಡು,ಇನ್ಯಾರಿಗೋ ಅನುದಾನ ಕೊಡುವಾಗ ಈ ಜಾತ್ಯಾತೀತರಿಗೆ ರಾಮ ಎಲ್ಲಿ ಹುಟ್ಟಿದ್ದು , ಯಾವ ಕಾಲೇಜ್ ನಲ್ಲಿ ಕಲಿತದ್ದು ಯಾವುದು ಮುಖ್ಯಾವಾಗುವದಿಲ್ಲ . ಹಿಂದೂ ಧರ್ಮದ ಅಪ್ಪ ಅಮ್ಮ ಯಾರು , ಅದು ಒಂದು ಧರ್ಮನ ಎಂದು ಸಾರ್ವಜನಿಕ ವಾಗಿ ಧರ್ಮ ನಿಂದನೆ ಮಾಡಿದವರ ವಿರುದ್ದ ಯಾವ ಜವಾಬ್ಧಾರಿಯುತರು ಕ್ರಮ ತೆಗೆದುಕೊಳ್ಳೋಲ್ಲ. ಅದೇ ಮುಸ್ಲಿಂ ದೇಶದಲ್ಲಿ ಇಸ್ಲಾಂ ಅನ್ನು ಪ್ರಶ್ನಿಸುವಂತಿಲ್ಲ. ಅಮೆರಿಕಾದಂಥ ಮುಂದುವರಿದ ರಾಷ್ಟ್ರಗಳಲ್ಲಿ ಕ್ರೈಸ್ತ ಧರ್ಮದ ಬಗ್ಗೆ ಹಗುರವಾಗಿ ಮಾತಾಡಿದರೆ,ಅಪಪ್ರಚಾರ ಮಾಡಿದರೆ ಜೀಸಸ್ ಬಗ್ಗೆ ದೂಷಣೆ ಮಾಡಿದರೆ,ಮತ ಧರ್ಮವನ್ನು ದಿಕ್ಕರಿಸಿದರೆ ಅರು ಸಾವಿರ ಡಾಲರ್ ದಂಡ ಅಥವಾ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ.

ಇನ್ನು ಕ್ರೈಸ್ತ , ಮಹಮದೀಯರ ಮುಂದುವರಿದ ಭಾಗವಾದ ಈ ಕೇಂದ್ರ ಸರ್ಕಾರ ಹಿಂದೂಗಳ ಭಾವನೆಯನ್ನು ದಿಕ್ಕರಿಸಿ ರಾಮ ಸೇತು ಒಡೆಯಲು ಮುಂದಾಗಿದೆ . ವಾಲ್ಮೀಕಿ ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿದ ರಾವಣನನ್ನು ಸಂಹರಿಸಿ, ಸೀತೆಯನ್ನು ಕರೆತರಲು ರಾಮ ತನ್ನ ವಾನರ ಸೈನ್ಯವನ್ನು ಕರೆದೋಯ್ಯಲು ನಿರ್ಮಿಸಿದ ಸೇತುವೆಯೇ “ರಾಮ ಸೇತು ” .ಶ್ರೀ ರಾಮನು ಇದನ್ನು ನಳ ಸೇತುವೆಂದು ಕರೆದನು.೫೨೦೦ BCE ೭೨೦೦ ವರ್ಷಗಳ ಹಿಂದೆ ಹನುಮಂತ ಪರ್ವತ ಹೊತ್ತು ತಂದರೆ,ಕಪಿಗಳು ಸಣ್ಣ ಸಣ್ಣ ಕಲ್ಲು ತಂದವು.ಅಳಿಲು ಮೈ ಮೇಲಿನ ಹಸಿ ಮರಳನ್ನು ಕೊಡವಿ ಈ ಸೇತುವೆ ನಿರ್ಮಾಣದಲ್ಲಿ ಶ್ರೀ ರಾಮನಿಗೆ ಸಹಾಯ ಮಾಡಿದವು . ಈ ಸೇತುವೆಯಲ್ಲಿ ಭಕ್ತಿಯ ಸ್ವಾಮಿ ನಿಷ್ಠೆಯ ಪ್ರತೀಕವಿದೆ. ಅದೆಲ್ಲಾ ದಿನಕೊಂದು ನಾಯಕರ ಹಿಂದೆ ತಿರುಗುವ , ಚುನಾವಣೆಗೊಂದು ಪಕ್ಷ ಬದಲಿಸುವವರಿಗೆ ಅರ್ಥವಾಗೋಲ್ಲ . ಇಗಾಗಲೇ ದೇಶದ ಖನಿಜ ಸಂಪತ್ತು ಲೂಟಿ ಮಾಡಿ ಗಣಿ ಬರಿದು ಮಾಡಿದವರು ಇಗ ಕೇರಳ ಮತ್ತು ತಮಿಳುನಾಡಿನಲ್ಲಿ ಸಿಗುವ ಥೋರಿಯಂವನ್ನು ವಿದೇಶಕ್ಕೆ ಸಾಗಿಸುವ ಹುನ್ನಾರಿನಲ್ಲಿದ್ದಾರೆ. ಅದೇ ಕಾರಣಕ್ಕೆ ಅಡ್ಡವಾಗಿರುವ ರಾಮ ಸೇತುವನ್ನು ಒಡೆಯಲು ಮುಂದಾಗಿದ್ದು .

ಹದಿನಾಲ್ಕನೇ ಶತಮಾನದವರೆಗೆ ಭಾರತದಿಂದ ಲಂಕೆಗೆ ನಡೆದುಕೊಂಡು ಹೋಗಲು ಈ ರಾಮ ಸೇತು ಬಳಕೆಯಾಗುತ್ತಿತ್ತು . ಕಲ್ಯಾಣ ಚಾಲುಕ್ಯ ಚಕ್ರವರ್ತಿ ಸೋಮೇಶ್ವರನ ಮಾನಸೋಲ್ಲಾಸ (೧೧೨೯) ಎಂಬ ಸಂಸ್ಕೃತ ವಿಶ್ವಕೋಶ ಗ್ರಂಥದಲ್ಲಿ ಈ ಮಹಾ ಸೇತುವೆಯನ್ನು ಉಲ್ಲೇಖಿಸಲಾಗಿದೆ ಎಂದು ಖ್ಯಾತ ಸಂಶೋದಕ ಸಾಹಿತಿ ಚಿದಾನಂದಮೂರ್ತಿ ಯವರು ಹೇಳುತ್ತಾರೆ.ಹಾಗೂ ಅಲ್ಲಿನ ಮಾನವ ನಿರ್ಮಿತ ಸೇತುವೆ ಇಗ ಕಾಣಿಸದಿದ್ದರೂ ಹಿಂದೆ ಅಲ್ಲಿ ಇದ್ದದ್ದೂ ನಿಜವೆಂದು,ಅದು ಪ್ರಕೃತಿ ದತ್ತ ವಾದ ಕಲ್ಲು ಬಂಡೆ ಗಳಿಂದ ಕೂಡಿದ ಜಾಗವಲ್ಲವೆಂದು ೧೯೬೬ ರಲ್ಲಿ NASA ಜೆಮಿನಿ ಗಗನ ನೌಕೆ ನಾಲ್ಕುಸಾವಿರದ ನೂರ ಹತ್ತು ಮೈಲಿ ಎತ್ತರದಿಂದ ತೆಗೆದ ಚಿತ್ರ ಸ್ಪಷ್ಟಪಡಿಸುತ್ತದೆ.

ನಿಮಗೆ ನೆನಪಿರ ಬಹುದು ಕೊಂಕಣ ರೈಲ್ವೆ ಹಾದು ಹೋಗುವ ಮಾರ್ಗದಲ್ಲಿ ಚರ್ಚ್ ಇದೆಯೆಂದು ಗೋವಾ ದಲ್ಲಿ ಮಾರ್ಗವನ್ನು ಬದಲಿಸಲಾಗಿತ್ತು . ಮೈಸೂರು-ಬೆಂಗಳೂರು ಜೋಡಿ ರೈಲ್ವೆ ಮಾರ್ಗಕಾರ್ಯ ಈಗ ಪ್ರಗತಿಯಲ್ಲಿದೆ . ಈ ಮಾರ್ಗಕ್ಕೆ ಶ್ರೀರಂಗ ಪಟ್ಟಣದ ಸಮೀಪ ಟಿಪ್ಪು ಶಸ್ತ್ರಗಾರ ಕಟ್ಟಡವೊಂದು ಅಡ್ಡ ಬರುತಿದ್ದು,ಹಳಿಯ ಮಾರ್ಗ ಬದಲಿಸಬೇಕಿಂದು ಮುಸ್ಲಿಂ ಸಂಘಟನೆಗಳು ಪಟ್ಟು ಹಿಡಿದಿವೆ.ಕೆಲಸ ನಿಂತಿದೆ, ಹಳಿ ಬದಲಾದರೆ ವಿಶೇಷವಿಲ್ಲ.ಶಬರಿ ಮಲೆಗೆ ಹೋಗುವ ಕೊಟ್ಟಾಯಂ -ಎರುಮಲೆರೈಲ್ವೆ ಮಾರ್ಗ ನಕ್ಷೆ ರೈಲ್ವೆ ಇಲಾಖೆ ದಶಕದ ಹಿಂದೆ ಸಿದ್ದಪಡಿಸಿದೆ.ಈ ರೈಲ್ವೆ ಮಾರ್ಗವು ಕ್ರಿಸ್ಟಿಯನ್ ಬಹುಸಂಖ್ಯಾತರಿರುವ ಪ್ರದೇಶದ ಮೂಲಕ ಹಾದು ಹೋಗುವದರಿಂದ ಕೇರಳ ಸರ್ಕಾರ ಈ ಯೋಜನೆ ತಡೆ ಹಿಡಿದಿದೆ.ಈ ರೈಲು ಮಾರ್ಗವಾದರೆ ಸಹಾಯವಾಗುವುದು ಕೋಟ್ಯಂತರ ಅಯ್ಯಪ್ಪ ಭಕ್ತ ಹಿಂದುಗಳಿಗೆ. ಅದೇ ಅಭಿವೃದ್ದಿ ಹೆಸರಲ್ಲಿ ದೇಶದಲ್ಲಿ ಸಾಕಷ್ಟು ಹಿಂದೂ ದೇವಾಲಯವನ್ನು ನೆಲಸಮ ಮಾಡಲಾಗಿದೆ .

ವೈಜ್ಜಾನಿಕ ದೃಷ್ಟಿಯಿಂದ ನೋಡಿದರೂ ಸಮುದ್ರದಲ್ಲಿ ಮುಳುಗಿರುವ ಈ ಸೇತು ದ್ವಂಸ ಮಾಡಿದರೆ ಸಾವಿರಾರು ಸಮುದ್ರ ಜಂತುಗಳು ನಾಶವಾಗುತ್ತವೆ , ತಮಿಳುನಾಡು ತೀರ ಪ್ರದೇಶ ಸುನಾಮಿಯಂತ ಅಬ್ಬರಕ್ಕೆ ಇಡಾಗುವ ಸಾದ್ಯತೆ ಇದೆ . ಅಲ್ಲದೇ ಸಾವಿರಾರು ಮೀನುಗಾರ ಕುಟುಂಬ ಗಳು ಉದ್ಯೋಗ ಕಳೆದು ಕೊಳ್ಳುತ್ತವೆ. ಹೀಗೆ ಜನರ ಶ್ರದ್ದೆ ನಂಬಿಕೆ ಭಕ್ತಿ ಭಾವನೆ,ಜೀವನೋಪಾಯ,ರಕ್ಷಣೆ ಮಾಡುತ್ತಿರುವ ರಾಮ ಸೇತು ಸಂರಕ್ಷಣೆ ಕೆಲಸ ಪ್ರತಿಯೊಬ್ಬ ಭಾರತೀಯನದ್ದು.ರಾಮ ಸೇತುವಿನ ವಿನಃ ನಾವು ರಾಮಾಯಣವನ್ನು ಕಲ್ಪಿಸಿ ಕೊಳ್ಳಲಾಗದು.ಕೋಟ್ಯಂತರ ಹಿಂದೂಗಳ ಭಾವನೆ,ನಂಬಿಕೆ ಈ ಸೇತುವಲ್ಲಿ ಅಡಕವಾಗಿದೆ.ಕೇಂದ್ರ ಸರಕಾರ ವಿವೇಕದಿಂದ ವರ್ತಿಸಿ ಈ ಯೋಜನೆ ಕೈಬಿಡಬೇಕಾಗಿದೆ .

31 ಟಿಪ್ಪಣಿಗಳು Post a comment
 1. Santhosh Shetty
  ಫೆಬ್ರ 26 2013

  ಲೇಖನ ಹಲವಾರು ತಪ್ಪಾದ ಗ್ರಹಿಕೆಗಳನ್ನು ಹೊಂದಿದ್ದರೂ ಸಹ ಅದರ ಒಂದು ಭಾಗವಂತೂ ಕಠೋರ ಸತ್ಯವನ್ನು ಹೊರಹಾಕಿದೆ, ಆ ಪ್ಯಾರಾಕ್ಕೆ ನನ್ನ ಸಾವಿರ ಲೈಕ್ಸ್…

  “ಹೀಗೆ ನೂರಾರು ವರ್ಷಗಳ ಕಾಲ ಕ್ರೈಸ್ತ ಮಹಮದೀಯರ ಆಕ್ರಮಣದಲ್ಲಿ ಬೆಂದು ಬೆಂಡಾಗಿರುವ ಭಾರತ ಸ್ವಾತಂತ್ರ್ಯ ನಂತರ ಈ ಸ್ವಯಂ ಘೋಷಿತ ಪ್ರಗತಿಪರರು,ಬುದ್ದಿಜೀವಿಗಳು ಹಾಗು ಜಾತ್ಯಾತೀತ ಎಂದು ಕರೆಸಿಕೊಳ್ಳುವ ವೋಟು ಬ್ಯಾಂಕ್ ರಾಜಕಾರಣಿಗಳ ದುರಾಡಳಿತ ಎದುರಿಸಬೇಕಾಗಿದೆ. ಈ ಡೋಂಗಿ ಜಾತ್ಯಾತೀತರೇ ಕ್ರೈಸ್ತ ಮಹಮದೀಯರ ಮುಂದುವರಿದ ಭಾಗ !!!”

  ಉತ್ತರ
  • Gopalakrishna Bhagwat
   ಆಗಸ್ಟ್ 3 2013

   Mr. Santhosh Shetty the wordings u have quoted above hv all become cliché and this statement is far from truth. You provide evidences and prove it. There is no logic in ur argument and it is just emotional and bombastic with divisive message that’s all.

   ಉತ್ತರ
 2. ಒಳ್ಳೇ ಕಾಗಕ್ಕ-ಗೂಬಕ್ಕನ ಕತೆ ಓದಿದ ಹಾಗಾಯಿತು. ಹನುಮಂತ ಬೆಟ್ಟ ಕಿತ್ತು ತಂದನಂತೆ, ಕೋತಿಗಳು ಚಿಕ್ಕ ಕಲ್ಲುಗಳನ್ನು ತಂದವಂತೆ, ಅಳಿಲು ಮರಳು ತಂದಿತಂತೆ, ಇದು ಇತಿಯಾಸವಂತೆ!! ಈ ಆಗಲಕಾಯಿಗೆ ಸಾಕ್ಶಿ ಯಾರು? ಚಿದಾನಂದ ಮೂರ್ತಿ ಎಂಬ ಬೇವಿನ ಕಾಯಿ!! ಈ ಅಂಕಣಕಾರ ವಯ್ದಿಕ ಸಂಸ್ಕ್ರುತಿಯೇ ಬಾರತೀಯ ಸಂಸ್ಕ್ರುತಿ ಅಂದುಕೊಂಡಿರುವ ಮತ್ತೊಬ್ಬ ಶೆಟ್ಟಿ!! ಇಂತಾ ಶೆಟ್ಟಿಗಳು ಹೆಚ್ಚುತ್ತಿರುವದರಿಂದಲೇ ಇರಬೇಕು ಬೂತಕೊಲಗಳು ತಮ್ಮ ಇತಿಯಾಸ/ಪುರಾಣಗಳನ್ನೇ ಬದಲಾಯಿಸಿಕೊಂಡು ಬ್ರಮ್ಮಕಳಸಗಳನ್ನ ಹೊತ್ತುಕೊಂಡು ತಿರುಗುತ್ತಿರುವುದು. ಬರಹ ಬರೆದು ಅಚ್ಚಾಕುವಾಗ ಕಣ್ಣಿಗೆ ರಾಚುವ ಸುಳ್ಳುಗಳನ್ನು ಬರೆಯಬಾರದು ಎಂದು ಗೊತ್ತಾಗೋಲ್ವೆ? ಅಮೇರಿಕಾದ ಸಿನೆಮಾಗಳಲ್ಲಿ ಜೀಸಸ್ ಸಗ್ಗದೊಳಗೆ ಹುಡುಗಿಯರ ಜೊತೆ ಮೋಜು ಮಾಡುತ್ತಿರುವಂತೆ ತೋರಿಸುತ್ತಾರೆ. ಮಾತು ಮಾತಿಗೆ ಜೀಸಸ್ ಪಕಿಂಗ್ ಕ್ರಯ್ಸ್ಟ್ ಅಂತಾರೆ. ಯಾರೂ ತಲೆಕೆಡಿಸಿಕೊಳಲ್ಲ. ಇಲ್ಲಿನ ಸಿನೆಮಾಗಳಲ್ಲಿ, ಜೋಕುಗಳಲ್ಲಿ, ಚರ್ಚೆಗಳಲ್ಲಿ ಜೀಸನ್ನನ್ನು ತೆಗಳಿರುವಶ್ಟು ಬೇರ್ಯಾರನ್ನು ತೆಗಳಿರುವುದ ನಾ ಕಂಡಿಲ್ಲ. ಪೋಪ್ ಎರಡನೇ ಸ್ತಾನದಲ್ಲಿರಬಹುದು. ರಾಮನ ಬಗ್ಗೆ ಹಾಗೇನಾದರೂ ಮಾಡಿದ್ದಲ್ಲಿ ಹಳೇ ಶೆಟ್ಟಿ/ಹೊಸ ಬ್ರಾಮಣರು ಈಕರಿಕೊಂಡು ಮಯ್ಯೆಲ್ಲಾ ಪರಚಿಕೊಂಡುಬಿಡುತ್ತಿದ್ದರೇನೋ. ಸಾಬರ ದೇಶಗಳಲ್ಲಿ ಸಾಬರು ಮಾಡೋಹಾಗೇ ಬಾರತದಲ್ಲಿ ಹಿಂದುಗಳು ಮಾಡಬೇಕು ಅನ್ನೋದು ನಾಚಿಕೆಗೇಡಿನ ಮನಸ್ತಿತಿ. ಯಾರನ್ನ ಮಾದರಿಯಾಗಿ ಇಟ್ಟುಕೊಳ್ಳಬೇಕು ಅನ್ನೋ ಹಾದಿತಿಳುವಳಿಕೆಯೂ ಇರಬಾರದೇ? ರಾಮಾಯಣದಲ್ಲಿ ದಕ್ಶಿಣಬಾರತದವರನ್ನ ತೋರಿಸಿರೂ ಹಾಗೇ ಈ ಲೇಕನ ಬರೆದ ಶೆಟ್ಟರು ಸ್ವಂತ ಬುದ್ದಿಯಿಲ್ಲದ/ಬಕ್ತ ಬುದ್ದಿಯ ಕೋತಿಯೋ ಇಲ್ಲಾ ಮಂದ-ಮೂಳೆಯ ತಲೆಯ ರಕ್ಕಸನೋ ಇರಬೇಕು. ಸ್ವತಂತ್ರ ಬುದ್ದಿ ಇರೋರು ಬರೆಯೋ ಅಂಕಣವೇ ಇದು?

  ಉತ್ತರ
  • ಫೆಬ್ರ 27 2013

   ನಾನು ಈ ಲೇಖನದಲ್ಲಿ ಹೇಳಿರುವಂತೆ ಮಹಮದಿಯರ ಆಕ್ರಮಣ , ಕ್ರೈಸ್ತಿಕರಣ ದಿಂದ ಬೆಂಡಾದ ಭಾರತದಲ್ಲಿ ನಾಸ್ತಿಕ ಭಾವನೆಗಳು , ವಿಮರ್ಶನ ಧೋರಣೆ ಹುಟ್ಟುವುದು ಸಹಜ . ಆ ವಿಮರ್ಶೆಗಳು ವಿಮರ್ಶೆ ಯಾಗಿರಬೇಕೆ ವಿನಃ ವಾಕರಿಕೆ , ವಾಂತಿ, ಪೂರ್ವಗ್ರಹ ಪೀಡಿತ ಹೇಳಿಕೆ ಯಾಗಿರ ಬಾರದು . ಸಿದ್ದರಾಜು ಬೋರೆ ಗೌಡ್ರೆ ನಾನು ನಿಮ್ಮ ಮಟ್ಟಕ್ಕೆ ಬಂದು ಕಾಮೆಂಟ್ ಮಾಡುವುದಿಲ್ಲ , ಅದು ನನಗೆ ಹೇಳಿಸಿದ್ದು ಅಲ್ಲಾ … ಲೇಖನವೋದಿ ಮೈ ಪರಚಿ ಕೊಂಡಿದ್ದು ಯಾರೆಂದು ನಿಮ್ಮ ಕಾಮೆಂಟ್ ಸಾರಿ ಸಾರಿ ಹೇಳೋತ್ತೆ . ಯಾರು ಸ್ವಂತ ಬುದ್ದಿಯಿಲ್ಲದ/ಬಕ್ತ ಬುದ್ದಿಯ ಕೋತಿಯೋ ಇಲ್ಲಾ ಮಂದ-ಮೂಳೆಯ ತಲೆಯ ರಕ್ಕಸನೋ ಎಂದು ಓದುಗರು ತೀರ್ಮಾನಿಸುತ್ತಾರೆ . ಇನ್ನೂ ಜಾತಿ ವಿಷಯ ಈ ಶೆಟ್ಟಿ (ಬಂಟ್ ) ಹೆಚ್ಚಿರುದರಿಂದ ಹಾಗೂ ಅವರೂ ಇತರ ಹಿಂದುಗಳೊಂದಿಗೆ ಬೇರೆಯುದರಿಂದ ನಮ್ಮ ಕರಾವಳಿ ಯಲ್ಲಿ ಸಂಸ್ಕೃತಿ ಉಳಿದಿರೋದು .

   ಉತ್ತರ
   • ಬೇರೆ ದೇಶಗಳಿಗೆ ಹೋಲಿಸಿದರೆ ನಾಸ್ತಿಕ ದೋರಣೆಗಳು ಬೆಂಡಾದ ಬಾರತದಲ್ಲೇ ಕಮ್ಮಿ! ನಾಸ್ತಿಕತೆಗೂ ಮಾನವ ಅಬಿವ್ರುದ್ದಿ ಸೂಚ್ಯಕ್ಕೂ ನೇರವಾದ ಸಂಬಂದ ಇದೆ. ಯಾವ ದೇಶಗಳಲ್ಲಿ ಓದಿರುವ ಹಯ್ದ ‘ದೇವಸ್ತಾನಗಳಿಗೆ ಆಗುತ್ತಿರುವ ಅನ್ಯಾಯದ’ ಬದಲು ‘ಸವ್ಚಾಲಯಗಳಿಗೆ ಆಗುತ್ತಿರುವ ಅನ್ಯಾಯದ’ ಮೇಲೆ ಯೋಚಿಸುವನೂ ಆ ದೇಶಗಳು ಮುಂದುವರಿದಿವೆ. ಅಲ್ಲಿಯ ಜನಗಳು ಏಳಿಗೆ ಹೊಂದಿದ್ದಾರೆ. ಯಾವ ದೇಶದ ಹಯ್ಕಳು ಎಳವೆಯಿಂದಲೇ ಮೂಡಾತ್ಮರ ಬಲೆಗೆ ಬೀಳುತ್ತಾರೋ ಆ ದೇಶಗಳು ಬಾರತ ಪಾಕಿಸ್ತಾನದಂತಿರುತ್ತವೆ. ಬೆಂಡಾದ ಬಾರತದಲ್ಲಿ ಓದಿದ ಹರೆಯದ ಹಯ್ಕಳಿರಲಿ, ಸಂಬಳಕ್ಕೆ ಕೆಲಸ ಮಾಡೋ ಹಲವು ವಿಗ್ನಾನಿಗಳಲ್ಲೇ ವಯ್ಗ್ಯಾನಿಕತೆ ಇಲ್ಲ. ನನ್ನ ಮಟ್ಟಕ್ಕೆ ಬಂದು ಕಮೆಂಟ್ ಮಾಡುವುದಕ್ಕೆ ಕಾಗಕ್ಕ-ಗೂಬಕ್ಕನ ಕತೆ ಎಣೆಯುವ ನಿಮ್ಮಲ್ಲಿ ಯಾವ ಸೀಮೆಯ ಬವ್ದಿಕ ಬಂಡವಾಳವೂ ಇಲ್ಲ. ಶೆಟ್ಟರ ಜಾತಿಯಲ್ಲಿ ಹುಟ್ಟಿದ್ದರೂ ವಯ್ದಿಕ-ಅಡಿಯಾಳುಗಳಾಗುವವರು (ರಾಮನ ಬಂಟ ಹನುಮಂತನಂತೆ) ಹೆಚ್ಚುತ್ತಿರುವುದರಿಂದ ಬಂಟರ ಅಸಲು ಸಂಸ್ಕ್ರುತಿ ಬ್ರಮ್ಮಕಳಸವಾಗ್ತಿರೂದು! ಓದುಗರು ತೀರ್ಮಾನಿಸೋಕೆ ಏನು ಉಳಿದಿದೆ? ಬಕ್ತಕಮಂಗಿಗಳು, ದಡ್ಡರಕ್ಕಸರು ಯಾರೆಂದು ರಾಮಾಯಣ ತೀರ್ಮಾನಿಸಿಬಿಟ್ಟಿದೆ. ಅದು ರಾಮಾಯಣವನ್ನ ಒಪ್ಪಿ ಇತಿಯಾಸ ಎನ್ನುವ ನೀವೇ!!

    ಉತ್ತರ
    • ಫೆಬ್ರ 27 2013

     ಹಿಂದೂ ಧರ್ಮ , ರಾಮಾಯಣ , ಮಹಾಭಾರತ ಕೇವಲ ಒಂದು ಜಾತಿಗೆ ಸಂಬಂಧ ಪಟ್ಟಿದ್ದು ಎಂದು ತಿಳಿದಿರುವುದು ನಿಮ್ಮ ಸಣ್ಣ ಬುದ್ದಿ . ಬಂಟ ನಾಗಿ ಹೇಗಿರಬೇಕೋ ಬೇಕೋ ಹಾಗೇ ಇದ್ದೀನಿ (ನೀವು ಜಾತಿ ವಿಷಯ ಹೇಳಿದ್ದರಿಂದ ನಾನು ಜಾತಿ ವಿಷಯ ಪ್ರಸ್ತಾಪಿಸಿದ್ದು) ನಾನು ಯಾರ ಅಡಿಯಾಳು ಅಲ್ಲ . ಚರ್ಚೆ ವಿಷಯದ ಮೇಲೆ ಇರಲಿ , ವಯುಕ್ತಿಕ ಮತ್ತು ಜಾತಿ ಇದರ ಬಗ್ಗೆ ಹೋಗದಿರಲಿ . ನೀವು ರಾಮ, ಹನುಮಂತ, ರಾಮಾಯಣ , ಮಹಾಭಾರತ ಒಪ್ಪಿ -ಬಿಡಿ . ನಿಮ್ಮ ಇಷ್ಟ ಆದರೆ ಅದನ್ನು ಒಪ್ಪುವ ಕೋಟ್ಯಂತರ ಜನರ ಭಾವನೆಗೆ ಘಾಸಿ ಯಾಗುವಂತೆ ಖಂಡಿಸುವ ಹಕ್ಕಂತ್ತು ತಮಗಿಲ್ಲ .

     ಉತ್ತರ
     • vijay
      ಫೆಬ್ರ 27 2013

      well done Ajit shetree , tegalikege kuggadhe, hogalikege kuggadhe, neev nimma karyadhalli. niratharagiri..

      ಉತ್ತರ
      • Siddaraju Boregowda
       ಫೆಬ್ರ 27 2013

       tegalikege kuggadhe, hogalikege kuggadhe!!

       ಉತ್ತರ
     • ಅಯ್ಯೋ ಶೆಟ್ರೇ,
      ಹಿಂದೂ ಮತ, ರಾಮಾಯಣ, ಮಹಾಬಾರತ ಕೇವಲ ಒಂದೇ ಜಾತಿಗೆ ಸೇರಿದ್ದು ಎಂದು ನಾನೆಲ್ಲಿ ಹೇಳಿದೆ? ಅವುಗಳು ಎಲ್ಲಾ ಜಾತಿಗೆ ಸೇರಿದ್ದು ಮಾತ್ರವಲ್ಲ, ಕೋತಿ, ಕರಡಿ, ಎಮ್ಮೆ, ಎಮ್ಮೆ-ಮನುಶ್ಯನ ಮಿಶ್ರತಳಿ, ಕರಡಿ-ಮನುಶ್ಯನ ಮಿಶ್ರತಳಿ ಮುಂತಾದ ಎಲ್ಲರಿಗೂ ಸೇರಿದ್ದು. ಅವುಗಳಲ್ಲಿ ಪೂಜಿಸುವ ಬ್ರಾಮಣರು, ಆಳುವ ಕ್ಶತ್ರಿಯರು, ಶೂದ್ರ ದಾಸಿಯರು, ಬೂತಗಳನ್ನ ಪೂಜಿಸೋ ರಕ್ಕಸರು ಎಲ್ಲಾರೂ ಇದ್ದಾರಲ್ಲ! ಮಹಾಬಾರತದಲ್ಲೇ ಒಮ್ಮೆ ಅರ್ಜುನ, ಆಮೇಲೆ ಕರ್ಣ, ಆಮೇಲೆ ನಕುಲ-ಸಹದೇವರು ನಮ್ಮ ರಕ್ಕಸ ಸಂತಾನದ ಮಹಿಷ ರಾಜ್ಯವನ್ನ ಬೇಕೆಂದಾಗ ಬಂದು ಸೋಲಿಸಿ ಹೋಗಿದ್ದರು ಗೊತ್ತೇ? ಹೋಗಿ ನಿಮ್ಮ ಒಡೆಯರನ್ನ ಕೇಳಿ ತಿಳಿದುಕೊಂಡು ಆಮೇಲೆ ಅದು ಇತಿಯಾಸ ಎಂಬುದನ್ನ ಸಾದಿಸಿತೋರಿಸಿ ಹೋಗಿ!! ನಮಗೆ ಗೊತ್ತಿರುವ ಇತಿಯಾಸದಲ್ಲಿ ನಮ್ಮ ಪುಲಕೇಶಿ ಉತ್ತರದ ಹರ್ಶವರ್ದನನನ್ನ ಸೋಲಿಸಿದ್ದ. ನೀವು ಯಾರ ಅಡಿಯಾಳು ಎಂಬುದನ್ನ ಮೇಲಿನ ನಿಮ್ಮ ಅಂಕಣದಲ್ಲಿ ಗೋಳಾಡಿಕೊಂಡು ಹೇಳಿದ್ದೀರಿ. ಬಾವನೆಗೆ ಗಾಸಿ?! ಅಳುಮುಂಜಿ!! ಎಲ್ಲಾ ಅಸ್ತ್ರ ಮುಗಿದ ಮೇಲೆ ಅಳುವ ಅಸ್ತ್ರ! ಮೂಡನಂಬಿಕೆಗಳು ಈಗ ಬಾವನೆಗಳಾಗೊಗಿವೆ!

      ಉತ್ತರ
      • ಫೆಬ್ರ 27 2013

       ಸಿದ್ಧರಾಜುರವರೇ,
       ನಿಮ್ಮ ಮಾತು ಕಟುವಾಗಿದ್ದರೂ ಸತ್ಯದಿಂದ ಕೂಡಿದೆ. “ಸಾಬರ ದೇಶಗಳಲ್ಲಿ ಸಾಬರು ಮಾಡೋಹಾಗೇ ಬಾರತದಲ್ಲಿ ಹಿಂದುಗಳು ಮಾಡಬೇಕು ಅನ್ನೋದು ನಾಚಿಕೆಗೇಡಿನ ಮನಸ್ತಿತಿ.” . ಸತ್ಯವಾದ ಮಾತು

       ಉತ್ತರ
       • ಮಹೇಶ ಅವರೇ,
        ನಾನೇಳುತ್ತಿರುವುದರ ಸಾರವೇ ಅದು. ವಿಗ್ನಾನಿಯಾದ ನನಗೆ ಬೋರಪ್ಪ, ಗೆಜ್ಜೆಮಲ್ಲಿ, ಶ್ರೀರಾಮ, ಅಲ್ಲ, ಜೀಸಸ್ ಎಲ್ಲರೂ ಒಂದೇ. ಎಲ್ಲವೂ ‘ಸಮಾನವಾಗಿ’ ಅಸತ್ಯವೇ. ಎಲ್ಲವೂ ಕೊನೆಯಾಗುವುದನ್ನ ಬಯಸ್ತೇನೆ. ನಾನು ನಮ್ಮ ಹಳ್ಳಿಗಳ ಕಡೆ ರಾತ್ರಿಯಲ್ಲಿ ಓಡಾಡುವಾಗ ಕಾರು/ಬಯ್ಕಿನ ಬೆಳಕಿಗೆ ರಸ್ತೆಬದಿ ಕಕ್ಕಸು ಮಾಡುತ್ತಿದ್ದು ಎದ್ದು ನಿಲ್ಲುವ ಹೆಂಗಸರು, ಹೆಣ್ಣುಮಕ್ಕಳಿಗೆ ಲೆಕ್ಕವೇ ಇಲ್ಲ. ಆದರೆ, ಬವ್ಯವಾಗಿ ತಲೆಯೆತ್ತುವ ದೇವಸ್ತಾನಗಳಿಗೂ ಲೆಕ್ಕವೇ ಇಲ್ಲ. ಲೆಕ್ಕಾಚಾರದಲ್ಲಿ, ಬೋರಪ್ಪ, ಗೆಜ್ಜೆಮಲ್ಲಿಗಳು ಕೊನೆಗೊಂಡು ಆ ಜಾಗವನ್ನ ಶ್ರೀರಾಮ ಆಕ್ರಮಿಸಿಕೊಂಡರೆ (ಅಂದರೆ, ಹಿಂದು ಮತ ಇಸ್ಲಾಮ್ ರೀತಿಯೇ ಆಗಿಬಿಟ್ಟರೆ) ನನಗೆ ಒಳ್ಳೆಯದೇ. ಮತಗಳು ಕೂಡಿಕೊಂಡು ಒಂಟಿಕಲ್ಲು ಬೆಟ್ಟದ ಹಾಗಾದಾಗ ವಿಗ್ನಾನದ ಹೊಡೆತಕ್ಕೆ ಆಯವಾಗಿ ಸಿಗುತ್ತವೆ. ಯುರೋಪಿನ ೫೦%ಗೂ ಹೆಚ್ಚು ಕ್ರಿಶ್ಚಿಯನ್ನರು ಇಂದು ನಾಸ್ತಿಕರಾಗಿದ್ದಾರೆ. ಸ್ವೀಡನಂತಾ ತುಂಬಾ ಏಳಿಗೆ ಹೊಂದಿದ ನಾಡುಗಳಲ್ಲಿ ನಾಸ್ತಿಕರು ೮೫%ಕ್ಕೂ ಹೆಚ್ಚು! ಆದರೆ, ಬೂತಕೋಲಗಳು ತಮ್ಮ ಹಣೆಬರಹವನ್ನೇ ಬದಲಾಯಿಸಿಕೊಳ್ಳುತ್ತಿರುವಾಗ, ಬುಡಕಟ್ಟುಗಳ ದೇವರುಗಳು ಹನುಮಂತ, ರಾಮರ ಹೊಡೆತಕ್ಕೆ ನಿರ್ನಾಮವೇ ಆಗುತ್ತಿರುವಾಗ ಇವರುಗಳು ರಾಮನಿಗಾಗಿ ಗೋಳಾಡುವುದನ್ನ ನೋಡಿ ನನಗೆ ಅಡಿಯಾಳುತನದ ರೋಗ ಅಂಟಿಸಿಕೊಂಡವರನ್ನು ನೋಡಿದಂತನಿಸುತ್ತದೆ. ಹಿಂದು ಮತದಲ್ಲಿ ಪ್ರಪಂಚದಲ್ಲೇ ಅತಿ ಕಡಿಮೆ ಮತಾಂತರವಿತ್ತು. ಹವ್ದು! ಇದು ದಿಟ. ಹಿಂದು ಮತವೆಂದೂ ವಿಗ್ನಾನದ ಕೆಂಗಣ್ಣಿಗೆ ಗುರಿಯಾಗಿರಲಿಲ್ಲ. ಯಾಕೆಂದರೆ, ಅದು ವಿಕೇಂದ್ರಿತ ಮತವಾಗಿದ್ದು, ಮಂದಿ ತಮ್ಮ ಪಾಡಿಗೆ ತಾವು ಆಚರಿಸಿಕೊಂಡು ಹೋಗುತ್ತಿದ್ದರು. ಅದೆಂದೂ ಇಸ್ಲಾಮ್, ಕ್ರಯಿಸ್ತ ಮತಗಳಶ್ಟು, ಕಲೆಗಾರರ, ಸಿನೆಮಾದವರ, ತತ್ವಗ್ನಾನಿಗಳ, ವಿಗ್ನಾನಿಗಳ ವಾದಕ್ಕೆ, ವಿಮರ್ಶೆಗೆ ಸಿಲುಕಬೇಕಿರಲಿಲ್ಲ. ಬವ್ತ ವಿಗ್ನಾನಿ ಸ್ಟೀವನ್ ವಯಿನ್ಬರ್ಗ್ ಹೇಳುವಂತೆ ಹಿಂದೂ ಮತವೆಂದೂ ಅಪಾಯಕಾರಿಯಾದದಾಗಿರಲಿಲ್ಲ. ಆದರೆ, ಇತ್ತೀಚೆಗೆ ಹಾಗಲ್ಲ. ಅದು ಎಲ್ಲಾ ವಿದದಲ್ಲೂ ತೇಟ್ ಇಸ್ಲಾಮ್ ಮತ್ತು ಕ್ರಯಿಸ್ತ ಮತಗಳಂತೆಯೇ ವರ್ತಿಸುತ್ತಿದೆ. ಹಾಗಯೇ, ಅದು ಕೊನೆಗಾಣಲಿರುವುದೂ ಅವುಗಳು ಕೊನೆಗಾಣಲಿರುವ ಕಾರಣದಿಂದಾಗಿಯೇ. ವಿಗ್ನಾನ!!

        ಉತ್ತರ
        • ಮಾರ್ಚ್ 4 2013

         ಸಾಂಸ್ಥೀಕರಣಗೊಂಡ ಧರ್ಮಗಳೇ ಹಾಗೆ, ಪ್ರಶ್ನಿಸುವುದೇ ಅಪಾಯದ ಮುನ್ಸೂಚನೆ ಎಂಬುದನ್ನು ವ್ಯವಸ್ಥಿತವಾಗಿ ಪ್ತತಿಪಾದಿಸುತ್ತಿರುತ್ತವೆ. ವಿಜ್ಞಾನ ಎತ್ತಿದ ಪ್ರಶ್ನೆಗಳನ್ನು ಸಾಂಸ್ಥೀಕರಣಗೊಂಡ ಧರ್ಮಗಳು ಎದುರಿಸಲಾಗದೇ ಜನರು ನಾಸ್ತಿಕರಾಗಿದ್ದಾರೆ ಅಥವಾ ಧರ್ಮದ ಸಾಂಸ್ಥೀಕರಣಕ್ಕೆ ಸಹಜವಾಗಿ ಪೆಟ್ಟು ಬಿದ್ದಿದೆ. ಸಿದ್ಧರಾಜುರವೇ, ನೀವು ಹೇಳಿದಂತೆ ವಿಜ್ಞಾನ ಎತ್ತುತ್ತಿರುವ ಪ್ರಶ್ನೆಗಳನ್ನು ಎದುರಿಸಲಾಗದೇ, ಈ ಧರ್ಮವನ್ನು ಸಾಂಸ್ಥೀಕರಣಗೊಳಿಸುವ ಕಾರ್ಯ ಮುರಿದು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.

         ಉತ್ತರ
      • ಭೈರವ ಗೌಡ
       ಫೆಬ್ರ 28 2013

       ಹಲೋ ಸಿದ್ದರಾಜು ,

       ಯಾಕ್ಲಾ ಕರಡಿತರ ಮೈ ಪರಚ್ಕೊತಿದ್ದಿ.

       ನೀ ರಾಮಾಯಣ ನಂಬೋಲ್ಲ ಅಂದ್ರೆ ಬಿಟ್ಟಾಕು.

       ನಾವ್ ನಂಬ್ತಿವಿ, ಪಾಲಿಸ್ಕೊಂಡ್ ಹೋಗ್ತಿವಿ , ಅಡೆತಡೆ ಬಂದ್ರೆ ಎದುರಿಸಿ ಮುನ್ನುಗ್ತಿವಿ.
       ರಾಮನ ಸೇತುವೆ ಅಲ್ಲ ಅದರ ಒಂದು ಕಲ್ಲಿಗೂ ಏನು ಆಗ್ದಾಗೆ ನೋಡ್ಕೊತಿವಿ.

       ನಿನಗೆ ನಿಜವಾಗಲು ಕಾಮೆಂಟ್ ಮಾಡಬೇಕು ಅನ್ನಿಸಿದ್ರೆ ವಿಷಯಕ್ಕೆ ತಕ್ಕನಾಗಿ ಮಾಡು.
       ಅದನ್ನ ಬಿಟ್ಟು ಶೆಟ್ಟಿ , ಭಂಟ ಯಾಕ್ಲಾ ನಿಂಗೆ ಈ ಬುದ್ದಿ.

       ನೀನೇನೋ ಬಹಳ ಇತಿಹಾಸ ಗೊತ್ತಿರೋನೆ ಆದ್ರೆ ವಿವರವಾಗಿ ಹೇಳು ಅದೇನ್ ನಿನ್ ಗೋಳು ನೋಡೇಬಿಡೋಣ .
       ಕುವೆಂಪು ಅಂತ ಕುವೆಂಪು(ಹಿಂದೂ ಧರ್ಮದ ಕಟ್ಟುಪಾಡುಗಳನ್ನು ವಿರೋಧಿಸುತ್ತಿದ್ದ ವ್ಯಕ್ತಿ)ಅವರೇ ರಾಮಾಯಣ ಒಂದು ಪುಣ್ಯ ಗ್ರಂಥ ,ಅದನ್ನ ಓದದೆ ಇದ್ರೆ ನರನ ಜನ್ಮ ವ್ಯರ್ಥ ಅಂತ ಹೇಳಿದರೆ.
       ಅಂತದ್ರಲ್ಲಿ ನೀನು ಅರ್ದಂಬರ್ಧ ತಿಳ್ಕೊಂಡು ತಿಕ್ಲುಂತರ ಆಡಬೇಡ .
       ಈ ದೇಶದಲ್ಲಿ ೯೯% ಹಿಂದೂಗಳು ರಾಮಯಣನ ಶ್ರದ್ದೆ ಇಂದ ನಂಬ್ತಾರೆ, ಇನ್ನ ೧% ನಿಂತರ ಸ್ವಘೋಷಿತ ಬುದ್ದಿಜೀವಿಗಳು(ಬುದ್ದಿಯನ್ನು ಯಾವತ್ತೋ ಯಾರಿಗೋ ಮಾರಿಕೊಂಡೋರು) ಅಡ್ಡಡ್ಡ ಏನೇನೊ ಮಾತಾಡ್ತಿರ.
       ನಿನ್ನ ಹಳದಿ ಕಣ್ಣ ತೆರೆದು ನೋಡು ಅದು ಕಾಗಕ್ಕ-ಗುಬಕ್ಕನ ಕಥೆಯೋ ಇಲ್ಲ ಶ್ರೇಷ್ಟ ಕೃತಿಯೋ ಗೊತ್ತಾಗುತ್ತೆ .
       ಮೂರ್ಖ!

       ಉತ್ತರ
       • ಭೈರವ ಗೌಡ,
        ಯಾಕ್ಲ, ತಿಕ್ಲ, ಮೂರ್ಖ ಮುಂತಾದ ಶ್ಲೋಕಗಳ್ನ ನೀವ್ ನಂಬಿರೋ ಶ್ರೀರಾಮ್ರು ಹೇಳ್ಕೊಟ್ರೇನಪ್ಪ ನಿಮಗೆ? ಸಂಸ್ಕ್ರುತ ಚೆನ್ನಾಗ್ ಕಲಿತುಕೊಂಡಿದ್ದೀರಾ. ಬಲಾ!! ನಿಮ್ಮ ತಂದೆ, ತಾತ, ಮುತ್ತಾನತ ಹಾಗೇ ನೀವೂ ಶ್ರೀರಾಮನ ಬದಲು ನಿಮ್ಮ ಮನೆದೇವರನ್ನ ನಂಬಿದ್ದಿದ್ದರೆ ನಿಮಗೆ ಉತ್ತರ ಪ್ರದೇಶದ ಅನಾರೀಕ ಬುದ್ದಿ ಬರುತ್ತಿರಲಿಲ್ಲ. ೯೯% ಅಡಿಯಾಳು ಬುದ್ದಿಯಂತೂ ಇರುತ್ತಲೇ ಇರಲಿಲ್ಲ. ಶ್ರೀರಾಮ್ರು ಬಿಟ್ಟಾಕಿ, ನಿಮ್ ಮನೆದೇವ್ರ್ ಇತಿಯಾಸ ಏನು ಅಂತ ೧% ಆದ್ರೂ ಗೊತ್ತಿದೆಯಾ ದಣಿ? ಶ್ರೀರಾಮರನ್ನ ಪೂಜಿಸೋರು ನಿನ್ನ ಮನೆದೇವರನ್ನ ಪೂಜಿಸ್ತಾರಾ ದಣಿ? ತಾವು ಒಂದು ಕಲ್ಲನ್ನೂ ಅಲ್ಲಾಡಿಸೋಕೆ ಬಿಡೋಲ್ಲ ಅಂತ ಗೊತ್ತಾಯ್ತಪ್ಪ. ಶ್ರೀರಾಮನ ಕಪಿಸೇನೆ ಇನ್ನೂ ಉಳಿದಿದೆ ಅಂತ ಮನವರಿಕೆಯಾಯ್ತು ದಣಿ. ನಿಲುಮೆಯ ಕಾಗಕ್ಕ ಗೂಬಕ್ಕನ ಕತೆಗಳಿಕೆ ಗೌಡ ಹೆಸರಿನವರ ಬೆಂಬಲವೂ ಇದೆ ಅಂತ ಮನವರಿಕೆಯಾಯ್ತು. ಅದೂ ಎಂತಾ ಗೌಡ! ಗೂಗಲ್, ಪೇಸ್ಬುಕ್ ಅಕೌಂಟ್ ಇಲ್ಲದ, ಗೌಡ ಹೆಸರು ಮಾತ್ರ ಇರುವ ಗೌಡನ ಬೆಂಬಲ!!! ಅದಿರಲಿ, ನಿಮ್ಮೆಸರಲ್ಲೂ ಗೌಡ ಇದೆ. ಅಂದರೇ, ನೀವೂ ನನ್ನ ಹಾಗೇ ರಾಮಾಯಣ ಮಹಾಬಾರತದ ಪ್ರಕಾರ ಮಹಿಶನ ರಕ್ಕಸ ಸಂತಾನದವರು ತಾನೇ? ರಾಮನನ್ನ ಕಂಡು ಮತ್ತೇಕೆ ಹೀಗೆ ಅಂಪರೆಯುತ್ತೀರಿ? ರಾಮನ ಬಂಟ ಗೌಡ!!! ವಿಬೀಶಣೇಗೌಡ!!!! ಮ್ಹಹಹಹಹಹಹಹಾಆಆಆಆಆ…..

        ಉತ್ತರ
        • ಭೈರವ ಗೌಡ
         ಮಾರ್ಚ್ 1 2013

         ಹಲೋ ಸಿದ್ದರಾಜು ,

         ನಿನ್ನಂತ ಸುಸಂಸ್ಕೃತ! ಜನರಿಗೆ ಯಾವ ಸಂಸ್ಕೃತ ಬಳಸಬೇಕೋ ಅದನ್ನೇ ಬಳಸಿದ್ದೀನಿ.

         ಈ ಶ್ಲೋಕ ಹೇಳ್ಕೊದೋದಿಕ್ಕೆ ರಾಮ ಬೇಕಿಲ್ಲ, ನಮ್ ಮಂಡ್ಯದ ಸಣ್ ಹೈಕಳು ಹೇಳ್ಕೊಡ್ತಾವೆ.

         ನನ್ ತಂದೆ , ತಾತ , ಮುತ್ತಾತಂತರ ನಾನು ಚನ್ನಾಗೇ ನಮ್ ಮನೆದೇವ ಕಾಲಭೈರವನ ಬಗ್ಗೆ ತಿಳ್ಕೊಂಡಿದ್ದೀನಿ.
         ನಿನ್ ಬುದ್ದಿ ತುಂಬಾ ಯಾವನೋ ಮ್ಯಾಕ್ಸ್ ಮುಲ್ಲರ್ ಬರೆದ ಆರ್ಯ ದ್ರಾವಿಡ ಕಥೆನೆ ತುಮ್ಬ್ಕೊಂಡಿದ್ದಿಯ ಅಂತ ಗೊತ್ತಾಗುತ್ತೆ ನಿನ್ ಕಾಮೆಂಟ್ ನೋಡಿದ್ರೆ. ಯಾವ ರಾಮಯಣ ಮಹಾಭಾರತದಲ್ಲು ದಕ್ಷಿಣ ಭಾರತದವರನ್ನ(ಗೌಡರನ್ನ) ಮಹಿಷ-ರಾಕ್ಷಸರು ಅಂತ ಹೇಳಿಲ್ಲ.

         ಅದೂ ಎಂತಾ ಗೌಡ! ಗೂಗಲ್, ಪೇಸ್ಬುಕ್ ಅಕೌಂಟ್ ಇಲ್ಲದ, ಗೌಡ ಹೆಸರು ಮಾತ್ರ ಇರುವ ಗೌಡನ ಬೆಂಬಲ!!! ಅಂತ ಹೇಳೋ ನಿಂಗೆ ೯೯% ಗೌಡ್ರು ಫೇಸ್ಬುಕ್ , ಗೂಗಲ್ ಅಕೌಂಟ್ ಇಲ್ದೆ ಇರೋರು ಅಂತ ಗೊತ್ತಿರಲಿ.

         ಶ್ರೀರಾಮರನ್ನ ಪೂಜಿಸೋರು ನಿನ್ನ ಮನೆದೇವರನ್ನ ಪೂಜಿಸ್ತಾರಾ ದಣಿ? ಅಂತ ಕೇಳ್ತಿಯಲ್ವ ಅದಕ್ಕೆ ಹೇಳೋದು ಪೂರ್ತಿ ರಾಮಾಯಣ ಓದ್ಕೋ ಅಂತ.
         ಆ ಶ್ರೀ ರಾಮನೇ ಶಿವನ(ಭೈರವ ಶಿವನ ಒಂದು ಅಂಶ) ಪೂಜೆ ಮಾಡ್ಲಿಲ್ವೇ ?

         ಶ್ರೀರಾಮ್ರು ಬಿಟ್ಟಾಕಿ, ನಿಮ್ ಮನೆದೇವ್ರ್ ಇತಿಯಾಸ ಏನು ಅಂತ ೧% ಆದ್ರೂ ಗೊತ್ತಿದೆಯಾ ದಣಿ?ಅಂತ ಕೇಳ್ತಿಯಲ್ವ? ನಾನು ಭೈರವನೂ ಸೇರಿ ಮುಕ್ಕೋಟಿ ದೇವರನ್ನು ನಂಬ್ತೀನಿ.
         ಭೈರವನ್ನ ಸ್ವಲ್ಪ ಜಾಸ್ತಿನೆ ನಂಬ್ತೀನಿ .

         ನನ್ನ ಭೈರವನ ಬಗ್ಗೆ ಕಾಲಭೈರವನ ಬಗ್ಗೆ ಹೇಳ್ತೀನಿ ಕೇಳು :

         ಉತ್ತರ
         • ಇಲ್ಲಾ. ನನಗೆ ನೀವು ಗೌಡರೋ ಇಲ್ಲವೋ ಅನ್ನುವುದರ ಬಗ್ಗೆಯೇ ಅನುಮಾನವಿದೆ. ನೀವು ಗೌಡ ಎಂದು ಹೆಸರಿಟ್ಟುಕೊಂಡು ನಡುಬಲೆಯಲ್ಲಿ ಟ್ರಾಲ್ ಮಾಡುವ (ಶ್ರೀರಾಮನ ಹಾಗೇ ಮರೆಯಲ್ಲಿ ನಿಂತು ಬಾಣ ಬಿಡುವ) ‘ಇಂಟರ್ನೆಟ್ ಹಿಂದು’ ಇರಬಹುದು. ದಿಟವಾದ ಗೌಡರಾಗಿದ್ದಲ್ಲಿ ನಿಮ್ಮ ಅಸಲು ಗೂಗಲ್ ಇಲ್ಲಾ ಫೇಸ್ಬುಕ್ ಇಟ್ಟುಕೊಂಡು ಚರ್ಚೆ ಮಾಡುವ ದಯ್ರಿಯ ನಿಮಗಿರುತ್ತಿತ್ತು. ನೀವು ಮರೆಯಲ್ಲಿ ಬಾಣಬಿಡುವ ಶ್ರೀರಾಮನ ಬಂಟರೇ ಆಗಿರಿ, ಇಲ್ಲಾ ದಿಟವಾಗಿಯೂ ಬೈರವಗೌಡನೇ ಆಗಿರಿ. ನಿಮ್ಮನ್ನ ಗೌಡನೆಂದೇ ಬಗೆದು ಒಂದೆರಡು ಮಾತು ಹೇಳುವೆ. ಸಂಸ್ಕ್ರುತದ ಬಗ್ಗೆ: ನಿಮಗೆ ಬರೋದು ಯಾಕ್ಲ, ತಿಕ್ಲ, ಪಕ್ಲ ಅನ್ನೋ ಒಂದೇ ಒಂದು ಸಂಸ್ಕ್ರುತ. ಯಾಕೆಂದರೆ ನೀವೂ ನನ್ನ ಹಾಗೇ ಸಂಸ್ಕ್ರುತದವರು ಹೇಳುವ ಕೊಳೆತನುಡಿ ಕನ್ನಡ ಮಾತಾಡುವ ಶೂದ್ರರು (ಅಪಬ್ರಂಶ). ನನಗೂ ನೀವು ಮಾತಾಡುವ ಸಂಸ್ಕೃತ ಬರುತ್ತದೆ. ಆದರೆ ನಾನು ಬಳಸೋದಿಲ್ಲ. ಯಾಕೆಂದರೆ, ನಾನು ನಾಗರೀಕ. ನೀವು ಬಳಸುತ್ತೀರಿ, ಯಾಕೆಂದರೆ ನೀವೊಬ್ಬ ಶ್ರೀರಾಮನ ಶೂದ್ರ ಬಂಟ. ಶ್ರೀ ರಾಮನ ಶೂದ್ರ ಬಂಟರು ಮೇಲು ಜಾತಿಯವರಿಂದ ಚೂ ಬಿಡಿಸಿಕೊಂಡು ಹೆಣ್ಣು ಮಕ್ಕಳನ್ನ ಎಳೆದಾಡಿ ಹೊಡೆಯುವುದೂ, ಹೆಂಗಸರ ಹೆಡೆಗೆ ತ್ರಿಶೂಲದಿಂದ ಚುಚ್ಚುವುದನ್ನೂ ಮಾಡುತ್ತಾರೆ. ಅದಕ್ಕೆ ಹೋಲಿಸಿದರೆ ನಿಮ್ಮ ತಿಕ್ಲ ಪಕ್ಲ ಸಂಸ್ಕ್ರುತದಲ್ಲಿ ಅಚ್ಚರಿಪಡಬೇಕಾದದ್ದೇನೂ ಅಲ್ಲ. ವಿಚಾರಿಸಿ ನೋಡಿ. ಹಿಂದು ಪುರಾಣಗಳ ಪ್ರಕಾರ ರಕ್ಕಸರ ದೇವರೂ ಶಿವನೇ!! ಇನ್ನು ಮಹಾಬಾರತದಲ್ಲಿ ಮಹಿಶಿಕ ರಾಜ್ಯ (ಈಗಿನ ಮಯ್ಸೂರು/ದಕ್ಶಿಣ ಕರ್ನಾಟಕ ರಾಜ್ಯ)ದ ಬಗ್ಗೆ ಮಹಾಬಾರತದಲ್ಲಿ ಹೀಗಿದೆ: http://en.wikipedia.org/wiki/Mahisha_Kingdom. ಸಾರಾಂಶ: ಮಹಿಶಿಕ ರಾಜ್ಯದವರು ವಯ್ದಿಕ ದರ್ಮದ ಹೊರಗಿನವರು. ಅಲ್ಲಿಗೆ ಯಾರೂ ಹೋಗಬಾರದು. ಮಹಿಶಿಕ ರಾಜ್ಯದವರು ಕ್ಶತ್ರಿಯರಾಗಿದ್ದು ಬ್ರಾಮಣರ ಸಹವಾಸ ತಪ್ಪಿದ್ದರಿಂದ ಕೊಳೆತು ಶೂದ್ರರಾದರು. ಅರ್ಜುನ ಮಹಿಶಿಕ ರಾಜ್ಯವನ್ನೂ ಸೋಲಿಸಿದ್ದು ಹೇಳಿಕೊಳ್ಳುವಂತಾ ದೊಡ್ಡ ವಿಶಯವಲ್ಲ.
          ರಕ್ಕಸರು ದಕ್ಶಿಣದಲ್ಲಲ್ಲದೆ ಇನ್ನೇನು ಪಾಕಿಸ್ತಾನದಲ್ಲಿದ್ದರು ಅಂದುಕೊಂಡಿದ್ದೀರಾ? ಪಾಕಿಸ್ತಾನದಲ್ಲಿದ್ದವರು ಸಾಬರ ಬಣ್ಣದ ದೇವತೆಗಳು. ಮಯ್ಶೂರಿನಲ್ಲಿದ್ದವರು ಎಮ್ಮೆ ಬಣ್ಣದ ಒಕ್ಕಲಿಗರು! ಎಮ್ಮೆ ಬಣ್ಣದ, ರಾಮ ಬಂಟ ಒಕ್ಕಲಿಗರಿಗೆ ಸ್ವಂತಿಕೆ ಅನ್ನೋದು ಎಲ್ಲಿ ಬರಬೇಕು? ಅವರಿಗೆ ಸ್ವಂತ ಕತೆಯಿಲ್ಲ, ಸ್ವಂತ ವೈರಿಯಿಲ್ಲ. ಉತ್ತರ ಬಾರತದವರ ಕತೆಯೇ ಅವರ ಕತೆ. ಉತ್ತರ ಬಾರತದವರ ವೈರಿಯೇ ಅವರ ವೈರಿ! ಮಂಡ್ಯದ ಊರುಗಳಿಗೆ ಹೋಗಿ ನೋಡಿ. ಎಲ್ಲಾ ಊರುಗಳ ದಕ್ಶಿಣ ದಿಕ್ಕಿನಲ್ಲಿ ಹೇಗೆ ಹೊಲಗೇರಿಗಳು ಇವೆಯೋ, ಹಾಗೆಯೇ ದೇಶಕಾಲದ ದಕ್ಶಿಣದಲ್ಲಿ ರಕ್ಕಸರು ಇರುತ್ತಾರೆ.
          ಇದೆಲ್ಲಾ ಉತ್ತರ ಬಾರತದ ಹಿಂದು ಪುರಾಣ ಕಟ್ಟು ಕತೆಗಳಲ್ಲಿ ಏನೇನಿದೆ ಎನ್ನುವುದರ ಬಗ್ಗೆಯಾಯಿತು. ಇನ್ನು ವಿಗ್ನಾನ, ಸಾಮಾಜಿಕ ವಿಗ್ನಾನದ ಬಗ್ಗೆ ಮಾತಾಡೋಣ: ಆರ್ಯ-ದ್ರಾವಿಡ ತಿಯರಿಯಲ್ಲಿ ಪೂರ್ತಿ ಪೊಳ್ಳು ಇಲ್ಲ, ಸತ್ಯವೂ ಇಲ್ಲ. ನುಡಿಯರಿಮೆ (linguistics), ಪೀಳಿಯರಿಮೆ (Genetics), ಪಳಮೆಯರಿಮೆ (Archeology), ಗಳ ಬೇರೆ ಬೇರೆ ಆಯಾಮಗಳಲ್ಲಿ ಬಹಳಶ್ಟು ಕೆಲಸ ಆಗಿದೆ, ಆಗುತ್ತಿದೆ. ಮ್ಯಾಕ್ಸ್ ಮುಲ್ಲರ್ ನುಡಿಯರಿಮೆಯಲ್ಲಿ ಕೆಲಸ ಮಾಡಿದ. ನನ್ನಲ್ಲಿ ಪೀಳಿಯರಿಮೆ ಬಗ್ಗೆ ನನಗೆ ತರಬೇತಿ ಇದೆ. ಆರ್ಯನ್ ಆಕ್ರಮಣದ ಬಗ್ಗೆ ಹಲವಾರು ವಿಗ್ನಾನಿಗಳು ಕೆಲಸ ಮಾಡುತ್ತಿದ್ದಾರೆ. ಹೊಸ ಹೊಸ ಸಾಕ್ಶಿಗಳು ಸಿಗುತ್ತಿದ್ದನ್ತೆ ಸತ್ಯ ಮೊನಚಾಗುತ್ತಾ ಹೋಗುತ್ತದೆ. ಇದು ರಾಮಾಯಣದ ಹಾಗೆ ಒಬ್ಬರು ಬರೆದಿಟ್ಟಿದ್ದಲ್ಲ. ಇದೆ ತಿಯರಿಯನ್ನ ಬ್ರಿಟಿಶರ ಕಾಲದಲ್ಲಿ ಬಾರತದ ಆರ್ಯರೆನಿಸಿಕೊಂದಿದ್ದವರು ಸಂತೋಶದಿಂದ ಒಪ್ಪಿಕೊಂಡಿದ್ದರು. ಆಗ ಒಕ್ಕಲಿಗರ ಜೋಬಲ್ಲಿ ಕಾಸಿರಲಿಲ್ಲ. ಬಾರತದ ಆರ್ಯರಿಗೆ ಒಕ್ಕಲಿಗರು ಬೇಕಾಗಿರಲಿಲ್ಲ. ಈಗ ಒಕ್ಕಲಿಗರ ಜೋಬಲ್ಲ ಕಾಸು, ತೋಳಲ್ಲಿ ಬಲವಿರುವುದರಿಂದ ಬಾರತದ ಆರ್ಯರಿಗೆ ಒಕ್ಕಲಿಗ ಸೇರಿ ಇನ್ಯಾವುದೇ ಶೂದ್ರರ ಉಪಯೋಗವಿದೆ. ಹಾಗಾಗಿ ತಿಯರಿ ಅವರಿಗೆ ಒಪ್ಪಿಗೆಯಿಲ್ಲ. ಅವರು ಮೂಡಿಸುವ ತಾವರೆಹೂವನ್ನ ನಿಮ್ಮಂತ ಕೆಲ ಒಕ್ಕಲಿಗರು ಮುಡಿದುಕೊಳ್ಳುತ್ತಾರೆ.
          ಬೈರವೆಶ್ವರನ ಬಗ್ಗೆ. ಬೈರವೇಶ್ವರ ದಿಟವಾಗಿಯೂ ನಿಮ್ಮ ಮನೆದೇವರಾಗಿದ್ದಲ್ಲಿ ನೀವು ನನ್ನ ಅಣ್ಣ-ತಮ್ಮ!! ನಾನು ಚನ್ನಪಟ್ಟಣ ತಾಲೂಕಿನ ಬೋರೇದೇವರ ಪಯ್ಕಿಯವನು. ನಮ್ಮ ಪಯ್ಕಿಯಿಂದ ಬೈರವೇಶ್ವರನ ಪಯ್ಕಿಯವರಿಂದ ಹೆಣ್ಣು ಕೊಡುವುದೂ, ತರುವುದೂ ಮಾಡುವಂತಿಲ್ಲ. ಏಕೆಂದರೆ ನಾವೆಲ್ಲಾ ಒಂದೇ ಹಿರೀಕರಿಂದ ಬಂದವರು. ಇಲ್ಲಿ ತೊಂದರೆ ಏನೆಂದರೆ, ಬೋರೆದೆವರು/ಬೈರವೇಶ್ವರ/ಕಾಲಬೈರವೇಶ್ವರ ಅನ್ನೋದು ಅಸಲು ಹೆಸರಲ್ಲ. ಅಸಲು ಹೆಸರು ಬೋರಪ್ಪ/ಬೈರಪ್ಪ. ದೇವರು/ಈಶ್ವರ ಎಂದು ಸಂಸ್ಕ್ರುತತ ಹೆಸರಿರುವ ದೇವರುಗಳು ಒಕ್ಕಲಿಗರ ಅಸಲು ಮನೆದೇವರುಗಳೇ ಅಲ್ಲ. ಒಕ್ಕಲಿಗರ ದೇವರುಗಳಿಗೆ ದೇವಸ್ತಾನವೂ ಇರುವುದಿಲ್ಲ. ಒಕ್ಕಲಿಗರ ದೇವರುಗಳು ಹುತ್ತ, ಆಲದಮರ, ಬೇವಿನಮರ, ದಟ್ಟ ಪೊದೆಯಂತಾ ಎಡೆಗಳಲ್ಲಿ ನೆಲೆಗೊಳ್ಳುತ್ತಾರೆ. ಒಕ್ಕಲಿಗರಿಗೆ ಹೆಣ್ಣು ದೇವರು, ಮತ್ತು ಗಂಡು ದೇವರು ಎರಡೂ ಇರುತ್ತಾರೆ. ಉದಾಹರಣೆಗೆ, ನನ್ನ ಮನೆಗೆ ಗಂಡು ದೇವರು ‘ತಿಟ್ಟದ ಮೇಗಳ ಬೋರಪ್ಪ’. ಹೆಣ್ಣು ದೇವರು ‘ಒಡೆಯನ ಕೆಂಪಮ್ಮ’. ಹೆಣ್ಣು ಗಂಡು ದೇವರ ಹೆಸರು ಕೇಳಿಯೇ ಒಕ್ಕಲಿಗರು ದೂರದ ಊರಿನವರು ಅಣ್ಣ-ತಮ್ಮಂದಿರೋ ಇಲ್ಲಾ ಸಾಲಾವಳಿ ಇರುವವರೋ ಎಂದು ತೀರ್ಮಾನಿಸುತ್ತಾರೆ. ಕೋಲಾರದ ನನ್ನ ಹೆಂಡತಿಯ ಹೆಣ್ಣು ದೇವರು ಚೌಡೇಶ್ವರಿ (ಚೌಡಮ್ಮ!). ಆ ಹೆಸರು ಕೇಳಿಯೇ ನನ್ನ ತಂದೆ ನಮ್ಮ ಮದುವೆಗೆ ಒಪ್ಪಿದ್ದು! ತಿಟ್ಟದ ಮೇಗಳ ಬೋರಪ್ಪ ಮತ್ತು ಒಡೆಯನ ಕೆಂಪಮ್ಮ ಪಕ್ಕದೂರ ತಿಟ್ಟದ ಮೇಲೆ ಜೊತೆಯಾಗಿರುವ ಆಲದಮರ ಮತ್ತು ಬೇವಿನ ಮರದಲ್ಲಿ ನೆಲೆಸಿದ್ದಾರೆ. ಅಲ್ಲಿ ನಾವು ನೇರವಾಗಿ ಹೋಗಿ ಪೂಜಾರಿಯ ಮದ್ಯಸ್ತಿಕೆ ಇಲ್ಲದೇ ಪೂಜೆ ಮಾಡಿ ಬರುತ್ತೇವೆ. ಕುತೂಹಲವೆಂದರೆ, ಬ್ರಾಮಣರನ್ನ ಕರೆದರೂ ಅವರು ಅಲ್ಲಿಗೆ ಪೂಜೆ ಮಾಡಲು ಬರುವುದಿಲ್ಲವಂತೆ! ಹಾಗೆಯೇ, ಬೋರಪ್ಪನ ಪಯ್ಕಿಯವರಿಗೆ ಆಲದ ಮರದಲ್ಲಿ ನೆಲೆಸಿರುವ ಬೋರಪ್ಪನ ಬಗ್ಗೆ ಕೀಳರಿಮೆಯಿದೆ. ನನ್ನ ತಾತನ ಕಾಲದವರು ಅವನನ್ನ ಬೋರಪ್ಪ ಎಂದು ಕರೆಯುತ್ತಿದ್ದರು. ತಂದೆಯ ಕಾಲದವರು ಬೋರೆದೆವರು ಎಂದು ಕರೆಯುತ್ತಿದ್ದರು. ನನ್ನ ಕಾಲದವರು ‘ಶ್ರೀ ಭೈರವೇಶ್ವರ’ ಎಂದು ಕರೆಯಲು ಆರಂಬಿಸಿದ್ದಾರೆ! ಮೊದಮೊದಲು ಬೋರಪ್ಪನ ಪಯ್ಕಿಯವರು ಆಲದಮರದ ಪೂಜೆ ಕಡಿಮೆ ಮಾಡಿ ಪಕ್ಕದ ಆಂಜನೇಯನ ಗುಡಿಯಲ್ಲಿ ಪೂಜಿಸರು ಆರಂಬಿಸಿದ್ದರು. ಹಾಗಾಗಿ, ಕೆಲವರು ತಮ್ಮ ಮನೆದೇವರು ಆಂಜನೇಯ ಎಂದೇ ತಿಳಿದಿದ್ದಾರೆ. ಈಗ ಪಯ್ಕಿಯವರು ಒಂದು ಚೂರು ಕಲ್ಲನ್ನೂ ಇಶ್ಟಪಡದಿದ್ದ ಬೋರಪ್ಪನಿಗೆ ಆದಿಚುಂಚನಗಿರಿಯವರಂತೆ ‘ಶ್ರೀ ಭೈರವೇಶ್ವರ ದೇವಸ್ಥಾನ’ವನ್ನ ಕಟ್ಟಿಸಲು ಯೋಜಿಸುತ್ತಿದ್ದಾರೆ! ಒಕ್ಕಲಿಗರ ಜೋಬಲ್ಲಿ ಕಾಸಿಲ್ಲ, ತೋಳಲ್ಲಿ ಬಲವಿಲ್ಲದಾಗ ಓಣಿ ಸಿದ್ದಪ್ಪ, ತಿಟ್ಟದ ಬೋರಪ್ಪ, ಮಾರಮ್ಮ, ಕೆಂಪಮ್ಮರೆಲ್ಲಾ ರಕ್ಕಸರ ದೇವರುಗಳು. ಬಲ ಕಾಸು ಇದ್ದಾಗ ಅವರೆಲ್ಲಾ ಶಿವ ಪಾರ್ವತಿಯರು!! ಬುಡಕಟ್ಟಿನ ಬೋರಪ್ಪ ತನ್ನತನ ಕಳೆದುಕೊಂಡು ಪುರಾಣದ ಭೈರವನಾಗಿ ಪ್ರಮೋಶನ್ಗೊಂಡಾಗ ನಿಮ್ಮಂತಾ ಒಕ್ಕಲಿಗರಿಗೆ ಕುಶಿ! ತೋಳೇರಿಸಿ ಸಾಬರಮೇಲೆ ಹೊಡೆದಾಡಲು, ರಾಮ ಸೇತು ಉಳಿಸಿ ಏಳಿಗೆ ತಡೆಯಲು ರೆಡಿ!!!

          ಉತ್ತರ
          • ಮಾರ್ಚ್ 2 2013

           ಸಿದ್ಧರಾಜುರವರೇ, ಕಟುವಾದ ವಾಸ್ತವಾಂಶ ಹೇಳುವ ಭರದಲ್ಲಿ ಉತ್ತರದವರು ಮತ್ತು ಉತ್ತರದ ಕಡೆಯದ್ದೆಲ್ಲಾ ರಾಕ್ಷಸೀಯವಾದದ್ದು ನಮ್ಮಲ್ಲಿ ಎಲ್ಲವೂ ಒಳ್ಳೆಯದಿತ್ತು ಎಂಬ ಮಾನಸಿಕತೆ ಬೆಳೆಯಬಹುದು. ಒಂದು ಪುರೋಹಿತಶಾಹಿ ಕಿತ್ತುಹೋಗಿ ಇನ್ನೊಂದು ರೀತಿಯ ಪುರೋಹಿತಶಾಹಿ ಆವರಿಸಿಕೊಳ್ಳಬಹುದು

          • ಭೈರವ ಗೌಡ, ಮಂಡ್ಯ
           ಮಾರ್ಚ್ 2 2013

           ಹಲೋ ಅಣ್ಣ-ತಮ್ಮ ,

           ಯಾರ್ಯಾರು ಹಿಂದೂಗಳನ್ನ ಒಡೆಯೋ ಪುಸ್ತಕ, ಲೇಖನ ಬರಿತಾ ಇದ್ರೊ ಅವರ ಜನ್ಮ ಪಾವನ ನಿಮ್ಮಿಂದ!!

           ಸರಿ ನೀವು ಹೇಳೋ ಹಾಗೆ ನಾವು ಬುಡಕಟ್ಟು ಜನ, ನಮ್ಮ ಮನೆ ದೇವ ಬೋರಪ್ಪ, ಮನೆ ದೇವಿ ಸೊಮನಹಌಯಮ್ಮ ಬುಡಕಟ್ಟು ದೈವ ಅಂತಾನೆ ತಿಳ್ಕೊಳೊಣ.

           ಕನಿಷ್ಠ ಈ ಬುಡಕಟ್ಟು ಹೀಗೆ ಉಳಿಬೇಕು ಅಂದ್ರೆ ದೇವ-ದೇವಿಯರನ್ನ ಪೂಜಿಸೋ ಎಲ್ಲ ಬುಡಕಟ್ಟುಗಳು(ಹಿಂದೂಗಳು) ಒಗ್ಗಟ್ಟಾಗ್ಲೆಬೆಕು.

           ಇಲ್ಲ ಅಂದ್ರೆ ಅಸ್ಸಾಂ ಪರಿಸ್ತಿತಿ ಗೊತ್ತಿದೆಯಲ್ಲ ಬೋಡೊ ಬುಡಕಟ್ಟು ಇವತ್ತು ಯಾವ ಪರಿಸ್ತಿತಿಗೆ ಬಂದಿದೆ ಅಂತ.

           ನಮ್ಮ ಬುಡಕಟ್ಟು ಈ ಪರಿಸ್ತಿತಿಗೆ ಬರಬಾರದು ಅಂದ್ರೆ ನಾವೆಲ್ಲಾ(ಹಿಂದುಗಳೆಲ್ಲ) ಒಗ್ಗಟ್ಟಾಗ್ಲೆಬೆಕು.

           ಯಾವ ರಾಮನಗರ – ಚನ್ನಪಟ್ಟಣ ಒಕ್ಕಲಿಗರ ಗುಡಾಗಿತ್ತೊ , ಇವತ್ತು ಆ ಗುಡಲ್ಲಿ ಕಾಣೋದು ಹೆಚ್ಚು ಮುಸಲ್ಮಾನರ ಮಸಿದಿಗಳೇ ಹೊರತು ನಮ್ಮ ಬುಡಕಟ್ಟಿನ ಬೋರಪ್ಪ ಅಲ್ಲ. ಇದು ಹೀಗೆ ಮುಂದುವರಿದರೆ ನಾಳೆ ನಮ್ಮ ಬುಡಕಟ್ಟಿನ ಕಥೆ ಬೊಡೊಗಳಿಗಿಂತ ಶೋಚನಿಯ!!

           ಇನ್ನು ನಮ್ಮ ತಾತ ನನಗೆ ಹೇಳಿಕೊಟ್ಟ ಪ್ರಕಾರ ಬೋರಪ್ಪ ಅಂದ್ರೆ ಭೈರವ-ಕಾಲಭೈರವ ಆದರೆ ನಮ್ಮ ಜನ ಅವನ ಭೈರ , ಬೋರಾ ಅಂತ ಸುಲಭವಾಗಿ ಕರಿತಾ ಇದ್ರೂ ಅಂತ.

           ಇದು ಹೇಗೆ ಅಂದ್ರೆ ನಮ್ಮ ಮನೆಯ ಹೆಣ್ ದೇವರು ಸೋಮನಹಳ್ಳಿಯ ಸೌಮ್ಯಕೆಶ್ವರಿ ನಮ್ಮ ಊರಿನವರಿಗೆ ಸೊಮನಾಳಮ್ಮ ಆದ ಹಾಗೆ.

           ಇನ್ನು ಆರ್ಯ ದ್ರಾವಿಡ ವಿಷಯಕ್ಕೆ ಬರೋದಾದ್ರೆ ,ಯಾವ ಪೀಳಿಯರಿಮೆ (Genetics) ಕೂಡ ಭಾರತೀಯರು ಬೇರೆ ಬೇರೆ ಅಂತ ಸಾಧಿಸಿ ತೋರ್ಸೋದಿಕ್ಕೆ ಆಗಿಲ್ಲ.

           ಅದೆಲ್ಲ ಬ್ರಿಟಿಷರ ಕುತಂತ್ರವಗಿತ್ತಷ್ಟೇ.

           ಮಾತು ಮಾತಿಗೆ ದಕ್ಷಿಣದವರು(ಶೂದ್ರರು) ರಾಕ್ಷಷರು ಅಂತ ಯಾಕ್ ತಿಳ್ಕೊಬೇಕು.
           ರಾಮಾಯಣ-ಮಹಾಭಾರತದಲ್ಲೂ ಎಲ್ಲ ಜಾತಿಯ ಬಗ್ಗೆಯೂ ಮಾಹಿತಿ ಇದೆ, ಆದರೆ ಅದು ಎಲ್ಲೂ ಇಂತ ಜಾತಿಯ ಜನ ರಾಕ್ಷಷರು ಅಂತ ಹೇಳಿಲ್ಲ . ರಾಕ್ಷಷರ ಗುಣ ವಿವರಣೆ ಸಹ(ಶಾರಿರಿಕವವಾಗಿ-ಮಾನಸಿಕವಾಗಿ) ಮನುಷ್ಯನಿಗೆ ಹೋಲುವುದಿಲ್ಲ .

           ನಾವು ತಪ್ಪು ಹುಡುಕಬೇಕು ಅಂದ್ರೆ ಯಾಲ್ಲದ್ರಲ್ಲು ತಪ್ಪು ಸಿಕ್ಕೆ ಸಿಗುತ್ತೆ.
           ಬರಿ ಋಣಾತ್ಮಕವಾಗಿ ಚಿಂತಿಸುವ ಬದಲು ಧನಾತ್ಮಕವಾಗಿ ಚಿಂತಿಸಲು ಶುರು ಮಾಡಿ.

           ಜೈ ಬೋರಪ್ಪ
           ಜೈ ಭೈರೇಶ
           ಜೈ ಭೈರವ
           ಜೈ ಕಾಲಭೈರವ !!

  • vijay
   ಫೆಬ್ರ 27 2013

   neevu helidha haage, naanu yaava sinmadallu, jesasannu henisuddu nodilla, andha haage, neevu. christian missionary gala bali pashu aagiddhara antha kaanuthidhe.. andha haage, kaakakkana gubakkana kathe. nimage nimma azzi inda thilidhilla kaanuthe..

   ಉತ್ತರ
   • Siddaraju Boregowda
    ಫೆಬ್ರ 27 2013

    ಬೇರೆಯವರ ಅಜ್ಜಿ ವಿಶಯ ಮಾತಾಡೋದನ್ನ ಯಾವ ಶಾಕೆಯಲ್ಲಿ ಹೇಳಿಕೊಟ್ಟರು? ತಾವು ತಮ್ಮ ಬುದ್ದಿಯನ್ನ ಶ್ರೀ ರಾಮನ ಪಾದಕ್ಕೆ ಅರ್ಪಿಸಿಬಿಟ್ಟಿರೋ ಹಾಗಿದೆ. ಹೊಗಳಿಕೆಗೆ ಕುಗ್ಗಬೇಡಿ!!

    ಉತ್ತರ
    • Gopalakrishna Bhagwat
     ಆಗಸ್ಟ್ 3 2013

     Well said Mr. Siddharaju what an excellent oratorical skill you have. I really appreciate you. Whatever thoughts ideas and history of conspiracy you have presented is really praiseworthy. These people have moral sense and simply argue for argument sake and they don’t have any genuine and pious interest in their commitments

     ಉತ್ತರ
 3. subbu
  ಫೆಬ್ರ 27 2013

  Thumba chenggide sathyavada vishayavanne helledree ajitha bhai

  ಉತ್ತರ
 4. ಬಸವಯ್ಯ
  ಮಾರ್ಚ್ 3 2013

  ದ್ವಿಪಾತ್ರಾಭಿನಯದಲ್ಲಿ ಸಕತ್ತಾಗಿ ಅಭಿನಯಸ್ತಿದಾರೆ ಪಿನಲ್ಯಾಂಡ್ ಪಂಡಿತರಾದ ಮಹೇಶಪ್ಪನೊರು!. ಇವರು ಒಡೆದ್ರು..ಅವ್ರು ಒಡೆದ್ರು ಅನ್ನೊ ಈ ಯಪ್ಪಂಗೆ ತಾನು ಮಾಡ್ತಿರೋದು ಅದೇ ಅನ್ನೊದು ಗೊತ್ತಿಂದಗಿಲ್ಲ. ಶೌಚಾಲಯದ ಸಮಸ್ಯೆ ಬಗ್ಗೆ ಅಷ್ಟು ಕಾಳಜಿ ಇರೊ ಮಹಾನುಭಾವರೆ..ಈ ಸಮಸ್ಯೆ ಪರಿಹರಿಹರಿಸಲು ತಮ್ಮ ಕಾಣಿಕೆಯೇನು? ಇಂಫೋಸಿಸ್ ನಲ್ಲಿರೊ ವಾಸು ಬಗ್ಗೆ ಕೇಳಿದ್ದೀರ? ಟಾಯಿಲೆಟ್ ವಾಸು ಅಂತಾನೇ ಫೆಮಸ್ ಆಗಿದ್ದಾರೆ ಆ ಇಂಜಿನೀಯರು. ನಮ್ಮ ದೇಶಕ್ಕೆ ಈಗ ಬೇಕಾಗಿರೊರು ಇಂಥೋರು. ಎಲ್ಲೊ ಕೂತು ನಮ್ಮ ದೇಶವನ್ನ, ಜನರನ್ನ ಸುಧಾರಿಸೊ ಬಗ್ಗೆ ಉಪದೇಶ ಮಾಡೋರಲ್ಲ.

  ಉತ್ತರ
  • ತಪ್ಪಾಯ್ತು ಬಸವಯ್ಯನೋರೇ,
   ಯಾವ ಯಾವ ಮಾಳದಲ್ಲಿ ನನ್ನ ಕಾಣಿಕೆ ಏನೇನಿದೆ ಎಂದು ನಿಮಗೆ ವರದಿ ಒಪ್ಪಿಸಿ ನಿಮ್ಮಿಂದ ಸಯ್ ಎನಿಸಿಕೊಂಡ ಮೇಲೇ ಇನ್ಮುಂದೆ ನನ್ ಕಾಳಜಿಯನ್ನ ಹೇಳಿಕೊಳ್ಳುತ್ತೇನೆ. ಸರಿಯೇ?
   ಅದಿರಲಿ, ಕೆಲ ಟಾಯ್ಲೆಟ್ಟಿಗೆ ಇನ್ಪೋಸಿಸ್ ವಾಸು, ಕೆಲವು ಶಾಲೆಗೆ ವಿಪ್ರೋ ಕಾಸು. ಇನ್ನು ಕೆಲವೆಡೆ ಕುಡಿಯೋ ನೀರಿಗೆ ಯಾವ ಮೂರನೇ ಜಮೀನುದಾರನನ್ನ ಅಂಗಲಾಚೋದು? ಓಹೋ, ಅದು ಸಾಯಿಬಾಬ!! ನೀವುಗಳ ಕಾಳಜಿ ಹೇಳಿಕೆ-ಕೇಳಿಕೆಗಳು ಬರೀ ಇಂತೋರ ಹತ್ತಿರ ಅನ್ನಿ? ದೊಡ್ಡೋರು!!

   ಉತ್ತರ
   • ಬಸವಯ್ಯ
    ಮಾರ್ಚ್ 4 2013

    ಸಿದ್ಧರಾಜಪ್ಪನೋರಿಗೆ..
    ನಂಗೆ ವರದಿ ಒಪ್ಪಿಸಿ ಸಯ್ ಎನ್ಸಕೋಬೇಕಾಗಿಲ್ಲ. ತಾವು ಸುಮ್ಮನೇ ತಪ್ಪುಗಳ ಲೀಸ್ಟ್ ಮಾಡೋದಕ್ಕಿಂತ, ತಪ್ಪನ್ನು ಸರಿ ಪಡಿಸಲಿಕ್ಕೆ ತಾವೇನು ಮಾಡಿದ್ದೀರಿ ಅಥವಾ ಏನು ಮಾಡಬೇಕಂತಿದ್ದೀರಿ ಅನ್ನೋದನ್ನ ಬರೆದರೆ ಉಳಿದವರಿಗೆ ಪ್ರಯೋಜನವಾಗ್ತಿತ್ತು. ಅದಕ್ಕೆ ವಾಸು ಉದಾಹರಣೆ!. ನಮ್ಮ ದೇಶದ ರಾಡಿಗಳ/ತಪ್ಪುಗಳ ಪಟ್ಟಿ ಮಾಡೋರು, ಬರೆಯೋರು, ಭಾಷಣ ಹೊಡೊಯೊರು ಈಗಾಗ್ಲೆ ಫೂಟಿಗೊಬ್ಬರಿದ್ದಾರೆ.
    ಮಹೇಶ ಭಟ್ಟರಿಗೆ..
    ನಂಗೆ ಸಿದ್ಧರಾಜಪ್ಪನೋರು ತಪ್ಪು ಅಂತ ಪ್ರೂವ್ ಮಾಡೋದಕ್ಕಿಂತ, ಅವರ ಪಾಂಡಿತ್ಯದ ‘ನಿಜ’ ಪ್ರಯೋಜನ ನಮ್ಮೆಲ್ಲರಿಗಾಗಲಿ ಎನ್ನುವ ಆಸಕ್ತಿ! :).

    ಉತ್ತರ
    • ಮಾರ್ಚ್ 5 2013

     ಬಸವಯ್ಯನವರೇ…
     ಸಿದ್ಧರಾಜಪ್ಪನವರೊಬ್ಬರದೇ ಯಾಕೆ? ನಮ್ಮ ನಿಮ್ಮೆಲ್ಲರ ‘ನಿಜ’ ಪಾಂಡಿತ್ಯದ ಪ್ರಯೋಜನ ನಮ್ಮ ನಿಮ್ಮೆಲ್ಲರಿಗೂ ಆಗಲಿ

     ಉತ್ತರ
  • ಮಾರ್ಚ್ 4 2013

   ಬಸವಯ್ಯನವರೇ ಯಾರು ಯಾವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ? ಸಿದ್ಧರಾಜುರವರು ಎತ್ತುತ್ತಿರುವ ಪ್ರಶ್ನೆಗಳಿಂದ ಏನೂ ಸಾಧ್ಯವಿಲ್ಲ ಎಂದು ಸಾಧಿಸಲು ಪ್ರಯತ್ನಿಸುತ್ತಿರುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ

   ಉತ್ತರ
 5. ಭೈರವ ಗೌಡ,
  ಅಣ್-ತಮ್ಮ,
  ಬುಡಕಟ್ಟುಗಳ್ನ ಹಿಂದುಗಳು ಅಂದುಬಿಟ್ಟಮೇಲೆ ಅಲ್ಲಿ ಏನೂ ಉಳಿದುಕೊಳ್ಳಲಿಲ್ಲವಲ್ಲ. ಇನ್ನು ಕಾಪಾಡೊದೇನು ಬಂತು?! ಹಳೇ ಮಯ್ಸೂರಲ್ಲಿ ಮಸೀದಿಗಳು ಹೆಚ್ಚವೆ ಅಂದುಕೊಳ್ಳೋದು ತಪ್ಪು ತಿಳುವಳಿಕೆ. ನಮ್ಮೂರುಗಳ ಕತೆಯನ್ನೇ ತೆಗೆದುಕೊಂಡರೆ, ನಮ್ಮೂರಲ್ಲಿ (ಅಗ್ರಹಾರ ವಳಗೆರೆಹಳ್ಳಿ) ತುಂಬಾ ಸಾಬರ ಮನೆಗಳಿದ್ವು. ಮಯ್ಸೂರು ಒಡೆಯರು ಮತ್ತು ಹಯ್ದರಾಲಿ ಟಿಪ್ಪು ಕಾಲ್ದಲ್ಲಿ ನಮ್ಮೂರ ಜಮೀನೆಲ್ಲಾ ಸಾಬರು, ಬ್ರಾಮಣರು, ಮತ್ತು ಒಡೆಯರ ಮನೆತನದವರ ಹೆಸರಲ್ಲಿತ್ತು. ಒಕ್ಕಲಿಗರಲ್ಲಿ ಎರಡು ಮೂರು ಕುಳಗಳ ಹೆಸರಲ್ಲಿ ಮಾತ್ರ ಜಮೀನಿತ್ತು. ನಮ್ಮೂರ ಒಕ್ಕಲಿಗರು, ಹೊಲೆಯರು ಅವರಿಗೆ ಜೀತ ದುಡಿಯುತ್ತಿದ್ರು. ಅದರಲ್ಲೂ ಬೋರೇಗವ್ಡನ ಪಯ್ಕಿವರಲ್ಲಿ ಎಲ್ಲರೂ ಜೀತ ದುಡಿಯುತ್ತಿದ್ದವರೇ. ಸ್ವಾತಂತ್ರ ಬಂದಮೇಲೆ ಅವರೆಲ್ಲರೂ ಒಕ್ಕಲಿಗ ಮತ್ತು ಹೊಲೆಯರಿಗೆ ಜಮೀನು ಮಾರಿ ಪಟ್ಟಣ ಸೇರಿಕೊಂಡರು. ಇದ್ದುದರಲ್ಲಿ ಸಾಬರೇ ಬೇಸಾಯ ಮತ್ತು ಬೇಸಾಯಕ್ಕೆ ಸಂಬಂದಿಸಿದ ವ್ಯಾಪಾರ ಮಾಡ್ತಾ ಇದ್ದುದು. ನಮ್ಮ ನಾಡಂಚಿನ ಮನೆಯನ್ನ ನನ್ನ ಮುತ್ತಾತ ಸಾಬರಿಂದ ಕೊಂಡಿದ್ದು. ನಮ್ಮ ಹೊಲಮಾಳವೆಲ್ಲಾ ಬ್ರಾಮಣರಿಂದ ಕೊಂಡಿದ್ದು. ನಾನು ಚಿಕ್ಕವನಿದ್ದಾಗಲೂ ನಮ್ಮೂರಲ್ಲಿ ಒಂದಶ್ಟು ಸಾಬರ ಕುಳಗಲಿದ್ವು. ರಾಮಜನ್ಮಬೂಮಿಯ ನೆಪದಲ್ಲಿ ಹೊಡೆದಾಟಗಳು ಆರಂಬವಾದಾಗ ಸಾಬರೆಲ್ಲಾ ಹೆದರಿ ಪಟ್ಟಣಗಳಲ್ಲಿ ಒಟ್ಟೊಟ್ಟಗೆ ಇರತೊಡಗಿದರು. ನಮ್ಮೂರಲ್ಲಿ ಹಲವು ಸಾಬರ ಮಸೀದಿಗಳಿದ್ವು. ಅವುಗಳಲ್ಲಿ ಒಂದು ಕೊಳ ಮತ್ತು ಒಂದು ಮಸೀದಿ ಮಾತ್ರ ಉಳಿದಿದೆ. ಬೀಜೇಪಿಯ ಕಾವು ಇದ್ದ ಕಾಲದಲ್ಲಿ ಇರುವುದೊಂದನ್ನೂ ಕೆಡವುವ ಮಾತಾಡಿಕೊಳ್ತಿದ್ರು. ಇಂದು ನಮ್ಮೂರಲ್ಲಿ ಸಾಬ್ರೂ ಇಲ್ಲ, ಬ್ರಾಮಣ್ರೂ ಇಲ್ಲ. ಮಸೀದಿಗಳು ಉಂಟೋಯ್ತಾವೆ. ಬುಡಕಟ್ಟುಗಳ ನೆಲೆಯೂ ಕಳೆದೋಯ್ತಾ ಅವೆ. ಆದ್ರೆ, ದೇವಸ್ತಾನಗಳು ಮಾತ್ರ ಹೆಚ್ತಾ ಅವೆ. ಪಟ್ಟಣಗಳಲ್ಲಿ ಮಸೀದಿಗಳು ಹೆಚ್ತಾ ಇರೋದು ಸಾಬರು ಹಳ್ಳಿಗಳನ್ನ ಪೂರ್ತಿ ತೊರೆಯುತ್ತಾ ಇರೋದರಿಂದ. ಚನ್ನಪಟ್ಟಣ ರಾಮನಗರಗಳಲ್ಲಿ ದಂಗೆಗಳಾದಾಗೆಲ್ಲಾ ಅಪಾರ ನಶ್ಟವಾಗೋದು ಸಾಬರಿಗೆ. ನಾನಿಲ್ಲಿ ಯಾವ ದೇವರನ್ನೂ ಸಮರ್ತಿಸಿಕೊಳ್ಳಲು ಬಂದಿಲ್ಲ. ಎಲ್ಲಾ ದೇವರ ವಿರುದ್ದ ಜನರನ್ನ ಸಮರ್ತಿಸಿಕೊಳ್ಳಲು ಇದ್ದೇನೆ. ನನಗೆ ಬೋರಪ್ಪನ ಏಳಿಗೆಗಿಂತ ನಿಮ್ಮ ಏಳಿಗೆ ಮುಕ್ಯ. ಬೋರಪ್ಪನಲ್ಲಿ ಇತರ ದೇವಸ್ತಾನದ ದೇವರುಗಳಿಗೆ ಹೋಲಿಸಿದರೆ ಹೇಗೆ ಹಲವು ಒಳ್ಳೆತನಗಳಿವೆಯೋ (ದೇವಸ್ತಾನ ಕಟ್ಟೋಹಾಗಿಲ್ಲ. ಪಯ್ಕಿಯವರು ನೇರವಾಗೇ ಪೂಜೆ ಮಾಡಬೇಕು. ಪೂಜಾರಿಯನ್ನ ಇಡೋ ಹಾಗಿಲ್ಲ. ಬೋರಪ್ಪನ ಬೇರೆ ಬೆರೆ ಕಾರ್ಯ ನೆರವೇರಿಸೋ ಪಯ್ಕಿಯ ಯಜಮಾನ ಚುನಾವಣೆ ಮೂಲಕ ಆಯ್ಕೆಯಾಗ್ತಾನೆ.) ಹಾಗೆಯೇ ದೇವಸ್ತಾನದ ದೇವರ ಕೆಡಕುಗಳೂ ಇವೆ (ಹೊಲೆಯರನ್ನ ಹತ್ತಿರ ಸೇರಿಸೋ ಹಾಗಿಲ್ಲ. ಹೊಲೆಯರ ನೆರಳು ಸೋಕೋಹಾಗೇ ಇಲ್ಲ! ಆದ್ದರಿಂದಲೇ ಹಬ್ಬದ ದಿನ ಹೆಂಗಸರು ಹೊತ್ತು ಮೂಡುವ ಮೊದಲೇ ಪೂಜೆ ಮಾಡಿ ಮುಗಿಸಿ ಬಂದುಬಿಡುತ್ತಾರೆ. ಹೊತ್ತು ಮೂಡುವಾಗ ಹೊಲೆಯರ ನೆರಳು ಪಯ್ಕಿಯವರ ಮೇಲೆ ಬಿದ್ದುಬಿಟ್ಟೀತು ಅಂತ. ಹೀಗೆ ಕದ್ದು ಮುಚ್ಚಿ ಪೂಜೆ ಮಾಡುವುದರಿಂದ ನಮಗೆ ಬೇರೆಯವರು ಕಳ್ಳಬೋರೇದೇವರ ಪಯ್ಕಿ ಅಂತಲೂ ಕರೆಯುತ್ತಾರೆ! ಇಲ್ಲೂ ಶ್ರೇಶ್ಟತೆಯ ಅಳತೆಗೋಲು ದಲಿತರನ್ನ ಎಶ್ಟು ಕೀಳಾಗಿ ಕಾಣಬಲ್ಲೆವು ಅನ್ನುವುದೇ!). ಇನ್ನು ಭೈರವ ತಪ್ಪಾಗಿ ಬೋರ ಆಯಿತು ಅನ್ನುವುದೂ, ಸೌಮ್ಯಕೇಶ್ವರಿ ಸೋಮನಾಳಮ್ಮ ಆಯಿತು ಎನ್ನುವುದೂ ಇದುವರೆಗೂ ಸಂಸ್ಕ್ರುತವೇ ಎಲ್ಲದರ ಮೂಲ ಅಂದುಕೊಂಡು ಬಂದಿದ್ದರ ಪರಿಣಾಮ. ವಿವರ ಪೂರ್ತಿ ತಿರುಗುಮರುಗಾಗಿದೆ. ನಂಜುಂಡ ಶ್ರೀವಿಶಕಂಟೇಶ್ವರ ಆಗೋದು, ಬೋರ ಭೈರವ, ಸೋಮನಾಳಮ್ಮ (ಸೊಮ್ಮುನಾಳಮ್ಮ?) ಸೌಮ್ಯಕೇಶ್ವರಿಯಾಗೋದು ಸಂಸ್ಕ್ರುತೀಕರಣದಿಂದ. ಇಂತವುಗಳ ಬಗ್ಗೆ ಶಂಕರನಾಗ್ ತಮ್ಮ ನಿರ್ದೇಶನದಲ್ಲಿ ಅಣ್ಣಾವ್ರು ನಟಿಸಿರುವ ‘ಒಂದು ಮುತ್ತಿನ ಕತೆ’ ಚಿತ್ರದಲ್ಲಿ ಸೊಗಸಾಗಿ ಹೇಳಿದ್ದಾರೆ. ಮುತ್ತು ಹಾಯುವ ಬುಡಕಟ್ಟಿನವರ ದೇವರನ್ನ ದೇವಸ್ತಾನದ ಪೂಜಾರಿ ಬೂತ, ಪ್ರೇತ, ರಕ್ಕಸರ ದೇವರೆಂದು ಹೀಗಳೆಯುತ್ತಾನೆ. (ದಲಿತರನ್ನು ಕೀಳಾಗಿ ಕಾಣುವ ಬೋರಪ್ಪನನ್ನ ಬ್ರಾಮಣರು ಕೀಳಾಗಿ ಕಾಣ್ತಾರೆ). ಅಣ್ಣಾವ್ರಿಗೆ ಮುತ್ತು ಸಿಕ್ಕಮೇಲೆ ದೇವಸ್ತಾನದ ದೇವರಿಗೂ, ಬುಡಕಟ್ಟಿನ ದೇವರಿಗೂ ನಂಟು ಕಟ್ಟಿಬಿಡುತ್ತಾನೆ! ಪೀಳಿಯರಿಮೆಯಲ್ಲಿ ವಲಸೆಯ ಕುರುವು ಇದೆ. ಪಡುವಣ-ಬಡಗಿನಿಂದ ಮೂಡಲು-ತೆಂಕಣದ ಕಡೆಗೆ ನಾಲ್ಕೈದು ಸಾವಿರ ವರ್ಶಗಳ ಹಿಂದೆ ಜೋರಾಗಿ ವಲಸೆಯಾಗಿರುವ ಕುರುವಿದೆ. ಹಾಗೆಯೇ ಪೀಳಿಯರಿಮೆಯಲ್ಲಿ ಹಳೇ ಕಾಲದಿಂದಲೂ ಜಾತಿಯ ಆಚರಣೆಯ ಕರುವೂ ಇದೆ. ಬಾರತೀಯರೆಲ್ಲರಲ್ಲೂ ಮೂಲ ಮತ್ತು ನಂತರದ ವಲಸಿಗರ ಮಿಶ್ರಣವಿದೆ. ಆದರೆ ಮಿಶ್ರಣದ ಪ್ರಮಾಣದಲ್ಲಿ ವೆತ್ಯಾಸವಿದೆ. ಮೊಲವಲಸಿಗ/ನಂತರದವಲಸಿಗರ ಮಿಶ್ರಣ ಬಾರತೀರಲ್ಲಿ ಹೆಚ್ಚಿನಿಂದ ಕಡಿಮೆಯ ವರೆಗೆ ಹೀಗಿದೆ: ತೆಂಕಣದ ಕೆಳಜಾತಿ>ತೆಂಕಣದ ಮೇಲುಜಾತಿ>ಬಡಗಣದ ಕೆಳಜಾತಿ>ಬಡಗಣದ ಮೇಲುಜಾತಿ.

  ಉತ್ತರ
 6. ಭೈರವ ಗೌಡ ಅಣ್-ತಮ್ಮ,
  ಬೋರಪ್ಪನಿಗೆ ಜಯ್ ಅಂದರೆ ತಿಳಿಯೋದಿಲ್ಲ! ‘ಉಗೇ’ ಅನ್ನಬೇಕು ಇಲ್ಲಾ ‘ಒಳೆತ್’ ಅನ್ನಬೇಕು!

  ಉತ್ತರ
  • ಭೈರವ ಗೌಡ
   ಮಾರ್ಚ್ 6 2013

   ನನ್ನಂಥ -ನಿನ್ನಂಥ ಅಲ್ಪರಿಗೆ ಅದರ ಅರ್ಥ ಗೊತ್ತಿರ್ಬೇಕಾದ್ರೆ , ಸಕಲವನ್ನು ಬಲ್ಲ ಭಗವಂತನಿಗೆ ಅದರ ಅರ್ಥ ಗೊತ್ತಿಲ್ಲ ಅಂದುಕೊಳ್ಳುವುದು ಮೂರ್ಖತನ !!

   ಉತ್ತರ
   • ಗುಡಿಯಲ್ಲಿರುವ ದೇವರುಗಳಿಗೆ ಸಂಸ್ಕ್ರುತ ಶ್ಲೋಕ ಮಾತ್ರ ಯಾಕೆ ಅಂತ ಯಾವಾಗ್ಲಾದ್ರೂ ಕೇಳಿಕೊಂಡಿದ್ದೀರಾ? ಗುಡಿಯಲ್ಲಿರುವ ದೇವರು ‘ನನ್ನತಹ-ನಿಮ್ಮಂತಹ’ ಅಲ್ಪನೇ? ಸಂಸ್ಕ್ರುತದ ಅಲ್ಪನೇ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments