“ಸ್ವಾತಂತ್ರ್ಯವೀರ”ನ ವ್ಯಕ್ತಿತ್ವ ಅನಾವರಣ..!!
– ಭೀಮಸೇನ್ ಪುರೋಹಿತ್
“ಭಗತ್ ಸಿಂಗ್, ರಾಜಗುರು,ಆಜಾದ್ ಮುಂತಾದ ಕ್ರಾಂತಿಕಾರಗಳ ಹೆಸರುಗಳನ್ನು ಕೇಳಿದಾಗಲೆಲ್ಲ ನಾವು ಆದರದಿಂದ ತಲೆಬಾಗುತ್ತೇವೆ.ಆದರೆ, ಇಂತಹ ನೂರಾರು ಕ್ರಾಂತಿಕಾರಗಳನ್ನ ನಿರ್ಮಿಸಿದ ‘ಸಾವರ್ಕರ’ರನ್ನು ಸ್ಮರಿಸುವಾಗ ಸಂಕೋಚಕ್ಕೆ ಒಳಗಾಗುವುದು ಬಹಳ ದೌರ್ಭಾಗ್ಯದ ಸಂಗತಿ. ವೀರ ಸಾವರ್ಕರರ ಬಗ್ಗೆ ಅನೇಕ ಭ್ರಮೆಗಳನ್ನು ಹಬ್ಬಿಸಿರುವುದೇ ಇದಕ್ಕೆ ಕಾರಣ..”
ಮಾಜಿ ಕೇಂದ್ರಮಂತ್ರಿ ಹಾಗು ಕಾಂಗ್ರೆಸ್ ನಾಯಕ ‘ವಸಂತ ಸಾಠೆ’ ಯವರ ಈ ಮಾತು ಯಾವಾಗಲೂ ನನ್ನನ್ನು ಕಾಡಿವೆ.. ಇಲ್ಲಸಲ್ಲದ, ಮಿಥ್ಯಾ ಆರೋಪಗಳನ್ನೇ ನಿಜವೆಂದು ನಂಬಿ, ಒಬ್ಬ ರಾಷ್ಟ್ರೀಯ ಪುರುಷನನ್ನು ಹಿಂಬದಿಗೆ ಸರಿಸಿ, ಅವರ ತೇಜೋವಧೆಯನ್ನೇ ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವುದು ನಿಜಕ್ಕೂ ಬೇಸರದ ಸಂಗತಿಯೇ..
ಕೇವಲ ಸಾವರ್ಕರರ ಮೇಲಿನ ವೃಥಾ ಅಭಿಮಾನದಿಂದ ಈ ಲೇಖನ ಹೊರಟಿಲ್ಲ.. ಬದಲಾಗಿ ಸಾವರ್ಕರರ ನಿಜಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಷ್ಟೇ..
ಸಾವರ್ಕರ್-ದೇಶಭಕ್ತಿ-ಸ್ವಾತಂತ್ರ್ಯ ಹೋರಾಟ..
ಸಾವರ್ಕರಜೀಯವರ ದೇಶಪ್ರೇಮ ವಿವಾದಾತೀತ.. ಬಾಲ್ಯದಿಂದಲೂ ರಾಷ್ಟ್ರಕ್ಕೆ ಅರ್ಪಿಸಿಕೊಂಡ ಬದುಕು ಅದು. ಚಿಕ್ಕಂದಿನಲ್ಲೇ ‘ಮಿತ್ರಮೇಳ’ವನ್ನು ಸ್ಥಾಪಿಸಿ ಗೆಳೆಯರಿಗೆ ರಾಷ್ಟ್ರೀಯತೆಯ ಪಾಠ ಕಲಿಸುತ್ತಿದ್ದವರು
ಅವರು. ಆನಂತರ “ಅಭಿನವ ಭಾರತ”ವನ್ನು ಸ್ಥಾಪಿಸಿ ದೊಡ್ಡ ಕ್ರಾಂತಿಯನ್ನೇ ಹುಟ್ಟುಹಾಕಿದ್ದು ಇತಿಹಾಸ..
ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ’ಸಿಪಾಯಿ ದಂಗೆ’ ಎಂದು ಹೀಗಳೆಯುತ್ತಿದ್ದವರಿಗೆ, ಅದು ಬರೀ ಜಗಳವಲ್ಲ, ಸ್ವಾತಂತ್ರ್ಯದ ಅಡಿಗಲ್ಲು ಎಂಬುದನ್ನು ಪ್ರಮಾಣ ಸಹಿತವಾಗಿ ನಿರೂಪಿಸಿದ್ದರು. ಅವರ ಆ ಪುಸ್ತಕವೇ, ಪ್ರಕಟಣೆಗೂ ಮುನ್ನವೇ ವಿಶ್ವಾದ್ಯಂತ ನಿಷೇಧಕ್ಕೊಳಗಾಯಿತು.. ಆದರೂ ಆ ಪುಸ್ತಕ ರಹಸ್ಯವಾಗಿ ಭಾರತವನ್ನು ಸೇರಿದ್ದಷ್ಟೇ ಅಲ್ಲ, ಬದಲಾಗಿ ವಿಶ್ವದ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಿತಗೊಂಡಿತು..
ಲಂಡನ್ನಿಗೆ ಬ್ಯಾರಿಸ್ಟರ್ ಪದವಿ ತರಲು ಹೋಗಿದ್ದ ಸಾವರ್ಕರ್, ಮರಳಿ ಬಂದದ್ದು ಕೈತುಂಬ ಕೋಳಗಳನ್ನು ತೊಡಿಸಿಕೊಂಡು..!!
ಅಲ್ಲಿಯೇ, ’ಸಾಗರೋತ್ತರ ಅಭಿನವ ಭಾರತ’ದ ಶಾಖೆಯೊಂದನ್ನು ಸ್ಥಾಪಿಸಿದ್ದರು. ಪಂಡಿತ್ ಶ್ಯಾಮಜಿ ಕ್ರಿಷ್ಣವರ್ಮಾರವರು ಕಟ್ಟಿಸಿದ್ದ ’ಭಾರತ ಭವನ’ದಲ್ಲಿ ಪ್ರತಿನಿತ್ಯ ಸಾವರ್ಕರರ ಅಗ್ನಿಜ್ವಾಲೆಯ ಉಪನ್ಯಾಸಗಳು ನಡಿತಿದ್ವು..ಅದರಿಂದ ಪ್ರೇರಿತರಾಗಿ ಸ್ವಾತಂತ್ರ್ಯಸಂಗ್ರಾಮಕ್ಕೆ ಧುಮುಕಿದ ತರುಣರು ಅಸಂಖ್ಯ.
ಮದನ್ ಲಾಲ್ ಧಿಂಗ್ರ, ವಿ.ವಿ.ಎಸ್.ಅಯ್ಯರ್, ಮೇಡಂ ಕಾಮಾ ಎಲ್ಲರೂ ಸಾವರ್ಕರರ ಗರಡಿಯಲ್ಲಿ ಪಳಗಿದವರೇ..
ಬ್ರಿಟಿಶ್ ಸರ್ಕಾರದ ವಿರುದ್ಧ ಕೆಲಸಗಳನ್ನು ಮಾಡುತ್ತಿದ್ದ ಆರೋಪದ ಮೇಲೆ ಆಂಗ್ಲರು ಅವರನ್ನು ಬಂಧಿಸಿ ಭಾರತಕ್ಕೆ ಕಳಿಸಲು ತಯಾರು ಮಾಡಿದರು.. ಮಾರ್ಗಮಧ್ಯೆ ಹಡಗಿನಿಂದಲೇ ಹಾರಿ, ಮಹಾ ಸಮುದ್ರವನ್ನೇ ಈಜಿ, ಫ಼್ರಾನ್ಸ್ ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ, ದುರ್ದೈವದಿಂದ ಸಾಧ್ಯವಾಗಲಿಲ್ಲ.
ಭಾರತದಲ್ಲಿ ವಿಚಾರಣೆ ನಡೆದ ಬಳಿಕ ಬರೋಬ್ಬರಿ 50 ವರ್ಷಗಳ ಅಂಡಮಾನಿನ ಕರಿನೀರಿನ ಶಿಕ್ಷೆ ವಿಧಿಸಲಾಯಿತು.. ಅದನ್ನೂ ನಿರಮ್ಮಳವಾಗಿ ಸ್ವೀಕರಿಸಿದ ಸಾವರ್ಕರ್ ಆ ಅಂಡಮಾನಿನಲ್ಲೂ ರಾಷ್ಟ್ರೀಯತೆಯ ಕಂಪನ್ನು ಪಸರಿಸಿದ ವಾಯು..
ತೆಂಗಿನ ನಾರು ಸುಲಿಯುವ, ಗಾನದ ಎಣ್ಣೆ ತೆಗೆಯುವ, ಒಂಟಿಕೋಣೆಯಲ್ಲಿನ ನರಕಯಾತನೆ ಅನುಭವಿಸಿದರೂ, ಬಿಡುವಾದಾಗಲೆಲ್ಲ ಅಲ್ಲಿಯ ಜನರಿಗೆ ದೇಶದ ಪಾಠ ಹೇಳಿಕೊಡುತ್ತಿದ್ದ ಅದ್ಭುತ ವ್ಯಕ್ತಿ..
ಅಂಡಮಾನಿನ ಕೈದಿಗಳಿಗೆ ಉಳಿದವರಂತೆ ಓದಲು, ಬರೆಯಲೂ ಅವಕಾಶವಿರಲಿಲ್ಲ.. ಆದರೆ ಸಾವರ್ಕರ್ ಮಾತ್ರ ಸುಮ್ಮನೆ ಕೂಡುವವರಲ್ಲ. ಹೇಗೋ ಒಂದು ಮೊಳೆಯನ್ನು ಸಂಪಾದಿಸಿ ಅದರಿಂದಲೇ ಜೈಲಿನ ಗೋಡೆಗಳ ಮೇಲೆಲ್ಲಾ ದೇಶಭಕ್ತಿಯ ಕವನಗಳನ್ನು ಕೆತ್ತಿ, ಬೇರೆಯವರೂ ಅದನ್ನು ಓದಿ ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಿದ್ದ ಚಾಣಾಕ್ಷರು. ಒಟ್ಟು ಹತ್ತುಸಾವಿರ ಸಾಲುಗಳ ಕಾವ್ಯವನ್ನು ಆ ಜೈಲಿನಲ್ಲೇ ರಚಿಸಿ, ಬಿಡುಗಡೆಯಾದ ಮೇಲೆ “ಕಮಲಾ” ಎಂಬ ಹೆಸರಿನಲ್ಲಿ ಪ್ರಕಟಿಸಿದರು..
ಸಾವರ್ಕರ್ ಮತ್ತು ಹಿಂದುತ್ವ..!!
ಸಾವರ್ಕರ್ ಹಿಂದುತ್ವವಾದಿಗಳು ಅನ್ನೋದು ಇತಿಹಾಸವಿದಿತವೆ.. ಆದರೆ ಅದರ ಜೊತೆಗೆ ಅವರು ಅನ್ಯಧರ್ಮಗಳ ಕಟ್ಟಾ ದ್ವೇಷಿಗಳು ಅನ್ನೋ ಆರೋಪವನ್ನ ವಿನಾಕಾರಣ ಮಾಡಲಾಗುತ್ತೆ.
ಸಾವರ್ಕರ್ ಎಂದೂ ಸುಖಾಸುಮ್ಮನೆ ಧರ್ಮಗಳನ್ನ ಹೀಗಳೆದವರಲ್ಲ.. ಗಾಂಧೀಜಿಗೂ ಮುಂಚೆಯೇ “ಹಿಂದೂ-ಮುಸ್ಲಿಂ” ಏಕತೆ ಆಗಬೇಕು ಆನೋದನ್ನ ಮನಗಂಡಿದ್ದವರು. ಅವರ “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ”ದ ಪುಸ್ತಕ ಓದಿದಾಗಲೇ ಅದರ ಅರಿವಾಗುತ್ತೆ.. ಅಂದು, ನಾನಾ ಸಾಹಿಬ್ ಪೇಶ್ವೆ ಮತ್ತು ಸಹಚರರು, ಹಾಗೂ ಮುಘಲ್ ದೊರೆ ‘ಬಹಾದ್ದೂರ್ ಷಾ’ ಅದೆಂತಹ ಐಕ್ಯತೆಯನ್ನು ಬೆಳೆಸಿ ಒಟ್ಟುಗೂಡಿ ಆಂಗ್ಲರ ವಿರುದ್ಧ ಬಂಡೆದ್ದ ಘಟನೆಯನ್ನು ಹೇಳುವಾಗಲೇ ಅವರ ಆಂತರ್ಯ ಅರ್ಥವಾಗುತ್ತೆ..
ಆದರೆ, ಆ ಐಕ್ಯತೆಗಾಗಿ ನಮ್ಮತನವನ್ನೆಲ್ಲ ಬಲಿಕೊಡಲು ಸಾವರ್ಕರ್ ಎಂದೂ ಸಿದ್ಧರಿರಲಿಲ್ಲ..
‘ಮುಸ್ಲಿಂ ಲೀಗ್’ ಅನ್ನು ಸಾವರ್ಕರ್ ವಿರೋಧಿಸಿದ್ದು ಅದಕ್ಕೇ.. ಮುಸ್ಲಿಂ ಲೀಗ್ ಯಾವತ್ತೂ ಭಾರತದ ಮುಸ್ಲಿಮರ ಪ್ರತೀಕವಾಗಿರಲಿಲ್ಲ.. ತಮ್ಮ ತಮ್ಮ ಸ್ವಾರ್ಥ-ಅಧಿಕಾರಗಳಿಗಾಗಿ ಹಂಬಲಿಸುತ್ತಿದ್ದ ಕೆಲವೇ ಕೆಲವು ನಾಯಕರ ಗೂಡು ಅದು.. ದೇಶ ಒಡೆಯಲೆಂದೇ ಹುಟ್ಟಿದ್ದ ಆ ಸಂಘಟನೆಗೆ ಗಾಂಧೀಜಿ ಎಲ್ಲ ಸವಲತ್ತುಗಳನ್ನು ಕೊಡಲಾರಂಭಿಸಿದರು. ಆದರೆ ಮುಸ್ಲಿಂ ಲೀಗ್ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು??????.. “ಕ್ವಿಟ್ ಇಂಡಿಯಾ” ಚಳುವಳಿಗೆ ಸ್ವತಃ ಲೀಗ್ ವಿರೋಧ ವ್ಯಕ್ತಪಡಿಸಿತ್ತು..
ಇಷ್ಟಾದರೂ ಅಂಥಾ ದೇಶದ್ರೋಹಿಗಳನ್ನು ನೆಹರು ಅಂತಹ ದ್ವಿಮುಖಿಗಳು ಬೆಂಬಲಿಸಿದ್ದರು..
ಆದರೆ ಒಬ್ಬ ಸಾವರ್ಕರ್ ಮಾತ್ರ ಸ್ಪಷ್ಟವಾಗಿ ಹೇಳಿದ್ದರು.. “ನೀವು ಬರುವುದಾದರೆ ನಿಮ್ಮ ಜೊತೆಗೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ವಿರೋಧಿಸಿದರೆ ನಿಮ್ಮನ್ನು ಮೆಟ್ಟಿ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಇರುತ್ತೇವೆ” ಅಂತ..
ರಾಷ್ಟ್ರವನ್ನು ದುರ್ಬಲಗೊಳಿಸುವ ಎಲ್ಲಾ ಕಾರ್ಯಗಳನ್ನು ಅವರು ವಿರೋಧಿಸಿತ್ತಿದ್ದರು.. ಹೀಗಾಗಿಯೇ ಪುನಃ “ಶುದ್ಧಿ” ಚಳುವಳಿಯನ್ನ ಅವರು ಆರಂಭಿಸಿದ್ದು..
ಮತಾಂತರಕ್ಕೆ ‘ಹಿಂದೂ’ ಧರ್ಮದ ದೋಷಗಳು ಎಷ್ಟು ಕಾರಣವೋ, ಅಷ್ಟೇ ಬಲವಂತ, ಹಿಂಸೆಯೂ ಕಾರಣ ಅನ್ನೋದನ್ನ ಅವರು ಅಂಡಮಾನಿನಲ್ಲಿ ಸ್ವತಃ ಕಂಡಿದ್ದರು..
ಅಲ್ಲಿನ ಪಠಾಣರು ಬಲವಂತವಾಗಿ ಹಿಂದೂಗಳನ್ನ ಮತಾಂತರ ಮಾಡುತ್ತಿದ್ದರೂ ಜೈಲಿನ ಅಧಿಕಾರಿ ‘ಮತಾಂತರಕ್ಕೆ ನಮ್ಮ ಸರ್ಕಾರದಲ್ಲಿ ಅವಕಾಶವಿದೆ’ ಅಂತ ಹೇಳಿ ಸುಮ್ಮನಾಗಿದ್ದ.. ಹಾಗೆ ಹೇಳಿದ ಮರುದಿನವೇ, ಸಾವರ್ಕರ್ ಮತಾಂತರಗೊಂಡಿದ್ದ ಒಬ್ಬನನ್ನು ಕರೆದು ತಂದು, ಅವನಿಗೆ ತುಳಸಿಯ ನೀರನ್ನು ಕುಡಿಸಿ, ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ತಂದರು.. ಈ ಕಾರ್ಯವನ್ನು ಪ್ರಶ್ನೆ ಮಾಡಿದ ಜೈಲಿನ ಅಧಿಕಾರಿಗೆ, ಸಾವರ್ಕರ್ ನಿಧಾನವಾಗಿಯೇ “ನೀವೇ ಹೇಳಿದ್ದಿರಿ, ನಿಮ್ಮಲ್ಲಿ ಮತಾಂತರಕ್ಕೆ ಅವಕಾಶವಿದೆ ಅಂತ. ಅವರು ಮುಸ್ಲಿಮನಾಗಿ ಮತಾಂತರ ಮಾಡಿದ್ದರು. ನಾನು ಮತ್ತೆ ಹಿಂದೂವಾಗಿ ಮತಾಂತರ ಮಾಡಿದ್ದೇನೆ. ಅದು ತಪ್ಪಲ್ಲ ಅಂದ್ರೆ, ಇದೂ ತಪ್ಪಲ್ಲ.” ಎಂದು ಹೇಳಿದಾಗ ಆ ಆಧಿಕಾರಿ ನಿರುತ್ತರನಾಗಿದ್ದ.
ಸಾವರ್ಕರ್ ಮತ್ತು ಭಾರತ..!!
ಸಾವರ್ಕರ ಕನಸಿನ ಭಾರತ ವಿಶಿಷ್ಠವೇ ಆಗಿತ್ತು.. ಸಾವರ್ಕರರ ಭಾರತದಲ್ಲಿ ಪ್ರತಿಯೂಬ್ಬರಿಗೂ ಸಮಾನ ಹಕ್ಕು ಕರ್ತವ್ಯಗಳಿದ್ದವು.ಆದರೆ ದೇಶದೊಳಗೆ ಮತ್ತೊಂದು ದೇಶ ನಿರ್ಮಿಸುವ ಹಕ್ಕು ಯಾರಿಗೂ ಇರಲಿಲ್ಲ..
ಸಾವರ್ಕರ್ ಬಹುಮುಂಚೆಯೆ ಸಮಾಜಸುಧಾರಣೆಯ ಮಹತ್ವವನ್ನು ಅರಿತವರು. ಅದಕ್ಕೆಂದೇ ರತ್ನಾಗಿರಿಯಲ್ಲಿ “ಪತಿತಪಾವನ” ಮಂದಿರ ನಿರ್ಮಿಸಿದರು. ಅಲ್ಲಿ ಹಿಂದುಳಿದವರೇ ಪೂಜಾರಿಗಳು. ಅವರೇ ತೀರ್ಥ-ಪ್ರಸಾದ ವಿತರಕರು..ಅದಕ್ಕೆ ಚಕಾರ ಎತ್ತಿದವರೆಲ್ಲಾ ಸಾವರ್ಕರರ ತರ್ಕಬದ್ಧ ವಿಚಾರಗಳ ಎದುರು ಸೋತು, ಸಾವರ್ಕರರನ್ನೇ ಹಿಂಬಾಲಿಸಿದರು.
ಸಾವರ್ಕರರನ್ನ ನಾವು ನೆನಪಿಸಿಕೊಳ್ಳಬೇಕಾದದ್ದು ಅವರ ಸೈನ್ಯಕೀಕರಣವನ್ನ. ಎಷ್ಟೇ ಜನ ವಿರೋಧಿಸಿದರೂ ಸಾವರ್ಕರ್ ಮಾತ್ರ ಹಿಂದೂಗಳಿಗೆ ಸೈನ್ಯ ಸೇರಲು ಕರೆ ನೀಡಿದ್ದರು. ಅದರಿಂದ ಪ್ರೇರಿತರಾದ ಅನೇಕರು ಸೈನ್ಯ ಸೇರಿಯೇ ಬಿಟ್ಟರು.. ಅವರ ಆ ದೂರದೃಷ್ಟಿಯ ಪರಿಣಾಮವಾಗಿಯೇ ಇವತ್ತು ಹೈದರಾಬಾದ್ ಪ್ರಾಂತ, ಕಾಶ್ಮೀರಗಳು ಭಾರತದ ಭೂಪಟದಲ್ಲಿವೆ.. ಆದರೂ ಸಾವರ್ಕರರ ಎಣಿಕೆಯಂತೆ ಆ ಕಾರ್ಯ ಪೂರ್ಣವಾಗಿರಲಿಲ್ಲ..
ಚೈನಾ ಯುದ್ಧದಲ್ಲಿ ಬೇಜವಾಬ್ದಾರಿಯಿಂದ ಭಾರತ ಸೋತಾಗ ಆಗಿನ ಸೈನ್ಯಾಧಿಕಾರಿ ಕಾರಿಯಪ್ಪನವರು ಹೇಳಿದ್ದು ಅದನ್ನೇ..”ಒಂದು ವೇಳೆ ಭಾರತವು ಸಾವರ್ಕರರ ಸೈನ್ಯಕೀಕರಣದ ನೀತಿಯನ್ನು ಸ್ವೀಕರಿಸಿ ಅದಕ್ಕನುರೂಪವಾಗಿ ಸಿದ್ಧವಾಗಿದ್ದರೆ ಇಂದಿನ ಅಪ್ರಿಯ ಸ್ಥಿತಿಗೆ ಬರುತ್ತಿರಲಿಲ್ಲ..” ಅಂತ..!!
ಸಾವರ್ಕರ್ ಮತ್ತು ಗಾಂಧೀಹತ್ಯೆ
ಸಾವರ್ಕರ್ ಗಾಂಧೀಹತ್ಯೆಯ ರೂವಾರಿ ಎಂಬೀ ವಾದ, ಗಾಂಧೀಜಿ ಕೊಲೆಯಾದಾಗಿನಿಂದ ಇವತ್ತಿಗೂ ಜೀವಂತವಾಗಿ ಇದೆ.
“ಗಾಂಧೀ ಹತ್ಯೆಯಲ್ಲಿ,ಸಾವರ್ಕರರ ಪಾತ್ರವೇನೂ ಇಲ್ಲ. ಅದಕ್ಕೆ ಯಾವುದೇ ಸಾಕ್ಷ್ಯಗಳೂ ಇಲ್ಲ.ಅದೊಂದು ಹುರುಳಿಲ್ಲದ ಆರೋಪ.ಅವರನ್ನು ಬಿಟ್ಟುಬಿಡಿ”- ಅಂತ ಅಂದಿನ ಕಾನೂನು ಸಚಿವರಾಗಿದ್ದ ‘ಶ್ರೀಯುತ ಅಂಬೇಡ್ಕರ’ರು ಸಾರಿ ಸಾರಿ ಹೇಳಿದರೂ, ಪ್ರಧಾನಿ ನೆಹರು ಮಾತ್ರ ಕಿವುಡರಾಗಿದ್ದರು..
ಸಾವರ್ಕರರನ್ನು ಅವಮಾನಿಸಲು ತನಗೆ ಸಿಕ್ಕ ಈ ಅವಕಾಶವನ್ನು, ಆ ‘ಗುಲಾಬಿಯ ಚಾಚಾ’ ಹೇಗೆ ತಾನೇ ಬಿಡಲು ಸಾಧ್ಯವಿತ್ತು.??!!… ಜೈಲಿನಲ್ಲಿಯೂ ಫ್ಯಾನು, ಸೋಫಾಗಳ ಸುಖದಲ್ಲಿ ದಿನ ಕಳೆಯುತ್ತಿದ್ದ ಆ ‘ಗುಲಾಬಿ’ಗೆ, ಅಂಡಮಾನಿನ ಭೀಕರ ಮೃತ್ಯುಕೂಪವನ್ನು ಜಯಿಸಿ ಬಂದ ‘ವೀರ’ನ ಬಗ್ಗೆ ತಿಳಿದಿರಬೇಕಿತ್ತು ಅನ್ನೋದೇ ನಮ್ಮ ಮೂರ್ಖತನ..!!!
ಸ್ವಾತಂತ್ರಕ್ಕೂ ಮುಂಚೆ, ದೇಶಕ್ಕಾಗಿ ಕೋರ್ಟಿನ ಕಟಕಟೆ ಹತ್ತಿದ್ದ ಸಾವರ್ಕರರನ್ನು, ಸ್ವಾತಂತ್ರ್ಯ ಬಂದ ಮೇಲೂ,ಸುಳ್ಳು ಆರೋಪದೊಂದಿಗೆ, ಕಡೆಗೂ ಕೋರ್ಟಿಗೆ, ಜೈಲಿಗೆ ಅಲೆದಾಡಿಸಿದರು.. ಆದರೆ ನ್ಯಾಯಾಲಯ ಅಂತ ಒಂದಿದೆಯಲಾ.. ಅದಂತೂ ಸ್ಪಷ್ಟವಾಗಿ ಸಾವರ್ಕರರನ್ನು ನಿರ್ದೋಷಿ ಅಂತ ಕೂಗಿ ಹೇಳಿತು..
1949 ಫೆಬ್ರವರಿ 10 ರಂದು, ನ್ಯಾಯಾಧೀಶರಾದ ಆತ್ಮಾಚರಣರು ತಮ್ಮ ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ.
“There is no reason to support that Vinayak Damodar Savarkar had any hand in what took place at Delhi on 20-1-1948 and 30-1-1938”..
ತೀರ್ಪಿನ ಕಡೆಯಲ್ಲಿ ಮತ್ತೊಮ್ಮೆ ಈ ಅಂಶವನ್ನು ಸ್ಪಷ್ಟಪಡಿಸುತ್ತಾ ಹೀಗೆ ಹೇಳಲಾಗಿದೆ..
“Vinayak Damodar Savarkar is found not guilty on the offences as specified in the charge and is acquitted there under he is in custody and can be released forthwith”..
ಇಷ್ಟು ಸ್ಪಷ್ಟವಾದ ನಿರ್ಣಯವಾಗಿದ್ದರೂ, ಕಂಡೂ ಕುರುಡರಂತೆ ಕೆಲವರು ವರ್ತಿಸುತ್ತಿದ್ದಾರೆ ಅಂದ್ರೆ, ಅವರ ಬಗ್ಗೆ ಒಂದು ಸಣ್ಣ ಮರುಕವನ್ನಷ್ಟೇ ಪಡಬಹುದು..!!!!!!!!!
ಸಾವರ್ಕರರ ಬೆಗ್ಗೆ ಅಪಾರ ಅಭಿಮಾನ ಮೂಡುವುದೇ ಈ ಎಲ್ಲ ಕಾರಣಕ್ಕಾಗಿ.. ಅವರದು ಹತ್ತು ಹಲವು ಮುಖ. ಸದಾ ‘ರಾಷ್ಟ್ರ’ದಲ್ಲೇ ‘ಧ್ಯಾನಾ’ಸಕ್ತ ಮನಸ್ಸು ಅವರದು..ಆದರೆ ಅವರ ಜೀವನದ ಒಂದಿಂಚನ್ನೂ ಓದದ, ಓದಿದರೂ ಅರ್ಥೈಸಿಕೊಳ್ಳಲಾಗದವರು ಕೇವಲ ಆರೋಪಗಳನ್ನು ಮಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ..ಆದರೆ, ಬದುಕಿಡೀ ದೇಶಕ್ಕಾಗಿ ಜೀವವನ್ನು ಬಲಿಕೊಟ್ಟ ಅವರಿಗೆ, ಒಂದು ಸಣ್ಣ ಕೃತಜ್ಞತೆಯನ್ನೂ ಹೇಳಲು ಹಿಂಜರಿಯುವಂತಾಯಿತಲ್ಲಾ..! ಅದೇ ಬೇಸರ..!!
ಸಾವರ್ಕರ್ಜೀ ನೀವು ಸದಾ ನಮ್ಮ ಮನದಲ್ಲಿದ್ದೀರಿ..
ನಿಮ್ಮ ತಾರ್ಕಿಕ, ರಾಷ್ಟ್ರೀಯ ವಿಚಾರಗಳು ಎಂದಿಗೂ ನಮಗೆ ಸ್ಫೂರ್ತಿ..
ಸಶಕ್ತ ಭಾರತಕ್ಕಾಗಿ ನಿಮ್ಮ ವಿಚಾರಧಾರೆ ನಮಗೆ ಬೇಕಾಗಿದೆ..
ನಿಮ್ಮ ಅದ್ಭುತ ವ್ಯಕ್ತಿತ್ವದ ಒಂದಂಶವನ್ನು ನಮಗೂ ಹರಸಿ..
ವಂದೇ ಮಾತರಂ………..!!!!
savarkar bagge tilisiddakkae anata dhanyavadgalu.
inamma dininityada kelsamayavannu deshakkagi meesalidona.
BHarata uliya bekadare “SWADESHI BALASI, DESH ULISI” EE ABHIYANA ATAYAGATAYA.
subhash
yeriyur, yelandur tq, chamarajanagar dist
nijavaada maatu, savarkara obba nishtura deshpremi idaralli yavude anumaanavilla, adare indians heart is sweet but thinks are silly…annuvante illi olledakke horadabekandre kettaddanna nirikshisabekaaguttade, iduve namma mahaan bharat
Bhimsen ji tumba dhanyavadagalu…
nimma ee barahavannu So called Secularist galu odali embuvude nanna ashaya..
Dhanyavad..
Chethan Mng
ಕಂಗ್ಲಿಷ್’ಗಿಂತ ಇಂಗ್ಲಿಷೇ ಮೇಲು. ಅಭಿಪ್ರಾಯ ಬರೆಯುವವರು ಕನ್ನಡ ಯೂನಿಕೋಡ್ ಬಳಸಿ ಪ್ಲೀಸ್.
ಇಲ್ಲದೇ ಹೋದರೆ, ಇಂಗ್ಲಿಷ್ ಲಿಪಿಯುಳ್ಳ ಕನ್ನಡ ವಾಕ್ಯ ಓದಲು ಅಪಾರ ತಾಳ್ಮೆ ಬೇಕಾಗುತ್ತದೆ.
@ಭೀಮಸೇನ್ ಪುರೋಹಿತ್.. Thaayi Bharathiyannu avirathavagi archisi, Swathanthryakkagi aneka kashta nashtagalannedurisi, Bharathada swathanthrya sangramakke avismaraneeyavada sahayoga needida Veer Savarkar bagge nimma lekhana mananeeyavagide. Vande Mataram.
great to read we need persons like him in todays time to again freedom India
ಮೊಡದೊಳಗಿನ ಸೂರ್ಯ ಈ ಸಾವರ್ಕರರು……..
My lots of selute to Veer Savarkarji………….
ಗೋಡ್ಸೆ ಗಾಂಧೀಜಿಯವರನ್ನು ಹತ್ಯೆ ಮಾಡುವಲ್ಲಿ ಸಾವರ್ಕರ್ ಅವರ ಸಿದ್ಧಾಂತ ಕೆಲಸ ಮಾಡಿದೆ ಎಂಬುದು ಅಲ್ಲಗಳೆಯಲಾಗದ ಸತ್ಯ. ಗೋಡ್ಸೆ ಗಾಂಧಿ ಹತ್ಯೆ ಮಾಡುವ ಮೊದಲು ಸಾವರ್ಕರ್ ಅವರನ್ನು ಕೆಲವು ಸಲ ಭೇಟಿ ಮಾಡಿರುವುದೂ ಅಲ್ಲಗಳೆಯಲಾಗದ ಸತ್ಯ. ಹೀಗಾಗಿ ಗಾಂಧಿ ಹತ್ಯೆಯ ಪ್ರೇರಣೆ ನೀಡಿದವರು ಸಾವರ್ಕರ್ ಎಂಬುದು ಹೆಚ್ಚಿನ ಭಾರತೀಯರ ನಂಬಿಕೆ. ಸಾವರ್ಕರ್ ಆರಂಭದಲ್ಲಿ ವೀರಾವೇಶದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೂ ಕೊನೆಗೆ ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟದಿಂದ ಹಿಮ್ಮೆಟ್ಟಿದರು. ಇದಕ್ಕೆ ಬ್ರಿಟಿಷರು ಅವರನ್ನು ಅಂಡಮಾನಿನ ಜೈಲಿನಿಂದ ಬಿಡುಗಡೆ ಮಾಡುವ ಮುನ್ನ ವಿಧಿಸಿದ ಪೂರ್ವಷರತ್ತು ಏನೆಂದರೆ ಇನ್ನೆಂದಿಗೂ ರಾಜಕೀಯ ಹೋರಾಟದಲ್ಲಿ ಭಾಗವಹಿಸಬಾರದು ಎಂಬುದು. ಹೀಗಾಗಿ ಸಾವರ್ಕರ್ ಕೊನೆಗೆ ಹೇಡಿಯಾಗಿ ಬ್ರಿಟಿಷರು ವಿಧಿಸಿದ ಷರತ್ತಿಗೆ ತಲೆಬಾಗಿ ಸ್ವಾತಂತ್ರ್ಯ ಹೋರಾಟದಿಂದಲೇ ಹಿಮ್ಮೆಟ್ಟಿದರು. ಸಾವರ್ಕರ್ ಅವರು ಕೊನೆಗೆ ಬ್ರಿಟಿಷರೊಂದಿಗೆ ಕೈಜೋಡಿಸಿದ ವಿವರಗಳ ದಾಖಲೆಗಳನ್ನು ಬ್ರಿಟನ್ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದು ಇದರ ಕುರಿತಾದ ವಿವರಗಳುಳ್ಳ ಪುಸ್ತಕವನ್ನು ಕೋ. ಚೆನ್ನಬಸಪ್ಪನವರು ಬರೆಯುತ್ತಿದ್ದು ಇದು ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ. ಈ ಪುಸ್ತಕ ಪ್ರಕಟವಾದಾಗ ಸಾವರ್ಕರ್ ಅವರ ಇನ್ನೊಂದು ಮುಖ ಅನಾವರಣಗೊಳ್ಳಲಿದೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡಿದ ಸುಭಾಷಚಂದ್ರ ಬೋಸ್, ಭಗತ್ ಸಿಂಗ್ ಎಲ್ಲಿ, ಬ್ರಿಟಿಷರೊಂದಿಗೆ ರಾಜಿಯಾಗಿ ಅವರ ಜೊತೆ ಕೈಜೋಡಿಸಿದ ಸಾವರ್ಕರ್ ಎಲ್ಲಿ ನಿಲ್ಲಲಿದ್ದಾರೆ ಎಂಬುದು ಆಗ ತಿಳಿಯಲಿದೆ.
ಸಾವರ್ಕರ್ ವಿಷಯದಲ್ಲಿ ಎಡಪಂಥೀಯರಿಗೆ ಸಿಗುವುದು “ಆ ಪತ್ರ” ಬಿಟ್ಟು ಇನ್ನೇನು ಇಲ್ಲ ಪಾಪ! I pity Poor Fellows..! ಬ್ರಿಟಿಷರ ಜೊತೆ ಕೈ ಜೋಡಿಸಲಿಕ್ಕಾಗಿ ಅವರು ೧೫ ವರ್ಷಗಳ ಕಾಲ ಕರಿನೀರಿನ ಶಿಕ್ಷೆ ಅನುಭವಿಸಬೇಕಿತ್ತಾ? ಅವರು ಇನ್ಮುಂದೆ ರಾಜಕೀಯ ಮಾಡಲಾರೆ ಅಂತ ಬರೆದುಕೊಟ್ಟು ಬಂದಿದ್ದು ನಿಮಗೆ ಕಾಣಿಸುತ್ತದೆ.ಆದರೆ ನಿಮ್ಮ ನೆಹರೂ ಬ್ರಿಟಿಷ್ ದೊರೆಗೆ ಅಡಿಯಾಳಾಗುರುವೆ ಅಂತ ಪ್ರಮಾಣ ವಚನ ಸ್ವೀಕರಿಸಿದ್ದು ಕಾಣುವುದಿಲ್ಲ ಅಲ್ಲಾ? ಹಾಗೇ ಸಾವರ್ಕರ್ ಅವರನ್ನು ವಿರೋಧಿಸುವ ಕಮ್ಯುನಿಸ್ಟರು ಸ್ವಾತಂತ್ರ್ಯ ಹೋರಾಟದಲ್ಲಿ ಕಡಿದು ಕಟ್ಟೆ ಹಾಕಿದ್ದು ಏನು ಅನ್ನುವುದು ಇತಿಹಾಸ ಓದಿಕೊಂಡವರಿಗೆ ಬಹಳ ಚೆನ್ನಾಗೇ ಗೊತ್ತಿದೆ. ಭಗತ್ ಸಿಂಗ್,ಸುಭಾಷ್ ಅವರಿಗೆ ಸ್ಪೂರ್ತಿ ನೀಡಿದ್ದು ಇದೇ ಸಾವರ್ಕರ್ ಬರೆದ ೧೮೫೭ರ ಸ್ವಾತಂತ್ರ್ಯ ಸಂಗ್ರಾಮ ಅನ್ನುವ ಮಹನ್ನೋತ ಕೃತಿ ಅನ್ನುವುದು ನಿಮ್ಮಂತ ಹಳದಿ ಕಣ್ಣಿನವರಿಗೆ ತಿಳಿದಿರಲಿಕ್ಕಿಲ್ಲ.ಹಾಗೆ ಸುಭಾಷರ ಐ.ಎನ್.ಎ ಅಭಿಯಾನದ ಹಿಂದೆ ಸಾವರ್ಕರ್ ಅವರ ಸಲಹೆಯೂ ಇತ್ತು ಅನ್ನುವುದು ನಿಮಗೆ ಗೊತ್ತಿದ್ದರೂ ಒಪ್ಪಲಾರಿರಿ ಅಲ್ಲಾ?
ನಾನು ಕಮ್ಯುನಿಷ್ಟ್ ಅಲ್ಲ. ಅದೇ ರೀತಿ ಕೋ. ಚೆನ್ನಬಸಪ್ಪನವರು ಕಮ್ಯುನಿಷ್ಟ್ ಅಥವಾ ಯಾವುದೇ ಪಕ್ಷಕ್ಕೆ ಸೇರಿದವರು ಅಲ್ಲ. ಸಾವರ್ಕರ್ ಜೈಲಿನಿಂದ ಬಿಡುಗಡೆ ಆದ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲಿಲ್ಲ ಎಂಬುದು ಸತ್ಯ. ಆರಂಭದಲ್ಲಿ ಭಾರೀ ವೀರಾವೇಶ ತೋರಿದ ಅವರು ಕೊನೆಗೆ ಬ್ರಿಟಿಷರಿಗೆ ಶರಣಾಗಿದ್ದು ಅತ್ಯಂತ ಸ್ಪಷ್ಟವಾಗಿ ಕಂಡುಬರುತ್ತದೆ. ಇದನ್ನು ವೀರತನ ಎನ್ನಲಾಗದು.
ಅವರು ಅನುಭವಿಸಿದ್ದು ವರ್ಷಗಳ ಕರಿನೀರಿನ ಶಿಕ್ಷೆಯನ್ನು.ಬ್ರಿಟಿಷರಿಗೆ ಬಗ್ಗಲೇ ಬೇಕು ಅನ್ನಿಸಿದರೆ ಅದನ್ನು ಮೊದಲಿಗೆ ಮಾಡುತಿದ್ದರು.ಹಾಗೆ ಮೊದಲೆ ಮಾಡಿದ್ದರೆ ಸಮಜಾವಾದಿ ನೆಹರೂನಂತೆ ಐಷರಾಮಿ ಜೈಲು ಜೀವನ ಸಿಕ್ಕಿಬಿಡುತಿತ್ತೇನೋ,ಆದರೆ ಪಾಪ ಬ್ರಿಟಿಷರಿಗೆ ಸಾವರ್ಕರ್ ಹೋದರೆ ಸಾಕಾಗಿತ್ತು.ದೇಶಕ್ಕಾಗಿ ತನ್ನ ಸಹೋದರರನ್ನು ಕಳೆದುಕೊಂಡು,ಮಗನನ್ನು ಬಲಿಕೊಟ್ಟು,ಹೆಂಡತಿ-ಅತ್ತಿಗೆ ಕಣ್ಣೀರಿನಲ್ಲಿ ಕೈ ತೊಳೆಯುವಾಗ ಈ ಸಾವರ್ಕರ್ ಅಂಡಮಾನಿನ ಜೈಲಿನ ಗೋಡೆಯ ಮೇಲೆ ಮೊಳೆಯಲ್ಲಿ ದೇಶ ಭಕ್ತಿ ಕವನ ಬರೆಯುತ್ತಿದ್ದರು.ಅದೆಲ್ಲಾ ಬಿಡಿ.ಅವರು ಬಿಡುಗಡೆಯಾದ “ಪತ್ರ”ದ ಬಗ್ಗೆ ಮಾತನಾಡುವ ಮುಖೇಡಿಗಳಿಗೆ.ಅವರು ಬಿಡುಗಡೆಯಾದ ನಂತರ ಮಾಡಿದ ಸಾಮಾಜಿಕ ಕೆಲಸ ಕಾರ್ಯಗಳ ಬಗ್ಗೆ ಮಾತನಾಡಲು ಹೆದರಿಕೆಯೇನು?
ಅಂಡಮಾನಿನ ಜೈಲಿನಿಂದ ಭಾರತಕ್ಕೆ ವಾಪಸ್ಸಾದ ಸಾವರಕರರು ಅಸ್ಪೃಷ್ಯತಾ ನಿವಾರಣೆ, ಇತ್ಯಾದಿ ಸೇವಾಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು.
ಸಾವರಕರ್ ಅವರನ್ನು ಬ್ರಿಟಿಷರು ಬಂಧಿಸಿದ್ದು ೧೯೧೦ರಲ್ಲಿ ಮತ್ತು ಅಂಡಮಾನಿಗೆ ಕರಿನೀರಿನ ಶಿಕ್ಷೆಗೆ ಕಳುಹಿಸಿದ್ದು ೧೯೧೧ರಲ್ಲಿ.
ಅವರು ಅಂಡಮಾನಿನಿಂದ ಹಿಂತಿರುಗಿದ್ದು ೧೯೨೧ರಲ್ಲಿ.
ಆದರೆ, ಬ್ರಿಟಿಷ್ ಸರಕಾರ ಅವರನ್ನು ೧೯೨೪ರವರೆಗೆ ರತ್ನಗಿರಿಯ ಸೆರೆಮನೆಯಲ್ಲಿ ಬಂಧಿಯಾಗಿರಿಸಿತು.
ಅದಾದ ನಂತರವೂ ಅವರನ್ನು ಬಹಳ ಸಮಯ ಗೃಹಬಂಧನದಲ್ಲಿರಿಸಲಾಗಿತ್ತು.
೧೯೩೭ರವರೆಗೆ ಅವರ ಓಡಾಟದ ಮೇಲೆ ಬ್ರಿಟಿಷ್ ಸರಕಾರ ನಿರ್ಬಂಧ ಹೇರಿತ್ತು.
ಒಟ್ಟಾರೆ ಅವರು ಅನುಭವಿಸಿದ್ದು ೨೭ ವರ್ಷಗಳ ಬಂಧನ. ನನಗೆ ತಿಳಿದಂತೆ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇಷ್ಟೊಂದು ಧೀರ್ಘಕಾಲೀನ ಬಂಧನವನ್ನು ಅನುಭವಿಸಿದ ವ್ಯಕ್ತಿ ಇನ್ನೊಬ್ಬನಿಲ್ಲ.
ಇನ್ನು ಅವರು ಬ್ರಿಟಿಷ್ ಸರಕಾರದೊಡನೆ ರಾಜಿ ಮಾಡಿಕೊಂಡ ವಿಷಯ. ಅದರ ಕುರಿತಾಗಿ ತಮ್ಮ ಬಳಿ ಪತ್ರವಿದೆಯೆಂದು (ಅಥವಾ ಬ್ರಿಟನ್ ಸರಕಾರ ಪತ್ರ ಬಿಡುಗಡೆ ಮಾಡಿದೆಯೆಂದು) ಕೆಲವು ಪತ್ರಿಕೆಗಳು ವರದಿ ಮಾಡಿದ್ದವು. ಆದರೆ, ಇಲ್ಲಿಯವರೆಗೂ ಈ ರೀತಿಯ ಅಧಿಕೃತ ಪತ್ರವನ್ನು ಯಾರೂ ಎಲ್ಲಿಯೂ ಪ್ರಕಟಿಸಿಲ್ಲ. ಆ ರೀತಿ ಪತ್ರ ಇದ್ದದ್ದೇ ಆದರೆ, ಅದನ್ನು ಬ್ರಿಟನ್ ಸರಕಾರ ಪ್ರಕಟಿಸಿದ್ದು ನಿಜವೇ ಆಗಿದ್ದರೆ, ಇಷ್ಟು ಹೊತ್ತಿಗೆ ಈ ಪತ್ರವು ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗಿಬಿಟ್ಟಿರಬೇಕಲ್ಲವೇ? ಆ ರೀತಿ ಯಾವ ಪತ್ರಿಕೆಗಳೂ ಪ್ರಕಟಿಸಲು ಸಾಧ್ಯವಾಗಿಲ್ಲವೆನ್ನುವುದೇ, ಆ ರೀತಿಯ ಪತ್ರವಿರುವ ವಿಷಯವೇ ಸುಳ್ಳು ಎನ್ನುವುದಕ್ಕೆ ಸಾಕ್ಷಿ.
ಸಾವರಕರ್ ಅವರ ವಿಚಾರದಿಂದ ಗಾಂಧಿಯವರ ಕೊಲೆಯಾಯಿತು ಎಂದು ಕೆಲವರು ಆರೋಪಿಸುತ್ತಾರೆ.
ಗಾಂಧೀಜಿಯವರ ವಿಚಾರದಿಂದಲೇ ಭಾರತ ವಿಭಜನೆಯಾಗಿದ್ದು ಎನ್ನುವುದು ಎಲ್ಲರಿಗೂ ತಿಳಿದಿರುವ ಇತಿಹಾಸ. ಮತ್ತು ವಿಭಜನೆಯಿಂದಾಗಿ ಲಕ್ಷಾಂತರ ಜನ ಕೊಲೆಗೀಡಾದರು, ಅತ್ಯಾಚಾರಕ್ಕೊಳಗಾದರು ಮತ್ತು ಜಗತ್ತಿನ ಇತಿಹಾಸದಲ್ಲೇ ಕಂಡರಿಯದಂತಹ ವಲಸೆ ನಡೆಯಿತು ಎನ್ನುವುದಕ್ಕೂ ಇತಿಹಾಸದ ಪುಟಗಳೇ ಸಾಕ್ಷಿ.
ಇಂತಹ ಐತಿಹಾಸಿಕ ದುರಂತಕ್ಕೆ ಗಾಂಧೀಜಿಯವರ ವಿಚಾರಧಾರೆಯೇ ಕಾರಣ ಎಂದು ಹೇಳಿದರೆ ಹೇಗೆ?
ಗಾಂಧೀಜಿಯವರ ಸಿದ್ಧಾಂತದಿಂದ ದೇಶ ವಿಭಜನೆ ಆಯಿತು ಅಪ್ಪಟ ಸುಳ್ಳು. ಗಾಂಧೀಜಿಯವರು ಮೂಲಭೂತವಾದವನ್ನು ಬೆಂಬಲಿಸಲಿಲ್ಲ. ಹಿಂದೂ ಮೂಲಭೂತವಾದವನ್ನು ದೇಶದಲ್ಲಿ ಹುಟ್ಟು ಹಾಕಿದ್ದು ಸಾವರ್ಕರ್. ಇದಕ್ಕೆ ಎದುರಾಗಿ ಮುಸ್ಲಿಂ ಮೂಲಭೂತವಾದವನ್ನು ಕೆಲವರು ಹುಟ್ಟುಹಾಕಿದರು. ಅಂತಿಮವಾಗಿ ಇದುವೇ ದೇಶವಿಭಜನೆಗೆ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ನಮ್ಮ ದೇಶದಲ್ಲಿ ಮತೀಯತೆಯ ಬೀಜ ಬಿದ್ದದ್ದೇ ೧೯೧೯ರಲ್ಲಿ – ಖಿಲಾಫತ್ ಆಂದೋಲನದ ಸಮಯದಲ್ಲಿ.
ಖಿಲಾಫತ್ ಗೂ ಭಾರತಕ್ಕೂ ಸಂಬಂಧವೇನು? ಅದಕ್ಕೆ ಬೆಂಬಲ ನೀಡಬೇಕಾದ ಅಗತ್ಯವೇನಿತ್ತು?
ಟರ್ಕಿ ದೇಶಕ್ಕೇ ಭೇಡವಾದ ಖಲೀಫ ಕಾಂಗ್ರೆಸ್ಸಿಗೆ ಏಕೆ ಬೇಕಾದ?
ನಮ್ಮ ದೇಶಕ್ಕೆ ಏನೇನೂ ಸಂಬಂಧವಿರದ ಖಿಲಾಫತ್ ಅನ್ನು ತಂದು ಗಂಟುಹಾಕಿದ್ದು ಗಾಂಧೀಜಿಯವರೋ ಇಲ್ಲವೇ ಸಾವರಕರ್ ಅವರೋ?
ಗಾಂಧೀಜಿಯವರನ್ನು ತುಚ್ಛವಾಗಿ ಕಾಣುತ್ತಿದ್ದ, ಮತಾಂಧರಾಗಿದ್ದ ಆಲಿ ಸಹೋದರರನ್ನು ತಲೆಯ ಮೇಲೆ ಎತ್ತಿ ಕೂಡಿಸಿಕೊಂಡದ್ದು ಯಾರು? ಮತ್ತು ಏತಕ್ಕಾಗಿ?
ಮುಸಲ್ಮಾನರು ಮುಂದಿಟ್ಟ ಪ್ರತಿಯೊಂದು ಬೇಡಿಕೆಗೂ ಒಪ್ಪಿಗೆ ನೀಡಿದ್ದು ಯಾರು?
೧. ಕಾಂಗ್ರೆಸ್ಸಿಗೆ ಮುಸಲ್ಮಾನರು ಸೇರಲೆಂದು ಅವರಿಗೆ ಶುಲ್ಕವನ್ನು ರದ್ದು ಮಾಡಲಾಯಿತು.
೨. ಕಾಂಗ್ರೆಸ್ ಸಮ್ಮೇಳನಕ್ಕೆ ಬರುತ್ತಿದ್ದ ಮುಸಲ್ಮಾನರಿಗೆ ಪರಾಕ್ ಹೇಳಲಾಗುತ್ತಿತ್ತು.
೩. ಪ್ರತಿ ಕಾಂಗ್ರೆಸ್ ಅಧಿವೇಶನದಲ್ಲೂ ವಂದೇಮಾತರಂ ಗಾಯನ ಕಡ್ಡಾಯವಾಗಿತ್ತು.
ಈ ಪರಂಪರೆಯನ್ನು ಪ್ರಾರಂಭಿಸಿದ್ದು ಕವೀಂದ್ರ ರವೀಂದ್ರ ನಾಥ ಠಾಗೂರ್ ಅವರು.
ಆದರೆ, ೧೯೨೪ರ ಕಾಂಗ್ರೆಸ್ ಸಮ್ಮೇಳನದಿಂದ, ಅಲ್ಲಿಯವರೆಗೂ “ದೇಶಭಕ್ತಿ ಗೀತೆ” ಎನಿಸಿದ್ದ ವಂದೇಮಾತರಂ ಗಾಯನಕ್ಕೆ ಕತ್ತರಿಬಿತ್ತು.
೧೯೨೩ರ ಸಮ್ಮೇಳನದಲ್ಲಿ ಮೌಲಾನಾ ಮಹಮದ್ ಆಲಿ ಅವರು ಇದರ ಕುರಿತಾಗಿ ಪ್ರಶ್ನೆ ಎತ್ತಿದ್ದರು ಎಂಬ ಕಾರಣದಿಂದ ಹೀಗಾಯಿತು.
ದೇಶದ ವಿಷಯದಲ್ಲಿ ಮತೀಯ ವಿಷಯಗಳನ್ನು ತರಬೇಡಿ ಎಂದು ಗಾಂಧೀಜಿಯವರು ತಮಗೆ ‘ಆಪ್ತ’ರಾಗಿದ್ದ ಆಲಿಯವರಿಗೆ ಏಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಿಲ್ಲ?
೪. ರಾಷ್ಟ್ರಭಾಷೆಯ ವಿಷಯದಲ್ಲಿ ಮುಸಲ್ಮಾನರು ಹಿಂದಿಯನ್ನು ಒಪ್ಪಿಕೊಳ್ಳಲು ಇಚ್ಚಿಸಲಿಲ್ಲ ಎಂಬ ಕಾರಣಕ್ಕೆ ಹಿಂದುಸ್ಥಾನಿ ಭಾಷೆಯನ್ನು ಹುಟ್ಟುಹಾಕಿದ್ದು ಯಾರು?
೫. ಸ್ವತಃ ನೆಹರೂ ಅಧ್ಯಕ್ಷರಾಗಿದ್ದ ರಾಷ್ಟ್ರಧ್ವಜ ಸಮಿತಿ ಶಿಫಾರಸು ಮಾಡಿದ್ದ ಧ್ವಜವನ್ನು ತಿರಸ್ಕರಿಸಿ ಮತ್ತೊಂದು ಧ್ವಜವನ್ನು ತಂದದ್ದು ಯಾರು? ಮತ್ತು ಯಾವ ಕಾರಣಕ್ಕಾಗಿ?
ಗಾಂಧೀಜಿಯವರ ಪ್ರಕಾರ, ದೇಶಕ್ಕಾಗಿ ಹೋರಾಡಿದ, ಪ್ರಾಣತ್ಯಾಗಕ್ಕೂ ಸಿದ್ಧನಾದ ಭಗತ್ ಸಿಂಗ್ ಅವರು ಗಾಂಧೀಜಿಯವರ ದೃಷ್ಟಿಯಲ್ಲಿ ದಾರಿತಪ್ಪಿದ ವ್ಯಕ್ತಿ ಮತ್ತು ಕ್ಷಮೆಗೆ ಅರ್ಹನಲ್ಲ. ಗಾಂಧೀಜಿ ಪ್ರಯತ್ನಿಸಿದ್ದರೆ ಭಗತ್ ಸಿಂಗ್^ನ ಫಾಸಿ ಶಿಕ್ಷೆಯನ್ನು ತಪ್ಪಿಸಬಹುದಿತ್ತು. ಆದರೆ, ಆತ ತಾನು ನಂಬಿದ್ದ ಸಿದ್ಧಾಂತಕ್ಕೆ ವಿರುದ್ಧ ದಿಕ್ಕಿನಲ್ಲಿದ್ದ ಎಂಬ ಕಾರಣಕ್ಕೆ ಗಾಂಧೀಜಿ ಆ ರೀತಿ ಮಾಡಲಿಲ್ಲ.
ಆದರೆ, ಇದೇ ಗಾಂಧೀಜಿಯವರು ಸ್ವಾಮಿ ಶ್ರದ್ಧಾನಂದರನ್ನು ಕೊಲೆ ಮಾಡಿದ ರಶೀದನ ವಿಷಯದಲ್ಲಿ ಏನು ಮಾಡಿದರು? ಆತ ಮಾಡಿದ್ದ ಗಾಂಧೀಜಿಅಯ್ವರ ದೃಷ್ಟಿಯಲ್ಲಿ ಏಕೆ ಹಿಂಸೆ ಎನಿಸಲಿಲ್ಲ?
ರಶೀದ್ ಮುಸಲ್ಮಾನನಾಗಿದ್ದ ಎಂಬ ಒಂದೇ ಕಾರಣಕ್ಕೆ, ಆತ ಸ್ವಾಮಿ ಶ್ರದ್ಧಾನಂದರಂತಹ ಅಸೀಮ ದೇಶಭಕ್ತರನ್ನು ಕೊಲೆ ಮಾಡಿದರೂ, ಗಾಂಧೀಜಿಯವರ ದೃಷ್ಟಿಯಲ್ಲಿ “ಘಾಜಿ”ಯಾಗಿಬಿಟ್ಟ!!
ಮಹಮ್ಮದ್ ಆಲಿ ಜಿನ್ನಾ ಅವರು ಪಾಕಿಸ್ತಾನ ಬೇಕೆಂದು ಪಟ್ಟು ಹಿಡಿದರು.
ಅವರು ನಾಯಕರಾಗಿದ್ದ ಮುಸ್ಲಿಂ ಲೀಗ್, ಕಾಂಗ್ರೆಸ್ಸಿಗಿಂತ ಬಹಳ ಪುಟ್ಟ ಪಕ್ಷ.
ಜಿನ್ನಾ ಅವರ ಪ್ರಭಾವ ಸೀಮಿತವಾಗಿತ್ತು. ಮುಸಲ್ಮಾನರ ಜನಸಂಖ್ಯೆಯೂ ಬಹಳ ಕಡಿಮೆಯಿತ್ತು.
ಇದಕ್ಕೆ ಹೋಲಿಸಿದರೆ, ಕಾಂಗ್ರೆಸ್ ಬಹಳ ಉತ್ತಮ ಸ್ಥಿತಿಯಲ್ಲಿತ್ತು.
ಗಾಂಧೀಜಿಯವರು ಹೆಚ್ಚಿನ ಜನ ಒಪ್ಪಿದ್ದ ನಾಯಕರಾಗಿದ್ದರು. ಬ್ರಿಟಿಷರ ಮೇಲೂ ಅವರ ಪ್ರಭಾವ ಸಾಕಷ್ಟಿತ್ತು.
ಹಿಂದುಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿತ್ತು. ಕಾಂಗ್ರೆಸ್ಸಿಗೆ ಪ್ರತಿಯೊಂದು ಜಿಲ್ಲೆ-ತಾಲ್ಲೂಕಿನಲ್ಲಿಯೂ ಪ್ರಾತಿನಿಧ್ಯವಿತ್ತು.
ಗಾಂಧೀಜಿ ಮತ್ತು ಕಾಂಗ್ರೆಸ್ ವಿಭಜನೆಯ ವಿರೋಧಿಯಾಗಿದ್ದರು.
“ನನ್ನ ತಾಯ್ನಾಡನ್ನು ವಿಭಜಿಸುವ ಮೊದಲು ನನ್ನನ್ನು ತುಂಡರಿಸಿ” ಎಂದು ಸ್ವತಃ ಗಾಂಧೀಜಿಯವರೇ ಸಾರಿದ್ದರು.
ಹೀಗೆ ಗಾಂಧೀಜಿಯವರು ಮತ್ತು ಕಾಂಗ್ರೆಸ್ ನ ಉತ್ತಮ ಸ್ಥಿತಿಯಲ್ಲಿದ್ದರೂ ವಿಭಜನೆಗೆ ಒಪ್ಪಿಬಿಟ್ಟರಲ್ಲ?
ಜಿನ್ನಾ ಅವರಿಗಿಂತ ಹೆಚ್ಚು ಪಟ್ಟು ಹಿಡಿಯಬಹುದಿತ್ತಲ್ಲವೇ?
ಇವರಲ್ಲವೇ ದೇಶವಿಭಜನೆಗೆ ಕಾರಣರು? ಏನೇ ಆದರೂ ವಿಭಜನೆಗೆ ಒಪ್ಪುವುದಿಲ್ಲ ಎಂದು ಗಾಂಧೀಜಿ ಪಟ್ಟುಹಿಡಿದು ಬಿಟ್ಟಿದ್ದರೆ ವಿಭಜನೆ ಆಗುತ್ತಿರಲಿಲ್ಲ ಅಲ್ಲವೇ?
ಮಾತುಮಾತಿಗೂ “ಆಮರಣಾಂತ ಉಪವಾಸ ಸತ್ಯಾಗ್ರಹ” ಆರಂಭಿಸುತ್ತಿದ ಗಾಂಧೀಜಿ, ವಿಭಜನೆ ಮಾಡಿದರೆ “ಆಮರಣಾಂತ ಉಪವಾಸ”ದ ಪಟ್ಟನ್ನೂ ಹಾಕಬಹುದಿತ್ತಲ್ಲವೇ? ಅವರಲ್ಲದೆ ಮತ್ಯಾರು ವಿಭಜನೆ ತಪ್ಪಿಸಬೇಕಿತ್ತು? ಇಡೀ ಭಾರತ ಅವರನ್ನೇ ನಂಬಿ ಕುಳಿತಿತ್ತಲ್ಲವೇ?
ಅವರು ನಂಬಿಕೆದ್ರೋಹಕ್ಕೂ ಗುರಿಯಾದರಲ್ಲವೇ?
ವಿಭಜಿತ ಭಾರತಕ್ಕೆ ಪ್ರಧಾನಿ ಆಯ್ಕೆಯ ವಿಷಯದಲ್ಲಿಯೂ “ಮತೀಯ ಮಾನಸಿಕತೆ”ಯೇ ಕೆಲಸ ಮಾಡಿತೆನ್ನಬೇಕು.
ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಸರ್ದಾರ್ ಪಟೇಲರಿಗೆ ಹೆಚ್ಚಿನ ಬೆಂಬಲವಿತ್ತು. ನೆಹರೂ ಅವರಿಗಿದ್ದ ಬೆಂಬಲ “ಸೊನ್ನೆ”.
ಇದನ್ನು ತಿಳಿದ ಗಾಂಧೀಜಿಯವರು, ಪಟೇಲರು ತಮ್ಮ ಉಮೇದುವಾರಿಕೆಯನ್ನೇ ವಾಪಸ್ ಪದೆಯುವಂತೆ ಮಾಡಿದ್ದು ಏಕೆ?
ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕಲ್ಲವೇ ಬೆಂಬಲ? ಗಾಂಧೀಜಿ ಮಾಡಿದ್ದು ಪ್ರಜಾಪ್ರಭುತ್ವಕ್ಕೆ ಸರಿಯಾದದ್ದೇ?
ಪಟೇಲರು ಹಿಂದುಗಳ ಪರವಾಗಿದ್ದರು; ನೆಹರೂ ಅವರು ಮುಸಲ್ಮಾನರಿಗೆ ಹಿತವಾಗಿದ್ದರು – ಈ ಕಾರಣಕ್ಕಾಗಿಯೇ ಗಾಂಧೀಜಿ ಹೀಗೆ ಮಾಡಿದರೆನ್ನಿಸುವುದಿಲ್ಲವೇ? ಇಲ್ಲದಿದ್ದರೆ ಬೇರೇನು ಕಾರಣ?
ಈ ಮೇಲೆ ಹೇಳಿದ ಪ್ರತಿಯೊಂದು ಸಂಗತಿಗೂ ಚಾರಿತ್ರಿಕ ಆಧಾರವಿದೆ.
ಇವನ್ನೆಲ್ಲಾ ವಿಶ್ಲೇಷಿಸಿದಾಗ ವಿಭಜನೆಗೆ ಕಾರಣರಾರು ಎನ್ನುವುದು ಸ್ಪಷ್ಟವಾಗುತ್ತದೆ.
ಗಾಂಧೀಜಿ ಮತ್ತು ಕಾಂಗ್ರೆಸ್ ನಡೆಸಿದ “ಮುಸ್ಲಿಂ ತುಷ್ಟೀಕರಣ”ದ ಜಾರುಹಾದಿಯೇ ದೇಶವಿಭಜನೆಯಲ್ಲಿ ಪರ್ಯವಸಾನಗೊಂದಿತು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಮತ್ತು ಅವರು ತಮ್ಮದೇ ಉದ್ದೇಶಗಳಿಗಾಗಿ ಪ್ರಾರಂಭಿಸಿದ “ಮುಸ್ಲಿಂ ತುಷ್ಟೀಕರಣ”ವೇ ಮತೀಯ ಮೂಲಭೂತವಾದಕ್ಕೆ ಕಾರಣ.
ಸಾವರಕರ್ ಅವರು ೧೯೧೦ರಲ್ಲಿಯೆ ಬಂಧಿತರಾದರು. ಅದಕ್ಕೆ ಮೊದಲು ಸುಮಾರು ೧೦ ವರ್ಷ ಅವರು ಸಶಸ್ತ್ರ ಕ್ರಾಂತಿಯ ದಾರಿಯನ್ನು ಹಿಡಿದಿದ್ದರು. ಆ ಸಮಯದಲ್ಲಿ ನಮ್ಮ ದೇಶದಲ್ಲಿ ಮತೀಯ ಮೂಲಭೂತವಾದದ ಸಮಸ್ಯೆ ತಲೆದೋರಿರಲಿಲ್ಲ.
ಸಾವರಕರ್ ಅವರು ೧೯೩೭ರವರೆಗೆ ಬಂಧನದಲ್ಲಿದ್ದರು. ಆ ಸಮಯದಲ್ಲಿ ಅವರು ಸಶಸ್ತ್ರ ಕ್ರಾಂತಿಗೆ ಕೈಹಾಕಲಿಲ್ಲ. ಮುಂದೆಯೂ ಅವರು ಸೇವಾಕಾರ್ಯಗಳಲ್ಲೇ ತಮ್ಮನ್ನು ತೊಡಗಿಸಿಕೊಂಡರು. ಹೀಗಿರುವಾಗ, ಸಾವರಕರ್ ಅವರಿಂದ ಮತೀಯ ಮೂಲಭೂತವಾದ ಹೆಚ್ಚಾಯಿತು ಎನ್ನುವುದು ಅರ್ಥವಾಗದ ಮತ್ತು ಸತ್ಯದೂರದ ಮಾತು.
ಆನಂದ ಕುಮಾರ್ ಅವರೇ,
ಚರಿತ್ರೆಗೆ ಸಂಬಂಧಿಸಿದ ವಿಶಯದ ವಿಶ್ಲೇಷಣೆಯನ್ನು ಚರಿತ್ರೆಯ ಆಧಾರದ ಮೇಲೆಯೇ ನಡೆಸೋಣ.
ಆ ಸಮಯದಲ್ಲಿ ನಮ್ಮ ಸಿದ್ಧಾಂತಗಳನ್ನು ಪಕ್ಕಕ್ಕಿಟ್ಟು, ಸತ್ಯಗಳನ್ನು ಮುಂದಿಟ್ಟುಕೊಂಡು ಮಾತನಾಡೋಣ.
ನಾನು ಮೊದಲಿಗೆ ಹೇಳಿದ ಸಂಗತಿಗಳಿಗೆ ಆಧಾರವಾದ ಸತ್ಯ ಸಂಗತಿಗಳನ್ನು ಮುಂದಿಟ್ಟಿರುವೆ.
ನಾನು ಹೇಳುತ್ತಿರುವುದು ಸರಿಯಲ್ಲ ಎಂದು ನಿರೂಪಿಸಲು ನಿಮಗೆ ಪೂರ್ಣ ಸ್ವಾತಂತ್ರ್ಯವಿದೆ.
ಈಗ ನೀವು ನಿಮ್ಮ ಮಾತನ್ನು ಸಮರ್ಥಿಸಲು ಚಾರಿತ್ರಿಕ ಸತ್ಯಗಳನ್ನು ಮುಂದಿಟ್ಟೇ ಮಾತನಾಡಬೇಕಾಗಿ ವಿನಂತಿ.
ಗಾಂಧೀಜಿ ಮತ್ತು ಕಾಂಗ್ರೆಸ್^ನಿಂದಲೇ ವಿಭಜನೆಯಾಯಿತು ಎನ್ನುವುದನ್ನು ನಿರೂಪಿಸಲು ನಾನು ಕೆಲವು ಸಂಗತಿಗಳನ್ನು ಪ್ರಸ್ತಾಪಿಸಿರುವೆ.
ಅದೇ ರೀತಿ, ಅವರ “ಮುಸ್ಲಿಂ ತುಷ್ಟೀಕರಣ”ವು ಯಾವ ರೀತಿ ಮತೀಯ ಮೂಲಭೂತವಾದವನ್ನು ಹುಟ್ಟುಹಾಕಿತು ಎನ್ನುವುದನ್ನೂ ವಿಶ್ಲೇಷಿಸಿರುವೆ.
ನನ್ನ ತರ್ಕ/ವಿಶ್ಲೇಷಣೆ ಸರಿಯಿಲ್ಲ ಎನಿಸಿದರೆ, ಅದು ಎಲ್ಲಿ ತಪ್ಪಿದೆ ಎನ್ನುವುದನ್ನು ದಯವಿಟ್ಟು ತಿಳಿಸಿ.
ಅದೇ ರೀತಿ, ನೀವು ತಿಳಿಸಿದ “ಹಿಂದೂ ಮೂಲಭೂತವಾದವನ್ನು ದೇಶದಲ್ಲಿ ಹುಟ್ಟು ಹಾಕಿದ್ದು ಸಾವರ್ಕರ್” ಎನ್ನುವುದಕ್ಕೆ ಚಾರಿತ್ರಿಕ ಸಾಕ್ಷ್ಯಾಧಾರಗಳನ್ನು ಒದಗಿಸಿ.
ಗಾಂಧೀಜಿಯವರಿಂದಲೇ ದೇಶವಿಭಜನೆ ಆಯಿತು ಸತ್ಯಕ್ಕೆ ದೂರವಾದ ಮಾತು. ಗಾಂಧೀಜಿಯವರು ಮುಸ್ಲಿಂ ತುಷ್ಟೀಕರಣ ಆರಂಭಿಸಿದರು ಎಂಬುದು ಕೂಡ ಸಮರ್ಪಕವಾದುದು ಎನಿಸುವುದಿಲ್ಲ. ಗಾಂಧೀಜಿ ಕೊನೆಯವರೆಗೂ ದೇಶವಿಭಜನೆಯನ್ನು ತಡೆಯಲು ಸರ್ವಪ್ರಯತ್ನ ಮಾಡಿದರು ಎಂಬುದು ಹೆಚ್ಚಿನವರಿಗೆ ತಿಳಿದಿದೆ. ದೇಶವಿಭಜನೆಗೆ ಮೂಲ ಕಾರಣ ಬಹುಸಂಖ್ಯಾತ ಹಿಂದೂಗಳು ತಮಗೆ ಸಮರ್ಪಕ ಪ್ರಾತಿನಿಧ್ಯ ನೀಡುವುದಿಲ್ಲ ಎಂಬ ಮುಸ್ಲಿಮರ ಅನುಮಾನ ಅಥವಾ ಭೀತಿ. ಈ ಭೀತಿಗೆ ಕಾರಣವಿಲ್ಲದಿಲ್ಲ. ಬಹುಸಂಖ್ಯಾತ ಹಿಂದೂಗಳು ತಮ್ಮ ಪದ್ಧತಿಗಳನ್ನು ಕಡ್ಡಾಯವಾಗಿ ಅಲ್ಪಸಂಖ್ಯಾತರ ಮೇಲೆ ಹೇರುವುದು ಅಥವಾ ದೊಡ್ಡಣ್ಣನಂತೆ ನಡೆದುಕೊಳ್ಳುವುದು ಮುಸ್ಲಿಮರಲ್ಲಿ ಅನುಮಾನ ಹುಟ್ಟಲು ಪ್ರಧಾನ ಕಾರಣ. ಉದಾಹರಣೆಗೆ ಗೋಮಾಂಸ ಭಕ್ಷಣೆ. ಹಿಂದೂಗಳು ತಾವು ಗೋಮಾಂಸ ಭಕ್ಷಿಸದೆ ಇರುವುದು ಅವರ ನಂಬಿಕೆ ಇರಬಹುದು. ಅವರು ಇದನ್ನು ಅಲ್ಪಸಂಖ್ಯಾತರ ಹೇರುವುದು ಅಲ್ಪಸಂಖ್ಯಾತರಲ್ಲಿ ಅಸಮಾಧಾನಕ್ಕೆ ಕಾರಣ. ಅವರವರಿಗೆ ಯಾವುದು ಇಷ್ಟವೋ ಅದನ್ನು ತಿನ್ನಲು ಕಡ್ಡಾಯವಾಗಿ ಬಿಡುವುದಿಲ್ಲ ಎಂದರೆ ನಾಗರಿಕತೆಗೆ ಏನು ಅರ್ಥ? ಇಂಥ ಭೀತಿ ಹಾಗೂ ಅನುಮಾನಗಳು ದೇಶವಿಭಾಜನೆಯಲ್ಲಿ ಪ್ರಧಾನ ಪಾತ್ರವಹಿಸಿವೆ. ಇದಕ್ಕೆ ನೀರೆರದಂತೆ ಬ್ರಿಟಿಷರ ಒಡೆದು ಆಳುವ ನೀತಿಯೂ ಇದರ ಹಿಂದೆ ಕೆಲಸ ಮಾಡಿದೆ. ಹೀಗಾಗಿ ಗಾಂಧೀಜಿಯವರು ದೇಶವಿಭಜನೆಗೆ ಕಾರಣ ಪ್ರಜ್ಞಾವಂತರು ಒಪ್ಪುವ ಮಾತಲ್ಲ.
ಗಾಂಧೀಜಿ ದೇಶವಿಭಜನೆಯನ್ನು ತಡೆಯುವ ಸರ್ವಪ್ರಯತ್ನ ಮಾಡಿದ್ದರು ಆದರೆ ಪರಿಸ್ಥಿತಿ ಅವರ ಕೈಮೀರಿ ಹೋಯಿತು. ಇದಕ್ಕೆ ಕಾರಣ ಮುಸ್ಲಿಂ ಲೀಗ್ ವಿಭಜನೆಗೆ ಒತ್ತಾಯಿಸಲು ನೇರ ಕಾರ್ಯಾಚರಣೆಗೆ ಇಳಿದು ‘ನೇರ ಕಾರ್ಯಾಚರಣೆ ದಿನ’ ಆಚರಿಸಿದ್ದು. ಇದರಲ್ಲಿ ೫೦೦೦ ಜನ ಹತ್ಯೆಗೀಡಾದರು ಮತ್ತು ಇಡೀ ದೇಶವೇ ಅಂತರ್ಯುದ್ಧದ ದಳ್ಳುರಿಗೆ ಸಿಕ್ಕಿ ಬೇಯುವ ಪರಿಸ್ಥಿತಿ ತಲೆದೋರಿತು. ಇಂಥ ಭೀಕರ ಪರಿಸ್ಥಿತಿಯಲ್ಲಿ ಗಾಂಧೀಜಿಯವರ ಮಾತನ್ನು ಕೇಳುವವರು ಯಾರು? ಇಂಥ ಹುಚ್ಚು ಸಮೂಹ ಸನ್ನಿಯಲ್ಲಿ ಗಾಂಧೀಜಿ ಅದನ್ನು ತಡೆಯಲಿಲ್ಲ ಎಂದು ಹೇಳುವುದು ಅಮಾನವೀಯವಾಗುತ್ತದೆ.
ಕುಮಾರ್ ರವರೇ, ಮಹಾತ್ಮಾ ಗಾಂಧಿಯವರ ಮುಸ್ಲಿಂ ತುಷ್ಟೀಕರಣ ಮಾಡಿದರು ಮತ್ತು ಅದರ ಕಾರಣದಿಂದಲೇ ದೇಶವಿಭಜನೆ ಆಯಿತು. ಮುಸ್ಲಿಂರಲ್ಲಿ ವಿಭಜನೆಯ ಮನೋಭಾವ ಹುಟ್ಟಿಬರಲು ಮಹಾತ್ಮಾ ಗಾಂಧಿಯವರೇ ಕಾರಣ ಮತ್ತು ಹಿಂದೂ ಮೂಲಭೂತವಾದಕ್ಕೂ ಸಹ ಗಾಂಧಿಯವರ ತುಷ್ಟೀಕರಣ ನೀತಿಯೇ ಕಾರಣ ಎನ್ನುವದನ್ನು ಬಹಳ ಚೆನ್ನಾಗಿ ವಿವರಿಸಿದ್ಧೀರಿ. ಇವತ್ತು ಮಹಾತ್ಮಾ ಗಾಂಧಿಯವರೂ ಇಲ್ಲ, ಅವರ ಸಿದ್ಧಾಂತಗಳೂ ಇಲ್ಲ. ಆದರೂ ಇನ್ನೂ ದೇಶದಲ್ಲಿ ಇರುವಂತಹ ಮೂಲಭೂತವಾದಕ್ಕೆ ಇಂದೂ ಇರುವಂತಹ ಹಲವಾರು ತುಷ್ಟೀಕರಣಗಳೇ ಕಾರಣ. ಈ ತುಷ್ಟೀಕರಣ ಇಲ್ಲದಿದ್ದಲ್ಲಿ ಮೂಲಭೂತವಾದ ಹುಟ್ಟಿಕೊಳ್ಳುವದಿಲ್ಲ ಅಲ್ವಾ ಕುಮಾರ್ ರವರೇ
ತುಷ್ಟೀಕರಣವು ನಮ್ಮನ್ನು ಪ್ರಪಾತದಿಂದ ಪ್ರಪಾತಕ್ಕೆ ಒಯ್ಯುತ್ತಿದೆ.
ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವಂತೆ, ತುಷ್ಟೀಕರಣದ ದುರಭ್ಯಾಸವೂ ನಮ್ಮನ್ನು ಬಲವಾಗಿ ಹಿಡಿದುಕೊಂಡುಬಿಟ್ಟಿದೆ.
ಮುಸಲ್ಮಾನರ ಸಹಾಯವಿಲ್ಲದೆ ಸ್ವಾತಂತ್ರ್ಯ ಗಳಿಕೆ ಅಸಾಧ್ಯ ಎನ್ನುವ ನಿಲುವನ್ನು ತಾಳಿದ ಗಾಂಧೀಜಿಯವರು, ಮುಸಲ್ಮಾನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಆಕರ್ಷಿಸಲು ಆಮಿಷಗಳನ್ನು ಒಡ್ಡಿದರು. ಇದರಿಂದ ಕಾಂಗ್ರೆಸ್ಸಿನ ದೌರ್ಬಲ್ಯವನ್ನು ಅರ್ಥ ಮಾಡಿಕೊಂಡ ಮುಸಲ್ಮಾನರು ಹೆಚ್ಚೆಚ್ಚು ಬೇಡಿಕೆಗಳನ್ನಿಡುತ್ತಾ ಮುಂದುವರೆದರು.
ಆದರೆ, ಇಂದಿನವರಿಗೆ ಸ್ವಾತಂತ್ರ್ಯ ಗಳಿಕೆಯ ಅಗತ್ಯವಿಲ್ಲ. ಆದರೆ, ಏನಾದರೂ ಮಾಡಿ ಅಧಿಕಾರವನ್ನುಳಿಸಿಕೊಳ್ಳುವ ಆತುರದಲ್ಲಿ ಅವರಿದ್ದಾರೆ.
ಅದಕ್ಕಿರುವ ಏಕೈಕ ಮಾರ್ಗ ಹೆಚ್ಚು ಮತಗಳನ್ನು ಗಳಿಸುವುದು. ಎಲ್ಲೆಲ್ಲಿ ಸಗಟು ಮತಗಳಿವೆಯೋ ಅಲ್ಲೆಲ್ಲಾ ನಮ್ಮ ರಾಜಕಾರಣಿಗಳು ತಮ್ಮ ‘ಕೈ’ಚಳಕ ತೋರಿಸುತ್ತಾರೆ.
ಮುಸಲ್ಮಾನರು ಒಟ್ಟಾಗಿ ಮತ ಚಲಾಯಿಸುತ್ತಾರೆ ಎನ್ನುವ ನಂಬಿಕೆ ರಾಜಕಾರಣಿಗಳಲ್ಲಿದೆ. ಹೀಗಾಗಿ, ಅವರ ಮತವನ್ನು ಸೆಳೆದುಕೊಳ್ಳಲು ಎಲ್ಲಿಲ್ಲದ ಪೈಪೋಟಿ. ಅದಕ್ಕಾಗಿ ಮುಸಲ್ಮಾನರಿಗೆ ಎಲ್ಲಿಲ್ಲದ ಆಮಿಷಗಳನ್ನು ಒಡ್ಡುವುದು.
ಇದರಿಂದ ಮುಸಲ್ಮಾನ ಸಮಾಜಕ್ಕೆ ಎಷ್ಟು ಲಾಭವಾಗುತ್ತಿದೆ ಎನ್ನುವುದು ಪ್ರತ್ಯೇಕವಾಗಿ ಚರ್ಚಿಸಬೇಕಾದ ವಿಷಯ.
ಆದರೆ, ಅಂದು ಸ್ವಾತಂತ್ರ್ಯ ಗಳಿಕೆಗಾಗಿ ಪ್ರಾರಂಭಿಸಿದ ತುಷ್ಟೀಕರಣ ಇಂದು ಈ ರೀತಿಯಲ್ಲಿ ಸ್ವಾರ್ಥ ರಾಜಕಾರಣಕ್ಕಾಗಿ ಮುಂದುವರೆದಿದೆ.
ಇದರ ಅಪಾಯ ಎಲ್ಲಿಯವರೆಗೆ ಹೋಗಿದೆಯೆಂದರೆ, ಭಯೋತ್ಪಾದಕರನ್ನೂ ನಮ್ಮ ರಾಜಕಾರಣಿಗಳು ಬೆಂಬಲಿಸಲು ಸಿದ್ಧ.
ಪಾಕಿಸ್ತಾನದ ವಿರುದ್ಧ ಮಾತನಾಡಿದರೆ ಎಲ್ಲಿ ನಮ್ಮ ಮುಸಲ್ಮಾನರು ಬೇಸರಿಸಿಕೊಂಡು ಮತ ನೀಡುವುದಿಲ್ಲವೋ ಎಂದೂ ಹೆದರುತ್ತಾರೆ!
ಅಮೆರಿಕಾದಲ್ಲಿ ೯/೧೧ ರ ಘಟನೆಯ ನಂತರ ಅಂತಹ ಮತ್ತೊಂದು ಘಟನೆ ಮರುಕಳಿಸಿಲ್ಲ.
ಆದರೆ, ನಮ್ಮಲ್ಲಿ ಯಾವಾಗ ಬೇಕಾದರೂ ಬಾಂಬು ಸ್ಫೋಟಗಳಾಗಬಹುದು. ಬಾಂಬು ಸ್ಪೋಟವಾಗುತ್ತದೆ ಎನ್ನುವ ಮಾಹಿತಿಯಿದ್ದರೂ ಕ್ರಮಕೈಗೊಳ್ಳುವುದಿಲ್ಲ!
ಕುಮಾರ್ ರವರೇ , ಅಂತೂ ಮುಸ್ಲಿಂರ ತುಷ್ಟೀಕರಣ ನಿಮಗೆ ಕಾಣಿಸುತ್ತಿದೆ. ಹಿಂದೂ ಮೂಲಭೂತವಾದಕ್ಕೆ ಅದೇ ಕಾರಣ ಎಂಬುದು ನಿಮ್ಮ ವಾದ. ಕೆಲವರಿಗೆ ಮೀಸಲಾತಿಯ ಕಾರಣಕ್ಕೆ ಹಿಂದುಳಿದವರ ತುಷ್ಟೀಕರಣ ಅನಿಸುತ್ತದೆ, ಕೆಲವರಿಗೆ ಬ್ರಾಹ್ಮಣರು ಮತ್ತು ಇತರ ಮೇಲ್ಜಾತಿಯವರು ಶತಶತಮಾನಗಳಿಂದ ತುಷ್ಟೀಕರಣಕ್ಕೆ ಒಳಗಾಗಿದ್ದಾರೆ ಅನಿಸುತ್ತದೆ. ಕೆಲವರಿಗೆ ಒಂದು ಭಾಷೆಯವರ ತುಷ್ಟೀಕರಣವಾಗುತ್ತಿದೆ ಅನಿಸುತ್ತದೆ. ಬಡವರಿಗೆ ಶ್ರೀಮಂತರ ತುಷ್ಟೀಕರಣವಾಗುತ್ತಿದೆ ಎಂದನಿಸುತ್ತದೆ. ಎಷ್ಟೊಂದು ತುಷ್ಟೀಕರಣಗಳನ್ನು ತೋರಿಸಬಹುದು. ಉಗ್ರವಾದ ಮತ್ತು ಮೂಲಭೂತವಾದಕ್ಕೆ ಎಷ್ಟೊಂದು ಅವಕಾಶಗಳು!
ಒಂದು ತುಷ್ಟೀಕರಣ ಮತ್ತೊಂದು ತುಷ್ಟೀಕರಣಕ್ಕೆ ಸಮರ್ಥನೆ ಆಗಲಾರದು.
ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆಯನ್ನು ತರಲಿಚ್ಚಿಸುವವರು ತುಷ್ಟೀಕರಣವನ್ನು ಬೆಂಬಲಿಸಲಾರರು.
ನಮ್ಮ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ತುಷ್ಟೀಕರಣ, ಅಸ್ಪೃಷ್ಯತೆ, ಜಾತೀಯತೆ ಮುಂತಾದವುಗಳು ನಮ್ಮ ಸಮಾಜವನ್ನು ಸಾಕಷ್ಟು ಸಮಯದಿಂದ ಕಾಡಿಸುತ್ತಿವೆ.
ಸಮಾಜದಲ್ಲಿರುವ ಸಮಸ್ಯೆಗಳನ್ನು ಆ ಸಮಾಜದ ಪುತ್ರನಾದವನು ಪರಿಹಾಸ್ಯವಾಗಿ ಕಾಣುವುದಿಲ್ಲ.
ಆತನಿಗೆ ಅದರಿಂದ ದುಃಖವಾಗುತ್ತದೆ. ಅದನ್ನು ಪರಿಹರಿಸುವುದು ಹೇಗೆಂದು ಆತ ಸದಾ ಚಿಂತಿಸುತ್ತಾನೆ.
ಅದರ ಪರಿಹಾರಕ್ಕೆ ತನ್ನದೇ ಚೌಕಟ್ಟಿನಲ್ಲಿ ಪ್ರಯತ್ನವನ್ನೂ ನಡೆಸುತ್ತಾನೆ.