ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 14, 2013

27

ಟಿಪ್ಪು ಹೊಗಳಿದ ಮೇಲೆ ಕೋವಿದನೂ ಅಲ್ಲ ಕೋದಂಡನೂ ಅಲ್ಲ

‍ನಿಲುಮೆ ಮೂಲಕ

– ಸಂತೋಶ್ ತಮ್ಮಯ್ಯ

Pratap Simha's bookಕೊಡವರಿಗೆ ಕಾವೇರಮ್ಮನ ಶಾಪವಿದೆಯಂತೆ, ಬ್ರಹ್ಮಹತ್ಯಾದೋಷವೂ, ನಾಗದೋಷವೂ ಕಾಡುತ್ತಿದೆಯಂತೆ. ಹಾಗಾಗಿ ಕೊಡವರಿಗೆ ಶಾಂತಿ ನೆಮ್ಮದಿ ಇಲ್ಲವಂತೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಅದು ಕಂಡುಬಂದಿದೆಯಂತೆ. ಇದು ಸದ್ಯ ಕೊಡಗಿನಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ದೋಷ, ಶಾಪ, ಪ್ರಶ್ನೆ, ಅದಕ್ಕಿರುವ ಪರಿಹಾರಗಳು ಏನೇನಿವೆಯೋ ಗೊತ್ತಿಲ್ಲ. ಆದರೆ ಒಂದು ಶಾಪವಂತೂ ಅಷ್ಟಮಂಗಲ ಪ್ರಶ್ನೆಯ ಹೊರತಾಗಿಯೂ ಪ್ರಜ್ನಾವಂತ ಕೊಡವರಿಗೆ ತಿಳಿದೇ ಇದೆ.

ಅದೆಂದರೆ ಕರ್ನಾಟಕದ ಎಲ್ಲರಿಗೂ ಕೊಡಗಿಗೆ ಹೋದಾಗ ಅಲ್ಲಿನ ಯೋಧರು, ಧೀರರು, ಶೂರರು ಎಲ್ಲರೂ ನೆನಪಾಗಿಬಿಡುತ್ತಾರೆ. ಮಡಿಕೇರಿಗೆ ಬಂದ ರಾಜಕಾರಣಿಗಳು, ಸಾಹಿತಿಗಳಿಗೆ ಯೋಧರನ್ನು ಹೊರತಾಗಿಸಿ ಮಾತು ಹೊರಬರುವುದೇ ಇಲ್ಲ. ಅವರೆಲ್ಲರಿಗೂ ಭಾಷಣಕ್ಕೆ, ಸಾಹಿತ್ಯಕ್ಕೆ, ಸಿನಿಮಾಕ್ಕೆ ಕೊಡಗಿನ ಯೋಧರು, ಬ್ರಹ್ಮಗಿರಿ, ಕಾವೇರಮ್ಮೆ, ಇಗ್ಗುತ್ತಪ್ಪರು ಬೇಕು. ಆದರೆ ಅವರೆಲ್ಲರೂ ಟಿಪ್ಪು ವಿಷಯಕ್ಕೆ ಬಂದರೆ ಟಿಪ್ಪು ಆ ಯೋಧರನ್ನೆಲ್ಲಾ ಮೀರಿ ನಿಂತುಬಿಡುತ್ತಾನೆ! ಅಂದರೇ ಧರ್ಮಕ್ಕಾಗಿ ಹೋರಾಡಿದ ಕೊಡಗಿನ ಯೋಧರು ಸಾಹಿತಿಗಳ ಪ್ರಕಾರ ಸೆಕ್ಯುಲರ್ ಆಗಿಬಿಡುತ್ತಾರೆ. ಈ ಸೆಕ್ಯುಲರ್ ವ್ಯಾದಿ ಸಾಹಿತಿಗಳ ಪ್ರಾರಬ್ಧವಾದರೂ ಕೊಡವರ ಪಾಲಿಗೆ ಅದು ಶಾಪ. ಅವರ ಭಾವನೆಗಳ ಮೇಲಿನ ಚೆಲ್ಲಾಟ. ಏಕೆಂದರೆ ಈ ಸೆಕ್ಯುಲರ್ ವ್ಯಾದಿ ಟಿಪ್ಪುವನ್ನು ಹೊಗಳಲು ಕೊಡವರ ಬಲಿದಾನವನ್ನೂ ತಿರುಚಲೂ ಹಿಂಜರಿಯುವುದಿಲ್ಲ. ಹೀಗೆ ಟಿಪ್ಪುವನ್ನು ಹೊಗಳುತ್ತಾ ಕೊಡವರ ಯೋಧತನವನ್ನು ವರ್ಣಿಸಲು ಹೇಗೆ ತಾನೇ ಸಾಧ್ಯ? ಸಾಧ್ಯವಿಲ್ಲ ನಿಜ. ಆದರೆ ಅದು ನಿರಂತರ ನಡೆಯುತ್ತಲೇ ಇದೆ. ಕೊಡಗಲ್ಲೇ ಕೆಲವರು ಭಂಡರಿದ್ದಾರೆ. ಅಂಥವರಿಗೆ ಅಷ್ಟು ಮಾತುಗಳು ಸಾಕಾಗುತ್ತವೆ. ಸಾಹಿತಿ-ರಾಜಕಾರಣಿಗಳಿಗೆ ಚಪ್ಪಾಳೆಗಳು ಭರಪೂರ ಗಿಟ್ಟುತ್ತವೆ. ಹಾಗಾಗಿ ಕಾರ್ನಾಡರೂ “ಟಿಪ್ಪು ಸುಲ್ತಾನ ಕಂಡ ಕನಸು” ಎಂದು ಬರೆಯುತ್ತಾರೆ. ಕೆಲವರು “ಟಿಪ್ಪು ಜನ್ಮದಿನವನ್ನು ಆಚರಿಸಲು ಶಾಲೆಗಳಿಗೆ ರಜಾ ಘೋಷಿಸಲಾಗುವುದು” ಎನ್ನುತ್ತಾರೆ. ಇನ್ನೊಬ್ಬರು ” ಟಿಪ್ಪು ಓರ್ವ ಸಂತ” ಎಂದುಬಿಡುತ್ತಾರೆ. ವಿಚಿತ್ರವೆಂದರೆ ಇವರೆಲ್ಲರೂ ಹೀಗೆ ಹೇಳುವ ಮೊದಲು ಮಡಿಕೇರಿಯ ಯುದ್ಧ ಸ್ಮಾರಕಗಳಿಗೆ ಹಾರ ಹಾಕಿ ಬಂದಿರುತ್ತಾರೆ. ಇವನ್ನೆಲ್ಲಾ ಕೇಳುವುದು, ನೋಡುವುದೇ ಕೊಡಗಿನವರ ಪಾಲಿನ ಶಾಪ. ಏಕೆಂದರೆ ಕೊಡಗಲ್ಲಿ ಬಂದು ಟಿಪ್ಪುವನ್ನು ಹೊಗಳುವುದೆಂದರೆ ಕೊಡಗಿನ ಪೂರ್ವಜರನ್ನು ನಿಂದಿಸಿದಂತೆಯೇ.

ವಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಕೋ. ಚೆನ್ನಬಸಪ್ಪನವರು ಮಾಡಿದ್ದು ಅಂಥಾ ನಿಂದೆಯನ್ನು. “ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವ ವಿಶ್ವವಿದ್ಯಾಲಯಕ್ಕೆ ಹೆಸರಿಡುವುದನ್ನು ವಿರೋಧಿಸುವಾಗ ಟಿಪ್ಪು ಹಿಂದೂ ದ್ವೇಷಿಯೆಂದೂ, ೭೧ ಸಾವಿರ ಹಿಂದುಗಳನ್ನು ಇಸ್ಲಾಮಿಗೆ ಮತಾಂತರ ಮಾಡಿದನೆಂಬ ಸುಳ್ಳನ್ನು ಕೆಲವರು ಹೇಳುತ್ತಿದ್ದಾರೆ. ಆತನ ಆಳ್ವಿಕೆಯಲ್ಲಿ ಕೊಡಗಲ್ಲಿ ಅಷ್ಟು ಸಂಖ್ಯೆ ಇತ್ತೇ ಎಂಬುದೇ ಸಂಶಯವಿದೆ” ಎಂದ ಕೋ. ಚೆನ್ನಬಸಪ್ಪನವರು ಕೊಡವರನ್ನು ಮತ್ತೆ ನೋಯಿಸಿದರು. ಯಾವ ಟಿಪ್ಪು ಮಾಡಿದ ಅನ್ಯಾಯವನ್ನು ಮರೆಯಬಾರದು ಎಂದು ಕೊಡವರು ಅಂದುಕೊಂಡಿದ್ದರೊ, ಯಾವ ಟಿಪ್ಪುವಿನಿಂದ ತಮ್ಮ ಕುಟುಂಬ ಇಂದಿಗೂ ನಶಿಸುತ್ತಿದೆಯೋ ಅಂಥ ಟಿಪ್ಪುವಿನ ಹೆಸರನ್ನು ಕೊಡವರು ತಮ್ಮ ನಾಯಿಗಳಿಗೆ ಇಡುತ್ತಿದ್ದರೋ ಅಂಥ ಟಿಪ್ಪುವನ್ನು ಕೋ. ಚೆನ್ನಬಸಪ್ಪನವರು ಹೊಗಳುತ್ತಾರೆ. ಅಂಥ ಕೋ. ಚೆನ್ನಬಸಪ್ಪನವರ “ಕೋ” ಕೋದಂಡನೇ ಆಗಿರಲಿ, ಕೋವಿದನೇ ಆಗಿರಲಿ ಟಿಪ್ಪುವನ್ನು ಹೊಗಳಿದ ಮೇಲೆ ಕೊಡವರ ಪಾಲಿಗೆ ಆ “ಕೋ” ಕೋಡಂಗಿಯೇ ಆಗಿಹೋಯಿತು.
ಇವರೆಲ್ಲಾ ಯಾವ ಬಾಯಿಂದ ತಾನೇ ಟಿಪ್ಪುವನ್ನು ಹೊಗಳುವರು? ಡಾ. ಐಚೆಟ್ಟಿರ ಮುತ್ತಣ್ಣನವರಂಥ ಸಂಶೋಧಕರು, ಸಾಹಿತಿಗಳ ಬರಹಕ್ಕೂ ಬೆಲೆಕೊಡದ ಇವರೆಂಥಾ ಸಾಹಿತಿಗಳು? ಕೊಡವರು ಕನ್ನಡದಲ್ಲಿ ಬರೆಯುವವರೆಲ್ಲಾ ಇಂಥ ಸಾಹಿತಿಗಳು ಮಾತ್ರವೇ ಎಂದುಕೊಳ್ಳುತ್ತಿರುವಾಗ ಕನ್ನಡದಲ್ಲಿ ಪುಸ್ತಕವೊಂದು ಬಂದಿದೆ. ಪತ್ರಕರ್ತ ಪ್ರತಾಪ್ ಸಿಂಹ ಅವರ “ಟಿಪ್ಪು ಸುಲ್ತಾನ: ಸ್ವಾತಂತ್ರ್ಯ ವೀರನಾ?” ಪುಸ್ತಕ , “ಒಬ್ಬ ಸಾಹಿತಿ ಆಡಿದ ತಾಜಾ ಸುಳ್ಳಿನ ಸ್ಯಾಂಪಲ್ ” ಅನ್ನು ತೆರೆದಿಡುತ್ತವೆ. ಅಮೂಲ್ಯ ದಾಖಲೆಗಳು, ವಿದೇಶಿಯರ ಬರಹಗಳು ಮತ್ತು ತಮ್ಮದೇ ಆದ ತರ್ಕಗಳಿಂದ ಈ ಪುಸ್ತಕ ಟಿಪ್ಪು ನಿಜಸ್ವರೂಪವನ್ನು ಬಯಲು ಮಾಡುತ್ತಾ ಹೋಗುತ್ತದೆ.

ಡಾ. ಐ.ಮಾ. ಮುತ್ತಣ್ಣನವರ ಅನಂತರ ಟಿಪ್ಪು ವಿರುದ್ಧ ಹೋರಾಡಿದ ಕೊಡವರನ್ನು ಅರ್ಥಮಾಡಿಕೊಂಡ ಮೊದಲ ಪುಸ್ತಕ ಎನಿಸುತ್ತದೆ. ಡಾ. ಐ.ಮಾ. ಮುತ್ತಣ್ಣನವರನ್ನು ಹೊರತುಪಡಿಸಿ ಟಿಪ್ಪುವನ್ನು “ಒಬ್ಬ ಕಳ್ಳ ಬೆಕ್ಕು” ಎಂದು ನಿರ್ಭಯವಾಗಿ ಕರೆದ ಬರಹಗಾರ ಪ್ರತಾಪ್ ಸಿಂಹ ಒಬ್ಬರೇ. ಇನ್ನು ಡಾ. ಚಿದಾನಂದ ಮೂರ್ತಿಯವರ “ಮೂಲ ದಾಖಲೆಗಳಲ್ಲಿ ಹುದುಗಿರುವ ಟಿಪ್ಪು” ಎಂಬ ಪುಸ್ತಕ ಹಲವು ಅಪರೂಪದ ದಾಖಲೆಗಳೊಂದಿಗೆ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಕೆಲವೇ ದಿನಗಳ ಅಂತರದಲ್ಲಿ ಸತ್ಯಶೋಧನೆಯ ಎರಡು ಗ್ರಂಥಗಳು ಬರುತ್ತಿರುವುದು ಕನ್ನಡದ ಭಾಗ್ಯ. ಇವರಿಬ್ಬರೂ ಕೊಡಗಿನವರಲ್ಲದಿದ್ದರೂ ಕೊಡವರ ನೋವಿಗೆ ದನಿಯಾದವರು ಎನಿಸುತ್ತದೆ. ಎಲ್ಲರಿಗೂ ಸೆಕ್ಯುಲರ್ ವ್ಯಾದಿ ಹಿಡಿದಿರುವಾಗ ಕೊಡವರ ಪಾಲಿಗೆ ಈ ಇಬ್ಬರು ಸಂಶೋಧಕರು ನಮ್ಮ ಐ.ಮಾ. ಮುತ್ತಣ್ಣನವರತಂತೆಯೇ ಹತ್ತಿರದವರಾಗಿ ಕಾಣುತ್ತಾರೆ ಎಂದರೆ ಅತಿಶಯೋಕ್ತಿ ಅಲ್ಲ. ಏಕೆಂದರೆ ಕೊಡವರಾಗಿ ಹುಟ್ಟಿದರೂ ಬಿರಿಯಾನಿಯ ಆಸೆಯಿಂದ ಉರೂಸುಗಳಿಗೆ ಮುಗಿಬೀಳುವ ಜನರೂ ಕೊಡಗಲ್ಲಿದ್ದಾರೆ. ಅವರೆಲ್ಲರೂ ಟಿಪ್ಪು ಗುಣಗಾನ ಮಾಡುತ್ತಾ ತಲೆದೂಗುತ್ತಾರೆ.

ಒಂದು ಪ್ರಕಟವಾದ ಪುಸ್ತಕ. ಇನ್ನೊಂದು ಇನ್ನೇನು ಬಿಡುಗಡೆಯಾಗಲಿರುವ ಪುಸ್ತಕ. ಎರಡರಲ್ಲಿರುವುದೂ ಸತ್ಯ ಹೊರಬರಬೇಕು ಎನ್ನುವ ತುಡಿತ, ಸಾತ್ವಿಕ ಆಕ್ರೋಶ. ಒಂದು ಬೇಸರ. ಕೊಡವರಿಗೆ ಹೀಗಾಯಿತಲ್ಲಾ ಎಂಬ ನೋವು. ಹಾಗಾದರೆ, ಪ್ರತ್ಯಕ್ಷ ಅನುಭವಿಸಿದ ಕೊಡವರಿಗೆ ಟಿಪ್ಪು ಹೊಗಳುಭಟರಿಂದ ಹೇಗಾಗಿರಬೇಡ? ಟಿಪ್ಪು ಕಾಲದ ಕೊಡಗಿನ ಒಂದೊಂದು ದಿನವನ್ನು ಅಧ್ಯಯನ ಮಾಡಿದರೂ ಮರೆಯಲಾಗದ ವೇದನೆಗಳು ಉದ್ಬವವಾಗುತ್ತವೆ.

ಕನ್ನಂಡ ಮತ್ತು ಅಪ್ಪಚ್ಚೀರ ಮನೆಗಳು ಮಡಿಕೇರಿ ತಾಲೂಕಿನಲ್ಲಿ ಇಂದಿಗೂ ಹೆಸರಾದ ಮನೆತನಗಳು. ಆ ಮನೆಗಳಲ್ಲಿ ಇಂದಿಗೂ ಮನೆದೇವರ ಜೊತೆಗೆ ಆ ಮನೆತನದ ಯೋಧರನ್ನು ಪೂಜಿಸುವ ಸಂಪ್ರದಾಯವಿದೆ. ಕನ್ನಂಡ ಮನೆಯಲ್ಲಿ ದೊಡ್ಡಯ್ಯನೆಂಬ ಯೋಧ ಮತ್ತು ಅಪ್ಪಚ್ಚೀರ ಮನೆಯಲ್ಲಿ ಮಂದಣ್ಣನೆಂಬ ಯೋಧರ ಕಥೆಗಳು ಕೊಡಗಿನೆಲ್ಲೆಡೆ ಪ್ರಚಲಿತವಿದೆ. ಇವರಿಬ್ಬರ ಇತಿಹಾಸವನ್ನು ಹುಡುಕುತ್ತಾ ಹೋದರೆ ಅದು ಹೈದರಾಲಿಯವರೆಗೆ ಮುಟ್ಟುತ್ತದೆ. ಈ ಇಬ್ಬರು ಯೋಧರು ಕೊಡಗಿನ ಅರಸರ ಸೈನ್ಯದಲ್ಲಿ ಸರದಾರರಾಗಿದ್ದವರು. ಮಹಾ ಪರಾಕ್ರಮಿಗಳು. ಕೊಡಗನ್ನು ಆಕ್ರಮಿಸಲು ಹೈದರಾಲಿ ಹುನ್ನಾರ ನಡೆಸುತ್ತಿದ್ದಾಗ ಸತತ ಮೂರು ಬಾರಿ ಹೈದರನಿಗೆ ಮಣ್ಣು ಮುಕ್ಕಿಸಿದವರು ಈ ದೊಡ್ಡಯ್ಯ ಮತ್ತು ಮಂದಣ್ಣರು. ಮಂದಣ್ಣ ಕತ್ತಿ ಬೀಸುತ್ತಿದ್ದರೆ ಅರಸನಿಗೇ ಹೆದರಿಕೆ ಉಂಟಾಗುತ್ತಿತ್ತಂತೆ, ಒಮ್ಮೆ ಈ ಮಂದಣ್ಣ ಕುದಿಯುತ್ತಿದ್ದ ಹಾಲನ್ನು ಗಟಗಟನೆ ಕುಡಿದನಂತೆ, ಬಿಸಿಗೆ ನಾಲಿಗೆಯಲ್ಲಿ ಬೊಕ್ಕೆಗಳು ಎದ್ದವಂತೆ. ಅದನ್ನು ಮಂದಣ್ಣ ಉಗುರಿನಿಂದಲೇ ಕಿತ್ತನಂತೆ ಎಂಬ ಕಥೆಗಳನ್ನು ಕೊಡವರು ಹೆಮ್ಮೆಯಿಂದ ಇಂದಿಗೂ ಹೇಳುತ್ತಾರೆ. ನಾಲ್ಕನೆ ಬಾರಿಗೆ ದಾಳಿ ಮಾಡಿದ ಹೈದರ ತಂತ್ರದಿಂದ ಯುದ್ಧಕ್ಕೆ ತೊಡಗಿದ. ಮತ್ತು ದೊಡ್ಡಯ್ಯ ಹೋರಾಡುತ್ತಲೇ ಮಡಿದ. ಮಂದಣ್ಣನನ್ನು ಮೋಸದಿಂದ ಕೊಲ್ಲಿಸಲಾಯಿತು. ಇಂಥ ಹೈದರನ ಮಗ ಟಿಪ್ಪು. ಈ ಯೋಧರ ಮರಣದ ತರುವಾಯ ಟಿಪ್ಪುವಿನ ಮಾರ್ಗ ಸಲೀಸಾಯಿತು. ಈ ಕಥೆ ಬಹುಶಃ ಕೋಚಪ್ಪನವರಿಗೆ ಗೊತ್ತಿರಲಿಕ್ಕಿಲ್ಲ. ತಿಳ್ಕೋಬಾರದೇ? ಟಿಪ್ಪು ವಿ.ವಿ, ಕೋ.ಚ ನವರ ಮಾತುಗಳಿಂದ ಕನ್ನಂಡ ಮತ್ತು ಅಪ್ಪಚ್ಚೀರ ಮನೆಗಳ ಸದಸ್ಯರಿಗೆ ಎಷ್ಟೊಂದು ನೋವಾಗಿರಬೇಡ?

ಇಂಥ ಘಟನೆಗಳು ಕೊಡಗಿನಲ್ಲಿ ಅವೆಷ್ಟಿವೆ?

ಅದು ದೇವಟ್ಟ್ ಪರಂಬು. ಪರಂಬು ಎಂದರೆ ಕೊಡವ ಭಾಷೆಯಲ್ಲಿ ಮೈದಾನ. ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ೧೫ ಕಿ.ಮೀ ಸಾಗಿದರೆ ಅಯ್ಯಂಗೇರಿ ಎಂಬ ಊರು ಸಿಗುತ್ತದೆ. ಅಲ್ಲಿರುವುದೇ ಈ ದೇವಟ್ಟ್ ಪರಂಬು. ೧೭೮೫ ನೇ ಇಸವಿಯಲ್ಲಿ ತನ್ನ ಫ್ರಂಚ್ ಸರದಾರ ಮಾನ್ಸಂಟ್ ಲಾಲಿ ಎಂಬವನ ಜತೆಗೂಡಿ ದೊಡ್ಡ ಸೈನ್ಯದೊಡನೆ ಕೊಡಗಿಗೆ ಬಂದ ಟಿಪ್ಪು ಸಮಸ್ತ ಕೊಡವರಿಗೆಲ್ಲಾ ಸಂದೇಶವೊಂದನ್ನು ರವಾನಿಸಿದ. “ಜಗಳ ಬೇಡ, ರಾಜಿ ಮಾಡಿಕೊಳ್ಳೋಣ ಬನ್ನಿ” ಎಂದು ಕರೆದ. ಮುಗ್ದತೆಯ ಮೂರ್ತ ರೂಪದಂತಿದ್ದ ಕೊಡವ ಯೋಧರು ಟಿಪ್ಪುವಿನ ಸವಿ ಮಾತಿಗೆ ಮರುಳಾಗಿ ದೇವಟ್ಟ್ ಪರಂಬುವಿಗೆ ತೆರಳಿದರು. ಮೈದಾನದ ಸುತ್ತಲೂ ಕಾಡುಗಳಲ್ಲಿ ಟಿಪ್ಪುವಿನ ಸೈನಿಕರು ಅವಿತು ಕುಳಿತಿದ್ದರು. ಏಕಾಏಕಿ ಟಿಪ್ಪುವಿನ ಸೈನಿಕರು ಕೊಡವರನ್ನು ಸಾಮೂಹಿಕವಾಗಿ ಸೆರೆಹಿಡಿದರು. ಪ್ರತಿರೋಧ ಒಡ್ಡಿದವರನ್ನು ತರಿದರು. ಹೀಗೆ ಸೆರೆಯಾದವರ ಸಂಖ್ಯೆ ೧೨೦೦೦ ಎಂದು ಮುತ್ತಣ್ಣನವರು ಹೇಳುತ್ತಾರೆ. ಸೆರೆಯಾದ ಸೈನಿಕರು ಶ್ರೀರಂಗಪಟ್ಟಣದಲ್ಲಿ ಅಹಮದಿಗಳಾದರು. ನೇರ ಯುದ್ಧದಲ್ಲಿ ಸಾಧಿಸಲಾಗದ ಗೆಲುವನ್ನು ಟಿಪ್ಪು ತಂತ್ರಗಾರಿಕೆಯ ಮೂಲಕ ಸಾಧಿಸಿದ್ದ. ಅನಂತರ ಫ್ರಂಚ್ ಸರದಾರ ಲಾಲಿಯನ್ನೇ ಕೊಡಗಿನ ಉಸ್ತುವಾರಿಗೆ ನೇಮಿಸಿದ. ಪುನಃ ಆತ ೧೭೮೬ ರಲ್ಲಿ ಕೊಡಗಿಗೆ ಬಂದ. ಸಾವಿರಾರು ಜನರನ್ನು ಮತಾಂತರಿಸಿದ ಮತ್ತು ಸೆರೆಯಾಳಾಗಿಸಿಕೊಂಡುಹೋದ. ಮುಂದೆ ಟಿಪ್ಪು ಸತ್ತ ಮೇಲೆ ಹೀಗೆ ಸೆರೆಯಾದ ೯೦ ಕೊಡವ ಕುಟುಂಬಗಳ ೨೦೦ ಜನರು ವಾಪಾಸು ಬಂದರು. ಆದರೆ ಅವರು ಕೊಡವರಾಗಲಿಲ್ಲ. ಕೊಡವ ಮಾಪಿಳ್ಳೆಗಳಾಗಿ ಉಳಿದರು. ಕೋಚೆಯವರಿಗೆ ಇವೆಲ್ಲಾ ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳಬೇಕು. ಭೈರಪ್ಪನವರಿಗೆ, ಚಿದಾನಂದ ಮೂರ್ತಿಗಳಿಗೆ, ಪ್ರತಾಪ್ ಸಿಂಹರಿಗೆ ಇವೆಲ್ಲಾ ಗೊತ್ತಾಗಬಹುದಾದರೆ ಕೋ.ಚ ನವರಿಗೆ ಇವು ಏಕೆ ಗೊತ್ತಾಗುತ್ತಿಲ್ಲ.?

ಮಡಿಕೇರಿ ತಾಲೂಕಿನ ಕೊಳಕೇರಿ ಒಂದು ಸಣ್ಣ ಊರು. ಆ ಊರಲ್ಲಿ ಬಿದ್ದಾಟಂಡ ಎಂಬ ಕೊಡವ ಕುಟುಂಬ. ಆ ಕುಟುಂಬಕ್ಕೆ ಟಿಪ್ಪು ಮಾಡಿದ ದೌರ್ಜನ್ಯವನ್ನು ಬಿದ್ದಾಟಂಡ ರಮೇಶ್ ಅವರು ಇಂದಿಗೂ ನೋವಿನಿಂದ ಹೇಳಿಕೊಳ್ಳುತ್ತಾರೆ ” ನಮ್ಮ ಐನ್ ಮನೆಯನ್ನು ಸುಟ್ಟ, ನಮ್ಮ ೪೦ ಜನ ಮುತ್ತಜ್ಜನನ್ನು ಸೆರೆಹಿಡಿದು ಮತಾಂತರಿಸಿದ ಆ ರಾಕ್ಷಸನನ್ನು ಹೊಗಳುವುದನ್ನು ಇನ್ನೆಷ್ಟು ದಿನ ಕೇಳಬೇಕು. ಆತನ ಹೆಸರಿನ ವಿ.ವಿಯನ್ನು ಕಟ್ಟಿದರೆ ನಮ್ಮ ಮುತ್ತಜ್ಜರಿಗೆ ಸದ್ಗತಿ ದೊರತೀತೇ? ನಮ್ಮ ಕುಟುಂಬದ ಸಂಖ್ಯೆ ಇಂದು ಕಡಿಮೆಯಾಗಿರುವುದಕ್ಕೆ ಆತನೇ ಕಾರಣ. ನಾವು ಬಿದ್ದಾಟಂಡ ಕುಟುಂಬಸ್ತರು ಆತನನ್ನು ಮರೆಯುವುದಿಲ್ಲ.” ಎಂದು ಕೊರಗುತ್ತಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಹಾಲಿ ಅಧ್ಯಕ್ಷರಾದ ಅಡ್ಡಂಡ ಕಾರ್ಯಪ್ಪನವರು “ಕೋ. ಚೆನ್ನಬಸಪ್ಪನವರು ಕಾರಣವಿಲ್ಲದೆ ಟಿಪ್ಪುವನ್ನು ಹೊಗಳುತ್ತಾರೆ. ಆದರೆ ನಮಗೆ ಕೊಡವರಿಗೆ ಆತನನ್ನು ರಾಕ್ಷಸ ಎನ್ನಲು ಸಾಕ್ಷಿಗಳೇ ಇವೆ. ಕೊಡಗಿನ ಬಗ್ಗೆ ಯಾವುದೇ ಅರಿವಿಲ್ಲದ ಚೆನ್ನಬಸಪ್ಪನವರಿಗೆ ಕೊಡವರ ಬಗ್ಗೆ ಮಾತಾಡುವ ಹಕ್ಕಿಲ್ಲ. ನಮಗೆ ಟಿಪ್ಪು ಬಗ್ಗೆ ಮಾತಾಡಲು ಹಕ್ಕಿದೆ. ಏಕೆಂದರೆ ನಾವು ಸ್ವತಃ ಅನುಭವಿಸಿದವರು. ನನ್ನ ಅಜ್ಜನನ್ನು ನನ್ನಿಂದ ದೂರ ಮಾಡಿದ ಟಿಪ್ಪುವನ್ನು ಪ್ರತಿಭಟಿಸುವ ಹಕ್ಕು ನಮಗೆ ಇದೆ.” ಎನ್ನುತ್ತಾರೆ.

ಕೊಡಗಿನ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಮಾತಂಡ ಟಾಟಾ ಬೋಪಯ್ಯನವರು ” ಕೊಡಗಿನಲ್ಲಿ ಒಂದೇ ಒಂದು ಕೊಡವ ಕುಟುಂಬ ಇರಬಾರದು, ಎಲ್ಲರನ್ನು ಬೇಟೆಯಾಡು ಎಂದು ಲಾಲಿಗೆ ಆದೇಶಿಸಿದ ಟಿಪ್ಪುವನ್ನು ಹೊಗಳುವಾಗ ನಮಗೆ ಹೇಗಾಗಬೇಕು? ಆತನ ಹಾವಳಿಯಿಂದ ಕೊಡವರು ಕಾಡು ಸೇರಿದ್ದರು. ಮುಂದೆ ಬ್ರಿಟೀಷರು ಗಣತಿಗೆ ಬಂದಾಗ ಗಣತಿಗೆ ಸಿಕ್ಕವರು ಕೇವಲ ೧೭೦೦೦ ಮಂದಿ ಕೊಡವರು ಮಾತ್ರ. ಖಾಲಿಬಿದ್ದ ಕೊಡಗಿನ ಜಾಗಗಳಿಗೆ ಬ್ರಿಟಿಷರು ಅಮರ ಸುಳ್ಯದಿಂದ ಜನರನ್ನು ತಂದು ತುಂಬಿಸಿದರು” ಎನ್ನುತ್ತಾರೆ.

ಚೆನ್ನಬಸಪ್ಪನವರು ಇದಕ್ಕೆಲ್ಲಾ ಏನು ಹೇಳುವರು? ಟಿಪ್ಪುವಿನ ಆರ್ಭಟದ ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ಭಾಗಮಂಡಲದ ಮುರಿದ ಆನೆಯ ಮೂರ್ತಿಗಳು, ಕೊಳಕೇರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನ (೧೯೫೬ರಲ್ಲಿ ಜೀರ್ಣೋದ್ದಾರವಾಯಿತು), ಕೊಳಕೇರಿ ಮಹಾದೇವರ ದೇವಸ್ಥಾನ (೨೦೦೫ರಲ್ಲಿ ಜೀರ್ಣೋದ್ದಾರವಾಯಿತು ), ಕೊಳಕೇರಿಯ ಭಗವತಿ ದೇವಸ್ಥಾನ (ಈಗಲೂ ಪಾಳುಬಿದ್ದಿದೆ), ಅರ್ವತ್ತೋಕ್ಲು ಈಶ್ವರ ದೇವಸ್ಥಾನ, ಅಪ್ಪಂಗಳ ಮಾದೂರಪ್ಪ ದೇವಸ್ಥಾನ (ಜೀರ್ಣೋದ್ದಾರವಾಗುತ್ತಿದೆ). ಕೋ. ಚನ್ನಬಸಪ್ಪನವರು ಮುಂದಿನ ಸಾಹಿತ್ಯ ಸಮ್ಮೇಳನದ ಮೊದಲು ಇವನ್ನೆಲ್ಲಾ ಒಮ್ಮೆ ನೋಡಬೇಕು. ನೋಡಿ ತನ್ನ ಮಾತಿಗೆ ಕ್ಷಮೆ ಯಾಚಿಸಬೇಕು. ತನಗೆ ಗೊತ್ತಿಲ್ಲದ ಯಾವಯಾವುದೋ ವಿಷಯವನ್ನು ಮಾತಾಡಿದರೆ ಕೊಡವರು ” ಇವರಿಗೆ ಬಿರಿಯಾನಿಯ ಆಸೆಯಿರಬಹುದು” ಎಂದು ಮಾತಾಡಿಕೊಳ್ಳುತ್ತಾರೆ. ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ಕೊಡವರು ಕೋ.ಚ ನವರನ್ನು ಕಾಯುತ್ತಾರೆ. ತಿದ್ದಿ ನಡೆದರೆ ಅವರು ಪಂದಿಕರಿ ಮಾಡಿ ಸತ್ಕರಿಸುತ್ತಾರೆ.
ಅದಕ್ಕಿಂತ ಮೊದಲು ಕೋ.ಚೆಯವರು ಈ ಎರಡು ಪುಸ್ತಕಗಳನ್ನು ಓದಬೇಕು. ಅದಕ್ಕೆ ಪೂರ್ವಗ್ರಹವನ್ನು ಬಿಡಬೇಕು

27 ಟಿಪ್ಪಣಿಗಳು Post a comment
 1. ಮಾರ್ಚ್ 14 2013

  ಸಂಸತ್ತಿನ ಮೇಲೇ ಆಕ್ರಮಣ ಮಾಡಿದ ಭಯೋತ್ಪಾದಕ ಅಫ್ಜಲ್ ಗುರುವನ್ನು ನೇಣು ಹಾಕಿದ್ದನ್ನು ಸಾರ್ವಜನಿಕವಾಗಿ ಪ್ರತಿಭಟಿಸುವವರಿದ್ದಾರಂತೆ. ಅವರ ಪ್ರತಿಭಟನೆಗೆ ಹೆದರಿ, “ಅಫ್ಜಲ್ ಗುರುವನ್ನು ನೇಣು ಹಾಕಿದ್ದು ಸರಿಯೇ?” ಎಂದು ಮಾಧ್ಯಮಗಳು ಪ್ರಶ್ನಿಸುತ್ತವೆ.
  ಟಿಪ್ಪು ವಿಶ್ವವಿದ್ಯಾಲಯದ ವಿಷಯ ಬಂದಾಗ, ಈ ರೀತಿಯ ಉಗ್ರ ಪ್ರತಿಭಟನೆಗಳು ಏಕೆ ನಡೆಯುತ್ತಿಲ್ಲ?
  “ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ” ಎಂಬ ಉದಾಸೀನ ಭಾವವು ಹಿಂದು ಸಮಾಜದಲ್ಲಿರುವ ತನಕ, ಜಾತ್ಯಾತೀತ ವ್ಯಾಧಿ ನಮಗೆ ಅಂಟಿಯೇ ಇರುತ್ತದೆ.
  ಇಂದು “ಟಿಪ್ಪು ವಿಶ್ವವಿದ್ಯಾಲಯ” ಸಹಿಸಿದರೆ, ನಾಳೆ “ಅಫ್ಜಲ್ ಗುರು ಕಾಲೋನಿ”ಗಳೇ ಉದ್ಭವಿಸುತ್ತವೆ!

  ಉತ್ತರ
 2. Ananda Prasad
  ಮಾರ್ಚ್ 14 2013

  ಟಿಪ್ಪುವು ಬಲವಂತದ ಮತಾಂತರ ಕೊಡಗಿನಲ್ಲಿ ಮಾಡಿದ್ದಿದ್ದರೆ ಟಿಪ್ಪುವಿನ ಮರಣಾನಂತರ ಅವರೆಲ್ಲರೂ ಹಿಂದೂ ಧರ್ಮಕ್ಕೆ ಬರಬಹುದಾಗಿತ್ತು ಏಕೆಂದರೆ ಟಿಪ್ಪುವಿನ ನಂತರ ಈ ಭಾಗದಲ್ಲಿ ಮುಸ್ಲಿಂ ಆಳ್ವಿಕೆ ಇರಲಿಲ್ಲ. ಮತಾಂತರ ಹೊಂದಿದವರು ಮರಳಿ ಹಿಂದೂಧರ್ಮಕ್ಕೆ ಬರಲಿಲ್ಲ ಎಂದರೆ ಹಿಂದೂಧರ್ಮದಲ್ಲಿ ಗಂಭೀರ ದೋಷ ಇದೆ ಎಂದಾಗುತ್ತದೆ ಮತ್ತು ಅದರಿಂದ ರೋಸಿ ಹೋದವರು ಟಿಪ್ಪುವಿನ ಕಾಲದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರಬಹುದಾದುದನ್ನು ಅಲ್ಲಗಳೆಯುವಂತಿಲ್ಲ. ಇಸ್ಲಾಂಗೆ ಮತಾಂತರಗೊಂಡವರಿಗೆ ಅದು ಹಿಂದೂ ಧರ್ಮದ ಅಸಮಾನತೆ, ಶೋಷಣೆ, ದೌರ್ಜನ್ಯಗಳಿಂದ ಬಿಡುಗಡೆಯ ಹಾದಿಯೂ ಆಗಿರಬಹುದು. ಹೀಗಾಗಿ ಟಿಪ್ಪುವನ್ನು ದೂರುವುದರಿಂದ ಪ್ರಯೋಜನವಿಲ್ಲ. ಯುದ್ಧದ ವೇಳೆಯಲ್ಲಿ ಶತ್ರುಗಳ ಮೇಲೆ ಆಕ್ರಮಣ ಮಾಡಿ ಕೊಲ್ಲುವುದು ಇದ್ದದ್ದೇ. ಇದು ಟಿಪ್ಪು ಕಾಲದಲ್ಲಿ ಅಥವಾ ಆತನ ಆಳ್ವಿಕೆಯಲ್ಲಿ ಮಾತ್ರ ಆದದ್ದಲ್ಲ. ಹಿಂದೂ ರಾಜರು ಹಿಂದೂಗಳ ಮೇಲೆಯೇ ಆಕ್ರಮಣ ಕೊಲ್ಲುತ್ತಿದ್ದದ್ದು ಮಾಮೂಲಿಯೇ. ಇಂಥ ಲಕ್ಷಾಂತರ ಪ್ರಕರಣಗಳು ದೇಶದಲ್ಲಿ ನಡೆದಿರಬಹುದು. ಟಿಪ್ಪುವಿನ ಆಡಳಿತದ ಬಗ್ಗೆ ಸರಾಸರಿಯಲ್ಲಿ ಒಳ್ಳೆಯ ಅಭಿಪ್ರಾಯವೇ ಜನಪದದಲ್ಲಿದೆ. ಹೀಗಾಗಿ ಟಿಪ್ಪುವಿನ ವಿರುದ್ಧ ಎಷ್ಟೇ ಅಪಪ್ರಚಾರ ನಡೆದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.

  ಉತ್ತರ
  • ಮಾರ್ಚ್ 14 2013

   ಯುದ್ಧಗಳ ಸಮಯದಲ್ಲಿ ರಕ್ತಪಾತ ತಪ್ಪಿದ್ದಲ್ಲ. ಆದರೆ, ಮತಾಂತರ?
   ಮುಸಲ್ಮಾನರ ಮೇಲೆ ಯುದ್ಧದಲ್ಲಿ ಗೆದ್ದ ನಂತರ ಅಲ್ಲಿನ ಮುಸಲ್ಮಾನರನ್ನು ಬಲವಂತದಿಂದ ಹಿಂದುಗಳಾಗಿ ಮತಾಂತರ ಮಾಡಿದ ಒಂದು ಉದಾಹರಣೆ ತೋರಿಸಿ?

   ಮತಾಂತರಗೊಂಡವರನ್ನು ವಾಪಸ್ ಹಿಂದು ಸಮಾಜಕ್ಕೆ ಸೇರಿಸುತ್ತಿರಲಿಲ್ಲ. ಹೀಗಾಗಿ ಮತಾಂತರಗೊಂಡವರು ಹಿಂದಕ್ಕೆ ಬರಲಾಗಲಿಲ್ಲ. ಆ ರೀತಿ ನಮ್ಮಿಂದ ಅಗಲಿದವರಿಗೆ ಬಾಗಿಲನ್ನು ಹಾಕಿದ್ದು ನಾವು ಮಾಡಿದ ದೊಡ್ಡ ತಪ್ಪು. ಅದನ್ನು ತಿದ್ದಿಕೊಳ್ಳಲೇಬೇಕು.
   ಆದರೆ, ಅದನ್ನು ಟಿಪ್ಪು ಮಾಡಿದ ಅತ್ಯಾಚಾರಕ್ಕೆ ಸಮರ್ಥನೆಯಾಗಿ ಬಳಸುವುದು ಸರಿಯಲ್ಲ.
   ಟಿಪ್ಪು ಕೊಂದದ್ದು ಕೆಲವು ನೂರು ಜನರನ್ನಲ್ಲ. ಆತ ಹತ್ತಾರು ಸಹಸ್ರ ಜನರನ್ನು ಕೊಂದ.
   ಮತ್ತು ಆತ ಕೊಂದದ್ದೆಲ್ಲಾ ಯುದ್ಧವನ್ನು ಗೆದ್ದುದಕ್ಕಾಗಿ ಅಲ್ಲ!
   ಆತನ ಕೈಯ್ಯಲ್ಲಿ ಹತರಾದ ಹೆಚ್ಚಿನ ಮಂದಿ ಮತಾಂತರವನ್ನು ಒಪ್ಪದುದಕ್ಕಾಗಿ.
   ಅವರಿಗಿದ್ದುದು ಎರಡೇ ಆಯ್ಕೆ – ಮುಸಲ್ಮಾನರಾಗುವುದು ಅಥವಾ ಸಾಯುವುದು!
   ಇದು ನಿಮ್ಮ ಟಿಪ್ಪುವಿನ ಜಾತ್ಯಾತೀತವಾದ.

   ಟಿಪ್ಪುವಿನ ಮತಾಂಧತೆಯನ್ನರಿಯಲು, ಕನ್ನಡ ವಿರೋಧವನ್ನರಿಯಲು ಬಹುದೂರ ಹೋಗಬೇಕಾಗಿಲ್ಲ.
   ಆತನ ಖಡ್ಗದ ಮೇಲೆ ಪರ್ಶಿಯನ್ ಭಾಷೆಯಲ್ಲಿ ಕೊರೆದಿರುವುದನ್ನು ಓದಿದರೆ ಸಾಕು!

   ಉತ್ತರ
 3. ತುಳುವ
  ಮಾರ್ಚ್ 14 2013

  ಸಂತೋಷ್, ತಮ್ಮ / ಕೊಡವರ ನೋವು ಎಂಥದ್ದೆ೦ಬುದು ನಾನು ಊಹಿಸಬಲ್ಲೆ.. ಯಾಕೆಂದರೆ ಟೀಪು ಇಂಥಾ ಕೆಲಸ ಕೇವಲ ಕೊಡಗಿನಲ್ಲಿ ಮಾತ್ರ ಮಾಡಿದ್ದಲ್ಲ.. ತುಳುನಾಡು ಹಾಗೂ ಕೇರಳದ ಉದ್ದಗಲಗಳಲ್ಲೂ ಮಾಡಿದ್ದಾನೆ.. ಇದಕ್ಕೆ ಈ ಭೂಭಾಗದ ಹೆಜ್ಜೆ ಹೆಜ್ಜೆಗೂ ಸಾಕ್ಷಿಗಳು ಸಿಗುತ್ತವೆ (ಮಧೂರು ದೇವಸ್ಥಾನದ ಮಾಡಿನಲ್ಲಿರುವ ಟೀಪುವಿನ ಕತ್ತಿಯ ಗುರುತು ಒಂದು ಉದಾಹರಣೆ). ಇಷ್ಟು ಸ್ಪಷ್ಟ ಹಾಗೂ ನೇರ ವಿಚಾರ ಕೋ ಚ ಹಾಗೂ ಅವರತಿರುವ ಇತರ ಬುಧ್ಧಿ ಜೀವಿಗಳಿಗೆ ಅರ್ಥವಾಗುವುದಿಲ್ಲವೆ?

  ನನಗೆ ಅನ್ನಿಸುವ ಪ್ರಕಾರ ಇವರು ಹೀಗಾಡಲು ಒಂದು ಮುಖ್ಯ ಕಾರಣ ಇದೆ. ಈ ಯಾವುದೇ ಬುಧ್ಧಿಜೇವಿ/ಸಾಹಿತಿ/ಡೋಂಗಿ ಜಾತ್ಯಾತೀತವಾದಿಗಳು ಹಾಗೂ ಅವರ ಕುಟುಂಬಸ್ತರು ಇಂಥ ಪರಿಸ್ಥಿತಿಗೆ ಒಳಗಾಗಿಲ್ಲ.. ಸದ್ಯಕ್ಕೆ ಟೀಪುವಿನ ಬಗ್ಗೆ ಜಾತ್ಯತೀತ ಜಪ ಮಾಡುವುದರಿದ ಲಾಭ ಜಾಸ್ತಿ ಇದೆ..ಅದಕ್ಕೆ ಈ ವರಸೆ. ಕಶ್ಮೀರಿ ಪ0ಡಿತರ ಗತಿ ಇವರಿಗೆ ಬರುವವರೆಗೂ ಎಚ್ಚೆತ್ತುಕೊಳ್ಳುವ ಲಕ್ಷಣ ನನಗಂತೂ ಕಾಣುತ್ತಿಲ್ಲ.

  ಆಸಕ್ತರು ಪೂರಕ ಮಾಹಿತಿಗೆ ಈ ಕೆಳಗಿನ ಕೊಂಡಿಯನ್ನು ಓದಬಹುದು:
  http://ajitvadakayil.blogspot.de/2011/10/tipu-sultan-unmasked-capt-ajit.html

  ಉತ್ತರ
 4. ಟಿಪ್ಪು ಹಿಂಸೆ, ತಂತ್ರಗಳಿಂದ ಗೆದ್ದ ಸರಿ. ಮಿಕ್ಕ ರಾಜರೇನು ಮುದ್ದು ಮಾಡಿ ಗೆಲ್ಲುತ್ತಿದ್ದರೇ? ಟಿಪ್ಪು ಒಬ್ಬ ರಾಜ. ಪಾಳೇಗಾರರನ್ನ ಬಗ್ಗುಬಡಿಯುವುದು ಅವನ ಕೆಲಸ. ಮುದ್ದಣ್ಣ ತನ್ನ ದೊಡ್ಡ ಮನೆತನವನ್ನ ಬೇರೆಯವರಿಗೆ ಮುದ್ದುಮಾಡಿ ಗೆದ್ದು ಕಟ್ಟಿಕೊಂಡಿದ್ದನೇ? ಅವನೊಬ್ಬ ನಾಡಗವ್ಡ ಇಲ್ಲಾ ಪಾಳೇಗಾರ. ಮಿಕ್ಕ ಬಡವರನ್ನ ಬಗ್ಗಬಡಿಯುವುದು ಅವರ ಕೆಲಸ. ಹಿಂದಿನ ರಾಜರು-ಪಾಳೇಗಾರರು ಬಡಿದಾಡಿಕೊಂಡಿದ್ದನ್ನ ಮಂದಿಯಾಳ್ಕೆಯಡಿ ಬದುಕುತ್ತಿರುವ ಇವತ್ತಿನವರು ಪರ-ವಿರೋದ ವಹಿಸಿಕೊಂಡು ಬರೆದುಕೊಳ್ಳುವುದು ಕರುಣೆ ತರಿಸುತ್ತದೆ. ಅಶೋಕ ಬುದ್ದ ದಮ್ಮ ತಂದುಕೊಂಡ. ಕನ್ನಡದ ರಾಜರುಗಳೇ ಜಯ್ನ ದಮ್ಮ ತಂದರು. ನಂತರದವರು ವಯ್ದಿಕ ದಮ್ಮ ತಂದರು. ರಾಜರುಗಳ ತೆವಲೇ ಅದು. ಅದನ್ನೆಲ್ಲಾ ಮೀರಬೇಕು ಅಂತಲೇ ನಾವಿಂದು ಮಂದಿಯಾಳ್ಕೆ ಕಟ್ಟಿಕೊಂಡಿರೋದು. ಅಂಕಣವನ್ನ ಅಳುತ್ತಾ ಬರೆದ ಹಾಗಿದೆ. ಅಳುವುದನ್ನು ನಿಲ್ಲಿಸಿ ಚಿಂತಿಸಿದ್ದರೆ ಸಂತೋಶ್ ತಮ್ಮಯ್ಯನವರಿಗೆ ನಮ್ಮ ಕಾಲದ ತಿಳುವಳಿಕೆಗಳು ಹೊಳೆಯುತ್ತಿದ್ದವೇನೋ. ಆಗವರು, ಟಿಪ್ಪು ವಿಶ್ವವಿದ್ಯಾಲಯ, ಸಂಸ್ಕ್ರುತ ವಿಶ್ವವಿದ್ಯಾಲಯ ಬೇಡ, ಕೊಡವ ವಿಶ್ವವಿದ್ಯಾಲಯ ಬೇಕು ಎಂದು ತಕ್ಕುದಾದ ಹಕ್ಕು ಮಂಡಿಸುತ್ತಿದ್ದರು. ಆದರೆ, ಅದಕ್ಕೆಲ್ಲಾ ಯೋಚನೆ ಮಾಡಬೇಕಾಗ್ತದೆ.

  ಉತ್ತರ
  • ಮಾರ್ಚ್ 17 2013

   ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡರೇ,

   ಅನೇಕ ರಾಜರು ಸಿಂಹಾಸನವೇರಲು ರಕ್ತವನ್ನು ಹರಿಸಿರುವ ಉದಾಹರಣೆಗಳು ವಿರಳವೇನಲ್ಲ.
   ಸ್ವಂತದ ತಂದೆ-ತಾಯಿ, ಅಣ್ಣ-ತಮ್ಮಂದಿರನ್ನೇ ಕೊಲ್ಲಿಸಿದ ಉದಾಹರಣೆಗಳೂ ಮೊಘಲ್ ಇತಿಹಾಸದಲ್ಲಿವೆ.
   ಆದರೆ, ಆ ರೀತಿಯ ಉದಾಹರಣೆಗಳು ನಮಗೆ ಆದರ್ಶವಾಗಬೇಕಿಲ್ಲ ಅಲ್ಲವೇ?
   ವಿಶ್ವವಿದ್ಯಾಲಯಕ್ಕೆ ಟಿಪ್ಪುವಿನ ಹೆಸರಿನ ಬದಲಾಗಿ, ಬೇರಾರೋ ಅಂತಹದೇ ಹಿಂಸಾಚಾರಗಳಲ್ಲಿ ತೊಡಗಿದ್ದ ರಾಜರ ಹೆಸರನ್ನು ತಿಳಿಸಿದ್ದಲ್ಲಿ, ಅದಕ್ಕೂ ವಿರೋಧ ವ್ಯಕ್ತವಾಗುತ್ತಿತ್ತು.

   ಇನ್ನು ಟಿಪ್ಪು ಮಾಡಿದಂತೆ ಇತರ ಅನೇಕ ರಾಜರೂ ಹಿಂಸೆ ಮಾಡಿದ್ದರೆಂಬುದು, ಆತನ ಹೆಸರನ್ನು ವಿವಿಗೆ ಇಡುವುದಕ್ಕೆ ಯಾವ ಸೀಮೆಯ ಸಮರ್ಥನೆ?

   ಆತನ ರಾಜ್ಯದಲ್ಲಿ ಕನ್ನಡಕ್ಕೆ ಬೆಲೆಯೇ ಇರಲಿಲ್ಲ. ಆತನ ರಾಜ್ಯದಲ್ಲಿ ಪರ್ಶಿಯನ್ ಭಾಷೆ ಅಧಿಕೃತ ರಾಜ್ಯಭಾಷೆಯಾಗಿತ್ತು. ಆತನು ಅಚ್ಚು ಹಾಕಿಸಿದ ನಾಣ್ಯಗಳಲ್ಲೂ ಪರ್ಶಿಯನ್ ಭಾಷೆಗೇ ಸ್ಥಾನ. ಆತನ ಖಡ್ಗದ ಮೇಲಿರುವ ಬರಹಗಳಲ್ಲೂ ಕನ್ನಡ ನಾಪತ್ತೆ.

   ಹೀಗಿರುವಾಗ ಕನ್ನಡಿಗರು ಟಿಪ್ಪುವನ್ನು ಏಕೆ ಕೊಂಡಾಡಬೇಕು?

   ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಟಿಪ್ಪು ಮಾಡಿದ ಹಿಂಸಾಚಾರಕ್ಕೂ ಇತರ ರಾಜರು ಮಾಡಿರಬಹುದಾದ ಹಿಂಸಾಚಾರಕ್ಕೂ ಬಹುದೊಡ್ಡ ವ್ಯತ್ಯಾಸವಿದೆ!
   ನೀವೇ ನೀಡಿದ ಉದಾಹರಣೆಯಲ್ಲೂ, ಪಾಳೇಗಾರನು ತನ್ನ ಸಿಂಹಾಸನಕ್ಕಾಗಿ ಕೆಲವರನ್ನು ಕೊಲ್ಲಿಸಿದ. ಆದರೆ, ಸಾಮಾನ್ಯ ಜನರನ್ನು ವಿನಾಕಾರಣ ಕೊಲ್ಲಿಸಲಿಲ್ಲ.
   ಟಿಪ್ಪುವಿನ ವಿಷಯ ಹಾಗಲ್ಲ. ಆತನೇನೂ ಸಿಂಹಾಸನವನ್ನು “ಸಂಪಾದಿಸಿ”ಕೊಳ್ಳಲು ಹಿಂಸಾಚಾರ ನಡೆಸಲಿಲ್ಲ.
   ಆತನ ಹಿಂಸಾಚಾರ ನಡೆದದ್ದು ಸಾಮಾನ್ಯ ಜನರ ಮೇಲೆ. ಆ ಜನರನ್ನು ಮುಸಲ್ಮಾನರನ್ನಾಗಿಸಲೆಂದೇ ಆತ ನಡೆಸಿದ ಹಿಂಸಾಚಾರವದು. ಮತಾಂತರಗೊಳ್ಳದವರನ್ನೆಲ್ಲಾ ಆತ ಕೊಲ್ಲಿಸಿದ. ಹತ್ತಾರು ಸಹಸ್ರ ಸಂಖ್ಯೆಯಲ್ಲಿ ಆತ ಜನರನ್ನು ಕೊಲ್ಲಿಸಿದ.

   ಟಿಪ್ಪುವು ತನ್ನ ಖಡ್ಗದ ಮೇಲೆ ಕೊರೆದಿರುವ ಬರಹ, ಇತರ ದೇಶದ ರಾಜರಿಗೆ ಬರೆದ ಪತ್ರಗಳೇ ಆತನ “ಮತಾಂಧತೆ”ಗೆ ಸಾಕ್ಷಿ.

   ನೀವು ಟಿಪ್ಪುವಿನೊಡನೆ ಹೋಲಿಸಲು ತೆಗೆದುಕೊಂಡಿರುವ ರಾಜರು “ಹಿಂಸೆ”ಯ ವಿಚಾರದಲ್ಲಿ ಟಿಪ್ಪುವಿಗೆ ಹೋಲಿಕೆಯೇ ಅಲ್ಲ!

   ನಾನು ತಿಳಿಸಿದ ವಿಷಯದ ಸಾರ ಹೀಗಿದೆ:
   ೧. ಟಿಪ್ಪುವು ಕನ್ನಡ ವಿರೋಧಿ.
   ೨. ಟಿಪ್ಪುವು ಮತಾಂಧ.
   ೩. ಟಿಪ್ಪುವು ಭಯಂಕರ ಹಿಂಸಾಚಾರಿ.

   ಇಂತಹ “ಮತಾಂಧ ಟಿಪ್ಪು”ವನ್ನು ಸಮರ್ಥಿಸುತ್ತಿರುವವರು “ಜಾತ್ಯಾತೀತವಾದಿಗಳು”!
   ಕನ್ನಡದ ಬರಹಗಾರರಾದ ಕೋ.ಚೆನ್ನಬಸಪ್ಪ, ಗಿರೀಶ್ ಕಾರ್ನಾಡರು, “ಕನ್ನಡ ವಿರೋಧಿ”ಯಾದ ಟಿಪ್ಪುವನ್ನು ಸಮರ್ಥಿಸುವರು!

   ಇವರೆಲ್ಲರೂ ಟಿಪ್ಪುವನ್ನು ಮುಸಲ್ಮಾನ ಎಂಬ ಒಂದೇ ಕಾರಣಕ್ಕಾಗಿ ಸಮರ್ಥಿಸುತ್ತಿದ್ದಾರೆ ಎನ್ನಿಸುವುದಿಲ್ಲವೇ?
   ಅಥವಾ ಟಿಪ್ಪುವನ್ನು ವಿರೋಧಿಸುತ್ತಿರುವವರು ಹಿಂದುತ್ವವಾದಿಗಳು ಎಂಬ ಒಂದೇ ಕಾರಣಕ್ಕಾಗಿ ಇವರ ವಿರೋಧವೇ!?

   ಹಿಂದುತ್ವದ ವಿರೋಧಕ್ಕಾಗಿ, “ಜಾತ್ಯಾತೀತವಾದಿ”ಗಳು ಮತಾಂಧನನ್ನೂ ಅಪ್ಪುವರು!
   ಹಿಂದುತ್ವದ ವಿರೋಧಕ್ಕಾಗಿ, “ಕನ್ನಡ ಪ್ರೇಮಿ”ಗಳು ಕನ್ನಡವನ್ನು ಕೊಂದವನನ್ನೂ ಎತ್ತಿ ಮುದ್ದಾಡುವರು.

   ಇಂತಹ “ಜಾತ್ಯಾತೀತವಾದ” ಹಾಗೂ “ಕನ್ನಡ ಪ್ರೇಮ”ಕ್ಕೆ ಧಿಃಕ್ಕಾರವಿರಲಿ!

   ಉತ್ತರ
   • ನಾನು ಮೇಲೆ ಬರೆದುದ್ದನ್ನು ಮತ್ತೊಮ್ಮೆ ಓದಿಕೊಳ್ಳಿ. ನಾನ್ಯಾವ ರಾಜ, ಪಾಳೇಗಾರ, ದೊಣ್ಣೆನಾಯಕ, ಪೂಜಾರಿಗಳನ್ನೂ ಸಮರ್ತಿಸುವುದಿಲ್ಲ.

    ಉತ್ತರ
    • ಮಾರ್ಚ್ 18 2013

     ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ> ಟಿಪ್ಪು ಹಿಂಸೆ, ತಂತ್ರಗಳಿಂದ ಗೆದ್ದ ಸರಿ. ಮಿಕ್ಕ ರಾಜರೇನು ಮುದ್ದು ಮಾಡಿ ಗೆಲ್ಲುತ್ತಿದ್ದರೇ?
     ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ> ಟಿಪ್ಪು ಒಬ್ಬ ರಾಜ. ಪಾಳೇಗಾರರನ್ನ ಬಗ್ಗುಬಡಿಯುವುದು ಅವನ ಕೆಲಸ. ಮುದ್ದಣ್ಣ ತನ್ನ
     ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ> ದೊಡ್ಡ ಮನೆತನವನ್ನ ಬೇರೆಯವರಿಗೆ ಮುದ್ದುಮಾಡಿ ಗೆದ್ದು ಕಟ್ಟಿಕೊಂಡಿದ್ದನೇ?

     ನೀವು ತೆಗೆದುಕೊಂಡಿರುವ ಉದಾಹರಣೆಯ ನೀಡುತ್ತಿರುವ ಸಂದೇಶವೆಂದರೆ: “ಟಿಪ್ಪುವು ಯಾರೂ ಮಾಡದೇ ಇದ್ದ ಕೆಲಸವನ್ನೇನೂ ಮಾಡಿಲ್ಲ; ಎಲ್ಲ ರಾಜರೂ ಮಾಡುತ್ತಿದ್ದುದು ಅದನ್ನೇ; ಅವನನ್ನೇಕೆ ಸುಮ್ಮನೆ ವಿರೋಧಿಸುತ್ತೀರಿ”.
     ಇದು ಟಿಪ್ಪುವಿನ ಸಮರ್ಥನೆಯಲ್ಲದೆ ಮತ್ತೇನು?

     ಉತ್ತರ
     • ಅದು ಟಿಪ್ಪು ಸಮರ್ತನೆ ಅಲ್ಲ. ಅದು ಇಡೀ ರಾಜರಾಳ್ಕೆ, ಪಾಳೆಗಾರ್ಕೆ ಏರ್ಪಾಟಿನ ವಿರೋದ. ಮತ್ತೊಮ್ಮೆ ಓದಿ ನೋಡಿ. ಅಂದಹಾಗೆ, ನಾನು ಹೇಳದಿದ್ದರೂ ನೀವು ಅಂದುಕೊಂಡಿದ್ದೂ ಸರಿಯೇ. ಟಿಪ್ಪು ಯಾರೂ ಮಾಡದೇ ಇದ್ದ ಕೆಲಸವೇನೂ ಮಾಡಿಲ್ಲ. ಅಶೋಕನ ಕ್ರವ್ರ್ಯದ ಮುಂದೆ ಟಿಪ್ಪು ಎಳೆ ಹಯ್ದ. ಆಗಿನವರು ಒಬ್ಬರಿಗಿಂತ ಒಬ್ಬರು ಕ್ರೂರಿಗಳು. ಹಾಗೆನ್ನುವುದು ಟಿಪ್ಪು ಸಮರ್ತನೆಯಲ್ಲವೇ ಅಲ್ಲ. ಹಾಗನ್ನುವುದು ಅಂದರೆ ಎಲ್ಲಾ ರಾಜರುಗಳ ವಿರೋದ ಮಾಡುವುದು ಅಂದರ್ತ. ಟಿಪ್ಪು ಹಿಂದುಗಳನ್ನು ಬಗ್ಗು ಬಡಿದಿರಬಹುದು. ನಿಮ್ಮನ್ನ ನೀವು ಹಿಂದೂಗಳು ಅಂದುಕೊಂಡು ಟಿಪ್ಪುವನ್ನ ವಿರೋದಿಸಬಹುದು. ವಿರೋದಿಸಿಕೊಳ್ಳಿ. ಹಿಂದು ಅನಿಸಿಕೊಂಡ ಮೇಲೆ ಅದನ್ನ ಮಾಡಲೇಬೇಕಾಗುತ್ತದೇನೋ. ನಾನೊಬ್ಬ ಹುಟ್ಟಿನಲ್ಲಿ ಒಕ್ಕಲಿಗ. ಕೆಲಸದಲ್ಲಿ ಅರಿಮೆಗಾರ. ನಾನು ಹಿಂದು ಅಲ್ಲ. ನನಗೆ ದೇವರಲ್ಲಿ ನಂಬಿಕೆ ಇಲ್ಲ. ಪೂಜಾರಿಗಳನ್ನ ಇಟ್ಟುಕೊಳ್ಳುವ ದೇವರುಗಳನ್ನಂತೂ ನಂಬದಿರುವುದಿರಲಿ ಮತಬೇದ ನೋಡದೆ ವಿರೋದಿಸುತ್ತೇನೆ. ಪೂಜಾರಿಗಳನ್ನು ಇಟ್ಟುಕೊಳ್ಳುವ ದೇವರುಗಳ ನೆನೆದರೆ ನನಗೆ ನಗು ಬರುತ್ತದೆ. ಇನ್ನು ಅಂತಾ ದೇವರುಗಳಿಗಾಗಿ ಎದೆಬಡಿದುಕೊಳ್ಳುವ ಮಂದಿಯನ್ನು ನೆನೆದರೆ ಹೇಳುವುದೇ ಬೇದ. ಹಾಗೆಯೇ, ಅರಿಯಮೆಯ ಏರ್ಪಾಟುಗಳಾದ ಟಿಪ್ಪು ಯುನಿವೆರ್ಸಿಟಿ, ಸಂಸ್ಕ್ರುತ ಯುನಿವೆರ್ಸಿಟಿಗಳನ್ನೂ ವಿರೋದಿಸುತ್ತೇನೆ. ಇಸ್ಲಾಂ ತಂದ ಟಿಪ್ಪುವಾಗಲೀ, ಬುದ್ದ ದಮ್ಮ ತಂದ ಅಶೋಕ, ಕಾನಿಶ್ಕರಾಗಲೀ, ಜಯನ ದಮ್ಮ ತಂದ ಚಂದ್ರಗುಪ್ತ, ಗಂಗರಾಗಲೀ ವಯ್ದಿಕ ದಮ್ಮ ತಂದ ಮಿಕ್ಕವರಾಗಲೀ ನನಗೆ ಒಂದೇ. ಟಿಪ್ಪುಬಗ್ಗೆ ನಾನು ತಲೆ ಕೆಡಿಸಿಕೊಳಲ್ಲ. ಯಾಕೆಂದ್ರೆ ಅವ ಸತ್ತು ಹೋಗಿದ್ದಾನೆ. ನಮ್ಮೂರನ್ನೇ ಬ್ರಾಮಣರಿಗೆ ಡೀನೋಟಿಪಯ್ ಮಾಡಿದ ಮಯ್ಸೂರು ಮಹಾರಾಜನ ಬಗ್ಗೆಯೂ ನಾನು ತಲೆಕೆಡಿಸಿಕೊಳಲ್ಲ. ಯಾಕಂದ್ರೆ ಅವನೂ ಸತ್ತುಹೋಗಿದ್ದಾನೆ. ನನ್ನ ವಿರೋದವೆನಿದ್ದರೂ ಮಂದಿಯಾಳ್ಕೆಯಲ್ಲಿ ಸುಕ ಬಯಸದ, ಮಂದಿಯಾಳ್ಕೆಯ ಮೇಲ್ಮೆಯನ್ನು ತಿಳಿಯದ, ಜಾತ್ಯಾತೀತತೆಯನ್ನ ಕೆಟ್ಟದಾಗಿ ನೋಡುವ ತಿಳಿಗೇಡಿಗಳ ಮೇಲೆ.

      ಉತ್ತರ
  • ಪ್ರಜ್ನಾವಂತ
   ಮಾರ್ಚ್ 20 2013

   ನೀವು ಹೇಳಿದ್ದು ನಿಜ ಸಿದ್ದರಾಜು ಅವ್ರೆ.ಎಲ್ಲ ರಾಜ್ರು ಒಂದೇ ತರದವು ಅಂದುಕೊಳ್ಳೋಣ.ಆದ್ರೆ ಈ ಕೆಲವು ಸೋಗಲಾಡಿಗಳ್ಯಾಕೆ ಈ ಟಿಪ್ಪುವನ್ನು “ಪರಮಧರ್ಮ ಸಹಿಷ್ಣು” ಮಣ್ಣುಮಸಿ ಅಂತ ಸುಮ್ಮಸುಮ್ನೆ ಹೊಗಳ್ತವೆ… ಅದು ತಪ್ಪಲ್ವೇನು?ಅದೇನೋ “ಜಾತ್ಯಾತೀತ” ಅನ್ಕೊಂಡು ಜಾತಿ ಬುದ್ದಿ ತೋರ್ಸೊವ್ರಿಗೆ ಮಕ್ ಉಗ್ಗಿಬೇಕಲ್ವ್ರಾ?

   ಉತ್ತರ
 5. ರವಿಕುಮಾರ ಜಿ ಬಿ
  ಮಾರ್ಚ್ 15 2013

  ಬೋರೆಗೌಡರೆ,ಆನಂದ ಪ್ರಸಾದರೆ ಮತ್ತು ನಿಮ್ಮಂತಹ ಹಲವು ಬುದ್ದು ಜೀವಿಗಳೇ! ನೀವು ಹೇಳ ಹೊರಟಿರುವುದು ಏನನ್ನು/? ಟಿಪ್ಪು ಭಯಂಕರ ಒಳ್ಳೆ ಮನುಷ್ಯ ಎಂದೇ? ಅಥವಾ ನಮ್ಮ ಸಾಹಿತಿಗಳು (ಬುದ್ದಿಜೀವಿಗಳು) ಅತೀ ಉನ್ನತ ಜಾತ್ಯಾತೀತರೆಂದೆ? ಅಥವಾ ಇನ್ನೇನಾದರೂ ಗುಪ್ತ ಯೋಚನೆ ನಿಮ್ಮಲ್ಲಿ ಅಡಗಿದೆಯೇ? ಯಾಕೆಂದರೆ ನಿಮಗೆ ಅವನು “ಮುಸ್ಲೀಮ ಅನ್ನುವ ಕಾರಣಕ್ಕಾಗಿ ಟಿಪ್ಪು ಸಂತ/ಮಹಾತ್ಮ ಆಗುತ್ತಾನೆ ,ಹಾಗೆಯೇ ಭಯೋತ್ಪಾದಕ “ಅಪ್ಜಲ್ ಗುರು ” ಕ್ರಾಂತಿಕಾರಿ ಆಗುತ್ತಾನೆ! ಇಂತಹ ಹೀನ ಮನಸ್ತಿತಿಯ ನಿಮ್ಮಂತಹವರಿಗೆ ಬುದ್ದಿ ಬರಬೇಕಾದರೆ ,ಲಾದನ್ನು ಅಮೆರಿಕಾಕ್ಕೆ ವಿಮಾನ ಡಿಕ್ಕಿ ಹೊದೆಸಿದಂತೆ ,ನಿಮಗೆ(ಮತ್ತು ನಿಮ್ಮಂತಹ ಬುದ್ದು ಜೀವಿ / ಸಾಹಿತಿಗಲಿಗೆ ) ಎನಲ್ಲಾದರೋ ಡಿಕ್ಕಿ ಹೊಡೆಸಿದರೆ ಜ್ಞಾನೋದಯ ವಾಗಬಹುದೇನೋ?ಅದುವರೆಗೆ ಟಿಪ್ಪು ಆಗಲಿ”ಅಪ್ಜಲ್ ಗುರು” ಆಗಲಿ ಮಾಡಿದ ಅನಾಚಾರಗಳು “ಅವನು ಮಾಡಿದ “ಅವನ” ಕೆಲಸದಂತೆಯೇ ” ಕಾಣುತ್ತದೆ ! ನಿಮ್ಮ ಬುಡಕ್ಕೆ ಏಟು ಬಿದ್ದಾಗ ಮಾತ್ರ ನಿಮನ್ತಹವರಿಗೆ ಬುದ್ದಿ ಬಂದೀತೇನೋ? ಅದೂ ಸದ್ಯದಲ್ಲೇ ಬರಲಿದೆ ಅದಕ್ಕೆ ಅಮೇರಿಕಾ ವೆ ತಾಜಾ ಉದಾಹರಣೆ!

  ಉತ್ತರ
 6. Siddaraju Boregowda
  ಮಾರ್ಚ್ 16 2013

  ರವಿರೇ,
  ಎಳಸು ಎಳಸಾಗಿ ಗೊಣಗಿಕೊಳ್ಳುವುದ ನಿಲ್ಲಿಸಿ. ನಾನೇನ ಹೇಳ ಹೊರಟಿದ್ದೇನೆ ಎಂಬುದ ತಿಳಿಯಾಗಿ ಮೇಲೆ ಬರೆದಿದ್ದೇನೆ. ಓದಿಕೊಳ್ಳಿ ದಡ್ಡಜೀವಿಗಳೇ.

  ಉತ್ತರ
  • Kiran Raj
   ಮಾರ್ಚ್ 17 2013

   siddarajuravare, nivu tippuvannu samartisikolluvudakke munche itihasada putagalannu matthomme bidisi adyana madabekada avashyakathe ide endu nanage torutthade… Tippuvina bagge nimage iruva anukampa nijakkoo kannadigara dourbhagyave sari….

   ಉತ್ತರ
 7. Ananda Prasad
  ಮಾರ್ಚ್ 18 2013

  ಟಿಪ್ಪು ಸುಲ್ತಾನನ ಖಡ್ಗ (ಟಿಪ್ಪು ಜೀವನ ಮತ್ತು ಐತಿಹ್ಯ ಕುರಿತ ಚಾರಿತ್ರಿಕ ಕಾದಂಬರಿ) ಇಂಗ್ಲಿಷ್ ಮೂಲ ಭಗವಾನ್ ಎಸ್ ಗಿಧ್ವಾನಿ, ಕನ್ನಡ ಅನುವಾದ ಎಸ್ ಬಿ ರಂಗನಾಥ್. ಪ್ರಕಾಶಕರು ತರಳಬಾಳು ಪ್ರಕಾಶನ, ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ, ೫೭೭೫೪೧, ಚಿತ್ರದುರ್ಗ. ಭಾರತ, ಬ್ರಿಟಿಷ್, ಫ್ರೆಂಚ್, ಪರ್ಷಿಯನ್, ಡಚ್, ಟರ್ಕಿ, ಪೋರ್ಚುಗೀಸ್ ಮೂಲಗಳಿಂದ ಸಂಶೋಧನೆಯ ಮೂಲಕ ರೂಪಿಸಲ್ಪಟ್ಟ ಕೃತಿ. ಇದರ ಲೇಖಕ ಭಗವಾನ್ ದಾಸ್ ಗಿಧ್ವಾನಿ ಹಿಂದೂ ಮಹಾಸಭಾದ ಸದಸ್ಯರಾಗಿದ್ದವರು, ಇವರ ತಂದೆ ಶ್ರೀಶಾಂದಾಸ್ ಗಿಧ್ವಾನಿ ಸಿಂಧ್ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದವರು. ಈ ಕೃತಿ ಟಿಪ್ಪು ಸುಲ್ತಾನನ ನಿಜವಾದ ಜನಪರವಾದ, ಸುಧಾರಣಾ ಪರ, ಸಹಿಷ್ಣು ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಹಿಂದೂ ಮಹಾಸಭಾದ ಸದಸ್ಯರಾಗಿದ್ದವರೇ ಇದನ್ನು ಬರೆದ ಕಾರಣ ಟಿಪ್ಪುವಿನ ಬಗ್ಗೆ ಅಸಹನೆ ಹಾಗೂ ದ್ವೇಷ ವ್ಯಕ್ತಪಡಿಸುವವ ಹಿಂದೂಗಳು ಇದನ್ನು ಓದಿದರೆ ಒಳ್ಳೆಯದು.

  ಉತ್ತರ
  • ಮಾರ್ಚ್ 19 2013

   > ಟಿಪ್ಪು ಸುಲ್ತಾನನ ಖಡ್ಗ (ಟಿಪ್ಪು ಜೀವನ ಮತ್ತು ಐತಿಹ್ಯ ಕುರಿತ ಚಾರಿತ್ರಿಕ ಕಾದಂಬರಿ) ಇಂಗ್ಲಿಷ್ ಮೂಲ ಭಗವಾನ್ ಎಸ್
   > ಗಿಧ್ವಾನಿ. ಇದರ ಲೇಖಕ ಭಗವಾನ್ ದಾಸ್ ಗಿಧ್ವಾನಿ ಹಿಂದೂ ಮಹಾಸಭಾದ ಸದಸ್ಯರಾಗಿದ್ದವರು,
   > ಇವರ ತಂದೆ ಶ್ರೀಶಾಂದಾಸ್ ಗಿಧ್ವಾನಿ ಸಿಂಧ್ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದವರು.
   ನಿಮ್ಮ ಮಾತಿನ ಅರ್ಥ ನನಗಾಗುತ್ತಿಲ್ಲ. ಪುಸ್ತಕ ಬರೆದವರು ಹಿಂದು ಮಹಾಸಭಾದ ಅಧ್ಯಕ್ಷರೇ ಆಗಿರಲಿ, ಮುಸ್ಲಿಂ ಲೀಗಿನ ಸಂಸ್ಥಾಪಕರೇ ಅಗಿರಲಿ, ಅದರಿಂದ ಓದುಗನಿಗೆ ಏನಾಗಬೇಕು. ಪುಸ್ತಕ ಬರೆದವರು ದೊಡ್ಡ ವ್ಯಕ್ತಿಗಳಾದರೆ ಅಥವಾ ನಿಮ್ಮ ವಿಚಾರಕ್ಕೆ ಸಂಬಂಧಿಸಿದ ಸಂಘಟನೆಗೆ ಸಂಬಂಧಿಸಿದ್ದರೆ, ನಿಮ್ಮ ಊರಿನವರಾದರೆ, ನಿಮ್ಮ ಭಾಷೆಯವರಾದರೆ, ನಿಮಗೆ ಅವರ ಮಾತು ಹೆಚ್ಚು ಒಪ್ಪಿಗೆಯಾಗುತ್ತದೆಂದು ನಿಮ್ಮ ಮಾತಿನ ಅರ್ಥವೇ?

   ನನಗೆ ಪುಸ್ತಕ ಬರೆದವರಿಗಿಂತ, ಪುಸ್ತಕದ ವಿಷಯ, ಅದರ ಹಿಂದಿರುವ ಸತ್ಯಗಳಷ್ಟೇ ಮುಖ್ಯ.

   ಒಂದೇ ಪುಸ್ತಕ ಓದಿಕೊಂಡು, ಅದರಲ್ಲಿ ಹೇಳಿರುವುದಷ್ಟೇ ಸತ್ಯ, ಮಿಕ್ಕೆಲ್ಲವೂ ಮಿಥ್ಯ ಎಂಬ ಹಠವೇಕೆ?
   ಇದೀಗ ಪ್ರತಾಪ ಸಿಂಹ ಬರೆದಿರುವ ಪುಸ್ತಕ ಬರುತ್ತಿದೆಯಲ್ಲ, ಅದನ್ನೂ ಒಮ್ಮೆ ಓದಿ ನೋಡಿ. ಓದುವುದಕ್ಕೆ ಮೊದಲೇ ಪುಸ್ತಕದ ಕುರಿತಾಗಿ ಪೂರ್ವಾಗ್ರಹ ಇಟ್ಟುಕೊಳ್ಳಬೇಡಿ.

   ಟಿಪ್ಪು ಸುಲ್ತಾನನ ಕುರಿತಾಗಿ ಇನ್ನೂ ಅನೇಕ ಪುಸ್ತಕಗಳಿವೆ. ಈ ಕೆಳಗಿನ ಪುಸ್ತಕವನ್ನೊಮ್ಮೆ ಓದಿ ನೋಡಿ:
   ೧೮೯೩ರಲ್ಲಿ ಪ್ರಕಟವಾದ ಪುಸ್ತಕವಿದು:
   http://webcache.googleusercontent.com/search?q=cache:KEWkFtkQuxIJ:www.greatest-battles.webs.com/MysoreWars/HAIDAR%2520ALI%2520AND%2520TIPU%2520SULTAN.rtf+&cd=28&hl=en&ct=clnk&gl=in

   ಮತ್ತೊಂದು ಪುಸ್ತಕ:
   http://voiceofdharma.org/books/tipu/

   ಟಿಪ್ಪುವು ಬರೆದಿರುವ ಪತ್ರಗಳ ಕುರಿತಾಗಿ ಓದಿರುವಿರಾ? ಅದರ ಕಿರಿತಾಗಿ ಇಲ್ಲಿ ನೋಡಿ:
   ೧. http://books.google.ca/books?id=WiEoAAAAYAAJ&pg=RA1-PA266&lpg=RA1-PA266&dq=asiatic+annual+register+Tippoo&source=bl&ots=ce3bpheFL6&sig=82KjgEmmlMiBIQVZrf6xHJBM9QQ&hl=en&sa=X&ei=iLm3UJO7NpT7yAH58oCQCg&ved=0CC0Q6AEwAA#v=snippet&q=Tippoo&f=false
   ೨. http://keladi-aforgottenkingdom.blogspot.com/2012/11/tipus-fanaticism.html

   ಸತ್ಯವೆಂಬುದು ನಿರಂತರ ಶೋಧನೆ. ಅದನ್ನು “ಇದಮಿತ್ಥಂ” ಎಂದು ಹೇಳಲು ಸಾಧ್ಯವಾಗದು.
   ಇಂದು ಸತ್ಯವೆಂದು ತಿಳಿದಿರುವುದು ನಾಳೆ ಸುಳ್ಳೆಂದು ಸಾಭೀತಾಗಬಹುದು.
   ಸತ್ಯವು ಅನ್ವೇಷಣೆ. ತೆರೆದ ಮನಸ್ಸಿದ್ದರೆ ಹೊಸ ಹೊಸ ಸತ್ಯಗಳು ಹೊಳೆಯುತ್ತಾ ಹೋಗುತ್ತದೆ.

   ಉತ್ತರ
   • Ananda Prasad
    ಮಾರ್ಚ್ 21 2013

    ತರಳಬಾಳು ಮಠದ ತರಳಬಾಳು ಪ್ರಕಾಶನ ಪ್ರಕಟಿಸಿದ ‘ಟಿಪ್ಪು ಸುಲ್ತಾನನ ಖಡ್ಗ’ ಹೆಚ್ಚು ವಿಶ್ವಾಸಾರ್ಹವಾದುದು. ಸಾಮರಸ್ಯಕ್ಕೆ ಒತ್ತು ಕೊಡುವ ತರಳಬಾಳು ಮಠದ ಬಗ್ಗೆ ಜನರಿಗೆ ಹೆಚ್ಚಿನ ಗೌರವ ಹಾಗೂ ವಿಶ್ವಾಸ ಇದೆ.

    ಉತ್ತರ
    • ಮಾರ್ಚ್ 21 2013

     ಇತಿಹಾಸ ಗ್ರಂಥ ಯಾರು ಬರೆದಿದ್ದಾರೆ ಅಥವಾ ಯಾರು ಪ್ರಕಟಿಸಿದ್ದಾರೆ ಎಂಬ ಆಧಾರದ ಮೇಲೆ ವಿಶ್ವಾಸಾರ್ಹವಾಗುವುದಿಲ್ಲ.
     ಇತಿಹಾಸ ಗ್ರಂಥದ ಹಿಂದಿರುವ ಸಂಶೋಧನೆ, ಆಕರಗಳೇ ಅದಕ್ಕಿರುವ ಆಧಾರ ಸ್ಥಂಭ.
     ತರಳಬಾಳು ಮಠವೇ ಪ್ರಕಟಿಸಲಿ, ರಾಮಕೃಷ್ಣ ಆಶ್ರಮವೇ ಪ್ರಕಟಿಸಲಿ, ಗ್ರಂಥದ ‘ತೂಕ’ ವ್ಯತ್ಯಾಸವಾಗುವುದಿಲ್ಲ.

     ನೀವು ವಿಶ್ವಾಸಾರ್ಹವೆಂದು ತಿಳಿಸುತ್ತಿರುವ ಪುಸ್ತಕ, ಭಗವಾನ್ ಗಿದ್ವಾನಿಯವರ “Sword of Tipu Sultan”.
     ಅದು ಇತಿಹಾಸದ ಪುಸ್ತಕವಲ್ಲ. ಭಗವಾನ್ ಗಿದ್ವಾನಿಯವರೂ ಸಹ ಅದನ್ನು ಇತಿಹಾಸದ ಪುಸ್ತಕವೆಂದು ತಿಳಿದಿಲ್ಲ. ಅದು ಇತಿಹಾಸ ಆಧಾರಿತ ಕಾದಂಬರಿ.
     http://www.jimandaz.com/indian_news/16/bhagwan_s_gidwani_writes_on_%60the_sword_tipu_sultan.html

     ಉತ್ತರ
 8. ಮಾರ್ಚ್ 19 2013
 9. ಮಾರ್ಚ್ 19 2013

  Tammayya sir avre nanu hege heltini anta tappu tilibedi,sir e buddijeevigalu(bodda jeevigalu karavali kannada andre dadda jeevigalu) enandukondidare andre nave sarvashreshtaru anta,adake nivyake avrige tilisihelbeku sir,avrige arta yavaga agatte andre innu kelavu varshadali avra urali enadru ugragami chatuvatike nadedaga ella arta agatte niv sumne iri,avru devranna nambodilla adke avrige nam devru devastana haladre en tondre heli,yavde devru nange pooje madu anta yara hatranu kelodilla kelilla adu nave manushyare madida tappu,adu bittu devranna nindisidare adu sari alla,

  ಉತ್ತರ
 10. ಮಾರ್ಚ್ 21 2013

  ಟಿಪ್ಪುವಿಗೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಮತ್ತು ಒಪ್ಪಲೇಬೇಕಾದ ದಾಖಲೆಗಳೆಂದರೆ:
  ೧. ಸ್ವತಃ ಟಿಪ್ಪು ಉಪಯೋಗಿಸುತ್ತಿದ್ದ ಖಡ್ಗ. ಅದರ ಮೇಲೆ, ಆತನೇ ಕೆತ್ತಿಸಿಕೊಂಡಿರುವ ಅಕ್ಷರಗಳಿವೆ. ತನ್ನ ಉದ್ದೇಶವನ್ನು ಆತ ಖಡ್ಗದ ಮೇಲೆ ಕೆತ್ತಿಸಿಕೊಂಡಿರುವ ಅಕ್ಷರಗಳಲ್ಲಿ ತಿಳಿಸಿದ್ದಾನೆ. ಪರ್ಶಿಯನ್ ಭಾಷೆಯಲ್ಲಿರುವ ಆ ವಾಕ್ಯಗಳ ಇಂಗ್ಲಿಷ್ ತರ್ಜುಮೆಯನ್ನು ಇಲ್ಲಿ ಓದಿ: http://www.tigerandthistle.net/tiger112.htm

  ೨. ಸ್ವತಃ ಟಿಪ್ಪು ಬರೆದಿರುವ ಪತ್ರಗಳಿವೆ. ಆತ ಆಫ್ಘಾನಿಸ್ತಾನ, ಇರಾನ್, ಮುಂತಾದ ದೇಶಗಳ ರಾಜರಿಗೆ ಬರೆದ ಪತ್ರಗಳಿವೆ. ಆತ ಬರೆದ ಪತ್ರಗಳೆಲ್ಲವೂ ಪರ್ಶಿಯನ್ ಭಾಷೆಯಲ್ಲಿವೆ. ಅದರ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ: http://voiceofdharma.org/books/tipu/ch03.htm

  ೩. ಸ್ವತಃ ಟಿಪ್ಪು ಅಚ್ಚು ಹಾಕಿಸಿದ ನಾಣ್ಯಗಳಿವೆ. ಅವುಗಳೆಲ್ಲದರ ಮೇಲೂ ಪರ್ಶಿಯನ್ ಭಾಷೆಯ ಅಂಕಿತಗಳಿವೆ.

  ೪. ಕೇರಳ ಮತ್ತು ಮೈಸೂರು ರಾಜ್ಯಗಳು ಪ್ರಕಟಿಸಿರುವ ಗೆಜೆಟಿಯರ್^ಗಳಿವೆ. ಇವುಗಳು ಅಧಿಕೃತ ದಾಖಲೆಗಳು ಮತ್ತು ಇತಿಹಾಸ ಸಂಶೋಧನೆಗೆ ಆಕರಗಳು. ಅದರ ಕುರಿತಾಗಿ ಇಲ್ಲಿ ಓದಿ: http://voiceofdharma.org/books/tipu/appe03.htm

  ೫. ಟಿಪ್ಪುವಿನ ವಂಶಸ್ಥರೇ ಪ್ರಕಟಿಸಿರುವ ಪುಸ್ತಕಗಳಿವೆ.

  ಹೀಗೆ, ಮೇಲೆ ತಿಳಿಸಿದ ಕೆಲವೇ ಆಕರಗಳ ಮೇಲೇ ನಾವು ಸ್ಥೂಲವಾದ ವಿಶ್ಲೇಷಣೆ ನಡೆಸಬಹುದು.
  ೧. ಮೊದಲನೆಯದಾಗಿ, ಟಿಪ್ಪುವು ಮೈಸೂರು ರಾಜ್ಯದ ರಾಜ್ಯಭಾಷೆಯಾಗಿದ್ದ ಕನ್ನಡವನ್ನು ಪಕ್ಕಕ್ಕೆ ಸರಿಸಿ, ಪರ್ಶಿಯನ್ ಭಾಷೆಯನ್ನು ತನ್ನ ರಾಜ್ಯ ಭಾಷೆಯನ್ನಾಗಿಸಿಕಂಡಿದ್ದ. ಆತನನ್ನು ಕನ್ನಡ ಧ್ವೇಷಿಯೆಂದೇ ತಿಳಿಯಬೇಕಾಗುತ್ತದೆ.
  ೨. ಎರಡನೆಯದಾಗಿ, ಆತನೊಬ್ಬ ಮತಾಂಧನಾಗಿದ್ದ. ಇಸ್ಲಾಂ ಹರಡುವುದು, ಕಾಫಿರರನ್ನು ನಾಶ ಮಾಡುವುದು ತನ್ನ ಉದ್ದೇಶವೆಂದು ಆತ ತನ್ನ ಖಡ್ಗದ ಮೇಲೆ ಬರೆದುಕೊಂಡಿದ್ದ.

  ಇಷ್ಟೆಲ್ಲಾ “ವಿಶ್ವಾಸಾರ್ಹ” ಮತ್ತು ಅಧಿಕೃತ ದಾಖಲೆಗಳಿರುವಾಗ, “ಐತಿಹಾಸಿಕ ಕಾದಂಬರಿ”ಯನ್ನು ನಾವು ಅವಲಂಭಿಸುವ ಆವಶ್ಯಕತೆಯೇನು? ಇಷ್ಟೆಲ್ಲಾ ಐತಿಹಾಸಿಕ ಸತ್ಯಗಳಿರುವಾಗಲೂ, ಟಿಪ್ಪುವನ್ನು “ಜಾತ್ಯಾತೀತ” ಎಂದು ಬಿಂಬಿಸುವ ಆವಶ್ಯಕತೆಯೇನು? ಅದೇ ಅಲ್ಲವೇ “ಜಾತ್ಯಾತೀತ ವ್ಯಾಧಿ”!?

  ಉತ್ತರ
 11. ಮಾರ್ಚ್ 21 2013

  ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ> ಹಿಂದು ಅಲ್ಲ. ನನಗೆ ದೇವರಲ್ಲಿ ನಂಬಿಕೆ ಇಲ್ಲ.
  ಇಲ್ಲಿ ನಡೆದಿರುವ ಚರ್ಚೆಗೂ ದೇವರಿಗೂ ಏನು ಸಂಬಂಧವೆಂದು ತಿಳಿಯಲಿಲ್ಲ.

  ಇರಲಿ, ನೀವಂತು ವಿಜ್ಞಾನ ಯುಗದವರು, ಆಧುನಿಕರು. ಏನನ್ನೂ ಪರೀಕ್ಷಿಸದೆ, ನಿರೂಪಿಸದೆ ಒಪ್ಪುವುದಿಲ್ಲ.
  “ದೇವರು ಇಲ್ಲ” ಎಂದು ನೀವು ಪ್ರಾಯಶಃ ‘ಗುಟ್ಟಾಗಿ’ ನಿರೂಪಿಸಿಬಿಟ್ಟಿರಬೇಕು. ಹೀಗಾಗಿ ದೇವರನ್ನು ನಂಬುತ್ತಿಲ್ಲ.

  NASAಗೂ ನಿಮ್ಮಂತಹ “ಬುದ್ಧಿವಂತ ವಿಜ್ಞಾನಿ”ಗಳ ಆವಶ್ಯಕತೆಯಿದೆ ಎನ್ನಿಸುತ್ತಿದೆ.
  NASA ಮುಖ್ಯಸ್ಥರು, “ಭೂಮಿಯತ್ತ ಬಡಿಯಲು ಕ್ಷುದ್ರಗ್ರಹ ನುಗ್ಗಿ ಬಂದಲ್ಲಿ ದೇವರನ್ನು ಪ್ರಾರ್ಥಿಸಿ” ಎಂದು ಸಾರ್ವಜನಿಕವಾಗಿ ಹೇಳಿ ದೇವರಲ್ಲಿ ನಂಬಿಕೆಯಿಡಬೇಕೆಂದು ಸಾರಿಬಿಟ್ಟಿದ್ದಾರೆ. ವಿಜ್ಞಾನಿಗಳೇ ದೇವರನ್ನು ನಂಬಿಬಿಟ್ಟರೆ……!
  ಅವರ ಹೇಳಿಕೆಯ ಕುರಿತಾಗಿ ಇಲ್ಲಿ ಓದಿ: http://ssnarendrakumar.blogspot.com/2013/03/large-asteroid-heading-to-earth-pray.html

  ಅದೇ ರೀತಿ NASAದ ಅಂತರಿಕ್ಷದಲ್ಲಿ ಓಡಾಡಿದ ಕೀರ್ತಿಯುಳ್ಳ (Space Walker) ಮತ್ತೊಬ್ಬ ವಿಜ್ಞಾನಿ ಕೂಡಾ, “ದೇವರೇ ನನಗೆ ಈ ಅವಕಾಶ ಒದಗಿಸಿದ” ಎಂದುಬಿಟ್ಟಿದ್ದಾರೆ.
  ಅದರ ಬಗ್ಗೆ ಇಲ್ಲಿ ಓದಿ: http://www.beliefnet.com/Faiths/Galleries/NASA-spacewalker-God-has-a-plan-for-me.aspx

  ಹೀಗೆ ವಿಜ್ಞಾನಿಗಳೇ “ದೇವರನ್ನು ನಂಬಿಬಿಟ್ಟರೆ” ವಿಜ್ಞಾನದ ಪಾಡೇನು? ಬೋರೇಗವ್ಡರೇ ಎಲ್ಲರನ್ನೂ ಕಾಪಾಡಬೇಕು.
  ದಯವಿಟ್ಟು NASA ಮುಖ್ಯಸ್ಥರಾಗಿ “ವಿಜ್ಞಾನವನ್ನು ಕಾಪಾಡಿ”.

  ಉತ್ತರ
 12. ರವಿಕುಮಾರ ಜಿ ಬಿ
  ಮಾರ್ಚ್ 21 2013

  ವಿಜ್ಞಾನಿಗಳೇ “ದೇವರನ್ನು ನಂಬಿಬಿಟ್ಟರೆ” ವಿಜ್ಞಾನದ ಪಾಡೇನು? ಬೋರೇಗವ್ಡರೇ ಎಲ್ಲರನ್ನೂ ಕಾಪಾಡಬೇಕು.
  ದಯವಿಟ್ಟು NASA ಮುಖ್ಯಸ್ಥರಾಗಿ “ವಿಜ್ಞಾನವನ್ನು ಕಾಪಾಡಿ”.

  ಉತ್ತರ
 13. ಮಾರ್ಚ್ 21 2013

  ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ> ಅರಿಯಮೆಯ ಏರ್ಪಾಟುಗಳಾದ ಟಿಪ್ಪು ಯುನಿವೆರ್ಸಿಟಿ, ಸಂಸ್ಕ್ರುತ ಯುನಿವೆರ್ಸಿಟಿಗಳನ್ನೂ ವಿರೋದಿಸುತ್ತೇನೆ.

  ನೀವು ಮತಾಂಧ, ಕನ್ನಡ ವಿರೋಧಿ, ಕಡುಹಿಂಸಾಚಾರಿ ಟಿಪ್ಪುವನ್ನೂ ಮತ್ತು ಸಂಸ್ಕೃತವನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಕಂಡು ಕನಿಕರವೆನಿಸುತ್ತಿದೆ.

  ನಮ್ಮ ದೇಶದಲ್ಲಿ ಸಮಾನತೆಯನ್ನು ತರಲು ಸಾಧ್ಯವಿದ್ದರೆ ಅದು ಸಂಸ್ಕೃತದಿಂದ ಮಾತ್ರ ಸಾಧ್ಯ.

  ೧. ಬೇಡನಾಗಿದ್ದ ವಾಲ್ಮೀಕಿ ಬರೆದ ಆದಿಕಾವ್ಯ ಸಂಸ್ಕೃತದಲ್ಲಿದೆ – ಬೇಡನಾದವನನ್ನು ಮಹಾತ್ಮನ ಸ್ಥಾನಕ್ಕೇರಿಸಿದ ಕೀರ್ತಿ ಸಂಸ್ಕೃತದ್ದು.
  ೨. ಹಿಂದು ಧರ್ಮದ ಆಧಾರವಾಗಿರುವುದು ವೇದಗಳು, ಉಪನಿಷತ್ತುಗಳು, ಬ್ರಹ್ಮಸೂತ್ರಗಳು, ಭಗವದ್ಗೀತೆ – ಇವೆಲ್ಲವನ್ನೂ ಮತ್ತು ಅಷ್ಟಾದಶ ಪುರಾಣಗಳನ್ನೂ ರಚಿಸಿದವರು ಬೆಸ್ತರಾಗಿ ಜನಿಸಿದ ವೇದವ್ಯಾಸರು. ಸಮಸ್ತ ಹಿಂದುಗಳೂ ಅವರನ್ನು ಆದಿಗುರುವೆಂದು ಪೂಜಿಸುತ್ತಾರೆ.
  ೩. ರಾಮಾಯಣದ ನಾಯಕ ಶ್ರೀರಾಮ – ಆತನೊಬ್ಬ ಕ್ಷತ್ರಿಯ. ಅವನೊಡನೆಯೇ ದೇವರ ಸ್ಥಾನಕ್ಕೇರಿದ ಹನುಮಂತ ಒಬ್ಬ ವಾನರ. ಮಹಾಭಾರತದಲ್ಲಿ ದೇವರ ಸ್ಥಾನಕ್ಕೇರಿದವನು ಗೊಲ್ಲನಾದ ಶ್ರೀಕೃಷ್ಣ.
  ೪. ಆಧುನಿಕ ಯುಗದಲ್ಲೂ ಹುಟ್ಟಿನಿಂದ ಕುರುಬನಾದ ಕಾಳಿದಾಸನು ಮಹಾಕವಿಯೆನಿಸಿಕೊಂಡದ್ದು ಸಂಸ್ಕೃತದ ಮಹಾಕಾವ್ಯಗಳನ್ನು ರಚಿಸಿದ್ದರಿಂದಲೇ.

  “ಜಾತಿಗಿಂತ ಗುಣವೇ ಮುಖ್ಯ” ಎಂದು ಜಗತ್ತಿಗೆಲ್ಲಾ ಮೊತ್ತಮೊದಲಿಗೆ ತಿಳಿಸಿಕೊಟ್ಟಿರುವ ಭಾಷೆಯೇ ಸಂಸ್ಕೃತ.
  ಬ್ರಾಹ್ಮಣನಾದ ರಾವಣನು ರಾಮಾಯಣದಲ್ಲಿ ರಾಕ್ಷಸ. ಬ್ರಾಹ್ಮಣನಾದರೂ ದ್ರೋಣಾಚಾರ್ಯರು ಮಹಾಭಾರತದಲ್ಲಿ ಅಧರ್ಮೀಯರು! ಅದೇ ಬ್ರಾಹ್ಮಣನಾದ ರಾವಣನೊಡನೆ ಹೋರಾಡಿದ ಜಟಾಯು (ಒಂದು ಹದ್ದು) ರಾಮಾಯಣದ ಪ್ರಕಾರ ಪೂಜ್ಯ.

  “ಅಯೋಧ್ಯೆ” ಎಂಬ ಹೆಸರು ಸಂಸ್ಕೃತದ್ದು. ಅದರ ಅರ್ಥವೇನೆಂದು ತಿಳಿದಿದೆಯೇ? ಯುದ್ಧವೇ ಇಲ್ಲದು ಎಂದು ಅದರ ಅರ್ಥ.
  ಯುದ್ಧವೇ ಇಲ್ಲದಂತಾಗಬೇಕು, ಹಿಂಸೆಯೇ ಇರಕೂಡದು, ಎಂಬ ಮಹಾನ್ ಉದ್ದೇಶವಿಟ್ಟುಕೊಂಡು ಆ ಹೆಸರನ್ನಿಟ್ಟಿರಬೇಕಲ್ಲವೇ?

  ಹೀಗೆ, ಸಂಸ್ಕೃತವು ಸಮಾನತೆ, ಅಹಿಂಸೆ, ಗುಣಪ್ರಧಾನತೆ, ಉದಾರತೆ, ಜ್ಞಾನ, ಸತ್ಯ, ಮುಂತಾದ ಸುಗುಣಗಳನ್ನೆಲ್ಲಾ ಪ್ರೇರೇಪಿಸುವ ಭಾಷೆ. ಅದೊಂದು ಅತ್ಯಂತ ಪರಿಪೂರ್ಣವಾದ ವೈಜ್ಞಾನಿಕ ಭಾಷೆ. ಅತ್ಯಾಧುನಿಕ ಕಂಪ್ಯೂಟರ್ ವಿಜ್ಞಾನಿಗಳೂ ಅಚ್ಚರಿಪಡುತ್ತಿರುವಂತಹ ವ್ಯಾಕರಣವನ್ನು ಹೊಂದಿರುವ ಭಾಷೆ – ಮನುಷ್ಯರಾಡುವ ಭಾಷೆಗಳ ಪೈಕಿ ಕಂಪ್ಯೂಟರ್^ಗೆ ಹೊಂದಲು ಸಾಧ್ಯವಾಗುವ ಏಕೈಕ ಭಾಷೆ ಸಂಸ್ಕೃತ. ಇಂದಿನ ಅನೇಕ ವಿಜ್ಞಾನಿಗಳ ಪ್ರಕಾರ, ಸಂಸ್ಕೃತವು ಕಂಪ್ಯೂಟರ್^ಗಳಿಗಾಗಿಯೇ ಬರೆದ ಭಾಷೆಯೆನಿಸಿಕೊಂಡಿದೆ. ಭಾರತೀಯ ಸಂಸ್ಕೃತಿಯ ಆಧಾರ ಸಂಸ್ಕೃತ.

  ಜಗತ್ತಿನ ಅತ್ಯಂತ ಪುರಾತನ ಸಾಹಿತ್ಯಗಳೆನಿಸಿಕೊಂಡಿರುವ ರಾಮಾಯಣ-ಮಹಾಭಾರತಗಳು ಸಂಸ್ಕೃತದಲ್ಲಿ ರಚನೆಯಾಗಿವೆ. ಆ ಗ್ರಂಥಗಳಿಗೆ ಸರಿಸಾಟಿಯಾಗುವ ಗ್ರಂಥಗಳು ಜಗತ್ತಿನ ಯಾವುದೇ ದೇಶದಲ್ಲಾಗಲೀ, ಭಾಷೆಯಲ್ಲಾಗಲೀ ಇಲ್ಲಿಯವರೆಗೂ ರಚನೆಯಾಗಿಲ್ಲ. ಅದು ಗ್ರಂಥದ ಗಾತ್ರದ ವಿಷಯದಲ್ಲಿರಬಹುದು, ಅವುಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ವಿಷಯಗಳ ಆಳದ ವಿಷಯದಲ್ಲಿರಬಹುದು – ಆ ಗ್ರಂಥಗಳಿಗೆ ಅವುಗಳೇ ಸಾಟಿ. ಇದನ್ನು ಜಗತ್ತಿನ ವಿವಿಧ ದೇಶಗಳ ಇತಿಹಾಸಕಾರರು, ಸಾಹಿತ್ಯಕಾರರು ಹೇಳಿಬಿಟ್ಟಿದ್ದಾರೆ.

  ಇಂತಹ ಸಂಸ್ಕೃತದ ಕುರಿತಾಗಿ ನೀವು ಇಷ್ಟು ಹಗುರವಾಗಿ ಮಾತನಾಡುವುದರಿಂದ ಸಂಸ್ಕೃತಕ್ಕೇನೂ ತೊಂದರೆಯಾಗುವುದಿಲ್ಲ; ಅದರಿಂದ ನಿಮ್ಮ “ವಿಶೇಷ ಜ್ಞಾನ”ದ ಕುರಿತಾಗಿ ಎಲ್ಲರಿಗೂ ತಿಳಿದುಬಿಡುತ್ತದಲ್ಲಾ ಎಂದು ನನಗೆ ಕನಿಕರವೆನಿಸುತ್ತಿದೆ!

  ಉತ್ತರ
 14. ಕುಮಾರರೇ, ಇಲ್ಲಿ ನಡೆದಿರುವ ಚರ್ಚೆಗೂ ದೇವರಿಗೂ ನಂಟಿಲ್ಲವೇ? ಅದಪ್ಪ ಮಾತು. ಇನ್ನು ನಿರೂಪಣೆ ಬಗ್ಗೆ: ಇರುವುದನ್ನ ನಿರೂಪಿಸಬೇಕು. ಇಲ್ಲದಿರುವುದನ್ನ ಇಲ್ಲ ಅನ್ನುವುದ ನಿರೂಪಿಸಬೇಕಿಲ್ಲ. ದೇವರಿದೆ (ಅದು ಗಂಡಸಾಗಿದ್ದರೆ ದೇವರಿದ್ದಾನೆ) ಎಂದು ನಿರೂಪಿಸುವ ಕರ್ಮ ನಂಬುವವರದ್ದು. ಎತ್ತುಗೆಗೆ, ಗುರು ಗ್ರಹದ ಸುತ್ತ ಪಿಳ್ಳಂಗೋವಿಯೊಂದು ಸುತ್ತುತ್ತಿದೆ ಎಂದು ಯಾವನೋ ಒಬ್ಬ ನಂಬುತ್ತಾನೆ ಅಂದಿಟ್ಟುಕೊಳ್ಳಿ. ಆಗವನ ನಂಬಿಕೆಗೆ ಆದಾರ ಹೋದಗಿಸುವ ಹೊಣೆ ಅವನದೇ! ಪಿಳ್ಳಂಗೋವಿಯನ್ನ ನಂಬದ ನನ್ನದಲ್ಲ! ಪಿಳ್ಳಂಗೋವಿ ಗುರು ಗ್ರಹವನ್ನ ಸುತ್ತುತ್ತಿಲ್ಲ ಎಂದು ನಾನು ನಿರೂಪಿಸುತ್ತಾ ಕೂರಬೇಕಿಲ್ಲ!!
  ನಂಬುವ ನಾಸಾ ಅರಿಮೆಗಾರರ ಬಗ್ಗೆ: ಅರಿಮೆಗಾರರು ನಂಬಿದ ಮಾತ್ರಕ್ಕೆ ಅದು ದಿಟವಾಗುವುದಿಲ್ಲ. ಅವರು ಆದಾರ ಕೊಡಬೇಕು! ಯಾರೂ ಕೊಟ್ಟಿಲ್ಲ. ಮೇಲೆ ಕುಮಾರ್ ಅನ್ನೋರು ಇತಿಯಾಸದ ಬಗ್ಗೆ ಒಂದು ಮಾತು ಹೇಳಿದ್ದಾರೆ. ಇಲ್ಲಿ ನೋಡಿ: >”ಇತಿಹಾಸ ಗ್ರಂಥ ಯಾರು ಬರೆದಿದ್ದಾರೆ ಅಥವಾ ಯಾರು ಪ್ರಕಟಿಸಿದ್ದಾರೆ ಎಂಬ ಆಧಾರದ ಮೇಲೆ ವಿಶ್ವಾಸಾರ್ಹವಾಗುವುದಿಲ್ಲ.
  ಇತಿಹಾಸ ಗ್ರಂಥದ ಹಿಂದಿರುವ ಸಂಶೋಧನೆ, ಆಕರಗಳೇ ಅದಕ್ಕಿರುವ ಆಧಾರ ಸ್ಥಂಭ”.< ಈ ಮಾತು ಅರಿಮೆಗೂ ಹೊಂದುತ್ತದೆ. ದೇವರ, ದೇವರು ಗಂಡಸಾಗಿದ್ದರೆ ಅವನ ಲಿಂಗದ ಆದಾರಕ್ಕೂ ಹೊಂದುತ್ತದೆ!! ಬಾರತದಲ್ಲಿ ಪುರಾಣ-ಇತಿಯಾಸಗಳನ್ನ ಗೊಂದಲ ಮಾಡಿಕೊಂಡು ಕಲಿತು ಕಿವಿಯಲ್ಲಿ ಹೂಮುಡಿದು ಬೆಳೆದ ಹಲವರೇ ಕಾಸಿಗಾಗಿ ಅರಿಮೆಗಾರರಾಗುತ್ತಾರೆ. ಹಾಗಾಗಿ, ಬಾರತದ ಅರಿಮೆಗಾರರಲ್ಲಂತೂ ನಂಬುವವರೇ ಹೆಚ್ಚು! ಅಂತಾ ದ್ರೋಹಿಗಳಿಂದ ಅರಿಮೆಗೆ ಹಿನ್ನಡೆಯಾಗುವುದು ದಿಟ. ಆದರೆ ದೇವರಿಗೆ ಯಾವ ಆದಾರವೂ ಇಲ್ಲ!!
  ಅಂದಹಾಗೆ, ಬೂಮಿ ಸುತ್ತಲ ಅವಕಾಶ ಒದಗಿಸಿದ ದೇವರಿಗೆ ೧೬ನೆ ಶತಮಾನದವರೆಗೂ ಬೂಮಿ ಗುಂಡಗಿದೆ ಅಂತಲೇ ಗೊತ್ತಿರಲಿಲ್ಲ! ಗುಂಡಗಿದೆ ಅಂದ ಅರಿಮೆಗಾರರನ್ನ ಆ ದೇವರು ಪೂಜಾರಿಗಳ ಮೂಲಕ ಗೋಳುಯ್ದುಕೊಂಡಿದ್ದ!!
  ಮತ್ತೊಂದು, ಬಾನ್ನಡಿಗ ಅರಿಮೆಗಾರನಲ್ಲ! ಮಾನವನಿಗಿಂತ ಮೊದಲು ಬಾನಿನಲ್ಲಿ ನಡೆದು ಬಂದ ಕೋತಿಯೂ, ನಾಯಿಯೂ ಅರಿಮೆಗಾರರಲ್ಲ!! ಬಾನ್ನಡಿಗನಾಗಿದ್ದ ನಾಸಾದ ತಲೆಯಾಳೂ ಅರಿಮೆಗಾರನಲ್ಲ. ಅವನೇಳುತ್ತಿರುವುದರ ತಿರುಳು ಪ್ರಾರ್ತಿಸಿದರೆ ಕ್ಶುದ್ರಗ್ರಹ ಹಾದಿ ಬದಲಿಸುತ್ತದೆ ಅಂತಲ್ಲ! ನಮಗೆ ಹೊಡೆಯುವುದಕ್ಕೆ ಮುಂಚೆಯೇ ಅವುಗಳನ್ನ ಕಂಡುಹಿಡಿಯುವ ಮತ್ತು ಅವುಗಳ ದಿಕ್ಕು ತಪ್ಪಿಸುವ ಯೋಜನೆಗೆ ಹಣ ಬೇಕು ಅಂತ! ಅರಿಮೆಯನ್ನ ಯಾರೂ ಕಾಪಾಡಬೇಕಿಲ್ಲ. ಅರಿಮೆ ನಮ್ಮನ್ನು ಕಾಪಾಡುತ್ತದೆ. ನಾವು ದೇವರನ್ನು ಕಾಪಾಡುತ್ತೇವೆ. ಯಾಕೆಂದರೆ ದೇವರು ಕಾಯ್ಲಾಗದವ. ಯಾಕೆಂದರೆ ದೇವರಿಲ್ಲ.

  ಉತ್ತರ
  • ಮಾರ್ಚ್ 21 2013

   NASA ವಿಜ್ಞಾನಿಗಳು “ದೇವರೇ ಗತಿ” ಎಂದದ್ದೂ, ನೀವು ದೇವರ ಕುರಿತು ಆಡಿದ್ದೂ ಒಂದೇ ದಿನ ಬಂದದ್ದು ಕಾಕತಾಳೀಯ.
   ಗಂಭೀರವಾಗಿ ನಡೆದಿದ್ದ ಚರ್ಚೆಯ ನಡುವೆ ಹಾಸ್ಯಕ್ಕಾಗಿ ನಾನು ಆ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದೆನಷ್ಟೇ.
   ವಿಜ್ಞಾನಿಗಳು ನಂಬಿಬಿಟ್ಟಿದ್ದರಿಂದ ಎಲ್ಲರೂ ದೇವರನ್ನು ನಂಬಬೇಕು, ಎಂದು ತಿಳಿಸುವುದು ನನ್ನ ಉದ್ದೇಶವಲ್ಲ.
   ನನ್ನ ಬರಹ ಆ ರೀತಿಯ ಭಾವನೆಗಳನ್ನು ತರಿಸಿದ್ದರೆ ದಯವಿಟ್ಟು ಕ್ಷಮೆ ಇರಲಿ.
   ಕಣ್ಮುಚ್ಚಿ ನಂಬುವುದು ನಮ್ಮ ದೇಶದ ಸಂಸ್ಕೃತಿಯೇ ಅಲ್ಲ. ಪ್ರತಿಯೊಂದನ್ನೂ ಪ್ರಶ್ನಿಸು ಎಂದೇ ವೇದಗಳಾಗಲೀ, ಉಪನಿಷತ್ತುಗಳಾಗಲಿ ಆದೇಶ ನೀಡಿವೆ. ಒಂದು ಉಪನಿಷತ್ತಿನ ಹೆಸರೇ “ಪ್ರಶ್ನೋಪನಿಷತ್” – ಪ್ರಶ್ನಿಸುವುದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಸ್ವಾಗತವಿದೆ, ಸ್ವಾತಂತ್ರ್ಯವಿದೆ. ಆದರೆ, ಪ್ರಶ್ನಿಸುವುವನೂ ಅಧ್ಯಯನ ನಡೆಸಿರಬೇಕು, ಕುತ್ಸಿತ ಮನಸ್ಸಿನಿಂದಾಗಲೀ, ಕಾಲೆಳೆಯುವ ಉದ್ದೇಶದಿಂದಾಗಲೀ ಪ್ರಶ್ನೆ ಕೇಳಬಾರದು – ಅದರಿಂದ ಎಲ್ಲರ ಸಮಯವೂ ವ್ಯರ್ಥ.

   ಇನ್ನು, ಈ ಲೇಖನದ ಕುರಿತಾಗಿ ನಡೆದಿರುವ ಚರ್ಚೆಗೂ ದೇವರಿಗೂ ಏನು ಸಂಬಂಧವೆಂದು ನನಗೆ ಇಲ್ಲಿಯವರೆಗೂ ತಿಳಿದಿಲ್ಲ. ದಯಮಾಡಿ ತಿಳಿಸಿದರೆ ತಿಳಿದುಕೊಳ್ಳುವೆ.

   ಇನ್ನು ನೀವು ಉಪಯೋಗಿಸುತ್ತಿರುವ “ಅರಿಮೆಗಾರ” ಎಂಬ ಪದದ ಅರ್ಥ ನನಗಾಗುತ್ತಿಲ್ಲ. ದಯವಿಟ್ಟು ತಿಳಿಸಿಕೊಟ್ಟರೆ ಸಹಾಯವಾದೀತು.

   > ಅಂದಹಾಗೆ, ಬೂಮಿ ಸುತ್ತಲ ಅವಕಾಶ ಒದಗಿಸಿದ ದೇವರಿಗೆ ೧೬ನೆ ಶತಮಾನದವರೆಗೂ
   > ಬೂಮಿ ಗುಂಡಗಿದೆ ಅಂತಲೇ ಗೊತ್ತಿರಲಿಲ್ಲ
   ಭೂಗೋಳ ಮತ್ತು ಖಗೋಳ ಎಂಬ ಪದಗಳು ನಮ್ಮ ದೇಶದಲ್ಲಿ ಅನೇಕ ಸಹಸ್ರ ವರ್ಷಗಳಿಂದ ಬಳಕೆಯಲ್ಲಿವೆ.
   ಗೋಳ ಎಂದರೆ ಗುಂಡಗಿರುವ ವಸ್ತು. ಭೂಮಿ ಗುಂಡಗಿದೆ ಎಂದು ತಿಳಿಯದವರು ಭೂಗೋಳ ಎಂಬ ಹೆಸರನ್ನಿಡುತ್ತಾರೆ ಎಂದು ನಂಬುವುದು ಕಷ್ಟ.

   ಕೇವಲ ಭೂಮಿ ಗುಂಡಾಗಿರುವುದಷ್ಟೇ ಅಲ್ಲ, ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ, ಭೂಮಿಗೆ ಗುರುತ್ವಾಕರ್ಷಣ ಶಕ್ತಿಯಿದೆ, ಭೂಮಿಯು ತನ್ನ ದೃವಪ್ರದೇಶದಲ್ಲಿ ಚಪ್ಪಟೆಯಾಗಿದೆ, ಎಂಬ ವಿಷಯಗಳೂ ಋಗ್ವೇದದಲ್ಲಿ ಪ್ರಸ್ತಾಪವಾಗಿವೆ.
   ಇತ್ತೀಚಿನ ಸಂಶೋಧನೆಯಾದ ಮಂಗಳ ಗ್ರಹಕ್ಕೂ ಭೂಮಿಗೂ ಅತ್ಯಂತ ಹತ್ತಿರದ ಸಂಬಂಧವಿದೆ (ಪ್ರಾಯಶಃ ಒಂದೇ ಗ್ರಹದಿಂದ ಪ್ರತ್ಯೇಕವಾದ ಭಾಗಗಳಿರಬೇಕು) ಎಂಬ ವಿಷಯವನ್ನೇ ತಿಳಿಸುವ “ಮಂಗಳವಾರಂ ಭೂಮಿ ಕುಮಾರಂ”, “ಭೂಮಿಪುತ್ರ” ಎಂದು ಅನೇಕ ಕಡೆಗಳಲ್ಲಿ ಪ್ರಸ್ತಾಪವಾಗಿವೆ.

   ಋಗ್ವೇದದ ಯಾವ ಶ್ಲೋಕಗಳಲ್ಲಿ ಭೂಮಿಯು ಗುಂಡಾಗಿದೆ, ಗುರುತ್ವಾಕರ್ಷಣ ಬಲ ಹೊಂದಿದೆ, ಇತ್ಯಾದಿಗಳ ಮಾಹಿತಿ ಬೇಕಿದ್ದಲ್ಲಿ, ಈ ಲೇಖನವನ್ನೊಮ್ಮೆ ಓದಿಕೊಳ್ಳಿ: http://agniveer.com/science-in-vedas/

   ವೇದದಲ್ಲಿರುವ ವಿಜ್ಞಾನದ ಸ್ಥೂಲ ಪರಿಚಯ ಇಲ್ಲಿದೆ: http://www.sabhlokcity.com/metaphysics/chapter4.html

   ವಿಮಾನಗಳ ಕುರಿತಾಗಿ ನಮ್ಮ ಪ್ರಾಚೀನ ಗ್ರಂಥಗಳು ಏನು ಹೇಳಿವೆ (ವಿಮಾನ ರಚನೆಯ ಪೂರ್ಣ ವಿವರಣೆ, ರೇಖಾಚಿತ್ರಗಳು, ಅವುಗಳ ರಚನೆಗೆ ಬೇಕಾದ ಲೋಹ, ಇತ್ಯಾದಿಗಳು – ಹೀಗೆ ಎಲ್ಲ ವಿವರಣೆಗಳನ್ನೂ ಆ ಗ್ರಂಥಗಳಲ್ಲಿ ನೀಡಲಾಗಿವೆ) ಎಂದು ತಿಳಿಯಲು:
   ೧. http://www.bibliotecapleyades.net/vimanas/vs/default.htm
   ೨. http://cgpl.iisc.ernet.in/site/Portals/0/Publications/ReferedJournal/ACriticalStudyOfTheWorkVaimanikaShastra.pdf
   ೩. http://www.abovetopsecret.com/forum/thread672580/pg1

   ಉತ್ತರ
 15. Ramakant
  ಮೇ 20 2013

  ಸಿದ್ದರಾಜು ಅವರೇ, ನನ್ನಂಥ ಪಾಮರರನ್ನು ದಯವಿಟ್ಟು ಕ್ಷಮಿಸಿ, ತಮ್ಮ ವಾಗ್ವಾದದ ಭರದಲ್ಲಿ, ಅಂತರ್ಯದಲ್ಲಿ ತಾವು ಏನನ್ನು ಹೇಳಲು ಯತ್ನಿಸುತ್ತಿರುವಿರಿ ಎಂಬುದೇ ತಿಳಿಯುತ್ತಿಲ್ಲ. ತಾವೇ ಇಂದು ಲಕ್ಷ್ಮಣರೇಖೆಯನ್ನು ಎಳೆಯುವದಾದಲ್ಲಿ (ತಮ್ಮ ಅಭಿಪ್ರಾಯದಲ್ಲಿ) ಕರ್ನಾಟಕ ಹಾಗೂ ಭರತಖಂಡದ ಚರಿತ್ರೆಯಲ್ಲಿ ನಡೆದಿರಬಹುದಾದ ಯಾವುದೆಲ್ಲ ಸ್ತುತ್ಯಾರ್ಹ, ಯಾವುದೆಲ್ಲ ಅನುಕರಣೀಯ, ಯಾವುದೆಲ್ಲ ಅಗತ್ಯವಿತ್ತು, ಯಾವುದೆಲ್ಲ ಕ್ಷಮ್ಯ, ಯಾವುದೆಲ್ಲ ಬರ್ಬರ, ಯಾವುದೆಲ್ಲ ಅಕ್ಷಮ್ಯ?

  ಈ ಮೇಲಿನ ಲಕ್ಷ್ಮಣರೇಖೆಗಳಿಗೆ ಪೂರಕವಾಗಿ ಇಂದು ನಾವೆಲ್ಲ ಏನೆಲ್ಲ ಮಾಡುವದು ಸ್ತುತ್ಯಾರ್ಹ, ಅನುಕರಣೀಯ, ಅಗತ್ಯ, ಕ್ಷಮ್ಯ, ಬರ್ಬರ, ಅಕ್ಷಮ್ಯ, ಅನಗತ್ಯ?

  ತುಸು ತಿಳಿಯಾಗಿ ವಿಂಗಡಿಸಿ ಹೇಳಬಯಸುತ್ತೀರ?

  ಇದು ಪ್ರಾಮಾಣಿಕ ವಿಚಾರವಂತರ ವೇದಿಕೆ ಎಂಬುದು ತಮ್ಮ ಗಮನದಲ್ಲಿದೆ ಎಂದುಕೊಂಡಿದ್ದೇನೆ.

  ಆ ಪ್ರಾಮಾಣಿಕತೆ ತಮ್ಮಲ್ಲೂ ಇರಲಿ, ಇಲ್ಲದಿದ್ದರೆ ಬರಲಿ.

  – ರಮಾಕಾಂತ ಹೆಗಡೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments