ASER ವರದಿ 2012 ಮತ್ತು ಕರ್ನಾಟಕದ ಕಲಿಕೆ ಒಳನೋಟ – 1
-ಪ್ರಶಾಂತ ಸೊರಟೂರ
ASER (Annual Status Education Report – ಕಲಿಕೆ ಗುಣಮಟ್ಟದ ವರುಶದ ವರದಿ)
ಇದು ಸರಕಾರೇತರ ಸಂಸ್ಥೆಯಾದ ’ಪ್ರಥಮ್’ನಿಂದ ಕಲಿಕೆಯ ಗುಣಮಟ್ಟ ತಿಳಿದುಕೊಳ್ಳಲು 2005ರಿಂದ ಪ್ರತಿ ವರುಶ, ಇಂಡಿಯಾದ ಸುಮಾರು 15,000 ಹಳ್ಳಿ ಪ್ರದೇಶದ ಶಾಲೆಗಳಲ್ಲಿ ಅರಸುವಿಕೆ (ಸಮೀಕ್ಷೆ) ನಡೆಸಿ ಹೊರತರಲಾಗುತ್ತಿರುವ ವರದಿ.
ASER ಕಲಿಕೆಮಟ್ಟವನ್ನು ಒರೆಗೆಹಚ್ಚುವ ಬಗೆ:
ಇಂಡಿಯಾದ ಪ್ರತಿ ಜಿಲ್ಲೆಯಲ್ಲಿ 30 ಹಳ್ಳಿಗಳನ್ನು ಆಯ್ಕೆ ಮಾಡಲಾಗುತ್ತದೆ. (ಹಿಂದಿನ ಎರಡು ವರುಶದ 20 ಮತ್ತು 10 ಹೊಸ ಹಳ್ಳಿಗಳು).
ಹಳ್ಳಿಗಳ ಗುಣಮಟ್ಟ (ರಸ್ತೆ, ಮನೆಗಳು ಇತ್ಯಾದಿ), ಕುಟುಂಬದ ಗುಣಮಟ್ಟ (ತಂದೆ-ತಾಯಿಯ ಕಲಿಕೆ, ಮನೆ ಇತ್ಯಾದಿ), ಶಾಲೆಯ ಗುಣಮಟ್ಟ (ಶಿಕ್ಶಕರು-ಮಕ್ಕಳ ಅನುಪಾತ, ಕಲಿಕೆಯ ಸಲಕರಣೆಗಳು, ಕುಡಿಯುವ ನೀರು, ಓದುಮನೆ) ಮುಂತಾದವುಗಳನ್ನು ಈ ಅರಸುವಿಕೆಯು (ಸಮೀಕ್ಶೆಯು) ಒಳಗೊಂಡಿರುತ್ತದೆ.
6 – 14 ವಯಸ್ಸಿನ (1 ರಿಂದ 7/8 ನೇ ತರಗತಿ) ಮಕ್ಕಳು ಈ ವರದಿಗೆ ಒಳಪಡುತ್ತಾರೆ.ಕಲಿಕೆಯ ಗುಣಮಟ್ಟವನ್ನು ASER ನ ಮೂರು ಸಲಕರಣೆಗಳಿಂದ ಅಳೆಯಲಾಗುತ್ತದೆ. 1) ತಾಯ್ನುಡಿಯಲ್ಲಿ ಓದುವಿಕೆಯ ಮಟ್ಟ 2) ಇಂಗ್ಲಿಶ ಓದುವಿಕೆಯ ಮಟ್ಟ 3) ಗಣಿತ ಕಲಿಕೆಯ ಮಟ್ಟ (ಕಳೆಯುವಿಕೆ ಮತ್ತು ಭಾಗಾಕಾರ)
ಜೊತೆಗೆ 2012ರ ವರದಿಯಲ್ಲಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ, ಸರಕಾರ ಮತ್ತು ಖಾಸಗಿ ಶಾಲೆಗಳ ಪ್ರಮಾಣ, ಹೊರಕಲಿಕೆಗೆ (ಟ್ಯೂಶನ್) ಹೋಗುವವರ ಪ್ರಮಾಣ ಮುಂತಾದವುಗಳ ಕುರಿತು ತಿಳಿಸಲಾಗಿದೆ.
2012 ರಲ್ಲಿ ಕರ್ನಾಟಕದ 778 ಹಳ್ಳಿಗಳ, ಸುಮಾರು 18,000 ಸಾವಿರ ಮಕ್ಕಳು ಈ ಆರಸುವಿಕೆಗೆ (ಸಮೀಕ್ಷೆಗೆ) ಒಳಪಟ್ಟಿದ್ದರು.
ASER ವರದಿಯ ಕುರಿತು ಮುಂದುವರೆಯುವ ಮುನ್ನ ಕಲಿಕೆಗೆ ಹೊಂದಿಕೊಂಡಂತೆ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ 2011-12 ವರದಿಯ ಕೆಲವು ಅಂಕಿ-ಅಂಶಗಳನ್ನು ನೋಡೋಣ.
(ವರದಿಯ ಮಿಂಬಲೆ ಕೊಂಡಿ )
ಕರ್ನಾಟಕದಲ್ಲಿ ಗ್ರಾಮೀಣ ಮತ್ತು ನಗರಗಳ ಶಾಲೆಗಳ ಪ್ರಮಾಣ:
ಗ್ರಾಮೀಣ
|
ನೂರಕ್ಕೆ (%)
|
ನಗರ
|
ನೂರಕ್ಕೆ (%)
|
ಒಟ್ಟು
|
|
ಕಿರಿಯ ಪ್ರಾಥಮಿಕ
|
22958
|
88.5
|
2993
|
11.5
|
25951
|
ಹಿರಿಯ ಪ್ರಾಥಮಿಕ
|
23824
|
70.9
|
9780
|
29.1
|
33604
|
ಪ್ರೌಢಶಾಲೆಗಳು
|
8089
|
58.4
|
5773
|
41.6
|
13862
|
ಒಟ್ಟು
|
54871
|
74.7
|
18546
|
25.3
|
73417
|
ಕರ್ನಾಟಕದ ಒಟ್ಟು ಶಾಲೆಗಳಲ್ಲಿ ಹಳ್ಳಿಗಳ ಶಾಲೆಗಳ ಪ್ರಮಾಣ 75% ಇದ್ದರೆ ದೊಡ್ಡ ಊರು/ಪಟ್ಟಣದ ಶಾಲೆಗಳು 25%. ಹೀಗಾಗಿ ಕರ್ನಾಟಕದ ಕಲಿಕೆಯ ವಿಶಯದಲ್ಲಿ ಹಳ್ಳಿಗಳ ಪಾತ್ರ ತುಂಬಾ ದೊಡ್ಡದು. ಹಳ್ಳಿ ಪ್ರದೇಶಗಳಲ್ಲಿನ ಕಲಿಕೆ ಮಟ್ಟವನ್ನು ಒರೆಗೆಹಚ್ಚುವ ASER ನಂತಹ ವರದಿಗಳು ಈ ಕಾರಣಕ್ಕಾಗಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ. 75%ರಷ್ಟು ಶಾಲೆಗಳಲ್ಲಿನ ಕಲಿಕೆಮಟ್ಟ ತೋರಿಸಿಕೊಡುವ ASER ವರದಿಯಲ್ಲಿನ ವಿಷಯಗಳನ್ನು ಮುಂದಿನ ಬರಹಗಳಲ್ಲಿ ನೋಡೋಣ.
(ಮುಂದುವರೆಯುವುದು…)
ವರದಿಯ ಮಿಂಬಲೆ ಕೊಂಡಿ ಓಪನ್ ಆಗುತ್ತಾ ಇಲ್ಲ. ಲೇಖನ ಅಪೂರ್ಣವಾಗಿದೆಯೆಂದನಿಸುತ್ತದೆ.
maahiti sampurna illa.
ಈ ಕುರಿತ ಬರಹಗಳನ್ನು ಇಲ್ಲಿ ಓದಿರಿ. http://kalikeyu.blogspot.in/