ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 24, 2013

32

ವಚನ ಸಾಹಿತ್ಯ ಹಾಗೂ ಜಾತಿ ವ್ಯವಸ್ಥೆ: ರಾಜೇಂದ್ರ ಚೆನ್ನಿಯವರಿಗೊಂದು ಪ್ರತಿಕ್ರಿಯೆ

by ನಿಲುಮೆ

– ಡಂಕಿನ್ ಝಳಕಿ
Vachana Charcheಇದು ರಾಜೇಂದ್ರ ಚೆನ್ನಿಯವರು ಲಡಾಯಿ ಬ್ಲಾಗ್ನಲ್ಲಿ ಬರೆದ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಅವರ ಲೇಖನ ಸಾಕಷ್ಟು ಉದ್ದವಿದ್ದರೂ ಅದರಲ್ಲಿ ಉತ್ತರ ಕೊಡಲು ಯೋಗ್ಯವಾದ ವಿಚಾರಗಳಿರುವುದು ಎರಡು ಅಥವಾ ಮೂರು ಮಾತ್ರ. ಉಳಿದದ್ದೆಲ್ಲಾ ವೈಯುಕ್ತಿಕ ನಿಂದನೆಗಳು, ಆಧಾರ ರಹಿತ ಆಪಾದನೆಗಳು, ಮತ್ತು ಬಾಲಿಶ ಹಾಸ್ಯಗಳು. ಅವುಗಳಿಗೆ ಉತ್ತರ ಕೊಡುವುದು ಘನತೆಯ ವಿಚಾರವಲ್ಲ.

೧.ಮೇಲುಚಲನೆಯ ಕುರಿತು: ಡಾ.ಷಣ್ಮುಖರವರು ಹೇಳುವ ನನ್ನ “ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ” ಎಂಬುದನ್ನು ಅಲ್ಲಗಳೆಯುತ್ತಾ ಚೆನ್ನಿಯವರು ನಾನು ನನ್ನ ಪ್ರಬಂಧದಲ್ಲಿ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳನ್ನು ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಒಪ್ಪಿಕೊಂಡಿತು ಎಂದು ವಾದಿಸುತ್ತೇನೆ ಎಂದು ಹೇಳುತ್ತಾರೆ.

ಈ ಕುರಿತು ಈಗಾಗಲೇ ಬಹಳಷ್ಟು ತಪ್ಪು ಅಭಿಪ್ರಾಯಗಳು ಚಲಾವಣೆಗೆ ಬಂದಿರುವುದರಿಂದ, ನನ್ನ ವಾದ ಏನು ಎಂಬುದನ್ನು ಮತ್ತೊಮ್ಮೆ ವಿಶದ ಪಡಿಸುತ್ತೇನೆ. ವಸಾಹತು ಬರಹಗಾರರು ಮಾಡಿದ್ದೇನೆಂದರೆ, ನಮ್ಮಲ್ಲಿ ಶತಮಾನಗಳಿಂದ ಇದ್ದ (೧) ಆಧ್ಯಾತ್ಮದ ನೆಲೆಯಲ್ಲಿ ಜಾತಿ ಮತ್ತು ಕುಲಕ್ಕೆ ಸಂಬಂಧಿಸಿದಂತಹ ಮದ,ಮಾತ್ಸರ್ಯಗಳನ್ನು ಅಲ್ಲಗಳೆಯುವ ಮತ್ತು (೨) ಬ್ರಾಹ್ಮಣ ಮತ್ತು ಇತರ (ಉದಾ. ಲಿಂಗಾಯತ) ಸಮುದಾಯಗಳ ನಡುವೆ ಇರುವ ಜಗಳ, ವಾಗ್ದಾಳಿ (polemics) ಇತ್ಯಾದಿಗಳಂತಹ ಎರಡು ಬೇರೆ ಬೇರೆ ವಿಚಾರಗಳನ್ನು ಒಂದೇ ನೆಲೆಯಲ್ಲಿ ನೋಡಿದ್ದು. ಇದರೊಂದಿಗೆ ಇನ್ನೂ ಒಂದು ವಿಚಾರವನ್ನು ನಾವಿಲ್ಲಿ ಗಮನಿಸಬೇಕು. ಭಾರತದ ಸಮಾಜವನ್ನು ಅರಿಯಲು ತಿಣುಕಾಡಿದ ವಸಾಹತು ಬರಹಗಾರರು, ಬ್ರಾಹ್ಮಣರ ವಿರುದ್ಧ ವಾಗ್ದಾಳಿಗೆ ಇಳಿಯುವವರೆಲ್ಲಾ (ತಾವು ಭಾರತದಲ್ಲಿ ಇದೆ ಎಂದು ನಂಬಿದ್ದ) ಬ್ರಾಹ್ಮಣ ಶಾಹಿ, ಜಾತಿವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಎಂದೇ ಕಂಡರು. ಹೀಗೆ ಬ್ರಾಹ್ಮಣ ಶಾಹಿ, ಜಾತಿವ್ಯವಸ್ಥೆಯ ವಿರುದ್ಧ ತಮ್ಮಂತೆಯೇ ಹೋರಾಟಕ್ಕೆ ಇಳಿದಿರುವವರನ್ನು ಪ್ರಗತಿಪರರು, ನೈತಿಕ ಪ್ರಜ್ಞೆ ಉಳ್ಳವರು ಎಂದು ಅವರು ಕಂಡಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.ಕ್ರಮೇಣ ಇಂತಹ ‘ಪ್ರಗತಿಪರ,ನೈತಿಕ’ ಜನರನ್ನು ಹಲವು ವಿಧಗಳಲ್ಲಿ (ಕೆಲಸ ಕೊಟ್ಟು, ಕೋರ್ಟುಗಳ ಮುಂತಾದ ವಿಚಾರದಲ್ಲಿ ಸಹಾಯ ಮಾಡಿ) ಪುರಸ್ಕರಿಸುತ್ತಾ ಬಂದದ್ದು ನಾವು ಇತಿಹಾಸದಲ್ಲಿ ನೋಡಬಹುದು.ಈ ವಿಚಾರ ತಾರ್ಕಿಕವಾಗಿಯೂ,ಐತಿಹಾಸಿಕವಾಗಿಯೂ ತೋರಿಸಿಕೊಡಬಹುದಾದ ವಿಷಯ. ನನ್ನ ನಾಲ್ಕು ವರ್ಷ ಹಳೆಯ PhD ಪ್ರಬಂಧದಲ್ಲಿ ಇದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. (ಈಗ ಬರೆಯುತ್ತಿರುವ ಪುಸ್ತಕದಲ್ಲಿ ಇದನ್ನು ಇನ್ನೂ ಹೆಚ್ಚಿನ ಆಧಾರಗಳೊಂದಿಗೆ ಮಂಡಿಸುತ್ತೇನೆ.)
ನನ್ನ ಈ ವಾದವನ್ನು ಚೆನ್ನಿಯವರು ಹೇಳುವಂತೆ “ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು” ಎಂದು ವಿವರಿಸಲು ಬರುವುದಿಲ್ಲ. ಏಕೆಂದರೆ, ಹೀಗೆ ಹೇಳಬೇಕಾದರೆ ಇಡೀಯ ಲಿಂಗಾಯತ ಸಮುದಾಯ ಒಮ್ಮೆ ಕುಳಿತುಕೊಂಡು “ವಚನಗಳು ನಿಜವಾಗಿಯೂ ಜಾತಿ ವಿರೋಧಿ ಸಾಹಿತ್ಯವಲ್ಲ, ಆದರೆ ಹಾಗೆ ಹೇಳಿಕೊಂಡರೆ ನಮಗೆ ಲಾಭವಾಗುತ್ತದೆ” ಎಂದು ನಿರ್ಧರಿಸಿ, ಒಂದು ಕಾರ್ಯತಂತ್ರವನ್ನು ನಿರೂಪಿಸಿ ಅದನ್ನು ಆಚರಣೆಗೆ ತಂದರು ಎಂದು ಹೇಳ ಬೇಕಾಗುತ್ತದೆ. ಅಂದರೆ ಒಂದು ಇಡೀಯ ಸಮುಧಾಯವನ್ನು ಕುಂತಂತ್ರಿ, ಅನೈತಿಕ ಎಂದು ಕರೆಯ ಬೇಕಾಗುತ್ತದೆ. ಹೀಗೆ ಹೇಳುವುದು ಒಂದು ಸತ್ಯವೂ ಅಲ್ಲದ, ಸುಳ್ಳೂ ಅಲ್ಲದ ಸ್ಟಿರಿಯೋಟೈಪ್. ಮುಸ್ಲಿಮರೆಲ್ಲರೂ ಉಗ್ರವಾದಿಗಳು, ಕ್ರೈಸ್ತರೆಲ್ಲರೂ ಕುಡುಕರು ಎನ್ನುವಂಥ ಸ್ಟಿರಿಯೋಟೈಪ್ ಹೇಳಿಕೆಯಂತೆ ಇದೂ ಕೂಡ ಒಂದು ಸ್ಟಿರಿಯೋಟೈಪ್. ನಮ್ಮ ಸಂಶೋಧನೆಯು ಇಂತಹ ಸ್ಟಿರಿಯೋಟೈಪ್ ಹೇಳಿಕೆಯನ್ನು ಮಾಡುತ್ತಿಲ್ಲ. (ಸ್ಟಿರಿಯೋಟೈಪ್ ಹೇಳಿಕೆಗಳ ಕುರಿತ ನಮ್ಮ ಸಂಶೋಧನೆಗೆ, ಆ ಕುರಿತು ನಾವು ಬರೆದಿರುವ ಲೇಖನಗಳನ್ನು ಓದಬಹುದು.)
ಹಾಗಾದರೆ ನಾನು/ನಾವು ಹೇಳುತ್ತಿರುವುದೇನು? ನಮ್ಮ ವಾದ ಹೀಗಿದೆ. ವಸಾಹತುಶಾಹಿಯು ಒಂದು ನಿರ್ಧಿಷ್ಟ ರೀತಿಯಲ್ಲಿ ಚಿಂತಿಸುವ ತಾರ್ಕಿಕ ಅನಿವಾರ್ಯತೆಯನ್ನು ಹುಟ್ಟು ಹಾಕಿತು. ತಾವು ಪ್ರಗತಿಪರರು, ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿದವರು ಎಂದು ತೋರಿಸಿಕೊಟ್ಟರೆ ಮನ್ನಣೆ ಮತ್ತು ಪುರಸ್ಕಾರಗಳು ಸಿಗುವ ಪರಿಸ್ಥಿತಿಯನ್ನು ಬೆಳೆಸಿತು. ಇದರಿಂದಾಗಿ, ಲಿಂಗಾಯತ ಸಮುದಾಯವು ತಾನು ಜಾತಿವ್ಯವಸ್ಥೆಯ ವಿರುದ್ಧ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದೇವೆ ಎಂದು ತೋರಿಸಿಕೊಡುವ ಅನಿವಾರ್ಯತೆಗೆ ಸಿಕ್ಕಿ ಕೊಂಡಿತು. (ಇದೇ ರೀತಿಯ ಬೇರೆ ಉದಾಹರಣೆಗಳಿಗೆ ನಮ್ಮ ಇತರ ಬರಹಗಳನ್ನು, ಚರ್ಚೆಗಳನ್ನು ನೋಡಬಹುದು.) ಬಾಲಗಂಗಾಧರರು ಹೇಳುವ ‘ವಸಾಹತುಪ್ರಜ್ಞೆ’ಯ ಒಂದು ಆಯಾಮ ಇದೇ: ವಸಾಹತುಶಾಹಿಯು ಹುಟ್ಟುಹಾಕಿದ ಒಂದು ನಿರ್ಧಿಷ್ಟ ರೀತಿಯಲ್ಲಿ ಚಿಂತಿಸುವ ತಾರ್ಕಿಕ ಅನಿವಾರ್ಯತೆ.

೨. ಚೆನ್ನಿಯವರು ಕೇಳುತ್ತಾರೆ: “ಇಲ್ಲಿರುವ ಪ್ರಶ್ನೆಗಳೆಂದರೆ ಬ್ರಿಟಿಷ್ ಓರಿಯಂಟಲಿಸ್ಟ್ ಎಂದು ಕರೆಯಬಹುದಾದ ಬರಹಗಳು ವೀರಶೈವ ಧರ್ಮದ ಬಗ್ಗೆ ಏಕಮುಖವಾದ ಚಿತ್ರವನ್ನು ಕೊಟ್ಟಿವೆಯೆ?” ಇದಕ್ಕೆ ನನ್ನ ಉತ್ತರ ತುಂಬಾ ಸರಳವಾಗಿದೆ. ನಾವು ಒಂದು ಕಾಲದಲ್ಲಿ ಪ್ರಬಲವಾಗಿರುವ, ಹೆಜೆಮೊನಿಕ್ ಆಗಿರುವ ವಿಚಾರಗಳ ಕುರಿತು ಮಾತನಾಡುವಾಗ, ಅಲ್ಲಿ ಇಲ್ಲಿ ಕಾಣಿಸುವ ವ್ಯತಿರಿಕ್ತವಾದ ಧ್ವನಿಗಳು, ವಿಚಾರಗಳು ನಮಗೆ ಮುಖ್ಯವಾಗುವುದಿಲ್ಲ. ಇದಕ್ಕೆ ಹೊರತಾಗಿ ಮಾತನಾಡುವುದಾದರೆ, ೧೭ನೆಯ ಶತಮಾನದಿಂದ ಈಚೆಗೆ “ಓರಿಯಂಟಲಿಸ್ಟ್ ಎಂದು ಕರೆಯಬಹುದಾದ ಬರಹಗಳು” ವೀರಶೈವ ಸಂಪ್ರದಾಯದ ಕುರಿತು ನಮಗೆ ಕಟ್ಟಿಕೊಡುವ ಚಿತ್ರಣ ಬಗ್ಗೆ ಏಕಮುಖವಾದದ್ದೆ. ಇಲ್ಲವೆನ್ನುವವರು ಅದನ್ನು ಆಧಾರ ಸಮೇತ ತೋರಿಸಿಕೊಡಬೇಕು.

೩. “ಅಂದಾಜು ಹತ್ತರಿಂದ ಹದಿನೈದನೇ ಶತಮಾನದವರೆಗೆ ಪ್ರವರ್ಧಮಾನವಾದ ಒಂದು ಸಂಪ್ರದಾಯದ ಬಗ್ಗೆ ಬ್ರಿಟಿಷ್ರ ಆಗಮನದ ಮೊದಲು ಯಾವುದೇ ವಿವರಣೆಗಳು,ವ್ಯಾಖ್ಯಾನಗಳು ಇರಲೇ ಇಲ್ಲವೇ? ಈ ವಿವರಣೆಗಳು ಜಾತಿ, ಜಾತಿಪದ್ಧತಿ, ಬ್ರಾಹ್ಮಣ ಪುರೋಹಿತಶಾಹಿ ಇವುಗಳು ತಮ್ಮ ಯಾವ ‘ಅನುಭವ’ವನ್ನು ವಿವರಿಸಲೇ ಇಲ್ಲವೇ?” ಎಂದು ಕೇಳುತ್ತಾರೆ ಚೆನ್ನಿಯವರು. ಇದೇ ಎಂದರೆ ತೋರಿಸಿಕೊಡಿ. ನೆನಪಿರಲಿ ತೋರಿಸಿಕೊಡಬೇಕಾದದ್ದು ಅಲ್ಲಿ ಇಲ್ಲಿ ಕಾಣಿಸುವ ವ್ಯತಿರಿಕ್ತವಾದ ಧ್ವನಿಗಳು, ವಿಚಾರಗಳು ಅಲ್ಲ, ಒಂದು ಕಾಲದಲ್ಲಿ ಕಾಣಿಸುವ ಪ್ರಬಲವಾಗಿರುವ, ಹೆಜೆಮೊನಿಕ್ ಆಗಿರುವ ವಿಚಾರಗಳು ಮತ್ತು ಧ್ವನಿಗಳು.

“ಆಧ್ಯಾತ್ಮಿಕ/ಸಾಮಾಜಿಕ ಎನ್ನುವ ವಿಂಗಡಣೆಯೇ ವಸಾಹತುಶಾಹಿ ಪ್ರಜ್ಞೆಯ ಫಲವಾಗಿದೆ. ಇದನ್ನು ವಸಾಹತುಶಾಹಿ-ಪೂರ್ವ ಸಂದರ್ಭಕ್ಕೆ ಅನ್ವಯಿಸುವ ಡಂಕಿನ್ರ ಪ್ರಬಂಧ Orientalism ನ ಪುನರುತ್ಪಾದನೆಯಾಗಿದೆ” ಎನ್ನುತ್ತಾರೆ ಚೆನ್ನಿಯವರು. ಚೆನ್ನಿಯವರು ಇದನ್ನೂ ತೋರಿಸಿ ಕಡಬೇಕಾಗುತ್ತದೆ. ಬರಿಯ ಹೇಳಿಕೆಗಳು, ಹಾಸ್ಯ ಸಂಶೋಧನೆಯಾಗುವುದಿಲ್ಲ. ಹೀಗೆ, ಯಾವುದನ್ನೂ ತೋರಿಸಿಕೋಡದೆ, ಒಂದಷ್ಟು ಹಾಸ್ಯ ಮಾಡಿ, ಕಡೆಗೆ “ಹೀಗಾಗಿ ಅವರ ಸಂಶೋಧನೆಯ ವೈಚಾರಿಕ ಚೌಕಟ್ಟು ದುರ್ಬಲ ಮಾತ್ರವಲ್ಲ ಸಿಂಧುವಾಗಿದೆ (invalid)” ಎಂದು ಚೆನ್ನಿಯವರು ಘೋಸಿಸುವುದು, ಅದನ್ನು “obscene arrogance” ಎಂದು ಬಯ್ಯುವುದು ಬೌದ್ಧಿಕ ಚರ್ಚೆ ಎನಿಸಿಕೊಳ್ಳುತ್ತದೆ ಕರ್ನಾಟಕದಲ್ಲಿ ಎಂದರೆ, ವೈಚಾರಿಕತೆ, ಸಂಶೋಧನೆಯ ಶಿಸ್ತು ಇತ್ಯಾದಿಗಳು ನಮ್ಮಲ್ಲಿ ಯಾವ ಮಟ್ಟಕ್ಕೆ ಕುಸಿದಿದೆ ಎಂದು ಗೊತ್ತಾಗುತ್ತದೆ.

೪. ಇನ್ನು ಕಾರ್ಲ್ ಪಾಪರ್ (Carl Popper) ಹೇಳುವ ವಿಚಾರಕ್ಕೆ ಬರೋಣ. ಪಾಪರ್ ಹೇಳುವ “ನಿಲುವುಗಳನ್ನು ಜಗತ್ತಿನ ವಿದ್ವತ್ ಪ್ರಪಂಚ ಈಗಾಗಲೇ ಅತ್ಯಂತ ಪ್ರಶ್ನಾರ್ಹವಾಗಿ ನೋಡಿದೆ. ಇಂಥ ಸಂದೇಹಾಸ್ಪದ ತರ್ಕಪದ್ಧತಿಗಳ ಮೇಲೆ ನಿಂತಿರುವ ತಮ್ಮ ಸಂಶೋಧನೆಯನ್ನು ಜಗತ್ತಿನ ಅಖೈರಾದ ಸತ್ಯವೆಂದರೆ ಅದನ್ನು ನಂಬಬೇಕಾಗಿಲ್ಲ” ಎಂದು ಹೇಳುತ್ತಾರೆ ಚೆನ್ನಿಯವರು. ಬಹುಶಃ ‘ಗೂಗಲ್’ನಿಂದ, ವಿಕಿಪೀಡಿಯದಿಂದ ಸಂಶೋಧನೆ ಮಾಡ ಹೊರಟರೆ ಹೀಗೆ ಆಗುತ್ತದೆ ಅಂತ ಕಾಣುತ್ತೆ. ಪಾಪರ್ ಹೇಳುವ falsification ವಿಚಾರವನ್ನು ಮುಂದಿನ (Imre Lakotas, Larry  Laudan ಮುಂತಾದ) ಚಿಂತಕರು ಇನ್ನೂ ತೀಕ್ಷಣವಾಗಿ ನಿರೂಪಿಸಿದ್ದು, ಅದರಲ್ಲಿನ ಓರೆಕೋರೆಗಳನ್ನು ತಿದ್ದಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇದನ್ನು “ಜಗತ್ತಿನ ವಿದ್ವತ್ ಪ್ರಪಂಚ ಅತ್ಯಂತ ಪ್ರಶ್ನಾರ್ಹವಾಗಿ ನೋಡಿದೆ” ಎಂದು ಹೇಳುವವರಿಗೆ ಇಲ್ಲ ಪಾಪರ್ ಅರ್ಥ ಆಗಿಲ್ಲ, ಅಥವಾ ಅವರು ಪಾಪರ್ ಕುರಿತು ವಿಕಿಪೀಡಿಯದ ಲೇಖನಕ್ಕಿಂತ ಹೆಚ್ಚಿನದೇನೂ ಓದಿಲ್ಲ ಎಂದೇ ಹೇಳಬೇಕಾಗುತ್ತದೆ.

32 ಟಿಪ್ಪಣಿಗಳು Post a comment
 1. vijay boratti
  ಏಪ್ರಿಲ್ 25 2013

  mr. jalki, i have been observing one thing in you. your teachers or your research experience have made you internalise the habit of choosing only comfortable questions and answer them. those which you find uncomfortable and unanswerable are conveniently sidelined. in my case too, you did the same thing. i asked 21 questions/comments. you have responded to only a few. i dont think, this is the way you can carry on research for long time. just an example for what kind of research you have been doing. just because i use a word dialectical and material relations, you bring in post-structualism and marx. i really dont understand what kind of research training you have secured so far. just to play with vocabulary? that is what is done by you so far. i dont want to get on with you like this as your “truth” is already established before the research itself. i will be fighting a waste battle which does not exist at all. so, what you are doing is to just fill in the resources to substantiate your truth. you have asked for substantial evidences for my claims in your reply to me. will show when your book is out. wait untill then. remember i do not make comments on others in vaccum. and also remember your claim about the british and the lingayaths can not be sustained in the lihgt of temendous complexity of lingayath history in 19 and 20th century.

  i have asked a few questions in relation to balagangadhar’s article on adhyatma and your endorsement of the same. see this e-journal and praja vani for reference. this is the third day. none of you have shown interest in answering question. why? busy? or indifference? or unable to answer them? untill you answer the questions related to shatstalas and percentage, you will continue to be unconvincing and unsatisfactory. first of all, your thesis is full of “twists and turns” of historical evidences. and you will continue to be unacceptable to us if you dodge the questions asked by me.

  all the best for your book. will look forward to it which is under writing so that i get a chance to fully open myself.

  ಉತ್ತರ
 2. Kranthikesvara
  ಏಪ್ರಿಲ್ 26 2013

  ಬೋರಟ್ಟಿ ಅವರೇ, what is the tremendous complexity of Lingayath history that you are repeatedly harping about? Why don’t you take some time and give some clear views of the complexity that you are seeing? And then argue why this tremendous complexity makes Dunkin’s hypothesis implausible. Merely throwing some random insignificant events or quotes as you have done in your criticism doesn’t make Lingayath history tremendously complex. You may be convinced that you have deflated Dunkin’s hypothesis, but it is your duty to convince the rest of us too if you really care for truth. Instead you are throwing filth at Dunkin by questioning his credibility. This is regretfully shameful behaviour from someone as educated like you.

  ಉತ್ತರ
  • vijay boratti
   ಏಪ್ರಿಲ್ 26 2013

   dear sir, you may use the “shameful” language against me. you have every right to do so as your company does. all of you might have been trained to speak disrespectfully to others. dunkin, santhosh shetty, shanmukha, etc. have internalised this the “disrespectful” language. you seem to continue that legacy. fine. carry on. but dont deviate from the main issue here. answer my questions asked to balagangadhar, dunkin and his coterie about spriritual aspect of vachanas. untill then, i dont think i need to engage with you and your coterie seriously and academically. so it would be waste of my energy and time to engage with you people. Alwida! but still i wait for the answers for my questions on spirituality and vachanas.

   ಉತ್ತರ
   • kranthikesvara
    ಏಪ್ರಿಲ್ 26 2013

    Now who is being disrespectful here? You have accused me of using shameful language. How on the earth asking you questions on your claims on complexity earth is disrespectful?! It is you who threw filth at Dunkin and now at others too. And yet you sit on high pedestal and talk to me in a condescending note!! You have time to throw filth and when asked relevant questions on your claims, you say you don’t want to waste time as if it is only your time that’s precious!

    ಉತ್ತರ
    • savithru
     ಏಪ್ರಿಲ್ 26 2013

     Dear kranti
     Kindly try not to deviate the topic.
     Lets clear previous questions..
     Dunkin please come and answer the questions posed you….I really felt them relevent.

     @moderator
     Kindly try to publish the ip address of each comment.

     ಉತ್ತರ
     • kranthikesvara
      ಏಪ್ರಿಲ್ 27 2013

      Hello, I have no problem in you asking Dunkin to respond to criticism of his thesis. Who am I to make you deviate from it?!! But throwing filth at Dunkin is no way to conduct a debate. Please learn some manners and imbibe decency in your conduct. It will help everyone to stick to the subject of the debate.

      ಉತ್ತರ
   • Sindhu Lingamma
    ಏಪ್ರಿಲ್ 27 2013

    Just want to bring this interesting review of Schouten’s book to Boratti’s consideration: Robert J. Zydenbos (1997), “Virasaivism, Caste, Revolution, Etc.” Journal of the American Oriental Society 117 (3): 525–535.

    In many of his comments and blog writings, I have seen Boratti advocating Schouten as a very serious scholar on Lingayat studies. He makes fun of Dunkin for not paying enough attention to this wonderful book. I am happy Balu and Dunkin did not base their research on Schouten’s third rated book. I know my contention will be frowned upon. Let Zydenbos, an important Indologist, explain why Schouten’s book doesn’t deserve the regard that Boratti wants to give it.

    I know what Boratti and his coterie (to use his own word) will say now to this: Balu and Dunkin have said anything new; Zydenbos had said it all. 🙂 Over to Zydenbos now.

    The “literature which he quotes does not support some of his conclusions. While writing about
    the social aspects of Viragaivism, Schouten has largely disregarded its theological and mystical background and has replaced it with a modern myth of partly Indian, partly Western origin. One cannot escape from the impression that he wanted, perhaps unconsciously, to see parallels between Virasaivism and modern protestant Christianity where they do not really exist.” (526).

    “Basava was neither a Jesus nor a Calvin, and we must realize that his sometimes beautiful
    emotional outpourings cannot be taken as the final word on what Virasaivism is or should be. Only very recently have fundamentalist reformers on the fringe of Virasaiva society tried to give Basava such a status” (526-527).

    Schouten’s “reinterpretation of the vacanas in ‘new historical circumstances’ (p. 13) … may be said to be a twentieth-century secularized Christian interpretation” of the vacanas (528).

    “The numerous passing references in Schouten’s book to “Brahmana culture,” “Brahmana values” and “Brahmana rules” always signify something oppressive and exploitative. The author hardly elaborates on this…. We may assume that Schouten’s anti-brahmin prejudice is the result of his reading the modern writings of, and speaking with, Virasaiva propagandists who are
    motivated more by contemporary caste-oriented politics than by religiosity or a desire for historical objectivity. … There is no serious attempt in this book at an analysis of the supposedly all-powerful brahmin grip on society, and whatever glimpses Schouten offers us have a clearly myth like quality. 38I would like to hear Schouten explain why there are so many economically
    poor brahmins, not only throughout Karnataka, but all across India. Poverty among brahmins is not a recent phenomenon either. In India it is nowadays just as “politically incorrect” to speak about poor brahmins as it was to speak about poor Jews in central Europe in the 1930s, but scholarly integrity demands that we ask such questions.” (531-532).

    “In the chapter on women, Schouten gives secularized interpretations to mystical utterances” (534).

    ಉತ್ತರ
    • ಏಪ್ರಿಲ್ 28 2013

     ಸಿಂಧುರವರೆ, ಥ್ಯಾಂಕ್ಸ್. ನಿಮ್ಮ ಕಾಮೆಂಟ್ ಸಕಾಲಿಕವಾಗಿದೆ. ಬೋರಟ್ಟಿಯವರ ಉತ್ತರಕ್ಕೆ ಎದುರು ನೋಡೋಣ.

     ಉತ್ತರ
    • ಏಪ್ರಿಲ್ 29 2013

     ಉತ್ತಮವಾದ ಪ್ರತಿಕ್ರಿಯೆ

     ಉತ್ತರ
    • Gopalakrishna Bhagwat
     ಆಗಸ್ಟ್ 3 2013

     Ms. Sindhu before writing anything mind ur language. If u call asSchouten’s third rated book others can also call ur group’s research as the same third rated fake research.

     you are also more oriented towards cultural conspiracy than religiosity and piousness.

     Major fallacy in ur argument is ur prejudice about whatever western is Christian and it is not good. Unless come out of this prejudice and throwing mud at others u wont realise anything and u wl be going on presenting contemptuous views like the above one

     ಉತ್ತರ
 3. savithru
  ಏಪ್ರಿಲ್ 26 2013

  @Dunkin

  I too observed the selective answers from you. Why can’t you try answering the rest of the questions that you ignored in your doc.

  ಉತ್ತರ
  • Vijay Boratti
   ಏಪ್ರಿಲ್ 28 2013

   i am tempted and provoked to write this yet another “last” reply. this is reponse to dunkin (who twists and hides archival materials to suit his theoretical framework), krantikeshwar, shanmukha, sadananada and other members of Balagangadhar’s coterie. all of you have been demanding evidences from my side. i thought all of you have been in contact with each other in sharing views and replies. i dont think there is such case. there is a communication gap between all of you. for instance, i have clearly written that for any kind of archival resources from my side or understanding my doubts about jalki’s thesis, anybody can refer my kannada book “hiriyara hiritana enaayitu” and my english book on “The Discovery of Vachanas”. perhaps, mr. jalki has not informed you or you might not have noticed this thing. it is your total ignoracne. Jalki, as usual, hides very important information from his own people. i have also started growing suspicious if all his coterie have read his thesis and the “truth” claim that it makes on “scientific” basis or not. this time jalki has hidden information about my books from his own coterie. unbelievable! where have i mentioned these books? in the reply to jalki’s thesis (13 pages). i am sure jalki might have also not gone through my books as he too is demanding archival sources or supports for my claims. he may not. even if he does, he may not share it with others. so i ask all the above mentioned people or coterie of Balagangadhar to go through all my books (two). they are open books. in the sense, they do not make any “truth” claims on the basis of “scientific” study. they are prone to future changes in accordance with new findings. that is research in my view.

   i ask Balagangadhar and his coterie not to demand supportive evidences from my side. i am fed with your frequent requests. read my two books which are exclusively about lingayath history of the modern period. roughtly 170 year of history upto 2000. i am going to write more in the event of new discovery of archival sources.

   to sindhu’s response. i have problems with both zydenbose’s and shouten’s understanding of lingayaths. you have not understood properly why i quote shouten. not to endorse him. but to point our limitations in jalki’s thesis. have you read jalki’s thesis? you will learn how to suit your archival materials according to theory’s framework if you read him. i MAY show his thesis to others so that i can show them how archival materials are manipulated subtly and “truth” claim is made on that basis. and to prove “how a thesis should not be written”. have you read jalki’s reply to my 13’s pages reply? some of them are made for “makings” sake. he uses my own language to reply to me. read all his kannada writings in this blog and his thesis. compare them. you will know how he contradicts his own statements and how he changes his stance. sometimes he lies also without any base. that is why, i dont deal with this coterie.

   all the coterie’s ideological positions are being nicely used by right wing groups in the west. read jalki’s and rajaram hegde’s “shabashgiri” to one person who was in the forefront in opposing anti-caste discrimination law in the u.k. perhaps, rescuing brahmins (one of the major highlights of the thesis) will be in tune with R.S.S. agenda. carry on Jalki! people of karnataka are watching you and your coterie. all the best for your right wing politics!

   Alwida, once again. i am not asking “notify me” this time. as i dont want to receive any mails from this blog or from you people.

   ಉತ್ತರ
   • Annapoorna
    ಏಪ್ರಿಲ್ 28 2013

    Dr. Boratti, If you want the world to read your books, why not make them easily available to the world?!! Scan it and upload it on some place in the web. Or create a blog site of your own and put the content of all your books there.

    Regarding your notion of research as expressed in your above comment, I think you need a good education in both philosophy and history of science. Please don’t display your stupidity and ignorance by preaching the world what research is.

    ಉತ್ತರ
    • ಏಪ್ರಿಲ್ 29 2013

     ನನಗೂ ಆ ಪ್ರಶ್ನೆ ಇದೆ. ನನ್ನ thesis, ಲೇಖನ ಎಲ್ಲವೂ ಎಲ್ಲರಿಗೂ ಓದಲು ಹಲವು e-ತಾಣಗಳಲ್ಲಿ ಲಭ್ಯವಿದೆ. ಆದರೂ ಅದನ್ನು ಓದದೆ ಜನರು ಪ್ರಶ್ನೆ ಕೇಳುತ್ತಾರೆ. ಬೋರಟ್ಟಿ ಕೂಡ ಅದೇ ಕೆಲಸ ಮಾಡಿ ಅನಂತರ ಹೇಳಬಹುದು ಓದಿ ಎಂದು. ನಾನು ಖುದ್ದಾಗಿ ಬರೆದು ಕೇಳಿದರೂ ಅವರ ಥೀಸಿಸ್ ಇನ್ನೂ ಕೊಟ್ಟಿಲ್ಲ. ಇರಲಿ ಬಿಡಿ ಅವರ ಪುಸ್ತಕ ಜನ ಓದಿಲ್ಲ ಅಂದರೆ ಅವರಿಗೇ ನಷ್ಟ.

     ಉತ್ತರ
     • savithru
      ಏಪ್ರಿಲ್ 29 2013

      please give me the link to your thesis.Last sunday I wasted my few hours and petrol in searching for your book in Bangalore.

      ಉತ್ತರ
      • Gopalakrishna Bhagwat
       ಆಗಸ್ಟ್ 3 2013

       Ayyo papa Ms. Savithru I think u don’t have any better work to do

       ಉತ್ತರ
    • savithru
     ಏಪ್ರಿಲ್ 29 2013

     Annapoorna…

     I got it confirmed from one of your CSLC core member for no availability of Dunkin’s theisi on the web.

     When Boratti has taken pain in searching out your book ( I failed to get one even after my effort in bangalore) to read and reply to Dunkin,….where is the problem in you people in spending some to get his book.

     ಉತ್ತರ
     • ಏಪ್ರಿಲ್ 29 2013

      ನನ್ನ ಪುಸ್ತಕಕ್ಕೆ ನೀವು ಇವರಿಗೆ ಸಂಪರ್ಕಿಸಿ ವ್ಯವಸ್ಥೆ ಮಾಡಿಕೊಳ್ಳ ಬಹುದು: ಸಿ.ಎಸ್.ಎಲ್.ಸಿ. ಕೊಠಡಿ ಸಂಕೆ ೭, ಪರೀಕ್ಷಾಂಗ ಭವನ, ಕುವೆಂಪು ವಿ.ವಿ. ದೂರವಾಣಿ: 08282-257316

      ಉತ್ತರ
      • ಏಪ್ರಿಲ್ 30 2013

       @Dankin …. ದಯವಿಟ್ಟು ನಿಮ್ಮ ಹಿಂದಿನ ಅನ್ನಪೂರ್ಣ ಅವರಿಗೆ ಬರೆದ ಮರುನುಡಿ ಓದಿ…ನಿಮಗಾಗಿ ಮತ್ತೆ ಇಲ್ಲಿ ಕೊಟ್ ಮಾಡ್ತಾ ಇದ್ದೀನಿ

       “ನನಗೂ ಆ ಪ್ರಶ್ನೆ ಇದೆ. ನನ್ನ thesis, ಲೇಖನ ಎಲ್ಲವೂ ಎಲ್ಲರಿಗೂ ಓದಲು ಹಲವು e-ತಾಣಗಳಲ್ಲಿ ಲಭ್ಯವಿದೆ. ಆದರೂ ಅದನ್ನು ಓದದೆ ಜನರು ಪ್ರಶ್ನೆ ಕೇಳುತ್ತಾರೆ. ಬೋರಟ್ಟಿ ಕೂಡ ಅದೇ ಕೆಲಸ ಮಾಡಿ ಅನಂತರ ಹೇಳಬಹುದು ಓದಿ ಎಂದು. ನಾನು ಖುದ್ದಾಗಿ ಬರೆದು ಕೇಳಿದರೂ ಅವರ ಥೀಸಿಸ್ ಇನ್ನೂ ಕೊಟ್ಟಿಲ್ಲ. ಇರಲಿ ಬಿಡಿ ಅವರ ಪುಸ್ತಕ ಜನ ಓದಿಲ್ಲ ಅಂದರೆ ಅವರಿಗೇ ನಷ್ಟ.”.

       ಯಾಕೆ ಇಂತಹ ಹಸಿ ಹಸಿ ಸುಳ್ಳು ಹೇಳ್ತೀರಾ? ಬೋರಟ್ಟಿ ಯವರನ್ನು ವಾದದಲ್ಲಿ ಸೋಲಿಸುವ ಒಂದೇ ಗುರಿಯ ನಿಮ್ಮದು?

       ನಿಮ್ಮ ಥೀಸಿಸ್ ನೆಟ್ ನಲ್ಲಿ ಸಿಗಲ್ಲ ಅನ್ನೋದು ಈಗ ನಾನು ಕೇಳಿದ ಮೇಲೆ ಬ್ಬಾಯಿ ಬಿಡ್ತೀರ….

       ನೀವು ನಿಮ್ಮ ಆರ್ಕೈವಲ್ ಸೆಲೆಗಳನ್ನ ತಿರುಚೋದು.. ವಿಷಯಗಳನ್ನು ಅಡಗಿಸಿಡೋದರ ಬಗ್ಗೆ ಬೋರಟ್ಟಿಯವರು ಬರೆದರೆ ಸುಮ್ನೆ ಈ ತರ ಕಾಲೆಳೆದು ಅವರನ್ನ ಹಿಂದೆ ತಳ್ಳಲು ಪ್ರಯತ್ನ ಮಾಡ್ತಾ ಇದೀರೆ ಹೊರತು ..ನಿಜಕ್ಕೂ ನೀವು ಚರ್ಚೆಗೆ ಮುಂದಾಗ್ತಾ ಇಲ್ಲ..

       ಬೋರಟ್ಟಿಯವರು ಹುಡ್ಕಿದರೂ ಸಿಗದ (ನಾನು ಬೆಂಗಳೂರಲ್ಲಿ ಹುಡುಕಿ ಹೇಳ್ತಾ ಇರೋ ಮಾತು ಇದು) ನಿಮ್ಮ ಪುಸ್ತಕವನ್ನು ಯಾವುದೇ ಜಮ್ಬವಿಲ್ಲದೆ ಹುಡುಕಿ ನಿಮಗೆ ಮರುನುಡಿದಿದ್ದಾರೆ… ನೀವಾದರೂ ಮೇಲಿನಂತ ಉಡಾಫೆಯ ಮಾತು….

       ನಿಂತಿರುವ ಕಾಲು ಸೋಲುತ್ತಿರವ ಅನುಭವವ? ಡಂಕಿನ್ ಅವ್ರೆ?

       ಉತ್ತರ
      • ಏಪ್ರಿಲ್ 30 2013

       ನಿಮ್ಮ ಪುಸ್ತಕ ತರಿಸಿಕೊಳ್ಳುವ ವ್ಯವಸ್ತೆ ಮುಂಚೆಯೇ ಮಾಡಿಕೊಂಡಿದ್ದೀನಿ…. ಇದರ ಬಗ್ಗೆ ಅಲ್ಲ ನನ್ನ ಹಿಂದಿನ ಕಾಮೆಂಟ್

       ಉತ್ತರ
       • ಏಪ್ರಿಲ್ 30 2013

        facebookನಲ್ಲಿ ನಾನು ಬರೆದದ್ದೆಲ್ಲವನ್ನೂ ಓದಿದ್ದರೆ ನನ್ನ ಥೀಸಿಸ್ ಎಲ್ಲಿ ಸಿಗುತ್ತೆ ಅಂತ ಗೊತ್ತಾಗುತ್ತಿತ್ತು. ಈಗಲಾದರೂ ಮಾಡಿ ಆ ಕೆಲಸ.

        ಉತ್ತರ
        • ಏಪ್ರಿಲ್ 30 2013

         This is not the straight answer,….I read your synopsys… and asked your thesis …But the answer I got was .. it is not available!

         any how… It is not too late to give the direct link for your thesis…

         and I cant keep following your each comments …..I can only read those which you share!

         ಉತ್ತರ
         • ಏಪ್ರಿಲ್ 30 2013

          see savithru, there are a few reasons why I do not answer your questions on fb or here or of Boratti for that matter. most of your questions have been answered in our/my writings. like the question about (caste) system is discussed in the caste book. one needs training in a field of knowledge to raise questions in that field. all your questions come from common sense and they cannot be answered by anybody on earth.

          consider Newton’s 3rd law of motion for example: For every action, there is an equal and opposite reaction. It is perfectly possible to raise the following problem (using our commonsense) in reply to Newton: There are no exceptions to the laws of nature says Newton. According to him, this applies to all matter and energy. Human beings are matter and energy, thus we can assume that all humans are governed by the same laws. Does Newton mean then that everything in human life is balanced: birth-death, upper and lower castes, power and non-power…etc?

          All that a scientist can say in reaction to such seemingly plausible question is that it is a wrong question. The problem is that there is no way on earth to explain why this is a wrong question if you do not have basic knowledge of philosophy and logic.

          Our group and I face a similar problem in the ongoing discussion. How do I show you and all those who write passionately that the questions you people raise are wrong. what stops you and all those writers from understanding this is not only a lack of knowledge in argumentation, logic, philosophy, research etc. but your conviction that you know all of them.

          just look at the questions you post on fb. the only purpose in asking them is to show how i am wrong and you are right. no discussion is possible when you are convinced that what has occurred to you in a matter of a day or sometimes in a few minutes has not occurred to us in our 10 years of research. it is a criticism of your tone and conviction that your questions are right questions. this is not an attempt to to insult you as a person. i have not even seen you in person.

          unless we know what we do not know, there is no way we will ever learn something new.

          ಉತ್ತರ
   • Prof. Sadananda J S
    ಮೇ 5 2013

    Mr.Boratti, you are bringing my name into this debate. Did I, at any time enter this debate. If at all you are refering to my write up on research, please let me know what is your problem with what I have said.
    Sadananda

    ಉತ್ತರ
 4. Dr.A.Shanmukha
  ಏಪ್ರಿಲ್ 26 2013

  ಕ್ರಾಂತಿಕೇಶ್ವರರೇ,

  ತಾಳಿ ತಾಳಿ ಎಂತಹ ಪ್ರಮಾದ ನಿಮ್ಮದು. ಬೋರಟ್ಟಿಯವರು ಇರುವುದು ನಮ್ಮ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಲ್ಲ, ಡಂಕಿನ್ ಗೆ ಪ್ರಶ್ನೆಗಳನ್ನು ಕೇಳಲಿಕ್ಕೆ ಅಷ್ಟೆ. ಅವರಿಂದ ಉತ್ತರ ನಿರೀಕ್ಷಿಸುವುದು ಅಕ್ಷಮ್ಯ.

  ಡಂಕಿನ್ ರು ತಮ್ಮ ವಾದಕ್ಕಾಗಿ ಆಕರಗಳನ್ನು ತಿರುಚಿದ್ದಾರೆ, ಬೇಕಾದ್ದನ್ನು ಆಯ್ಕೆಮಾಡಿಕೊಂಡು ವಿರುದ್ದವಾದ್ದನ್ನು ಬಿಟ್ಟಿದ್ದಾರೆ. ಅವರ ಚೌಕಟ್ಟು ತಪ್ಪು, ನಾನು ಸುಮ್ಮನೆ ಮಾತಾಡುತ್ತಿಲ್ಲ ನನ್ನ ಹತ್ತಿರು ಸಿಕ್ಕಪಟ್ಟೆ ಸಾಕ್ಷ್ಯಗಳಿವೆ ಎಂದು ಚಿಕ್ಕ ಮಕ್ಕಳಿಗೆ ಬೆದರಿಸುವ ಹಾಗೆ ಬೆದರಿಸುವ ಪ್ರಯತ್ನ ಮಾಡುತ್ತಾರೆ. ಮತ್ತು ಸ್ವಲ್ಪ ನೈತಿಕ ಭಾಷಣ ಮಾಡುತ್ತಾರೆ ಅದನ್ನು ನಾವು ಸುಮ್ಮನೆ ಕೇಳಿ ಅವರ ಪ್ರಶ್ನೆಗಳಿಗೆ ಕೈಕಟ್ಟಿ ಉತ್ತರಿಸಬೇಕು ಅಷ್ಟೆ!

  ನಾನಂತೂ ಈ ರೀತಿಯ ಮೆಥಾಡಲಜಿ ಅಪರಾಧಗಳೆಂಬ ( ಪಾಂಡಿತ್ಯ ಪ್ರದರ್ಶನದ) ಹೇಳಿಕೆಗಳನ್ನು ಅವರು ಸಾಭೀತು ಮಾಡುವವರಿಗೆ ಅವರ ಯಾವ ಪ್ರಶ್ನೆಗೂ ಉತ್ತರಿಸುವ ಅಗತ್ಯ ಇಲ್ಲವೆಂದೇ ಭಾವಿಸುತ್ತೇನೆ.

  ಬೋರಟ್ಟಿಯವರು ಅವರು ಮಾಡುವ ಆರೋಪಗಳನ್ನು ಸಾಭೀತು ಮಾಡಬೇಕು,

  1. ವಚನಗಳ ಬಗ್ಗೆ ಅವರ ವಾದವೇನು ಅದು ಹೇಗೆ ಡಂಕಿನ್ ರ ವಾದವನ್ನು ಸುಳ್ಳುಮಾಡುತ್ತದೆ ಮತ್ತು ಅವರು ಪದೇ ಪದೇ ತೋರಿಸುತ್ತಿರುವ ಸಾಕ್ಷ್ಯ ಸಾಕ್ಷ್ಯ ಎನ್ನವ ಗುಮ್ಮ ಏನು?

  2. ಡಂಕಿನ್ ಯಾವ ಆಕರವನ್ನು ಹೇಗೆ ತಿರುಚಿದ್ದಾರೆ? ಅದು ಮೂಲತಃ ಹೇಗಿತ್ತು ಇವರು ತಮ್ಮ ಅನುಕೂಲಕ್ಕಾಗಿ ಯಾವ ರೀತಿಯಲ್ಲಿ ತಿರುಚಿದ್ದಾರೆ?

  3. ತಮಗೆ ಬೇಕಿದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂದಾದರೆ ತಮ್ಮ ವಾದಕ್ಕೆ ವಿರುದ್ದವಾಗಿದ್ದ ಯಾವ ಆಕರಗಳನ್ನು ಬಿಟ್ಟಿದ್ದಾರೆ. ಆ ಆಕರಗಳನ್ನು ಉಲ್ಲೇಖಿಸಿ ( ಅದೇನೆಂದು ಇಲ್ಲಿ ಮುಂದಿಡಬೇಕು) ವಿಶ್ಲೇಷಿಸಿದರೆ ಡಂಕಿನ್ ರ ವಾದಕ್ಕೆ ವಿರುದ್ದವಾದ ನಿಲುವಿಗೇ ಬರಬೇಕಾಗುತ್ತದೆ? ಎಂಬುದನ್ನು ಅವರು ತೋರಿಸಬೇಕು.

  ಅದನ್ನು ಬಿಟ್ಟು ತಿರುಚಿದ್ದಾರೆ, ಆಯ್ಕೆ ಮಾಡಿಕೊಂಡಿದ್ದಾರೆ, ಇದನ್ನು ಏಕೆ ನೋಡಲಿಲ್ಲ? ಅದನ್ನು ಏಕೆ ನೋಡಲಿಲ್ಲ? ನಿಮ್ಮದು ದುರದ್ದೇಶ, ಇನ್ನೂ ಹಲವಾರು ಆಕರಗಳು ನಿಮಗೆ ತಿಳಿದೇ ಇಲ್ಲ. ಈ ಮೆಥಡಾಲಜಿ ಏಕೆ ಬಳಸಿದಿರಿ? ಆ ಮೆಥಡಾಲಜಿಯನ್ನೇಕೆ ಬಳಸಿಕೊಳ್ಳಲಿಲ್ಲ. ಮೇಲ್ನೋಟದ ಸಾಕ್ಷಿಗಳನ್ನು ಬಳಸಿಕೊಂಡು ಸರಳೀಕರಣ ಮಾಡಿದ್ದೀರಿ. ಈ ಸಮಸ್ಯೆ ಬಹಳ ಸಂಕೀರ್ಣವಾದು, ಅಷ್ಟು ಸರಳೀಕರಣ ಮಾಡುವುದು ವಾಸ್ತವಕ್ಕೆ ಅಪಚಾರ!!! ಈ ರೀತಿಯ ಒಣಪಾಂಡಿತ್ಯದ ಪ್ರದರ್ಶನವನ್ನು ಎಷ್ಟು ನೋಡಿಲ್ಲ. ISEC, IIPA, DU, MIDS, CSDS CSCS ಇನ್ನೂ ಎಷ್ಟು ಕಡೆಗಳಲ್ಲಿ ಈ ರೀತಿಯ ಮೇಘಾ ಮೇಥಡಾಲಜಿ ಪ್ರವೀಣರ ಕೊಂಕುಗಳನ್ನು ಕಂಡಿಲ್ಲ. ನಮಗೆ ಈ ರೀತಿಯ ಗೇಮ್ ಗಳು ವಾದ, ಚರ್ಚೆಗಳಲ್ಲಿ ದುರ್ಬಲರ ಸರಳ ಆಯುಧಗಳಷ್ಟೆ. ವೈಯುಕ್ತಿಕವಾಗಿ I don’t take this game very seriously. ಮೇಲಿನ ದೊಡ್ಡ ಸಂಶೋಧನ ಸಂಸ್ಥೆಗಳಲ್ಲಿ ಈ ರೀತಿಯ ಪ್ರಶ್ನೆ ಕೇಳುವವರನ್ನು ನೋಡುವ ರೀತಿಯೇ ಬೇರೆ. ಒಮ್ಮೆ ಅಲ್ಲಿ ಪಾಂಡಿತ್ಯ ತೋರಿಸಿ ಬನ್ನಿ. ನಮಗೆ ಅದು ಬೋರು.

  ನಮಗೆ ಬೇಕಿರುವುದು ಇಷ್ಟು:
  ನಿಮ್ಮ ಪ್ರತಿವಾದವೇನು? ಅದನ್ನು ಸಾಬೀತು ಮಾಡಿ. ನೀವು ಯಾವ ಮೆಥಡಾಲಜಿಯನ್ನಾದರೂ ಬಳಸಿ ಆಕರಗಳನ್ನು ಎಷ್ಟು ಯಾವುದು ಬೇಕೋ ಅದನ್ನೇ ಆಯ್ಕೆ ಮಾಡಿಕೊಳ್ಳಿ ನಮ್ಮ ಅಭ್ಯಂತರವಿಲ್ಲ. ವಚನಗಳ ಬಗ್ಗೆ ನಿಮ್ಮ ವಾದವೇನು? ಅದನ್ನು ಹೇಳುವವರಿಗೂ

  ಉತ್ತರ
 5. Dr.A.Shanmukha
  ಏಪ್ರಿಲ್ 26 2013

  …ವರೆಗೂ he is deserved to be ignored. ಎಷ್ಟು ಬೇಕಾದರು ಮೆಥಾಡಲಾಗಿಕಲ್ ತಾಂತ್ರಿಕ ಜ್ಞಾನದ ಪಾಂಡಿತ್ಯ ಪ್ರದರ್ಶಿಸಿ ತನ್ನ ಬೆನ್ನನ್ನು ತಟ್ಟಿ/ಸಿ ಕೊಳ್ಳಲಿ. Let him enjoy…. ನಮ್ಮ ಕಡೆಯಿಂದಲೂ ಅವರಿಗೆ alvidaaaaaa……

  ಉತ್ತರ
 6. ಏಪ್ರಿಲ್ 27 2013

  ಸವಿತೃ ಅವರೇ, ನನ್ನದು “selective answers” ಅಂದಿರಲ್ಲ, ಸಾಧ್ಯವಾದರೆ ನಾನು ಉತ್ತರಿಸದೆ ಉಳಿದ ಪ್ರಶ್ನೆಗಳು ಯಾವುದು ಎಂದು ಇಲ್ಲಿ ನಮೂದಿಸುತ್ತೀರಾ? ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡಲು ಇದು ಪರೀಕ್ಷೆ ಅಲ್ಲ ನೋಡಿ. ಆದ್ದರಿಂದ, ಕೇಳುವ ಪ್ರಶ್ನೆಗಳು ಈ ಚರ್ಚೆಯ ಸಂದರ್ಭದಲ್ಲಿ ಏಕೆ ಮುಖ್ಯ ಎಂದೂ ಎರಡು ಸಾಲು ಬರೆದು ಬಿಡಿ ಹಾಗೆ. ಥ್ಯಾಂಕ್ಸ್!

  ಉತ್ತರ
 7. Umesh
  ಏಪ್ರಿಲ್ 29 2013

  Can someone please give link to Prof. Rajendra Chenni’s arcticle?

  ಉತ್ತರ
 8. M A Sriranga
  ಆಗಸ್ಟ್ 22 2013

  Sir Dr.Rajaram Hegde
  I have read almost all articles about vachanagalu Vs jativyavaste debate in prajavani. Before this debate i have read Dankin Jalaki and Balagangadhara’s article published in Chintana Bayalu. If possible please bring one book including all these articles. It will really help readers like me who are interested to read them again in one lump……….M A Sriranga Retd Postmaster Yalahanka Bangalore

  ಉತ್ತರ
 9. shripad
  ಮಾರ್ಚ್ 2 2019

  ೈದೊಂದು ಗಂಭೀರ ಸಂಶೋಧನೆಯ ವಿಷಯ

  ಉತ್ತರ
 10. shripad
  ಮಾರ್ಚ್ 15 2019

  ಝಳಕಿಯವರ ಮಾತನ್ನು ಸಾಧಾರವಾಗಿ ನಿರಾಕರಿಸಿ ನೋಡುವಾ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments