ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 18, 2013

4

ನರೇಂದ್ರ ಮೋದಿ v /s ರಾಹುಲ್ ಗಾಂಧಿ …ಅನುಭವಿ v /s ಅನನುಭವಿ

‍ನಿಲುಮೆ ಮೂಲಕ

– ಅಜಿತ್ ಶೆಟ್ಟಿ,ಉಡುಪಿ

NaGa೨೦೧೪ ರ ಲೋಕಸಭೆ ಮಹಾಸಮರ ಇನ್ನೇನು ಬಂದೇ ಬಿಡುತ್ತೆ.ಎರಡು ಪ್ರಮುಖ ಒಕ್ಕೂಟಗಳಾದ ಎನ್.ಡಿ.ಎ ಹಾಗೂ ಯು.ಪಿ.ಎ ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಅಧಿಕೃತವಾಗಿ ಘೋಷಿಸದಿದ್ದರೂ, ತಮ್ಮ ಪ್ರಧಾನಿ ಅಭ್ಯರ್ಥಿಗೆ ಸಕಲ ವೇಷ-ಭೂಷಣ ತೊಡಿಸಿ ರಂಗಕ್ಕೆ ಇಳಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿವೆ. ನೆಹರು ಕುಟುಂಬಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ ತಿಂಗಳ ಹಿಂದೆ ಜೈಪುರದಲ್ಲಿ ನಡೆದ ಚಿಂತನಾ ಶಿಬಿರ ದಲ್ಲಿ ಆ ವಂಶದ ಕುಡಿ , ನಲವತ್ತು ಮೀರಿದ ಯುವಕ ರಾಹುಲ್ ಗಾಂಧಿ ಯವರಿಗೆ ಪಕ್ಷದಲ್ಲಿ “ನಂಬರ್ ಟೂ” ಸ್ಥಾನ ಕೊಟ್ಟು ಅವರನ್ನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. ವೀರಪ್ಪ ಮೊಯಿಲಿ, ದಿಗ್ವಿಜಯ್ ಸಿಂಗ್ , ಜಿತೀನ್ ಪ್ರಸಾದ್ ರಂತವರು ರಾಹುಲ್ ಗುಣಗಾನದಲ್ಲೇ ತೊಡಗಿ ಬಹಿರಂಗವಾಗೇ ಅವರನ್ನು ಪ್ರಧಾನಿ ಅಭ್ಯರ್ಥಿಎಂದಿದ್ದಾರೆ.ಎನ್.ಡಿ.ಎಯ ಪ್ರಮುಖ ಪಕ್ಷ ಬಿಜೆಪಿ ಇತ್ತೀಚಿಗೆ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಗುಜರಾತ್ ನ ಮೂರುಬಾರಿಯ ಜನಪ್ರಿಯ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ವಿಶೇಷ ಆದ್ಯತೆ ನೀಡಿದೆ . ಪಕ್ಷದಲ್ಲಿ ಏನೇ ಗೊಂದಲ ಇದ್ದರೂ, ಕಾರ್ಯಕಾರಿ  ಸಭೆಯಲ್ಲಿ ಮೋದಿಗೆ ಕೊಟ್ಟ ಪ್ರಾಮುಖ್ಯತೆ ಸೂಚ್ಯವಾಗಿ ಮೋದಿನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎನ್ನುವಂತಿತ್ತು.ಹಾಗೇ ಪಕ್ಷದ ರಾಷ್ಟೀಯ ಅಧ್ಯಕ್ಷ ರಾಜನಾಥ್ ಸಿಂಗ್ ರ ಹೇಳಿಕೆಗಳು ಕೂಡ ಇದಕ್ಕೆ ಪುಷ್ಟಿ ನೀಡುತಿತ್ತು .

ಒಂದು ವೇಳೆ ಈವರಿರ್ವರು ಪ್ರಧಾನಿ ಅಭ್ಯರ್ಥಿಗಳಾದರೆ, ಮೋದಿ ಮುಂದೆ ರಾಹುಲ್ ಎನ್ನುವುದು ಅನುಭವಿ ಭೀಷ್ಮನ ಮುಂದೆ ಅನನುಭವಿ ಬಡಾಯಿ ಉತ್ತರ ಕುಮಾರನನ್ನು ತಂದು ನಿಲ್ಲಿಸಿದಂತೆ.ಇದು ನಿಸ್ಸಂಶಯವಾಗಿ ಅನುಭವಿ v /s ಅನನುಭವಿ ನಡುವಿನ ಸಮರ.ಹೌದು ಮೇಷ್ಟ್ರ ಮಗ ಮೇಷ್ಟ್ರು ಅಗಬಾರದು, ಡಾಕ್ಟರ್ ಮಗ ಡಾಕ್ಟರ್ ಆಗಬಾರದು ಅಂತೇನು ಇಲ್ಲಾ ಹಾಗೇ ತಲತಲಾಂತರದಿಂದ ರಾಜಕೀಯ ವಂಶದಿಂದ ಬಂದ ರಾಜಕಾರಣಿ ಮಗ ಪ್ರದಾನಿ ಆಗಬಾರದಂತೆನೂ ಇಲ್ಲ.ಆದರೆ, ಅವನು ತನ್ನ ಸ್ವಂತ ಅರ್ಹತೆಯಿಂದ ಆ ಪದವಿ ಪಡೆಯಬೇಕೇ ವಿನಹ , ತನ್ನ ತಂದೆ ಅನುಭವಿಸಿದ ಹುದ್ದೆ, ತಂದೆ ಹೆಸರು , ಕುಟುಂಬದ ಹೆಸರು ಇವನ ಅರ್ಹತೆ ಆಗಬಾರದು. ರಾಹುಲ್ ತನ್ನ ಕುಟುಂಬ ನಡೆಸಿದ ಅಧಿಕಾರ ನೋಡಿದ್ದಾನೆ ಹೊರತು ಅಧಿಕಾರ ನಡೆಸಿ ಗೊತ್ತಿಲ್ಲ . ರಾಹುಲ್ ಈ ತನಕ ಉಸ್ತುವಾರಿ ವಹಿಸಿಕೊಂಡ ಬಿಹಾರ್ , ಗುಜರಾತ್ , ತಮಿಳುನಾಡು , ಮತ್ತು ಆತನ ಸ್ವಕ್ಷೇತ್ರ ಅಮೇಥಿಯನ್ನು ಹೊಂದಿರುವ ಉತ್ತರ ಪ್ರದೇಶದ  ಚುನಾವಣೆ  ಎಲ್ಲಾ ಕಡೆ ಕಾಂಗ್ರೆಸ್ ಮಕಾಡೆ ಮಲಗಿತ್ತು.ಉತ್ತರ ಪ್ರದೇಶದ ಚುನಾವಣೆಯಂತು ರಾಹುಲ್ v /s ಅಕಿಲೇಶ್ ಅಂತಾನೇ ಬಿಂಬಿತ ವಾಗಿತ್ತು.ಅಲ್ಲೂ ಕಾಂಗ್ರೆಸ್ಗೆ ಸೋಲು.ರಾಹುಲ್ ನ ಸ್ವಕ್ಷೇತ್ರ ಅಮೇಥಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತು ತೀವ್ರ ಮುಖ ಭಂಗ ಅನುಭವಿಸಿತ್ತು.ಜನ ಸ್ಪಷ್ಟವಾಗಿ ರಾಹುಲ್ ರ ನಾಯಕತ್ವವನ್ನು ನಿರಾಕರಿಸಿದ್ದು ಎದ್ದು ಕಾಣುತ್ತಿತ್ತು.

“ಜಗುಲಿ ಏರಲಾಗದವನು ಬೆಟ್ಟ ಹತ್ತಿಯಾನೇ?” ಅಷ್ಟಾದರೂ ನೆಹರೂ ಕುಟುಂಬ ನಿಷ್ಠ ಹಿರಿಯ ಕಾಂಗ್ರೆಸ್ಸಿಗರು ರಾಹುಲ್ ನನ್ನು ಪ್ರಧಾನಿ ಅಭ್ಯರ್ಥಿಯೆನ್ನ ಹೊರಟಿರುವುದು ಇವರ ಭ್ರಷ್ಟಾಚಾರಗಳ ರಕ್ಷಣೆಗೆ ಎಂದು ಬಿಡಿಸಿ ಹೇಳಬೇಕಾಗಿಲ್ಲ . ಒಂದು ವೇಳೆ ರಾಹುಲ್ ಬಂದರೆ ಇವರುಗಳು ತಮ್ಮ ಕಾಯಕವನ್ನು ಅನಾಯಾಸವಾಗಿ ಮುಂದುವರಿಸ ಬಹುದೆಂಬ ನಂಬಿಕೆ . ಹಾಗೇ ನೋಡ ಹೊರಟರೇ ರಾಜಕೀಯವಾಗಿ ರಾಹುಲ್ ಗಿಂತ ಹತ್ತು ವರ್ಷ ಕಿರಿಯರಾದ ವರುಣ್ ಗಾಂಧಿ ಹೆಚ್ಚು ಸಮರ್ಥರು. ವರುಣ್ ರ ಕ್ಷೇತ್ರ ಪಿಲಿಭಿತ್ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ.ಅದು ಪ್ರಾಣಿ ಮೀಸಲು ಇರಬಹುದು,ಮೊಬೈಲ್ ಆಂಬುಲೆನ್ಸ್ ಸೇವೆ ಇರಬಹುದು,ಬಡ ಕುಟುಂಬಗಳ ಮದುವೆ,ಶಿಕ್ಷಣ,ಸೌರ ಶಕ್ತಿ ಉಪಯೋಗ ಹೀಗೆ ಹಲವಾರು ಅಭಿವೃದ್ದಿ ಕಾರ್ಯ ವರುಣ ಮಾಡಿದ್ದಾರೆ.ಜೊತೆಗೆ ವರುಣ ತಮ್ಮ ಸಂಸಧರ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ, ರಾಹುಲ್ ಶೇಕಡಾ ೬ರಷ್ಟು ತಮ್ಮ ನಿಧಿಯನ್ನು ಬಳಸಿಕೊಂಡಿಲ್ಲ.ಜೊತೆಗೆ ದೇಶದ ಸಮಸ್ಯೆಗಳ ಬಗ್ಗೆ ಕಳೆದೆರಡು ವರ್ಷದಲ್ಲಿ ಅವರು ಒಂದೇ -ಒಂದೇ ಪ್ರಶ್ನೆ ಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿಲ್ಲ . ಲೋಕಸಭೆ ಹಾಜರಾತಿಯಲ್ಲಿ ಅತಿ ಕಡಿಮೆ ಹಾಜರಾತಿ ಹೊಂದಿದ ಕುಖ್ಯಾತಿಯನ್ನು ರಾಹುಲ್ ಹೊಂದಿದ್ದಾರೆ.೮೫ ದಿನದಲ್ಲಿ ಕೇವಲ ೨೪ ದಿನದ ಹಾಜರಾತಿ.ಅಂದರೆ ಇದು ಶೇಕಡಾ ೨೮ರಷ್ಟಕ್ಕೂ ಕಡಿಮೆ.ಒಬ್ಬ ವಿದ್ಯಾರ್ಥಿ 75 ರಷ್ಟು ಹಾಜರಾತಿ ಹೋದದಿದ್ದರೆ ಅವನು ಪರೀಕ್ಷೆಗೆ ಕುಳಿತು ಕೊಳ್ಳಲು ಅನರ್ಹ,ಅಂದ ಮೇಲೆ ದೇಶದ ಅಭಿವೃದ್ದಿ,ಸರ್ಕಾರದ ಸಾಧನೆ, ವಿರೋಧ ಪಕ್ಷಗಳ ಸಲಹೆ,ಅಭಿಪ್ರಾಯ,ರಾಜಕೀಯ ಚರ್ಚೆ ಇದ್ದೆಲ್ಲದರಿಂದ ದೂರ ಉಳಿದ ರಾಹುಲ್ ಇನ್ನೊಮ್ಮೆ ಸ್ಪರ್ಧಿಸಲು ಅನರ್ಹರಲ್ಲವೇ? ಅಂಥದುದರಲ್ಲಿ ಪ್ರಧಾನಿಯಾಗುದರಲ್ಲಿ ನ್ಯಾಯ ಇದೆಯಾ ?

ವರ್ಷದ ಕೆಳಗೆ ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ ಕೃಷ್ಣ ವಿಶ್ವಸಂಸ್ಥೆಯಲ್ಲಿ ಪೋರ್ಚುಗಲ್ ವಿದೇಶಾಂಗ ಸಚಿವರ ಭಾಷಣ ಓದಿ ಭಾರತವೇ ಅವಮಾನ ಪಡುವಂತೆ ಮಾಡಿದ್ದರು . ಶಿಂಧೆ ತನ್ನ ಕಾರ್ಯಧರ್ಶಿ ಬರೆದುಕೊಟ್ಟ ಎಡವಟ್ಟು ಹೇಳಿಕೆ ಯನ್ನು ಸರಿಯಾಗಿ ಗ್ರಹಿಸದೇ ಕಾಟಾಚಾರಕ್ಕೆ ಓದಿ ನಗೆಪಾಟಲಿಗೆ ಇಡಾಗಿದ್ದರು.ರಾಹುಲ್ ವಿಷಯಕ್ಕೆ ಬಂದರೆ ರಾಹುಲ್ದು ಯಾರೋ ಬರೆದು ಕೊಟ್ಟ ಸಿದ್ದ ಭಾಷಣ. ಆದರೆ ಮೋದಿ ಎಂದರೆ ಹಾಗಲ್ಲ . ಅದೊಂದು ಮೋಡಿ.ಮೋದಿ ಮಾಡಿದ್ದೆ ಇತಿಹಾಸ.ಇಟ್ಟ ಹೆಜ್ಜೆಗಳೇ ಸಾಧನೆ.ಮೋದಿಯನ್ನು ವಿರೋಧಿಸುವವರು ಮೋದಿಯತ್ತ ಬೊಟ್ಟು ಮಾಡುವುದು ೨೦೦೨ ಗೋಧ್ರ ಹತ್ಯಾಕಾಂಡದ ಬಗ್ಗೆ.ಆ ಸಂಧರ್ಭದಲ್ಲಿ ಯಾರೇ ಗುಜರಾತ್ ಮುಖ್ಯ ಮಂತ್ರಿ ಯಾಗಿದ್ದರು ಅಂತಹುದೇ ಗಲಭೆ ನಡೆಯುತ್ತಿತ್ತು . ಮೋದಿ ಕೇವಲ ನೆಪ ಮಾತ್ರ . ಅಮಾಯಕ 59 ಕರಸೇವಕರನ್ನು ಜಿಹಾದಿಗಳು ಕೊಂದ ಅಕ್ರೋಶ ಬಹುಸಂಖ್ಯಾತರನ್ನು ಕೆರಳಿಸಿತ್ತು.ಈ ದಂಗೆಯನ್ನು  ತಡೆಯಲು ಮೋದಿ ಪಕ್ಕದ ಕಾಂಗ್ರೆಸ್ ಆಡಳಿತವಿರುವ ಮದ್ಯಪ್ರದೇಶ,ರಾಜಸ್ಥಾನ್,ಮಹಾರಾಷ್ಟದ ಮುಖ್ಯಮಂತ್ರಿಗಳನ್ನೂ ಕೇಳಿದರೂ ಯಾರು ಸಕಾರಾತ್ಮಕವಾಗಿ ಸ್ಪಂಧಿಸಿರಲಿಲ್ಲ .ಅಲ್ಪಾ ಸಂಖ್ಯಾತರ ಹಿತರಕ್ಷಣೆಗೆ ಪಣ ತೊಟ್ಟಿದ್ದೇವೆ ಎನ್ನುವ ಕಾಂಗ್ರೆಸ್ ತನ್ನ  ಪೋಲಿಸ್ ಪಡೆ ಕಳುಹಿಸಿ ದಂಗೆ ಹತ್ತಿಕ್ಕಲು ಸಹಕರಿಸ ಬಹುದಿತ್ತು.ಆದರೆ ಕಾಂಗ್ರೆಸ್ ಗೆ ಯಾರ ರಕ್ಷಣೆಯು ಬೇಕಾಗಿರಲಿಲ್ಲ,ಅವರಿಗೆ ಬೇಕಾಗಿದ್ದು ರಾಜಕೀಯ ಲಾಭವಷ್ಟೇ.ಸುಪ್ರಿಂ ಕೋರ್ಟ್ ಕೂಡ ಮೋದಿಗೆ ಈ ವಿಷಯದಲ್ಲಿ  ಕ್ಲೀನ್ ಚಿಟ್ ಕೊಟ್ಟಿದೆ . ಮೋದಿಯನ್ನು ಕೇವಲ ಒಂದು ಧರ್ಮದ ಪರವಾಗಿರುವವನು ಎಂದು, ಪೂರ್ವಗ್ರಹ ಪೀಡಿತ ಕೆಲವು ಮಾದ್ಯಮಗಳು ಬಿಂಬಿಸುತಿದೆ.ಒಂದು ವೇಳೆ ಮೋದಿ ಕೇವಲ “ಹಿಂದುತ್ವ ” ವನ್ನೇ ಆಧಾರವಾಗಿಟ್ಟು ಕೊಂಡು ಅಧಿಕಾರ ನಡೆಸಿದ್ದರೆ ಗುಜರಾತ್ ಮತ್ತೊಂದು ಪಾಕಿಸ್ಥಾನ ವಾಗುತಿತ್ತೆ ವಿನಹ ದೇಶದ  ಮುಂದುವರಿದ ರಾಜ್ಯಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಬಂದು ನಿಲ್ಲುತಿರಲಿಲ್ಲ.ಮೋದಿ ಸರ್ವರೂ ಸಮಾನರು,ನಮ್ಮ ನಿಷ್ಠೆ ಏನಿದ್ದರೂ ದೇಶಕ್ಕೆ ಎಂದು ತಿಳಿದು ಆಡಳಿತ ನಡೆಸಿದವರು.ನಾನೇನೆ ಮಾಡಿದರೂ, ಯಾವುದೇ ನಿರ್ಧಾರ ತೆಗೆದುಕೊಂಡರು ನಮ್ಮ ಮೊದಲ ಆದ್ಯತೆ ಭಾರತದ ಹಿತವಾಗಿರಬೇಕು ಎಂದು ಮಾಡಿ ತೋರಿಸಿದವರು.ಧರ್ಮ ನಮ್ಮ ನಂಬಿಕೆಯಾಗಬೇಕೆ ಹೊರತು ಅದು ಆಫೀಮು ಆಗಬಾರದು . ಆದರೆ ರಾಹುಲ್ ಉತ್ತರ ಪ್ರದೇಶದಲ್ಲೊಮ್ಮೆ ನಾನು ಬ್ರಾಹ್ಮಣನೆಂದು,ಕಾಶ್ಮೀರದಲೊಮ್ಮೆ ನಾನು ಕಾಶ್ಮೀರಿ ಪಂಡಿತನೆಂದು,ಮುಸ್ಲಿಮರು ಸಿಕ್ಕರೇ ಬಿಳಿ ಟೋಪಿ ಧರಿಸಿ ಮುಸ್ಲಿಮನಂತೆಯೂ ವರ್ತಿಸುತ್ತ ಜಾತ್ಯತೀತತೆ ಹೆಸರಲಿ ಜಾತಿ ರಾಜಕಾರಣ ಮಾಡುವವರು.ಬಹುಷಃ, ಇದಕ್ಕೆ ಇರಬೇಕು ವಿಕಿಪಿಡಿಯ ಕೂಡ ಈ ವಿಷಯದಲ್ಲಿ ಗೊಂದಲದಲ್ಲಿದೆ 🙂

ಒಂದೊಮ್ಮೆ ಗುಜರಾತ್ ಮುಸ್ಲಿಮರು ಮೋದಿಯ ವಿರುದ್ದವಾಗಿದ್ದರೆ ಮೋದಿ ಮುಸ್ಲಿಂ ಬಾಹುಳ್ಯ ವಿರುವ ಕ್ಷೇತ್ರದಲ್ಲಿ ಗೆದ್ದು ಬರುತಿರಲಿಲ್ಲ . ದೇಶದ ಮುಸ್ಲಿಮರ ಸಾಕ್ಷರತಾ ಪ್ರಮಾಣ ಶೇಕಡಾ ೫೯.೧ ರಷ್ಟು ಇದ್ದರೇ,ಗುಜರಾತ್ ನಲ್ಲಿ ಅದು ೭೩.೫ ರಷ್ಟಿದೆ.ಜೊತೆಗೆ ಹಿಂದೂಗಳ ಸಾಕ್ಷರತಾ ಪ್ರಮಾಣ ಗುಜರಾತ್ ನಲ್ಲಿ ೬೮.೫ ಅಂದರೆ ಮುಸ್ಲಿಮರು ಹಿಂದುಗಳಿಗಿಂತ ಶೇಕಡಾ ೫ರಷ್ಟು ಜಾಸ್ತಿ ವಿದ್ಯಾವಂತರು.ಯಾವುದೇ  ವಿಷಯದಲ್ಲೂ ತಾರತಮ್ಯವಿಲ್ಲ.ಗುಜರಾತ್ ಮುಸ್ಲಿಮರಿಗೆ ತಿಳಿದಿದೆ ಮೋದಿ ಏನು ಎಂದು.ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ತೋರ್ಪಡಿಸಬೇಕಷ್ಟೇ.ಇಪ್ಪತ್ತನಾಲ್ಕು ಗಂಟೆ ಗಳ ನಿರಂತರ ವಿದ್ಯುತ್ , ೨೦೦೧ರಲ್ಲಿ ೧೪೭೦೦ ರಷ್ಟಿದ್ದ ಕೃಷಿ ಆದಾಯವನ್ನು ೯೬೦೦೦ ರಕ್ಕೆ ತಂದಿದ್ದು , ನೀರಾವರಿ ಸೌಲಭ್ಯ ದ ಮೂಲಕ ೨೦೦೧ ರಲ್ಲಿ ೧೦೮ ಲಕ್ಷ ಹೆಕ್ಟೇರ್ ನಸ್ಟಿದ್ದ ಕೃಷಿ ಭೂಮಿಗೆ ಹೆಚ್ಚುವರಿಯಾಗಿ ೩೭ ಲಕ್ಷ ಹೆಕ್ಟೇರ್ ಸೇರಿ ಇಂದು ೧೪೫ ಲಕ್ಷ ಹೆಕ್ಟೇರ್ ಮಾಡಿದ್ದೂ , ಹತ್ತು ವರ್ಷದಲ್ಲಿ ೬೮% ಹಾಲು ಉತ್ಪಾದನೆಯನ್ನು ಹೆಚ್ಚಾಗಿದ್ದು , Climate Change Department (CCD),ಆರಂಭಿಸಿದ ಏಷ್ಯಾದ ಏಕೈಕ ರಾಜ್ಯ ಎಂಬ ಹೆಮ್ಮೆಗೆ ಪಾತ್ರವಾಗಿದ್ದು,ಇತರ ಭಾರತ ಸೌರ ಶಕ್ತಿ ಕೊಡುಗೆ 120 MW ಆಗಿದ್ದರೆ ಗುಜರಾತ್ ಒಂದೇ 600 MW ಉತ್ಪತ್ತಿ ಮಾಡಿ ಚೀನಾವನ್ನು ಮೀರಿ , ವಿಶ್ವವೇ ಹುಬ್ಬೇರಿಸುವಂತೆ ಮಾಡಿದ್ದೂ , ಏಷ್ಯಾದ ಅತಿ ದೊಡ್ಡ ಸೌರ ಸ್ಥಾವರ ಕಚ್ ರಲ್ಲಿ ಆರಂಬಿಸುತ್ತಿರುವುದು.ಹೀಗೆ ಹಲವಾರು ಅಭಿವೃದ್ದಿ ಕೆಲಸಮಾಡಿ ದೇಶವನ್ನು ಅಳಲು ತಾನು ಹೇಗೆ ಸಮರ್ಥ ನೆಂದು ಮೋದಿ ತೋರಿಸಿದ್ದಾರೆ . ತನ್ನ ಸಾಮರ್ಥ್ಯವನ್ನು ತೋರ್ಪಡಿಸಿದ ಅನುಭವಿ ಒಂದೆಡೆ ಯಾದರೆ ಅನನುಭವಿ ಇನ್ನೋದೆಡೆ . !!! ಆಯ್ಕೆ ಪ್ರಜ್ಞಾವಂತರದ್ದು !!!

ಚಿತ್ರ ಕೃಪೆ :indiatoday.intoday.in

4 ಟಿಪ್ಪಣಿಗಳು Post a comment
 1. satish
  ಮಾರ್ಚ್ 18 2013

  vaastava vannu teredittiddaare…hats up..

  ಉತ್ತರ
 2. ಜೂನ್ 16 2013

  I like the information comparison of rahul to Sri Narendra Modi is just like” rat to a lion”

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments