ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 14, 2013

15

ವಚನ ಸಾಹಿತ್ಯದ ಕುರಿತ ಸಂಶೋಧನೆಯೊಂದಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪ

by ನಿಲುಮೆ

– ಶಿವಕುಮಾರ ಪಿ.ವಿ.,  ಸಿ.ಎಸ್.ಎಲ್.ಸಿ

Vachana Charcheವಚನ ಸಾಹಿತ್ಯದ ಕುರಿತ ಸಂಶೋಧನಾ ಲೇಖನದ ವಾದದ ಕುರಿತು ಚರ್ಚಿಸಬೇಕಾದುದೇನು? ಮತ್ತು ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪವೇನು? ಒಂದೆಡೆ, ಇವೆರೆಡರ ನಡುವೆ ದೊಡ್ಡ ಕಂದರವಿದೆ. ಮತ್ತೊಂದೆಡೆ, ಅವು ತೀರ ಹತ್ತಿರವಾಗಿಯೂ ಇವೆ. ಈ ವಿಚಾರವು ವಿದ್ವಾಂಸರ ಪ್ರತಿಕ್ರಿಯೆಗಳಲ್ಲಿ ತಾನಾಗಿಯೇ ಸ್ಪಷ್ಟವಾಗುತ್ತದೆ. ಈ ಮೂಲಕ ಒಟ್ಟಾರೆ ಚರ್ಚೆಯ ಸ್ವರೂಪವನ್ನು ಗುರುತಿಸುವ ಪ್ರಯತ್ನ ಈ ಲೇಖನದ್ದಾಗಿದೆ.

‘ಜಾತಿವ್ಯವಸ್ಥೆ’ಯೆಂಬ ಪೂರ್ವನಂಬಿಕೆ ಇಟ್ಟುಕೊಂಡು ವಚನಸಾಹಿತ್ಯವನ್ನು ನೋಡಿದಾಗ ಅವು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿಯಂತೆ ಕಾಣುತ್ತವೆ. ಆ ಪೂರ್ವನಂಬಿಕೆಯ ಚೌಕಟ್ಟಿನಿಂದ ಹೊರತಾಗಿ ವಚನ ಸಾಹಿತ್ಯವನ್ನು ಅಧ್ಯಯನ ನಡೆಸಿದರೆ ಅದು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿ ಎಂದು ಸೈದ್ಧಾಂತಿಕವಾಗಿ ನಿದರ್ಶಿಸಲು ಸಾಧ್ಯವಿಲ್ಲ. ಹಾಗೂ ಈವರೆಗೂ ವಚನ ಸಾಹಿತ್ಯವನ್ನು ಆ ಒಂದು ಪೂರ್ವನಂಬಿಕೆಯಿಂದಲೇ ವಿಶ್ಲೇಷಿಸಲಾಗಿದೆ. ಇದು ಡಂಕಿನ್‍ರವರ ಸಂಶೋಧನಾ ಲೇಖನದ ಮುಖ್ಯ ವಾದ. ಇದನ್ನು ಮತ್ತೊಮ್ಮೆ ಸಂಕ್ಷಿಪ್ತವಾಗಿಡುವ ಅನಿವಾರ್ಯತೆಯನ್ನು ಪ್ರಸ್ತುತ ವಾದಕ್ಕೆ ಶಿವಪ್ರಕಾಶರವರ ಪ್ರತಿಕ್ರಿಯೆ ಹಾಗೂ ಅದನ್ನೇ ಆಧರಿಸಿ ಬಂದಂತಹ ಉಳಿದ ಪ್ರತಿಕ್ರಿಯೆಗಳು ಉಂಟುಮಾಡಿವೆ.
ಈ ಮೇಲಿನ ವಾದಕ್ಕೆ ‘ಸಂಬಂಧಿಸಿ’ದಂತೆ ಬರುತ್ತಿರುವ ಬೌದ್ಧಿಕ ವಲಯದ ಟೀಕೆ ಅಥವಾ ‘ಪ್ರತಿಕ್ರಿಯೆ’ಗಳು ಹಾಗು ಅವುಗಳ ಮಿತಿಗಳನ್ನು ಈ ಮುಂದಿನಂತೆ ನೋಡಬಹುದು.

1. ಮೊದಲನೆಯದಾಗಿ, ಹೆಚ್.ಎಲ್. ಪುಷ್ಪರವರು “ವಚನಕಾರರು ಜಾತಿಯ ಪರ ಅಥವಾ ಬ್ರಾಹ್ಮಣ ಪರವಾಗಿದ್ದರು ಎಂಬ ಮಾತೇ ತರ್ಕರಹಿತವಾದದ್ದು” ಹಾಗೂ ವಚನಕಾರರಲ್ಲಿ ಎಲ್ಲಿಯೂ “ಜಾತಿ ಪರವಾದ ಬ್ರಾಹ್ಮಣರ ಬಗ್ಗೆ ಮೃದುವಾದ ಭಾವನೆಗಳು ಕಂಡು ಬರುವುದಿಲ್ಲ” ಎನ್ನುತ್ತಾರೆ. ಎರಡನೆಯದಾಗಿ ಟಿ.ಆರ್. ಚಂದ್ರಶೇಖರ್‍ರವರು ಡಂಕಿನ್ ಮತ್ತು ಬಾಲುರವರು “ಭಾರತದಲ್ಲಿ ಜಾತಿಯೇ ಇಲ್ಲ” ಎನ್ನುವ ಪೂರ್ವಾಗ್ರಹ ಹೊಂದಿದ್ದಾರೆ ಎಂದು ಗ್ರಹಿಸುತ್ತಾರೆ.  ಮೊದಲನೆಯದಕ್ಕೆ, ಉದಾಹರಣೆಯ ಮೂಲಕ ಹೇಳುವುದಾದರೆ, ಯಾರೋ ಒಬ್ಬ ವ್ಯಕ್ತಿಯು ಕಲಾತ್ಮಕ ಸಿನಿಮಾದ ಕುರಿತು ಮೃದು ಧೋರಣೆಯನ್ನು ಹೊಂದಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದಾಕ್ಷಣ, ಆತ ಕಲಾತ್ಮಕ ಸಿನಿಮಾ ಹಾಗೂ ಸಿನಿ ಪ್ರಪಂಚದ ವಿರೋಧಿಯಾಗಿದ್ದಾನೆ ಮಾತ್ರವಲ್ಲ ಅವುಗಳನ್ನು ನಾಶಮಾಡಲು ಹೋರಾಡಿದ್ದಾನೆ ಎನ್ನಲು ಹೇಗೆ ಸಾಧ್ಯ? ಎರಡನೆಯ ಅಂಶದಲ್ಲಿ, ವಾದದಲ್ಲಿನ ತರ್ಕರಹಿತತೆ ಹಾಗೂ ಪೂರ್ವಾಗ್ರಹ ಯಾವುದು? ಅದು ಎಲ್ಲಿದೆ? ಎಂಬುದನ್ನು ಸುಸಂಬದ್ಧವಾಗಿ ತೋರ್ಪಡಿಸದೇ, ಆ ಹೊಣೆಯನ್ನು ಓದುಗರ ಮೇಲೆಯೇ ಹಾಕಿಬಿಡುತ್ತಾರೆ. ಆದರೆ, ಡಂಕಿನ್ ಹಾಗೂ ಬಾಲುರವರು, ಅವರ ಒಟ್ಟಾರೆ ಸಂಶೋಧನೆಯಲ್ಲಿ, ಎಲ್ಲಿಯೂ ಕೂಡ ವಚನಕಾರರು ಜಾತಿಯ ಪರವಾಗಿದ್ದರು; ಭಾರತದಲ್ಲಿ ಜಾತಿಯೇ ಇಲ್ಲ ಎಂದು ಹೇಳಿರುವುದು ಕಂಡುಬರುವುದಿಲ್ಲ. ಇದನ್ನು ಸ್ವತಃ ಆರೋಪಿಸುವವರೇ ಸಾಭೀತು ಪಡಿಸಬೇಕಾಗುತ್ತದೆ. ಇಲ್ಲವಾದರೆ, ವಿದ್ವಾಂಸರುಗಳು ತಮ್ಮ ಈ ಆರೋಪಗಳೆಲ್ಲವೂ ನಿರಾಧಾರವಾದವುಗಳು ಎಂಬ ಬೆಲೆ ತೆರಬೇಕಾಗುತ್ತದೆ.

2. ಮೊಗಳ್ಳಿಯವರು ವಚನ ಚಳುವಳಿಯು ಸಾಮಾಜಿಕ ನ್ಯಾಯದ ಭಾಗವಾಗಿತ್ತು. ಅದನ್ನು ಜಾತ್ಯಾತೀತತೆಯ ಭಾಗವಾಗಿ ಗಮನಿಸಬೇಕು ಎನ್ನುತ್ತಾರೆ. ಹಾಗೆಯೇ, ಕೆ.ವೈ. ನಾರಾಯಣ ಸ್ವಾಮಿಯವರು “ಸಾಮಾಜಿಕ ಅನ್ಯಾಯವನ್ನು ಮೀಸಲಾತಿಯಿಂದ ಸರಿಪಡಿಸಬಹುದು ಎನ್ನುವ ನಂಬಿಕೆಯನ್ನು… ವಚನಗಳ ಓದು ಉಂಟುಮಾಡಿತ್ತು” ಎನ್ನುತ್ತಾ ಮುಂದುವರಿದು ಪ್ರಸ್ತುತ ಸಂಶೋಧನೆಯ ಕುರಿತಾಗಿ “ಜಾತಿ ಪದ್ಧತಿ ಇಲ್ಲವೆಂದು ಸಾಧಿಸಿದರೆ… ಬ್ರಾಹ್ಮಣರಿಗೂ ರಾಷ್ಟ್ರೀಯ ಸಂಪನ್ಮೂಲದಲ್ಲಿ ಫಲ ಸಿಗುತ್ತದೆ ಎನ್ನುವ ಗುಪ್ತ ಕಾರ್ಯಯೋಜನೆಯನ್ನು ಇದು ಒಳಗೊಂಡಿದೆ” ಎಂಬುದಾಗಿ ಗ್ರಹಿಸಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, ಸಮಕಾಲೀನ ಹಲವು ಸಾಮಾಜಿಕ ಚಳುವಳಿಗಳು ಜಾತಿವ್ಯವಸ್ಥೆಯನ್ನು ನಾಶಮಾಡಬೇಕೆಂಬ ಗುರಿಯನ್ನೇ ಇಟ್ಟುಕೊಂಡಿವೆ. ಆದರೆ ಈ ಮೇಲಿನ ಉಲ್ಲೇಖವು ಜಾತಿವ್ಯವಸ್ಥೆಯನ್ನು ಸರ್ಕಾರಿದಿಂದ ಸಿಗುವ ಸೌಲಭ್ಯಗಳಿಗಾಗಿ ಉಳಿಸಿಕೊಳ್ಳಬೇಕೆಂಬ ಇಂಗಿತವನ್ನು ಹೊರಡಿಸುತ್ತದೆ. ಕೆ.ವೈ.ಎನ್‍ರ  ಪ್ರಕಾರ ಸಾಮಾಜಿಕ ನ್ಯಾಯವೆಂದರೆ ಯಾವುದೋ ಒಂದು ಸಮುದಾಯಕ್ಕೆ ಸೇರಬೇಕಾದ ಸೌಲಭ್ಯ. ಅಂದರೆ ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಹೊರತು ಪಡಿಸಿ ಇತರ ಎಲ್ಲರಿಗೂ ಸಮಾನ ಸೌಲಭ್ಯಗಳು ದೊರಕದಿರುವದೇ ‘ಸಾಮಾಜಿಕ ನ್ಯಾಯ’ ಎಂದು ಪ್ರತಿಪಾದಿಸುತ್ತಾರೆ. ಇದು ‘ಸ್ವತಃ’ ಅವರ ವ್ಯಾಖ್ಯಾನವಾಗಿರುವುದರಿಂದ ಈ ಮೂಲಕ ಯಾವುದೇ ಸೈದ್ಧಾಂತಿಕ ನಿಲುವು ತಳೆಯಲು ಅದು ಸಹಕಾರಿಯೆನಿಸುವುದಿಲ್ಲ.

3. ಎಂ.ಎಸ್. ಆಶಾದೇವಿಯವರು ತಮ್ಮ ಲೇಖನದ ಪ್ರಾರಂಭದ ಸಾಲಿನಿಂದಲೇ ರಾಜಾರಾಮ ಹೆಗಡೆಯವರು ಮತ್ತು ಡಂಕಿನ್‍ರವರ ಸರಳ ಹಾಗೂ ಸ್ಪಷ್ಟವಾಗಿರುವ ವಾದವನ್ನು ತಪ್ಪಾಗಿ ಗ್ರಹಿಸಿ, ಅವಸರದ ತೀರ್ಮಾನ ಕೈಗೊಂಡಿರುವುದು ಕಂಡುಬರುತ್ತದೆ. ಆ ತೀರ್ಮಾನವೇನೆಂದರೆ: ಕಲ್ಬುರ್ಗಿಯವರು ನೀಡಿದ ಹೇಳಿಕೆಯ ಕಾರಣಕ್ಕಾಗಿಯೇ ಅದನ್ನು ರಾಜಾರಾಮ ಹೆಗಡೆಯವರು ನಿರಾಕರಿಸಿದ್ದಾರೆ ಎಂಬುದು. ಆದರೆ ಕಲ್ಬುರ್ಗಿಯವರು ‘ವಚನ ಸಾಹಿತ್ಯ ಜಾತಿವ್ಯವಸ್ಥೆ ವಿರೋಧಿ’ ಎಂಬ ಒಪ್ಪಿತ ತಿಳುವಳಿಕೆಯನ್ನು ಆಧಾರವಾಗಿಟ್ಟುಕೊಂಡು, ಬಸವಣ್ಣ ಅದನ್ನೇ ಹೇಳಿರುವುದು ಹಾಗಾಗಿ ಅವನು ಕನ್ನಡಿಗ ಎಂದು ಹೆಮ್ಮೆ ಪಡಬೇಕು. ಬದಲಿಗೆ ಅಪವ್ಯಾಖ್ಯಾನ ಮಾಡಬಾರದು ಎಂದು ಹೇಳಿದ್ದರು. ಆದರೆ ರಾಜಾರಾಮ ಹೆಗಡೆಯವರು ವಚನ ಸಾಹಿತ್ಯದಲ್ಲಿ ಈ ಒಪ್ಪಿತ ತಿಳುವಳಿಕೆಯು ಕಾಣುವುದೇ ಇಲ್ಲ. ಅದನ್ನು ಪ್ರೊಟೆಸ್ಟಾಂಟ್ ಪೂರ್ವಾಗ್ರಹದ ದೃಷ್ಟಿಕೋನದಲ್ಲಿ ಇದುವರೆಗೆ ಜಾತಿವ್ಯವಸ್ಥೆಯ ವಿರೋಧಿ ಚಳುವಳಿಯೆಂದು ವಿವರಿಸಲಾಗಿದೆ. ಅದನ್ನು ಆಧ್ಯಾತ್ಮಿಕ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕು. ಆಗ ವಚನ ಸಾಹಿತ್ಯದ ನೈಜ ಆಶಯವನ್ನು ತಿಳಿಯಲು ಸಾದ್ಯ ಎಂದು ವಿವರಿಸಿದ್ದರು. ಇಲ್ಲಿ ವಚನ ಸಾಹಿತ್ಯದ ಕುರಿತು ನಂಬಿಕೊಂಡಿದ್ದ ಸೈದ್ಧಾಂತಿಕ ಪ್ರತಿಪಾದನೆಯನ್ನು ಪ್ರಶ್ನಿಸಲಾಗಿದೆಯಷ್ಟೇ. ಆದರೆ, ಆಶಾದೇವಿಯವರು ಹೆಗಡೆಯವರ ಮೇಲಿನ ವಿಚಾರವನ್ನು ತಪ್ಪಾಗಿ ಗ್ರಹಿಸಿ ಆರೋಪ ಮಾಡಿದ್ದಾರೆ. ವಚನ ಸಾಹಿತ್ಯ ಜಾತಿವ್ಯವಸ್ಥೆಯ ವಿರೋಧಿಯಾಗಿರಲಿಲ್ಲ ಅದು ಬೇರೆಯದೇ ಮಹತ್ವದ ವಿಚಾರಗಳನ್ನು ಹೇಳುತ್ತದೆ ಎಂಬುದು ಸತ್ಯವೇ ಆದಲ್ಲಿ, ಇದುವರೆಗೂ ಇಡೀ ವಚನ ಸಾಹಿತ್ಯವನ್ನು, ವಚನಕಾರರನ್ನು ಅಪವ್ಯಾಖ್ಯಾನಗೊಳಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?

4. ಜಿ. ಬಿ. ಹರೀಶ್‍ರವರ ಟೀಕೆಗಳೇನೆಂದರೆ, 1. ವಚನ ಸಾಹಿತ್ಯವನ್ನು ಕುರಿತಾದ  ಇನ್ನೂ ಹಲವು ಬರವಣಿಗೆಗಳನ್ನು ಗಮನಿಸಿಲ್ಲ. 2. ಐದು ವರ್ಷಗಳಲ್ಲಿ ಡಂಕಿನ್ ಹೊಸದೇನನ್ನು ಹೇಳಿಲ್ಲ ಎಂಬುದು. ಮೊದಲನೆಯ ಟೀಕೆಯ ಸ್ವರೂಪದ ಬಗೆಗೆ ಹೇಳುವುದಾದರೆ, ಉದಾಹರಣೆಗೆ: ನ್ಯೂಟನ್ ಗುರುತ್ವಾಕರ್ಷಣ ಸಿದ್ಧಾಂತವನ್ನು ಕಂಡು ಹಿಡಿಯಲು ಎಲ್ಲೆಲ್ಲಿ ಕಲ್ಲು ಮೇಲಿನಿಂದ ಕೆಳಕ್ಕೆ ಬೀಳುತ್ತದೆ? ಎಂದು ಆಫ್ರಿಕಾ, ಹಾನಗಲ್, ಲಿಬಿಯಾ, ಕುಪ್ಪಗಡ್ಡೆ, ಅಂಟಾರ್ಟಿಕಾ, ಆಗುಂಬೆ, ಟರ್ಕ್‍ನಲ್ಲಿ ನೋಡಿದರೆ ಸಾಕೆ? ಇಲ್ಲ, ಇಷ್ಟೇ ಸಾಕಾಗುವುದಿಲ್ಲ. ಪ್ರಪಂಚದಾದ್ಯಂತ ಸುತ್ತಬೇಕು ಎಂದು ಹೇಳಿದಂತಾಗುತ್ತದೆ. ಸಾಧುವಲ್ಲದ ಈ ಕೆಲಸವನ್ನು ಆತ ಮಾಡಲಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಹಾಗೆಯೇ, ಪರಿಭಾಷಾ ಕೋಶ ಹಾಗೂ ಇತರ ಪಠ್ಯಗಳನ್ನೇ ಇಟ್ಟುಕೊಂಡು ಹರೀಶ್‍ರವರು ಅಥವಾ ಯಾರಾದರು ಪ್ರಸ್ತುತ ವಾದದಲ್ಲಿ ಸಮಸ್ಯೆಯಿದ್ದರೆ ಅದನ್ನು ತೋರಿಸಬಹುದು.  ಎರಡನೆಯದಾಗಿ, ಡಂಕಿನ್‍ರವರ ಸಂಶೋಧನೆಯಲ್ಲಿ ಹೊಸದೇನು ಇಲ್ಲ ಎನ್ನುವುದೇ ಆಗಿದ್ದರೆ, ಈ ರೀತಿಯ ಹಲವಾರು ಪ್ರತಿಕ್ರಿಯೆಗಳು ಏಕೆ ಬರುತ್ತಿವೆ? ಇದರರ್ಥ, ಒಂದೋ, ಹರೀಶ್‍ರವರಿಗೆ ಪ್ರಸ್ತುತ ವಿಚಾರವನ್ನು ಗ್ರಹಿಸಲು ಸಾಧ್ಯವಾಗಿಲ್ಲ. ಇಲ್ಲವೆಂದಾದರೆ, ಬಹಳ ಹಿಂದೆಯೇ ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿಯಾಗಿರಲಿಲ್ಲ ಎಂಬುದು ತಿಳಿದಿರಬೇಕು. ಆದರೆ ಅವರ ಪ್ರತಿಕ್ರಿಯೆ ಮೊದಲನೆಯದನ್ನೇ ಸೂಚಿಸುತ್ತದೆ.

5. ಬಿ. ಎಲ್ ವೇಣುರವರು ವಚನಕಾರರು ಗುಡಿ ಸಂಸ್ಕøತಿಯನ್ನು ಖಂಡಿಸಿದರು ಎನ್ನುತ್ತಾ ಅಂಬಿಗರ ಚೌಡಯ್ಯನ ವಚನವನ್ನು ಉಲ್ಲೇಖಿಸುತ್ತಾರೆ. ‘ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟಯಡಿಯಾಗಿ ಬೀಳುವ ಲೊಟ್ಟೆ ಮೂಗನ ಕಂಡರೆ ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು ಲಟ ಲಟನೆ ಹೊಡೆ’ ಎನ್ನುತ್ತಾನೆ. ಹಾಗೆಯೇ ಎನ್ನ ಕಾಲೇ ಕಂಬ ದೇಹವೇ ದೇಗುಲ… ಎಂಬ ಬಸವಣ್ಣನವರ ವಚನವನ್ನೂ ಸಹ ಅದಕ್ಕೆ ಆಧಾರವಾಗಿ ನೀಡುತ್ತಾರೆ. ಹಾಗೆಯೇ ಮೊಗಳ್ಳಿಯವರು ತಮ್ಮ ಲೇಖನದಲ್ಲಿ ‘ವಚನ ಚಳುವಳಿ ಮೂಲತಃ ದಲಿತ ರದು’ ಎನ್ನುತ್ತಾರೆ. ಆದರೆ ದಲಿತ ಚಳುವಳಿಗೆ ದೇವಾಲಯ ಪ್ರವೇಶ ಒಂದು ಪ್ರಮುಖ ಹಕ್ಕಿನ ಹೋರಾಟವಾಗಿದೆ ಎಂಬುದನ್ನು ಹಲವು ಚಿಂತಕರು ಹಾಗೂ ಚಳುವಳಿಗಾರ ವಾದಗಳಲ್ಲಿ ಕಾಣಬಹುದು. ಅಂದರೆ, ಒಂದೊಮ್ಮೆ ದೇವಾಲಯ ಪ್ರವೇಶವು ದಲಿತ ಚಳುವಳಿಯ ಹಕ್ಕಿನ ಹೋರಾಟ ಎಂದಾದರೆ, ಗುಡಿ ಸಂಸ್ಕøತಿಯ ನಿರಾಕರಣೆ ದಲಿತ ಚಳುವಳಿಯ ಹೋರಾಟವಾಗುವುದಿಲ್ಲ. ವಚನ ಸಾಹಿತ್ಯವನ್ನು ತಮ್ಮ ಸಾಮಾಜಿಕ ಚಳುವಳಿಯ ನಿರ್ದಿಷ್ಟ ಚೌಕಟ್ಟಿನಲ್ಲಿ ಅರ್ಥೈಸುವ ಬರದಲ್ಲಿ ಉಂಟಾಗುವ ಇಂತಹ ವೈರುಧ್ಯಗಳನ್ನು ಪರಿಗಣಿಸಲು ಚಿಂತಕರು ವಿಫಲವಾಗುತ್ತಿದ್ದಾರೆ.

6. ಸಂಖ್ಯೆಗಳ ಮೂಲಕ ವಚನ ಚಳುವಳಿಯ ವೈಧಿಕ ವಿರೋಧವನ್ನು ಅಲ್ಲಗಳೆಯುವುದು ಅಪಕ್ವತೆಯೋ, ಯಾರನ್ನೋ ಓಲೈಸಬೇಕೆಂಬ ಹೊಯ್ದಾಟವೋ ಎಂಬ ಜಿಜ್ಞಾಸೆ ಕಾಡುತ್ತಿದೆ ಎಂಬುದು ವೇಣುರವರ ಮತ್ತೊಂದು ಆಕ್ಷೇಪಣೆ. ಇದು ಅವರಿಗೇ ಉಂಟಾಗಿರುವ ಗೊಂದಲವೆಂಬುದು ಅವರ ಮಾತಿನಲ್ಲೇ ಸ್ಪಷ್ಟವಾಗುತ್ತದೆ. ಆದರೆ ಬಹುತೇಕ ಪ್ರತಿಕ್ರಿಯೆಗಳು ಈ ಒಂದು ಅಂಶವನ್ನೇ ಪ್ರಮುಖ ದಾಳವನ್ನಾಗಿ ಬಳಸಿವೆ. ಆದರೆ ಸಿದ್ಧಾಂತವೊಂದು ಕೇವಲ ವಿವರಣೆ ಅಥವಾ ಕೇವಲ ಊಹೆಯಾಗಿರದೇ ಅದು ತನ್ನ ತಾರ್ಕಿಕ ನಿಲುವಿಗೆ ಪ್ರತ್ಯಕ್ಷ ಪ್ರಮಾಣಗಳನ್ನು ತೋರಿಸಬೇಕಾಗುತ್ತದೆ. ಆಗ ಮಾತ್ರ ಅದು ವೈಜ್ಞಾನಿಕವೆಂಬ ಅರ್ಹತೆಯನ್ನು ಗಿಟ್ಟಿಸುತ್ತದೆ. ಹಾಗೆಯೇ ಡಂಕಿನ್‍ರವರು ತಮ್ಮ ಊಹಾಸಿದ್ಧಾಂತಕ್ಕೆ ಈ ರೀತಿ ವಚನ ಸಾಹಿತ್ಯದಿಂದಲೇ ಆಧಾರಗಳನ್ನು ತೋರಿಸಿದ್ದಾರೆಯೇ ವಿನಃ ಅದೇ ಅವರ ವಾದವಲ್ಲ. ಆದರೆ ಇದು ಸಮರ್ಥನೀಯವಲ್ಲ ಎಂದು ಹೇಳುವ ವಿದ್ವಾಂಸರುಗಳು ಹೇರಳವಾಗಿ ಅವೇ ಕೆಲವು ವಚನಗಳನ್ನೇ ಉಲ್ಲೇಖಿಸುತ್ತಿರುವುದನ್ನು ಗಮನಿಸಬಹುದು. ಉದಾ: ಕಲ್ಬುರ್ಗಿಯವರು ಶರಣರು ಜಾತಿವಿರೋಧಿ ಎನ್ನಲು ನುರಾರು ವಚನಗಳಲ್ಲಿ ಉಲ್ಲೇಖಗಳಿವೆ ಎಂದು ಅದರ ಮಹತ್ವವನ್ನು ಹೇಳುತ್ತಾರೆ. ಹೀಗೆ ವಿದ್ವಾಂಸರು ಈ ಆಧಾರಗಳಿಲ್ಲದೇ ವಚನಗಳನ್ನು ಜಾತಿವಿರೋಧಿ ಎಂಬ ತಮ್ಮ ನಿಲುವನ್ನು ತಳೆಯಲು ಸಾಧ್ಯವೇ ಇಲ್ಲವೆಂಬ ವೈರುಧ್ಯವನ್ನು ಸಹ ಗಮನಿಸದಿರುವುದು ಕಂಡುಬರುತ್ತದೆ. ಆದರೆ ವಚನ ಚಳುವಳಿ ಜಾತಿವ್ಯವಸ್ಥೆಯ ವಿರೋಧಿಯೇ ಆಗಿದೆ ಎನ್ನಲು ಪ್ರಮಾಣಗಳನ್ನು ತೋರಿಸಬೇಕಾದ  ಅನಿವಾರ್ಯತೆಯಂತೂ ಇದೆ. ಇಲ್ಲದಿದ್ದರೆ ಅದನ್ನು ಜಾತಿವಿರೋಧಿ ಚಳುವಳಿ ಎಂದಷ್ಟೇ ಏಕೆ? ಯಾವುದೋ ಒಂದರ ಅಥವಾ ಹಲವುಗಳ ವಿರೋಧಿಯೆಂತಲೋ ಹಾಗೆಯೇ, ಅವರವರ ಮನಸಿಗೆ ತೋಚಿದಂತೆ ಏನು ಬೇಕಾದರೂ ಉದಾ: ‘ಬಸಾಕ್’ ವಿರೋಧಿಯೆಂದು ಕೂಡ ಹೇಳಬಹುದಾದ ಸಂದಿಗ್ದತೆ ಎದುರಾಗುತ್ತದೆ.

7. ಈ ಮೇಲಿನ ಗೊಂದಲವನ್ನು ಸರಿಪಡಿಸುವಂತೆ ವಿದ್ವಾಂಸರುಗಳು ವಚನ ಚಳುವಳಿಯನ್ನು ಜಾತಿವ್ಯವಸ್ಥೆಯ ವಿರೋಧಿ ಎನ್ನಲು ಉದಾ: ಎಂ. ಎಸ್. ಆಶಾದೇವಿಯವರು “ಸಾವಯವ ಪುರಾವೆಗಳಿವೆ” ಎಂದರೆ, ಮೊಗಳ್ಳಿ ಗಣೇಶ್‍ರವರ ಪ್ರಕಾರ ವಚನ ಚಳುವಳಿಯ ಕಾಲದ “ಜಾತಿವ್ಯವಸ್ಥೆಯ ಒತ್ತಡಗಳ ಮೂಲವನ್ನು ಅರಿಯದೆಯೇ ಜಾತಿ ಸೂಚಕಗಳ ಪಟ್ಟಿ ಮಾಡಬಾರದು” ಎನ್ನುತ್ತಾರೆ. ಆದರೆ ಈ ಪ್ರಕಾರದ ಹಲವು ಹೊಸ ವ್ಯಾಖ್ಯಾನಗಳಿಂದ ಅಂದಿನ ಕಾಲದ ಈ ಸಾವಯವ ಹಾಗೂ ಮಾನಸಿಕ ಒತ್ತಡಗಳ ಮೂಲವನ್ನು ಅರಿಯುವುದಾದರು ಹೇಗೆ? ಇದಕ್ಕೆ ಮನಃಶಾಸ್ತ್ರ, ವೈಜ್ಞಾನಿಕ ತತ್ವಶಾಸ್ತ್ರಗಳ ಅನುಪಸ್ಥಿತಿ ನಮ್ಮನ್ನು ಕಾಡುತ್ತದೆ. ಬಹುತೇಕ ಪ್ರತಿಕ್ರಿಯೆಗಳು ಇಂತಹ ಅಂಶಗಳ ಜೊತೆಗೆ ವಚನಗಳನ್ನು ಸಹ ಉದಾಹರಿಸುತ್ತಿರುವದನ್ನು ನೆನಪಿನಲ್ಲಿಡಬೇಕು. ಆದರೆ, ವಚನಗಳ ಪ್ರಮಾಣಗಳನ್ನು ಬದಿಗಿಟ್ಟು ಅವು ಸೃಷ್ಟಿಯಾದ ಕಾಲದ ‘ಸಾವಯವ’ ಹಾಗೂ ‘ಒತ್ತಡಗಳು’  ಇತ್ಯಾದಿ ಅಂಶಗಳನ್ನೇ ಒಂದು ವೇಳೆ ಆಧರಿಸಿದೆವು ಎಂದಿಟ್ಟುಕೊಳ್ಳೋಣ. ಆಗಲೂ ‘ಸಾವಯವ’ ಹಾಗೂ ಒತ್ತಡಗಳು ಇರುವ ಎಲ್ಲ ಕಡೆಗೆ ಜಾತಿ ವಿರೋಧಿ ನಿಲುವೇ ಹುಟ್ಟಿಕೊಳ್ಳುತ್ತದೆ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವೇ? ಅದೇ ಏಕೆ ಹುಟ್ಟಿಕೊಳ್ಳುತ್ತದೆ? ಅದು ಜಾತಿ ವಿರೋಧಿ ನಿಲುವೇ ಏಕಾಗಬೇಕು? ಎಂಬ ಸಮಸ್ಯೆಯೂ ಹಾಗೆಯೇ ಉಳಿಯುತ್ತದೆ. ಈ ರೀತಿಯಾಗಿ ಕಾಣದ ಸಂಗತಿಗಳೆಲ್ಲ್ಲವೂ ಜಾತಿ ವಿರೋಧಿ ಎಂದು ಹೇಳಲು ಸಾಧ್ಯವಿಲ್ಲ. ಹಾಗೊಮ್ಮೆ ಹೇಳಿದರೆ, ಅಂತಹ ಹೇಳಿಕೆಯನ್ನು ಪ್ರಾಯಶಃ ಈ ವಿದ್ವಾಂಸರುಗಳೇ ಎಳಸು ಅಥವಾ ಅಪ್ರಬುದ್ಧ ಎಂದು ತಿರಸ್ಕರಿಸಬಹುದು. ಹೀಗೆ ವಚನಗಳ ಬಗ್ಗೆ ಮಾತನಾಡುವಾಗ ಅವುಗಳನ್ನು ಬಿಟ್ಟು ಅವುಗಳ ಸೃಷ್ಟಿಯ ಹಿನ್ನೆಲೆಗೆ ಸಂಬಂಧಿಸಿದಂತೆ ಹಲವಾರು ವ್ಯಾಖ್ಯಾನಗಳನ್ನು ನೀಡಬಹುದು. ಆದರೆ ಅವುಗಳು ಸಮಸ್ಯೆಯನ್ನು ಬಗೆ ಹರಿಸುವುದಿಲ್ಲ. ಬದಲಿಗೆ, ಇಂತಹ ವ್ಯಾಖ್ಯಾನಗಳು ವಚನಗಳು ಯಾವುದರ ಕುರಿತಾಗಿ ಹೇಳುತ್ತಿವೆ? ಎಂಬುದನ್ನೇ ಮತ್ತಷ್ಟು ಕಗ್ಗಂಟು ಮಾಡಿಬಿಡುತ್ತವೆ. ಹಾಗಾಗಿ, ವಿದ್ವಾಂಸರುಗಳು ನೀಡುವ ಸಾವಯವ ಹಾಗೂ ಒತ್ತಡದ ಸ್ಥಿತಿಯಂತಹ ಸಮರ್ಥನೆಗಳು ಕೇವಲ ಊಹೆಯ ರೂಪದಲ್ಲಿವೆಯೇ ವಿನಃ ಸಮರ್ಪಕವೆನಿಸುವುದಿಲ್ಲ. ಉಳಿದಿರುವ ಒಂದು ದಾರಿಯೆಂದರೆ ಭಾರತದ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಅಥವಾ ಈಗ ಟೀಕೆಗೆ ಗುರಿಯಾಗಿರುವ ‘ವೈದಿಕ’ ಎಂದು ಕರೆಯಲ್ಪಡುವ ಸಾಹಿತ್ಯಗಳಲ್ಲಿ “ವಚನಗಳಲ್ಲಿ ಬಂದಿರುವ ವಿಚಾರಗಳು ಕಾಣುವುದಿಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ನಂತರದಲ್ಲಿ ಅವು ಹೇಗೆ ಜಾತಿವ್ಯವಸ್ಥೆಯ ವಿರೋಧವಾಗುತ್ತದೆ ಎಂಬುದನ್ನು ತೋರಿಸಬೇಕಾಗುತ್ತದೆ” (ರಾಜಾರಾಮ ಹೆಗಡೆ).

8. ಇನ್ನು ಮೂಲತಃ ಸಂಶೋಧನೆಗೆ ಉದ್ದೇಶ/ಹುನ್ನಾರಗಳನ್ನು ಆರೋಪಸಿರುವುದು ಡಂಕಿನ್‍ರವರ  ಲೇಖನಕ್ಕೆ ಬಂದ ಎಲ್ಲ ಪ್ರತಿಕ್ರಿಯೆಗಳಲ್ಲಿಯೂ ಸಾಮಾನ್ಯವಾದ ಸಂಗತಿ. ಆದರೆ ಸಂಶೋಧನೆಯೊಂದರ ವಾದವನ್ನು ಬದಿಗಿಟ್ಟು ಅದರ ಹಿಂದಿನ ಹುನ್ನಾರಗಳೇನು ಎಂದು ಹುಡುಕುವ ಪ್ರಯತ್ನದಲ್ಲಿ ಒಬ್ಬೊಬ್ಬ ವಿದ್ವಾಂಸರುಗಳು ಒಂದೊಂದು ರೀತಿಯ ಉದ್ದೇಶಗಳನ್ನು ಆರೋಪಿತ್ತಿದ್ದಾರೆ. ಉದಾ: ಕೆ.ವೈ. ನಾರಾಯಣ ಸ್ವಾಮಿಯವರು ತಮ್ಮ ಲೇಖನದುದ್ದಕ್ಕೂ ಹಲವು ಆರೋಪಗಳನ್ನು ಮಾಡಿರುತ್ತಾರೆ. ಹೀಗೆಯೇ, ಇನ್ನೂ ಸಾವಿರಾರು ಅಥವಾ ಅದಕ್ಕಿಂತ ಹೆಚ್ಚು ಉದ್ದೇಶ/ಹುನ್ನಾರ ಗಳನ್ನು ಯಾರಾದರು ಆರೋಪಿಸಬಹದು. ಆದರೆ ಇವುಗಳಲ್ಲಿ ಯಾವುದು ಸರಿ ಎಂದು ತಿಳಿಯುವುದಾದರೂ ಹೇಗೆ? ಎಂಬುದು ತೀರಾ ಅಸ್ಪಷ್ಟವಾಗಿದೆ.
ಈ ಪ್ರಕ್ರಿಯೆಯಲ್ಲಿ ಕಂಡುಬರುವುದೇನೆಂದರೆ, ಈ ಉದ್ದೇಶ/ಹುನ್ನಾರ ಇತ್ಯಾದಿ ಅನುಮಾನಗಳು ಪ್ರಸ್ತುತ ಸಂಶೋಧನೆಯಿಂದ ಹೊರಡುವ ಬದಲಿಗೆ ವಿಮರ್ಶಕರ ಪೂರ್ವಾಗ್ರಹದಿಂದ ಬರುತ್ತಿವೆ ಎಂಬುದು. ಅಂದರೆ, ಈ ರೀತಿಯಾಗಿ ಹುನ್ನಾರ/ಉದ್ದೇಶಗಳನ್ನು ಆರೋಪಿಸುವ ಪ್ರಕ್ರಿಯೆಯಲ್ಲಿ ಸ್ವತಃ ತಮ್ಮ ತಮ್ಮ ಅನುಮಾನಗಳೇ ಆ ಸಂಶೋಧನೆಯ ಉದ್ದೇಶಗಳಾಗಿವೆ ಎಂದು ಆರೋಪಿಸುತ್ತಿರುವುದು ಕಂಡುಬರುತ್ತದೆ. ಇವುಗಳನ್ನು ಡಂಕಿನ್ ಮತ್ತು ಬಾಲುರವರ ಸಂಶೋಧನೆಯಲ್ಲಿಯೇ ಯಾರಾದರು ತೋರಿಸಿದರೆ ಸಮರ್ಥನೀಯವೆನಿಸಬಹುದು. ಆದರೆ ಇವರ ವಾದಗಳನ್ನು ಪರಿಶೀಲಿಸಿದರೆ ಅಲ್ಲೆಲ್ಲೂ ಈ ಉದ್ದೇಶ/ಹುನ್ನಾರಗಳು ಕಾಣಸಿಗುವುದಿಲ್ಲ. ಬದಲಿಗೆ, ಅಲ್ಲಿ ತಾರ್ಕಿಕ ಮತ್ತು ಸೈದ್ಧಾಂತಿಕ ನಿರ್ಣಯಗಳು, ಪರಿಣಾಮಗಳು ಕಂಡುಬರುತ್ತವೆ. ಅದು ಲೇಖಕನ ಸ್ವ ಅಂಶಗಳಲ್ಲ. ಬದಲಿಗೆ, ವೈಜ್ಞಾನಿಕ ಸಂಶೋಧನೆಯೊಂದು ಒಳಗೊಂಡಿರಬೇಕಾದ ಮುಖ್ಯ ಗುಣವೇ ಆಗಿದೆ. ಇದನ್ನು ಸಂಶೋಧನೆಯ ಕುರಿತಾದ ತಾತ್ವಿಕ ಜಿಜ್ಞಾಸೆಗಳು ದೃಡಪಡಿಸುತ್ತವೆ.

9. ಹಾಗಾದರೆ, ಈ ರೀತಿಯ ಹಲವಾರು ಹುನ್ನಾರ/ಉದ್ದೇಶಗಳು ಎಲ್ಲಿಂದ ಬರುತ್ತಿವೆ? ಇವುಗಳು ‘ಆರೋಪಿಸುವವರಲ್ಲಿ’ ಮಾತ್ರವೇ ಕಂಡುಬರಲು ಸಾಧ್ಯ. ಅದು ಅವರು ನಂಬಿಕೊಂಡಿರುವ ಐಡಿಯಾಲಜಿಯ ಚೌಕಟ್ಟಿನಿಂದ ರೂಪುಗೊಳ್ಳುತ್ತದೆ. ಹಾಗಾಗಿ, ಅವು ವೈಜ್ಞಾನಿಕ ಸಂಶೋಧನೆಯೊಂದರ ಪ್ರತಿಪಾದನೆಗಳನ್ನು, ಪರಿಣಾಮಗಳನ್ನು ತಿರಸ್ಕರಿಸುತ್ತವೆ. ಆದ್ದರಿಂದಲೇ ಈ ರೀತಿಯ ಐಡಿಯಾಲಜಿಕಲ್ ಧೋರಣೆಗಳು ಸತ್ಯದ ಬಗೆಗೆ ಕುರುಡಾಗುತ್ತವೆ. ವೈಜ್ಞಾನಿಕ ಸಂಶೋಧನೆಗಳು ಈ ಸಮಸ್ಯೆಯನ್ನು ಎದುರಿಸುವುದಿಲ್ಲ. ಅಂದ ರೆ ಎಂ.ಎಸ್. ಆಶಾದೇವಿಯವರು ಹೇಳುವ ರೀತಿಯಲ್ಲಿ ಐಡಿಯಾಲಜಿ ಮತ್ತು ವೈಜ್ಞಾನಿಕ ಸಂಶೋಧನೆಗಳು ಒಂದೇ ಅಲ್ಲ. ಅವೆರಡು ಸ್ವರೂಪದಲ್ಲಿ ಬೇರೆ ಬೇರೆಯೇ ಆಗಿವೆ. ವಿಜ್ಞಾನ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುತ್ತದೆ. ಐಡಿಯಾಲಜಿಯು ವಚನಗಳನ್ನು ಹೀಗೆಯೇ ನೋಡಬೇಕೆಂಬ ಆಶಾದೇವಿಯವರು ಹೇಳುವಂತಹ ‘ಕಣ್ಕಟ್ಟ’ನ್ನು ಹೇರಿಬಿಡುತ್ತದೆ. ಉದಾ: ಮೊಗಳ್ಳಿ ಗಣೇಶ್‍ರವರು ವಚನ ಚಳುವಳಿಯನ್ನು ಜಾತ್ಯಾತೀತತೆಯ ಭಾಗವಾಗಿ ಗಮನಿಸಬೇಕು ಎನ್ನುತ್ತಾರೆ. ಎಸ್. ಜಿ. ಸಿದ್ಧರಾಮಯ್ಯನವರು ವರ್ಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ವಚನ ಚಳುವಳಿಯ ಅರ್ಥೈಸುತ್ತಾರೆ. ಹೀಗೆಯೇ ಬಹುತೇಕ ವಿದ್ವಾಂಸರು ಹಲವು ರೂಪಗಳಲ್ಲಿ ವಚನಗಳನ್ನು ಜಾತಿವ್ಯವಸ್ಥೆಯ ಹಿನ್ನೆಲೆಯಲ್ಲಿಯೇ ಗ್ರಹಿಸುವುದು ಹಾಗೂ ಈ ರೀತಿಯಲ್ಲೇ ನೋಡಬೇಕೆಂಬ ನಿರ್ಬಂಧ ವಿಧಿಸುತ್ತಿರುವುದು ಸ್ಪಷ್ಟವಾಗಿಯೇ ಕಾಣುತ್ತದೆ.
ಈ ಮೇಲಿನ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಅವುಗಳು ಡಂಕಿನ್‍ರವರ ವಾದದ ವಿರೋಧಿ/ಟೀಕೆಯ ರೂಪದಲ್ಲಿ ತೋರುತ್ತವೆ. ಆದರೆ, ಅಲ್ಲಿ ಸಮರ್ಥನೆಯಲ್ಲಾಗಲೀ ಅಥವಾ ವಿರೋಧದಲ್ಲಾಗಲಿ ಯಾವ ಸುಸಂಬದ್ಧತೆಯೂ ಕಂಡುಬರುವುದಿಲ್ಲ. ಬದಲಿಗೆ, ಆರೋಪಗಳು ಮಾತ್ರ ಹೇರಳವಾಗಿವೆ. ವಿಲಕ್ಷಣವೆಂದರೆ, ಮುಖ್ಯವಾಗಿ ಅಲ್ಲಿ ಚರ್ಚಿಸಬೇಕಾದ ವಾದವೇ ಕಾಣೆಯಾಗಿದೆ. ಆದರೆ, ಮತ್ತೊಂದು ರೀತಿಯಲ್ಲಿ ಈ ಪ್ರತಿಕ್ರಿಯೆಗಳು ಡಂಕಿನ್‍ರವರ ವಾದಕ್ಕೆ ಹತ್ತಿರವೂ ಆಗಿವೆ. ಇದು ಅವುಗಳಲ್ಲಿನ ವೈರುಧ್ಯವೂ ಆಗಿವೆ. ಅಂತಹ ಅಂಶಗಳನ್ನು ಈ ಮುಂದಿನಂತೆ ನೋಡಬಹುದು.

1. ಆಧ್ಯಾತ್ಮಿಕ ನಿಲುವು: ಕಲ್ಬುರ್ಗಿಯವರು ವಚನ ಚಳುವಳಿ ಸಂದರ್ಭದಲ್ಲಿ ಅನಿಕೇತನ ಆಧ್ಯಾತ್ಮ ಮಾರ್ಗವೊಂದು ಅಸ್ತಿತ್ವಕ್ಕೆ ಬಂದಿತು ಎನ್ನುತ್ತಾರೆ. ಇದೇ ರೀತಿಯಾಗಿ, ಮುರುಘಾ ಶರಣರು, ಹೆಚ್. ಎಲ್. ಪುಷ್ಪ ಹಾಗು ಎಂ. ಎಸ್. ಆಶಾದೇವಿಯವರು ತಮ್ಮ ಪ್ರತಿಕ್ರಿಯೆಯಲ್ಲಿ ವಚನ ಸಾಹಿತ್ಯದಲ್ಲಿನ ಆಧ್ಯಾತ್ಮಿಕ ನಿಲುವ ನ್ನು ಮನಗಂಡಿರುವುದು ಕಂಡುಬರುತ್ತದೆ.
ಇದು ಪ್ರಸ್ತುತ ಡಂಕಿನ್‍ರವರ ಸಂಶೋಧನೆಯು ವಚನ ಸಾಹಿತ್ಯಕ್ಕೆ ನೀಡುತ್ತಿರುವ ಪರ್ಯಾಯ ವಿವರಣೆಗೆ ತೀರಾ ಹತ್ತಿರವಾಗಿದೆ ಎಂದೇ ಹೇಳಬಹುದು. ಅಂದರೆ ವಚನ ಸಾಹಿತ್ಯವನ್ನು ಈ ಮೊದಲಿನ ಒಪ್ಪಿತ ತಿಳುವಳಿಕೆಗೆ ಬದಲಾಗಿ ಹೇಗೆ ಅರ್ಥೈಸಬಹುದು? ಅದರ ಆಶಯಗಳೇನು ಅಥವಾ ಅದು ಯಾವುದರ ಕುರಿತು ವಿವರಿಸುತ್ತಿದೆ? ವಚನ ಸಾಹಿತ್ಯವನ್ನು ಆಧ್ಯಾತ್ಮದ ನೆಲೆಯಲ್ಲಿ ಹೆಚ್ಚು ಸುಸಂಬಂದ್ಧವಾಗಿ ಅರ್ಥೈಸಲು ಸಾಧ್ಯ ಎಂಬುದನ್ನು ರಾಜಾರಾಮ ಹೆಗಡೆಯವರು ತಮ್ಮ (ಪ್ರಜಾವಾಣಿಗೆ ಬರೆದ) ಲೇಖನದಲ್ಲಿ ಸ್ಪಷ್ಟವಾಗಿಯೇ ಹೇಳುತ್ತಾರೆ. ಅಂದರೆ, ಮೇಲೆ ನೋಡಿದ ಕಲ್ಬುರ್ಗಿ ಇತ್ಯಾದಿಯವರ ವಾದಗಳು ಮೇಲ್ನೋಟಕ್ಕೆ ವಚನ ಸಾಹಿತ್ಯವನ್ನು ಜಾತಿವಿರೋಧಿ ಎಂದು ವಾದಿಸುತ್ತಿದ್ದರೂ ಕೂಡ ಅವುಗಳು ಡಂಕಿನ್‍ರವರು ಸೂಚಿಸುತ್ತಿರುವ ಪರ್ಯಾಯ ವಿವರಣೆಯನ್ನೇ ಒಪ್ಪಿಕೊಳ್ಳುತ್ತಿದ್ದಾರೆ.

2. ಪಾಶ್ಚಾತ್ಯರ ಅಥವಾ ರಿಲಿಜನ್ ನೆಲೆಯಲ್ಲಿ: ಪುಷ್ಪರವರವರೇ ಉಲ್ಲೇಖಿಸುವಂತೆ, “ಫ.ಗು. ಹಳಕಟ್ಟಿಯವರ ವಚನ ಸಂಪಾದನೆಯನ್ನು ಪ್ರಕಟಣೆಗೆ ಬ್ರಿಟೀಷ್ ಸರ್ಕಾರದ ಮುಂದೆ ಕೋರಿದಾಗ ಅವರು ವೀರಶೈವ ಧರ್ಮವನ್ನು ತಮ್ಮ ಪ್ರತಿಸ್ಪರ್ಧಿ ಎಂದು ತಿಳಿದು ಪ್ರಕಟಣೆಗೆ ಒಪ್ಪಲಿಲ್ಲ” ಎಂದು ಉಲ್ಲೇಖಿಸುತ್ತಾರೆ. ಇದು ಒಂದು ಉದಾಹರಣೆ ಮಾತ್ರವೇ ಆಗಿದ್ದರೂ ಇದರ ಇಂಗಿತವನ್ನು ಪುಷ್ಪರವರು ಗಮನಿಸಿದಂತೆ ತೋರುವುದಿಲ್ಲ.

ರಿಲಿಜನ್ನು ತನ್ನನ್ನು ಮಾತ್ರವೇ ಸತ್ಯವೆಂದು ಪ್ರತಿಪಾದಿಸುತ್ತದೆ. ಹೀಗೆಯೇ, ಪಾಶ್ಚಾತ್ಯರು ತಮ್ಮ ರಿಲಿಜನ್ನಿಗೆ ಹೊರತಾದ ಇತರ ಸಂಪ್ರದಾಯಗಳನ್ನು ತಮ್ಮ ವೈರಿ ರಿಲಿಜನ್ನುಗಳೆಂಬಂತೆಯೇ ಅನುಭವಿಸಿದರು. ಅವರು ಇಲ್ಲಿನ ಬ್ರಾಹ್ಮಣರನ್ನು ತಮ್ಮ ಪ್ರೀಸ್ಟ್‍ಗಳಿಗೆ ಹೋಲಿಸಿ, ಬ್ರಾಹ್ಮಣರ ಸಂಪ್ರದಾಯಕ್ಕೆ ಹೊರತಾದ ಭಕ್ತಿ ಪಂಥಗಳನ್ನು ಬ್ರಾಹ್ಮಣ ವಿರೋಧಿ ಎಂದು ಪರಿಗಣಿಸಿ ಚಿತ್ರಿಸಿರುವುದನ್ನು ಪೌರಾತ್ಯ ಸಂಕಥನವು ಸ್ಪಷ್ಟ ಪಡಿಸುತ್ತದೆ. ಈ ಸಂಕಥನವು ತನ್ನ ಪ್ರೊಟೆಸ್ಟಾಂಟ್ ತಿಳುವಳಿಕೆಯ ಹಿನ್ನೆಲೆಯಲ್ಲಿ ತಪ್ಪಾಗಿ ಭಾರತದ ಭಕ್ತಿ ಚಳವಳಿಗಳನ್ನು ಕೆಡುಕಿನ ವಿರುದ್ಧದ ಚಳುವಳಿಗಳು ಎಂದೇ ಚಿತ್ರಿಸಿದೆ. ಉದಾ: ಬುದ್ಧ. ಬಸವಣ್ಣ. ಹೀಗೆ ವಚನ ಸಾಹಿತ್ಯದ ಕುರಿತಾಗಿ ಅದು ಜಾತಿ ವಿರೋಧಿ ಎನ್ನುವ ಇಂದಿನ ವಾದಗಳು ಈ ವಸಾಹತುಶಾಹಿ ನಿರೂಪಣೆಗಳನ್ನೇ ಆಶ್ರಯಿಸಿವೆ ಎಂಬುದು ದೃಡಪಡುತ್ತದೆ. ಅಂದರೆ ಡಂಕಿನ್‍ರವರ ವಾದದ ಒಂದು ಪ್ರಮುಖ ಅಂಶವೆಂದರೆ, ಪಾಶ್ಚಾತ್ಯರು ಭಾರತವನ್ನು ತಮ್ಮದೇ  ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನೋಡಿದರ ಪರಿಣಾಮವಾಗಿ ವಚನ ಸಾಹಿತ್ಯವು ಬ್ರಾಹ್ಮಣರ ಮತ್ತು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿ ಎಂಬಂತೆ ಬಿಂಬಿಸಲ್ಪಟ್ಟಿತು. ಈ ವಾದಕ್ಕೆ ಒಂದು ಉದಾಹರಣೆ ಎಂದರೆ ಪುಷ್ಪರವರ ಉಲ್ಲೇಖ: ಬ್ರಿಟೀಷರು ಲಿಂಗಾಯತರನ್ನು ಒಂದು ರಿಲಿಜನ್ ಎಂದು ಪರಿಗಣಿಸಿದರು ಮಾತ್ರವಲ್ಲ ವೈರಿ ಎಂದು ಭಾವಿಸಿದರು ಎನ್ನುತ್ತಾರೆ.

3. ಜಾತಿವ್ಯವಸ್ಥೆಯ ಚೌಕಟ್ಟು: ಮೇಲೆ ನೋಡಿಂದಂತೆ (9ನೇ ಅಂಶದಲ್ಲಿ), ವಿದ್ವಾಂಸರುಗಳು ವಚನ ಸಾಹಿತ್ಯವನ್ನು ಜಾತಿವ್ಯವಸ್ಥೆಯ ವಿರೋಧಿ ಎಂಬುದಾಗಿಯೇ ನೋಡಬೇಕು ಎಂಬ ನಿಬಂಧನೆಯನ್ನು ವಿಧಿಸುತ್ತಿರುವುದು ಸ್ಪಷ್ಟವಾಗಿಯೇ ಇದೆ.ಹೀಗೆ, ಮೇಲಿನ ಎಲ್ಲ (ಉದ್ದೇಶ/ಹುನ್ನಾರಗಳನ್ನು ಹೊರತು ಪಡಿಸಿ) ವಚನ ಚಳುವಳಿ ಜಾತಿವ್ಯವಸ್ಥೆಯ ವಿರೋಧಿ ಚಳುವಳಿಯೇ ಆಗಿದೆ ಎಂಬ ಬೌದ್ಧಿಕ ಸಮರ್ಥನೆಗಳು ನಮಗೆ ಅರ್ಥವಾಗಲು ಜಾತಿವ್ಯವಸ್ಥೆ ಎಂಬ ಸಂಗತಿಯೊಂದರ ಅಸ್ತಿತ್ವವನ್ನು ಪೂರ್ವ ನಿಬಂಧನೆಯಾಗಿ ಇಟ್ಟುಕೊಳ್ಳಲೇಬೇಕು. ಹಾಗೂ ಈ ಎಲ್ಲ ‘ವಾದ’ಗಳು ಸುಸಂಬದ್ಧವಾಗಿ ಕಾಣುವುದು ಜಾತಿವ್ಯವಸ್ಥೆಯ ಸಿದ್ಧಾಂತದ ಚೌಕಟ್ಟಿನಲ್ಲಿ ಮಾತ್ರವೇ ಆಗಿದೆ. ಅಂದರೆ ವಚನಗಳು ಜಾತಿವಿರೋಧಿ ಎಂಬ ನಿಲುವು ವಚನಗಳ ಅಧ್ಯಯನದ  ಪೂರ್ವದಲ್ಲೇ ಇರುವಂತಹ ನಿಲುವಾಗಿದ್ದು, ಅದು ವಚನಗಳ ಅಧ್ಯಯನದಿಂದ ಹುಟ್ಟುವ ನಿಲುವಲ್ಲ. ಬದಲಿಗೆ, ಈ ಪೂರ್ವನಿಬಂಧನೆ ಇಟ್ಟುಕೊಂಡು ಅಧ್ಯಯನ ನಡೆಸಿರುವುದರಿಂದ ಆ ಅಧ್ಯಯನಗಳು ಪೂರ್ವನಿಬಂಧನೆಗೆ ಆಧಾರ ಒದಗಿಸುವ ಕೆಲಸಮಾಡುತ್ತಿವೆಯಷ್ಟೇ. ಹಾಗೂ ಆ ನಿಂಬಂಧನೆಯಿಂದಾಗಿ ವಚನ ಸಾಹಿತ್ಯ ಜಾತಿವಿರೋಧಿ ಎಂಬಂತೆ ಕಾಣತೊಡಗಿದೆ. ವಿಪರ್ಯಾಸವೆಂದರೆ, ಡಂಕಿನ್‍ರವರು ಹೇಳುತ್ತಿರುವುದು ಇದನ್ನೇ.

ಕಳೆದ ಕೆಲವು ಶತಮಾನಗಳಿಂದ ಜಾತಿವ್ಯವಸ್ಥೆಯು ನಮ್ಮ ಸಮಾಜವನ್ನು ಅರಿಯುವ ಚೌಕಟ್ಟಾಗಿದೆ. ಇದು ನಮ್ಮ ಅನುಭವಗಳನ್ನು ತನ್ನದೇ ರೀತಿಯಲ್ಲಿ ಅರ್ಥೈಸುವಂತೆ ಮಾಡಿದೆ. ಈ ಚೌಕಟ್ಟಿನಲ್ಲಿ 12ನೇ ಶತಮಾನದ ಸಂದರ್ಭದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯವನ್ನು ಅರ್ಥೈಸುವುದರ ‘ಔಚಿತ್ಯ’ ಉಂಟಾಗಿದೆಯಷ್ಟೇ. ವಚನ ಸಾಹಿತ್ಯವು ಇಂದು ನಾವು ಮಾತನಾಡುತ್ತಿರುವ ಜಾತಿವ್ಯವಸ್ಥೆಯ ಕುರಿತಾಗಿಯೇ ನಡೆದಿದೆ ಎನ್ನುವುದಾದರೆ 12 ನೇ ಶತಮಾನದ ಜನರ ಅನುಭವ ಹಾಗೂ ನಮ್ಮ ಸಮಾಕಾಲೀನ ಅನುಭವ ಒಂದೇ ಆಗಿರಬೇಕೆಂಬ ನಿಬಂಧನೆಯನ್ನೂ ಇಟ್ಟುಕೊಂಡಿರಲೇಬೇಕಾಗುತ್ತದೆ. ಆದರೆ, ಪ್ರಸ್ತುತ ವಿದ್ವಾಂಸರೇ ಹಲವೆಡೆ ಹೇಳುವಂತೆ ಭಾರತೀಯ ಸಮಾಜದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ (ಉದಾ: ಟಿ. ಆರ್. ಚಂದ್ರಶೇಖರ್, 2005-190). ಒಂದೊಮ್ಮೆ ಆ ನಿಬಂಧನೆಯನ್ನು ಇಟ್ಟುಕೊಂಡರೂ ಅಂದಿನವರ ಅನುಭವದ ಕುರಿತು ನಮ್ಮ ಸಮಕಾಲೀನ ಚೌಕಟ್ಟಿನಲ್ಲಿಯೇ ವಿವರಿಸುವ ಸಾಧ್ಯತೆಯಿದೆ. ಏಕೆಂದರೆ, ನಮ್ಮ ಬಳಿ ಇರುವುದು ಪೂರ್ವನಿರ್ಧಾರಿತ ಚೌಕಟ್ಟು ಮಾತ್ರ. ಇದು ಅಂದಿನವರ ಅನುಭವದ ಬಗೆಗೆ ಅನಿಶ್ಚಿತ, ಅಸ್ಪಷ್ಟ ಊಹೆಗಳಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ. ಅವುಗಳ ಪರಿಶೀಲನೆಗೆ ಮಾತ್ರ ನಮ್ಮ ಬಳಿ ಯಾವುದೇ ವೈಜ್ಞಾನಿಕ ಮಾನದಂಡಗಳೂ ಇಲ್ಲ. ಹಾಗೆಯೇ, ವಚನ ಸಾಹಿತ್ಯದಲ್ಲಿ ಈಗ ಕೆಳಜಾತಿ ಎಂದು ಗುರುತಿಸಲ್ಪಡುವವರನ್ನು ಕೆಲವೆಡೆ ನಿಂದಿಸುವ, ಗುಡಿ ಸಂಸ್ಕೃತಿಯನ್ನು ನಿರಾಕರಿಸುವ ಅಥವಾ ದೇವಾಲಯ ಪ್ರವೇಶದಂತಹ ವಿದ್ಯಮಾನಕ್ಕೆ ಮಹತ್ವ ನೀಡದ, ಪರಸ್ತ್ರೀ ಸಂಗದ ವಿಚಾರ ಹಾಗೂ ಜಾತಿಯ ವಿಚಾರಕ್ಕೆ ಸಂಬಂಧ ಪಡದ ಅನೇಕ ವಿಚಾರಗಳೂ ಕಂಡುಬರುತ್ತವೆ. ಹಾಗೂ ಇಂತಹದೇ ಇನ್ನೂ ಅನೇಕ ವಿಚಾರಗಳು ವಚನ ಸಾಹಿತ್ಯವನ್ನು ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ವಿವರಿಸುವುದಕ್ಕೆ ವೈರುಧ್ಯವಾದ ವಿಚಾರಗಳಾಗಿವೆ. ಈ ರೀತಿಯಾಗಿ ಜಾತಿವ್ಯವಸ್ಥೆಯ ವಿವರಣಾ ಚೌಕಟ್ಟು ವಸ್ತುನಿಷ್ಟವಾಗಿ ವಚನ ಸಾಹಿತ್ಯವನ್ನು ಅರಿಯಲು ತಡೆಗೋಡೆಯಾಗಿದೆ.
ಈ ಮೇಲಿನ ಎಲ್ಲ ಪ್ರತಿಕ್ರಿಯೆಗಳ ಸ್ವರೂಪವನ್ನು ಗಮನಿಸಿದರೆ, ಅವುಗಳು ಡಂಕಿನ್‍ರವರ ವಾದದ ಕೇಂದ್ರ ವಿಚಾರದಿಂದ ಸ್ವಲ್ಪ ದೂರವೇ ಉಳಿದಿವೆ ಎಂದು ಹೇಳಬಹುದು. ವಿಪರ್ಯಾಸದ ಸಂಗತಿಯೆಂದರೆ, ಈ ಪ್ರತಿಕ್ರಿಯೆಗಳು ಮೇಲ್ನೋಟಕ್ಕೆ ಡಂಕಿನ್‍ರವರ ವಾದಕ್ಕೆ ಟೀಕೆಗಳಂತೆ ಕಂಡರೂಕೂಡ ಅವು ಪ್ರಜ್ನಾಪೂರ್ವಕವಾಗಿಯೋ ಅಥವಾ ಅಪ್ರಜ್ನಾಪೂರ್ವಕವಾಗಿಯೋ, ಪ್ರಸ್ತುತ ವಾದಕ್ಕೆ ಸಮರ್ಥನೆಗಳನ್ನು ಒದಗಿಸಿರುವುದು. ಅಲ್ಲದೇ, ಕನ್ನಡ ಸಂಶೋಧನಾ ಜಗತ್ತಿನಲ್ಲಿ ಬಂದ ಹೊಸ ವಾದವೊಂದರ ಕುರಿತಾಗಿ ನಡೆಯಬೇಕಾದ ಮುಖ್ಯ ಚರ್ಚೆಯು ಆರೋಪಗಳಲ್ಲೇ ಬಳಲುತ್ತಿರುವುದು ಸಹಾ ಗಮನಿಸಬೇಕಾದ ಅಂಶವೇ ಆಗಿದೆ.

15 ಟಿಪ್ಪಣಿಗಳು Post a comment
 1. Vijay Boratti (Mysore University)
  ಏಪ್ರಿಲ್ 17 2013

  this is my reply to P.V. Shivakumar’s defense of Dunkin Jalki’s thesis on vachanas. actually this was published in Praja Vani. so i am just copying it and pasting it here (with a few changes). the following questions and issues are also hurled at Shivakumar. will he take the responsibility to answer the questions convincingly? ( sorry i cannot type in kannada due to my technical ignorance) :

  G.S. Sadananda has written in support of Dunkin’s research and seems to be thrilled at the thesis done by the latter (shiva kumar also).
  He also urges us to engage with him academically in stead of finding conspiracy
  theories. Perhaps he must have read his Ph.D. thesis. He (Shivakumar also) is also carried away
  by the arguments of Dunkin like Shiva
  Prakash and Rajaram Hegde without verifying how the archival materials are read
  by Dunkin Jalki conveniently. I would go to the extent of saying that Dunkin moulds his
  archival materials in accordance with his theoretical framework. They do (including Shivakumar) not
  even seem to interrogate fundamental problems with Dunkin’s theoretical framework
  and “manipulation” of archival materials. I have already written in praja vani that what
  Dunkin writes in his thesis and what others argue in favour of his are showing gross
  indifference to what happened in colonial Karnataka (shivakumar also does show gross indifference to colonial karnataka and its complex history). Dunkins seems to show that
  he has more archival materials than me. How does it matter “who has how much”?
  How do we read archival materials is important. What goes into making and
  re-making them? Has anybody tried to question Dunkin’s selective readings of
  archival materials which are the bedrock of his thesis? To do this, one should
  have a comprehensive knowledge of what all happened in colonial Karnataka. After
  knowing this we need to theorise whatever we collect in the form of archival
  materials. I am not sure if Sadanand, Rajaram Hegde or Shiva Prakash (including Shiva kumar) are
  informed enough about colonial Lingayaths or vachana history in colonial period. They (shiva kumar also) seem to have seen it through
  the lens of Dunkin who very conveniently, simplistically and uncomplicatedly employs
  archival material to substantiate his theoretical framework in his thesis. Shiva kumar should take steps to see through the politics (processes) of archival study of Dunken Jalki. Just because others have written against Dunken Jalki, Shiva Kumar should not be with Jalki or support him. Shiva Kumar must see and understand history rationally, judiciously and objectively. otherwise he will also be simplistic and reductionist like Dunkin Jalki. I ask shiva kumar earnestly to read Dunkin Jalki’s thesis carefully, closely and understand where all he becomes silent (very intentional); where he twists archival sources (to suit his theoretical framework); where he misinterprets for argument’s sake; where he misguides the readers, etc. Dunkin Jalki cannot twist history for the sake of his ph.d. thesis. he needs to be impartial or he should admit that he has used archival materials to suit the theoretical framework of the thesis. to reiterate, Jalki’s theoretical/methodological base is extremely problematic. Will Shivakumar understand this point? (much about Jalki’s ph.d. in course of time)

  ಉತ್ತರ
  • ....kannda matadu.
   ಏಪ್ರಿಲ್ 29 2013

   F… your “technical ignorance”. Why cant you google “How to type in kannada” at the least? This is rather arrogance. What kind of reaserch methodology have been taught to you if you are incapable of googling things out? Atleast, gake a look at http://www.kannadaslate.com.

   For your information, it is very hard to read, follow, and to understand your english.

   ಉತ್ತರ
   • santosh anand
    ಮೇ 21 2013

    Its not arrogance its your ignorance. You give ur advice to Dunkin who wrote his thesis in English.

    ಉತ್ತರ
 2. ಏಪ್ರಿಲ್ 20 2013

  ವಿಜಯ ಬೋರಟ್ಟಿ

  ೧. ಪಿತೂರಿಯನ್ನು ಹುಡುಕಿ ಸಂಶೋಧನೆ ಮಾಡಬೇಡಿ ಎಂದು ಹೇಳುವುದು ನಿಜವಾಗಿಯೂ ಅಸಭ್ಯತನ, ಸಂಶೋಧನೆಯ ಮೂಲಕ ಕಂಡುಕೊಡಿರುವ ವಾದದಲ್ಲಿ ಏನು ತೊಂದರೆ ಇದೆ ಹೇಳಿ, ಆನಂತರ ಎಲ್ಲಾ ಪಿತೂರಿಗಳನ್ನು ಹೊರತಗೆಯಬಹುದು.

  ೨ ಆರ್ಕೈವಲ್ ಗ್ರಂಥಗಳನ್ನು ಡಂಕಿನ್ ನೋಡಿಯೇ ಇಲ್ಲ ಎಂದು ಬರೆದಿದ್ದಿರಿ, ಅದಕ್ಕೆ ಅವರು ೧೨ ಶತಮಾನದಿಂದಲೂ ಇರುವ ಗ್ರಂಥಗಳನ್ನು ನೋಡಿದ್ದೇನೆ ಎಂದೋಡನೆ, ಯಾರು ಬಳಿ ಹೆಚ್ಚು ಇದೆ ಎಂಬುದು ಮುಖ್ಯವಲ್ಲ ಎನ್ನುತ್ತೀರಿ.. ಇದೇನು ಪಲಾಯನ ವಾದವೇ? ಹಾಗೂ ಯಾವುದೇ ಪುರಾತನ ಗ್ರಂಥಗಳನ್ನು ಒಂದು ಸಿದ್ಧಾಂತದ ಒಳಗೆ ಓದದಿದ್ದರೆ ಮತ್ತೆಂತ ಸಂಶೋಧನೆ ಮಾಡುವುದು, ಮತ್ತು ಹಾಗೆ ಮಾಡಲು ಹೇಗೆ ಸಾಧ್ಯ. ಹಾಗೂ ಒಂದು ಹೈಪೋಥೀಸಿಸ್ ನ್ನು ಬೆಳೆಸಿಕೊಂಡೆ ಆರ್ಕೈವಲ್ ಗ್ರಂಥಗಳನ್ನು ಪರೀಶೀಲನೆ ಮಾಡಬೇಕಾಗುತ್ತದೆ, ಇದು ಸಂಶೋಧನೆಯ ಕುರಿತು ಪ್ರಾಥಮಿಕ ಮಾಹಿತಿ ಗೊತ್ತಿದ್ದವರಿಗೂ ತಿಳಿದಿರುತ್ತದೆ. ಆದರೆ ತಾವು ಅದಕ್ಕೆ ತೀರ ತದ್ವಿರುದ್ಧವಾಗಿ ಹೇಳುತ್ತಿದ್ದೀರಿ. ಪ್ರಾಚೀನ ಗ್ರಂಥಗಳನ್ನು ಸಂಶೋಧನೆಯ ಉದ್ದೇಶದಿಂದ ಓದಬೇಕಾದರೆ ಯಾವುದಾದರೂ ಸೈದ್ಧಾಂತಿಕ ಚೌಕಟ್ಟು ಬೇಕೇಬೇಕಾಗುತ್ತದೆ.ಏಕೆಂದರೆ ಸೈದ್ಧಾಂತಿಕ ಚೌಕಟ್ಟು ಆ ಗ್ರಂಥಗಳನ್ನು ವಿವರಿಸಲು ಸಹಾಯ ಮಾಡುತ್ತದೆ. ಇದುವರೆಗೂ “ಜಾತಿವ್ಯವಸ್ಥೆ”ಯ ಚೌಕಟ್ಟಿನಿಂದಲೇ ವಚನಗಳನ್ನು ಅರ್ಥೈಸಿಲ್ಲವೇ? ಹಾಗಾದರೆ ಅವರ ಮಾರ್ಗವೂ ತಪ್ಪು ಅನ್ನಿ. “ಜಾತಿವ್ಯವಸ್ಥೆಯ” ಸೈದ್ಧಾಂತಿಕ ಚೌಕಟ್ಟು ಇರದಿದ್ದರೆ ವಚನಗಳು ಜಾತಿ ವಿರೋಧ ನಡೆದ ಚಳುವಳಿ ಎಂದು ಹೇಗೆ ಸಾಬೀತು ಪಡಿಸಲು ಸಾಧ್ಯ?

  ೩. ಆರ್ಕೈವಲ್ ಗ್ರಂಥಗಳಲ್ಲಿ ಕೆಲವೇ ಕೆಲವನ್ನು ಆಯ್ಕೆ ಮಾಡಿಕೊಂಡಿರುವುದರ ಕುರಿತು ಇರುವ ತಕರಾರು ನಿರುಪಯುಕ್ತ. ಏಕೆಂದರೆ ಒಂದು ಲಕ್ಷ ಗ್ರಂಥಗಳಿವೆ ಎಂದಿಟ್ಟುಕೊಳ್ಳಿ, ಅವೆಲ್ಲವನ್ನೂ ಓದಲು ಒಂದು ಜನ್ಮದಲ್ಲಂತೂ ಸಾಧ್ಯವಿಲ್ಲ, ಬದಲಿಗೆ ಕೆಲವಾರು ಗ್ರಂಥಗಳನ್ನು ಆಯ್ಕೆ ಮಾಡಿಕೊಂಡು ಒಂದು ಹೈಪೋಥೀಸಿಸ್ ನ್ನು ಬೆಳೆಸಬಹುದು, ಅದರ ಮೂಲಕ ವಿವರಣೆಯನ್ನು ಕಟ್ಟಬಹುದು, ನಂತರದ ಸಂಶೋಧನೆಗಳು ಆ ಹೈಪೋಥೀಸಿಸ್ ನ್ನು ಬಳಸಿಕೊಂಡು ಇರುವ ಗ್ರಂಥಗಳನ್ನು ಪರೀಶೀಲನೆ ಮಾಡಿ ಆ ಹೈಪೋಥೀಸಿಸ್ ತಪ್ಪಾದುದು ಅಥವಾ ಸರಿಯಾದುದು ಎಂದು ನಿರೂಪಿಸಬಹುದು, ಸಂಶೋಧನೆ ಅದರಲ್ಲಿಯೂ ವೈಜ್ಞಾನಿಕ ಸಂಶೋಧನೆ ನಡೆಯುವುದೇ ಹಾಗೆ ಸಾರ‍್. ನನ್ನ ಗುರುಗಳು ಯಾವಾಗಲೂ ಹೇಳುವ ಒಂದು ಉದಾಹರಣೆಯನ್ನು ನೋಡಿ, ನ್ಯೂಟನ್ ನ ತಲೆಯ ಮೇಲೆ ಒಂದು ಪ್ರದೇಶದಲ್ಲಿ ಹಣ್ಣು ಬಿತ್ತು, ಅದರ ಆಧಾರದ ಮೇಲೆ ಒಂದು ಹೈಪೋಥೀಸಿಸ್ ನ್ನು ಬೆಳೆಸಿದ, ಹಾಗಂತ ಅವನು ಜಗತ್ತಿನಾದ್ಯಂತ ಎಲ್ಲಾ ಕಡೆಯೂ ಬೀಳುತ್ತದೆ ಎಂಬುದನ್ನು ಪರೀಕ್ಷಿಸಿಲ್ಲ, ಇಸ್ರೇಲ್ ನಲ್ಲಿ ಭಾರತದಲ್ಲಿ ಪರೀಕ್ಷೆ ಮಾಡಿಲ್ಲ, ಹಾಗಾಗಿ ಅವನು ಗುರುತ್ವಾಕರ್ಷಣದ ಕುರಿತು ಹೇಳುವಾಗ ಎಲ್ಲಾ ಕಡೆ ನೋಡಿಲ್ಲದ ಕಾರಣ ಅವನ ಸಿದ್ಧಾಂತವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ.

  ೪. ಮತ್ತೆ ನನ್ನದೂ ಒಂದಿಷ್ಟು ಪ್ರಶ್ನೆ: ಡಂಕಿನ್ ರವರು ಹೇಗೆ ಚರಿತ್ರೆಯನ್ನು ತಿರುಚಿದ್ದಾರೆ? ಯಾವ ಚರಿತ್ರೆಯನ್ನು ತಿರುಚಿದ್ದಾರೆ? ಅವರ ಆರ್ಕೈವಲ್ ಸೋರ್ಸ್ ಹೇಗೆ ಸಮಸ್ಯಾತ್ಮಕವಾದುದು?

  ಉತ್ತರ
  • Vijay Boratti
   ಏಪ್ರಿಲ್ 20 2013

   Dear santhosh shetty,

   1) there is no doubt that most of the researchers do resort to some or the other theoretical framework. and there is also other case that some look into empirical or archival data to chage or re-shape theories. i adopt the second path and reflect upon the existing theories. not only that it is vice-versa.

   2) i have never talked about ‘pituri’ in my reply. it is your word which you are trying to put into my mouth. read my reply carefully and then come to coclusion. it is your gross oversight which has made you make unacceptable allegation against me (i.e. asabhyatana). perhaps, you need to refine your language. you other co-researcher also speaks in such objectionable language.

   3) No where have i said that dunkin has not looked into archival sources. show me where have said or written? i have said that dunkin has not comprehensively understood the archival sources collected by him. not only that he has misinterpreted and hidden some of the important details of the archival sources collected by him. i have all the sources that he has collected (of course except the 17th century). on the basis of this i have made statements. now it is upto to you to collecte those archival materials and do comparisions. my point is just this. he has tailored his archival sources to suit the theory (perhaps informed by belgium scholar. in fact, your dunkin has accepted that he is just elaborating his teacher’s (balagandhar) theory. read one of his replies written in online praja vani. he even has conceded that i am more original thinker than he is. i have my own problems with the term “original” in which your dunkin firmly believes in.

   4) i ask you to show me that lingayath literature or vachana sahitya is understood exclusively within ‘caste-system” framework UNIVERSALLY (as your dunkin argues in his thesis) in colonial karnataka? your blindness to colonial lingayath and its complexity makes you think so.

   5) tell me: should theory inform archival materials or should archival materials throw more light on the available theories? or should it be dialectical one? i believe theories and archival sources should change each other. theories should help us see or understand archival sources and at the same time, archival materials should go on changing theories if both are incompatible. any objective researcher will/should know this basic element of research. you seem to forget this point.

   6) it is true that no body can collect or see all the archival materials. any true researcher will know this commonsensical point. for this there is no need to listen to your teacher (whoever it is). some of the archival sources about lingayath/vachana literature are so “basic” to understanding history of modern vachana scholarship that, without them any study will be incomplete or uncomlicated. even my own thesis submitted to HCU in 2004 is incomplete due to discovery of new sources about vachana literature in recent times. even now i am puzzled to know that colonial lingayath literature is so complex. i am still struggleing to come to terms with its complexity. i am revising my theories about vachanas with every discovery. can you or your dunkin accept this fact and change the fingings? i too have not discovered everything. i too have not found all the archival materials. but to my thesis on vachana literature, i have collected some basic archival materials. moreover, it is not exclusively about how much is collected and how much is not collected. it is how it is interpreted or used for one’s thesis. i am least bothered about how much is collected and how much is not collected. that arguement is your dunkin’s. not mine. i reiterate that collecting all archival materials is not my contention or my urge. no body can exhaust all archival materials.

   7) your newton analogy is completely erroneous while understanding colonial vachana literature. think broadly and judiciously, you will know the limitatins of that analogy on your own. one of the moralities of vachana is that even if we have to question our Guru/teacher, we should not hesitate to do so. so rethink your guru/teacher’s analogy. universalising or homogenising colonialism or nationalism is a fundamental problem in your dunkin’s thesis.

   8) i have never said that his archival sources are problematic. i have contended that his interpretation of archival sources are problematic as he does indulge in selections, manipulations and misinterpretations. i have gone through all the archival sources that he has cited in his thesis. and i have come these conclusions on the basis of my readings.

   9) he has twisted archival sources to suit his theoretical framework. yes, i can say it again.

   10) you may be wondering i am making or repeating these statements without any strong base. your dunkin’s thesis-review done by me is already in circulation. it is sent across india (the way your dunkin has done) access it. and you will know what i mean by selective reading, manipulation and twisting of history.

   thanks for your reply. i like your gesture of engaging with me. but try to refine your language. very soon i am going to reply to balagangadhar and focus on the lacuna in his approach to spiritual way of reading vachanas.

   for more information ready my : Hiriyara Hiritana Hindenaayitu (kannada, kannada university, 2010) and The “Discovery” of Vachanas: Halakatti and Medieval Kannada literature in colonial karnataka (English, Kannada university, 2012).

   Vijay Boratti

   ಉತ್ತರ
 3. Vijay Boratti
  ಏಪ್ರಿಲ್ 20 2013

  i forgot to write. your dunkin stars with a hypothesis and tries to understand whether his hypothesis is right or wrong. while doing so, he comes to the conclusion that his hypothesis is justifiable in the light of his thesis. your dunkin’s hypothesis becomes justifiable as he tailors his archival or empirical findings according to his theoretical framework. that is why i have written (which is already in circulation) that there is a fundamental problem with his theoretical framework.

  ಉತ್ತರ
 4. Shanmukha
  ಏಪ್ರಿಲ್ 20 2013

  ವಿಜಯ್ ಭೋರಟ್ಟಿಯವರೇ…
  ಸಂಶೋಧನಾ ವಿಧಾನಗಳ ತಾಂತ್ರಿಕತೆಯ ಬಗ್ಗೆ ವಿಪರೀತ ಪಾಂಡಿತ್ಯ ಬಳಸಿ ವಾದಗಳನ್ನು ಬದಿಗೆ ಸರಿಸುವ ತಂತ್ರ ನನಗಂತೂ ಹೊಸದಲ್ಲ (ಅಂದ ಹಾಗೆ ಸಂತೋಷ್ ಹೇಳಿದ ಅವರ ಗುರುಗಳಲ್ಲಿ ನಾನೂ ಒಬ್ಬ) ಭಾರತದ ಪ್ರತಿಷ್ಟಿತ ಸಮಾಜವಿಜ್ಞಾನಗಳ ಸಂಶೋಧನಾ ಸಂಸ್ಥೆ ISEC ನಲ್ಲಿದ್ದ ಅನುಭವದಿಂದ ಈ ಎಲ್ಲಾ (ವಿಧಾನಗಳೂ) ತಂತ್ರಗಳೂ ನಮಗೆ ಕರಗತವೇ. ಪ್ರತಿಪಕ್ಷಗಳ ವಾದಗಳನ್ನು ಕೊಲ್ಲಲು ಅದು ಬಲು ಸುಲಭ ಮಾರ್ಗ. ಈ ತಂತ್ರಗಳು ಪಾಂಡಿತ್ಯ ಪ್ರದರ್ಶನಕ್ಕೆ ನೆರವಾಗಬಹದು; ಸತ್ಯದ ಹುಡುಕಾಟಕ್ಕಲ್ಲ. ಸಮಾಜ ವಿಜ್ಞಾನದ ಸಂಶೋಧಕರಾಗಿ ನಮಗೆ ಸತ್ಯದ ಹುಡುಕಾಟವಷ್ಟೇ ಮುಖ್ಯ. ಹಾಗಾಗಿ, ನಮ್ಮ ಪ್ರಶ್ನೆ ನೇರ ಮತ್ತು ಸರಳ. ನೀವು ಯಾವ ಕಾಲದ archival ಮೂಲಗಳನ್ನಾದರೂ ಅವಲಂಬಿಸಿ, ಯಾವ ಸೈದ್ದಾಂತಿಕ ಚೌಕಟ್ಟಾನ್ನಾದರೂ ಬಳಸಿ ಅಥವಾ ಬಳಸದಿರಿ, ನಮಗೆ ಅಭ್ಯಂತರವಿಲ್ಲ. ನಮ್ಮ ಕೋರಿಕೆ ಇಷ್ಟೆ; ವಚನಗಳು ಜಾತಿ/ಜಾತಿ ವ್ಯವಸ್ಥೆ ವಿರೋಧಿ ಚಳುವಳಿ ಎನ್ನುವುದನ್ನು ತೋರಿಸಿ. ಅಷ್ಟೆ!. ನಿಮ್ಮ ವಾದ ವೈಜ್ಞಾನಿಕ ವಾದವಾಗಿರ ಬೇಕು ಅಷ್ಟೇ. ಅಂದರೆ prove or disprove ಮಾಡುವ ಸಾಧ್ಯತೆಯ ಲಕ್ಷಣ ನಿಮ್ಮ ವಾದಕ್ಕಿರಬೇಕು.

  -ಡಾ.ಎ.ಷಣ್ಮುಖ

  ಉತ್ತರ
  • Vijay Boratti
   ಏಪ್ರಿಲ್ 20 2013

   Dear sir,

   i respect you as you are elder to me and you have more experienced than me. but elders also make mistakes. you have not got my points clearly. how? let me explain.

   i have never tried to prove or disprove if vachanas speak against caste or caste system. in fact some of my research findings in ph.d. (2004) or later on in my kannada or english books problematise the “taken for granted” views about vachanas. proving or disproving is not my concern.that is dunkin’s concern or his detractors’ concern. why should i do that? you may ask why dont you take it up? you may also criticise me for dodging this point. but should not one look into what happens in the thesis? whatever may be the concern of the thesis. others cannot decide what should one do or what should one not do. i have not decided what dunkin should do. i am just trying to point out many limitations in his thesis the excercise which you can also do in my case.

   dont you think that you are simplifying or reducing the entire energy and spirit of dunkin’s thesis to “if vachanas speak anti-caste or not”? he has written more than 300 pages of phd not to prove only this point. he engages with history. history of modern vachana/lingayath scholarship besides post-colonial happenings. i am interested in this point i.e. how does dunkin manipulate the history or historical sources. what all he hides and selects from within archival sources. i am not even bothered what all he chooses or not chooses. i am interested to understand why he does not choose or choose somethig. what does he do with that choice? one small question to you as you are more experienced than me.

   should theory inform empirical/archival sources? or archival sources should inform theory? or it is a dialectial one?

   thanks,

   Vijay Boratti
   University of Mysore

   ಉತ್ತರ
   • Shanmukha
    ಏಪ್ರಿಲ್ 20 2013

    ನಿಮ್ಮ ಕೊನೆಯ ಪ್ರಶ್ನೆಯಿಂದ ಆರಂಭಿಸುತ್ತೇನೆ.
    ಯಾವುದೇ ಥಿಯರಿಯು ಘಟನೆ/ಸಂಗತಿ/ವಿಧ್ಯಮಾನಗಳನ್ನು ವಿವರಿಸುವ ವಿವರಣೆ. ಯಾವ ಥಿಯರಿ ಈ ಘಟನೆ/ಸಂಗತಿ…. ಗಳನ್ನು ಹೆಚ್ಚು ಚೆನ್ನಾಗಿ ಅಂದರೆ ಅದು ಇರುವ ಹಾಗೆ ಅರ್ಥಮಾಡಿಸುತ್ತದೆಯೋ (ಅಥವಾ ಹತ್ತಿರದ ವಿವರಣೆಯಾಗಿರುತ್ತದೆಯೋ) ಅದು ಉಳಿದ ಥಿಯರಿಗಳಿಗಿಂತ ಉತ್ತಮ ಥಿಯರಿ ಎನಿಸಿಕೊಳ್ಳುತ್ತದೆ. ನಿಮ್ಮ ಪ್ರಶ್ನೆಯಲ್ಲಿ ಎಂಪಿರಕಲ್ ಮತ್ತು ಆರ್ಕೈವಲ್ ಗಳೆರಡೂ ಒಂದೇ ರೀತಿಯವು ಎನ್ನುವಂತೆ ಕೇಳಿದ್ದೀರಿ. ಅಲ್ಲ ಅದೆರಡೂ ಬೇರೆ ಬೇರೆ. ಹೇಗೆ? ಅದನ್ನು ತಿಳಿಯಲು ವಚನದ ಚರ್ಚೆಯನ್ನೇ ತೆಗೆದುಕೊಳ್ಳೋಣ.

    ಇಲ್ಲಿ ವಚನ ಚಳುವಳಿಗಳು ಜಾತಿ/ಜಾತಿ ವ್ಯವಸ್ಥೆಯ ವಿರೋಧದ ಚಳುವಳಿಗಳು ಎನ್ನುವುದು ಇದುವರೆಗಿನ ಪ್ರಭಾವೀ ಥಿಯರಿಯಾಗಿತ್ತು. ಬಾಲು ಮತ್ತು ಡಂಕಿನ್ ಇದನ್ನು ಅಲ್ಲಗಳೆದು ಅವು ಜಾತಿ/ವ್ಯವಸ್ಥೆಯ ವಿರುದ್ದದ ಚಳುವಳಿಗಳಲ್ಲ, ಅವು ಆಧ್ಯಾತ್ಮಿಕ ಚರ್ಚೆಗೆ ಸಂಬಂದಿಸಿದ್ದು ಎನ್ನುವ ಹೈಪೊಥಿಸಿಸ್ ಇಟ್ಟರು. ಹೈಪೊಥಿಸಿಸ್ ಅನ್ನು ಪರೀಕ್ಷಿಸಿ ಧೃಡ ಪಡಿಸಿದ ಮೇಲೆ ಅದು ಥಿಯರಿಯ ಸ್ವರೂಪ ಪಡೆಯುತ್ತದೆ. ಈ ಹೈಪೊಥಿಸಿಸ್ ಬೆಳಸಲು ಎಂಪಿರಿಕಲ್ (ಅಂದರೆ ಸಮಾಜದಲ್ಲಿನ ಘಟನೆ, ಸಂಗತಿ, or ವಿಧ್ಯಮಾನಗಳು) ಸಾಕ್ಷಿಗಳು ಸಹಾಯ ಮಾಡುತ್ತವೆ. ವಚನಗಳ ಸಂಧರ್ಭದಲ್ಲಿ ಎಂಪಿರಿಕಲ್ ಆಧಾರಗಳಾವುವು? ಅವು ಎರಡು. ಒಂದು ಅಂದಿನ ಮತ್ತು ಇಂದಿನ ಸಮಾಜ ಇರುವ ರೀತಿ. ಎರಡನೆಯದು, ವಚನಗಳೇ.

    ಇಂದಿನ ಸಮಾಜ ಹೇಗೆ ಆಧಾರವಾಗ ಬಲ್ಲದು ಎಂದರೆ ವಚನಗಳು ಜಾತಿ ವಿರೋಧಿಯಾಗಿದ್ದವು ಎನ್ನುವ ವಾದ ಭಾರತದಲ್ಲಿ ಜಾತಿವ್ಯವಸ್ಥೆ ಇದೆ ಎನ್ನುವ ಥಿಯರಿನ್ನಾದರಿಸಿದೆ. ನಮ್ಮ ತಂಡ ಕೈಗೊಂಡಿರುವ ಸಂಶೋಧನೆಯುಲ್ಲಿ ನಮ್ಮ ಸಮಾಜದಲ್ಲಿ ಜಾತಿವ್ಯವಸ್ಥೆ ಇದೆ ಎನ್ನುವ ಥಿಯರಿಗೆ ಆಧಾರವಿಲ್ಲ ಎಂದು ಕಂಡುಕೊಂಡೆವು. ಅದರಿಂದ ಜಾತಿವ್ಯವಸ್ಥೆಯೇ ಇಲ್ಲ ಎಂದಾದಲ್ಲಿ ವಚನಚಳುವಳಿ ಜಾತಿವ್ಯವಸ್ಥೆ ವಿರುದ್ದದ ಚಳುವಳಿ ಎನ್ನಲು ಸಾಧ್ಯವಿಲ್ಲ ಎನ್ನುವ ಹೈಪೊಥಿಸಿಸ್ ಬರುತ್ತದೆ. ಇನ್ನು ವಚನಗಳನ್ನು ಓದಿದರೆ ಜಾತಿ/ಕುಲಗಳ ಬಗ್ಗೆ, ಜಾತಿಗಳಲ್ಲಿರುವ (ಮುಖ್ಯವಾಗಿ ಬ್ರಾಹ್ಮಣರಲ್ಲಿರುವ) ಆಚರಣೆಗಳ ಬಗ್ಗೆ ಡಾಂಬಿಕೆತೆಗಳ ಬಗ್ಗೆ ತೆಗಳಿಕೆಯ ಇದೆಯೇ ವಿನಃ ಜಾತಿಗಳೇ ಇರಕೂಡದು, ಅವು ನಾಶವಾಗಬೇಕು ಎನ್ನುವ ರೀತಿಯಲ್ಲಿ ಅವು ಇಲ್ಲ. ಅದರಲ್ಲೂ ಅವೆಲ್ಲವೂ ಶಿವಶರಣರದ ಸಂಧರ್ಭದಲ್ಲಿ ತಮ್ಮೊಳಗೆ (ಶರಣರೆನಿಸಿಕೊಂಡ ಮೇಲೂ) ಜಾತಿ/ಕುಲಗಳ ಹೆಸರಿನಲ್ಲಿ ಕೀಳರಿಮೆ ಮೇಲರಿಮೆಗಳನ್ನು ತೋರಿಸಿಕೊಳ್ಳುವುದು ಅಜ್ಞಾನ ವೆನ್ನುವಂತೆ ಹೇಳಲ್ಪಟ್ಟಿವೆ. ಅಂದರೆ ಈ ಎರಡೂ ಎಂಫಿರಿಕಲ್ ಸಾಕ್ಷಿಗಳು ವಚನಗಳು ಜಾತಿ/ಜಾತಿವ್ಯವಸ್ತೆ ವಿರೋಧೀ ಚಳುವಳಿಗಳು ಎನ್ನುವ ಥಿಯರಿಗೆ ವಿರುದ್ದವಾಗಿವೆ.

    ಇವೆರಡೇ ವಚನಗಳ ಕುರಿತ ತೀರ್ಮಾನಕ್ಕೆ ಎಂಪಿರಕಲ್ ಸಾಕ್ಷಿಗಳಾದರೆ, ಆರ್ಕೈವಲ್ ಗಳೇನು?
    ವಚನಗಳ ವಾಸ್ತವದಲ್ಲಿ ಜಾತಿ/ಜಾತಿ ವ್ಯವಸ್ಥೆ ಚಳುವಳಿ ಅಲ್ಲ ಎಂದಾದರೆ ಈ ರೀತಿಯ ಥಿಯರಿ/ವಿವರಣೆ/ವಾದ/ನಂಬಿಕೆ ಏಕಿದೆ ಮತ್ತು ಅದು ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಬರುತ್ತದೆ. ಅಂದರೆ ಸೂರ್ಯನ ಸುತ್ತ ಭೂಮಿ ಸುತ್ತುತ್ತಿದ್ದರೂ ಸೂರ್ಯನೇ ಭೂಮಿಯ ಸುತ್ತುತ್ತಿದ್ದಾನೆ ಎನ್ನುವ ತಿಳುವಳಿಕೆ ಎಲ್ಲಿಂದ ಬರುತ್ತದೆ ಎನ್ನುವುದನ್ನು ವಿವರಿಸಬೇಕಿರುವಂತೆ ಇದೂ ಸಹ. ಇದನ್ನು ವಿಜ್ಞಾನದಲ್ಲಿ saving the phenomenon ಎನ್ನುತ್ತಾರೆ. ಜನರು ಮೂರ್ಖರು, ಮುಠ್ಠಾಳರು, ಗುಪ್ತ ಯೋಜನೆಯಿಂದ ಈ ರೀತಿಯ ತಪ್ಪು ವಿವರಣೆಗಳನ್ನು ನೀಡುವವರು ಎನ್ನದೇ ಅವರ ಆ ರೀತಿಯ ಭಾವನೆ ಸಹಜವಾಗಿದೆ ಎನ್ಮನುವಂತೆ ವಿವರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ವಚನಗಳು ಜಾತಿ/ಜಾತಿ ವ್ಯವಸ್ಥೆ ವಿರೋಧಿ ಚಳುವಳಿಗಳು ಎನ್ನುವ ವಿವರಣೆ ವಸಾಹತು ವಿವರಣೆಗಳಿಂದ ಬಂದಿದೆ ಎನ್ನುವ ಹೈಪೊಥಿಸಿಸ್ ಬೆಳಸಲಾಗಿದೆ. ಈ ಹೈಪೊಥೀಸಿಸ್ ಎಲ್ಲಿಂದ ಬಂತು? ಭಾರತದಲ್ಲಿ ಜಾತಿವ್ಯವಸ್ಥೆ ಇದೆ ಎನ್ನುವ ಚಿತ್ರಣಗಳನ್ನು ಮೊದಲು ನೀಡಿರುವುದು ವಸಾಹತು ವಿವರಣೆಗಳಾದ್ದರಿಂದ ವಚನಗಳು ಜಾತಿವ್ಯವಸ್ಥೆ ವಿರೋಧಿ ಎನ್ನುವ ವಿವರಣೆಗಳೂ ಅವರಿಂದಲೇ ಆರಂಭವಾಗಿರಬೇಕೆಂಬ ತರ್ಕ ಇಲ್ಲಿ ಬರುತ್ತದೆ. ಆಗ ನಮಗೆ ಸಹಾಯ ಮಾಡುವುದು ಆರ್ಕೈವಲ್ ಆಧಾರಗಳು. ಅಂದರೆ ವಸಾಹತು ವಿವರಣೆಗಳಿಂದಲೇ ವಚನಗಳು ಜಾತಿ/ಜಾತಿವ್ಯವಸ್ತೆ ವಿರೋಧಿ ಎನ್ನುವ ಚಿತ್ರಣಗಳು ಹುಟ್ಟಿಕೊಂಡಿವೆ ಎನ್ನುವುದನ್ನು ತೋರಿಸಲು archive ಗಳು ಸಹಾಯ ಮಾಡುತ್ತವೆ. ಅಂದರೆ ಈ Archive ಗಳನ್ನು ಬಳಸಿ ನೀವು ವಚನಗಳು ಜಾತಿ ವಿರೋಧಿಯಾಗಿರಲಿಲ್ಲ ಎಂದು ತೋರಿಸಲಾಗುವುದಿಲ್ಲ. ಬದಲಿಗೆ ಜಾತಿವಿರೋಧಿಗಳಾಗಿದ್ದವು ಎನ್ನುವ ವಿವರಣೆಗಳು ಬೆಳದು ಬಂದ ಹಾದಿಯನ್ನು ಗುರುತಿಸಲು ನೆರವಾಗುತ್ತದೆ. ಅಷ್ಟೇ. ಹಾಗಾಗಿ ಇಲ್ಲಿ archive ಗಳು ವಚನಗಳು ಏನು ಎನ್ನುವುದಕ್ಕೆ ಎಂಫಿರಿಕಲ್ ಸಾಕ್ಷಿಗಳಾಗುವುದಿಲ್ಲ. ಬದಲಿಗೆ ವಚನಗಳು ಜಾತಿವಿರೋಧಿ ಎನ್ನುವ ಕಲ್ಪಿತ ವಾದದ ಉಗಮ ಮತ್ತು ಳವಣಿಗೆಯನ್ನು ಗುರುತಿಸಲು ಎಂಫಿರಿಕಲ್ ಸಾಕ್ಷಿಗಳಾಗುತ್ತವೆ.

    ಈಗ ನೀವು ಹೇಳುವುದೇನು? ಡಂಕಿನ್ archive ಗಳನ್ನು ತಮಗೆ ಬೇಕಾದಂತೆ ತಿರುಚಿದ್ದಾರೆ, ತಮಗೆ ಬೇಕಿದ್ದದ್ದನ್ನು ಮಾತ್ರ ಆಯ್ಕೆಮಾಡಿಕೊಂಡು ಪ್ರತಿಕೂಲವಾಗಿರುವುದನ್ನು ಬಿಟ್ಟಿದ್ದಾರೆ ಎನ್ನುವ ಆರೋಪ. ಮಾಡುತ್ತಿದ್ದೀರಿ. ಈಗ ನನ್ನ ಪ್ರಶ್ನೆ ನಿಮಗೆ ಇದು. ವಚನಗಳು ಜಾತಿ/ವಿರೋಧಿ ಚಳುವಳಿಗಳೆನ್ನುವ ವಿವರಣೆ ವಸಾಹತು ಶಾಹಿ ಚಿತ್ರಣಗಳಿಂದ ಹುಟ್ಟಿದೆ ಎನ್ನುವ ಡಂಕಿನ್ ರ Archival ಆಧಾರಿತ ತೀರ್ಮಾನ ತಪ್ಪೇ? ಹೇಗೆ? ಮತ್ತು ಏಕೆ ತೋರಿಸಿ.

    ಒಂದನ್ನು ನೆನಪಿಡಿ ವಚನಗಳು ಜಾತಿ/ಜಾತಿವ್ಯವಸ್ಥೆ ವಿರೋಧಿ ಎನ್ನಲಂತು archival ಗಳು ಆಧಾರವಾಗುವುದಿಲ್ಲ. ಅದಕ್ಕೆ ವಚನಗಳ ಓದಿನಿಂದ ಮತ್ತು ನಮ್ಮ ಸಮಾಜದಲ್ಲಿ ಜಾತಿವ್ಯವಸ್ತೆ ಇದೆ ಎನ್ನುವ ಥಿಯರಿಯನ್ನು ಸಾಭೀತು ಮಾಡವ ಮೂಲಕವಷ್ಟೇ ತೋರಿಸಲು ಸಾಧ್ಯ.

    -ಡಾ.ಎ.ಷಣ್ಮುಖ

    ಉತ್ತರ
    • Vijay Boratti
     ಏಪ್ರಿಲ್ 20 2013

     Dr. shanmukha,

     i am telling this second time. my concern is not if vachanas speak anti-caste language or not. my concern is: if such language is constructed by the colonial masters (europeans), that is not universal in colonial period. your dunkin constructs such language as universal in the thesis. my answer to your last but one question is: yes, it can be shown with ample archival sources that anti-caste language of the west about lingayath literature was not universal or was not accepted by the lingayaths blindly.

     there is a fundamental problem with the thesis’s theoretical problem. dunkin is selective and manipulative in employing archival sources because of this theoretical problem.

     one thing is sure. i am not without any solid base for my contention. you might (as well Dr. Praveen) may wonder why the review/reply is not being uploaded by me. that is a million dollar question. i may take a decision about uploading it later. if you think that i am just making tall claims without any base and making arguments for argument’s sake, well, you may be thinking wrongly.

     Vijay Boratti

     ಉತ್ತರ
 5. praveen Konandur
  ಏಪ್ರಿಲ್ 20 2013

  Dear Vijay,
  Upload your article(which is already in circulation) in the blogs or somewhere. I am looking forward to read your ‘circulate’d reply. Otherwise this discussion will end up in making a statement that “dunkin’s hypothesis becomes justifiable as he tailors his archival or empirical findings according to his theoretical framework” without knowing how?

  Dr. Praveen

  ಉತ್ತರ
 6. ಏಪ್ರಿಲ್ 20 2013

  ಬೋರಟ್ಟಿಯವರೇ,

  ಈ ಮೇಲಿನ ನಿಮ್ಮ ಎಲ್ಲಾ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರತಿಕ್ರಿಯೆ. ಮತ್ತೆ ಮತ್ತೆ ನೀವು personal attack ಮಾಡುವುದರಿಂದ ಅದಕ್ಕೂ ಉತ್ತರ ಕೊಡುತ್ತೇನೆ. ಆಮೇಲೆ ವಚನಗಳ ವಿಚಾರಕ್ಕೆ ಬರೋಣ.

  (೧) ನೀವು ಪದೇ ಪದೇ ಹೇಳುವ ಈ ವಿಚಾರಗಳನ್ನು ಕನ್ನಡದಲ್ಲಿ ಪಿತೂರಿ ಎಂದೇ ಕರೆಯ ಬೇಕಾಗುತ್ತದೆ: “[Dunkin] twists archival sources (to suit his theoretical framework); where he misinterprets for argument’s sake; where he misguides the readers”. ಇದನ್ನು ಪಿತೂರಿ ಎಂದು ಕರೆಯದೆ ಬೇರೆ ಯಾವುದಾದರೂ ಪದದಿಂದ ಕರೆಯ ಬಹುದಾದರೆ ತಿಳಿಸಿ.

  (೨) “No where have i said that dunkin has not looked into archival sources” ಎಂದು ಘೋಶಿಸುತ್ತೀರಲ್ಲಾ ನಿಮ್ಮದೇ ಪ್ರಜಾವಾಣಿ ಲೇಖನದಲ್ಲಿ ನೀವು ಬರೆದದ್ದು ಅಷ್ಟು ಬೇಗ ಮರೆತು ಹೋಯಿತೇ? [ಅ] “ಈ ಮೂವರ ಬಗ್ಗೆ ನನಗೆ ಇರುವ ಮೊದಲ ಅನುಮಾನವೇನೆಂದರೆ ಇವರು ವಸಾಹತುಶಾಹಿ, ಅದು ಹುಟ್ಟಿ ಹಾಕಿದ ಪ್ರೊಟೆಸ್ಟಂಟ್ ಪರಿಕಲ್ಪನೆ ಮತ್ತು ಅದು ಆಧುನಿಕ ವಚನ ಅಧ್ಯಯನಗಳ … ಜೊತೆಗೆ ಯಾವ ಬಗೆಯ ಸಂಬಂಧವನ್ನು ಹೊಂದಿತ್ತು ಎಂಬ ವಿಷಯದ ಬಗ್ಗೆ ಯಾವುದೇ ಆರ್ಕೈವಲ್ ಅಧ್ಯಯನಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆಯೆ ಎಂಬುದರ ಬಗ್ಗೆ ಇದೆ.” [ಆ] “ಲಿಂಗಾಯತ ಅಥವಾ ವಚನಗಳ ಆಧುನಿಕ ಇತಿಹಾಸದ ಸಂಕೀರ್ಣತೆಯ ಬಗ್ಗೆ ಇವರಿಗೆ ಎಳ್ಳಷ್ಟು ಜ್ಞಾನವಿದ್ದಿದ್ದರೆ ತಮ್ಮ ವಾದಗಳನ್ನು ಮಾಡುವ ಮೊದಲು ನೂರಾರು ಬಾರಿ ಯೋಚಿಸುತ್ತಿದ್ದರೇನೊ!” [ಇ] “ವಚನಗಳ ಬಗ್ಗೆ ಇದುವರೆಗೂ ಬಂದಿರುವ ವಿಮರ್ಶೆ, ಪುಸ್ತಕಗಳು, ಸಂಕಲನಗಳು ಮತ್ತು ಟೀಕೆಗಳ ಇತಿಹಾಸವನ್ನು ಅವರು ಸ್ವಲ್ಪ ಬಗೆಯಲಿ.”

  ಈ ರೀತಿಯ ವಯುಕ್ತಿಕ ವಿಚಾರ ಚರ್ಚೆಗೆ ಬರದೇ ಹೋದರೆ ಚೆನ್ನ. ಆದರೆ ನೀವು ಇವುಗಳನ್ನು ಮತ್ತೆ ಮತ್ತೆ ಎಳೆದು ತರುತ್ತೀರಿ. ಅದರಲ್ಲೂ ಬಾಲುರವರ ಕುರಿತು ಏನೇನೋ ಅಸಹನೆ, ಕೋಪ ತೋರಿಸುತ್ತೀರಿ. ಅವರೆಂದೂ ನಿಮ್ಮ ಬಗ್ಗೆ ಹೀಗೆ ಹೇಳಿದ್ದು ನನಗೆ ನೆನಪಿಲ್ಲ. ಯಾವುದೋ ನನಗೆ ತಿಳಿಯದ ಪೂರ್ವ ಜನ್ಮದ ಕೊಪವಿರಬೇಕು ಬಿಡಿ.
  ಇನ್ನು ಸಂಶೋಧನೆಯ ವಿಚಾರಕ್ಕೆ ಬರೋಣ.

  (೩) “i ask you to show me that lingayath literature or vachana sahitya is understood exclusively within ‘caste-system” framework UNIVERSALLY (as your dunkin argues in his thesis) in colonial karnataka?” ನಾನು ಇಂಥಾ ಹೇಳಿಕೆ ಎಲ್ಲೂ ಮಾಡಿಲ್ಲ. ಬಹುಶಃ ನೀವು ನನ್ನ ಪ್ರಬಂಧವನ್ನು ಸರಿಯಾಗಿ ಓದಿಲ್ಲ ಇಲ್ಲ ಅದು ನಿಮಗೆ ಅರ್ಥವಾಗಿಲ್ಲ.

  (೪) “tell me: should theory inform archival materials or should archival materials throw more light on the available theories?” “should theory inform empirical/archival sources? or archival sources should inform theory? or it is a dialectial one?” ಈ ಕುರಿತು ನಾವು ಹೇಳುತ್ತಿರುವ ವಿಚಾರ ಅರ್ಥವಾಗ ಬೇಕಾದರೆ philosophyಯ ಪ್ರಾಥಮಿಕ ತಿಳುವಳಿಕೆ ಅತ್ಯವಶ್ಯಕ. ಒಂದು theoryಯ ಹಿನ್ನೆಲೆಯಿಲ್ಲದೆ ನಾವು ಏನನ್ನೂ ಗ್ರಹಿಸುವುದಿಲ್ಲ ಎಂಬುದು philosophy of scienceನಲ್ಲಿ ಎಂದಿಗೋ ಒಪ್ಪಿಕೊಂಡಿರುವ ವಿಚಾರ. ನಾವು ಏನನ್ನು common sense ಎಂದು ಕರೆಯುತ್ತೇವೋ ಅದರ ಹಿನ್ನೆಲೆಯಲ್ಲೂ ಹಲವು ಹಳೆಯ ಸಿದ್ಧಾಂತಗಳು ಕೂತಿರುತ್ತವೆ. ಇದರ ಚರ್ಚೆ ಬಂದಾಗ ಈ ಮಾತನ್ನು ವಿಧ್ವಾಂಸರು ಪದೇ ಪದೇ ಹೇಳುತ್ತಿರುತ್ತಾರೆ: “fact is a fact of a theory” ಅಥವಾ “facts are theory laden”. ಇದನ್ನು ಅಲ್ಲಗಳೆಯುವುದು, ನಮ್ಮ ಸಾಮಾನ್ಯ ಜ್ಞಾನವನ್ನು ಬಳಸಿ (ಉದಾಹರಣೆಗೆ) Newtonನ ಎರಡನೇ law of motion ಅನ್ನು ಅಲ್ಲಗಳೆಯುವಷ್ಟೇ ದೊಡ್ಡ ಹುಂಬತನ. ಇದರ ಕುರಿತು ಒಂದಷ್ಟು ಚರ್ಚೆಗೆ ಈ ಬ್ಲಾಗನ್ನು ನೋಡಿ: http://groups.yahoo.com/group/TheHeathenInHisBlindness/

  (೫) “your newton analogy is completely erroneous while understanding colonial vachana literature. think broadly and judiciously, you will know the limitatins of that analogy on your own. one of the moralities of vachana is that even if we have to question our Guru/teacher, we should not hesitate to do so. so rethink your guru/teacher’s analogy. universalising or homogenising colonialism or nationalism is a fundamental problem in your dunkin’s thesis.”
  ಇದು ಚರ್ಚೆ ಮಾಡುವ ರೀತಿಯಲ್ಲ. ಇದು ಪ್ರವಚನ ಕೊಡುವ ರೀತಿ. ಚರ್ಚೆಯಲ್ಲಿ ಪ್ರತಿವಾದಿಯ ವಿಚಾರಗಳನ್ನು ಅಲ್ಲಗಳೆದು ತೋರಿಸ ಬೇಕು. ಅದನ್ನು ಬಿಟ್ಟು “think broadly and judiciously” ಎಂಬ ರೀತಿಯ emotional appeal ಮಾಡುವುದು ಒಂದು ತಾರ್ಕಿಕ ದೋಷವೆನಿಸುತ್ತದೆ. ವಾದದಲ್ಲಿನ ಈ ದೋಷದ ಕುರಿತು ಹೆಚ್ಚಿನ ಮಾಹಿತಿ internetನಲ್ಲಿ ಸಿಗುತ್ತದೆ. ಇಲ್ಲಿಂದ ಆರಂಭಿಸಬಹುದು ಬೇಕಾದರೆ: http://en.wikipedia.org/wiki/Appeal_to_emotion

  (೬) “proving or disproving is not my concern.that is dunkin’s concern or his detractors’ concern. why should i do that?” ಹಾಗಾದರೆ ನೀವು ಮಾಡುತ್ತಿರುವುದು ಏನು? ಬಾಲು ಮತ್ತು ನನ್ನನ್ನು ಒಂದಷ್ಟು ಬಯ್ದು ಚಪ್ಪಾಳೆ ಗಿಟ್ಟಿಸುವುದೇ?

  ಉತ್ತರ
  • Vijay Boratti
   ಏಪ್ರಿಲ್ 22 2013

   if you have problems with my language, i too have immens problems with your langauge. i am writing like this because you wrote to me in “crude” and “unrefined” language. like “Aata”, “kugaaduttiddiye”, etc. fuller version of your “emotional” outburst at me is expunged from praja vani. i dont know who did it. you or praja vani? if praja vani did expunge fuller version, that means it might have found your language/contents objectionable. if you have expunged it, that means you are not sure of your own words! i have been noticing your language and your arguments. there is no consistency in your language and arguments. first of all i wonder if you read and understand kannada properly. moreover, you are deviating the main issue. you are trying to personalise the things. that may be your game. i wont succumb to your style.

   1) i can show with lots of evidences from your own thesis that you have twisted and chosen only few things to suit your theoretical framework which is extremely problematic. if you think that i am accusing you of pituri, it is your personal and hasty interpretation. is exposing limitations of a thesis ‘pituri’? oh, my gosh. i dont know what to say.

   2) i still reiterate that you have not looked into archival materials “kulankashavaagi”. you have collected archival materials (very interestingly they resemble my collection). but i have gone through them thorougly. what about its study and interpretation? “swalpa bageyali” andre enu? digging into the archival materials to know and understand it comprehensively. that does not mean that i have done it comprehensively. but i have not tried to fit my archival materials to suit any theoretical framework.

   3) show me that i have “intolerence” towards balagangadhara? i am just trying to find out problems with his thesis. once again, you are personalising the things and deviating from the main issue. i ask you to stick to the main arguments. focus on criticism. it is already in circulation. 21 limitations in your thesis. plus problems with your theoretical framework. if you are interested get hold of my small write up and deal with it academically, get it somehow. do not personalise the things. otherwise, forget this debate. you be satisfied with your thesis. i will be with mine.

   4) about your point related to philosophy and theory. your argument is known to any “good” researcher. for that one need not study philosophy. it is found in social sciences too. and we are taught this long back. what you say is commonsensical knowledge. we cannot say that theory existed first and sources later. it is both. sometimes it is problematic to make distinctions between both. eventhough you try to blur this relations and problematise in the above mail to me, your thesis is contrary to what you say. you have neatly fitted your archival sources to suit your theory. and any “common” leader will say confidently about this fact. throught out the thesis one point is striking: the west imposed ideas on the lingayaths and the latter accepted them passively. and you very subtly show that such european ideas proved to be negative stereotypes about brahmins. why do you highlight this point? and not others too?
   this is just one point in your thesis. there are many.

   5) your thesis proves that anti-caste discourse of the europeans were repeated by the lingyaths in the colonial period. for this you have said anything. you have shown it. read your thesis again. you might not have used the work “universally” but your thesis gives that impression. and this impression is not subjective. it is based on what you argue in the thesis. once again, i have shown all these limitations in my write up. if you are interested to look into it, get it somehow.

   6) “pravachana” yaaru shuru maadiddu? naano athwa taavugalo? i have record of what you have written to me and what language you have used to address me.

   7) about your supposed “allegations” against me i.e. purva janmada kopa. Ayyo, nanage enu helabeku anta gottaguttilla. i have not met balagangadhara or have not talked to him ever. so there is no question of having “purva janmada” kopa. i can seen very emotional, prejudiced and personal factors in your language. any good researcher should be above these things. it is a common sensical thing.

   8) i dont have to gain applause by proving or disproving you or balagangadhara. i have many freinds and relatives to do that. they applaud me whether i disprove or not.

   9) lastly, do not deviate from the main issue. stick to arguments about vachana and your thesis. academics is important. not personal things. i am for good and healthy discussion. are you?

   10) i am not interested to carry on this discussion, if you continue to personalise the debates and discussions, thus deviating from the main issue.

   ಉತ್ತರ
   • santosh anand
    ಮೇ 21 2013

    Vijay sir u hv given befitting reply to the hollow scholars

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments