ವಿಷಯದ ವಿವರಗಳಿಗೆ ದಾಟಿರಿ

ಜೂನ್ 10, 2013

50

CSLC ಯ ಸಂಶೋಧನೆ ಮತ್ತು ಪ್ರಗತಿಪರರ ಫ್ಯಾಸಿಸ್ಟ್ ಧೋರಣೆ

‍ನಿಲುಮೆ ಮೂಲಕ

CSLC– ರಾಕೇಶ್ ಶೆಟ್ಟಿ

ಅಲ್ಲಿಯವರೆಗೂ ಸುಖಾ ಸುಮ್ಮನೆ ಭೂಮಿಯ ಸುತ್ತ ಗಿರಕಿ ಹೊಡೆಯುತಿದ್ದ ಸೂರ್ಯನಿಗೆ ಸುತ್ತುವುದರಿಂದ ಮುಕ್ತಿ ಕೊಡಿಸಿ,’ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ’ ಅಂದವನು ಕೋಪರ್ನಿಕಸ್. ಅವನ ಕೆಲಸವನ್ನ ಮುಂದುವರಿಸಿದವರು ಗೆಲಿಲಿಯೋ ಮತ್ತು ಬ್ರುನೋ.ಈ ಮೂವರು ಬರುವವರೆಗೂ ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಾನೆ ಅಂತಲೇ ಜನರು ನಂಬಿದ್ದರು.ಅದೇ ಜನರ ಮಧ್ಯದಿಂದ ಎದ್ದು ಬಂದು,’ಇಲ್ಲ ಸ್ವಾಮಿ ಭೂಮಿಯೇ ಸುತ್ತೋದು’ ಅಂದಿದ್ದ ಕೋಪರ್ನಿಕಸ್ ಅದೇ ಜನರಿಂದ ಹುಚ್ಚ ಅನ್ನಿಸಿಕೊಂಡಿದ್ದ.ಅವನ ನಂತರ ಬಂದ ಗೆಲಿಲಿಯೋ ಮತ್ತು ಬ್ರುನೋ ಸಹ ಕೋಪರ್ನಿಕಸ್ ವಾದಕ್ಕೆ ಸೈ ಅಂದರು.

ಸಮಾಜದ ನಂಬಿಕೆಯ ಬುಡವನ್ನು ಅಲುಗಾಡಿಸುವ ಯಾವುದೇ ಪ್ರಯತ್ನಕ್ಕೆ ದೊಡ್ಡ ಮಟ್ಟದಲ್ಲೇ ಅಡೆ-ತಡೆಗಳು ಎದುರಾಗಬೇಕಲ್ಲವೇ? ಗೆಲಿಲಿಯೋ,ಬ್ರೂನೋಗು ಅದೇ ಆಯಿತು. ಇವರ ಸಂಶೋಧನೆಯಿಂದ ಕನಲಿ ಕೆಂಡವಾದ ಪೋಪ್ ಎಂಟನೇ ಅರ್ಬನ್,“Heliocentric System” ಅನ್ನುವುದೇ ಸುಳ್ಳು ಎಂದು ಸಾರ್ವಜನಿಕವಾಗಿ ಗೆಲಿಲಿಯೋ ಮತ್ತು ಬ್ರೂನೋನನ್ನು ಖಂಡಿಸಿ, ಅವರಿಬ್ಬರ ಸಂಶೋಧನೆಗೂ ನಿರ್ಬಂಧವನ್ನೂ ಹೇರಿದರು.

ಗೆಲಿಲಿಯೋನನ್ನು ಜೈಲಿಗೂ ತಳ್ಳಲಾಯಿತು, ಸಾಯುವವರೆಗೂ ಗೃಹ ಬಂಧನದಲ್ಲಿರಿಸಲಾಯಿತು.1642ರಲ್ಲಿ ಗೆಲಿಲಿಯೋ ಮರಣವನ್ನಪ್ಪಿದಾಗ ಆತನನ್ನು ಕ್ರೈಸ್ತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ.ಇನ್ನು ಬಾಹ್ಯಾಕಾಶವೆಂಬುದು Finite ಅಲ್ಲ, Infinite. ಅದಕ್ಕೆ ಕೊನೆಯೇ ಇಲ್ಲ ಎಂದು ವಾದಿಸುವ ಧೈರ್ಯ ತೋರಿದ ಬ್ರೂನೋನನ್ನಂತೂ,೧೫೯೨ರಲ್ಲಿ ಬಂಧಿಸಿ ರೋಮನ್ ಕ್ಯಾಥೋಲಿಕ್ ಚರ್ಚ್‌ನ ನ್ಯಾಯಾಲಯದ(The Inquisition) ಮುಂದೆ 7 ವರ್ಷಗಳ ಕಾಲ ವಿಚಾರಣೆ ಗೊಳಪಡಿಸಿ, ಕೊನೆಗೆ ಉರಿವ ಜ್ವಾಲೆಯಲ್ಲಿ ಸುಡುವ ಮರಣದಂಡನೆಯನ್ನು ವಿಧಿಸಿದರು.

ಇಷ್ಟೆಲ್ಲ ನಡೆಯುತಿದ್ದರೆ,ಅತ್ತ ಭೂಮಿಯ ಸುತ್ತ ಸುತ್ತುತಿದ್ದ ಸೂರ್ಯ ಧಿಡೀರನೆ ಸುತ್ತುವುದ ನಿಲ್ಲಿಸಿದ್ದ.ಇತ್ತ ಅಷ್ಟು ದಿನ (ಜನರ ದೃಷ್ಟಿಯಲ್ಲಿ) ಸುಮ್ಮನಿದ್ದ ಭೂಮಿಯೇ ಸೂರ್ಯನ ಸುತ್ತ ತಿರುಗಲು ಶುರು ಮಾಡಿತ್ತು! ಹೀಗೆ ಧಿಡೀರ್ ಬದಲಾವಣೆಯಾಗಿದ್ದು ಹೇಗೆ? ಹಾಗೆ ಬದಲಾಯಿಸಲು ಸೂರ್ಯ-ಭೂಮಿಗೆ ಹೇಳಿದ್ದಾದರೂ ಯಾರು? ಕೋಪರ್ನಿಕಸ್ ಹೇಳಿದ್ದನಾ? ಇಲ್ಲವಲ್ಲ.ಅವನು ವೈಜ್ಞಾನಿಕ ಸಂಶೋಧನೆಯ ಮೂಲಕ ಸತ್ಯವೇನು ಅನ್ನುವುದನ್ನು ಸಾಬೀತುಪಡಿಸಿದ್ದ.ಆವತ್ತು ಸತ್ಯವನ್ನು ಪ್ರತಿಪಾದಿಸಿದ ಕೋಪರ್ನಿಕಸ್ ಹುಚ್ಚನೆನಿಸಿಕೊಂಡರೂ,ಗೆಲಿಲಿಯೋ,ಬ್ರೂನೋರನ್ನು ಶಿಕ್ಷಿಸಿದರೂ ಇಂದಿನ ವಿಜ್ಞಾನ ಅವರು ತೋರಿದ ಸತ್ಯವನ್ನೇ ಎತ್ತಿ ಹಿಡಿದಿದೆ.ಸತ್ಯವೆನ್ನುವುದು ಸೂರ್ಯನಂತೆ ಅದಕ್ಕೆ ಕ್ಷಣಕಾಲ ಗ್ರಹಣ ಹಿಡಿಯಬಹುದು,ಅದರ ಪ್ರಭೆಯನ್ನು ಶಾಶ್ವತವಾಗಿ ಮುಚ್ಚಿಡಲಾಗದು.

ಇದು ೩೦೦ ವರ್ಷಗಳ ಹಿಂದಿನ ಸಂಶೋಧಕರ ಕಥೆ-ವ್ಯಥೆ ಇರಬಹುದು ಅಂತ ನಿಟ್ಟುಸಿರು ಬಿಡೋಣವೆಂದರೆ,ಈಗಲೂ ಜನರ ನಂಬಿಕೆಯ ಬುಡ ಅಲ್ಲಾಡಿಸುವಂತ ಸಂಶೋಧನೆಗಳಿಗೆ ಜನ ಪ್ರತಿಕ್ರಿಯಿಸುವ ರೀತಿ ಹಾಗೆಯೇ ಇದೆ,ಸುಧಾರಣೆಯೇನೆಂದರೆ ತೀರ ಗೆಲಿಲಿಯೋ,ಬ್ರೂನೋಗೆ ಬಂದ ಗತಿ ಈಗಿನ ಸಂಶೊಧಕರಿಗೆ ಬರಲಾರದು(ಅನ್ನುವ ನಂಬಿಕೆ) ಅನ್ನಬಹುದಾದರೂ,ಅಂದು ಪೋಪ್ ಅರ್ಬನ್, ಗೆಲಿಲಿಯೋ-ಬ್ರೂನೋ ಅವರ ಸಂಶೋಧನೆಗೆ ಕೊಕ್ಕೆ ಹಾಕಿದಂತೆಯೇ, ಈಗಲೂ ಸಂಶೋಧನಗೆ ಕೊಕ್ಕೆಯಾಕಲು ಸೆಕ್ಯುಲರ್ ಸಂವಿಧಾನದಡಿಯಲ್ಲಿ ಕೆಲಸ ಮಾಡುವ ಸರ್ಕಾರಗಳು,ಪುರಾತನ ಸಂಶೋಧಕರು,ವಿವಿಯ ಕಡೆ ಮುಖವೇ ಮಾಡದ ಪ್ರೊಫೆಸರ್ ಗಳು ನಿಂತಿದ್ದಾರೆ ಅನ್ನುವುದಷ್ಟೆ ವ್ಯತ್ಯಾಸ.

ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ 4-5 ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದೊಂದಿಗೆ ಶುರುವಾದ ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC) ಭಾರತೀಯ ಸಮಾಜ, ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.

ಭಾರತೀಯ ಸಮಾಜ ವಿಜ್ಞಾನದ ತಳಹದಿಯು ವಸಹಾತುಶಾಹಿಯ ಪ್ರಭಾವದಿಂದ ಸೃಷ್ಟಿಯಾಗಿದೆ.ಭಾರತದ ಕುರಿತು ಯುರೋಪಿಯನ್ ಸಮಾಜ ವಿಜ್ನಾನಿಗಳು ತಳೆದ ಧೋರಣೆಯು ಅವರ ಯುರೋಪಿಯನ್ ಸಮಾಜವನ್ನು ಭಾರತೀಯ ಸಮಾಜಕ್ಕೆ ಸಮೀಕರಿಸಿ ಮಾಡಿದ್ದಾಗಿದೆಯೆಂದೂ ಹೇಳುತ್ತಲೇ,ಭಾರತದ ಸಮಾಜವನ್ನು ಹೊಸತಾದ ಸಮಾಜ ವಿಜ್ನಾದ ದೃಷ್ಟಿಯಿಂದ ಅಧ್ಯಯನ ನಡೆಸಬೇಕೆಂದು ಸಿ.ಎಸ್.ಎಲ್.ಸಿ ತಂಡ ಹೇಳುತ್ತದೆ.ಭಾರತದ ಸಾಮಾಜಿಕ ಸಂರಚನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿಕೊಂಡು ಅದರ ಫಲಿತಾಂಶದ ಮೇಲೆಯೇ ಇಲ್ಲಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಬೇಕಿದೆ ಅನ್ನುವ ವಾದವನ್ನು ಮುಂದಿಡುತ್ತಿದೆ.

ಅವರ ವಾದಕ್ಕೆ ಅವರು ಮುಂದಿಡುವ ಕಾರಣಗಳು ಕುತೂಹಲ ಕೆರಳಿಸುತ್ತವೆ.ವಸಾಹತು ಕಾಲದಲ್ಲಿ ಭಾರತವನ್ನು ಆಕ್ರಮಿಸಿಕೊಂಡ ಯುರೋಪಿಯನ್ನರಿಗೆ ಇಲ್ಲಿನ ಸಮಾಜವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲಾಗಲಿಲ್ಲ.ಕಡೆಗೆ ಅವರಿಗೆ ಸಹಾಯಕ್ಕೆ ಬಂದಿದ್ದು ಯುರೋಪಿನ ತಂದ ಸಮಾಜ ವಿಜ್ನಾದ ಕನ್ನಡಕ…! ಅದನ್ನೇ ಧರಿಸಿಕೊಂಡು ಭಾರತೀಯ ಸಮಾಜವನ್ನು ಅವರು ನೋಡಿದಾಗ ಸಹಜವಾಗಿಯೇ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಯುರೋಪಿಯನ್ ಸಾಮಾಜಿಕೆ ವ್ಯವಸ್ಥೆಗೆ ಮತ್ತು ಅಂದಿನ ಕ್ರಿಶ್ಚಿಯನ್ ಥಿಯಾಲಜಿಗೆ ಸಮೀಕರಿಸುತ್ತ ಇಲ್ಲಿನ ಸಾಮಾಜಿಕ ಕಟ್ಟುಪಾಡುಗಳನ್ನು ಡಿಫೈನ್ ಮಾಡಿ ತಮ್ಮ ಯುರೋಪಿಯನ್ ಕನ್ನಡಕವನ್ನು ಭಾರತೀಯರಿಗೆ ತೊಡಿಸಿದರು.ಆಗಿನ ಕಾಲದ ಭಾರತೀಯ ಜೀವಿಗಳು ಅದೇ ಯುರೋಪಿಯನ್ ಕನ್ನಡಕದಿಂದಲೇ ಭಾರತವನ್ನು ಗುರುತಿಸುತ್ತ, ಕಡೆಗೆ ಆ ಕನ್ನಡಕ ಮುಂದಿನ ಪೀಳಿಗೆ ಬರುವಷ್ಟರಲ್ಲಿ ‘In-Built’ ಅನ್ನುವಷ್ಟರ ಮಟ್ಟಿಗೆ ನಿಂತುಬಿಟ್ಟಿತು.

ಶಾಲಾ ದಿನಗಳಿಂದಲೇ ಭಾರತದಲ್ಲಿರುವ ಜಾತಿ ಪದ್ಧತಿಯೇ ನಮ್ಮೆಲ್ಲ ಅನಿಷ್ಟಗಳಿಗೆ ಕಾರಣ ಅಂತ ಓದಿಕೊಂಡು ಬಂದವರ ಮುಂದೆ ನಿಂತು “ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ” ಅಂದರೆ ಸಾಮಾನ್ಯರು ನಗುವುದು ಸಹಜವೇ.ಬಹಳಷ್ಟು ಜನ ವಿರೋಧಿಸಿದರು. ಅವರ ಸಂಶೋಧನೆ ಶುರುವಾಗುವ ಮೊದಲೆ ಶಿವಮೊಗ್ಗದ ಬುದ್ದಿಜೀವಿಯೊಬ್ಬರು ಈ ಸಂಶೋಧನೆಯನ್ನೇ ನಿಲ್ಲಿಸಿ ಅನ್ನುತ್ತ, ೮ನೇ ಪೋಪ್ ನ ಕಾಲಕ್ಕೂ ಮತ್ತು ನಮ್ಮ ಕಾಲಕ್ಕೂ “ನಂಬಿಕೆ”ಗಳ ವಿಷಯದಲ್ಲಿ ಅಂತ ಬದಾಲವಣೆಯೇನಿಲ್ಲ ಅಂತ ತೋರಿಸಿಕೊಟ್ಟರು.ಆರಂಭದ ಈ ವಿರೋಧದ ನಡುವೆಯೂ CSLC ಯವರು ಯಾವುದೇ ಫೆಲೋಷಿಪ್ ಕೂಡ ಇಲ್ಲದೇ ಸಮಾಜ ವಿಜ್ಞಾನದ ಸಂಶೋಧನೆಯನ್ನೇ ಒಂದು passion ಆಗಿ ತೆಗೆದುಕೊಂಡು ಪದೇ ಪದೇ ಸ್ಥಾಪಿತ ಥಿಯರಿಗಳ ಮೇಲೆ ತಮ್ಮ ಲಯಬದ್ಧ ಪ್ರಶ್ನೆಗಳನ್ನಿಡುತ್ತಲೇ ಬಂದರು.ಈ ಎಲ್ಲಾ ಪ್ರಶ್ನೆಗಳಿಗೆ ಕರ್ನಾಟಕದ ಬುದ್ದಿಜೀವಿ ವಲಯದ ಬಳಿ ಅಂತ ಉತ್ತರವೇನು ಕಾಣಲೇ ಇಲ್ಲ.ಇತ್ತೀಚೆಗೆ ರಾಜ್ಯದ ಬುದ್ದಿಜೀವಿ,ಚಿಂತಕರ ವಲಯದಲ್ಲಿ ಒಂದು ಮಟ್ಟಿನ ಕೋಲಾಹಲ ಮೂಡಿಸಿದ್ದು,CSLC ಯ ಬಾಲು ಮತ್ತು ಡಂಕಿನ್ ಝಳಕಿಯವರ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ” ಅನ್ನುವ ಪ್ರಬಂಧ.

ಈ ಪ್ರಬಂಧದಲ್ಲಿ ಬಾಲು ಮತ್ತು ಡಂಕಿನ್ “ವಚನಗಳು ಜಾತಿ ವಿರೋಧಿ ಚಳುವಳಿಯಾಗಿದ್ದವು” ಅನ್ನುವ ಪ್ರಚಲಿತ ವಾದಕ್ಕೆ ಯಾವುದೇ ತರ್ಕ ಮತ್ತು ನಿಜಾಂಶಗಳ ಆಧಾರವಿಲ್ಲ ಅನ್ನುವುದನ್ನು ತಮ್ಮ ಸಂಶೋಧನೆಯ ಮೂಲಕ ಹೇಳಲು ಹೊರಡುತ್ತಾರೆ.

“ವಚನಗಳು ಜಾತಿಯ ವಿರುದ್ಧದ ಚಳುವಳಿಯನ್ನು ಪ್ರತಿನಿಧಿಸುತ್ತವೆ ಎಂಬ ಪ್ರಚಲಿತ ಜನಪ್ರಿಯ ನಂಬಿಕೆಯು ನಿಜವೇ ಆಗಿದ್ದರೆ, ಬಹುತೇಕ ವಚನಗಳು ಜಾತಿಯ ಕುರಿತು ಮಾತನಾಡಲೇಬೇಕು. ಏಕೆಂದರೆ ಜಾತಿ ವಿರುದ್ಧದ ಚಳುವಳಿಯ ಭಾಗವಾಗಿದ್ದುಕೊಂಡೂ ವಚನಗಳು ಜಾತಿಯ ವಿರುದ್ಧ ಮಾತನಾಡದೆ ಊಳಿದಿರಬಹುದಾದ ಪರಿಸ್ಥಿತಿ ಸಾಧ್ಯವಿಲ್ಲದ ಮಾತು. ಈ ಊಹಾಸಿದ್ಧಾಂತದ ಪ್ರಕಾರ, ಒಂದುವೇಳೆ ನಾವು ವಚನಗಳು ಜಾತಿಯ ವಿರುದ್ಧ ಮಾತನಾಡುವುದಿಲ್ಲ ಅಥವಾ ಜಾತಿಯ ವಿಚಾರ ವಚನಗಳಿಗೆ ಮಹತ್ವದ ವಿಚಾರವೇ ಅಲ್ಲವೆಂದು ತೋರಿಸಿದರೆ, ವಚನಗಳು ಜಾತಿವಿರೋಧಿ ಸಾಹಿತ್ಯವೆಂಬ ಪ್ರಚಲಿತ ವಾದವನ್ನು ತಳ್ಳಿ ಹಾಕಿದಂತಾಗುತ್ತದೆ.” ಅನ್ನುವ ಊಹಾ ಸಿದ್ಧಾಂತದ ಮೂಲಕ ಶುರು ಮಾಡಿ,

“ಕರ್ನಾಟಕ ಸರ್ಕಾರ ಇದುವರೆಗೆ ಪ್ರಕಟಿಸಿರುವ ಒಟ್ಟು ವಚನಗಳು: 21,788.

ಇವುಗಳಲ್ಲಿ ಬ್ರಾಹ್ಮಣರ ಕುರಿತು ಮಾತನಾಡುವಂತೆ ತೋರುವ ವಚನಗಳ ಸಂಖ್ಯೆ: 195.

ಜಾತಿ, ಕುಲ ಮತ್ತು ಅವುಗಳಿಗೆ ಸಂಬಂಧಿಸಿದ ಇತರ ವಿಚಾರಗಳ ಕುರಿತು ಮಾತನಾಡುವಂತೆ ತೋರುವ ವಚನಗಳ ಸಂಖ್ಯೆ: 458″

ಅನ್ನುವ ಅಂಶಗಳನ್ನಿಡುತ್ತ ತಮ್ಮ ತರ್ಕ,ವಾದಗಳ ಮೂಲಕ ಪ್ರಚಲಿತ ವಚನಗಳ ಕುರಿತ ನಂಬಿಕೆಯ ಬುಡವನ್ನು ಅಲುಗಾಡಿಸುತ್ತ “ವಚನಗಳನ್ನು ಆಧ್ಯಾತ್ಮಿಕ ಚಳುವಳಿಯ ಹಿನ್ನೆಲೆ”ಯಲ್ಲಿ ಅರ್ಥೈಸಿಕೊಳ್ಳಬೇಕು ಅನ್ನುತ್ತಾರೆ ಡಂಕಿನ್.

ಸಹಜವಾಗಿಯೇ ಈ ವಾದವೂ ಟೀಕೆಗೊಳಗಾಯಿತು.ಆದರೆ ಈ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆಯ” ಚರ್ಚೆ ನಡೆದ ರೀತಿಯನ್ನು ಗಮನಿಸಿದಾಗ ನಮ್ಮ ಪ್ರಗತಿಪರರೊಳಗಿನ ಫ್ಯಾಸಿಸ್ಟ್  ಬೇಡ ಬೇಡವೆಂದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇದ್ದಾನೆ.ಮಾತು ಮಾತಿಗೆ ” ಅಭಿವ್ಯಕ್ತಿ ಸ್ವಾತಂತ್ರ್ಯ, ಅಸ್ಪೃಷ್ಯತೆ,ಸಾಮಾಜಿಕ ಬಹಿಷ್ಕಾರ” ಅಂತೆಲ್ಲ ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುವ ಈ ಪ್ರಗತಿಪರರು ಮೊದಲಿಗೆ ಸಿ.ಎಸ್.ಎಲ್.ಸಿಯವರ ಸಂಶೋಧನೆಯೆಡೆಗೆ ತೋರಿದ್ದು “ವೈಚಾರಿಕ ಅಸ್ಪೃಷ್ಯತೆ”ಯನ್ನೇ. ಯಾವಾಗ ಚರ್ಚೆ ರಾಜ್ಯಮಟ್ಟದ ಪತ್ರಿಕೆಯಲ್ಲಿ ಶುರುವಾಯಿತೋ ಆಗಲೇ ವೈಚಾರಿಕತೆಯ ಬಗ್ಗೆ ಮಾತನಾಡುವವರ ಹುಳುಕುಗಳು ರೇಜಿಗೆಯೆನಿಸುವಷ್ಟು ಹೊರಬಂದಿದ್ದು.ಕೇವಲ ಸಿ.ಎಸ್.ಎಲ್.ಸಿ ವಿರೋಧಿ ಲೇಖನಗಳಿಗೆ ಸ್ಥಾನ ಕೊಟ್ಟು ಅದಕ್ಕೆ ಚರ್ಚೆ ಅನ್ನುವ ಹೆಸರುಕೊಟ್ಟು “ವೈಚಾರಿಕ ಬಹಿಷ್ಕಾರ”ವನ್ನು ಹಾಕಿದರು.

ಪಾಪ.ಈ ಪ್ರಗತಿಪರರ ಚಿಂತಾಜನಕ ಚಿಂತನೆಗೆ “ಇದು ಕೋಳಿ ಕೂಗದಿದ್ದರೂ ಅಲಾರಂಗಳು ನಿಯಮಿತವಾಗಿ ಕೂಗುವಂತ ಕಾಲ” ಅನ್ನುವುದು ತಿಳಿಯಲಿಲ್ಲ ನೋಡಿ. ತಾವು ಲಾಬಿ ಮಾಡಿ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇವರ ಸಂಶೋಧನೆಯ ವಾದಕ್ಕೆ ಸ್ಥಾನ ಕೊಡದಿದ್ದರೆ ಇವರ ವಿಷಯ ಹೊರಗೆ ಬರುವುದಿಲ್ಲ ಅಂದುಕೊಂಡರು.ಆದರೆ ಮಾಹಿತಿ ತಂತ್ರಜ್ನಾನದ ಈ ಯುಗದಲ್ಲಿ ಮಾಹಿತಿ ವಿನಿಮಯಕ್ಕೆ ಯಾವ ದೊಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಅನ್ನುವುದು ಅವರಿಗೆ ಗೊತ್ತಾಗಿದ್ದು “ನಿಲುಮೆ” ಬಳಗ ವಚನದ ಕುರಿತು ಮುಕ್ತ ವೇದಿಕೆಯೊದಗಿಸಿದಾಗಲೇ.ಅಷ್ಟೊತ್ತಿಗೆ ಫೇಸ್ಬುಕ್ಕಿನಲ್ಲೂ ಪರ-ವಿರೋಧ ಚರ್ಚೆ ಶುರುವಾಗಿತ್ತು.

ಫೇಸ್ಬುಕ್ಕಿನ ವಿರೋಧಿ ಬಣದಲ್ಲಿದ್ದವರು ಪುನಃ ಅವರೇ,ಮಾತು ಮಾತಿಗೆ “ಅಭಿವ್ಯಕ್ತಿ ಸ್ವಾತಂತ್ರ್ಯ,ಅಸ್ಪೃಷ್ಯತೆ,ಬಹಿಷ್ಕಾರ” ಅಂತೆಲ್ಲ ಮಾತನಾಡುವವರು.ಫೇಸ್ಬುಕ್ಕಿನಲ್ಲಿ ಉತ್ತರಿಸುವ ಮುಖವಿಲ್ಲದವರು ಹೈ-ಟೆಕ್ ಬಹಿಷ್ಕಾರ (ಬ್ಲಾಕ್) ಹಾಕಲಾರಂಭಿಸಿದರು.ಸರಿ ಈ ಪ್ರಗತಿಪರರ ಮುಖವಾಡ ಈ ವೈಚಾರಿಕ ಅಸ್ಪೃಷ್ಯತೆ,ಹೈ-ಟೆಕ್ ಬಹಿಷ್ಕಾರಕ್ಕಷ್ಟೇ ಸೀಮಿತವಾಗಬಹುದೇ ಅಂದುಕೊಂಡರೇ ಮತ್ತದೇ ೩೦೦ ವರ್ಷದ ಹಿಂದಕ್ಕೆ ಹೋಗಿ ನಿಂತಿದ್ದಾರೆ.

ವಿವಿಯ ಕಡೆ ತಿಂಗಳುಗಟ್ಟಲೆ ಮುಖಮಾಡದ ಪ್ರಾಧ್ಯಾಪಕರು,ಸರ್ಕಾರಿ ಸಾಹಿತಿಗಳೆಲ್ಲ ಸೇರಿಕೊಂಡು ಸರ್ಕಾರಿ ಮಟ್ಟದಲ್ಲಿ ಒತ್ತಡ ತಂದು ಅವರೇನು ಸಂಶೋಧನೆ ಮಾಡುತಿದ್ದಾರೆ ಅನ್ನುವ ವರದಿ ತರಿಸಿಕೊಳ್ಳುತ್ತಾರಲ್ಲ? ಇಂತವರನ್ನು ಏನೆಂದು ಕರೆಯುತ್ತೀರಿ? ಒವೈಸಿಯಂತವರು “ರಾಜಕೀಯ ಉದ್ರೇಕಕಾರಿ ಭಾಷಣ” ಮಾಡಿದಂತೆ ಸಾಹಿತಿಗಳು/ವಿವಿಯ ಪ್ರಾಧ್ಯಾಪಕರು “ವೈಚಾರಿಕ ಉದ್ರೇಕಕಾರಿ” ಲೇಖನದಲ್ಲಿ ” ಬಾಲು ಏನೋ ಬೆಲ್ಜಿಯಂ ವಿವಿಯಲ್ಲಿ ಇದ್ದಾರೆ.ಅವರ ಗಿಂಡಿಮಾಣಿಗಳೆಲ್ಲ ನಮ್ಮ ನಡುವೆಯೇ ಬದುಕಬೇಕು” ಅನ್ನುವಂತೆ ಬರೆಯುತ್ತಾರಲ್ಲ… ಇದನ್ನು ವೈಚಾರಿಕ ವ್ಯಭಿಚಾರ ಎನ್ನೋಣವೇ?

ಅಷ್ಟಕ್ಕೂ ಸಮಾಜ ವಿಜ್ಞಾನದ ಸಂಶೋಧನೆಯ ಕುರಿತು ಮಾತನಾಡಬೇಕಾದವರು ಸಮಾಜ ವಿಜ್ನಾನಿಗಳೇ ತಾನೆ? ಆದರೆ ಈ ಇಡಿ ಚರ್ಚೆಯಲ್ಲಿ ಸಾಮಾಜಿಕ ಸಂಶೋಧಕರಿಗಿಂತ ಹೆಚ್ಚು ಮಾತನಾಡುತ್ತಿರುವುದು ಸಾಮಾಜಿಕ ಕಾರ್ಯಕರ್ತರು, (ಆಕ್ಟಿವಿಸ್ಟ್), ಸಾಹಿತಿಗಳು/ಸಾಹಿತ್ಯದ ವಿದ್ಯಾರ್ಥಿಗಳು. ಅವರು ಮಾತನಾಡಬಾರದು ಅಂತೇನಿಲ್ಲ.ಆದರೆ ಬಹುಷಃ ಸಂಶೋಧನೆಯ ಭಾಷೆಗಳು,ಇತಿ-ಮಿತಿ,ಸಮಸ್ಯೆಗಳು ಸಮಾಜ ವಿಜ್ನಾನಿಗಳಿಗೆ ಅರ್ಥವಾಗುವಷ್ಟು ಸಾಮಾಜಿಕ ಕಾರ್ಯಕರ್ತರಿಗೆ ಸಾಹಿತಿಗಳು/ಸಾಹಿತ್ಯದ ವಿದ್ಯಾರ್ಥಿಗಳಿಗೆ ಆಗದು ಅಲ್ಲವೇ?

ಇನ್ನು ಚರ್ಚೆಗಿಳಿದ ಕಲಬುರ್ಗಿಯಂತಹ ನಾಡಿನ ಹಿರಿಯ ಸಂಶೋಧಕರು “ಈ ವಿಕೃತ ಸಂಶೋಧನೆಯನ್ನು ನಿಲ್ಲಿಸಿ” ಅಂತ ಕರೆಕೊಡುತ್ತಾರಲ್ಲ ನಾವ್ಯಾವ ಕಾಲದಲ್ಲಿದ್ದೇವೆ? ಹಾಗಾದರೆ,ಪ್ರಜಾಪ್ರಭುತ್ವ,ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದೆಲ್ಲ ಬರಿಯ ಲೊಳಲೊಟ್ಟೆಯೇ? ನಮ್ಮ ವಿಶ್ವವಿದ್ಯಾಲಯಗಳ ಮೂಲ ಧ್ಯೇಯವೇ ಶಿಕ್ಷಣ ಹಾಗೂ ಸಂಶೋಧನೆಯನ್ನು ಬೆಳೆಸುವುದು.ಅಂತ ವಿವಿಗಳ ಸಿಂಡಿಕೇಟ್ ಸದಸ್ಯರು ಸಂಶೋಧಕರಿಗೆ ಕಡಿವಾಣ ಹಾಕಬೇಕು ಅನ್ನುತ್ತಾರೆ.ಇಂದು ಸಂಶೊಧನೆಯನ್ನು ನಿಲ್ಲಿಸುವಂತೆ ಕರೆಕೊಡುವ ಕಲಬುರ್ಗಿಯವರಿಗೆ ೧೯೮೯ರಲ್ಲಿ ಅವರ ಮಾರ್ಗ ಕೃತಿ ಕುರಿತ ವಿವಾದ ಮರೆತು ಹೋಗಿದೆಯೇ? ಬಸವಣ್ಣನವರ ಎರಡನೇ ಹೆಂಡತಿ ನೀಲಾಂಬಿಕೆಯನ್ನು ಇವರು ವೇಶ್ಯೆಯಂತೆ ಚಿತ್ರಿಸಿದ್ದಾರೆ ಎಂಬ ವಿಚಾರದ ಕುರಿತು ಈ ವಿವಾದ ಎದ್ದಿತ್ತು. ಆಗ ಇವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ,ಸಂಶೋಧನೆ ಎಲ್ಲವೂ ಬೇಕಿತ್ತು.ಈಗ ಅವರ ಮುಂದಿನ ಪೀಳಿಗೆಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಶೋಧನೆಗಳ ಅಗತ್ಯವಿಲ್ಲವೇ?

ಇನ್ನು ಸಿ.ಎಸ್.ಎಲ್.ಸಿಯವರ ಮೇಲೆ ಕೇಳಿಬರುವ ಇನ್ನೊಂದು ವಿಕೃತ ಮಾತೆಂದರೆ “ಬೆಲ್ಜಿಯಂನ ಹಣ”ದ ಬಗ್ಗೆ.ಬಹುಷಃ ಹೀಗೆ ಹಣದ ಬಗ್ಗೆ ಮಾತನಾಡುವವರು ತಮ್ಮ ತಮ್ಮ ಅನುಭವಗಳಿಂದ ಮಾತನಾಡುತಿದ್ದಾರೋ ಏನೋ ತಿಳಿಯದು.ಆದರೆ, ವರ್ಷಗಳಿಂದ ಯಾವುದೇ ಫೆಲೋಷಿಪ್ ಕೂಡ ಇಲ್ಲದೇ ಸಮಾಜ ವಿಜ್ನಾದೆಡೆಗಿನ ತಮ್ಮ Passion ಮೂಲಕವೇ ಸಂಶೋಧನೆ ನಡೆಸುತ್ತಿರುವ ಸಂಶೋಧನಾ ವಿದ್ಯಾರ್ಥಿಗಳ ಈ ರೀತಿಯ ಆರೋಪ ಮಾಡುವುದು ವಿಕೃತ ಮನಸ್ಥಿತಿಯಲ್ಲದೇ ಏನು? ಸಂಶೋಧನೆಗೆ ಸಂಶೋಧನಾ ವಿದ್ಯಾರ್ಥಿಗಳೇ ಮೂಲ.ಅವರ ಜೀವನ ನಿರ್ವಹಣೆಗೆ ಫೆಲೋಷಿಪ್ ಕೂಡ ಬೇಕು.ಫೆಲೋಷಿಪ್ ಇಲ್ಲದೇ ಯಾವ ಸಂಶೋಧಕನೂ ಸಂಶೋಧನೆಗೆ ಮುಂದಾಗಲಾರ. ತನ್ನ ಹೊಟ್ಟೆಗೆ ಸೊನ್ನೆಯಾಗಿರುವಾಗ ಬೇರೆಯವರ ಬಗ್ಗೆ ಚಿಂತಿಸಲು ಹೇಗೆ ಸಾಧ್ಯ? ಆದರೆ ಎರಡು ಮೂರು ವರ್ಷದಿಂದ ಒಂದು ನಯಾಪೈಸೆಯೂ ಇಲ್ಲದೇ ಸಂಶೋಧನೆ ಮಾಡುತ್ತಿರುವ ಸಿ.ಎಸ್.ಎಲ್.ಸಿ ತಂಡದ ಸಂಶೋಧಕರನ್ನು ನೋಡಿದಾಗ ಒಂದು ಕ್ಷಣ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆಯೇ ಜಿಗುಪ್ಸೆ ಹುಟ್ಟುತ್ತದೆ. ಒಂದು ಕಡೆ ಸಮಾಜ ವಿಜ್ಞಾನ ಸಂಶೋಧನೆಯೆಡೆಗೆ ಸರ್ಕಾರ ಅತೀವ ನಿರ್ಲಕ್ಷ ವಹಿಸುತ್ತಿದೆ. ಆದರೆ ತನಗೆ ಬೇಕಾದ ಜ್ಞಾನದ ಉತ್ಪಾದನೆ ಮಾಡಿಕೊಡುವ ತನ್ನ ಅಸ್ತಿತ್ವವನ್ನು ಎಂದೂ ಪ್ರಶ್ನಿಸದ ವಿಚಾರಗಳನ್ನೇ ಚಿಂತನೆ/ ಸಂಶೋಧನೆ ಎಂದು ಕರೆದು ಕೋಟಿ ಕೋಟಿ ಹಣ ವ್ಯಯಿಸುತ್ತದೆ.ಸಿ.ಎಸ್.ಎಲ್.ಸಿ ಯ ಸಂಶೋಧಕರು ಪರಸ್ಪರವಾಗಿ ಆರ್ಥಿಕವಾಗಿ ನೆರವಾಗುತ್ತ ತಮ್ಮ ಸಂಶೋಧನಾ ನಿಷ್ಠೆಯನ್ನು ಎಂದಿನಂತೆ ಉಳಿಸಿಕೊಂಡಿದ್ದಾರೆ. ಇವತ್ತು ದುಡ್ಡು ಕೊಟ್ಟು ಭಾಷಣಕ್ಕೆ ಜನರನ್ನು ಕರೆಸಬೇಕಾದ ಕಾಲ ಬಂದಿದೆ. ಅಂಥರರಲ್ಲಿ ಯಾವ ಫಲಾಪೇಕ್ಷೆಯೂ ಇಲ್ಲದೇ ದುಡಿಯುತ್ತಿದ್ದಾರೆ ಇಲ್ಲಿನ ಸಂಶೋಧಕರು. ಇವರ ಮೇಲೆ “ಬೆಲ್ಜಿಯಂ ಹಣ”ವನ್ನು ಆರೋಪಿಸುವವರು,ಹಾಗೇನಾದರೂ ಹಣಕಾಸಿನ ಅವ್ಯವಾಹರ ನಡೆಯುತ್ತಿದ್ದರೆ ಅದನ್ನೇಕೆ ಆರ್.ಟಿ.ಐ ಮೂಲಕವೋ ಅಥವಾ ತಾವು ಸಂಶೋಧನೆಯನ್ನು ನಿಲ್ಲಿಸುವಂತೆ ಒತ್ತಡ ಹೇರುತ್ತಿರುವ ಸರ್ಕಾರದ ಮೂಲಕವೇ ತನಿಖೆ ಏಕೆ ಮಾಡಬಾರದು? ಆರೋಪಗಳಲ್ಲೇ ಕಾಲ ತಳ್ಳಲು ಇವರೇನು ರಾಜಕರಾಣಿಗಳೇ? ಖುದ್ದು ರಾಜಕಾರಣಿಗಳಾದರೂ ಕ್ಷಣಕಾಲ ಅಭಿವೃದ್ಧಿಯ ಬಗ್ಗೆ ಚಿಂತಿಸಿಯಾರು.ಆದರೆ ನಮ್ಮ ಪ್ರಗತಿಪರರು ಸಿ.ಎಸ್.ಎಲ್.ಸಿಯವರ ವಾದಕ್ಕೆ ಪ್ರತಿವಾದ ಮಂಡಿಸಲಾಗದೇ ಸಂಷೋಧನೆಯನ್ನೇ ನಿಲ್ಲಿಸುವ,ಬಹಿಷ್ಕರಿಸುವ ಅನೈತಿಕ ಮಾರ್ಗಕ್ಕಿಳಿದಿದ್ದಾರೆ.

ಯಾವುದೇ ಸ್ಥಾಪಿತ ನಂಬಿಕೆಗಳನ್ನು ಪ್ರಶ್ನೆ ಮಾಡಿದಾಗ ಅದಕ್ಕೆ ವಿರೋಧವೇಳುವುದು ಸಹಜವೇ. ಎಲ್ಲರೂ ಒಪ್ಪುವಂತೆ ಬರೆಯಲು ಸಂಶೋಧನಾ ವರದಿಯೇನು ಯಾವುದೋ ರಾಜಕೀಯ ಪಕ್ಷದ ಪ್ರಣಾಳಿಕೆಯೋ ಅಥವಾ ಸರ್ಕಾರಿ ಪ್ರಭಾವ ಹೊರಬರುವ ಯಾವುದೋ ಸಮಿತಿಯ ವರದಿಯೋ ಅಲ್ಲ.ಸಾಮಾಜಿಕ ಸಂಶೋಧನೆಯ ಕುರಿತ ಈ ವಾದಕ್ಕೆ ವೈಚಾರಿಕ ನೆಲೆಯಲ್ಲಿ ಪ್ರತಿವಾದ ಮಂಡಿಸಬೇಕೆ ಹೊರತು,ವೈಚಾರಿಕ ಬಹಿಷ್ಕಾರ,ಅಸ್ಪೃಷ್ಯತೆ ಅಥವಾ ಸಂಶೋಧನೆಯನ್ನೇ ನಿಲ್ಲಿಸಿ ಅನ್ನುವ ಬೆದರಿಕೆಗಳಿಂದಲ್ಲ. ಹೆಚ್ಚೆಂದರೆ ಸಂಶೋಧನಾ ಕೇಂದ್ರಕ್ಕೆ ಬೀಗ ಜಡಿಯಬಹುದೇ ಹೊರತು ಸಂಶೋಧಕರ ತಲೆಗಲ್ಲ ಅನ್ನುವುದು ಈ ನಾಡಿನ ಪ್ರಗತಿಪರರಿಗೆ ತಿಳಿದರೆ ಒಳ್ಳೆಯದು. ಒಂದು ವಿಚಾರವನ್ನು ಒಪ್ಪುವುದು ಬಿಡುವುದು ಬೇರೆಯೇ ವಿಚಾರ.ಆದರೆ,ಆ ವಿಚಾರಗಳಿಗೆ ವೇದಿಕೆಯೊದಗಿಸುವುದು ಆರೋಗ್ಯಕರ ಸಮಾಜದ ಲಕ್ಷಣ.ಅಂತ ಸಮಾಜದ ನಿರ್ಮಾಣವೇ ನಮ್ಮ ಪ್ರಗತಿಪರರ ಅನಿಸಿಕೆಯೂ ಹೌದು ಅಂದುಕೊಳ್ಳುತ್ತೇನೆ.ಹೌದು ಅನ್ನುವುದಾದರೆ,ಇನ್ನಾದರೂ ಸಿ.ಎಸ್.ಎಲ್.ಸಿ ವಾದವನ್ನು ನಿಲ್ಲಿಸಲು ಅನೈತಿಕ ಮಾರ್ಗವನ್ನು ಹಿಡಿಯುವುದು ಬಿಟ್ಟು ಸಾಮಾಜಿಕ ಸಂಶೋಧನೆ ಮತ್ತು ವೈಚಾರಿಕ ಭಾಷೆಯಲ್ಲಿ ಮಾತನಾಡುವುದು ಒಳಿತು.

50 ಟಿಪ್ಪಣಿಗಳು Post a comment
  1. Umesh
    ಜೂನ್ 10 2013

    Very well written Rakesh.
    In this connection I remember French Philosopher Voltaire’s words “I do not agree with what you have to say, but I’ll defend to the death your right to say it.” Kalburgi should introspect on Voltaire’s words and remove blinders from his eyes and see the light. It is very true, so called vested interests saw to it that the views and replies of CSLC never got published in the supposedly “progressive Prajavani” newspaper. These “so called” intellectuals are Marxists who toe single line of arguments and suppress dissent.

    ಉತ್ತರ
  2. Annapoorna
    ಜೂನ್ 10 2013

    ಪ್ರಿಯ ರಾಕೇಶ್,

    “ಸಿ.ಎಸ್.ಎಲ್.ಸಿ ವಾದವನ್ನು ನಿಲ್ಲಿಸಲು ಅನೈತಿಕ ಮಾರ್ಗವನ್ನು ಹಿಡಿಯುವುದು ಬಿಟ್ಟು ಸಾಮಾಜಿಕ ಸಂಶೋಧನೆ ಮತ್ತು ವೈಚಾರಿಕ ಭಾಷೆಯಲ್ಲಿ ಮಾತನಾಡುವುದು ಒಳಿತು.”

    ಈಗಾಗಲೇ ರಂಜಾನ್ ದರ್ಗಾ ಅವರು ಇದನ್ನು ಮಾಡಿದ್ದಾರೆ. ಇಲ್ಲಿ ನೋಡಿ:
    http://ladaiprakashanabasu.blogspot.in/2013/06/blog-post_2207.html

    ಉತ್ತರ
    • ರಂಜಾನ್ ದರ್ಗಾ ಅವರ ಸುಧೀರ್ಘ ಲೇಖನವನ್ನು ಕುತೂಹಲದಿಂದ ಓದುತ್ತಲೇ ಹೋದೆ… ಅವರು ಆಧ್ಯಾತ್ಮವನ್ನು ಬ್ರಾಹ್ಮಣರಿಗೇ ಗುತ್ತಿಗೆ ಕೊಟ್ಟು ಗೋಳಾಡುವುದು ನೋಡಿ ನಗುವೂ ಬಂತು ಮತ್ತು ಸದಾಕಾಲ ಹೀಗೆಯೇ ಗೋಳಾಡುವುದರಿಂದ ಪರಿಹಾರವೇನಾದರೂ ಸಿಕ್ಕೀತೆ ಅನ್ನಿಸಿತು… ಅವರ ಪ್ರಕಾರ ವೈದಿಕವೆಲ್ಲ ರಾಕ್ಷಸತನ… ಶಿವಶರಣರು ಮಾಡಿದ್ದೆಲ್ಲ ಅದ್ಭುತ…! ಬಸವಣ್ಣರ ಕ್ರಾಂತಿಗೆ ತಲೆದೂಗಲೇ ಬೇಕು ಎರಡು ಮಾತಿಲ್ಲ. ಬಸವಣ್ಣನವರ ಕನಸಿನ ಸಮಾಜ ಇವತ್ತಿಗೆ ಬಂದು ನಿಂತಿರುವುದೆಲ್ಲಿ? ಕಡೆಗೂ ಅವರ ಕ್ರಾಂತಿ ಕೊನೆಯಾಗಿದ್ದು ಒಂದು ಜಾತಿಯ ಸೃಷ್ಟಿಯಲ್ಲೇ ಅಲ್ಲವೇ? ಆ ಜಾತೊಯೊಳಗಿಂದು ಎಷ್ಟು ಉಪಜಾತಿಗಳಿವೆ? ಅದೆಲ್ಲಾ ಆಗಿದ್ದು ಹೇಗೆ ಯೋಚಿಸಬೇಕಾದ ಪ್ರಶ್ನೆಯಲ್ಲವೇ? (ಸಿದ್ದ ಉತ್ತರ : ಬ್ರಾಹ್ಮಣರೇ ಕಾರಣ ಅನ್ನುವುದನ್ನು ಬಿಟ್ಟು ಬೇರೆ ಏನಾದರೂ ಇದ್ದರೇ ಹೇಳಿ)

      ಉತ್ತರ
    • Annapurna
      ಜೂನ್ 21 2013

      priya rakesh, shreeyuta ranjaan dargaa avaru sadhyadalle avadhi patrikeyalli “vachanakaarara bagge dandetti bandavarige” uttara kodaliddaare. haaganta http://avadhimag.com/ nalli munsoochane kodalaagide.

      ಉತ್ತರ
      • ಬಸವಯ್ಯ
        ಜೂನ್ 21 2013

        ಒಹೊ..ದಂಡೆತ್ತಿ ಬಂದವರನ್ನು ಎದುರಿಸಲು ವಚನ ಸಾಮ್ರಾಜ್ಯದ ದೊರೆ ರಂಜಾನ ದರ್ಗಾರವರು ಅಂಡೆತ್ತಿ ರೆಡಿಯಾಗುತ್ತಿದ್ದಾರೆ!..ಇನ್ನೊಂದು ಕಲ್ಯಾಣ ಕ್ರಾಂತಿ!!. ಅದಕ್ಕಾಗಿ ಒಂದು ಮುನ್ಸೂಚನೆ!. ಈ ಕ್ರಾಂತಿಯ ನಂತರ ಅದ್ಭುತಗಳು ಸಂಭವಿಸಿ ಅವಧಿಯ ಸಂಪಾದಕರ ತಲೆಯ ಮೇಲೆ ಜೊಂಪೆ ಕೂದಲನ್ನು ಕಾಣುವಂತಾಗಬಹುದೆ?

        ಉತ್ತರ
        • Annapoorna
          ಜೂನ್ 21 2013

          ರಂಜಾನ್ ದರ್ಗಾ ಅವರು ವಚನಕಾರರ ಬಗ್ಗೆ ಅನೇಕ ಕಡೆ ಈಗಾಗಲೇ ಹೇಳಿರುವುದ್ದನ್ನು ಬಿಟ್ಟು ಹೊಸತು ಏನನ್ನು ಬರೆಯಬಹುದು ಅಂತ ಕುತೂಹಲವಿದೆ ನನಗೆ. ಸಾಧ್ಯವಾದರೆ ಅವರಿಗೆ ಡಂಕಿನ್ ಅವರ ಪಿ. ಎಚ್. ಡಿ. ಪ್ರಬಂಧವನ್ನು ಕಳುಹಿಸಿ. ರಂಜಾನ್ ದರ್ಗಾ ಹೇಳಿದ್ದನ್ನೇ ಹೇಳುವ ಬದಲು ಅದನ್ನು ಓದಿ ಪ್ರತಿಕ್ರಿಯಿಸುವಂತಾಗಲಿ.

          ಉತ್ತರ
          • Annapoorna
            ಜೂನ್ 21 2013

            ರಂಜಾನ್ ದರ್ಗಾ ಅವರು ಇದುವರೆಗೆ ವಚನಗಳ ಬಗ್ಗೆ ಬರೆದದ್ದನ್ನು ಇಲ್ಲಿ ಓದಬಹುದು:
            http://www.vicharamantapa.net/content/node/375

            ದರ್ಗಾ ಅವರ ಪ್ರಖರ ಚಿಂತನೆಯ ಸ್ಯಾಂಪಲ್ಲು ಇಲ್ಲಿದೆ:
            http://www.vicharamantapa.net/content/node/362
            ಚೆನ್ನಬಸವಣ್ಣನ ವಚನವೊಂದರ “ಭಕ್ತ ಶಾಂತನಾಗಿರಬೇಕು” ಎಂಬ ಸಾಲನ್ನು ದರ್ಗಾ ಅವರು “ಭಕ್ತನೆನಿಸಿಕೊಳ್ಳುವವನು ಶಾಂತ ಗುಣವನ್ನು ಹೊಂದಿರಬೇಕು. ಯಾರು ಶಾಂತ ಗುಣವನ್ನು ಹೊಂದಿರುವುದಿಲ್ಲವೋ ಅವರ ಮನಸ್ಸಿನಲ್ಲಿ ಜಾತಿವಾದ, ಕೋಮುವಾದ, ಉಗ್ರವಾದ ಮುಂತಾದ ಅವಗುಣಗಳು ಹುಟ್ಟಿಕೊಳ್ಳುತ್ತವೆ. ಕೋಮುವಾದಿಗಳು ಧರ್ಮ ಧರ್ಮಗಳ ಮಧ್ಯೆ ಭೇದಭಾವವನ್ನು ಸೃಷ್ಟಿಸುತ್ತಾರೆ. ಧರ್ಮಗಳ ಹೆಸರಿನಲ್ಲಿ ಜನರು ಕೋಮುಗಲಭೆಗಳಲ್ಲಿ ತೊಡಗುವಂತೆ ಮಾಡುತ್ತಾರೆ. ಇಂಥ ಕೋಮುಗಲಭೆಗಳಿಂದಾಗಿ ಕೋಟ್ಯಂತರ ರೂಪಾಯಿಗಳ ಹಾನಿಯಾಗುವುದು. ಸಹಸ್ರಾರು ಅಮಾಯಕ ಜನ ಸಾಯುವರು. ಮೂಲಭೂತವಾದಿಗಳು ಅಂದರೆ ಧರ್ಮಗ್ರಂಥಗಳನ್ನು ಯಾಂತ್ರಿಕವಾಗಿ ಅರ್ಥ ಮಾಡಿಕೊಳ್ಳುವವರು. ಧರ್ಮದ ಮೂಲ ಆಧಾರಗಳಾದ ಆತ್ಮಸಾಕ್ಷಾತ್ಕಾರ, ಅಹಿಂಸೆ ಮತ್ತು ವಿಶ್ವಶಾಂತಿಯ ಮಹತ್ವವನ್ನು ಅರಿಯದವರು. ಆತ್ಮಸಾಕ್ಷಾತ್ಕಾರವಾಗದೆ ಅಹಿಂಸೆಯ ಅರಿವು ಮೂಡದು. ಅಹಿಂಸೆಯ ಅರಿವು ಮೂಡದೆ ವಿಶ್ವಶಾಂತಿ ಲಭಿಸದು. ಹೀಗೆ ಧರ್ಮದ ಈ ಮೂಲವನ್ನೇ ಅರಿಯದ ಮೂಲಭೂತವಾದಿಗಳು ತಮ್ಮ ಜನಾಂಗದ ಯುವಕರಿಗೆ ದಾರಿ ತಪ್ಪಿಸಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸುತ್ತಾರೆ. ಧರ್ಮಕ್ಕಾಗಿ ಬದುಕುವುದನ್ನು ಕಲಿಸದೆ ಸಾಯುವುದನ್ನು ಕಲಿಸುತ್ತಾರೆ.” ಅಂತ ಅರ್ಥೈಸಿದ್ದಾರೆ.

            ಗಮನಾರ್ಹವಾದ ವಿಚಾರ ಏನೆಂದರೆ ಚೆನ್ನಬಸವಣ್ಣನ ಈ ವಚನದಲ್ಲಿ “ಸಕಲಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು” ಎಂದು ಹೇಳಲಾಗಿದೆಯೇ ಹೊರತು ಭಕ್ತ ತನ್ನ ಜಾತಿ ಬಿಡಬೇಕು ಎಂದಾಗಲಿ ಜಾತಿ ರಹಿತ ಸಮಾಜವನ್ನು ನಿರ್ಮಿಸಲು ಹೋರಾಟ ಮಾಡಬೇಕು ಎಂದಾಗಲಿ ಹೇಳಲಾಗಿಲ್ಲ.

            ಹರಳಯ್ಯನ ಚಮ್ಮಾವುಗೆ ಬಗ್ಗೆ ಬರೆಯುತ್ತಾ ದರ್ಗಾ ಅವರು “ಹರಳಯ್ಯನವರ ವಚನಗಳು ಸಿಕ್ಕಿಲ್ಲ. ಆದರೆ ಅವರು ಬಸವಣ್ಣನವರಿಗೆ ಕೊಟ್ಟ ಕಲಾತ್ಮಕ ಚಮ್ಮಾವುಗೆಗಳು ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿವೆ. ಬಸವಣ್ಣನವರು ಸ್ಪರ್ಶಿಸಿದ ಇನ್ನೊಂದು ಚರವಸ್ತು ಈ ಜಗತ್ತಿನಲ್ಲಿ ಉಳಿದಿಲ್ಲವಾದ ಕಾರಣ ಈ ಚಮ್ಮಾವುಗೆಗಳು ಅಮೂಲ್ಯವಾಗಿವೆ… ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಎಡ ತೊಡೆಯ ರೂಪಾಯಿ ಅಗಲ ಚರ್ಮ ಎಡ ಚಮ್ಮಾವುಗೆಯಲ್ಲಿ ಇದೆ. ಅದೇರಿತಿ ಹರಳಯ್ಯನವರ ಬಲ ತೊಡೆಯ ರೂಪಾಯಿಯಗಲ ಚರ್ಮ ಬಲ ಚಮ್ಮಾವುಗೆಯಲ್ಲಿದೆ. ” ಅಂತ ಹೇಳಿದ್ದಾರೆ:
            http://www.vicharamantapa.net/content/node/391

            ದರ್ಗಾ ಅವರು ಹರಳಯ್ಯನ ಚಮ್ಮಾವುಗೆ ಎಂದು ನಂಬಿರುವ ಹರಳಯ್ಯನ ಚಮ್ಮಾವುಗೆಯನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದರೆ ಅದರ ಸತ್ಯಾಸತ್ಯತೆ ಹೊರಬರುವ ಸಾಧ್ಯತೆ ಇದೆ. ಆದರೆ ದರ್ಗಾ ಅವರು ವೈಜ್ಞಾನಿಕ ಪರೀಕ್ಷೆಯ ಗೊಡವೆಗೆ ಹೋಗದೆ “ರಾಜ್ಯಸರ್ಕಾರ ಕೂಡಲೆ ಕ್ರಮಕೈಗೊಂಡು ಶರಣರ ಈ ಏಕೈಕ ಚರವಸ್ತುವನ್ನು ಸರ್ಕಾರದ ಸೊತ್ತೆಂದು ಘೋಷಿಸಬೇಕು. ಬಸವಕಲ್ಯಾಣ ಪ್ರಾಧಿಕಾರದ ಅಡಿಯಲ್ಲಿ, ಬಿಜನಳ್ಳಿಯಲ್ಲಿಯೇ ಈ ಚಮ್ಮಾವುಗೆಗಳಿಗಾಗಿ ನಯನಮನೋಹರವಾದ ಸ್ಮಾರಕಭವನವನ್ನು ನಿಮಿಸಬೇಕು” ಅಂತ ಆಗ್ರಹಿಸಿದ್ದಾರೆ! ಸ್ಥಾವರಕ್ಕಳಿವು ಎಂದು ವಚನಕಾರರೇ ಹೇಳಿದ್ದನ್ನು ಮರೆತುಬಿಟ್ಟಿದ್ದಾರೆ.

            ಉತ್ತರ
          • ಬಸವಯ್ಯ
            ಜೂನ್ 21 2013

            ಹೇಳಿದ್ದನ್ನೇ ಹೇಳಿದರೂ ಪರವಾಗಿಲ್ಲ..ಇದ್ದಿದ್ದನ್ನು ಬರೆದರೆ ಸಾಕು. ತಮ್ಮ ಪಾಕಶಾಸ್ತ್ರ ಪ್ರಾವಿಣ್ಯತೆಯಿಂದ ‘ಚಿಕನ್ ಬಿರಿಯಾನಿ ವಿಥ್ ಮಟನ್ ಪೀಸಸ್..ನ್ಯೂಡಲ್ಸ ಫಾರ್ ಎಕ್ಸ್ಟ್ಟಾ ಟೇಸ್ಟ’ ಎಂಬ ಲಡಾಯಿ ಬ್ಲಾಗನಲ್ಲಿ ತಯಾರು ಮಾಡಿದಂತಹ ಅಪರೂಪದ ಖಾದ್ಯ ತಯಾರು ಮಾಡದಿದ್ದರೆ ಸಾಕು..

            ಸಂತೋಷ ಕೊಡುವ ಒಂದು ಸುದ್ದಿಯೆಂದರೆ ಅವಧಿಯವರು ಅದನ್ನು ಸರಣಿ ಲೇಖನ ಎನ್ನುವ ಮುನ್ಸೂಚನೆ ಕೊಟ್ಟಿರುವುದು. ನಾಲ್ಕು-ಐದು ಪ್ಯಾರಗಳನ್ನು ತಡೆದುಕೊಳ್ಳುವ ಶಕ್ತಿ ಓದುಗರಿಗಿದೆ. ಲಡಾಯಿಯಲ್ಲಿ ದರ್ಗಾರ ಲೇಖನ ನೋಡಿ, ಓದುಗರ ಕಷ್ಟ ಅರ್ಥ ಮಾಡಿಕೊಂಡು, ಸರಣಿ ಲೇಖನದ ವಿಚಾರ ಮಾಡಿದ ಅವಧಿಯ ಮಾತೃಹೃದಯಿ ಸಂಪಾದಕರಿಗೆ ಧನ್ಯವಾದ ಹೇಳದೇ ಇರಲಾಗುತ್ತದೆಯೇ? 🙂

            ಉತ್ತರ
      • ರಂಜಾನ್ ದರ್ಗಾ ಅವರ ಲೇಖನ ಸರಣಿಯ ಬಗ್ಗೆ ನನಗೂ ಕುತೂಹಲವಿದೆ.
        ಆದರೆ ತೀರಾ “ವಚನ ಶರಣರ ಬಗ್ಗೆ ದಂಡೆತ್ತಿ ಬಂದವರ ಬಗ್ಗೆ” ಅನ್ನುತ್ತಾರಲ್ಲ… ದಂಡೆತ್ತಿ ಬರಲು ಇವರೇನು ಅರಬ್ಬಿನಿಂದ ಬಂದವರಾ? ಅದೇನು ಅಂತ ಟೈಟಲ್ ಗಳು ಕೊಡ್ತಾರೋ ಯಪ್ಪಾ…!
        ನಾನು ಈ ಮನಸ್ಥಿತಿಯನ್ನೇ ಫ್ಯಾಸಿಸ್ಟ್ ಅಂದಿದ್ದು… ಸರಿ ಅಲ್ಲವೇ?

        ಉತ್ತರ
        • Annapurna
          ಜೂನ್ 30 2013

          Ranjan Darga’s series in Avadhi turned out to be a big farce. He didn’t have the courtesy answer any questions asked by readers. Nor did he have the face to address the glaring flaws in his arguments. His series turned out to be a drab diatribe against Brahmins in particular and Indian traditions in general. His lack of sensitivity and sensibility was very apparent in his interpretations of the vachanas he selected to focus on. His attempt to give a Marxist twist to his diatribe against Indian traditions was farcical. It is shameful that Ranjan Darga gave a provocative and distasteful title to the series.

          This episode shows the shallowness of the so called ‘experts’ on vachanas. They are full of hubris and lack intellectual sincerity.

          ಉತ್ತರ
          • ಅನ್ನಪೂರ್ಣ..

            ನೀವು ಹೇಳಿದ್ದು ಸರಿ..ಅಲ್ಲಿ ನಾನು ಒಳ್ಳೆಯ ಚರ್ಚೆಯ ನಿರೀಕ್ಷೆ ಮಾಡಿದ್ದೆ ..ಇದ್ದುದರಲ್ಲಿ ಸತ್ಯನಾರಾಯಣ ಎಂಬವರು ಸ್ವಲ್ಪ ತಾಳ್ಮೆಯಿಂದ, ವಿವರವಾಗಿ ಉತ್ತರಿಸಿದರು..ಆದರೂ ಅವು ನಿರೀಕ್ಷಿತ ಉತ್ತರಗಳೆ. ನಿಮ್ಮ ಪ್ರತಿಕ್ರಿಯೆಗಳು ನನಗೆ ಹಿಡಿಸಿದವು. ನೀವೇಕೆ ನಿಮ್ಮೆಲ್ಲ ಅಭಿಪ್ರಾಯ, ವಿಚಾರಗಳನ್ನು ಕ್ರೋಡಿಕರಿಸಿ ಇಲ್ಲೊಂದು ಲೇಖನ ಬರೆಯಬಾರದು?

            ಉತ್ತರ
            • ಜುಲೈ 6 2013

              ಆ ಲೇಖನದಲ್ಲಿ ಯುರೋಪಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ 13ನೇ ಶತಮಾನದಲ್ಲಿ ಹುಟ್ಟಿತು ಎನ್ನುತ್ತಾರೆ. ಹೀಗೆ ಹೇಳಲು ಏನು ಆಧಾರವಿದೆ? ಅದಕ್ಕಿಂದ ಹಿಂದಿನ ಯುರೋಪ್ ಆದರ್ಶ ಸಮಾಜದ ನಿದರ್ಶನವಾಗಿತ್ತೇ?

              ಉತ್ತರ
            • Annapoorna
              ಜುಲೈ 8 2013

              ಪ್ರಿಯ ರಾಕೇಶ್, ಮಾನ್ಯ ರಂಜಾನ್ ದರ್ಗಾ ಅವರು ಅವಧಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದನ್ನು ನೋಡಿ ನನಗೆ ಸುಸ್ತಾಯಿತು. ಒಂದು ಕಡೆ ದರ್ಗಾ ಅವರು ನನಗೆ “ಬ್ರಾಹ್ಮಣರು ಒಡಲಿಲ್ಲದವರು, ಊಟ ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು ಎಂದೂ ನಾನು ಎಲ್ಲಿಯೂ ಬರೆದಿಲ್ಲ. ದಾರಿ ತಪ್ಪಿಸುವ ಮಾತುಗಳನ್ನು ಬರೆಯಬಾರದು.” ಅಂತ ಜೋರು ಮಾಡುತ್ತಾರೆ. ಆದರೆ ನೋಡಿ ಸತ್ಯ ಇದು:

              ವಿಚಾರ ಮಂಟಪಕ್ಕೆಂದು ಮಾನ್ಯ ದರ್ಗಾ ಅವರು ಬರೆದ ಈ ಲೇಖನವನ್ನು ಓದಿ:
              http://www.vicharamantapa.net/content/node/395

              -ಜೇಡರ ದಾಸಿಮಯ್ಯನ “ಒಡಲುಗೊಂಡವ ಹಸಿವ” ವಚನದ ಕುರಿತು ಬರೆದಂತಹ ಈ ಲೇಖನದ ಐದನೆಯ ಪ್ಯಾರದಲ್ಲಿ ದರ್ಗಾ ಹೀಗೆ ಬರೆದಿದ್ದಾರೆ:

              “ದುಡಿಯುವ ವರ್ಗ ಎಲ್ಲ ಕೊರತೆಗಳಿಂದ ಬಳಲುತ್ತಿದೆ. ದುಡಿಯದ ವರ್ಗದ ಸಕಲ ಸೌಕರ್ಯಗಳಿಂದ ಬದುಕುತ್ತಿದೆ. ಹಸಿಯುವ ವರ್ಗ ಮತ್ತು ಹಸಿವು ಏನೆಂಬುದು ಗೊತ್ತೇ ಇರದ ವರ್ಗದ ಮಧ್ಯದ ಅಂತರವನ್ನು ಅವರು ಅರಿತರು. ಬ್ರಾಹ್ಮಣರು, ರಾಜರು ಮತ್ತು ಶ್ರೀಮಂತರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು. ಈ ಜನ ದೇವರ (ದೇವಸ್ಥಾನದ ವ್ಯವಸ್ಥೆ) ಜೊತೆ ಸದಾ ಸಲುಗೆಯಿಂದ ಇರುವವರಾಗಿದ್ದರು. “

              ಆಗ ಹಾಗೆ ಬರೆದು ಈಗ “ನಾನು ಬಡ ದಲಿತರ ಪರ ಇರುವಷ್ಟೇ ಬಡ ಬ್ರಾಹ್ಮಣರ ಪರವೂ ಇದ್ದೇನೆ. ನಾನು ಜಾತಿ ಮತ್ತು ಧರ್ಮಗಳಿಂದ ಜಗತ್ತನ್ನು ನೋಡುವುದಿಲ್ಲ. ವರ್ಗಪ್ರಜ್ಞೆಯಿಂದ ನೋಡುತ್ತೇನೆ.” ಎಂದು ಬರೆದಿರುವ ದರ್ಗಾ ಅವರೊಡನೆ ಸಂವಾದ ಸಾಧ್ಯವೇ ಸಾಧುವೆ?!!

              ಉತ್ತರ
              • ವಿಜಯ್
                ಜುಲೈ 8 2013

                ಅನ್ನಪೂರ್ಣ..
                ನಾನು ಅಲ್ಲಿ ಚರ್ಚೆಯಲ್ಲಿ ಇದ್ದೆ. ನೀವು ಎತ್ತಿದ ಪ್ರಶ್ನೆಗಳು ಸೂಕ್ತವಾಗಿದ್ದವು. ರಂಜಾನ ದರ್ಗಾರವರು ತಮ್ಮ ಲೇಖನಕ್ಕೆ/ಪ್ರತಿಪಾದಿಸುವ ವಿಚಾರಗಳಿಗೆ ತದ್ವಿರುದ್ದವಾದ ಪ್ರತಿಕ್ರಿಯೆಗಳನ್ನು ಈಗ ನೀಡುತ್ತಿದ್ದಾರೆ. ನಾವು ಅವುಗಳೆಲ್ಲವನ್ನು ಒಟ್ಟುಗೂಡಿಸಿ, ಅವರ ವಾದ/ವಿಚಾರಗಳಲ್ಲಿರುವ ಅಸಂಬದ್ದತೆಯನ್ನು ಪ್ರಶ್ನಿಸಬೇಕಾಗಿದೆ. ರಾಕೇಶ್ ಹೇಳಿದಂತೆ ತಾವೇಕೆ ಒಂದು ಲೇಖನ ಬರೆಯಬಾರದು?

                ಉತ್ತರ
                • Annapoorna
                  ಜುಲೈ 9 2013

                  ಸಲಹೆ ಚೆನ್ನಾಗಿದೆ. ಆದರೆ ನಾನು ಲೇಖನ ಬರೆಯುವ ಸಾಧ್ಯತೆ ತುಂಬಾ ಕಡಿಮೆ. ತಾವೇ ಬರೆಯುವುದು ಬೆಟರ್. 🙂

                  ಉತ್ತರ
        • ಜುಲೈ 6 2013

          ‘ಶರಣರ ಮೇಲೆ ದಂಡೆತ್ತಿ ಬಂದರು’ ಎನ್ನುವಾಗ ಬುದ್ಧಿಜೀವಿಗಳು, ಶರಣರೆಂದು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

          ಉತ್ತರ
      • ಅನ್ನಪೂರ್ಣ ಅವರೇ… ನಿಮ್ಮ ನಿಜನಾಮಧೇಯದಲ್ಲಿ ಕಮೆಂಟ್ ಮಾಡಿದರೆ ಚೆನ್ನಾಗಿರುತ್ತದೆ…ಸಾಧ್ಯವಾದರೆ ಮಾಡಿ… ಒತ್ತಾಯವಿಲ್ಲ 🙂

        ಉತ್ತರ
  3. ಜೂನ್ 10 2013

    ಅನ್ನಪೂರ್ಣರವರು ಸಾಮಾಜಿಕ ಸಂಶೋಧನೆ ಎಂದರೆ ಸಾಕ್ಷಿಪುರಾವೆಗಳಿಲ್ಲದೆ “ಸೃಜನಶೀಲ”ವಾದ ಆಧಾರ ರಹಿತ ಊಹೆಗಳು ಎಂದು ಕೊಂಡಿದ್ದಾರೆ ಅನಿಸುತ್ತೆ. ಸಾಕ್ಷಿ ಸಮೇತ ಒಂದೋ prove ಮಾಡಲು ಸಾಧ್ಯವಿರಬೇಕು ಇಲ್ಲವೇ Disprove ಮಾಡಲು ಸಾಧ್ಯವಿರಬೇಕು. ಅಂತಹ ವಾದಗಳು ಮಾತ್ರ ಸಂಶೋಧನಾ ವಾದಗಳು ಎನಿಸಿಕೊಳ್ಳುತ್ತವೆ. ಮನಸಿ ಅನಿಸಿದ್ದೆಲ್ಲವನ್ನೂ ವಿಶಿಷ್ಟ ಪದಪುಂಜಗಳಲ್ಲಿ ಬಿಡಿಸಿಟ್ಟರೆ ಅದು ಯಾರೂಬೇಕಾದರೂ ತೋಚಿದಂತೆ ಹೇಳುವ ವಿಚಾರಗಳಷ್ಟೇ. ನೀವು ಕೊಟ್ಟಿರುವ ಲಿಂಕಿನಲ್ಲಿ ಲೇಖಕರು ತಮ್ಮ ಮೊದಲ ಪ್ಯಾರಾದಲ್ಲೇ ಪುಂಖಾನುಪುಂಖವಾಗಿ ಇದುವರೆಗೂ (ವಸಾಹತುಶಾಹಿ ಚಿತ್ರಣಗಳಲ್ಲಿ) ಪಠ್ಯಗಳ ಚರಿತ್ರೆಯಲ್ಲಿ ಮಾಡಿರುವ ವಿವರಣೆಗಳನ್ನು ಎತ್ತಿಟ್ಟುಕೊಂಡು ಅಧರ ಆಧಾರದ ಮೇಲೆ ಬರೆಯುತ್ತಾ ಹೋಗುತ್ತಾರೆ. ಇವನ್ನು ಮೂರನೇ ತರಗತಿಯಿಂದಲೇ ನಾವು ಓದಿದ್ದೇವೆ ಮತ್ತು ನಮ್ಮ ಸಂಶೋಧನೆಯ ಮೂಲಕ ಈ ವಿವರಣೆಗಳ ಮೂಲ ಮತ್ತು ಮಿತಿಗಳನ್ನು ತೋರಿಸಿದ್ದೇವೆ. ಹಾಗಾಗಿ ನಮ್ಮ ಸಂಶೋಧನೆಯ ತಪ್ಪುಗಳನ್ನು ತೋರಿಸಲು ಅದಕ್ಕಿಂತಲೂ ಉತ್ತಮವಾದ ಹೊಸ ವಾದಗಳನ್ನು ಮತ್ತು ಮತ್ತು ಅವಕ್ಕೆ ಆಧಾರಗಳನ್ನು ನೀಡಬೇಕಾಗುತ್ತದೆ.

    ಉತ್ತರ
  4. Vikas Nayak
    ಜೂನ್ 11 2013

    ಸಂಶೋಧನೆ ಎಂದರೆ ಪುರಾವೆಗಳನ್ನು ಸಂಗ್ರಹಿಸಿ ಆಧಾರವಾಗಿ ಎದುರಿಟ್ಟು ಒಂದು ನಿಷ್ಕರ್ಷಕ್ಕೆ ಬರುವುದು ಎಂದರ್ಥ ಅಲ್ಲ. ನೈಸರ್ಗಿಕ ವಿಜ್ಞಾನದಲ್ಲೂ ೫೦% ಕ್ಕೂ ಹೆಚ್ಚು ಸಂಶೋಧನೆಗಳಿಗೆ ಪುರಾವೆಗಳಿಲ್ಲ. ಆಧಾರಗಳೂ ಇಲ್ಲ. ಸರಳ ಉದಾಹರಣೆಗಳನ್ನೇ ನೋಡುವಾ. ಸೂರ್ಯ ಎಂದು ಮತ್ತು ಹೇಗೆ ಹುಟ್ಟಿಕೊಂಡ? ಇದಕ್ಕೆ ಆಧಾರಹೀನ ಉತ್ತರಗಳಿವೆ. ಪೃಥ್ವಿಯ ರಚನೆ ಎಂದು ಹೇಗೆ ಆಯಿತು? ಇದಕ್ಕೂ ಉತ್ತರವಿದೆ, ಮಾತ್ರ ಪುರಾವೆಯ ಆಧಾರವಿಲ್ಲ. ನಕ್ಷತ್ರಪುಂಜಗಳು, ನಕ್ಷತ್ರಗಳು, ನೋವ, ಸೂಪರ್ನೋವಾ, ಬಾಯ್ನರಿ ಸ್ಟಾರ್ಸ್, ಮುಂತಾದ ಅನೇಕ್ ವಸ್ತುಗಳ ಬಗ್ಗೆ ಸಂಶೋಧಾತ್ಮಕ ಎನ್ನುವ ಉತ್ತರಗಳಿವೆ. ಪುರಾವೆಗಳು ಸೊನ್ನೆ !!! ಶಾಲೆ ಕಾಲೇಜುಗಳಲ್ಲಿ ಅಸ್ತ್ರೋನೋಮಿಯನ್ನು ಖಡಾ ಖಂಡಿತವಾಗಿ ಕಲಿಸಲಾಗುತ್ತದೆ. ನಾನು ಕಲಿಯುವಾಗ ಪ್ಲುಟೊ ಗ್ರಹ ಇತ್ತು. ಕಲಿಸುವಾಗ ಮಾಯವಾಯಿತು. ಹಾಗಾದರೆ ಪ್ಲುಟೊ ಬಗ್ಗೆ ಕೈಕೊಂಡ ಸಂಶೋಧನೆ ಸಂಶೋಧನೆಯಾಗಿರಲಿಲ್ಲವೇ? ಸಮಯ ಎಂದಿನಿಂದ ಪ್ರಾರಂಭವಾಯಿತು? ಅದಕ್ಕೂ ಮೊದಲು ಏನಿತ್ತು? ಸಮಯಕ್ಕೆ ಅಂತ್ಯ ಎಂದು? ಪ್ರುಥ್ವಿಯು, ಸೂರ್ಯ ಚಂದ್ರರು ಮೊದಲು ಇದ್ದವು ಇಂದೂ ಇವೆ ಮುಂದೆಯೂ ಇರುವವು. ಎಲ್ಲ ತರ್ಕ. ತರ್ಕವೇ ವಿಜ್ಞಾನ. ಅಷ್ಟರಮಟ್ಟಿಗೆ ನಿಜ ಗೊತ್ತಿಲ್ಲ. ಅದಾಗ್ಯೂ ಆ ತರ್ಕಗಳನ್ನು ತಪ್ಪುಎಂದು ಎಲ್ಲಿಯ ವರೆಗೆ ಸಿದ್ಧ ಪಡಿಸುವುದಿಲ್ಲವೋ ಅಲ್ಲಿಯ ವರೆಗೆ ಅದೆಲ್ಲ ನಿಜವೆ? ಸಂಶೋಧನೆಗಳಿಗೆ ಪುರಾವೆಗಳಲ್ಲ ತರ್ಕಬದ್ಧವಾಗಿ ಪ್ರಮಾಣಿಸುವ ವಿಚಾರಗಳು ಬೇಕು.
    ಭೂಮಿಯು ಇಂತಿಷ್ಟು ದೂರದಲ್ಲಿಯ ಇಂತಿಷ್ಟು ತೂಕದ ವಸ್ತುವನ್ನು ತನ್ನ ಕೇಂದ್ರದತ್ತ ಆಕರ್ಷಿಸುತ್ತದೆ. ಇದೂ ವಿಜ್ಞಾನದ ಒಂದು ಭಾಗ. ಹಾಗಾದರೆ ಜಲಜನಕ ತುಂಬಿದ ಪುಗ್ಗೆ ಆಕಾಶದತ್ತ ಏಕೆ ಹೋಗುತ್ತದೆ? ಭೂಮಿಯ ಮೇಲೆ ಏಕೆ ಬೀಳುವುದಿಲ್ಲ? ಅದರ ಮೇಲೆ ಗುರುತ್ವಾಕರ್ಷಣೆ ಪ್ರಯೋಗವಾಗುವುದಿಲ್ಲವೇ? ಇಂತಹ ಪ್ರಶ್ನೆಗಳಿಗೆ ವಿಜ್ಞಾನದ ಶಿಕ್ಷಕರು ಉತ್ತರಿಸ ಬೇಕಾಗುತ್ತದೆ. ತೂಕ ಎಂಬ ಶಬ್ದ ಅಳಿಸಿ ಸಾಂದ್ರತೆ ಎಂದು ಹೇಳಲಾಯಿತು ಮಾತ್ರ ವಿಜ್ಞಾನದ ಯಾವದೇ ಪ್ರಯೋಗ ಹಾಗೂ ಲೆಕ್ಕಾಚಾರದಲ್ಲಿ ತೂಕವನ್ನೇ ಬಳಿಸಲಾಗುತ್ತದೆ.
    ಅನೇಕ ವೇಳೆ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಏರುಗುತ್ತಾರೆ ಎಂದು ಕೇಳಿ ಬರುತ್ತದೆ. ಕಾರಣ? ಅದೇ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ಶಿಕ್ಷಕರ ಬವಣೆ. ಮೂಗಿನಿಂದ ಏಕೆ ಉಸುರಾಡುತ್ತಿಯೋ, ನಿನಗೆ ಬಾಯಿ ಇಲ್ಲವೇ ಉಸಿರಾಡಲು ? ಎಂದು ಯಾರಿಗೂ ಕೇಳಿ ನೋಡಿ ಅವರು ನಿಡುವ ಉತ್ತರ, ಮೂಗಿನಲ್ಲಿ ಕೂದಲು, ಸುಂಬಳ ವಿರುವ ಕಾರಣ ನಾವು ಶ್ವಾಸಿಸುವ ಗಾಳಿ ಫಿಲ್ಟರ್ ಆಗಿ ಪುಪ್ಪುಸಕ್ಕೆ ಹೋಗುವುದು, ಇದರಿಂದ ನಾವು ರೋಗಣುಗಳಿಂದ ಸುರಕ್ಷಿತರಾಗಿರುತ್ತೇವೆ. ಎಂದೇ ಉತ್ತರ ಕೇಳಿ ಬರುತ್ತದೆ. ಹಾಗಾದರೆ ಬಾಯಿಯಿಂದ ಎಂದೂ ಶ್ವಾಸಿಸುವುದಿಲ್ಲವೇ? ಕೆಲವೊಮ್ಮೆ ಉಸಿರಾಡ ಬೇಕಾಗುತ್ತದೆ. ಆಗ ರೋಗಾಣುಗಳು ಶರೀರದಲ್ಲಿ ಸೇರಿಕೊಳ್ಳುವುದಿಲ್ಲವೇ? ಹಾಗಾದರೆ ದಿನವಿಡೀ ಸುರಕ್ಷಿತರಾಗಿದ್ದು ದಣಿದಾಗ ಬಾಯಿಯಿಂದ ಉಸಿರಾಡಿ ಎಲ್ಲ ಹಾಳುಗೆಡುವುತ್ತೇವೆ, ಅಲ್ಲವೇ? ಮೌನ !!!
    -೨ x ೨ = -೪, ಸರಿ. ಪುರಾವೆ? -೨ನ್ನು ೨ ಸಲ ಕೂಡಿಸಿದಾಗ ಒಟ್ಟೂ -೪ ಆಗುತ್ತವೆ. ಜಾಣ !! -೨ x -೨ = ೪ ಇದು ಸರಿಯೇ ? ಪುರಾವೆ ? -೨ನ್ನು -೨ ಸಲ ಕೂಡಿಸಿದಾಗ….೨ ಸಲ ಗೊತ್ತು -೨ ಸಲ ಎಂದರೇನು? ನಮ್ಮ ಶಿಕ್ಷಕರಿಗೆ ಗೊತ್ತು.. -೨/೨ = -೧ ಸರಿ, ಪುರಾವೆ? -೨ ನ್ನು ೨ ಭಾಗ ಮಾಡಿದರೆ ಪ್ರತಿಯೊಂದು ಭಾಗ -೧ ಇರುತ್ತದೆ. ಹಾಗಾದರೆ ೨/-೨ = -೧ ಸರಿಯೇ ? ಪುರಾವೆ ಕೇಳುವ ಮೊದಲೇ ಶಿಕ್ಷಕರಿಗೆನೇ ಗೊತ್ತು, ಎಂದು ಕೇಳಿ ಬರಬಹುದು. ಅದಾಗ್ಯೂ ವಿಜ್ಞಾನದ ಲೆಕ್ಕಾಚಾರಗಳಲ್ಲಿ ಇದೆ ರೀತಿಯಾಗಿ ಗಣಿಸಲಾಗುತ್ತದೆ. ಹಾಗಾದರೆ ತಪ್ಪು ಏನು, ಸರಿ ಏನು? ಸರಿ ಎನ್ನುವುದು ಒಪ್ಪುವಾಗಿರಲೇ ಬೇಕಂತಿಲ್ಲವೇ? ನನಗೆ ಹುಳಿಯಾಗಿ ರುಚಿಸಿದ್ದು ಇತರರಿಗೂ ಹುಳಿಯಾಗಿಯೇ ರುಚಿಸುವುದು. ಇದು ತರ್ಕ, ಪುರಾವೆ? ಸಾಮಾನ್ಯ ಜ್ಞಾನ !!! ಹುಳಿಯೇನ್ನುವುದು ನನಗೆ ಅನುಭವವಾದಂತೆಯೇ ಇತರರಿಗೂ ಅನುಭವ ವಾಗುತ್ತದೆಯೇ? ಹೌದು. ಪುರಾವೆ? ತರ್ಕವೇ ಜ್ಞಾನ ವಿಜ್ಞಾನದ ಮೂಲ.
    ಈ ರೀತಿ ಉದಾಹರಣೆಗಳನ್ನು ಕೊಡುತ್ತ ಹೋದರೆ ಯಾರಿಗೂ ತಮ್ಮ ಓದಿನ ಬಗೆಗಿನ ವಿಶ್ವಾಸವೇ ಕ್ಷೀಣಿಸ ಬಹುದು ಆದರೆ ತರ್ಕಕ್ಕೆ ಹೆಚ್ಚು ಹೆಚ್ಚು ಪ್ರಾಮುಖ್ಯತೆಯೂ ದೊರಕುವುದು ಸಾಧ್ಯ.

    ಉತ್ತರ
  5. ಜೂನ್ 11 2013

    ಮಾನ್ಯ Vikas Nayakರೇ,

    “ಸಂಶೋಧನೆ ಎಂದರೆ ಪುರಾವೆಗಳನ್ನು ಸಂಗ್ರಹಿಸಿ ಆಧಾರವಾಗಿ ಎದುರಿಟ್ಟು ಒಂದು ನಿಷ್ಕರ್ಷಕ್ಕೆ ಬರುವುದು ಎಂದರ್ಥ ಅಲ್ಲ.” ಖಂಡಿತಾ ನಿಜ! ಪುರಾವೆಗಳನ್ನು ಸಂಗ್ರಹಿಸಿ, ಆಧಾರವಾಗಿ ಇಡುವುದಕ್ಕೂ ಮೊದಲು, ಏತಕ್ಕಾಗಿ ಪುರಾವೆಗಳನ್ನು ಮತ್ತು ಆಧಾರಗಳನ್ನು ಸಂಗ್ರಹಿಸುತ್ತಿದ್ದೀವಿ ಎಂಬ ಪ್ರಶ್ನೆ ಬರುತ್ತದೆ. ಪುರಾವೆ ಮತ್ತು ಆಧಾರ ಕೊಡಬೇಕಾಗಿರುವುದು ನಾವು ಈ ಜಗತ್ತಿನ ಕುರಿತು ಮಾಡುವ ಹೇಳಿಕೆಗಳಿಗೆ (the claims about the worldಗಳಿಗೆ). ಇಲ್ಲಿ ಹೇಳಿಕೆ/claim/proposition ಎಂದು ಕರೆಯುವ ವಾಕ್ಯ ಅರ್ಥಭರಿತವಾದ declarative sentence ಆಗಿದ್ದು ಅದು ಇಲ್ಲ true ಆಗಿರಬೇಕು ಇಲ್ಲ false ಆಗಿರಬೇಕು. ಉದಾಹರಣೆಗೆ ಈ ಹೇಳಿಕೆಯನ್ನು ಗಮನಿಸಿ: ಹಿಮವು ಬಿಳಿಯಾಗಿದೆ. ಇದೊಂದು ಅರ್ಥಭರಿತವಾದ declarative sentence ಆಗಿದ್ದು, ಇದು ಇಲ್ಲ true ಆಗಿದೆ ಇಲ್ಲ false ಆಗಿದೆ. ಆಗಿದೆ ಎಂದು ತೋರಿಸಲು ನಾವು ಇಲ್ಲಿ ಪುರಾವೆಗಳನ್ನು ಕೊಡಬೇಕು. ಒಂದು ಪ್ರಶ್ನೆಯು ಈ ರೀತಿಯ true ಅಥವಾ false ಹೇಳಿಕೆಯಲ್ಲ. ಉದಾಹರಣೆಗೆ, ‘ನಿನ್ನ ಹೆಸರು ಏನು?’ ಎಂಬ ವಾಕ್ಯ true ಅಥವಾ false ಅಲ್ಲದ ಒಂದು ವಾಕ್ಯ. ಇವು ತರ್ಕದ ಮೊದಲ ತರಗತಿಯಲ್ಲಿ ಹೇಳಿಕೊಡುವ ವಿಚಾರಗಳು.

    ಸಿದ್ಧಾಂತಗಳು ಈ ಬಗೆಯ true ಅಥವಾ false ಹೇಳಿಕೆಗಳನ್ನು ಮಾಡುವ ಕಾರಣ ಅವುಗಳಿಗೂ ಪುರಾವೆ ಮತ್ತು ಆಧಾರ ಬೇಕಾಗುತ್ತದೆ.

    “ನೈಸರ್ಗಿಕ ವಿಜ್ಞಾನದಲ್ಲೂ ೫೦% ಕ್ಕೂ ಹೆಚ್ಚು ಸಂಶೋಧನೆಗಳಿಗೆ ಪುರಾವೆಗಳಿಲ್ಲ. ಆಧಾರಗಳೂ ಇಲ್ಲ” ಎಂದು ನೀವು ಹೇಳಿ ನಿಮ್ಮ ಮಾತಿಗೆ ಪೂರಕವಾಗಿ ಯಾವುದೇ ಸಂಶೋಧನೆಗಳನ್ನು ಉದಾಹರಣೆಯಾಗಿ ನೀವು ಕೊಡುವುದೇ ಇಲ್ಲ. ಬದಲಿಗೆ ಕೊಡುವುದು ನಿಮ್ಮ ಸಾಮಾನ್ಯ ಜ್ಞಾನಕ್ಕೆ ಎಟಕುವ ಒಂದೆರಡು ಪ್ರಶ್ನೆಗಳು ಮಾತ್ರ: “ಸೂರ್ಯ ಎಂದು ಮತ್ತು ಹೇಗೆ ಹುಟ್ಟಿಕೊಂಡ? … ಪೃಥ್ವಿಯ ರಚನೆ ಎಂದು ಹೇಗೆ ಆಯಿತು?”. ಸೂರ್ಯ ಎಂದು ಮತ್ತು ಹೇಗೆ ಹುಟ್ಟಿಕೊಂಡ ಎಂಬುದು ಒಂದು ಪ್ರಶ್ನೆ, ಹೇಳಿಕೆ ಅಥವಾ ಸಿದ್ಧಾಂತವಲ್ಲ. ಈ ಪ್ರಶ್ನೆಗೆ ಪುರಾವೆಗಳು, ಆಧಾರಗಳು ಇಲ್ಲವೆಕೆಂದರೆ, ಇರುವುದಕ್ಕೆ ಪ್ರಶ್ನೆಯೊಂದಕ್ಕೆ ಆಧಾರಗಳು ಇರುವುದು ಸಾಧ್ಯವಿಲ್ಲ. ಈ ಪ್ರಶ್ನೆಯನ್ನು ಇಟ್ಟುಕೊಂಡು, ಅದರ ಕುರಿತು ಯಾರಾದರೂ ಸಂಶೋಧನೆ ಮಾಡಿ ಕೊಡುವು ಉತ್ತರ ರೂಪದ ಸಿದ್ಧಾಂತಕ್ಕೆ ಮಾತ್ರ ಪುರಾವೆಗಳು ಮತ್ತು ಆಧಾರಗಳು ಇರುವುದಕ್ಕೆ ಸಾಧ್ಯ. ಆದರಿಂದ ನೀವು ಮಾಡಬೇಕಾದದ್ದು ಇಷ್ಟು. ಈ ನಿಮ್ಮ ಪ್ರಶ್ನೆಗೆ ಇಂದು ಭೌತಶಾಸ್ತ್ರದಲ್ಲಿ ಎಲ್ಲರೂ ಒಪ್ಪಿಕೊಳ್ಳುವ ಉತ್ತರ ಯಾವುದಾದರೂ ಇದೆಯೇ ಎಂದು ನೋಡಿ, ಆ ಉತ್ತರಕ್ಕೆ ಆಧಾರಗಳು ಇವೆಯೇ ಎಂದು ಗಮನಿಸಿ.
    ನಿಮ್ಮ ಸಮಸ್ಯೆ ಇಲ್ಲಿಗೆ ಮುಗಿಯುವುದಿಲ್ಲ. ನೀವು ಹೀಗೆ ಎತ್ತುವ ನಿಮ್ಮ ಸಾಮಾನ್ಯ ಜ್ಞಾನಕ್ಕೆ ತೋಚಿದ ಪ್ರಶ್ನೆಗಳಿಗೆ ಉತ್ತರ ರೂಪದ ಸಿದ್ಧಾಂತವಿಲ್ಲ ಎಂದರೆ ಅದಕ್ಕೆ ಎರಡು ಕಾರಣವಿರಬಹುದು: ಅವುಗಳನ್ನು ಇನ್ನೂ ಯಾರೂ ಸಂಶೋಧನೆಗೆ ಒಳಪಡಿಸಿಲ್ಲ ಅಥವಾ ಆ ಪ್ರಶ್ನೆಗಳು ಸಂಶೋಧನೆಗೆ ಒಳಪಡಿಸಿಲು ಯೋಗ್ಯವಾಗಿಲ್ಲ. ಮೇಲುನೋಟಕ್ಕೆ ಸರಿ ಎಂದು ಕಾಣಿಸುವ ಸಾವಿರಾರು ಪ್ರಶ್ನೆಗಳನ್ನು ನಾವು ಎತ್ತಬಹುದು: ಇರುವೆಗೆ ಹಿಂದುಸ್ತಾನಿ ಸಂಗೀತ ಹೆಚ್ಚು ಆಪ್ತವೋ ಅಥವಾ jaaz ಸಂಗೀತವೋ? ಒಮ್ಮೆ ಪ್ರಪಂಚದಲ್ಲಿ ಏನೂ ಇಲ್ಲದೆ ಇದ್ದಾರೆ ಹೇಗಿರುತ್ತಿತ್ತು? ಈ ರೀತಿಯ ಪ್ರಶ್ನೆಗಳು ಕುತೂಹಲಕಾರಿ ಎನಿಸಿದರೂ, ಕಡೆಯ ಪಕ್ಷ ಸಧ್ಯದ ಮಟ್ಟಿಗಾದರೂ ಅವು ಸಂಶೋಧನಾ ಯೋಗ್ಯ ಪ್ರಶ್ನೆಗಳಲ್ಲ. ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು “ನೈಸರ್ಗಿಕ ವಿಜ್ಞಾನದಲ್ಲೂ ೫೦% ಕ್ಕೂ ಹೆಚ್ಚು ಸಂಶೋಧನೆಗಳಿಗೆ ಪುರಾವೆಗಳಿಲ್ಲ” ಎಂಬಂಥ ಹೇಳಿಕೆಗಳನ್ನು ಮಾಡಲು ಬರುವುದಿಲ್ಲ.

    “ಈ ರೀತಿ ಉದಾಹರಣೆಗಳನ್ನು ಕೊಡುತ್ತ ಹೋದರೆ ಯಾರಿಗೂ ತಮ್ಮ ಓದಿನ ಬಗೆಗಿನ ವಿಶ್ವಾಸವೇ ಕ್ಷೀಣಿಸಬಹುದು” ಎನ್ನುತ್ತೀರಿ. ಅದು ನಿಜವೇ. ಒಂದಷ್ಟು ಪ್ರಾಥಮಿಕ ತರ್ಕವನ್ನು, Philosophy of scienceಅನ್ನು ಅಭ್ಯಾಸ ಮಾಡಿಕೊಂಡು ನಂತರ ಉದಾಹರಣೆ ಕೊಟ್ಟರೆ ಈ ಸಮಸ್ಯೆಯನ್ನು ಸುಲಭದಲ್ಲಿ ಪರಿಹರಿಸಬಹುದು 😉

    ಡಂಕಿನ್

    ಉತ್ತರ
  6. Annapoorna
    ಜೂನ್ 11 2013

    “ಸಾಕ್ಷಿ ಸಮೇತ ಒಂದೋ prove ಮಾಡಲು ಸಾಧ್ಯವಿರಬೇಕು ಇಲ್ಲವೇ Disprove ಮಾಡಲು ಸಾಧ್ಯವಿರಬೇಕು.” ನಾನು ಇದನ್ನೇ ಕನ್ನಡದ ಸುಪ್ರಸಿದ್ಧ ಕಾರ್ಪೋರೆಟ್ ವಿಮರ್ಶಕರೊಬ್ಬರಿಗೆ ಒಂದು ಸಂದರ್ಭದಲ್ಲಿ ಹೇಳಿದಾಗ ಅವರು ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಅಂತ ಬೈದರು. ಶ್ರೇಣಿಕೃತ ಸಮಾಜದಲ್ಲಿ ಬ್ರಾಹ್ಮಣ್ಯವು ನಡೆಸುತ್ತಿರುವ ಶೋಷಣೆ/ತಾರತಮ್ಯ/ಅವಮಾನಗಳೆಲ್ಲ ಅವರಿಗೆ ಅಂಗೈ ಹುಣ್ಣಿನಂತೆ ಅನುಭವಕ್ಕೆ ಬಂದ ಸತ್ಯವೇ ಆಗಿದೆ.

    ಉತ್ತರ
    • ರವಿ
      ಜೂನ್ 11 2013

      ಈ ರೀತಿಯ ವಾದವನ್ನೇ ರಾಕೇಶ್ “ಫ್ಯಾಸಿಸ್ಟ್ ಧೋರಣೆ” ಎನ್ನುತ್ತಾ ಸೂರ್ಯ, ಕೋಪರ್ನಿಕಸ್, ಗೆಲಿಲಿಯೋ, ಬ್ರುನೋ, ಪೋಪ್ ಎಂದು ಪರಿ ಪರಿಯಾಗಿ ಬಿಡಿಸಿ ಹೇಳಿದ್ದು..

      ಉತ್ತರ
    • ಬಸವಾರಾಧ್ಯ ಸ್ವಾಮಿ, ಚಿಕ್ಕತ್ತೂರು
      ಜೂನ್ 11 2013

      ಅನ್ನಪೂರ್ಣ.. ನಿಮಗೊಂದು ಘಟನೆ ಹೇಳುತ್ತೇನೆ ನಮ್ಮ ಹಳ್ಳಿಯಲ್ಲಿ ನಡೆದದ್ದು. ಅಲ್ಲಿ ಬೀದಿಯಲ್ಲಿ ಆಡುತ್ತಿದ್ದ ಒಬ್ಬ ಶೂದ್ರ ಬಾಲಕನಿಗೆ ಬೀದಿ ನಾಯಿಯೊಂದು ಕಚ್ಚಿತು. ಎಲ್ಲರೂ ಇದೊಂದು ಸಹಜ ಘಟನೆ ಎಂಬಂತೆ ತಾತ್ಸಾರ ಮಾಡಿದರು. ನಾನು ಸೂಕ್ಷ್ಮವಾಗಿ ಈ ಘಟನೆಯ ಹಿನ್ನಲೆಯನ್ನು ಪರಿಶೀಲಿಸಿದಾಗ ನನಗೆ ತಿಳಿದು ಬಂದ ವಿಷಯದಿಂದ ದಂಗಾಗಿ ಬಿಟ್ಟೆ..ಆ ನಾಯಿಗೆ ದಿನವು ಉಳಿದನ್ನವನ್ನು ಹಾಕುತ್ತಿದ್ದಿದ್ದು ನಾಲ್ಕು ಮನೆಯಾಚೆಯಿರುವ ಒಬ್ಬ ಬ್ರಾಹ್ಮಣ ಹೆಂಗಸು!, ಈಗ ನಿಮಗೆ ಗೊತ್ತಾಗಿರಬಹುದು,,ಈ ಬ್ರಾಹ್ಮಣ ಹೆಂಗಸು ಅಲ್ಲಿ ಓಡಾಡುವ ಶೂದ್ರ ಬಾಲಕನನ್ನು ಕಡಿಯಲೆಂದೇ ಆ ಬೀದಿ ನಾಯಿಗೆ ವ್ಯವಸ್ಥಿತವಾಗಿ, ಯಾರಿಗೂ ಅನುಮಾನ ಬಾರದಂತೆ ಉಳಿದನ್ನವನ್ನು ಹಾಕಿ ಬೆಳೆಸುತ್ತಿದ್ದಳು ಎಂಬುದು. ನೇರ ಕಣ್ಣಿಗೆ ಕಾಣದ ಈ ಗುಪ್ತ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಲು ಸೂಕ್ಷ್ಮ ದೃಷ್ಟಿ ಬೇಕು. ಈ ಜನ ಏನೇ ಉಲ್ಟಾ ವಾದ ಮಾಡಿದರೂ ನೀವಿವರನ್ನು ನಂಬಬೇಡಿ. ಇವರು ವೈದಿಕಶಾಹಿಯ ಮಾಯೆಗೆ, ಕುತಂತ್ರಕ್ಕೆ ಸಿಲುಕಿದವರು. ನೀವು ಸೂಕ್ಷ್ಮತೆಯನ್ನು ಬೆಳೆಸಿಕೊಂಡಾಗಲೇ ಇವರೆಲ್ಲರ ಹುನ್ನಾರ, ಗುಪ್ತ ಕಾರ್ಯಸೂಚಿಗಳು ನಮಗರ್ಥವಾಗುತ್ತವೆ.

      ಆಶೀರ್ವಾದಗಳೊಂದಿಗೆ,
      ಬಸವಾರಾಧ್ಯ ಸ್ವಾಮಿ, ಚಿಕ್ಕತ್ತೂರು

      ಉತ್ತರ
  7. ರವಿ
    ಜೂನ್ 11 2013

    ಈ ರೀತಿಯ ವಾದವನ್ನೇ ರಾಕೇಶ್ “ಫ್ಯಾಸಿಸ್ಟ್ ಧೋರಣೆ” ಎನ್ನುತ್ತಾ ಸೂರ್ಯ, ಕೋಪರ್ನಿಕಸ್, ಗೆಲಿಲಿಯೋ, ಬ್ರುನೋ, ಪೋಪ್ ಎಂದು ಪರಿ ಪರಿಯಾಗಿ ಬಿಡಿಸಿ ಹೇಳಿದ್ದು..

    ಉತ್ತರ
  8. ಬಸವಾರಾಧ್ಯ ಸ್ವಾಮಿ, ಚಿಕ್ಕತ್ತೂರು
    ಜೂನ್ 11 2013

    @ಅನ್ನಪೂರ್ಣ

    >ವೈದಿಕರು ಕಾಯಕದ ಮೂಲಕ ಮೇಲು ಕೀಳು ಭಾವನೆ ಸೃಷ್ಟಿಸಿದ್ದರು. ಪ್ರತಿಯೊಬ್ಬರೂ ತಮ್ಮ ತಮ್ಮ ಕಾಯಕಗಳಿಗೇ ಅಂಟಿಕೊಂಡಿರುವಂತೆ ಮಾಡಿದ್ದರು. ಆ ಮೂಲಕ ಸಮಾಜ ಸದಾ ಯಥಾಸ್ಥಿತಿಯಲ್ಲೇ ಮುಂದುವರಿಯುವಂತೆ ನೋಡಿಕೊಂಡಿದ್ದರು. ಜನರು ಕಾಯಕಗಳಲ್ಲಿ ಅ? ಅಲ್ಲದೆ ನೂರೆಂಟು ದೇವರುಗಳಲ್ಲಿ ಹರಿದು ಹಂಚಿ ಹೋಗುವಂಥ ಬಹುದೇವೋಪಾಸನಾ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಬಡವರ ದೇವರುಗಳು ಮತ್ತು ಶ್ರೀಮಂತರ ದೇವರುಗಳೆಂಬ ಭೇದವನ್ನು ಸೃಷ್ಟಿಸಿದ್ದರು. ವೈದಿಕರ ಶಿ?ದೇವತೆಗಳಿಗೆ ಶೂದ್ರರ ಕ್ಷುದ್ರ ದೇವತೆಗಳು ಬಿಟ್ಟಿ ಕೂಲಿ ಮಾಡುವ ಆಳುಗಳಂತೆ ಇದ್ದವು. ಹೀಗೆ ಶೂದ್ರರು, ಅತಿಶೂದ್ರರು ಮತ್ತು ಅವರ ದೇವತೆಗಳೆಲ್ಲ ಸೇರಿ ಒಂದು ಬೃಹತ್ ಶೋಷಿತ ವರ್ಗವಾಗಿ ರೂಪುಗೊಂಡಿದ್ದರು. <

    ನೀವು ಕೊಟ್ಟ ರಂಜಾನ ದರ್ಗಾ ಲೇಖನದ ಕೊಂಡಿ ನನ್ನ ಕಣ್ಣನ್ನು ತೆರೆಸಿ ಬಿಟ್ಟಿತು!..ಹೊಸ ಹೊಸ ವಿಷಯ, ಹೊಸ ಹೊಸ ಶಬ್ದಗಳನ್ನು ತಿಳಿಸಿಕೊಟ್ಟಿತು. ನನಗೆ ಗೊತ್ತೆ ಇರಲಿಲ್ಲ, ಈ ಬ್ರಾಹ್ಮಣರು ಶೂದ್ರ ದೇವತೆಗಳನ್ನು ಕೂಡ ಶೋಷಿಸಿದ್ದಾರೆಂದು. ಮಾನವ ಹಕ್ಕುಗಳ ಚಳವಳಿ, ಕಾಯಕಜೀವಿಗಳ ಸಂಘಟನೆಯ ಮಾರ್ಕ್ಸಗೆ, ವಿಶ್ವ ಸಂಸ್ಥೆಯ ಸ್ಥಾಪನೆಗೆ ವಚನ ಚಳವಳಿಯೇ ಪರೋಕ್ಷವಾಗಿ ಪ್ರೇರಕವಾಗಿತ್ತು ಎಂಬದನ್ನು ಕೇಳಿ ತುಂಬಾ ಸಂತೋಷವಾಯಿತು. ವಿಶ್ವಬ್ಯಾಂಕ್ ಸ್ಥಾಪನೆಗೆ ವೈದಿಕರ ಪರೋಕ್ಷ ಹುನ್ನಾರ ಕಾರಣವಾಗಿರಬಹುದು ಎಂಬ ಬಲವಾದ ಅನುಮಾನ ನನಗಿದೆ. ಬಲ್ಲವರಾದ ರಂಜಾನ ದರ್ಗಾರವರು ಈ ವಿಷಯದ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಬೇಕು. 'ಮನುಧರ್ಮ ಸಿಂಹಾಸನದ ಪ್ರತಿಪಾದಕರು' ಎಂಬ ಹೊಸ ಶಬ್ದ ಪ್ರಯೋಗವನ್ನು ನೋಡಿ ಹಾಲು ಕುಡಿದಷ್ಟು ಸಂತೋಷವಾಗಿತು. ಅಕಸ್ಮಾತ ಆ ಮನುವೇ ಬಂದು ತಪ್ಪಾಯಿತು ನಂದು, ತಪ್ಪರ್ಥ ಮಾಡಿಕೊಂಡಿದ್ದೀರಿ ಅಂದರೂ ಈ ವೈದಿಕರನ್ನು ಹಾಗೇಯೇ ಬಿಡಬಾರದು, ಹೀಗೇಯೇ ಹೊಸ ಹೊಸ ಶಬ್ದಗಳನ್ನು ಹುಡುಕಿ ಈ ಜನರನ್ನು ತೆಗಳಬೇಕು. ಏಕದೇವ ಪ್ರಜ್ಞೆ, ಏಕದೇವೋಪಾಸನೆಯ ಸಿದ್ಧಾಂತಗಳು ರಂಜಾನ ದರ್ಗಾರಿಗೆ ಸಂತೋಷಕೊಟ್ಟಿದ್ದು ಸಹಜವೆ. ಅವರ ಧರ್ಮ ಮತ್ತು ಶರಣ ಧರ್ಮದಲ್ಲಿ ಸಾಕಷ್ಟು ಸಾಮ್ಯತೆ ಇರುವುದರಿಂದ, ಅವರು ತಮ್ಮ ಅನುಯಾಯಿಗಳೊಂದಿಗೆ ಶರಣ ಧರ್ಮ ಸ್ವೀಕಾರ ಮಾಡಿ ನಮ್ಮೆಲ್ಲರಿಗೆ ತಮ್ಮ ಪ್ರಭಾವಶಾಲಿ ವಿಚಾರಗಳಿಂದ ಬೆಳಕು ತೋರಬೇಕೆಂದು ನನ್ನ ಕಳ ಕಳಿಯ, ಅರ್ತತೆ ತುಂಬಿದ ಪ್ರಾರ್ಥನೆ.

    ಹೌದು..ಸುನಾಮಿ, ಭೂಕಂಪ, ಕಾಶ್ಮೀರ ಸಮಸ್ಯೆ, ದೇಶದಾದ್ಯಂತ ನಡೆಯುವ ಕೋಮುಗಲಭೆ, ಬ್ಷಷ್ಟಾಚಾರ, ರಸ್ತೆ ಅಪಘಾತ, ವಿಮಾನ ಅಪಘಾತ ಮುಂತಾದ ಸಮಸ್ಯೆಗಳಿಂದ ಹಿಡಿದು ಯಡಿಯೂರಪ್ಪನವರನ್ನು ಅನ್ಯಾಯವಾಗಿ ಇಳಿಸಿದ್ದು, ಈ ಯಾವುದೇ ಸಮಸ್ಯೆ ತೆಗೆದುಕೊಂಡರೂ, ಈ ಎಲ್ಲ ಘಟನೆಗಳ ಹಿಂದೆ ವೈದಿಕ ಕುತಂತ್ರತನ, ಹುನ್ನಾರ, ಗುಪ್ತಕಾರ್ಯಸೂಚಿ ತುಂಬಿದೆಯೆಂದರೆ ಸುಳ್ಳಾಗಲಾರದು. ಇವೆಲ್ಲವನ್ನು ತಿಳಿಯಲು ನಿಮಗೆ ಸೂಕ್ಷ್ಮ ಮನಸ್ಸಿರಬೇಕು..ಆಗ ಮಾತ್ರ ಈ ಹುನ್ನಾರಗಳು ಅರ್ಥ ಆಗುತ್ತವೆ. ನಿಮಗೆ ಒಂದೆರಡು ಉದಾಹರಣೆಯಗಳನ್ನು ವಿವರಿಸಿ ಹೇಳ್ತೆನೆ :

    ರಸ್ತೆ ಅಪಘಾತ – ಕೆಳ ವರ್ಗದ ಶೂದ್ರರು, ಕಾಯಕ ಜೀವಿಗಳೆಲ್ಲ ಊರು ಬಿಟ್ಟು ಹೋಗಬೇಕು, ಊರನ್ನು ತಾವು ಆಳಬೇಕು ಎಂಬ ವೈದಿಕರ ಹುನ್ನಾರದ ಭಾಗವಾಗಿಯೇ ಪ್ರಾರಂಭವಾದದ್ದು ಈ ರಸ್ತೆ ನಿರ್ಮಾಣ.. (ವರ್ತಮಾನದಲ್ಲಿ ಈ ತಂತ್ರಗಾರಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಬಿಹಾರದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಲಾಲೂಪ್ರಸಾದ ಯಾದವರವರು, ಅವರ ಕಾಲದಲ್ಲಿ ಬಿಹಾರದ ಹಳ್ಳಿಗಳಿಗೆ ರಸ್ತೆಯಾಗಲೂ ಬಿಡಲೇ ಇಲ್ಲ)..ಹೀಗೇ ರಸ್ತೆ ನೋಡಿ ಮರುಳಾಗಿ ಕಾಯಕ ಜೀವಿಗಳು ಊರು ಬಿಟ್ಟು ಹೊರಟಾಗ ಸಂಭವಿಸಿದ ಅಪಘಾತಗಳು ಹೆಚ್ಚಿನ ಬಲಿ ತೆಗೆದುಕೊಂಡದ್ದು ಯಾರನ್ನು ಅಂತೀರಿ?. ಇನ್ನು ಈ ರಸ್ತೆ ಮಾಡುವ ಇಂಜಿನೀಯರುಗಳಲ್ಲಿ ವೈದಿಕ ಕುಲಕ್ಕೆ ಸೇರಿದವರು ಕೆಲವರಾದರೂ ಇದ್ದಿದ್ದರು. ಇವರು ರಸ್ತೆ ನಿರ್ಮಾಣದಲ್ಲಿ, ಸಮತಟ್ಟಿನಲ್ಲಿ ಬೇಕೆಂದೆ, ಕಣ್ಣಿಗೆ ಕಾಣದಂತಹ ವ್ಯತ್ಯಾಸ ಮಾಡಿ ಅಪಘಾತಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿರಬಾರದೇಕೆ?

    ಇನ್ನು ಯಡಿಯೂರಪ್ಪನವರ ಕಥೆ – ಸುವ್ಯವಸ್ಥಿತವಾಗಿ ತಂತ್ತ ಮಾಡಿ ಯಡಿಯೂರಪ್ಪನವರು ಆಕ್ರಮ ಆಸ್ಥಿ, ಗಳಿಕೆ ಮಾಡುವಂತೆ ಮಾಡಿದ್ದು ಕೇಶವಶಿಲ್ಪದಲ್ಲಿ ಕುಳಿತ ವೈದಿಕರು. ಮುಗ್ಧರಾದ ಯಡಿಯೂರಪ್ಪನವರಿಗೆ ಈ ತಂತ್ರಗಾರಿಕೆ ಅರ್ಥವಾಗಲೇ ಇಲ್ಲ..ಅವರು ಖುಷಿಯಿಂದ ಆಸ್ತಿ ಬೆಳೆಸುತ್ತಲೇ ಉಳಿದರು. ಕೊನೆಗೆ ಅಧಿಕಾರದಿಂದ ಇಳಿದರು.
    ಸುನಾಮಿ ಹೊತ್ತಿಗೆ ಸರಿಯಾದ ಮಾಹಿತಿ ಕೊಡದೆ, ಕೆಳವರ್ಗದ ಬಡ ಮೀನುಗಾರರ ಸಾವು, ಆಸ್ತಿ ಪಾಸ್ತಿಗೆ ಹಾನಿಯಾಗುವಂತೆ ಮಾಡಿದ್ದು ಅಲ್ಲಿನ ಹವಾಮಾನ ಇಲಾಖೆಯಲ್ಲಿ ಕುಳಿತ ಒಬ್ಬ ವೈದಿಕ ಕುಲದವನ ಹುನ್ನಾರ ಇರಬಹುದೆ ಎಂಬುದು ನನಗೆ ಇನ್ನೂ ಕಾಡುತ್ತಿದೆ. ಹೀಗೆ ಈ ವೈದಿಕರ ಗುಪ್ತಕಾರ್ಯಸೂಚಿಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ನಾನು ಕೊಟ್ಟ ಎಲ್ಲ ಉದಾಹರಣೆಗಳ ಹಿಂದಿರುವ ವೈದಿಕ ಹುನ್ನಾರ, ಗುಪ್ತ ಕಾರ್ಯಸೂಚಿಯನ್ನು ನಾನು ವಿವರಿಸಿ ಹೇಳಬಲ್ಲೆ..ಆದರೆ ಈಗ ಸಮಯದ ಅಭಾವ..ಕ್ಷಮೆಯಿರಲಿ.

    ಈ ವೈದಿಕರ ವಿರುದ್ದದ ಚಳುವಳಿ ಉಗ್ರವಾಗಿ ನಡೆಯಬೇಕು. ಇದರ ನೇತ್ರತ್ವವನ್ನು ಶರಣರಾದ, ಕಾಯಕಯೋಗಿಗಳಾದ ಶ್ರೀಯುತ ರಾಜೇಂದ್ರ ಚೆನ್ನಿಯವರು ವಹಿಸಬೇಕು ಎಂದು ನನ್ನ ಕೋರಿಕೆ. ನನಗೆ ಗೊತ್ತು ಕುವೆಂಪು ವಿ.ವಿಯಲ್ಲಿ ರಾಜೇಂದ್ರ ಚೆನ್ನಿಯವರೆಲ್ಲಿ ಎಂದು ಕೇಳಿದರೆ ..ಒ ಅಲ್ಲಿ ಬೋರ್ಡಲ್ಲಿದ್ದಾರೆ ನೋಡಿ ಎಂದು ಆಫೀಸ್ ಮುಂದಿನ ನೇಮ್ ಪ್ಲೇಟ್ ತೋರಿಸಿ ವ್ಯಂಗ ಮಾಡುವ ವೈದಿಕಶಾಹಿ ಮನಸ್ಸಿನವರಿದ್ದಾರೆ. ಈ ಮೂಢರಿಗೇನು ಗೊತ್ತು..ನಮ್ಮ ಚೆನ್ನಿಯವರು ಬಸವಣ್ಣನವರ 'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ' ಎಂಬ ತತ್ವದಲ್ಲಿ ನಂಬಿಕೆ ಇಟ್ಟವರೆಂದು..ಅವರು ಜಂಗು ಹಿಡಿಯಬಾರದೆಂದು ಸುತ್ತಾಡುತ್ತಲೇ ಇರುತ್ತಾರೆ..ಶರಣ ತತ್ವವನ್ನು ಪ್ರಚಾರ ಮಾಡುತ್ತಲೇ ಇರುತ್ತಾರೆ, ಬೆಳಿಗ್ಗೆ/ರಾತ್ರಿ ಎಂದು ಭೇದವೆಣಿಸದೇ ಕಾಯಕ ಮಾಡುತ್ತಲೇ ಇರುತ್ತಾರೆಂದು.. ಈಗ ಶರಣಧರ್ಮದ ನಿಜವಾದ ಅನುಯಾಯಿಗಳು ಅಂತ ಯಾರಾದರೂ ಇದ್ದಲ್ಲಿ ಅದು ಶ್ರೀಯುತ ರಾಜೇಂದ್ರ ಚೆನ್ನಿಯವರು..ಶರಣ ಬಾಂಧವರೆಂದು ಯಾರನ್ನಾದರೂ ಕರೆಯಬಹುದೆಂದರೆ ಅದು ಶ್ರೀಯುತ ರಂಜಾನ ದರ್ಗಾರವರನ್ನು. ಮತ್ತೊಮ್ಮೆ ವೈದಿಕಶಾಹಿಗಳಿಗೆ ಧಿಕ್ಕಾರ.. ಅವರ ಕೈಯಲ್ಲಿ ಆಗ ಮನುಧರ್ಮದ ಅಸ್ತ್ರವಿದ್ದರೆ, ಈಗ ಅವರನ್ನು ತುಳಿಯಲು ನಮ್ಮ ಹತ್ತಿರ ಸಂವಿಧಾನ ಧರ್ಮದ ಅಸ್ತ್ರವಿದೆ..ಜಯವಾಗಲಿ ನಮಗೆ!

    ಉತ್ತರ
  9. ಸವಿತಾ ಬಿ ಎ.
    ಜೂನ್ 11 2013

    ಒಂದು ಚಿಲ್ಲರೆ ಕೂಗಾಟಕ್ಕೆ ಇಷ್ಟೊಂದು ಪ್ರಚಾರ ಕೊಟ್ಟೆವು ಎಂಬ ಹೆಮ್ಮೆ ಶೆಟ್ಟರಗಿದೆ. ಒಳ್ಳೆಯದು!

    ಬೆಲ್ಜಿಯಂ ಹಿಂ’ಬಾಲ’ಕರ ಸಂಶೋಧನೆ ಎಷ್ಟೊಂದು ಟೊಳ್ಳಾಗಿದೆ ಎಂದು ಎಲ್ಲರೂ ಸರಿಯಾದ ರೀತಿಯಲ್ಲೇ ನಿರೂಪಿಸಿದ್ದಾರೆ. ಸೋಲುತ್ತಿದ್ದಂತೆ ಬಾಲ ಜನ “ಸಂಶೋಧನೆಯ ಬಗ್ಗೆ ಹಿರಿಯ ಸಂಶೋಧಕರಿಗೆ ಏನೂ ಗೊತ್ತಿಲ್ಲ” ಎಂದು ಬೊಬ್ಬೆ ಹೊಡೆಯತೊಡಗಿದರೆ ಏನು ಮಾಡುವುದು? ಸುಮ್ಮನಿರದ ನಾಯಿಗೆ ಕಲ್ಲು ಹೊಡೆದು ಪಕ್ಕದ ರಸ್ತೆಗೆ ಓಡಿಸುವುದಿಲ್ಲವೇ… ಹಾಗೆ ಎಲ್ಲೆಡೆ ಬಹಿಷ್ಕಾರ ಬಿದ್ದಿದೆ ಅಷ್ಟೇ..!!!

    ‘ಬಿಟ್ಟಿ’ ವ್ಯಭಿಚಾರ ಮಾಡಿದ ಮಾತ್ರಕ್ಕೆ ಹಾದರಗಿತ್ತಿ ಗರತಿಯಾಗುವುದಿಲ್ಲ!

    ಉತ್ತರ
    • ಜೂನ್ 11 2013

      ಚರ್ಚೆ ಮಾಡಲು ಬಾರದ ಮೇಲೆ ಉಳಿಯುವುದು ಒಂದೇ, ಬಾಯಿತುಂಬಾ ಬಯ್ಗುಳ. ಕುಣಿಲಾರದ… ಗೊತಲ್ಲ.

      ಉತ್ತರ
    • ಸಂತೋಷ.ಜಿ
      ಜೂನ್ 11 2013

      ‘‘ಬಿಟ್ಟಿ’ ವ್ಯಭಿಚಾರ ಮಾಡಿದ ಮಾತ್ರಕ್ಕೆ ಹಾದರಗಿತ್ತಿ ಗರತಿಯಾಗುವುದಿಲ್ಲ!’

      ಬಾಯಲ್ಲಿ ವಚನಧರ್ಮ, ಶರಣರು, ಕಾಯಕ ಅಂದರೆ, ಲೇಖನ-ಪುಸ್ತಕ ಬರೆದು ಕೊರೆದರೆ ಎಲ್ಲರೂ ಬಸವಣ್ಣನಾಗಿ ಬಿಡುತ್ತಾರಾ?

      ಎಲ್ಲವ ಅನುಭವಿಸಿ ವ್ಯಭಿಚಾರ ಮಾಡುವ ಕಲೆಯನ್ನು ಮಾನ್ಯ ಸವಿತಾರವರು ಕಲಿಸಿ ಕೊಟ್ಟರೆ ಅಥವಾ ತಿಳಿಸಿಕೊಟ್ಟರೆ ಒಳ್ಳೆಯದೆನೊ. ನನಗಂತೂ ಈ ಲೇಖನ ಓದಿದ ಮೇಲೆ, ನಮ್ಮ ವಿವಿಗಳಲ್ಲಿ ಬೀಡು ಬಿಟ್ಟಿರುವ ಕೆಲವು ಪ್ರೊಫೆಶನಲ್ ವ್ಯಭಿಚಾರಿಗಳ ನಡುವೆ ಸಿ.ಎಸ್.ಎಲ್.ಸಿಯವರು ಸಪ್ಪೆ ಅನಿಸ್ತಾರೆ.

      ಉತ್ತರ
    • ಜೂನ್ 12 2013

      ಅದೇನು ಪ್ರಗತಿಪರರೋ ಅಥವಾ ನಮ್ಮ ವಿರೋಧಿಗಳೋ ವಿಚಿತ್ರ ಆದರೂ ಸತ್ಯ, ಇವರಿಗೆ ಹೀಗೆ ಹೊಲಸು ಹೊಲಸಾಗಿಯೇ ಮಾತನಾಡಲು ಬರುವುದು. ಒಬ್ಬ ಹೆಣ್ಣುಮಗಳಾಗಿ ಛೇ ಹಾದರದಂತಹ ಭಾಷೆಯನ್ನು ಬಳಸುವುದು, ದಿಕ್ಕಾರ ನಿಮ್ಮ ಭಾಷೆಯ ಶೈಲಿಗೆ

      ಉತ್ತರ
    • ಚೇತನಾ
      ಜೂನ್ 12 2013

      ಖಂಡಿತಾ ಈ ಭಾಷೆ ಬಳಸುವವರು ಬಾಲುರವರ ವಾದದಿಂದ ತುಂಬಾ ನೊಂದುಕೊಂಡಿದ್ದಾರೆ. ಇದೇ ಬ್ಲಾಗಿನ ಹಿಂದಿನ ಲೇಖನಕ್ಕೆ ಬಂದ ಟಿಪ್ಪಣಿಗಳನ್ನೂ, ಫೇಸ್ಬುಕ್ ನ ಕೆಲವು ಟಿಪ್ಪಣಿಗಳನ್ನು ನೋಡುವಾಗ ತಿಳಿದದ್ದು,ಈ ಸವಿತಾ ಅನ್ನುವ ಹೆಸರಿನಲ್ಲಿ ಬರೆಯುತ್ತಿರುವುದು ಒಬ್ಬ ಪುರುಷ ಮಹಾಶಯ.ಇದು ಅವರ ವಿಕೃತ ಮನಸ್ಸಿಗೆ ಇನ್ನೊಂದು ಉದಾಹರಣೆ. ಈ ಬ್ಲಾಗಿನ ಅಡ್ಮಿನ್ ಅವರಲ್ಲಿ ನನ್ನದೊಂದು ಕೋರಿಕೆ. ಯಾವ ಕಾರಣಕ್ಕೂ ಅವರ ಮೇಲಿನ ಆ ಹೊಲಸು ಕಾಮೆಂಟ್ ಅನ್ನು ತೆಗೆದು ಹಾಕಬೇಡಿ. ಒಂದು ವಾದವನ್ನು ಎದುರಿಸಲಾಗದೆ ಜನ ಯಾವ ನೀಚ ಮಟ್ಟಕ್ಕೆ ಇಳಿದು ಕೂಗಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿಯಲಿ.

      ಉತ್ತರ
    • ಅಲ್ಲಾ ಗುರು (ಸ(ಅ)ವಿತಾ?) ಹುಡ್ಗಿ ಹೆಸರಿನಲ್ಲಿ ಇಂತ ಕಮೆಂಟು ಹಾಕುತ್ತೀರಲ್ಲಾ ಸರಿನಾ?
      ಇನ್ನು ಈ ಚಿಲ್ಲರೆ ಕೂಗಾಟ ಈ ರಾಜ್ಯದ ಸೋ-ಕಾಲ್ಡ್ ಬುದ್ದಿ ಜೀವಿಗಳ ಬುದ್ದಿಮತ್ತೆಯನ್ನು ಜನರಿಗೆ ಪರಿಚಯಿಸಿದೆ… ಚಿಲ್ಲರೆ ಕೂಗಾಟಕ್ಕೆ ಬೆಚ್ಚಿ ಬಿದ್ದು ಸಂಶೋಧನೆ ನಿಲ್ಲಿಸಿ ಅಂತ ಸರ್ಕಾರಕ್ಕೆ ಗೋಗರೆಯುವಾಗಲೇ ತಿಳಿಯುವುದಿಲ್ಲವೇ ಪಾಪ ಈ ಪ್ರಗತಿಪರರ ನೋವು 🙂

      ಉತ್ತರ
  10. ಕಭೀರ‍್ ಎಮ್
    ಜೂನ್ 12 2013

    ಬಾಲಗಂಗಾಧರ ಮತ್ತು ಸಿ.ಎಸ್.ಎಲ್ ಸಿ ಯ ಸಂಶೋಧನೆಗಳ ಕುರಿತು ಎಲ್ಲಾ ಕಡೆ ಚರ್ಚೆಯಾಗುತ್ತಿದೆ, ನಾನೂ ಕುತೂಹಲದಿಂದ ಚರ್ಚೆಯನ್ನು ಗಮನಿಸುತ್ತಾ ಬಂದಿದ್ದೇನೆ. ಸಂಶೋಧನೆಯನ್ನು ಒಪ್ಪದಿದ್ದರೆ ಅದು ಅವರ ಇಷ್ಟ, ಅದನ್ನು ಒಪ್ಪುವಂತೆ ಮಾಡುವುದು ಮತ್ತು ಒಪ್ಪದೆ ಇದ್ದರೆ ಅದನ್ನು ಮಟ್ಟ ಹಾಕಿ ಸಮಾಧಿ ಮಾಡುವುದು ಎರಡೂ ತಪ್ಪೇ. ಅವರ ಸಂಶೋಧನಾ ಕೇಂದ್ರವನ್ನು ಮುಚ್ಚಬೇಕು ಎಂದು ಹೇಳುವುದನ್ನು ನಾನು ಖಂಡಿತವಾಗಿ ವಿರೋಧಿಸುತ್ತೇನೆ. ಈ ಚರ್ಚೆಯ ಬಿರುಸು ನನ್ನನ್ನು ಅವರ ಪುಸ್ತಕವಾದ ಸ್ಮೃತಿ ವಿಸ್ಮೃತಿ ಓದುವಂತೆ ಮಾಡಿದೆ. ಅದರ ಅನುಭವ ಮತ್ತು ಅನುಮಾನವನ್ನು ಬರೆಯಬೇಕು ಎಂದು ಇಲ್ಲಿಗೆ ಬಂದಿದ್ದೇನೆ.

    ನಾನು ಒಬ್ಬ ಮುಸ್ಲಿಂ ನಾಗಿ ನನಗೆ ಎಲ್ಲವೂ ರಿಲಿಜನ್ ಎಂದೇ ತಿಳಿದುಕೊಂಡಿದ್ದೆ, ಆದ್ರೆ ರಾಜಾರಾಮ ಹೆಗಡೆಯವರು ಅನುವಾದ ಮಾಡಿರುವ ಪುಸ್ತಕವಾದ ಸ್ಮೃತಿ ವಿಸ್ಮೃತಿ ಓದಿದ ಮೇಲೆ ರಿಲಿಜನ್ ಇಲ್ಲದ ಸಮುದಾಯ ಇರಬಹುದು ಎಂದು ನೋಡುವಂತೆ ಮಾಡಿತು. ಮೊದಲಿಗೆ ನನಗೆ ಶಾಕ್ ಆಯಿತು, ರಿಲಿಜನ್ ಇಲ್ಲದ ಮೇಲೆ ಜನ ಬದುಕುವುದಾದರೂ ಹೇಗೆ ಎಂದು, ಆದ್ರೆ ಅದು ಅನಿವಾರ‍್ಯ ಅಲ್ಲವೆಂದು ಪುಸ್ತಕ ಮುಗಿಸುವ ಹೊತ್ತಿಗೆ ತಿಳಿಯುತು. ಇಲ್ಲಿಯದು ಹಿಂದೂಯಿಸಂ ರಿಲಿಜನ್ ಎಂದು ವಿದೇಶಿಯರು ಗುರುತಿಸಿದ್ದಾರೆ, ಅದನ್ನೇ ಒಪ್ಪಿ ಮುಂದುವರೆಸುತ್ತಿದ್ದಾರೆ. ಆ ಪುಸ್ತಕ ತನ್ನ ವಾದವನ್ನು ಎಳೆ ಎಳೆಯಾಗಿ ಬಿಡಿಸಿ ಇಡುತ್ತದೆ. ಆದರೆ ಕೆಲವೊಂದು ಕಾನ್ಸೆಪ್ಟ್ ಗಳು ಅಷ್ಟಾಗಿ ಅರ್ಥವಾಗಲಿಲ್ಲ. ಒಟ್ಟಾರೆ, ಹಿಂದೂಯಿಸಂ ರಿಲಿಜನ್ ಅಲ್ಲ ಮತ್ತು ಅಂತಹ ಸಂಗತಿಯೂ ಇಲ್ಲ ಎಂಬುದು ಅವರ ವಾದ. ಅವರ ವಾದ ಸುಸ್ಪಷ್ಟವಾಗಿಯೇ ಇದೆ, ಅವರ ವಾದವನ್ನು ವಿರೋಧಿಸುವುದು ಅದಕ್ಕೆ ಸರಿಸಮನಾದ ಮತ್ತೊಂದು ಪ್ರತಿವಾದವನ್ನು ಕಟ್ಟ ಬೇಕು. ಹಿಂದೂಯಿಸಂ ರಿಲಿಜನ್ ಎಂದು ತೋರಿಸಬೇಕು, ಆದ್ರೆ ಇಲ್ಲಿಯ ತನಕದ ಚರ್ಚೆ ನೋಡಿದರೆ, ಯಾರೂ ಸಹ ಅದನ್ನು ಮಾಡಿದಂತೆ ಕಾಣುವುದಿಲ್ಲ.

    ಜಾತಿವ್ಯವಸ್ಥೆ ಇಲ್ಲ ಎನ್ನುವ ಅವರ ವಾದ ಮುಂದಿಟ್ಟಾಗ, ಜಾತಿಯೇ ಇಲ್ಲ ಎನ್ನುತ್ತಿದ್ದಾರೆ ಎಂಬಂತೇ ನಾನೂ ಮೊದಲು ಅರ್ಥಮಾಡಿಕೊಂಡಿದ್ದೆ, ಆದರೆ ಹಿಂದೂಯಿಸಂ ನ ವಾದವನ್ನು ಇಲ್ಲಿಗೆ ಇಟ್ಟುಕೊಂಡು ನೋಡಿದರೆ ಅವರು ಯಾವ ಅರ್ಥದಲ್ಲಿ ಜಾತಿವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ ಎಂಬುದು ತಿಳಿಯುತ್ತದೆ. ಹಿಂದೂಯಿಸಂ ಇಲ್ಲ ಎಂದರೆ ಅದರ ಮೂಲಕ ಬಂದಿರುವ ಅಥವಾ ಅದು ಪೋಷಿಸುವ ವ್ಯವಸ್ಥೆ ಇಲ್ಲ ಎನ್ನುವುದು ಸಕಾರಾಣವಾಗಿಯೇ ಇರತುತ್ತದೆ. ಹಿಂದೂಯಿಸಂ ಇಲ್ಲದ ಮೇಲೆ ಜಾತಿವ್ಯವಸ್ಥೆ ಇಲ್ಲ ಎಂದು ಹೇಳಲು ಬಾಲಗಂಗಾಧರ ಬೇಕಾಗಿಲ್ಲ, ಆ ವಾದವನ್ನು ಸರಿಯಾಗಿ ತಿಳಿದುಕೊಂಡರೆ ಅದರ ಇಂಗಿತಾರ್ಥ ಅದುವೇ ಆಗುತ್ತದೆ ಅಂತ ಭಾವಿಸುತ್ತೇನೆ. ಹಾಗು, ಹಿಂದೂಯಿಸಂ ಇಲ್ಲ ಎಂದರೆ ಹಿಂದೂ ಗಳೇ ಇಲ್ಲ ಎನ್ನುವ ಅರ್ಥ ಅಲ್ಲ, ಆದರೆ ಅವರಿಗೆ ರಿಲಿಜನ್ ಇಲ್ಲ ಅಂತ ಅಷ್ಟೆ, ಅದೇ ತರ ಜಾತಿ ವ್ಯವಸ್ಥೆ ಇಲ್ಲ ಅಂದರೆ ಜಾತಿ ಇಲ್ಲ, ಜನರೂ ಇಲ್ಲ ಅಂತ ಅಲ್ಲ ಅವರಿಗೆ ವ್ಯವಸ್ಥೆ ಇಲ್ಲ ಎಂದು ಅರ್ಥ ಅಷ್ಟೆ, ಆದ್ರೆ ತುಂಬಾ ಜನ ಜಾತಿನೇ ಇಲ್ಲ ಅಂತಾ ಹೇಳ್ತಾ ಇದಾರೆ ಅಂತ ಅವರಸರದ ನಿರ್ಣಯಕ್ಕೆ ಬಂದು ಟೀಕೆ ಮಾಡಿದ್ದಾರೆ ಅನ್ನಿಸುತ್ತೆ

    ಏನೇ ಇರಲಿ ಅವರ ವಾದವನ್ನು ವಾದದಿಂದ ಸೋಲಿಸಬೇಕು, ಅಥವಾ ಪ್ರಶ್ನಿಸಬೇಕು, ಅದನ್ನು ಬಿಟ್ಟು ಅವರನ್ನೇ ಮುಚ್ಚುವುದು ಅಮಾನವೀಯ,

    ಕಭೀರ‍್ ಎಮ್

    ಉತ್ತರ
    • ಕಭೀರ‍್ ಎಮ್
      ಜೂನ್ 12 2013

      ರಿಲಿಜನ್ ಕುರಿತು ಅವರು ಹೇಳುವ ರೀತಿಯಲ್ಲಿ ನನಗೆ ತೊಂದರೆ ಇದೆ, ಅದನ್ನು ಮತ್ತೊಮ್ಮೆ ಬರೆಯುತ್ತೇನೆ

      ಉತ್ತರ
  11. ಜೂನ್ 12 2013

    ಕಭೀರ‍್ ರವರೆ

    ರಿಲಿಜನ್ ಕುರಿತು ಹೇಳುವಲ್ಲಿ ನಿಮಗೆ ತೊಂದರೆ ಇದೆ ಎಂದು ವ್ಯಕ್ತಪಡಿಸಿದ್ದೀರಿ, ಅಂದರೆ ರಿಲಿಜನ್ ಕುರಿತು ಸೈದ್ಧಾಂತೀಕರಿಸುವಲ್ಲಿ ಸಮಸ್ಯೆ ಇದೆ ಎಂದು ತೋರುತ್ತದೆ, ಅದು ಯಾವ ತರಹದ ಸಮಸ್ಯೆ ಎಂದು ಹೇಳಿದರೆ ಅನುಕೂಲವಾಗಬಹುದು,

    ಉತ್ತರ
  12. ಜೂನ್ 12 2013

    ಸವಿತಾ ರವರೆ

    ಸಂಶೋಧನೆಯ ಟೊಳ್ಳುತನವನ್ನು ಇದುವರೆಗೂ ಯಾರೂ ತೋರಿಸಿಲ್ಲ, ಒಂದೊಮ್ಮೆ ಟೊಳ್ಳುತನದಿಂದ ಕೂಡಿದೆ ಎಂದು ತೋರಿಸಬೇಕಾದರೆ ಮೇಲೆ ಹೇಳಿರುವ ಕಭೀರ‍್ ರವರ ಮಾತನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಹಾಗೆ ನಾಯಿ, ಕಲ್ಲು, ಹಾದರ, ಗರತಿ, ಇಂತಹ ಶಬ್ದಗಳನ್ನು ಬಳಸಿದ ಮಾತ್ರಕ್ಕೆ ಸಂಶೋಧನೆ ಟೋಳ್ಳಾಗುವುದಿಲ್ಲ, ಬದಲಿಗೆ ಹಾಗೆ ಬರೆದಿರುವವರ ವ್ಯಕ್ತಿತ್ವದ ನೀಚತನ ಮತ್ತು ಟೊಳ್ಳುತನ ಗೊತ್ತಾಗುತ್ತದೆ ಅಷ್ಟೆ,

    ನೀವು ಅಂದುಕೊಂಡಿರುವಂತೆ ಚಿಲ್ಲರೆ ವಿಷಯ ಆಗಿದ್ದರೆ, ಸವಿತೃ ಆದಿಯಿಂದ ಕಲ್ಬುರ್ಗಿಯವರೆಗೆ ಇಷ್ಟೊಂದು ಬೀದಿ ರಂಪ ಮಾಡುವ ಪ್ರಮೇಯವೇ ಇರಲಿಲ್ಲ, ಏನೋ ಹೇಳುತ್ತಾರೆ ಸೈಡಲ್ಲಿ ಇರುತ್ತಿದ್ದರು, ಆದರೆ ಅವರಿಗೆ ಸಂಶೋಧನೆಯ ಕುರಿತು ಓದಲು ಸಮಯ ಇರದಿದ್ದರೂ ಸಹ ಅದರ ಇಂಪ್ಯಾಕ್ಟ್ ಏನು ಅನ್ನುವುದು ಮನದಟ್ಟಾಗಿದೆ, ಆದ್ದರಿಂದಲೇ ಅವರ ಶತಪ್ರಯತ್ನ. ಒಂದೊಮ್ಮೇ ನೀವು ಸವಿತೃವೇ ಆಗಿದ್ದರೆ, ನಿಮ್ಮ ವಚನದ ಬ್ಲಾಗ್ ನಲ್ಲಿ ನಿಮ್ಮ ವಾದ ಟೊಳ್ಳಾಗಿರುವುದನ್ನು ನಾನೇ ಗುರುತಿಸಿದ್ದೇನೆ, ಅಲ್ಲಿ ತಾವು ವಾದ ಮಾಡಲು ಹಿಂಜರಿದಿದ್ದೀರಿ.. ಹೋಗಲಿ ನೀವು ಯಾರಾದರೂ ಆಗಿರಿ, ಆದರೆ ಸುಮ್ಮನೆ ಟೊಳ್ಳು ಎಂದ ಮಾತ್ರಕ್ಕೆ ಟೊಳ್ಳಾಗಿ ಬಿಡುವುದಿಲ್ಲ. ಉದಾಹರಣೆಗೆ ನಿಮ್ಮನ್ನೇ ನಾನು ಕೋಪದಿಂದ ಏನಾದರೂ ಬೈದರೆ ನೀವು ಅದುವೇ ಆಗಿ ಬಿಡುವುದಿಲ್ಲ, ಏಕೆಂದರೆ ಅಂತಹ ಬೈಗುಳ ನನ್ನ ಕಡೆಯಿಂದ ಬಂದಿದ್ದೇ ಹೊರತು ನಿಮ್ಮ ನೈಜತೆಯಿಂದ ಅಲ್ಲ. ಹಾಗೆಯೇ ನೀವು ಆರೋಪಿಸಿರುವ ಎಲ್ಲಾ ಬೈಗುಳ ಅಸಮಾಧಾನಗಳೂ ಅವೆಲ್ಲವೂ ನಿಮ್ಮನ್ನೇ ಪ್ರತಿನಿಧಿಸುತ್ತವೆಯೇ ಹೊರತು ಬೇರೆಯವರಿಗಲ್ಲ.

    ಇದುವರೆಗೂ ಬಿಟ್ಟಿ ತಿಂದುಕೊಂಡು, ಪುಕ್ಕಟೆ ಪ್ರಚಾರ ಪಡೆದು, ಸಿಕ್ಕ ಸಿಕ್ಕ ಸನ್ಮಾನ ಪದವಿಗಳಿಗೆ ಭಾಜನರಾಗಿರುವವರಿಗೆ ನಿಜವಾಗಿಯೂ ಈ ಸಂಶೋಧನೆಯಿಂದ ಅವರಿಗೆಲ್ಲಾ ಆತಂಕ ಶುರುವಾಗಿದೆ, ಎಲ್ಲಿ ತಮ್ಮ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬೀಳುತ್ತದೆಯೋ ಎಂದು, ಆದ್ದರಿಂದಲೇ ಅವರು ಹೇಗಾದರೂಮಾಡಿ ನಮ್ಮ ಸಂಶೋಧನಾ ಕೇಂದ್ರವನ್ನು ಮುಚ್ಚಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಏನೇ ಆಗಲಿ ಈ ಪ್ರಗತಿಪರರು ಮತ್ತು ಅವರ ಬಾಲವಿಲ್ಲದ ಹಿಂಬಾಲಕರು ತಳವಿಲ್ಲದ ವಾದವನ್ನು ಇದುವರೆಗೂ ನಂಬಿಸಿದ್ದಾರಲ್ಲಾ ಆಹಾ ಮೆಚ್ಚಬೇಕು ಅವರ ಕಲೆಯ..

    ಉತ್ತರ
    • ಬಸವಯ್ಯ
      ಜೂನ್ 13 2013

      ನೀವು ಸುಖಾ ಸುಮ್ಮನೆ ಅನುಮಾನ ಪಡ್ತಿರಾ!..ಇವರು ಗಂಡೊ ಹೆಣ್ಣೊ ಅಂತ..’ನಡುವೆ ಸುಳಿವಾತ್ಮ ಹೆಣ್ಣು ಅಲ್ಲ..ಗಂಡು ಅಲ್ಲ’ ! ನನಗನಿಸುವಂತೆ ಶ್ರೀಯುತರು ಗಂಡು ವಿಚಾರಧಾರೆಗಳನ್ನು ಹೆಣ್ಣಾಗಿ, ಹೆಣ್ಣು ವಿಚಾರಧಾರೆಗಳನ್ನು ಗಂಡಾಗಿ ವ್ಯಕ್ತಪಡಿಸಲು ಬಯಸುತ್ತಾರೆ 🙂

      ಉತ್ತರ
      • ಬಸವಯ್ಯ
        ಜೂನ್ 13 2013

        ಕ್ಷಮಿಸಿ..ಹೆಣ್ಣೂ ಅಲ್ಲ..ಗಂಡೂ ಅಲ್ಲ ಆಗಬೇಕು

        ಉತ್ತರ
        • ಸೆಪ್ಟೆಂ 7 2013

          ಅಯ್ಯ ನಾರದ …

          ಇಲ್ಲದ ಸಲ್ಲದ ಮಾತು ಯಾಕೆ? “savithru…One more guy!” ಅನ್ನೋ ಸಾಲು ನನ್ನ ಪ್ರೊಫೈಲ್ ಅಲ್ಲಿ ಇದೆ. ಅಲ್ಲದೆ ನಿಮಗೆ ನನ್ನ ( ಬ್ಲಾಗುಗಳ) ಪರಿಚಯ ಹಲವು ವರ್ಷಗಳಿಂದ ಇರುವಂತಿದೆ. ಆದರೂ ಯಾಕೆ ಈ ತರ ಕಾಲೆಳೆದು ಮಜಾ ತಗೊಳ್ಳೋದು? 😉

          ಉತ್ತರ
    • ಸೆಪ್ಟೆಂ 7 2013

      ಸಂತೋಷ್ ಶೆಟ್ಟಿ ಯವರೇ

      ನೀವು ಯಾವಾಗಲೂ ಫೇಸ್ಬುಕ್ ನಲ್ಲಿ .. ಆನ್ಲೈನ್ ನಲ್ಲಿ ಸಿಕ್ತ ಇದ್ರಿ ಅಲ್ವ? ಅಲ್ಲೇ ನೇರವಾಗಿ ಕೇಳಬಹುದಿತ್ತು … ಇದು ಯಾರು ಅಂತ… ನಾನು ಬರೆಯುವುದುಯ್ ಸವಿತೃ ಅನ್ನೋ ಹೆಸರಲ್ಲಿ. ನಾನು ಯಾವತ್ತೂ ಎಲ್ಲಿಯೂ ಸವಿತಾ ಅನ್ನೋ ಹೆಸರಲ್ಲಿ ಬರೆದಿಲ್ಲ.

      ನನ್ನ ವಾದ ಟೊಳ್ಳಆದ ಬಗ್ಗೆ ಹೇಳಿದ್ದೀರಿ… ನನಗೆ ನಿಮ್ಮ ಈ ಸಂಶೋಧನೆ ಬಗ್ಗೆ ಆಸಕ್ತಿನೇ ನಿಂತು ಹೋಯ್ತು… ಹೆಚ್ಚಿನ ಹೊತ್ತು ಇಂತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು ವೇಸ್ಟ್ ಅನ್ನಿಸಿ ನಾನೇ ಮುಂದುವರೆಸಲಿಲ್ಲ.

      ಮತ್ತೆ ನಿಮ್ಮ ಜೊತೆಗಿನ ಚರ್ಚೆ ಬಗ್ಗೆ… ನನ್ನ ಅನೇಕ ಪ್ರಶ್ನೆಗಳಿಗೆ ನಿಮ್ಮ ತಂಡದಿಂದ ಉತ್ತರ ಬಂದಿಲ್ಲ. ಬರೋದೂ ಇಲ್ಲ…ಡಂಕಿನ್ ಅವರ ಉತ್ತರಗಳನ್ನು ನೋಡಿದ ಮೇಲೆ ಅವು ಬರೋದೂ ಇಲ್ಲ ಅನ್ನೋದು ತಿಳಿದಿದೆ.

      ನಿಮ್ಮ ವಾದಗಳನ್ನು ನಾನು ಒಪ್ಪಲ್ಲ… ನಿಮ್ಮ ಹೆಚ್ಚಿನ ವಾದಗಳೂ ನನ್ನನ್ನ ಕನ್ವಿನ್ಸ್ ಮಾಡಿಲ್ಲ. ಆದರೂ ನಿಮ್ಮಗೆ ಬಯ್ಯುವ ಅವಶ್ಯಕತೆ ನನಗಿಲ್ಲ.

      ಒಬ್ಬ ಸಂತೋಷ್ ಶೆಟ್ಟಿ ನನ್ನ ಪಾಲಿಗೆ ಒಬ್ಬ ಸ್ನೇಹಿತ ಅಷ್ಟೇ …. ನಿಮ್ಮ ವಾದಗಳನ್ನು ಒಪ್ಪದಿದ್ದಾಗ್ಯೂ.

      ಉತ್ತರ
    • ಸೆಪ್ಟೆಂ 7 2013

      ಸಂತೋಷ್ ಶೆಟ್ಟಿ ಯವರೇ
      ನೀವು ಯಾವಾಗಲೂ ಫೇಸ್ಬುಕ್ ನಲ್ಲಿ .. ಆನ್ಲೈನ್ ನಲ್ಲಿ ಸಿಕ್ತ ಇದ್ರಿ ಅಲ್ವ? ಅಲ್ಲೇ ನೇರವಾಗಿ ಕೇಳಬಹುದಿತ್ತು … ಇದು ಯಾರು ಅಂತ… ನಾನು ಬರೆಯುವುದುಯ್ ಸವಿತೃ ಅನ್ನೋ ಹೆಸರಲ್ಲಿ. ನಾನು ಯಾವತ್ತೂ ಎಲ್ಲಿಯೂ ಸವಿತಾ ಅನ್ನೋ ಹೆಸರಲ್ಲಿ ಬರೆದಿಲ್ಲ.
      ನನ್ನ ವಾದ ಟೊಳ್ಳಆದ ಬಗ್ಗೆ ಹೇಳಿದ್ದೀರಿ… ನನಗೆ ನಿಮ್ಮ ಈ ಸಂಶೋಧನೆ ಬಗ್ಗೆ ಆಸಕ್ತಿನೇ ನಿಂತು ಹೋಯ್ತು… ಹೆಚ್ಚಿನ ಹೊತ್ತು ಇಂತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು ವೇಸ್ಟ್ ಅನ್ನಿಸಿ ನಾನೇ ಮುಂದುವರೆಸಲಿಲ್ಲ.
      ಮತ್ತೆ ನಿಮ್ಮ ಜೊತೆಗಿನ ಚರ್ಚೆ ಬಗ್ಗೆ… ನನ್ನ ಅನೇಕ ಪ್ರಶ್ನೆಗಳಿಗೆ ನಿಮ್ಮ ತಂಡದಿಂದ ಉತ್ತರ ಬಂದಿಲ್ಲ. ಬರೋದೂ ಇಲ್ಲ…ಡಂಕಿನ್ ಅವರ ಉತ್ತರಗಳನ್ನು ನೋಡಿದ ಮೇಲೆ ಅವು ಬರೋದೂ ಇಲ್ಲ ಅನ್ನೋದು ತಿಳಿದಿದೆ.
      ನಿಮ್ಮ ವಾದಗಳನ್ನು ನಾನು ಒಪ್ಪಲ್ಲ… ನಿಮ್ಮ ಹೆಚ್ಚಿನ ವಾದಗಳೂ ನನ್ನನ್ನ ಕನ್ವಿನ್ಸ್ ಮಾಡಿಲ್ಲ. ಆದರೂ ನಿಮ್ಮಗೆ ಬಯ್ಯುವ ಅವಶ್ಯಕತೆ ನನಗಿಲ್ಲ.
      ಒಬ್ಬ ಸಂತೋಷ್ ಶೆಟ್ಟಿ ನನ್ನ ಪಾಲಿಗೆ ಒಬ್ಬ ಸ್ನೇಹಿತ ಅಷ್ಟೇ …. ನಿಮ್ಮ ವಾದಗಳನ್ನು ಒಪ್ಪದಿದ್ದಾಗ್ಯೂ.

      ಉತ್ತರ
  13. vidya
    ಡಿಸೆ 30 2013

    ಮಾನ್ಯ ಬಸವಾರಾಧ್ಯ ಸ್ವಾಮಿ ಅವರೆ ನಿಮ್ಮ ವ್ಯಂಗ್ಯ ಮಿಶ್ರಿತ ನಗೆ ಕಮೆಂಟ ಓದಿ ನಾನು ಬಹಳೆ ನಕ್ಕಿದ್ದ್ಜೇನೆ. ಗಂಭೀರವಾದ ಚರ್ಚೆ, ಬೈಗಳು, ಗುದ್ದುಗಳ ನಡುವೆ ನಿಮ್ಮ ಕಮೆಂಟ್ ನನಗೆ ತಂಗಾಳಿ ಆಯಿತು. ಹೀಗೆ ನಡುವೆ ಸ್ವಲ್ಪ ಜೋಕುಗಳು ಇರಲಿ . ಆದರೆ ಶಾಲಿನಲ್ಲಿ …..ಎಂದು ಹೇಳುತ್ತಾರಲ್ಲ ಹಾಗಿದೆ ನಿಮ್ಮ ನಗೆ ಕಮೆಂಟ್ ಧನ್ಯವಾದಗಳು.

    ಉತ್ತರ
  14. Nagshetty Shetkar
    ಜನ 9 2015

    “‘ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?’ ಇಂತಹದ್ದೊಂದು ಮೂರ್ಖರ ಮಾದರಿಯ ಪ್ರಶ್ನಾರೂಪದ ಪುಸ್ತಕವೊಂದು ಈಚೆಗೆ ಬಿಡುಗಡೆಗೊಂಡಿದೆ. ವಿತಂಡವಾದ, ಮೊಂಡುವಾದ, ಜನರನ್ನು ಕನ್‌ಫ್ಯೂಸ್‌ಗೊಳಿಸುವ ವಾದ ಆ ಮೂಲಕ ವ್ಯವಸ್ಥೆ ಹೀಗೆಯೇ ಇರಬೇಕು, ಇದರಲ್ಲೇನು ಅಪಾಯವಿಲ್ಲ… ಅಸ್ಪಶ್ಯತೆ-ಜಾತೀಯತೆ ಇದೆಲ್ಲ ಕಾಮನ್ನು… ಇಲ್ಲ ಅಥವಾ ಇದ್ದರೂ ಅದು ಅದಲ್ಲ, ಅದು ಬೇರೆಯದೇ ಮಾದರಿಯದು… ಹಾಗೆ ಪ್ರಮುಖವಾಗಿ ಇದೆಲ್ಲ (ಅಸ್ಪಶ್ಯತೆ-ಜಾತೀಯತೆ) ಪಾಶ್ಚಿಮಾತ್ಯರ(ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರ) ಸೃಷ್ಟಿ… ಹೀಗೆ ವಿಚಾರಗಳನ್ನೊಳಗೊಂಡಿದೆ ಆ ಪುಸ್ತಕ. ಒಂದರ್ಥದಲ್ಲಿ ನವಮನುವಾದ, ನವಬ್ರಾಹ್ಮಣವಾದದ ಕಥಾಕಥಿತ ರೂಪದಂತಿದೆ ಆ ಪುಸ್ತಕ. ಆಶ್ಚರ್ಯವೆಂದರೆ ಆ ಪುಸ್ತಕದ ಪ್ರತಿಯೊಂದು ಕಡೆಯೂ ಅಂಬೇಡ್ಕರ್‌ರವರ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಅವರ ಕೃತಿಗಳನ್ನು, ಚಿಂತನೆಗಳನ್ನು ಹೀಗಳೆಯುವ ಕ್ರಿಯೆ ಮಾಡಲಾಗಿದೆ. ಇದರರ್ಥ ಅಂಬೇಡ್ಕರ್ ಕಂಡರೆ ಈ ದೇಶದ ಹಿಂದೂವಾದಿಗಳಿಗೆ ಅದೆಷ್ಟು ಭಯ, ಆತಂಕ ಎಂಬುದು ಈ ಕೃತಿಯ ಮೂಲಕ ಅರ್ಥವಾಗುತ್ತದೆ. ಅಂದಹಾಗೆ ಆ ಕೃತಿಯ ಲೇಖಕರು ಇತ್ಯಾದಿ, ಇತ್ಯಾದಿಗಳನ್ನು ಇಲ್ಲಿ ಪ್ರಸ್ತಾಪಿಸಲು ಹೋಗುವುದಿಲ್ಲ. ಆದರೆ ಅವರ ವಾದ ಸರಣಿಯನ್ನು ಅಯೋಗ್ಯ ಎಂದು ಗೊತ್ತಿದ್ದರೂ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಅಂತಹ ಅಯೋಗ್ಯಕರ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸುತ್ತೇನೆ. ಯಾಕೆಂದರೆ ಅಂಬೇಡ್ಕರ್ ಅವರನ್ನು ಅವರು ಅಂದರೆ ಸದರಿ ಕೃತಿಯ ಲೇಖಕರು ತಮ್ಮ ಅಜ್ಞಾನಿ ಮನಸ್ಸಿನಿಂದ ವಿಶ್ಲೇಷಿಸಲು ಯತ್ನಿಸಿರುವುದರಿಂದ. ಸದರಿ ಲೇಖಕರ ಗುಂಪು ಪ್ರಮುಖ ವಾಗಿ ಹೇಳುವುದು ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆ ಪಾಶ್ಚಿಮಾತ್ಯರ ಸೃಷ್ಟಿ ಎಂದು. ಒಂದರ್ಥದಲ್ಲಿ ಈ ವಾದ ಪದೇ ಪದೇ ಪುನರುಕ್ತಿಯಾಗುತ್ತದೆ. ಯಾವರೀತಿ ಎಂದರೆ ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ? ಎಂಬ ಆ ಕೃತಿಯ ಪುಟ 29ರಲ್ಲಿ ‘‘ಪಾಶ್ಚಿಮಾತ್ಯ ಸಂಸ್ಕೃತಿಯು ಹಿಂದೂಯಿಸಂ ಜೈನಿಸಂ ಮುಂತಾದವುಗಳನ್ನು ರಿಲಿಜನ್ನುಗಳಾಗಿ ಹುಟ್ಟುಹಾಕಿತು ಎಂದು ಹೇಳುವಾಗ ನಾನು (ಆ ಕೃತಿಯ ಲೇಖಕ) ಹೇಳುತ್ತಿರುವುದು ಇಷ್ಟೆ, ಅವು ಪಶ್ಚಿಮದ ಜನತೆಯ ಅನುಭವದಲ್ಲಷ್ಟೇ ಅಸ್ತಿತ್ವದಲ್ಲಿರುವ ವಿಚಾರಗಳು ಮತ್ತು ಅವುಗಳ ರಚನೆಯಿಂದ ಭಾರತವನ್ನು ಕುರಿತ ಅವರ ಅನುಭವವು ಅವರಿಗೆ ಗ್ರಾಹ್ಯವಾಗುವಂತಾಯ್ತು. ಪಶ್ಚಿಮದ ಜನತೆಯ ಅನುಭವದಲ್ಲಷ್ಟೆ ಅಸ್ತಿತ್ವದಲ್ಲಿರುವ ವಿಚಾರಗಳು ರಚನೆಯಾಗುವ ಮೊದಲಾಗಲಿ ಅಥವಾ ಅದರ ಬಳಿಕವಾಗಲಿ ಅವು (ಹಿಂದೂಯಿಸಂ ಮತ್ತು ಜಾತಿ ವ್ಯವಸ್ಥೆ) ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ವಿನ್ಯಾಸ ಅಥವಾ ವ್ಯವಸ್ಥೆಯ ಭಾಗಗಳಾಗಿರಲಿಲ್ಲ ಮತ್ತು ಅವು ಕೇವಲ ಕಾಲ್ಪನಿಕ ಸಂಗತಿಗಳಾಗಿರುವುದರಿಂದ ಇದುವರೆಗೂ ಆಗಿರುವ ಆ ಅಸಂಖ್ಯಾತ ಅಧ್ಯಯನಗಳಿಂದ ಹಿಂದೂಯಿಸಂನ ಅಥವಾ ಭಾರತೀಯ ಜಾತಿವ್ಯವಸ್ಥೆಯ ಸ್ವರೂಪದ ಬಗೆಗೆ ಯಾವುದೇ ಉತ್ತರ ದೊರಕಿಲ್ಲ. ಮುಂದೆ ಸಿಗುವ ಸಾಧ್ಯತೆಯೂ ಇಲ್ಲ’’.

    ಅರ್ಥವಾಯಿತೇ…? ಅರ್ಥವಾಗದಿದ್ದರೆ ತಲೆಕೆಡಿಸಿಕೊಳ್ಳಬೇಡಿ. ಒಟ್ಟಾರೆ ಅವರ ವಾದದ ಸಾರ ಭಾರತೀಯ ಜಾತಿ ವ್ಯವಸ್ಥೆ ಮತ್ತು ಅದಕ್ಕೆ ಮತ್ತೊಂದು ಹೆಸರಾದ ಹಿಂದೂಯಿಸಂ ಸೃಷ್ಟಿಯಾದದ್ದು ಪಾಶ್ಚಿಮಾತ್ಯರಿಂದ! ಅಂದರೆ ಇದನ್ನು ಹೇಗೆ ಅರ್ಥೈಸಬಹುದೆಂದರೆ ಯುರೋಪಿಯನ್ನರು ಭಾರತಕ್ಕೆ ಕಾಲಿಡುತ್ತಲೆ ಹಿಂದೂ ಧರ್ಮ ಸೃಷ್ಟಿಸಿದರು, ಸಾವಿರಾರು ಜಾತಿಗಳನ್ನು ಸೃಷ್ಟಿಸಿ ತಾರತಮ್ಯದ ವಾತಾವರಣ ಉಂಟುಮಾಡಿದರು ಎಂದು! ವಾಸ್ತವ ತಿಳಿದ ಪ್ರತಿಯೊಬ್ಬರಿಗೂ ಅರಿವಿಗೆ ಬರುವುದೇನೆಂದರೆ ಪಾಶ್ಚಿಮಾತ್ಯರು ಅವರು ಅಕ್ಷರ ತಂದರು, ಭಾರತೀಯರ ಎದೆಯಲ್ಲಿ ಅಕ್ಷರ ಬೀಜ ಬಿತ್ತಿದರು ಮತ್ತು ಅಂತಹ ಅಕ್ಷರದ ಮೂಲಕ ಭಾರತೀಯ ಮೇಲುಕೀಳು ವ್ಯವಸ್ಥೆಯನ್ನು ಪುಸ್ತಕ ರೂಪಕ್ಕಿಳಿಸಿದರು, ದಾಖಲೆ ಬಿಟ್ಟುಹೋದರು. ಇಂತಹದ್ದನ್ನು ‘‘ಅವರು ಬಂದು ಇದನ್ನು ಇಲ್ಲಿ ಸೃಷ್ಟಿಸಿದರು’’ ಎಂದರೆ? ಮ್ಯಾಕ್ಸ್ ಮುಲ್ಲರ್ ಏನು ಭಾರತಕ್ಕೆ ಬಂದು ಮನುಸ್ಮತಿ ಬರೆದನೇ? ಹೆಚ್ಚೆಂದರೆ ಅದರ ಅರ್ಥ ಹೀಗೆ ಎಂದು ಹೇಳಿರಬೇಕಷ್ಟೆ. ಹೀಗಿರುವಾಗ ‘ಜಾತಿ ವ್ಯವಸ್ಥೆ’ ಮತ್ತು ‘ಹಿಂದೂಯಿಸಂ’ ಪಾಶ್ಚಿಮಾತ್ಯರ ಸೃಷ್ಟಿ ಎಂದರೆ? ಅದು ಶುದ್ಧ ಮೊಂಡುವಾದ, ಮೂರ್ಖಗೊಳಿಸುವ ವಾದ, ಸಮುದಾಯವನ್ನು ಕನ್‌ಫ್ಯೂಸ್ ಮಾಡಿ ತಮ್ಮ ಬ್ರಾಹ್ಮಣವಾದವನ್ನು ಹಾಗೆ ಜ್ಞಿಠಿಚ್ಚಠಿ ಆಗಿ ಇಟ್ಟುಕೊಳ್ಳುವ ವಾದ ಎಂದು ಖಚಿತವಾಗಿ ಹೇಳಬಹುದು.
    ಇನ್ನು ಅಸ್ಪಶ್ಯತೆ, ಇದರ ಬಗ್ಗೆ ಮೊದಲೇ ಒಂದು ಮಾತು ಹೇಳಿಬಿಡುತ್ತೇನೆ. ಅದೆಂದರೆ ರೋಗಿಯೊಬ್ಬ ತನ್ನ ರೋಗವನ್ನು ಅನುಭವಿಸುವುದಕ್ಕೂ ಬೇರೊಬ್ಬ ಬಂದು ಆತನ ರೋಗವನ್ನು ‘ದೂರದಿಂದ’ ನೋಡಿ ಅದರ ಬಗ್ಗೆ ಬರೆಯುವುದಕ್ಕೂ, ವಿವರಿಸುವುದಕ್ಕೂ, ಸಾರ್ವಜನಿಕರಿಗೆ ಹಾಗೆ ಇಡೀ ಲೋಕಕ್ಕೆ ಹೇಳುವುದಕ್ಕೂ ಭಾರೀ ವ್ಯತ್ಯಾಸವಿರುತ್ತದೆ. ಅಂದಹಾಗೆ ‘ಬೇರೊಬ್ಬರು ಬಂದು ದೂರದಿ ನೋಡಿದಂತೆ ನೋಡಿದ, ಬರೆದ’ ಸದರಿ ಲೇಖಕರುಗಳ ಅಸ್ಪಶ್ಯತೆ ಕುರಿತ ಬರಹ ಹೀಗಿದೆ… ‘ಅಸ್ಪಶ್ಯತೆ ಎಂಬ ಪದದ ಅಡಿ ನಾವು ಗುರುತಿಸುವ ವಿಧವಿಧವಾದ ಕ್ರಿಯೆಗಳನ್ನು ಗಮನಿಸೋಣ. ಇಲ್ಲಿ ಅದರ ಒಂದು ಸಣ್ಣ ಪಟ್ಟಿ ಇದೆ (‘ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?’ ಕೃತಿ. ಪು.ಸಂ.144, 145).

    1.ಬಾವಿ, ಕೆರೆ ಮತ್ತು ನದಿಗಳಂತಹ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸದಂತೆ ನಿಷೇಧ ಹೇರುವುದು

    2. ಹೊಟೇಲ್‌ಗಳು ಮತ್ತು ದೇಗುಲಗಳಂತಹ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶವನ್ನು ನಿಷೇಧಿಸುವುದು

    3.ವಿವಾಹ ಮತ್ತು ಸಂಗಾತಿಗಳ ಆಯ್ಕೆಯ ವಿಷಯದಲ್ಲಿ ಜಾತಿ ಆಧಾರಿತ ಕಟ್ಟಳೆಗಳು ಇರುವುದು

    4.ಮನೆಯೊಳಗೆ ಕೆಲವರನ್ನು ಬಿಟ್ಟುಕೊಳ್ಳದೆ ಇರುವುದು

    5.ಕೆಲವರ ಜೊತೆ ಸಹಭೋಜನ ಮಾಡದಿರುವುದು ಅಥವಾ ಅವರಿಗೆಂದೇ ಪ್ರತ್ಯೇಕವಾದ ಪಾತ್ರೆಗಳಲ್ಲಿ ಬಡಿಸುವುದು

    6.ಕೆಲವರನ್ನು ತರಗತಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳ ಜೊತೆ ಕೂರಿಸದೇ ಇರುವುದು

    7.ಶಿಕ್ಷಣದ ಮೇಲಿನ ನಿರ್ಬಂಧಗಳು: ಉದಾಹರಣೆಗೆ ವೇದಾಭ್ಯಾಸಕ್ಕೆ ಅವಕಾಶ ಕೊಡದೇ ಇರುವುದು

    8. ಆಹಾರ ಮತ್ತು ವಸ್ತ್ರಕ್ಕೆ ಸಂಬಂಧಿಸಿದ ನಿರ್ಬಂಧಗಳು: ಉದಾಹರಣೆಗೆ, ಕೆಳಜಾತಿಯವರಿಗೆ, ನಿರ್ದಿಷ್ಟ ಜಾತಿಯವರ ಎದುರಿಗೆ ಸಿಹಿ ತಿನ್ನಲು ಬಿಡದಿರುವುದು, ಅವರ ಎದುರು ಚಪ್ಪಲಿಗಳನ್ನು ಧರಿಸಲು ಅಥವಾ ಕೊಡೆ ಹಿಡಿದುಕೊಳ್ಳಲು ಬಿಡದಿರುವುದು

    ಭಾರತದಲ್ಲಿ ಈ ರೀತಿಯ ಕ್ರಿಯೆಗಳು ನಿಜವಾಗಿಯೂ ಸಂಭವಿಸುತ್ತವೆಯೋ ಅಥವಾ ಅವು ಕೇವಲ ಕಲ್ಪನೆಗಳೋ ಎಂದು ಯಾರಾದರೂ ಪ್ರಶ್ನಿಸಬಹುದು… ಇಲ್ಲಿ ಪಟ್ಟಿಮಾಡಿದ ಎಲ್ಲಾ ಘಟನೆಗಳನ್ನು ಎಲ್ಲಾ ಸಾಮಾಜಿಕ ಸಂದರ್ಭಗಳಲ್ಲೂ ‘ತಾರತಮ್ಯ’ ಎಂದು ಕರೆಯಲು ಬರುವುದಿಲ್ಲ… ಬೇರೆ ಸಮುದಾಯದವರನ್ನು ಬಲವಂತ ಮಾಡುವುದರ ಬದಲು ಇತರರ ಮೇಲಿನ ನಿಷೇಧವನ್ನು ಹೇರುವ ಸಮುದಾಯವೇ ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಲ್ಲ!

    ಕ್ಷಮಿಸಿ, ಮಾನವತೆಯ ಹೃದಯವುಳ್ಳವರ ಬರಹಗಳು ಖಂಡಿತ ಇದಾಗಿರುವುದಿಲ್ಲ. ಹಾಗೆಯೇ ಇವರು ಪಟ್ಟಿಮಾಡಿರುವ ಎಲ್ಲಾ ವಿಚಾರ ಅಂಶಗಳು ಅಂಬೇಡ್ಕರರು ಬರೆದಿರುವಂತಹ ವಿಚಾರಗಳು, ದತ್ತಾಂಶಗಳು, ದುಂಡು ಮೇಜಿನ ಸಭೆಯಲ್ಲಿ ಅವರು ಬ್ರಿಟಿಷರಿಗೆ ಸಲ್ಲಿಸಿದ ಮನವಿಯಲ್ಲಿನ ಅಂಶಗಳು! ದುರಂತವೆಂದರೆ ಸದರಿ ‘ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?’ ಕೃತಿಯ ಲೇಖಕರುಗಳು ಅಂಬೇಡ್ಕರರ ಪುಸ್ತಕದ ಹೆಸರನ್ನು ಪ್ರಸ್ತಾಪಿಸುವುದೇ ಇಲ್ಲ! ಅದರಿಂದಲೇ ತಿಳಿಯುತ್ತದೆ ಅವರ ಕೋಮುವಾದಿ ಮನಸ್ಥಿತಿ ಎಂತಹದ್ದು ಎಂದು. ಅಂದಹಾಗೆ ‘ಕೆಲವರ ಜೊತೆ ಸಹಭೋಜನ ಮಾಡದಿರುವುದು ಅಥವಾ ಅವರಿಗೆಂದೇ ಪ್ರತ್ಯೇಕವಾದ ಪಾತ್ರೆಗಳಲ್ಲಿ ಬಡಿಸುವುದು’ ಈ ಕ್ರಿಯೆ ಆ ಲೇಖಕರುಗಳು ಹೇಳುವಂತೆ ಭಾರತದಲ್ಲಿ ನಿಜವಾಗಿಯೂ ಸಂಭವಿಸುತ್ತಿಲ್ಲವೆ? ಅಥವಾ ಇವೆಲ್ಲ ಕಲ್ಪನೆಗಳೆ? ಹಾಗೆಯೇ ‘ವಿವಾಹ ಮತ್ತು ಸಂಗಾತಿಗಳ ಆಯ್ಕೆಯ ವಿಷಯದಲ್ಲಿ ಜಾತಿ ಆಧಾರಿತ ಕಟ್ಟಳೆಗಳು ಇರುವುದು’ ಇದೂ ಕೂಡ ಕಲ್ಪನೆಯೇ? ಅಥವಾ ಸಂಭವಿಸುತ್ತಿಲ್ಲವೆ?! ಖಂಡಿತ, ಇಂತಹ ವಿಚಾರಗಳನ್ನು ಬರೀ ಮೂರ್ಖರದ್ದು ಎಂದರೆ ತಪ್ಪಾಗುತ್ತದೆ. ಬದಲಿಗೆ ಮಾನವೀಯತೆ ರಹಿತರದ್ದು ಎನ್ನುವುದು ಸರಿ.”

    [ಲೇ: ರಘೋತ್ತಮ ಹೊ. ಬ., ವಾರ್ತಾಭಾರತಿ]

    ಉತ್ತರ
  15. ಅರುಲ್ ನಾದನ್
    ಜನ 9 2015

    ಮತ್ತೆ ಅದೇ ರಾಗ. ವಾದ ಮಾಡುವ ಬದಲು ಬೈಗುಳಗಳು.

    ಎರಡು ಮಾತು: “ಹಾಗೆಯೇ ಇವರು ಪಟ್ಟಿಮಾಡಿರುವ ಎಲ್ಲಾ ವಿಚಾರ ಅಂಶಗಳು ಅಂಬೇಡ್ಕರರು ಬರೆದಿರುವಂತಹ ವಿಚಾರಗಳು”. ಖಂಡಿತ ಅಲ್ಲ. ವಸಾಹತು ಬರಹಗಾರರು ಹೇಳಿದ್ದನ್ನೇ ಮುಂದೆ ಬರೆದಿದ್ದು. ಸಾಹಿತ್ಯ ಓದಿ ಆನಂತರ ಲೇಖನ ಬರೆಯಬೇಕು.

    “ಭಾರತದಲ್ಲಿ ಈ ರೀತಿಯ ಕ್ರಿಯೆಗಳು ನಿಜವಾಗಿಯೂ ಸಂಭವಿಸುತ್ತವೆಯೋ ಅಥವಾ ಅವು ಕೇವಲ ಕಲ್ಪನೆಗಳೋ ಎಂದು ಯಾರಾದರೂ ಪ್ರಶ್ನಿಸಬಹುದು… ಇಲ್ಲಿ ಪಟ್ಟಿಮಾಡಿದ ಎಲ್ಲಾ ಘಟನೆಗಳನ್ನು ಎಲ್ಲಾ ಸಾಮಾಜಿಕ ಸಂದರ್ಭಗಳಲ್ಲೂ ‘ತಾರತಮ್ಯ’ ಎಂದು ಕರೆಯಲು ಬರುವುದಿಲ್ಲ… ಬೇರೆ ಸಮುದಾಯದವರನ್ನು ಬಲವಂತ ಮಾಡುವುದರ ಬದಲು ಇತರರ ಮೇಲಿನ ನಿಷೇಧವನ್ನು ಹೇರುವ ಸಮುದಾಯವೇ ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಲ್ಲ!” ಇಲ್ಲಿ ಬೇಕೆಂದೇ ಹಲವು ವಾಕ್ಯಗಳನ್ನು ಬಿಟ್ಟು ತಪ್ಪು ಅರ್ಥ ಬರುವಂತೆ ಮಾಡಲಾಗಿದೆ. ಬಿಟ್ಟುಹೋದ ಒಂದು ವಾಕ್ಯಸರಣಿ ನೋಡಿ: “ಸಾರ್ವಜನಿಕ ಜಲಾಶಯಗಳ ಬಳಕೆಯ ಮೇಲೆ ವಿಧಿಸಲಾಗುವ ನಿಷೇಧಗಳು ಸಾಮಾನ್ಯವಾಗಿ ಜಾತಿಯ ಆಚರಣೆಗಳಿಗೆ ಸಂಬಂಧಪಟ್ಟ್ಟಿದ್ದು, ಆದ್ದರಿಂದ ಅದರಲ್ಲಿ ಆಕ್ಷೇಪ ಮಾಡುವಂಥದ್ದು ಏನೂ ಇಲ್ಲ ಎಂದು ಯಾರಾದರೂ ವಾದಿಸಬಹುದು. ಅದು ಒಂದು ಆಚರಣೆಗಳಿಗೆ ಸಂಬಂಧಿಸಿದ ವಿಷಯವಾದರೂ, ವಾಸ್ತವವಾಗಿ ಅದಕ್ಕೆ ಪರಿಹಾರ ಹೀಗೂ ಆಗಬಹುದಲ್ಲ: ಬೇರೆ ಸಮುದಾಯದವರನ್ನು ಬಲವಂತ ಮಾಡುವುದರ ಬದಲು ಇತರರ ಮೇಲೆ ನಿಷೇಧವನ್ನು ಹೇರುವ ಸಮುದಾಯವೇ ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಲ್ಲ!”

    ಅಂದರೆ “ಬೇರೆ ಸಮುದಾಯದವರನ್ನು[ದಲಿತರನ್ನು] ಬಲವಂತ ಮಾಡುವುದರ ಬದಲು ಇತರರ ಮೇಲೆ ನಿಷೇಧವನ್ನು ಹೇರುವ ಸಮುದಾಯವೇ [ಅಂದರೆ ‘ಮೇಲು ಜಾತಿಯವರೇ] ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಲ್ಲ!” ಈ ವಾದದಲ್ಲಿ ತಪ್ಪೇನು? ಕನ್ನಡ ಅರ್ಥವಾಗದ ಮೇಲೆ ಪುಸ್ತಕ ಓದಲು ಹೋಗಬಾರದು, ರಘೋತ್ತಮರವರೆ. ಮೊದಲು ಕನ್ನಡ ಕಲಿಯಿರಿ.

    ಉತ್ತರ
  16. Nagshetty Shetkar
    ಜನ 9 2015

    Raghottama is good spirited Dalit activist. Ideologically opposed to casteism. Doing good work writing fire brand articles.

    ಉತ್ತರ
  17. Praveen Konandur
    ಜನ 9 2015

    ಆಯಿತು ಬಿಡಿ…ರಘೋತ್ತಮನಿಗೂ ಓದುವ ಸಮಸ್ಯೆ ಇದೆ ಎಂಬುದು ನಮಗೆ ಎಂದೋ ತಿಳಿದಿದೆ.. ಓದಲು ಮತ್ತು ವಾದವನ್ನು ಗ್ರಹಿಸಲು ಅಸಮರ್ಥರಾಗಿದ್ದಾರೆ…. ಮೂಲಭೂತವಾಗಿ ಪುಸ್ತಕದ ವಾದವೇ ಅರ್ಥವಾಗಿಲ್ಲ… ಐರೋಪ್ಯರು ಜಾತಿವ್ಯವಸ್ಥೆಯನ್ನು ಸೃಷ್ಟಿಸಿದರು ಎಂದರೆ ಅಲ್ಲಿಂದ ವಿಮಾನ, ಹಡಗಿನಲ್ಲಿ ತುಂಬಿಕೊಂಡು ಬಂದರು ಎಂದರ್ಥವಲ್ಲ…

    ಉತ್ತರ
  18. raveendra
    ಜನ 11 2015

    “ಬೇರೆ ಸಮುದಾಯದವರನ್ನು[ದಲಿತರನ್ನು] ಬಲವಂತ ಮಾಡುವುದರ ಬದಲು ಇತರರ ಮೇಲೆ ನಿಷೇಧವನ್ನು ಹೇರುವ ಸಮುದಾಯವೇ [ಅಂದರೆ ‘ಮೇಲು ಜಾತಿಯವರೇ] ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಲ್ಲ!”

    ಇದೂ ಸಹ ಅಸ್ಪೃಶ್ಯತೆಯ ಆಚರಣೆ ಮತ್ತು ಅದನ್ನು ಬೆಂಬಲಿಸುವ ನೀವೂ ಸಹ ಅಸ್ಪೃಶ್ಯತೆಯ ಪರೋಕ್ಷ ಬೆಂಬಲಿಗರು ಎಂಬುದು ರಘೋತ್ತಮನ ವಾದ.

    ಉತ್ತರ
  19. ಅರುಲ್ ನಾದನ್
    ಜನ 11 2015

    ಈ ತರ್ಕವನ್ನು ಹಿಡಿದುಕೊಂಡು ಹೊರಟರೆ, ಜಗತ್ತಿನಲ್ಲಿ ಎಲ್ಲವೂ ಅಸ್ಪೃಶ್ಯತೆಯ ಆಚರಣೆಯೇ ಅಥವಾ ಅದಕ್ಕೆ ಸೂಚಿಸುವ ಪರೋಕ್ಷ ಬೆಂಬಲ. ಉದಾ. ನಿನ್ನ ಮನೆ ಬೇರೆ ನನ್ನ ಮನೆ ಬೇರೆ ಎನ್ನುವುದು; ನಿನ್ನ ಆಟಿಕೆಗಳು ಬೇರೆ ನನ್ನದು ಬೇರೆ ಎನ್ನುವುದು; ನಿನಗೆ ಮೀಸಲಾತಿ ಬೇಡ ನನಗೆ ಇರಲಿ ಎನ್ನುವುದು ಇತ್ಯಾದಿ.

    ಪುಸ್ತಕವೊಂದನ್ನು ಓದಿ ಅರ್ಥಮಾಡಿಕೋಳ್ಳುವ ಮೊದಲೇ ಅದನ್ನು ದೂಷಿಸುವ ಒತ್ತಡಕ್ಕೆ ಬಿದ್ದಾಗ, ನಾವು ಏನನ್ನು ಸಾಧಿಸ ಹೊರಟಿದ್ದೇವೆ ಎಂಬುದೇ ಮರೆತು ಹೋಗುತ್ತದೆ. ಆಗ ಇಂಥ ವಾದಗಳು ಹುಟ್ಟುತ್ತವೆ.

    “[‘ಮೇಲು ಜಾತಿಯವರೇ] ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಲ್ಲ” ಎಂದು ಮೇಲು ಜಾತಿಯವರನ್ನು ದೂರಿದರೂ ತಪ್ಪು. ಇನ್ನೇನೋ ಕಾರಣಕ್ಕೆ ಕೆಳ ಜಾತಿಯವರನ್ನು ದೂರಿದರೂ ತಪ್ಪು. ಹಾಗಾದರೆ ಉಳಿಯುವ ದಾರಿಗಳು ಏನು? ಜಾತಿಯ ಕುರಿತು. ಸಮಾಜದ ಕುರಿತು ಚಿಂತಿಸುವುದನ್ನು ದಲಿತ ಚಿಂತಕರಿಗೂ ಅವರ ಹಿತೈಷಿಗಳಾದ ಸೆಕ್ಯುಲರ್ ಚಿಂತಕರಿಗೂ ಗುತ್ತಿಗೆ ಕೊಟ್ಟು, ಉಳಿದವರು ಕುಳಿತು ಭಜನೆ ಮಾಡಬೇಕು.

    ಉತ್ತರ
  20. ಫೆಬ್ರ 3 2015

    Raghotham Hobaರವರು ಈಗ ತಾನೇ ತಮ್ಮ ಈ ಲೇಖನವನ್ನು ಫೇಸ್ಬುಕ್ ನಲ್ಲಿ ಹಾಕಿ ನನ್ನನ್ನು ಟ್ಯಾಗ್ ಮಾಡಿದ್ದರು. ಅಲ್ಲಿ ನಾನು ಈ ಲೇಖನದ ಕೊಂಡಿ ಹಾಕಿ, ಅರುಲ್ ನಾದನ್ ಅವರ ವಿಚಾರ ನನ್ನದೂ ಎಂದಿದ್ದೆ. ಆ ಮೆಸೇಜ್ ಆನ್ನೇ ಕಿತ್ತು ಹಾಕಿ ತಮ್ಮ ಔದಾರ್ಯತೆಯನ್ನು, ಭಯವನ್ನೂ ವ್ಯಕ್ತ ಪಡಿಸಿದ್ದಾರೆ. ಅವರಿಗೆ ಧನ್ಯವಾದಗಳೂ.

    ಉತ್ತರ
    • Nagshetty Shetkar
      ಫೆಬ್ರ 4 2015

      ಹ ಹ್ಹ! ಭಯ ಪಡಬೇಕಾದವರು ನೀವು – ಗ್ರಹಚಾರ ಸರಿಯಿಲ್ಲದೆ ಒದ್ದಾಡುತ್ತಿದ್ದೀರಿ, ರಘೋತ್ತಮನೇಕೆ ನಿಮ್ಮ ಪ್ರತಿಕ್ರಿಯೆಗೆ ಭಯ ಪಡುತ್ತಾನೆ?!! ಹೀ ಈಸ್ ಫಿಯರ್ಲೆಸ್.

      ಉತ್ತರ
      • Naani
        ಫೆಬ್ರ 4 2015

        ನಿಮ್ಮ ಹೋಬ ಎಂತ ಪುಕ್ಕಲ ಎಂದರೆ ನಿನ್ನೆ ಒಂದೇ ದಿನ ಆ ಬರಹಕ್ಕೆ ಕೇಳಿದ ಪ್ರಶ್ನೆಗಳನ್ನು ಮೂರು ಬಾರಿ ಡಿಲಿಟ್ ಮಾಡಿದೆ ಪಾರ್ಟಿ! ಉತ್ತರಿಸಕ್ಕಾಗದಿದ್ರೆ ಹೋಗಲಿ ಕಮೆಂಟುಗಳನ್ನು ಹಾಗೆಯೇ ಬಿಟ್ಟು ತನ್ನ ಶೂರತನ ಮೆರೀಬಹುದಿತ್ತಲ್ಲ! ಹೇಡಿತನದ ಪರಮಾವಧಿ! ಪರಗತಿಪರರಿಗೆ ಅಸ್ತಿತ್ವಕ್ಕಾಗಿನ ಪರದಾಟ ನೋಡಿ ಅಯ್ಯೋ ಅನ್ಸಿತ್ತಿದೆ!!!!

        ಉತ್ತರ

Leave a reply to Vikas Nayak ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments