ವಿಷಯದ ವಿವರಗಳಿಗೆ ದಾಟಿರಿ

ಜೂನ್ 7, 2013

62

ಶಿವ ನಾನು, ಶಿವ ನಾನು!

‍ನಿಲುಮೆ ಮೂಲಕ

Shankaraacharya1ಈ ಬರಹವು ’ಎಲ್ಲರ ಕನ್ನಡ ‘ ದಲ್ಲಿದೆ.ಎಲ್ಲರ ದನಿಗೂ ವೇದಿಕೆಯಾಗುವ ನಿಲುಮೆಯ ಎಂದಿನ ನಿಲುವಿನಂತೆ ಈ ಲೇಖನವನ್ನು “ನಿಲುಮೆ” ಪ್ರಕಟಿಸುತ್ತಿದೆ.ಆದರೆ ವಿಷಯಗಳು ಸಾಮಾನ್ಯ ಕನ್ನಡಿಗರಿಗೆ ತಲುಪಬೇಕೆಂದರೆ ವಿಷಯ ಸಾಮಾನ್ಯ ಕನ್ನಡದಲ್ಲಿದ್ದರೆ ಒಳಿತಾದ್ದರಿಂದ ಪ್ರಚಲಿತ ಬಳಕೆಯಲ್ಲಿರುವ ಕನ್ನಡದ ಲೇಖನಗಳನ್ನು ಅಪೇಕ್ಷಿಸುತ್ತದೆ.

– ಕಿರಣ್ ಬಾಟ್ನಿ

{ಇತ್ತೀಚೆಗೆ ಜಾತಿಗಳ ಬಗೆಗಿನ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಒಂದು ಕಡೆ ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಬಾರತದಲ್ಲಿ ಜಾತಿಯೇರ‍್ಪಾಡೆಂಬುದೇ ಇಲ್ಲ ಎಂದು ವಾದಿಸಿ ಆ ಮೂಲಕ ಕೂಡಣಮಾರ‍್ಪಿಗೆ ಅರ‍್ತವೇ ಇಲ್ಲವೆಂಬ ಅನಿಸಿಕೆಯನ್ನು ಬಿತ್ತುತ್ತಿದ್ದಾರೆ. ಇನ್ನೊಂದು ಕಡೆ ’ಎಡಗಡೆ’ಯವರಲ್ಲಿ ಜಾತಿಯೇರ‍್ಪಾಡಿನ ಕೆಡುಕುಗಳ ಬಗ್ಗೆ ಹಾಡಿ ಗೋಳಾಡುವುದೇ ಒಂದು ಕಸುಬಾಗಿ ಬಿಟ್ಟಿರುವುದರಿಂದ ಅವರಿಂದ ಕೂಡಣಮಾರ‍್ಪಿನ ನಿಟ್ಟನ್ನು ಬಯಸುವುದೇ ತಪ್ಪೆಂಬಂತಿದೆ. ಇನ್ನು ಇವೆರಡು ಗುಂಪುಗಳು ಅರಿವನ್ನು ಹಂಚಿಕೊಳ್ಳುವುದಂತೂ ದೂರದ ಮಾತು.

ಇವೆರಡರ ನಡುವಿನ ಹಾದಿಯೊಂದನ್ನು ನಾವು ಕಂಡುಕೊಳ್ಳದೆ ಹೋದರೆ ಒಟ್ಟಾರೆಯಾಗಿ ಕನ್ನಡಿಗರಿಗೆ ಏಳಿಗೆಯಿಲ್ಲ ಎಂಬ ನಂಬಿಕೆ ನನ್ನಲ್ಲಿ ಬಹಳ ಗಟ್ಟಿಯಾಗಿದೆ. ’ಎಲ್ಲರಕನ್ನಡ’ವನ್ನು ನಾನು ಒಪ್ಪಿ ಅದನ್ನೇ ಬಳಸುವ ಹಟ ಹಿಡಿದಿರುವುದಕ್ಕೆ ಈ ನಂಬಿಕೆ ಒಂದು ಮುಕ್ಯವಾದ ಕಾರಣ. ಹುಟ್ಟಿನಿಂದ ಮಾದ್ವ ಬ್ರಾಮಣ ಜಾತಿಗೆ ಸೇರಿದ ನಾನು ಈ ನಡುಹಾದಿಯಲ್ಲಿ ನಡೆಯುವಾಗ ಸಂಸ್ಕ್ರುತದಲ್ಲಿ ಈಗಾಗಲೇ ಇರುವ ಮತ್ತು ಕನ್ನಡದ ಕೂಡಣವನ್ನು ಒಡೆಯದೆ ಅದನ್ನು ಇಡಿಯಾಗಿ ಆದ್ಯಾತ್ಮಿಕ ಎತ್ತರಕ್ಕೊಯ್ಯುವಂತಹ ಅರಿವನ್ನು ನನ್ನ ಕಯ್ಲಾದಶ್ಟು ಎಲ್ಲರಕನ್ನಡಕ್ಕೆ ತರಬೇಕಾದುದು ನನ್ನ ಕರ‍್ತವ್ಯವೆಂದೇ ತಿಳಿದುಕೊಂಡಿದ್ದೇನೆ.

ಇಲ್ಲಿ ಬಹಳ ಚಿಕ್ಕದಾದ ಅಂತಹ ಒಂದು ಮೊಗಸನ್ನು ಮಾಡಿದ್ದೇನೆ. ಎಲ್ಲರಕನ್ನಡದಲ್ಲಿ ಹೀಗೆ ಗೇದರೆ ಬ್ರಾಮಣರು ಜಾತಿಯೇರ‍್ಪಾಡನ್ನು ಕೆಡವಲು ನೆರವಾಗಬಹುದು ಮತ್ತು ಬ್ರಾಮಣಿಕೆಯನ್ನು ಒಂದು ಜಾತಿಯಂತೆ ಕಾಣುವುದನ್ನು ನಿಲ್ಲಿಸಿ ಹಿಂದಿನ ಬ್ರಾಮಣರು ಮಾಡಿದ ಕೆಲಸದಲ್ಲಿ ನಿಜವಾಗಲೂ ಉಳಿಸಿಕೊಳ್ಳತಕ್ಕುದನ್ನು ಉಳಿಸಿಕೊಂಡು ಆ ಮೂಲಕ ಕೂಡಣಕ್ಕೆ ನೆರವಾಗಬಹುದು. ಇದನ್ನು ಎಶ್ಟು ಸಾರಿ ಕೂಗಿ ಹೇಳಿದರೂ ಸಾಲದು. – ಕಿ. ಬಾ.}

ಸಂಸ್ಕ್ರುತ ಮೂಲ (ನಿರ‍್ವಾಣ ಶಟ್ಕಂ): ಆದಿ ಶಂಕರಾಚಾರ‍್ಯ
ಎಲ್ಲರಕನ್ನಡಕ್ಕೆ: ಕಿರಣ್ ಬಾಟ್ನಿ

ಬಗೆ ಅರಿವು ನನ್ನೆಣಿಕೆ ತಿಳಿವುಗಳು ನಾನಲ್ಲ
ನಾನಲ್ಲ ಕಿವಿ ನಾಲ್ಗೆ ನಾನಲ್ಲ ಕಣ್ ಮೂಗು
ಬಾನಲ್ಲ ನೆಲವಲ್ಲ ಬೆಳಕಲ್ಲನೆಲರಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||1||

ಉಸಿರೆಂದರಾನಲ್ಲ ಅಯ್ಗಾಳಿಯಾನಲ್ಲ
ಏಳ್ದಾತು ಅಯ್ಪದರಗಳಾನಲ್ಲವಲ್ಲ
ಕಯ್ಕಾಲು ಉಲಿಯಲ್ಲ ಕೆಳಗಿನಂಗಗಳಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||2||

ಹಗೆತ ಒಲವೆನಗಿಲ್ಲ ನಿಬ್ಬಯಕೆ ಮರುಳಿಲ್ಲ
ಸೊಕ್ಕಿಲ್ಲ ಸೇಡಿಲ್ಲ ಎನಗಿಲ್ಲವಿವು ಎಲ್ಲ
ಅರವಿಲ್ಲ ಪಣವಿಲ್ಲ ಬಯಕಿಲ್ಲ ಬಿಡುವಿಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||3||

ಪುಣ್ಯಪಾಪಗಳಿಲ್ಲ ಸುಕದುಕ್ಕವೆನಗಿಲ್ಲ
ಮಂತ್ರ ತೀರ್‍ತಗಳಿಲ್ಲ ವೇದ ಯಗ್ನಗಳಿಲ್ಲ
ಊಟವಡಿಗೆಗಳಲ್ಲ ಉಂಬುವನು ನಾನಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||4||

ಸಾವಿನಯ್ಬೆನಗಿಲ್ಲ ಹುಟ್ಟೆನಗೆ ಅರಿದಲ್ಲ
ತಂದೆತಾಯೆನಗಿಲ್ಲ ಪುಟ್ಟಿದವ ನಾನಲ್ಲ
ನೆಂಟಗೆಳೆಯಾನಲ್ಲ ಗುರುಶಿಶ್ಯರಾನಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||5||

ಗುರುತೆಂಬುದೆನಗಿಲ್ಲ ರೂಪವಿಲ್ಲನು ನಾನು
ಒಡೆಯ ನಾನೆಲ್ಲೆಲ್ಲು ಈ ಅರಿಗೆಗಳಿಗೆಲ್ಲ
ಸಾಟಿತನವೆಲ್ಲೆಲ್ಲೂ ಹಿಡಿತ ಬಿಡುವೆನಗಿಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||6||

62 ಟಿಪ್ಪಣಿಗಳು Post a comment
  1. ಜೂನ್ 7 2013

    Since I understand English better than this so-called Kannada, I will reply in English as a protest… People who write about the ‘current debate on caste’ should at least know that Hindutva (’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು) people do not argue that caste system does not exist. They fight with the left wing people to show that they are more anti-caste than anyone else.

    Won’t reply here again unless the author writes in normal Kannada.

    All the best!

    ಉತ್ತರ
  2. ಜೂನ್ 7 2013

    ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಅವರಲ್ಲ, ನೀವು ಮತ್ತು ನಿಮ್ಮ ತಂಡ. ಎಲ್ಲರಿಗೂ ತಾವು ನಡುವಿನಲ್ಲಿದ್ದೇವೆ ಎಂಬ ಅನಿಸಿಕೆಯಿರುತ್ತದೆ (ನನಗೆ ಇರುವಂತೆ), ಆದ್ದರಿಂದ ತಪ್ಪು ನಿಮ್ಮದಲ್ಲ, ಬಿಡಿ 🙂

    ಉತ್ತರ
    • ಜೂನ್ 11 2013

      ಹೌದು ತಪ್ಪಿಲ್ಲ.. ನೀವೆಲ್ಲ ಸಾಲಾಗಿ ನಿಂತಿದ್ದೀರಿ. ಡಂಕಿನ್ ಅವರು ನಿಮ್ಮ ಬಲಕ್ಕೆ ನಿಂತಿದ್ದಾರೆ. ಅವರ ಬಲಕ್ಕೆ ಇನ್ನಷ್ಟು ಜನರಿದ್ದಾರೆ. ನೀವು ಅವರ ಎಡಕ್ಕೆ ನಿಂತಿದ್ದೀರಿ. ನಿಮ್ಮ ಎಡಕ್ಕೆ ಮತ್ತಷ್ಟು ಜನರಿದ್ದಾರೆ. ಆದ್ದರಿಂದ ಎಲ್ಲರೂ ಎಲ್ಲೋ ನಡುವಲ್ಲೇ ಇದ್ದಾರೆ. ಬಹುಶ ಎಲ್ಲರ LQ ಮತ್ತು RQ (IQ ಥರ) ಅಳೆದು ಎಡ ಬಲ ನಡು ತೀರ್ಮಾನಿಸಬೇಕು. 🙂

      ಉತ್ತರ
  3. Annapoorna
    ಜೂನ್ 8 2013

    ಪ್ರಿಯ ಕಿರಣ್, ಅನುವಾದ ಚೆನ್ನಾಗಿದೆ. ಅದರಲ್ಲೂ “ಹಗೆತ ಒಲವೆನಗಿಲ್ಲ ನಿಬ್ಬಯಕೆ ಮರುಳಿಲ್ಲ ಸೊಕ್ಕಿಲ್ಲ ಸೇಡಿಲ್ಲ ಎನಗಿಲ್ಲವಿವು ಎಲ್ಲ ಅರವಿಲ್ಲ ಪಣವಿಲ್ಲ ಬಯಕಿಲ್ಲ ಬಿಡುವಿಲ್ಲ” ಎಂಬ ಸಾಲುಗಳು ಸೊಗಸಾಗಿವೆ.

    ಉತ್ತರ
  4. Annapoorna
    ಜೂನ್ 10 2013

    ಕಿರಣ್, ನೀವು ನಡುವಿನಲ್ಲಿದ್ದೀರೋ ಇಲ್ಲವೋ ಗೊತ್ತಿಲ್ಲ, ಆದರೆ ನಿಮ್ಮ ವಾದ ನೋಡಿದರೆ ನಡು ನೀರಿನಲ್ಲಿದ್ದೀರಿ ಅಂತ ಅನ್ನಿಸುತ್ತದೆ! 😉

    ಉತ್ತರ
  5. ಬಸವಯ್ಯ
    ಜೂನ್ 13 2013

    ಕಿರಣ್..ಅನುವಾದ ಚೆನ್ನಾಗಿದೆ..ಧನ್ಯವಾದಗಳು :).

    ‘ಎಲ್ಲರಕನ್ನಡದಲ್ಲಿ ಹೀಗೆ ಗೇದರೆ ಬ್ರಾಮಣರು ಜಾತಿಯೇರ‍್ಪಾಡನ್ನು ಕೆಡವಲು ನೆರವಾಗಬಹುದು ಮತ್ತು ಬ್ರಾಮಣಿಕೆಯನ್ನು ಒಂದು ಜಾತಿಯಂತೆ ಕಾಣುವುದನ್ನು ನಿಲ್ಲಿಸಿ ಹಿಂದಿನ ಬ್ರಾಮಣರು ಮಾಡಿದ ಕೆಲಸದಲ್ಲಿ ನಿಜವಾಗಲೂ ಉಳಿಸಿಕೊಳ್ಳತಕ್ಕುದನ್ನು ಉಳಿಸಿಕೊಂಡು ಆ ಮೂಲಕ ಕೂಡಣಕ್ಕೆ ನೆರವಾಗಬಹುದು. ಇದನ್ನು ಎಶ್ಟು ಸಾರಿ ಕೂಗಿ ಹೇಳಿದರೂ ಸಾಲದು. – ಕಿ. ಬಾ.’

    ಕನ್ನಡದ ಕೆಲವು ವಿಧ್ವಾಂಸ ರಿಗೆ ಮತ್ತು ಸಮಾಜಸುಧಾರಕರಿಗೆ ವರ್ತಮಾನವೆಂದರೆ ಕಂಬಾಲಪಲ್ಲಿ, ಭೂತಕಾಲವೆಂದರೆ ಮನುಕಾಲ. ಇವರನ್ನು ನೀವು ತಲೆ ಕೆಳಗೆ-ಕಾಲು ಮೇಲೆ ಮಾಡಿ ನಿಂತರೂ ಇವರ ಹೇಳಿಕೆಗಳಲ್ಲಿ ಬದಲಾವಣೆ ತರಲು ಆಗುವುದಿಲ್ಲ. ಎಲ್ಲರ ಕನ್ನಡದಿಂದ ‘ಎಲ್ಲರಿಗೆ ಹತ್ತಿರವಾಗೋಣ ಎಂದು ನೀವು ಬಯಸಿದಂತೆ…ಮಾಂಸ ತಿಂದು, ಸಾರಾಯಿ ಕುಡಿದು, ಬೀದಿಯಲ್ಲಿ ತೋಳೆರಿಸಿ ಜಗಳವಾಡಿ ಬ್ರಾಮಣಿಕೆಯಿಂದ ಮುಕ್ತವಾಗ ಬಯಸಿದವರನ್ನು ನಾನು ನೋಡಿದ್ದೇನೆ.

    ಕೆಳವರ್ಗದ ವಕ್ತಾರಿಕೆಯನ್ನು ಹೊತ್ತ ‘ವಿಧ್ವಾಂಸ’ರಿಗೆ ಸತ್ಯ ಕಾಣುವುದಿಲ್ಲ ಎಂದಲ್ಲ..ಆದರೆ ಸತ್ಯ ಕಾಣುವುದರಿಂದ ಇವರಿಗೆ ಯಾವುದೇ ಲಾಭವಾಗುವುದಿಲ್ಲ.. ಆದ್ದರಿಂದಲೇ shelf life ಸುಮಾರು ೨೦೦ ವರುಷ ಇರುವ ಅಜೆಂಡಾವನ್ನೇ ಬಳಸುವುದು. ಮೊನ್ನೆ ಒಬ್ಬ ವಿಧ್ವಂಸಕರು ಶಂಕರಾಚಾರ್ಯ ನರೇಂದ್ರ ಮೋದಿಗಿಂತ ದೊಡ್ಡ ಕೊಲೆಗಡುಕ ಎಂಬ ಅಣಿ ಮುತ್ತನ್ನು ಉದುರಿಸಿದರು..ಒಬ್ಬ ಸಣ್ಣ ಮಟ್ಟದ ವಿಧ್ವಂಸಕರು ಜಾಲತಾಣವೊಂದರಲ್ಲಿ ‘ಶಂಕರನಿಗೆ ಬಹುವಚನ..ಅಲ್ಲಮನನ್ನು ಏಕವಚನ ಬಳಸಿದ್ದೀರಿ ನೀವು’ ಎಂಬ ಕ್ಷುಲ್ಲಕ ತಗಾದೆ ತೆಗೆದರು. ಕಂದಕ ಬೆಳೆಸುವಲ್ಲಿ ಇವರಿಗಿರುವ ಉಲ್ಲಾಸ, ಉತ್ಕಟತೆ ಕಂದಕ ಮುಚ್ಚುವುದರಲ್ಲಿಲ್ಲ. ಹೀಗಿದ್ದಾಗ ಏನೇ ಮಾಡಿದರೂ ಬೋರ್ಗಲ್ಲ ಅದು ಮೇಲೆ ಮಳೆ ಹೊಯ್ದಂತೆ!.

    ಉತ್ತರ
    • ಬಸವಯ್ಯ
      ಜೂನ್ 13 2013

      ಇವತ್ತು ತಿದ್ದುಪಡಿಗಳ ದಿವಸ 🙂
      > ಶಂಕರನಿಗೆ ಬಹುವಚನ..ಅಲ್ಲಮನಿಗೆ ಏಕವಚನ ಬಳಸಿದ್ದೀರಿ ನೀವು’
      > ‘ಹೀಗಿದ್ದಾಗ ಏನೇ ಮಾಡಿದರೂ ಅದು ಬೋರ್ಗಲ್ಲ ಮೇಲೆ ಮಳೆ ಹೊಯ್ದಂತೆ!.

      ಉತ್ತರ
      • ಜೂನ್ 28 2013

        ಗೋರ್ಕಲ್ಲ ಮೇಲೆ ಮಳೆ

        ಉತ್ತರ
        • Maaysa
          ಜೂನ್ 28 2013

          ಬೋರ್ಗಲ್ಲ ಮೇಲೆ ಮಳೆ ಇದು ಸರಿ .. ಬೋರು( ಬೋಳು )

          ಗೋರ್ ಅಂದ್ರೇನು?

          ಉತ್ತರ
        • ಜೂನ್ 28 2013

          ಮೂರ್ಖನಿಗೆ ಬುದ್ಧಿಯನು ನೂರ್ಕಾಲ ಪೇಳಿದರೆ
          ಗೋರ್ಕಲ್ಲ ಮೇಲೆ ಮಳೆ ಹೊಯ್ದರೆ
          ಆ ಕಲ್ಲು ನೀರ್ಕುಡಿವುದೆ

          ಉತ್ತರ
          • Maaysa
            ಜೂನ್ 28 2013

            ಆದೇ ಅಲ್ಲಿ ಗೋರ್ ಅಂದರೇನು?

            ಉತ್ತರ
            • ಜೂನ್ 28 2013

              ’ಎಲ್ಲರ ಕನ್ನಡ’(ಶುದ್ಧ ಕನ್ನಡ)ದಲ್ಲಿ ’ಗೋರ್’ ಗೇನೊ ಮಹತ್ತರವಾದ ಅರ್ಥ ಇರ್ಬೇಕು!!!! :O

              ಉತ್ತರ
              • ಜೂನ್ 28 2013

                ಎಲ್ಲರ ಕನ್ನಡದ ಬಗ್ಗೆ ನಂಗೆ ಹೆಚ್ಚು ಗೊತ್ತಿಲ್ಲ. ಆದರೆ ಅದರ ಪ್ರವಾದಿಗಳು ಸಂಕರ ಬಟ್ರೆಂಬ ಮಹಾನ್ ವಿಧ್ವಾಂಸರೆಂದು ಗೊತ್ತಷ್ಟೆ. “Hang the grammar, Hang the rules, Hang the codes and make kannada easier” ಅನ್ನೊದು ಎಲ್ಲರ ಕನ್ನಡದ ಮೂಲಮಂತ್ರ ಎಂದು ನಾವು ತಿಳಿದುಕೊಂಡಿದ್ದೀವಿ. 🙂

                ಉತ್ತರ
                • ಜೂನ್ 29 2013

                  @Balachandra ನಾನು ಶಂಕರ ಭಟ್ಟರು ಹೇಳಿದ್ದನ್ನು ಒಪ್ಪುವವನಲ್ಲ. ಆದರೆ ನಿಲುಮೆಯಂಥ ಸಾರ್ವಜನಿಕ ತಾಣದಲ್ಲಿ ವ್ಯಕ್ತಿ ವಿದ್ವೇಷವಿಲ್ಲದೆ ಸ್ವಲ್ಪ ಸಭ್ಯವಾದ ಭಾಷೆಯಲ್ಲಿ ಮಾತನಾಡಿರೆಂಬ ಕೋರಿಕೆಯಿದೆ. ನೀವು ಬರೆದದ್ದರಲ್ಲಿ ತಪ್ಪೆಷ್ಟು ಸರಿಯೆಷ್ಟು ಎಂಬುದು ನಿಮಗೂ ತಿಳಿದಿದೆ.

                  ಉತ್ತರ
              • ಜೂನ್ 29 2013

                ಸರ್ವಜ್ಞನ ವಚನವಾಗಿರುವುದರಿಂದ ಅದು ಎಲ್ಲರ ಕನ್ನಡವೇ.
                ಗೋರ್ ಎಂದರೆ ಗಡುಸಾಗಿರುವಂಥದ್ದು ಎಂಬ ಅರ್ಥ.

                ಉತ್ತರ
                • Maaysa
                  ಜೂನ್ 29 2013

                  ನಿಘಂಟು ಉಲ್ಲಿಖ ಪ್ಲೀಸ್ .. ನಿಮ್ಮ ‘ಕಿರಣ್ ಬತ್ನಿ ಕನ್ನಡ’ ಬೇಡ .

                  ಉತ್ತರ
                  • ಜೂನ್ 29 2013

                    ‘ಕಿರಣ್ ಬಾಟ್ನಿ ಕನ್ನಡ’ ನನ್ನದಲ್ಲ. ವಿನಾಕಾರಣ ರೊಚ್ಚೆ ಎಬ್ಬಿಸಬೇಡಿ. ನಿಘಂಟು ಹುಡುಕಿದರೆ ನಿಮಗೂ ಮಾಹಿತಿ ದೊರೆತೀತು.

                    ಉತ್ತರ
                    • Maaysa
                      ಜೂನ್ 29 2013

                      ರೀ .. ನಾನು ಕೊಡ್ತಾ ಇಲ್ವಾ ನಿಘಂಟಿಗೆ ಕೊಂಡಿಗಳನ್ನ ?

                      ಅದ್ಯಾವ ನಿಘಂಟು ಹೇಳಿ ?

                      ನಿಮ್ಮ ಹುಸಿ ‘ಎಲ್ಲರಕನ್ನಡ’ವನ್ನು ಅದರ ಪ್ರವಾದಿಗಳ ಹೆಸರನ್ನಿಟ್ಟು “ಕಿರಣ್ ಬಾಟ್ನಿ ಕನ್ನಡ” ಕನ್ನಡ ಅನ್ತಿರೊದು. ಇಲ್ಲಿ ಅದರ ವತಿಯಿಂದ ‘ಅನ್ಯ’ ನಂಬಿಕೆ-ಇರದವರ ಮೇಲೆ ನಿಮ್ಮ ಜಿಹಾದ್ !?

                  • ಜೂನ್ 29 2013

                    ನಿಘಂಟು – ಪ್ರಿಸಂ ಕನ್ನಡ-ಕನ್ನಡ ನಿಘಂಟು (ಪ್ರೊ. ಜಿ. ವೆಂಕಟಸುಬ್ಬಯ್ಯ)

                    ~ನಿಮ್ಮ ಹುಸಿ ‘ಎಲ್ಲರಕನ್ನಡ’ವನ್ನು ಅದರ ಪ್ರವಾದಿಗಳ ಹೆಸರನ್ನಿಟ್ಟು “ಕಿರಣ್ ಬಾಟ್ನಿ ಕನ್ನಡ” ಕನ್ನಡ ಅನ್ತಿರೊದು. ಇಲ್ಲಿ ಅದರ ವತಿಯಿಂದ ‘ಅನ್ಯ’ ನಂಬಿಕೆ-ಇರದವರ ಮೇಲೆ ನಿಮ್ಮ ಜಿಹಾದ್ !?
                    ನಾನು ಕಿರಣ್ ಬಾಟ್ನಿಯವರ ಕನ್ನಡದ ಹಿಂಬಾಲಿಗನಲ್ಲ. ಕೆಳಗಣ ಕೊಂಡಿಯನ್ನು ಓದಿದರೆ ತಿಳಿಯಬಹುದು.
                    https://nilume.net/2011/04/15/%E0%B2%A6%E0%B2%AF%E0%B2%B5%E0%B2%BF%E0%B2%9F%E0%B3%8D%E0%B2%9F%E0%B3%81-%E0%B2%97%E0%B3%81%E0%B2%A6%E0%B3%8D%E0%B2%A6%E0%B2%B2%E0%B2%BF%E0%B2%AA%E0%B3%82%E0%B2%9C%E0%B3%86%E0%B2%97%E0%B3%86-%E0%B2%AC/

                    ಇನ್ನು, ನಾನು ಕಿರಣ್ ಬಾಟ್ನಿಯವರ ಕನ್ನಡದ ಬಳಕೆಯನ್ನು ಒಪ್ಪದ ಮಾತ್ರಕ್ಕೆ ಅವರು ಹೇಳಿದುದೆಲ್ಲವೂ ಸುಳ್ಳೆಂದು ವಾದಿಸಬೇಕಾಗದು. ಅವರು ಹೇಳಿದುದು ಸರಿಯೆನಿಸಿದರೆ ಒಪ್ಪಿಗೆ ನೀಡಿಯೇ ನೀಡುವೆ.

                    ಉತ್ತರ
                    • Maaysa
                      ಜೂನ್ 29 2013

                      ಕೆಟ್ಟ ಚಾಳಿಯಾದ ಎಲ್ಲದಕ್ಕೂ ಇದು ‘ಎಲ್ಲರ ಕನ್ನಡ’ ಎಂದು ಪೂಸುವುದನ್ನು ಬಿಟ್ಟು ನೆಟ್ಟಗೆ ಪುರಾವೆ ಒದಗಿಸುವವರಿಗೆ ವನ್ದನೆ.

                      ಅದ್ಯಾರ ಹಿಂಬಾಲನೋ ಮುಂಬಾಲನೋ ಅದ್ಯಾಕೆ ಇಲ್ಲಿ .. !!

                  • ಜೂನ್ 29 2013

                    “ನಿಮ್ಮ ಹುಸಿ ‘ಎಲ್ಲರಕನ್ನಡ’ವನ್ನು ಅದರ ಪ್ರವಾದಿಗಳ ಹೆಸರನ್ನಿಟ್ಟು “ಕಿರಣ್ ಬಾಟ್ನಿ ಕನ್ನಡ” ಕನ್ನಡ ಅನ್ತಿರೊದು. ಇಲ್ಲಿ ಅದರ ವತಿಯಿಂದ ‘ಅನ್ಯ’ ನಂಬಿಕೆ-ಇರದವರ ಮೇಲೆ ನಿಮ್ಮ ಜಿಹಾದ್ !?”
                    ಈ ರೀತಿಯಾಗಿ ನೀವು ಪೆದಂಬು ಮಾತನಾಡಿದ್ದರಿಂದ ಹೇಳಬೇಕಾಯಿತು.

                    ಉತ್ತರ
                    • Maaysa
                      ಜೂನ್ 29 2013

                      ‘ಪೆದಂಬು’ ಇದನ್ನು ಹೆಂಗೆ ಅರ್ಥಮಾಡಿಕೊಳ್ಳೋದು?

                      ದೇವಾ.. ಉಲ್ಲಿ ಯಾವ ಮಹಾಪ್ರಾಣ ಮಂಗ ಮಾಯವಾಗಿದೆಯೋ, ಎಲ್ಲಿ ಹಳಗನ್ನಡ ರೂಪವು ಬಂದಿದ್ದೆಯೋ!

        • ಬಸವಯ್ಯ
          ಜೂನ್ 29 2013

          @ಕೆ.ಪಿ.ಬೊಳುಂಬು
          ಬೋರ್ಗಲ್ಲು, ಗೋರ್ಕಲ್ಲು (ಗೊರ್ ಎಂಬುದು ಗಡುಸಾಗಿರುವುದು ಎಂಬುದಾದದರೆ) ಎರಡು ನಾವು ಬಯಸಿದ ಅರ್ಥವನ್ನೇ ಕೊಡುತ್ತವೆ. ಬೋಳು ಕಲ್ಲ ಮೇಲೆ ಸುರಿದ ನೀರು ನಿಲ್ಲುವುದಿಲ್ಲ..ವ್ಯರ್ಥ, ಗಡಸು ಕಲ್ಲ ಮೇಲೆ ನೀರು ಬಿದ್ದರೂ ಅದರಲ್ಲಿ ಬದಲಾವಣೆ ಕಂಡುಬರುವುದು ನಗಣ್ಯ ಎಂಬರ್ಥದಲ್ಲಿ ನೋಡಿದಾಗ ಎರಡೂ ಸರಿಯಾಗುದಿಲ್ಲವೆ? ನಮ್ಮಲ್ಲಿ ಬೋರ್ಗಲ್ಲ ಮೇಲೆ ನೀರು ಸುರಿದಂತೆ ಎಂದು ಬಳಸುತ್ತೇವೆ.

          ಉತ್ತರ
          • ಜೂನ್ 29 2013

            @ಬಸವಯ್ಯ,
            ಬೋರ್ಗಲ್ಲು ಎಂದರೆ ಉಬ್ಬಿರುವ ಕಲ್ಲು ಎಂಬ ಅರ್ಥ. ಮಾಯ್ಸ ಹೇಳಿದಂತೆ ಬೋಳುಕಲ್ಲು ಅಲ್ಲ. ನೀವು ಸರ್ವಜ್ಞನ ವಚನವನ್ನು ಉದ್ಧರಿಸಿ ಹೇಳುತ್ತಿದ್ದರೆ “ಗೋರ್ಕಲ್ಲ ಮೇಲೆ ಮಳೆ ಹೊಯ್ದರೆ” ಆಗುತ್ತದೆ.

            ಉತ್ತರ
            • ಬಸವಯ್ಯ
              ಜೂನ್ 29 2013

              ಈ ಲೇಖನದಲ್ಲಿ ಕಂಡು ಬಂದಿದ್ದು
              http://kendasampige.com/print_article.php?id=448

              ಬೋರ್ಗಲ್ಲು

              ಬೋರ್ಗಲ್ಲ ಮೇಲೆ ಮಳೆ ಸುರಿದಂತೆ ಅನ್ನುವ ನುಡಿಗಟ್ಟು ಚಿರಪರಿಚಿತ. ಯಾರಿಗಾದರೂ ಉಪದೇಶಮಾಡುವುದು ವ್ಯರ್ಥ ಅನ್ನಿಸಿದಾಗ ಈ ಮಾತು ಆಡುವುದುಂಟು.

              ಈ ಮಾತಿನಲ್ಲಿ ಎರಡು ಪದಗಳು ಸೇರಿಕೊಂಡಿವೆ. ಬೋರು (ಬೋರೆ) ಎಂದರೆ ಎತ್ತರವಾದ ಪ್ರದೇಶ, ಗುಡ್ಡ. ಅದರ ತುದಿಯಲ್ಲಿರುವ ಕಲ್ಲು ಬೋರ್ಗಲ್ಲು.

              ಗುಡ್ಡದ ತುದಿಯ ಮೇಲಿರುವ ಕಲ್ಲಿನ ಮೇಲೆ ಎಷ್ಟು ಮಳೆ ಸುರಿದರೂ ನೀರೂ ನಿಲ್ಲುವುದಿಲ್ಲ, ವ್ಯವಸಾಯಕ್ಕೂ ಉಪಯೋಗವಿಲ್ಲ. ಅಂತೆಯೇ ಒಂದೇ ಸಮ ಉಪದೇಶದ ಮಳೆ ಸುರಿಸಿದರೂ ಕೇಳಿಸಿಕೊಳ್ಳುವ ಮನಸ್ಸಿರದಾಗ ಅದು ವ್ಯರ್ಥ.

              ———————

              ಅದಕ್ಕೆ ಎರಡೂ ಸರಿಯಿರಬಹುದೇನೊ ಎಂದುಕೊಂಡೆ 🙂

              ಉತ್ತರ
              • Maaysa
                ಜೂನ್ 29 2013

                ಕನ್ನಡದಲ್ಲಿ ಬೋರು ಪದವಿಲ್ಲ. ಬರೀ ಬೋರೆ ಇದೆ.

                ಉತ್ತರ
                • ಜೂನ್ 29 2013

                  Maaysa
                  Jun 28 2013

                  “ಬೋರ್ಗಲ್ಲ ಮೇಲೆ ಮಳೆ ಇದು ಸರಿ .. ಬೋರು( ಬೋಳು )
                  ಗೋರ್ ಅಂದ್ರೇನು? ” – Maaysa

                  Maaysa
                  Jun 29 2013

                  “ಕನ್ನಡದಲ್ಲಿ ಬೋರು ಪದವಿಲ್ಲ. ಬರೀ ಬೋರೆ ಇದೆ.” – Maaysa

                  ನಿಮ್ಮ ಮಾತುಗಳು ಒಂದಕ್ಕೊಂದು ವಿರುದ್ಧವಾಗಿವೆ.

                  ಉತ್ತರ
                  • Maaysa
                    ಜೂನ್ 29 2013

                    ಸರಿಯಾಗಿ ಓದಿ .. ನಾನು ಹೇಳಿದ್ದು ಸಮವಾಗೇ ಇದೆ .

                    ಅಂಧಶ್ರದ್ಧೆ !

                    ಉತ್ತರ
                    • ಜೂನ್ 30 2013

                      ಅಂಧಶ್ರದ್ಧೆ !! ಯಾರ ಕುರಿತು?

            • ಬಸವಯ್ಯ
              ಜೂನ್ 29 2013

              ಹೌದು..ಬೋರ್ ಎಂದರೆ ಬೋಳಲ್ಲ..ಧನ್ಯವಾದಗಳು ತಿದ್ದಿದ್ದಕ್ಕೆ.:)

              ಉತ್ತರ
              • Maaysa
                ಜೂನ್ 29 2013

                ಯಾಕಲ್ಲ ? ಬೋರ ಅಂತ ಹೆಸರು ಇಟ್ಟುಕೊಳ್ತಾರೆ . ಅದು ಬೋಳ(ಲಿಂಗ)ದ ಇನ್ನೊಂದು ರೂಪ .

                ಚೋಳ , ಚೋರ ಪದದ ಇನ್ನೊಂದು ರೂಪ ಎಂದು ವಾದ ಇದೆ ನೋಡಿ .

                ಇಲ್ಲಿ ಬೋರ್ಗಲ್ಲು ಎಂದರೆ ಶಿವಲಿಂಗ, ರುಬ್ಬುಗುಂಡು(ಕಲ್ಲು) …. ಇತ್ಯಾದಿ ಆಗಬಹುದು.

                ಳ => ರ ಆಗೋದು ಇದೆ ಕನ್ನಡದಲ್ಲಿ ..

                ಉತ್ತರ
                • ಜುಲೈ 1 2013

                  ಚೋಳ ಚೋರ ಪದದ ಇನ್ನೊಂದು ರೂಪ ಎಂಬ ವಾದವೇನೋ ಇದೆ, ಆದರೆ ಸಮರ್ಥನೀಯವಲ್ಲ. ಇದು ತಮಿಳರನ್ನು ಹಳಿಯಲು ಮಾಡಿರುವ ಕುತಂತ್ರ.

                  ಉತ್ತರ
  6. ಜೂನ್ 17 2013

    ಶಿವನಾಣೆ ಅರ್ಥ ಆಗಿಲ್ಲ ಗುರು. ’ಎಲ್ಲರ ಕನ್ನಡ’ ಓದೊವಾಗ ನಮ್ಮ ಕನ್ನಡಕ್ಕೆ ಇನ್ಶುರೆನ್ಸ್ ಮಾಡ್ಸಿಟ್ಕೊಳ್ಳೊದು ಒಳ್ಳೆದು. ಯಾಕೆಂದ್ರೆ ಎಲ್ಲರ ಕನ್ನಡ ಓದಿ, ಕನ್ನಡನೇ ಮರ್ತು ಹೊಗ್ಬಹುದು.

    ಉತ್ತರ
  7. Maaysa
    ಜೂನ್ 28 2013

    “ಬೆಳಕಲ್ಲನೆಲರಲ್ಲ” ಇದು ತಪ್ಪು-ವ್ಯಾಕರಣ !

    ಬೆಳಕಲ್ಲನ್ +ಎಲರಲ್ಲ ಅಂತೆ !

    ಇಲ್ಲಿ ಬೆಳಕಲ್ಲನ್ ಎಂಬುದು ತಪ್ಪು. ..

    ಹಾಗೆ ಸಂಸ್ಕೃತದಲ್ಲಿ ಅಲ್ಲ ಹಾಗು ಇಲ್ಲ ಎಂಬ ಎರಡು ನಿಷೇಧಾರ್ಥಕ ಪದಗಳಿಲ್ಲ . ಇದನ್ನು ಸರಿಯಾಗಿ ಹೊಂದಿಸಿಲ್ಲ .

    ಉತ್ತರ
    • ಜೂನ್ 29 2013

      ಬೆಳಕಲ್ಲನೆಲರಲ್ಲ ತಪ್ಪಾಗಿದ್ದರೂ ಬೆಳಕಲ್ಲೆನೆಲರಲ್ಲ ತಪ್ಪಾಗದು. ಎಲ್ಲರ ಕನ್ನಡದಲ್ಲಿ “ಬೆಳಕಲ್ಲೆನ್ +ಎಲರಲ್ಲ” ಆಗುತ್ತದೆ. ಅಲ್ ಎಂಬುದು ಕ್ರಿಯಾಪದ. ಇದಕ್ಕೆ ಎಲ್ಲರ ಕನ್ನಡದಲ್ಲಿ ಯೋಗ್ಯವಾಗಿರುವುದು, ತನ್ನ ಸ್ಥಾನದಲ್ಲಿ ಸರಿಯಾಗಿರುವುದು ಎಂಬ ಅರ್ಥಗಳಿವೆ. ದಿನನಿತ್ಯದ ಬಳಕೆಯಲ್ಲಿ ಅಲ್ಲದ ಎಂಬ ನಿಷೇಧಾರ್ಥವೇ ಜಾರಿಯಲ್ಲಿದೆ.ಅಲ್ಲ ಎನ್ನುವಂಥದ್ದು “ಅಲ್ಲದು, ಅಲ್ಲವು, ಅಲ್ಲನು, ಅಲ್ಲಳು, ಅಲ್ಲರು, ಅಲ್ಲೆನು, ಅಲ್ಲೆವು, ಅಲ್ಲೆ, ಅಲ್ಲಿರಿ” ಇತ್ಯಾದಿಗಳ ಸಂಕ್ಷಿಪ್ತ ರೂಪ. ‘ಅಲ್ಲುವ’ ಎಂಬುದರ ವಿರುದ್ಧ ಪದ ‘ಅಲ್ಲದ’.

      ಉತ್ತರ
      • Maaysa
        ಜೂನ್ 29 2013

        ” “ಅಲ್ಲದು, ಅಲ್ಲವು, ಅಲ್ಲನು, ಅಲ್ಲಳು, ಅಲ್ಲರು, ಅಲ್ಲೆನು, ಅಲ್ಲೆವು, ಅಲ್ಲೆ, ಅಲ್ಲಿರಿ” ಇತ್ಯಾದಿಗಳ ಸಂಕ್ಷಿಪ್ತ ರೂಪ. ‘ಅಲ್ಲುವ’ ಎಂಬುದರ ವಿರುದ್ಧ ಪದ ‘ಅಲ್ಲದ’.’

        ಇದು ಯಾವ ಸೀಮೆ ಕನ್ನಡ ? ಯಾವ ಸೀಮೆ ಆಡುಗನ್ನಡ ?

        ಅಲ್ಲ ಇದು ಅವ್ಯಯ ಕ್ರಿಯಾಪದವಲ್ಲ !

        ಈ ಬಗ್ಗೆಯ ಹಗರಣದ ‘ಕಿರಣ್ ಬತ್ನಿ ಕನ್ನಡ’ವನ್ನ ಎಲ್ಲರ
        ಕನ್ನಡ, ಅಲ್ಲ ‘ಎಲ್ಲರಕನ್ನಡ’ ಅಂದು ಎಲ್ಲರಿಗೂ ಅವಮಾನ ಮಾಡ ಬೇಡಿ .

        http://dsalsrv02.uchicago.edu/cgi-bin/philologic/getobject.pl?c.0:1:237.burrow

        ಕಲ್ಟ್ ಸಂಸ್ಕೃತಿ .

        ಉತ್ತರ
        • ಜೂನ್ 29 2013

          ಆ ಸೀಮೆ ಈ ಸೀಮೆಯೆನ್ನದೆ ರಾಯರ ಸೀಮೆಗೂ ಇನ್ನುಳಿದವರ ಸೀಮೆಗೂ ಅನ್ವಯವಾಗುವಂಥ ಕನ್ನಡ ಎಂಬ ಅರ್ಥದಲ್ಲಿ “ಎಲ್ಲರ ಕನ್ನಡ” ಎಂದುದು.

          ಇಷ್ಟು ಅರ್ಥ ಮಾಡಿಕೊಳ್ಳಿರೆ – ಬೆಳಕಲ್ಲೆನ್ +ಎಲರಲ್ಲ = ಬೆಳಕಲ್ಲೆನೆಲರಲ್ಲ.

          ಉತ್ತರ
          • Maaysa
            ಜೂನ್ 29 2013

            ಕಣ್ ಬಿಟ್ ಓದಿ.

            ಬೆಳಕಲ್ಲೆನ್ ಕೂಡ ತಪ್ಪು. ಒಳ್ಳೆನ್ ಪದ ಇದೆ ಅಲ್ಲೆನ್ ಇಲ್ಲ .

            ಸರಿಯಾಗಿ ಓದಿ ‘ಅಲ್ಲ’ ಇದು ಅವ್ಯಯ ಕ್ರಿಯಾಪದವಲ್ಲ .. Etymology ನಿಘಂಟು ನೋಡಿ. http://dsalsrv02.uchicago.edu/cgi-bin/philologic/getobject.pl?c.0:1:237.burrow

            ಈ ಬಗ್ಗೆಯ ಹಗರಣದ ‘ಕಿರಣ್ ಬತ್ನಿ ಕನ್ನಡ’ವನ್ನ ಎಲ್ಲರ
            ಕನ್ನಡ, ಅಲ್ಲ ‘ಎಲ್ಲರಕನ್ನಡ’ ಅಂದು ಎಲ್ಲರಿಗೂ ಅವಮಾನ ಮಾಡ ಬೇಡಿ . ಇದಕ್ಕೆ ಎಲ್ಲರೂ ಒಪ್ಪಿಗೆ ಹೇಳಿಲ್ಲ.

            ಉತ್ತರ
            • Maaysa
              ಜೂನ್ 29 2013

              ತಿದ್ದ್ದು ..

              ಒಲ್ಲೆನ್ ಪದ ಇದೆ ಅಲ್ಲೆನ್ ಇಲ್ಲ .

              ಉತ್ತರ
            • ಜೂನ್ 29 2013

              “ಹಗರಣದ ‘ಕಿರಣ್ ಬತ್ನಿ ಕನ್ನಡ’”ಎಂದರೇನು? ನಾನು ಯಾವುದೇ ಹಗರಣದ ಅನುಯಾಯಿಯಲ್ಲ.

              ಉತ್ತರ
              • Maaysa
                ಜೂನ್ 29 2013

                scandalous, = ಹಗರಣದ , Causing general public outrage by a perceived offense against morality or law:

                ಭಾಷೆಯ ಹೆಸರಲ್ಲಿ..

                ಉತ್ತರ
                • ಜೂನ್ 29 2013

                  ಮೊದಲೇ ಹೇಳಿದಂತೆ ನಾನು ಕಿರಣ್ ಬಾಟ್ನಿಯವರ ಕನ್ನಡದ ಅನುಯಾಯಿಯಲ್ಲ. ಆದರೆ ಅದೊಂದೇ ಕಾರಣದಿಂದ ‘ಅಲ್ಲೆನ್’ ತಪ್ಪು ಎನ್ನಲಾರೆ. ಅವರು ‘ಅಲ್ಲನ್’ ಎಂದಿದ್ದರು. ಅದನ್ನು ಸರಿಪಡಿಸಿದ್ದೊಂದು ನಾನು ಮಾಡಿದ ಕೆಲಸ.

                  ಉತ್ತರ
                  • Maaysa
                    ಜೂನ್ 29 2013

                    ಸರಿಯಾಗಿ ಓದಿ ‘ಅಲ್ಲ’ ಇದು ಅವ್ಯಯ ಕ್ರಿಯಾಪದವಲ್ಲ .. Etymology ನಿಘಂಟು ನೋಡಿ. http://dsalsrv02.uchicago.edu/cgi-bin/philologic/getobject.pl?c.0:1:237.burrow

                    ಒಲ್ಲೆನ್ ಪದ ಇದೆ ಅಲ್ಲೆನ್ ಇಲ್ಲ .

                    ಮೂರ್ಖನಿಗೆ ಬುದ್ಧಿಯನು ನೂರ್ಕಾಲ ಪೇಳಿದರೆ
                    ಗೋರ್ಕಲ್ಲ ಮೇಲೆ ಮಳೆ ಹೊಯ್ದರೆ
                    ಆ ಕಲ್ಲು ನೀರ್ಕುಡಿವುದೆ

                    ಉತ್ತರ
                    • ಜೂನ್ 30 2013

                      ನಾನು ನಿಘಂಟುಗಳನ್ನು ಓದಿ ಕನ್ನಡ ಕಲಿತವನಲ್ಲ. ಅಲ್ ಎಂಬ ಧಾತು ಇದೆಯೇ ಎಂದು ಹುಡುಕಿ. ಮೂರ್ಖನಿಗೆ ಬುದ್ಧಿಯನು ನೂರ್ಕಾಲ ಪೇಳಿದರೆ
                      ಗೋರ್ಕಲ್ಲ ಮೇಲೆ ಮಳೆ ಹೊಯ್ದರೆ
                      ಆ ಕಲ್ಲು ನೀರ್ಕುಡಿವುದೆ
                      ಇದು ಸರ್ವಜ್ಞನ ವಚನವು

                    • ಜುಲೈ 1 2013

                      “Ka. alla (for all persons and numbers; also 3 sg. neut. alladu, altu)”
                      ನೀವೇ ತೋರಿಸಿದ ಲಿಂಕಿನಲ್ಲಿ “ಅಲ್ಲದು, ಅಲ್ತು” ಸಿಕ್ಕುವುದು. ಇದೇ ಹೋಲಿಕೆಯಿಂದ –
                      ಪ್ರಥಮ ಪುರುಷ ಏಕವಚನ (ಪು) – ಅಲ್ಲನು,
                      ಪ್ರಥಮ ಪುರುಷ ಏಕವಚನ (ಸ್ತ್ರೀ) – ಅಲ್ಲಳು,
                      ಪ್ರಥಮ ಪುರುಷ ಏಕವಚನ (ನ) – ಅಲ್ಲದು/ಅಲ್ಲವು,
                      ಪ್ರಥಮ ಪುರುಷ ಬಹುವಚನ – ಅಲ್ಲರು,
                      ದ್ವಿತೀಯ ಪುರುಷ ಏಕವಚನ (ಪು) – ಅಲ್ಲೆ,
                      ದ್ವಿತೀಯ ಪುರುಷ ಬಹುವಚನ – ಅಲ್ಲಿರಿ,
                      ಉತ್ತಮ ಪುರುಷ ಏಕವಚನ – ಅಲ್ಲೆನು,
                      ಉತ್ತಮ ಪುರುಷ ಬಹುವಚನ – ಅಲ್ಲೆವು

                      – ಹೀಗೆ.

                    • ಜುಲೈ 1 2013

                      ‌‌ಮೇಲಣ ನಿಘಂಟು ~ಪುರುಷ-ವಚನ ಭೇದವಿಲ್ಲದೆ~ ಎಂದಿದೆ. ಇದು ಸರಿಯಲ್ಲ. ಕೇವಲ ಹೋಲಿಕೆಗಾಗಿ ಈ ಭಾಗವನ್ನು ಉದ್ಧರಿಸಿದ್ದು.

                    • Maaysa
                      ಜುಲೈ 1 2013

                      ತಪ್ಪು !
                      “Ka. alla (for all persons and numbers; also 3 sg. neut. alladu, altu)” ಸರಿಯಾಗಿ ಅರ್ಥಮಾಡಿಕೊಂಡಿಲ್ಲ !

                    • ಜುಲೈ 1 2013

                      ನಿಘಂಟು ತಪ್ಪಾಗಿ ಕೊಟ್ಟಿದೆ.

                    • ಜುಲೈ 1 2013

                      ನಾನು ನಿಘಂಟು ಓದಿ ಅರ್ಥಮಾಡಿಕೊಂಡದ್ದಲ್ಲ. ಅದು ಸ್ವಂತ ಪರಿಶ್ರಮದಿಂದ ತಿಳಿದುಕೊಳ್ಳುವ ಉತ್ಸಾಹ ಇಲ್ಲದವರಿಗಾಗಿ ನೀಡಿದ ಹೋಲಿಕೆ.

                    • ಜುಲೈ 1 2013

                      ಅಲ್ಲ ಎನ್ನುವಂಥದ್ದು “ಅಲ್ಲದು, ಅಲ್ಲವು, ಅಲ್ಲನು, ಅಲ್ಲಳು, ಅಲ್ಲರು, ಅಲ್ಲೆನು, ಅಲ್ಲೆವು, ಅಲ್ಲೆ, ಅಲ್ಲಿರಿ” ಇತ್ಯಾದಿಗಳ ಸಂಕ್ಷಿಪ್ತ ರೂಪ.

                    • ಜುಲೈ 1 2013

                      ನಿಘಂಟು ತಮಿಳಿಗೆ ಏನು ವಿವರಗಳನ್ನು ನೀಡಿದೆ, ಅದನ್ನು ಕನ್ನಡದೊಂದಿಗೆ ಹೋಲಿಸಿ ನೋಡುವುದು.

                    • Maaysa
                      ಜುಲೈ 1 2013

                      ‘ನಿಘಂಟು ತಮಿಳಿಗೆ ಏನು ವಿವರಗಳನ್ನು ನೀಡಿದೆ, ಅದನ್ನು ಕನ್ನಡದೊಂದಿಗೆ ಹೋಲಿಸಿ ನೋಡುವುದು.’

                      ಆಗಲ್ಲ! ಈಗಿನ ತಮಿಳಲ್ಲಿ ಅಲ್ಲ ಇಲ್ಲ . ಅದಕ್ಕೆ ತಮಿಳರು ‘ಅವನಿವನಿಲ್ಲೈ’ ಎಂದು ಅವನಿವನಲ್ಲ ಎಂಬುದಕ್ಕೆ ಹೇಳುವರು. ಈಗಿನ ತಮಿಳಲ್ಲಿ ‘ಅಲ್ಲ’ ಹಾಗು ‘ಇಲ್ಲ’ ಎರಡು ಒಂದೇ! ಅದು ಅದರ ಅದ್ರಾವಿಡಗುಣ.

                      ‘ಅಲ್ತೆ, ಅಲ್ಲದು, ಅಲ್ತು’ ಮುಂತಾದವು ಹಳಗನ್ನಡದ ಬಳಕೆಗಳು, ಪ್ರಸ್ತುತ-ಕನ್ನಡದಾಗೆ ಅವಿಲ್ಲ.
                      ಈಗಿನ ಕನ್ನಡದಲ್ಲಿ ‘ಅಲ್ಲ’ ಎಲ್ಲ ಲಿಂಗಗಳು, ವಚನಗಳಲ್ಲೂ ಅದೇ ರೂಪ.

                      ಪದ್ಯ ಹಳೆಗನ್ನಡದಲ್ಲಿ ಇದ್ದರೆ ಲೇಖಕರು ತಿಳಿಸಲಿ !! ಹೊಸಗನ್ನಡದಲ್ಲಿ (ಈಗಿನ ಕನ್ನಡದಲ್ಲಿ ) ಅಲ್ಲನು/ಅಲ್ಲೆನು ಸಲ್ಲವು !

                    • ಜುಲೈ 1 2013

                      ಒಂದೆರಡು ಹಳಗನ್ನಡ ಶಬ್ದ ಬಳಸಿದರೆ ತಪ್ಪೇನೂ ಆಗದು.
                      ~ಈಗಿನ ತಮಿಳಲ್ಲಿ ‘ಅಲ್ಲ’ ಹಾಗು ‘ಇಲ್ಲ’ ಎರಡು ಒಂದೇ! ಅದು ಅದರ ಅದ್ರಾವಿಡಗುಣ.
                      ಪಾಂಡಿತ್ಯದ ಪರಾಕಾಷ್ಠೆ. alla is used in mod. Ta. for all persons and numbers. ಇದು ನೀವಿತ್ತ ಕೊಂಡಿಯಿಂದಲೇ ಉದ್ಧರಿಸಿದ ವಾಕ್ಯ.
                      ~ಹೊಸಗನ್ನಡದಲ್ಲಿ (ಈಗಿನ ಕನ್ನಡದಲ್ಲಿ ) ಅಲ್ಲನು/ಅಲ್ಲೆನು ಸಲ್ಲವು !
                      ದೊಣ್ಣೆನಾಯಕನ ಅಪ್ಪಣೆ!

                • Maaysa
                  ಜುಲೈ 1 2013

                  “ಪಾಂಡಿತ್ಯದ ಪರಾಕಾಷ್ಠೆ. ”
                  ಧನ್ಯವಾದ !

                  “ಅಲ್ಲನು/ಅಲ್ಲೆನು ಸಲ್ಲವು ! ದೊಣ್ಣೆನಾಯಕನ ಅಪ್ಪಣೆ!”
                  ನಿಮಗೆ ಕನ್ನಡದಲ್ಲಿ ‘ಅಪ್ಪಣೆ/ಕಮಾಂಡ್” ರಚನೆ ಸರಿಯಾಗಿ ತಿಳಿದಿಲ್ಲ ಅನ್ನಿಸುತ್ತೆ.

                  ‘ಅಲ್ಲನು/ಅಲ್ಲೆನು ಕನ್ನಡದಲ್ಲಿ ಸಲ್ಲಬಾರದು/ಸಲ್ಲಕೂಡದು/ಸಲ್ಲಿಸಬೇಡ’ ಇದು ‘ಅಪ್ಪಣೆ’.

                  “ಅಲ್ಲನು/ಅಲ್ಲೆನು ಸಲ್ಲವು” ಇದು ಒಂದು ಹೇಳಿಕೆ/assertion ಹೊರತು ವ್ಯಾಕರಣದ ದೆಸೆಯಿಂದ command / ಅಪ್ಪಣೆಯ ಸಾಲು ಆಗದು!

                  ನಾನು ಕೊಟ್ಟ etymology ನಿಘಂಟು ದ್ರಾವಿಡಭಾಷೆ ಹಳೆಯ ಹಾಗು ಹೊಸ ಪದಸ್ವರೂಪಗಳನ್ನು ಹೊಂದಿದೆ. ಅದಕ್ಕೆ ನಾನು ಕೇಳಿದ್ದು ಈ ಪದ್ಯ ಹಳಗನ್ನಡದಲ್ಲಿ ಇದೆಯೇ ಎಂದು?

                  ಹೊಸಗನ್ನಡದಲ್ಲಿ ‘ಪೇಳುವೆನು, ಪಾದುವೇನು, ಬರ್ಪ, ಇರ್ಪ, ಅನ್ನೆಗಂ, ಮೇಣ್’ ಹೀಗೆ ಹಳಗನ್ನಡ ಬೆರೆಸಿ ಬರೆದರೆ, ಅದಕ್ಕೆ ‘ಎಲ್ಲರ ಕನ್ನಡ’ ಎಂದು ತುರುಕಿದರೆ ಅದು ಒಂದು ಹಗರಣದ ಕಾರ್ಯ.

                  ಉತ್ತರ
                  • ಜುಲೈ 1 2013

                    ಪಾಂಡಿತ್ಯದ ಪರಾಕಾಷ್ಠೆ ಎಂದುದು ವ್ಯಂಗ್ಯವೆಂದು ತಿಳಿದುಕೊಳ್ಳದ ಹುಂಬತನದ ಬಗ್ಗೆ ಖೇದವಿದೆ. ಅದಕ್ಕಾಗಿ ಹೆಮ್ಮೆಪಡಬೇಕಾಗಿಲ್ಲ.

                    ನೀವು ತೋರಿಸಿದ etymology ನಿಘಂಟು ದ್ರಾವಿಡಭಾಷೆಯ ಹಳೆಯ ಹಾಗು ಹೊಸ ಪದಸ್ವರೂಪಗಳನ್ನು ಹೊಂದಿಲ್ಲ. ಕನ್ನಡದ ಬಗ್ಗೆ “ಪುರುಷ-ವಚನ ಭೇದವಿಲ್ಲ” ಎನ್ನುತ್ತದೆ ಮತ್ತು ತಮಿಳಿನ ಎಲ್ಲಾ ಸ್ವರೂಪಗಳನ್ನೂ ಒಪ್ಪುತ್ತದೆ.

                    ~ಹೊಸಗನ್ನಡದಲ್ಲಿ ‘ಪೇಳುವೆನು, ಪಾದುವೇನು, ಬರ್ಪ, ಇರ್ಪ, ಅನ್ನೆಗಂ, ಮೇಣ್’ ಹೀಗೆ ಹಳಗನ್ನಡ ಬೆರೆಸಿ ಬರೆದರೆ, ಅದಕ್ಕೆ ‘ಎಲ್ಲರ ಕನ್ನಡ’ ಎಂದು ತುರುಕಿದರೆ ಅದು ಒಂದು ಹಗರಣದ ಕಾರ್ಯ.
                    ‘ಎಲ್ಲರ ಕನ್ನಡ’ ಎಂದರೆ ಹಳಗನ್ನಡ ಬಳಸಿ ಬರೆಯುವುದಲ್ಲ. ನಾನು ‘ಎಲ್ಲರ ಕನ್ನಡ’ದ ವಕ್ತಾರನೂ ಅಲ್ಲ, ಆ ಕುರಿತು ವಿವರಣೆಯನ್ನೂ ನೀಡಬೇಕಾಗಿಲ್ಲ. ಆದರೆ ಒಂದಂತೂ ಸತ್ಯ – ನೀವು ಮಾಡುತ್ತಿರುವುದೀಗ ನಿಜವಾಗಿ ಹಗರಣದ ಕಾರ್ಯ.

                    ಉತ್ತರ
                    • Maaysa
                      ಜುಲೈ 1 2013

                      ತವುಡು!

                    • ಜುಲೈ 1 2013

                      ಇಲ್ಲಿ ಮನುಷ್ಯರ ಬಳಕೆಗೆ ನಿಲುಕುವ ವಸ್ತುಗಳ ಕುರಿತು ಮಾತುಕತೆಯಾಗುತ್ತಿದೆ. ಏನು ಬೇಕೆಂದರೂ ಸಿಕ್ಕುವ ತಾಣ ಇದಲ್ಲ.

                  • ಜುಲೈ 1 2013

                    ~ಈಗಿನ ತಮಿಳಲ್ಲಿ ಅಲ್ಲ ಇಲ್ಲ .
                    ಈ ಮಾತು ತಪ್ಪು ಎನ್ನಲು ನೀವು ತೋರಿಸಿದ ನಿಘಂಟು ಸಾಕ್ಷಿ.

                    ಉತ್ತರ
  8. Maaysa
    ಜುಲೈ 1 2013

    “ಎಲ್ಲರಕನ್ನಡದಲ್ಲಿ ಹೀಗೆ ಗೇದರೆ ಬ್ರಾಮಣರು ಜಾತಿಯೇರ‍್ಪಾಡನ್ನು ಕೆಡವಲು ನೆರವಾಗಬಹುದು ಮತ್ತು ಬ್ರಾಮಣಿಕೆಯನ್ನು ಒಂದು ಜಾತಿಯಂತೆ ಕಾಣುವುದನ್ನು ನಿಲ್ಲಿಸಿ ಹಿಂದಿನ ಬ್ರಾಮಣರು ಮಾಡಿದ ಕೆಲಸದಲ್ಲಿ ನಿಜವಾಗಲೂ ಉಳಿಸಿಕೊಳ್ಳತಕ್ಕುದನ್ನು ಉಳಿಸಿಕೊಂಡು ಆ ಮೂಲಕ ಕೂಡಣಕ್ಕೆ ನೆರವಾಗಬಹುದು. ”

    ಇದು ಸರಿಯಾಗಿ ಅರ್ಥಾ ಆಗ್ತಿಲ್ಲ!

    ಅದರೂ ಬ್ರಾಹ್ಮಣರು ಇಷ್ಟು ದಿನ ಬದುಕಿದ್ದು, ನಂಬಿದ್ದು ತಪ್ಪು, ಎಂದಾ? ಬ್ರಾಹ್ಮಣಿಕೆ ಒಂದು ಜಾತಿಯೆಂದು ಯಾಕೆ ಕಾಣುವುದನ್ನು ನಿಲ್ಲಿಸಬೇಕು? ಬ್ರಾಹ್ಮಣ-ಜಾತಿಗೆ ಸೇರಿದವನು ಎಂದರೆ ಏನು ಅವಮಾನ? ಇದ್ಯಾವ ಸೀಮೆ ಕೀಳರಿಮೆ!

    ಉತ್ತರ
  9. ಬಸವಯ್ಯ
    ಜುಲೈ 4 2013

    ಹ್ಮ..ಕೊನೆಗೂ ಮಳೆ ನಿಂತಂತಿದೆ..ಈ ಮಾಯ್ಸಣ್ಣನನ್ನು ಸ್ವಾಗತಿಸಿದ್ದೇ ದುಬಾರಿಯಾಯ್ತು..ನಿಲುಮೆಯನ್ನುವುದು ಟ್ವೀಟರ್ ಆಗಿ ಹೋಯ್ತು!. 😦

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments