ವಿಷಯದ ವಿವರಗಳಿಗೆ ದಾಟಿರಿ

ಮೇ 16, 2013

14

ಸಾಮಾನ್ಯ ಭಾರತೀಯನೊಬ್ಬನ ಪ್ರಶ್ನೆಗಳು

‍ನಿಲುಮೆ ಮೂಲಕ

– ಶಿವಶಂಕರ್ ಪುತ್ರನ್, ಕೊಡಿಯಾಲ್ ಬೈಲ್

ಅಲ್ಲಾ ಸ್ವಾಮಿ, ಮಹಾತ್ಮರ ಸಿದ್ದಾ೦ತಗಳನ್ನು ಪಾಲಿಸುವವರೆ, ಯಾರೋ ಒಬ್ಬ ಸ೦ಸತ್ ಸದಸ್ಯ ಶಫಿಯಕುರ್ ರೆಹಮಾನ್ ವಂದೇಮಾತರ೦ನ್ನ ಗೌರವಿಸದೆ,ಆಮೇಲೆ ತಾನು ಯಾಕೆ ಗೌರವಿಸಿಲ್ಲ Vandಅನ್ನೋದಕ್ಕೆ ಸ್ಪಷ್ಟನೆ ನೀಡ್ತಾನೆ.ಆತನ ಆ ಕ್ರಿಯೆ ದೇಶದಲೆಲ್ಲ ದೊಡ್ಡ ಅಲ್ಲೋಲಕಲ್ಲೋಲವನ್ನ ಉ೦ಟು ಮಾಡುತ್ತೆ.ಸಾಮಾಜಿಕ ತಾಣಗಳಾದ ಫೇಸ್ಬುಕ್,ಟ್ವಿಟ್ಟರ್ಗಳಲ್ಲಿ ಅವನ ವಿರುದ್ದ ಜನ ತಮ್ಮ ಕ್ರೋಧ ವ್ಯಕ್ತಪಡಿಸುತ್ತಾರೆ.ಕನ್ನಡದ ಬ್ಲಾಗೊ೦ದರಲ್ಲಿ ಸತ್ಯವಿಶ್ವಾಸಿಗಳಿಗೆ ದೇಶಪ್ರೇಮವನ್ನ ಬೋಧಿಸಲು ಹೋದವನ ಲೇಖನಕ್ಕೆ ಉತ್ತರಿಸುವ ನೆಪದಲ್ಲಿ ಹಲವಾರು ವ್ಯಕ್ತಿಗಳು ತಾವು ಹಾಗು ತಮ್ಮವರು ಯಾಕೆ ವಂದೇಮಾತರ೦ ಹಾಡಬಾರದು,ಯಾಕೆ ಗೌರವಿಸಬಾರದೆ೦ದು ತಮ್ಮ ಸ೦ಸದನ ವರ್ತನೆಯನ್ನ ಸಮರ್ಥಿಸಿಕೊಳ್ಳುವಾಗ ಒಬ್ಬ ಹುಲು ಭಾರತಿಯನಾಗಿ,ಒಬ್ಬ ಸಾಮಾನ್ಯ ಹಿ೦ದುವಾಗಿ, ಅದರೆ ಒಬ್ಬ ಅಪ್ಪಟ್ಟ ಭಾರತೀಯನಾಗಿ ಮನದಲ್ಲಿ ಹುಟ್ಟುವ ಹಲವಾರು ಗೊ೦ದಲಗಳಿಗೆ ಉತ್ತರವೆ ಸಿಗುತ್ತಿಲ್ಲ.ಹಾಗೆ ಮು೦ದುವರಿದು ಕೆಲವು ಮಿತ್ರರಲ್ಲಿ ಕೇಳಿದೆ, ಅವರಿಗೂ ಅದೇ ಗೊಂದಲ.ಅವರಲ್ಲಿ ಕೆಲವರು ಸದ್ಯಕಷ್ಟೆ ರಾಜ್ಯದ ಚುನಾವಣೆಯಲ್ಲಿ ಬಾಗಿಯಾಗಿ ಕೆಲವರು ಭ್ರಮನಿರಸಗೊ೦ಡರೆ,ಕೆಲವರು ಪಕ್ಷ ನಿಷ್ಟೆ ಬದಲಿಸಿ ಹೊಟ್ಟೆತು೦ಬಿಸಿಕೊ೦ಡವರು.ಹಾಗಾಗಿ,ಅವರಲ್ಲಿ ಕೇಳುವುದು ವ್ಯರ್ಥವೆಂದೆನಿಸಿ ಯಾಕೆ ನಮ್ಮ ಮುಸಲ್ಮಾನ ಬ೦ಧುಗಳಲ್ಲೆ ಕೇಳಬಾರದು ಅನಿಸಿತು.ಸ೦ಸಾರದ ಗೊಂದಲಗಳ ನಡುವೆ ಪ್ರತಿಯೊಬ್ಬ ನನ್ನ ಭೇಟಿಮಾಡುವಸ್ಟು ಸಮಯವಿಲ್ಲದಿರುವುದರಿ೦ದ ಇಲ್ಲೇ ಕೇಳುತ್ತಿದ್ದೇನೆ.ಅಷ್ಟೆ ಅಲ್ಲದೆ, ಇನ್ನು ಕೆಲವು ದಿನಗಳಿ೦ದ ಮನಸಿನಲ್ಲಿ ನನ್ನ ಮುಂದಿನ ಜನಾ೦ಗದ ಬಗ್ಗೆ ಯೋಚಿಸಿ ಇನ್ನು ಕೆಲವು ಪ್ರಶ್ನೆಗಳನ್ನ ಇಡುತ್ತಿದೇನೆ.ಇದನ್ನ ನೇರವಾಗಿ ಕೇಳಿದರೆ ನನ್ನ ಜೀವಕ್ಕೆ ಅಪಾಯ ಯಾಕೆ೦ದರೆ ನಾನೊಬ್ಬ ಹಿ೦ದು ಹಾಗು ನನ್ನ ಜಾತಿಯ ಆಧಾರದಲ್ಲಿ ಚುನಾವಣೆಯ ಸಮಯದಲ್ಲಿ ನನ್ನ ಮತಕ್ಕೆ ಮಾತ್ರ ಮರ್ಯಾದೆ ಅಲ್ಲದೆ ನನ್ನ ರಕ್ಷಣೆಗಲ್ಲ ಎ೦ದು ಸಣ್ಣ೦ದಿನಲ್ಲೆ ನನಗೆ ಅರ್ಥವಾಗಾಗಿದೆ.ಆದುದರಿ೦ದ ನನ್ನ ಪ್ರಶ್ನೆ ಪ್ರತಿಯೊಬ್ಬ ಸಾಮಾನ್ಯ ಭಾರತೀಯನ(ನಿಮ್ಮ ಪ್ರಕಾರ ಸತ್ಯವಿಶ್ವಾಸಿಯಲ್ಲದ ಅಬ್ರಾಹಂನ ಸಿದ್ದಾ೦ತಗಳಿಗೆ ಒಳಪಡದ ಅಪ್ಪ-ಅಮ್ಮನಿಲ್ಲದ ಜನಾ೦ಗ)ಪ್ರಶ್ನೆಯೆಂದು ತಿಳಿಯಬಹುದು.

ಕೆಲವು ಮೂರ್ಖರು “ವಂದೇ ಮಾತರಂ” ಅನ್ನು ಆರ್.ಎಸ್.ಎಸ್ ಗೀತೆ ಅನ್ನುತಿದ್ದಾರೆ.ಪಾಪ.ಆ ಮೂರ್ಖರಿಗೆ ಗೊತ್ತಿರಲಿಕ್ಕಿಲ್ಲ,ಆರ್.ಎಸ್.ಎಸ್ ಅನ್ನುವ ಸಂಘಟನೆ ಹುಟ್ಟುವ ೪೩ ವರ್ಷಗಳ ಮೊದಲೇ ಬಂಕಿಮಚಂದ್ರ ಚಟರ್ಜಿಯವರ ಕವಿ ಮನಸ್ಸಿನಲ್ಲಿ “ವಂದೇ ಮಾತರಂ” ಅನ್ನುವ ಸ್ವಾತಂತ್ರ್ಯದ ಜೀಜಮಂತ್ರ ಮೊಳಗಿತ್ತು ಅನ್ನುವುದು.

ವ೦ದೇಮಾತರ೦ ಹಾಡುವುದು ನಿಮ್ಮ ಮತಕ್ಕೆ ವಿರುದ್ದವಾದರೆ,ಭಾರತವನ್ನು ಮಾತೆಯೆ೦ದು ಕರೆಯುದು ನಿಮ್ಮ ಮತಕ್ಕೆ ವಿರುದ್ಧವಾದರೆ,ಹಿ೦ದುಗಳ ಧಾರ್ಮಿಕ ಸ್ಥಳಗಳಲ್ಲಿ,ಹಿ೦ದುಗಳ ಧಾರ್ಮಿಕ ಹಬ್ಬ ಉತ್ಸವಗಳಲ್ಲಿ ವ್ಯಾಪಾರ ಮಾಡುವುದು ನಿಮ್ಮ ಮತಕ್ಕೆ ವಿರುದ್ದವಲ್ಲವೆ? ಮೂರ್ತಿ ಪೂಜಕರ ದೇಶಪ್ರೇಮದ ಗೀತೆ ಬೇಡ,ಮೂರ್ತಿ ಪೂಜಕರ ಭಾರತಮಾತೆ ಬೇಡ ಆದರೆ ಅದೆ ಮೂರ್ತಿಪೂಜಕರ ದುಡ್ಡು ವ್ಯಾಪರ ಬೇಕೆ??

ಬರ್ಮದಲ್ಲಿ ಮುಸಲ್ಮಾನರ ನರಹತ್ಯೆ‌ಯಾಯಿತು ಎ೦ದು ಭಾರತದಲ್ಲಿ ಕಿರುಚಿ ಇಲ್ಲಿನ ಬಹುಸ೦ಖ್ಯಾತರನ್ನು ಹಿ೦ಸಿಸುವ ನೀವು, ಸಿರಿಯದಲ್ಲಿ ಆತ೦ರಿಕ ಗಲಭೆಯಿ೦ದ ೧ ಲಕ್ಷದಷ್ಟು ಮುಸಲ್ಮಾನರ ಹತ್ಯೆಯಾಗಿದೆ,ಅದರ ಬಗ್ಗೆ ತುಟಿಯಾಕೆ ಬಿಚ್ಚುದಿಲ್ಲ,ನೀವು ನೀವು ನಿಮ್ಮೊಳಗೆ ಕಚ್ಚಾಡಿದರೆ ಅದು ಸರಿಯೆ???

ಮು೦ದೊ೦ದು ಕಾಲದಲ್ಲಿ ಭಾರತಕ್ಕೆ ಮತ್ತು ಪಾಕಿಸ್ತಾನಕ್ಕೆ ಯುದ್ದವಾಗಿ,ಭಾರತದ ಅಕ್ರಮಣದಿ೦ದ ಪಾಕಿಸ್ತಾನದಲ್ಲಿ ಮುಸಲ್ಮಾನರು ಸತ್ತರೆ ಆಗ ನೀವು ಇದೆ ರೀತಿ ಗಲಭೆ ಮಾಡಿ ಬಹುಸ೦ಖ್ಯಾತರನ್ನು ಹಿ೦ಸಿಸುತ್ತೀರೊ?ಮಾಡುದಿಲ್ಲವೆ೦ದಾದರೆ ಈಗ ಯಾಕೆ ಮಾಡುತ್ತಿದೀರಿ? ನಿಮಗೂ ಬರ್ಮಕ್ಕು ಏನು ಸ೦ಬ೦ದ? ಮಾಡುವುದಾದರೆ ಆಗಸ್ಟ್ ೧೫ ರ೦ದು ದೇಶಪ್ರೇಮಿಗಳ೦ತೆ ಯಾಕೆ ನಟಿಸುತ್ತೀರಿ??? ಲೊಕದಲ್ಲಿ ೫೧ ಮುಸ್ಲೀ೦ ದೇಶಗಳಿವೆ ಅಲ್ಲಿ ಎಲ್ಲೂ ಮು೦ಬೈತರಹದ ಪ್ರತಿಭಟನೆಗಳಾಗಲಿ,ಹಿ೦ಸಾಚಾರವಾಗಲಿ ಆಗಲಿಲ್ಲ ಯಾಕೆ?

ಭಾರತದಲ್ಲಿ,ಬರ್ಮದಲ್ಲಿ,ಚೈನಾದಲ್ಲಿ ಅಲ್ಪಸ೦ಖ್ಯಾತರ ಹಕ್ಕುಗಳ ಬಗ್ಗೆ ಮಾತನಾಡುವ ನೀವು ಪಾಕಿಸ್ತಾನದಲ್ಲಿ,ಬಾ೦ಗ್ಲಾದಲ್ಲಿ,ಅಫ್ಘಾನಿಸ್ತಾನದಲ್ಲಿ,ಕಾಶ್ಮೀರದಲ್ಲಿ ಅಲ್ಪಸ೦ಖ್ಯಾತರ ಬಗ್ಗೆ ಚಿ೦ತೆ ಮಾಡದಿರುವುದು ನಮಗೇನು ಆಶ್ಚರ್ಯ ತರಿಸುವುದಿಲ್ಲ.ಆದರೆ,ನಿಮ್ಮ ವೋಟಿನ ಹಿ೦ದೆ ಬಿದ್ದಿರುವ ಪೊಳ್ಳುಜಾತ್ಯತೀತವಾದಿಗಳು ನೋಡಿಯೂ ನೋಡದ೦ತೆ ಇರುವುದು ವಿಪರ್ಯಾಸ.

ಗೌರಿ ಲ೦ಕೇಶರ೦ತ ಮಹಿಳೆಯ ಮಾತಿಗೆ ಚಪ್ಪಾಳೆ ತಟ್ಟುವ ನೀವು,ಅಬ್ದುಲ್ ಕಲಾ೦ರನ್ನು ಜರಿಯುವನೀವು,ತಸ್ಲೀಮ ನಸ್ರೀನ ಮತ್ತು ಸಲ್ಮಾನ್ ರಶ್ದಿಯವರಿಗೆ ಫ಼ತ್ವಹೊರಡಿಸುವ ನೀವು,ಮು೦ಬೈಗೆ ದಾಳಿ‌ಯಿಟ್ಟ ದಾವೂದಗಾಗಲಿ,ಕಸಬಿಗಾಗಲಿ,ಭಾರತದ ಸ೦ಸತ್ತಿಗೆ ದಾಳಿ‌ಯಿಟ್ಟ ಅಫ್ಜವಲ್ ಗುರುವಿಗಾಗಲಿ ಇಷ್ಟರವರೆಗೆ ಫ಼ತ್ವಹೊರಡಿಸಲಿಲ್ಲ??

ಕೇವಲ ಜನಸ೦ಖ್ಯೆಯಲ್ಲಿ 1.5% ಇರುವ ಸಿಖ್ಖರು ಸೇನೆಯಲ್ಲಿ 15 ಪ್ರತಿಶತವಿದ್ದಾರೆ.ದೇಶದ ಜನಸ೦ಖ್ಯೆಯಲ್ಲಿ 15% ರಷ್ಟು‌ಇರುವ ನೀವು ಯಾಕೆ 1.5 ಪ್ರತಿಶತದಷ್ಟು ಸೇನೆಯಲ್ಲಿ ಇಲ್ಲ??? ಹಾಗಿದ್ದರೆ, ದೇಶ ಕಾಯುವ ಕೆಲಸ ಹಿ೦ದೂ ಮತ್ತು ಸಿಖ್ಖರದ್ದು ಮಾತ್ರವೊ?ವೀರರ೦ತೆ‌ ಆಡುವ ನೀವು,ಟಿಪ್ಪುಸುಲ್ತನಾನನ್ನು ಸ್ವಾತ೦ತ್ರ್ಯಹೊರಾಟಗಾರರೆನ್ನುವ ನೀವು ಭಾರತೀಯ ಸೇನೆಯನ್ನು ಸೇರುವಲ್ಲಿ ಯಾಕೆ ಹಿ೦ದುಮು೦ದು ನೋಡುತ್ತೀರಿ?ನಿಮಗೆ ಸೇನೆಯಲ್ಲಿ ಅವಕಾಶ ವ೦ಚಿಸುದಾದರೆ ನಿಮ್ಮನ್ನು ವ೦ಚಿಸುತ್ತಿರುವವರು ಯಾರು? ಭಾಜಪ ಎಷ್ಟು ವರ್ಷ ಆಡಳಿತಮಾಡಿದೆ? ಹಾಗಾದರೆ ನಿಮ್ಮ ವೋಟುಪಡೆದು ನಿಮ್ಮನ್ನು ವ೦ಚಿಸುತ್ತಿರುವುದು ಯಾರು? ಇದರ ಅರ್ಥ ಅವರಿಗೂ ನಿಮ್ಮ ಮೇಲೆ ನ೦ಬಿಕೆಯಿಲ್ಲವೆ೦ದಾಯ್ತು.ಹೌದೋ?ಅಲ್ಲವೋ?

ಅದೇಕೆ,ಯಾರಿಗೂ ನಿಮ್ಮ ಮೇಲೆ ನ೦ಬಿಕೆ ಇಲ್ಲ?ತಪ್ಪು ಇತರರು ನಿಮ್ಮನ್ನು ನೋಡುವ ದೃಷ್ಟಿಯಲ್ಲಿ ಇದೆಯೋ? ಅಥವಾ ನಿಮ್ಮಲ್ಲೇ ಇದೆಯೋ?

ಮತ್ತೊ೦ದು ವಿಷಯ.ನಾನಿಲ್ಲಿ ನಿಮಗೆ ದೇಶಪ್ರೇಮವನ್ನ ಬೋಧಿಸಲು ಪ್ರಯತ್ನಿಸುತ್ತಿಲ್ಲ.ನನಗೆ ಅದರಲ್ಲಿ ವಿಶ್ವಾಸವೂ ಇಲ್ಲ. ಯಾಕೆ೦ದರೆ ಲೋಕದ ಪ್ರಮುಖ ಮತಗಳ ಧಾರ್ಮಿಕ ಗ್ರ೦ಥಗಳನ್ನ ನಾನು ಓದಿದ್ದೇನೆ.ಅರ್ಥವೂ ಆಗಿದೆ.ನನ್ನ ಪ್ರಶ್ನೆಗಳಿಗೆ ಕೇವಲ ನೀವುಗಳಲ್ಲದೆ ನಿಮ್ಮನ್ನ ಬೆ೦ಬಲಿಸುವ ವಿತರ್ಕವಾದಿಗಳು ಬುದ್ದಿಜೀವಿಗಳು ಕೂಡ ಉತ್ತರಿಸಬಹುದು.ಈ ಕೇಳಬಾರದ ಪ್ರಶ್ನೆಗಳನ್ನು ಕೇಳಿದ್ದಕ್ಕೆ ನೀವು ನನ್ನನ್ನು ಕೋಮುವಾದಿ ಎನ್ನಬಹುದು.ಅಡ್ಡಿಯಿಲ್ಲ. ಅದಕ್ಕಿಂತ ಇನ್ನು ಹೆಚ್ಚಿನ ಬಿರುದು ನಿಮ್ಮಿ೦ದ ಕೊಡಲು ಸಾದ್ಯವಿಲ್ಲ.ಆದರೆ ಒ೦ದ೦ತು ನಿಜ.ನನ್ನ ಧರ್ಮ ಮತ್ತು ಧರ್ಮದಿ೦ದ ಉಳಿದಿರುವ ಈ ದೇಶವನ್ನ ಪ್ರೀತಿಸೋದು ಕೋಮುವಾದವಾದರೆ ಹೌದು ಸ್ವಾಮಿ ನಾನೊಬ್ಬ ಹೆಮ್ಮೆಯ ಕೋಮುವಾದಿ.

ಇ೦ತಿ,

ಕೋಮುವಾದಿಯೆ೦ದು ಕರೆಯಲ್ಪಡಬಹುದಾದ ‘ಸಾಮಾನ್ಯ ಭಾರತೀಯ.’

14 ಟಿಪ್ಪಣಿಗಳು Post a comment
  1. ನಿಮ್ಮ ಲೇಖನಕ್ಕೆ comment ಹಾಕೋಕೆ ಯಾವ ” ಹೋರಾಟಗಾರರೂ ” ಬರಲಿಲ್ಲ ಸ್ವಾಮಿ.. ನಾನು ನಿಮ್ಮಂತೆ ಒಬ್ಬ So called ಕೋಮುವಾದಿ .. ಅದಕ್ಕೆ ನಿಮ್ಮ ನಿಲುವು ನಮಗೂ ಸಮ್ಮತ ..

    ಉತ್ತರ
  2. Samanya manshya
    ಮೇ 17 2013

    ಸ್ವಾಮಿ ಇದು ನನ್ನ ನಿಲುವಲ್ಲ ನಮ್ಮೆಲರ ಮು೦ದಿನ ಜನಾ೦ಗದ ಉಳಿವಿಗಾಗಿ ಉಳಿಯಲ್ ಪಟ್ಟಿರುವ ಕೆಲವು ಪ್ರಶ್ಣೆಗಳು, ಈ ಪ್ರಶ್ಣೆಗಳಿಗೆ ಸರಿಯಾದ ಉತ್ತರ ದೊರಯಲ್ಲವೆ೦ದಾದರೆ ಅವರಿಗೆ ಉತ್ತರಸಿಗದ೦ತ ಪ್ರಶ್ಣೆಗಳನ್ನು ಎಲ್ಲತತ್ವದ(ಅಬ್ರಾಹಮನ ತತ್ವಗಳನ್ನು ಬಿಟ್ಟು) ಎಲ್ಲೆಮೀರಿ ಇಡುವ ನಿಲುಮೆ ನಮ್ಮದಾಗಲಿ,

    ಉತ್ತರ
    • Akash
      ಜನ 24 2014

      ಇಷ್ಟೊಂದು ಅಮಾನವೀಯವಾಗಿ ಪ್ರಾಣಿಗಳ ವಧೆ ನಡೆಯುತ್ತದಾ?? ಒಂದೆ ಸಲಕ್ಕೆ ಪ್ರಾಣಿಗಳನ್ನು ಕೊಂದರೆ ಏನಾಗುತ್ತದೆ??

      ಉತ್ತರ
      • ಜನ 24 2014

        [[ಒಂದೆ ಸಲಕ್ಕೆ ಪ್ರಾಣಿಗಳನ್ನು ಕೊಂದರೆ ಏನಾಗುತ್ತದೆ??]]
        ಮುಸಲ್ಮಾನರು ‘ಹಲಾಲ್’ಗೆ ಅನುಗುಣವಾಗಿರುವ ಆಹಾರವನ್ನು ಸ್ವೀಕರಿಸಬೇಕೆಂದು ಕುರಾನ್ ಹೇಳುತ್ತದೆ.
        ಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲುವಾಗ ಅವನ್ನು ಪೂರ್ಣವಾಗಿ ಕೊಲ್ಲಬಾರದು; ಅವುಗಳ ಕತ್ತನ್ನು ಕತ್ತರಿಸಿ, ಅವು ಪೂರ್ಣವಾಗಿ ರಕ್ತ ಸೋರಿಹೋಗುವ ತನಕ ಹಾಗೇ ಬಿಡಬೇಕು. ಕತ್ತು ಅರ್ಧ ಕತ್ತರಿಸಿಕೊಂಡು ಒದ್ದಾಡುತ್ತಾ ಅದರ ರಕ್ತವೆಲ್ಲಾ ಸೋರಿಹೋಗಿ, ಅದು ನಿಧಾನವಾಗಿ ಪ್ರಾಣ ಕಳೆದುಕೊಂಡ ನಂತರ ಅದರ ಮಾಂಸವನ್ನು ಪಡೆಯಬೇಕು; ಈ ರೀತಿಯ ಮಾಂಸ ಹಲಾಲ್ ಮಾಂಸ ಎನಿಸುತ್ತದೆ!

        ಹಲಾಲ್ ಕುರಿತಾಗಿ ತಿಳಿಯಲು, ಈ ಕೊಂಡಿಗಳನ್ನು ನೋಡಿ:
        http://www.thekitchn.com/good-question-what-is-halal-me-60979
        http://en.wikipedia.org/wiki/Halal

        ಉತ್ತರ
      • Akash
        ಜನ 24 2014

        ನೀವು ವಿಡಿಯೋದ ತುಣುಕು ನೀಡಿದ್ದೀರಿ. ಆದರೆ ನನಗೆ ಪೂರ್ತಿ ನೋಡಲು ಆಗಲಿಲ್ಲ. ಪ್ರಾಣಿಗಳ ಚಿತ್ರಹಿಂಸೆ ನನಗೆ ನೋಡಲೇ ಆಗಲಿಲ್ಲ. ನೀವೆಂಥ ಹೆಂಗರುಳಿನ ಗಂಡಸರೂರಿ ಎಂದು ನೀವು ಕೇಳಬಹುದೇನೋ ಆದರೆ ನನಗೆ 2 ಸಲ ನೋಡಲು ಪ್ರಯತ್ನಿಸಿದರೂ ನೋಡಲಾಗಲಿಲ್ಲ. ಕರಳು ಕಿವಿಚಿದಂತಾಯಿತು.

        ಉತ್ತರ
        • ಜನ 24 2014

          ನಾನೂ ಅದನ್ನು ಪೂರ್ತಿ ನೋಡಲಿಲ್ಲ. ಪ್ರಾಣಿದಯೆಯಿರುವ ಯಾರಾದರೂ ಅದನ್ನು ಪೂರ್ತಿ ನೋಡಲು ಸಾಧ್ಯವಿಲ್ಲ.

          ಉತ್ತರ
  3. ಮೇ 17 2013

    Quran (3:151) – “Soon shall We cast terror into the hearts of the Unbelievers, for that they joined companions with Allah, for which He had sent no authority”.

    Quran (8:12) – “I will cast terror into the hearts of those who disbelieve. Therefore strike off their heads and strike off every fingertip of them”

    Quran (9:14) – “Fight them, Allah will punish them by your hands and bring them to disgrace…”

    Quran (3:56) – “As to those who reject faith, I will punish them with terrible agony in this world and in the Hereafter, nor will they have anyone to help.”

    Quran (2:191-193) – “And slay them wherever ye find them, and drive them out of the places whence they drove you out, for persecution [of Muslims] is worse than slaughter [of non-believers]… but if they desist, then lo! Allah is forgiving and merciful. And fight them until persecution is no more, and religion is for Allah.”

    The historical context of this passage is not defensive warfare, since Muhammad and his Muslims had just relocated to Medina and were not under attack by their Meccan adversaries. In fact, the verses urge offensive warfare, in that Muslims are to drive Meccans out of their own city (which they later did). The use of the word “persecution” by some Muslim translators is thus disingenuous (the actual Muslim words for persecution – “idtihad” – and oppression – a variation of “z-l-m” – do not appear in the verse). The actual Arabic comes from “fitna” which can mean disbelief, or the disorder that results from unbelief or temptation. Taken as a whole, the context makes clear that violence is being authorized until “religion is for Allah” – ie. unbelievers desist in their unbelief.

    ಉತ್ತರ
  4. MANJU
    ಮೇ 20 2013

    SIMPLY SUPER SIR

    ಉತ್ತರ
  5. Akash
    ಜನ 24 2014

    ತುಂಬಾ ಉತ್ತಮ ಲೆಖನ. ನೀವು ಬರೆದಂತೆ ವಿಕೃತ ಬುದ್ಧುಜೀವಿಗಳು ಇದನ್ನು ಓದಲ್ಲ . ಓದಿದರೂ ಇಂಥ ಬುಡಕ್ಕೇ ನೀರು ಬಿಡುವ ಪ್ರಶ್ನೆಗಳು ಬಂದಾಗ ಪಲಾಯನ ಮಾಡುತ್ತಾರೆ ಓದುವ ಗೋಜಿಗೆ ಹೊಗುವದಿಲ್ಲ.

    ಉತ್ತರ
  6. ಜನ 24 2014

    [[ಒಂದೆ ಸಲಕ್ಕೆ ಪ್ರಾಣಿಗಳನ್ನು ಕೊಂದರೆ ಏನಾಗುತ್ತದೆ??]]
    ಮುಸಲ್ಮಾನರು ‘ಹಲಾಲ್’ಗೆ ಅನುಗುಣವಾಗಿರುವ ಆಹಾರವನ್ನು ಸ್ವೀಕರಿಸಬೇಕೆಂದು ಕುರಾನ್ ಹೇಳುತ್ತದೆ.
    ಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲುವಾಗ ಅವನ್ನು ಪೂರ್ಣವಾಗಿ ಕೊಲ್ಲಬಾರದು; ಅವುಗಳ ಕತ್ತನ್ನು ಕತ್ತರಿಸಿ, ಅವು ಪೂರ್ಣವಾಗಿ ರಕ್ತ ಸೋರಿಹೋಗುವ ತನಕ ಹಾಗೇ ಬಿಡಬೇಕು. ಕತ್ತು ಅರ್ಧ ಕತ್ತರಿಸಿಕೊಂಡು ಒದ್ದಾಡುತ್ತಾ ಅದರ ರಕ್ತವೆಲ್ಲಾ ಸೋರಿಹೋಗಿ, ಅದು ನಿಧಾನವಾಗಿ ಪ್ರಾಣ ಕಳೆದುಕೊಂಡ ನಂತರ ಅದರ ಮಾಂಸವನ್ನು ಪಡೆಯಬೇಕು; ಈ ರೀತಿಯ ಮಾಂಸ ಹಲಾಲ್ ಮಾಂಸ ಎನಿಸುತ್ತದೆ!

    ಹಲಾಲ್ ಕುರಿತಾಗಿ ತಿಳಿಯಲು, ಈ ಕೊಂಡಿಗಳನ್ನು ನೋಡಿ:
    http://www.thekitchn.com/good-question-what-is-halal-me-60979

    ಉತ್ತರ
  7. simha sn
    ಜುಲೈ 8 2014

    ಒಳ್ಳೆಯ ಲೇಖನ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments