ವಿಷಯದ ವಿವರಗಳಿಗೆ ದಾಟಿರಿ

ಜುಲೈ 6, 2013

ಇದೇನಾ… ಹುಚ್ಚು ಪ್ರೀತಿ…?

‍ನಿಲುಮೆ ಮೂಲಕ

– ಕೆ.ಎಂ.ವಿಶ್ವನಾಥ(ಮಂಕವಿ) ಮರತೂರ

Preetijಬೀದಿ ಹೋಟೇಲವೊಂದರಲ್ಲಿ  ಭಿಕ್ಷುಕನೊಬ್ಬ ಒಂದು ಪತ್ರಿಕೆ ಹಿಡಿದು ಹ್ಯಾಪಿ ಬರ್ತಡೇ ಟು ಯೂ ಹಾಡು ಹೇಳುತ್ತ ಘಾಡವಾಗಿ ಏನೊ ಓದುವಂತ ದೃಶ್ಯವಿತ್ತು . ಸಮೀಪ ಹೋಗಿ ನೋಡಿದರೆ ಆತ ಓದುತ್ತಿದ್ದದ್ದು  ಐದನೆ ಪುಣ್ಯಸ್ಮರಣೆಯ ಭಾವಚಿತ್ರ . ನಾನು ಸ್ವಲ್ಪ ಹತ್ತಿರ ಹೋಗಿ ಪತ್ರಿಕೆ  ಕಸಿದು ಕೊಳ್ಳಲು ಪ್ರಯತ್ನಿಸಿದರೆ , ಆತ ಕೋಪ ಬಂದವನಂತಾಗಿ ತನ್ನ ಒಡಲಾಳದ ವಿಷಯ ಯಾರ ಪರಿವೆಯಿಲ್ಲದೆ ಹೇಳಿಕೊಳ್ಳುತ್ತಾನೆ.  ಆ ಭಾವಚಿತ್ರಕ್ಕು ತನಗೂ ಇರುವ ಸಂಬಂದವನ್ನು ಬಿಚ್ಚಿ ಹೇಳುತ್ತಾನೆ.ಈತನ ಹೆಸರು ಗೋಪಾಲ ಸುಂದರ ಮೈಕಟ್ಟು ನಿಲುವು ಬಾಹು ಸತತ ವ್ಯಾಯಾಮ ಮಾಡಿ ಮನೆಯ ಖಾರಪುಡಿ ರೊಟ್ಟಿ ತಿಂದು ಗಟ್ಟಿಮುಟ್ಟಾಗಿ ಇದ್ದ ಆತನ ದೇಹ ಆಕರ್ಶಕವಾಗಿತ್ತು ಕಾಲೇಜು ಕನ್ನೆಯರಿಗೆಲ್ಲ ಕನಸಿನ ರಾಜಕುಮಾರ ನಂತಿದ್ದ .

ಲೇ.. ಆ ಫಿಗರು ಭಾರಿ ಇತ್ತಲೆ… ಆದರೆ ಅವಳು ಸ್ವಲ್ಪನು ತಿರುಗಿ ನೋಡಲೇಯಿಲ್ಲ. ಈ ಬಾರಿ ಸಿಗಲಿ ಅವಳನ್ನು ಬಿಟ್ಟರೆ ಕೇಳು ಅವಳ ಆ ಮೈಮಾಟ ನೋಡಿ ನನಗೆ ನಿದ್ದೆನೆ ಬರತಿಲ್ಲ ಕಣ್ರೊ. ಹೀಗೆ ಗೆಳೆಯೆರೆಲ್ಲ ಕಾಲೇಜು ಕ್ಯಾಂಪಸ್ ಲ್ಲಿ ಕಾಲಹರಣ ಮಾಡುತ್ತಾ ಆ ಕಾಲೇಜಿನ ಸುಂದರಿ ಪಾರ್ವತಿ ಊರ್ಫ ಪಾರು ಹುಡುಗಿಯ ಬಗ್ಗೆ ಮಾತಾಡುತ್ತಿದ್ದರು .

ನಮ್ಮ ಗೋಪಾಲ ನೋಡಿರೊ ಅಷ್ಟು ಹ್ಯಾಂಡ್ಸಂ ಆದರೂ ಯಾವ ಹುಡುಗಿ ತಂಟೆಗೂ ಹೋಗದೆ ಹೇಗೆ ಇರತಾನೆ ಅಂದ ರಹೀಮ , ಲೇ.. ಹುಚ್ಚಾ ಅವನಿಗ್ಯಾಕೊ ಅದರ ಚಿಂತಿ ಅವನ ಕಂಡರೆ ನಮ್ಮ ಹುಡುಗಿರೆ ಮುಗಿಬೀಳತಾರೆ ರವಿ ಅಂದ ಹಾಸ್ಯದಲ್ಲಿ.ಲೆ… ನೀವೆಲ್ಲ ಉದ್ಧಾರ ಆಗಲ್ಲ ಕಣ್ರೊ ಮಂದಿ ಹೆಣ್ಣು ಮಕ್ಕಳ ಬಗ್ಗೆ ಅಸಯ್ಯವಾಗಿ ಮಾತಾಡಬಾರದು ತಮ್ಮಿಂದಿರಾ ನಡೆಯಿರಿ ಕ್ಲಾಸ್ ಶುರುವಾಯಿತು ಎಂದು ಎಲ್ಲರಿಗೂ ಬುದ್ದಿವಾದ ಹೇಳಿದ ಕರ್ಣ . ಎಲ್ಲರು ತರಗತಿಯಲ್ಲಿ ಕುಳಿತರು ಈಗ ತರಗತಿಯಲ್ಲಿ ಇಂಗ್ಲೀಷ ಮೇಡಂ ಕ್ಲಾಸ್ ಇದೆ ಎಲ್ಲರು ಪಾಠಕ್ಕಿಂತ ಮೇಡಂ ಇಷ್ಠಾಂತ ಇಡಿ ತರಗತಿ ಹೌಸ್ ಫುಲ್ ಆಗಿತ್ತು .

ಗುಡ್ ಮಾರನಿಂಗ್ ಮಿಸ್ ಎಲ್ಲರು ಹೇಳಿದರು ತರಗತಿಯಲ್ಲಿ ರೇಖಾ ಮಿಸ್ ಬಂದಾಗ ಮೇಡಂ ಓಕೆ ಪ್ಲೀಸ್ ಸಿಟ್ ಡೌನ್ ಎಂದರು. ಮೇಡಂ ನೋಡಲು ಸುಂದರವಾಗಿದ್ದಳು ಸ್ವಲ್ಪ ಗ್ಲಾಮರ್ ಆಗಿದ್ದರಿಂದ ಹುಡುಗರ ರಾತ್ರಿ ಕನಸಿನ ಕನ್ನೆಯು ಆಗಿದ್ದಳು. ಅವಳ ಉಗ್ಗು ತಗ್ಗುಗಳು ನೋಡಲೆಂದೆ ಅನೇಕ ಪೊಲಿಗಳು ಅವರ ತರಗತಿ ಮಿಸ್ ಮಾಡಕೊತಿರಲಿಲ್ಲ ಅವರು ಬಂದು ಹೋಗಿದ್ರ ಪರಿವೆಯಿಲ್ಲದೆ ಕುಳಿತ್ತಿದ್ದರು ಹುಡುಗರೆಲ್ಲ.

ಇದೆ ಕಾಲೇಜಿನ ಒಂದು ಹುಡುಗಿ ಪಾರ್ವತಿ ತುಂಬ ಸುಂದರ ಹಾಗೂ ಶ್ರೀಮಂತರ ಮನೆಯ ಹುಡುಗಿ ತನ್ನ ತನವನ್ನು  ಯಾವತ್ತು ಬಿಟ್ಟು ಕೊಡದೆ ಹಗಲು ರಾತ್ರಿ ಓದಿ ಏನಾದರು ಸಾಧನೆ ಮಾಡಲೇಬೇಕು ಎನ್ನುವ ಹಠದ ಹುಡುಗಿ.  ಎಲ್ಲ ಹುಡುಗರು ಆಕೆಯ ಹಿಂದೆ ಮಾತಾಡುತ್ತಿದ್ದರು ಎದುರಿಗೆ ಯಾರು ಮಾತಾಡುತ್ತಿರಲಿಲ್ಲ .

ಅಪ್ಪ ನಾನು ಕಾಲೇಜಿಗೆ ಹೋಗಿ ಬರುತ್ತೀನಿ ಅಮ್ಮ ಹೋಗತ್ತೀನಿ ಟೈಮ್ ಆಯಿತು ಎನ್ನುವ ಪಾರ್ವತಿಯ ತಡೆದು ಅಮ್ಮ ಜಲಜಮ್ಮ ಇದಿಷ್ಟು ದೋಸೆ ಮುಗಿಸಿ ಹೋಗೆ ಆ ಕಾಲೇಜು ಕಲಿತು ನೀನು ಸಾದಿಸೋದು ಏನಿಲ್ಲ ನಿನ್ನ ಮಾಡಿಕೊಂಡ ಗಂಡ ತಾನೆ ತಂದ ಹಾಕುತ್ತಾನೆ. ಎಂದರು ಅವರ ಮಾತಿನಲ್ಲಿ ಮತ್ತು ಮನಸ್ಸಿನಲ್ಲಿ ಹೆಣ್ಣು ಕಲಿತರು ಅಷ್ಟೆ ಬಿಟ್ಟರು ಅಷ್ಟೆ ಎನ್ನುವ ಅರ್ಥ ಹೇಳುತ್ತಿತ್ತು . ತಾಯಿ ಮಾತಿಗೆ ಹೂಂ ಎನ್ನುತ್ತ ಹೊರಬಿದ್ದ ಪಾರ್ವತಿ ಕಾಲೇಜಿನ ಕಡೆಗೆ ನಡೆದಳು .

ಕಾಲೇಜಿನಲ್ಲಿ ಎಲ್ಲರು ಪಾರ್ವತಿಯ ಮೇಲೆ ಆಸೆಯಿದ್ದರೆ ಅವಳು ಮಾತ್ರ ಹಲವು ವರ್ಷಗಳಿಂದ ಗೋಪಾಲನನ್ನು  ಮನಸಾರೆ ಪ್ರೀತಿಸುತ್ತಿದ್ದಳು. ಆದರೆ ಹೇಳಲಾರದೆ ಹಲವು ವರ್ಷ ಕಳಿದಿದ್ದಳು . ಅವನು ಜಾಣ ನಾನು ಅಷ್ಟೇನು ಇಲ್ಲಾ ಮೇಲಾಗಿ ಈ ಜಾತಿ ಬೇರೆ ಏನೆ ? ಮಾಡುವುದು ಎಂದು ತನ್ನ ಗೆಳತಿಯರಲ್ಲಿ ಎಷ್ಟೊ ಸಲ ಹೇಳಿದ್ದಳು .

ಒಂದು ದಿನ ಕಾಲೇಜಿನ ಕಂಪೌಂಡ ಮೇಲೆ ಕುಳಿತು ಏಕಾಂಗಿಯಾಗಿ ಓದುತ್ತಿದ್ದ ಗೋಪಾಲನ ಕಡೆಗೆ ಹೆಜ್ಜೆ ಹಾಕಿದ ಪಾರ್ವತಿ “ಏನ್ ಓದುತ್ತಿದ್ದೀರಾ ನನಗೆ ನಿಮ್ಮ ಫಿಜಿಕ್ಸ್ ನೋಟ್ಸ್ ಬೇಕಿತ್ತು ಕೊಡುವಿರಾ”  ಎಂದಳು  ಅವಸರದಲ್ಲಿ ಸ್ವಾರಿ ನಾನು ಅದನ್ನು ಮನೆಯಲ್ಲಿ ಬಿಟ್ಟು ಬಂದಿದ್ದೀನಿ ನಿಮಗೆ ಗೊತ್ತಿಲ್ಲವೆ? ಇವತ್ತು ಆ ವಿಷಯದ ಪಿರೆಡ್ ಇಲ್ಲ ಅದಕ್ಕೆ ಅಂದಾಗ ಪಾರ್ವತಿಗೆ ತನ್ನ ಬುದ್ಧಿಗಿಷ್ಟು ಅನಿಸಿತು . ಓಕೆ ಪರವಾಗಿಲ್ಲ ಬಿಡಿ ಅಂದಳು ಅಳುಕುತಲಿ .

ಏನಿಲ್ಲ ಪರೀಕ್ಷೆ ಹತ್ರ ಬಂತು ಭಯವಾಗುತ್ತಿದೆ ಏನು? ಒದಿಲ್ಲರಿ ಅದಕ್ಕೆ ಕೇಳಿದೆ ನೀವು ಸ್ವಲ್ಪ ಸಹಾಯ ಮಾಡತ್ತೀರಾ ಎಂದಳು ಮತ್ತೆ ಮೆಲುಧ್ವನಿಯಲ್ಲಿ , ಇವಳ ಮಾತಿನ ಅರ್ಥವೆ ಮಾಡಿಕೊಳ್ಳದ ಗೋಪಾಲ ಆಯಿತು ಬಿಡಿ ಮಾಡುವ ಕೇಳಿ ನಾನು ಎಲ್ಲ ವಿಷಯದ ನೋಟ್ಸ್ ನಾಳೆ ತರುವೆ ಎಂದು ಅಲ್ಲಿಂದ ಹೋಗೆಬಿಟ್ಟ .

ಪಾರ್ವತಿ ಮನೆಯಲ್ಲಿ ರಾತ್ರಿ ಅವನೊಂದಿಗೆ ಮಾತಾಡಿದ್ದೆ ಮತ್ತೆ ಮತ್ತೆ ನೆನಪಿಸುತ್ತ ಹೀಗೆ ಕೊನೆಯ ಗಳಿಗೆಯಲ್ಲಿ ಅವನಿಗೆ ನಾನು ಪ್ರೀತಿಸುವ ವಿಷಯ ಹೇಳಿ ಬಿಡುತ್ತೇನೆ. ಎಂದು ನಿರ್ಧರಿಸಿಯೆ ಬಿಟ್ಟಳು . ಅವರ ಈ ಮಾತಾಡುವ ಪರಿ ಹೀಗೆ ಹಲವು ದಿನಗಳು ನಡೆಯಿತು ಮೊದಲನೆ ವರ್ಷ ಹೀಗೆ ಮುಗಿಸಿದ ಇಬ್ಬರು ತುಂಬಾನೆ ಹತ್ತಿರವಾದರು . ದಿನ ಬೆಳಗಾದರೆ  ಮಾತಾಡುವುದು ಹರಡುವುದು ದಿನಾಲು ಕಾಲೇಜಿಗೆ ಒಂದೆ ಅಟೋದಲ್ಲಿ ಬರುವುದು ಹೋಗುವುದು ಸಿನಿಮಾ ನಾಟಕ ಜಾತ್ರೆ ಸಂತೆ ಹೀಗೆ ಅವರ ಗೆಳತನ ಬೀದಿ ಬೀದಿಗೆ ಜಾಹಿರವಾಯಿತು .

” ಲೇ ಪಾರು ಐ ಲವ್ ಯೂ ಕಣೆ , ನಾನು ನಿನಗೆ ಮದುವೆ ಆಗಬೇಕು ಅನಿಸುತ್ತಿದೆ . ಹೀಗೆ ಗೋಪಾಲ ಹೇಳಿದ್ದು  ಆಗೊಂಬೆಯ ಬೆಟ್ಟದ ತುದಿಯಲ್ಲಿ ನಿಂತು . ಕಾಲೇಜಿನ ಕೊನೆಯ ದಿನಗಳಲ್ಲಿ ವನಭೋಜನಕ್ಕೆ ಹೋದಾಗ ಯಾರು ಇಲ್ಲದ ಸಮಯದಲ್ಲಿ ಹೇಳಿದ್ದ. ಈ ವಿಷಯ ಕೇಳಿ ಪುಳಕಿತಳಾದ ಪಾರ್ವತಿ ಪ್ಲೀಸ್ ಕಣೊ ಇನ್ನೊಮ್ಮೆ ಹೇಳೊ ಎಂದು ಪದೆ ಪದೆ ಕೇಳಿ ಆನಂದ ಪಟ್ಟಳು . ಈಗ ಇಬ್ಬರು ತುಂಬಾ ಪ್ರೀತಿಸತೊಡಗಿದರು . ದಿನ ಕಳಿದಂತೆ ಅವರಿಬ್ಬರ ಪ್ರೀತಿ ಅಬ್ಬರವಾಗಿ ಬೆಳಿಯಿತು . ಇಬ್ಬರ ಮನೆಗೂ ಮುಟ್ಟಿತು .

ಹೀಗೆ ಜೀವನದ ಪುಟಗಳು ಉರುಳಿದವು. ಪಾರ್ವತಿ ಮೆಡಿಕಲ್ ತೆಗೆದುಕೊಂಡು ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದತೊಡಗಿದಳು. ಅದೇ ಮೈಸೂರಿನಲ್ಲಿ ಗೋಪಾಲ ಇಂಜಿನಿಯರಿಂಗ ಓದತೊಡಗಿದ ಈಗ ಇವರಿಬ್ಬರು ದೇಹದಿಂದ ದೂರವಾದರು ಮನಸ್ಸಿನಿಂದ ಮಾತ್ರ ಹತ್ತಿರವಿದ್ದರು  ಈಗ ಇಬ್ಬರದು ಮೂಬೈಲ್ ಪ್ರೀತಿ ಪ್ರಾರಂಭವಾಯಿತು .

” ಲೇ ಪಾರು ಕಟ್ ಮಾಡಬೇಡವೆ ಮಾತಾಡು , ಬೇಡ ಕಣೊ ಜೊತೆಗೆ ಅಪ್ಪ ಅಮ್ಮ ಇದ್ದಾರೆ ದಯವಿಟ್ಟು ಅರ್ಥಮಾಡಿಕೊ ಅವರು ಊರಿಗೆ ಹೋದಮೇಲೆ ನಾನೆ ಮಾತಾಡುತ್ತೀನಿ. ಪ್ಲೀಸ್ ಅಪ್ಪು ಅರ್ಥಮಾಡಿಕೊ ಇಡತೀನಿ ಬಾಯ್ ಕಣೊ ಲವ್ ಯೂ ಅಂದಳು . ಇಷ್ಟೆ ಮಾತಿಗೆ ಫ್ಲಾಟ್ ಆದ ಗೋಪಾಲ ಅವಳ ಮಾತಿನಿಂದ ಸಂತೋಷಗೊಂಡ . ಹೀಗೆ ಹಗಲು ರಾತ್ರಿ ಎಡಬಿಡದೆ ಮಾತಾಡಿ ಇತಿಹಾಸವೆ ನಿರ್ಮಿಸಿದರು .

ಮಗ ಗೋಪಾಲ ಸ್ವಲ್ಪ ನೋಡಿ ಹಣ ಖರ್ಚು ಮಾಡಪ್ಪ ನಿಮ್ಮ ಅಪ್ಪ ಒಬ್ಬ ಗುಮಾಸ್ತ ಎನ್ನುವುದು ಮರೆಯಬೇಡ , ಈಗಾಗಲೇ ಬ್ಯಾಂಕ್ ಲ್ಲಿ ಸಾಲ ಹೆಚ್ಚಾಗಿದೆ, ನಾಳೆ ನಮಗೆ ಕಟ್ಟಲು ಆಗದೆ ಹೋದರೆ ಮನೆ ಮಠ ಮಾರಿ ಬೀದಿಗೆ ಬೀಳಬೇಕಾಗುತ್ತದೆ. ಎಂದರು ತಂದೆ ಶ್ಯಾಮರಾಯರು. ಗೋಪಾಲ ಮೊದಲೇ ಬಡವನಾಗಿದ್ದ ಅವನ ತಂದೆ ಶ್ಯಾಮರಾಯರು ಗುಪಾಸ್ತ ಕೆಲಸ ಮಾಡಿ ಅವನಿಗೆ ಬ್ಯಾಂಕ್ ಸಾಲ ಕೊಡಿಸಿ  ಓದಿಸುತ್ತಿದ್ದರು .ಏನಪ್ಪ ನೀನು ನಾನು ಓದುತ್ತಿರುವುದು ಇಂಜಿನಿಯರ್ ಯಾವುದೊ ಬೇರೆ ಡಿಗ್ರಿ ಅಲ್ಲ ಖರ್ಚು ಆಗೆ ಆಗುತ್ತೆ ನಾನೇನು ಮಾಡಲಿ ಎಂದ ಗರ್ವದಿಂದ , ನೋಡು ಮಗ ನನ್ನ ಕೈಲಾದಷ್ಟು ಕೊಟ್ಟಿದ್ದೀನಿ ಹಾಗೂ ಹೇಳಿದ್ದೀನಿ ಮುಂದೆ ನಿನ್ನ ಇಷ್ಟ ನಾನು ಬರತ್ತೀನಿ. ನಿನ್ನ ತಂಗಿಯ ಮದುವೆ ಮಾಡಬೇಕು ಅದಕ್ಕಾಗಿ ನಾನು ಬೇರೆ ಊರಿಗೆ ಹೋಗಿ ಏರ್ಪಾಟು ಮಾಡಬೇಕು ನೀನು ಯಾವುದೆ ತೆಲೆ ಕೆಡಿಸಿಕೊಳ್ಳದೆ ಸರಿಯಾಗಿ ಓದು ಎಂದು ಬುದ್ಧಿ ಮಾತು ಹೇಳಿ ಹೊರನಡೆದರು ತಂದೆ ಶ್ಯಾಮರಾಯರು .

ಮುಂದೆ ಶ್ಯಾಮರಾಯರು ತನ್ನ ಮಗಳ ಮದುವೆ ಸಾಲ ಮಾಡಿ ಅದ್ಧೂರಿಯಾಗಿಯೆ ಮಾಡಿ ಬಿಟ್ಟರು . ಈಗ ಅವರ ನೈಜ ಬಡತನ ಕಾಡ ತೊಡಗಿತು ಮನೆಯಲ್ಲಿ ಅವರಿಗೂ ವಯಸ್ಸಾಯಿತು. ತಂದೆ ತಾಯಿ ಇಬ್ಬರು ಕಾಯಿಲೇ ಬಿದ್ದರು ಮಗ ಓದುವುದು ಹೇಗೆ ಎಂಬ ಕಲ್ಪನೆ ಹೊಳಿಯಲಿಲ್ಲ . ಇತ್ತ ಹಣ ಸಿಗಲಾರದ ಗೋಪಾಲ ಚಿಂತಿತನಾದ ಇನ್ನು ಒಂದು ವರ್ಷ ಓದಬೇಕಾದ ಗೋಪಾಲ ನಡುವೆಯೆ ಬಿಡುವ ಕಾಲ ಒದಗಿಬಂತು ಎಂದು ಅಂದುಕೊಂಡ . ಪಾರೂ ನನ್ನ ಮನೆಯಿಂದ ಯಾಕೊ ಹಣ ಕಳಿಸುತ್ತಿಲ್ಲ ಅಪ್ಪ ಅಮ್ಮನಿಗೆ ಏನಾಗಿದೆಯೊ ಗೊತ್ತಿಲ್ಲ ನಾನು ಊರಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಊರಿನ ಹಾದಿ ಹಿಡಿದ ಗೋಪಾಲ . ಈತ್ತ ಪಾರ್ವತಿ ನೀನು ಬೇಗ ಬಾ ಏನು ಹೆದರಬೇಡ ನಮ್ಮ ಮನೆಯಲ್ಲಿ ತುಂಬಾ ಹಣವಿದೆ ನಾನು ನಿನ್ನ ಜೊತೆಗೆ ಬರುವಾಗ ತರುತ್ತೇನೆ ನನ್ನ ಮದುವೆಯಾದಮೇಲೆ ಎಲ್ಲವು ನಿನ್ನದೆ ಅಲ್ಲವೆ? ಅಂದಳು ಪಟ್ಟನೆ . ಸ್ವಲ್ಪ ಚೇತರಿಸಿಕೊಂಡ ಗೋಪಾಲ ಊರಿಗೆ ಬಂದು ಇಳಿದಾಗ ಮನೆಯ ದೃಷ್ಯ ನೋಡಿ ಕಂಗಾಲಾದ .

ಅಪ್ಪ ಅಮ್ಮ ಇಬ್ಬರು ಹಾಸಿಗೆ ಹಿಡಿದಿದ್ದಾರೆ ಪಕ್ಕದ ಮನೆಯವರು ಬಂದು ಅವರ ಆರೈಕೆ ಮಾಡುತ್ತಿದ್ದಾರೆ . ಇಬ್ಬರು ಸೋತು ಸುಣ್ಣವಾಗಿದ್ದಾರೆ . ಅಪ್ಪ ಅಮ್ಮ ಏನಮ್ಮ ಇದೆಲ್ಲ ನನಗೆ ಒಂದು ಮಾತು  ಹೇಳಿ ಕಳಿಸಿದರೆ ಬರುತ್ತಿದ್ದೇನಲ್ಲ, ಯಾಕೆ ಹೀಗೆ ಮಾಡಿದಿರಿ ಏನಾಗಿದೆ ನಿಮ್ಮ ಪರಿಸ್ಥಿತಿ ತಂಗಿಗಾದರು ಬರಲು ಹೇಳಬಾರದೆ ಎಂದನು. ಗೋಪಾಲ ಇಲ್ಲ ಮಗ ಎಲ್ಲಿ ನಿನ್ನ ಓದಿಗೆ ಪರಿಣಾಮ ಬೀರುತ್ತೊ ಅಂತಾ ಹೇಳಲಿಲ್ಲಾ ಇನ್ನು ನಿಮ್ಮ ತಂಗಿ ಹಾಗೂ ಅವಳ ಗಂಡ ಮದುವೆಯ ಮೂರು ತಿಂಗಳಿಗೆ ಕಾರ್ ಅಫಘಾತದಲ್ಲಿ ಸತ್ತರು ಯಾವುದು ಯಾರಿಗೆ ಹೇಳದೆ ನರಳುತ್ತಿರುವೆ ಗೋಪಾಲ ಎಂದು ಶ್ಯಾಮರಾಯರು ಒಂದೆ ಸವನೆ ಅಳತೊಡಗಿದರು.

ಇಷ್ಟು ಕೇಳಿದ ಗೋಪಾಲ ತಂಗಿ …… ನಿನ್ನ ಅಣ್ಣನ ನೋಡುವ ಭಾಗ್ಯವು ಕಸಿದುಕೊಂಡೆಯ ಅಯ್ಯೊ ಅಪ್ಪ ತಂಗಿ ಎಂದು ಅಳತೊಡಿಗಿದ . ಮಗ ಸಮಾಧಾನ ತೊಗೊಪ್ಪ  ನಡೆದಿದ್ದು ನಿನಗೆ ತಿಳಿದರೆ ಎಲ್ಲಿ ನಿನ್ನ ಓದಿಗೆ ಭಂಗ ಬರುತ್ತೊ ಅಂತಾ ಯಾವುದೆ ಹೇಳಲಿಲ್ಲ ಮಗನೆ ನಮ್ಮನ್ನು ಕ್ಷಮಿಸು ಎಂದರು ಇಬ್ಬರು ಒಂದೆ ಧ್ವನಿಯಲ್ಲಿ .

ಅಪ್ಪ ಅಮ್ಮ ಇನ್ನು ಹೆದರಬೇಕಿಲ್ಲ ನಾನು ಮತ್ತೆ ಅಲ್ಲಿಗೆ ಹೋಗಿ ನಿಮ್ಮ ಸೊಸೆ ಹಾಗು ಐಶ್ವರ್ಯ ಎರಡನ್ನು ತರುವೆ ನಾನು ಅಲ್ಲಿ ಒಂದು ಹುಡುಗಿಯನ್ನು ಇಷ್ಟ ಪಟ್ಟಿದ್ದೇನೆ. ಅವಳು ತುಂಬಾ ಶ್ರೀಮಂತೆ ಅವಳು ನನಗೆ ಮಾತು ಕೊಟ್ಟ ಪ್ರಕಾರ ಅವರ ಎಲ್ಲ ಆಸ್ತಿಯೂ ನನಗೆ ಬರಲಿದೆ ನಾನು ಹೋಗಿ ಬರುತ್ತೇನೆ. ಎಂದ ಗೋಪಾಲ ತಂದೆ ತಾಯಿಯರ ಮನಸ್ಸಿನಲ್ಲಿ ಮತ್ತೊಮ್ಮ ಆಸೆಯ ಗೋಪುರ ಕಟ್ಟಿ ಹೊರಟು ನಿಂತಾಗ ತಾಯಿ , ಮಗನೆ ನೀನು ಅಲ್ಲಿಗೆ ಹೋಗಲು ಹಣ ಬೇಕಲ್ಲ ನೀನು ಬಂದಾಗಲೆ ಕೊಡೋಣವೆಂದು ಆ ಹುಂಡಿಯಲ್ಲಿ ಒಂದಿಷ್ಟು ಹಣ ಇಟ್ಟಿದ್ದೇನೆ  ತೆಗೆದುಕೊ ಎಂದು ಕರುಳ ಬಳ್ಳಿ ಮಗನಿಗೆ ಹಣಕೊಟ್ಟು ಕಳುಹಿಸಿತು .

ಈಗ ಆವೇಗದಲ್ಲಿ ಹೊರಟ ಗೋಪಾಲ ತನ್ನ ಪ್ರೇಯಸಿಯ ನೆನಪಿಸುತ್ತ ಹೊರಟ ಅವಳೊಂದಿಗನ ಸುಖ ಸಂತೋಷ ಭವಿಷ್ಯದ ದಿನಗಳನ್ನು ನೆನಪಿಸುತ್ತ ಹೊರಟ ಯುವಕನಿಗೆ ಇದು ಕನಸು ಎನ್ನುವ ಪರಿವೆಯಿರಲಿಲ್ಲ . ಸುಮಾರು ಅವನು ಅವರ ಊರಿನಿಂದ ತಿರುಗಿ ಬರಲು ಮೂರು ತಿಂಗಳಾಗಿತ್ತು. ಊರಿಗೆ ಹೋಗಿದ್ದರಿಂದ ಮೂಬೈಲ್ ಸಂಪರ್ಕವು ತನ್ನ ಪಾರುನೊಂದಿಗೆ ಕಡಿದು ಹೋಗಿತ್ತು. ಹೀಗಾಗಿ ನೇರವಾಗಿ ಅವಳ ಮನೆಯ ಕಡೆಗೆ ಧಾವಿಸಿದ .  ಮಗನ ಮೋಹದ ಓಟ ನೋಡಿದ ತಂದೆ ತಾಯಿ ಮತ್ತೆ ಮಗನ ಮುಖ ನೋಡತ್ತೀವಿ ಎನ್ನುವ ಆಸೆಯೆ ತೊರೆದರು. ಏಕೆಂದರೆ ಅವರು ಬಹಳ ದಿನ ಬದುಕುವುದಿಲ್ಲ ಎಂದು ಈ ಮೊದಲೇ ವೈದ್ಯರು ಹೇಳಿ ಹೋಗಿದ್ದರು . ಮತ್ತೆ ಬರುತ್ತೇನೆ ಎಂದು ಹೇಳಿ ಹೋದ ಮಗನ ಹಾದಿ ನೋಡದೆ ಆತ ಹೋದ ಕೆಲವೆ ದಿನಗಳಲ್ಲಿ ಇಬ್ಬರು ಆ ಭಗವಂತನಿಗೆ ಪ್ರೀಯರಾದರು .

ಗೋಪಾಲ ಪಾರ್ವತಿಯ ಮನೆಯ ಕಡೆ ಓಡಿದ ” ಮನೆಯ ಮುಂದೆ ಸಾವಿರಾರು ಜನ ನೆರದಿದ್ದರು , ವಿಚಿತ್ರವಾದ ವಾಸನೆಯಿತ್ತು ,ಕೆಲವರ ಆಕ್ರಂಧನ ನಡೆದಿತ್ತು , ಎಲ್ಲರು ಬಿಳಿ ಬಟ್ಟೆ ಹಾಕಿದ್ದರು , ಈ ದೃಷ್ಯ ನೋಡಿದ ಗೋಪಾಲನ ಎದೆ ಝೆಲ್ ಎಂದಿತು. ತಾನು ಈ ಘಟನೆ ಉಹಿಸಲಾಗದೆ ಹೋದ . ಹಾಗೆ ಆ ಎಲ್ಲ ಜನರನ್ನು ಬಗೆದು ಮುನ್ನಡೆದಾಗ ದೂರದಲ್ಲಿ ಮಲಗಿರುವ ಹೆಣ್ಣು ಮಗಳು ಹಾಗೂ ಅವಳ ಸುತ್ತ ಅಳುತ್ತ ಕುಳಿತಿರುವ ಜನ ಕಣ್ಣಿಗೆ ಬಿದ್ದರು . ಒಮ್ಮೆ ತನ್ನ ಸ್ಮೃತಿ ಪಟಲಕ್ಕೆ ಹೋದ ಗೋಪಾಲ ನಾನು ಸರಿಯಾದ ಮನೆಗೆ ಬಂದೆನೊ ಇಲ್ಲವೊ ಎನ್ನುವುದು ಮತ್ತೆ ಖಚಿತ ಪಡೆಸಿಕೊಂಡ , ಅದು ನಿಜವಾಗಿತ್ತು ಆದರೆ ಈಗ ಈ ಮನೆಯಲ್ಲಿ ತೀರಿಕೊಡವರು ಯಾರು ಎಂದು ಉಹಿಸಲಾಗದೆ ಹೋದ. ತಿಳಿದುಕೊಳ್ಳದೆ ಇರಲಾಗದೆ ಇನ್ನು ಹತ್ತಿರ ಹೋದ .

ಹರೆಯದ ಹುಡುಗಿ , ತುಂಬಿದ ಗಲ್ಲಗಳು , ಈಗತಾನೆ ಊಟವ ಮಾಡಿ ಮಲಗಿದಳೊ ಎನ್ನುವಂತೆ ತೋರುವ ಅವಳ ಮುಖ , ತನ್ನ ಕನಸ್ಸಿನ ಲೋಕದಲ್ಲಿ ಈಗತಾನೆ ನಿದ್ದೆಗೆ ಜಾರಿದಳೊ , ಜೀವನದಲ್ಲಿ ತುಂಬಾ ಸಾಧಿಸಬೇಕು ಎನ್ನುವ ಆಸೆಯಟ್ಟುಕೊಂಡು ಮಲಗಿ ಕನಸು ಕಾಣುತ್ತಿರುವಳೊ ಎನ್ನುವಂತೆ ತೋರುತ್ತಿದ್ದ ಆ ಹುಡುಗಿ ಬೇರೆ ಯಾರು ಅಲ್ಲ ಅವನ ಹೃದಯದ ಅರಸಿ ಪಾರು ಎನ್ನುವುದು ಖಚಿತವಾಯಿತು . ಈ ದೃಷ್ಯ ನೋಡಿ ದೃತಿಗೆಟ್ಟ ಗೋಪಾಲ ಜನರ ಮದ್ಯೆ ರಂಪ ಮಾಡಲು ಮನಸ್ಸಾಗಲಿಲ್ಲ ಇವರು ತುಂಬಾ ಶ್ರೀಮಂತರು ಶಾಂತಿಯುತವಾಗಿ ನಡೆದ ಈ ಕಾರ್ಯಕ್ಕೆ ಭಂಗ ಬರಬಹುದೆಂಬ ವಿಷಯ ಅರಿತ ಗೋಪಾಲ ಜನರಿಂದ ಹೊರಬಂದು ಏಕಾಂತದಲ್ಲಿ .

ಪಾರೂ………. ಅಯ್ಯೋ ನಿನ್ನ ಬಿಟ್ಟು ಇರಲಾರೆ ನನಗೇಕೆ ಹೀಗೆ ಒಬ್ಬಂಟಿಗನಾಗಿ ಮಾಡಿ ಹೋದೆ ನಾನು ಯಾರಿಗೆ ಕಾಯಲಿ ಯಾರಿಗಾಗಿ ಬದುಕಲಿ ದೇವರೆ ನನಗೇಕೆ ಹೀಗೆ ಮಾಡಿದೆ ಈ ಪ್ರೀತಿ ಮಾಡಿದ್ದೆ ತಪ್ಪಾಯಿತೆ? ಪಾರೂ ನಾನು ಬದುಕಲಾರೆ ನಿನ್ನ ತೊರೆಯಲಾರೆ ಎಂದು ಒಂದೆ ಸವನೆ ಅಳತೊಡಗಿದೆ. ಈ ನೈಜ ಪ್ರೇಮಿಯ ಆಕ್ರಂಧನ ಮುಗಿಲು ಮಟ್ಟಿತು ಆದರೆ ವಿಪರ್ಯಾಸವೆಂದರೆ ಗಾಳಿ , ಆಕಾಶ , ಪ್ರಕೃತಿ ಬಿಟ್ಟು ಇವನ ಆಕ್ರಂಧನ ಯಾರು ಕೇಳಲಿಲ್ಲ .

ಆ ಕಡೆಯಿಂದ ಪೋಲಿಸ್ ವ್ಯಾನೊಂದು ಬಂದಿತು . ನೋಡಿ ನಾವಿನ್ನು ಯಾರಿಗಾಗಿಯೂ ಕಾಯುವ ಹಾಗಿಲ್ಲ ಈಗ ಹೆಣ ಪೋಸ್ಟ ಮಾಟಂ ಮಾಡಲೇಬೇಕು ಎಂದರು ಪೋಲಿಸ್ ಇನ್ಸಪೆಕ್ಟರ್ ಈ ಕೆಲಸಕ್ಕೆ ಮನೆಯವರ ಯಾರ ಒಪ್ಪಿಗೆಯು ಇರದಿದ್ದರು  ಪಾರ್ವತಿ ಬರೆದಿಟ್ಟ ಪತ್ರದಿಂದ ಇದು ಆತ್ಮಹತ್ಯೆ ಎಂದು ಸಾಬೀತಾಗಿತ್ತು. ಅದಕ್ಕಾಗಿ ಹೆಣ ಪೋಸ್ಟ ಮಾಟಂ ಮಾಡಲೇಬೇಕಿತ್ತು .

ಇಲ್ಲಿಯವರೆಗೂ ದೂರ ನಿಂತಿದ್ದ ಗೋಪಾಲ ಹೆಣದ ಹತ್ತಿರ ನಿಂತು ಈ ಮಾತುಗಳನ್ನು ಕೇಳಿ ಗಳ ಗಳನೆ ಅಳತೊಡಗಿದ ಜೋರಾಗಿ ಅಳುತ್ತಾ ಪೋಲಿಸರ ಕಾಲು ಹಿಡಿದು “ಬೇಡಾ ಸರ್ ಬೇಡಾ ಅವಳನ್ನು ಕೊಯಬೇಡಿ ಅವಳು ನನ್ನವಳು  ಅವಳನ್ನು ನನ್ನ ಮನೆಗೆ ಕರೆತರುತ್ತೇನೆ ಎಂಬ ವಿಷಯ ನಮ್ಮ ತಂದೆ ತಾಯಿಗೆ ಹೇಳಿ ಬಂದಿದ್ದೇನೆ , ಅವಳಿಲ್ಲದೆ ನಾನು ಬದುಕಲಾರೆ ಅವಳಿಂದಲೇ ನನ್ನ ಜೀವನ ಉತ್ತಮವಾಗಲಿದೆ , ಅವಳು ಬೇಕು ನನಗೆ , ನಾನು ಅವಳು ಮದುವೆಯಾಗಬೇಕು” ಎಂದು ಕೂಗಾಡೊಡಗಿದ .

ಇಷ್ಟು ಕೇಳಿದ ಪಾರ್ವತಿ ಸಂಬಂಧಿಕರು ಗೋಪಾಲನನ್ನು ನೀನೆ ಏನೊ ನಮ್ಮ ಮನಯೆ ಜ್ಯೋತಿ ಆರುವ ಹಾಗೆ ಮಾಡಿದ್ದು , ನೀನೆ ಏನೊ ನಮ್ಮ ಮಗಳ ತೆಲೆಕೆಡಿಸಿ ಪ್ರೀತಿ ಪ್ರೇಮದ ಆಟ ಆಡಿದ್ದು , ಏನು ತಿಳಿಯದ ಹುಡುಗಿಗೆ ತೆಲೆಕೆಡಿಸಿ , ಈಗ ಅವಳ ಕೊನೆಯ ಸಂಸಕಾರಕ್ಕೆ  ಬಂದಿದ್ದೀಯ ಎಂದು ಗೋಪಾಲನನ್ನು ಅಪರ್ಥ ಮಾಡಿಕೊಂಡು ಎಲ್ಲರು ಸೇರಿ ಒಂದೆ ಸವನೆ ಹೊಡಿಯತೊಡಗಿದರು. ಹಲವು ಜನರ ಕೈ ಕಾಲಿನ ಏಟಿಗೆ ಸಿಕ್ಕು ಒದೆ ತಿಂದ ಗೋಪಾಲ ಅಲ್ಲಿಂದ ತಪ್ಪಿಸಿಕೊಂಡು ಓಡಿದ .

ಇತ್ತ ಮನಗೆ ಹೋಗೋಣವೆಂದರೆ ಅಲ್ಲಿಯೂ ನೆಮ್ಮದಿಯಿಲ್ಲ ಇತ್ತ ಪ್ರೀತಿಸಿದ ಹುಡುಗಿಯೂ ಇಲ್ಲ ಇವರಿಬ್ಬರ ನಡುವೆ ಒದ್ದಾಟ ಆಡಿ ನಡು ಬೀದಿಯಲ್ಲೆ ಉಳಿದ ಗೋಪಾಲ ಹಲವು ದಿನಗಳು ಕಳಿದು ಊಟ ನೀರಿಲ್ಲದೆ ಬಳಲಿದ. ಈ ಎರಡು ಚಿಂತೆಯಲ್ಲಿ ಹುಚ್ಚನಾದ, ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿ ಎದುರಾಯಿತು.

ಪ್ರತಿ ವರ್ಷ ಜುಲೈ  ನಾಲ್ಕರಂದು ತಪ್ಪದೆ ಪತ್ರಿಕೆ ಓದುತ್ತಾನೆ . ಏಕೆಂದರೆ ಅಂದು ಪಾರ್ವತಿಯ ಮನೆಯವರು ಪತ್ರಿಕೆಯಲ್ಲಿ  ಅವಳ ನೆನಪಿಗಾಗಿ ಪುಣ್ಯಸ್ಮರಣೆ ಕೊಡುತ್ತಾರೆ . ಇವತ್ತಿಗೆ  ಐದು ವರ್ಷವಾಯಿತು ಪಾರ್ವತಿ ಈಹ ಲೋಕ ತ್ಯೇಜಿಸಿ ಅವಳ ಪುಣ್ಯತಿಥಿಯ ದಿನ ಈತ ಅವಳ ಮನೆಯ ಮುಂದೆ ನಿಂತು ಭಿಕ್ಷೆ ಬೇಡಿ ಅವಳ ಪುಣ್ಯತಿಥಿಯ ಊಟ ಮಾಡಿ ಇಂದಿಗೂ ಒಳಗೊಳಗೆ ಸಂತೋಷ ಪಡುತ್ತಾನೆ . ಇದೇನಾ ಹುಚ್ಚು ಪ್ರೀತಿ ?

ಚಿತ್ರ ಕೃಪೆ : designlap.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments