ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 28, 2013

3

ಅವರಿಗೆ ಸಾಚಾರ್ ವರದಿ: ನಮಗೇಕಿಲ್ಲ ಪಚೌರಿ ವರದಿ?

‍ನಿಲುಮೆ ಮೂಲಕ

-ಸಂತೋಷ್ ತಮ್ಮಯ್ಯ

Rama Sethuveಭಾರತದಲ್ಲಿ ಹಿಂದುಗಳು ಎಂದರೆ ಎರಡನೇ ದರ್ಜೆಯ ಜನರು ಮತ್ತು ಹಿಂದುಗಳನ್ನು ಎಲ್ಲಿಡಬೇಕೋ ಅಲ್ಲೇ ಇಡಲಾಗುತ್ತಿದೆ ಎಂಬುದಕ್ಕೆ ರಾಮಸೇತು ಪ್ರಕರಣವೇ ಸಾಕ್ಷಿ. ಕೇಂದ್ರ ಸರಕಾರ ರಾಜೇಂದ್ರ ಪಚೌರಿ ವರದಿಯನ್ನು ತಿರಸ್ಕರಿಸುವುದರ ಮೂಲಕ ಅದನ್ನು ಸಾಭೀತುಪಡಿಸಿದೆ. ಸುಪ್ರಿಂಕೋರ್ಟಿಗೆ ತಾನು ಸೇತುಸಮುದ್ರಂ ಯೋಜನೆಯನ್ನು ಮಾಡಲು ಬಯಸಿರುವುದಾಗಿಯೂ, ಇಷ್ಟಿಷ್ಟು ಖರ್ಚುವೆಚ್ಚಗಳನ್ನು ಅದಕ್ಕಾಗಿ ಇಟ್ಟಿರುವುದಾಗಿಯೂ ಇದು ರಾಷ್ಟ್ರದ ಮಹತ್ತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು ಎಂಬುದರ ಬಗ್ಗೆ ಅಫಿಡವಿಟ್ ಅನ್ನು ಸಲ್ಲಿಸಿದೆ.
ಸಲ್ಲಿಸದೇ ಇನ್ನೇನು ತಾನೇ ಮಾಡಿಯಾರು? ರಾಮಸೇತು ಹಿಂದೂ ಭಾವನೆಗಳಿಗೆ ಸಂಬಂಧಪಟ್ಟ ಸಂಗತಿ, ರಾಮಸೇತು ರಾಮಾಯಣಕ್ಕೆ ಸಂಬಂಧಪಟ್ಟ ಸಂಗತಿ, ರಾಮಸೇತು ಹಿಂದೂ ತತ್ತ್ವಶಾಸ್ತ್ರ, ಅಧ್ಯಾತ್ಮದ ಪರಾಕಾಷ್ಠೆಗೆ ಸಂಬಂಧಪಟ್ಟ ಸಂಗತಿ, ರಾಮಸೇತು ವಿಶ್ವದ ಓರ್ವ ಮಹಾನ್ ಆದರ್ಶಪುರುಷನೊಬ್ಬನ , ಧರ್ಮಸಂಸ್ಥಾಪಕನೊಬ್ಬನಿಗೆ ಸಂಬಂಧಪಟ್ಟ ಸಂಗತಿ.  ಆ ಆದರ್ಶಪುರುಷ  ಹಿಂದೂ ದೇವರು ಎಂಬ ಉದಾಸೀನತನ ಸರಕಾರಕ್ಕೆ ಇರುವಾಗ ಈ ಸರಕಾರ ಅಫಿಡವಿಟ್ ಅನ್ನೂ ಸಲ್ಲಿಸುತ್ತದೆ ಮತ್ತು ಅಯೋಧ್ಯೆಯನ್ನೂ ತುಂಡುಮಾಡಿ ಹಂಚಿಬಿಡುತ್ತದೆ. ಅಂದು ಬಾಬರ್ ಮಾಡಿದಂತೆ ರಾಮಕುರುಹನ್ನೇ ಒಡೆಯುತ್ತದೆ. ಹಾಗಾಗಿ ರಾಜೇಂದ್ರ ಪಚೌರಿ ಎಂಬ ವಿಶ್ವವಿಖ್ಯಾತ ಪರಿಸರ ಶಾಸ್ತ್ರಜ್ನ, ಚಿಂತಕ ಹೇಳುವ ಮಾತನ್ನು ಸರಕಾರ ಕೇಳುವ ಸ್ಥತಿಯಲ್ಲಿರುವುದಿಲ್ಲ. ಅದನ್ನು ತಿರಸ್ಕರಿಸದೇ ಇರುವುದಿಲ್ಲ.
ಕೆಲವರ್ಷಗಳ ಹಿಂದೆ ರಾಜೇಂದ್ರ ಪಚೌರಿ ವರದಿ ಸರಕಾರದ ಸೇತುಸಮುದ್ರಂ  ಯೋಜನೆಯ ಅವೈಜ್ನಾನಿಕತೆ ಮತ್ತು ತಿಕ್ಕಲುತನಗಳನ್ನು ಎಳೆಎಳೆಯಾಗಿ ಬಿಡಿಸಿ ವರದಿಯನ್ನು ಸಿದ್ಧ ಮಾಡಿತ್ತು. ಭೂಗೋಳದ ದಕ್ಷಿಣದ ಸಮುದ್ರಗಳ ಜಲಚರಗಳ ತವರು ಮನೆ ಈ ಪ್ರದೇಶ ಎಂದು ಬಣ್ಣಿಸಿತ್ತು. ಈ ಪ್ರದೇಶದಲ್ಲಿ ನಡೆಯುವ ಯಾವುದೇ ಮಾನವ ಹಸ್ತಕ್ಷೇಪಗಳು ಈ ಜಲಚರಗಳ ಸಂತತಿಯನ್ನು ಕೊಲ್ಲುತ್ತದೆ ಎಂದು ಹೇಳಿತ್ತು. ಮತ್ತು ಭಾರತ ಮತ್ತು ಶ್ರೀಲಂಕಾ ನಡುವಿನ ಕಡಲ್ಗಾಲುವೆಗೆ  ಪರ್ಯಾಯ ಮಾರ್ಗವನ್ನು ಸೂಚಿಸಿತ್ತು. ಆದರೆ ಸರಕಾರ, ಯಾವ ರಾಜೇಂದ್ರ ಪಚೌರಿಯವರ ಮಾತಿಗಾಗಿ ವಿಶ್ವಸಂಸ್ಥೆ ಕಾಯುತ್ತದೆಯೋ, ಯಾವ ರಾಜೇಂದ್ರ ಪಚೌರಿಯವರ ಒಂದು ಸಲಹೆಗಾಗಿ ಯುನೆಸ್ಕೋ ಬೇಡಿಕೊಳ್ಳುತ್ತದೆಯೋ, ಯಾವ ರಾಜೇಂದ್ರ ಪಚೌರಿಯವರ ಡೇಟ್‌ಗಾಗಿ ವಿದೇಶದ ವಿಶ್ವವಿದ್ಯಾಲಯಗಳು ಕಾಯುತ್ತವೆಯೋ, ಯಾವ ನೊಬೆಲ್ ಪ್ರಶಸ್ತಿ ಸಮಿತಿ ಯಾವ ರಾಜೇಂದ್ರ ಪಚೌರಿಯವರನ್ನು ಆಹ್ವಾನಿಸುತ್ತದೆಯೋ ಅಂಥ ಪಚೌರಿಯವರನ್ನು, ಅವರ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ. ಕಾರಣ ರಾಮ ಹಿಂದು. ರಾಮಸೇತು ಹಿಂದೂ ಭಾವನೆ.ಅದು ದೇಶದಲ್ಲಿ ಅಂಥಾ ದೊಡ್ಡ ಸಂಗತಿಯೇನಲ್ಲ ಎಂಬ ತನ್ನ ಎಂದಿನ ಕಾಂಗ್ರೆಸ್ ನೀತಿ. ಹಾಗಾಗಿ ಕಾಂಗ್ರೆಸ್‌ಗೆ ಯಾವಾಗಲೂ ಮುಸಲ್ಮಾನರಿಗೆ ಹೆಚ್ಚು ತಿನ್ನಿಸಿ, ಅವರಿಗೆ ಹೆಚ್ಚು ಕುಡಿಸಿ, ಹೆಚ್ಚು ಸಂಬಳ ಕೊಡಿಸಿ, ಹೆಚ್ಚುಹೆಚ್ಚಾಗಿ ಮಿಲಿಟರಿಗೆ ಸೇರಿಸಿಕೊಳ್ಳಿ, ಮೇಷ್ಟ್ರನ್ನಾಗಿ ನೇಮಿಸಿಕೊಳ್ಳಿ,ಗುಮಾಸ್ತರನ್ನಾಗಿಸಿಕೊಳ್ಳಿ. ಅವರನ್ನು ಜತನದಿಂದ ನೋಡಿಕೊಂಡಿರಿ. ಪಾಪ ಅವರು ಬಡವರು ನೋಡಿ, ಮೀಸಲಾತಿ ಸಿಗದೇ ಇದ್ದರೆ ಅವರು ಸತ್ತೇಹೋದಾರು ಎಂದೆಲ್ಲಾ ಆಲಾಪಿಸುವ ರಾಜೇಂದ್ರ ಸಾಚಾರ್ ವರದಿ ಮಾತ್ರ ಇಷ್ಟವಾಗುತ್ತದೆ. ರಾಜೇಂದ್ರ ಪಚೌರಿ ವರದಿ ಮೂಲೆಗುಂಪಾಗುತ್ತದೆ.

ಸಾಚಾರ್ ವರದಿಯನ್ನು ಇಷ್ಟಪಟ್ಟು ಒಪ್ಪಿಕೊಳ್ಳುವ ಶಿಂದೆ, ಮಣಿಶಂಕರ್ ಅಯ್ಯರ್, ದಿಗ್ವಿಜಯ ಸಿಂಗ್ ಮೊದಲಾದವರು ಇರುವಲ್ಲಿ ತರ್ಕಬದ್ಧ ಸಂಶೋಧನೆಯ, ತೂಕವುಳ್ಳ, ಶ್ರಮಪಟ್ಟು ಮಾಡಿದ ರಾಜೇಂದ್ರ ಪಚೌರಿ ವರದಿಯನ್ನು ಒಪ್ಪಿಕೊಳ್ಳುವ ಜನರನ್ನು ಯುಪಿಎಯಲ್ಲಿ ಎಲ್ಲಿ ಹುಡುಕೋಣ? ರಾಮಾಯಣ ಅರ್ಥವಾಗಬಹುದು, ಹಿಂದುಭಾವನೆ ಅರ್ಥವಾಗಬಹುದು ಎಂದು ಹೇಳಲು ಯುಪಿಎ ಏನು ಸಂಸ್ಕಾರವಂತರ ಸರಕಾರವೇ? ಸ್ವಾತಂತ್ರ್ಯಾನಂತರದಿಂದಲೂ ಎಲ್ಲೆಲ್ಲೂ ಬ್ರಿಟಿಷರು ಒಡೆದು ಆಳಿದರು, ನಮ್ಮನ್ನು ಒಡೆದೇಬಿಟ್ಟರು ಎಂದು ಕಿರುಚುತ್ತಾ ಬಂದು ಕಾಂಗ್ರೆಸ್ ಈಗ ಮಾಡಲು ಹೊರಟಿರುವುದು ಒಡೆಯುವ ಕೆಲಸವನ್ನೇ ಅದೂ ಬ್ರಿಟಿಷರು ಮಾಡದಂಥ ಒಡೆಯುವಿಕೆಯನ್ನು . ಬಾಬರ್, ಅಕ್ಬರ್, ಔರಂಗಾಜೇಬ್, ಘೋರಿ, ಘಜನಿಗಳು ಮಾಡಿದಂಥ ಒಡೆಯುವಿಕೆಯನ್ನೇ . ಈಗ ಒಡೆಯುವಿಕೆಯ ಪಾಳಿ ರಾಮಸೇತುವಿನದ್ದು.
ಹೀಗೆ ರಾಮಸೇತುವನ್ನು ಒಡೆಯುವ ಹುನ್ನಾರ ಏರ್ಪಡುವಾಗ ನಮ್ಮ ಸುತ್ತಮುತ್ತಲಿನ ಕೆಲವು ಘಟನೆಗಳು ಕಣ್ಣಿಗೆ ರಾಚುತ್ತವೆ. ಕಡಲ್ಗಾಲುವೆಗೆ ಅದೇ ದಾರಿ ಬೇಕು, ಅಭಿವೃದ್ಧಿಗೆ ಮನಸು ನೋಯಿಸಬಹುದು ಎಂಬುದಾದರೆ ಇವೆಲ್ಲಾ ಏನು? ಇದಕ್ಕೂ ಅಭಿವೃದ್ಧಿ ಸಂಬಂಸುವುದಿಲ್ಲವೇ? ಏಕೆ “ಅವರ” ಮುಂದೆ ವ್ಯವಸ್ಥೆಯೇ ಮಂಡಿಯೂರುತ್ತದೆ ಎಂಬುದಕ್ಕೆ ಉದಾಹರಣೆಗಳು ಒಂದೇ ಎರಡೇ?

 •     ಈಗ್ಗೆ ಒಂದು ಏಳೆಂಟು ವರ್ಷಗಳ ಹಿಂದೆ ಬೆಂಗಳೂರನ್ನು ಸಿಂಗಾಪುರವನ್ನು ಮಾಡಲು ಹೊರಟಾಗ ಮಹಾನಗರದಲ್ಲಿ ಎಷ್ಟೋ ಕಟ್ಟಡಗಳು ತೆರವುಗೊಂಡವು. ಕೆಲವು ಪ್ರದೇಶಗಳಲ್ಲಿ ರಸ್ತೆಗಳೇ ಮರುರೂಪಗೊಂಡವು. ಗಲ್ಲಿಗಳು ಸುಂದರಗೊಂಡವು. ಹಾಗೆ ಸುಂದರಗೊಳ್ಳದ ಕೆಲವೆಡೆ ದೇವಸ್ಥಾನಗಳನ್ನು ಕೆಡವಲಾಯಿತು. ಹಾಗೆ ಗೌರಿ ಪಾಳ್ಯ ಎಂದ ಹಳೆಯ ಹೆಸರಿನ, ಈಗ ಜಗಜೀವನರಾಂ ನಗರ ಎಂದು ಕರೆಯಲ್ಪಡುವಲ್ಲೂ ಸರಕಾರದವರು ಬಂದು ಸರ್ವೇ ಮಾಡಿಕೊಂಡು ಹೋದರು. ಅದರ ಪ್ರಕಾರ ರಸ್ತೆ ಅಗಲವಾಗಬೇಕಿತ್ತು. ಮಸೀದಿಯೊಂದನ್ನು ತೆರವು ಮಾಡಲೇಬೇಕಿತ್ತು. ಮಸೀದಿ ತೆರವು ಆಗದೆ ರಸ್ತೆ ಆಗಲಾರದು. ಅಭಿವೃದ್ಧಿ ಆಗಲಾರದು. ಆದರೆ ಮಸೀದಿ ತೆರವಾಗಬಾರದೆಂದು ಗಲಾಟೆಯಾಯಿತು. ಜನ ತುಂಬಿದರು. ಸರ್ವೇ ಅಕಾರಿಗಳು ಓಡಿದರು. ಸರಕಾರ ಹೆದರಿತು. ವ್ಯವಸ್ಥೆಯೇ ಗಲಭೆಕೋರರಿಗೆ ತಲೆಬಾಗಿ ಯೋಜನೆಯನ್ನು ನಿಲ್ಲಿಸಿತು. ಪರಿಣಾಮೇವೇನಾಗಿದೆಯೆಂದರೆ ಆ ಭಾಗ ಇಂದೂ ಕೊಳಕು ಗಲ್ಲಿಯಾಗಿಯೇ ಉಳಿದಿದೆ. ಪೇಷಾವರವನ್ನು ನೆನಪಿಸುತ್ತವೆ. ಗೌರಿ ಪಾಳ್ಯದ ಬದಲು ಕೆಲವೆಡೆ ಗೋರಿ ಪಾಳ್ಯ ಎಂಬ ನಾಮಫಲಕ ನೇತಾಡುತ್ತಿದೆ. ಸರಕಾರ ಅಲ್ಲಿ ಜನರ ಭಾವನೆಗಳಿಗೆ ಗೌರವ ಕೊಟ್ಟಿತು. ಅದೇ ಹೊತ್ತಿಗೆ ಹಿಂದೂಗಳು ವ್ಯವಸ್ಥೆ ಸರಿಯಾಗುವುದಾದರೆ ಗಲ್ಲಿಯ ದೇವಸ್ಥಾನಗಳು ತೆರವುಗೊಳ್ಳಲಿ ಎಂಬ ಉದಾರತೆಯನ್ನು ಪ್ರದರ್ಶಿಸಿದ ಉದಾಹರಣೆಗಳಿದ್ದವು. ಅಂಥ ಉದಾಹರಣೆಗಳು ರಾಮಾಯಣಕ್ಕೇ ದಕ್ಕೆಯಾಯಿತೇ?
 •     ಬೆಂಗಳೂರು-ಪುಣೆ ಹೆದ್ದಾರಿ ದೇಶದ ಸುಂದರ ಹೆದ್ದಾರಿಗಳಲ್ಲೊಂದು ಮತ್ತು ಸದಾ ಚುರುಕಿನಿಂದ ಕೂಡಿರುವ ಹೆದ್ದಾರಿ. ತುಮಕೂರಿನಿಂದ ಚಿತ್ರದುರ್ಗಕ್ಕೆ ಸಾಗುವಾಗ ಆ ಹೈವೇಯಲ್ಲಿ ಒಂದೆಡೆ ಎಲ್ಲೋ ಏನೋ ಊನವಾಗಿದೆ ಎನಿಸುತ್ತದೆ. ಅಷ್ಟೂಹೊತ್ತು ನೇರವಾಗಿ, ಸಲೀಸಾಗಿ ಸಾಗುತ್ತಿದ್ದ ಹೈವೇಯಲ್ಲಿ ಇದೇಕೆ ಇಂಥ ಅವೈಜ್ನಾನಿಕ ತಿರುವು ಎಂದುಕೊಂಡರೆ ಅಲ್ಲಿ ಕಾಣುವುದು ಮಸೀದಿ. ಮಸೀದಿ ಇರುವ ಕಾರಣಕ್ಕೆ ಹೈವೇ ಕೂಡಾ ಅಲ್ಲಿ ದಾರಿ ಬದಲಿಸಬೇಕು. ಯಾವ ರಾಷ್ಟ್ರೀಯ ಹೆದ್ದಾರಿ ಪ್ರಾಕಾರಕ್ಕೂ ರಸ್ತೆ ನೇರವಾಗಿರಬೇಕು ಎಂದು ಕ್ರಮಕೈಗೊಳ್ಳುವ ಗಂಡೆದೆ ಇಲ್ಲ. ಅಂಥ ಗಂಡೆದೆಗಳೆಲ್ಲಾ ದೇವಸ್ಥಾನಗಳಿಗೆ ಮಾತ್ರ!
 •     ಮಂಗಳೂರು ರಥಬೀದಿ ನಗರದ ಪುರಾತನ ವಠಾರ. ಕೆಳ ರಥಬೀದಿಯ ಕೊನೆಯಲ್ಲಿ ಒಂದು ಚಿತ್ರ ಮಂದಿರವಿದೆ. ಅದರ ಎದುರು ಭಾಗದಲ್ಲಿ ಒಂದು ಮಸೀದಿ. ಮಂಗಳೂರಿನ ರಸ್ತೆಗಳನ್ನು ಅಗಲಗೊಳಿಸಿ, ಕಾಂಕ್ರೀಟೀಕರಣಗೊಳಿಸಿದಾಗ ಆ ಮಸೀದಿಗೆ ಯಾವ ಕಾನೂನು ಕಾಯ್ದೆಗಳೂ ಪಾಲನೆಯಾಗಲಿಲ್ಲ. ಇಂದು ರಸ್ತೆ ಕಾಂಕ್ರೀಟಿಕರಣಗೊಂಡಿರಬಹುದು ಆದರೆ ಮಸೀದಿ ಇರುವ ಜಾಗದಲ್ಲಿ ರಸ್ತೆ ಇಕ್ಕಟ್ಟಾಗಿಯೇ ಇದೆ. ಅಲ್ಲೂ ವ್ಯವಸ್ಥೆ ಮಂಡಿಯೂರಿತ್ತು.
 •     ಕೊಂಕಣ ರೈಲ್ವೇ ಮಾರ್ಗ ಗೋವಾ ರಾಜ್ಯದಲ್ಲಿ ಚರ್ಚುಗಳನ್ನು ತಪ್ಪಿಸಿಕೊಂಡು  ಸಾಗುತ್ತವೆ. ಆ ಚರ್ಚುಗಳಿಗೆ ವ್ಯವಸ್ಥೆಯ ಹಂಗಿಲ್ಲ. ವ್ಯವಸ್ಥೆಯೇ ಅಲ್ಲಿ ಮಂಡಿಯೂರುತ್ತದೆ. ಕೊಂಕಣ ರೈಲ್ವೆ ಮಾರ್ಗದ ಎಷ್ಟೋ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಚರ್ಚುಗಳಿಂದ ಸಾಕಷ್ಟು ದೂರದಲ್ಲಿ ರೈಲು ಹಳಿಗಳನ್ನು ಹಾಕಲಾಗಿವೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಹಳಿಗಳಿದ್ದರೆ ಪ್ರಾರ್ಥನೆಗೆ ದಕ್ಕೆಯಾಗುವುದೆಂದು ಕೆಲವರು ಪತ್ರಿಕೆಗಳಿಗೂ ಪತ್ರ ಬರೆದಿದ್ದರು.
 •     ನೀವೆಂದಾದರೂ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದಿರಬಹುದು. ಬಹುತೇಕ ಎಲ್ಲಾ ರೈಲುಗಳು ರಾಮನಗರದಲ್ಲಿ ನಿಲ್ಲುತ್ತವೆ. ಆ ನಿಲ್ದಾಣದಲ್ಲಿ ವಿಚಿತ್ರವೊಂದು ಕಾಣಸಿಗುತ್ತವೆ. ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲೇ ಒಂದು ದರ್ಗಾ ಇದೆ. ಅದು ಹಳಿಗಳಿಗೆ ಅತೀ ಸಮೀಪವೂ ಇದೆ.ಯಾವ ಸರಕಾರಕ್ಕೂ ಬಗ್ಗದ ದರ್ಗಾ ಅದು. ರಾಮಸೇತುವನ್ನು ಒಡೆಯಲು ಹವಣಿಸುವ ಸರಕಾರವನ್ನು ಅಣಕಿಸುವಂತೆ ಇದೆ ರಾಮನಗರದ ಆ  ದರ್ಗಾ.
 •     ಕೆಲವರ್ಷಗಳ ಹಿಂದೆ ಮೈಸೂರಿನ ಪ್ರತಿಷ್ಠಿತ ದೇವರಾಜ ಅರಸ್ ರಸ್ತೆ  ಮತ್ತು ಅದರ ಸುತ್ತಮುತ್ತಲಿನ ರಸ್ತೆಯನ್ನು ಅಗಲಗೊಳಿಸುವ ಯೋಜನೆಯನ್ನು  ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಅರಳಿಕಟ್ಟೆಗಳು, ಅಶ್ವತ್ಥ ಮರಗಳು, ಅದರ ಕೆಳಗಿನ ಕಲ್ಲುಗಳು, ಸಣ್ಣ ಗುಡಿಗಳೆಲ್ಲವೂ ಸೇರಿದಂತೆ ಸುಮಾರು ೨೭೨ಕ್ಕೂ ಅಧಿಕ ಹಿಂದೂ ಸಂಕೇತಗಳು ಒಡೆಯಲ್ಪಟ್ಟವು. ಆದರೆ ಅರಸ್ ರಸ್ತೆಯ ಒಂದು ದರ್ಗಾ ಮಾತ್ರ ಅಲ್ಲಾಡಲಿಲ್ಲ. ನಿಯಮಗಳು ಹಿಂದುಗಳಿಗೆ ನಮಗಲ್ಲ ಎನ್ನುವಂತೆ ಅದರ ರಕ್ಷಕರು ಮೈಸೂರಿನಾದ್ಯಂತ ಇದ್ದರು. ಇತ್ತೀಚೆಗಷ್ಟೇ ಆ ವಿವಾದ ಕೊನೆಗೊಂಡಿದೆ. ಅಂದರೆ ದೊಡ್ಡದಕ್ಕೆ ಬದಲಾಗಿ ಸಣ್ಣ ಪೂಜಾಸ್ಥಳವೊಂದು ಅಲ್ಲಿ ಎದ್ದಿದೆ.
 •     ಬೆಂಗಳೂರು-ಮೈಸೂರು ರೈಲುಮಾರ್ಗದ ಡಬಲ್ ಟ್ರ್ಯಾಕ್‌ಗಳ ನಿರ್ಮಾಣ ದಕ್ಷಿಣ ಮಧ್ಯೆ ರೈಲ್ವೆಯ ಮಹತ್ತ್ವಾಕಾಂಕ್ಷೆಯ ಯೋಜನೆ. ಆದರೆ ಆ ಯೋಜನೆಗೆ ಇನ್ನೂ ಕಾಲ ಕೂಡಿಬಂದಿಲ್ಲ. ಏಕೆಂದರೆ ಎರಡು ಹಳಿಗಳ ನಿರ್ಮಾಣದ ನಕ್ಷೆಯಲ್ಲಿ ವಿಘ್ನವೊಂದು ಕಂಡುಬಂದಿದೆ. ದೇವಸ್ಥಾನಗಳ ವಿಘ್ನವಾಗಿದ್ದರೆ ರೈಲ್ವೆ ಇಲಾಖೆಗೆ ಅದೊಂದು ಕೆಲಸವೇ ಅಲ್ಲ. ಆದರೆ ವಿಷಯ ಇರುವುದು ಶ್ರೀರಂಗಪಟ್ಟಣದಲ್ಲಿ. ಅಲ್ಲಿ ಟಿಪ್ಪುವಿನ ಸಿಡಿಮದ್ದಿನ ಮನೆಯೆಂಬ ಗೂಡು ಇರುವುದರಿಂದ ಆ ಯೋಜನೆ ಇನ್ನೂ ನೆನೆಗುದಿಗೆ ಬಿದ್ದಿದೆ.ಧೈರ್ಯವಾಗಿ ಒಡೆದು ಹಳಿಗಳನ್ನು ಹಾಕಲು ಅದೇನೂ ರಾಮಸೇತು ಅಲ್ಲವಲ್ಲ. ಅಥವಾ ಆ ಮದ್ದಿನ ಮನೆಯಲ್ಲಿ ಈಗ ಯಾರಾದರೂ ಮದ್ದು ಇಡುತ್ತಿದ್ದಾರೆಯೇ? ಯಾರನ್ನಾದರೂ ಸಿಡಿಸಲು ಯೋಜನೆಯೇನೂ ಇಲ್ಲವಲ್ಲ. ಹಾಗಾದರೆ ರೈಲ್ವೆ ಇಲಾಖೆ ಮಂಡಿಯೂರಿರುವುದೇಕೆ? ೨೦೧೦ರಲ್ಲೇ ಆಗಬೇಕಿದ್ದ  ಈ ಯೋಜನೆ ಇನ್ನೂ ಜಾರಿಯಾಗಿಲ್ಲವೇಕೆ?
 •     ಬೆಳಗಾವಿ ಜಿಲ್ಲೆಯ ಸಂಕೇಶ್ವರ- ಹುಕ್ಕೇರಿ ಎನ್.ಹೆಚ್ ೪ರ ಲ್ಲಿ ಪ್ರಯಾಣಿಸಿದರೂ ಇದೇ ದೃಶ್ಯ. ಸಲೀಸಾಗಿ ಹೋಗುತ್ತಿದ್ದ ಹೈವೇ ನಡುವಲ್ಲೊಂದು ಗೋರಿ. ಅದೂ ವ್ಯವಸ್ಥೆಯನ್ನು ಮಂಡಿಯೂರಿಸಿಕೊಂಡ ಗೋರಿ. ಕದಲಲಾರೆ ಎಂಬಂತೆ ನಿಂತಿರುವ ಗೋರಿ. ಎನ್.ಹೆಚ್ ನಿರ್ಮಾಣವಾಗುವಾಗ ಒಂದು ಪುರಾತನ ದೇವಸ್ಥಾಬವೊಂದನ್ನು ತೆಗೆಯಲಾಗಿತ್ತು. ಆದರೆ ಗೋರಿಯನ್ನು ತೆಗೆಯಲಾಗಲಿಲ್ಲ. ಈಗ ಜನರು  “ವ್ಯವಸ್ಥೆ”ಗೆ ಹೊಂದಿಕೊಂಡಿದ್ದಾರೆ. ವ್ಯವಸ್ಥೆಯೇ ಬಗ್ಗಿದ ಮೇಲೆ ಜನರಿನ್ನೇನು?
 •     ಅದೇ ಬೆಳಗಾವಿ ಜಿಲ್ಲೆಯ ಕಿತ್ತೂರಲ್ಲಿ ಚೆನ್ನಮ್ಮನ ಪ್ರತಿಮೆಯ ಬಳಿಯಲ್ಲೇ ಮಸೀದಿಯೊಂದಿದೆ. ಈ ದಾರಿಯಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆಯನ್ನು ಮಸೀದಿ ಇರುವ ಕಾರಣಕ್ಕೆ ಇನ್ನೆಲ್ಲೋ ಸಾಗಿಹೋಗಿದೆ.
 •     ಹುಬ್ಬಳ್ಳಿ-ಧಾರವಾಡದ ಮಧ್ಯೆ ವಿಆರ್‌ಎಲ್ ಟರ್ಮಿನಲ್ಸ್ ಬಳಿ ಇರುವ ದರ್ಗಾದ ಕಥೆಯೂ ಇದೇ. ರಸ್ತೆ ಡೊಂಕಾದರೂ  ಸರಿ ದರ್ಗಾಕ್ಕೆ ಊನವಾಗಬಾರದು ಎಂಬ ನಿಯಮ ಇಲ್ಲೂ ಜಾರಿಯಾಗಿದೆ.
 •     ಇದು ಎಲ್ಲಕ್ಕಿಂತಲೂ ಹೆಚ್ಚಾಗಿ ಎದೆ ನಡುಗಿಸುವ ದೃಶ್ಯ. ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದ ಸಮೀಪ ಅಂದರೆ ವಿಎಲ್ ಆಂಡ್ ಎಕ್ಸೆಲ್ ಸಂಸ್ಥೆಯೊಂದರ ಹಿಂಭಾಗ  ಮಸೀದಿಯೊಂದಿದೆ. ಆ ಮಸೀದಿಯ ಎರಡೂ ಪಾರ್ಶ್ಚ್ವಗಳಲ್ಲಿ ರೈಲು ಹಳಿಗಳು ಹಾದುಹೋಗಿವೆ. ಅಲ್ಲಿಗೆ ಹೋಗುವವರು ಹಳಿಗಳನ್ನು ದಾಟಿಕೊಂಡೇ ಹೋಗಬೇಕು. ಇದು ರೈಲು ನಿಯಮವೇ? ರೈಲು ಆಸ್ತಿಯಲ್ಲಿ ಇದು ಅಕ್ರಮ ಕಟ್ಟಡ ಎನಿಸುವುದಿಲ್ಲವೇ? ರೈಲು ಹಳಿಗಳ ನಡುವೆ ಪಟ್ಟಿಗಳಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೆ ಇಲ್ಲಿ ಹಳಿಗಳ ನಡುವೆ ಮಸೀದಿಯೇ ಇರುವುದು ಸೋಜಿಗ!. ರೈಲ್ವೆ ಇಲಾಖೆಯ ಷಂಡತನವೇ?
 • ಇಂಥ ದೃಶ್ಯಗಳು ದೇಶದಲ್ಲಿ  ಎಷ್ಟಿಲ್ಲ? ಪ್ರಯಾಗದಲ್ಲೇ ಇದೆ. ದೇಶದ ಎಷ್ಟೋ ರೈಲು ನಿಲ್ದಾಣಗಳಲ್ಲಿ  ಮಸೀದಿ-ದರ್ಗಾಗಳು ಬಿಡಿ ಮುಸಲ್ಮಾನರ ಜಾಗಗಳನ್ನು  ಕೂಡಾ ಸ್ವಾನಪಡಿಸಿಕೊಲ್ಳಲಾಗದೆ ಯೋಜನೆಗಳನ್ನು ಕೈಬಿಟ್ಟ ಉದಾಹರಣೆಗಳೂ ಇವೆ. ಆದರೆ ಹಿಂದುಗಳಿಗೆ ಮಾತ್ರ ಭಿನ್ನ ಧೋರಣೆ!

ರಾಮನಿಗಾಗಿ ಸೀತೆ ಕಾಡಿಗೆ ತೆರಳಿದಳು, ಲಕ್ಷಣನೂ ವನವಾಸಕ್ಕೆ ಹೋದ. ವಾಸ್ತವಾಗಿ ಅವರು ಕಾಡಿಗೆ ತೆರಳಬೇಕೆಂದೇನೂ ಇರಲಿಲ್ಲ. ಅನಂತರ ಭರತ ಕೂಡಾ ರಾಮನ ವನವಾಸ ಮುಗಿಯುವವರೆಗೂ ಅಯೋಧ್ಯೆಗೆ ಕಾಲಿಡಲಿಲ್ಲ. ರಾಮನ ಪಾದುಕೆಯನ್ನು ನಂದಿಗ್ರಾಮದಲ್ಲಿ ಇಟ್ಟು ರಾಜ್ಯಭಾರ ನಡೆಸಿದ. ಅಯೋಧ್ಯೆಯ ಪುರಜನರು ರಾಮನಿಲ್ಲದ  ರಾಜಧಾನಿಯಲ್ಲಿ  ಕೊರಗಿನಿಂದಲೇ ಹದಿನಾಲ್ಕು ವರ್ಷ ದೂಡಿದರು. ನಮ್ಮದು ಅಂಥಾ ಪರಂಪರೆ. ರಾಮನಿಲ್ಲದಿದ್ದರೂ ರಾಮನ ಸಂಕೇತವೇ ಹಿಂದುಗಳಿಗೆ ಪೂಜನೀಯ. ಭಾರತದ ಊರೂರುಗಳಲ್ಲಿ ರಾಮ ನಡೆದಿದ್ದ, ಸೀತೆ ಹೂ ಮುಡಿದಿದ್ದಳು ಎಂಬ ಕುರುಹುಗಳು ಬೇಕಾದಷ್ಟು ಸಿಗುತ್ತವೆ. ಅವೆಲ್ಲವೂ ನಮಗೆ ಕೈಮುಗಿಯುವ ಜಾಗಗಳು, ತಲೆಬಾಗುವ ಕ್ಷೇತ್ರಗಳು. ಅಂಥಲ್ಲಿ ಸಮುದ್ರೋಲ್ಲಂಘನ , ವಾನರ ಸೇನೆ, ಅಳಿಲು ಸೇವೆ ಮುಂತಾದ ಅದ್ಭುತ, ಆದರ್ಶಮಯ ರೂಪಕಗಳಿರುವ ಹಿಂದೂ ಪುರಾಣಗಳಿಗೆ ಸಾಕ್ಷಿಯಾಗಿರುವ ರಾಮಸೇತುವನ್ನು ಒಡೆಯುವುದೆಂದರೆ ಏನರ್ಥ? ರಾಮನ ಜನ್ಮ ಸ್ಥಳವನ್ನೂ ಅವರು ಒಡೆದು ನೋವು ಮಾಡಿದರು. ಈಗ ರಾಮಸೇತುವನ್ನೂ ಒಡೆದು ಮಾಡುವ ನೋವಿಗೆ ಮುಲಾಮು ಇದೆಯೇನು?
ಅವರಿಗಾಗಿ ಸಾಚಾರ್ ವರದಿ ಜಾರಿಯಾಗಬಹುದಾದರೆ ನಮಗೆ ಪಚೌರಿ ವರದಿ ಯಾಕೆ ಜಾರಿಯಾಗಬಾರದು?

3 ಟಿಪ್ಪಣಿಗಳು Post a comment
 1. Gurumurthy CM
  ಫೆಬ್ರ 28 2013

  ವ್ಯವಸ್ಥೆ ಪ್ರತಿಹೆಜ್ಜೆಯಲ್ಲು ಅಲ್ಪಸಂಖ್ಯಾತರಿಗೆ ಬಾಗುತ್ತದೆ ಮತ್ತು ಬಹುಸಂಖ್ಯಾತರಿಗೆ ಒದೆಯುತ್ತದೆ ಎನ್ನುವುದನ್ನು ಪ್ರತಿಯೊಬ್ಬ ಹಿಂದುವಿಗೂ ಮನ ಮುಟ್ಟುವಂತೆ ವಿವರಿಸಿದ್ದೀರಿ ಸಂತೋಷ್…ಇನ್ನಾದರೂ ಎಲ್ಲ ಹಿಂದೂಗಳು ಒಟ್ಟಾಗಿ ಸೇತುಸಮುದ್ರಂ ಯೋಜನೆಯನ್ನು ವಿರೊಧಿಸಬೇಕಿದೆ…

  ಉತ್ತರ
 2. ಮಾರ್ಚ್ 19 2013

  Uttamavagide sir.adre en madodu yaru namagyake anta tale bisi madodilla,odedare odeyali bidi nam maneyannu odeyodilvalla anta bejavbdari toristare aste

  ಉತ್ತರ
 3. Gopalakrishna Bhagwat
  ಆಗಸ್ಟ್ 3 2013

  This article clearly exhibits two fallacies.
  1. It assumes that ‘Hindu” is a single entity and there is no inherent contradictions in it. Hinduism has been used as political plank to gain power by some sacerdotal elements who are busy hatching conspiracies and dividing society. Hinduism represented by these people is not real Hinduism. Because they use the name of Rama when elections come and forgets him when elections is over. Some time they harp on development and sometimes on Rama. This is the true color of these people. Rama Rama who will save this country from such people?

  2. The assumption that majority people are suppressed and minority people are appeased itself is over-simplification. It needs more concrete evidences and elaboration

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments