ವಿಷಯದ ವಿವರಗಳಿಗೆ ದಾಟಿರಿ

ಜೂನ್ 17, 2013

79

ಬೌದ್ದರನ್ನು ಓಡಿಸಲು ಶಂಕರರೇನು ಅರಸರಾಗಿದ್ದರೇ?

‍ನಿಲುಮೆ ಮೂಲಕ

– ಸಂತೋಶ್ ತಮ್ಮಯ್ಯ

Shankaraacharya1ಕೆಲವರ ಮನಸ್ಸೇ ವಿಚಿತ್ರವಾದುದು. ಅವರದ್ದು ವಿನಾಕಾರಣ ನಿರಾಕರಣವಾದ. ಇದ್ದುದನ್ನು ಇಲ್ಲವೆನ್ನುವುದು, ಇಲ್ಲದ್ದನ್ನು  ಇದೆ ಎನ್ನುವುದು , ವಿನಾಕಾರಣ ಖಂಡಿಸುವುದು, ವಿಪರೀತವನ್ನು ಮಂಡಿಸುವುದು, ವಿಚಿತ್ರ ಸ್ವಭಾವಗಳು. ಉದಾಹರಣೆಗೆ ಎಲ್ಲರಿಗೂ ಇಷ್ಟವಾಗುವ ಸಿನೆಮಾವನ್ನು ಕೆಲವರು ವಿನಾಕಾರಣ ಬಯ್ಯುತ್ತಾರಲ್ಲಾ ಅಂಥವರು.  ಆ ಮನಸ್ಸನ್ನು  ಸಿನಿಕವೆನ್ನಿ, ಪೂರ್ವಗ್ರಹವೆನ್ನಿ, ಅಬದ್ಧವೆನ್ನಿ, ಅಸ್ವಸ್ಥವೆನ್ನಿ ಎಲ್ಲವೂ ಸರಿಯೇ. ನಮ್ಮ ಸಾಹಿತ್ಯಲೋಕದಲ್ಲಿ ಅಂಥವರನೇಕರು ಸಿಗುತ್ತಾರೆ. ಅವರೆಲ್ಲರೂ   ಸಂದರ್ಭ ಸಿಕ್ಕಾಗಲೆಲ್ಲಾ ಹೀಗೆ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಭೈರಪ್ಪನವರು ಬರೆದಾಗ, ನ್ಯಾಯನೀತಿಯನ್ನು ಇನ್ಯಾರೋ ಎತ್ತಿ ಹಿಡಿದಾಗ, ಚಿದಾನಂದ ಮೂರ್ತಿಗಳು ಏನನ್ನೋ ಶೋಧಿಸಿದಾಗಲೆಲ್ಲಾ   ಅದಕ್ಕೆ ಸಂಪೂರ್ಣ ನೇತ್ಯಾತ್ಮಕವಾದುದನ್ನು ಹಿಡಿದು ಹೇಳಿಕೆಗಳನ್ನು ನೀಡಲಾರಂಭಿಸುತ್ತಾರೆ. ಅದಕ್ಕೆ ಕೆಲವು ಪತ್ರಕರ್ತರು ಕನ್ನಡದ ಮನಸ್ಸು ಎಂಬ ಹೆಸರು ಕೊಟ್ಟುಬಿಡುತ್ತಾರೆ. ಇಂಥ ಸತ್ಯದ ಆವರಣವನ್ನೇ ಕನ್ನಡದ ಮನಸ್ಸು ಎನ್ನುವುದಾದರೆ ಅದು ಕನ್ನಡಕ್ಕೆ ಮುಸುಕಿರುವ ಆವರಣ ಎನ್ನದೆ  ವಿಧಿ ಇಲ್ಲ. ಇಂಥವರ ಗುಂಪಿಗೆ ಈಗ ಮತ್ತೊಬ್ಬರು ಸೇರಿದ್ದಾರೆ.

ಯಾರೋ ಕೇಶವ ಮೂರ್ತಿಯಂತೆ. ಇದುವರೆಗೆ ಅವರ ಮುಖ ನೋಡಿದವರಿಲ್ಲ. ಸಾಹಿತ್ಯ ಓದಿದವರಿಲಿಲ್ಲ. ಈ ಮಧ್ಯೆ ಕಾಂಗ್ರೆಸ್ ಆಡಳಿತಕ್ಕೆ ಬಂತು. ಗುರುತಿಸಿಕೊಳ್ಳುವುದು ಲಾಭದ ದೃಷ್ಟಿಯಿಂದ ಉತ್ತಮ ಎನಿಸಿತ್ತೋ ಏನೋ ಹೇಳಿಕೆಯೊಂದನ್ನು ಕೊಟ್ಟರು.”ನರೇಂದ್ರ  ಮೋದಿಗಿಂತ ಶಂಕರಾಚಾರ್ಯರು ಹೆಚ್ಚು ಕ್ರೂರಿ” ಎಂದರು. ನರೇಂದ್ರಮೋದಿಯವರನ್ನು ನವನವೀನವಾಗಿ ಟೀಕಿಸುವ ಜನರಿಗೆ ಒಮ್ಮೆ ಈ ಮಾದರಿಯ ಟೀಕೆ ಸ್ವಜನಶೀಲವಾಗಿ ಕಂಡಿರಬೇಕು. ಏಕೆಂದರೆ ಅಲ್ಲಿ ಮೋದಿಯೂ ಇದ್ದರೂ, ಶಂಕರಾಚಾರ್ಯರೂ ಇದ್ದರು. ಇತಿಹಾಸವನ್ನೂ ಬಯ್ದಂತಾಯಿತು. ವರ್ತಮಾನವನ್ನೂ ತೆಗಳಿದಂತಾಯಿತು. ವೋಟ್ ಬ್ಯಾಂಕ್‌ ರಾಜಕಾರಣಕ್ಕಂತೂ ಇಂಥ ಹೇಳಿಕೆಗಳ ಆವಶ್ಯಕತೆ ತುಂಬಾ ಇತ್ತು. ಖಂಡಿಸುವ ಈ ಹೇಳಿಕೆಗಳಿಗಾಗಿ ಅವರು ಸಾಕಷ್ಟು  ಶ್ರಮವನ್ನೇ ಪಟ್ಟಿರಬೇಕು.
ಬಹುಶಃ ಕೇಶವಮೂರ್ತಿಯವರಿಗೆ ಈ ಸಂಗತಿಗಳು ತಿಳಿದಿರಲಿಕ್ಕಿಲ್ಲ.

೧೯೮೪ರ ಸಿಕ್ಖ್ ನರಮೇಧದಲ್ಲಿ ಸತ್ತವರು ೨೭೩೩ ಎಂಬುದು ಸರಕಾರದ ದಾಖಲೆ. ಆದರೆ ದಂಗೆಯಲ್ಲಿ  ೨೫,೦೦೦ಕ್ಕೂ ಹೆಚ್ಚು ಜನರು ಸತ್ತರು ಮತ್ತು ಗಾಯಗೊಂಡಿದ್ದರು. ನೂರಾರು ಸಿಕ್ಖ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಸುಮಾರು ೩ ಲಕ್ಷ ಸಿಕ್ಖರು ಮನೆಮಾರುಗಳನ್ನು ಬಿಟ್ಟು ಓಡಿ ಹೋದರು ಮತ್ತು ತಲೆ ಮರೆಸಿಕೊಂಡರು. ನೂರಾರು ಗುರುದ್ವಾರಗಳನ್ನು ಕೆಡವಲಾಯಿತು ಮತ್ತು ಧರ್ಮಗ್ರಂಥವನ್ನು ಸುಡಲಾಯಿತು.  ದೇಶ ಕಾಯುತ್ತಿದ್ದ ೩೦೦ ಜನ ಸಿಕ್ಖ್ ಯೋಧರನ್ನ್ನು  ಕೊಲ್ಲಲಾಯಿತು. ಬೊಕಾರೋ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ೧೨೦ ಜನ  ಸಿಕ್ಖರನ್ನು  ಸಾಮೂಹಿಕವಾಗಿ  ದಹಿಸಲಾಯಿತು. ಖಾನ್‌ಪುರದಲ್ಲಿ ೧೩ ವರ್ಷದ ಸಿಕ್ಖ್ ಬಾಲಕನನ್ನು  ಗ್ಯಾಸ್ ಸ್ಟವ್‌ನಲ್ಲೇ ಕೋಳಿ ಸುಡುವಂತೆ ಸುಡಲಾಯಿತು. ಅಗರ್ತಲಾದಲ್ಲಿ ವಾಸಿಸುತ್ತಿದ್ದ ೩೦ ಸಿಕ್ಖ್ ಕುಟುಂಬಗಳು ಜೀವರಕ್ಷಣೆಗಾಗಿ ಪೊಲೀಸ್ ಠಾಣೆಯ  ಮೆಟ್ಟಲೇರಿದರು. ಪೊಲೀಸರೇ ಅವರೆಲ್ಲರನ್ನು ಸಜೀವವಾಗಿ ಸುಟ್ಟರು. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ೧೨ ಜನ ಸಿಕ್ಖರನ್ನು ರೈಲು ನಿಲ್ದಾಣದ  ಪ್ಲಾಟ್‌ಫಾರ್ಮ್‌ನಲ್ಲೇ ನೇಣು ಹಾಕಿ ಕೊಲ್ಲಲಾಯಿತು.

ಇದೆಲ್ಲವನ್ನು ಶಾಂತಿಯ ದ್ಯೋತಕ  ಎನ್ನಲಾಗುತ್ತದೆಯೇ? ಈ ಎಲ್ಲವನ್ನೂ ಕಾಂಗ್ರೆಸ್‌ನ ಜವಾಬ್ದಾರಿಯುತ ಹುದ್ದೆ ಹೊಂದಿದ್ದವರೇ ನಿಂತು ಮಾಡಿಸಿದರು ಎನ್ನುವುದು ದೇಶಕ್ಕೇ ಗೊತ್ತಿದೆ. ಆದರೆ ಸಾಹಿತಿಗಳಿಗೆ ಯಾವತ್ತೂ ಶಾಂತಿಗೆ ಗಾಂಧಿ, ಕ್ರೌರ್ಯಕ್ಕೆ ಮೋದಿಯೇ ರೂಪಕ. ಈ ದೇಶದಲ್ಲಿ ಸಿಕ್ಖ್ ನರಮೇಧವೊಂದನ್ನೇ ನೋಡಿದರೂ ಜನ ತಮ್ಮ ಜೀವಮಾನದಲ್ಲಿ ಕಾಂಗ್ರೆಸ್‌ಗೆ ವೋಟು ಹಾಕಲಾರರು. ಆದರೆ ಸಂವೇದನಾಶೀಲರೆನಿಸಿಕೊಳ್ಳುವ ಸಾಹಿತಿಗಳಿಗೇನಾಗಿದೆ? ದಂಗೆಯನ್ನು ಸಮರ್ಥವಾಗಿ ನಿಗ್ರಹಿಸಿದ ಮೋದಿಯೆಲ್ಲಿ? ಸಿಕ್ಖ್ ನರಮೇಧ ಮಾಡಿದ ಜಗದೀಶ ಟೈಟ್ಲರ್, ಸಜ್ಜನ್ ಕುಮಾರ್ ಇತ್ಯಾದಿಗಳೆಲ್ಲಿ?

ಆದರೂ ಮೋದಿಯನ್ನು ತೆಗಳುವ ಇಂಥವರು ಸಾಕಷ್ಟು ಸಿಗುತ್ತಾರೆ. ತುಂಬಾ ಜನ ಸಾಕಷ್ಟು ತೆಗಳಿ ಆಗಿದೆ. ಹಾಗೆಯೇ ಶಂಕರಾಚಾರ್ಯರನ್ನು ತುಂಬಾ ಜನ ತೆಗಳಿ ಕಾಲಗರ್ಭಕ್ಕೆ ಸೇರಿಹೋಗಿದ್ದಾರೆ. ಅಂಥವರ ಬುದ್ಧಿಯ ಪಳೆಯುಳಿಕೆಗಳು ಇಂದೂ ಇದ್ದಾವೆ ಎಂಬುದಕ್ಕೆ ಇಂಥ ಕೆಲವು ಸಾಹಿತಿಗಳು ಸಾಕ್ಷಿಗಳು.
ಶಂಕರ ಭಗವತ್ಪಾದ.
ಬ್ರಾಹ್ಮಣೇತರರಿಗೂ ಕೂಡ ಆ ಹೆಸರು ಸಮ್ಮೋಹಕ. ಯಾರೇ ಆದರೂ ಶಂಕರಾಚಾರ್ಯರ ಭಜಗೋವಿಂದಂ ಅನ್ನು ಓದಿದರೆ ಒಂದು ಕ್ಷಣದ ಮಟ್ಟಿಗಾದರೂ ವೈರಾಗ್ಯದ ಸುಳಿ  ಸುತ್ತಿ ಹೋಗದಿರದು. ಅವರ ಸೌಂದರ್ಯಲಹರಿಯಾಗಿರಬಹುದು, ಶಿವ-ಶಕ್ತಿಯರ ಇನ್ನಿತರ ವರ್ಣನೆಗಳಾಗಿರಬಹುದು, ಸ್ತುತಿಗಳಾಗಿರಬಹುದು. ಭಕ್ತಿಯೂ ಕೂಡ ಪರಿಶೀಲಿಸತಕ್ಕ ಸಂಗತಿ ಎಂಬ ಭಾವನೆಯನ್ನು ಮೂಡಿಸದಿರದು. ವೀಣಾಪಾಣಿ ಶಾರದೆಯ ವರ್ಣನೆಯನ್ನು ಕೇಳುತ್ತಿದ್ದರೆ ಅಕ್ಷರವೂ ದೇವಿಯೇ ಎಂದು ಯಾರಿಗೂ ಎನಿಸದಿರದು. ಶಂಕರರ ವಿದ್ವತ್‌ನ ವ್ಯಾಪ್ತಿ  ಎಷ್ಟಿದೆಯೆಂದರೆ ಭಗವದ್ ಗೀತೆಯಷ್ಟೇ ಶಂಕರರ ಗೀತಾಭಾಷ್ಪ ಕೂಡ ಖ್ಯಾತಿ ಪಡೆದಿದೆ. ಗೀತೆಯ ಬಗೆಗಿನ ಹಲವು ಮಹತ್ತ್ವದ ಭಾಷ್ಯಗಳಲ್ಲಿ ಶಂಕರ ಭಾಷ್ಯ ಎದ್ದು ಕಾಣುವಂಥದ್ದು. ಇಷ್ಟೆಲ್ಲಾ ಆದರೂ  ದೇಶದ ನಾಲ್ಕು ಮೂಲೆಗಳಲ್ಲಿ ಆತ ಪೀಠ ಸ್ಥಾಪಿಸಿದ ಎನ್ನುವ ಕಾರಣಕ್ಕೇಂದೋ ಅಥವಾ ಸಣ್ಣ ವಯಸ್ಸಿನಲ್ಲೇ ಮಾಡಬೇಕಾದುದನ್ನು ಮಾಡಿ ಮುಗಿಸಿ ಹೊರಟುಹೋದನೆಂದೋ ಅಥವಾ ನಮ್ಮ ದಕ್ಷಿಣದವನೆಂದೋ ಅಥವಾ ಅದ್ವೈತವೆಂಬ ಸೆಳೆತದಿಂದಲೋ ಶಂಕರ ಇಷ್ಟವಾಗಬಹುದು. ಅಥವಾ ಭಕ್ತಿಯ ಅರ್ಚನೆಯ ವಿನೂತನ ವಿಧಾನದ ಕಾರಣಕ್ಕೆ ಶಂಕರತತ್ವ ಇಷ್ಟವಾಗಬಹುದು. ಅವೆಲ್ಲದರ ಜೊತೆಗೇ ಪಾಶ್ಚಾತ್ಯ ವಿದ್ವಾಂಸರೆನ್ನುವ `ಪ್ರಚ್ಛನ್ನ ಬೌದ್ಧ’ ಎಂಬ ಬಿರುದಿನಿಂದಲೂ ಶಂಕರರು ಇಷ್ಟವಾಗುತ್ತಾರೆ.ಅದರ ನಡುವೆ ಅಂಥ ಶಂಕರಾಚಾರ್ಯರನ್ನು ಬುದ್ಧವಿರೋಧಿ ಎಂದು ಜರೆಯುವವರು ಇಂದೂ ಅಲ್ಲಲ್ಲಿ ಸಿಗುತ್ತಾರೆ.
ಯಥಾವತ್ತು ಶಂಕರಾಚಾರ್ಯರ ವಿಷಯದಲ್ಲೂ ವಿನಾಕಾರಣ ನಿರಾಕರಣವಾದ. ಎಲ್ಲರಿಗೂ ಇಷ್ಟವಾದ ಸಿನಿಮಾ ಕೆಲವರಿಗೆ ಇಷ್ಟವಾಗದ ಅಸ್ವಸ್ಥತನ. ಶಂಕರಾಚಾರ್ಯರನ್ನು ತಾತ್ವಿಕವಾಗಿ ವಿರೋಧಿಸಲು ಕಾರಣಗಳೂ ಸಿಗುತ್ತವೆ. ಧರ್ಮಶಾಸ್ತ್ರಗಳೆಂಬ ಸ್ಮೃತಿಯಲ್ಲಿ ಕಾಣುವ “ವೇದಾಧಿಕಾರ ಇಲ್ಲದಿರುವವರು ಅದರ  ಅಧ್ಯಯನ ಮಾಡಿದರೆ (ಶ್ರವಣ ಮತ್ತು ಮನನ) ಆತನ ಕಿವಿಗೆ ಕಾದ ಸೀಸವನ್ನು ಹಾಕಬೇಕು” ಎಂಬ ಉಲ್ಲೇಖವನ್ನು ಶಂಕರಾಚಾರ್ಯರು ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಉಲ್ಲೇಖಿಸಿದ್ದಾರೆ.  ಆದರೆ ಅದು ಶಂಕರರಿಗೆ  ಸಮ್ಮತವೋ, ಅಸಮ್ಮತವೋ ಎಂಬುದು  ಸ್ಪಷ್ಟವಾಗಿಲ್ಲ. ಒಂದು ವೇಳೆ ಶಂಕರರಿಗೆ ಅದು ಸಮ್ಮತವಾಗಿದ್ದರೆ ಅದು ಖಂಡನಾರ್ಹವೇ ಆಗಿದೆ. ಆದರೆ ಶಂಕರ ವಿರೋಧಿಗಳು ಯಾರೂ ಈ ವಿಷಯವನ್ನು ಅಧ್ಯಯನ ಮಾಡಿಲ್ಲ. ಈ ಮೂಲಕ ಖಂಡಿಸಲು ತೊಡಗಿಲ್ಲ.  ಅದು ಅವರ ಕೊರತೆಯೇ ಹೊರತು ಶಂಕರರ ತಪ್ಪಲ್ಲ. ಹಾಗಾಗಿ ಆ ಕೊರತೆಯನ್ನು ಮರೆಮಾಚಲು ಬೌದ್ಧ / ಶಂಕರ ಎಂಬ ಆಲಾಪದಲ್ಲಿ ಎಲ್ಲರೂ ತೊಡಗುತ್ತಾರೆ. ಇಷ್ಟೆಲ್ಲಾ ಆದರೂ, ಒಂದು ವೇಳೆ ಶಂಕರರಿಗೆ ಅದು ಸಮ್ಮತವಿದೆ ಎಂದು ನಾವಂದುಕೊಂಡರೂ ಅವರನ್ನು ಕ್ರೂರಿ ಎನ್ನಲಾಗುವುದಿಲ್ಲ. ಹೆಚ್ಚೆಂದರೆ “ವಿವೇಕಾ ಚೂಡಾಮಣಿ” ಯನ್ನು ಬರೆದ ಶಂಕರರು ಇದೊಂದನ್ನು ಉಲ್ಲೇಖ ಮಾಡಬಾರದಿತ್ತು ಎಂದಷ್ಟೇ ಅನಿಸುತ್ತದೆ.

ಅದ್ಯಾರೋ ಕೇಶವಮೂರ್ತಿಗೆ ಇವೆಲ್ಲಾ ಅನಿಸುವುದಿಲ್ಲವೇ? ಅಷ್ಟಕ್ಕೂ ಅವರ ಟೀಕೆಯೇನೂ ಹೊಸದಲ್ಲ. ಅದು ಹಳೇ ಮಧ್ಯ . ಹೊಸ ಬಾಟಲು ಅಷ್ಟೆ. ಬೌದ್ಧರನ್ನು ದೇಶಬಿಟ್ಟೇ ಓಡಿಸಿದರು. ರಕ್ತಪಾತ ಮಾಡಿದರು. ವೈದಿಕಶಾಹಿಯ ಮೂಲ ಪ್ರೇರಕ ಎಂದೆಲ್ಲಾ ಶಂಕರರನ್ನು ತೆಗಳುವವರು ಅನಾದಿಯಿಂದಲೂ ಇದ್ದಾರೆ. ಇದೆಲ್ಲಾ ಹುಚ್ಚು ಆರ್ಭಟಗಳು. ಬೌದ್ಧರನ್ನು  ದೇಶದಿಂದ ಓಡಿಸಲು ಈ ದೇಶವೇನು ಶಂಕರಾಚಾರ್ಯರದ್ದಾಗಿತ್ತೇ? ಅವರೇನು ರಾಜರಾಗಿದ್ದರೇ? ಭಿಕ್ಷೆ ಬೇಡುತ್ತಾ ದೇಶ ಸಂಚಾರ ಮಾಡುತ್ತಿದ್ದ ಶಂಕರರು ಬೌದ್ಧರನ್ನು ದೇಶದಿಂದ ಹೊರಗಟ್ಟಿದರು ಎನ್ನುವುದೂ ಒಂದೇ ಈ ದೇಶದಲ್ಲಿ  ಅಲ್ಪಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ ಎನ್ನುವುದೂ ಒಂದೇ. ಅಂದು ರಾಜ್ಯವಿದ್ದುದು ರಾಜರುಗಳ ಕೈಯಲ್ಲಿ. ಶಂಕರರು ಪ್ರತಿಪಾದನೆ ಮಾಡಿದ್ದು ಆದೈತ ಸಿದ್ಧಾಂತವನ್ನು. ಆ ಸಮಯದಲ್ಲಿ ಶಂಕರರಿಗೆ ಕನಿಷ್ಠ ರಾಜಾಶ್ರಯವೂ ಇರಲಿಲ್ಲ. ಇನ್ನು ಓಡಿಸುವ ಪ್ರಶ್ನೆ ಎಲ್ಲಿಂದ ಬಂತು?

ದ್ವೈತವೇ ಆಗಲಿ, ಅದ್ವೈತವೇ  ಆಗಲಿ,  ವಿಶಿಷ್ಟ್ಯಾದ್ವೈತವೇ ಆಗಲಿ ಎಲ್ಲವೂ   ವೇದಗಳನ್ನು ಪ್ರಮಾಣಗಳನ್ನಾಗಿ ಸ್ವೀಕರಿಸಿದ ತತ್ತ್ವಗಳು. ಭಕ್ತಿಮಾರ್ಗ, ಜ್ಞಾನ ಮಾರ್ಗ ಮತ್ತು ಕರ್ಮ ಮಾರ್ಗಗಳನ್ನು ತಮ್ಮ ತಮ್ಮ ತತ್ತ್ವದಲ್ಲಿ ಪ್ರತಿಪಾದಿಸಿದವರು. ಇವೆಲ್ಲಕ್ಕೂ  ವೇದಗಳು ಪ್ರಮಾಣಗಳು. ಅದಕ್ಕೂ ಅದೇ ಹೊತ್ತಲ್ಲಿ ಅವೈದಿಕ ಪ್ರತಿಪಾದಕರೂ ಹುಟ್ಟಿಕೊಂಡಿದ್ದರು. ಎಲ್ಲವೂ ಅವರವರ  ಸಾಮರ್ಥ್ಯಕ್ಕೆ ತಕ್ಕಂತೆ. ಚಾರ್ವಾಕನಂಥ ನಿರೀಶ್ವರವಾದಿ. ನಾಸ್ತಿಕ ಪಂಥಕ್ಕೂ ಜಾಗಕೊಟ್ಟ ಸಮಾಜ ಭಾರತದ್ದು. ಇನ್ನು ಚಾರ್ವಾಕಕ್ಕೆ ಹೋಲಿಸಿದರೆ ಅಧುನಿಕ ಎನ್ನಬಹುದಾದ ಬೌದ್ಧವನ್ನು ಯಾರಾದರೂ  ಓಡಿಸಿಯಾರೇ? ಅಲ್ಲದೆ ಅವೈದಿಕ ಪಂಥಗಳ ಒಳಗೆ ಕೂಡ ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಬೌದ್ಧ ಮತ್ತು ಜೈನದೊಳಗೂ ಸಾಮ್ಯತೆಗಳಿಲ್ಲ. ಜೈನ ಇಂದೂ ಭಾರತದಲ್ಲಿ ಭದ್ರವಾಗಿದೆ. ಒಂದು  ವೇಳೆ ಶಂಕರರು ಅವೈದಿಕವನ್ನೆಲ್ಲಾ ಓಡಿಸಿದರು ಎಂದಿದ್ದರೆ ಜೈನವನ್ನು ಏಕೆ ಓಡಿಸಲಿಲ್ಲ? ಬುದ್ಧಪೂರ್ವದ ಯುಗದಲ್ಲಿ ಅವೈದಿಕವನ್ನು  ಪ್ರತಿಪಾದನೆ ಮಾಡುವ ಸುಮಾರು ೬೦ ಧರ್ಮಗ್ರಂಥಗಳು ಅಸ್ತಿತ್ವದಲ್ಲಿದ್ದವು. ಹಾಗಾದರೆ ಬೌದ್ಧತತ್ವ ಭಾರತಕ್ಕೆ ಹೊಸದಲ್ಲ ಎಂದಾಯಿತು ಅಂಥದ್ದರಲ್ಲಿ ಶಂಕರ ಯಾರನ್ನು ಕೊಲ್ಲಬೇಕಿತ್ತು? ಶಂಕರರನ್ನು “ಪ್ರಚ್ಛನ್ನ ಬೌದ್ಧ” ಎಂದೇ ಏಕೆ ಕರೆದರು?
ಶಂಕರ ಚರಿತ್ರೆಯಲ್ಲಿ ಅವರು ಮಂಡನಮಿಶ್ರನೆಂಬ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ ತನ್ನ ಹಿಂಬಾಲಕರಾಗಿ ಮಾಡಿಕೊಂಡರು ಎಂಬ ಉಲ್ಲೇಖಗಳು ಸಿಗುತ್ತವೆ. ಶಂಕರರಿಗೆ ಶಸ್ತ್ರಸಜ್ಜಿತವಾದ ಸೈನಿಕರು ಇದ್ದಿದ್ದರೆ ತಲೆಹಾಳು ಮಾಡಿ ಕೊಂಡು ವಾದ-ವಿವಾದ ಮಾಡುವ ಅವಶ್ಯಕತೆ ಇತ್ತೇ? ಶಂಕರರನ್ನು ಟೀಕಿಸುವವರಿಗೆ ವಾದದಲ್ಲಿ ಗೆಲ್ಲುವ ಶಕ್ತಿ ಇಲ್ಲವೆಂದ ಮಾತ್ರಕ್ಕೆ  ಸಕಲರಿಗೂ ಇರುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬರುವುದು ಸರಿಯೇ?

ಇತಿಹಾಸತಜ್ಞ ಬೆಸೆಂಟ್ ಸ್ಮಿತ್ ಹೇಳುವಂತೆ “ಭಾರತೀಯ ವೈದಿಕ ಮತೀಯರಿಂದ ಬೌದ್ಧರು ಪೀಡಿಸಲ್ಪಟ್ಟಿದ್ದಾರೆ ಎನ್ನುವುದು  ಸರಿಯಲ್ಲ. ಭಾರತೀಯ  ಜನತೆಯಲ್ಲಿ ಬೌದ್ಧಮತದ ಬಗ್ಗೆ ಕಿರಿಕಿರಿ , ತಿರಸ್ಕಾರ ಉಂಟಾಗಿ ಕಟ್ಟಕಡೆಯಲ್ಲಿ ಅದು ದೇಶದಿಂದಲೇ ನಶಿಸಿಹೋಯಿತು. ಏಕೆಂದರೆ ಬೌದ್ಧರು ಮತ್ತು ಮತ್ತೆ ದೇಶದ ಸ್ವಾತಂತ್ರ್ಯ ಹಾಗೂ ಸಾಮ್ರಾಜ್ಯದ ವಿಷಯದಲ್ಲಿ ಎಸಗಿದ ಕೃತ್ಯಗಳೇ ಅವನ ವಿನಾಶಕ್ಕೆ ಕಾರಣವಾಗಿತ್ತು” ಎನ್ನುತ್ತಾರೆ. ಅದು ಐತಿಹಾಸಿಕವಾದ  ಸತ್ಯ. ಏಕೆಂದರೆ ಸಂಖ್ಯೆಯಲ್ಲಿ ಹೆಚ್ಚು ಇದ್ದ ವೈದಿಕರನ್ನು ಆಳುತ್ತಿದ್ದವರು ಬೌದ್ಧ ಮತಾನುಯಾಯಿ ಅರಸರು. ಅಶೋಕನಂಥ ರಾಜನೇ ಅಹಿಂಸೆಯ ದೃಷ್ಟಿಯಿಂದ ಕೆಲವು ಆಚರಣೆಗಳನ್ನು ನಿಷೇಸಿದ್ದ.  ಶಿಕ್ಷೆಯನ್ನು ಘೋಷಿಸಿದ್ದ. ಇದು ಎಷ್ಟು ದಿನ ನಡೆದೀತು? ಜನ ಸಹಜವಾಗಿಯೇ ಆಕ್ರೋಶಗೊಂಡರು. ಅಲ್ಲದೆ ರಾಜಾಶ್ರಯದ ನೆರವಿನಿಂದ  ಬೌದ್ಧ ಮತ ವಿದೇಶಗಳಿಗೆ ತೆರಳಿತು. ಅಶೋಕನೇ ತನ್ನ ಮಕ್ಕಳನ್ನು ಶ್ರೀಲಂಕಾ ಮತ್ತು ಬರ್ಮಾಗಳಿಗೆ ಕಳುಹಿಸಿದ ಉಲ್ಲೇಖಗಳಿವೆ.  ಇಷ್ಟಿದ್ದ ಮೇಲೆ  ಭಾರತೀಯ ಮೂಲದ  ಬೌದ್ಧ ವಿದೇಶಕ್ಕೆ ಸಾಗಿತು ಎಂದು  ಹೆಮ್ಮೆ ಪಡುವ ಬದಲು ಸಂಬಂಧವೇ ಪಡದ ಶಂಕರರನ್ನು ಏಕೆ ಎಳೆದು ತರಬೇಕು?

ಒಪ್ಪಿಕೊಳ್ಳೋಣ. ಅವೈದಿಕಕ್ಕೂ ಸ್ಥಾನಮಾನ ನೀಡಿದ ದೇಶದಲ್ಲಿ ಬೌದ್ಧ ವಿದೇಶದಲ್ಲರುವಷ್ಟೇ ಗಟ್ಟಿಯಾಗಿರಬೇಕಿತ್ತು ಎಂದುಕೊಳ್ಳೋಣ. ಅದರ ಪತನಕ್ಕೆ ಕಾರಣವಾದ ವಿಪರೀತ ವಿಧಿ ನಿಷೇಧಗಳನ್ನು ವಿಧಿಸಿದ ರಾಜರನ್ನು  ದೂರೋಣ.  ಒಬ್ಬ ಅಂಬೇಡ್ಕರರಿಂದ ಅದು ಭಾರತದಲ್ಲಿ ಮರುಸ್ಥಾಪನೆಯಾದುದ್ದಕ್ಕೆ ಖುಷಿ ಪಡೋಣ. ಶಂಕರಾಚಾರ್ಯರನ್ನು  ಬ್ರಾಹ್ಮಣರ ಆಸ್ತಿ ಎನ್ನುವ ಮೊದಲು ಕೊಂಚವಾದರೂ ಶಂಕರನ್ನು ಅರಿಯೋಣ. ಅರಿಯದೇ ಇದ್ದರೆ ವ್ಯಕ್ತಿ ಏನಾಗುತ್ತಾನೆ ಎನ್ನುವುದನ್ನು ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ. ಅರಿಯದೇ ದೂರಿದರೆ ಶಂಕರರು ಬ್ರಾಹ್ಮಣರ ಆಸ್ತಿಯಾಗಿ, ಕ್ರೂರಿಯಾಗಿ ಕಾಣುತ್ತಾರೆ.ತಿಳಿದವರು ಆ ಮನಸ್ಸನ್ನು ಸಿನಿಕ, ಅಸ್ವಸ್ಥ ಎಂದು ಕರೆಯುತ್ತಾರೆ.

79 ಟಿಪ್ಪಣಿಗಳು Post a comment
 1. ತುಳುವ
  ಜೂನ್ 17 2013

  ಸಾಕ್ಷಿಪ್ರಜ್ಞೆ ಕನ್ನಡಪರ ಮನಸು ಪ್ರಗತಿಪರ ಇತ್ಯಾದಿಗಳಲ್ಲಿ ಗುರುತಿಸಿಕೊಳ್ಳುವುದು ಸದ್ಯದ ಮಟ್ಟಿಗೆ ಅತ್ಯಂತ ಲಾಭದಾಯಕ ದಂಧೆ. ಹೀಗೆ ಸಾಕ್ಷಿಪ್ರಜ್ಞೆ ಪ್ರಗತಿಪರ ನೊಂದವರ ಪರ ಎಂದು ಹೇಳುತ್ತ ಸುಮ್ಮ ಸುಮ್ಮನೆ ಮೋದಿಯನ್ನು ಬೈಯುತ್ತ ಮಂಗಳೂರಿನಲ್ಲಿ ಭಜರಂಗಿಗಳು ಮಿಡಿಹಾಕಲು ಬಿಡುತ್ತಿಲ್ಲ ಎಂದು ಬೇಸರಿಸುತ್ತ ರಾಹುಲ್ ಗೆ ಮುಂದಿನ ಚುನಾವಣೆಯಲ್ಲಿ ಪಟ್ಟ ಸಿಗುತ್ತದೋ ಇಲ್ಲವೋ ಎಂದು ಆತಂಕಗೊಳುತ್ತ ವಾರ ವಾರ ‘ಅನಾವರಣಗೊಂಡು’ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಗಳಿಸಿದವರ ಉದಾಹರಣೆಗಳೂ ಇವೆ.

  ಉತ್ತರ
 2. Umesh
  ಜೂನ್ 17 2013

  ಉತ್ತಮವಾದ ಲೇಖನ .
  ಹುಸಿ ಪ್ರಚಾರಪ್ರಿಯ ವಿಚಾರವಾದಿಗೆಲ್ಲ ನಮ್ಮ ಪತ್ರಿಕೆಗಳು ಯಾಕೆ ಅನಗತ್ಯ ಪ್ರಚಾರ ಕೊಡುತ್ತವೆಯೋ ಗೊತ್ತಾಗುವುದಿಲ್ಲ. . ಬುದ್ದ ಧರ್ಮ ಯಾಕೆ ಈ ದೇಶದಿಂದ ಮರೆಯಾಯಿತು ಎಂಬುದರ ಬಗ್ಗೆ ವಿದ್ವಾಂಸ ನಾರಾಯಣಚಾರ್ಯರು ವಿಸ್ತಾರವಾಗಿ ಕನ್ನಡಪ್ರಭ ಪತ್ರಿಕೆಯಲ್ಲಿ ಕೇಶವಮೂರ್ತಿಗೆ ಉತ್ತರಬರೆದರು. ಕೇಶವಮೂರ್ತಿ ಅದಕ್ಕೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಔರಂಗಜೇಬನು ನಳಂದ ವಿದ್ಯಾಲಯವನ್ನು ನಾಶ ಮಾಡಿ ಬುದ್ದರನ್ನು ಓಡಿಸಿದ ಚರಿತ್ರೆ ಕೇಶವಮೂರ್ತಿಗೆ ತಿಳಿದೂ ಬೇಕಂತಲೇ ಇತಿಹಾಸ ತಿರುಚಿ ಪುಕ್ಕಟೆ ಪ್ರಚಾರ ಗಿಟ್ಟಿಸುವ ಪ್ರಯತ್ನ ಪಟ್ಟಿದ್ದಾರೆ.

  ಉತ್ತರ
  • ನಾರಾಯಣಚಾರ್ಯರ ಲೇಖನ ಪ್ರಕಟವಾಗಿದ್ದು ಯಾವಾಗ ಉಮೇಶ್.ಕೊಂಡಿ ಸಿಗಬಹುದೇ?

   ಉತ್ತರ
   • Umesh
    ಜೂನ್ 18 2013

    ರಾಕೇಶ್,

    ಡಾ. ನಾರಾಯಣಚಾರ್ಯರ ಲೇಖನ ಕನ್ನಡಪ್ರಭದ ಮೇ ೨೭ ರ ಸಂಚಿಕೆಯಲ್ಲಿ ಪ್ರಕಟವಾಗಿದೆ

    ಉತ್ತರ
  • ಬಸವಯ್ಯ
   ಜೂನ್ 17 2013

   ನಳಂದಾ ವಿಶ್ವವಿದ್ಯಾಲಯವನ್ನು ನಾಶ ಮಾಡಿದ್ದು ಕುತುಬುದ್ದೀನ್ ಐಬಕ್ ನ ದಂಡನಾಯಕನಾಗಿದ್ದ ಬಕ್ತಿಯಾರ್ ಖಿಲ್ಜಿ..ಅಲ್ಲಿಯ ಗ್ರಂಥಾಲಯವನ್ನು ಸುಡಲು ಆತನಿಗೆ ಒಂದು ವರ್ಷಕ್ಕೂ ಮೇಲಿನ ಸಮಯ ಬೇಕಾಯಿತು. ಇದರ ಜೊತೆ ಆತ ಅಸಂಖ್ಯ ಬೌದ್ಧ ಬಿಕ್ಕುಗಳ ಮಾರಣಹೋಮವನ್ನು ಕೂಡ ನಡೆಸಿದ.

   ಉತ್ತರ
   • ನವೀನ
    ಜೂನ್ 17 2013

    ಸುಡುವುದೆಲ್ಲ ವೈದಿಕ ಕ್ರಿಯೆಯಲ್ಲವೇ (ಹೋಮ ಹವನ ಅಂತ ಸುಡುತ್ತಾರಲ್ಲ ಹಾಗೇ) … ಬಕ್ತಿಯಾರ್ ಖಿಲ್ಜಿಯ ತಲೆಗೂ ಯಾರೋ(?) ಸುಡುವ ಐಡಿಯಾ ಕೊಟ್ಟಿರಬೇಕು

    ಉತ್ತರ
    • ಜೂನ್ 18 2013

     ಶಂಕರಾಚಾರ್ಯರು ಕಾಪಾಲಿಕರಲ್ಲಿ ಪ್ರಚಲಿತವಾಗಿದ್ದ ’ನರಬಲಿಯನ್ನು’ ತಾತ್ವಿಕವಾಗಿ ವಿರೊಧಿಸಿದರು. ಆದರೆ ಶೂದ್ರರನ್ನು ಗುತ್ತಿಗೆ ಪಡೆದ ಪ್ರಗತಿಪರರು ಕಾಪಾಲಿಕರನ್ನು ಶೂದ್ರರೆಂದು ಗುರುತಿಸಿಕೊಳ್ಳುತ್ತಾ, ಇದನ್ನು ಹೇಗೆ ವ್ಯಾಖ್ಯಾನಿಸಿದರೆಂದರೆ ’ಶಂಕರರು ಕಾಪಾಲಿಕರನ್ನು ವಿರೊಧಿಸುವದರ ಮೂಲಕ ಶೂದ್ರರ ಸಂಸ್ಕ್ರತಿಯನ್ನು ನಾಶಮಾಡಿದರು’ ಎಂದರು. ಅಲ್ಲದೆ ಬ್ರಾಹ್ಮಣರಲ್ಲಿಯೇ ಪ್ರಚಲಿತವಾಗಿದ್ದ ಅತಿಯಾಗಿ ಯಜ್ನ ಯಾಗಾದಿಗಳನ್ನು ಗೊಡ್ಡು ಸಂಪ್ರದಾಯಕ್ಕೆ ಶರಣಾಗಿದ್ದ ’ಪೂರ್ವಮಿಮಾಂಸಿಕರನ್ನೂ’ ವಿರೊಧಿಸಿದರು. ಬಹುಶಹ ಶಂಕರರ ಬಗ್ಗೆ ತಿಳಿಯಬೇಕಾದರೆ ಕೇಶವಮೂರ್ತಿಯಂತವರ ಬರಹಗಳನ್ನು ಓದುವದಕ್ಕಿಂತಲೂ ಸ್ವತಃ ಶಂಕರರು ಬರೆದದ್ದನ್ನು ಓದಿದರೆ ಪೂರ್ವಾಗ್ರಹಕ್ಕೆ ಅವಕಾಶವಿಲ್ಲದಂತಾಗುವದೇನೊ

     ಉತ್ತರ
    • ಜೂನ್ 18 2013

     ನವೀನ್ , ಶಂಕರಾಚಾರ್ಯರು ಕಾಪಾಲಿಕರಲ್ಲಿ ಪ್ರಚಲಿತವಾಗಿದ್ದ ’ನರಬಲಿಯನ್ನು’ ತಾತ್ವಿಕವಾಗಿ ವಿರೊಧಿಸಿದರು. ಆದರೆ ಶೂದ್ರರನ್ನು ಗುತ್ತಿಗೆ ಪಡೆದ ಪ್ರಗತಿಪರರು ಕಾಪಾಲಿಕರನ್ನು ಶೂದ್ರರೆಂದು ಗುರುತಿಸಿಕೊಳ್ಳುತ್ತಾ, ಇದನ್ನು ಹೇಗೆ ವ್ಯಾಖ್ಯಾನಿಸಿದರೆಂದರೆ ’ಶಂಕರರು ಕಾಪಾಲಿಕರನ್ನು ವಿರೊಧಿಸುವದರ ಮೂಲಕ ಶೂದ್ರರ ಸಂಸ್ಕ್ರತಿಯನ್ನು ನಾಶಮಾಡಿದರು’ ಎಂದರು. ಅಲ್ಲದೆ ಬ್ರಾಹ್ಮಣರಲ್ಲಿಯೇ ಪ್ರಚಲಿತವಾಗಿದ್ದ ಅತಿಯಾಗಿ ಯಜ್ನ ಯಾಗಾದಿಗಳನ್ನು ಗೊಡ್ಡು ಸಂಪ್ರದಾಯಕ್ಕೆ ಶರಣಾಗಿದ್ದ ’ಪೂರ್ವಮಿಮಾಂಸಿಕರನ್ನೂ’ ವಿರೊಧಿಸಿದರು. ಬಹುಶಹ ಶಂಕರರ ಬಗ್ಗೆ ತಿಳಿಯಬೇಕಾದರೆ ಕೇಶವಮೂರ್ತಿಯಂತವರ ಬರಹಗಳನ್ನು ಓದುವದಕ್ಕಿಂತಲೂ ಸ್ವತಃ ಶಂಕರರು ಬರೆದದ್ದನ್ನು ಓದಿದರೆ ಪೂರ್ವಾಗ್ರಹಕ್ಕೆ ಅವಕಾಶವಿಲ್ಲದಂತಾಗುವದೇನೊ

     ಉತ್ತರ
    • ಜುಲೈ 6 2013

     ಹೋಮ ಮತ್ತು ಹವನಗಳಲ್ಲಿ ಸಮಿತ್ತು ಮತ್ತು ತುಪ್ಪವನ್ನು ಬಳಸುತ್ತಾರೆ. ಮನುಷ್ಯನ ಮಾರಣ ಹೋಮಕ್ಕೂ ಅಹಿಂಸಾತ್ಮಕವಾದ, ಪರಿಸರವನ್ನು ಸುಗಂಧಯುಕ್ತವನ್ನಾಗಿ ಮಾಡಿ, ಕ್ರಿಮಿಕ್ರೀಟಾದಿಗಳನ್ನು ನಾಶಗೊಳಿಸುವ ಉದ್ಧೇಶ್ಯವುಳ್ಳ ಹೋಮಕ್ಕೂ ಎಲ್ಲಿಯ ಸಂಬಂಧ?. ಹವನ, ಹೋಮ ವನ್ನು ಪರೋಪಕಾರದ ಸಂಕೇತವಾಗಿ ಮಾಡಲಾಗುತ್ತದೆ. ಇದು ಒಂದು ಯಜ್ಞ. ಯಜ್ ಧಾತುವಿನಿಂದ ಮೂಡಿಬಂದ ಯಜ್ಞಕ್ಕೆ ದಾನ, ದೇವಪೂಜಾ, ಮತ್ತು ಸಂಗತೀಕರಣದ ಅರ್ಥವಿದೆ. ತಿಳಿದು ಮಾತಾಡಿದರೆ ಒಳ್ಳೆಯದು.

     ಉತ್ತರ
   • Gopalakrishna Bhagwat
    ಜುಲೈ 31 2013

    Mr. Basavaiah It is true that Shankaracharya was deeply inflenced by Buddhist philosophy and his guru s guru Goudapadacharya was a Buddhist. Shankara imbibed Buddhist essence and formulated his own Advaitha Philosophy. That is why Madhwacharya calls Shankara as the Incarnation of demon Manimanta

    ಉತ್ತರ
    • Sreenivasa
     ಏಪ್ರಿಲ್ 23 2015

     Swami Gopalakrishna avare: Please don’t drag the philosophy’s of ‘Advaita’ n ‘Dvaitha’ here… Don’t tell Shankara is demon please. If I compare ideology Islam and Madhva. Both fall in same plane. Only one supreme god which is told by our GURU. Only Bhramins and great that to costal. Women can’t have moksha. women will reincarnate as women it self. Purusha/Male is superior etc etc etc…
     Only Shankara told ‘GANANA’ is most to get MOKSHA. No need for you to be Male Bhramin Hindu who is leaving in India to get the MOKSHA.
     You should POSSESS that GANANA to get it. You might be ‘ANY’.
     Don’t be a frog to lake. Please come out read some text related to ‘knowledge’. Not only preaching by the so called gurus. Do some self learning by reading other philosophies.
     Finally I would say; “Believe only THAT which YOU can REALISE” don’t believe some thing which was realised by some others

     ಉತ್ತರ
 3. ಜೂನ್ 17 2013

  These rationalists want to defame our sanatana dharma which preaches truth, peace, unity, co-ordination ( sarva dharma samabhava) which is in existence for more than 5000 years. Te Acharya trios revived this Dharma , otherwise it would have been vanished due to onslaught by Islam, Christianity, Buddhism & Jainism

  ಉತ್ತರ
  • Gopalakrishna Bhagwat
   ಜುಲೈ 31 2013

   These sacerdotalist priests in the name religion have destroyed communal harmony which existed in India since 5000 years. Better the book Hindu Samrajyashahiya ithihasa.

   ಉತ್ತರ
  • Nagshetty Shetkar
   ಏಪ್ರಿಲ್ 25 2015

   ಆದಿ ಶಂಕರರು ಆ ಶಂಕರನೇ ಚಂಡಾಳ ರೂಪದಲ್ಲಿ ಸಿಕ್ಕಾಗ ಮೆರೆದದ್ದು ಏನನ್ನು? ಸತ್ಯವನ್ನಾ? ಏಕತೆಯನ್ನಾ? ಶಾನ್ತಿಯನ್ನಾ? ಸಹಬಾಳ್ವೆಯನ್ನಾ? ಸಮಾನತೆಯನ್ನಾ? ಅಥವಾ ಜಾತಿ ವ್ಯವಸ್ಥೆಯನ್ನಾ?

   ಉತ್ತರ
 4. ಬಸವಯ್ಯ
  ಜೂನ್ 17 2013

  ಅಲ್ಲಾ ಸ್ವಾಮಿ..ಹೀಗೆಲ್ಲ ಉಪದ್ವಾಪ ಆಗಾಗ ಮಾಡ್ತಿರ್ಲ್ಲಿಲ್ಲ ಅಂದ್ರೆ..ಈ ಕೇಶವ ಮೂರ್ತಿಗಳನ್ನ ಕೇರ್ ಮಾಡುವವರೆ ಇಲ್ಲದೇ ಶವ ಮೂರ್ತಿಗಳಾಗಿರ್ತಿದ್ರು… ಫಿಲ್ಡನಲ್ಲಿರಬೇಕು, ಇನ್ನೂ ಜೀವಂತವಾಗಿದ್ದೀನಿ ಅಂತ ತೋರ್ಸ್ಕೊಬೇಕು ಅಂದ್ರೆ ಆಗಾಗ ಏನಾದ್ರೂ ಮಾತಾಡ್ತಿರಬೇಕು. ನೀವು ಸ್ವಲ್ಪ ಅವರ ಕಷ್ಟವನ್ನ ಅರ್ಥ ಮಾಡ್ಕೊಬೇಕು..ಪಾಪ..

  ಉತ್ತರ
  • Gopalakrishna Bhagwat
   ಜುಲೈ 31 2013

   Mr. Basavaiah neevu saha field nalli illa andre Shavaiah agi bidta idri

   ಉತ್ತರ
 5. Rajaram Hegde
  ಜೂನ್ 18 2013

  There is hardly any historical evidence for Shankara’s life. All we have are his compositions (or compositions assigned to him) and some traditional works like Shankara Vijaya.(supposed to be in many versions) and may be some other similar traditions.. Whatever versions I have read do not make any mention to this historical attack on Buddhists. One K.S. Bhagavan in his “Shankaracharyaru mattu Pratigamitana” cites Longhurst’s book on Nagarjunakonda. Longhurst was an archaeologist investigating into the Nagarjunakonda ruins in 1920s. This is a Buddhist site in ruins and such sites were ample all over India which almost got deserted around 6th, 7th century A.D. indicating the decline of Buddhism in India. Eversince Alexander Cunningham(19th century) the British archaeologists systematically explored such sites with a special curiosity on this religion. There was a popular explanation for the decline of Buddhism, in the rise of Brahmanic religion during Gupta period among the orientalists. Within this context, Longhurst sees some Brahmanical(?) temples in Nagarjunakonda which existed after the Buddhist Stupa, and some local legend about Shankaracharya(I do not remember it exactly now, but those who are interested can check this book).The story of Shankaracharya and the destruction of Buddhist sites and decline of Buddhism gets animated with three”D” effect in his book. The British archaeologists have promoted all such legends to history. Pathetic thing is that they are getting reproduced and believed to be actual happenings by our generation!

  Santosh Tammayya also referred to Shankara’s views about Shudras. As he has pointed out, shankara in his commentory on Brahmasutra of Badarayana was trying to comment on “Apashudradhikarana” section of this work. All he does is to understand this section. No personal views of him can be discerned in that section.His comment as I have understood says that Apashudradhikarana would imply that, ‘since upanayana is the basic requirement for learning vedas only dvijas(means those initiated, even if he is a brahmin by jati) shudras(not initiated) can not listen to Vedas. However it does not mean that shudras have no eligibility to brahmajnana. Because brahmajnana is not denied to shudras. Only veda is denied which is but one way to get brahmajnana” This we can understand with following example: today to do Ph.D. you should have possesed MA in Higher second class. People without that basic qualification are denied to do Ph.D. However no one denied doing research and pursuing truth. The comment on Brahmasutra is in no way different from this situation.

  ಉತ್ತರ
  • Kranthikesvara
   ಜೂನ್ 18 2013

   Dear Rajaram, the so called progressive thinkers and writers of Kannada have been making a big issue of the belief that Shoodras and Dalits were not allowed to listen to the Vedas. I don’t know to what extent this belief is shaped by facts. There might be some stories and instances in some works which seem to suggest that Shoodras and Dalits were not allowed to listen to the Vedas. But was there a rule that forbid them from listening to the Vedas? And how was this rule implemented? How was this rule sustained over thousands of years across the loosely connected geographies and amidst the political turmoil? What made Shoodras and Dalits to abide by this rule? These are some questions to which I have never got answers from the progressive gang. Historically, did the Shoodras and Dalits care so much about Vedas? Was the denial of Vedas an issue to them? Which works or oral traditions of Shoodras and Dalits mention the denial of Vedas and make a big issue out of it? Look at the situation today. Anyone can listen to Vedas with least effort. Anyone can learn Vedas with a bit of effort ( for instance, in the Maharaja Sanskrit Paathashala of Mysore ). How many Shoodras and Dalits have taken this opportunity? Forget the masses, how many of our progressive thinkers and writers have? At one end they brandish Vedas as either bullshit or regressive and at other end they make an issue of Vedas being denied to Shoodras and Dalits. Isn’t that ridiculous?

   ಉತ್ತರ
   • ಜೂನ್ 18 2013

    Moreover Shankara’s time itself is not confirmed. Some sources say he lived during 4th century BC and others in majority say it’s 8th century BC. People who talk about Shankara like hitting the nail on the head must provide factual evidences for their claims. There have been evidences that there were ideological debates, but aint been anything on bloodshed. But problem is even many vedic scholars consider buddhism as rival to vedic as described by english historians.

    ಉತ್ತರ
    • Gopalakrishna Bhagwat
     ಜುಲೈ 31 2013

     There is no outsider in this debate to present his views. You people are talking to yourselves. Its really pity

     ಉತ್ತರ
     • ನವೀನ
      ಜುಲೈ 31 2013

      ಗೋಪಾಲ ಕೃಷ್ಣರವರೇ ನೀವು ನಿಮ್ಮ ವಾದವನ್ನು ಮುಂದಿಡಿ.ಆರೋಗ್ಯಕರ ಚರ್ಚೆಯಾದರೆ ಒಂದಿಷ್ಟು ವಿಷಯಗಳು ತಿಳಿದಂತಾಗುತ್ತದೆ

      ಉತ್ತರ
      • Gopalakrishna Bhagwat
       ಆಗಸ್ಟ್ 3 2013

       Mr. Naveen I can understand ur concern to have healthy debates. But u don’t know, I feel, these people in the net are unhealthy in their minds and don’t hv any better work to do. They have made posting comments as their profession and I don’t know how are they earning their livelihood. It is still a mystery.

       ಉತ್ತರ
     • Annapurna
      ಆಗಸ್ಟ್ 1 2013

      This Bhagwat is fake. He is Vishwaradhya. Check Avadhi to see his true color.

      ಉತ್ತರ
      • Gopalakrishna Bhagwat
       ಆಗಸ್ಟ್ 3 2013

       This Annapurna is fake. Her/His true color is exhibited in the avadhi.

       ಉತ್ತರ
 6. rajaram hegde
  ಜೂನ್ 18 2013

  Dear Krantikeshvar, glad to discover you in Nilume! I completely agree with you. The term Shudra strictly means those who do not have upanayana practice. It does not indicate any social group. It is not a social category. NOw we club all those castes which do not have that practice and call shudras. BUT all those who are not initiated are virtually shudras so far as learning vedas is concerned. A brahmin only by birth is not eligible to learn Vedas.The term shudra has to be distorted and disoriented to derive the progressive implications.

  ಉತ್ತರ
  • ಜೂನ್ 19 2013

   ಅಷ್ಟೇ ಅಲ್ಲ. ತಮ್ಮ ಬ್ರಹ್ಮಸೂತ್ರಭಾಷ್ಯದಲ್ಲಿ ಶೂದ್ರರ ಕಿವಿಗೆ ಕರಗಿದ ಸೀಸ ಸುರಿಯ ಬೇಕು ಎಂದು ಶಂಕರ ಹೇಳಿದ ಎನ್ನಲಾಗುತ್ತದೆ. ಆದರೆ ಭಾಷ್ಯದ ಆ ಭಾಗದಲ್ಲಿ ಶಂಕರ ಶೂದ್ರ ಎಂದು ಕರೆಯುವುದು ಒಬ್ಬ ಕ್ಷತ್ರಿಯ ರಾಜನನ್ನು ಎನ್ನುವುದು ಸಣ್ಣ ವಿಚಾರವೇನಲ್ಲ.

   ಉತ್ತರ
   • ಜೂನ್ 29 2013

    Dunkin Jalki
    “ಶೂದ್ರರ ಕಿವಿಗೆ ಕರಗಿದ ಸೀಸ ಸುರಿಯಬೇಕು” ಎಂಬುದನ್ನು ರಾಜನೈತಿಕ ಗಳಿಕೆಗಾಗಿ ಬಳಸಿಕೊಳ್ಳಲಾಗುತ್ತಿರುವ ಸಂದರ್ಭದಲ್ಲಿ, (ಕೇರಳದಲ್ಲಿ ಇದು ನಡೆಯುತ್ತದೆ) ಬ್ರಹ್ಮಸೂತ್ರ ಭಾಷ್ಯದಲ್ಲಿ ಹೇಳುತ್ತಿರುವುದು ಶೂದ್ರ ಎಂಬ ಕ್ಷತ್ರಿಯ ರಾಜನನ್ನು ಎನ್ನುವಂಥದ್ದು ಚಿಂತನಾರ್ಹ ವಿಚಾರ.

    ಉತ್ತರ
 7. Maaysa
  ಜೂನ್ 26 2013

  ನೋಡಿ ನಾನು ಇಲ್ಲಿರುವ ಹಲವು ಪಂಡಿತರಷ್ಟು ವಿಷಯಜ್ಞಾನವನ್ನು ಹೊಂದಿಲ್ಲವು ಏನೋ !

  ಸಾವಿರವರ್ಷದ ಹಿಂದೆ ಶಂಕರರು ಇದ್ದರಂತೆ. ಇನ್ನೂ ಒಬ್ಬರು ಶಂಕರರು ಇದ್ದರೋ , ಶಂಕರ-ಆಚಾರ್ಯ ಎಂಬದು ಒಂದು ಪದವಿಯೋ ಇವೆಲ್ಲ ಇನ್ನೂ ಗೊಂದಲ.

  ಅಷ್ಟು ಹಳೆಯ ಕಾಲ ತತ್ವ, ಸಿದ್ಧಾಂತ ಹಾಗು ಪ್ರತಿಪಾದನೆಗಳನ್ನೂ ೨೧ನೇ ಶತಮಾನದ ವೈಚಾರಿಕತೆ ಮಣ್ಣುಮಸಿಗೆ ಒರೆಹಚ್ಚಿ, ಶಂಕಾರಚಾರ್ಯ ಕೊಲೆಗೆಡುಕ, ಗೂಂಡ ಹೀಗೆಲ್ಲ ಬರಹಗಳನ್ನು ಬರೆದಿದ್ದಾರೆ. ಇವೆಲ್ಲ ಕುಚೋದ್ಯ ತಾನೇ!

  ಈ ಕುಚೋದ್ಯಗಳಿಗೆ ಪ್ರತಿಕ್ರಯಿಸಿ ಅವುಗಳಿಗೆ ಪ್ರಚಾರ ಯಾಕೆ ಕೊಡಬೇಕು?

  ಹಳೆಯ ವಿಷಯಗಳನ್ನು ಐತಿಹಾಸಿಕ ತಥ್ಯಗಳು. ಅವುಗಳ ಗುಣ-ಅವಗುಣಗಳ ತುಲನೆ ನಮ್ಮ ಆಧುನಿಕತೆಯ ಪರಕೀಯ-ಸಂಸ್ಕೃತಿಯ ಪ್ರಭಾವದ ಕನ್ನಡಕದ ಮೂಲಕ ಮಾಡಿದರೆ ಹೆಚ್ಚು ತಪ್ಪೇ ಕಾಣೋದು. !

  ಉತ್ತರ
  • ಜೂನ್ 27 2013

   ಮಾಯ್ಸ,
   “ಈ ಕುಚೋದ್ಯಗಳಿಗೆ ಪ್ರತಿಕ್ರಯಿಸಿ ಅವುಗಳಿಗೆ ಪ್ರಚಾರ ಯಾಕೆ ಕೊಡಬೇಕು? ”
   ನಿಜ ಹೇಳ್ಬೇಕು ಅಂದ್ರೆ ಪ್ರತಿಕ್ರೆಯೆಗೆ ಪ್ರಚಾರ ಸಿಗ್ತಾ ಇಲ್ಲ. ಆದ್ರೆ ಅಂತ ಕುಚೋದ್ಯಕ್ಕೆ ಜಾಸ್ತಿ ಪ್ರಚಾರ ಸಿಗ್ತಾ ಇದೆ. ಒಮ್ಮೆ ದಲಿತ ಸಾಹಿತ್ಯಗಳನ್ನು ಹೊಕ್ಕು ನೋಡಿ. ಎಲ್ಲೂ ಇಲ್ಲದ ಥಿಯರಿಗಳು. ಕ್ರಿ.ಪೂ ೧೭೦೦ ರಲ್ಲಿ ಆರ್ಯರ(ಬ್ರಾಹ್ಮಣರ) ಆಕ್ರಮಣ ಆಯ್ತಂತೆ, ಅವ್ರು ಮಧ್ಯ ಏಷ್ಯಾದವ್ರಂತೆ. ಅವ್ರು ಮಹಾನ್ ಮೋಸಗಾರರಂತೆ. ಆಮೇಲೆ ಇಲ್ಲಿನ ಮುಗ್ದ ದ್ರಾವಿಡರನ್ನು ನಂಬಿಸಿ ಗುಲಾಮರನ್ನಾಗಿ ಮಾಡ್ಕೊಂಡ್ರಂತೆ. ಹೀಗೆ ಎಷ್ಟೊ ಸಾವಿರ ವರ್ಷದ ವರೆಗೆ ಇದೇ ನಡ್ಕೊಂಡು ಬಂತು ನೋಡಿ. ಇಲ್ಲಿನ ದ್ರಾವಿಡರಿಗೆ ಬ್ರಿಟಿಷರು ಬಂದ್ ಮೇಲೆ ಬುದ್ದಿ ಬಂತಂತೆ, ಬ್ರಾಹ್ಮಣರ ಮೋಸ ಅರ್ಥ ಆಯ್ತಂತೆ.
   ಅಪ್ಪಿ ತಪ್ಪಿ ಯಾರಾದ್ರು ಅವರ ಅಸಂಬದ್ಧ ಹೇಳಿಕೆಯನ್ನು ತಾರ್ಕಿಕವಾಗಿ ಪ್ರಶ್ನಿಸಿದರೂ ಅವ್ರನ್ನ ಬ್ರಾಹ್ಮಣರ ಗುಂಪಿಗೆ ಸೆರ್ಸಿಬಿಡ್ತಾರೆ.
   ಆದ್ರೆ ಇಂತ ಕತೆಗೆ ಸಿಗೊ ಪ್ರಚಾರ, ಆರ್ಯರ ಆಕ್ರಮಣದ ಕತೆ ಸುಳ್ಳು ಅಂತ ಪ್ರೂವ್ ಮಾಡೊ ವೈಜ್ನಾನಿಕ ಆಧಾರಕ್ಕೆ ಪ್ರಚಾರನೆ ಸಿಗ್ತಾ ಇಲ್ವೆ!!!

   ಉತ್ತರ
   • Maaysa
    ಜೂನ್ 27 2013

    ಭಟ್ರೇ.

    “ಅಪ್ಪಿ ತಪ್ಪಿ ಯಾರಾದ್ರು ಅವರ ಅಸಂಬದ್ಧ ಹೇಳಿಕೆಯನ್ನು ತಾರ್ಕಿಕವಾಗಿ ಪ್ರಶ್ನಿಸಿದರೂ ಅವ್ರನ್ನ ಬ್ರಾಹ್ಮಣರ ಗುಂಪಿಗೆ ಸೆರ್ಸಿಬಿಡ್ತಾರೆ.”

    ಅದು ಹೆಂಗೆ ? ಬ್ರಾಹ್ಮಣರು ಈ ಬಗ್ಗೆ ಮಾತಾಡಿದ್ರೆ ತಾನೇ ?
    ನೋಡಿ ಬ್ರಾಹ್ಮಣರು ಪೆದ್ದರು . ಎಲ್ಲ ವಿಷಯಕ್ಕೂ ನನ್ನದೆಲ್ಲಿ ಅಂತ ಹೋಗ್ತಾರೆ. ಧರ್ಮದ ಹೆಸರಲ್ಲಿ ದುಡ್ಡು ಮಾಡ್ತಾರೆ .

    ನನಗೆ ಕೇಳಿದ್ರೆ ಬ್ರಾಹ್ಮಣರು ಈ ವಾದ, ವಿವಾದ, ವೈಚಾರಿಕತೆ, ಧರ್ಮ-ಸಂರಕ್ಷಣೆ ಎಲ್ಲ ಬಿಟ್ಟು ದೊಡ್ಡ ದೊಡ್ಡ ವಿಜ್ಞಾನಿಗಳು, ಉದ್ಯಮಿಗಳು, ಆಗಬೇಕು. ಭಾರತಕ್ಕಿಂತ ಚೆನ್ನಾಗಿರುವ ದೇಶಗಳಿಗೆ ಹೋಗಿ ನೆಲೆಸಿ, ಭಾರತದ ಮೂಲನಿವಾಸಿಗಳಾದ ದ್ರಾವಿಡರಿಗೆ ಅನುಕೂಲ ಮಾಡಿಕೊಡಬೇಕು. 🙂

    “ವೈತಸಿವೃತ್ತಿ” ಅಂದರೆ ರಭಸವಾಗಿ ಹರಿಯುವ ನದಿಯಲ್ಲಿ ಬೆಳೆದ ಜೊಂಡು ಹುಲ್ಲು ಬೇರಿನಿಂದ ಬಲವಾಗಿದ್ದರು, ನದಿಯ ರಭಸಕ್ಕೆ ಅಡ್ಡಮಾಡದೆ ಬಳುಕುತ್ತಾ ಇರುವುದು. ಹೇಗೆ ಅದು ನದಿಗೆ ವಿರುದ್ಧವಾಗಿಯೂ ಇರದೆ, ಅಥವಾ ನದಿಯ ರಭಸಕ್ಕೆ ಕೊಚ್ಚಿಹೋಗದೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು. ಇದು ಕಾಳಿದಾಸನ ರಘುವಂಶ

    ಉತ್ತರ
    • ಜೂನ್ 27 2013

     “ಧರ್ಮದ ಹೆಸರಲ್ಲಿ ದುಡ್ಡು ಮಾಡ್ತಾರೆ .”
     ಹೌದು ಆದ್ರೆ ಅದನ್ನು ನಂಬುವ ಪೆದ್ದರಿರುವವರೆಗೂ ಎಲ್ಲರೂ ಬೇರೆ ಬೇರೆ ಹೆಸರಲ್ಲಿ ಮೋಸ ಮಾಡುವವರೆ. ಪೆದ್ದ ಬುದ್ಧಿವಂತ ಆಗ್ಭೆಕೆ ಹೊರ್ತೂ ಬೇರೆಯವ್ರು ಮೋಸ ಮಾಡಿದ್ರೂ ಅಂತ ಅಳ್ಬಾರ್ದು ಅಲ್ವಾ? ನೀವು ದೇವ್ರನ್ನು ನಂಬಿದ್ರೆ ಮಾತ್ರ ದೇವರ ಹೆಸ್ರಲ್ಲಿ ಮೋಸ ಮಾಡ್ತಾರೆ, ನಿಮ್ಮ ಕುತ್ಗೆ ಹಿಡಿದು ನಂಬಿಸ್ತಾರಾ? ಅಷ್ಟಕ್ಕೂ ದೇವರ ಹೆಸರಲ್ಲಿ ಬ್ರಾಹ್ಮಣರೊಬ್ರೆ ಮೋಸ ಮಾಡೊದಾದ್ರೆ ದೇವರು ಬ್ರಾಹ್ಮಣರ ಆಸ್ತಿನಾ? ಹೌದು ದೆವರು ನಮ್ಮ ಆಸ್ತಿ ಅಂತ ಬ್ರಾಹ್ಮಣ್ರು ಹೇಳ್ಕೊಂಡ್ರೆ ಅದ್ರ ನಂಬುವವರು ಎಂತವ್ರು?
     “ಭಾರತದ ಮೂಲನಿವಾಸಿಗಳಾದ ದ್ರಾವಿಡರಿಗೆ ಅನುಕೂಲ ಮಾಡಿಕೊಡಬೇಕು. :)”
     ನೀವು ತಮಾಶೆಗೆ ಈ ಮಾತನ್ನ ಹೇಳಿಲ್ಲ ಅಂದ್ರೆ, ನೀವು ಅಂತಹ ಅಸಂಬದ್ಧ ಜನರ ಗುಂಪಿಗೆ ಸೇರ್ತೀರ? ನೀವು ವಿಜ್ನಾನವನ್ನು ನಂಬ್ತೀರ ಅಂತಾದ್ರೆ, ಈಗಾಗ್ಲೆ ಆರ್ಯ-ದ್ರಾವಿಡ ಕತೆಗಳು ವಿಜ್ನಾನವೆ ಕಸದಬುಟ್ಟಿಗೆ ಎಸೆದಿರುವದರ ಬಗ್ಗೆ ತಿಳುವಳಿಕೆ ಹೊಂದಬೇಕು. ಇಲ್ಲಾ ಅಂದ್ರೆ ನೀವು ಅದೆ ಕೆಟಗರಿಗೆ ಸೇರ್ತೀರಿ ಅಷ್ಟೆ 🙂

     ಉತ್ತರ
     • Maaysa
      ಜೂನ್ 28 2013

      ಜನಕ್ಕೆ .. ಆತುರವೋ ಪೆದ್ದೋ ರಾಮ ರಾಮ !

      ವಿವರಣೆ!

      “ಧರ್ಮದ ಹೆಸರಲ್ಲಿ ದುಡ್ಡು ಮಾಡ್ತಾರೆ .” ಅಂದರೆ “ಮೋಸ ಮಾಡ್ತಾರೆ” ಅಂತ ಅಲ್ಲ. ಭಾರತದಲ್ಲಿ ಅಧರ್ಮದ ಹೆಸರಲ್ಲಿ ದುಡ್ಡು ಮಾಡೋರ ಸವಾಸಕ್ಕೆ ಯಾರೂ ಹೋಗಲ್ಲ ಹಿಂಗೆ,

      “ಭಾರತದ ಮೂಲನಿವಾಸಿಗಳಾದ ದ್ರಾವಿಡರಿಗೆ ಅನುಕೂಲ ಮಾಡಿಕೊಡಬೇಕು.”
      ‘ದ್ರಾವಿಡರು’ ಎಂಬುದು ಒಂದು ನಂಬಿಕೆ, ರಿಲಿಜನ್ ತರ. ಅವರ ಮೂಲ ನಂಬಿಕೆ “ಬ್ರಾಹ್ಮಣರು ಆರ್ಯ ಪರಕೀಯರು” ಹಾಗು “ದ್ರಾವಿಡರು ಮಾತ್ರ ಮೂಲನಿವಾಸಿಗಳು” ಎಂದು. ಅವರು ಕೆಲವು ಸಲ ಮೈನಾರಿಟಿ, ಕೆಲವು ಸಲ ಮೆಜಾರಿಟಿ. ಅವರ ವಿರುದ್ಧ ಮಾತಾಡಿ ಅವರ ಧಾರ್ಮಿಕ ನಂಬಿಕೆಗಳಿಗೆ ಯಾಕೆ ಘಾಸಿ ಮಾಡಬೇಕು?

      ಉತ್ತರ
      • ಜೂನ್ 28 2013

       ““ಧರ್ಮದ ಹೆಸರಲ್ಲಿ ದುಡ್ಡು ಮಾಡ್ತಾರೆ .” ಅಂದರೆ “ಮೋಸ ಮಾಡ್ತಾರೆ” ಅಂತ ಅಲ್ಲ.”
       ನೀವೇನೊ ಹೀಗೆ ಹೇಳ್ತೀರ, ಆದ್ರೆ ನಮ್ಮ ಪ್ರಕಾಂಡ ದಲಿತ ಸಾಹಿತಿಗಳು ಮೋಸ ಅಂತಾನೆ ಕರ್ಯೋದು. ಇರಲಿ ಅಲ್ಲಿ ಮೋಸ ನಡ್ಯೋದು ನಿಜ, ಆದ್ರೆ ನಂಬುವ ದಡ್ಡರ ಮೇಲೆ ಮಾತ್ರ ದೌರ್ಜನ್ಯ ಅಷ್ಟೆ. ಹಾಗಂತ ಇಡೀ ಇತಿಹಾಸವನ್ನು ಆಧಾರ ಇಲ್ಲದೆ ಒಂದೇ ಹೈಪೊಥಿಸಿಸ್ ಮೂಲಕ ಅರ್ಥ ಮಾಡ್ಕೊಳೊದು ಸಮಾಜ ವಿಜ್ನಾನ ಅಲ್ಲ, ಮೂರ್ಖತನ ಅಷ್ಟೆ. ನಮಗೆ ಬೇಕಾದ್ದು ವಸ್ತುನಿಷ್ಟವಾದ ಸಮಾಜ ವಿಜ್ನಾನದ ಅಧ್ಯಯನ.
       “ಅವರ ವಿರುದ್ಧ ಮಾತಾಡಿ ಅವರ ಧಾರ್ಮಿಕ ನಂಬಿಕೆಗಳಿಗೆ ಯಾಕೆ ಘಾಸಿ ಮಾಡಬೇಕು?”
       ಹಾಗದರೆ ಜನರನ್ನು ಒಡೆಯೊ ಧಾರ್ಮಿಕ ಆಚರಣೆಗಳಂತೆ ಇದೂ ಒಂದು ಅವರದೆ ಆದ ಮೌಢ್ಯ ಅನ್ನಿ. ಆದ್ರೆ ಎಲ್ಲಾ ಧಾರ್ಮಿಕ ಮೌಢ್ಯಗಳ ವಿರುದ್ಧ ದನಿ ಎತ್ತಿದ ಹಾಗೆ ಇದರ ವಿರುದ್ಧನೂ ಮಾತಾಡ್ಬೇಕಲ್ವಾ? ಉದಾ: ಪಂಕ್ತಿಬೇಧ ಬೋಜನ, ಮಡೆಸ್ನಾನ ಇತ್ಯಾದಿ ಅವೈಜ್ನಾನಿಕ ಧಾರ್ಮಿಕ ನಂಬಿಕೆಗಳ ವಿರುದ್ಧ ನಾವು ಹೇಗೆ ವ್ಯವಹರಿಸ್ತೀವೊ ಹಾಗೆ ದ್ರಾವಿಡ-ಆರ್ಯ ನಂಬಿಕೆಗಳ ವಿರುದ್ಧನೂ ಮಾತಾಡ್ಬೇಕಲ್ವಾ? ಮಡೆಸ್ನಾನ etc ಗಳು ಧಾರ್ಮಿಕ ನಂಬಿಕೆ ಅಂತ ಅದರ ವಿರುದ್ಧ ಮಾತಾಡ್ದೆ ಬಿಟ್ ಬಿಟ್ಟಿದೀವಾ?

       ಉತ್ತರ
       • Maaysa
        ಜೂನ್ 28 2013

        ಅಲ್ರೀ .. ಇದೆಲ್ಲ ಬಿಟ್ಟಾಕಿ ಅಮೇರಿಕ ಯುರೋಪಿಗೆ ಹೋಗಿ ಬೆಲೆ ಸಿಗುತ್ತೆ .. ಬಾಲು, ಡಂಕಿನ್ ಮುಂತಾದವರ ಹಾಗೆ .

        ಉತ್ತರ
        • ಬಸವಯ್ಯ
         ಜೂನ್ 29 2013

         ಅಲಾಲಾ..ಬುದ್ದಿವಂತ ಬ್ರಾಹ್ಮಣರನ್ನು , ಅವರ ಸಹಚರರನ್ನು ಉಪಾಯವಾಗಿ ವಿಮಾನ ಹತ್ತಿಸುವ ಯೋಜನೆ!..ದ್ರಾವಿಡರು ಕಡಿಮೆಯಿಲ್ಲ!!! 🙂

         ಉತ್ತರ
         • Maaysa
          ಜೂನ್ 29 2013

          ^^

          ದ್ರಾವಿಡರು ಯಾಕೆ ನೀಚ ಬ್ರಾಹ್ಮಣರ ಜತೆ ಪೋಟಿಗೆ ಇಳೀಬೇಕು ? ಅವರು ರಾಕೆಟ್ಟು ಏರಿ ಬೇರೇ ಗ್ರಹಕ್ಕೇ ಹೋಗಲಿ ಎಂದು ಹಂಬಲಿಸುವೆ .

          ಶುಭಮಸ್ತು .

          ಉತ್ತರ
          • ಜೂನ್ 29 2013

           ದ್ರಾವಿಡ-ಅದ್ರಾವಿಡ ಕುರಿತ ಪೆಕರುತನದ ಮಾತಿಗೆ ಮಂಗಳ ಪಾಡುವ ಲಕ್ಷಣ ಕಾಣದು.

          • Maaysa
           ಜೂನ್ 29 2013

           ^^ ಪಾಡುವ? ಇದು ೨೧ನೇ ಶತಮಾನ!

           ಅದ್ರಾವಿಡ ಎಂದು ದ್ರಾವಿಡರು ಸಂಸ್ಕೃತ ‘ಅ’ ಉಪಸರ್ಗವನ್ನು ಬಳಸಿದರೆ ಅವರ ಕಣ್ಣು -ಹೋಗುವುದು ಎಂದು ದ್ರಾವಿಡರ ಆಸ್ಥೆ !

          • ಜೂನ್ 29 2013

           ೨೧ನೇ ಶತಮಾನದಲ್ಲೂ ಪೆಕರುತನ ಕೊನೆಗೊಳ್ಳುವ ಲಕ್ಷಣ ಕಾಣದು. ಪಾಡುವ ಎನ್ನುವುದನ್ನು ಬೇಕಾದರೆ ಹಾಡುವ ಎಂದು ೨೧ನೇ ಶತಮಾನದಲ್ಲೂ ಪೆಕರುತನ ಕೊನೆಗೊಳ್ಳುವ ಲಕ್ಷಣ ಕಾಣದು. ಪಾಡುವ ಎನ್ನುವುದನ್ನು ಬೇಕಾದರೆ ಹಾಡುವ ಎಂದು ಆಧುನಿಕೀಕರಿಸಿಕೊಳ್ಳಬಹುದು.

          • Maaysa
           ಜೂನ್ 29 2013

           ” ಪಾಡುವ ಎನ್ನುವುದನ್ನು ಬೇಕಾದರೆ ಹಾಡುವ ಎಂದು ಆಧುನಿಕೀಕರಿಸಿಕೊಳ್ಳಬಹುದು.”

           ಈ ‘Bolumbu ಕನ್ನಡ’ದ ವ್ಯಾಕರಣವು ಮುನ್ನವೇ ಅರಿವಿರದ ಅಪರಾಧವನ್ನು ಮನ್ನಿಸಿ .

   • Gopalakrishna Bhagwat
    ಜುಲೈ 31 2013

    Aryan invasion theory is absolutely right and it is crystal clear now and every body know that. The cultural religious and linguistic differences are quite evident to substantiate the theories.

    ಉತ್ತರ
    • ಆಗಸ್ಟ್ 2 2013

     @Gopalakrishna Bhagwat
     Kindly show some evidence to prove the Aryan Invasion Theory.

     ಉತ್ತರ
     • Gopalakrishna Bhagwat
      ಆಗಸ್ಟ್ 3 2013

      Mr. kp you too provide evidences that the claim of Aryan invasion is false.It is researched in many British and Indian historiographies.

      ಉತ್ತರ
      • Shanmukha
       ಆಗಸ್ಟ್ 5 2013

       ಇರೋದನ್ನು ಇದೆ ಇಂತ ಸಾಭೀತು ಮಾಡೋಕೆ ಸಾಕ್ಷಿಗಳು (ವಾಸ್ತವದಲ್ಲಿ ಅವು ಇರುವುದರಿಂದ ಅವುಗಳ ಇರುವಿಕೆಗೆ ಸಾಕ್ಷಿ) ಸಿಗುತ್ತದೆ. ಇಲ್ಲದೇ ಇರೋದನ್ನು ಇಲ್ಲ ಅಂತ ತೋರಿಸಲು ಅಲ್ಲ. ಹೀಗಾಗಿ, ಇಲ್ಲ ಅಂತ ಸಾಬೀತು ಮಾಡಲು ಸಾಕ್ಷಿ ಕೇಳುವುದು ತಾರ್ಕಿಕವಾಗಿ ಸರಿಯಲ್ಲ. ಬದಲಿಗೆ ಆ ವಾದವನ್ನು ತಪ್ಪೆಂದು ತೋರಿಸಲು ಯಾವುದು ಇಲ್ಲವೆಂದು ವಾದಿಸಲಾಗುತ್ತದೆಯೋ ಅದರ ಇರುವಿಕೆಗೆ ಸಾಕ್ಷಿ ತೋರಿಸಬೇಕಾಗುತ್ತದೆ. ಆಗ ಇಲ್ಲವೆನ್ನುವ ವಾದ ಬಿದ್ದು ಹೋಗುತ್ತದೆ. ಅದನ್ನು ಬಿಟ್ಟು ಇಲ್ಲವೆನ್ನುವುದಕ್ಕೆ ಸಾಕ್ಷಿ ಕೇಳಿದರೆ ತರ್ಕದ ಬಳಕೆಯ ಪ್ರಾಥಮಿಕ ಜ್ಞಾನದ ಅರಿವಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.

       ಉತ್ತರ
       • Gopalakrishna Bhagwat
        ಆಗಸ್ಟ್ 5 2013

        Mr. shanmukha you assume that only logic is enough to answer all the questions life. That itself is a logical fallacy. Alongwith logic one should have commonsense and contextual understanding which is lacking in the arguments of your coterie. The Aryan invasion theory is long established truth and you know that many outstanding research articles have been written. It is accepted by almost all of the scholars.

        ಉತ್ತರ
       • Annapoorna
        ಆಗಸ್ಟ್ 5 2013

        ಪ್ರಿಯ ಷಣ್ಮುಖ, ಈ ನಕಲಿ ಭಾಗವತರೊಡನೆ ಸಂವಾದ ಖಂಡಿತ ಸಾಧ್ಯವಿಲ್ಲ. ನಕಲಿ ಭಾಗವತರು ಕಮೆಂಟು ಮಾಡುವುದರ ಹಿಂದಿನ ಅಸಲಿ ಉದ್ದೇಶ ಏನು ಎಂದು ಈಗಾಗಲೇ ತಮಗೆ ಸ್ಪಷ್ಟವಾಗಿರಬಹುದು. ಇವರಿಗೆ ತಿಳಿ ಹೇಳಿ ಪ್ರಯೋಜನವಿಲ್ಲ.

        ಉತ್ತರ
        • Praveen
         ಆಗಸ್ಟ್ 6 2013

         Mr. Gopal Krishna, you are wrong bcoz Aryan Invasion theory is not yet accepted truth.. Dr. B. R. A himself rejected this theory.

         ಉತ್ತರ
         • Gopalakrishna Bhagwat
          ಆಗಸ್ಟ್ 6 2013

          Mr. Praveen there is no logic in your above comment.
          1. you have not mentioned who has not accepted the truth of Aryan invasion.
          2. You have mentioned Dr. Ambedkar has not accepted the theory. So the criteria to you to decide a theory is Dr. Ambedkar should accept. So whatever Dr. Ambedkar Said about Hinduism will you accept them as truth?

          ಉತ್ತರ
          • Annapoorna
           ಆಗಸ್ಟ್ 6 2013

           ಪ್ರವೀಣ್, ಈ ನಕಲಿ ಭಾಗವತ ಮೊದಲಾದ troll ಗಳಿಗೆ ನೀವು ಕೇಳುವ ಪ್ರತಿಯೊಂದು ಪ್ರಶ್ನೆಯೂ ಇನ್ನಷ್ಟು ಹೊಲಸು ಎರಚಲು ಆಹ್ವಾನ ಕೊಟ್ಟ ಹಾಗೆ. ಇವರುಗಳು ಹೊಲಸಿನಲ್ಲಿ ಹೊರಳಾಡುವ ಹಂದಿಗಳ ಹಾಗೆ. ಇವರುಗಳಿಗೆ ಕಡಿವಾಣ ಹಾಕಲು ಸಂಪಾದಕರಿಗೆ ಹೇಳಿ. ಸಂಪಾದಕರಿಗೆ ಅದು ಸಾಧ್ಯವಾಗದಿದ್ದರೆ ನಕಲಿ ಭಾಗವತರ ಅಸಂಬದ್ಧ ಕಾಮೆಂಟುಗಳನ್ನು ನಿರ್ಲಕ್ಷ್ಯ ಮಾಡಿ.

          • Praveen
           ಆಗಸ್ಟ್ 7 2013

           ಗೋಪಾಲ ಕೃಷ್ಣರವರೇ, ಕನಿಷ್ಟ ತರ್ಕದ ಪರಿಜ್ಞಾನವಿಲ್ಲದ ನೀವು ತರ್ಕದ ಬಗ್ಗೆ ಪಾಠ ಮಾಡುವ ಪ್ರಯತ್ನ ಬೇಡ..1)ನೀವೇ ಹೇಳಿದ್ದೀರಿ ಆರ್ಯನ್ ಇನ್ವೇಷನ್ ಥಿಯರಿಯು almost all of the scholars ಗಳಿಂದ ಸ್ವೀಕೃತವಾದ ಸತ್ಯ ಎಂದು ಹೇಳಿದ ನಿಮ್ಮ ಹೇಳಿಕೆಗೆ ನನ್ನ ಪ್ರತಿಕ್ರಿಯೆ. ಜಾತಿವ್ಯವಸ್ಥೆ, ಹಿಂದೂಯಿಸಂ ಬಗ್ಗೆ ಬೇರೆ ಚಿಂತಕರ ತರಹದೇ ನಿಲುವನ್ನು ಹೊಂದಿರುವ ಅಂಬೇಡ್ಕರ್ರವರೇ ಅದನ್ನು ತಿರಸ್ಕರಿಸುವಾಗ ನಿಮ್ಮ almost all of the scholars ಈ ಥಿಯರಿಯನ್ನು ಒಪ್ಪಿದ್ದಾರೆ ಎಂಬ ಹೇಳಿಕೆಯೇ ಅಸಂಬದ್ದ. 2) ಗುರುವೇ ಅಂಬೇಡ್ಕರ್ ಒಪ್ಪುವುದು ಮಾನದಂಡವೆಂದು ನಾನು ಸಾರುತ್ತಿಲ್ಲ. ಅದೊಂದು ಒಪ್ಪಿತ ಸತ್ಯವೇನಲ್ಲ ಎಂಬುದನ್ನು ಹೇಳಿದ್ದೀನಷ್ಟೇ.

         • Gopalakrishna Bhagwat
          ಆಗಸ್ಟ್ 9 2013

          Ms. Annapurna by ur language it is clear that you are also a hog who is wallowing here simply grumbling this and that

          ಉತ್ತರ
      • ಆಗಸ್ಟ್ 8 2013

       As of now, almost all Marxist historians have shifted from Aryan Invasion Theory (AIT) towards an Aryan Migration Theory (AMT). The question of demolishing the previous settlements by Aryans does not arise here, as when the Aryans entered the previous settlements were already deteriorated. (Romila Thapar)

       ಅಷ್ಟೇ ಅಲ್ಲದೆ, ದಸ್ಯುಗಳೆಂದರೆ ಆರ್ಯರದ್ದೇ ಇನ್ನೊಂದು ವಿಭಾಗ ಎಂಬ ಮಾತೂ ಇದೆ. [ಐರಾವತಂ ಮಹಾದೇವನ್]

       ಉತ್ತರ
 8. vageesh
  ಜುಲೈ 1 2013

  nanige gottiruvante ‘AGNIMEELE PUROHITHAM mattu PURUSHASOOKTA’ veedagalinda bandiddu. adannu archakaru gattiyaagi heluttare, adu allidda dalitara kivigoo beelutte andare KAADA SEESA haaki endu heliruvudara hinde beere artha irabeku. adannu samshodisuvudu bittu, veeda haage helitu, smruthi heege heli shudrarannu horagittitu annuvudaralli artha illa allwa ?

  ಉತ್ತರ
 9. ಜುಲೈ 6 2013

  ಬೌದ್ಧರ ಕ್ಷಯ ಮುಸಲ್ಮಾನರಿಂದ ಆಯಿತು ಎಂಬ ಸ್ಪಷ್ಟ ಅಭಿಪ್ರಾಯವನ್ನು ಡಾ| ಅಂಬೇಡ್ಕರ್ ರವರು ಹೇಳಿದ್ದಾರೆ. ಬೌದ್ದ ಮತವನ್ನು ಸಾಂಗೋಪಾಂಗವಾಗಿ ಅದ್ಯಯನ ಮಾಡಿ ಸ್ವತಃ ಬೌದ್ದರಾದ ಡಾ| ಅಂಬೇಡ್ಕರ್ ಸತ್ಯ ನಿಷ್ಠೆಗೆ ಹೆಸರಾಗಿದ್ದಾರೆ. ನಾವು ಡಾ| ಅಂಬೇಡ್ಕರ್ ನ್ನು ನಂಬಬೇಕೋ ಅಥವಾ ತಮ್ಮದೆ ಆದ ಹಿಂದೂ ವಿದ್ವೇಷದ ಅಜೆಂಡಾ ಇಟ್ಟುಕೊಂಡು ಅಸತ್ಯವನ್ನು ಪ್ರತಿಪಾದಿಸುವ ಸೋಗಲಾಡಿ ಜಾತ್ಯತೀತರನ್ನು ನಂಬಬೇಕೋ ಎಂಬುದು ವಿಚಾರವಂತರ ಪ್ರಶ್ನೆ.

  ಉತ್ತರ
  • Gopalakrishna Bhagwat
   ಆಗಸ್ಟ್ 3 2013

   Mr. Vasudeva rao there is no logic in your above comment. Because if we accept whatever Dr.B.R. Ambedkar has said about the disappearance of Buddhism Then whatever he said about Hinduism must be true. Do you accept whatever he has has said about Hinduism? He also has said ” I was born as Hindu but I wont die as Hindu”. What is the reason behind this statement? I am asking this because u hv quoted from his writing and I feel u hv read his works.

   ಉತ್ತರ
 10. Gopalakrishna Bhagwat
  ಆಗಸ್ಟ್ 3 2013

  The first paragraph of this article best applies to the coterie of this website

  ಉತ್ತರ
  • ನವೀನ
   ಆಗಸ್ಟ್ 4 2013

   ಸತ್ಯ “ಕಹಿ” ಅಲ್ಲವೇ? ಅರಗಿಸಿಕೊಳ್ಳಲು ಪ್ರಯತ್ನಿಸಿ

   ಉತ್ತರ
   • Gopalakrishna Bhagwat
    ಆಗಸ್ಟ್ 5 2013

    thats wht i told u digest the fact that this web is gang of fake identities and with a hidden agenda hiding behind the screens

    ಉತ್ತರ
    • Ramakrishna Nadiga
     ಆಗಸ್ಟ್ 5 2013

     Mr. Naveen Indians have digested the bitter truth of how these priestly conspiracies have ruined this country and in turn ruined themselves. But stil they cant do good things because the sin they have committed wont spare them and dont allow them live in peace.

     ಉತ್ತರ
     • ಆಗಸ್ಟ್ 6 2013

      ಭಾಗವತ್,ನಾಡಿಗ್ ಇತ್ಯಾದಿ ಹೆಸರಿನಲ್ಲಿ ನಟಿಸುವುದು ಬಿಟ್ಟು ಆ ನಂತರ ಈ ವೆಬ್ಸೈಟ್ ಬಗ್ಗೆ ಮಾತನಾಡಿ ಮಾನ್ಯರೇ.
      ಇಲ್ಲಿ ಎಲ್ಲರ ಅಭಿಪ್ರಾಯಕ್ಕೂ ಮುಕ್ತ ಸ್ವಾಗತವಿದೆ.ಬೇಕಿದ್ದರೆ ನೀವು ನಿಮ್ಮ ನಿಜ ನಾಮಧೇಯದಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಬರೆದು ಕಳಿಸಬಹುದು. ಸುಖಾಸುಮ್ಮನೇ “ನಿಲುಮೆ”ಯ ಬಗ್ಗೆ ಮಾತನಾಡುವುದು ಬಿಡಿ.

      ಉತ್ತರ
      • Gopalakrishna Bhagwat
       ಆಗಸ್ಟ್ 9 2013

       Mr. Shetty why are bothered so much about names? why cant u concentrate on the ideas in the comments? have I ever asked u to stop acting in fake names?

       ಉತ್ತರ
       • ಆಗಸ್ಟ್ 10 2013

        Gopalakrishna Bhagwat,
        “The first paragraph of this article best applies to the coterie of this website” ಅಂತ ಪ್ರಶ್ನೆ ಕೇಳಿದಿರಲ್ಲಾ ಇದರರ್ಥವೇನು? ಇನ್ನೊಬ್ಬರ ಮುಂದೆ ಬೆರಳು ತೋರುವ ಮುನ್ನ ನಿಮ್ಮ ಮುಖವಾಡ ಕಳಚಬೇಕು ಅಂತ ತಮಗನ್ನಿಸಲಿಲ್ಲವೇ? ಸರಿ. ಅದನ್ನು ಹಾಕಿಕೊಂಡೆ ಮೇಲಿನ ನಿಮ್ಮ ಮಾತುಗಳ ಅರ್ಥವೇನು ವಿವರಿಸಿ.

        ಉತ್ತರ
     • Nagshetty Shetkar
      ಏಪ್ರಿಲ್ 28 2015

      “bitter truth of how these priestly conspiracies have ruined this country”

      +1

      ಉತ್ತರ
 11. Gopalakrishna Bhagwat
  ಆಗಸ್ಟ್ 9 2013

  mr. Shetty first you give these advice to the fake people who are on this website. I don’t know why do feel my name is fake. Have you not heard this name anytime? or are you pretending as if you have not heard? or do you feel if anybody posts any comments on this website appears fake to you? I too can say the samething to you. Will you prove your genuineness?

  ಉತ್ತರ
  • ಆಗಸ್ಟ್ 9 2013

   ^^^ Mr. Shetty doesn’t have to prove his genuiness, at least on this website.

   ಉತ್ತರ
   • Gopalakrishna Bhagwat
    ಆಗಸ್ಟ್ 9 2013

    yes Mr. Bolumbu nobody needs to prove genuineness here because all are fake

    ಉತ್ತರ
    • ಆಗಸ್ಟ್ 9 2013

     Do you mean it? If you are not aware, Rakesh Shetty is the administrator of this website.

     ಉತ್ತರ
     • Gopalakrishna Bhagwat
      ಆಗಸ್ಟ್ 9 2013

      What about others?

      ಉತ್ತರ
      • ಆಗಸ್ಟ್ 10 2013

       What about others? I am not here to justify ‘others’. Rakesh Shetty is the administrator of this website and he doesn’t have to prove his genuineness. (period)

       ಉತ್ತರ
       • ಆಗಸ್ಟ್ 10 2013

        ಬೊಳಂಬು ಅವರೇ ಬಿಟ್ಟು ಬಿಡಿ ಅವರು ಒಪ್ಪಿ ನಮಗೇನಾಗಬೇಕಿದೆ.

        ಉತ್ತರ
        • ಬಸವಯ್ಯ
         ಆಗಸ್ಟ್ 11 2013

         ಈ ಭಾಗ್ವತಪ್ಪಂಗೆ ದಿಗ್ವಿಜಯ್ ಏನಾದ್ರೂ ಕಚ್ಚಿದ್ದಾರೊ ಏನೊ ಅಂತಾ ನನಗೆ ಅನುಮಾನ!,,ಅಥವಾ ಮಳೆಗಾಲದ ಚಳಿಗೆ ತೆಪ್ಪಗೆ ಕೂರಲಿಕ್ಕೆ ಆಗ್ತಿಲ್ವೊ? 🙂

         ಉತ್ತರ
         • Annapurna
          ಆಗಸ್ಟ್ 11 2013

          Ranjan Darga avaru avadhiyalli odugaru kelida prashnegalige uttara kodalaagade hataasharaagi tamma shishyavargavannu nilume mele choo bittiddaare anta anumaana nanage. Avadhiyalloo Darga avara shishyaru odugarannu bedarisi nindisi Manu gumma horisi baayi muchchisalu henagiddaru. Che! Enu sanskruti ivarugaladdu Vachanakarara hesaru helodu maadodu goondagiri. 😦

          ಉತ್ತರ
          • ಬಸವಯ್ಯ
           ಆಗಸ್ಟ್ 11 2013

           ಹೂಂ ಅನ್ನಪೂರ್ಣ.. ಅವಧಿಯ ಚರ್ಚೆ ಗಮನಿಸಿದ್ದೆ ಯಾವುದೇ ವಿಷಯಕ್ಕೆ, ಇವರ ಗುರು ಒಂದು ಸಮರ್ಥನೆ ಕೊಟ್ಟರೆ, ಈ ಶಿಷ್ಯರು ಕೊಡೊದು ತದ್ವಿರುದ್ಧದ ಸಮರ್ಥನೆ. ಇರೊ ನಾಲ್ಲು ಜನರ ಗುಂಪಿಗೆ ತಾಳ-ಮೇಳ ಇಲ್ಲ, ಕಾಣೋದು ಜಗತ್ತನ್ನು ತಿದ್ದೊ ಕನಸು! 🙂

 12. ಏಪ್ರಿಲ್ 28 2015

  Most people associate the death card with bodily
  death, however, that is seldom the case. psychic reading for the
  number 12: The spirits tell me that you have two feasible fates this 7 days.

  ಉತ್ತರ
 13. kashipathialseas
  ಮೇ 28 2020

  ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ನವರೂ ಬೌದ್ಧ ಮತ ಭಾರತ ದಿಂದ ಕಾಣೆಯಾಗಲು ವೈದಿಕ ಹಿಂದು ಗಳ‌ಮೇಲೆ ಗುಮಾನಿ ಹೊರೆಸಿದ್ದಾರೆ. ಅಜಾಗರೂಕತೆ ಯಿಂದ. ಹಾಗೇನೇ ‌ನಾಗಾರ್ಜುನಕೊಂಡ ದ ಬಗ್ಗೆ ಕತೆ‌ಚಾಲ್ತಿ ಯಲ್ಲಿದೆ

  ಉತ್ತರ

ನಿಮ್ಮದೊಂದು ಉತ್ತರ kpbolumbu ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments